103 ಅಮ್ಮ


ಅಮ್ಮಾ
*****

ನನ್ನ ಮೊದಲ ತೊದಲ ಮಾತು
ಅಮ್ಮಾ ನೀ ತಾನೇ..
ಆ ನುಡಿಗೆ ಮನಸೋತು ಅಪ್ಪಿ ಮುದ್ದಿಸಿದ
ಮಮತಾಮಯಿ ಅಮ್ಮ ನೀನೇನೇ..

ಪುಟ್ಟ ಅಂಬೆಗಾಲನಿಟ್ಟು ಎದ್ದು-ಬಿದ್ದು
ಬಿದ್ದ ಪೆಟ್ಟಿಗೆ ನೋಂದವಳು ಅಮ್ಮ ನೀ ತಾನೇ..
ಜಾರಿ ಬಿದ್ದಾಗ ಎತ್ತಿ ತಿದ್ದಿ ನಡೆಸಿದ
ದೈವ ಅಮ್ಮ ನೀನೇನೇ..

ಆ ದೈವದ ಸಾಕಾರ ಮೂರ್ತಿ
ಅಮ್ಮಾ ನೀ ತಾನೇ..
ಆ ದೇವನಿತ್ತ ಉಡುಗೊರೆಯ ರೂಪ
ಅಮ್ಮಾ ನಿಜ ನೀನೇನೇ..

ಮಮತಾವಾತ್ಸಲ್ಯಕೆ ಪರ್ಯಾಯ ಪದ
ಅಮ್ಮಾ ನೀ ತಾನೇ..
ಕಣ್ಣಿಗೆ ಕಾಣುವ ಆ ದೈವದ ರೂಪ
ಅಮ್ಮಾ ನಿಜ ನೀನೇನೇ..

ಪ್ರೀತಿಮಮಕಾರಗಳ ಅಕ್ಷಯಪಾತ್ರೆ
ಅಮ್ಮಾ ನೀ ತಾನೇ
ಮಮತೆಯೇ ಮೂರ್ತವೆತ್ತ ರೂಪ
ಅಮ್ಮಾ ನಿನಗೆ ವಂದನೆ..

ತಿದ್ದಿ ತೀಡಿ ಅಕ್ಷರದ ಪರಿಚಯ ಮಾಡಿಸಿದ
ಗುರು ಅಮ್ಮಾ ನೀ ತಾನೇ..
ನೀನಿತ್ತ ಭಿಕ್ಷೆ ನನ್ನೆಲ್ಲಾ ತೊದಲು ನುಡಿಯ
ಪದಪುಂಜ ಅಮ್ಮಾ ನಿನಗೆ ಅರ್ಪಣೆ..

        ಶೈಲೂ.....

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು