101 ಸಮಯ

ಸಮಯ

ಸಮಯ - ನೀನೊಂದು ವಿಸ್ಮಯ
ಅರಿವಿಗೆ ಬಾರದೇ ಸರಿಯುವೆ
ಎಲ್ಲ ನಿನ್ನ ಗರ್ಭದೊಳಗಡಗಿಸುವೆ

ಯಾರ ಕೈಗೂ ಸಿಗದ ನೀನೊಂದು ಮಾಯೆ
ಉರುಳಿ ಮರೆಯಾದ ನಂತರದ ಛಾಯೆ
ನಿರಂತರ ಸರಿವ ಚಲನಾ ಪ್ರಿಯೆ

ಹೇಗೆ ಉರುಳುವೆ ನೀ? ನನಗಚ್ಛರಿ!!
ಕಾಲಿಲ್ಲ ಚಕ್ರವಿಲ್ಲ ಆದರೂ ಚಲಿಸುವ ಪರಿ
ಕಾಲಚಕ್ರದೀ ಚಲನೆಗೆ ಯಾರಿಹರು ಸಮ ಸರಿ?

ನೀ ಯಾರ ಕಣ್ಣಿಗೂ ಕಾಣದ ಉದ್ಧ0ಡ
ನಿನ್ನ ಚಲನೆಗಿಹುದು ಮಾನದಂಡ
ಕ್ಷಣ, ದಿನ, ಮಾಸ, ವರ್ಷ ಕಬಳಿಸುವ ಪ್ರಚಂಡ!!

ನೀ ಆದಿ, ನೀ ಅನಾದಿ, ನೀ ಅನಂತ
ನಿನ್ನ ಬಣ್ಣಿಸಲಿ ನಾ ಏನಂತ?
ನಿನ್ನ ಅರಿತವರಾರು ಹೇಳು ಸ್ವಂತ

ನಿನ್ನನನುಸರಿಸಿ ನಡೆವ ದೀನರು ನಾವು
ನೀನಿಟ್ಟಂತಿದ್ದು ನಿನ್ನೊಳು ಲೀನವಾಗುವೆವು
ಕಾಲಗರ್ಭದೊಳೆನಿತಿಹುದು ನೋವು ನಲಿವು

ಕಳೆದ ನಿನ್ನೆಯ.ಅನುಭವದ ಮಡಿಲಲ್ಲಿ
ಇಂದಿನೀದಿನವ ಸವಿಯಾಗಿಸುವ ನೆಪದಲ್ಲಿ
ನಾಳಿನ ಅಭ್ಯುದಯಕೆ ಸಾಗುವೆವು ನಿನ್ನ ಜೊತೆಯಲ್ಲಿ

          ಶೈಲೂ.....

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು