104.ಸಾಕ್ಷಾತ್ಕಾರ

ಸಾಕ್ಷಾತ್ಕಾರ
ಮಮತೆಯೇ ಮಾತೆಯ ಸಾಕ್ಷಾತ್ಕಾರ
ಮಗುವೇ ಬದುಕಿಗೆ ಆಧಾರ
ಮರೆಯಲಾಗದ ಅನುಬಂಧ
ಮಗು ಮಾತೆಯ ಸಂಬಂದ

ಮಾಸ ನವ ಹೊಟ್ಟೆಯೊಳಿತ್ತು ಹೊತ್ತು
ಮಾನಿನಿ ತಾಯಿಯಾಗುವ ಹೊತ್ತು
ಮಾಡಿ ಹರಕೆ ಪೂಜೆ ಬಗೆ ಬಗೆ
ಮಾನಸ ಪುತ್ರಗೆ ಶುಭಕೋರುವ ಬಗೆ

ಮಿಡಿವ ಮನದಿ ಕರುಳ ಕುಡಿಯನೆತ್ತಿ
ಮೀಯಿಸಿ ವಾತ್ಸಲ್ಯಾಮೃತ ಸುಧೆಯಲಿ
ಮೀರಿ ನೋವು ನಲಿವುಗಳ... ನಗುವ
ಮಾತೆ ಮಮತೆಯೇ ಮರೆಯದ ಸಾಕ್ಷಾತ್ಕಾರ

             ಶೈಲೂ....

Comments

Popular posts from this blog

343 ಒಗಟಿನ ರೂಪದ.ಚುಟುಕು

ಕವನ ಸಂಗ್ರಹ

ಕವನ