ಕವನ ಸಂಗ್ರಹ

[19/4/2019, 3:07 pm] Dr. B. N. Shylaja Ramesh: ಭಾರವಾಗಿದೆ ಮನಸು 😢😢😢
**************************

ಭಾರವಾಗಿದೆ ಮನಸು
ಕಳೆದಿದೆ ಕನಸಿನ ಕೂಸು
ಕಲ್ಪನೆಯ ಮೂಸೆಯಲ್ಲಿದ್ದದ್ದು ಕೊರೆದು
ಸವಿದಿದ್ದೆ ಅನಿಸಿದ್ದನ್ನೆಲ್ಲ ಬರೆದು

ಏನೆಲ್ಲ ದುಃಖ ದುಮ್ಮಾನ
ಹರಿಸಿದ್ದೆ ಪ್ರೀತಿ ಹೊಳೆಯನ್ನ
ಸವಿದು ಸ್ನೇಹದಾಲಿಂಗನ
ಇತ್ತು ಬರಹದಲಿ ಹೊಸತನ

ಎಷ್ಟೊಂದು.ಅನುಭವದ ಮಾತು
ಜೊತೆಗೆ ತುಸು ಕೋಪವೂ ಬೆರೆತು
ಭಾವ ಬಂಧನದಲ್ಲಿದ್ದ ಕೂಸು
ಹೇಗೋ ಕೈಜಾರಿ ಹೋಯ್ತು

ಇತ್ತೆನಿತೋ ಬರಹದಲಿ ತಪನ
ಆಸ್ಥೆಯಿಂದ ಮಾಡಿದ್ದೆ ಜತನ
ಕಣ್ಗಾವಲಲ್ಲಿದ್ದ ನಲ್ಮೆಯ ಕೂಸು
ಕಣ್ತಪ್ಪಿನಿಂದ ಕಳೆದುಹೋಯ್ತು

ಇತ್ತಲ್ಲಿ  ನೂರಾರು ಕವನ
ಮೂಡಿ ಬಂದಿದ್ದ ಬಾಳ ಕಥನ
ಗುರುಗಳ ಪ್ರೋತ್ಸಾಹದ ಗಝಲ್ಲು
ಕಳೆದು ಆಯ್ತು ಮನ ಗೋಜಲು

ಏನಾಗಿತ್ತೋ ಬುದ್ಧಿಗೆ ಕಾಣೆ
ಅನಿಸಿತ್ತೇನೋ ನಾನೇ ಜಾಣೆ
ಜಂಭಕ್ಕೊಂದು ಡಾಕ್ಟರೇಟು
ತಂತ್ರಾಂಶ ನೀಡಿತ್ತು ಎದುರೇಟು

ಮತ್ತೆ ಬಂದೀತೇ ಅ ಪರಿಯ ಗಾನ
ಮನದ ವೀಣೆಯಲಿ ಮೂಡಿದ್ದ ತನನ
ಭಾವನೆ ಬರಿದಾದಂತೆ ಅನಿಸಿಕೆ
ಮನಕಿಂದು ತೀರದ ಬಳಲಿಕೆ😔😔😔

           ಶೈಲೂ.....
[19/4/2019, 9:48 pm] Dr. B. N. Shylaja Ramesh: ಚೆಲ್ಲಿದಂತೆ ಮೊಸರು
ಹಸಿರು ಗಿಡದಮೇಲೆ
ಸೆಳೆಯುತ್ತದೆ ಅರಳಿ
ಘಮ ಘಮಿಸುವ ಮೊಲ್ಲೆ

ಅಚ್ಚ ಬಿಳಿಯ ಬಣ್ಣ
ಸೆಳೆಯುತ್ತಿದೆ.ಕಣ್ಣ
ಚಿಕ್ಕದಾದರೇನು
ಘಮಲ ಕೀರ್ತಿ ಬಲ್ಲೆಯೇನು

ಸೌಗಂಧ ಬೀರೋ ಮಲ್ಲೇ
ಕಟ್ಟಿ ಚಂದದ ಮಾಲೆ
ದೇವಗರ್ಪಿತವಾದ ವೇಳೆ
ಸಾರ್ಥಕತೆ ಬದುಕು

       ಶೈಲೂ...
[19/4/2019, 9:48 pm] Dr. B. N. Shylaja Ramesh: ಗಝಲ್
*******

ಸರಿಯುತ್ತಿದೆ ಸಮಯ ಬರೆಯಲಿದೆ ಬಹಳ
ಹರಿಯುತ್ತಿದೆ ಬರಹ ಹೊರಹಾಕಲಿದೆ ಬಹಳ

ಹೊಳೆಯಲೊಲ್ಲದು ಒಮ್ಮೊಮ್ಮೆ ಏನೇನೂ
ಬರಿದೆ ಅಯೋಮಯ ಸಂದಿಗ್ಧವಿದೆ ಬಹಳ

ಭವಿತೆ ಹೇಳುವುದದ್ಭುತವಿದೆ ಸಹಜ
ಕವಿತೆ ಕಾದಂಬರಿ ಊಹೆ  ಗೊಂದಲವಿದೆ ಬಹಳ

ಕತೆ ಕಾವ್ಯ ನೋಡುವುದಕೆ ಸರಳ
ಪದಪುಂಜಗಳ ಬಳಕೆಯಲಿ ಹುಡುಕಬೇಕಿದೆ ಬಹಳ

ಅನಿಸಿದ್ದನ್ನೆಲ್ಲ ಲೇಖನಿಯಲಿ ಬಂಧಿಸಿಡುವ ಬಯಕೆ
ಅಂತರಂಗದ ಭಾವ ತೆರೆದಿಡಲಿದೆ ಬಹಳ

ಸಾಕಾರವಾಗಬೇಕಿರುವ ಕನಸುಗಳು ನೂರಿವೆ
ಒಲವಿನಲಿ ಮಿಡಿದ ಮನಸಿಮ ನುಡಿಯಿದೆ ಬಹಳ

ಶೈಲಳಾಂತರ್ಯದಲಿ‌ ಹುಡುಗಿಹುದು ಏನೇನೋ
ನುಡಿಗಟ್ಟಿನಲಿ ಬೆಸೆದು ಬೆರಗು ಮೂಡಿಸುವುದಿದೆ ಬಹಳ

              ಶೈಲೂ.....
[19/4/2019, 9:48 pm] Dr. B. N. Shylaja Ramesh: ಅವನಿರುವುದೇ ಹಾಗೆ
******************

ಅವನಿರುವುದೇ ಹಾಗೆ
ನೀಲಮೇಘದ ಬಣ್ಣದಂತೆ
ಎಲ್ಲರ ಸೆಳೆದೆಳೆಯುತ
ಸುಮ್ಮನಿರುವ ಮುಗ್ಧನಂತೆ

ಅವನಿರುವುದೇ ಹಾಗೆ
ಹುಬ್ಬೇರಿಸಿ ನೋಡುವಂತೆ
ಪ್ರಕ್ಷುಬ್ಧ ಸಮಯದಲೂ
ಚಿತ್ತವಿರಿಸುವ ಶಾಂತಿಮಂತ್ರದಂತೆ

ಅವನಿರುವುದೇ ಹಾಗೆ
ಎಲ್ಲರೊಡನೆ ಬೆರೆವ ಮಗುವಿನಂತೆ
ಮೋಡಿ ಮಾಡಿ ಸೆಳೆವ
ಮನಕದ್ದ ಚಿತ್ತಚೋರನಂತೆ

ಅವನಿರುವುದೇ ಹಾಗೆ
ಅತೀವ ಸರಳ ವ್ಯಕ್ತಿಯಂತೆ
ದೇವಾನುದೇವ ತಾನಾದರೂ
ತೋರುವ ಎಲ್ಲರ ಮನೆಮಗನಂತೆ

ಅವನಿರುವುದೇ ಹಾಗೆ
ಗೋಪಿಯರ ಪ್ರಾಣವಲ್ಲಭನಂತೆ
ಸರ್ವರೊಳಗೊಂದಾಗಿ
ಮೆರೆವ ಸರ್ವೋತ್ತಮನಂತೆ

ಅವನಿರುವುದೇ ಹಾಗೆ
ದುಷ್ಟರ ತರಿವ ಯೋಧನಂತೆ
ಶರಣಾದರೆ ಪೊರೆವ
ಅಪ್ಪಿ ಹರಸುವ ತಾಯಿಯಂತೆ

ಅವನಿರುವುದೇ ಹಾಗೆ
ಹಸುಮಗುವಿನಂತೆ
ತಾಯಿಯಕ್ಕರೆಯ ಕಂದ
ಮಡಿಲು ತುಂಬುವಂತೆ

ಅವನಿರುವುದೇ ಹಾಗೆ
ಕಾಡುವ ಪ್ರಿಯಕರನಂತೆ
ಮೋಡಿಮಾಡಿ ಕಾಡಿಬೇಡಿ
ಮುದವೀವ ಪ್ರೇಮದಂತೆ

ಅವನಿರುವುದೇ ಹಾಗೆ
ಉತ್ತಮ ರಾಜತಂತ್ರದಂತೆ
ವಿರೋಧಾಭಾಸಗಳ ನಡುವೆ
ಮೆರೆವ ನಾಯಕನಂತೆ

ಅವನಿರುವುದೇ ಹಾಗೆ
ಭಕ್ತಿಪರಾಕಾಷ್ಠೆಗೆ ಸೋತವನಂತೆ
ಹೂವತಂದವರಿಗೆ ಹುಲ್ಲತರುವ
ಮಾಧವ ತಾ ಭಕ್ತರಾಧೀನನಂತೆ

            ಶೈಲೂ.......
[19/4/2019, 9:48 pm] Dr. B. N. Shylaja Ramesh: ಗಝಲ್
*******

ಸರಿಯುತಿದೆ ಕಾಲ ಅರಿವಿಲ್ಲದೆ ಮನುಜ
ಉರಿಯುತ್ತಿದೆ ಮನ ಅರಿವಿಹುದೆ ಮನುಜ

ತಿಳಿಯ ಬೇಕಿಹುದು ಸಾಕಷ್ಟು ವಿಷಯ
ಬರೀ ಅಯೋಮಯ ಗೋಜಲು ಗೊಂದಲವಿದೆ ಮನುಜ

ಕನಸುಗಳ ಕಟ್ಟಿ  ಕೂತರಾದೀತೇ ಹೇಳು
ನನಸಾಗಿಸುವ ನಡೆಯಲಿ ಶ್ರಮವಿದೆ ಮನುಜ

ಭರವಸೆಯಿರಲಿ ನಾಳಿನ ಬದುಕಿನಲಿ
ಇರುಳು ಸರಿದ ಮೇಲೆ ಬೆಳಕಿರದೇ ಮನುಜ

ನೆನಪಿನಲ್ಲುಳಿವಂತೆ ಬಾಳು ಮರೆಯದಿರು ನೀನು
ಶೈಲ ಅಡಿಗಡಿಗೆ ಹಾರೈಸುತಿಹಳು ಮರೆಯಬಹುದೇ ಮನುಜ

            ಶೈಲೂ.....
[20/4/2019, 10:36 am] Dr. B. N. Shylaja Ramesh: ಕಿಟಕಿಬಳಿ ನಿಂತವಳನ್ನು
ಮುದ್ದಿಸಿದನೇನು ಭಾನು.?
ಸುಳಿದು ಕಿಂಡಿ ಕಿಂಡಿಯಲಿ
ಬರಸೆಳೆದು ಅಪ್ಪಿದನೇನು.?

ಆಗಿರಬೇಕು ಪ್ರಣಯದಾಸೆ
ದಂತದ ಗೊಂಬೆಯ ಕಂಡು
ಇಣುಕಿಣುಕಿ ನೋಡುತಿರುವ
ಚಂದದ ಪರಿಯ ಕಂಡು

ಬೆಚ್ಚಿದ್ದಳಂದು  ಸಂಜ್ನ್ಯಾ
ಪ್ರಖರ ಶಾಖವ ಕಂಡು
ಬೇಸರವಾಗಿರಬೇಕು ಪಾಪ
ಬರಿದೇ ಛಾಯೆಯನುಂಡು

ಎಳೆ ಬಿಸಿಲ ಶಾಖಕೆ ಮೈಯೊಡ್ಡಿ
ನಿಂತ ವೈಯ್ಯಾರಿಯ  ಸ್ಪರ್ಶಕೆ
ಭಾಸ್ಕರ ನೇ ಬಿಸಿ ಬಿಸಿಯಾಗಿ
ಬೆವರಾಗಿ ಸುರಿದು ಸರಿದ ನೇಪಥ್ಯಕೆ
                 ಶೈಲೂ......
[20/4/2019, 1:01 pm] Dr. B. N. Shylaja Ramesh: ಇಂದು ನಾ  ನಗಲು ಕಾರಣ ನೀನು
*****************************

ಸುತ್ತಲೂ ಕತ್ತಲೆಯು ಮುಸುಕಿರಲು
ಭಯದಿಂದ ನಾ ನಡುಗುತ್ತಿರಲು
ಪ್ರಣತಿ ಹಿಡಿದು ಬೆಳಕಾಗಿ ಬಂದೆ
ಸರಿಸಿ ಭಯವ ನಗು ಮೂಡಿಸಲೆಂದೇ

ಕಾರ್ಮೋಡ ಕವಿದ ಬಾನಿನಂತೆ
ಮುಸುಕಿ ಮನದಿ ನೂರಾರು ಚಿಂತೆ
ಏನೋ ಕಳೆದಂತೆ ತಳಮಳ ಮೊಗದೆ
ಹರಿಸಿ ನವಿರಾದ ನಗುವನ್ನು ತಂದೆ

ಸೂರ್ಯನುದಯಕೆ ಕಮಲವರಳಿದಂತೆ
ಹೂವಲ್ಲಿ ಬೆರೆತ ಮಕರಂದದಂತೆ
ಬೀಸೋ ತಂಗಾಳಿಯಲಿ ಸೌಗಂದ ಬೆರೆತಂತೆ
ನಿನ್ನಲ್ಲಿ ನಾ ಬೆರೆತೆ ಹಾಲು ಜೇನಂತೆ

ಬಾಳ ಬಂಡಿಯ ಚಲನೆಗೆ ನೀ ಸೂತ್ರಧಾರಿ
ನೀನೇಣಿಸಿದಂತೆಯೇ ನಡೆವ ನಾ ಪಾತ್ರಧಾರಿ
ನನ್ನ ಪ್ರತಿ ಚಲನೆಗೂ ಇಹುದು ನಿನ್ನದೇ ಪಾತ್ರ
ನನ್ನ ನಗುವಿಗೆ ಕಾರಣವೇ ನಿನ್ನಂದದ ಚಿತ್ರ

               ಶೈಲೂ......
[20/4/2019, 1:03 pm] Dr. B. N. Shylaja Ramesh: ಕಾಯುತಲಿರುವೆ  ನಿನಗಾಗಿ
***********************

ಹೊಂಬಿಸಿಲ ಬಿಸಿ ಸ್ಪರ್ಶಕೆ
ಕಾಯ್ದು , ತೋಯ್ದ ಧರೆಯಂತೆ
ಮಂಜಿನ ಮುತ್ತಿನ ನೀರ ಹನಿಗಾಗಿ
ಕಾಯುತ್ತಿರುವ ಹೂವಿನೆಸಳಂತೆ
ನಿನ್ನಾಗಮನಕ್ಕಾಗಿ ಕಾಯುತ್ತಿರುವೆ...

ವಸಂತನಾಗಮನಕ್ಕಾಗಿ
ಕಾಯ್ದ ಪ್ರಕೃತಿಯಂತೆ
ಮಾವಿನ ಚಿಗುರಿಗಾಗಿ
ಕಾಯುವ ಕೋಗಿಲೆಯಂತೆ
ನಿನ್ನಾಗಮನಕ್ಕಾಗಿ ಕಾಯುತ್ತಿರುವೆ...

ಗಗನ ಚುಂಬಿಸಲು
ಹಾತೊರೆವ ಗಿರಿಶಿಖರದಂತೆ
ಭುವಿಯನಪ್ಪಲು ತವಕಿಸುವ
ಮಳೆಯ ಹನಿ ಹನಿಯಂತೆ
ನಿನ್ನಾಗಮನಕ್ಕಾಗಿ ಕಾಯುತ್ತಿರುವೆ...

ಮನದ ಭಾವನೆಯ ಭಾರಕೆ
ಮಿಡಿದ ನಿಟ್ಟುಸಿರಿನಲಿ
ನಿದ್ದೆಯಲೂ ಕನವರಿಸುತ್ತಿರುವ
ಮುದ್ದಾದ ನಿನ್ಹೆಸರಿನಲ್ಲಿ
ನಿನ್ನಾಗಮನಕ್ಕಾಗಿ ಕಾಯುತ್ತಿರುವೆ...

ಕಣ್ಣೆವೆಯ ಮುಚ್ಚಿದಾಕ್ಷಣವೇ  ಹೊತ್ತು 
ತರುವ ನಿನ್ನ ನೆನಪಿನ ಸವಿಗನಸು
ನಿನ್ನ ನೆನಪಿನಲೆಯಲ್ಲಿ 
ತೋಯ್ದಾಡುವ ಮೃದುಮನಸು
ಎಲ್ಲವೂ ಬೇಡುತ್ತಿದೆ ಗೆಳೆಯ
ನಿನ್ನಾಗಮನದ ಮಧುರ ಕ್ಷಣಕ್ಕಾಗಿ..

             ಶೈಲೂ......
[20/4/2019, 1:04 pm] Dr. B. N. Shylaja Ramesh: ,ಕಳೆದುಹೋಗಿದೆ ಹೃದಯ
*********************

ಎಲ್ಲೋ ಕಳೆದಿದೆ ಗೆಳೆಯ
ಕನಸು ತುಂಬಿದ ಹೃದಯ
ನೆನಪಿನಂಗಳದಿ ಚಿಮ್ಮುತ್ತಿರುವ
ಕಾರಂಜಿಯಲಿ ನಾನಲಿಯುವಾಗ

ಎಲ್ಲೋ ಕಳೆದಿದೆ ಗೆಳೆಯ
ಕಂಡೊಡನೇ ಉಲಿವ  ಹೃದಯ
ಜಾರಿಹೋಗಿದೆಯೇನೋ
ಕಣ್ಣಂಚಲಿ ಮಿಂಚು ಸರಿದಾಗ

ಎಲ್ಲೋ ಕಳೆದಿದೆ ಗೆಳೆಯ
ಹುಚ್ಚು ಮನಸಿನ ಹೃದಯ
ನೀನುಲಿದ ಸ್ವರಮಾಧುರ್ಯದ
ಸವಿಜೇನ ಸವಿಯುವಾಗ

ಎಲ್ಲೋ ಕಳೆದಿದೆ ಗೆಳೆಯ
ನಿನ್ನ ಬಿಂಬ ತುಂಬಿದ.ಹೃದಯ
ನೀನೆದುರು ನಿಂತು ಹುಸಿನಗೆಯ
ಹೂಬಾಣ ಹೂಡಿದಾಗ

ಎಲ್ಲೆಲ್ಲಿ ಹುಡುಕಲಿ ಗೆಳೆಯ
ಕಾಣದಾಗಿದೆ ಬಡ ಹೃದಯ
ಸಿಕ್ಕರೆ ಬಚ್ಚಿಡು ಜೋಪಾನವಾಗಿ
ಹೆಚ್ಚೇನು ಹೇಳಲಿ ಹೆಜ್ಜೆಹಾಕು ಜೊತೆಜೊತೆಯಾಗಿ

          ಶೈಲೂ......
[20/4/2019, 1:05 pm] Dr. B. N. Shylaja Ramesh: ,ನವಿರಾದ ನೆನಪು
**************

ಪ್ರಶಾಂತ  ಸಂಧ್ಯಾಸಮಯ
ತಂಗಾಳಿ ತಾಕಿ ಎನ್ನೆದೆಯ
ಅಲೆಅಲೆಯಾಗಿ ನೆನಪ ಸುರಳಿ
ಬಿಚ್ಚಿ ನೀಡುತಿದೆ ಕಚಗುಳಿ

ತಂಗಾಳಿ ತಂದ ಪರಿಮಳದ ಗಂಧ
ನೆನಪಿಸುತಿದೆ ನಿನ್ನ ವದನದ ಅಂದ
ಬಿರಿದ ತುಟಿಯಂಚಿನಿಂದ..ಆ
ಸೊಗಸ ಕರೆಯ ಕೇಳುವುದೇ ಚಂದ

ಮುಳುಗುತಿಹ ಆ ರವಿಯ ಕಿರಣ
ಮುಗುಳುನಗೆ ತಂದ ಪ್ರೀತಿಯ ಸ್ಪುರಣ
ಕಾಡುವೆಯೇಕೆ ಈ ಪರಿ ಅಕಾರಣ
ಮೋಡಿ ಮಾಡಿ ಕೆರಳಿಸಿದೆ ಮನವನ್ನ

ಚಿಲಿಪಿಲಿಯ ದ್ವನಿ ಹೊರಳಿ
ಹೊರಟಿದೆ ಮರಳಿ  ಗೂಡಿಗೆ
ನಿನ್ನೀ ಪ್ರೀತಿಯ ಕಲರವ
ತುಂಬಿಬಿಟ್ಟಿದೆ  ಎದೆಯೊಳಗೆ

ನೇಸರನಿಗೂ ಅವಸರ ಅಡಗಲು
ಭೂದೇವಿಯ ಒಲವ ಮಡಿಲೊಳು
ಕೆಂಪರಡಿ ಕೆನ್ನೆ ನಾಚಿ ನೀರಾದೆ
ಕನವರಿಸಿ ನಿನ್ನ ಮನದೊಳು

ಈ ಪ್ರಶಾಂತ ಸಂಜೆಗೂ
ನಿನಗೂ ಏನಿಹುದು  ಬಂಧ..?
ಕಾತರದ ಅಳಲಿನೊಲು
ಕಾಯ್ವೆ ನಾ ಮುದದಿಂದ...

           ಶೈಲೂ.....
[20/4/2019, 3:19 pm] Dr. B. N. Shylaja Ramesh: ಹುಂ... ಹಗುರಾಗಬೇಕು ಮತ್ತೆ
ಹಳೆಯ ಪೊರೆ ಕಳಚಿದಂತೆ
ಅವನಿತ್ತುದವನಿಗೇ ಮುಡಿಪು
ಬರೆದಿದ್ದದ್ದೊಂದು ಸವಿ ನೆನಪು

ಮುತ್ತು ರತ್ನದಂತಿತ್ತಲ್ಲ
ಮನವದರೊಳು ನೆಲೆಸಿತ್ತಲ್ಲ
ಅತ್ಯಮೂಲ್ಯ ಮನದ
ಭಾವಧಾರೆ ಸಿಹಿಜೇನು ಬೆಲ್ಲ

ಎನಿತು ಪ್ರೀತಿ ಪ್ರೇಮಧಾರೆ
ತುಂಬಿಸಲ್ಲಲ್ಲಿ  ನಡುವೆ ಅಕ್ಕರೆ
ಹುಸಿಮುನಿಸು ಕೋಪತಾಪ
ಬೆರೆಸವನು ಬರೆಸಿದ್ದ ಪಾಪ

ಕೊಟ್ಟಿದ್ದವನೇ ಪ್ರೀತಿಯಿಂದ
ಕಸಿದವನವನೇನು ಆಸೆಯಿಂದ
ಕಸಿದಿದ್ದೋ  ಕಳೆದದ್ದೋ  ಏನು
ಅರ್ಪಿತವೆಲ್ಲವನಿಗೆ  ಬುದ್ಧಿ ಮನ

ಕೊಟ್ಟಾನವನು ನೂರೆಂಟು
ಕಸಿದಿದ್ದಕ್ಕೆ ದುಪ್ಪಟ್ಟು
ಮರೆಸೆಲ್ಲ ನಗಿಸುವ ಗತ್ತು
ಅವನಲ್ಲದಿನ್ನಾರಿಗೆ ಗೊತ್ತು

ಮರುಕವಿತ್ತು ಈ ತನಕ
ಸಂತೈಕೆ ಮಾಡಿದೆ ಮೂಕ
ಅದೇನು ಬಂಧವೋ ಅರಿಯೆ
ನಿಮ್ಮೀ ಹಾರೈಕೆ ಪೊರೆಯೆ

ತಲುಪಲಿದೆ ಗುರಿ ಮುಂದೆ
ಗುರುವಿನ ಹಾರೈಕೆ ಹಿಂದೆ
ಕವಿಮನಸ ಕವಿ ತಾನೇ ಬಲ್ಲ
ನಮಿಸಿ ಶರಣಾದೆ ಮೆಲ್ಲ

          ಶೈಲೂ......

ನಿಮ್ಮ ಸಂತೈಕೆಯ ನುಡಿ ನಿಜಕ್ಕೂ.  ಖುಷಿ ತಂದಿದೆ ಸರ್
ಮತೆಯುತ್ತೇನೆ ಖಂಡಿತಾ... ಹಾಗೆಯೇ ಬರೆಯುತ್ತೇನೆ👍
Thank you so much sir🙏🙏🙏
[20/4/2019, 4:40 pm] Dr. B. N. Shylaja Ramesh: ಎಳೆ ಕೈಗಳ ಮೇಲೇನಿದು
ಕೆಂಪಿನೆಳೆಯ ಚಿತ್ತಾರ
ಅಂದದ ಕೈಯ್ಯ ಮೇಲಿನಿತು
ಮದರಂಗಿಯ.ಹುನ್ನಾರ

ಕೈಗೆ ಕಳೆ ಕೊಟ್ಟಿದೆ ನೋಡು
ಎಳೆ ಎಳೆಯಾಗಿ ಬಿಡಿಸಿದ ಬಣ್ಣ
ಮದರಂಗಿಗೆ ಮೆರಗಿತ್ತಿದುದು
ಮುದ್ದುಗೊಂಬೆಗಳ ಕೈಯಣ್ಣ

ಯಾರಿಟ್ಟರೇ ಹೇಳು  ಕಂದ 
ಈ ಅಂದದೆಳೆಯ ರಂಗೋಲಿ
ಮೂಡಿಸಿದೆ ಗಾಢ ರಂಗು
ಬಂಗಾರಿಯ ಕೈಯ್ಯಲ್ಲಿ

ಬಿಳಿ ಮೈಗೆ ಕೆಂಪುಬಣ್ಣ
ಸೆಳೆದೆಳೆಯಿತು ಕಣ್ಣ
ದೃಷ್ಟಿಯಾದೀತು ಜೋಕೆ
ಇಡೊಂದು ಕಪ್ಪುಚುಕ್ಕಿ ಗಲ್ಲಕೆ

            ಶೈಲೂ.....
[21/4/2019, 10:25 pm] Dr. B. N. Shylaja Ramesh: ಸ್ನೇಹ ಸಮ್ಮೇಳನ
***************

ನೀವು ನೆಟ್ಟ ವಿಶಾಲ
ಅಲದಮರದಡಿಯಲ್ಲಿ
ಇಂದೊಂದು ಸ್ನೇಹ ಸಮ್ಮೇಳನ

ಸ್ಪುರಿಸುತ್ತ ಸ್ನೇಹ
ತೀರಿತ್ತು ದಾಹ
ರೂವಾರಿ ಇಲ್ಲದ್ದು ಮನೋವೇದನ

ಎನಿತು ಸಂತಸದ ಸಮಯ
ಹರಟೆ ವಿಚಾರ ವಿನಿಮಯ
ನೀವಿತ್ತ ಬಳುವಳಿಯ ಸ್ನೇಹ ಸಂಗಮ

ಮಕ್ಕಳ ಕಲರವ
ಮುದವಿತ್ತ  ಸಾಂಗತ್ಯ
ಮರೆಸಿತ್ತು ನನ್ನೆಲ್ಲ ಮನದ ನೋವು

ಎಲ್ಲೋ ಒಮ್ಮೆ ಕಂಡು
ಶುರುವಾದ ಸಿರಿ ಸ್ನೇಹ
ಮರೆಸಿತ್ತು ನಾವು ನಮ್ಮವರ ಕಾವು

ಸಂತಸದಲೂ ನಡುವೆ
ನೀವಿಲ್ಲದ ಬೇಸರ
ನಿಜದಿ ನಮ್ಮೆಲ್ಲರ ಕಾಡಿತ್ತು

ಬರಿದೇ ನಿಮ್ಮದೇ ಮಾತು
ಮನ ಮನದಲಿ ಕುಳಿತು
ನಿಮ್ಮ ನೆನಪಲ್ಲಿ ರಾರಾಜಿಸುತ್ತಿತ್ತು

ಮತ್ತೆಂದು ಭೇಟಿಯೊ
ವಟವೃಕ್ಷ ದಡಿಯಲ್ಲಿ
ಕಾಯುವೆನು ಸಂತಸದ ಕ್ಷಣಕ್ಕಾಗಿ

ಇರಲಿ ನಮ್ಮ ನೆನಪು
ಮರೆಯದೇ ಹುರುಪು
ಶೀಘ್ರದಲೇ ತಾವು ಬರುವವರಾಗಿ

          ಶೈಲೂ.....
[8/11/2019, 10:25 am] Dr. B. N. Shylaja Ramesh: ಮೌನ
*******

ಮಾತು ಮೌನವಾದಾಗ
ಮೌನವೇ ಮಾತು
ಮೌನದಲೇ ಗುನುಗಿದಾಗ
ಮೌನವೇ ರಾಗವು
ಮನ ಮುನಿಸಿನಲಿರಲು
ಮೌನವಾಯ್ತು ಮದ್ದು
ಮೌನದೇಕಾಂತವದು
ಮುಸುಕುನೊಳಗಿನ ಗುದ್ದು
ಮಾತು ಮರೆಯಾದಾಗ
ಮೌನ ದಾರಿದೀಪ
ಮೌನ ವಿಜೃಂಭಿಸಿದಾಗ
ಮಾತು ತೀರದ ತಾಪ
ಮಾತು ಒಂದು ನುಡಿದರೆ
ಮೌನಕೆ ನೂರರ್ಥ
ಮಾತಿಗೆ ಅರಿಯಲಾಗದು
ಮೌನದ ಭಾವಾರ್ಥ
ಮಾತು ಮನೆಯ ಕೆಡಿಸಿದರೆ
ಮೌನ ಬಾಳನುಳಿಸಿತು
ಮೌನವಾದರೆ ಬದುಕು
ಮಾತಿಗೆ ಅರ್ಥವೆಲ್ಲುಳಿಯಿತು..??

       ಶೈಲೂ....
[12/12/2019, 5:05 pm] Dr. B. N. Shylaja Ramesh: ಅಪಸ್ವರ
*********

ಪ್ರಿಯ ಗೆಳೆಯ
ನನ್ನ ನಿನ್ನ ಸ್ನೇಹ ಬೆಸೆದು
ಸವಿ ಕನಸೊಸೆದು
ಮನದಲ್ಲಿ ಹಾಡಿತ್ತು
ಸುಂದರ ರಾಗ

ಕಡೆಗಣ್ಣ  ಕುಡಿನೋಟ
ಹೆಚ್ಚಿಸಿ ಎದೆಬಡಿತ
ಮನದಲ್ಲಿ ಗರಿಗೆದರಿ
ಆಡಿ ನವಿಲಿನ ನಾಟ್ಯ
ಮೂಡಿತ್ತು .ಅನುರಾಗ

ಹೃದಯವೀಣೆ ನುಡಿಸಿದ
ಸಪ್ತಸ್ವರಗಳ ಸುಂದರ
ಸಂಗೀತ .ಸುಧೆಯಲ್ಲಿ
ಮೂಡಿತ್ತು ಎಲ್ಲೋ
ಅಹಮ್ಮಿನ  ಅಪಸ್ವರ

ತಂತಿ ಮುರಿದಂತೆ ವೀಣೆ ಹರಿದಂತೆ
ಜೀವನದ ರಾಗ
ಶ್ರುತಿತಪ್ಪಿ ಹಾಡಿದೆ
ಬಂದೊಮ್ಮೆ ಮೀಟು
 ಹೃದಯದಾ ವೀಣೆ
ಮತ್ತೆ ಮೂಡಲಿ ಒಲವಿನ ರಾಗ

           ಶೈಲೂ.....
[12/12/2019, 5:54 pm] Dr. B. N. Shylaja Ramesh: ವೀರ ಹನುಮಾ
*************
ರಾಮ ಭಕ್ತ ಹನುಮಾ ಅಂಜನೀಪುತ್ರ ಹನುಮಾ
ಪವನ ಸುತ ಹನುಮಾ ಜೈ ವೀರಧೀರ ಹನುಮಾ
ಜೈ ಜೈ ವೀರ ಧೀರ ಹನುಮಾ  ||

ಸಾಗರ ಲಂಘಿಸಿ ಲಂಕೆಗೆ ಹಾರಿ
ಸೀತಾಮಾತೆಗೆ ಮುದ್ರೆ ಉಂಗುರವಿತ್ತೆ
ತರಿದು ರಕ್ಕಸರ ವೀರಾವೇಷದಿ
ಸಿಡಿದು ಆಗಸಕೆ ಲಂಕೆಯನೂ ಸುಟ್ಟೆ || ಜೈ ವೀರ ಧೀರ ಹನುಮಾ ||

ಭಕ್ತಿ ಶಕ್ತಿಯಲಿ ಕಲ್ಲನ್ನು ಜೋಡಿಸಿ
ಸಾಗರಕೆ ಸೇತುವೆಯನೂ ಕಟ್ಟಿ
ರಾಮನಾಮದ ಮಹಿಮೆಯ ಹಾಡುತ
ವಾನರ ಸೈನ್ಯದೆ ಲಂಕೆಯನೂ ಹೊಕ್ಕೆ || ಜೈ ವೀರ ಧೀರ ಹನುಮಾ||

ಅಮಿತ ಪರಾಕ್ರಮಿ ಅಗಾಧ ಬಲವಾನ್
ಸಂಜೀವಿನಿ ಪರ್ವತವನೆ ತಂದೆ
ಲಕ್ಷ್ಮಣನ ಜೀವವುಳಿಸಿ ರಾಮಗೆ ನಮಿಸಿ
ವೀರಾವೇಷದಿ ರಕ್ಕಸರನು ಕೊಂದೆ || ಜೈ ವೀರಧೀರ ಹನುಮಾ ||

ರಾಮನ ಭಂಟ ಜೈ ಹನುಮಂತ
ಪೊಗಳಲಹುದೇ ನಿನ್ನಯ ಚರಿತೆ
ರಾಮನಾಮದ  ಹಿರಿಮೆಯ ಸಾರುತ
ಜಗದ ಜಂಜಡವನೆ ಮರೆತೇ || ಜೈ ವೀರ ಧೀರ ಹನುಮಾ ||

ನೀನಿರುವೆಡೆಯೇ ರಾಮನ ವಾಸ
ರಾಮನಾಮವೇ ನಿನ್ನ ಶ್ವಾಸ
ಪೊರೆ ಎನ್ನನು ಮಾರುತಿರಾಯ
ರಾಮಭಕ್ತಿಯ ನೀಡೆನಗೆ ಲವಲೇಶ || ಜೈ ವೀರ ಧೀರ ಹನುಮಾನ್ ||

           ಶೈಲೂ......
[12/12/2019, 5:59 pm] Dr. B. N. Shylaja Ramesh: ವೀರ ಹನುಮಾ
*************
ರಾಮ ಭಕ್ತ ಹನುಮಾ ಅಂಜನೀಪುತ್ರ ಹನುಮಾ
ಪವನ ಸುತ ಹನುಮಾ ಜೈ ವೀರಧೀರ ಹನುಮಾ
ಜೈ ಜೈ ವೀರ ಧೀರ ಹನುಮಾ  ||

ಸಾಗರ ಲಂಘಿಸಿ ಲಂಕೆಗೆ ಹಾರಿ
ಸೀತಾಮಾತೆಗೆ ಮುದ್ರೆ ಉಂಗುರವಿತ್ತೆ
ತರಿದು ರಕ್ಕಸರ ವೀರಾವೇಷದಿ
ಸಿಡಿದು ಆಗಸಕೆ ಲಂಕೆಯನೂ ಸುಟ್ಟೆ || ಜೈ ವೀರ ಧೀರ ಹನುಮಾ ||

ಭಕ್ತಿ ಶಕ್ತಿಯಲಿ ಕಲ್ಲನ್ನು ಜೋಡಿಸಿ
ಸಾಗರಕೆ ಸೇತುವೆಯನೂ ಕಟ್ಟಿ
ರಾಮನಾಮದ ಮಹಿಮೆಯ ಹಾಡುತ
ವಾನರ ಸೈನ್ಯದೆ ಲಂಕೆಯನೂ ಹೊಕ್ಕೆ || ಜೈ ವೀರ ಧೀರ ಹನುಮಾ||

ಅಮಿತ ಪರಾಕ್ರಮಿ ಅಗಾಧ ಬಲವಾನ್
ಸಂಜೀವಿನಿ ಪರ್ವತವನೆ ತಂದೆ
ಲಕ್ಷ್ಮಣನ ಜೀವವುಳಿಸಿ ರಾಮಗೆ ನಮಿಸಿ
ವೀರಾವೇಷದಿ ರಕ್ಕಸರನು ಕೊಂದೆ || ಜೈ ವೀರಧೀರ ಹನುಮಾ ||

ರಾಮನ ಭಂಟ ಜೈ ಹನುಮಂತ
ಪೊಗಳಲಹುದೇ ನಿನ್ನಯ ಚರಿತೆ
ರಾಮನಾಮದ  ಹಿರಿಮೆಯ ಸಾರುತ
ಜಗದ ಜಂಜಡವನೆ ಮರೆತೇ || ಜೈ ವೀರ ಧೀರ ಹನುಮಾ ||

ರೋಮರೋಮದಲಿ ರಾಮನಾಮವ ತುಂಬಿ
ರಾಮನ ಪ್ರಿಯ ಬಂಧುವಾದೆ
ಹೃದಯ ಕಮಲದಲಿ ರಾಮನ ನಿಲಿಸಿ
ನಿಜ ಭಕ್ತಿಗೇ ನೀ ಸಿಂಧುವಾದೆ || ಜೈ ವೀರಧೀರ ಹನುಮಾ ||

ನೀನಿರುವೆಡೆಯೇ ರಾಮನ ವಾಸ
ರಾಮನಾಮವೇ ನಿನ್ನ ಶ್ವಾಸ
ಪೊರೆ ಎನ್ನನು ಮಾರುತಿರಾಯ
ರಾಮಭಕ್ತಿಯ ನೀಡೆನಗೆ ಲವಲೇಶ || ಜೈ ವೀರ ಧೀರ ಹನುಮಾನ್ ||

           ಶೈಲೂ......
[13/12/2019, 7:26 am] Dr. B. N. Shylaja Ramesh: ಕಾಯುತಿಹೆ
**********

ಕಾದು ಕುಳಿತೆನು ನಾನು 
ಎದುರು ನೋಡುತ ನಿನ್ನ ಬರುವನ್ನೇ
ತಡವೇಕೆ ಗೆಳೆಯಾ ಮರೆತುಬಿಟ್ಟೆಯ 
ನೀನು ನನ್ನಿರುವನ್ನೇ

ನೀಬರುವ ದಾರಿಯನು 
ಕಾದುನೋಡುತ್ತಾ 
ಮಂಜಾಯ್ತು ಎನ್ನ ಕಣ್ಣು
ನೆಟ್ಟದೃಷ್ಠಿ ಯಲಿ ನಿನ್ನ ಬಿಂಬವೇ ಕಾಣಲಾಗದು ಏನೂ

ಹಸಿರುಡುಗೆಯುಟ್ಟ 
ಪ್ರಕೃತಿಯು ಕೂಡ ಸ್ಪರ್ಧೆಗಿಳಿದಂತೆ
ತುಂಬಿ ನೀರವ ಶಾಂತಿ ಹೆಚ್ಚಿಸಿದ್ದಾಳೆ 
ಎನ್ನ ಮನದ ಚಿಂತೆ

ಅರೆಬಿರಿದ ಹೂಗಳೂ ಜೊತೆಯಾಗಿದೆ ಎನಗೆ 
ಬೀರುತ್ತ ಸುಗಂಧ
ಕಾದು ಕುಳಿತಂತಿದೆ ದುಂಬಿಗಾಗಿಯೇ 
ತಾ ಸುರಿಸುತ ಮಕರಂದ

ಬೀಸುತಿಹ ತಂಗಾಳಿ ಮುತ್ತಿ ಮೈಮನವ 
ಹೆಚ್ಚಿಸಿದೆ ನಿನ್ನ ನೆನಪ
ಅದರ ಹುನ್ನಾರವೇ ಬೇರೆ ತಂಪೆರೆವಂತೆ ಕಂಡರೂ
 ಎನ್ನ ಸೋಕಲು  ಅದಕೊಂದು ನೆಪ

ನೀಬರುವ ವರೆಗೂ ಏಳಲಾರೆನು 
ಕೂತಲ್ಲಿಯೇ  ಅಚಲ
ಬಂದೇ ಬರುವಿಯೆದು ಹೇಳುತ್ತಿದೆ ಮನವು
 ನಿರ್ಧಾರವಿದು ಪ್ರಭಲ

          ಶೈಲೂ.......

ಚಿತ್ರ ಕೃಪೆ :--
ನಾಗೇಶ್ ರವರು
[13/12/2019, 7:27 am] Dr. B. N. Shylaja Ramesh: ನನ್ನವಳು
********

ನನ್ನವಳೊಂದು ಚಂದನದ ಗೊಂಬೆ
ಮೈಮಾಟವದು  ಅಪ್ಸರೆಯ ತೆರದಿ
ಬಳ್ಳಿ ನಡುವಿನ ಚೆಲುವೆ ಒಲವ ಲತೆಯಿವಳು
ಕುಸುಮ ಕೋಮಲ ಬಾಲೆ
ಗಾಂಭೀರ್ಯ ನಡೆಯವಳು 
ಸವಿಮಾತಿನರಗಿಣಿ   ಸ್ವರವೋ ಕೋಗಿಲೆಯ ಇಂಪು  ಸದ್ಗುಣಗಳ ಗಣಿ  ಇವಳೆನ್ನ ಕಣ್ಮಣಿ

ನನ್ನವಳು  ಪ್ರಕೃತಿಯ ತೆರದಿ
ಮುಖವು ಕೆಂದಾವರೆಯು ಹುಬ್ಬು ಇಂದ್ರಾಚಾಪ
ಮೀನು ಹೊರಳಿದಂತೆ ಚಂಚಲತೆಯ ನಯನ
ಕೆನ್ನೆ ಸೇಬನು ಕಚ್ಚಲಲ್ಲೇ ಗಿಣಿ ಮೂಗು
ತೊಂಡೆ ತುಟಿಗಳ ಒಳಗೆ ದಾಳಿಂಬೆ ಪಂಕ್ತಿ
ಹಾಲ್ಗಲ್ಲದ ಚೆಲುವೆ ನಕ್ಕರಲ್ಲೇ ಗುಳಿಕೆನ್ನೆ
ಅಲ್ಲಿ ಬಿದ್ದವ ನಾ ಮೇಲೆಳಲೇ ಇಲ್ಲ

ನನ್ನವಳೊಂದು ವಿಸ್ಮಯದ ಲೋಕ
ನಗೆಯು ಬೆಳದಿಂಗಳಂತೆ ಕೋಪ ಅಗ್ನಿತಾಪ
ಒಲವ ಸೋನೆಯ ನಡುನಡುವೆ
ಗುಡುಗು ಸಿಡಿಲಬ್ಬರದ ದ್ವನಿ
ಬೆಳ್ಳಿಮೋಡಗಳ ನಡುವೆ
ಕವಿದಂತೆ  ಕಾರ್ಮೋಡ
ಸಂತಸದ ನಗೆ ಮಿಂಚಿನಡಿಯಲ್ಲೇ ಹುಸಿಮುನಿಸ ಭಾವ
ಎಲ್ಲಿಂದಲೋ ಭೋರ್ಗರೆದು ದುಮುಕುತ್ತಿದೆ ಬಿರುಮಳೆಯ ಕಂಬನಿ
ಇದ ಕಂಡು ನಾನಾದೆ ಮೂಕ ವಿಸ್ಮಿತ

            ಶೈಲೂ.......
[17/12/2019, 8:13 am] Dr. B. N. Shylaja Ramesh: ಕೈ ಹಿಡಿದು ನಡೆಸು
****************

ಚಿಂತೆಯ ಪಥದೊಳಗೆ
ಮನ ಅಲೆದು ನಡೆದಿರಲು
ಹೇಗೆ ತಲುಪಲಿ ತಂದೆ
ಗುರಿಯ ಕಡೆಗೆ

ಜೀವನದ ಕಡಲೊಳಗೆ
ಮುಳುಗಿ ಹೋಗಿಹ ನನಗೆ
ತೋರು ದಾರಿಯ
ನಡೆಸು ಮುಳುಗದಂತೆ

ತೀರಕಾಣದ ಕಡಲ
ಬಳಸುದಾರಿಯಲಿ 
ಅಲೆಯುತಿರುವೆ
ದಿಕ್ಕುತಪ್ಪಿದಂತೆ

ಗಾಢಾಂಧಕಾರದ ಕಡಲ
ಹಾದಿಯ  ನಡುವೆ
ತೋರಿ ದೀವಟಿಗೆಯ 
ನಡೆಸು ದಾರಿ ತಪ್ಪದಂತೆ

ಇಲ್ಲಿ ನಾನಲೆದು ನಡೆವಾಗ
ನೋವಿನಲಿ ಮಿಡುಕಿದರೆ
ತೋರು ಕರುಣೆಯ ಕಾಂತಿ
ನೀ ಎನ್ನ ಮರೆಯದಂತೆ

ನನ್ನಂತರಂಗದಲಿ
ಚಿರವಾಗಿ ನೆಲೆನಿಂತು
ತೋರು ಸರಿ ದಾರಿಯ
ದಿಕ್ಸೂಚಿ ಯಂತೆ

ಚಿರ ಮಧುರ ಕಾಂತಿಯಲಿ
ಸರಿ ದಾರಿ ಕಂಡಾಗ
ಸೇರುವೆನು ಗುರಿಯೆಡೆಗೆ
ದಾರಿ ತಪ್ಪದಂತೆ

ಕೈಹಿಡಿದು ನಡೆಸೆನ್ನ
ನಂಬಿರುವೆ  ನಾ ನಿನ್ನ
ಅಪ್ಪಿಕೊ ಎನ್ನ ನೀ
ಹೆತ್ತ ತಾಯಿಯಂತೆ

          ಶೈಲೂ.......
[17/12/2019, 8:16 am] Dr. B. N. Shylaja Ramesh: ಮೂಢನಂಬಿಕೆ
*************

ತನ್ನದೇ ನೆರಳಿಗೂ ಹೆದರುವ
ಪುಕ್ಕುಲು ಸ್ವಭಾವದ ಮನ
ನಿರಂತರ ಅವ್ಯಕ್ತ ಭಯಭೀತ
ತನ್ನವನತಿಗೆ ತಾನೇ ಕಾರಣ

ಬೀಸುಗಾಳಿಗೆ ದೀಪವಾರಿದರೂ ಸರಿ
ಬಾಳೇ ಕತ್ತಲಾದೀತೆಂಬ ಮೂಢಭಯ
ದಾರಿಗಡ್ಡ ಬಂದರಾಯ್ತು ಬೆಕ್ಕು
ಅಪಶಕುನ, ನಿಸ್ತೇಜ ಬದುಕು

ಮಾತಿನ ಮಧ್ಯದಲ್ಲೊಂದು ಸೀನು
ಕಾರ್ಯವಿಳಂಬದ ಗೋಣು
ಎದುರಾದರಾಯ್ತು ಖಾಲಿ ಕೊಡ
ಅಪಶಕುನವಂತೆ ಕಾರ್ಯ ಜಡ

ಹಲ್ಲಿ ನುಡಿಯಲು ಶಕುನ
ಕಣ್ಣದುರಿದರೆ ಸ್ಥಬ್ದ ಸಂಚಲನ
ಎಲ್ಲಕ್ಕೊಂದೊಂದು ಕಿಡುನುಡಿ
ಮೂಢಾಚಾರಣೆಗೆ ಮುನ್ನುಡಿ

ಮನಹೊಕ್ಕು ಸುಮ್ಮನೆ ಕೊರೆತ
ಕಾರ್ಯವಾದರೆ ಅಹಿತ
ಸರಿ ತಪ್ಪುಗಳಲಿ ಅನುಮಾನ
ಮೌಢ್ಯ ಆಚರಣೆಯಲ್ಲಿ ಮನ

ಸರಳ ನಿವಾರಣೆ ಮಂತ್ರ
ಮೆಣಸು ನಿಂಬೆಯ ಪಾತ್ರ
ಮಾಂತ್ರಿಕ ಸಲಹಾ ಸೂತ್ರ
ದೃಷ್ಟಿ ಗೊಂಬೆ ಮಹತ್ತರ ಗಾತ್ರ

ಸರಿತಪ್ಪುಗಳರಿವಿಲ್ಲ 
ಮೌಢ್ಯಕ್ಕೆ ಮಿತಿಯಿಲ್ಲ
ಆಚರಣೆಯಲೂ ಗೋಜಲು
ಬಗೆಹರಿದೀತೆ ಮನದಳಲು

ಜ್ಞಾನವೋ ಅಜ್ಞಾನವೋ ನಂಬಿಕೆ
ಸರಿತಪ್ಪುಗಳ ಜಿಜ್ಞಾಸೆ ಮನಕೆ
ಅನಿಸಿಕೆಗನುಸಾರ ನಡೆಯಲಿ ಬಿಡಿ
ಸಂಕಷ್ಟವರಿದು ಸಿಕ್ಕರಷ್ಟೇ ಸಾಕು ನೆಮ್ಮದಿ

                 ಶೈಲೂ......
[17/12/2019, 12:25 pm] Dr. B. N. Shylaja Ramesh: ಕನ್ನಡಿಯ ಎದುರು ನಾ ನಿಂತಾಗ ##
****************************

ಕನ್ನಡಿಯ ಎದುರು ನಾ ನಿಂತಾಗಲೆಲ್ಲಾ
ಉಕ್ಕಿಬರುವುದು ಅಭಿಮಾನ ಕನ್ನಡಿಯ ಮೇಲೆ
ಬಹು ಪರಾಕ್ ನುಡಿವ ಭಟ್ಟಂಗಿಯಲ್ಲ..!!
ಸೀದಾ ಸಾದಾ ತೋರುವುದು ನಿಜದ ನೆಲೆ

ಬಹುಶಃ ಜಗದಲ್ಲಿ ಇದೊಂದೇ ಇರಬೇಕು
ಕಂಡದ್ದನ್ನು ಕಂಡಂತೆಯೇ ತೋರುವ ಭೂಪ
ಮಿಥ್ಯಕಂತೂ ತಾವಿಲ್ಲ ಅದಕ್ಕೇ ಇರಬೇಕು
ಶುಭಕಾರ್ಯಗಳಲಿ ಕಳಶ ಕನ್ನಡಿಯ ಪ್ರತಾಪ

ಸತ್ಯ ಹರಿಶ್ಚಂದ್ರನ ವಂಶದ ತುಂಡೇನೋ
ಸತ್ಯವನ್ನಲ್ಲದೆ ಬೇರೇನೂ ತೋರದು
ಅವರವರ ರೂಪವನ್ನವರಂತೆಯೇ ತೋರಲೆನೋ
ಮನ್ನಣೆಯು ಬಹುಪಾಲು ಈ ಕನ್ನಡಿಯದು

ಅದೆಷ್ಟು ಗರಿಮೆ ಹಿರಿತನವಿದ್ದರೂ ಸರಿ
ಬೇಧವಿಲ್ಲದೆ ನಿಜವ ಮಾರ್ದನಿಸುವುದು ಕನ್ನಡಿ
ಹಮ್ಮು ಬಿಮ್ಮುಗಳಲಿ ಉಬ್ಬಿ ಹೋದರೂ ಸರಿ
ನಿಜರೂಪವನೆ ತೋರಿ ಬರೆಯುವುದು ಮುನ್ನುಡಿ

         ಶೈಲೂ.......
[29/3/2020, 3:28 pm] Dr. B. N. Shylaja Ramesh: ಚಿತ್ರಕಾವ್ಯ##

ಅತ್ತ ಹಸಿರು ಇತ್ತ ನೀರು
ನಡುವೆ ಇದೆ ನಡೆವ ಹಾದಿ
ಮೇಲೆ ತೂಗುವ ಬೆಳ್ಮುಗಿಲು
ಕಲ್ಪವೃಕ್ಷಗಳು ಚಾಮರವ ಬೀಸಿರಲು
ಆಯಾಸವಿರದು ನಡಿಗೆಯಲಿ
ಏನಿದ್ದರೇನು? ಹಸಿವೆ ನೀಗುವುದಿಲ್ಲ
ತುಂಬಿಸಬೇಕಲ್ಲ ತುತ್ತಿನ ಚೀಲ
ಕಾಯಕವ ಅರಸಿ ಹೊರಟೆ ಬೈಸಿಕಲ್ಲ ಜೊತೆಯಲ್ಲಿ

             ಶೈಲೂ....
[10/5/2020, 11:02 am] Dr. B. N. Shylaja Ramesh: ಅಮ್ಮ ಅಮ್ಮಾ ಎಂದು ಕರೆಯುತಿಹೆನಮ್ಮಾ
ಶಿವರಂಜಿನಿ – ಝಪತಾಲ |

ಅಮ್ಮ ಅಮ್ಮಾ ಎಂದು ಕರೆಯುತಿಹೆನಮ್ಮಾ

ಕರಕರೆಯಿದೆಂದೆನದೆ ಓಡಿ ಬಾರಮ್ಮಾ||

ಯಾರ ದೋಷಗಳೆಷ್ಟು ನನಗೇಕೆ ಬೇಕು।

ನನ್ನ ದೋಷವ ತಿದ್ದಿ ನೀ ಸಲಹಬೇಕು||

ಪಾಪಿಗಳನುದ್ಧರಿಪ ನೀ ದಯಾಸಿಂಧು|

ನೀಡೆನಗೆ ಕರುಣೆಯಿಂ ಆ ಕೃಪೆಯ ಬಿಂದು||

ತಾಯಿ ನೀನಿರುತಿರಲು ತಬ್ಬಲಿಯೆ ನಾನು| ವಾತ್ಸಲ್ಯಸುಧೆಯುಣಿಸಲಾರೆಯಾ ನೀನು||

ಜ್ಞಾನ ಭಕ್ತಿ ವಿವೇಕ ವೈರಾಗ್ಯ ನೀಡು|

ಎನ್ನ ಹೃನ್ಮಂದಿರದಿ ನಿತ್ಯ ನಲಿದಾಡು||

– ಸ್ವಾಮಿ ಪುರುಷೋತ್ತಮಾನಂದ
[10/5/2020, 5:04 pm] Dr. B. N. Shylaja Ramesh: #ಮನಸಿನ_ಕನ್ನಡಿಯಲಿ_ನಿನದೇ_ಬಿಂಬ

ಮನಸಿನ ಕನ್ನಡಿಯಲಿ ನಿನದೇ ಬಿಂಬ
ಆಸೆ ಸಾವಿರ ಹರಡಿದೇ ಮನದ ತುಂಬಾ
ಬಾಳ ಹೊತ್ತಿಗೆಯ ಪುಟಪುಟದಲೂ ಬರೆದೆ
ನವಿರಾದ ಪ್ರೇಮಪತ್ರ ಹೆಸರು ನಿನದೇ

ಬೆಳಗಿದೆ ಗೆಳೆಯ ನಿನ್ನಿಂದಲೇ ಬಾಳು
ನಿನ್ನೆನೆ ನೆನೆಯುತ್ತ ಜೀವ ಸವೇಸಿರಲು
ಸವಿಯುತ್ತ ನಡೆದಿರುವೆ ನವರಾಗ ಹಾಡುತ
ನೀನಿತ್ತ ಸವಿ ನೆನಪ ಬುತ್ತಿಯ  ಸಹಿತ

ಮನದ ಮುಗಿಲ ಬಯಲಲಿ ನೀ ಚಂದಿರ
ಆ ಬೆಳದಿಂಗಳಲ್ಲರಳಿದ ನಾ ಮಂದಾರ
ನಿನ್ನನುರಾಗದ ಅಲೆಯಲ್ಲಿ ನಾ ತೇಲಿ ತೇಲಿ
ಜೀವನವನೆ ಒತ್ತೆಯಿಟ್ಟೆ ನಿನ್ನ ಕೈಲಿ

ಬಾಳ ಪುಟದಲ್ಲಿ ಬರೆದೆ ನೀ ಮುನ್ನುಡಿ
ಸ್ವಚ್ಛ ಸುಂದರವಂತೆ ನನ್ನ ಮನದಕನ್ನಡಿ
ಕನ್ನಡಿಯ ತುಂಬೆಲ್ಲ.ನಲ್ಲ ನಿನದೇ ಬಿಂಬ
ನಿನ್ನ ಹೊಳಪು ಕಣ್ಣಲಿ ಕಂಡೆ ನನ್ನ ಪ್ರತಿಬಿಂಬ

            ಶೈಲೂ......
[14/5/2020, 6:50 pm] Dr. B. N. Shylaja Ramesh: ## ಭಾವ ಗೀತೆ ಸ್ಪರ್ಧೆ ##
******************
ಶೀರ್ಷಿಕೆ:: ಕರ್ತವ್ಯ ಪ್ರಜ್ಞೆ
*******†***********"
ಬಂದಿತಿದೋ ಎಲ್ಲೆಡೆ ಹೊಸ ಮಾರಿಯು
ಕರೋನಾ ಎಂವ ರೋಗದ ಸವಾರಿಯು
ಮದ್ದೇ ಇಲ್ಲದಾ ವ್ಯಾಧಿಯು ಇದಾಗಿಹುದು
ಈ ಕಾಯಿಲೆಯ ಅರಿತು ಯಾರಿಹರು....

ಒಮ್ಮೆಲೆ ನುಗ್ಗಿ ಬಂತಿದು ಇಡೀ ಜಗಕೇ
ಬಡವ ಬಲ್ಲಿದರೆಂದು ಕೂಡ ನೋಡದೇ..
ಎಷ್ಟು ಹಣವಿದ್ದರೂನೂ ಬೆಲೆ ಇಹುದೇ
ದುಡ್ಡಿನಿಂದ ವಾಸಿಯಾಗದಂತ ಕಾಯಿಲೇ..

ಇದನು ಹೊಡೆದಟ್ಟಲೇ ಬೇಕು ನಾವುಗಳು
ಮನೆಯಲಿದ್ದು ಸ್ವಚ್ವತೆಯ ಪಾಲಿಸುತಾ
ಸಾವಿರಾರು  ವೈದ್ಯ..ಆರಕ್ಷಕ..ಯೋಧರು
ನಮಗಾಗಿ ಹಗಲಿರುಳು ಶ್ರಮಿಸುತಿಹರು..

ನಮಿಸುವ ಅವರ ಈ ಹಗಲಿರುಳ ಶ್ರಮಕೆ
ನಿಸ್ವಾರ್ಥ ಸೇವೆಗೈಯುತಿರುವ ಮನಗಳಿಗೆ
ನಮ್ಮ ರಕ್ಷಣೆಗೆ ಟೊಂಕ ಕಟ್ಟಿ ನಿಂತಿಹರು
ಅವರ ಋಣವ ತೀರಿಸಲೆಂತು ನಾವುಗಳು....

ತಮ್ಮಪ್ರಾಣ ಒತ್ತೆಇಟ್ಟಿಹರು ದೇಶ ಕಾಯಲು
ಊಟ ನಿದ್ರೆ ಮನೆಯ ತೊರೆದು ದಿನನಿತ್ಯವು
ರೋಗಿಗಳ ಸೇವೆಗೆ ಮುಡುಪಿಟ್ಟ ದಾದಿಯರು
ದೇಶ ನಗರ ಸ್ವಚ್ಚಗೊಳಿಸುತ ಪೌರ ಕಾರ್ಮಿಕರು...

ಬನ್ನಿ ಕೈ ಜೋಡಿಸೋಣ ಅವರೊಡನೆ ನಾವು
ಅವರಾಕುವ ಕಟ್ಟುಪಾಡುಗಳ ಬೆಂಬಲಿಸುವ
ನಮ್ಮೊಳಿತಿಗೆ ದುಡಿವ ಅವರಿಗೂ ಹಾರೈಸುವ
ಅವರೆಲ್ಲರ ಆರೋಗ್ಯಕೇ ದೇವರನು ಬೇಡುವ.....

***   ಅನಿತ .ಪಿ ಕೆ. ***
[18/5/2020, 4:15 pm] Dr. B. N. Shylaja Ramesh: #ಕಾಡುವ_ನೆನಪು

ತುಂಬಿಕೊಂಡಿದೆ ನೀರ ಹನಿ ಮುತ್ತು ಕಣ್ಣಲ್ಲಿ
ನೋವಿನಿಂದಲ್ಲ ಕಾಡುವ ನಿನ್ನ ನೆನಪ ಹಾವಳಿಯಲ್ಲಿ
ಹನಿ ನೀರ ಧಾರೆ ಸುರಿದು ಸಾಗರದ ತೆರನಂತಿದೆ
ಸಿಲುಕಿಬಿಟ್ಟಿರುವೆ ನೋಡು ನಿನ್ನ ನೆನಪ ಸುಳಿಯಲ್ಲಿ

ಅಪ್ಪಳಿಸುತ್ತಿದೆ ಮನದ ದಡಕ್ಕೆ ತೆರೆಗಳಂತೆ
ತೆರೆತೆರೆಯಾಗಿ ಸುಳಿವ ಸಾಗರದ ಅಲೆಗಳಂತೆ
ಉರುಳುತ್ತಿದೆ ಸಮಯ ನಿನ್ನ ನೆನಪ ಜೊತೆಯಲ್ಲಿ
ಕರಗಿಹೋಗುವ ಮುನ್ನ ನಿಶೆಯಲ್ಲಿ ಬಾ ಬೆಳಕಂತೆ

ನಾಳೆಯ ಭರವಸೆಯಲ್ಲಿ ಬದುಕುತ್ತಿದೆ ಈ ಜೀವಾ
ನಿನ್ನ ನೆನಪ ಸಾಂಗತ್ಯದಲಿ ಸವೆಯುತ್ತಿದೆ ಮನದಭಾವ
ಬಯಕೆಯ ಬನದಲ್ಲಿ ಬದುಕಿನ ಲಯದಲ್ಲಿ ಜೀವನ
ಅಳಿಸಲಾರದ ಹೆಜ್ಜೆಗುರುತಿತ್ತಿದೆ ನವಿರಾದ ನೋವ

ಚಿತ್ತಭಿತ್ತಿಯ ಚಿತ್ತಾರಗಳಲಿ ನಿನ್ನ ರೂಪ ಬಿಡಿಸಿದೆ
ಕನಸುಕಂಗಳ ಕಲ್ಪನೆಯ ಕನ್ನಡಿ ನಿನ್ನಾಕಾರ ಬಿಂಬಿಸಿದೆ
ಅಕ್ಷರಗಳ ರಂಗಿನುಡುಗೆಯ ತೊಡಿಸುವೆ ಬಾರಾ
ಹೆಕ್ಕಿಹೆಕ್ಕಿ ಬರೆದು ಸುಸ್ತಾಗಿ ಮನ ಮುದುಡಿಬಿಟ್ಟಿದೆ.

         ಶೈಲೂ.....
[23/11/2020, 12:48 pm] Dr. B. N. Shylaja Ramesh: ಬರೆಯಲಾಗದ ಕವಿತೆ...😞😞
******************

ಕವಿತೆಯೊಂದ ಬರೆಯಲೆಂದು ಕುಳಿತೆ
ಯಾಕೋ ಕಾಡುತ್ತಿದೆ ಪದಗಳ ಕೊರತೆ
ನಡುಗುವ ಕೈಯಲ್ಲಿ ಹಿಡಿಯಲಾಗದೆ ಲೇಖನಿ
ಯಾಕೋ ತಡವರಿಸಿದೆ ಒಡಲಾಳದ ಒಳದನಿ

ಎಲ್ಲಿ ಹುಡುಕಲಿ ಭಾವನೆಗಳ ಬಿಂಬಿಸುವ
ಸೂಕ್ತ ಪದಗಳ ಅರ್ಥಪೂರ್ಣ ವಾಕ್ಯ
ಹೊರಹೊಮ್ಮಲಾರದ ಭಾವನೆಗಳ ತಾಕಲಾಟದಲಿ
ಯಾಕೋ ಅಪ್ಪಿದೆ ಮನವು ಮೌನದ ಸಖ್ಯ

ಕಳೆಯಿತೆಲ್ಲಿ ಮನಸು ಬರೆಯುವುದೇ ಮರೆತು
ಯೋಚಿಸಿದರೂ ಸಿಗಲಿಲ್ಲ ಪದಗಳ ಥಾಲಿ
ವಿಷಯವಿದೆ ಬಹಳಷ್ಟು ಅರುಹಲಿದೆ ಮುಗಿಲಷ್ಟು
ಯಾಕೋ ಬರೆಯಲಾಗದು ಮನಸೆಲ್ಲ ಖಾಲಿ ಖಾಲಿ

ಎಲ್ಲಿ ಅಡಗಿದೆಯೋ ಪ್ರಾಸ ಭಾವನೆಗಳ ಮಿಡಿತ
ತಡಕಿದಷ್ಟೂ ದೂರ ಕೈಗೆಟುಕದ ನಿಹಾರಿಕೆ
ಮನೆಮಾಡಿತ್ತು ನಿರಾಶೆ ಬರೆಯಲಾಗದ ಹತಾಶೆ
ಯಾಕೋ ಸೊರಗಿದೆ ಲೇಖನಿ ಕವಿತೆಯಿಂದು ಮರೀಚಿಕೆ....😞😞😞

           ಶೈಲೂ......
[23/11/2020, 12:49 pm] Dr. B. N. Shylaja Ramesh: ಕವನ ಸ್ಪರ್ಧೆ##

ಚಿತ್ರಕ್ಕೊಂದು ಕವನ..
ಗೋಧೂಳಿ ಸಮಯ
*****************

ಹಾರುತಿದೆ ಬಾನಾಡಿ ತನ್ನ ಗೂಡನರಸಿ
ಮುಳುಗುತಿಹ ದಿನಕರನೂ ದಿನಚರಿ ಮುಗಿಸಿ
ಅಲ್ಲಲ್ಲಿ ತಾರೆಗಳ ಒಡ್ಡೋಲಗ ಮೇಳ
ಶಶಿಯೊಡನೆ ಬಾನಲ್ಲಿ ಬೆಳಗುವ ವೇಳಾ

ಆಗಸದ ಕೆಂಬಣ್ಣ ಚೆಲುವನು ನೋಡಿ
ಆವರಿಸಿದೆ ಗೆಳೆಯ ನಿನ್ನೊಲವ ಮೋಡಿ
ಆ ಕೆಂಪು ರಂಗಲಿ ಬೆರೆತೆನ್ನ ಮನ
ರಂಗಾಯ್ತು ಕೆನ್ನೆ ನೆನೆದೊಡನೆ ನಿನ್ನ

ಬೇಕೆನಿಸಿದೆ ಗೆಳೆಯ ನಿನ್ನ ಸವಿಮಾತು
ಏಕಾಂತದಿ ಕುಳಿತು  ಈ ಗೋಧೂಳಿ ಹೊತ್ತು
ತಂಗಾಳಿ ತಂಪಲಿ ತನು ಗರಿಬಿಚ್ಚಿ ಎದ್ದು
ಹಾರುತಿದೆ ಹಕ್ಕಿಗಳಂದದಿ ನಿನ್ನ ನೆನಪ ಹೊದ್ದು

ಬಾನಾಡಿ ಹಾಡಿಗೆ ತಲೆದೂಗಿದೆ ಮನ
ನೆನೆಯುತಿದೆ ನಸುನಾಚಿ ನಿನ್ನೊಡನೆ ಕಳೆದಕ್ಷಣ
ಒಲವ ಗೆಳೆಯ ನಿನಗೊಂದು ಹೂ ಮುತ್ತು
ಬಯಕೆಗಳ ಉತ್ತೇಜಿಸುವ ಈ ಗೋಧೂಳಿ ಹೊತ್ತು

             ಶೈಲೂ.......
[23/11/2020, 12:56 pm] Dr. B. N. Shylaja Ramesh: #ದ ಕಾರ ಗುಣಿತಾಕ್ಷರ #

ದೈವಕೆ ನಿವೇದನೆ
**************

ದಣಿವು ಕಾಣುತಿದೆ ಬದುಕಲಿ ದೇವ
ದಾರಿ ಏಕೋ ಕಾಣದಾಗಿದೆ 
ದಿಕ್ಕು ತಪ್ಪಿದ ನಾವೆಯಂತಾಗಿದೆ ಬದುಕು
ದೀನಳಾಗಿ ಬೇಡುತ್ತಿರುವೆ ನಿನ್ನಲಿ
ದುಡಿವ ಚಲವೇಕೋ ಮರೆಯಾಗುತಿದೆ
ದೂಡುವುದು ಹೇಗೆ ಈ ಬದುಕನ್ನು
ದೃಢಚಿತ್ತವಿಲ್ಲದೆ ನರಳುತಿರುವೆ
ದೆವ್ವದ ಮನೆಯಂತಾಗಿದೆ ಮನಸು
ದೇವ ನೀನಲ್ಲದೆ ಗತಿಯಿನ್ನಾರು
ಧೈರ್ಯದಿಂದ ಮುನ್ನುಗ್ಗುವ ಬಲನೀಡು
ದೊರಕಿದಂತೆ ನೀ ಚಿಂತಾಮಣಿ ಯ ತೆರದಲಿ
ದೋಷಗಳೆಲ್ಲ ದೂರೀಕರಿಸು ದಯದಲಿ
ದೌರ್ಜನ್ಯವೆಸಗುವ ಮನ ನೀಡದಿರು ದೌರ್ಬಲ್ಯ ನೀಡದಿರು
ದಂಡವೆರಗುವೆ ನಿನಗೆ ದೇವ
ದುಃಖ ದುಮ್ಮಾನಗಳ ದೂರೀಕರಿಸು

             ಶೈಲೂ......
[26/11/2020, 5:34 pm] Dr. B. N. Shylaja Ramesh: #ಬಯಸಿದ್ದು_ನೂರಾರು_ಸಿಕ್ಕಿದ್ದು_ಅರ್ಧಪಾಲು

ಬಯಕೆಯಿದೆ ಸಾವಿರ
ನೆರವೇರಬೇಕಲ್ಲ ಪೂರಾ
ಆಸೆಯೇನೋ ಬೆಟ್ಟದಷ್ಟು
ಸಿಕ್ಕಬೇಕಲ್ಲ ಬಯಸಿದಷ್ಟು

ನಮ್ಮಿಚ್ಛೆಯಂತಲ್ಲ ಜೀವನ
ನಡೆಯದಿಲ್ಲೇ ನೂ ಕಲ್ಪನ
ನಾವುಒಪ್ಪಿದ್ದೇನೂ ಬಪ್ಪದು
ಅನುಭವಿಸಬೇಕವ ಕೊಟ್ಟುದು

ಆಸೆಪಡುವುದು ಮನದ ಸ್ಥಿತಿ
ಬಯಕೆಗಳಿಗಿರಬೇಕು ಇತಿಮಿತಿ
ಬಯಸಿದ್ದರೆ ನೂರುಪಾಲು
ಸಿಕ್ಕುವುದಷ್ಟೇ ಅರ್ಧಪಾಲು

ಆಗಸಕೆ ಏಣಿ ಹಾಕಿದರೆ
ಆಗಬಹುದೇ ಚಂದ್ರ ಕೈಸೆರೆ
ಬಾನು ಭುವಿಗೆ ಅಂತರವಿದೆ
ಈ ಸತ್ಯ ಅರ್ಥವಾಗಬೇಕಿದೆ

ಆಸೆ ಪಡುವುದು ತಪ್ಪೇನಲ್ಲ
ಅತಿ ಆಸೆ ದುಃಖಕ್ಕೆ ಮೂಲ
ಹಣೆಬರಹದಲ್ಲಿದ್ದಷ್ಟೇ ಫಲ
ಇದನೊಪ್ಪಿಕೊಳ್ಳಬೇಕು ಎಲ್ಲ

         ಶೈಲಜಾ ರಮೇಶ್
[3/1/2021, 6:05 pm] Dr. B. N. Shylaja Ramesh: ನೀ ತಂದ  ಒಲವಿನ ಮುತ್ತಿನೋಲೆ
ಸಂತಸದಿ ಧರಿಸಿದೆ ಕಿವಿಯಲ್ಲಿ
ಕಣ್ಸನ್ನೆಯಲ್ಲೇ ಇತ್ತೆ ಕರೆಯೋಲೆ
ಹೊಳಪು ಝಲಪಿಸಿತೆನ್ನ ಕಣ್ಣಿನಲ್ಲಿ

ನೀ ಪ್ರೀತಿಯಿಂದತ್ತ ಉಡುಗೊರೆ
ಬೆಲೆ ಕಟ್ಟಲಾಗದ  ಅನರ್ಘ್ಯ ರತ್ನ
ಅದೆಷ್ಟು ಆಸೆಯಿಂದಲಿ ನೀ ಕೊಟ್ಟೆ
ಮಾಡುವೆ ಜತನದಲಿ ಕಾಪಿಡುವ ಯತ್ನ

ನಾ ಧರಿಸಿರುವೆ ನೋಡು ನಲ್ಲ
ಚಂದದಿ ತೂಗುತಿದೆ ಓಲೆ ಕಿವಿಯಲ್ಲಿ
ನಿನ್ನಂತರಂಗದ ಪ್ರೀತಿಯ ಕೂಗು
ಪಿಸುಗುಡುತ್ತಿದೆ ಕಿವಿಯ ಬಳಿಯಲ್ಲಿ

ಹೊಳೆವ ಮುತ್ತುಗಳ ಹೆಕ್ಕಿ ಹೆಕ್ಕಿ
ಅದಮ್ಯ ಪ್ರೀತಿಯ ಬಂಧನದೆ ಬಿಗಿಸಿದೆ
ಬಿಡಿಸಲಾರದ  ಬಾಂಧವ್ಯಕ್ಕಿದು ನಂಟು
ಕಿವಿಯೋಲೆ ಒಲವಿನೋಲೆ ಬರೆಸಿದೆ..!
[4/1/2021, 4:13 pm] Dr. B. N. Shylaja Ramesh: #ಜಡೆಕವನ

#ಅನುರಾಗದ_ಅಕ್ಷತೆ

ಒಲಿದ ಮನಗಳ ಹೃದಯ ಬಂಧನ
ಬಂಧವಿದು ಚಂದ ಮಾಂಗಲ್ಯ ಬಂಧನ
ಬಂಧನವೇ ಒಲುದ ಜೀವಗಳ ಬೆಸುಗೆಗೆ
ಬೆಸುಗೆ ಇದು ಮುಂದಿನ ಬಾಳ ಒಸಗೆಗೆ
ಒಸಗೆಗೆ ಸಂಭ್ರಮ ಈ ಹಸಿರು ಚಪ್ಪರ
ಚಪ್ಪರದಲ್ಲಿ ಮದುವೆಯ ಸಡಗರ
ಸಡಗರಕೆ ಕಾದಿಹುದು ಎರಡು ಮನವು
ಮನವು ಕಾತರಿಸುತ್ತಿದೆ ಒಂದಾಗಲು ತನುವು
ತನುವಲ್ಲಿ ಪುಳಕ ಎಂಥದೋ ರೋಮಾಂಚನ
ರೋಮಾಂಚನದ ಜೊತೆಗೆ ಏಕೋ ಕಂಪನ
ಕಂಪನ ಎನಿತು ನಲ್ಲ ನೀ ಕೈ ಹಿಡಿದಾಗ
ಕೈಹಿಡಿದು ನಡೆದು ಸಪ್ತಪದಿ ತುಳಿದಾಗ
ತುಳಿದೆ ನಾ ನಿನ್ನೊಲವಿನರಮನೆಯ ಬಾಗಿಲು
ಬಾಗಿಲಿದು ನಮ್ಮ ಪ್ರೇಮದುಯ್ಯಾಲೆ ತೂಗಲು
ತೂಗುವೆ ವಾತ್ಸಲ್ಯದ ಮಡಿಲಲ್ಲಿ ನಮ್ಮ ಕಂದನ
ಕಂದನ ಕಾಣಲು ಬೇಕು ವಿವಾಹ ಬಂಧನ
ಬಾಂಧವ್ಯ ವಿವಾಹದೊಡನಾದರೆ ಮಾನ್ಯತೆ
ಮಾನ್ಯವಾಗಲಿರಬೇಕು ಅನುರಾಗದ ಅಕ್ಷತೆ..!

          ಶೈಲಜಾ ರಮೇಶ್
[9/1/2021, 10:08 pm] Dr. B. N. Shylaja Ramesh: ನಮಸ್ತೇ ಯುಗಾದಿ ಬಳಗಕ್ಕೆ🙏🙏🙏
ಇಂದಿಗೆ ಯುಗಾದಿಯ, ಯುಗಾರಂಭ ಆಗಿ ಒಂದು ವರ್ಷವಾಯ್ತು ಅಂತ ಹೇಳೋಕ್ಕೆ ಸಂತಸ ಆಗ್ತಾ ಇದೆ.
        ಜನವರಿ 10,  2020 ರ ಶುಕ್ರವಾರ ಹುಣ್ಣಿಮೆ ದಿನ ಜನ್ಮತಾಳಿದ ಯುಗಾದಿ, ಹುಣ್ಣಿಮೆಯ ತರಹವೇ ಬೆಳದಿಂಗಳು ಚೆಲ್ಲಿದ್ದು ಸುಳ್ಳಲ್ಲ.  
        ಅತೀವ ಸಾಹಿತ್ಯಾಸಕ್ತಿ, ಬರಹಗಾರರನ್ನು ಬೆಂಬಲಿಸುವ ಮನಸ್ಸು,  ಸಾಹಿತ್ಯ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕೆಂಬ  ನಿಟ್ಟಿನಲ್ಲಿ ಅದಮ್ಯ ಉತ್ಸಾಹ, ನಿರೀಕ್ಷೆಯಿಂದ ಈ ಬಳಗವನ್ನು ಸ್ಥಾಪಿಸಲಾಗಿದೆ.
          ಬಳಗದ ಸಂಸ್ಥಾಪಕರೂ, ಯುವ ಸಾಹಿತಿಗಳೂ, ಅದಕ್ಕಿಂತ ಹೆಚ್ಚಾಗಿ ಒಂದೊಳ್ಳೆ ಸುಂದರ ಮನಸ್ಸಿರುವ ಉತ್ಸಾಹಿ ತರುಣ ನಮ್ಮ ನಿಮ್ಮೆಲ್ಲರ ಮೆಚ್ಚಿನ ಶ್ರೀಮಾನ್ #ಶ್ರೀನಾಗ್ ರವರ ಕನಸಿನ ಕೂಸಾದ ಈ ಯುಗಾದಿ ಎಲ್ಲೆಡೆ ಜನಮನ್ನಣೆ ಗಳಿಸಲು ಅವರ ಅವಿರತ ಶ್ರಮವೇ ಕಾರಣ. ಎಲ್ಲರನ್ನೂ ಹುರಿದುಂಬಿಸುವ ಅವರ ರೀತಿ, ಅನ್ಯಾಯ ಕಂಡಾಗ ಅವರ ಮಾತಿನ ಚಾಟಿ... ಬಳಗವನ್ನು ಸಮರ್ಥವಾಗಿ ಮುನ್ನಡೆಸಲು ಕಾರಣವಾಯ್ತು. ಜೊತೆಗೆ, ಬಳಗ ಸ್ಥಾಪನೆಗೊಂಡ ದಿನದಿಂದಲೂ, ಯುಗಾದಿ ಮನೆಗೆ ಹಿರಿಯಕ್ಕನಂತೆ  ತನುಮನವನ್ನು ಧಾರೆಯೆರೆದು, ಅತೀವ ವಾತ್ಸಲ್ಯದಿಂದ ಎಲ್ಲ ನಿರ್ವಾಹಕರನ್ನೂ, ಬಳಗದ ಸದಸ್ಯರನ್ನೂ ತನ್ನ ಒಡಹುಟ್ಟಿದವರಂತೆ ಕಾಣುತ್ತಾ ಬಳಗ ಮುನ್ನಡೆಯಲು ಕಾರಣರಾಗಿದ್ದು ನಮ್ಮೆಲ್ಲರ ಅಚ್ಚುಮೆಚ್ಚಿನ ವೀಣಕ್ಕ (#ವೀಣಾ_ಉಮೇಶ್) ಇವರು ಯುಗಾದಿಯನ್ನು ತನ್ನ ಮನೆಗಿಂತಲೂ ಹೆಚ್ಚು ಪ್ರೀತಿಸುತ್ತಿರುವುದು ಸುಳ್ಳಲ್ಲ. ಇವರ ದೆಸೆಯಿಂದಲೇ ಬಳಗದಲ್ಲಿ ಸೌಹಾರ್ದ ವಾತಾವರಣ ಇರುವುದು, ತಮ್ಮ ಹದಗೆಟ್ಟ ಅನಾರೋಗ್ಯದಲ್ಲೂ ಅದೆಷ್ಟು ಜವಾಬ್ದಾರಿ ಹೊತ್ತು ಕೆಲಸ ಮಾಡ್ತಿದ್ದಾರೆ ಎಂದರೆ.... ಹೇಳಲು ಪದಗಳಿಲ್ಲ ..ಇವರು ಯುಗಾದಿಯ ಆಧಾರಸ್ಥಂಭ ಎಂದರೆ ತಪ್ಪಾಗಲಾರದು.

     ಈ ಬಳಗ ಸಮರ್ಥವಾಗಿ ಮುನ್ನಡೆಯಲು ಸಮರ್ಥವಾಗಿ ತೊಡಗಿಸಿಕೊಂಡವರಲ್ಲಿ ನಿರ್ವಾಹಕಿ ಶ್ರೀಮತಿ #ಪೂರ್ಣಿಮಾ_ಉಡುಪ ರ ಪಾತ್ರ ಶ್ಲಾಘನೀಯವಾದದ್ದು. #ಯುಗಾದಿ_ಮಾಣಿಕ್ಯ, ಸದಸ್ಯರ ಹಾಗೂ ನಿರ್ವಾಹಕರ ಆಯ್ದ ಕವನಗಳನ್ನು ಸುಶ್ರಾವ್ಯವಾಗಿ ಹಾಡಿಸಿ ವಿಡಿಯೋ ಮಾಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

      ಸದಾ ಲವಲವಿಕೆಯ ನವತರುಣಿ #ಚಂಪಕಾ_ರಾಘವೇಂದ್ರ ರವರೂ ಸಹ ನಿರ್ವಾಹಕಿಯಾಗಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವೀಯಾಗಿದ್ದಾರೆ.
  ಇತರ ನಿರ್ವಾಹಕರಾಗಿದ್ದ, #ಕೃಪಾ_ಗೋಖಲೆ  ತಮ್ಮ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸಿದರಾದರೂ,  ತಮ್ಮ ಕೆಲಸಗಳ ಒತ್ತಡದಿಂದ ನಿರ್ವಾಹಕರಾಗಿ ಮುಂದುವರಿಯಲು ಸಾಧ್ಯವಾಗಲಿಲ್ಲ ಎಂಬುದು ವಿಷಾದನೀಯ..!

           ಪ್ರಸ್ತುತ ...#ಸುಜಾತ_ಭಟ್ ರವರ ಕಾರ್ಯವೈಖರಿ ತುಂಬಾ ಮೆಚ್ಚುವಂಥದ್ದು. ಎಲ್ಲರ ಅನುಪಸ್ಥಿತಿಯಲ್ಲೂ ಎಲ್ಲರ ಜವಾಬ್ದಾರಿಯನ್ನು ತನ್ನ ಹೆಗಲಮೇಲೇ  ಹೊತ್ತು ತುಂಬಾ ಅಚ್ಚುಕಟ್ಟಾಗಿ ನಿಭಾಯಿಸುವ ಪರಿ ಅತ್ಯಂತ ಶ್ಲಾಘನೀಯ. 
 
    ಫೋಟೋಗ್ರಫಿ ವಿಭಾಗದಲ್ಲಿ ಶ್ರೀಮಾನ್#ತೀರ್ಥರಾಜ್_ಮೇಸ್ತ ರವರೂ ಸಹ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ.

   ಸಮಯಕ್ಕೆ ತಕ್ಕಹಾಗೆ ಸಲಹೆಗಳನ್ನಿತ್ತು, ಯುಗಾದಿಯನ್ನು ಮುನ್ನಡೆಸುವಲ್ಲಿ ಕೈಜೋಡಿಸಿದವರು ಶ್ರೀಮತಿ#ವಿನುತಾ_ಥಾಮಸ್.
        ಎಲ್ಲ ನಿರ್ವಾಹಕರೂ, ತಮ್ಮ ತಮ್ಮ ವೈಯಕ್ತಿಕ ಒತ್ತಡಗಳನ್ನೂ ಬದಿಗೊತ್ತಿ ಯುಗಾದಿಯಲ್ಲಿ ತೊಡಗಿಸಿಕೊಂಡು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಎಂಬುದೇ ಸಂತಸ.

         ಯುಗಾದಿಯು ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ, #ಭಕ್ತಿಗೀತೆ_ಸ್ಪರ್ಧೆ #ಚಿತ್ರಕಾವ್ಯ,.#ಚುಟುಕು, #ಛಾಯಾಚಿತ್ರಸ್ಪರ್ಧೆ, #ಯುಗಾದಿ_ಮಾಣಿಕ್ಯ, #ನಾನಾ_ನೀನಾ, #IPL ಮಾದರಿಯ ಸ್ಪರ್ಧೆ #ಕಥಾಸ್ಪರ್ಧೆ... ಈ ತರಹ ಹಲವಾರು ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಯುಗಾದಿ ರೂವಾರಿ #ಶ್ರೀನಾಗ್ ರವರ ಪಾತ್ರವೇ ಹಿರಿದು. 

          ಇಷ್ಟೆಲ್ಲಾ ಸ್ಪರ್ಧೆಗಳು ಸಂಪನ್ನವಾಗಿದ್ದು.... ... ಯುಗಾದಿಯ ಅತ್ಯಂತ ಪ್ರಮುಖ ಭಾಗವಾದ ಸದಸ್ಯರಾದ ನಿಮ್ಮಿಂದಲೇ ಸ್ನೇಹಿತರೇ...!
       ಒಂದು ಬಳಗವನ್ನು ಕಟ್ಟಿ ಬೆಳೆಸುವಲ್ಲಿ ಸಂಸ್ಥಾಪಕರು, ನಿರ್ವಾಹಕರ ಪಾತ್ರಕ್ಕಿಂತಲೂ ಪ್ರಮುಖವಾದದ್ದು... ಸಂಪೂರ್ಣವಾಗಿ ತೊಡಗಿಸಿಕೊಂಡ  ನೀವುಗಳೆ ಸ್ನೇಹಿತರೇ....  ಯುಗಾದಿಯ ಆಸ್ತಿ ಅಂದ್ರೆ ನೀವುಗಳೇ...!  ಅನೇಕ ಹಿರಿಯ, ಕಿರಿಯ ಕವಿ_ಕವಯಿತ್ರಿಯರೆಂಬ ಸುವಾಸಿತ, ಸುಂದರ ಹೂಗಳ ಅಂದದ ತೋಟ ಈ ಯುಗಾದಿ. 
           ಯುಗಾದಿಯಲ್ಲರಳಿದ  ಸುಂದರ ಹೂಗಳ ಘಮ ಹಲವರ ಮನಸೆಳೆದಿದ್ದಂತೂ ನಿಜ,  ಗುಣಮಟ್ಟದ  ಸಾಹಿತ್ಯಕ್ಕೆ ಅತೀ ಹೆಚ್ಚಿನ ಮನ್ನಣೆ ದೊರಕಿಸಿಕೊಡುವಲ್ಲಿ ಯುಗಾದಿ ಮುಂಚೂಣಿಯಲ್ಲಿದೆ ಎಂದು ಹೇಳಲು ಸಂತಸವಾಗುತ್ತಿದೆ.  ಯುವ ಬರಹಗಾರರನ್ನು ಪ್ರೋತ್ಸಾಹಿಸಿ, ಗುರುತಿಸಿ, ಅವರನ್ನೂ ಮುಂಚೂಣಿಗೆ ತರುವ ಯತ್ನ ಯುಗಾದಿ ಮಾಡುತ್ತಿದೆ ಎಂಬ ಹೆಮ್ಮೆ ನಮಗಿದೆ.  ಇಲ್ಲಿ ಬೆಳಕಿಗೆ ಬಂದ ಬರಹಗಾರರು, ಎಲ್ಲಾ ಸಾಹಿತ್ಯ ಗುಂಪುಗಳಲ್ಲೂ  ಮನ್ನಣೆ ಪಡೆಯುತ್ತಿದ್ದಾರೆ ಎಂಬುದು ಮತ್ತೂ ಸಂತಸದ ವಿಚಾರ.

       ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು, ಸಾಹಿತ್ಯವನ್ನೇ ಉಸಿರಾಗಿಸಿಕೊಂಡವರನ್ನು ಗುರುತಿಸಿ ಯುಗಾದಿಯು #ಯುಗಾದಿ_ಮಾಣಿಕ್ಯ ಬಿರುದನ್ನು ಕೊಟ್ಟು ಗೌರವಿಸಿದೆ. 

       ಸ್ಪರ್ಧೆಗಳಲ್ಲಿ ವಿಜೇತರಾಗಿ, ತಮ್ಮ ಬರಹದ ಮೂಲಕ ಜನಮನ್ನಣೆ ಪಡೆದವರನ್ನು #ಕವನಶ್ರೀ ಬಿರುದನ್ನು ಕೊಟ್ಟು ಗೌರವಿಸಿದೆ.  ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅತ್ಯಾಕರ್ಷಕ  ಪ್ರಶಸ್ತಿ ಪತ್ರವನ್ನು ಕೊಟ್ಟು ಪುರಸ್ಕರಿಸಿದೆ.

          ಯುಗಾದಿ  ಒಂದು ವರ್ಷದ ಅಂಬೆಗಾಲಿಡುತ್ತಿರುವ ಮಗುವಾದರೂ  ಎಲ್ಲಾ ಬಳಗಗಳ ಮದ್ಯೆ ಮಿಂಚುತ್ತಿರುವುದು  ಯುಗಾದಿಯ ರೂವಾರಿ, ನಿರ್ವಾಹಕರ ಜೊತೆ ಜೊತೆಗೆ ಅದಮ್ಯ ಉತ್ಸಾಹದಿಂದ ಭಾಗವಹಿಸಿ ಮುನ್ನಡೆಸುತ್ತಿರುವ ನಿಮ್ಮಂತಹ ಉತ್ಸಾಹಿ ಸದಸ್ಯರುಗಳೇ ಕಾರಣ.

      ಅಂಬೆಗಾಲ ನಡಿಗೆಯಿಂದ ದಾಪುಗಾಲು ನಡಿಗೆಗೆ ಸಾಗಿಸಲು ನಿಮ್ಮಗಳ ಸಹಕಾರ ಅತ್ಯಂತ ಮುಖ್ಯ... ನಮ್ಮ ಪ್ರತಿನಡೆಗೂ ನಿಮ್ಮ ಸಾಥ್ ಇರುತ್ತೆ ಅಲ್ವಾ ಸ್ನೇಹಿತರೇ...

    ನಮ್ಮ ಕನಸಿನ ಯುಗಾದಿ... ಬಾಳಲಿ... ಬೆಳಗಲಿ🙏🙏


             ನಿಮ್ಮ
                       ಶೈಲೂ....
[18/2/2021, 3:16 pm] Dr. B. N. Shylaja Ramesh: ಆಕೆ ಮೂರನೆಯ ಬಾರಿಗೆ ವೈದ್ಯರ ಬಳಿ ಹೋದಳು.ವೈದ್ಯರು ಆಕೆಯ ಆರೋಗ್ಯದ ವರದಿಯ ಫೈಲ್ ನೋಡಿ.......   ಆಕೆಯ ಮುಖವನ್ನೊಮ್ಮೆ ನೋಡಿ....... ಮತ್ತೆ..?  ಇದೇನಿದು?  ಇನ್ನು ಬೇಡ ಅಂತ ಹೇಳಿದ್ದೇನಲ್ಲ... ಯಾಕೆ ನಿಮಗೆ ಆರೋಗ್ಯದ ಕಾಳಜಿ ಇಲ್ವಾ? ಮಕ್ಕಳಿಗಾಗಿಯಾದರೂ ಬದುಕಬೇಕು ಅನ್ನುವ ಆಸೆ ಇಲ್ವಾ? ಎಂದರು...
         ಆಕೆ ಕಣ್ಣ ತುಂಬಾ ನೀರು ತುಂಬಿಕೊಂಡು...  ಇನ್ನೇನು.ಮಾಡ್ಲಿ ಡಾಕ್ಟ್ರೇ... ಜೀವನ ಬೇಕು ಅಂದ್ರೆ,  ನನ್ನ ತಂದೆ ತಾಯಿ ನೆಮ್ಮದಿಯಾಗಿರ್ಬೇಕು ಅಂದ್ರೆ ನಾ ಒಂದು ಗಂಡು ಮಗುವನ್ನು ಹಡೆಯಲೇ ಬೇಕು... ಇಲ್ಲಾಂದ್ರೆ  ಮೂರು ಹೆಣ್ಣುಮಕ್ಕಳೊಂದಿಗೆ ನಾನು ತವರುಮನೆ ಸೇರಬೇಕಾಗುತ್ತೆ...   ನನ್ನ ಹಿಂದಿನ ಇನ್ನೂ ಇಬ್ಬರು ತಂಗಿಯರ ಮದುವೆ,  ಅವರ ಭವಿಷ್ಯಕ್ಕಾಗಿಯಾದ್ರೂ ನಾನು ಇಲ್ಲೇ ಇರಬೇಕು.... ಇಲ್ಲೇ ಇರಬೇಕು ಅಂದ್ರೆ... ನಾ ಹೆರಲೇ ಬೇಕು ಅಂದಳು.
          ರೇಣುಕಾ...ಮಂಜು ದಂಪತಿಗಳಿಗೆ  ಮೂರು ಹೆಣ್ಣುಮಕ್ಕಳು   ಹುಟ್ಟಿದಾಗ  ಅಧೀರಳಾದವಳು ರೇಣುಕಾ... ಪ್ರತಿ ಬಾರಿ ಹೆರಿಗೆಯನಂತರವೂ  ಅತೀವ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಳು... ಕಾರಣ ತನ್ನ ಅತ್ತೆ ಮಾವ ಹಾಗೂ ಗಂಡನ ದೆಸೆಯಿಂದ,  ವಂಶೋದ್ಧಾರಕ ಮಗ ಬೇಕೇ ಬೇಕೆಂಬ ಹಠದಿಂದ ರೇಣುಕಾ ಮೂರು ಹೆಣ್ಣು ಮಕ್ಕಳನ್ನ ಹಡೆಯಬೇಕಾಯ್ತು... ಮೊದಲ ಮಗು ಹೆಣ್ಣಾದಾಗ,  ಅಸಮಾಧಾನ ವಿದ್ದರೂ ಎರಡನೆಯದು ಗಂಡಾಗಬಹುದು ಎಂಬ ನಿರೀಕ್ಷೆಯಲ್ಲಿ ಅಷ್ಟಾಗಿ ಕಿರುಕಳ ಇರಲಿಲ್ಲ... ಆದರೆ ಮಗುವನ್ನು ಅನಾದರ ಮಾಡುತ್ತಿದ್ದ ಮನೆಯವರ ಬಗ್ಗೆ ಬೇಸರವಿವಿಧದ್ದರೂ ತೋರಿಸಿಕೊಳ್ಳುತ್ತಿರಲಿಲ್ಲ.....  ತನ್ನ ತಂದೆ ತಾಯಿಗೂ ಹೆಣ್ಣು ಸಂತಾನವೇ ... ಮೂರು ಹೆಣ್ಣುಗಳಲ್ಲಿ ಮೊದಲನೆಯ ಮಗಳಾದ ರೇಣುಕಾ ... ಬುದ್ಧಿವಂತೆ, ಬಡತನವಿದ್ದರೂ,  ಉತ್ತಮ ವಿದ್ಯೆ ಕೊಡಿಸಿದ್ದ ಅನಂತರಾಯರ ಮುದ್ದು ಮಗಳಾಗಿ,  ಸಂಸಾರದ ಭಾರವನ್ನು ಹೊತ್ತು ತಂದೆಗೆ ಆಸರೆಯಾಗಿ ನಿಂತಿದ್ದಳು,   ಇವಳ ಹಿಂದೆ ಇಬ್ಬರು ಹೆಣ್ಣು ಮಕ್ಕಳಿದ್ದ ಕಾರಣ  ಆದಷ್ಟು ಬೇಗ ತಮ್ಮ ಜಾವಾಬ್ದಾರಿಯನ್ನ  ಕಳೆದು ಕೊಳ್ಳಬೇಕೆಂದು ರೇಣುಕಾಗೆ ಬೇಗನೆ ಮದುವೆ ಮಾಡಿ ಗಂಡನ.ಮನೆಗೆ ಕಳುಹಿಸಿದ್ದರು.  ಅತೀ ಆಸೆ ಬುರುಕರಾದ  ರೇಣುಕಾ ಗಂಡನ ಮನೆಯವರ .ಆಸೆ ತಣಿಸಲು ತನ್ನ ಉಳಿದೆರಡು ಹೆಣ್ಣುಮಕ್ಕಳ .ಮದುವೆಗಾಗಿ ಇಟ್ಟಿದ್ದ ಹಣವನ್ನೆಲ್ಲಾ ವರದಕ್ಷಿಣೆ ಯಾಗಿ ಕೊಟ್ಟರೂ ಮತ್ತೂ ಹಣಕ್ಕಾಗಿ ಪೀಡಿಸುತ್ತಿದ್ದ  ಬೀಗರನ್ನು ತಣಿಸಲಾರದೆ ಕಂಗೆಟ್ಟಿದ್ದರು ಅನಂತರಾಯರು,  ಸಾಲದ್ದಕ್ಕೆ ರೇಣುಕಾ ಮೂರೂ ಹೆಣ್ಣುಮಕ್ಕಳನ್ನು ಹಡೆದ ಮೇಲಂತೂ ರೇಣುಕಾಗೆ ಚಿತ್ರಹಿಂಸೆ ಶುರುವಾಗಿದ್ದಿತು.  ಗಂಡುಮಗುವನ್ನು ಹೆತ್ತುಕೊಟ್ಟರೆ ನಿನಗೆ ಅತ್ತೆ ಮನೆಯಲ್ಲಿ ಸ್ಥಾನ  ಇಲ್ಲದಿದ್ದರೆ .. ತವರು ಮನೆಗೆ ಮತ್ತೆ ವಾಪಾಸಾಗಬೇಕಾದೀತು... ಮತ್ತೆ ಮಗನಿಗೆ ಬೇರೆ ಮದುವೆ ಮಾಡ್ತೀವಿ ಅಂತ.ದಿನಾ ಚುಚ್ಚುಮಾತಿನಲ್ಲೇ ಚುಚ್ಚುತ್ತಿದ್ದ ಅತ್ತೆಯ ಮಾತಿಗೆ ರೋಸಿ ಹೋಗಿದ್ದಳು ರೇಣುಕಾ.... ಮತ್ತೆ ಗರ್ಭಿಣಿಯಾದಾಗ .ಅವಳತ್ತ ನೋಡಿ... ಈಗಲಾದ್ರೂ ಗಂಡು ಹಡೆಯಬೇಕು ಹೆಣ್ಣನ್ನ ಹಡೆದೆಯೋ...  ನಿನಗಿದೆ ಮಾರಿಹಬ್ಬ ... ನೀನು ನಿನ್ನ ಮಕ್ಕಳ ಸಮೇತ.ನಿನ್ನ ತವರಲ್ಲೇ ಇರಬೇಕಾಗುತ್ತೆ ಅಂತ.ಪದೇ ಪದೇ ಹೇಳುತ್ತಿದ್ದರು. 

            ಮೂರು ಹೆಣ್ಣು ಮಕ್ಕಳಾದ ಮೇಲೆ ಮತ್ತೆ ಗರ್ಭಿಣಿಯಾದಾಗ , ಗಂಡ ಮಂಜು  ಲಿಂಗ ತಪಾಸಣೆ ಮಾಡಿಸಿದ್ದ,  ಕಾನೂನಿನಲ್ಲಿ ಲಿಂಗ ತಪಾಸಣೆ ಅಕ್ಷಮ್ಯ ಅಪರಾಧವಾಗಿದ್ದರೂ , ರೇಣುಕಾಳ ರೋಧನ ನೋಡಿದ ಡಾಕ್ಟರ್ ಅಂಜಲಿ  ಮತ್ತೆ ಗರ್ಭದಲ್ಲಿರುವ.ಮಗು ಹೆಣ್ಣೆಂದು ಹೇಳಲೇ ಬೇಕಾಯ್ತು... ಕುಸಿದುಹೋದ ರೇಣುಕಾ ಅಬಾರ್ಷನ್ ಗಾಗಿ ಪೀಡಿಸಿದ್ದಳು  ಡಾ : ಅಂಜಲಿಯನ್ನು.  ಅವಳ ಗಂಡನ ಮನೆಯ ಅನಾದರ, ರೇಣುಕಾಳಿಗೆ ಆಗುತ್ತಿದ್ದ ಹಿಂಸೆ ಎಲ್ಲವನ್ನೂ ಹತ್ತಿರದಿಂದ  ಸುಮಾರು ವರ್ಷಗಳಿಂದ ನೋಡುತ್ತಿದ್ದ  ಡಾ. ಅಂಜಲಿ ಅಬಾರ್ಷನ್ ಮಾಡಿದ್ದರು. 

         ಮತ್ತೆ ಗರ್ಭಿಣಿಯಾಗಿ ತಪಾಸಣೆಗೆ ಬಂದಾಗ ತುಂಬಾ ಕ್ಷೀಣಿಸಿದ್ದ  ರೇಣುಕಾಳನ್ನ, ಚೆಕ್ ಮಾಡಿದ ಡಾ. ಅಂಜಲಿ ಅವಳ ಗಂಡನಿಗೆ ಛೀಮಾರಿ ಹಾಕಿದ್ದರು.  ಅದಕ್ಕೆ ಬಗ್ಗದ ಆಸಾಮಿ.... ಗಂಡು ಮಗುವನ್ನು ಹಡೆದರಷ್ಟೇ ... ಇವಳಿಗೆ ಮನೆಯಲ್ಲಿ, ಮನದಲ್ಲಿ ಸ್ಥಾನ...  ಇನ್ನೊಮ್ಮೆ ಪರೀಕ್ಷಿಸಿಬಿಡಿ.... ಹೊಟ್ಟೆಯಲ್ಲಿರುವ ಮಗು ಹೆಣ್ಣೋ... ಗಂಡೋ ಎಂದು....ಹೀಗೆ ಧಿಮಾಕಿನಲ್ಲಿಯೇ ನುಡಿದಿದ್ದ....  ಲಿಂಗ ತಪಾಸಣೆ ಕಾನೂನು ಬಾಹಿರ, ಅಲ್ಲದೆ ಅಬಾರ್ಷನ್ ಮಾಡುವ ಹಾಗಿಲ್ಲ... ಹಾಗೇನಾದ್ರೂ ಆದರೆ ನಾನು ಜೈಲಿಗೆ ಹೋಗಬೇಕಾಗುತ್ತೆ ಎಂದು ವಾಪಸ್ ಕಳುಹಿಸಿದ್ದರು ಡಾಕ್ಟರ್.

          ಏನಾದರಾಗಲಿ,  ಈ ಬಾರಿ ಹಡೆಯಬೇಕು.... ಹೆಣ್ಣಾದರೂ ಸರಿ , ಗಂಡಾದರೂ.ಸರಿ,  ನನ್ನದೇ ಕರುಳ ಕುಡಿಯನ್ನು ಚಿವುಟಿಹಾಕುವುದು ಎಷ್ಟರಮಟ್ಟಿಗೆ ಸರಿ... ಎಂದು ಸಮಾಧಾನ ಮಾಡಿಕೊಂಡರೂ.... ಮತ್ತೆ ಹೆಣ್ಣಾದರೆ ಏನು ಮಾಡುವುದು... ಮೂರರ ಜೊತೆಗೆ ಮತ್ತೊಂದು..!   ಅಲ್ಲದೆ ನನಗೆ ಈ ಮನೆಯಲ್ಲಿ ಬಾಳು0ಟೆ..?  ನಾಲ್ಕು ಮಕ್ಕಳನ್ನ ಕಟ್ಟಿಕೊಂಡು ನಾನು ಏನು ಮಾಡಲಿ?   ಅವುಗಳ ವಿದ್ಯಾಭ್ಯಾಸ, ಮದುವೆ..!!   ನನ್ನೊಬ್ಬಳ ಕೈಯ್ಯಲ್ಲಿ ಸಾಧ್ಯವೇ?..... ಇನ್ನೊಮ್ಮೆ ಡಾಕ್ಟರ್ ರ ಕೈಕಾಲು ಹಿಡಿದಾದರೂ ಸರಿ... ಮಗು ಯಾವುದೆಂದು ತಿಳಿಬೇಕು,  ಒಂದು ವೇಳೆ ಹೆಣ್ಣಾದರೆ ....... ಮತ್ತೆ,ನನ್ನ ಕರುಳನ್ನ ಕತ್ತರಿಸಬೇಕು.... ಏನು ಮಾಡಲಿ... ಎಂದು ಹೊಯ್ದಾಟಕ್ಕೆ ಬಿದ್ದ ಮನಸ್ಸಿನಲ್ಲಿ ದೃಢ ನಿಶ್ಚಯ ಮಾಡ್ಕೊಂಡು... ಮತ್ತೆ ಅಂಜಲಿ ಡಾಕ್ಟರ್ ನ ಕಾಲು ಹಿಡಿದು ಗೋಗರೆಯುತ್ತಾಳೆ...   ಇವಳ ಕಣ್ಣೀರಿಗೆ ಕರಗಿದ ಡಾಕ್ಟರ್ ಟೆಸ್ಟ್ ಮಾಡಿದಾಗ ಮತ್ತೆ.... ಹೆಣ್ಣು ಭ್ರೂಣ ವಿದೆಯೆಂದು  ತಿಳಿಯುತ್ತೆ....  ಭೂಮಿಗೇ ಇಳಿದು ಹೋಗುತ್ತಾಳೆ  ರೇಣುಕಾ.... ಕಣ್ಣು ಕತ್ತಲೆ ಬ0ದಂತಾಗಿ ಅಲ್ಲಿಯೇ ಕುಸಿಯುತ್ತಾಳೆ...  ಮೂರು ತಿಂಗಳ ಗರ್ಭಿಣಿ, ಸರಿಯಾದ ಆರೈಕೆಯಿಲ್ಲದೆ, ಅತೀ ಒತ್ತಡದಿಂದ ದೈಹಿಕವಾಗಿಯೂ ಮಾನಸಿಕವಾಗಿಯೂ ಜರ್ಜರಿತಳಾದ  ರೇಣುಕಾಳನ್ನ  ನೋಡಿದ ಡಾಕ್ಟರ್ ಗೇ ಅತೀವ ನೋವಾಗುತ್ತದೆ.  ರೇಣುಕಾಳ ಪರಿಸ್ಥಿತಿಯ ಅರಿವಿದ್ದ ಡಾಕ್ಟರ್ ಅಂಜಲಿ, ಅವಳನ್ನು ಸಮಾಧಾನಿಸಿ, ರಕ್ತಹೀನತೆಯಿಂದ ಬಳಲುತ್ತಿದ್ದ  ಅವಳನ್ನು ಅಡ್ಮಿಟ್ ಮಾಡಿಕೊಂಡು  ರೇಣುಕಾಳ ಗಂಡನಿಗೆ ಫೋನ್ಮಾಡಿ ತಿಳಿಸುತ್ತಾರೆ.  ಡಾಕ್ಟರ್  ಅವಳ ಹೊಟ್ಟೆಯಲ್ಲಿರುವ ಮಗು ಯಾವ್ದು, ಹೆಣ್ಣೋ ಗಂಡೋ... ಒಂದುವೇಳೆ ಗಂಡಾಗಿದ್ದರೆ ಅವಳ ಜವಾಬ್ದಾರಿ ನಂದು,.ಹೆಣ್ಣಾಗಿದ್ದರೆ..  ಅವಳ್ಯಾರೋ ನನಗೆ ಗೊತ್ತಿಲ್ಲ ... ಅಂದ ಅವನ ಅಮಾನುಷ ನಡೆಗೆ ಬೇಸತ್ತ ಡಾಕ್ಟರ್ಗೆ ಏನು ಮಾಡಲೂ ತಿಳಿಯದಾಯ್ತು... ಇವರ ಸಂಭಾಷಣೆ ಕೇಳಿಸಿಕೊಂಡ  ರೇಣುಕಾ ಅಧೀರಲಾಗುತ್ತಾಳೆ.  ಡಾಕ್ಟರ್, ಮತ್ತೆ ಹೆಣ್ಣು ಮಗು ಅಂದ್ರೆ, ನನಗೆ ಬದುಕೇ ಇಲ್ಲ... ದಯವಿಟ್ಟು ಅಬಾರ್ಷನ್ ಮಾಡಿಬಿಡಿ, ಎಂದು ಗೋಗರೆಯುತ್ತಾಳೆ. ದೇಹದಲ್ಲಿ ತ್ರಾಣವೇ ಇಲ್ಲದ ಅವಳಿಗೆ ಅಬಾರ್ಷನ್ ಮಾಡುವುದಾದರೂ ಹೇಗೆ.? ಅಲ್ಲದೆ ಒಬ್ಬ ತಾಯಿಯಾಗಿ, ಇನ್ನೂ ಪ್ರಪಂಚವನ್ನೇ ಕಾಣದ ಮಗುವನ್ನು ಕೊಲ್ಲುವುದಾದರೂ ಹೇಗೆ..? ಉಳಿಸುವುದಷ್ಟೇ ನನ್ನ ಧರ್ಮ.. ಕೊಲ್ಲುವುದಲ್ಲ... ಏನಾದರಾಗಲಿ ಈ ಮಗುವನ್ನು ಉಳಿಸಿಕೊಳ್ಳಲೇ ಬೇಕು.  ಒಂದು ವೇಳೆ ಅವರಿಗೆ ಬೇಡದಿದ್ದರೆ ನಾನೇ ಮಗುವನ್ನು  ದತ್ತು ತೆಗೆದುಕೊಂಡರಾಯ್ತು  ಅನ್ನುವ ನಿರ್ಧಾರಕ್ಕೆ ಬಂದ ಡಾಕ್ಟರ್ ಅಂಜಲಿ, ರೇಣುಕಾಳಿಗೆ ಪರಿಸ್ಥಿತಿಯನ್ನು ಅರ್ಥ ಮಾಡಿಸಿ,  ಅವಳ ಗಂಡ ಮಂಜುವಿಗೆ ಫೋನ್ ಮಾಡಿ ಗರ್ಭದಲ್ಲಿ ಗಂಡು ಮಗುವಿದೆ, ಅದು ಆರೋಗ್ಯವಾಗಿ ಬೇಕೆಂದರೆ ರೇಣುಕಾಳಿಗೆ ಆರೈಕೆ ಬೇಕು,  ನಿಶ್ಶಕ್ತಿಯಿಂದ ಬಳಲುತ್ತಿರುವ ಅವಳಿಗೆ ದೈಹಿಕವಾಗಿ, ಮಾನಸಿಕವಾಗಿ ಆರೈಕೆಬೇಕು ಎಂದು ಹೇಳಿದಾಕ್ಷಣ.... " ಗಂಡು ಮಗು" ಎಂಬುದನ್ನು ಕೇಳಿಯೇ ಆಕಾಶಕ್ಕೇರಿದ ಮಂಜು, ಖಂಡಿತ ಡಾಕ್ಟರ್..  ಅವರು ಆರೋಗ್ಯವಾಗಿರಬೇಕು... ಈಗಲೇ ಬಂದೆ ಎಂದು ಆಸ್ಪತ್ರೆಗೆ ಓಡೋಡಿ ಬರುತ್ತಾನೆ.
[19/4/2021, 3:56 am] Dr. B. N. Shylaja Ramesh: ನೆನಪಿನ ಬೀದಿಯಲ್ಲಿ ಹೊರಟೆ ಸವಾರಿ
ಬಾಲ್ಯದ ಸವಿ ನೆನಪ ಮೂಟೆಯನು ಹೊತ್ತು
ನೆನಪಿನ ಸಂಚಿಯಲ್ಲುಂಟು ತರಾವರಿ
ಕಡಲಾಳದಿ ದೊರೆವಂತ ಅನರ್ಘ್ಯ ಮುತ್ತು
[28/4/2021, 2:36 am] Dr. B. N. Shylaja Ramesh: ಎಲ್ಲ ತಡೆಗಳ ದಾಟಿ ಆಈಲಿತೆನ್ನಯ ಪ್ರೀತಿ
ಎಣಿಕೆಯಿಲ್ಲದ ಅವ್ಯಾಜ ಪ್ರೇಮಸಿಂದ
[3/5/2021, 1:07 pm] Dr. B. N. Shylaja Ramesh: ಮರಣ ಭಯ
ತೊರೆದಾಗಲಷ್ಟೇ
ಜೀವನ ಸಂಪ್ರೀತಿಯ
ಉಗಮ..!!

ಸೋಲಿನ ಹತಾಶೆ
ಮರೆತರಷ್ಟೇ
ಗೆಲುವಿನ ಸಂಭ್ರಮದ
ಅನಾವರಣ..!

ಕಳೆಯುವ ನೋವ  
ತೊರೆದರಷ್ಟೇ
ಗಳಿಸುವ ಸುಖದ
ಸಂಭ್ರಮ..!

ಮುಳುಗುವ ಭಯ 
ಬಿಟ್ಟರಷ್ಟೇ
ಬದುಕುವ ಆನಂದದ
ಸಂಗಮ..!!

ಬರುವ ಸಂಕಟಗಳ
ದೂರೀಕರಿಸಿದರಷ್ಟೇ
ಇರುವ ಸುಖದ
ಸಮತೋಲನ..!

ಎಲ್ಲ ಮರೆತು ಬದುಕ
ಪ್ರೀತಿಸಿದರಷ್ಟೇ..
ಜೀವಿಸಲು ಸಂಭ್ರಮದ
ವಾತಾವರಣ. !!

ಚಂದದ ಆಶಯ ಸರ್
ಸೂಪರ್👌👍💐💐
[5/5/2021, 4:01 pm] Dr. B. N. Shylaja Ramesh: ಗತವೈಭವ
*********

ಅಂದು ಬಾಳಿ ಬದುಕಿದ್ದ
ಮನೆಯಿಂದು ಪಾಳು ಗುಡಿ
ಮೆರೆದ ಗತವೈಭವವಿಂದು
ಅಳಿದು ಪಳಯುಳಿಕೆಯಡಿ

ತಲೆ ತಲೆಮಾರುಗಳು ಬದುಕಿ
ಪೋಷಣೆಯಿಲ್ಲದೆ ಕುಸಿಯಿತಿಂದು
ಪರಂಪರಾನುಗತ ಅಂದದಮನೆ
ಕಾಲನವಶಕೆ ಸಿಲುಕಿತಿಂದು

ಅದೆಷ್ಟು ಮಂದಿಗೆ ನೆರಳಿತ್ತಿತ್ತೋ
ಹಸಿದು ಬಂದವರಿಗೆ ತುತ್ತನೀಡಿ
ನಿಷ್ಠೆಯ ಬೆವರ ಹನಿ ಬಸಿದವರಿಗೆ
ಅಸನವಸನವಿತ್ತಿತ್ತು ಪ್ರೀತಿ ಮಾಡಿ

ಅಸರೆಯ ತಂಪಿತ್ತು ಬಾಚಿ ತಬ್ಬಿದ್ದ
ಗುರುಹಿರಿಯರಿದ್ದ  ಅಂದದಂಕಣ
ಹಳೆ ಬೇರು ಹೊಸ ಚಿಗುರು
ಹಬ್ಬಿ ನಕ್ಕಿದ್ದ ಭಾವದನಾವರಣ

ಇತ್ತೊಂದು ಕಾಲದಲಿ ಭರಪೂರ
ಸುವರ್ಣಯುಗದ ಸಂಭ್ರಮದ ಕಾಲ
ತಾತ ಮುತ್ತಾತರಾಳಿ ಬದುಕಿದ್ದ
ಮೌಲ್ಯವೆತ್ತಿಹಿಡಿದಿದ್ದ ನ್ಯಾಯದೇಗುಲ

           ಶೈಲೂ...
[5/5/2021, 4:01 pm] Dr. B. N. Shylaja Ramesh: ಸಂತಸಕ್ಕೆ ಮತ್ತೊಂದು ಗರಿ😊

* ಕಲಾದೇಗುಲ ಭಾವನೆಗಳ ಸಂಗಮ * ಗುಂಪಿನಲ್ಲಿ ನಡೆದ  " ತೊಟ್ಟಿಲ ನೆನಪು  " ಕವನ ಸ್ಪರ್ಧೆಯಲ್ಲಿ 9 ನೇ ಸ್ಥಾನ ಪಡೆದ ಕವಿತೆ

ತೊಟ್ಟಿಲ ನೆನಪು
*************

ಸಪ್ತಪದಿ ತುಳಿದು
ಬಲಗಾಲಿಟ್ಟು ಬಂದಾಗ
ನನ್ನವರ ಮೊದಲ ಮಾತು
ವರ್ಷದೊಳಗೊಂದು ಕಟ್ಟು ತೊಟ್ಟಿಲು
ನಾಚಿ ನೀರಾಗಿ ನಾ
ತಲೆತಗ್ಗಿ ನಿಂತಾಗ
ಗಲ್ಲವಿಡಿದೆತ್ತಿ ಉಸಿರಿದರು
ಹತ್ತೋಣವೊಂದೊ0ದೇ ಮೆಟ್ಟಿಲು

ನವಜೀವ ಅಂಕುರಿಸಿ
ಕನಸು ನನಸಾದಾಗ
ಕೈಗೆ ನಿಲುಕುವಷ್ಟೇ ದೂರ
ಸ್ವರ್ಗಕ್ಕೊಂದೇ ಮೆಟ್ಟಿಲು
ತುಂಬು ಮುತುವರ್ಜಿ ಆರೈಕೆ
ನೋವಲ್ಲಿ ಸಂತೈಕೆ
ತಿಂಗಳೊಂದೊಂದುರುಳಿದಂತೆ
ನೋವು ಅವರಿಗೇ ಹೆಚ್ಚಲು

ಅದೆಷ್ಟು ತೆರನ ಹರಕೆ
ದೇವರಿಗೊಂದಿಸಿ ಬೇಡಿಕೆ
ಸುಸೂತ್ರವಾದರೆ ಸಾಕು
ನಿನಗರ್ಪಣೆ ಬೆಳ್ಳಿ ತೊಟ್ಟಿಲು
ನವಮಾಸ ಪೂರೈಸಿ
ದೇವನನುಗ್ರಹ ಫಲಿಸಿ
ಹಸುಕಂದ ನಸು ನಕ್ಕಾಗ
ತೂಗಿತ್ತು ಚಂದನದ ತೊಟ್ಟಿಲು

ಕಂಡ ಕಂದನ ಕನಸೆಲ್ಲಾ
ನನಸಾದ ಹೊತ್ತಿನಲಿ
ಹೆಮ್ಮೆಯಿಂದ ತುಂಬಿತ್ತು
ಮನದ ಪ್ರೀತಿ ಬಟ್ಟಲು
ಭರವಸೆಯ ಹಸುಗೂಸು
ತೊದಲ ನುಡಿ ನುಡಿದಾಗ
ಭಾವದಲೆಗಳು ಹೊರಹೊಮ್ಮಿ
ಸಂತಸದಿ ಜೀಕುತ್ತಿತ್ತು ತೊಟ್ಟಿಲು

               ಶೈಲೂ.......
[12/5/2021, 10:57 pm] Dr. B. N. Shylaja Ramesh: ಬದುಕು ಸವೆಸಿ ಇಹಲೋಕ ತ್ಯಜಿಸಿ
ಪರಲೋಕದತ್ತ ಹೊರಟ ಆತ್ಮಗಳೇ
ನಿಮಗಿದೋ ಅಶ್ರುಪೂರ್ಣ ವಿದಾಯ
ಸಕಲ ಮರ್ಯಾದೆಯೊಡನೆ ಬೀಳ್ಕೊಡಲು
ಅಸಹಾಯಕರಾದ ಬಂಧುಗಳೆಡೆಗೆ
ಇರಲಿ ನಿಮ್ಮ ಕರುಣಾಪೂರ್ಣ ದೃಷ್ಟಿ
[13/5/2021, 1:08 pm] Dr. B. N. Shylaja Ramesh: ಕರೆದೊಯ್ಯಿ ನಿನ್ನ ಲೋಕಕೆ
ನಾ ಸಿದ್ಧನಾಗಿರುವೆ
ನಿನ್ನೆಲ್ಲಾ ರೀತಿ ರಿವಾಜುಗಳಿಗೆ
ನಾ ಬದ್ಧನಾಗಿರುವೆ

ಸಾಕಾಗಿದೆ ಈ ಲೋಕ
ಎಲ್ಲೆಲ್ಲೂ ಅನ್ಯಾಯದ್ದೇ ತಾಂಡವ
ವ್ಯವಸ್ಥೆಯಲ್ಲೆಲ್ಲಾ ಲೋಪ
ಕಾವರಾರಿಲ್ಲವಿಲ್ಲಿ ಅಪತ್ಬಾಂಧವ

ಹಿಂಸೆ ಕ್ರೌರ್ಯವೇ ಹೆಚ್ಚು
ಮಾನವೀಯತೆಗಿಲ್ಲಿ ಬೆಲೆ ಗೌಣ
ಹಣ ಮಾಡುವುದೇ ಹುಚ್ಚು
ನ್ಯಾಯ ದೇವತೆಯಿಲ್ಲಿ ಮೌನ..!

ಜೀವಿಸುವುದು ಅತೀ ಕಷ್ಟ
ಜೊತೆಗಿಷ್ಟು ಕಾಡುವ ಮಹಾಮಾರಿ
ದುಡಿದು ಗಳಿಸಿದ್ದೆಲ್ಲವೂ ನಷ್ಟ 
ಆದರೂ ಚಿಕಿತ್ಸೆ ಆಗುತ್ತಿಲ್ಲ ಫಲಕಾರಿ

ಬಡತನಕ್ಕಲ್ಲವೀ ಲೋಕ
ಬದುಕಿದು ಸಿರಿವಂತರಾಟದ ಸ್ವತ್ತು
ಹೆಚ್ಚು ದುಡ್ಡಿದ್ದರಷ್ಟೇ ನಾಕ
ಜನಸಾಮಾನ್ಯ ಕೊರಗುವ ಸೋತು

ಸಾಕು ಸಾಕಾಗಿದೆ ದೇವ
ಇನ್ನಿಲ್ಲಿ ನಿಲ್ಲಲಾರೆ ನಾನು
ಅಪ್ಪಿ, ಕರೆದುಕೊ ಬೇಗ
ಹೆತ್ತವ್ವೆಯಂತೆ ನೀನು..!
[8/6/2021, 10:21 am] Dr. B. N. Shylaja Ramesh: ಈ..... ಬಂಧ....

ಬಾಳದೋಣಿಯ ಪಯಣಿಗರು ನಾವು
ಸಂಸಾರ ಸಾಗರದಿ ಈಸುತಿಹೆವು
ಉಪ್ಪುನೀರಿನ ನಂಟು ಏರಿಳಿತವೂ ಉಂಟು
ಸುಖದುಃಖಗಳ ಜೊತೆಗೆ ಕನಸು ನೂರೆಂಟು

ಬಾಳಿನುಯ್ಯಾಲೆಯಲಿ ಸಂಗಡಿಗರು ನಾವು
ಜೀಕುತ್ತ ಜೀಕುತ್ತ ಮರೆಯುವೆವು ನೋವು
ಮೇಲೊಮ್ಮೆ ಕೆಳಗೊಮ್ಮೆ ತೂಗುವುದು ಉಯ್ಯಾಲೆ
ಸಮರಸದಿ ಬಾಳುವೆವು ಏರುಪೇರಿಗಂಜದಲೇ

ಬಾಳ ದೋಣಿಯಲಡಿಯಿಟ್ಟ ದಿನದಿಂದ
ಹಿಗ್ಗಿಹೆವು ಕುಗ್ಗಿಹೆವು ನೋವು ನಲಿವಿಂದ
ಬದುಕಲೆಂಥದೇ ಬಿರುಗಾಳಿ ಬರಲಿ
ನಮ್ಮೊಲವ ಸಾಂಗತ್ಯ ಬಂಧ ಬಿಗಿಯಿರಲಿ

ಹಗಳಿರುಳಿನ ದುಡಿತ ನೀಡಿದೆ ಶುಭಫಲಿತ
ಬಂಧಿಸಿಟ್ಟಿದೆ ನಮ್ಮ ಒಲವ ಸೆಳೆತ
ಬರುವ ಕಷ್ಟಸುಖಗಳೆಲ್ಲ ಬೆವುಬೆಲ್ಲದ ತೆರದಿ
ಬದುಕ ಸಂಭ್ರಮಿಸಲದುವೆ ಯುಗಾದಿ

ಜೊತೆಗೂಡಿಬಂದ ದಿನಕಿಂದು 24ರ ಸಂಭ್ರಮ
ಮಧುರ ನೆನಪ ಬುತ್ತಿಯಲಿ ಒಲವ ಸಂಗಮ
ನನ್ನ ವಿಜಯದ ನಗೆಗಿರಲಿ ನಿಮ್ಮ ಕೊಡುಗೆ
ಅನುಸರಿಸಿ ಬಾಳುವೆ ನಾ ಕೊನೆಯುಸಿರವವರೆಗೆ

          ಶೈಲಜಾ ರಮೇಶ್
[8/6/2021, 10:40 am] Dr. B. N. Shylaja Ramesh: ಬಿಸಿಲಲ್ಲಿ ನೆರಲಾಗಿ
ನೆರಳಲ್ಲಿ ತಂಪಾಗಿ
ಜೊತೆಜೊತೆಗೆ ಸಾಗಿರಲು
ಬಾಳು ಬಂಗಾರ....!

ಸ್ಪಂಧಿಸುತ ಭಾವಕ್ಕೆ
ಹೆಗಲಾಗಿ  ಜೀವಕ್ಕೆ
ಅರಿತು ನಡೆಯುತಿರೆ
ಸುಖ ಸಂಸಾರ.....!
[15/7/2021, 7:21 am] Dr. B. N. Shylaja Ramesh: ಹುಂ...
ಆ ರಾಗ ಮಾಧುರ್ಯ ಕ್ಕೇ
ಮರುಳಾಗಿ ಕುಳಿತೆ ಮಾಧವಾ
ಮತ್ತೆ ಮತ್ತೆ ನೀ 
ಮೋಹನ ರಾಗವನ್ನೇ.
ನುಡಿಸಲೆಂದು😊
[15/7/2021, 7:21 am] Dr. B. N. Shylaja Ramesh: ಆ ಮೋಹನ ರಾಗವೇ ತಾನೇ
ನನ್ನ ನಿನ್ನ ಬೆಸೆದಿದ್ದು ಮಾಧವಾ
ಮತ್ತೆ ಮತ್ತೆ ನುಡಿಸು ಮತ್ತೆ
ಪಡೆದಿರುವೆ ನಾ
ದಿನವೂ ರಾಗ ಮಾಧುರ್ಯವ
ಸವಿಯುವ ಯೋಗವಾ😊
[15/7/2021, 2:16 pm] Dr. B. N. Shylaja Ramesh: ಥೇಟ್... ನಿನ್ನಂತೆಯೇ

ಬಿಟ್ಟೂ ಬಿಡದಂತೆ ಸುರಿಯುತ್ತಿದೆ ಜಡಿ ಮಳೆ
ಥೇಟ್.. ನಿನ್ನ ನೆನಪಿನಂತೆಯೇ...
ಕುಳಿರ್ಗಾಳಿ ಹೊಡೆತಕೆ ನಡುಗುತ್ತಿದೆ ಮೈ ಮನ
ಥೇಟ್.. ನಿನ್ನ ಸ್ಪರ್ಷದಂತೆಯೇ...
ಚಳಿಯ ಈ ಝಳಕೆ ಬೇಕೆನಿಸುತ್ತಿದೆ ಬಿಸಿಬಿಸಿ ಕಾಫಿ
ಥೇಟ್.. ನಿನ್ನ ಸನಿಹದಂತೆಯೇ...
ಸುರಿವ ಮಳೆಯ ತಂಪಿಗೆ ನೀರೂರಿಸುವ ಮಿರ್ಚಿಯ ಕಂಪು
ಥೇಟ್.. ನಿನ್ನ ಬಿಸಿಯಪ್ಪುಗೆಯಂತೆಯೇ..
ನಡುಗುವ ಮೈಯ್ಯ ಆಚರಿಸಿರುವ ಈ ಸ್ವೆಟರ್
ಥೇಟ್... ನಿನ್ನಂತೆಯೇ...
ಧೋ ಎಂದು ಸುರಿವ ಮಳೆಗೂ.. ನಿನಗೂ ಅವಿನಾಭಾವ ಸಂಬಂಧ
ಥೇಟ್... ನಮ್ಮ ಪ್ರೀತಿಯಂತೆಯೇ...
            ಶೈಲೂ.....
[16/7/2021, 6:34 am] Dr. B. N. Shylaja Ramesh: ಮಿಡಿವ ಮನದ ಮಾತು
*******************

ಮೋಡವಾವರಿಸಿದ ಈ ಇಳಿಸಂಜೆ
ಕ್ಷೀಣಿಸುತ್ತಿರುವ ಈ ತಿಳಿಬೆಳಕು
ಮುಂದಡಿಯಿಡಲೆಕೋ ಭಯ
ಬಂದು ನೀಡೆನಗೆ ಅಭಯ

ಸುತ್ತಲೂ ಮುತ್ತುತ್ತಿದೆ ಕತ್ತಲೆ
ಏನೇನೂ ಕಾಣಲೊಲ್ಲದು ನೋಡು
ಬಾಳುಹೇಗೆ ಬೆಳಕಾದೀತು
ನೀಡುನಿನ್ನ ಕಣ್ಣ ಕಾಂತಿಯ ಬೆಳಕು

ತವಕಿಸುತ್ತಿದೆ ಮನ ಉಸುರಲೆನೋ
ಪ್ರಾಸ ಮರೆತು ಪದಪುಂಜ ಖಾಲಿ
ಹೇಗೇಹೇಳಲಿ ಮನದ ಮಾತು
ತುಟಿಬಿಚ್ಚಲಾಗದ ಮೌನ

ಬಣ್ಣಕಳಚಿದ ಬರಡು ಬದುಕು
ಕನಸ ಕಣ್ಣೊಳಗೆ ನವರಂಗು
ಅಲೆದು ಬಳಲಿರುವೆ ಗೆಳೆಯ
ಬಣ್ಣ ತುಂಬಲು ನೀನೆಂದು ಬರುವೆ

ನಿನಗೆಂದೇ ಬರೆದ ಎರಡು ಸಾಲು
ಹೃದಯದಂಚೆಗೆ ರವಾನಿಸಿರುವೆ
ಕಾತರದಿ ಕಾಯುತಿರುವೆ ಗೆಳೆಯ
ಮಾರುತ್ತರಕೆ ಮನವನೆಟ್ಟು

ಲೋಕವೆಲ್ಲ ಕಿವುಡಾದರೂ ಸರಿ
ಯಾರಗೊಡವೆ ಬೇಕಿಲ್ಲೆನಗೆ
ನಿನ್ನೊಬ್ಬನಿಗೇ ಕೇಳಿದರೆ ಸಾಕು
ನಿನಗೆಂದೇ ಮಿಡಿವ ನನ್ನೆದೆಯ ಮಾತು
[16/7/2021, 6:35 am] Dr. B. N. Shylaja Ramesh: ನವಿರಾದ ನೆನಪು
**************

ಪ್ರಶಾಂತ  ಸಂಧ್ಯಾಸಮಯ
ತಂಗಾಳಿ ತಾಕಿ ಎನ್ನೆದೆಯ
ಅಲೆಅಲೆಯಾಗಿ ನೆನಪ ಸುರಳಿ
ಬಿಚ್ಚಿ ನೀಡುತಿದೆ ಕಚಗುಳಿ

ತಂಗಾಳಿ ತಂದ ಪರಿಮಳದ ಗಂಧ
ನೆನಪಿಸುತಿದೆ ನಿನ್ನ ವದನದ ಅಂದ
ಬಿರಿದ ತುಟಿಯಂಚಿನಿಂದ..ಆ
ಸೊಗಸ ಕರೆಯ ಕೇಳುವುದೇ ಚಂದ

ಮುಳುಗುತಿಹ ಆ ರವಿಯ ಕಿರಣ
ಮುಗುಳುನಗೆ ತಂದ ಪ್ರೀತಿಯ ಸ್ಪುರಣ
ಕಾಡುವೆಯೇಕೆ ಈ ಪರಿ ಅಕಾರಣ
ಮೋಡಿ ಮಾಡಿ ಕೆರಳಿಸಿದೆ ಮನವನ್ನ

ಚಿಲಿಪಿಲಿಯ ದ್ವನಿ ಹೊರಳಿ
ಹೊರಟಿದೆ ಮರಳಿ  ಗೂಡಿಗೆ
ನಿನ್ನೀ ಪ್ರೀತಿಯ ಕಲರವ
ತುಂಬಿಬಿಟ್ಟಿದೆ  ಎದೆಯೊಳಗೆ

ನೇಸರನಿಗೂ ಅವಸರ ಅಡಗಲು
ಭೂದೇವಿಯ ಒಲವ ಮಡಿಲೊಳು
ಕೆಂಪರಡಿ ಕೆನ್ನೆ ನಾಚಿ ನೀರಾದೆ
ಕನವರಿಸಿ ನಿನ್ನ ಮನದೊಳು

ಈ ಪ್ರಶಾಂತ ಸಂಜೆಗೂ
ನಿನಗೂ ಏನಿಹುದು  ಬಂಧ..?
ಕಾತರದ ಅಳಲಿನೊಲು
ಕಾಯ್ವೆ ನಾ ಮುದದಿಂದ...

     ಶೈಲೂ
[16/7/2021, 6:36 am] Dr. B. N. Shylaja Ramesh: ಇದು ನನ್ನ ಸಾಲು

ಅಂತರಾಳದಲ್ಲಿ ನೋವಿದೆ
ಆದರೂ ಮೊಗದಲ್ಲಿ ನಗುವಿದೆ
ನೋವನ್ನ ತೋರಿಸಿಕೊಳ್ಳಲಾಗದೆ
ನಗುವನ್ನು ಮೊಗದಲ್ಲಿ ತುಂಬಿದೆ

ನೊಂದ ಜೀವದ ಅಳಲು ನೂರಿದೆ
ಸಾಂತ್ವನದ ಹೆಗಲೊಂದು ಬೇಕಿದೆ
ನೀನಿರದೆ ನೋವಿಗೆಲ್ಲಿ ಕೊನೆಯಿದೆ
ನಗುನಗುತ ನೀ ಬಳಿ ಬರಬಾರದೇ
              ಶೈಲೂ....
[16/7/2021, 3:48 pm] Dr. B. N. Shylaja Ramesh: ನೇಸರ
******

ಇನಿತೂ  ದಣಿವಿಲ್ಲ
ಬೇಸರವೇ ಕಾಣದಲ್ಲ
ನಿತ್ಯ ನಡೆಸುವೆ ಕಾಯಕ
ಅರೆಗಳಿಗೆ ಬಿಡುವಿಲ್ಲ

ಜಗದ ಚೇತನ ನೀನು
ಹೊಂಗಿರಣ ಚೆಲ್ಲುವನು
ಜಡತನವ ದೂಡುತ
ಉತ್ಸಾಹ ತುಂಬುವನು

ನೀನಿದ್ದರೇನೇ ಬೆಳಕು
ಆತ್ಮೋನ್ನತಿಗೂ ನೀನಿರಬೇಕು
ಚರಾಚರದುಳಿವಿಗೆ
ದಿನವೂ ಉದಿಸಲು ಬೇಕು

          ಶೈಲೂ.....
[19/4/2019, 3:07 pm] Dr. B. N. Shylaja Ramesh: ಭಾರವಾಗಿದೆ ಮನಸು 😢😢😢
**************************

ಭಾರವಾಗಿದೆ ಮನಸು
ಕಳೆದಿದೆ ಕನಸಿನ ಕೂಸು
ಕಲ್ಪನೆಯ ಮೂಸೆಯಲ್ಲಿದ್ದದ್ದು ಕೊರೆದು
ಸವಿದಿದ್ದೆ ಅನಿಸಿದ್ದನ್ನೆಲ್ಲ ಬರೆದು

ಏನೆಲ್ಲ ದುಃಖ ದುಮ್ಮಾನ
ಹರಿಸಿದ್ದೆ ಪ್ರೀತಿ ಹೊಳೆಯನ್ನ
ಸವಿದು ಸ್ನೇಹದಾಲಿಂಗನ
ಇತ್ತು ಬರಹದಲಿ ಹೊಸತನ

ಎಷ್ಟೊಂದು.ಅನುಭವದ ಮಾತು
ಜೊತೆಗೆ ತುಸು ಕೋಪವೂ ಬೆರೆತು
ಭಾವ ಬಂಧನದಲ್ಲಿದ್ದ ಕೂಸು
ಹೇಗೋ ಕೈಜಾರಿ ಹೋಯ್ತು

ಇತ್ತೆನಿತೋ ಬರಹದಲಿ ತಪನ
ಆಸ್ಥೆಯಿಂದ ಮಾಡಿದ್ದೆ ಜತನ
ಕಣ್ಗಾವಲಲ್ಲಿದ್ದ ನಲ್ಮೆಯ ಕೂಸು
ಕಣ್ತಪ್ಪಿನಿಂದ ಕಳೆದುಹೋಯ್ತು

ಇತ್ತಲ್ಲಿ  ನೂರಾರು ಕವನ
ಮೂಡಿ ಬಂದಿದ್ದ ಬಾಳ ಕಥನ
ಗುರುಗಳ ಪ್ರೋತ್ಸಾಹದ ಗಝಲ್ಲು
ಕಳೆದು ಆಯ್ತು ಮನ ಗೋಜಲು

ಏನಾಗಿತ್ತೋ ಬುದ್ಧಿಗೆ ಕಾಣೆ
ಅನಿಸಿತ್ತೇನೋ ನಾನೇ ಜಾಣೆ
ಜಂಭಕ್ಕೊಂದು ಡಾಕ್ಟರೇಟು
ತಂತ್ರಾಂಶ ನೀಡಿತ್ತು ಎದುರೇಟು

ಮತ್ತೆ ಬಂದೀತೇ ಅ ಪರಿಯ ಗಾನ
ಮನದ ವೀಣೆಯಲಿ ಮೂಡಿದ್ದ ತನನ
ಭಾವನೆ ಬರಿದಾದಂತೆ ಅನಿಸಿಕೆ
ಮನಕಿಂದು ತೀರದ ಬಳಲಿಕೆ😔😔😔

           ಶೈಲೂ.....
[19/4/2019, 9:48 pm] Dr. B. N. Shylaja Ramesh: ಚೆಲ್ಲಿದಂತೆ ಮೊಸರು
ಹಸಿರು ಗಿಡದಮೇಲೆ
ಸೆಳೆಯುತ್ತದೆ ಅರಳಿ
ಘಮ ಘಮಿಸುವ ಮೊಲ್ಲೆ

ಅಚ್ಚ ಬಿಳಿಯ ಬಣ್ಣ
ಸೆಳೆಯುತ್ತಿದೆ.ಕಣ್ಣ
ಚಿಕ್ಕದಾದರೇನು
ಘಮಲ ಕೀರ್ತಿ ಬಲ್ಲೆಯೇನು

ಸೌಗಂಧ ಬೀರೋ ಮಲ್ಲೇ
ಕಟ್ಟಿ ಚಂದದ ಮಾಲೆ
ದೇವಗರ್ಪಿತವಾದ ವೇಳೆ
ಸಾರ್ಥಕತೆ ಬದುಕು

       ಶೈಲೂ...
[19/4/2019, 9:48 pm] Dr. B. N. Shylaja Ramesh: ಗಝಲ್
*******

ಸರಿಯುತ್ತಿದೆ ಸಮಯ ಬರೆಯಲಿದೆ ಬಹಳ
ಹರಿಯುತ್ತಿದೆ ಬರಹ ಹೊರಹಾಕಲಿದೆ ಬಹಳ

ಹೊಳೆಯಲೊಲ್ಲದು ಒಮ್ಮೊಮ್ಮೆ ಏನೇನೂ
ಬರಿದೆ ಅಯೋಮಯ ಸಂದಿಗ್ಧವಿದೆ ಬಹಳ

ಭವಿತೆ ಹೇಳುವುದದ್ಭುತವಿದೆ ಸಹಜ
ಕವಿತೆ ಕಾದಂಬರಿ ಊಹೆ  ಗೊಂದಲವಿದೆ ಬಹಳ

ಕತೆ ಕಾವ್ಯ ನೋಡುವುದಕೆ ಸರಳ
ಪದಪುಂಜಗಳ ಬಳಕೆಯಲಿ ಹುಡುಕಬೇಕಿದೆ ಬಹಳ

ಅನಿಸಿದ್ದನ್ನೆಲ್ಲ ಲೇಖನಿಯಲಿ ಬಂಧಿಸಿಡುವ ಬಯಕೆ
ಅಂತರಂಗದ ಭಾವ ತೆರೆದಿಡಲಿದೆ ಬಹಳ

ಸಾಕಾರವಾಗಬೇಕಿರುವ ಕನಸುಗಳು ನೂರಿವೆ
ಒಲವಿನಲಿ ಮಿಡಿದ ಮನಸಿಮ ನುಡಿಯಿದೆ ಬಹಳ

ಶೈಲಳಾಂತರ್ಯದಲಿ‌ ಹುಡುಗಿಹುದು ಏನೇನೋ
ನುಡಿಗಟ್ಟಿನಲಿ ಬೆಸೆದು ಬೆರಗು ಮೂಡಿಸುವುದಿದೆ ಬಹಳ

              ಶೈಲೂ.....
[19/4/2019, 9:48 pm] Dr. B. N. Shylaja Ramesh: ಅವನಿರುವುದೇ ಹಾಗೆ
******************

ಅವನಿರುವುದೇ ಹಾಗೆ
ನೀಲಮೇಘದ ಬಣ್ಣದಂತೆ
ಎಲ್ಲರ ಸೆಳೆದೆಳೆಯುತ
ಸುಮ್ಮನಿರುವ ಮುಗ್ಧನಂತೆ

ಅವನಿರುವುದೇ ಹಾಗೆ
ಹುಬ್ಬೇರಿಸಿ ನೋಡುವಂತೆ
ಪ್ರಕ್ಷುಬ್ಧ ಸಮಯದಲೂ
ಚಿತ್ತವಿರಿಸುವ ಶಾಂತಿಮಂತ್ರದಂತೆ

ಅವನಿರುವುದೇ ಹಾಗೆ
ಎಲ್ಲರೊಡನೆ ಬೆರೆವ ಮಗುವಿನಂತೆ
ಮೋಡಿ ಮಾಡಿ ಸೆಳೆವ
ಮನಕದ್ದ ಚಿತ್ತಚೋರನಂತೆ

ಅವನಿರುವುದೇ ಹಾಗೆ
ಅತೀವ ಸರಳ ವ್ಯಕ್ತಿಯಂತೆ
ದೇವಾನುದೇವ ತಾನಾದರೂ
ತೋರುವ ಎಲ್ಲರ ಮನೆಮಗನಂತೆ

ಅವನಿರುವುದೇ ಹಾಗೆ
ಗೋಪಿಯರ ಪ್ರಾಣವಲ್ಲಭನಂತೆ
ಸರ್ವರೊಳಗೊಂದಾಗಿ
ಮೆರೆವ ಸರ್ವೋತ್ತಮನಂತೆ

ಅವನಿರುವುದೇ ಹಾಗೆ
ದುಷ್ಟರ ತರಿವ ಯೋಧನಂತೆ
ಶರಣಾದರೆ ಪೊರೆವ
ಅಪ್ಪಿ ಹರಸುವ ತಾಯಿಯಂತೆ

ಅವನಿರುವುದೇ ಹಾಗೆ
ಹಸುಮಗುವಿನಂತೆ
ತಾಯಿಯಕ್ಕರೆಯ ಕಂದ
ಮಡಿಲು ತುಂಬುವಂತೆ

ಅವನಿರುವುದೇ ಹಾಗೆ
ಕಾಡುವ ಪ್ರಿಯಕರನಂತೆ
ಮೋಡಿಮಾಡಿ ಕಾಡಿಬೇಡಿ
ಮುದವೀವ ಪ್ರೇಮದಂತೆ

ಅವನಿರುವುದೇ ಹಾಗೆ
ಉತ್ತಮ ರಾಜತಂತ್ರದಂತೆ
ವಿರೋಧಾಭಾಸಗಳ ನಡುವೆ
ಮೆರೆವ ನಾಯಕನಂತೆ

ಅವನಿರುವುದೇ ಹಾಗೆ
ಭಕ್ತಿಪರಾಕಾಷ್ಠೆಗೆ ಸೋತವನಂತೆ
ಹೂವತಂದವರಿಗೆ ಹುಲ್ಲತರುವ
ಮಾಧವ ತಾ ಭಕ್ತರಾಧೀನನಂತೆ

            ಶೈಲೂ.......
[19/4/2019, 9:48 pm] Dr. B. N. Shylaja Ramesh: ಗಝಲ್
*******

ಸರಿಯುತಿದೆ ಕಾಲ ಅರಿವಿಲ್ಲದೆ ಮನುಜ
ಉರಿಯುತ್ತಿದೆ ಮನ ಅರಿವಿಹುದೆ ಮನುಜ

ತಿಳಿಯ ಬೇಕಿಹುದು ಸಾಕಷ್ಟು ವಿಷಯ
ಬರೀ ಅಯೋಮಯ ಗೋಜಲು ಗೊಂದಲವಿದೆ ಮನುಜ

ಕನಸುಗಳ ಕಟ್ಟಿ  ಕೂತರಾದೀತೇ ಹೇಳು
ನನಸಾಗಿಸುವ ನಡೆಯಲಿ ಶ್ರಮವಿದೆ ಮನುಜ

ಭರವಸೆಯಿರಲಿ ನಾಳಿನ ಬದುಕಿನಲಿ
ಇರುಳು ಸರಿದ ಮೇಲೆ ಬೆಳಕಿರದೇ ಮನುಜ

ನೆನಪಿನಲ್ಲುಳಿವಂತೆ ಬಾಳು ಮರೆಯದಿರು ನೀನು
ಶೈಲ ಅಡಿಗಡಿಗೆ ಹಾರೈಸುತಿಹಳು ಮರೆಯಬಹುದೇ ಮನುಜ

            ಶೈಲೂ.....
[20/4/2019, 10:36 am] Dr. B. N. Shylaja Ramesh: ಕಿಟಕಿಬಳಿ ನಿಂತವಳನ್ನು
ಮುದ್ದಿಸಿದನೇನು ಭಾನು.?
ಸುಳಿದು ಕಿಂಡಿ ಕಿಂಡಿಯಲಿ
ಬರಸೆಳೆದು ಅಪ್ಪಿದನೇನು.?

ಆಗಿರಬೇಕು ಪ್ರಣಯದಾಸೆ
ದಂತದ ಗೊಂಬೆಯ ಕಂಡು
ಇಣುಕಿಣುಕಿ ನೋಡುತಿರುವ
ಚಂದದ ಪರಿಯ ಕಂಡು

ಬೆಚ್ಚಿದ್ದಳಂದು  ಸಂಜ್ನ್ಯಾ
ಪ್ರಖರ ಶಾಖವ ಕಂಡು
ಬೇಸರವಾಗಿರಬೇಕು ಪಾಪ
ಬರಿದೇ ಛಾಯೆಯನುಂಡು

ಎಳೆ ಬಿಸಿಲ ಶಾಖಕೆ ಮೈಯೊಡ್ಡಿ
ನಿಂತ ವೈಯ್ಯಾರಿಯ  ಸ್ಪರ್ಶಕೆ
ಭಾಸ್ಕರ ನೇ ಬಿಸಿ ಬಿಸಿಯಾಗಿ
ಬೆವರಾಗಿ ಸುರಿದು ಸರಿದ ನೇಪಥ್ಯಕೆ
                 ಶೈಲೂ......
[20/4/2019, 1:01 pm] Dr. B. N. Shylaja Ramesh: ಇಂದು ನಾ  ನಗಲು ಕಾರಣ ನೀನು
*****************************

ಸುತ್ತಲೂ ಕತ್ತಲೆಯು ಮುಸುಕಿರಲು
ಭಯದಿಂದ ನಾ ನಡುಗುತ್ತಿರಲು
ಪ್ರಣತಿ ಹಿಡಿದು ಬೆಳಕಾಗಿ ಬಂದೆ
ಸರಿಸಿ ಭಯವ ನಗು ಮೂಡಿಸಲೆಂದೇ

ಕಾರ್ಮೋಡ ಕವಿದ ಬಾನಿನಂತೆ
ಮುಸುಕಿ ಮನದಿ ನೂರಾರು ಚಿಂತೆ
ಏನೋ ಕಳೆದಂತೆ ತಳಮಳ ಮೊಗದೆ
ಹರಿಸಿ ನವಿರಾದ ನಗುವನ್ನು ತಂದೆ

ಸೂರ್ಯನುದಯಕೆ ಕಮಲವರಳಿದಂತೆ
ಹೂವಲ್ಲಿ ಬೆರೆತ ಮಕರಂದದಂತೆ
ಬೀಸೋ ತಂಗಾಳಿಯಲಿ ಸೌಗಂದ ಬೆರೆತಂತೆ
ನಿನ್ನಲ್ಲಿ ನಾ ಬೆರೆತೆ ಹಾಲು ಜೇನಂತೆ

ಬಾಳ ಬಂಡಿಯ ಚಲನೆಗೆ ನೀ ಸೂತ್ರಧಾರಿ
ನೀನೇಣಿಸಿದಂತೆಯೇ ನಡೆವ ನಾ ಪಾತ್ರಧಾರಿ
ನನ್ನ ಪ್ರತಿ ಚಲನೆಗೂ ಇಹುದು ನಿನ್ನದೇ ಪಾತ್ರ
ನನ್ನ ನಗುವಿಗೆ ಕಾರಣವೇ ನಿನ್ನಂದದ ಚಿತ್ರ

               ಶೈಲೂ......
[20/4/2019, 1:03 pm] Dr. B. N. Shylaja Ramesh: ಕಾಯುತಲಿರುವೆ  ನಿನಗಾಗಿ
***********************

ಹೊಂಬಿಸಿಲ ಬಿಸಿ ಸ್ಪರ್ಶಕೆ
ಕಾಯ್ದು , ತೋಯ್ದ ಧರೆಯಂತೆ
ಮಂಜಿನ ಮುತ್ತಿನ ನೀರ ಹನಿಗಾಗಿ
ಕಾಯುತ್ತಿರುವ ಹೂವಿನೆಸಳಂತೆ
ನಿನ್ನಾಗಮನಕ್ಕಾಗಿ ಕಾಯುತ್ತಿರುವೆ...

ವಸಂತನಾಗಮನಕ್ಕಾಗಿ
ಕಾಯ್ದ ಪ್ರಕೃತಿಯಂತೆ
ಮಾವಿನ ಚಿಗುರಿಗಾಗಿ
ಕಾಯುವ ಕೋಗಿಲೆಯಂತೆ
ನಿನ್ನಾಗಮನಕ್ಕಾಗಿ ಕಾಯುತ್ತಿರುವೆ...

ಗಗನ ಚುಂಬಿಸಲು
ಹಾತೊರೆವ ಗಿರಿಶಿಖರದಂತೆ
ಭುವಿಯನಪ್ಪಲು ತವಕಿಸುವ
ಮಳೆಯ ಹನಿ ಹನಿಯಂತೆ
ನಿನ್ನಾಗಮನಕ್ಕಾಗಿ ಕಾಯುತ್ತಿರುವೆ...

ಮನದ ಭಾವನೆಯ ಭಾರಕೆ
ಮಿಡಿದ ನಿಟ್ಟುಸಿರಿನಲಿ
ನಿದ್ದೆಯಲೂ ಕನವರಿಸುತ್ತಿರುವ
ಮುದ್ದಾದ ನಿನ್ಹೆಸರಿನಲ್ಲಿ
ನಿನ್ನಾಗಮನಕ್ಕಾಗಿ ಕಾಯುತ್ತಿರುವೆ...

ಕಣ್ಣೆವೆಯ ಮುಚ್ಚಿದಾಕ್ಷಣವೇ  ಹೊತ್ತು 
ತರುವ ನಿನ್ನ ನೆನಪಿನ ಸವಿಗನಸು
ನಿನ್ನ ನೆನಪಿನಲೆಯಲ್ಲಿ 
ತೋಯ್ದಾಡುವ ಮೃದುಮನಸು
ಎಲ್ಲವೂ ಬೇಡುತ್ತಿದೆ ಗೆಳೆಯ
ನಿನ್ನಾಗಮನದ ಮಧುರ ಕ್ಷಣಕ್ಕಾಗಿ..

             ಶೈಲೂ......
[20/4/2019, 1:04 pm] Dr. B. N. Shylaja Ramesh: ,ಕಳೆದುಹೋಗಿದೆ ಹೃದಯ
*********************

ಎಲ್ಲೋ ಕಳೆದಿದೆ ಗೆಳೆಯ
ಕನಸು ತುಂಬಿದ ಹೃದಯ
ನೆನಪಿನಂಗಳದಿ ಚಿಮ್ಮುತ್ತಿರುವ
ಕಾರಂಜಿಯಲಿ ನಾನಲಿಯುವಾಗ

ಎಲ್ಲೋ ಕಳೆದಿದೆ ಗೆಳೆಯ
ಕಂಡೊಡನೇ ಉಲಿವ  ಹೃದಯ
ಜಾರಿಹೋಗಿದೆಯೇನೋ
ಕಣ್ಣಂಚಲಿ ಮಿಂಚು ಸರಿದಾಗ

ಎಲ್ಲೋ ಕಳೆದಿದೆ ಗೆಳೆಯ
ಹುಚ್ಚು ಮನಸಿನ ಹೃದಯ
ನೀನುಲಿದ ಸ್ವರಮಾಧುರ್ಯದ
ಸವಿಜೇನ ಸವಿಯುವಾಗ

ಎಲ್ಲೋ ಕಳೆದಿದೆ ಗೆಳೆಯ
ನಿನ್ನ ಬಿಂಬ ತುಂಬಿದ.ಹೃದಯ
ನೀನೆದುರು ನಿಂತು ಹುಸಿನಗೆಯ
ಹೂಬಾಣ ಹೂಡಿದಾಗ

ಎಲ್ಲೆಲ್ಲಿ ಹುಡುಕಲಿ ಗೆಳೆಯ
ಕಾಣದಾಗಿದೆ ಬಡ ಹೃದಯ
ಸಿಕ್ಕರೆ ಬಚ್ಚಿಡು ಜೋಪಾನವಾಗಿ
ಹೆಚ್ಚೇನು ಹೇಳಲಿ ಹೆಜ್ಜೆಹಾಕು ಜೊತೆಜೊತೆಯಾಗಿ

          ಶೈಲೂ......
[20/4/2019, 1:05 pm] Dr. B. N. Shylaja Ramesh: ,ನವಿರಾದ ನೆನಪು
**************

ಪ್ರಶಾಂತ  ಸಂಧ್ಯಾಸಮಯ
ತಂಗಾಳಿ ತಾಕಿ ಎನ್ನೆದೆಯ
ಅಲೆಅಲೆಯಾಗಿ ನೆನಪ ಸುರಳಿ
ಬಿಚ್ಚಿ ನೀಡುತಿದೆ ಕಚಗುಳಿ

ತಂಗಾಳಿ ತಂದ ಪರಿಮಳದ ಗಂಧ
ನೆನಪಿಸುತಿದೆ ನಿನ್ನ ವದನದ ಅಂದ
ಬಿರಿದ ತುಟಿಯಂಚಿನಿಂದ..ಆ
ಸೊಗಸ ಕರೆಯ ಕೇಳುವುದೇ ಚಂದ

ಮುಳುಗುತಿಹ ಆ ರವಿಯ ಕಿರಣ
ಮುಗುಳುನಗೆ ತಂದ ಪ್ರೀತಿಯ ಸ್ಪುರಣ
ಕಾಡುವೆಯೇಕೆ ಈ ಪರಿ ಅಕಾರಣ
ಮೋಡಿ ಮಾಡಿ ಕೆರಳಿಸಿದೆ ಮನವನ್ನ

ಚಿಲಿಪಿಲಿಯ ದ್ವನಿ ಹೊರಳಿ
ಹೊರಟಿದೆ ಮರಳಿ  ಗೂಡಿಗೆ
ನಿನ್ನೀ ಪ್ರೀತಿಯ ಕಲರವ
ತುಂಬಿಬಿಟ್ಟಿದೆ  ಎದೆಯೊಳಗೆ

ನೇಸರನಿಗೂ ಅವಸರ ಅಡಗಲು
ಭೂದೇವಿಯ ಒಲವ ಮಡಿಲೊಳು
ಕೆಂಪರಡಿ ಕೆನ್ನೆ ನಾಚಿ ನೀರಾದೆ
ಕನವರಿಸಿ ನಿನ್ನ ಮನದೊಳು

ಈ ಪ್ರಶಾಂತ ಸಂಜೆಗೂ
ನಿನಗೂ ಏನಿಹುದು  ಬಂಧ..?
ಕಾತರದ ಅಳಲಿನೊಲು
ಕಾಯ್ವೆ ನಾ ಮುದದಿಂದ...

           ಶೈಲೂ.....
[20/4/2019, 3:19 pm] Dr. B. N. Shylaja Ramesh: ಹುಂ... ಹಗುರಾಗಬೇಕು ಮತ್ತೆ
ಹಳೆಯ ಪೊರೆ ಕಳಚಿದಂತೆ
ಅವನಿತ್ತುದವನಿಗೇ ಮುಡಿಪು
ಬರೆದಿದ್ದದ್ದೊಂದು ಸವಿ ನೆನಪು

ಮುತ್ತು ರತ್ನದಂತಿತ್ತಲ್ಲ
ಮನವದರೊಳು ನೆಲೆಸಿತ್ತಲ್ಲ
ಅತ್ಯಮೂಲ್ಯ ಮನದ
ಭಾವಧಾರೆ ಸಿಹಿಜೇನು ಬೆಲ್ಲ

ಎನಿತು ಪ್ರೀತಿ ಪ್ರೇಮಧಾರೆ
ತುಂಬಿಸಲ್ಲಲ್ಲಿ  ನಡುವೆ ಅಕ್ಕರೆ
ಹುಸಿಮುನಿಸು ಕೋಪತಾಪ
ಬೆರೆಸವನು ಬರೆಸಿದ್ದ ಪಾಪ

ಕೊಟ್ಟಿದ್ದವನೇ ಪ್ರೀತಿಯಿಂದ
ಕಸಿದವನವನೇನು ಆಸೆಯಿಂದ
ಕಸಿದಿದ್ದೋ  ಕಳೆದದ್ದೋ  ಏನು
ಅರ್ಪಿತವೆಲ್ಲವನಿಗೆ  ಬುದ್ಧಿ ಮನ

ಕೊಟ್ಟಾನವನು ನೂರೆಂಟು
ಕಸಿದಿದ್ದಕ್ಕೆ ದುಪ್ಪಟ್ಟು
ಮರೆಸೆಲ್ಲ ನಗಿಸುವ ಗತ್ತು
ಅವನಲ್ಲದಿನ್ನಾರಿಗೆ ಗೊತ್ತು

ಮರುಕವಿತ್ತು ಈ ತನಕ
ಸಂತೈಕೆ ಮಾಡಿದೆ ಮೂಕ
ಅದೇನು ಬಂಧವೋ ಅರಿಯೆ
ನಿಮ್ಮೀ ಹಾರೈಕೆ ಪೊರೆಯೆ

ತಲುಪಲಿದೆ ಗುರಿ ಮುಂದೆ
ಗುರುವಿನ ಹಾರೈಕೆ ಹಿಂದೆ
ಕವಿಮನಸ ಕವಿ ತಾನೇ ಬಲ್ಲ
ನಮಿಸಿ ಶರಣಾದೆ ಮೆಲ್ಲ

          ಶೈಲೂ......

ನಿಮ್ಮ ಸಂತೈಕೆಯ ನುಡಿ ನಿಜಕ್ಕೂ.  ಖುಷಿ ತಂದಿದೆ ಸರ್
ಮತೆಯುತ್ತೇನೆ ಖಂಡಿತಾ... ಹಾಗೆಯೇ ಬರೆಯುತ್ತೇನೆ👍
Thank you so much sir🙏🙏🙏
[20/4/2019, 4:40 pm] Dr. B. N. Shylaja Ramesh: ಎಳೆ ಕೈಗಳ ಮೇಲೇನಿದು
ಕೆಂಪಿನೆಳೆಯ ಚಿತ್ತಾರ
ಅಂದದ ಕೈಯ್ಯ ಮೇಲಿನಿತು
ಮದರಂಗಿಯ.ಹುನ್ನಾರ

ಕೈಗೆ ಕಳೆ ಕೊಟ್ಟಿದೆ ನೋಡು
ಎಳೆ ಎಳೆಯಾಗಿ ಬಿಡಿಸಿದ ಬಣ್ಣ
ಮದರಂಗಿಗೆ ಮೆರಗಿತ್ತಿದುದು
ಮುದ್ದುಗೊಂಬೆಗಳ ಕೈಯಣ್ಣ

ಯಾರಿಟ್ಟರೇ ಹೇಳು  ಕಂದ 
ಈ ಅಂದದೆಳೆಯ ರಂಗೋಲಿ
ಮೂಡಿಸಿದೆ ಗಾಢ ರಂಗು
ಬಂಗಾರಿಯ ಕೈಯ್ಯಲ್ಲಿ

ಬಿಳಿ ಮೈಗೆ ಕೆಂಪುಬಣ್ಣ
ಸೆಳೆದೆಳೆಯಿತು ಕಣ್ಣ
ದೃಷ್ಟಿಯಾದೀತು ಜೋಕೆ
ಇಡೊಂದು ಕಪ್ಪುಚುಕ್ಕಿ ಗಲ್ಲಕೆ

            ಶೈಲೂ.....
[21/4/2019, 10:25 pm] Dr. B. N. Shylaja Ramesh: ಸ್ನೇಹ ಸಮ್ಮೇಳನ
***************

ನೀವು ನೆಟ್ಟ ವಿಶಾಲ
ಅಲದಮರದಡಿಯಲ್ಲಿ
ಇಂದೊಂದು ಸ್ನೇಹ ಸಮ್ಮೇಳನ

ಸ್ಪುರಿಸುತ್ತ ಸ್ನೇಹ
ತೀರಿತ್ತು ದಾಹ
ರೂವಾರಿ ಇಲ್ಲದ್ದು ಮನೋವೇದನ

ಎನಿತು ಸಂತಸದ ಸಮಯ
ಹರಟೆ ವಿಚಾರ ವಿನಿಮಯ
ನೀವಿತ್ತ ಬಳುವಳಿಯ ಸ್ನೇಹ ಸಂಗಮ

ಮಕ್ಕಳ ಕಲರವ
ಮುದವಿತ್ತ  ಸಾಂಗತ್ಯ
ಮರೆಸಿತ್ತು ನನ್ನೆಲ್ಲ ಮನದ ನೋವು

ಎಲ್ಲೋ ಒಮ್ಮೆ ಕಂಡು
ಶುರುವಾದ ಸಿರಿ ಸ್ನೇಹ
ಮರೆಸಿತ್ತು ನಾವು ನಮ್ಮವರ ಕಾವು

ಸಂತಸದಲೂ ನಡುವೆ
ನೀವಿಲ್ಲದ ಬೇಸರ
ನಿಜದಿ ನಮ್ಮೆಲ್ಲರ ಕಾಡಿತ್ತು

ಬರಿದೇ ನಿಮ್ಮದೇ ಮಾತು
ಮನ ಮನದಲಿ ಕುಳಿತು
ನಿಮ್ಮ ನೆನಪಲ್ಲಿ ರಾರಾಜಿಸುತ್ತಿತ್ತು

ಮತ್ತೆಂದು ಭೇಟಿಯೊ
ವಟವೃಕ್ಷ ದಡಿಯಲ್ಲಿ
ಕಾಯುವೆನು ಸಂತಸದ ಕ್ಷಣಕ್ಕಾಗಿ

ಇರಲಿ ನಮ್ಮ ನೆನಪು
ಮರೆಯದೇ ಹುರುಪು
ಶೀಘ್ರದಲೇ ತಾವು ಬರುವವರಾಗಿ

          ಶೈಲೂ.....
[8/11/2019, 10:25 am] Dr. B. N. Shylaja Ramesh: ಮೌನ
*******

ಮಾತು ಮೌನವಾದಾಗ
ಮೌನವೇ ಮಾತು
ಮೌನದಲೇ ಗುನುಗಿದಾಗ
ಮೌನವೇ ರಾಗವು
ಮನ ಮುನಿಸಿನಲಿರಲು
ಮೌನವಾಯ್ತು ಮದ್ದು
ಮೌನದೇಕಾಂತವದು
ಮುಸುಕುನೊಳಗಿನ ಗುದ್ದು
ಮಾತು ಮರೆಯಾದಾಗ
ಮೌನ ದಾರಿದೀಪ
ಮೌನ ವಿಜೃಂಭಿಸಿದಾಗ
ಮಾತು ತೀರದ ತಾಪ
ಮಾತು ಒಂದು ನುಡಿದರೆ
ಮೌನಕೆ ನೂರರ್ಥ
ಮಾತಿಗೆ ಅರಿಯಲಾಗದು
ಮೌನದ ಭಾವಾರ್ಥ
ಮಾತು ಮನೆಯ ಕೆಡಿಸಿದರೆ
ಮೌನ ಬಾಳನುಳಿಸಿತು
ಮೌನವಾದರೆ ಬದುಕು
ಮಾತಿಗೆ ಅರ್ಥವೆಲ್ಲುಳಿಯಿತು..??

       ಶೈಲೂ....
[12/12/2019, 5:05 pm] Dr. B. N. Shylaja Ramesh: ಅಪಸ್ವರ
*********

ಪ್ರಿಯ ಗೆಳೆಯ
ನನ್ನ ನಿನ್ನ ಸ್ನೇಹ ಬೆಸೆದು
ಸವಿ ಕನಸೊಸೆದು
ಮನದಲ್ಲಿ ಹಾಡಿತ್ತು
ಸುಂದರ ರಾಗ

ಕಡೆಗಣ್ಣ  ಕುಡಿನೋಟ
ಹೆಚ್ಚಿಸಿ ಎದೆಬಡಿತ
ಮನದಲ್ಲಿ ಗರಿಗೆದರಿ
ಆಡಿ ನವಿಲಿನ ನಾಟ್ಯ
ಮೂಡಿತ್ತು .ಅನುರಾಗ

ಹೃದಯವೀಣೆ ನುಡಿಸಿದ
ಸಪ್ತಸ್ವರಗಳ ಸುಂದರ
ಸಂಗೀತ .ಸುಧೆಯಲ್ಲಿ
ಮೂಡಿತ್ತು ಎಲ್ಲೋ
ಅಹಮ್ಮಿನ  ಅಪಸ್ವರ

ತಂತಿ ಮುರಿದಂತೆ ವೀಣೆ ಹರಿದಂತೆ
ಜೀವನದ ರಾಗ
ಶ್ರುತಿತಪ್ಪಿ ಹಾಡಿದೆ
ಬಂದೊಮ್ಮೆ ಮೀಟು
 ಹೃದಯದಾ ವೀಣೆ
ಮತ್ತೆ ಮೂಡಲಿ ಒಲವಿನ ರಾಗ

           ಶೈಲೂ.....
[12/12/2019, 5:54 pm] Dr. B. N. Shylaja Ramesh: ವೀರ ಹನುಮಾ
*************
ರಾಮ ಭಕ್ತ ಹನುಮಾ ಅಂಜನೀಪುತ್ರ ಹನುಮಾ
ಪವನ ಸುತ ಹನುಮಾ ಜೈ ವೀರಧೀರ ಹನುಮಾ
ಜೈ ಜೈ ವೀರ ಧೀರ ಹನುಮಾ  ||

ಸಾಗರ ಲಂಘಿಸಿ ಲಂಕೆಗೆ ಹಾರಿ
ಸೀತಾಮಾತೆಗೆ ಮುದ್ರೆ ಉಂಗುರವಿತ್ತೆ
ತರಿದು ರಕ್ಕಸರ ವೀರಾವೇಷದಿ
ಸಿಡಿದು ಆಗಸಕೆ ಲಂಕೆಯನೂ ಸುಟ್ಟೆ || ಜೈ ವೀರ ಧೀರ ಹನುಮಾ ||

ಭಕ್ತಿ ಶಕ್ತಿಯಲಿ ಕಲ್ಲನ್ನು ಜೋಡಿಸಿ
ಸಾಗರಕೆ ಸೇತುವೆಯನೂ ಕಟ್ಟಿ
ರಾಮನಾಮದ ಮಹಿಮೆಯ ಹಾಡುತ
ವಾನರ ಸೈನ್ಯದೆ ಲಂಕೆಯನೂ ಹೊಕ್ಕೆ || ಜೈ ವೀರ ಧೀರ ಹನುಮಾ||

ಅಮಿತ ಪರಾಕ್ರಮಿ ಅಗಾಧ ಬಲವಾನ್
ಸಂಜೀವಿನಿ ಪರ್ವತವನೆ ತಂದೆ
ಲಕ್ಷ್ಮಣನ ಜೀವವುಳಿಸಿ ರಾಮಗೆ ನಮಿಸಿ
ವೀರಾವೇಷದಿ ರಕ್ಕಸರನು ಕೊಂದೆ || ಜೈ ವೀರಧೀರ ಹನುಮಾ ||

ರಾಮನ ಭಂಟ ಜೈ ಹನುಮಂತ
ಪೊಗಳಲಹುದೇ ನಿನ್ನಯ ಚರಿತೆ
ರಾಮನಾಮದ  ಹಿರಿಮೆಯ ಸಾರುತ
ಜಗದ ಜಂಜಡವನೆ ಮರೆತೇ || ಜೈ ವೀರ ಧೀರ ಹನುಮಾ ||

ನೀನಿರುವೆಡೆಯೇ ರಾಮನ ವಾಸ
ರಾಮನಾಮವೇ ನಿನ್ನ ಶ್ವಾಸ
ಪೊರೆ ಎನ್ನನು ಮಾರುತಿರಾಯ
ರಾಮಭಕ್ತಿಯ ನೀಡೆನಗೆ ಲವಲೇಶ || ಜೈ ವೀರ ಧೀರ ಹನುಮಾನ್ ||

           ಶೈಲೂ......
[12/12/2019, 5:59 pm] Dr. B. N. Shylaja Ramesh: ವೀರ ಹನುಮಾ
*************
ರಾಮ ಭಕ್ತ ಹನುಮಾ ಅಂಜನೀಪುತ್ರ ಹನುಮಾ
ಪವನ ಸುತ ಹನುಮಾ ಜೈ ವೀರಧೀರ ಹನುಮಾ
ಜೈ ಜೈ ವೀರ ಧೀರ ಹನುಮಾ  ||

ಸಾಗರ ಲಂಘಿಸಿ ಲಂಕೆಗೆ ಹಾರಿ
ಸೀತಾಮಾತೆಗೆ ಮುದ್ರೆ ಉಂಗುರವಿತ್ತೆ
ತರಿದು ರಕ್ಕಸರ ವೀರಾವೇಷದಿ
ಸಿಡಿದು ಆಗಸಕೆ ಲಂಕೆಯನೂ ಸುಟ್ಟೆ || ಜೈ ವೀರ ಧೀರ ಹನುಮಾ ||

ಭಕ್ತಿ ಶಕ್ತಿಯಲಿ ಕಲ್ಲನ್ನು ಜೋಡಿಸಿ
ಸಾಗರಕೆ ಸೇತುವೆಯನೂ ಕಟ್ಟಿ
ರಾಮನಾಮದ ಮಹಿಮೆಯ ಹಾಡುತ
ವಾನರ ಸೈನ್ಯದೆ ಲಂಕೆಯನೂ ಹೊಕ್ಕೆ || ಜೈ ವೀರ ಧೀರ ಹನುಮಾ||

ಅಮಿತ ಪರಾಕ್ರಮಿ ಅಗಾಧ ಬಲವಾನ್
ಸಂಜೀವಿನಿ ಪರ್ವತವನೆ ತಂದೆ
ಲಕ್ಷ್ಮಣನ ಜೀವವುಳಿಸಿ ರಾಮಗೆ ನಮಿಸಿ
ವೀರಾವೇಷದಿ ರಕ್ಕಸರನು ಕೊಂದೆ || ಜೈ ವೀರಧೀರ ಹನುಮಾ ||

ರಾಮನ ಭಂಟ ಜೈ ಹನುಮಂತ
ಪೊಗಳಲಹುದೇ ನಿನ್ನಯ ಚರಿತೆ
ರಾಮನಾಮದ  ಹಿರಿಮೆಯ ಸಾರುತ
ಜಗದ ಜಂಜಡವನೆ ಮರೆತೇ || ಜೈ ವೀರ ಧೀರ ಹನುಮಾ ||

ರೋಮರೋಮದಲಿ ರಾಮನಾಮವ ತುಂಬಿ
ರಾಮನ ಪ್ರಿಯ ಬಂಧುವಾದೆ
ಹೃದಯ ಕಮಲದಲಿ ರಾಮನ ನಿಲಿಸಿ
ನಿಜ ಭಕ್ತಿಗೇ ನೀ ಸಿಂಧುವಾದೆ || ಜೈ ವೀರಧೀರ ಹನುಮಾ ||

ನೀನಿರುವೆಡೆಯೇ ರಾಮನ ವಾಸ
ರಾಮನಾಮವೇ ನಿನ್ನ ಶ್ವಾಸ
ಪೊರೆ ಎನ್ನನು ಮಾರುತಿರಾಯ
ರಾಮಭಕ್ತಿಯ ನೀಡೆನಗೆ ಲವಲೇಶ || ಜೈ ವೀರ ಧೀರ ಹನುಮಾನ್ ||

           ಶೈಲೂ......
[13/12/2019, 7:26 am] Dr. B. N. Shylaja Ramesh: ಕಾಯುತಿಹೆ
**********

ಕಾದು ಕುಳಿತೆನು ನಾನು 
ಎದುರು ನೋಡುತ ನಿನ್ನ ಬರುವನ್ನೇ
ತಡವೇಕೆ ಗೆಳೆಯಾ ಮರೆತುಬಿಟ್ಟೆಯ 
ನೀನು ನನ್ನಿರುವನ್ನೇ

ನೀಬರುವ ದಾರಿಯನು 
ಕಾದುನೋಡುತ್ತಾ 
ಮಂಜಾಯ್ತು ಎನ್ನ ಕಣ್ಣು
ನೆಟ್ಟದೃಷ್ಠಿ ಯಲಿ ನಿನ್ನ ಬಿಂಬವೇ ಕಾಣಲಾಗದು ಏನೂ

ಹಸಿರುಡುಗೆಯುಟ್ಟ 
ಪ್ರಕೃತಿಯು ಕೂಡ ಸ್ಪರ್ಧೆಗಿಳಿದಂತೆ
ತುಂಬಿ ನೀರವ ಶಾಂತಿ ಹೆಚ್ಚಿಸಿದ್ದಾಳೆ 
ಎನ್ನ ಮನದ ಚಿಂತೆ

ಅರೆಬಿರಿದ ಹೂಗಳೂ ಜೊತೆಯಾಗಿದೆ ಎನಗೆ 
ಬೀರುತ್ತ ಸುಗಂಧ
ಕಾದು ಕುಳಿತಂತಿದೆ ದುಂಬಿಗಾಗಿಯೇ 
ತಾ ಸುರಿಸುತ ಮಕರಂದ

ಬೀಸುತಿಹ ತಂಗಾಳಿ ಮುತ್ತಿ ಮೈಮನವ 
ಹೆಚ್ಚಿಸಿದೆ ನಿನ್ನ ನೆನಪ
ಅದರ ಹುನ್ನಾರವೇ ಬೇರೆ ತಂಪೆರೆವಂತೆ ಕಂಡರೂ
 ಎನ್ನ ಸೋಕಲು  ಅದಕೊಂದು ನೆಪ

ನೀಬರುವ ವರೆಗೂ ಏಳಲಾರೆನು 
ಕೂತಲ್ಲಿಯೇ  ಅಚಲ
ಬಂದೇ ಬರುವಿಯೆದು ಹೇಳುತ್ತಿದೆ ಮನವು
 ನಿರ್ಧಾರವಿದು ಪ್ರಭಲ

          ಶೈಲೂ.......

ಚಿತ್ರ ಕೃಪೆ :--
ನಾಗೇಶ್ ರವರು
[13/12/2019, 7:27 am] Dr. B. N. Shylaja Ramesh: ನನ್ನವಳು
********

ನನ್ನವಳೊಂದು ಚಂದನದ ಗೊಂಬೆ
ಮೈಮಾಟವದು  ಅಪ್ಸರೆಯ ತೆರದಿ
ಬಳ್ಳಿ ನಡುವಿನ ಚೆಲುವೆ ಒಲವ ಲತೆಯಿವಳು
ಕುಸುಮ ಕೋಮಲ ಬಾಲೆ
ಗಾಂಭೀರ್ಯ ನಡೆಯವಳು 
ಸವಿಮಾತಿನರಗಿಣಿ   ಸ್ವರವೋ ಕೋಗಿಲೆಯ ಇಂಪು  ಸದ್ಗುಣಗಳ ಗಣಿ  ಇವಳೆನ್ನ ಕಣ್ಮಣಿ

ನನ್ನವಳು  ಪ್ರಕೃತಿಯ ತೆರದಿ
ಮುಖವು ಕೆಂದಾವರೆಯು ಹುಬ್ಬು ಇಂದ್ರಾಚಾಪ
ಮೀನು ಹೊರಳಿದಂತೆ ಚಂಚಲತೆಯ ನಯನ
ಕೆನ್ನೆ ಸೇಬನು ಕಚ್ಚಲಲ್ಲೇ ಗಿಣಿ ಮೂಗು
ತೊಂಡೆ ತುಟಿಗಳ ಒಳಗೆ ದಾಳಿಂಬೆ ಪಂಕ್ತಿ
ಹಾಲ್ಗಲ್ಲದ ಚೆಲುವೆ ನಕ್ಕರಲ್ಲೇ ಗುಳಿಕೆನ್ನೆ
ಅಲ್ಲಿ ಬಿದ್ದವ ನಾ ಮೇಲೆಳಲೇ ಇಲ್ಲ

ನನ್ನವಳೊಂದು ವಿಸ್ಮಯದ ಲೋಕ
ನಗೆಯು ಬೆಳದಿಂಗಳಂತೆ ಕೋಪ ಅಗ್ನಿತಾಪ
ಒಲವ ಸೋನೆಯ ನಡುನಡುವೆ
ಗುಡುಗು ಸಿಡಿಲಬ್ಬರದ ದ್ವನಿ
ಬೆಳ್ಳಿಮೋಡಗಳ ನಡುವೆ
ಕವಿದಂತೆ  ಕಾರ್ಮೋಡ
ಸಂತಸದ ನಗೆ ಮಿಂಚಿನಡಿಯಲ್ಲೇ ಹುಸಿಮುನಿಸ ಭಾವ
ಎಲ್ಲಿಂದಲೋ ಭೋರ್ಗರೆದು ದುಮುಕುತ್ತಿದೆ ಬಿರುಮಳೆಯ ಕಂಬನಿ
ಇದ ಕಂಡು ನಾನಾದೆ ಮೂಕ ವಿಸ್ಮಿತ

            ಶೈಲೂ.......
[17/12/2019, 8:13 am] Dr. B. N. Shylaja Ramesh: ಕೈ ಹಿಡಿದು ನಡೆಸು
****************

ಚಿಂತೆಯ ಪಥದೊಳಗೆ
ಮನ ಅಲೆದು ನಡೆದಿರಲು
ಹೇಗೆ ತಲುಪಲಿ ತಂದೆ
ಗುರಿಯ ಕಡೆಗೆ

ಜೀವನದ ಕಡಲೊಳಗೆ
ಮುಳುಗಿ ಹೋಗಿಹ ನನಗೆ
ತೋರು ದಾರಿಯ
ನಡೆಸು ಮುಳುಗದಂತೆ

ತೀರಕಾಣದ ಕಡಲ
ಬಳಸುದಾರಿಯಲಿ 
ಅಲೆಯುತಿರುವೆ
ದಿಕ್ಕುತಪ್ಪಿದಂತೆ

ಗಾಢಾಂಧಕಾರದ ಕಡಲ
ಹಾದಿಯ  ನಡುವೆ
ತೋರಿ ದೀವಟಿಗೆಯ 
ನಡೆಸು ದಾರಿ ತಪ್ಪದಂತೆ

ಇಲ್ಲಿ ನಾನಲೆದು ನಡೆವಾಗ
ನೋವಿನಲಿ ಮಿಡುಕಿದರೆ
ತೋರು ಕರುಣೆಯ ಕಾಂತಿ
ನೀ ಎನ್ನ ಮರೆಯದಂತೆ

ನನ್ನಂತರಂಗದಲಿ
ಚಿರವಾಗಿ ನೆಲೆನಿಂತು
ತೋರು ಸರಿ ದಾರಿಯ
ದಿಕ್ಸೂಚಿ ಯಂತೆ

ಚಿರ ಮಧುರ ಕಾಂತಿಯಲಿ
ಸರಿ ದಾರಿ ಕಂಡಾಗ
ಸೇರುವೆನು ಗುರಿಯೆಡೆಗೆ
ದಾರಿ ತಪ್ಪದಂತೆ

ಕೈಹಿಡಿದು ನಡೆಸೆನ್ನ
ನಂಬಿರುವೆ  ನಾ ನಿನ್ನ
ಅಪ್ಪಿಕೊ ಎನ್ನ ನೀ
ಹೆತ್ತ ತಾಯಿಯಂತೆ

          ಶೈಲೂ.......
[17/12/2019, 8:16 am] Dr. B. N. Shylaja Ramesh: ಮೂಢನಂಬಿಕೆ
*************

ತನ್ನದೇ ನೆರಳಿಗೂ ಹೆದರುವ
ಪುಕ್ಕುಲು ಸ್ವಭಾವದ ಮನ
ನಿರಂತರ ಅವ್ಯಕ್ತ ಭಯಭೀತ
ತನ್ನವನತಿಗೆ ತಾನೇ ಕಾರಣ

ಬೀಸುಗಾಳಿಗೆ ದೀಪವಾರಿದರೂ ಸರಿ
ಬಾಳೇ ಕತ್ತಲಾದೀತೆಂಬ ಮೂಢಭಯ
ದಾರಿಗಡ್ಡ ಬಂದರಾಯ್ತು ಬೆಕ್ಕು
ಅಪಶಕುನ, ನಿಸ್ತೇಜ ಬದುಕು

ಮಾತಿನ ಮಧ್ಯದಲ್ಲೊಂದು ಸೀನು
ಕಾರ್ಯವಿಳಂಬದ ಗೋಣು
ಎದುರಾದರಾಯ್ತು ಖಾಲಿ ಕೊಡ
ಅಪಶಕುನವಂತೆ ಕಾರ್ಯ ಜಡ

ಹಲ್ಲಿ ನುಡಿಯಲು ಶಕುನ
ಕಣ್ಣದುರಿದರೆ ಸ್ಥಬ್ದ ಸಂಚಲನ
ಎಲ್ಲಕ್ಕೊಂದೊಂದು ಕಿಡುನುಡಿ
ಮೂಢಾಚಾರಣೆಗೆ ಮುನ್ನುಡಿ

ಮನಹೊಕ್ಕು ಸುಮ್ಮನೆ ಕೊರೆತ
ಕಾರ್ಯವಾದರೆ ಅಹಿತ
ಸರಿ ತಪ್ಪುಗಳಲಿ ಅನುಮಾನ
ಮೌಢ್ಯ ಆಚರಣೆಯಲ್ಲಿ ಮನ

ಸರಳ ನಿವಾರಣೆ ಮಂತ್ರ
ಮೆಣಸು ನಿಂಬೆಯ ಪಾತ್ರ
ಮಾಂತ್ರಿಕ ಸಲಹಾ ಸೂತ್ರ
ದೃಷ್ಟಿ ಗೊಂಬೆ ಮಹತ್ತರ ಗಾತ್ರ

ಸರಿತಪ್ಪುಗಳರಿವಿಲ್ಲ 
ಮೌಢ್ಯಕ್ಕೆ ಮಿತಿಯಿಲ್ಲ
ಆಚರಣೆಯಲೂ ಗೋಜಲು
ಬಗೆಹರಿದೀತೆ ಮನದಳಲು

ಜ್ಞಾನವೋ ಅಜ್ಞಾನವೋ ನಂಬಿಕೆ
ಸರಿತಪ್ಪುಗಳ ಜಿಜ್ಞಾಸೆ ಮನಕೆ
ಅನಿಸಿಕೆಗನುಸಾರ ನಡೆಯಲಿ ಬಿಡಿ
ಸಂಕಷ್ಟವರಿದು ಸಿಕ್ಕರಷ್ಟೇ ಸಾಕು ನೆಮ್ಮದಿ

                 ಶೈಲೂ......
[17/12/2019, 12:25 pm] Dr. B. N. Shylaja Ramesh: ಕನ್ನಡಿಯ ಎದುರು ನಾ ನಿಂತಾಗ ##
****************************

ಕನ್ನಡಿಯ ಎದುರು ನಾ ನಿಂತಾಗಲೆಲ್ಲಾ
ಉಕ್ಕಿಬರುವುದು ಅಭಿಮಾನ ಕನ್ನಡಿಯ ಮೇಲೆ
ಬಹು ಪರಾಕ್ ನುಡಿವ ಭಟ್ಟಂಗಿಯಲ್ಲ..!!
ಸೀದಾ ಸಾದಾ ತೋರುವುದು ನಿಜದ ನೆಲೆ

ಬಹುಶಃ ಜಗದಲ್ಲಿ ಇದೊಂದೇ ಇರಬೇಕು
ಕಂಡದ್ದನ್ನು ಕಂಡಂತೆಯೇ ತೋರುವ ಭೂಪ
ಮಿಥ್ಯಕಂತೂ ತಾವಿಲ್ಲ ಅದಕ್ಕೇ ಇರಬೇಕು
ಶುಭಕಾರ್ಯಗಳಲಿ ಕಳಶ ಕನ್ನಡಿಯ ಪ್ರತಾಪ

ಸತ್ಯ ಹರಿಶ್ಚಂದ್ರನ ವಂಶದ ತುಂಡೇನೋ
ಸತ್ಯವನ್ನಲ್ಲದೆ ಬೇರೇನೂ ತೋರದು
ಅವರವರ ರೂಪವನ್ನವರಂತೆಯೇ ತೋರಲೆನೋ
ಮನ್ನಣೆಯು ಬಹುಪಾಲು ಈ ಕನ್ನಡಿಯದು

ಅದೆಷ್ಟು ಗರಿಮೆ ಹಿರಿತನವಿದ್ದರೂ ಸರಿ
ಬೇಧವಿಲ್ಲದೆ ನಿಜವ ಮಾರ್ದನಿಸುವುದು ಕನ್ನಡಿ
ಹಮ್ಮು ಬಿಮ್ಮುಗಳಲಿ ಉಬ್ಬಿ ಹೋದರೂ ಸರಿ
ನಿಜರೂಪವನೆ ತೋರಿ ಬರೆಯುವುದು ಮುನ್ನುಡಿ

         ಶೈಲೂ.......
[29/3/2020, 3:28 pm] Dr. B. N. Shylaja Ramesh: ಚಿತ್ರಕಾವ್ಯ##

ಅತ್ತ ಹಸಿರು ಇತ್ತ ನೀರು
ನಡುವೆ ಇದೆ ನಡೆವ ಹಾದಿ
ಮೇಲೆ ತೂಗುವ ಬೆಳ್ಮುಗಿಲು
ಕಲ್ಪವೃಕ್ಷಗಳು ಚಾಮರವ ಬೀಸಿರಲು
ಆಯಾಸವಿರದು ನಡಿಗೆಯಲಿ
ಏನಿದ್ದರೇನು? ಹಸಿವೆ ನೀಗುವುದಿಲ್ಲ
ತುಂಬಿಸಬೇಕಲ್ಲ ತುತ್ತಿನ ಚೀಲ
ಕಾಯಕವ ಅರಸಿ ಹೊರಟೆ ಬೈಸಿಕಲ್ಲ ಜೊತೆಯಲ್ಲಿ

             ಶೈಲೂ....
[10/5/2020, 11:02 am] Dr. B. N. Shylaja Ramesh: ಅಮ್ಮ ಅಮ್ಮಾ ಎಂದು ಕರೆಯುತಿಹೆನಮ್ಮಾ
ಶಿವರಂಜಿನಿ – ಝಪತಾಲ |

ಅಮ್ಮ ಅಮ್ಮಾ ಎಂದು ಕರೆಯುತಿಹೆನಮ್ಮಾ

ಕರಕರೆಯಿದೆಂದೆನದೆ ಓಡಿ ಬಾರಮ್ಮಾ||

ಯಾರ ದೋಷಗಳೆಷ್ಟು ನನಗೇಕೆ ಬೇಕು।

ನನ್ನ ದೋಷವ ತಿದ್ದಿ ನೀ ಸಲಹಬೇಕು||

ಪಾಪಿಗಳನುದ್ಧರಿಪ ನೀ ದಯಾಸಿಂಧು|

ನೀಡೆನಗೆ ಕರುಣೆಯಿಂ ಆ ಕೃಪೆಯ ಬಿಂದು||

ತಾಯಿ ನೀನಿರುತಿರಲು ತಬ್ಬಲಿಯೆ ನಾನು| ವಾತ್ಸಲ್ಯಸುಧೆಯುಣಿಸಲಾರೆಯಾ ನೀನು||

ಜ್ಞಾನ ಭಕ್ತಿ ವಿವೇಕ ವೈರಾಗ್ಯ ನೀಡು|

ಎನ್ನ ಹೃನ್ಮಂದಿರದಿ ನಿತ್ಯ ನಲಿದಾಡು||

– ಸ್ವಾಮಿ ಪುರುಷೋತ್ತಮಾನಂದ
[10/5/2020, 5:04 pm] Dr. B. N. Shylaja Ramesh: #ಮನಸಿನ_ಕನ್ನಡಿಯಲಿ_ನಿನದೇ_ಬಿಂಬ

ಮನಸಿನ ಕನ್ನಡಿಯಲಿ ನಿನದೇ ಬಿಂಬ
ಆಸೆ ಸಾವಿರ ಹರಡಿದೇ ಮನದ ತುಂಬಾ
ಬಾಳ ಹೊತ್ತಿಗೆಯ ಪುಟಪುಟದಲೂ ಬರೆದೆ
ನವಿರಾದ ಪ್ರೇಮಪತ್ರ ಹೆಸರು ನಿನದೇ

ಬೆಳಗಿದೆ ಗೆಳೆಯ ನಿನ್ನಿಂದಲೇ ಬಾಳು
ನಿನ್ನೆನೆ ನೆನೆಯುತ್ತ ಜೀವ ಸವೇಸಿರಲು
ಸವಿಯುತ್ತ ನಡೆದಿರುವೆ ನವರಾಗ ಹಾಡುತ
ನೀನಿತ್ತ ಸವಿ ನೆನಪ ಬುತ್ತಿಯ  ಸಹಿತ

ಮನದ ಮುಗಿಲ ಬಯಲಲಿ ನೀ ಚಂದಿರ
ಆ ಬೆಳದಿಂಗಳಲ್ಲರಳಿದ ನಾ ಮಂದಾರ
ನಿನ್ನನುರಾಗದ ಅಲೆಯಲ್ಲಿ ನಾ ತೇಲಿ ತೇಲಿ
ಜೀವನವನೆ ಒತ್ತೆಯಿಟ್ಟೆ ನಿನ್ನ ಕೈಲಿ

ಬಾಳ ಪುಟದಲ್ಲಿ ಬರೆದೆ ನೀ ಮುನ್ನುಡಿ
ಸ್ವಚ್ಛ ಸುಂದರವಂತೆ ನನ್ನ ಮನದಕನ್ನಡಿ
ಕನ್ನಡಿಯ ತುಂಬೆಲ್ಲ.ನಲ್ಲ ನಿನದೇ ಬಿಂಬ
ನಿನ್ನ ಹೊಳಪು ಕಣ್ಣಲಿ ಕಂಡೆ ನನ್ನ ಪ್ರತಿಬಿಂಬ

            ಶೈಲೂ......
[14/5/2020, 6:50 pm] Dr. B. N. Shylaja Ramesh: ## ಭಾವ ಗೀತೆ ಸ್ಪರ್ಧೆ ##
******************
ಶೀರ್ಷಿಕೆ:: ಕರ್ತವ್ಯ ಪ್ರಜ್ಞೆ
*******†***********"
ಬಂದಿತಿದೋ ಎಲ್ಲೆಡೆ ಹೊಸ ಮಾರಿಯು
ಕರೋನಾ ಎಂವ ರೋಗದ ಸವಾರಿಯು
ಮದ್ದೇ ಇಲ್ಲದಾ ವ್ಯಾಧಿಯು ಇದಾಗಿಹುದು
ಈ ಕಾಯಿಲೆಯ ಅರಿತು ಯಾರಿಹರು....

ಒಮ್ಮೆಲೆ ನುಗ್ಗಿ ಬಂತಿದು ಇಡೀ ಜಗಕೇ
ಬಡವ ಬಲ್ಲಿದರೆಂದು ಕೂಡ ನೋಡದೇ..
ಎಷ್ಟು ಹಣವಿದ್ದರೂನೂ ಬೆಲೆ ಇಹುದೇ
ದುಡ್ಡಿನಿಂದ ವಾಸಿಯಾಗದಂತ ಕಾಯಿಲೇ..

ಇದನು ಹೊಡೆದಟ್ಟಲೇ ಬೇಕು ನಾವುಗಳು
ಮನೆಯಲಿದ್ದು ಸ್ವಚ್ವತೆಯ ಪಾಲಿಸುತಾ
ಸಾವಿರಾರು  ವೈದ್ಯ..ಆರಕ್ಷಕ..ಯೋಧರು
ನಮಗಾಗಿ ಹಗಲಿರುಳು ಶ್ರಮಿಸುತಿಹರು..

ನಮಿಸುವ ಅವರ ಈ ಹಗಲಿರುಳ ಶ್ರಮಕೆ
ನಿಸ್ವಾರ್ಥ ಸೇವೆಗೈಯುತಿರುವ ಮನಗಳಿಗೆ
ನಮ್ಮ ರಕ್ಷಣೆಗೆ ಟೊಂಕ ಕಟ್ಟಿ ನಿಂತಿಹರು
ಅವರ ಋಣವ ತೀರಿಸಲೆಂತು ನಾವುಗಳು....

ತಮ್ಮಪ್ರಾಣ ಒತ್ತೆಇಟ್ಟಿಹರು ದೇಶ ಕಾಯಲು
ಊಟ ನಿದ್ರೆ ಮನೆಯ ತೊರೆದು ದಿನನಿತ್ಯವು
ರೋಗಿಗಳ ಸೇವೆಗೆ ಮುಡುಪಿಟ್ಟ ದಾದಿಯರು
ದೇಶ ನಗರ ಸ್ವಚ್ಚಗೊಳಿಸುತ ಪೌರ ಕಾರ್ಮಿಕರು...

ಬನ್ನಿ ಕೈ ಜೋಡಿಸೋಣ ಅವರೊಡನೆ ನಾವು
ಅವರಾಕುವ ಕಟ್ಟುಪಾಡುಗಳ ಬೆಂಬಲಿಸುವ
ನಮ್ಮೊಳಿತಿಗೆ ದುಡಿವ ಅವರಿಗೂ ಹಾರೈಸುವ
ಅವರೆಲ್ಲರ ಆರೋಗ್ಯಕೇ ದೇವರನು ಬೇಡುವ.....

***   ಅನಿತ .ಪಿ ಕೆ. ***
[18/5/2020, 4:15 pm] Dr. B. N. Shylaja Ramesh: #ಕಾಡುವ_ನೆನಪು

ತುಂಬಿಕೊಂಡಿದೆ ನೀರ ಹನಿ ಮುತ್ತು ಕಣ್ಣಲ್ಲಿ
ನೋವಿನಿಂದಲ್ಲ ಕಾಡುವ ನಿನ್ನ ನೆನಪ ಹಾವಳಿಯಲ್ಲಿ
ಹನಿ ನೀರ ಧಾರೆ ಸುರಿದು ಸಾಗರದ ತೆರನಂತಿದೆ
ಸಿಲುಕಿಬಿಟ್ಟಿರುವೆ ನೋಡು ನಿನ್ನ ನೆನಪ ಸುಳಿಯಲ್ಲಿ

ಅಪ್ಪಳಿಸುತ್ತಿದೆ ಮನದ ದಡಕ್ಕೆ ತೆರೆಗಳಂತೆ
ತೆರೆತೆರೆಯಾಗಿ ಸುಳಿವ ಸಾಗರದ ಅಲೆಗಳಂತೆ
ಉರುಳುತ್ತಿದೆ ಸಮಯ ನಿನ್ನ ನೆನಪ ಜೊತೆಯಲ್ಲಿ
ಕರಗಿಹೋಗುವ ಮುನ್ನ ನಿಶೆಯಲ್ಲಿ ಬಾ ಬೆಳಕಂತೆ

ನಾಳೆಯ ಭರವಸೆಯಲ್ಲಿ ಬದುಕುತ್ತಿದೆ ಈ ಜೀವಾ
ನಿನ್ನ ನೆನಪ ಸಾಂಗತ್ಯದಲಿ ಸವೆಯುತ್ತಿದೆ ಮನದಭಾವ
ಬಯಕೆಯ ಬನದಲ್ಲಿ ಬದುಕಿನ ಲಯದಲ್ಲಿ ಜೀವನ
ಅಳಿಸಲಾರದ ಹೆಜ್ಜೆಗುರುತಿತ್ತಿದೆ ನವಿರಾದ ನೋವ

ಚಿತ್ತಭಿತ್ತಿಯ ಚಿತ್ತಾರಗಳಲಿ ನಿನ್ನ ರೂಪ ಬಿಡಿಸಿದೆ
ಕನಸುಕಂಗಳ ಕಲ್ಪನೆಯ ಕನ್ನಡಿ ನಿನ್ನಾಕಾರ ಬಿಂಬಿಸಿದೆ
ಅಕ್ಷರಗಳ ರಂಗಿನುಡುಗೆಯ ತೊಡಿಸುವೆ ಬಾರಾ
ಹೆಕ್ಕಿಹೆಕ್ಕಿ ಬರೆದು ಸುಸ್ತಾಗಿ ಮನ ಮುದುಡಿಬಿಟ್ಟಿದೆ.

         ಶೈಲೂ.....
[23/11/2020, 12:48 pm] Dr. B. N. Shylaja Ramesh: ಬರೆಯಲಾಗದ ಕವಿತೆ...😞😞
******************

ಕವಿತೆಯೊಂದ ಬರೆಯಲೆಂದು ಕುಳಿತೆ
ಯಾಕೋ ಕಾಡುತ್ತಿದೆ ಪದಗಳ ಕೊರತೆ
ನಡುಗುವ ಕೈಯಲ್ಲಿ ಹಿಡಿಯಲಾಗದೆ ಲೇಖನಿ
ಯಾಕೋ ತಡವರಿಸಿದೆ ಒಡಲಾಳದ ಒಳದನಿ

ಎಲ್ಲಿ ಹುಡುಕಲಿ ಭಾವನೆಗಳ ಬಿಂಬಿಸುವ
ಸೂಕ್ತ ಪದಗಳ ಅರ್ಥಪೂರ್ಣ ವಾಕ್ಯ
ಹೊರಹೊಮ್ಮಲಾರದ ಭಾವನೆಗಳ ತಾಕಲಾಟದಲಿ
ಯಾಕೋ ಅಪ್ಪಿದೆ ಮನವು ಮೌನದ ಸಖ್ಯ

ಕಳೆಯಿತೆಲ್ಲಿ ಮನಸು ಬರೆಯುವುದೇ ಮರೆತು
ಯೋಚಿಸಿದರೂ ಸಿಗಲಿಲ್ಲ ಪದಗಳ ಥಾಲಿ
ವಿಷಯವಿದೆ ಬಹಳಷ್ಟು ಅರುಹಲಿದೆ ಮುಗಿಲಷ್ಟು
ಯಾಕೋ ಬರೆಯಲಾಗದು ಮನಸೆಲ್ಲ ಖಾಲಿ ಖಾಲಿ

ಎಲ್ಲಿ ಅಡಗಿದೆಯೋ ಪ್ರಾಸ ಭಾವನೆಗಳ ಮಿಡಿತ
ತಡಕಿದಷ್ಟೂ ದೂರ ಕೈಗೆಟುಕದ ನಿಹಾರಿಕೆ
ಮನೆಮಾಡಿತ್ತು ನಿರಾಶೆ ಬರೆಯಲಾಗದ ಹತಾಶೆ
ಯಾಕೋ ಸೊರಗಿದೆ ಲೇಖನಿ ಕವಿತೆಯಿಂದು ಮರೀಚಿಕೆ....😞😞😞

           ಶೈಲೂ......
[23/11/2020, 12:49 pm] Dr. B. N. Shylaja Ramesh: ಕವನ ಸ್ಪರ್ಧೆ##

ಚಿತ್ರಕ್ಕೊಂದು ಕವನ..
ಗೋಧೂಳಿ ಸಮಯ
*****************

ಹಾರುತಿದೆ ಬಾನಾಡಿ ತನ್ನ ಗೂಡನರಸಿ
ಮುಳುಗುತಿಹ ದಿನಕರನೂ ದಿನಚರಿ ಮುಗಿಸಿ
ಅಲ್ಲಲ್ಲಿ ತಾರೆಗಳ ಒಡ್ಡೋಲಗ ಮೇಳ
ಶಶಿಯೊಡನೆ ಬಾನಲ್ಲಿ ಬೆಳಗುವ ವೇಳಾ

ಆಗಸದ ಕೆಂಬಣ್ಣ ಚೆಲುವನು ನೋಡಿ
ಆವರಿಸಿದೆ ಗೆಳೆಯ ನಿನ್ನೊಲವ ಮೋಡಿ
ಆ ಕೆಂಪು ರಂಗಲಿ ಬೆರೆತೆನ್ನ ಮನ
ರಂಗಾಯ್ತು ಕೆನ್ನೆ ನೆನೆದೊಡನೆ ನಿನ್ನ

ಬೇಕೆನಿಸಿದೆ ಗೆಳೆಯ ನಿನ್ನ ಸವಿಮಾತು
ಏಕಾಂತದಿ ಕುಳಿತು  ಈ ಗೋಧೂಳಿ ಹೊತ್ತು
ತಂಗಾಳಿ ತಂಪಲಿ ತನು ಗರಿಬಿಚ್ಚಿ ಎದ್ದು
ಹಾರುತಿದೆ ಹಕ್ಕಿಗಳಂದದಿ ನಿನ್ನ ನೆನಪ ಹೊದ್ದು

ಬಾನಾಡಿ ಹಾಡಿಗೆ ತಲೆದೂಗಿದೆ ಮನ
ನೆನೆಯುತಿದೆ ನಸುನಾಚಿ ನಿನ್ನೊಡನೆ ಕಳೆದಕ್ಷಣ
ಒಲವ ಗೆಳೆಯ ನಿನಗೊಂದು ಹೂ ಮುತ್ತು
ಬಯಕೆಗಳ ಉತ್ತೇಜಿಸುವ ಈ ಗೋಧೂಳಿ ಹೊತ್ತು

             ಶೈಲೂ.......
[23/11/2020, 12:56 pm] Dr. B. N. Shylaja Ramesh: #ದ ಕಾರ ಗುಣಿತಾಕ್ಷರ #

ದೈವಕೆ ನಿವೇದನೆ
**************

ದಣಿವು ಕಾಣುತಿದೆ ಬದುಕಲಿ ದೇವ
ದಾರಿ ಏಕೋ ಕಾಣದಾಗಿದೆ 
ದಿಕ್ಕು ತಪ್ಪಿದ ನಾವೆಯಂತಾಗಿದೆ ಬದುಕು
ದೀನಳಾಗಿ ಬೇಡುತ್ತಿರುವೆ ನಿನ್ನಲಿ
ದುಡಿವ ಚಲವೇಕೋ ಮರೆಯಾಗುತಿದೆ
ದೂಡುವುದು ಹೇಗೆ ಈ ಬದುಕನ್ನು
ದೃಢಚಿತ್ತವಿಲ್ಲದೆ ನರಳುತಿರುವೆ
ದೆವ್ವದ ಮನೆಯಂತಾಗಿದೆ ಮನಸು
ದೇವ ನೀನಲ್ಲದೆ ಗತಿಯಿನ್ನಾರು
ಧೈರ್ಯದಿಂದ ಮುನ್ನುಗ್ಗುವ ಬಲನೀಡು
ದೊರಕಿದಂತೆ ನೀ ಚಿಂತಾಮಣಿ ಯ ತೆರದಲಿ
ದೋಷಗಳೆಲ್ಲ ದೂರೀಕರಿಸು ದಯದಲಿ
ದೌರ್ಜನ್ಯವೆಸಗುವ ಮನ ನೀಡದಿರು ದೌರ್ಬಲ್ಯ ನೀಡದಿರು
ದಂಡವೆರಗುವೆ ನಿನಗೆ ದೇವ
ದುಃಖ ದುಮ್ಮಾನಗಳ ದೂರೀಕರಿಸು

             ಶೈಲೂ......
[26/11/2020, 5:34 pm] Dr. B. N. Shylaja Ramesh: #ಬಯಸಿದ್ದು_ನೂರಾರು_ಸಿಕ್ಕಿದ್ದು_ಅರ್ಧಪಾಲು

ಬಯಕೆಯಿದೆ ಸಾವಿರ
ನೆರವೇರಬೇಕಲ್ಲ ಪೂರಾ
ಆಸೆಯೇನೋ ಬೆಟ್ಟದಷ್ಟು
ಸಿಕ್ಕಬೇಕಲ್ಲ ಬಯಸಿದಷ್ಟು

ನಮ್ಮಿಚ್ಛೆಯಂತಲ್ಲ ಜೀವನ
ನಡೆಯದಿಲ್ಲೇ ನೂ ಕಲ್ಪನ
ನಾವುಒಪ್ಪಿದ್ದೇನೂ ಬಪ್ಪದು
ಅನುಭವಿಸಬೇಕವ ಕೊಟ್ಟುದು

ಆಸೆಪಡುವುದು ಮನದ ಸ್ಥಿತಿ
ಬಯಕೆಗಳಿಗಿರಬೇಕು ಇತಿಮಿತಿ
ಬಯಸಿದ್ದರೆ ನೂರುಪಾಲು
ಸಿಕ್ಕುವುದಷ್ಟೇ ಅರ್ಧಪಾಲು

ಆಗಸಕೆ ಏಣಿ ಹಾಕಿದರೆ
ಆಗಬಹುದೇ ಚಂದ್ರ ಕೈಸೆರೆ
ಬಾನು ಭುವಿಗೆ ಅಂತರವಿದೆ
ಈ ಸತ್ಯ ಅರ್ಥವಾಗಬೇಕಿದೆ

ಆಸೆ ಪಡುವುದು ತಪ್ಪೇನಲ್ಲ
ಅತಿ ಆಸೆ ದುಃಖಕ್ಕೆ ಮೂಲ
ಹಣೆಬರಹದಲ್ಲಿದ್ದಷ್ಟೇ ಫಲ
ಇದನೊಪ್ಪಿಕೊಳ್ಳಬೇಕು ಎಲ್ಲ

         ಶೈಲಜಾ ರಮೇಶ್
[3/1/2021, 6:05 pm] Dr. B. N. Shylaja Ramesh: ನೀ ತಂದ  ಒಲವಿನ ಮುತ್ತಿನೋಲೆ
ಸಂತಸದಿ ಧರಿಸಿದೆ ಕಿವಿಯಲ್ಲಿ
ಕಣ್ಸನ್ನೆಯಲ್ಲೇ ಇತ್ತೆ ಕರೆಯೋಲೆ
ಹೊಳಪು ಝಲಪಿಸಿತೆನ್ನ ಕಣ್ಣಿನಲ್ಲಿ

ನೀ ಪ್ರೀತಿಯಿಂದತ್ತ ಉಡುಗೊರೆ
ಬೆಲೆ ಕಟ್ಟಲಾಗದ  ಅನರ್ಘ್ಯ ರತ್ನ
ಅದೆಷ್ಟು ಆಸೆಯಿಂದಲಿ ನೀ ಕೊಟ್ಟೆ
ಮಾಡುವೆ ಜತನದಲಿ ಕಾಪಿಡುವ ಯತ್ನ

ನಾ ಧರಿಸಿರುವೆ ನೋಡು ನಲ್ಲ
ಚಂದದಿ ತೂಗುತಿದೆ ಓಲೆ ಕಿವಿಯಲ್ಲಿ
ನಿನ್ನಂತರಂಗದ ಪ್ರೀತಿಯ ಕೂಗು
ಪಿಸುಗುಡುತ್ತಿದೆ ಕಿವಿಯ ಬಳಿಯಲ್ಲಿ

ಹೊಳೆವ ಮುತ್ತುಗಳ ಹೆಕ್ಕಿ ಹೆಕ್ಕಿ
ಅದಮ್ಯ ಪ್ರೀತಿಯ ಬಂಧನದೆ ಬಿಗಿಸಿದೆ
ಬಿಡಿಸಲಾರದ  ಬಾಂಧವ್ಯಕ್ಕಿದು ನಂಟು
ಕಿವಿಯೋಲೆ ಒಲವಿನೋಲೆ ಬರೆಸಿದೆ..!
[4/1/2021, 4:13 pm] Dr. B. N. Shylaja Ramesh: #ಜಡೆಕವನ

#ಅನುರಾಗದ_ಅಕ್ಷತೆ

ಒಲಿದ ಮನಗಳ ಹೃದಯ ಬಂಧನ
ಬಂಧವಿದು ಚಂದ ಮಾಂಗಲ್ಯ ಬಂಧನ
ಬಂಧನವೇ ಒಲುದ ಜೀವಗಳ ಬೆಸುಗೆಗೆ
ಬೆಸುಗೆ ಇದು ಮುಂದಿನ ಬಾಳ ಒಸಗೆಗೆ
ಒಸಗೆಗೆ ಸಂಭ್ರಮ ಈ ಹಸಿರು ಚಪ್ಪರ
ಚಪ್ಪರದಲ್ಲಿ ಮದುವೆಯ ಸಡಗರ
ಸಡಗರಕೆ ಕಾದಿಹುದು ಎರಡು ಮನವು
ಮನವು ಕಾತರಿಸುತ್ತಿದೆ ಒಂದಾಗಲು ತನುವು
ತನುವಲ್ಲಿ ಪುಳಕ ಎಂಥದೋ ರೋಮಾಂಚನ
ರೋಮಾಂಚನದ ಜೊತೆಗೆ ಏಕೋ ಕಂಪನ
ಕಂಪನ ಎನಿತು ನಲ್ಲ ನೀ ಕೈ ಹಿಡಿದಾಗ
ಕೈಹಿಡಿದು ನಡೆದು ಸಪ್ತಪದಿ ತುಳಿದಾಗ
ತುಳಿದೆ ನಾ ನಿನ್ನೊಲವಿನರಮನೆಯ ಬಾಗಿಲು
ಬಾಗಿಲಿದು ನಮ್ಮ ಪ್ರೇಮದುಯ್ಯಾಲೆ ತೂಗಲು
ತೂಗುವೆ ವಾತ್ಸಲ್ಯದ ಮಡಿಲಲ್ಲಿ ನಮ್ಮ ಕಂದನ
ಕಂದನ ಕಾಣಲು ಬೇಕು ವಿವಾಹ ಬಂಧನ
ಬಾಂಧವ್ಯ ವಿವಾಹದೊಡನಾದರೆ ಮಾನ್ಯತೆ
ಮಾನ್ಯವಾಗಲಿರಬೇಕು ಅನುರಾಗದ ಅಕ್ಷತೆ..!

          ಶೈಲಜಾ ರಮೇಶ್
[9/1/2021, 10:08 pm] Dr. B. N. Shylaja Ramesh: ನಮಸ್ತೇ ಯುಗಾದಿ ಬಳಗಕ್ಕೆ🙏🙏🙏
ಇಂದಿಗೆ ಯುಗಾದಿಯ, ಯುಗಾರಂಭ ಆಗಿ ಒಂದು ವರ್ಷವಾಯ್ತು ಅಂತ ಹೇಳೋಕ್ಕೆ ಸಂತಸ ಆಗ್ತಾ ಇದೆ.
        ಜನವರಿ 10,  2020 ರ ಶುಕ್ರವಾರ ಹುಣ್ಣಿಮೆ ದಿನ ಜನ್ಮತಾಳಿದ ಯುಗಾದಿ, ಹುಣ್ಣಿಮೆಯ ತರಹವೇ ಬೆಳದಿಂಗಳು ಚೆಲ್ಲಿದ್ದು ಸುಳ್ಳಲ್ಲ.  
        ಅತೀವ ಸಾಹಿತ್ಯಾಸಕ್ತಿ, ಬರಹಗಾರರನ್ನು ಬೆಂಬಲಿಸುವ ಮನಸ್ಸು,  ಸಾಹಿತ್ಯ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕೆಂಬ  ನಿಟ್ಟಿನಲ್ಲಿ ಅದಮ್ಯ ಉತ್ಸಾಹ, ನಿರೀಕ್ಷೆಯಿಂದ ಈ ಬಳಗವನ್ನು ಸ್ಥಾಪಿಸಲಾಗಿದೆ.
          ಬಳಗದ ಸಂಸ್ಥಾಪಕರೂ, ಯುವ ಸಾಹಿತಿಗಳೂ, ಅದಕ್ಕಿಂತ ಹೆಚ್ಚಾಗಿ ಒಂದೊಳ್ಳೆ ಸುಂದರ ಮನಸ್ಸಿರುವ ಉತ್ಸಾಹಿ ತರುಣ ನಮ್ಮ ನಿಮ್ಮೆಲ್ಲರ ಮೆಚ್ಚಿನ ಶ್ರೀಮಾನ್ #ಶ್ರೀನಾಗ್ ರವರ ಕನಸಿನ ಕೂಸಾದ ಈ ಯುಗಾದಿ ಎಲ್ಲೆಡೆ ಜನಮನ್ನಣೆ ಗಳಿಸಲು ಅವರ ಅವಿರತ ಶ್ರಮವೇ ಕಾರಣ. ಎಲ್ಲರನ್ನೂ ಹುರಿದುಂಬಿಸುವ ಅವರ ರೀತಿ, ಅನ್ಯಾಯ ಕಂಡಾಗ ಅವರ ಮಾತಿನ ಚಾಟಿ... ಬಳಗವನ್ನು ಸಮರ್ಥವಾಗಿ ಮುನ್ನಡೆಸಲು ಕಾರಣವಾಯ್ತು. ಜೊತೆಗೆ, ಬಳಗ ಸ್ಥಾಪನೆಗೊಂಡ ದಿನದಿಂದಲೂ, ಯುಗಾದಿ ಮನೆಗೆ ಹಿರಿಯಕ್ಕನಂತೆ  ತನುಮನವನ್ನು ಧಾರೆಯೆರೆದು, ಅತೀವ ವಾತ್ಸಲ್ಯದಿಂದ ಎಲ್ಲ ನಿರ್ವಾಹಕರನ್ನೂ, ಬಳಗದ ಸದಸ್ಯರನ್ನೂ ತನ್ನ ಒಡಹುಟ್ಟಿದವರಂತೆ ಕಾಣುತ್ತಾ ಬಳಗ ಮುನ್ನಡೆಯಲು ಕಾರಣರಾಗಿದ್ದು ನಮ್ಮೆಲ್ಲರ ಅಚ್ಚುಮೆಚ್ಚಿನ ವೀಣಕ್ಕ (#ವೀಣಾ_ಉಮೇಶ್) ಇವರು ಯುಗಾದಿಯನ್ನು ತನ್ನ ಮನೆಗಿಂತಲೂ ಹೆಚ್ಚು ಪ್ರೀತಿಸುತ್ತಿರುವುದು ಸುಳ್ಳಲ್ಲ. ಇವರ ದೆಸೆಯಿಂದಲೇ ಬಳಗದಲ್ಲಿ ಸೌಹಾರ್ದ ವಾತಾವರಣ ಇರುವುದು, ತಮ್ಮ ಹದಗೆಟ್ಟ ಅನಾರೋಗ್ಯದಲ್ಲೂ ಅದೆಷ್ಟು ಜವಾಬ್ದಾರಿ ಹೊತ್ತು ಕೆಲಸ ಮಾಡ್ತಿದ್ದಾರೆ ಎಂದರೆ.... ಹೇಳಲು ಪದಗಳಿಲ್ಲ ..ಇವರು ಯುಗಾದಿಯ ಆಧಾರಸ್ಥಂಭ ಎಂದರೆ ತಪ್ಪಾಗಲಾರದು.

     ಈ ಬಳಗ ಸಮರ್ಥವಾಗಿ ಮುನ್ನಡೆಯಲು ಸಮರ್ಥವಾಗಿ ತೊಡಗಿಸಿಕೊಂಡವರಲ್ಲಿ ನಿರ್ವಾಹಕಿ ಶ್ರೀಮತಿ #ಪೂರ್ಣಿಮಾ_ಉಡುಪ ರ ಪಾತ್ರ ಶ್ಲಾಘನೀಯವಾದದ್ದು. #ಯುಗಾದಿ_ಮಾಣಿಕ್ಯ, ಸದಸ್ಯರ ಹಾಗೂ ನಿರ್ವಾಹಕರ ಆಯ್ದ ಕವನಗಳನ್ನು ಸುಶ್ರಾವ್ಯವಾಗಿ ಹಾಡಿಸಿ ವಿಡಿಯೋ ಮಾಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

      ಸದಾ ಲವಲವಿಕೆಯ ನವತರುಣಿ #ಚಂಪಕಾ_ರಾಘವೇಂದ್ರ ರವರೂ ಸಹ ನಿರ್ವಾಹಕಿಯಾಗಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವೀಯಾಗಿದ್ದಾರೆ.
  ಇತರ ನಿರ್ವಾಹಕರಾಗಿದ್ದ, #ಕೃಪಾ_ಗೋಖಲೆ  ತಮ್ಮ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸಿದರಾದರೂ,  ತಮ್ಮ ಕೆಲಸಗಳ ಒತ್ತಡದಿಂದ ನಿರ್ವಾಹಕರಾಗಿ ಮುಂದುವರಿಯಲು ಸಾಧ್ಯವಾಗಲಿಲ್ಲ ಎಂಬುದು ವಿಷಾದನೀಯ..!

           ಪ್ರಸ್ತುತ ...#ಸುಜಾತ_ಭಟ್ ರವರ ಕಾರ್ಯವೈಖರಿ ತುಂಬಾ ಮೆಚ್ಚುವಂಥದ್ದು. ಎಲ್ಲರ ಅನುಪಸ್ಥಿತಿಯಲ್ಲೂ ಎಲ್ಲರ ಜವಾಬ್ದಾರಿಯನ್ನು ತನ್ನ ಹೆಗಲಮೇಲೇ  ಹೊತ್ತು ತುಂಬಾ ಅಚ್ಚುಕಟ್ಟಾಗಿ ನಿಭಾಯಿಸುವ ಪರಿ ಅತ್ಯಂತ ಶ್ಲಾಘನೀಯ. 
 
    ಫೋಟೋಗ್ರಫಿ ವಿಭಾಗದಲ್ಲಿ ಶ್ರೀಮಾನ್#ತೀರ್ಥರಾಜ್_ಮೇಸ್ತ ರವರೂ ಸಹ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ.

   ಸಮಯಕ್ಕೆ ತಕ್ಕಹಾಗೆ ಸಲಹೆಗಳನ್ನಿತ್ತು, ಯುಗಾದಿಯನ್ನು ಮುನ್ನಡೆಸುವಲ್ಲಿ ಕೈಜೋಡಿಸಿದವರು ಶ್ರೀಮತಿ#ವಿನುತಾ_ಥಾಮಸ್.
        ಎಲ್ಲ ನಿರ್ವಾಹಕರೂ, ತಮ್ಮ ತಮ್ಮ ವೈಯಕ್ತಿಕ ಒತ್ತಡಗಳನ್ನೂ ಬದಿಗೊತ್ತಿ ಯುಗಾದಿಯಲ್ಲಿ ತೊಡಗಿಸಿಕೊಂಡು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಎಂಬುದೇ ಸಂತಸ.

         ಯುಗಾದಿಯು ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ, #ಭಕ್ತಿಗೀತೆ_ಸ್ಪರ್ಧೆ #ಚಿತ್ರಕಾವ್ಯ,.#ಚುಟುಕು, #ಛಾಯಾಚಿತ್ರಸ್ಪರ್ಧೆ, #ಯುಗಾದಿ_ಮಾಣಿಕ್ಯ, #ನಾನಾ_ನೀನಾ, #IPL ಮಾದರಿಯ ಸ್ಪರ್ಧೆ #ಕಥಾಸ್ಪರ್ಧೆ... ಈ ತರಹ ಹಲವಾರು ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಯುಗಾದಿ ರೂವಾರಿ #ಶ್ರೀನಾಗ್ ರವರ ಪಾತ್ರವೇ ಹಿರಿದು. 

          ಇಷ್ಟೆಲ್ಲಾ ಸ್ಪರ್ಧೆಗಳು ಸಂಪನ್ನವಾಗಿದ್ದು.... ... ಯುಗಾದಿಯ ಅತ್ಯಂತ ಪ್ರಮುಖ ಭಾಗವಾದ ಸದಸ್ಯರಾದ ನಿಮ್ಮಿಂದಲೇ ಸ್ನೇಹಿತರೇ...!
       ಒಂದು ಬಳಗವನ್ನು ಕಟ್ಟಿ ಬೆಳೆಸುವಲ್ಲಿ ಸಂಸ್ಥಾಪಕರು, ನಿರ್ವಾಹಕರ ಪಾತ್ರಕ್ಕಿಂತಲೂ ಪ್ರಮುಖವಾದದ್ದು... ಸಂಪೂರ್ಣವಾಗಿ ತೊಡಗಿಸಿಕೊಂಡ  ನೀವುಗಳೆ ಸ್ನೇಹಿತರೇ....  ಯುಗಾದಿಯ ಆಸ್ತಿ ಅಂದ್ರೆ ನೀವುಗಳೇ...!  ಅನೇಕ ಹಿರಿಯ, ಕಿರಿಯ ಕವಿ_ಕವಯಿತ್ರಿಯರೆಂಬ ಸುವಾಸಿತ, ಸುಂದರ ಹೂಗಳ ಅಂದದ ತೋಟ ಈ ಯುಗಾದಿ. 
           ಯುಗಾದಿಯಲ್ಲರಳಿದ  ಸುಂದರ ಹೂಗಳ ಘಮ ಹಲವರ ಮನಸೆಳೆದಿದ್ದಂತೂ ನಿಜ,  ಗುಣಮಟ್ಟದ  ಸಾಹಿತ್ಯಕ್ಕೆ ಅತೀ ಹೆಚ್ಚಿನ ಮನ್ನಣೆ ದೊರಕಿಸಿಕೊಡುವಲ್ಲಿ ಯುಗಾದಿ ಮುಂಚೂಣಿಯಲ್ಲಿದೆ ಎಂದು ಹೇಳಲು ಸಂತಸವಾಗುತ್ತಿದೆ.  ಯುವ ಬರಹಗಾರರನ್ನು ಪ್ರೋತ್ಸಾಹಿಸಿ, ಗುರುತಿಸಿ, ಅವರನ್ನೂ ಮುಂಚೂಣಿಗೆ ತರುವ ಯತ್ನ ಯುಗಾದಿ ಮಾಡುತ್ತಿದೆ ಎಂಬ ಹೆಮ್ಮೆ ನಮಗಿದೆ.  ಇಲ್ಲಿ ಬೆಳಕಿಗೆ ಬಂದ ಬರಹಗಾರರು, ಎಲ್ಲಾ ಸಾಹಿತ್ಯ ಗುಂಪುಗಳಲ್ಲೂ  ಮನ್ನಣೆ ಪಡೆಯುತ್ತಿದ್ದಾರೆ ಎಂಬುದು ಮತ್ತೂ ಸಂತಸದ ವಿಚಾರ.

       ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು, ಸಾಹಿತ್ಯವನ್ನೇ ಉಸಿರಾಗಿಸಿಕೊಂಡವರನ್ನು ಗುರುತಿಸಿ ಯುಗಾದಿಯು #ಯುಗಾದಿ_ಮಾಣಿಕ್ಯ ಬಿರುದನ್ನು ಕೊಟ್ಟು ಗೌರವಿಸಿದೆ. 

       ಸ್ಪರ್ಧೆಗಳಲ್ಲಿ ವಿಜೇತರಾಗಿ, ತಮ್ಮ ಬರಹದ ಮೂಲಕ ಜನಮನ್ನಣೆ ಪಡೆದವರನ್ನು #ಕವನಶ್ರೀ ಬಿರುದನ್ನು ಕೊಟ್ಟು ಗೌರವಿಸಿದೆ.  ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅತ್ಯಾಕರ್ಷಕ  ಪ್ರಶಸ್ತಿ ಪತ್ರವನ್ನು ಕೊಟ್ಟು ಪುರಸ್ಕರಿಸಿದೆ.

          ಯುಗಾದಿ  ಒಂದು ವರ್ಷದ ಅಂಬೆಗಾಲಿಡುತ್ತಿರುವ ಮಗುವಾದರೂ  ಎಲ್ಲಾ ಬಳಗಗಳ ಮದ್ಯೆ ಮಿಂಚುತ್ತಿರುವುದು  ಯುಗಾದಿಯ ರೂವಾರಿ, ನಿರ್ವಾಹಕರ ಜೊತೆ ಜೊತೆಗೆ ಅದಮ್ಯ ಉತ್ಸಾಹದಿಂದ ಭಾಗವಹಿಸಿ ಮುನ್ನಡೆಸುತ್ತಿರುವ ನಿಮ್ಮಂತಹ ಉತ್ಸಾಹಿ ಸದಸ್ಯರುಗಳೇ ಕಾರಣ.

      ಅಂಬೆಗಾಲ ನಡಿಗೆಯಿಂದ ದಾಪುಗಾಲು ನಡಿಗೆಗೆ ಸಾಗಿಸಲು ನಿಮ್ಮಗಳ ಸಹಕಾರ ಅತ್ಯಂತ ಮುಖ್ಯ... ನಮ್ಮ ಪ್ರತಿನಡೆಗೂ ನಿಮ್ಮ ಸಾಥ್ ಇರುತ್ತೆ ಅಲ್ವಾ ಸ್ನೇಹಿತರೇ...

    ನಮ್ಮ ಕನಸಿನ ಯುಗಾದಿ... ಬಾಳಲಿ... ಬೆಳಗಲಿ🙏🙏


             ನಿಮ್ಮ
                       ಶೈಲೂ....
[18/2/2021, 3:16 pm] Dr. B. N. Shylaja Ramesh: ಆಕೆ ಮೂರನೆಯ ಬಾರಿಗೆ ವೈದ್ಯರ ಬಳಿ ಹೋದಳು.ವೈದ್ಯರು ಆಕೆಯ ಆರೋಗ್ಯದ ವರದಿಯ ಫೈಲ್ ನೋಡಿ.......   ಆಕೆಯ ಮುಖವನ್ನೊಮ್ಮೆ ನೋಡಿ....... ಮತ್ತೆ..?  ಇದೇನಿದು?  ಇನ್ನು ಬೇಡ ಅಂತ ಹೇಳಿದ್ದೇನಲ್ಲ... ಯಾಕೆ ನಿಮಗೆ ಆರೋಗ್ಯದ ಕಾಳಜಿ ಇಲ್ವಾ? ಮಕ್ಕಳಿಗಾಗಿಯಾದರೂ ಬದುಕಬೇಕು ಅನ್ನುವ ಆಸೆ ಇಲ್ವಾ? ಎಂದರು...
         ಆಕೆ ಕಣ್ಣ ತುಂಬಾ ನೀರು ತುಂಬಿಕೊಂಡು...  ಇನ್ನೇನು.ಮಾಡ್ಲಿ ಡಾಕ್ಟ್ರೇ... ಜೀವನ ಬೇಕು ಅಂದ್ರೆ,  ನನ್ನ ತಂದೆ ತಾಯಿ ನೆಮ್ಮದಿಯಾಗಿರ್ಬೇಕು ಅಂದ್ರೆ ನಾ ಒಂದು ಗಂಡು ಮಗುವನ್ನು ಹಡೆಯಲೇ ಬೇಕು... ಇಲ್ಲಾಂದ್ರೆ  ಮೂರು ಹೆಣ್ಣುಮಕ್ಕಳೊಂದಿಗೆ ನಾನು ತವರುಮನೆ ಸೇರಬೇಕಾಗುತ್ತೆ...   ನನ್ನ ಹಿಂದಿನ ಇನ್ನೂ ಇಬ್ಬರು ತಂಗಿಯರ ಮದುವೆ,  ಅವರ ಭವಿಷ್ಯಕ್ಕಾಗಿಯಾದ್ರೂ ನಾನು ಇಲ್ಲೇ ಇರಬೇಕು.... ಇಲ್ಲೇ ಇರಬೇಕು ಅಂದ್ರೆ... ನಾ ಹೆರಲೇ ಬೇಕು ಅಂದಳು.
          ರೇಣುಕಾ...ಮಂಜು ದಂಪತಿಗಳಿಗೆ  ಮೂರು ಹೆಣ್ಣುಮಕ್ಕಳು   ಹುಟ್ಟಿದಾಗ  ಅಧೀರಳಾದವಳು ರೇಣುಕಾ... ಪ್ರತಿ ಬಾರಿ ಹೆರಿಗೆಯನಂತರವೂ  ಅತೀವ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಳು... ಕಾರಣ ತನ್ನ ಅತ್ತೆ ಮಾವ ಹಾಗೂ ಗಂಡನ ದೆಸೆಯಿಂದ,  ವಂಶೋದ್ಧಾರಕ ಮಗ ಬೇಕೇ ಬೇಕೆಂಬ ಹಠದಿಂದ ರೇಣುಕಾ ಮೂರು ಹೆಣ್ಣು ಮಕ್ಕಳನ್ನ ಹಡೆಯಬೇಕಾಯ್ತು... ಮೊದಲ ಮಗು ಹೆಣ್ಣಾದಾಗ,  ಅಸಮಾಧಾನ ವಿದ್ದರೂ ಎರಡನೆಯದು ಗಂಡಾಗಬಹುದು ಎಂಬ ನಿರೀಕ್ಷೆಯಲ್ಲಿ ಅಷ್ಟಾಗಿ ಕಿರುಕಳ ಇರಲಿಲ್ಲ... ಆದರೆ ಮಗುವನ್ನು ಅನಾದರ ಮಾಡುತ್ತಿದ್ದ ಮನೆಯವರ ಬಗ್ಗೆ ಬೇಸರವಿವಿಧದ್ದರೂ ತೋರಿಸಿಕೊಳ್ಳುತ್ತಿರಲಿಲ್ಲ.....  ತನ್ನ ತಂದೆ ತಾಯಿಗೂ ಹೆಣ್ಣು ಸಂತಾನವೇ ... ಮೂರು ಹೆಣ್ಣುಗಳಲ್ಲಿ ಮೊದಲನೆಯ ಮಗಳಾದ ರೇಣುಕಾ ... ಬುದ್ಧಿವಂತೆ, ಬಡತನವಿದ್ದರೂ,  ಉತ್ತಮ ವಿದ್ಯೆ ಕೊಡಿಸಿದ್ದ ಅನಂತರಾಯರ ಮುದ್ದು ಮಗಳಾಗಿ,  ಸಂಸಾರದ ಭಾರವನ್ನು ಹೊತ್ತು ತಂದೆಗೆ ಆಸರೆಯಾಗಿ ನಿಂತಿದ್ದಳು,   ಇವಳ ಹಿಂದೆ ಇಬ್ಬರು ಹೆಣ್ಣು ಮಕ್ಕಳಿದ್ದ ಕಾರಣ  ಆದಷ್ಟು ಬೇಗ ತಮ್ಮ ಜಾವಾಬ್ದಾರಿಯನ್ನ  ಕಳೆದು ಕೊಳ್ಳಬೇಕೆಂದು ರೇಣುಕಾಗೆ ಬೇಗನೆ ಮದುವೆ ಮಾಡಿ ಗಂಡನ.ಮನೆಗೆ ಕಳುಹಿಸಿದ್ದರು.  ಅತೀ ಆಸೆ ಬುರುಕರಾದ  ರೇಣುಕಾ ಗಂಡನ ಮನೆಯವರ .ಆಸೆ ತಣಿಸಲು ತನ್ನ ಉಳಿದೆರಡು ಹೆಣ್ಣುಮಕ್ಕಳ .ಮದುವೆಗಾಗಿ ಇಟ್ಟಿದ್ದ ಹಣವನ್ನೆಲ್ಲಾ ವರದಕ್ಷಿಣೆ ಯಾಗಿ ಕೊಟ್ಟರೂ ಮತ್ತೂ ಹಣಕ್ಕಾಗಿ ಪೀಡಿಸುತ್ತಿದ್ದ  ಬೀಗರನ್ನು ತಣಿಸಲಾರದೆ ಕಂಗೆಟ್ಟಿದ್ದರು ಅನಂತರಾಯರು,  ಸಾಲದ್ದಕ್ಕೆ ರೇಣುಕಾ ಮೂರೂ ಹೆಣ್ಣುಮಕ್ಕಳನ್ನು ಹಡೆದ ಮೇಲಂತೂ ರೇಣುಕಾಗೆ ಚಿತ್ರಹಿಂಸೆ ಶುರುವಾಗಿದ್ದಿತು.  ಗಂಡುಮಗುವನ್ನು ಹೆತ್ತುಕೊಟ್ಟರೆ ನಿನಗೆ ಅತ್ತೆ ಮನೆಯಲ್ಲಿ ಸ್ಥಾನ  ಇಲ್ಲದಿದ್ದರೆ .. ತವರು ಮನೆಗೆ ಮತ್ತೆ ವಾಪಾಸಾಗಬೇಕಾದೀತು... ಮತ್ತೆ ಮಗನಿಗೆ ಬೇರೆ ಮದುವೆ ಮಾಡ್ತೀವಿ ಅಂತ.ದಿನಾ ಚುಚ್ಚುಮಾತಿನಲ್ಲೇ ಚುಚ್ಚುತ್ತಿದ್ದ ಅತ್ತೆಯ ಮಾತಿಗೆ ರೋಸಿ ಹೋಗಿದ್ದಳು ರೇಣುಕಾ.... ಮತ್ತೆ ಗರ್ಭಿಣಿಯಾದಾಗ .ಅವಳತ್ತ ನೋಡಿ... ಈಗಲಾದ್ರೂ ಗಂಡು ಹಡೆಯಬೇಕು ಹೆಣ್ಣನ್ನ ಹಡೆದೆಯೋ...  ನಿನಗಿದೆ ಮಾರಿಹಬ್ಬ ... ನೀನು ನಿನ್ನ ಮಕ್ಕಳ ಸಮೇತ.ನಿನ್ನ ತವರಲ್ಲೇ ಇರಬೇಕಾಗುತ್ತೆ ಅಂತ.ಪದೇ ಪದೇ ಹೇಳುತ್ತಿದ್ದರು. 

            ಮೂರು ಹೆಣ್ಣು ಮಕ್ಕಳಾದ ಮೇಲೆ ಮತ್ತೆ ಗರ್ಭಿಣಿಯಾದಾಗ , ಗಂಡ ಮಂಜು  ಲಿಂಗ ತಪಾಸಣೆ ಮಾಡಿಸಿದ್ದ,  ಕಾನೂನಿನಲ್ಲಿ ಲಿಂಗ ತಪಾಸಣೆ ಅಕ್ಷಮ್ಯ ಅಪರಾಧವಾಗಿದ್ದರೂ , ರೇಣುಕಾಳ ರೋಧನ ನೋಡಿದ ಡಾಕ್ಟರ್ ಅಂಜಲಿ  ಮತ್ತೆ ಗರ್ಭದಲ್ಲಿರುವ.ಮಗು ಹೆಣ್ಣೆಂದು ಹೇಳಲೇ ಬೇಕಾಯ್ತು... ಕುಸಿದುಹೋದ ರೇಣುಕಾ ಅಬಾರ್ಷನ್ ಗಾಗಿ ಪೀಡಿಸಿದ್ದಳು  ಡಾ : ಅಂಜಲಿಯನ್ನು.  ಅವಳ ಗಂಡನ ಮನೆಯ ಅನಾದರ, ರೇಣುಕಾಳಿಗೆ ಆಗುತ್ತಿದ್ದ ಹಿಂಸೆ ಎಲ್ಲವನ್ನೂ ಹತ್ತಿರದಿಂದ  ಸುಮಾರು ವರ್ಷಗಳಿಂದ ನೋಡುತ್ತಿದ್ದ  ಡಾ. ಅಂಜಲಿ ಅಬಾರ್ಷನ್ ಮಾಡಿದ್ದರು. 

         ಮತ್ತೆ ಗರ್ಭಿಣಿಯಾಗಿ ತಪಾಸಣೆಗೆ ಬಂದಾಗ ತುಂಬಾ ಕ್ಷೀಣಿಸಿದ್ದ  ರೇಣುಕಾಳನ್ನ, ಚೆಕ್ ಮಾಡಿದ ಡಾ. ಅಂಜಲಿ ಅವಳ ಗಂಡನಿಗೆ ಛೀಮಾರಿ ಹಾಕಿದ್ದರು.  ಅದಕ್ಕೆ ಬಗ್ಗದ ಆಸಾಮಿ.... ಗಂಡು ಮಗುವನ್ನು ಹಡೆದರಷ್ಟೇ ... ಇವಳಿಗೆ ಮನೆಯಲ್ಲಿ, ಮನದಲ್ಲಿ ಸ್ಥಾನ...  ಇನ್ನೊಮ್ಮೆ ಪರೀಕ್ಷಿಸಿಬಿಡಿ.... ಹೊಟ್ಟೆಯಲ್ಲಿರುವ ಮಗು ಹೆಣ್ಣೋ... ಗಂಡೋ ಎಂದು....ಹೀಗೆ ಧಿಮಾಕಿನಲ್ಲಿಯೇ ನುಡಿದಿದ್ದ....  ಲಿಂಗ ತಪಾಸಣೆ ಕಾನೂನು ಬಾಹಿರ, ಅಲ್ಲದೆ ಅಬಾರ್ಷನ್ ಮಾಡುವ ಹಾಗಿಲ್ಲ... ಹಾಗೇನಾದ್ರೂ ಆದರೆ ನಾನು ಜೈಲಿಗೆ ಹೋಗಬೇಕಾಗುತ್ತೆ ಎಂದು ವಾಪಸ್ ಕಳುಹಿಸಿದ್ದರು ಡಾಕ್ಟರ್.

          ಏನಾದರಾಗಲಿ,  ಈ ಬಾರಿ ಹಡೆಯಬೇಕು.... ಹೆಣ್ಣಾದರೂ ಸರಿ , ಗಂಡಾದರೂ.ಸರಿ,  ನನ್ನದೇ ಕರುಳ ಕುಡಿಯನ್ನು ಚಿವುಟಿಹಾಕುವುದು ಎಷ್ಟರಮಟ್ಟಿಗೆ ಸರಿ... ಎಂದು ಸಮಾಧಾನ ಮಾಡಿಕೊಂಡರೂ.... ಮತ್ತೆ ಹೆಣ್ಣಾದರೆ ಏನು ಮಾಡುವುದು... ಮೂರರ ಜೊತೆಗೆ ಮತ್ತೊಂದು..!   ಅಲ್ಲದೆ ನನಗೆ ಈ ಮನೆಯಲ್ಲಿ ಬಾಳು0ಟೆ..?  ನಾಲ್ಕು ಮಕ್ಕಳನ್ನ ಕಟ್ಟಿಕೊಂಡು ನಾನು ಏನು ಮಾಡಲಿ?   ಅವುಗಳ ವಿದ್ಯಾಭ್ಯಾಸ, ಮದುವೆ..!!   ನನ್ನೊಬ್ಬಳ ಕೈಯ್ಯಲ್ಲಿ ಸಾಧ್ಯವೇ?..... ಇನ್ನೊಮ್ಮೆ ಡಾಕ್ಟರ್ ರ ಕೈಕಾಲು ಹಿಡಿದಾದರೂ ಸರಿ... ಮಗು ಯಾವುದೆಂದು ತಿಳಿಬೇಕು,  ಒಂದು ವೇಳೆ ಹೆಣ್ಣಾದರೆ ....... ಮತ್ತೆ,ನನ್ನ ಕರುಳನ್ನ ಕತ್ತರಿಸಬೇಕು.... ಏನು ಮಾಡಲಿ... ಎಂದು ಹೊಯ್ದಾಟಕ್ಕೆ ಬಿದ್ದ ಮನಸ್ಸಿನಲ್ಲಿ ದೃಢ ನಿಶ್ಚಯ ಮಾಡ್ಕೊಂಡು... ಮತ್ತೆ ಅಂಜಲಿ ಡಾಕ್ಟರ್ ನ ಕಾಲು ಹಿಡಿದು ಗೋಗರೆಯುತ್ತಾಳೆ...   ಇವಳ ಕಣ್ಣೀರಿಗೆ ಕರಗಿದ ಡಾಕ್ಟರ್ ಟೆಸ್ಟ್ ಮಾಡಿದಾಗ ಮತ್ತೆ.... ಹೆಣ್ಣು ಭ್ರೂಣ ವಿದೆಯೆಂದು  ತಿಳಿಯುತ್ತೆ....  ಭೂಮಿಗೇ ಇಳಿದು ಹೋಗುತ್ತಾಳೆ  ರೇಣುಕಾ.... ಕಣ್ಣು ಕತ್ತಲೆ ಬ0ದಂತಾಗಿ ಅಲ್ಲಿಯೇ ಕುಸಿಯುತ್ತಾಳೆ...  ಮೂರು ತಿಂಗಳ ಗರ್ಭಿಣಿ, ಸರಿಯಾದ ಆರೈಕೆಯಿಲ್ಲದೆ, ಅತೀ ಒತ್ತಡದಿಂದ ದೈಹಿಕವಾಗಿಯೂ ಮಾನಸಿಕವಾಗಿಯೂ ಜರ್ಜರಿತಳಾದ  ರೇಣುಕಾಳನ್ನ  ನೋಡಿದ ಡಾಕ್ಟರ್ ಗೇ ಅತೀವ ನೋವಾಗುತ್ತದೆ.  ರೇಣುಕಾಳ ಪರಿಸ್ಥಿತಿಯ ಅರಿವಿದ್ದ ಡಾಕ್ಟರ್ ಅಂಜಲಿ, ಅವಳನ್ನು ಸಮಾಧಾನಿಸಿ, ರಕ್ತಹೀನತೆಯಿಂದ ಬಳಲುತ್ತಿದ್ದ  ಅವಳನ್ನು ಅಡ್ಮಿಟ್ ಮಾಡಿಕೊಂಡು  ರೇಣುಕಾಳ ಗಂಡನಿಗೆ ಫೋನ್ಮಾಡಿ ತಿಳಿಸುತ್ತಾರೆ.  ಡಾಕ್ಟರ್  ಅವಳ ಹೊಟ್ಟೆಯಲ್ಲಿರುವ ಮಗು ಯಾವ್ದು, ಹೆಣ್ಣೋ ಗಂಡೋ... ಒಂದುವೇಳೆ ಗಂಡಾಗಿದ್ದರೆ ಅವಳ ಜವಾಬ್ದಾರಿ ನಂದು,.ಹೆಣ್ಣಾಗಿದ್ದರೆ..  ಅವಳ್ಯಾರೋ ನನಗೆ ಗೊತ್ತಿಲ್ಲ ... ಅಂದ ಅವನ ಅಮಾನುಷ ನಡೆಗೆ ಬೇಸತ್ತ ಡಾಕ್ಟರ್ಗೆ ಏನು ಮಾಡಲೂ ತಿಳಿಯದಾಯ್ತು... ಇವರ ಸಂಭಾಷಣೆ ಕೇಳಿಸಿಕೊಂಡ  ರೇಣುಕಾ ಅಧೀರಲಾಗುತ್ತಾಳೆ.  ಡಾಕ್ಟರ್, ಮತ್ತೆ ಹೆಣ್ಣು ಮಗು ಅಂದ್ರೆ, ನನಗೆ ಬದುಕೇ ಇಲ್ಲ... ದಯವಿಟ್ಟು ಅಬಾರ್ಷನ್ ಮಾಡಿಬಿಡಿ, ಎಂದು ಗೋಗರೆಯುತ್ತಾಳೆ. ದೇಹದಲ್ಲಿ ತ್ರಾಣವೇ ಇಲ್ಲದ ಅವಳಿಗೆ ಅಬಾರ್ಷನ್ ಮಾಡುವುದಾದರೂ ಹೇಗೆ.? ಅಲ್ಲದೆ ಒಬ್ಬ ತಾಯಿಯಾಗಿ, ಇನ್ನೂ ಪ್ರಪಂಚವನ್ನೇ ಕಾಣದ ಮಗುವನ್ನು ಕೊಲ್ಲುವುದಾದರೂ ಹೇಗೆ..? ಉಳಿಸುವುದಷ್ಟೇ ನನ್ನ ಧರ್ಮ.. ಕೊಲ್ಲುವುದಲ್ಲ... ಏನಾದರಾಗಲಿ ಈ ಮಗುವನ್ನು ಉಳಿಸಿಕೊಳ್ಳಲೇ ಬೇಕು.  ಒಂದು ವೇಳೆ ಅವರಿಗೆ ಬೇಡದಿದ್ದರೆ ನಾನೇ ಮಗುವನ್ನು  ದತ್ತು ತೆಗೆದುಕೊಂಡರಾಯ್ತು  ಅನ್ನುವ ನಿರ್ಧಾರಕ್ಕೆ ಬಂದ ಡಾಕ್ಟರ್ ಅಂಜಲಿ, ರೇಣುಕಾಳಿಗೆ ಪರಿಸ್ಥಿತಿಯನ್ನು ಅರ್ಥ ಮಾಡಿಸಿ,  ಅವಳ ಗಂಡ ಮಂಜುವಿಗೆ ಫೋನ್ ಮಾಡಿ ಗರ್ಭದಲ್ಲಿ ಗಂಡು ಮಗುವಿದೆ, ಅದು ಆರೋಗ್ಯವಾಗಿ ಬೇಕೆಂದರೆ ರೇಣುಕಾಳಿಗೆ ಆರೈಕೆ ಬೇಕು,  ನಿಶ್ಶಕ್ತಿಯಿಂದ ಬಳಲುತ್ತಿರುವ ಅವಳಿಗೆ ದೈಹಿಕವಾಗಿ, ಮಾನಸಿಕವಾಗಿ ಆರೈಕೆಬೇಕು ಎಂದು ಹೇಳಿದಾಕ್ಷಣ.... " ಗಂಡು ಮಗು" ಎಂಬುದನ್ನು ಕೇಳಿಯೇ ಆಕಾಶಕ್ಕೇರಿದ ಮಂಜು, ಖಂಡಿತ ಡಾಕ್ಟರ್..  ಅವರು ಆರೋಗ್ಯವಾಗಿರಬೇಕು... ಈಗಲೇ ಬಂದೆ ಎಂದು ಆಸ್ಪತ್ರೆಗೆ ಓಡೋಡಿ ಬರುತ್ತಾನೆ.
[19/4/2021, 3:56 am] Dr. B. N. Shylaja Ramesh: ನೆನಪಿನ ಬೀದಿಯಲ್ಲಿ ಹೊರಟೆ ಸವಾರಿ
ಬಾಲ್ಯದ ಸವಿ ನೆನಪ ಮೂಟೆಯನು ಹೊತ್ತು
ನೆನಪಿನ ಸಂಚಿಯಲ್ಲುಂಟು ತರಾವರಿ
ಕಡಲಾಳದಿ ದೊರೆವಂತ ಅನರ್ಘ್ಯ ಮುತ್ತು
[28/4/2021, 2:36 am] Dr. B. N. Shylaja Ramesh: ಎಲ್ಲ ತಡೆಗಳ ದಾಟಿ ಆಈಲಿತೆನ್ನಯ ಪ್ರೀತಿ
ಎಣಿಕೆಯಿಲ್ಲದ ಅವ್ಯಾಜ ಪ್ರೇಮಸಿಂದ
[3/5/2021, 1:07 pm] Dr. B. N. Shylaja Ramesh: ಮರಣ ಭಯ
ತೊರೆದಾಗಲಷ್ಟೇ
ಜೀವನ ಸಂಪ್ರೀತಿಯ
ಉಗಮ..!!

ಸೋಲಿನ ಹತಾಶೆ
ಮರೆತರಷ್ಟೇ
ಗೆಲುವಿನ ಸಂಭ್ರಮದ
ಅನಾವರಣ..!

ಕಳೆಯುವ ನೋವ  
ತೊರೆದರಷ್ಟೇ
ಗಳಿಸುವ ಸುಖದ
ಸಂಭ್ರಮ..!

ಮುಳುಗುವ ಭಯ 
ಬಿಟ್ಟರಷ್ಟೇ
ಬದುಕುವ ಆನಂದದ
ಸಂಗಮ..!!

ಬರುವ ಸಂಕಟಗಳ
ದೂರೀಕರಿಸಿದರಷ್ಟೇ
ಇರುವ ಸುಖದ
ಸಮತೋಲನ..!

ಎಲ್ಲ ಮರೆತು ಬದುಕ
ಪ್ರೀತಿಸಿದರಷ್ಟೇ..
ಜೀವಿಸಲು ಸಂಭ್ರಮದ
ವಾತಾವರಣ. !!

ಚಂದದ ಆಶಯ ಸರ್
ಸೂಪರ್👌👍💐💐
[5/5/2021, 4:01 pm] Dr. B. N. Shylaja Ramesh: ಗತವೈಭವ
*********

ಅಂದು ಬಾಳಿ ಬದುಕಿದ್ದ
ಮನೆಯಿಂದು ಪಾಳು ಗುಡಿ
ಮೆರೆದ ಗತವೈಭವವಿಂದು
ಅಳಿದು ಪಳಯುಳಿಕೆಯಡಿ

ತಲೆ ತಲೆಮಾರುಗಳು ಬದುಕಿ
ಪೋಷಣೆಯಿಲ್ಲದೆ ಕುಸಿಯಿತಿಂದು
ಪರಂಪರಾನುಗತ ಅಂದದಮನೆ
ಕಾಲನವಶಕೆ ಸಿಲುಕಿತಿಂದು

ಅದೆಷ್ಟು ಮಂದಿಗೆ ನೆರಳಿತ್ತಿತ್ತೋ
ಹಸಿದು ಬಂದವರಿಗೆ ತುತ್ತನೀಡಿ
ನಿಷ್ಠೆಯ ಬೆವರ ಹನಿ ಬಸಿದವರಿಗೆ
ಅಸನವಸನವಿತ್ತಿತ್ತು ಪ್ರೀತಿ ಮಾಡಿ

ಅಸರೆಯ ತಂಪಿತ್ತು ಬಾಚಿ ತಬ್ಬಿದ್ದ
ಗುರುಹಿರಿಯರಿದ್ದ  ಅಂದದಂಕಣ
ಹಳೆ ಬೇರು ಹೊಸ ಚಿಗುರು
ಹಬ್ಬಿ ನಕ್ಕಿದ್ದ ಭಾವದನಾವರಣ

ಇತ್ತೊಂದು ಕಾಲದಲಿ ಭರಪೂರ
ಸುವರ್ಣಯುಗದ ಸಂಭ್ರಮದ ಕಾಲ
ತಾತ ಮುತ್ತಾತರಾಳಿ ಬದುಕಿದ್ದ
ಮೌಲ್ಯವೆತ್ತಿಹಿಡಿದಿದ್ದ ನ್ಯಾಯದೇಗುಲ

           ಶೈಲೂ...
[5/5/2021, 4:01 pm] Dr. B. N. Shylaja Ramesh: ಸಂತಸಕ್ಕೆ ಮತ್ತೊಂದು ಗರಿ😊

* ಕಲಾದೇಗುಲ ಭಾವನೆಗಳ ಸಂಗಮ * ಗುಂಪಿನಲ್ಲಿ ನಡೆದ  " ತೊಟ್ಟಿಲ ನೆನಪು  " ಕವನ ಸ್ಪರ್ಧೆಯಲ್ಲಿ 9 ನೇ ಸ್ಥಾನ ಪಡೆದ ಕವಿತೆ

ತೊಟ್ಟಿಲ ನೆನಪು
*************

ಸಪ್ತಪದಿ ತುಳಿದು
ಬಲಗಾಲಿಟ್ಟು ಬಂದಾಗ
ನನ್ನವರ ಮೊದಲ ಮಾತು
ವರ್ಷದೊಳಗೊಂದು ಕಟ್ಟು ತೊಟ್ಟಿಲು
ನಾಚಿ ನೀರಾಗಿ ನಾ
ತಲೆತಗ್ಗಿ ನಿಂತಾಗ
ಗಲ್ಲವಿಡಿದೆತ್ತಿ ಉಸಿರಿದರು
ಹತ್ತೋಣವೊಂದೊ0ದೇ ಮೆಟ್ಟಿಲು

ನವಜೀವ ಅಂಕುರಿಸಿ
ಕನಸು ನನಸಾದಾಗ
ಕೈಗೆ ನಿಲುಕುವಷ್ಟೇ ದೂರ
ಸ್ವರ್ಗಕ್ಕೊಂದೇ ಮೆಟ್ಟಿಲು
ತುಂಬು ಮುತುವರ್ಜಿ ಆರೈಕೆ
ನೋವಲ್ಲಿ ಸಂತೈಕೆ
ತಿಂಗಳೊಂದೊಂದುರುಳಿದಂತೆ
ನೋವು ಅವರಿಗೇ ಹೆಚ್ಚಲು

ಅದೆಷ್ಟು ತೆರನ ಹರಕೆ
ದೇವರಿಗೊಂದಿಸಿ ಬೇಡಿಕೆ
ಸುಸೂತ್ರವಾದರೆ ಸಾಕು
ನಿನಗರ್ಪಣೆ ಬೆಳ್ಳಿ ತೊಟ್ಟಿಲು
ನವಮಾಸ ಪೂರೈಸಿ
ದೇವನನುಗ್ರಹ ಫಲಿಸಿ
ಹಸುಕಂದ ನಸು ನಕ್ಕಾಗ
ತೂಗಿತ್ತು ಚಂದನದ ತೊಟ್ಟಿಲು

ಕಂಡ ಕಂದನ ಕನಸೆಲ್ಲಾ
ನನಸಾದ ಹೊತ್ತಿನಲಿ
ಹೆಮ್ಮೆಯಿಂದ ತುಂಬಿತ್ತು
ಮನದ ಪ್ರೀತಿ ಬಟ್ಟಲು
ಭರವಸೆಯ ಹಸುಗೂಸು
ತೊದಲ ನುಡಿ ನುಡಿದಾಗ
ಭಾವದಲೆಗಳು ಹೊರಹೊಮ್ಮಿ
ಸಂತಸದಿ ಜೀಕುತ್ತಿತ್ತು ತೊಟ್ಟಿಲು

               ಶೈಲೂ.......
[12/5/2021, 10:57 pm] Dr. B. N. Shylaja Ramesh: ಬದುಕು ಸವೆಸಿ ಇಹಲೋಕ ತ್ಯಜಿಸಿ
ಪರಲೋಕದತ್ತ ಹೊರಟ ಆತ್ಮಗಳೇ
ನಿಮಗಿದೋ ಅಶ್ರುಪೂರ್ಣ ವಿದಾಯ
ಸಕಲ ಮರ್ಯಾದೆಯೊಡನೆ ಬೀಳ್ಕೊಡಲು
ಅಸಹಾಯಕರಾದ ಬಂಧುಗಳೆಡೆಗೆ
ಇರಲಿ ನಿಮ್ಮ ಕರುಣಾಪೂರ್ಣ ದೃಷ್ಟಿ
[13/5/2021, 1:08 pm] Dr. B. N. Shylaja Ramesh: ಕರೆದೊಯ್ಯಿ ನಿನ್ನ ಲೋಕಕೆ
ನಾ ಸಿದ್ಧನಾಗಿರುವೆ
ನಿನ್ನೆಲ್ಲಾ ರೀತಿ ರಿವಾಜುಗಳಿಗೆ
ನಾ ಬದ್ಧನಾಗಿರುವೆ

ಸಾಕಾಗಿದೆ ಈ ಲೋಕ
ಎಲ್ಲೆಲ್ಲೂ ಅನ್ಯಾಯದ್ದೇ ತಾಂಡವ
ವ್ಯವಸ್ಥೆಯಲ್ಲೆಲ್ಲಾ ಲೋಪ
ಕಾವರಾರಿಲ್ಲವಿಲ್ಲಿ ಅಪತ್ಬಾಂಧವ

ಹಿಂಸೆ ಕ್ರೌರ್ಯವೇ ಹೆಚ್ಚು
ಮಾನವೀಯತೆಗಿಲ್ಲಿ ಬೆಲೆ ಗೌಣ
ಹಣ ಮಾಡುವುದೇ ಹುಚ್ಚು
ನ್ಯಾಯ ದೇವತೆಯಿಲ್ಲಿ ಮೌನ..!

ಜೀವಿಸುವುದು ಅತೀ ಕಷ್ಟ
ಜೊತೆಗಿಷ್ಟು ಕಾಡುವ ಮಹಾಮಾರಿ
ದುಡಿದು ಗಳಿಸಿದ್ದೆಲ್ಲವೂ ನಷ್ಟ 
ಆದರೂ ಚಿಕಿತ್ಸೆ ಆಗುತ್ತಿಲ್ಲ ಫಲಕಾರಿ

ಬಡತನಕ್ಕಲ್ಲವೀ ಲೋಕ
ಬದುಕಿದು ಸಿರಿವಂತರಾಟದ ಸ್ವತ್ತು
ಹೆಚ್ಚು ದುಡ್ಡಿದ್ದರಷ್ಟೇ ನಾಕ
ಜನಸಾಮಾನ್ಯ ಕೊರಗುವ ಸೋತು

ಸಾಕು ಸಾಕಾಗಿದೆ ದೇವ
ಇನ್ನಿಲ್ಲಿ ನಿಲ್ಲಲಾರೆ ನಾನು
ಅಪ್ಪಿ, ಕರೆದುಕೊ ಬೇಗ
ಹೆತ್ತವ್ವೆಯಂತೆ ನೀನು..!
[8/6/2021, 10:21 am] Dr. B. N. Shylaja Ramesh: ಈ..... ಬಂಧ....

ಬಾಳದೋಣಿಯ ಪಯಣಿಗರು ನಾವು
ಸಂಸಾರ ಸಾಗರದಿ ಈಸುತಿಹೆವು
ಉಪ್ಪುನೀರಿನ ನಂಟು ಏರಿಳಿತವೂ ಉಂಟು
ಸುಖದುಃಖಗಳ ಜೊತೆಗೆ ಕನಸು ನೂರೆಂಟು

ಬಾಳಿನುಯ್ಯಾಲೆಯಲಿ ಸಂಗಡಿಗರು ನಾವು
ಜೀಕುತ್ತ ಜೀಕುತ್ತ ಮರೆಯುವೆವು ನೋವು
ಮೇಲೊಮ್ಮೆ ಕೆಳಗೊಮ್ಮೆ ತೂಗುವುದು ಉಯ್ಯಾಲೆ
ಸಮರಸದಿ ಬಾಳುವೆವು ಏರುಪೇರಿಗಂಜದಲೇ

ಬಾಳ ದೋಣಿಯಲಡಿಯಿಟ್ಟ ದಿನದಿಂದ
ಹಿಗ್ಗಿಹೆವು ಕುಗ್ಗಿಹೆವು ನೋವು ನಲಿವಿಂದ
ಬದುಕಲೆಂಥದೇ ಬಿರುಗಾಳಿ ಬರಲಿ
ನಮ್ಮೊಲವ ಸಾಂಗತ್ಯ ಬಂಧ ಬಿಗಿಯಿರಲಿ

ಹಗಳಿರುಳಿನ ದುಡಿತ ನೀಡಿದೆ ಶುಭಫಲಿತ
ಬಂಧಿಸಿಟ್ಟಿದೆ ನಮ್ಮ ಒಲವ ಸೆಳೆತ
ಬರುವ ಕಷ್ಟಸುಖಗಳೆಲ್ಲ ಬೆವುಬೆಲ್ಲದ ತೆರದಿ
ಬದುಕ ಸಂಭ್ರಮಿಸಲದುವೆ ಯುಗಾದಿ

ಜೊತೆಗೂಡಿಬಂದ ದಿನಕಿಂದು 24ರ ಸಂಭ್ರಮ
ಮಧುರ ನೆನಪ ಬುತ್ತಿಯಲಿ ಒಲವ ಸಂಗಮ
ನನ್ನ ವಿಜಯದ ನಗೆಗಿರಲಿ ನಿಮ್ಮ ಕೊಡುಗೆ
ಅನುಸರಿಸಿ ಬಾಳುವೆ ನಾ ಕೊನೆಯುಸಿರವವರೆಗೆ

          ಶೈಲಜಾ ರಮೇಶ್
[8/6/2021, 10:40 am] Dr. B. N. Shylaja Ramesh: ಬಿಸಿಲಲ್ಲಿ ನೆರಲಾಗಿ
ನೆರಳಲ್ಲಿ ತಂಪಾಗಿ
ಜೊತೆಜೊತೆಗೆ ಸಾಗಿರಲು
ಬಾಳು ಬಂಗಾರ....!

ಸ್ಪಂಧಿಸುತ ಭಾವಕ್ಕೆ
ಹೆಗಲಾಗಿ  ಜೀವಕ್ಕೆ
ಅರಿತು ನಡೆಯುತಿರೆ
ಸುಖ ಸಂಸಾರ.....!
[15/7/2021, 7:21 am] Dr. B. N. Shylaja Ramesh: ಹುಂ...
ಆ ರಾಗ ಮಾಧುರ್ಯ ಕ್ಕೇ
ಮರುಳಾಗಿ ಕುಳಿತೆ ಮಾಧವಾ
ಮತ್ತೆ ಮತ್ತೆ ನೀ 
ಮೋಹನ ರಾಗವನ್ನೇ.
ನುಡಿಸಲೆಂದು😊
[15/7/2021, 7:21 am] Dr. B. N. Shylaja Ramesh: ಆ ಮೋಹನ ರಾಗವೇ ತಾನೇ
ನನ್ನ ನಿನ್ನ ಬೆಸೆದಿದ್ದು ಮಾಧವಾ
ಮತ್ತೆ ಮತ್ತೆ ನುಡಿಸು ಮತ್ತೆ
ಪಡೆದಿರುವೆ ನಾ
ದಿನವೂ ರಾಗ ಮಾಧುರ್ಯವ
ಸವಿಯುವ ಯೋಗವಾ😊
[15/7/2021, 2:16 pm] Dr. B. N. Shylaja Ramesh: ಥೇಟ್... ನಿನ್ನಂತೆಯೇ

ಬಿಟ್ಟೂ ಬಿಡದಂತೆ ಸುರಿಯುತ್ತಿದೆ ಜಡಿ ಮಳೆ
ಥೇಟ್.. ನಿನ್ನ ನೆನಪಿನಂತೆಯೇ...
ಕುಳಿರ್ಗಾಳಿ ಹೊಡೆತಕೆ ನಡುಗುತ್ತಿದೆ ಮೈ ಮನ
ಥೇಟ್.. ನಿನ್ನ ಸ್ಪರ್ಷದಂತೆಯೇ...
ಚಳಿಯ ಈ ಝಳಕೆ ಬೇಕೆನಿಸುತ್ತಿದೆ ಬಿಸಿಬಿಸಿ ಕಾಫಿ
ಥೇಟ್.. ನಿನ್ನ ಸನಿಹದಂತೆಯೇ...
ಸುರಿವ ಮಳೆಯ ತಂಪಿಗೆ ನೀರೂರಿಸುವ ಮಿರ್ಚಿಯ ಕಂಪು
ಥೇಟ್.. ನಿನ್ನ ಬಿಸಿಯಪ್ಪುಗೆಯಂತೆಯೇ..
ನಡುಗುವ ಮೈಯ್ಯ ಆಚರಿಸಿರುವ ಈ ಸ್ವೆಟರ್
ಥೇಟ್... ನಿನ್ನಂತೆಯೇ...
ಧೋ ಎಂದು ಸುರಿವ ಮಳೆಗೂ.. ನಿನಗೂ ಅವಿನಾಭಾವ ಸಂಬಂಧ
ಥೇಟ್... ನಮ್ಮ ಪ್ರೀತಿಯಂತೆಯೇ...
            ಶೈಲೂ.....
[16/7/2021, 6:34 am] Dr. B. N. Shylaja Ramesh: ಮಿಡಿವ ಮನದ ಮಾತು
*******************

ಮೋಡವಾವರಿಸಿದ ಈ ಇಳಿಸಂಜೆ
ಕ್ಷೀಣಿಸುತ್ತಿರುವ ಈ ತಿಳಿಬೆಳಕು
ಮುಂದಡಿಯಿಡಲೆಕೋ ಭಯ
ಬಂದು ನೀಡೆನಗೆ ಅಭಯ

ಸುತ್ತಲೂ ಮುತ್ತುತ್ತಿದೆ ಕತ್ತಲೆ
ಏನೇನೂ ಕಾಣಲೊಲ್ಲದು ನೋಡು
ಬಾಳುಹೇಗೆ ಬೆಳಕಾದೀತು
ನೀಡುನಿನ್ನ ಕಣ್ಣ ಕಾಂತಿಯ ಬೆಳಕು

ತವಕಿಸುತ್ತಿದೆ ಮನ ಉಸುರಲೆನೋ
ಪ್ರಾಸ ಮರೆತು ಪದಪುಂಜ ಖಾಲಿ
ಹೇಗೇಹೇಳಲಿ ಮನದ ಮಾತು
ತುಟಿಬಿಚ್ಚಲಾಗದ ಮೌನ

ಬಣ್ಣಕಳಚಿದ ಬರಡು ಬದುಕು
ಕನಸ ಕಣ್ಣೊಳಗೆ ನವರಂಗು
ಅಲೆದು ಬಳಲಿರುವೆ ಗೆಳೆಯ
ಬಣ್ಣ ತುಂಬಲು ನೀನೆಂದು ಬರುವೆ

ನಿನಗೆಂದೇ ಬರೆದ ಎರಡು ಸಾಲು
ಹೃದಯದಂಚೆಗೆ ರವಾನಿಸಿರುವೆ
ಕಾತರದಿ ಕಾಯುತಿರುವೆ ಗೆಳೆಯ
ಮಾರುತ್ತರಕೆ ಮನವನೆಟ್ಟು

ಲೋಕವೆಲ್ಲ ಕಿವುಡಾದರೂ ಸರಿ
ಯಾರಗೊಡವೆ ಬೇಕಿಲ್ಲೆನಗೆ
ನಿನ್ನೊಬ್ಬನಿಗೇ ಕೇಳಿದರೆ ಸಾಕು
ನಿನಗೆಂದೇ ಮಿಡಿವ ನನ್ನೆದೆಯ ಮಾತು
[16/7/2021, 6:35 am] Dr. B. N. Shylaja Ramesh: ನವಿರಾದ ನೆನಪು
**************

ಪ್ರಶಾಂತ  ಸಂಧ್ಯಾಸಮಯ
ತಂಗಾಳಿ ತಾಕಿ ಎನ್ನೆದೆಯ
ಅಲೆಅಲೆಯಾಗಿ ನೆನಪ ಸುರಳಿ
ಬಿಚ್ಚಿ ನೀಡುತಿದೆ ಕಚಗುಳಿ

ತಂಗಾಳಿ ತಂದ ಪರಿಮಳದ ಗಂಧ
ನೆನಪಿಸುತಿದೆ ನಿನ್ನ ವದನದ ಅಂದ
ಬಿರಿದ ತುಟಿಯಂಚಿನಿಂದ..ಆ
ಸೊಗಸ ಕರೆಯ ಕೇಳುವುದೇ ಚಂದ

ಮುಳುಗುತಿಹ ಆ ರವಿಯ ಕಿರಣ
ಮುಗುಳುನಗೆ ತಂದ ಪ್ರೀತಿಯ ಸ್ಪುರಣ
ಕಾಡುವೆಯೇಕೆ ಈ ಪರಿ ಅಕಾರಣ
ಮೋಡಿ ಮಾಡಿ ಕೆರಳಿಸಿದೆ ಮನವನ್ನ

ಚಿಲಿಪಿಲಿಯ ದ್ವನಿ ಹೊರಳಿ
ಹೊರಟಿದೆ ಮರಳಿ  ಗೂಡಿಗೆ
ನಿನ್ನೀ ಪ್ರೀತಿಯ ಕಲರವ
ತುಂಬಿಬಿಟ್ಟಿದೆ  ಎದೆಯೊಳಗೆ

ನೇಸರನಿಗೂ ಅವಸರ ಅಡಗಲು
ಭೂದೇವಿಯ ಒಲವ ಮಡಿಲೊಳು
ಕೆಂಪರಡಿ ಕೆನ್ನೆ ನಾಚಿ ನೀರಾದೆ
ಕನವರಿಸಿ ನಿನ್ನ ಮನದೊಳು

ಈ ಪ್ರಶಾಂತ ಸಂಜೆಗೂ
ನಿನಗೂ ಏನಿಹುದು  ಬಂಧ..?
ಕಾತರದ ಅಳಲಿನೊಲು
ಕಾಯ್ವೆ ನಾ ಮುದದಿಂದ...

     ಶೈಲೂ
[16/7/2021, 6:36 am] Dr. B. N. Shylaja Ramesh: ಇದು ನನ್ನ ಸಾಲು

ಅಂತರಾಳದಲ್ಲಿ ನೋವಿದೆ
ಆದರೂ ಮೊಗದಲ್ಲಿ ನಗುವಿದೆ
ನೋವನ್ನ ತೋರಿಸಿಕೊಳ್ಳಲಾಗದೆ
ನಗುವನ್ನು ಮೊಗದಲ್ಲಿ ತುಂಬಿದೆ

ನೊಂದ ಜೀವದ ಅಳಲು ನೂರಿದೆ
ಸಾಂತ್ವನದ ಹೆಗಲೊಂದು ಬೇಕಿದೆ
ನೀನಿರದೆ ನೋವಿಗೆಲ್ಲಿ ಕೊನೆಯಿದೆ
ನಗುನಗುತ ನೀ ಬಳಿ ಬರಬಾರದೇ
              ಶೈಲೂ....
[16/7/2021, 3:48 pm] Dr. B. N. Shylaja Ramesh: ನೇಸರ
******

ಇನಿತೂ  ದಣಿವಿಲ್ಲ
ಬೇಸರವೇ ಕಾಣದಲ್ಲ
ನಿತ್ಯ ನಡೆಸುವೆ ಕಾಯಕ
ಅರೆಗಳಿಗೆ ಬಿಡುವಿಲ್ಲ

ಜಗದ ಚೇತನ ನೀನು
ಹೊಂಗಿರಣ ಚೆಲ್ಲುವನು
ಜಡತನವ ದೂಡುತ
ಉತ್ಸಾಹ ತುಂಬುವನು

ನೀನಿದ್ದರೇನೇ ಬೆಳಕು
ಆತ್ಮೋನ್ನತಿಗೂ ನೀನಿರಬೇಕು
ಚರಾಚರದುಳಿವಿಗೆ
ದಿನವೂ ಉದಿಸಲು ಬೇಕು

          ಶೈಲೂ.....
[19/4/2019, 3:07 pm] Dr. B. N. Shylaja Ramesh: ಭಾರವಾಗಿದೆ ಮನಸು 😢😢😢
**************************

ಭಾರವಾಗಿದೆ ಮನಸು
ಕಳೆದಿದೆ ಕನಸಿನ ಕೂಸು
ಕಲ್ಪನೆಯ ಮೂಸೆಯಲ್ಲಿದ್ದದ್ದು ಕೊರೆದು
ಸವಿದಿದ್ದೆ ಅನಿಸಿದ್ದನ್ನೆಲ್ಲ ಬರೆದು

ಏನೆಲ್ಲ ದುಃಖ ದುಮ್ಮಾನ
ಹರಿಸಿದ್ದೆ ಪ್ರೀತಿ ಹೊಳೆಯನ್ನ
ಸವಿದು ಸ್ನೇಹದಾಲಿಂಗನ
ಇತ್ತು ಬರಹದಲಿ ಹೊಸತನ

ಎಷ್ಟೊಂದು.ಅನುಭವದ ಮಾತು
ಜೊತೆಗೆ ತುಸು ಕೋಪವೂ ಬೆರೆತು
ಭಾವ ಬಂಧನದಲ್ಲಿದ್ದ ಕೂಸು
ಹೇಗೋ ಕೈಜಾರಿ ಹೋಯ್ತು

ಇತ್ತೆನಿತೋ ಬರಹದಲಿ ತಪನ
ಆಸ್ಥೆಯಿಂದ ಮಾಡಿದ್ದೆ ಜತನ
ಕಣ್ಗಾವಲಲ್ಲಿದ್ದ ನಲ್ಮೆಯ ಕೂಸು
ಕಣ್ತಪ್ಪಿನಿಂದ ಕಳೆದುಹೋಯ್ತು

ಇತ್ತಲ್ಲಿ  ನೂರಾರು ಕವನ
ಮೂಡಿ ಬಂದಿದ್ದ ಬಾಳ ಕಥನ
ಗುರುಗಳ ಪ್ರೋತ್ಸಾಹದ ಗಝಲ್ಲು
ಕಳೆದು ಆಯ್ತು ಮನ ಗೋಜಲು

ಏನಾಗಿತ್ತೋ ಬುದ್ಧಿಗೆ ಕಾಣೆ
ಅನಿಸಿತ್ತೇನೋ ನಾನೇ ಜಾಣೆ
ಜಂಭಕ್ಕೊಂದು ಡಾಕ್ಟರೇಟು
ತಂತ್ರಾಂಶ ನೀಡಿತ್ತು ಎದುರೇಟು

ಮತ್ತೆ ಬಂದೀತೇ ಅ ಪರಿಯ ಗಾನ
ಮನದ ವೀಣೆಯಲಿ ಮೂಡಿದ್ದ ತನನ
ಭಾವನೆ ಬರಿದಾದಂತೆ ಅನಿಸಿಕೆ
ಮನಕಿಂದು ತೀರದ ಬಳಲಿಕೆ😔😔😔

           ಶೈಲೂ.....
[19/4/2019, 9:48 pm] Dr. B. N. Shylaja Ramesh: ಚೆಲ್ಲಿದಂತೆ ಮೊಸರು
ಹಸಿರು ಗಿಡದಮೇಲೆ
ಸೆಳೆಯುತ್ತದೆ ಅರಳಿ
ಘಮ ಘಮಿಸುವ ಮೊಲ್ಲೆ

ಅಚ್ಚ ಬಿಳಿಯ ಬಣ್ಣ
ಸೆಳೆಯುತ್ತಿದೆ.ಕಣ್ಣ
ಚಿಕ್ಕದಾದರೇನು
ಘಮಲ ಕೀರ್ತಿ ಬಲ್ಲೆಯೇನು

ಸೌಗಂಧ ಬೀರೋ ಮಲ್ಲೇ
ಕಟ್ಟಿ ಚಂದದ ಮಾಲೆ
ದೇವಗರ್ಪಿತವಾದ ವೇಳೆ
ಸಾರ್ಥಕತೆ ಬದುಕು

       ಶೈಲೂ...
[19/4/2019, 9:48 pm] Dr. B. N. Shylaja Ramesh: ಗಝಲ್
*******

ಸರಿಯುತ್ತಿದೆ ಸಮಯ ಬರೆಯಲಿದೆ ಬಹಳ
ಹರಿಯುತ್ತಿದೆ ಬರಹ ಹೊರಹಾಕಲಿದೆ ಬಹಳ

ಹೊಳೆಯಲೊಲ್ಲದು ಒಮ್ಮೊಮ್ಮೆ ಏನೇನೂ
ಬರಿದೆ ಅಯೋಮಯ ಸಂದಿಗ್ಧವಿದೆ ಬಹಳ

ಭವಿತೆ ಹೇಳುವುದದ್ಭುತವಿದೆ ಸಹಜ
ಕವಿತೆ ಕಾದಂಬರಿ ಊಹೆ  ಗೊಂದಲವಿದೆ ಬಹಳ

ಕತೆ ಕಾವ್ಯ ನೋಡುವುದಕೆ ಸರಳ
ಪದಪುಂಜಗಳ ಬಳಕೆಯಲಿ ಹುಡುಕಬೇಕಿದೆ ಬಹಳ

ಅನಿಸಿದ್ದನ್ನೆಲ್ಲ ಲೇಖನಿಯಲಿ ಬಂಧಿಸಿಡುವ ಬಯಕೆ
ಅಂತರಂಗದ ಭಾವ ತೆರೆದಿಡಲಿದೆ ಬಹಳ

ಸಾಕಾರವಾಗಬೇಕಿರುವ ಕನಸುಗಳು ನೂರಿವೆ
ಒಲವಿನಲಿ ಮಿಡಿದ ಮನಸಿಮ ನುಡಿಯಿದೆ ಬಹಳ

ಶೈಲಳಾಂತರ್ಯದಲಿ‌ ಹುಡುಗಿಹುದು ಏನೇನೋ
ನುಡಿಗಟ್ಟಿನಲಿ ಬೆಸೆದು ಬೆರಗು ಮೂಡಿಸುವುದಿದೆ ಬಹಳ

              ಶೈಲೂ.....
[19/4/2019, 9:48 pm] Dr. B. N. Shylaja Ramesh: ಅವನಿರುವುದೇ ಹಾಗೆ
******************

ಅವನಿರುವುದೇ ಹಾಗೆ
ನೀಲಮೇಘದ ಬಣ್ಣದಂತೆ
ಎಲ್ಲರ ಸೆಳೆದೆಳೆಯುತ
ಸುಮ್ಮನಿರುವ ಮುಗ್ಧನಂತೆ

ಅವನಿರುವುದೇ ಹಾಗೆ
ಹುಬ್ಬೇರಿಸಿ ನೋಡುವಂತೆ
ಪ್ರಕ್ಷುಬ್ಧ ಸಮಯದಲೂ
ಚಿತ್ತವಿರಿಸುವ ಶಾಂತಿಮಂತ್ರದಂತೆ

ಅವನಿರುವುದೇ ಹಾಗೆ
ಎಲ್ಲರೊಡನೆ ಬೆರೆವ ಮಗುವಿನಂತೆ
ಮೋಡಿ ಮಾಡಿ ಸೆಳೆವ
ಮನಕದ್ದ ಚಿತ್ತಚೋರನಂತೆ

ಅವನಿರುವುದೇ ಹಾಗೆ
ಅತೀವ ಸರಳ ವ್ಯಕ್ತಿಯಂತೆ
ದೇವಾನುದೇವ ತಾನಾದರೂ
ತೋರುವ ಎಲ್ಲರ ಮನೆಮಗನಂತೆ

ಅವನಿರುವುದೇ ಹಾಗೆ
ಗೋಪಿಯರ ಪ್ರಾಣವಲ್ಲಭನಂತೆ
ಸರ್ವರೊಳಗೊಂದಾಗಿ
ಮೆರೆವ ಸರ್ವೋತ್ತಮನಂತೆ

ಅವನಿರುವುದೇ ಹಾಗೆ
ದುಷ್ಟರ ತರಿವ ಯೋಧನಂತೆ
ಶರಣಾದರೆ ಪೊರೆವ
ಅಪ್ಪಿ ಹರಸುವ ತಾಯಿಯಂತೆ

ಅವನಿರುವುದೇ ಹಾಗೆ
ಹಸುಮಗುವಿನಂತೆ
ತಾಯಿಯಕ್ಕರೆಯ ಕಂದ
ಮಡಿಲು ತುಂಬುವಂತೆ

ಅವನಿರುವುದೇ ಹಾಗೆ
ಕಾಡುವ ಪ್ರಿಯಕರನಂತೆ
ಮೋಡಿಮಾಡಿ ಕಾಡಿಬೇಡಿ
ಮುದವೀವ ಪ್ರೇಮದಂತೆ

ಅವನಿರುವುದೇ ಹಾಗೆ
ಉತ್ತಮ ರಾಜತಂತ್ರದಂತೆ
ವಿರೋಧಾಭಾಸಗಳ ನಡುವೆ
ಮೆರೆವ ನಾಯಕನಂತೆ

ಅವನಿರುವುದೇ ಹಾಗೆ
ಭಕ್ತಿಪರಾಕಾಷ್ಠೆಗೆ ಸೋತವನಂತೆ
ಹೂವತಂದವರಿಗೆ ಹುಲ್ಲತರುವ
ಮಾಧವ ತಾ ಭಕ್ತರಾಧೀನನಂತೆ

            ಶೈಲೂ.......
[19/4/2019, 9:48 pm] Dr. B. N. Shylaja Ramesh: ಗಝಲ್
*******

ಸರಿಯುತಿದೆ ಕಾಲ ಅರಿವಿಲ್ಲದೆ ಮನುಜ
ಉರಿಯುತ್ತಿದೆ ಮನ ಅರಿವಿಹುದೆ ಮನುಜ

ತಿಳಿಯ ಬೇಕಿಹುದು ಸಾಕಷ್ಟು ವಿಷಯ
ಬರೀ ಅಯೋಮಯ ಗೋಜಲು ಗೊಂದಲವಿದೆ ಮನುಜ

ಕನಸುಗಳ ಕಟ್ಟಿ  ಕೂತರಾದೀತೇ ಹೇಳು
ನನಸಾಗಿಸುವ ನಡೆಯಲಿ ಶ್ರಮವಿದೆ ಮನುಜ

ಭರವಸೆಯಿರಲಿ ನಾಳಿನ ಬದುಕಿನಲಿ
ಇರುಳು ಸರಿದ ಮೇಲೆ ಬೆಳಕಿರದೇ ಮನುಜ

ನೆನಪಿನಲ್ಲುಳಿವಂತೆ ಬಾಳು ಮರೆಯದಿರು ನೀನು
ಶೈಲ ಅಡಿಗಡಿಗೆ ಹಾರೈಸುತಿಹಳು ಮರೆಯಬಹುದೇ ಮನುಜ

            ಶೈಲೂ.....
[20/4/2019, 10:36 am] Dr. B. N. Shylaja Ramesh: ಕಿಟಕಿಬಳಿ ನಿಂತವಳನ್ನು
ಮುದ್ದಿಸಿದನೇನು ಭಾನು.?
ಸುಳಿದು ಕಿಂಡಿ ಕಿಂಡಿಯಲಿ
ಬರಸೆಳೆದು ಅಪ್ಪಿದನೇನು.?

ಆಗಿರಬೇಕು ಪ್ರಣಯದಾಸೆ
ದಂತದ ಗೊಂಬೆಯ ಕಂಡು
ಇಣುಕಿಣುಕಿ ನೋಡುತಿರುವ
ಚಂದದ ಪರಿಯ ಕಂಡು

ಬೆಚ್ಚಿದ್ದಳಂದು  ಸಂಜ್ನ್ಯಾ
ಪ್ರಖರ ಶಾಖವ ಕಂಡು
ಬೇಸರವಾಗಿರಬೇಕು ಪಾಪ
ಬರಿದೇ ಛಾಯೆಯನುಂಡು

ಎಳೆ ಬಿಸಿಲ ಶಾಖಕೆ ಮೈಯೊಡ್ಡಿ
ನಿಂತ ವೈಯ್ಯಾರಿಯ  ಸ್ಪರ್ಶಕೆ
ಭಾಸ್ಕರ ನೇ ಬಿಸಿ ಬಿಸಿಯಾಗಿ
ಬೆವರಾಗಿ ಸುರಿದು ಸರಿದ ನೇಪಥ್ಯಕೆ
                 ಶೈಲೂ......
[20/4/2019, 1:01 pm] Dr. B. N. Shylaja Ramesh: ಇಂದು ನಾ  ನಗಲು ಕಾರಣ ನೀನು
*****************************

ಸುತ್ತಲೂ ಕತ್ತಲೆಯು ಮುಸುಕಿರಲು
ಭಯದಿಂದ ನಾ ನಡುಗುತ್ತಿರಲು
ಪ್ರಣತಿ ಹಿಡಿದು ಬೆಳಕಾಗಿ ಬಂದೆ
ಸರಿಸಿ ಭಯವ ನಗು ಮೂಡಿಸಲೆಂದೇ

ಕಾರ್ಮೋಡ ಕವಿದ ಬಾನಿನಂತೆ
ಮುಸುಕಿ ಮನದಿ ನೂರಾರು ಚಿಂತೆ
ಏನೋ ಕಳೆದಂತೆ ತಳಮಳ ಮೊಗದೆ
ಹರಿಸಿ ನವಿರಾದ ನಗುವನ್ನು ತಂದೆ

ಸೂರ್ಯನುದಯಕೆ ಕಮಲವರಳಿದಂತೆ
ಹೂವಲ್ಲಿ ಬೆರೆತ ಮಕರಂದದಂತೆ
ಬೀಸೋ ತಂಗಾಳಿಯಲಿ ಸೌಗಂದ ಬೆರೆತಂತೆ
ನಿನ್ನಲ್ಲಿ ನಾ ಬೆರೆತೆ ಹಾಲು ಜೇನಂತೆ

ಬಾಳ ಬಂಡಿಯ ಚಲನೆಗೆ ನೀ ಸೂತ್ರಧಾರಿ
ನೀನೇಣಿಸಿದಂತೆಯೇ ನಡೆವ ನಾ ಪಾತ್ರಧಾರಿ
ನನ್ನ ಪ್ರತಿ ಚಲನೆಗೂ ಇಹುದು ನಿನ್ನದೇ ಪಾತ್ರ
ನನ್ನ ನಗುವಿಗೆ ಕಾರಣವೇ ನಿನ್ನಂದದ ಚಿತ್ರ

               ಶೈಲೂ......
[20/4/2019, 1:03 pm] Dr. B. N. Shylaja Ramesh: ಕಾಯುತಲಿರುವೆ  ನಿನಗಾಗಿ
***********************

ಹೊಂಬಿಸಿಲ ಬಿಸಿ ಸ್ಪರ್ಶಕೆ
ಕಾಯ್ದು , ತೋಯ್ದ ಧರೆಯಂತೆ
ಮಂಜಿನ ಮುತ್ತಿನ ನೀರ ಹನಿಗಾಗಿ
ಕಾಯುತ್ತಿರುವ ಹೂವಿನೆಸಳಂತೆ
ನಿನ್ನಾಗಮನಕ್ಕಾಗಿ ಕಾಯುತ್ತಿರುವೆ...

ವಸಂತನಾಗಮನಕ್ಕಾಗಿ
ಕಾಯ್ದ ಪ್ರಕೃತಿಯಂತೆ
ಮಾವಿನ ಚಿಗುರಿಗಾಗಿ
ಕಾಯುವ ಕೋಗಿಲೆಯಂತೆ
ನಿನ್ನಾಗಮನಕ್ಕಾಗಿ ಕಾಯುತ್ತಿರುವೆ...

ಗಗನ ಚುಂಬಿಸಲು
ಹಾತೊರೆವ ಗಿರಿಶಿಖರದಂತೆ
ಭುವಿಯನಪ್ಪಲು ತವಕಿಸುವ
ಮಳೆಯ ಹನಿ ಹನಿಯಂತೆ
ನಿನ್ನಾಗಮನಕ್ಕಾಗಿ ಕಾಯುತ್ತಿರುವೆ...

ಮನದ ಭಾವನೆಯ ಭಾರಕೆ
ಮಿಡಿದ ನಿಟ್ಟುಸಿರಿನಲಿ
ನಿದ್ದೆಯಲೂ ಕನವರಿಸುತ್ತಿರುವ
ಮುದ್ದಾದ ನಿನ್ಹೆಸರಿನಲ್ಲಿ
ನಿನ್ನಾಗಮನಕ್ಕಾಗಿ ಕಾಯುತ್ತಿರುವೆ...

ಕಣ್ಣೆವೆಯ ಮುಚ್ಚಿದಾಕ್ಷಣವೇ  ಹೊತ್ತು 
ತರುವ ನಿನ್ನ ನೆನಪಿನ ಸವಿಗನಸು
ನಿನ್ನ ನೆನಪಿನಲೆಯಲ್ಲಿ 
ತೋಯ್ದಾಡುವ ಮೃದುಮನಸು
ಎಲ್ಲವೂ ಬೇಡುತ್ತಿದೆ ಗೆಳೆಯ
ನಿನ್ನಾಗಮನದ ಮಧುರ ಕ್ಷಣಕ್ಕಾಗಿ..

             ಶೈಲೂ......
[20/4/2019, 1:04 pm] Dr. B. N. Shylaja Ramesh: ,ಕಳೆದುಹೋಗಿದೆ ಹೃದಯ
*********************

ಎಲ್ಲೋ ಕಳೆದಿದೆ ಗೆಳೆಯ
ಕನಸು ತುಂಬಿದ ಹೃದಯ
ನೆನಪಿನಂಗಳದಿ ಚಿಮ್ಮುತ್ತಿರುವ
ಕಾರಂಜಿಯಲಿ ನಾನಲಿಯುವಾಗ

ಎಲ್ಲೋ ಕಳೆದಿದೆ ಗೆಳೆಯ
ಕಂಡೊಡನೇ ಉಲಿವ  ಹೃದಯ
ಜಾರಿಹೋಗಿದೆಯೇನೋ
ಕಣ್ಣಂಚಲಿ ಮಿಂಚು ಸರಿದಾಗ

ಎಲ್ಲೋ ಕಳೆದಿದೆ ಗೆಳೆಯ
ಹುಚ್ಚು ಮನಸಿನ ಹೃದಯ
ನೀನುಲಿದ ಸ್ವರಮಾಧುರ್ಯದ
ಸವಿಜೇನ ಸವಿಯುವಾಗ

ಎಲ್ಲೋ ಕಳೆದಿದೆ ಗೆಳೆಯ
ನಿನ್ನ ಬಿಂಬ ತುಂಬಿದ.ಹೃದಯ
ನೀನೆದುರು ನಿಂತು ಹುಸಿನಗೆಯ
ಹೂಬಾಣ ಹೂಡಿದಾಗ

ಎಲ್ಲೆಲ್ಲಿ ಹುಡುಕಲಿ ಗೆಳೆಯ
ಕಾಣದಾಗಿದೆ ಬಡ ಹೃದಯ
ಸಿಕ್ಕರೆ ಬಚ್ಚಿಡು ಜೋಪಾನವಾಗಿ
ಹೆಚ್ಚೇನು ಹೇಳಲಿ ಹೆಜ್ಜೆಹಾಕು ಜೊತೆಜೊತೆಯಾಗಿ

          ಶೈಲೂ......
[20/4/2019, 1:05 pm] Dr. B. N. Shylaja Ramesh: ,ನವಿರಾದ ನೆನಪು
**************

ಪ್ರಶಾಂತ  ಸಂಧ್ಯಾಸಮಯ
ತಂಗಾಳಿ ತಾಕಿ ಎನ್ನೆದೆಯ
ಅಲೆಅಲೆಯಾಗಿ ನೆನಪ ಸುರಳಿ
ಬಿಚ್ಚಿ ನೀಡುತಿದೆ ಕಚಗುಳಿ

ತಂಗಾಳಿ ತಂದ ಪರಿಮಳದ ಗಂಧ
ನೆನಪಿಸುತಿದೆ ನಿನ್ನ ವದನದ ಅಂದ
ಬಿರಿದ ತುಟಿಯಂಚಿನಿಂದ..ಆ
ಸೊಗಸ ಕರೆಯ ಕೇಳುವುದೇ ಚಂದ

ಮುಳುಗುತಿಹ ಆ ರವಿಯ ಕಿರಣ
ಮುಗುಳುನಗೆ ತಂದ ಪ್ರೀತಿಯ ಸ್ಪುರಣ
ಕಾಡುವೆಯೇಕೆ ಈ ಪರಿ ಅಕಾರಣ
ಮೋಡಿ ಮಾಡಿ ಕೆರಳಿಸಿದೆ ಮನವನ್ನ

ಚಿಲಿಪಿಲಿಯ ದ್ವನಿ ಹೊರಳಿ
ಹೊರಟಿದೆ ಮರಳಿ  ಗೂಡಿಗೆ
ನಿನ್ನೀ ಪ್ರೀತಿಯ ಕಲರವ
ತುಂಬಿಬಿಟ್ಟಿದೆ  ಎದೆಯೊಳಗೆ

ನೇಸರನಿಗೂ ಅವಸರ ಅಡಗಲು
ಭೂದೇವಿಯ ಒಲವ ಮಡಿಲೊಳು
ಕೆಂಪರಡಿ ಕೆನ್ನೆ ನಾಚಿ ನೀರಾದೆ
ಕನವರಿಸಿ ನಿನ್ನ ಮನದೊಳು

ಈ ಪ್ರಶಾಂತ ಸಂಜೆಗೂ
ನಿನಗೂ ಏನಿಹುದು  ಬಂಧ..?
ಕಾತರದ ಅಳಲಿನೊಲು
ಕಾಯ್ವೆ ನಾ ಮುದದಿಂದ...

           ಶೈಲೂ.....
[20/4/2019, 3:19 pm] Dr. B. N. Shylaja Ramesh: ಹುಂ... ಹಗುರಾಗಬೇಕು ಮತ್ತೆ
ಹಳೆಯ ಪೊರೆ ಕಳಚಿದಂತೆ
ಅವನಿತ್ತುದವನಿಗೇ ಮುಡಿಪು
ಬರೆದಿದ್ದದ್ದೊಂದು ಸವಿ ನೆನಪು

ಮುತ್ತು ರತ್ನದಂತಿತ್ತಲ್ಲ
ಮನವದರೊಳು ನೆಲೆಸಿತ್ತಲ್ಲ
ಅತ್ಯಮೂಲ್ಯ ಮನದ
ಭಾವಧಾರೆ ಸಿಹಿಜೇನು ಬೆಲ್ಲ

ಎನಿತು ಪ್ರೀತಿ ಪ್ರೇಮಧಾರೆ
ತುಂಬಿಸಲ್ಲಲ್ಲಿ  ನಡುವೆ ಅಕ್ಕರೆ
ಹುಸಿಮುನಿಸು ಕೋಪತಾಪ
ಬೆರೆಸವನು ಬರೆಸಿದ್ದ ಪಾಪ

ಕೊಟ್ಟಿದ್ದವನೇ ಪ್ರೀತಿಯಿಂದ
ಕಸಿದವನವನೇನು ಆಸೆಯಿಂದ
ಕಸಿದಿದ್ದೋ  ಕಳೆದದ್ದೋ  ಏನು
ಅರ್ಪಿತವೆಲ್ಲವನಿಗೆ  ಬುದ್ಧಿ ಮನ

ಕೊಟ್ಟಾನವನು ನೂರೆಂಟು
ಕಸಿದಿದ್ದಕ್ಕೆ ದುಪ್ಪಟ್ಟು
ಮರೆಸೆಲ್ಲ ನಗಿಸುವ ಗತ್ತು
ಅವನಲ್ಲದಿನ್ನಾರಿಗೆ ಗೊತ್ತು

ಮರುಕವಿತ್ತು ಈ ತನಕ
ಸಂತೈಕೆ ಮಾಡಿದೆ ಮೂಕ
ಅದೇನು ಬಂಧವೋ ಅರಿಯೆ
ನಿಮ್ಮೀ ಹಾರೈಕೆ ಪೊರೆಯೆ

ತಲುಪಲಿದೆ ಗುರಿ ಮುಂದೆ
ಗುರುವಿನ ಹಾರೈಕೆ ಹಿಂದೆ
ಕವಿಮನಸ ಕವಿ ತಾನೇ ಬಲ್ಲ
ನಮಿಸಿ ಶರಣಾದೆ ಮೆಲ್ಲ

          ಶೈಲೂ......

ನಿಮ್ಮ ಸಂತೈಕೆಯ ನುಡಿ ನಿಜಕ್ಕೂ.  ಖುಷಿ ತಂದಿದೆ ಸರ್
ಮತೆಯುತ್ತೇನೆ ಖಂಡಿತಾ... ಹಾಗೆಯೇ ಬರೆಯುತ್ತೇನೆ👍
Thank you so much sir🙏🙏🙏
[20/4/2019, 4:40 pm] Dr. B. N. Shylaja Ramesh: ಎಳೆ ಕೈಗಳ ಮೇಲೇನಿದು
ಕೆಂಪಿನೆಳೆಯ ಚಿತ್ತಾರ
ಅಂದದ ಕೈಯ್ಯ ಮೇಲಿನಿತು
ಮದರಂಗಿಯ.ಹುನ್ನಾರ

ಕೈಗೆ ಕಳೆ ಕೊಟ್ಟಿದೆ ನೋಡು
ಎಳೆ ಎಳೆಯಾಗಿ ಬಿಡಿಸಿದ ಬಣ್ಣ
ಮದರಂಗಿಗೆ ಮೆರಗಿತ್ತಿದುದು
ಮುದ್ದುಗೊಂಬೆಗಳ ಕೈಯಣ್ಣ

ಯಾರಿಟ್ಟರೇ ಹೇಳು  ಕಂದ 
ಈ ಅಂದದೆಳೆಯ ರಂಗೋಲಿ
ಮೂಡಿಸಿದೆ ಗಾಢ ರಂಗು
ಬಂಗಾರಿಯ ಕೈಯ್ಯಲ್ಲಿ

ಬಿಳಿ ಮೈಗೆ ಕೆಂಪುಬಣ್ಣ
ಸೆಳೆದೆಳೆಯಿತು ಕಣ್ಣ
ದೃಷ್ಟಿಯಾದೀತು ಜೋಕೆ
ಇಡೊಂದು ಕಪ್ಪುಚುಕ್ಕಿ ಗಲ್ಲಕೆ

            ಶೈಲೂ.....
[21/4/2019, 10:25 pm] Dr. B. N. Shylaja Ramesh: ಸ್ನೇಹ ಸಮ್ಮೇಳನ
***************

ನೀವು ನೆಟ್ಟ ವಿಶಾಲ
ಅಲದಮರದಡಿಯಲ್ಲಿ
ಇಂದೊಂದು ಸ್ನೇಹ ಸಮ್ಮೇಳನ

ಸ್ಪುರಿಸುತ್ತ ಸ್ನೇಹ
ತೀರಿತ್ತು ದಾಹ
ರೂವಾರಿ ಇಲ್ಲದ್ದು ಮನೋವೇದನ

ಎನಿತು ಸಂತಸದ ಸಮಯ
ಹರಟೆ ವಿಚಾರ ವಿನಿಮಯ
ನೀವಿತ್ತ ಬಳುವಳಿಯ ಸ್ನೇಹ ಸಂಗಮ

ಮಕ್ಕಳ ಕಲರವ
ಮುದವಿತ್ತ  ಸಾಂಗತ್ಯ
ಮರೆಸಿತ್ತು ನನ್ನೆಲ್ಲ ಮನದ ನೋವು

ಎಲ್ಲೋ ಒಮ್ಮೆ ಕಂಡು
ಶುರುವಾದ ಸಿರಿ ಸ್ನೇಹ
ಮರೆಸಿತ್ತು ನಾವು ನಮ್ಮವರ ಕಾವು

ಸಂತಸದಲೂ ನಡುವೆ
ನೀವಿಲ್ಲದ ಬೇಸರ
ನಿಜದಿ ನಮ್ಮೆಲ್ಲರ ಕಾಡಿತ್ತು

ಬರಿದೇ ನಿಮ್ಮದೇ ಮಾತು
ಮನ ಮನದಲಿ ಕುಳಿತು
ನಿಮ್ಮ ನೆನಪಲ್ಲಿ ರಾರಾಜಿಸುತ್ತಿತ್ತು

ಮತ್ತೆಂದು ಭೇಟಿಯೊ
ವಟವೃಕ್ಷ ದಡಿಯಲ್ಲಿ
ಕಾಯುವೆನು ಸಂತಸದ ಕ್ಷಣಕ್ಕಾಗಿ

ಇರಲಿ ನಮ್ಮ ನೆನಪು
ಮರೆಯದೇ ಹುರುಪು
ಶೀಘ್ರದಲೇ ತಾವು ಬರುವವರಾಗಿ

          ಶೈಲೂ.....
[8/11/2019, 10:25 am] Dr. B. N. Shylaja Ramesh: ಮೌನ
*******

ಮಾತು ಮೌನವಾದಾಗ
ಮೌನವೇ ಮಾತು
ಮೌನದಲೇ ಗುನುಗಿದಾಗ
ಮೌನವೇ ರಾಗವು
ಮನ ಮುನಿಸಿನಲಿರಲು
ಮೌನವಾಯ್ತು ಮದ್ದು
ಮೌನದೇಕಾಂತವದು
ಮುಸುಕುನೊಳಗಿನ ಗುದ್ದು
ಮಾತು ಮರೆಯಾದಾಗ
ಮೌನ ದಾರಿದೀಪ
ಮೌನ ವಿಜೃಂಭಿಸಿದಾಗ
ಮಾತು ತೀರದ ತಾಪ
ಮಾತು ಒಂದು ನುಡಿದರೆ
ಮೌನಕೆ ನೂರರ್ಥ
ಮಾತಿಗೆ ಅರಿಯಲಾಗದು
ಮೌನದ ಭಾವಾರ್ಥ
ಮಾತು ಮನೆಯ ಕೆಡಿಸಿದರೆ
ಮೌನ ಬಾಳನುಳಿಸಿತು
ಮೌನವಾದರೆ ಬದುಕು
ಮಾತಿಗೆ ಅರ್ಥವೆಲ್ಲುಳಿಯಿತು..??

       ಶೈಲೂ....
[12/12/2019, 5:05 pm] Dr. B. N. Shylaja Ramesh: ಅಪಸ್ವರ
*********

ಪ್ರಿಯ ಗೆಳೆಯ
ನನ್ನ ನಿನ್ನ ಸ್ನೇಹ ಬೆಸೆದು
ಸವಿ ಕನಸೊಸೆದು
ಮನದಲ್ಲಿ ಹಾಡಿತ್ತು
ಸುಂದರ ರಾಗ

ಕಡೆಗಣ್ಣ  ಕುಡಿನೋಟ
ಹೆಚ್ಚಿಸಿ ಎದೆಬಡಿತ
ಮನದಲ್ಲಿ ಗರಿಗೆದರಿ
ಆಡಿ ನವಿಲಿನ ನಾಟ್ಯ
ಮೂಡಿತ್ತು .ಅನುರಾಗ

ಹೃದಯವೀಣೆ ನುಡಿಸಿದ
ಸಪ್ತಸ್ವರಗಳ ಸುಂದರ
ಸಂಗೀತ .ಸುಧೆಯಲ್ಲಿ
ಮೂಡಿತ್ತು ಎಲ್ಲೋ
ಅಹಮ್ಮಿನ  ಅಪಸ್ವರ

ತಂತಿ ಮುರಿದಂತೆ ವೀಣೆ ಹರಿದಂತೆ
ಜೀವನದ ರಾಗ
ಶ್ರುತಿತಪ್ಪಿ ಹಾಡಿದೆ
ಬಂದೊಮ್ಮೆ ಮೀಟು
 ಹೃದಯದಾ ವೀಣೆ
ಮತ್ತೆ ಮೂಡಲಿ ಒಲವಿನ ರಾಗ

           ಶೈಲೂ.....
[12/12/2019, 5:54 pm] Dr. B. N. Shylaja Ramesh: ವೀರ ಹನುಮಾ
*************
ರಾಮ ಭಕ್ತ ಹನುಮಾ ಅಂಜನೀಪುತ್ರ ಹನುಮಾ
ಪವನ ಸುತ ಹನುಮಾ ಜೈ ವೀರಧೀರ ಹನುಮಾ
ಜೈ ಜೈ ವೀರ ಧೀರ ಹನುಮಾ  ||

ಸಾಗರ ಲಂಘಿಸಿ ಲಂಕೆಗೆ ಹಾರಿ
ಸೀತಾಮಾತೆಗೆ ಮುದ್ರೆ ಉಂಗುರವಿತ್ತೆ
ತರಿದು ರಕ್ಕಸರ ವೀರಾವೇಷದಿ
ಸಿಡಿದು ಆಗಸಕೆ ಲಂಕೆಯನೂ ಸುಟ್ಟೆ || ಜೈ ವೀರ ಧೀರ ಹನುಮಾ ||

ಭಕ್ತಿ ಶಕ್ತಿಯಲಿ ಕಲ್ಲನ್ನು ಜೋಡಿಸಿ
ಸಾಗರಕೆ ಸೇತುವೆಯನೂ ಕಟ್ಟಿ
ರಾಮನಾಮದ ಮಹಿಮೆಯ ಹಾಡುತ
ವಾನರ ಸೈನ್ಯದೆ ಲಂಕೆಯನೂ ಹೊಕ್ಕೆ || ಜೈ ವೀರ ಧೀರ ಹನುಮಾ||

ಅಮಿತ ಪರಾಕ್ರಮಿ ಅಗಾಧ ಬಲವಾನ್
ಸಂಜೀವಿನಿ ಪರ್ವತವನೆ ತಂದೆ
ಲಕ್ಷ್ಮಣನ ಜೀವವುಳಿಸಿ ರಾಮಗೆ ನಮಿಸಿ
ವೀರಾವೇಷದಿ ರಕ್ಕಸರನು ಕೊಂದೆ || ಜೈ ವೀರಧೀರ ಹನುಮಾ ||

ರಾಮನ ಭಂಟ ಜೈ ಹನುಮಂತ
ಪೊಗಳಲಹುದೇ ನಿನ್ನಯ ಚರಿತೆ
ರಾಮನಾಮದ  ಹಿರಿಮೆಯ ಸಾರುತ
ಜಗದ ಜಂಜಡವನೆ ಮರೆತೇ || ಜೈ ವೀರ ಧೀರ ಹನುಮಾ ||

ನೀನಿರುವೆಡೆಯೇ ರಾಮನ ವಾಸ
ರಾಮನಾಮವೇ ನಿನ್ನ ಶ್ವಾಸ
ಪೊರೆ ಎನ್ನನು ಮಾರುತಿರಾಯ
ರಾಮಭಕ್ತಿಯ ನೀಡೆನಗೆ ಲವಲೇಶ || ಜೈ ವೀರ ಧೀರ ಹನುಮಾನ್ ||

           ಶೈಲೂ......
[12/12/2019, 5:59 pm] Dr. B. N. Shylaja Ramesh: ವೀರ ಹನುಮಾ
*************
ರಾಮ ಭಕ್ತ ಹನುಮಾ ಅಂಜನೀಪುತ್ರ ಹನುಮಾ
ಪವನ ಸುತ ಹನುಮಾ ಜೈ ವೀರಧೀರ ಹನುಮಾ
ಜೈ ಜೈ ವೀರ ಧೀರ ಹನುಮಾ  ||

ಸಾಗರ ಲಂಘಿಸಿ ಲಂಕೆಗೆ ಹಾರಿ
ಸೀತಾಮಾತೆಗೆ ಮುದ್ರೆ ಉಂಗುರವಿತ್ತೆ
ತರಿದು ರಕ್ಕಸರ ವೀರಾವೇಷದಿ
ಸಿಡಿದು ಆಗಸಕೆ ಲಂಕೆಯನೂ ಸುಟ್ಟೆ || ಜೈ ವೀರ ಧೀರ ಹನುಮಾ ||

ಭಕ್ತಿ ಶಕ್ತಿಯಲಿ ಕಲ್ಲನ್ನು ಜೋಡಿಸಿ
ಸಾಗರಕೆ ಸೇತುವೆಯನೂ ಕಟ್ಟಿ
ರಾಮನಾಮದ ಮಹಿಮೆಯ ಹಾಡುತ
ವಾನರ ಸೈನ್ಯದೆ ಲಂಕೆಯನೂ ಹೊಕ್ಕೆ || ಜೈ ವೀರ ಧೀರ ಹನುಮಾ||

ಅಮಿತ ಪರಾಕ್ರಮಿ ಅಗಾಧ ಬಲವಾನ್
ಸಂಜೀವಿನಿ ಪರ್ವತವನೆ ತಂದೆ
ಲಕ್ಷ್ಮಣನ ಜೀವವುಳಿಸಿ ರಾಮಗೆ ನಮಿಸಿ
ವೀರಾವೇಷದಿ ರಕ್ಕಸರನು ಕೊಂದೆ || ಜೈ ವೀರಧೀರ ಹನುಮಾ ||

ರಾಮನ ಭಂಟ ಜೈ ಹನುಮಂತ
ಪೊಗಳಲಹುದೇ ನಿನ್ನಯ ಚರಿತೆ
ರಾಮನಾಮದ  ಹಿರಿಮೆಯ ಸಾರುತ
ಜಗದ ಜಂಜಡವನೆ ಮರೆತೇ || ಜೈ ವೀರ ಧೀರ ಹನುಮಾ ||

ರೋಮರೋಮದಲಿ ರಾಮನಾಮವ ತುಂಬಿ
ರಾಮನ ಪ್ರಿಯ ಬಂಧುವಾದೆ
ಹೃದಯ ಕಮಲದಲಿ ರಾಮನ ನಿಲಿಸಿ
ನಿಜ ಭಕ್ತಿಗೇ ನೀ ಸಿಂಧುವಾದೆ || ಜೈ ವೀರಧೀರ ಹನುಮಾ ||

ನೀನಿರುವೆಡೆಯೇ ರಾಮನ ವಾಸ
ರಾಮನಾಮವೇ ನಿನ್ನ ಶ್ವಾಸ
ಪೊರೆ ಎನ್ನನು ಮಾರುತಿರಾಯ
ರಾಮಭಕ್ತಿಯ ನೀಡೆನಗೆ ಲವಲೇಶ || ಜೈ ವೀರ ಧೀರ ಹನುಮಾನ್ ||

           ಶೈಲೂ......
[13/12/2019, 7:26 am] Dr. B. N. Shylaja Ramesh: ಕಾಯುತಿಹೆ
**********

ಕಾದು ಕುಳಿತೆನು ನಾನು 
ಎದುರು ನೋಡುತ ನಿನ್ನ ಬರುವನ್ನೇ
ತಡವೇಕೆ ಗೆಳೆಯಾ ಮರೆತುಬಿಟ್ಟೆಯ 
ನೀನು ನನ್ನಿರುವನ್ನೇ

ನೀಬರುವ ದಾರಿಯನು 
ಕಾದುನೋಡುತ್ತಾ 
ಮಂಜಾಯ್ತು ಎನ್ನ ಕಣ್ಣು
ನೆಟ್ಟದೃಷ್ಠಿ ಯಲಿ ನಿನ್ನ ಬಿಂಬವೇ ಕಾಣಲಾಗದು ಏನೂ

ಹಸಿರುಡುಗೆಯುಟ್ಟ 
ಪ್ರಕೃತಿಯು ಕೂಡ ಸ್ಪರ್ಧೆಗಿಳಿದಂತೆ
ತುಂಬಿ ನೀರವ ಶಾಂತಿ ಹೆಚ್ಚಿಸಿದ್ದಾಳೆ 
ಎನ್ನ ಮನದ ಚಿಂತೆ

ಅರೆಬಿರಿದ ಹೂಗಳೂ ಜೊತೆಯಾಗಿದೆ ಎನಗೆ 
ಬೀರುತ್ತ ಸುಗಂಧ
ಕಾದು ಕುಳಿತಂತಿದೆ ದುಂಬಿಗಾಗಿಯೇ 
ತಾ ಸುರಿಸುತ ಮಕರಂದ

ಬೀಸುತಿಹ ತಂಗಾಳಿ ಮುತ್ತಿ ಮೈಮನವ 
ಹೆಚ್ಚಿಸಿದೆ ನಿನ್ನ ನೆನಪ
ಅದರ ಹುನ್ನಾರವೇ ಬೇರೆ ತಂಪೆರೆವಂತೆ ಕಂಡರೂ
 ಎನ್ನ ಸೋಕಲು  ಅದಕೊಂದು ನೆಪ

ನೀಬರುವ ವರೆಗೂ ಏಳಲಾರೆನು 
ಕೂತಲ್ಲಿಯೇ  ಅಚಲ
ಬಂದೇ ಬರುವಿಯೆದು ಹೇಳುತ್ತಿದೆ ಮನವು
 ನಿರ್ಧಾರವಿದು ಪ್ರಭಲ

          ಶೈಲೂ.......

ಚಿತ್ರ ಕೃಪೆ :--
ನಾಗೇಶ್ ರವರು
[13/12/2019, 7:27 am] Dr. B. N. Shylaja Ramesh: ನನ್ನವಳು
********

ನನ್ನವಳೊಂದು ಚಂದನದ ಗೊಂಬೆ
ಮೈಮಾಟವದು  ಅಪ್ಸರೆಯ ತೆರದಿ
ಬಳ್ಳಿ ನಡುವಿನ ಚೆಲುವೆ ಒಲವ ಲತೆಯಿವಳು
ಕುಸುಮ ಕೋಮಲ ಬಾಲೆ
ಗಾಂಭೀರ್ಯ ನಡೆಯವಳು 
ಸವಿಮಾತಿನರಗಿಣಿ   ಸ್ವರವೋ ಕೋಗಿಲೆಯ ಇಂಪು  ಸದ್ಗುಣಗಳ ಗಣಿ  ಇವಳೆನ್ನ ಕಣ್ಮಣಿ

ನನ್ನವಳು  ಪ್ರಕೃತಿಯ ತೆರದಿ
ಮುಖವು ಕೆಂದಾವರೆಯು ಹುಬ್ಬು ಇಂದ್ರಾಚಾಪ
ಮೀನು ಹೊರಳಿದಂತೆ ಚಂಚಲತೆಯ ನಯನ
ಕೆನ್ನೆ ಸೇಬನು ಕಚ್ಚಲಲ್ಲೇ ಗಿಣಿ ಮೂಗು
ತೊಂಡೆ ತುಟಿಗಳ ಒಳಗೆ ದಾಳಿಂಬೆ ಪಂಕ್ತಿ
ಹಾಲ್ಗಲ್ಲದ ಚೆಲುವೆ ನಕ್ಕರಲ್ಲೇ ಗುಳಿಕೆನ್ನೆ
ಅಲ್ಲಿ ಬಿದ್ದವ ನಾ ಮೇಲೆಳಲೇ ಇಲ್ಲ

ನನ್ನವಳೊಂದು ವಿಸ್ಮಯದ ಲೋಕ
ನಗೆಯು ಬೆಳದಿಂಗಳಂತೆ ಕೋಪ ಅಗ್ನಿತಾಪ
ಒಲವ ಸೋನೆಯ ನಡುನಡುವೆ
ಗುಡುಗು ಸಿಡಿಲಬ್ಬರದ ದ್ವನಿ
ಬೆಳ್ಳಿಮೋಡಗಳ ನಡುವೆ
ಕವಿದಂತೆ  ಕಾರ್ಮೋಡ
ಸಂತಸದ ನಗೆ ಮಿಂಚಿನಡಿಯಲ್ಲೇ ಹುಸಿಮುನಿಸ ಭಾವ
ಎಲ್ಲಿಂದಲೋ ಭೋರ್ಗರೆದು ದುಮುಕುತ್ತಿದೆ ಬಿರುಮಳೆಯ ಕಂಬನಿ
ಇದ ಕಂಡು ನಾನಾದೆ ಮೂಕ ವಿಸ್ಮಿತ

            ಶೈಲೂ.......
[17/12/2019, 8:13 am] Dr. B. N. Shylaja Ramesh: ಕೈ ಹಿಡಿದು ನಡೆಸು
****************

ಚಿಂತೆಯ ಪಥದೊಳಗೆ
ಮನ ಅಲೆದು ನಡೆದಿರಲು
ಹೇಗೆ ತಲುಪಲಿ ತಂದೆ
ಗುರಿಯ ಕಡೆಗೆ

ಜೀವನದ ಕಡಲೊಳಗೆ
ಮುಳುಗಿ ಹೋಗಿಹ ನನಗೆ
ತೋರು ದಾರಿಯ
ನಡೆಸು ಮುಳುಗದಂತೆ

ತೀರಕಾಣದ ಕಡಲ
ಬಳಸುದಾರಿಯಲಿ 
ಅಲೆಯುತಿರುವೆ
ದಿಕ್ಕುತಪ್ಪಿದಂತೆ

ಗಾಢಾಂಧಕಾರದ ಕಡಲ
ಹಾದಿಯ  ನಡುವೆ
ತೋರಿ ದೀವಟಿಗೆಯ 
ನಡೆಸು ದಾರಿ ತಪ್ಪದಂತೆ

ಇಲ್ಲಿ ನಾನಲೆದು ನಡೆವಾಗ
ನೋವಿನಲಿ ಮಿಡುಕಿದರೆ
ತೋರು ಕರುಣೆಯ ಕಾಂತಿ
ನೀ ಎನ್ನ ಮರೆಯದಂತೆ

ನನ್ನಂತರಂಗದಲಿ
ಚಿರವಾಗಿ ನೆಲೆನಿಂತು
ತೋರು ಸರಿ ದಾರಿಯ
ದಿಕ್ಸೂಚಿ ಯಂತೆ

ಚಿರ ಮಧುರ ಕಾಂತಿಯಲಿ
ಸರಿ ದಾರಿ ಕಂಡಾಗ
ಸೇರುವೆನು ಗುರಿಯೆಡೆಗೆ
ದಾರಿ ತಪ್ಪದಂತೆ

ಕೈಹಿಡಿದು ನಡೆಸೆನ್ನ
ನಂಬಿರುವೆ  ನಾ ನಿನ್ನ
ಅಪ್ಪಿಕೊ ಎನ್ನ ನೀ
ಹೆತ್ತ ತಾಯಿಯಂತೆ

          ಶೈಲೂ.......
[17/12/2019, 8:16 am] Dr. B. N. Shylaja Ramesh: ಮೂಢನಂಬಿಕೆ
*************

ತನ್ನದೇ ನೆರಳಿಗೂ ಹೆದರುವ
ಪುಕ್ಕುಲು ಸ್ವಭಾವದ ಮನ
ನಿರಂತರ ಅವ್ಯಕ್ತ ಭಯಭೀತ
ತನ್ನವನತಿಗೆ ತಾನೇ ಕಾರಣ

ಬೀಸುಗಾಳಿಗೆ ದೀಪವಾರಿದರೂ ಸರಿ
ಬಾಳೇ ಕತ್ತಲಾದೀತೆಂಬ ಮೂಢಭಯ
ದಾರಿಗಡ್ಡ ಬಂದರಾಯ್ತು ಬೆಕ್ಕು
ಅಪಶಕುನ, ನಿಸ್ತೇಜ ಬದುಕು

ಮಾತಿನ ಮಧ್ಯದಲ್ಲೊಂದು ಸೀನು
ಕಾರ್ಯವಿಳಂಬದ ಗೋಣು
ಎದುರಾದರಾಯ್ತು ಖಾಲಿ ಕೊಡ
ಅಪಶಕುನವಂತೆ ಕಾರ್ಯ ಜಡ

ಹಲ್ಲಿ ನುಡಿಯಲು ಶಕುನ
ಕಣ್ಣದುರಿದರೆ ಸ್ಥಬ್ದ ಸಂಚಲನ
ಎಲ್ಲಕ್ಕೊಂದೊಂದು ಕಿಡುನುಡಿ
ಮೂಢಾಚಾರಣೆಗೆ ಮುನ್ನುಡಿ

ಮನಹೊಕ್ಕು ಸುಮ್ಮನೆ ಕೊರೆತ
ಕಾರ್ಯವಾದರೆ ಅಹಿತ
ಸರಿ ತಪ್ಪುಗಳಲಿ ಅನುಮಾನ
ಮೌಢ್ಯ ಆಚರಣೆಯಲ್ಲಿ ಮನ

ಸರಳ ನಿವಾರಣೆ ಮಂತ್ರ
ಮೆಣಸು ನಿಂಬೆಯ ಪಾತ್ರ
ಮಾಂತ್ರಿಕ ಸಲಹಾ ಸೂತ್ರ
ದೃಷ್ಟಿ ಗೊಂಬೆ ಮಹತ್ತರ ಗಾತ್ರ

ಸರಿತಪ್ಪುಗಳರಿವಿಲ್ಲ 
ಮೌಢ್ಯಕ್ಕೆ ಮಿತಿಯಿಲ್ಲ
ಆಚರಣೆಯಲೂ ಗೋಜಲು
ಬಗೆಹರಿದೀತೆ ಮನದಳಲು

ಜ್ಞಾನವೋ ಅಜ್ಞಾನವೋ ನಂಬಿಕೆ
ಸರಿತಪ್ಪುಗಳ ಜಿಜ್ಞಾಸೆ ಮನಕೆ
ಅನಿಸಿಕೆಗನುಸಾರ ನಡೆಯಲಿ ಬಿಡಿ
ಸಂಕಷ್ಟವರಿದು ಸಿಕ್ಕರಷ್ಟೇ ಸಾಕು ನೆಮ್ಮದಿ

                 ಶೈಲೂ......
[17/12/2019, 12:25 pm] Dr. B. N. Shylaja Ramesh: ಕನ್ನಡಿಯ ಎದುರು ನಾ ನಿಂತಾಗ ##
****************************

ಕನ್ನಡಿಯ ಎದುರು ನಾ ನಿಂತಾಗಲೆಲ್ಲಾ
ಉಕ್ಕಿಬರುವುದು ಅಭಿಮಾನ ಕನ್ನಡಿಯ ಮೇಲೆ
ಬಹು ಪರಾಕ್ ನುಡಿವ ಭಟ್ಟಂಗಿಯಲ್ಲ..!!
ಸೀದಾ ಸಾದಾ ತೋರುವುದು ನಿಜದ ನೆಲೆ

ಬಹುಶಃ ಜಗದಲ್ಲಿ ಇದೊಂದೇ ಇರಬೇಕು
ಕಂಡದ್ದನ್ನು ಕಂಡಂತೆಯೇ ತೋರುವ ಭೂಪ
ಮಿಥ್ಯಕಂತೂ ತಾವಿಲ್ಲ ಅದಕ್ಕೇ ಇರಬೇಕು
ಶುಭಕಾರ್ಯಗಳಲಿ ಕಳಶ ಕನ್ನಡಿಯ ಪ್ರತಾಪ

ಸತ್ಯ ಹರಿಶ್ಚಂದ್ರನ ವಂಶದ ತುಂಡೇನೋ
ಸತ್ಯವನ್ನಲ್ಲದೆ ಬೇರೇನೂ ತೋರದು
ಅವರವರ ರೂಪವನ್ನವರಂತೆಯೇ ತೋರಲೆನೋ
ಮನ್ನಣೆಯು ಬಹುಪಾಲು ಈ ಕನ್ನಡಿಯದು

ಅದೆಷ್ಟು ಗರಿಮೆ ಹಿರಿತನವಿದ್ದರೂ ಸರಿ
ಬೇಧವಿಲ್ಲದೆ ನಿಜವ ಮಾರ್ದನಿಸುವುದು ಕನ್ನಡಿ
ಹಮ್ಮು ಬಿಮ್ಮುಗಳಲಿ ಉಬ್ಬಿ ಹೋದರೂ ಸರಿ
ನಿಜರೂಪವನೆ ತೋರಿ ಬರೆಯುವುದು ಮುನ್ನುಡಿ

         ಶೈಲೂ.......
[29/3/2020, 3:28 pm] Dr. B. N. Shylaja Ramesh: ಚಿತ್ರಕಾವ್ಯ##

ಅತ್ತ ಹಸಿರು ಇತ್ತ ನೀರು
ನಡುವೆ ಇದೆ ನಡೆವ ಹಾದಿ
ಮೇಲೆ ತೂಗುವ ಬೆಳ್ಮುಗಿಲು
ಕಲ್ಪವೃಕ್ಷಗಳು ಚಾಮರವ ಬೀಸಿರಲು
ಆಯಾಸವಿರದು ನಡಿಗೆಯಲಿ
ಏನಿದ್ದರೇನು? ಹಸಿವೆ ನೀಗುವುದಿಲ್ಲ
ತುಂಬಿಸಬೇಕಲ್ಲ ತುತ್ತಿನ ಚೀಲ
ಕಾಯಕವ ಅರಸಿ ಹೊರಟೆ ಬೈಸಿಕಲ್ಲ ಜೊತೆಯಲ್ಲಿ

             ಶೈಲೂ....
[10/5/2020, 11:02 am] Dr. B. N. Shylaja Ramesh: ಅಮ್ಮ ಅಮ್ಮಾ ಎಂದು ಕರೆಯುತಿಹೆನಮ್ಮಾ
ಶಿವರಂಜಿನಿ – ಝಪತಾಲ |

ಅಮ್ಮ ಅಮ್ಮಾ ಎಂದು ಕರೆಯುತಿಹೆನಮ್ಮಾ

ಕರಕರೆಯಿದೆಂದೆನದೆ ಓಡಿ ಬಾರಮ್ಮಾ||

ಯಾರ ದೋಷಗಳೆಷ್ಟು ನನಗೇಕೆ ಬೇಕು।

ನನ್ನ ದೋಷವ ತಿದ್ದಿ ನೀ ಸಲಹಬೇಕು||

ಪಾಪಿಗಳನುದ್ಧರಿಪ ನೀ ದಯಾಸಿಂಧು|

ನೀಡೆನಗೆ ಕರುಣೆಯಿಂ ಆ ಕೃಪೆಯ ಬಿಂದು||

ತಾಯಿ ನೀನಿರುತಿರಲು ತಬ್ಬಲಿಯೆ ನಾನು| ವಾತ್ಸಲ್ಯಸುಧೆಯುಣಿಸಲಾರೆಯಾ ನೀನು||

ಜ್ಞಾನ ಭಕ್ತಿ ವಿವೇಕ ವೈರಾಗ್ಯ ನೀಡು|

ಎನ್ನ ಹೃನ್ಮಂದಿರದಿ ನಿತ್ಯ ನಲಿದಾಡು||

– ಸ್ವಾಮಿ ಪುರುಷೋತ್ತಮಾನಂದ
[10/5/2020, 5:04 pm] Dr. B. N. Shylaja Ramesh: #ಮನಸಿನ_ಕನ್ನಡಿಯಲಿ_ನಿನದೇ_ಬಿಂಬ

ಮನಸಿನ ಕನ್ನಡಿಯಲಿ ನಿನದೇ ಬಿಂಬ
ಆಸೆ ಸಾವಿರ ಹರಡಿದೇ ಮನದ ತುಂಬಾ
ಬಾಳ ಹೊತ್ತಿಗೆಯ ಪುಟಪುಟದಲೂ ಬರೆದೆ
ನವಿರಾದ ಪ್ರೇಮಪತ್ರ ಹೆಸರು ನಿನದೇ

ಬೆಳಗಿದೆ ಗೆಳೆಯ ನಿನ್ನಿಂದಲೇ ಬಾಳು
ನಿನ್ನೆನೆ ನೆನೆಯುತ್ತ ಜೀವ ಸವೇಸಿರಲು
ಸವಿಯುತ್ತ ನಡೆದಿರುವೆ ನವರಾಗ ಹಾಡುತ
ನೀನಿತ್ತ ಸವಿ ನೆನಪ ಬುತ್ತಿಯ  ಸಹಿತ

ಮನದ ಮುಗಿಲ ಬಯಲಲಿ ನೀ ಚಂದಿರ
ಆ ಬೆಳದಿಂಗಳಲ್ಲರಳಿದ ನಾ ಮಂದಾರ
ನಿನ್ನನುರಾಗದ ಅಲೆಯಲ್ಲಿ ನಾ ತೇಲಿ ತೇಲಿ
ಜೀವನವನೆ ಒತ್ತೆಯಿಟ್ಟೆ ನಿನ್ನ ಕೈಲಿ

ಬಾಳ ಪುಟದಲ್ಲಿ ಬರೆದೆ ನೀ ಮುನ್ನುಡಿ
ಸ್ವಚ್ಛ ಸುಂದರವಂತೆ ನನ್ನ ಮನದಕನ್ನಡಿ
ಕನ್ನಡಿಯ ತುಂಬೆಲ್ಲ.ನಲ್ಲ ನಿನದೇ ಬಿಂಬ
ನಿನ್ನ ಹೊಳಪು ಕಣ್ಣಲಿ ಕಂಡೆ ನನ್ನ ಪ್ರತಿಬಿಂಬ

            ಶೈಲೂ......
[14/5/2020, 6:50 pm] Dr. B. N. Shylaja Ramesh: ## ಭಾವ ಗೀತೆ ಸ್ಪರ್ಧೆ ##
******************
ಶೀರ್ಷಿಕೆ:: ಕರ್ತವ್ಯ ಪ್ರಜ್ಞೆ
*******†***********"
ಬಂದಿತಿದೋ ಎಲ್ಲೆಡೆ ಹೊಸ ಮಾರಿಯು
ಕರೋನಾ ಎಂವ ರೋಗದ ಸವಾರಿಯು
ಮದ್ದೇ ಇಲ್ಲದಾ ವ್ಯಾಧಿಯು ಇದಾಗಿಹುದು
ಈ ಕಾಯಿಲೆಯ ಅರಿತು ಯಾರಿಹರು....

ಒಮ್ಮೆಲೆ ನುಗ್ಗಿ ಬಂತಿದು ಇಡೀ ಜಗಕೇ
ಬಡವ ಬಲ್ಲಿದರೆಂದು ಕೂಡ ನೋಡದೇ..
ಎಷ್ಟು ಹಣವಿದ್ದರೂನೂ ಬೆಲೆ ಇಹುದೇ
ದುಡ್ಡಿನಿಂದ ವಾಸಿಯಾಗದಂತ ಕಾಯಿಲೇ..

ಇದನು ಹೊಡೆದಟ್ಟಲೇ ಬೇಕು ನಾವುಗಳು
ಮನೆಯಲಿದ್ದು ಸ್ವಚ್ವತೆಯ ಪಾಲಿಸುತಾ
ಸಾವಿರಾರು  ವೈದ್ಯ..ಆರಕ್ಷಕ..ಯೋಧರು
ನಮಗಾಗಿ ಹಗಲಿರುಳು ಶ್ರಮಿಸುತಿಹರು..

ನಮಿಸುವ ಅವರ ಈ ಹಗಲಿರುಳ ಶ್ರಮಕೆ
ನಿಸ್ವಾರ್ಥ ಸೇವೆಗೈಯುತಿರುವ ಮನಗಳಿಗೆ
ನಮ್ಮ ರಕ್ಷಣೆಗೆ ಟೊಂಕ ಕಟ್ಟಿ ನಿಂತಿಹರು
ಅವರ ಋಣವ ತೀರಿಸಲೆಂತು ನಾವುಗಳು....

ತಮ್ಮಪ್ರಾಣ ಒತ್ತೆಇಟ್ಟಿಹರು ದೇಶ ಕಾಯಲು
ಊಟ ನಿದ್ರೆ ಮನೆಯ ತೊರೆದು ದಿನನಿತ್ಯವು
ರೋಗಿಗಳ ಸೇವೆಗೆ ಮುಡುಪಿಟ್ಟ ದಾದಿಯರು
ದೇಶ ನಗರ ಸ್ವಚ್ಚಗೊಳಿಸುತ ಪೌರ ಕಾರ್ಮಿಕರು...

ಬನ್ನಿ ಕೈ ಜೋಡಿಸೋಣ ಅವರೊಡನೆ ನಾವು
ಅವರಾಕುವ ಕಟ್ಟುಪಾಡುಗಳ ಬೆಂಬಲಿಸುವ
ನಮ್ಮೊಳಿತಿಗೆ ದುಡಿವ ಅವರಿಗೂ ಹಾರೈಸುವ
ಅವರೆಲ್ಲರ ಆರೋಗ್ಯಕೇ ದೇವರನು ಬೇಡುವ.....

***   ಅನಿತ .ಪಿ ಕೆ. ***
[18/5/2020, 4:15 pm] Dr. B. N. Shylaja Ramesh: #ಕಾಡುವ_ನೆನಪು

ತುಂಬಿಕೊಂಡಿದೆ ನೀರ ಹನಿ ಮುತ್ತು ಕಣ್ಣಲ್ಲಿ
ನೋವಿನಿಂದಲ್ಲ ಕಾಡುವ ನಿನ್ನ ನೆನಪ ಹಾವಳಿಯಲ್ಲಿ
ಹನಿ ನೀರ ಧಾರೆ ಸುರಿದು ಸಾಗರದ ತೆರನಂತಿದೆ
ಸಿಲುಕಿಬಿಟ್ಟಿರುವೆ ನೋಡು ನಿನ್ನ ನೆನಪ ಸುಳಿಯಲ್ಲಿ

ಅಪ್ಪಳಿಸುತ್ತಿದೆ ಮನದ ದಡಕ್ಕೆ ತೆರೆಗಳಂತೆ
ತೆರೆತೆರೆಯಾಗಿ ಸುಳಿವ ಸಾಗರದ ಅಲೆಗಳಂತೆ
ಉರುಳುತ್ತಿದೆ ಸಮಯ ನಿನ್ನ ನೆನಪ ಜೊತೆಯಲ್ಲಿ
ಕರಗಿಹೋಗುವ ಮುನ್ನ ನಿಶೆಯಲ್ಲಿ ಬಾ ಬೆಳಕಂತೆ

ನಾಳೆಯ ಭರವಸೆಯಲ್ಲಿ ಬದುಕುತ್ತಿದೆ ಈ ಜೀವಾ
ನಿನ್ನ ನೆನಪ ಸಾಂಗತ್ಯದಲಿ ಸವೆಯುತ್ತಿದೆ ಮನದಭಾವ
ಬಯಕೆಯ ಬನದಲ್ಲಿ ಬದುಕಿನ ಲಯದಲ್ಲಿ ಜೀವನ
ಅಳಿಸಲಾರದ ಹೆಜ್ಜೆಗುರುತಿತ್ತಿದೆ ನವಿರಾದ ನೋವ

ಚಿತ್ತಭಿತ್ತಿಯ ಚಿತ್ತಾರಗಳಲಿ ನಿನ್ನ ರೂಪ ಬಿಡಿಸಿದೆ
ಕನಸುಕಂಗಳ ಕಲ್ಪನೆಯ ಕನ್ನಡಿ ನಿನ್ನಾಕಾರ ಬಿಂಬಿಸಿದೆ
ಅಕ್ಷರಗಳ ರಂಗಿನುಡುಗೆಯ ತೊಡಿಸುವೆ ಬಾರಾ
ಹೆಕ್ಕಿಹೆಕ್ಕಿ ಬರೆದು ಸುಸ್ತಾಗಿ ಮನ ಮುದುಡಿಬಿಟ್ಟಿದೆ.

         ಶೈಲೂ.....
[23/11/2020, 12:48 pm] Dr. B. N. Shylaja Ramesh: ಬರೆಯಲಾಗದ ಕವಿತೆ...😞😞
******************

ಕವಿತೆಯೊಂದ ಬರೆಯಲೆಂದು ಕುಳಿತೆ
ಯಾಕೋ ಕಾಡುತ್ತಿದೆ ಪದಗಳ ಕೊರತೆ
ನಡುಗುವ ಕೈಯಲ್ಲಿ ಹಿಡಿಯಲಾಗದೆ ಲೇಖನಿ
ಯಾಕೋ ತಡವರಿಸಿದೆ ಒಡಲಾಳದ ಒಳದನಿ

ಎಲ್ಲಿ ಹುಡುಕಲಿ ಭಾವನೆಗಳ ಬಿಂಬಿಸುವ
ಸೂಕ್ತ ಪದಗಳ ಅರ್ಥಪೂರ್ಣ ವಾಕ್ಯ
ಹೊರಹೊಮ್ಮಲಾರದ ಭಾವನೆಗಳ ತಾಕಲಾಟದಲಿ
ಯಾಕೋ ಅಪ್ಪಿದೆ ಮನವು ಮೌನದ ಸಖ್ಯ

ಕಳೆಯಿತೆಲ್ಲಿ ಮನಸು ಬರೆಯುವುದೇ ಮರೆತು
ಯೋಚಿಸಿದರೂ ಸಿಗಲಿಲ್ಲ ಪದಗಳ ಥಾಲಿ
ವಿಷಯವಿದೆ ಬಹಳಷ್ಟು ಅರುಹಲಿದೆ ಮುಗಿಲಷ್ಟು
ಯಾಕೋ ಬರೆಯಲಾಗದು ಮನಸೆಲ್ಲ ಖಾಲಿ ಖಾಲಿ

ಎಲ್ಲಿ ಅಡಗಿದೆಯೋ ಪ್ರಾಸ ಭಾವನೆಗಳ ಮಿಡಿತ
ತಡಕಿದಷ್ಟೂ ದೂರ ಕೈಗೆಟುಕದ ನಿಹಾರಿಕೆ
ಮನೆಮಾಡಿತ್ತು ನಿರಾಶೆ ಬರೆಯಲಾಗದ ಹತಾಶೆ
ಯಾಕೋ ಸೊರಗಿದೆ ಲೇಖನಿ ಕವಿತೆಯಿಂದು ಮರೀಚಿಕೆ....😞😞😞

           ಶೈಲೂ......
[23/11/2020, 12:49 pm] Dr. B. N. Shylaja Ramesh: ಕವನ ಸ್ಪರ್ಧೆ##

ಚಿತ್ರಕ್ಕೊಂದು ಕವನ..
ಗೋಧೂಳಿ ಸಮಯ
*****************

ಹಾರುತಿದೆ ಬಾನಾಡಿ ತನ್ನ ಗೂಡನರಸಿ
ಮುಳುಗುತಿಹ ದಿನಕರನೂ ದಿನಚರಿ ಮುಗಿಸಿ
ಅಲ್ಲಲ್ಲಿ ತಾರೆಗಳ ಒಡ್ಡೋಲಗ ಮೇಳ
ಶಶಿಯೊಡನೆ ಬಾನಲ್ಲಿ ಬೆಳಗುವ ವೇಳಾ

ಆಗಸದ ಕೆಂಬಣ್ಣ ಚೆಲುವನು ನೋಡಿ
ಆವರಿಸಿದೆ ಗೆಳೆಯ ನಿನ್ನೊಲವ ಮೋಡಿ
ಆ ಕೆಂಪು ರಂಗಲಿ ಬೆರೆತೆನ್ನ ಮನ
ರಂಗಾಯ್ತು ಕೆನ್ನೆ ನೆನೆದೊಡನೆ ನಿನ್ನ

ಬೇಕೆನಿಸಿದೆ ಗೆಳೆಯ ನಿನ್ನ ಸವಿಮಾತು
ಏಕಾಂತದಿ ಕುಳಿತು  ಈ ಗೋಧೂಳಿ ಹೊತ್ತು
ತಂಗಾಳಿ ತಂಪಲಿ ತನು ಗರಿಬಿಚ್ಚಿ ಎದ್ದು
ಹಾರುತಿದೆ ಹಕ್ಕಿಗಳಂದದಿ ನಿನ್ನ ನೆನಪ ಹೊದ್ದು

ಬಾನಾಡಿ ಹಾಡಿಗೆ ತಲೆದೂಗಿದೆ ಮನ
ನೆನೆಯುತಿದೆ ನಸುನಾಚಿ ನಿನ್ನೊಡನೆ ಕಳೆದಕ್ಷಣ
ಒಲವ ಗೆಳೆಯ ನಿನಗೊಂದು ಹೂ ಮುತ್ತು
ಬಯಕೆಗಳ ಉತ್ತೇಜಿಸುವ ಈ ಗೋಧೂಳಿ ಹೊತ್ತು

             ಶೈಲೂ.......
[23/11/2020, 12:56 pm] Dr. B. N. Shylaja Ramesh: #ದ ಕಾರ ಗುಣಿತಾಕ್ಷರ #

ದೈವಕೆ ನಿವೇದನೆ
**************

ದಣಿವು ಕಾಣುತಿದೆ ಬದುಕಲಿ ದೇವ
ದಾರಿ ಏಕೋ ಕಾಣದಾಗಿದೆ 
ದಿಕ್ಕು ತಪ್ಪಿದ ನಾವೆಯಂತಾಗಿದೆ ಬದುಕು
ದೀನಳಾಗಿ ಬೇಡುತ್ತಿರುವೆ ನಿನ್ನಲಿ
ದುಡಿವ ಚಲವೇಕೋ ಮರೆಯಾಗುತಿದೆ
ದೂಡುವುದು ಹೇಗೆ ಈ ಬದುಕನ್ನು
ದೃಢಚಿತ್ತವಿಲ್ಲದೆ ನರಳುತಿರುವೆ
ದೆವ್ವದ ಮನೆಯಂತಾಗಿದೆ ಮನಸು
ದೇವ ನೀನಲ್ಲದೆ ಗತಿಯಿನ್ನಾರು
ಧೈರ್ಯದಿಂದ ಮುನ್ನುಗ್ಗುವ ಬಲನೀಡು
ದೊರಕಿದಂತೆ ನೀ ಚಿಂತಾಮಣಿ ಯ ತೆರದಲಿ
ದೋಷಗಳೆಲ್ಲ ದೂರೀಕರಿಸು ದಯದಲಿ
ದೌರ್ಜನ್ಯವೆಸಗುವ ಮನ ನೀಡದಿರು ದೌರ್ಬಲ್ಯ ನೀಡದಿರು
ದಂಡವೆರಗುವೆ ನಿನಗೆ ದೇವ
ದುಃಖ ದುಮ್ಮಾನಗಳ ದೂರೀಕರಿಸು

             ಶೈಲೂ......
[26/11/2020, 5:34 pm] Dr. B. N. Shylaja Ramesh: #ಬಯಸಿದ್ದು_ನೂರಾರು_ಸಿಕ್ಕಿದ್ದು_ಅರ್ಧಪಾಲು

ಬಯಕೆಯಿದೆ ಸಾವಿರ
ನೆರವೇರಬೇಕಲ್ಲ ಪೂರಾ
ಆಸೆಯೇನೋ ಬೆಟ್ಟದಷ್ಟು
ಸಿಕ್ಕಬೇಕಲ್ಲ ಬಯಸಿದಷ್ಟು

ನಮ್ಮಿಚ್ಛೆಯಂತಲ್ಲ ಜೀವನ
ನಡೆಯದಿಲ್ಲೇ ನೂ ಕಲ್ಪನ
ನಾವುಒಪ್ಪಿದ್ದೇನೂ ಬಪ್ಪದು
ಅನುಭವಿಸಬೇಕವ ಕೊಟ್ಟುದು

ಆಸೆಪಡುವುದು ಮನದ ಸ್ಥಿತಿ
ಬಯಕೆಗಳಿಗಿರಬೇಕು ಇತಿಮಿತಿ
ಬಯಸಿದ್ದರೆ ನೂರುಪಾಲು
ಸಿಕ್ಕುವುದಷ್ಟೇ ಅರ್ಧಪಾಲು

ಆಗಸಕೆ ಏಣಿ ಹಾಕಿದರೆ
ಆಗಬಹುದೇ ಚಂದ್ರ ಕೈಸೆರೆ
ಬಾನು ಭುವಿಗೆ ಅಂತರವಿದೆ
ಈ ಸತ್ಯ ಅರ್ಥವಾಗಬೇಕಿದೆ

ಆಸೆ ಪಡುವುದು ತಪ್ಪೇನಲ್ಲ
ಅತಿ ಆಸೆ ದುಃಖಕ್ಕೆ ಮೂಲ
ಹಣೆಬರಹದಲ್ಲಿದ್ದಷ್ಟೇ ಫಲ
ಇದನೊಪ್ಪಿಕೊಳ್ಳಬೇಕು ಎಲ್ಲ

         ಶೈಲಜಾ ರಮೇಶ್
[3/1/2021, 6:05 pm] Dr. B. N. Shylaja Ramesh: ನೀ ತಂದ  ಒಲವಿನ ಮುತ್ತಿನೋಲೆ
ಸಂತಸದಿ ಧರಿಸಿದೆ ಕಿವಿಯಲ್ಲಿ
ಕಣ್ಸನ್ನೆಯಲ್ಲೇ ಇತ್ತೆ ಕರೆಯೋಲೆ
ಹೊಳಪು ಝಲಪಿಸಿತೆನ್ನ ಕಣ್ಣಿನಲ್ಲಿ

ನೀ ಪ್ರೀತಿಯಿಂದತ್ತ ಉಡುಗೊರೆ
ಬೆಲೆ ಕಟ್ಟಲಾಗದ  ಅನರ್ಘ್ಯ ರತ್ನ
ಅದೆಷ್ಟು ಆಸೆಯಿಂದಲಿ ನೀ ಕೊಟ್ಟೆ
ಮಾಡುವೆ ಜತನದಲಿ ಕಾಪಿಡುವ ಯತ್ನ

ನಾ ಧರಿಸಿರುವೆ ನೋಡು ನಲ್ಲ
ಚಂದದಿ ತೂಗುತಿದೆ ಓಲೆ ಕಿವಿಯಲ್ಲಿ
ನಿನ್ನಂತರಂಗದ ಪ್ರೀತಿಯ ಕೂಗು
ಪಿಸುಗುಡುತ್ತಿದೆ ಕಿವಿಯ ಬಳಿಯಲ್ಲಿ

ಹೊಳೆವ ಮುತ್ತುಗಳ ಹೆಕ್ಕಿ ಹೆಕ್ಕಿ
ಅದಮ್ಯ ಪ್ರೀತಿಯ ಬಂಧನದೆ ಬಿಗಿಸಿದೆ
ಬಿಡಿಸಲಾರದ  ಬಾಂಧವ್ಯಕ್ಕಿದು ನಂಟು
ಕಿವಿಯೋಲೆ ಒಲವಿನೋಲೆ ಬರೆಸಿದೆ..!
[4/1/2021, 4:13 pm] Dr. B. N. Shylaja Ramesh: #ಜಡೆಕವನ

#ಅನುರಾಗದ_ಅಕ್ಷತೆ

ಒಲಿದ ಮನಗಳ ಹೃದಯ ಬಂಧನ
ಬಂಧವಿದು ಚಂದ ಮಾಂಗಲ್ಯ ಬಂಧನ
ಬಂಧನವೇ ಒಲುದ ಜೀವಗಳ ಬೆಸುಗೆಗೆ
ಬೆಸುಗೆ ಇದು ಮುಂದಿನ ಬಾಳ ಒಸಗೆಗೆ
ಒಸಗೆಗೆ ಸಂಭ್ರಮ ಈ ಹಸಿರು ಚಪ್ಪರ
ಚಪ್ಪರದಲ್ಲಿ ಮದುವೆಯ ಸಡಗರ
ಸಡಗರಕೆ ಕಾದಿಹುದು ಎರಡು ಮನವು
ಮನವು ಕಾತರಿಸುತ್ತಿದೆ ಒಂದಾಗಲು ತನುವು
ತನುವಲ್ಲಿ ಪುಳಕ ಎಂಥದೋ ರೋಮಾಂಚನ
ರೋಮಾಂಚನದ ಜೊತೆಗೆ ಏಕೋ ಕಂಪನ
ಕಂಪನ ಎನಿತು ನಲ್ಲ ನೀ ಕೈ ಹಿಡಿದಾಗ
ಕೈಹಿಡಿದು ನಡೆದು ಸಪ್ತಪದಿ ತುಳಿದಾಗ
ತುಳಿದೆ ನಾ ನಿನ್ನೊಲವಿನರಮನೆಯ ಬಾಗಿಲು
ಬಾಗಿಲಿದು ನಮ್ಮ ಪ್ರೇಮದುಯ್ಯಾಲೆ ತೂಗಲು
ತೂಗುವೆ ವಾತ್ಸಲ್ಯದ ಮಡಿಲಲ್ಲಿ ನಮ್ಮ ಕಂದನ
ಕಂದನ ಕಾಣಲು ಬೇಕು ವಿವಾಹ ಬಂಧನ
ಬಾಂಧವ್ಯ ವಿವಾಹದೊಡನಾದರೆ ಮಾನ್ಯತೆ
ಮಾನ್ಯವಾಗಲಿರಬೇಕು ಅನುರಾಗದ ಅಕ್ಷತೆ..!

          ಶೈಲಜಾ ರಮೇಶ್
[9/1/2021, 10:08 pm] Dr. B. N. Shylaja Ramesh: ನಮಸ್ತೇ ಯುಗಾದಿ ಬಳಗಕ್ಕೆ🙏🙏🙏
ಇಂದಿಗೆ ಯುಗಾದಿಯ, ಯುಗಾರಂಭ ಆಗಿ ಒಂದು ವರ್ಷವಾಯ್ತು ಅಂತ ಹೇಳೋಕ್ಕೆ ಸಂತಸ ಆಗ್ತಾ ಇದೆ.
        ಜನವರಿ 10,  2020 ರ ಶುಕ್ರವಾರ ಹುಣ್ಣಿಮೆ ದಿನ ಜನ್ಮತಾಳಿದ ಯುಗಾದಿ, ಹುಣ್ಣಿಮೆಯ ತರಹವೇ ಬೆಳದಿಂಗಳು ಚೆಲ್ಲಿದ್ದು ಸುಳ್ಳಲ್ಲ.  
        ಅತೀವ ಸಾಹಿತ್ಯಾಸಕ್ತಿ, ಬರಹಗಾರರನ್ನು ಬೆಂಬಲಿಸುವ ಮನಸ್ಸು,  ಸಾಹಿತ್ಯ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕೆಂಬ  ನಿಟ್ಟಿನಲ್ಲಿ ಅದಮ್ಯ ಉತ್ಸಾಹ, ನಿರೀಕ್ಷೆಯಿಂದ ಈ ಬಳಗವನ್ನು ಸ್ಥಾಪಿಸಲಾಗಿದೆ.
          ಬಳಗದ ಸಂಸ್ಥಾಪಕರೂ, ಯುವ ಸಾಹಿತಿಗಳೂ, ಅದಕ್ಕಿಂತ ಹೆಚ್ಚಾಗಿ ಒಂದೊಳ್ಳೆ ಸುಂದರ ಮನಸ್ಸಿರುವ ಉತ್ಸಾಹಿ ತರುಣ ನಮ್ಮ ನಿಮ್ಮೆಲ್ಲರ ಮೆಚ್ಚಿನ ಶ್ರೀಮಾನ್ #ಶ್ರೀನಾಗ್ ರವರ ಕನಸಿನ ಕೂಸಾದ ಈ ಯುಗಾದಿ ಎಲ್ಲೆಡೆ ಜನಮನ್ನಣೆ ಗಳಿಸಲು ಅವರ ಅವಿರತ ಶ್ರಮವೇ ಕಾರಣ. ಎಲ್ಲರನ್ನೂ ಹುರಿದುಂಬಿಸುವ ಅವರ ರೀತಿ, ಅನ್ಯಾಯ ಕಂಡಾಗ ಅವರ ಮಾತಿನ ಚಾಟಿ... ಬಳಗವನ್ನು ಸಮರ್ಥವಾಗಿ ಮುನ್ನಡೆಸಲು ಕಾರಣವಾಯ್ತು. ಜೊತೆಗೆ, ಬಳಗ ಸ್ಥಾಪನೆಗೊಂಡ ದಿನದಿಂದಲೂ, ಯುಗಾದಿ ಮನೆಗೆ ಹಿರಿಯಕ್ಕನಂತೆ  ತನುಮನವನ್ನು ಧಾರೆಯೆರೆದು, ಅತೀವ ವಾತ್ಸಲ್ಯದಿಂದ ಎಲ್ಲ ನಿರ್ವಾಹಕರನ್ನೂ, ಬಳಗದ ಸದಸ್ಯರನ್ನೂ ತನ್ನ ಒಡಹುಟ್ಟಿದವರಂತೆ ಕಾಣುತ್ತಾ ಬಳಗ ಮುನ್ನಡೆಯಲು ಕಾರಣರಾಗಿದ್ದು ನಮ್ಮೆಲ್ಲರ ಅಚ್ಚುಮೆಚ್ಚಿನ ವೀಣಕ್ಕ (#ವೀಣಾ_ಉಮೇಶ್) ಇವರು ಯುಗಾದಿಯನ್ನು ತನ್ನ ಮನೆಗಿಂತಲೂ ಹೆಚ್ಚು ಪ್ರೀತಿಸುತ್ತಿರುವುದು ಸುಳ್ಳಲ್ಲ. ಇವರ ದೆಸೆಯಿಂದಲೇ ಬಳಗದಲ್ಲಿ ಸೌಹಾರ್ದ ವಾತಾವರಣ ಇರುವುದು, ತಮ್ಮ ಹದಗೆಟ್ಟ ಅನಾರೋಗ್ಯದಲ್ಲೂ ಅದೆಷ್ಟು ಜವಾಬ್ದಾರಿ ಹೊತ್ತು ಕೆಲಸ ಮಾಡ್ತಿದ್ದಾರೆ ಎಂದರೆ.... ಹೇಳಲು ಪದಗಳಿಲ್ಲ ..ಇವರು ಯುಗಾದಿಯ ಆಧಾರಸ್ಥಂಭ ಎಂದರೆ ತಪ್ಪಾಗಲಾರದು.

     ಈ ಬಳಗ ಸಮರ್ಥವಾಗಿ ಮುನ್ನಡೆಯಲು ಸಮರ್ಥವಾಗಿ ತೊಡಗಿಸಿಕೊಂಡವರಲ್ಲಿ ನಿರ್ವಾಹಕಿ ಶ್ರೀಮತಿ #ಪೂರ್ಣಿಮಾ_ಉಡುಪ ರ ಪಾತ್ರ ಶ್ಲಾಘನೀಯವಾದದ್ದು. #ಯುಗಾದಿ_ಮಾಣಿಕ್ಯ, ಸದಸ್ಯರ ಹಾಗೂ ನಿರ್ವಾಹಕರ ಆಯ್ದ ಕವನಗಳನ್ನು ಸುಶ್ರಾವ್ಯವಾಗಿ ಹಾಡಿಸಿ ವಿಡಿಯೋ ಮಾಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

      ಸದಾ ಲವಲವಿಕೆಯ ನವತರುಣಿ #ಚಂಪಕಾ_ರಾಘವೇಂದ್ರ ರವರೂ ಸಹ ನಿರ್ವಾಹಕಿಯಾಗಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವೀಯಾಗಿದ್ದಾರೆ.
  ಇತರ ನಿರ್ವಾಹಕರಾಗಿದ್ದ, #ಕೃಪಾ_ಗೋಖಲೆ  ತಮ್ಮ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸಿದರಾದರೂ,  ತಮ್ಮ ಕೆಲಸಗಳ ಒತ್ತಡದಿಂದ ನಿರ್ವಾಹಕರಾಗಿ ಮುಂದುವರಿಯಲು ಸಾಧ್ಯವಾಗಲಿಲ್ಲ ಎಂಬುದು ವಿಷಾದನೀಯ..!

           ಪ್ರಸ್ತುತ ...#ಸುಜಾತ_ಭಟ್ ರವರ ಕಾರ್ಯವೈಖರಿ ತುಂಬಾ ಮೆಚ್ಚುವಂಥದ್ದು. ಎಲ್ಲರ ಅನುಪಸ್ಥಿತಿಯಲ್ಲೂ ಎಲ್ಲರ ಜವಾಬ್ದಾರಿಯನ್ನು ತನ್ನ ಹೆಗಲಮೇಲೇ  ಹೊತ್ತು ತುಂಬಾ ಅಚ್ಚುಕಟ್ಟಾಗಿ ನಿಭಾಯಿಸುವ ಪರಿ ಅತ್ಯಂತ ಶ್ಲಾಘನೀಯ. 
 
    ಫೋಟೋಗ್ರಫಿ ವಿಭಾಗದಲ್ಲಿ ಶ್ರೀಮಾನ್#ತೀರ್ಥರಾಜ್_ಮೇಸ್ತ ರವರೂ ಸಹ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ.

   ಸಮಯಕ್ಕೆ ತಕ್ಕಹಾಗೆ ಸಲಹೆಗಳನ್ನಿತ್ತು, ಯುಗಾದಿಯನ್ನು ಮುನ್ನಡೆಸುವಲ್ಲಿ ಕೈಜೋಡಿಸಿದವರು ಶ್ರೀಮತಿ#ವಿನುತಾ_ಥಾಮಸ್.
        ಎಲ್ಲ ನಿರ್ವಾಹಕರೂ, ತಮ್ಮ ತಮ್ಮ ವೈಯಕ್ತಿಕ ಒತ್ತಡಗಳನ್ನೂ ಬದಿಗೊತ್ತಿ ಯುಗಾದಿಯಲ್ಲಿ ತೊಡಗಿಸಿಕೊಂಡು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಎಂಬುದೇ ಸಂತಸ.

         ಯುಗಾದಿಯು ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ, #ಭಕ್ತಿಗೀತೆ_ಸ್ಪರ್ಧೆ #ಚಿತ್ರಕಾವ್ಯ,.#ಚುಟುಕು, #ಛಾಯಾಚಿತ್ರಸ್ಪರ್ಧೆ, #ಯುಗಾದಿ_ಮಾಣಿಕ್ಯ, #ನಾನಾ_ನೀನಾ, #IPL ಮಾದರಿಯ ಸ್ಪರ್ಧೆ #ಕಥಾಸ್ಪರ್ಧೆ... ಈ ತರಹ ಹಲವಾರು ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಯುಗಾದಿ ರೂವಾರಿ #ಶ್ರೀನಾಗ್ ರವರ ಪಾತ್ರವೇ ಹಿರಿದು. 

          ಇಷ್ಟೆಲ್ಲಾ ಸ್ಪರ್ಧೆಗಳು ಸಂಪನ್ನವಾಗಿದ್ದು.... ... ಯುಗಾದಿಯ ಅತ್ಯಂತ ಪ್ರಮುಖ ಭಾಗವಾದ ಸದಸ್ಯರಾದ ನಿಮ್ಮಿಂದಲೇ ಸ್ನೇಹಿತರೇ...!
       ಒಂದು ಬಳಗವನ್ನು ಕಟ್ಟಿ ಬೆಳೆಸುವಲ್ಲಿ ಸಂಸ್ಥಾಪಕರು, ನಿರ್ವಾಹಕರ ಪಾತ್ರಕ್ಕಿಂತಲೂ ಪ್ರಮುಖವಾದದ್ದು... ಸಂಪೂರ್ಣವಾಗಿ ತೊಡಗಿಸಿಕೊಂಡ  ನೀವುಗಳೆ ಸ್ನೇಹಿತರೇ....  ಯುಗಾದಿಯ ಆಸ್ತಿ ಅಂದ್ರೆ ನೀವುಗಳೇ...!  ಅನೇಕ ಹಿರಿಯ, ಕಿರಿಯ ಕವಿ_ಕವಯಿತ್ರಿಯರೆಂಬ ಸುವಾಸಿತ, ಸುಂದರ ಹೂಗಳ ಅಂದದ ತೋಟ ಈ ಯುಗಾದಿ. 
           ಯುಗಾದಿಯಲ್ಲರಳಿದ  ಸುಂದರ ಹೂಗಳ ಘಮ ಹಲವರ ಮನಸೆಳೆದಿದ್ದಂತೂ ನಿಜ,  ಗುಣಮಟ್ಟದ  ಸಾಹಿತ್ಯಕ್ಕೆ ಅತೀ ಹೆಚ್ಚಿನ ಮನ್ನಣೆ ದೊರಕಿಸಿಕೊಡುವಲ್ಲಿ ಯುಗಾದಿ ಮುಂಚೂಣಿಯಲ್ಲಿದೆ ಎಂದು ಹೇಳಲು ಸಂತಸವಾಗುತ್ತಿದೆ.  ಯುವ ಬರಹಗಾರರನ್ನು ಪ್ರೋತ್ಸಾಹಿಸಿ, ಗುರುತಿಸಿ, ಅವರನ್ನೂ ಮುಂಚೂಣಿಗೆ ತರುವ ಯತ್ನ ಯುಗಾದಿ ಮಾಡುತ್ತಿದೆ ಎಂಬ ಹೆಮ್ಮೆ ನಮಗಿದೆ.  ಇಲ್ಲಿ ಬೆಳಕಿಗೆ ಬಂದ ಬರಹಗಾರರು, ಎಲ್ಲಾ ಸಾಹಿತ್ಯ ಗುಂಪುಗಳಲ್ಲೂ  ಮನ್ನಣೆ ಪಡೆಯುತ್ತಿದ್ದಾರೆ ಎಂಬುದು ಮತ್ತೂ ಸಂತಸದ ವಿಚಾರ.

       ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು, ಸಾಹಿತ್ಯವನ್ನೇ ಉಸಿರಾಗಿಸಿಕೊಂಡವರನ್ನು ಗುರುತಿಸಿ ಯುಗಾದಿಯು #ಯುಗಾದಿ_ಮಾಣಿಕ್ಯ ಬಿರುದನ್ನು ಕೊಟ್ಟು ಗೌರವಿಸಿದೆ. 

       ಸ್ಪರ್ಧೆಗಳಲ್ಲಿ ವಿಜೇತರಾಗಿ, ತಮ್ಮ ಬರಹದ ಮೂಲಕ ಜನಮನ್ನಣೆ ಪಡೆದವರನ್ನು #ಕವನಶ್ರೀ ಬಿರುದನ್ನು ಕೊಟ್ಟು ಗೌರವಿಸಿದೆ.  ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅತ್ಯಾಕರ್ಷಕ  ಪ್ರಶಸ್ತಿ ಪತ್ರವನ್ನು ಕೊಟ್ಟು ಪುರಸ್ಕರಿಸಿದೆ.

          ಯುಗಾದಿ  ಒಂದು ವರ್ಷದ ಅಂಬೆಗಾಲಿಡುತ್ತಿರುವ ಮಗುವಾದರೂ  ಎಲ್ಲಾ ಬಳಗಗಳ ಮದ್ಯೆ ಮಿಂಚುತ್ತಿರುವುದು  ಯುಗಾದಿಯ ರೂವಾರಿ, ನಿರ್ವಾಹಕರ ಜೊತೆ ಜೊತೆಗೆ ಅದಮ್ಯ ಉತ್ಸಾಹದಿಂದ ಭಾಗವಹಿಸಿ ಮುನ್ನಡೆಸುತ್ತಿರುವ ನಿಮ್ಮಂತಹ ಉತ್ಸಾಹಿ ಸದಸ್ಯರುಗಳೇ ಕಾರಣ.

      ಅಂಬೆಗಾಲ ನಡಿಗೆಯಿಂದ ದಾಪುಗಾಲು ನಡಿಗೆಗೆ ಸಾಗಿಸಲು ನಿಮ್ಮಗಳ ಸಹಕಾರ ಅತ್ಯಂತ ಮುಖ್ಯ... ನಮ್ಮ ಪ್ರತಿನಡೆಗೂ ನಿಮ್ಮ ಸಾಥ್ ಇರುತ್ತೆ ಅಲ್ವಾ ಸ್ನೇಹಿತರೇ...

    ನಮ್ಮ ಕನಸಿನ ಯುಗಾದಿ... ಬಾಳಲಿ... ಬೆಳಗಲಿ🙏🙏


             ನಿಮ್ಮ
                       ಶೈಲೂ....
[18/2/2021, 3:16 pm] Dr. B. N. Shylaja Ramesh: ಆಕೆ ಮೂರನೆಯ ಬಾರಿಗೆ ವೈದ್ಯರ ಬಳಿ ಹೋದಳು.ವೈದ್ಯರು ಆಕೆಯ ಆರೋಗ್ಯದ ವರದಿಯ ಫೈಲ್ ನೋಡಿ.......   ಆಕೆಯ ಮುಖವನ್ನೊಮ್ಮೆ ನೋಡಿ....... ಮತ್ತೆ..?  ಇದೇನಿದು?  ಇನ್ನು ಬೇಡ ಅಂತ ಹೇಳಿದ್ದೇನಲ್ಲ... ಯಾಕೆ ನಿಮಗೆ ಆರೋಗ್ಯದ ಕಾಳಜಿ ಇಲ್ವಾ? ಮಕ್ಕಳಿಗಾಗಿಯಾದರೂ ಬದುಕಬೇಕು ಅನ್ನುವ ಆಸೆ ಇಲ್ವಾ? ಎಂದರು...
         ಆಕೆ ಕಣ್ಣ ತುಂಬಾ ನೀರು ತುಂಬಿಕೊಂಡು...  ಇನ್ನೇನು.ಮಾಡ್ಲಿ ಡಾಕ್ಟ್ರೇ... ಜೀವನ ಬೇಕು ಅಂದ್ರೆ,  ನನ್ನ ತಂದೆ ತಾಯಿ ನೆಮ್ಮದಿಯಾಗಿರ್ಬೇಕು ಅಂದ್ರೆ ನಾ ಒಂದು ಗಂಡು ಮಗುವನ್ನು ಹಡೆಯಲೇ ಬೇಕು... ಇಲ್ಲಾಂದ್ರೆ  ಮೂರು ಹೆಣ್ಣುಮಕ್ಕಳೊಂದಿಗೆ ನಾನು ತವರುಮನೆ ಸೇರಬೇಕಾಗುತ್ತೆ...   ನನ್ನ ಹಿಂದಿನ ಇನ್ನೂ ಇಬ್ಬರು ತಂಗಿಯರ ಮದುವೆ,  ಅವರ ಭವಿಷ್ಯಕ್ಕಾಗಿಯಾದ್ರೂ ನಾನು ಇಲ್ಲೇ ಇರಬೇಕು.... ಇಲ್ಲೇ ಇರಬೇಕು ಅಂದ್ರೆ... ನಾ ಹೆರಲೇ ಬೇಕು ಅಂದಳು.
          ರೇಣುಕಾ...ಮಂಜು ದಂಪತಿಗಳಿಗೆ  ಮೂರು ಹೆಣ್ಣುಮಕ್ಕಳು   ಹುಟ್ಟಿದಾಗ  ಅಧೀರಳಾದವಳು ರೇಣುಕಾ... ಪ್ರತಿ ಬಾರಿ ಹೆರಿಗೆಯನಂತರವೂ  ಅತೀವ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಳು... ಕಾರಣ ತನ್ನ ಅತ್ತೆ ಮಾವ ಹಾಗೂ ಗಂಡನ ದೆಸೆಯಿಂದ,  ವಂಶೋದ್ಧಾರಕ ಮಗ ಬೇಕೇ ಬೇಕೆಂಬ ಹಠದಿಂದ ರೇಣುಕಾ ಮೂರು ಹೆಣ್ಣು ಮಕ್ಕಳನ್ನ ಹಡೆಯಬೇಕಾಯ್ತು... ಮೊದಲ ಮಗು ಹೆಣ್ಣಾದಾಗ,  ಅಸಮಾಧಾನ ವಿದ್ದರೂ ಎರಡನೆಯದು ಗಂಡಾಗಬಹುದು ಎಂಬ ನಿರೀಕ್ಷೆಯಲ್ಲಿ ಅಷ್ಟಾಗಿ ಕಿರುಕಳ ಇರಲಿಲ್ಲ... ಆದರೆ ಮಗುವನ್ನು ಅನಾದರ ಮಾಡುತ್ತಿದ್ದ ಮನೆಯವರ ಬಗ್ಗೆ ಬೇಸರವಿವಿಧದ್ದರೂ ತೋರಿಸಿಕೊಳ್ಳುತ್ತಿರಲಿಲ್ಲ.....  ತನ್ನ ತಂದೆ ತಾಯಿಗೂ ಹೆಣ್ಣು ಸಂತಾನವೇ ... ಮೂರು ಹೆಣ್ಣುಗಳಲ್ಲಿ ಮೊದಲನೆಯ ಮಗಳಾದ ರೇಣುಕಾ ... ಬುದ್ಧಿವಂತೆ, ಬಡತನವಿದ್ದರೂ,  ಉತ್ತಮ ವಿದ್ಯೆ ಕೊಡಿಸಿದ್ದ ಅನಂತರಾಯರ ಮುದ್ದು ಮಗಳಾಗಿ,  ಸಂಸಾರದ ಭಾರವನ್ನು ಹೊತ್ತು ತಂದೆಗೆ ಆಸರೆಯಾಗಿ ನಿಂತಿದ್ದಳು,   ಇವಳ ಹಿಂದೆ ಇಬ್ಬರು ಹೆಣ್ಣು ಮಕ್ಕಳಿದ್ದ ಕಾರಣ  ಆದಷ್ಟು ಬೇಗ ತಮ್ಮ ಜಾವಾಬ್ದಾರಿಯನ್ನ  ಕಳೆದು ಕೊಳ್ಳಬೇಕೆಂದು ರೇಣುಕಾಗೆ ಬೇಗನೆ ಮದುವೆ ಮಾಡಿ ಗಂಡನ.ಮನೆಗೆ ಕಳುಹಿಸಿದ್ದರು.  ಅತೀ ಆಸೆ ಬುರುಕರಾದ  ರೇಣುಕಾ ಗಂಡನ ಮನೆಯವರ .ಆಸೆ ತಣಿಸಲು ತನ್ನ ಉಳಿದೆರಡು ಹೆಣ್ಣುಮಕ್ಕಳ .ಮದುವೆಗಾಗಿ ಇಟ್ಟಿದ್ದ ಹಣವನ್ನೆಲ್ಲಾ ವರದಕ್ಷಿಣೆ ಯಾಗಿ ಕೊಟ್ಟರೂ ಮತ್ತೂ ಹಣಕ್ಕಾಗಿ ಪೀಡಿಸುತ್ತಿದ್ದ  ಬೀಗರನ್ನು ತಣಿಸಲಾರದೆ ಕಂಗೆಟ್ಟಿದ್ದರು ಅನಂತರಾಯರು,  ಸಾಲದ್ದಕ್ಕೆ ರೇಣುಕಾ ಮೂರೂ ಹೆಣ್ಣುಮಕ್ಕಳನ್ನು ಹಡೆದ ಮೇಲಂತೂ ರೇಣುಕಾಗೆ ಚಿತ್ರಹಿಂಸೆ ಶುರುವಾಗಿದ್ದಿತು.  ಗಂಡುಮಗುವನ್ನು ಹೆತ್ತುಕೊಟ್ಟರೆ ನಿನಗೆ ಅತ್ತೆ ಮನೆಯಲ್ಲಿ ಸ್ಥಾನ  ಇಲ್ಲದಿದ್ದರೆ .. ತವರು ಮನೆಗೆ ಮತ್ತೆ ವಾಪಾಸಾಗಬೇಕಾದೀತು... ಮತ್ತೆ ಮಗನಿಗೆ ಬೇರೆ ಮದುವೆ ಮಾಡ್ತೀವಿ ಅಂತ.ದಿನಾ ಚುಚ್ಚುಮಾತಿನಲ್ಲೇ ಚುಚ್ಚುತ್ತಿದ್ದ ಅತ್ತೆಯ ಮಾತಿಗೆ ರೋಸಿ ಹೋಗಿದ್ದಳು ರೇಣುಕಾ.... ಮತ್ತೆ ಗರ್ಭಿಣಿಯಾದಾಗ .ಅವಳತ್ತ ನೋಡಿ... ಈಗಲಾದ್ರೂ ಗಂಡು ಹಡೆಯಬೇಕು ಹೆಣ್ಣನ್ನ ಹಡೆದೆಯೋ...  ನಿನಗಿದೆ ಮಾರಿಹಬ್ಬ ... ನೀನು ನಿನ್ನ ಮಕ್ಕಳ ಸಮೇತ.ನಿನ್ನ ತವರಲ್ಲೇ ಇರಬೇಕಾಗುತ್ತೆ ಅಂತ.ಪದೇ ಪದೇ ಹೇಳುತ್ತಿದ್ದರು. 

            ಮೂರು ಹೆಣ್ಣು ಮಕ್ಕಳಾದ ಮೇಲೆ ಮತ್ತೆ ಗರ್ಭಿಣಿಯಾದಾಗ , ಗಂಡ ಮಂಜು  ಲಿಂಗ ತಪಾಸಣೆ ಮಾಡಿಸಿದ್ದ,  ಕಾನೂನಿನಲ್ಲಿ ಲಿಂಗ ತಪಾಸಣೆ ಅಕ್ಷಮ್ಯ ಅಪರಾಧವಾಗಿದ್ದರೂ , ರೇಣುಕಾಳ ರೋಧನ ನೋಡಿದ ಡಾಕ್ಟರ್ ಅಂಜಲಿ  ಮತ್ತೆ ಗರ್ಭದಲ್ಲಿರುವ.ಮಗು ಹೆಣ್ಣೆಂದು ಹೇಳಲೇ ಬೇಕಾಯ್ತು... ಕುಸಿದುಹೋದ ರೇಣುಕಾ ಅಬಾರ್ಷನ್ ಗಾಗಿ ಪೀಡಿಸಿದ್ದಳು  ಡಾ : ಅಂಜಲಿಯನ್ನು.  ಅವಳ ಗಂಡನ ಮನೆಯ ಅನಾದರ, ರೇಣುಕಾಳಿಗೆ ಆಗುತ್ತಿದ್ದ ಹಿಂಸೆ ಎಲ್ಲವನ್ನೂ ಹತ್ತಿರದಿಂದ  ಸುಮಾರು ವರ್ಷಗಳಿಂದ ನೋಡುತ್ತಿದ್ದ  ಡಾ. ಅಂಜಲಿ ಅಬಾರ್ಷನ್ ಮಾಡಿದ್ದರು. 

         ಮತ್ತೆ ಗರ್ಭಿಣಿಯಾಗಿ ತಪಾಸಣೆಗೆ ಬಂದಾಗ ತುಂಬಾ ಕ್ಷೀಣಿಸಿದ್ದ  ರೇಣುಕಾಳನ್ನ, ಚೆಕ್ ಮಾಡಿದ ಡಾ. ಅಂಜಲಿ ಅವಳ ಗಂಡನಿಗೆ ಛೀಮಾರಿ ಹಾಕಿದ್ದರು.  ಅದಕ್ಕೆ ಬಗ್ಗದ ಆಸಾಮಿ.... ಗಂಡು ಮಗುವನ್ನು ಹಡೆದರಷ್ಟೇ ... ಇವಳಿಗೆ ಮನೆಯಲ್ಲಿ, ಮನದಲ್ಲಿ ಸ್ಥಾನ...  ಇನ್ನೊಮ್ಮೆ ಪರೀಕ್ಷಿಸಿಬಿಡಿ.... ಹೊಟ್ಟೆಯಲ್ಲಿರುವ ಮಗು ಹೆಣ್ಣೋ... ಗಂಡೋ ಎಂದು....ಹೀಗೆ ಧಿಮಾಕಿನಲ್ಲಿಯೇ ನುಡಿದಿದ್ದ....  ಲಿಂಗ ತಪಾಸಣೆ ಕಾನೂನು ಬಾಹಿರ, ಅಲ್ಲದೆ ಅಬಾರ್ಷನ್ ಮಾಡುವ ಹಾಗಿಲ್ಲ... ಹಾಗೇನಾದ್ರೂ ಆದರೆ ನಾನು ಜೈಲಿಗೆ ಹೋಗಬೇಕಾಗುತ್ತೆ ಎಂದು ವಾಪಸ್ ಕಳುಹಿಸಿದ್ದರು ಡಾಕ್ಟರ್.

          ಏನಾದರಾಗಲಿ,  ಈ ಬಾರಿ ಹಡೆಯಬೇಕು.... ಹೆಣ್ಣಾದರೂ ಸರಿ , ಗಂಡಾದರೂ.ಸರಿ,  ನನ್ನದೇ ಕರುಳ ಕುಡಿಯನ್ನು ಚಿವುಟಿಹಾಕುವುದು ಎಷ್ಟರಮಟ್ಟಿಗೆ ಸರಿ... ಎಂದು ಸಮಾಧಾನ ಮಾಡಿಕೊಂಡರೂ.... ಮತ್ತೆ ಹೆಣ್ಣಾದರೆ ಏನು ಮಾಡುವುದು... ಮೂರರ ಜೊತೆಗೆ ಮತ್ತೊಂದು..!   ಅಲ್ಲದೆ ನನಗೆ ಈ ಮನೆಯಲ್ಲಿ ಬಾಳು0ಟೆ..?  ನಾಲ್ಕು ಮಕ್ಕಳನ್ನ ಕಟ್ಟಿಕೊಂಡು ನಾನು ಏನು ಮಾಡಲಿ?   ಅವುಗಳ ವಿದ್ಯಾಭ್ಯಾಸ, ಮದುವೆ..!!   ನನ್ನೊಬ್ಬಳ ಕೈಯ್ಯಲ್ಲಿ ಸಾಧ್ಯವೇ?..... ಇನ್ನೊಮ್ಮೆ ಡಾಕ್ಟರ್ ರ ಕೈಕಾಲು ಹಿಡಿದಾದರೂ ಸರಿ... ಮಗು ಯಾವುದೆಂದು ತಿಳಿಬೇಕು,  ಒಂದು ವೇಳೆ ಹೆಣ್ಣಾದರೆ ....... ಮತ್ತೆ,ನನ್ನ ಕರುಳನ್ನ ಕತ್ತರಿಸಬೇಕು.... ಏನು ಮಾಡಲಿ... ಎಂದು ಹೊಯ್ದಾಟಕ್ಕೆ ಬಿದ್ದ ಮನಸ್ಸಿನಲ್ಲಿ ದೃಢ ನಿಶ್ಚಯ ಮಾಡ್ಕೊಂಡು... ಮತ್ತೆ ಅಂಜಲಿ ಡಾಕ್ಟರ್ ನ ಕಾಲು ಹಿಡಿದು ಗೋಗರೆಯುತ್ತಾಳೆ...   ಇವಳ ಕಣ್ಣೀರಿಗೆ ಕರಗಿದ ಡಾಕ್ಟರ್ ಟೆಸ್ಟ್ ಮಾಡಿದಾಗ ಮತ್ತೆ.... ಹೆಣ್ಣು ಭ್ರೂಣ ವಿದೆಯೆಂದು  ತಿಳಿಯುತ್ತೆ....  ಭೂಮಿಗೇ ಇಳಿದು ಹೋಗುತ್ತಾಳೆ  ರೇಣುಕಾ.... ಕಣ್ಣು ಕತ್ತಲೆ ಬ0ದಂತಾಗಿ ಅಲ್ಲಿಯೇ ಕುಸಿಯುತ್ತಾಳೆ...  ಮೂರು ತಿಂಗಳ ಗರ್ಭಿಣಿ, ಸರಿಯಾದ ಆರೈಕೆಯಿಲ್ಲದೆ, ಅತೀ ಒತ್ತಡದಿಂದ ದೈಹಿಕವಾಗಿಯೂ ಮಾನಸಿಕವಾಗಿಯೂ ಜರ್ಜರಿತಳಾದ  ರೇಣುಕಾಳನ್ನ  ನೋಡಿದ ಡಾಕ್ಟರ್ ಗೇ ಅತೀವ ನೋವಾಗುತ್ತದೆ.  ರೇಣುಕಾಳ ಪರಿಸ್ಥಿತಿಯ ಅರಿವಿದ್ದ ಡಾಕ್ಟರ್ ಅಂಜಲಿ, ಅವಳನ್ನು ಸಮಾಧಾನಿಸಿ, ರಕ್ತಹೀನತೆಯಿಂದ ಬಳಲುತ್ತಿದ್ದ  ಅವಳನ್ನು ಅಡ್ಮಿಟ್ ಮಾಡಿಕೊಂಡು  ರೇಣುಕಾಳ ಗಂಡನಿಗೆ ಫೋನ್ಮಾಡಿ ತಿಳಿಸುತ್ತಾರೆ.  ಡಾಕ್ಟರ್  ಅವಳ ಹೊಟ್ಟೆಯಲ್ಲಿರುವ ಮಗು ಯಾವ್ದು, ಹೆಣ್ಣೋ ಗಂಡೋ... ಒಂದುವೇಳೆ ಗಂಡಾಗಿದ್ದರೆ ಅವಳ ಜವಾಬ್ದಾರಿ ನಂದು,.ಹೆಣ್ಣಾಗಿದ್ದರೆ..  ಅವಳ್ಯಾರೋ ನನಗೆ ಗೊತ್ತಿಲ್ಲ ... ಅಂದ ಅವನ ಅಮಾನುಷ ನಡೆಗೆ ಬೇಸತ್ತ ಡಾಕ್ಟರ್ಗೆ ಏನು ಮಾಡಲೂ ತಿಳಿಯದಾಯ್ತು... ಇವರ ಸಂಭಾಷಣೆ ಕೇಳಿಸಿಕೊಂಡ  ರೇಣುಕಾ ಅಧೀರಲಾಗುತ್ತಾಳೆ.  ಡಾಕ್ಟರ್, ಮತ್ತೆ ಹೆಣ್ಣು ಮಗು ಅಂದ್ರೆ, ನನಗೆ ಬದುಕೇ ಇಲ್ಲ... ದಯವಿಟ್ಟು ಅಬಾರ್ಷನ್ ಮಾಡಿಬಿಡಿ, ಎಂದು ಗೋಗರೆಯುತ್ತಾಳೆ. ದೇಹದಲ್ಲಿ ತ್ರಾಣವೇ ಇಲ್ಲದ ಅವಳಿಗೆ ಅಬಾರ್ಷನ್ ಮಾಡುವುದಾದರೂ ಹೇಗೆ.? ಅಲ್ಲದೆ ಒಬ್ಬ ತಾಯಿಯಾಗಿ, ಇನ್ನೂ ಪ್ರಪಂಚವನ್ನೇ ಕಾಣದ ಮಗುವನ್ನು ಕೊಲ್ಲುವುದಾದರೂ ಹೇಗೆ..? ಉಳಿಸುವುದಷ್ಟೇ ನನ್ನ ಧರ್ಮ.. ಕೊಲ್ಲುವುದಲ್ಲ... ಏನಾದರಾಗಲಿ ಈ ಮಗುವನ್ನು ಉಳಿಸಿಕೊಳ್ಳಲೇ ಬೇಕು.  ಒಂದು ವೇಳೆ ಅವರಿಗೆ ಬೇಡದಿದ್ದರೆ ನಾನೇ ಮಗುವನ್ನು  ದತ್ತು ತೆಗೆದುಕೊಂಡರಾಯ್ತು  ಅನ್ನುವ ನಿರ್ಧಾರಕ್ಕೆ ಬಂದ ಡಾಕ್ಟರ್ ಅಂಜಲಿ, ರೇಣುಕಾಳಿಗೆ ಪರಿಸ್ಥಿತಿಯನ್ನು ಅರ್ಥ ಮಾಡಿಸಿ,  ಅವಳ ಗಂಡ ಮಂಜುವಿಗೆ ಫೋನ್ ಮಾಡಿ ಗರ್ಭದಲ್ಲಿ ಗಂಡು ಮಗುವಿದೆ, ಅದು ಆರೋಗ್ಯವಾಗಿ ಬೇಕೆಂದರೆ ರೇಣುಕಾಳಿಗೆ ಆರೈಕೆ ಬೇಕು,  ನಿಶ್ಶಕ್ತಿಯಿಂದ ಬಳಲುತ್ತಿರುವ ಅವಳಿಗೆ ದೈಹಿಕವಾಗಿ, ಮಾನಸಿಕವಾಗಿ ಆರೈಕೆಬೇಕು ಎಂದು ಹೇಳಿದಾಕ್ಷಣ.... " ಗಂಡು ಮಗು" ಎಂಬುದನ್ನು ಕೇಳಿಯೇ ಆಕಾಶಕ್ಕೇರಿದ ಮಂಜು, ಖಂಡಿತ ಡಾಕ್ಟರ್..  ಅವರು ಆರೋಗ್ಯವಾಗಿರಬೇಕು... ಈಗಲೇ ಬಂದೆ ಎಂದು ಆಸ್ಪತ್ರೆಗೆ ಓಡೋಡಿ ಬರುತ್ತಾನೆ.
[19/4/2021, 3:56 am] Dr. B. N. Shylaja Ramesh: ನೆನಪಿನ ಬೀದಿಯಲ್ಲಿ ಹೊರಟೆ ಸವಾರಿ
ಬಾಲ್ಯದ ಸವಿ ನೆನಪ ಮೂಟೆಯನು ಹೊತ್ತು
ನೆನಪಿನ ಸಂಚಿಯಲ್ಲುಂಟು ತರಾವರಿ
ಕಡಲಾಳದಿ ದೊರೆವಂತ ಅನರ್ಘ್ಯ ಮುತ್ತು
[28/4/2021, 2:36 am] Dr. B. N. Shylaja Ramesh: ಎಲ್ಲ ತಡೆಗಳ ದಾಟಿ ಆಈಲಿತೆನ್ನಯ ಪ್ರೀತಿ
ಎಣಿಕೆಯಿಲ್ಲದ ಅವ್ಯಾಜ ಪ್ರೇಮಸಿಂದ
[3/5/2021, 1:07 pm] Dr. B. N. Shylaja Ramesh: ಮರಣ ಭಯ
ತೊರೆದಾಗಲಷ್ಟೇ
ಜೀವನ ಸಂಪ್ರೀತಿಯ
ಉಗಮ..!!

ಸೋಲಿನ ಹತಾಶೆ
ಮರೆತರಷ್ಟೇ
ಗೆಲುವಿನ ಸಂಭ್ರಮದ
ಅನಾವರಣ..!

ಕಳೆಯುವ ನೋವ  
ತೊರೆದರಷ್ಟೇ
ಗಳಿಸುವ ಸುಖದ
ಸಂಭ್ರಮ..!

ಮುಳುಗುವ ಭಯ 
ಬಿಟ್ಟರಷ್ಟೇ
ಬದುಕುವ ಆನಂದದ
ಸಂಗಮ..!!

ಬರುವ ಸಂಕಟಗಳ
ದೂರೀಕರಿಸಿದರಷ್ಟೇ
ಇರುವ ಸುಖದ
ಸಮತೋಲನ..!

ಎಲ್ಲ ಮರೆತು ಬದುಕ
ಪ್ರೀತಿಸಿದರಷ್ಟೇ..
ಜೀವಿಸಲು ಸಂಭ್ರಮದ
ವಾತಾವರಣ. !!

ಚಂದದ ಆಶಯ ಸರ್
ಸೂಪರ್👌👍💐💐
[5/5/2021, 4:01 pm] Dr. B. N. Shylaja Ramesh: ಗತವೈಭವ
*********

ಅಂದು ಬಾಳಿ ಬದುಕಿದ್ದ
ಮನೆಯಿಂದು ಪಾಳು ಗುಡಿ
ಮೆರೆದ ಗತವೈಭವವಿಂದು
ಅಳಿದು ಪಳಯುಳಿಕೆಯಡಿ

ತಲೆ ತಲೆಮಾರುಗಳು ಬದುಕಿ
ಪೋಷಣೆಯಿಲ್ಲದೆ ಕುಸಿಯಿತಿಂದು
ಪರಂಪರಾನುಗತ ಅಂದದಮನೆ
ಕಾಲನವಶಕೆ ಸಿಲುಕಿತಿಂದು

ಅದೆಷ್ಟು ಮಂದಿಗೆ ನೆರಳಿತ್ತಿತ್ತೋ
ಹಸಿದು ಬಂದವರಿಗೆ ತುತ್ತನೀಡಿ
ನಿಷ್ಠೆಯ ಬೆವರ ಹನಿ ಬಸಿದವರಿಗೆ
ಅಸನವಸನವಿತ್ತಿತ್ತು ಪ್ರೀತಿ ಮಾಡಿ

ಅಸರೆಯ ತಂಪಿತ್ತು ಬಾಚಿ ತಬ್ಬಿದ್ದ
ಗುರುಹಿರಿಯರಿದ್ದ  ಅಂದದಂಕಣ
ಹಳೆ ಬೇರು ಹೊಸ ಚಿಗುರು
ಹಬ್ಬಿ ನಕ್ಕಿದ್ದ ಭಾವದನಾವರಣ

ಇತ್ತೊಂದು ಕಾಲದಲಿ ಭರಪೂರ
ಸುವರ್ಣಯುಗದ ಸಂಭ್ರಮದ ಕಾಲ
ತಾತ ಮುತ್ತಾತರಾಳಿ ಬದುಕಿದ್ದ
ಮೌಲ್ಯವೆತ್ತಿಹಿಡಿದಿದ್ದ ನ್ಯಾಯದೇಗುಲ

           ಶೈಲೂ...
[5/5/2021, 4:01 pm] Dr. B. N. Shylaja Ramesh: ಸಂತಸಕ್ಕೆ ಮತ್ತೊಂದು ಗರಿ😊

* ಕಲಾದೇಗುಲ ಭಾವನೆಗಳ ಸಂಗಮ * ಗುಂಪಿನಲ್ಲಿ ನಡೆದ  " ತೊಟ್ಟಿಲ ನೆನಪು  " ಕವನ ಸ್ಪರ್ಧೆಯಲ್ಲಿ 9 ನೇ ಸ್ಥಾನ ಪಡೆದ ಕವಿತೆ

ತೊಟ್ಟಿಲ ನೆನಪು
*************

ಸಪ್ತಪದಿ ತುಳಿದು
ಬಲಗಾಲಿಟ್ಟು ಬಂದಾಗ
ನನ್ನವರ ಮೊದಲ ಮಾತು
ವರ್ಷದೊಳಗೊಂದು ಕಟ್ಟು ತೊಟ್ಟಿಲು
ನಾಚಿ ನೀರಾಗಿ ನಾ
ತಲೆತಗ್ಗಿ ನಿಂತಾಗ
ಗಲ್ಲವಿಡಿದೆತ್ತಿ ಉಸಿರಿದರು
ಹತ್ತೋಣವೊಂದೊ0ದೇ ಮೆಟ್ಟಿಲು

ನವಜೀವ ಅಂಕುರಿಸಿ
ಕನಸು ನನಸಾದಾಗ
ಕೈಗೆ ನಿಲುಕುವಷ್ಟೇ ದೂರ
ಸ್ವರ್ಗಕ್ಕೊಂದೇ ಮೆಟ್ಟಿಲು
ತುಂಬು ಮುತುವರ್ಜಿ ಆರೈಕೆ
ನೋವಲ್ಲಿ ಸಂತೈಕೆ
ತಿಂಗಳೊಂದೊಂದುರುಳಿದಂತೆ
ನೋವು ಅವರಿಗೇ ಹೆಚ್ಚಲು

ಅದೆಷ್ಟು ತೆರನ ಹರಕೆ
ದೇವರಿಗೊಂದಿಸಿ ಬೇಡಿಕೆ
ಸುಸೂತ್ರವಾದರೆ ಸಾಕು
ನಿನಗರ್ಪಣೆ ಬೆಳ್ಳಿ ತೊಟ್ಟಿಲು
ನವಮಾಸ ಪೂರೈಸಿ
ದೇವನನುಗ್ರಹ ಫಲಿಸಿ
ಹಸುಕಂದ ನಸು ನಕ್ಕಾಗ
ತೂಗಿತ್ತು ಚಂದನದ ತೊಟ್ಟಿಲು

ಕಂಡ ಕಂದನ ಕನಸೆಲ್ಲಾ
ನನಸಾದ ಹೊತ್ತಿನಲಿ
ಹೆಮ್ಮೆಯಿಂದ ತುಂಬಿತ್ತು
ಮನದ ಪ್ರೀತಿ ಬಟ್ಟಲು
ಭರವಸೆಯ ಹಸುಗೂಸು
ತೊದಲ ನುಡಿ ನುಡಿದಾಗ
ಭಾವದಲೆಗಳು ಹೊರಹೊಮ್ಮಿ
ಸಂತಸದಿ ಜೀಕುತ್ತಿತ್ತು ತೊಟ್ಟಿಲು

               ಶೈಲೂ.......
[12/5/2021, 10:57 pm] Dr. B. N. Shylaja Ramesh: ಬದುಕು ಸವೆಸಿ ಇಹಲೋಕ ತ್ಯಜಿಸಿ
ಪರಲೋಕದತ್ತ ಹೊರಟ ಆತ್ಮಗಳೇ
ನಿಮಗಿದೋ ಅಶ್ರುಪೂರ್ಣ ವಿದಾಯ
ಸಕಲ ಮರ್ಯಾದೆಯೊಡನೆ ಬೀಳ್ಕೊಡಲು
ಅಸಹಾಯಕರಾದ ಬಂಧುಗಳೆಡೆಗೆ
ಇರಲಿ ನಿಮ್ಮ ಕರುಣಾಪೂರ್ಣ ದೃಷ್ಟಿ
[13/5/2021, 1:08 pm] Dr. B. N. Shylaja Ramesh: ಕರೆದೊಯ್ಯಿ ನಿನ್ನ ಲೋಕಕೆ
ನಾ ಸಿದ್ಧನಾಗಿರುವೆ
ನಿನ್ನೆಲ್ಲಾ ರೀತಿ ರಿವಾಜುಗಳಿಗೆ
ನಾ ಬದ್ಧನಾಗಿರುವೆ

ಸಾಕಾಗಿದೆ ಈ ಲೋಕ
ಎಲ್ಲೆಲ್ಲೂ ಅನ್ಯಾಯದ್ದೇ ತಾಂಡವ
ವ್ಯವಸ್ಥೆಯಲ್ಲೆಲ್ಲಾ ಲೋಪ
ಕಾವರಾರಿಲ್ಲವಿಲ್ಲಿ ಅಪತ್ಬಾಂಧವ

ಹಿಂಸೆ ಕ್ರೌರ್ಯವೇ ಹೆಚ್ಚು
ಮಾನವೀಯತೆಗಿಲ್ಲಿ ಬೆಲೆ ಗೌಣ
ಹಣ ಮಾಡುವುದೇ ಹುಚ್ಚು
ನ್ಯಾಯ ದೇವತೆಯಿಲ್ಲಿ ಮೌನ..!

ಜೀವಿಸುವುದು ಅತೀ ಕಷ್ಟ
ಜೊತೆಗಿಷ್ಟು ಕಾಡುವ ಮಹಾಮಾರಿ
ದುಡಿದು ಗಳಿಸಿದ್ದೆಲ್ಲವೂ ನಷ್ಟ 
ಆದರೂ ಚಿಕಿತ್ಸೆ ಆಗುತ್ತಿಲ್ಲ ಫಲಕಾರಿ

ಬಡತನಕ್ಕಲ್ಲವೀ ಲೋಕ
ಬದುಕಿದು ಸಿರಿವಂತರಾಟದ ಸ್ವತ್ತು
ಹೆಚ್ಚು ದುಡ್ಡಿದ್ದರಷ್ಟೇ ನಾಕ
ಜನಸಾಮಾನ್ಯ ಕೊರಗುವ ಸೋತು

ಸಾಕು ಸಾಕಾಗಿದೆ ದೇವ
ಇನ್ನಿಲ್ಲಿ ನಿಲ್ಲಲಾರೆ ನಾನು
ಅಪ್ಪಿ, ಕರೆದುಕೊ ಬೇಗ
ಹೆತ್ತವ್ವೆಯಂತೆ ನೀನು..!
[8/6/2021, 10:21 am] Dr. B. N. Shylaja Ramesh: ಈ..... ಬಂಧ....

ಬಾಳದೋಣಿಯ ಪಯಣಿಗರು ನಾವು
ಸಂಸಾರ ಸಾಗರದಿ ಈಸುತಿಹೆವು
ಉಪ್ಪುನೀರಿನ ನಂಟು ಏರಿಳಿತವೂ ಉಂಟು
ಸುಖದುಃಖಗಳ ಜೊತೆಗೆ ಕನಸು ನೂರೆಂಟು

ಬಾಳಿನುಯ್ಯಾಲೆಯಲಿ ಸಂಗಡಿಗರು ನಾವು
ಜೀಕುತ್ತ ಜೀಕುತ್ತ ಮರೆಯುವೆವು ನೋವು
ಮೇಲೊಮ್ಮೆ ಕೆಳಗೊಮ್ಮೆ ತೂಗುವುದು ಉಯ್ಯಾಲೆ
ಸಮರಸದಿ ಬಾಳುವೆವು ಏರುಪೇರಿಗಂಜದಲೇ

ಬಾಳ ದೋಣಿಯಲಡಿಯಿಟ್ಟ ದಿನದಿಂದ
ಹಿಗ್ಗಿಹೆವು ಕುಗ್ಗಿಹೆವು ನೋವು ನಲಿವಿಂದ
ಬದುಕಲೆಂಥದೇ ಬಿರುಗಾಳಿ ಬರಲಿ
ನಮ್ಮೊಲವ ಸಾಂಗತ್ಯ ಬಂಧ ಬಿಗಿಯಿರಲಿ

ಹಗಳಿರುಳಿನ ದುಡಿತ ನೀಡಿದೆ ಶುಭಫಲಿತ
ಬಂಧಿಸಿಟ್ಟಿದೆ ನಮ್ಮ ಒಲವ ಸೆಳೆತ
ಬರುವ ಕಷ್ಟಸುಖಗಳೆಲ್ಲ ಬೆವುಬೆಲ್ಲದ ತೆರದಿ
ಬದುಕ ಸಂಭ್ರಮಿಸಲದುವೆ ಯುಗಾದಿ

ಜೊತೆಗೂಡಿಬಂದ ದಿನಕಿಂದು 24ರ ಸಂಭ್ರಮ
ಮಧುರ ನೆನಪ ಬುತ್ತಿಯಲಿ ಒಲವ ಸಂಗಮ
ನನ್ನ ವಿಜಯದ ನಗೆಗಿರಲಿ ನಿಮ್ಮ ಕೊಡುಗೆ
ಅನುಸರಿಸಿ ಬಾಳುವೆ ನಾ ಕೊನೆಯುಸಿರವವರೆಗೆ

          ಶೈಲಜಾ ರಮೇಶ್
[8/6/2021, 10:40 am] Dr. B. N. Shylaja Ramesh: ಬಿಸಿಲಲ್ಲಿ ನೆರಲಾಗಿ
ನೆರಳಲ್ಲಿ ತಂಪಾಗಿ
ಜೊತೆಜೊತೆಗೆ ಸಾಗಿರಲು
ಬಾಳು ಬಂಗಾರ....!

ಸ್ಪಂಧಿಸುತ ಭಾವಕ್ಕೆ
ಹೆಗಲಾಗಿ  ಜೀವಕ್ಕೆ
ಅರಿತು ನಡೆಯುತಿರೆ
ಸುಖ ಸಂಸಾರ.....!
[15/7/2021, 7:21 am] Dr. B. N. Shylaja Ramesh: ಹುಂ...
ಆ ರಾಗ ಮಾಧುರ್ಯ ಕ್ಕೇ
ಮರುಳಾಗಿ ಕುಳಿತೆ ಮಾಧವಾ
ಮತ್ತೆ ಮತ್ತೆ ನೀ 
ಮೋಹನ ರಾಗವನ್ನೇ.
ನುಡಿಸಲೆಂದು😊
[15/7/2021, 7:21 am] Dr. B. N. Shylaja Ramesh: ಆ ಮೋಹನ ರಾಗವೇ ತಾನೇ
ನನ್ನ ನಿನ್ನ ಬೆಸೆದಿದ್ದು ಮಾಧವಾ
ಮತ್ತೆ ಮತ್ತೆ ನುಡಿಸು ಮತ್ತೆ
ಪಡೆದಿರುವೆ ನಾ
ದಿನವೂ ರಾಗ ಮಾಧುರ್ಯವ
ಸವಿಯುವ ಯೋಗವಾ😊
[15/7/2021, 2:16 pm] Dr. B. N. Shylaja Ramesh: ಥೇಟ್... ನಿನ್ನಂತೆಯೇ

ಬಿಟ್ಟೂ ಬಿಡದಂತೆ ಸುರಿಯುತ್ತಿದೆ ಜಡಿ ಮಳೆ
ಥೇಟ್.. ನಿನ್ನ ನೆನಪಿನಂತೆಯೇ...
ಕುಳಿರ್ಗಾಳಿ ಹೊಡೆತಕೆ ನಡುಗುತ್ತಿದೆ ಮೈ ಮನ
ಥೇಟ್.. ನಿನ್ನ ಸ್ಪರ್ಷದಂತೆಯೇ...
ಚಳಿಯ ಈ ಝಳಕೆ ಬೇಕೆನಿಸುತ್ತಿದೆ ಬಿಸಿಬಿಸಿ ಕಾಫಿ
ಥೇಟ್.. ನಿನ್ನ ಸನಿಹದಂತೆಯೇ...
ಸುರಿವ ಮಳೆಯ ತಂಪಿಗೆ ನೀರೂರಿಸುವ ಮಿರ್ಚಿಯ ಕಂಪು
ಥೇಟ್.. ನಿನ್ನ ಬಿಸಿಯಪ್ಪುಗೆಯಂತೆಯೇ..
ನಡುಗುವ ಮೈಯ್ಯ ಆಚರಿಸಿರುವ ಈ ಸ್ವೆಟರ್
ಥೇಟ್... ನಿನ್ನಂತೆಯೇ...
ಧೋ ಎಂದು ಸುರಿವ ಮಳೆಗೂ.. ನಿನಗೂ ಅವಿನಾಭಾವ ಸಂಬಂಧ
ಥೇಟ್... ನಮ್ಮ ಪ್ರೀತಿಯಂತೆಯೇ...
            ಶೈಲೂ.....
[16/7/2021, 6:34 am] Dr. B. N. Shylaja Ramesh: ಮಿಡಿವ ಮನದ ಮಾತು
*******************

ಮೋಡವಾವರಿಸಿದ ಈ ಇಳಿಸಂಜೆ
ಕ್ಷೀಣಿಸುತ್ತಿರುವ ಈ ತಿಳಿಬೆಳಕು
ಮುಂದಡಿಯಿಡಲೆಕೋ ಭಯ
ಬಂದು ನೀಡೆನಗೆ ಅಭಯ

ಸುತ್ತಲೂ ಮುತ್ತುತ್ತಿದೆ ಕತ್ತಲೆ
ಏನೇನೂ ಕಾಣಲೊಲ್ಲದು ನೋಡು
ಬಾಳುಹೇಗೆ ಬೆಳಕಾದೀತು
ನೀಡುನಿನ್ನ ಕಣ್ಣ ಕಾಂತಿಯ ಬೆಳಕು

ತವಕಿಸುತ್ತಿದೆ ಮನ ಉಸುರಲೆನೋ
ಪ್ರಾಸ ಮರೆತು ಪದಪುಂಜ ಖಾಲಿ
ಹೇಗೇಹೇಳಲಿ ಮನದ ಮಾತು
ತುಟಿಬಿಚ್ಚಲಾಗದ ಮೌನ

ಬಣ್ಣಕಳಚಿದ ಬರಡು ಬದುಕು
ಕನಸ ಕಣ್ಣೊಳಗೆ ನವರಂಗು
ಅಲೆದು ಬಳಲಿರುವೆ ಗೆಳೆಯ
ಬಣ್ಣ ತುಂಬಲು ನೀನೆಂದು ಬರುವೆ

ನಿನಗೆಂದೇ ಬರೆದ ಎರಡು ಸಾಲು
ಹೃದಯದಂಚೆಗೆ ರವಾನಿಸಿರುವೆ
ಕಾತರದಿ ಕಾಯುತಿರುವೆ ಗೆಳೆಯ
ಮಾರುತ್ತರಕೆ ಮನವನೆಟ್ಟು

ಲೋಕವೆಲ್ಲ ಕಿವುಡಾದರೂ ಸರಿ
ಯಾರಗೊಡವೆ ಬೇಕಿಲ್ಲೆನಗೆ
ನಿನ್ನೊಬ್ಬನಿಗೇ ಕೇಳಿದರೆ ಸಾಕು
ನಿನಗೆಂದೇ ಮಿಡಿವ ನನ್ನೆದೆಯ ಮಾತು
[16/7/2021, 6:35 am] Dr. B. N. Shylaja Ramesh: ನವಿರಾದ ನೆನಪು
**************

ಪ್ರಶಾಂತ  ಸಂಧ್ಯಾಸಮಯ
ತಂಗಾಳಿ ತಾಕಿ ಎನ್ನೆದೆಯ
ಅಲೆಅಲೆಯಾಗಿ ನೆನಪ ಸುರಳಿ
ಬಿಚ್ಚಿ ನೀಡುತಿದೆ ಕಚಗುಳಿ

ತಂಗಾಳಿ ತಂದ ಪರಿಮಳದ ಗಂಧ
ನೆನಪಿಸುತಿದೆ ನಿನ್ನ ವದನದ ಅಂದ
ಬಿರಿದ ತುಟಿಯಂಚಿನಿಂದ..ಆ
ಸೊಗಸ ಕರೆಯ ಕೇಳುವುದೇ ಚಂದ

ಮುಳುಗುತಿಹ ಆ ರವಿಯ ಕಿರಣ
ಮುಗುಳುನಗೆ ತಂದ ಪ್ರೀತಿಯ ಸ್ಪುರಣ
ಕಾಡುವೆಯೇಕೆ ಈ ಪರಿ ಅಕಾರಣ
ಮೋಡಿ ಮಾಡಿ ಕೆರಳಿಸಿದೆ ಮನವನ್ನ

ಚಿಲಿಪಿಲಿಯ ದ್ವನಿ ಹೊರಳಿ
ಹೊರಟಿದೆ ಮರಳಿ  ಗೂಡಿಗೆ
ನಿನ್ನೀ ಪ್ರೀತಿಯ ಕಲರವ
ತುಂಬಿಬಿಟ್ಟಿದೆ  ಎದೆಯೊಳಗೆ

ನೇಸರನಿಗೂ ಅವಸರ ಅಡಗಲು
ಭೂದೇವಿಯ ಒಲವ ಮಡಿಲೊಳು
ಕೆಂಪರಡಿ ಕೆನ್ನೆ ನಾಚಿ ನೀರಾದೆ
ಕನವರಿಸಿ ನಿನ್ನ ಮನದೊಳು

ಈ ಪ್ರಶಾಂತ ಸಂಜೆಗೂ
ನಿನಗೂ ಏನಿಹುದು  ಬಂಧ..?
ಕಾತರದ ಅಳಲಿನೊಲು
ಕಾಯ್ವೆ ನಾ ಮುದದಿಂದ...

     ಶೈಲೂ
[16/7/2021, 6:36 am] Dr. B. N. Shylaja Ramesh: ಇದು ನನ್ನ ಸಾಲು

ಅಂತರಾಳದಲ್ಲಿ ನೋವಿದೆ
ಆದರೂ ಮೊಗದಲ್ಲಿ ನಗುವಿದೆ
ನೋವನ್ನ ತೋರಿಸಿಕೊಳ್ಳಲಾಗದೆ
ನಗುವನ್ನು ಮೊಗದಲ್ಲಿ ತುಂಬಿದೆ

ನೊಂದ ಜೀವದ ಅಳಲು ನೂರಿದೆ
ಸಾಂತ್ವನದ ಹೆಗಲೊಂದು ಬೇಕಿದೆ
ನೀನಿರದೆ ನೋವಿಗೆಲ್ಲಿ ಕೊನೆಯಿದೆ
ನಗುನಗುತ ನೀ ಬಳಿ ಬರಬಾರದೇ
              ಶೈಲೂ....
[16/7/2021, 3:48 pm] Dr. B. N. Shylaja Ramesh: ನೇಸರ
******

ಇನಿತೂ  ದಣಿವಿಲ್ಲ
ಬೇಸರವೇ ಕಾಣದಲ್ಲ
ನಿತ್ಯ ನಡೆಸುವೆ ಕಾಯಕ
ಅರೆಗಳಿಗೆ ಬಿಡುವಿಲ್ಲ

ಜಗದ ಚೇತನ ನೀನು
ಹೊಂಗಿರಣ ಚೆಲ್ಲುವನು
ಜಡತನವ ದೂಡುತ
ಉತ್ಸಾಹ ತುಂಬುವನು

ನೀನಿದ್ದರೇನೇ ಬೆಳಕು
ಆತ್ಮೋನ್ನತಿಗೂ ನೀನಿರಬೇಕು
ಚರಾಚರದುಳಿವಿಗೆ
ದಿನವೂ ಉದಿಸಲು ಬೇಕು

          ಶೈಲೂ.....

[18/7/2021, 1:53 pm] Dr. B. N. Shylaja Ramesh: ಎಲ್ಲಿಹನವನು
***********

ಎಲ್ಲಿಹನೋ  ಚೆಲುವ
ಕನಸಲ್ಲಿ ಬಂದು ತಾ
ಮನಸೆಳೆದವ....
ಮಿಂಚಿನ ಕಣ್ಣೋಟದಲಿ
ಹುಸಿನಗೆಯ ಚೆಲ್ಲಿ
ಮನದಲ್ಲೇ ತಾ ನೆಲೆನಿಂತವ...

ಎಲ್ಲಿಹನೋ ಚೆಲುವ
ಅಡಿಮೇಲೆ ಅಡಿಯಿಟ್ಟು
ಬಂದು ತಾ ಕರಪಿಡಿದವ...
ಮೆಲು ದನಿಯ ರಾಗದಲಿ
ಹಾಡಾಗಿಸಿ ತನ್ನಾಸೆಯ
ಹೃದಯ ತಂತಿಯ ಮೀಟಿದವ...

ಎಲ್ಲಿಹನೋ ಚೆಲುವ
ಬಿತ್ತಿ ಹೊಂಗನಸನು  ತಾ
ಎದೆಯ ಗುಡಿಯಲ್ಲಿ  ನಿಂತವ...
ಅಪರೂಪದ  ಚೆಲುವ ಕಾಂತಿಯ
ಕಣ್ತುಂಬಿಕೊಳ್ಳುವಷ್ಟರಲೇ
ಮಾಯವಾದವ....

ಎಲ್ಲಿರುವನೋ ಚೆಲುವ
ಹುಡುಕುತಿಹೆ  ಹಗಲಿರುಳು
ಕಂಡಂತೆಯೇ ಕಂಡು ಮರೆಯಾದವ..
ಬೇಡ ಬಿಡು ಸಾಕಿನ್ನು ಹುಡುಗಾಟ
ಬಂದುಬಿಡು ನನಗಾಗಿ
ನೀ ನನ್ನ ಮಾಧವಾ...

         ಶೈಲೂ.....
[21/7/2021, 5:09 pm] Dr. B. N. Shylaja Ramesh: ಭಯ ಮಿಶ್ರಿತ ನೋವನ್ನು ಬೇಯಿಸುವ ಪಾಕಶಾಲೆ ಮನಸ್ಸು
[24/7/2021, 11:32 am] Dr. B. N. Shylaja Ramesh: ಘಮ್ಮನೆ  ಹೊಮ್ಮಿದ
ಸುಗಂಧವ ಆಗ್ರಾಣಿಸಿ
ಕುಳಿತಿರೇನು ಸುಮ್ಮನೆ..?
[24/7/2021, 6:05 pm] Dr. B. N. Shylaja Ramesh: ಹೈಕು

ಬದುಕಿದ್ದಾಗ
ನೋಡದ್ಜನ ಸತ್ಮೇಲೆ
ಕಣ್ಣೀರಾಕ್ತಾರೆ
[25/8/2021, 5:22 pm] Dr. B. N. Shylaja Ramesh: ನಿನ್ನ ನಂಬಿದೆ ಗುರುವೇ

ನಿನ್ನ ನಂಬಿದೆ ಗುರುವೇ
ನಂಬಿದವರ ನೀ ಪೊರೆವೆ
ಶರಣು ಬಂದಿಹೆ ನಿನ್ನಡಿಗೆ
ಕಡೆಗಣಿಸದೆ ಕಾಯೋ ಅಡಿಗಡಿಗೆ

ವರಗುರು ಕಲ್ಪತರು ನೀನು
ಬೇಡಿದುದನೀವ ಕಾಮಧೇನು
ನೊಂದೆನೂ ಬಲು ಭವದಿ
ಹರಸೋ ಎನ್ನ ಮುದದಿ

ಧ್ಯಾನ ಜಪ ತಪವೆಲ್ಲ
ಅರಿತವಳು ನಾನಲ್ಲ
ಭಕುತಿ ಭಾವವೂ ಇಲ್ಲ
ನೀನಲ್ಲದೇ ಬೇರೆ ಗತಿಯಿಲ್ಲ

ಕರವ ಹಿಡಿದು ನಡೆಸು
ಮಂದಮತಿಯನು ಅಳಿಸು
ಕರುಣೆ ದೃಷ್ಟಿಯ ಬೀರಿ
ತೋರಿಸೆನಗೆ ಸರಿದಾರಿ

ನಡೆದೇ ನಾ ದುರ್ಮಾರ್ಗದಲಿ
ಸರಿಸಾಟಿ ಎನಗ್ಯಾರೆನುತಲಿ
ಮೋಹ ಪಾಶದೊಳು ಸಿಕ್ಕು
ಬೆಂದೆ ರೋಷಾಗ್ನಿಯಲಿ ಹೊಕ್ಕು

ಕಾಯೋ ತಪ್ಪುಗಳ ಮನ್ನಿಸಿ
ನಾ ನಿನ್ನ ಕಂದನೆಂದೆಣಿಸಿ
ನಡೆಸು ನ್ಯಾಯ ಮಾರ್ಗದಲಿ
ಬೀಳದಂತೆ ತಪ್ಪಿನ ಸುಳಿಯಲಿ

ನಿನ್ನ ನಾಮವೇ ತೀರ್ಥ
ನೀ ಪಾವನಗೈಯ್ವ ಕರ್ತ
ಈ ದೇಹವೇ ಬೃಂದಾವನ
ನೆಲೆಸಿ ಪವಿತ್ರಗೊಳಿಸೆನ್ನ

ಸಾಕು, ಈ ಭವಬಂಧನ
ನಿನ್ನ ಸೇವೆಗಣಿಗೊಳಿಸೆನ್ನ
ತುಸುವಾದರೂ ಬೆಳಕುಚೆಲ್ಲಿ
ನಡೆಸು ಜ್ಞಾನಮಾರ್ಗದಲಿ

         ಶೈಲೂ.....
[27/8/2021, 5:02 pm] Dr. B. N. Shylaja Ramesh: #ಚುಟುಕು_ಸ್ಪರ್ಧೆ

#ಒಲವು

ಅವನೊಲವ ಧಾರೆಯಲಿ
ಮಿಂದು ಮಡಿಯುಟ್ಟು
ಸದ್ಭಾವದಲಿ ಪೂಜಿಸಿದೆ ನಾ
ಅವನಲೇ ಮನಸಿಟ್ಟು

#ಮಿಡಿತ

ನಿನ್ಹೆಸರ ಗುನುಗುತಿಹುದು
ನನ್ನೆದೆಯ ಪ್ರತಿ ಮಿಡಿತ
ಅರಿವಾಗದೇ ಒಲವೇ ನಿನಗೆ
ನಿನ್ನೆಡೆಗಿಹ ಮನದ ತುಡಿತ

#ಚೆಲುವು

ಸೆಳೆವ ಹೂವಿಗಿಂತಲೂ ಚೆಲುವು
ಚೆಲುವೇ ನಿನ್ನ ಹೂವಂತ ಮೊಗ
ನಿನ್ನಾಕರ್ಷಕ ನಗುವೊಂದೇ ಸಾಕು
ಅಬ್ಭಾ.. ಅದೆಷ್ಟು ಬೆಲೆಬಾಳುವ ನಗ..!

#ಕಂಕಣ

ನಿನ್ನನುರಾಗದ ಬಂಧನ
ಕಟ್ಟಿಸಿತೆನಗೆ ವಿವಾಹ ಕಂಕಣ
ನಿನ್ನನನುಸರಿಸಿ ನಡೆವೆ ಪ್ರತಿಕ್ಷಣ
ಗೆಳೆಯಾ ನೀನೇ ನನ್ನ ಪ್ರಾಣ..!

#ನಯನ

ಬಂಧಿಸಿಟ್ಟೆನೆನ್ನ ನಯನದಲಿ
ನಿನ್ನ ನಯನ ಮನೋಹರ ರೂಪವ
ಆಚೀಚೆ ಕದಲದಂತೆ ಕಾಯುವೆ
ಧಾರೆಯೆರೆಯುತ್ತಾ ಪ್ರೇಮವ

ಡಾ: ಶೈಲಜಾ ರಮೇಶ್
[1/10/2021, 5:09 pm] Dr. B. N. Shylaja Ramesh: ಮನದೊಳಗಿನ ಅಸಹ್ಯ ಮೌನ
ಸಹಿಸಲಾರೆ, ಹಿಂಸಿಸುತ್ತಿದೆ ಎನ್ನ
ಸುಡುತ್ತಿದೆ ಜ್ವಾಲಾಗ್ನಿ ಎದೆಯೊಳಗೆ
ಭಸ್ಮವಾಯ್ತು ಕನಸು ಮನದೊಳಗೇ
[1/10/2021, 6:41 pm] Dr. B. N. Shylaja Ramesh: ನಿದಿರೆಯ ಪರದೆಯ ಮೇಲೆ 
ಸಖಾ, ನಿನ್ನದೇ ಹೊಂಗನಸು
ನಿನ್ನನರಸುತ್ತ ಏಕೋ ನಿನ್ನತ್ತಲೇ
ಜಾರಿದೆ ನನ್ನ ಹೂ ಮನಸು

ಬದುಕಲ್ಲಿ ಜೊತೆಯಾಗದಿದ್ದರೇನು.?
ಕನಸಲ್ಲಿ ಕೈಹಿಡಿದು ನಡೆವೆ ನಾನು
ಕನಸಲ್ಲೂ ಕನಸುಗಳ ಹೆಣೆಯುತ್ತ
ಸುತ್ತುತ್ತಿರುವೆ ನಿನ್ನ ಸುತ್ತ ಮುತ್ತ
[1/10/2021, 6:55 pm] Dr. B. N. Shylaja Ramesh: ಕಳೆದುಹೋದ ಭಾವಗಳೆಲ್ಲ
ಮತ್ತೆ ಜನಿಸುತ್ತಿದೆ ಮೆಲ್ಲ ಮೆಲ್ಲ
ಪ್ರೀತಿಯೊಸಗೆಯ ಭಾವಸೆಲೆ
ಉಕ್ಕಿ ಹರಿಯುತ್ತಿದೆ ನಿನ್ನತ್ತಲೇ
[1/10/2021, 7:10 pm] Dr. B. N. Shylaja Ramesh: ವಾಸ್ತವದ ಆ ಬದುಕಿಗಿಂತ
ಕನಸಿನ ಈ ಕಲ್ಪನಯೇ ಚೆಂದ
ಮಾತು, ಮೌನ, ಮುನಿಸನು ಮೀರಿ
ಹೊಸೆದಿದೆ ನಲ್ಮೆಯ ಪ್ರೇಮಬಂಧ
[1/10/2021, 7:29 pm] Dr. B. N. Shylaja Ramesh: ಆದರೆ ಈ ಕಲ್ಪನೆಯೇ ಬದುಕಲ್ಲ
ಉಸಿರಿರುವವರೆಗೂ ಜೀವಿಸಬೇಕಲ್ಲ
ನನ್ನುಸಿರಿಗೆ ಉಸಿರಾಗುವ ಸಲುವಾಗಿ
ಒಮ್ಮೆ ಬಂದುಬಿಡು ಗೆಳೆಯ ನನ್ನೆದುರಾಗಿ
[6/10/2021, 1:55 pm] Dr. B. N. Shylaja Ramesh: #ದಶಕವನ

#ದತ್ತಪದ

#ಮೋಹಾಂಧ

ಜೀವನವಿದು ಅನಂತ ಬಯಕೆಗಳ ಆಖೈರು ಮೊತ್ತ
ಪಾವನವಾಗಲೆಂತು ಜೀವನ,  ಬಯಕೆಗಳಿಂದಾಗದೆ ಮುಕ್ತ?
ಆಸೆ ಆಮಿಷಗಳಿಗೆ ಕೊರಳೊಡ್ಡಿ ಬಾಳಾಯ್ತು ಹೋಳು
ಭಾಷೆಯನರಿತು ನಡೆಯದಿರೆ, ನಿಜದೇ ಬದುಕು ಗೋಳು.!

ಅಲ್ಲೊಬ್ಬ ರಾವಣ ಕಾಮಾಂಧನಾಗಿ ರಾಮಾಯಣಕಿತ್ತ ಮುನ್ನುಡಿ
ಇಲ್ಲೊಬ್ಬ ಪುತ್ರಮೊಹಾಂಧನಾಗಿ ಮರೆತ ಧರ್ಮದ ಚೆನ್ನುಡಿ
ಅಧಿಕಾರ ಲಾಲಸೆಗೆ ಅಣ್ಣತಮ್ಮಂದಿರ ದಾಯಾದಿ ಕಲಹ
ವಿಧಿಯ ಈ ಆಟಕೆ ಬದಲಾಯ್ತು ಅನೇಕರ ಹಣೆಬರಹ

ಅದಾರೋ ಮುನಿಯ ಕೋಪಾಗ್ನಿಗೆ ಸತ್ಯವಂತರೇ ಥರಗುಟ್ಟಿ
ಇದಾರೋ ಅನುಜನ ದ್ವೇಷಾಗ್ನಿಗೆ ಬಲಭೀಮ ತೊಡೆತಟ್ಟಿ
ಸತ್ಯವನೆತ್ತಿ ಹಿಡಿಯಲು ಹರಿಶ್ಚಂದ್ರನ ಪಾಡು ಪರದಾಟ
ಮಿಥ್ಯದಲೇ ಮಿಂದೆದ್ದ ದುರುಳನ ಮಥಿಸಲು ಜೋರು ಕಾದಾಟ

ಅತಿ ಆಸೆ ದುಃಖಕೆಡೆ ಮಾಡುವುದೆಂದರಿತರೂ ಈ ಜನ
ಗತಿಗೆಟ್ಟರೂ ಸರಿ ಮಿತಿಯಲಿಡಲ್ಲಿಲ್ಲವಲ್ಲ ಮನ
ಅರಿಷಡ್ವರ್ಗಗಳಿಗೆ ದಾಸರಾದವರೆಲ್ಲ ಪಟ್ಟ ಪರಿ ಪಾಡು
ಇರಿತಕ್ಕೊಳಗಾದವರ ಇತಿಹಾಸ ಸಾರುತ್ತಿದೆ ಈ ನಾಡು

✍️ ಡಾ : ಶೈಲಜಾ ರಮೇಶ್
[7/10/2021, 1:44 pm] Dr. B. N. Shylaja Ramesh: #ದಶಕವನ_2

#ಸಾಧನೆ_ಸುಲಭವಲ್ರೀ_ಸಾಧನೆಗೆ_ಸಾಕಷ್ಟು_ಬಿಡಬೇಕ್ರಿ

ಒಂದು ಬೇಕಂದ್ರ ಮತ್ತೊಂದು ಮರೀಬೇಕ್ರಿ
ಸುಖ ಬೇಕೂಂದ್ರ ಭಾಳ ಕಷ್ಟ ಪಡಬೇಕ್ರಿ
ನೆಮ್ಮದಿ ಸಿಗ್ಲಿಕ್ಕೆ ಸುಮ್ಮನೆ ಮೌನ ತಾಳಬೇಕ್ರಿ
ಸಾಧನೆ ಸುಲಭವಲ್ರೀ, ಸಾಧನೆಗೆ ಸಾಕಷ್ಟು ಬಿಡಬೇಕ್ರಿ

ಎತ್ತರಕ್ಕೇರಬೇಕೆಂದ್ರ ಮೆಟ್ಟಿಲ್ಹತ್ತಾಕ ಬೇಕ್ರೀ
ಸಾಧನೆಗೆ ಮಾರಕವಾದ ಆಲಸ್ಯ ಬಿಡಬೇಕ್ರೀ
ಸದ್ವಿದ್ಯೆ ಬೇಕಂದ್ರ ನಿದ್ದಿ ನೀರಡಿಕೆ ಬಿಡಬೇಕ್ರಿ
ಸಾಧನೆ ಬಾಳ ಕಷ್ಟ ರೀ ತುಂಬಾ ಕಳ್ಕೊಬೇಕ್ರೀ

ನಗುವರಳ ಬೇಕಂದ್ರ ದುಃಖ ನುಂಗಾಕಾಬೇಕ್ರೀ
ಲವಲೇಶ ದುಃಖ ಬೇಡಂದ್ರ ಆಶಾ ಬಿಡಬೇಕ್ರೀ
ತ್ರಾಸ ಆಗ್ತದಂತ ಮನಸಿಗೆ ಬ್ಯಾಸ್ರ ಮಾಡ್ಕೊಂಡ್ರ
ಅಭಿಮಾನ ತರೋವಂತ ಸಾಧನೆ ಮರೀಬೇಕ್ರೀ

ಜೀವನ ಅಂದ್ರೇನೇ ಹೀಂಗಿರ್ತದ ನೋಡ್ರೀ
ಒಂದನ್ನ ಪಡಿಯೋದಕ್ಕ ಭಾಳ ಕಳ್ಕೊಬೇಕ್ರೀ
ಕಳೆದಿದ್ದಕ್ಕ ಬ್ಯಾಸ್ರ ಬ್ಯಾಡ್ರೀ ಪಡೆದಿದ್ದಕ್ಕ ಖುಷಿ ಪಡ್ರೀ
ಏನೇ ಕಸರತ್ಮಾಡಿದ್ರೂನೂ ಸಿಗಬೆಕ್ಕದ್ದೇ ಸಿಗೋದೂ ರೀ

✍️ಡಾ: B.N ಶೈಲಜಾ ರಮೇಶ್
ಕ್ರಮಸಂಖ್ಯೆ 135
[8/10/2021, 1:24 pm] Dr. B. N. Shylaja Ramesh: #ದಶಕವನ_ಸ್ಪರ್ಧೆ_3

#ಗುಣಿತಾಕ್ಷರ_ಕವನ

#ದಯೆಯಿರಲಿ_ಭಗವಂತ

ದಯೆಯಿರಲಿ ಭಗವಂತ ನಿನ್ನ ಮಕ್ಕಳ ಮೇಲೆ
ದಾರಿಕಾಣದೆ ಬಳಲಿಹರು ಅರಿಯದೆ ನಿನ್ನ ಲೀಲೆ

ದಿಕ್ಕುದೆಸೆಯಿಲ್ಲದಂತೆ ಬಹು ಕಷ್ಟದಿ ಬಳಲಿಹರು
ದೀನರೊಳಗೂ ದೀನರಂತೆ ಪರಿತಪಿಸುತಲಿಹರು
ದುಃಖ ದುಮ್ಮಾನಗಳಲಿ ಬಹು ತೊಳಲಿ ಬಳಲಿ
ದೂರುತಿಹರು ಸಿಕ್ಕಿ, ಮೋಹದ ಒಳಸುಳಿಯಲಿ

ದೃಷ್ಟಿ ಹೀನರಂತಿಹರು ಸತ್ಯದ ಹಾದಿ ತಿಳಿಯದೆ
ದೆಸೆಗೆಟ್ಟಂತೆ ಸಿಲುಕಿಹರು ನೋವಿನ ಆಳ ಅರಿಯದೆ
ದೇವ ನೀನಲ್ಲವೇ ಎಲ್ಲರನೂ ಉದ್ಧರಿಪ ಕರುಣಾಳು
ದೈವತ್ವ ಮೆರೆಸಿ ಕೈಹಿಡಿದೆತ್ತಿ ಉಳಿಸು ಈ ಬಾಳು

ದೊರೆತ ಭಾಗ್ಯವನು ಕಾಪಿಡುವ ಬುದ್ಧಿಕೊಡು ದೊರೆಯೇ
ದೋಷಗಳ ಪರಿಹರಿಸಿ ಮನಸಕೊಡು ಮೋಹವನು ತೊರೆಯೇ
ದೌರ್ಬಲ್ಯಗಳ ಕಡೆಗಣಿಸು ಅದಮ್ಯ ಸಬಲತೆಯ ನೀಡಿ
ದಂಢಿಯಾಗಿ ಪ್ರೀತಿ ತೋರು ಕರುಣೆಯಿಂದೆಮ್ಮ ನೋಡಿ

✍️ ಡಾ: B.N. ಶೈಲಜಾ ರಮೇಶ್
ಕ್ರಮಸಂಖ್ಯೆ 135
[9/10/2021, 12:54 pm] Dr. B. N. Shylaja Ramesh: #ದಶಕವನ_ಸ್ಪರ್ಧೆ_4

#ಚಿತ್ರಕವನ

#ಶೀರ್ಷಿಕೆ #ಬುಡಕಡಿದರೇನಂತೆ.?

ಎರವಿನ ಸ್ಮಸಾರವಿದು ಎಲ್ಲರಿದ್ದರೂ ಒಬ್ಬಂಟಿ
ಈ ಇಳಿಸಂಜೆ ಸಮಯದಲಿ ಯಾರಿಲ್ಲ ಜಂಟಿ
ಗೋಜಲು ಸಂಸಾರ ರಾಜಕೀಯದಲಿ ನಾನಾದೆ ತೊತ್ತು
ಗಾಣದೆತ್ತಿನಂತೆ ದುಡಿದರೂ ನೀಡರೊಂದೂ ತುತ್ತು..!

ಹನಿಹನಿಗೂಡಿಸಿ ಕಟ್ಟಿದ್ದೆ ನೆರಲಿಗೊಂದು ಸೂರು
ಹಣಕೆ ಬಡತನವಿದ್ದರೂ ಪ್ರೀತಿಯಲಿ ಸಂತಸದ ಮೇರು
ಮುಪ್ಪರಡಿ ಕಸುವಿಲ್ಲದಾಗ ನಾನಾಗಿಬಿಟ್ಟೆ ಭಾರ..!
ಬಗಲಿಗೇರಿಸಿ ಗಂಟು ಹೊರಟೆ ಮನೆಯಿಂದ ದೂರ

ಕಸುವು, ಕಾಂಚಾಣವಿಲ್ಲದಿರೆ ಸಂಬಂಧ ಹಳಸಿದನ್ನ..!
ಬಿಸಿತುಪ್ಪದಂತೆ ಈ ಸಂಸಾರ ಮರೆಯಬೇಕು ಆಸೆಯನ್ನ
ಉಸಿರಿರುವ ತನಕ ಹಿಡಿದಿಡಬೇಕಲ್ಲ ಗುಟುಕು ಜೀವ
ಆರಿಸಿ ಹೊರಟಿದ್ದೇನೆ ಬದುಕು ನುಂಗುತ್ತೆಲ್ಲ ನೋವ

ಬುದಕಡಿದರೂ ಮತ್ತೆ ಚಿಗುರುವ ಅದಮ್ಯ ಛಲ
ವ್ಯರ್ಥವಲ್ಲ ಈ ಮರುಹುಟ್ಟು ಮತ್ತೆ ನೀಡುವೆ ಫಲ..!
ಹುಣಸೆಮರ ಮುಪ್ಪಾದರೂ ಹುಳಿಗೆ ಮುಪ್ಪಿಲ್ಲವಂತೆ..!
ಅಂತೆಯೇ ನನ್ನ ಅಚಲ ಬಲ ಬುಡಕಡಿದರೇನಂತೆ.?

✍️ B.N ಶೈಲಜಾ ರಮೇಶ್
ಕ್ರಮಸಂಖ್ಯೆ 135
[10/10/2021, 12:36 pm] Dr. B. N. Shylaja Ramesh: ಅಂದು ಮದುವೆಮನೆಯಲ್ಲಿ ಕಂಡೆ ನಿನ್ನನು
ನಿನ್ನ ಮುಗ್ಧ ಮಗುವಿನ ಮನಕೆ ಸೋತೆ ನನ್ನನು
[10/10/2021, 12:49 pm] Dr. B. N. Shylaja Ramesh: ನನ್ನ ಹೃದಯದಾಸನ ನಿನಗಾಗಿ ಮೀಸಲಿಟ್ಟೆ
ಮೀಸಲಾದ ಮನದಲ್ಲಿ ನೀ ಕುಳಿತುಬಿಟ್ಟೆ

ಕುಳಿತೆ ನೀ ನನ್ನೆದುರಲ್ಲಿ ಕಣ್ಣನೇ ನೋಡುತ್ತಾ
ನೋಡಿ ಪ್ರೀತಿಯಲಿ ಸವಿ ಸವಿ ಮಾತನಾಡುತ್ತಾ

ಮಾತು ಮಾತಲ್ಲೂ ಇತ್ತು ಅದಮ್ಯ ಪ್ರೇಮದ ಸಾರ
ಸಾರವಿತ್ತು ಮಾತಿನಲಿ ಶುರುವಿಡಲು ಪ್ರೀತಿ ಸಂಸಾರ
ಸಂಸಾರ ನಡೆಯಲು ಆಗಬೇಕು ಪರಿಣಯ
ಪರಿಣಯಕೆ ಹಿರಿಯರೊಪ್ಪಿಗೆಯ ನಿರ್ಣಯ
[10/10/2021, 1:01 pm] Dr. B. N. Shylaja Ramesh: ನಿಶ್ಚಯವಾಯ್ತು ಸಪ್ತಪದಿ ತುಳಿಯುವ ಘಳಿಗೆ
ಘಳಿಗೆಘಳಿಗೆಗೂ ತೆರೆಯುತ್ತಿತ್ತು ಪ್ರೀತಿಯ ಮಳಿಗೆ
ಮಳಿಗೆ ತುಂಬೆಲ್ಲ ಉತ್ಕೃಷ್ಟ ಪ್ರೀತಿಯದೇ ಸರಕು
ಸರಕು ಬರಿದಾಗದು, ಇರಲು ನಿಷ್ಕಲ್ಮಶ ಒಲವು
[10/10/2021, 1:11 pm] Dr. B. N. Shylaja Ramesh: #ದಶಕವನ_ಸ್ಪರ್ಧೆ_5

#ಪರಿಣಯ

ಅಂದು ಮದುವೆಮನೆಯಲ್ಲಿ ಕಂಡೆ ನಿನ್ನನು
ನಿನ್ನ ಮುಗ್ಧ ಮಗುವಿನ ಮನಕೆ ಸೋತೆ ನನ್ನನು
ನನ್ನ ಹೃದಯದಾಸನ ನಿನಗಾಗಿ ಮೀಸಲಿಟ್ಟೆ
ಮೀಸಲಾದ ಮನದಲ್ಲಿ ನೀ ಬಂದು ಕುಳಿತುಬಿಟ್ಟೆ

ಕುಳಿತೆ ನೀ ನನ್ನೆದುರಲ್ಲಿ ಕಣ್ಣನೇ ನೋಡುತ್ತಾ
ನೋಡಿ ಪ್ರೀತಿಯಲಿ ಸವಿ ಸವಿ ಮಾತನಾಡುತ್ತಾ
ಮಾತು ಮಾತಲ್ಲೂ ಇತ್ತು ಅದಮ್ಯ ಪ್ರೇಮದ ಸಾರ
ಸಾರವಿತ್ತು ಮಾತಿನಲಿ ಶುರುವಿಡಲು ಪ್ರೀತಿ ಸಂಸಾರ

ಸಂಸಾರ ನಡೆಯಲು ಆಗಬೇಕಲ್ಲ ಪರಿಣಯ
ಪರಿಣಯಕೆ ಹಿರಿಯರೊಪ್ಪಿಗೆಯ ನಿರ್ಣಯ
ನಿಶ್ಚಯವಾಯ್ತು ಸಪ್ತಪದಿ ತುಳಿಯುವ ಘಳಿಗೆ
ಘಳಿಗೆಘಳಿಗೆಗೂ ತೆರೆಯುತ್ತಿತ್ತು ಪ್ರೀತಿಯ ಮಳಿಗೆ

ಮಳಿಗೆ ತುಂಬೆಲ್ಲ ಉತ್ಕೃಷ್ಟ ಪ್ರೀತಿಯದೇ ಸರಕು
ಸರಕು ಬರಿದಾಗದು, ಇರಲು ನಿಷ್ಕಲ್ಮಶ ಒಲವು
ಒಲವ ಸಾಂಗತ್ಯದಲಿ ಬದುಕಲೆಂದೆಂದಿಗೂ ಗೆಲುವು
ಗೆಲುವಿನ ಸಂತಸ ಕೊಟ್ಟದ್ದು ನಮ್ಮಿಬ್ಬರ ಶುಭ ಪರಿಣಯವು

 ✍️ಡಾ: B.N.ಶೈಲಜಾ ರಮೇಶ್
ಕ್ರಮಸಂಖ್ಯೆ 135
[18/10/2021, 6:33 pm] Dr. B. N. Shylaja Ramesh: ನಿನ್ನ 
ಕವಿತೆಯೇ ನನ್ನ
ಮೌನಕ್ಕೆ ದೂಡಿದ್ದು

ಅದಕ್ಕೇ
ಮೌನವಾಗಿಯೇ
ಕವನವನ್ನಾಸ್ವಾದಿಸುವುದು

ವೆರಿ ನೈಸ್ ಸರ್👌👍🌷
[18/10/2021, 6:34 pm] Dr. B. N. Shylaja Ramesh: ನೀನೊಂದು ಸುಂದರ
ಹೂಗೊಂಚಲೆಂದು
ಎಣಿಸಿದ್ದೆ ನಾನು

ಹೀಗೇಕೆ
ಗೊಂದಲದ
ಗೊಂಚಲಾದೆ ನೀನು
[19/10/2021, 12:23 pm] Dr. B. N. Shylaja Ramesh: ಅವನ ಹೆಸರೊಮ್ಮೆ
ನೆನಪಿಸಿಕೊಂಡರೆ ಸಾಕು
ಮೈಮನ ಕಂಪಿಸುವುದು😊
[19/10/2021, 6:20 pm] Dr. B. N. Shylaja Ramesh: ಆತ್ಮೀಯತೆಯ ಸಾಗರದಲ್ಲಿ ಮಿಂದು, ಮದವೇರಿ ಮರಳಿ ಗೂಡಿನತ್ತ ಪಯಣ...
[20/10/2021, 2:12 pm] Dr. B. N. Shylaja Ramesh: #ನಡೆ_ಮುಂದೆ

ಕತ್ತಲೆನ್ನದಿರು, ಗಗನಚುಂಬಿ ಮರಗಳ ನೆರಳು
ನಡಿಗೆಗೆ ದಣಿವಾಗದಿರಲೆಂದು ಅದರ ಬಯಕೆ
ನಡೆಸುತಿಹುದಲ್ಲಿ ರವಿಕಿರಣ ಹಿಡಿದು ಕೈಬೆರಳು
ಗೆಲುವಿನ ಮುದ ನೀಡಲೆಂದು ನೊಂದ ಮನಕೆ.!

ಸುಮ್ಮನೇ ಸಾಗು, ಮುಂದಿಹುದು ಬೆಳಕ ರಾಶಿ
ನೀಗಬಹುದು, ಹರಡಿನಿಂತ ಬದುಕ ಕತ್ತಲು
ಅದೆಂತೋ ಮಂದಿ ನಡೆದು ಹೋದ ಜಯದಹಾದಿ
ಶುಭವಾಗಬಹುದು, ಶ್ರದ್ಧೆಯಲಿ ನೀ ಮೆಟ್ಟಲು.!

ಒಬ್ಬಂಟಿಯಾದರೇನು.? ಭಯ ಸರಿಸಿ ನೀ ನಡೆ
ಹಿಂಜರಿಕೆಯೇ, ಹಿಮ್ಮೆಟ್ಟಿಸುವ ಭಾರೀ ಕಳ್ಳಕಧೀಮ
ಮುನ್ನಡೆವ ಹಾದಿಯಲಿರ ದಿರಲೆಂದಿಗೂ ಭಿಡೆ
ಚಂದದ ಹಾದಿ, ನಡೆವ ಮನವಿತ್ತವನಿಗೆ ಪ್ರಣಾಮ.!

           ಶೈಲೂ....
(ಡಾ: ಶೈಲಜಾ ರಮೇಶ್ )
[22/10/2021, 3:53 pm] Dr. B. N. Shylaja Ramesh: #ಚಚೌಕ_ಸುನೀತಾ_ಕವನಸ್ಪರ್ಧೆ
#ವಿಷಯ
#ಸೋತೆ_ನಾ_ನಿನ್ನೊಲವಿಗೆ

ಮರೆತೆ ನನ್ನನೇ ಚೆಲುವ ನಿನ್ನ ಕಂಡಾಗ
ಸವಿ ಮಾತನಾಡುತ ನೀನು ಬಳಿ ಬಂದಾಗ
ಸುಮ್ಮನೇ ಸುರಿವ ಒಲವ ಮಳೆಯಲಿ
ಮಿಂದು ಮಡಿಯಾದೆ ಸವಿಪ್ರೇಮ ಧಾರೆಯಲಿ

ಸ್ವರ್ಗವೇ ಧರೆಗಿಳಿದಂತೆ ನೀ ಜೊತೆಯಿರೆ
ನನ್ನ ನೋವುನಲಿವೆಲ್ಲವೂ ನಿನ್ನ ಕೈಸೆರೆ
ನೀ ನಕ್ಕಾಗ, ಸುರಿದಂತೆ ಚಂದ್ರಮನ ಕಾಂತಿ
ನಿನ್ನಪ್ಪುಗೆಯ ಸುಖದಲ್ಲಿ ಎಂಥದೋ ಶಾಂತಿ

ಮೊದಲ ನೋಟಕೆ ನಾನೊಲಿದು ಶರಣಾದೆ
ಚಿನಕುರಳಿ ಮೋಡಿ ಮಾತಿಗೆ ಬೆರಗಾದೆ
"ಸೋತೆ ನಾ ನಿನ್ನೊಲವಿಗೆ" ಚೆಲುವ ಗೆಳೆಯಾ
ಒಪ್ಪಿದೆ ನೀ ನನ್ನ ಬಾನಪ್ಪಿದಂತೆ ಇಳೆಯ

ಅದಾವ ಜನುಮದ ಬಂಧ ನಮ್ಮಿಬ್ಬರದು
ಅದೆಂಥದೇ ಬಿರುಗಾಳಿಗೂ ಸಡಿಲಾಗದು

ಶೈಲೂ....
(ಡಾ: ಶೈಲಜಾ ರಮೇಶ್)
[24/10/2021, 7:49 pm] Dr. B. N. Shylaja Ramesh: 2009ರಲ್ಲಿ ನಾನು ಜ್ಯೋತಿಷ್ಯ ಕಲಿಯುವ ಸಲುವಾಗಿ ದಿವ್ಯಜ್ಯೋತಿ ಕಾಲೇಜ್ ಆಫ್ ಅಸ್ತ್ರಾಲಜಿಗೆ ಜಾಯ್ನ್ ಆದಾಗ ಪರಿಚಯವಾದ ಒಂದು ಅದ್ಭುತವೆಂದರೆ ಗೆಳತಿ ಪದ್ಮಜಾ, ಅವಳ ಮುದ್ದು ಮುದ್ದು ಮಾತು,  ಎಲ್ಲರೊಂದಿಗೆ ಮಿಳಿತವಾಗುತ್ತಿದ್ದ ರೀತಿ, ನಿಷ್ಕಲ್ಮಶ ಸ್ನೇಹದಿಂದ ನನಗೆ ಪದ್ದು ಅಂತಲೇ ಪರಿಚಯವಾಗಿದ್ದು,ಮೂಲತಃ ತೆಲುಗಿನವಳಾದ ಪದ್ಮಜ ಗೆ ಕನ್ನಡ ಗೊತ್ತಿರಲಿಲ್ಲ, ಕಾಲೇಜಿನಲ್ಲಿ ಕೊಡಿತ್ತಿದ್ದ ನೋಟ್ಸ್ ಗಳನ್ನು ತೆಲುಗಿನಲ್ಲೋ, ಇಂಗ್ಲಿಷ್ನಲ್ಲೋ ಬರೆದುಕೊಳ್ತಾಇದ್ಲು, ಕಲಿಯುವ ಅದಮ್ಯ ಬಯಕೆ ಹೊತ್ತ ಇವಳು ಸದಾ ಮುಂಚೂಣಿಯಲ್ಲೇ ಇರುತ್ತಿದ್ದದ್ದು..! ಮೊದಮೊದಲು ಪರೀಕ್ಷೆಗಳನ್ನೆಲ್ಲ ಇಂಗ್ಲೀಷ್ನಲ್ಲೇ ಬರೆಯುತ್ತಿದ್ದರೂ, ಕನ್ನಡ ಕಲಿಯುವ ಆಸಕ್ತಿಯಿಂದ, ಆರು ತಿಂಗಳಲ್ಲೇ ಕನ್ನಡ ಓದಲು ಬರೆಯಲು ಕಲಿತು ಡಿಪ್ಲೊಮಾ ಪರೀಕ್ಷೆ ಯನ್ನು ಕನ್ನಡದಲ್ಲೇ ಬರೆದು ಟಾಪ್ 5 ನಲ್ಲಿ ಒಬ್ಬಳಾಗಿದ್ದಳು. ಇವಳ ಬಾಯಲ್ಲಿ ಕನ್ನಡ ಕೇಳುವುದೇ ಒಂದು ಸೊಗಸು.!😊 ಕೆಲವು ಪದಗಳ ಉಚ್ಛಾರ ತಪ್ಪು ಅನಿಸಿದರೂ, ಅವಳ ಬಾಯಿಂದ ಮುದ್ದುಮುದ್ದಾಗಿ ಬರುವ ಆ ಪದವೂ ಚಂದವೇ ಕೇಳಿಸುತ್ತೆ. ಹಾಗಾಗಿ ಅದನ್ನು ಸರಿ ಮಾಡುವ ಗೋಜಿಗೇ ಹೋಗಿಲ್ಲ ನಾನು😊
ಜ್ಯೋತಿಷ್ಯ ಕಲಿತು
[25/10/2021, 8:59 am] Dr. B. N. Shylaja Ramesh: ಅವಳೆಂದರೆ
ಸುಮದೊಳಗಿನಮಕರಂದದಸಿಹಿಯಂತವಳು
ಆಜೇನಿನಮಾಧುರ್ಯದಸವಿಯಂತವಳು

Nice👍👌🌷
[29/10/2021, 4:14 pm] Dr. B. N. Shylaja Ramesh: ಮಿಂಚಿ ಮರೆಯಾದೆ ನೀನೆಲ್ಲಿಗೆ.?

ಹೊರಟುಬಿಟ್ಟೆಯಾ ಪುನೀತಾ?
ಏನಂಥಾ ಅವಸರವಿತ್ತಾ..?ವಯಸ್ಸಿನ್ನೂ ನಾಲ್ವತ್ತಾರು
ಎಷ್ಟೊಂದಿತ್ತಿನ್ನೂ ಕಾರುಬಾರು

ಅಣ್ಣಾವ್ರ ಮುದ್ದಿನ ಮಗ
ಕರೆಯಿತ್ತಿದ್ದರೇನು ನಿನಗ..?
ಬಾರದೂರಿಗೇಕೆ ಪಯಣ
ಮುಗಿದುಬಿಟ್ಟಿತೇ ಯಾನ..?

ವಿಧಿಯಾಟದ ಈ ಚದುರಂಗ
ಅನಾಥವಾಗಿಸಿತು ಚಿತ್ರರಂಗ
ಪವರ್ ಸ್ಟಾರಿನ ಆ ಪವರು
ಕಸಿದ ಆ.. ಧೂರ್ತ ಯಾರು.?

ಹುಟ್ಟಿನಿಂದಲೇ ಮೇರು ಪ್ರತಿಭೆ
ನಟನೆಯಲ್ಹರಡಿತು ನಿನ್ನ ಪ್ರಭೆ
ಜಾರಿದನೇ ಅಪ್ಪು ಬಾಳದಾರಿಯಲಿ.?
ಅಸ್ತಮಿಸಿದಂತೆ ಸೂರ್ಯ ಬಾನಿನಲಿ

ಅಳುತಿದೆ ಬಾನೂ ಮಳೆಯ ಸುರಿಸಿ
ನಿನ್ನಗಲಿಕೆಯ ಅತೀವ ದುಃಖ ಬೆರೆಸಿ
ನಿರಾಕರಿಸಬಾರದಿತ್ತೆ ಅಪ್ಪು ಕರೆಬಂದಾಕ್ಷಣ
ಕ್ಷಣ ಕಳೆದಿದ್ದರೆ ವಿಧಿ ಬದಲಿಸುತ್ತಿತ್ತೇನೋ ಮನ

ನೀನೆಲ್ಲಿದ್ದರೂ ನೀನೇ ರಾಜಕುಮಾರ
ಗೊಂಬೆ ಹೇಳಿದ ಕಥೆಯ ಕುವರ
#ಯುವರತ್ನ  ನೀ ಎಲ್ಲರ ಪಾಲಿಗೆ
ಮಿಂಚಿ ಮರೆಯಾದೆ ನೀನೆಲ್ಲಿಗೆ.?

  .       ಶೈಲೂ...
[1/11/2021, 3:40 pm] Dr. B. N. Shylaja Ramesh: #ಕನ್ನಡಮ್ಮನ_ಹಿರಿಮೆ

#ದ್ವಿರುಕ್ತಿ_ಕವನ

ಕಣಕಣದಲ್ಲೂ ಸಾರುತಿದೆ ಕನ್ನಡಮ್ಮನ ವೈಭವ
ಉಸಿರುಸಿರಲೂ ಬೆರೆತಿದೆ ಭಾಷಾಭಿಮಾನದ ಪ್ರಭಾವ
ಜನಮನದಲ್ಲಿ ನೆಲೆಸಿಹಳು ತಾಯಿ ಭುವನೇಶ್ವರಿ
ಬಗೆಬಗೆಯಲಿ ಸ್ತುತಿಸುವರು ತಾಯ ಐಸಿರಿಯ ಪರಿ

ಹೆಜ್ಜೆಜ್ಜೆಗೂ ಹರಡಲಿ ಕನ್ನಡ ಭಾಷೆಯ ಕಂಪು
ಅಣುವಣುವಲೂ ಬೆರೆಯಲಿ ತಾಯ ಹಿರಿಮೆ ಪೆಂಪು
ಮನೆಮನೆಯಲೂ ಮೊಳಗಲಿ ಜೈಕಾರದ ಘೋಷ
ಎಳೆದೆಳೆದು ಬಂಧಿಸಲಿ ತಾಯ್ನುಡಿಯ ಪ್ರೀತಿ ಪಾಶ

ನಡೆನುಡಿಯಲಿ ಮೇಳೈಸಲಿ ಮಾತೃಭಾಷೆ ಭಕ್ತಿ
ನರನಾಡಿಯಲಿ ತುಂಬುವುದು ನಾಡುನುಡಿಯ ಶಕ್ತಿ
ಸಾಲುಸಾಲು ಗುಡುಗೋಪುರಗಳು ಕಾಣಸಿಗುವುದಿಲ್ಲಿ
ಹಡಿಬದೆಯ ಧರ್ಮಸಾರ ನೆಲೆಯೂರಿಹುದಿಲ್ಲಿ

ತಲತಲನೆ ಹರಿವ ಜೀವನದಿಗಳ ನಾಡು
ಕ್ಷಣಕ್ಷಣಕ್ಕೂ ಅಚ್ಚರಿಯ ಅನಾವರಣವಿಲ್ಲಿ ನೋಡು
ಕಣ್ಮನಗಳ ಸೆಳೆದೆಳೆವ ಶಿಲ್ಪಕಲೆಯ ವೈಭವ
ಮನಮನದಲೂ ಕಿಚ್ಚೆಬ್ಬಿಸುವ ಕನ್ನಡರಾಜ್ಯೋತ್ಸವ

ಪದಪದದಲಿ ತುಂಬಲಹುದೇ ಕನ್ನಡದ ಹಿರಿಮೆ
ವಿವಿಧತೆಯಲಿ ಏಕತೆಯೇ ತಾಯಿನಾಡ ಗರಿಮೆ
ಎಲ್ಲೆಲ್ಲಿ ನೋಡಲಿ ಹಾರುತಿದೆ ಹಳದಿ ಕೆಂಪು ಭಾವುಟ
ಅಚ್ಚಳಿಯದೆ ನೆಲೆನಿಂತಿದೆ ಇತಿಹಾಸದ ಪುಟಪುಟ..!!

ಡಾ: B.N. ಶೈಲಜಾ ರಮೇಶ್
[1/11/2021, 4:36 pm] Dr. B. N. Shylaja Ramesh: #ಕನ್ನಡವೇ_ನಮ್ಮುಸಿರು

ಮಾತೃಭಾಷೆಯಿದು ಅಮ್ಮನಂತೆಯೇ ಅಕ್ಕರೆ
ಸುಲಲಿತ ಭಾಷೆಯಿದು ಆಹಾ.. ಸವಿ ಸಕ್ಕರೆ..!
ಎಷ್ಟೊಂದು ಇತಿಹಾಸ ಕನ್ನಡ ನಾಡಿನ ಬಗ್ಗೆ
ನೆನೆದೊಡನೆ ಚಿಲ್ಲನುಕ್ಕುವುದು ಸಂತಸದ ಬಗ್ಗೆ.!

ಕವಿಕಬ್ಬಿಗರ ಕನ್ನಡ ಚೆಲುವಿನ ಭಾಷೆ
ಶ್ರೀಮಂತ ನುಡಿಗಟ್ಟು ಬೆಳಗುವ ಪ್ರಣತೆ.!
ಸುಲಿದಂತೆ ಹಣ್ಣನು, ಕಲಿಯಲು ಸರಳ
ಕಲಿಯಲಾರದ ಮನುಜ ನಿಜದಿ ಮರುಳ.!

ಭಾಷೆಯ ಸೊಗಡಲ್ಲಿ ವಿವಿಧತೆಯ ಉಚ್ಛಾರ
ಒಂದೊಂದು ಪ್ರಾಂತ್ಯದಲೂ
ಅದರದ್ದೇ ಶೃಂಗಾರ.!
ವಿವಿಧತೆಯಲ್ಲಿ ಏಕತೆಯೇ ಕನ್ನಡ ಭಾಷೆಯ ಗುಟ್ಟು
ಕಲಿಯಬೇಕು, ತಾಯಿಗೆ ಮಣಿದು ಪೊಡಮಟ್ಟು

ಎಷ್ಟು ಪುಣ್ಯದ ಫಲವೋ ತಾಯ ಮಡಿಲಲ್ಲಿ ಜನನ
ಭಾಷಾಮಾಧುರ್ಯಕೆ ಸೋತು ಮನದಿ ತೊಂತನನ
ಸವಿ ಜೇನ ಹನಿಯಂತ ಕನ್ನಡವೇ ನನ್ನುಸಿರು.!
ಬಾಳಿ ಬೆಳಗಲಿ ದಿಗ್ದಿಗಂತರದ ವರೆಗೂ ಕನ್ನಡ ಹೆಸರು..!

          ಶೈಲೂ....
(ಡಾ : B.N ಶೈಲಜಾ ರಮೇಶ್)
[2/11/2021, 9:43 am] Dr. B. N. Shylaja Ramesh: ನನ್ನವರು

ನಕ್ಕರೆ, ಚಂದದ ವದನ ಚಂದ್ರಮನಂತೆ
ಗಾಂಭೀರ್ಯದಲಿ ಸಿಂಹದ ತೆರದಂತೆ
ಮನಸೋ... ಅತಿ ಮಧುರ ಜೇನು..!
ಪುಟಕ್ಕಿಟ್ಟ ಚಿನ್ನದಂತೆ ನನ್ನವನು..!

ನನ್ನ ಬಾಳ ಹೊತ್ತಿಗೆಯ ಕಥಾನಾಯಕ
ಪ್ರೀತಿಯುನಾಬಡಿಸುವುದೇ ಕಾಯಕ
ಅಪರೂಪಕ್ಕೊಮ್ಮೊಮ್ಮೆ ಹುಸಿಮುನಿಸು.!
ಎಲ್ಲವನ್ನೂ ಮೀರಿದ ಮಗುವಿನ ಮನಸು..!

ಸಿಟ್ಟು ಸೆಡವು, ಕಠಿಣ ಮಾತು ಮಥನ
ಸುಳಿವೇ ಇಲ್ಲದ ಅತಿ ಸುಂದರ ಜೀವನ
ನಿಷ್ಕಲ್ಮಶ ಪ್ರೀತಿಗೆಂದಿಗೂ ಕುಂದಿಲ್ಲ..!
ನಡೆನುಡಿಯಲೆಳ್ಳಷ್ಟೂ ಅನುಮಾನವಿಲ್ಲ..!

ಸ್ನೇಹಕ್ಕಿವರಲ್ಲಿ ಸದಾ ತೆರೆದ ಹೃದಯ
ಕೇಡೆಣಿಸುವವರಿಗೆ ಅಲ್ಲಲ್ಲೇ ವಿದಾಯ
ಕಷ್ಟವೆಂದವರಿಗೆ ಶಕ್ತಿ ಮೀರಿ ಸಹಾಯ.!
ನೋವುಂಡವರಿಗವರದು ಮಿಡಿವ ಹೃದಯ.!

ಈ ಹೃದಯವಂತನಿಗಿಂದು ಜನ್ಮದಿನ
ಹಾರೈಸುವೆನೆಂದೆಂದಿಗೂ ತುಂಬಿ ಮನ
ಜಯವಿರಲಿ ಸಕಲ ಕಾರ್ಯಗಳಲ್ಲಿ ನಿಮಗೆ.!
ಶುಭವ ತರಲೆಲ್ಲರ ಹಾರೈಕೆ ನಾಳೆಗೆ...!

       ನಿಮ್ಮ  ಶೈಲೂ.....😊
[3/11/2021, 10:00 am] Dr. B. N. Shylaja Ramesh: ಬೆಳಕು
******
ಅಜ್ಞಾನದ ತಮವ ಓಡಿಸಲು ಕಾದಿದೆ
ಬಾಗಿಲ ಬಳಿಯಲ್ಲಿ ನಿಂದು ಹೊಂಬೆಳಕು
ತೆರೆದು ಮನದ ಕದವ ಬರಮಾಡಿಕೊ ಬೇಗ
ತೊಳೆಯಲೀ ಅಹಮಿಕೆಯ ಬೆಳಗಿ ನಲ್ಬೆಳಕು

ಹಗಲಿಗಿಹುದು ದಿನಕರನ ಪ್ರಭೆಯ ಹೊಂಬೆಳಕು
ಇರುಳಿಗಿದೆ ನಗುವ ತಿಂಗಳನ ಬೆಳಕು
ಮನವ ಬೆಳಗಲಿಹುದು ಜ್ಞಾನದ ಬೆಳಕು
ಅಂತರಂಗದ ಚೆಲುವಿಗೆ ನಗುವೆ ಬೆಳಕು

ಮನದ ಜಡ ತೊಲಗೆ ಉತ್ಸಾಹದ ಬೆಳಕು
ದ್ವೇಷಾಸೂಯೆಯ ತಮಕೇ ಪ್ರೀತಿ ಬೆಳಕು
ಅಜ್ಞಾನ ಓಡಿಸಲು ಅರಿವೆಂಬ ಬೆಳಕು
ಪ್ರಜ್ವಲಿಸಲೇಲ್ಲೆಲ್ಲೂ ಮಾನವತೆಯ ಬೆಳಕು

ಮನಮುದುಡಿ ಕುಳಿತಿರಳು ಆಶೆಯ ಬೆಳಕು
ನೊಂದ ಜೀವಗಳಿಗೆ ಕರುಣೆಯ ಬೆಳಕು
ವರ್ಣಬೇಧದ ದಳ್ಳುರಿಗೆ ಸ್ನೇಹದ ಬೆಳಕು
ಮನುಕುಲವುಳಿಯಲು ಶಾಂತಿಯಾ ಬೆಳಕು

ಮೌಢ್ಯತೆಯ ಬದಿಗಿರಿಸಿ ಹಚ್ಚೋಣ ಹಣತೆ
ಬೆಳಗಲೆಲ್ಲರ  ಬಾಳು ನಿಸ್ವಾರ್ಥದ ಪ್ರಣತೆ
ಸುತ್ತಲೂ ಪಸರಿಸಿ ಜ್ಞಾನಜ್ಯೋತಿಯ ಬೆಳಕು
ಮನದಂಗಳದಿ ಪ್ರಜ್ವಲಿಸಲಿ ಕಿರುನಗೆಯ ಬೆಳಕು

          ಶೈಲೂ.....
[3/11/2021, 10:00 am] Dr. B. N. Shylaja Ramesh: ಹಣತೆ
******
           
ಹಚ್ಚಬೇಕು  ಹಣತೆ
ತಮ ಬೆಚ್ಚಿ ಬೀಳುವಂತೆ
ಸುತ್ತಲೂ ಹಬ್ಬಿ ಬೆಳಕು
ಮನ ಹರುಷವಾಗುವಂತೆ

ನಿತ್ಯ ಬೆಳಗಬೇಕು
ಜ್ಯೋತಿ ಹೊತ್ತಿ ಉರಿಯಬೇಕು
ಮನದ  ವಿಷವ ತೊಳೆದು
ಪ್ರೀತಿ ಹಬ್ಬಿ ನಲಿಯಬೇಕು

ದ್ವೇಷದಂಧಕಾರ
ನಾಚಿ ತೊಲಗಬೇಕು
ಅಜ್ಞಾನ ಕೊಳೆಯ ತೊಳೆದು
ಜ್ಞಾನ ಪಸರಬೇಕು

ಮೃತ್ಯು ಮುಖದ ಶಕ್ತಿ
ಬೆಚ್ಚಿ ಓಡುವಂತೆ
ಅಮೃತತ್ವದೆಡೆಗೆ ಬದುಕು
ಸಾಗಿ ನಲಿಯುವಂತೆ

ಹಚ್ಚಬೇಕು  ಹಣತೆ
ನಗುವೆಲ್ಲೆಡೆ ತುಂಬುವಂತೆ
ಸೌಹಾರ್ದ ಬದುಕ ಬಯಸಿ
ಶಾಂತಿ  ಹರಡುವಂತೆ

          ಶೈಲೂ.....
[3/11/2021, 10:09 am] Dr. B. N. Shylaja Ramesh: ಸಾಲಿಗೊಂದು ಕವನ##
ಮನದೊಳಗೆ ಅಡಗಿದ್ದ ಮೌನ ಮಾತಾದಾಗ
*************************************

ಮನದೊಳಗೆ ಅಡಗಿದ್ದ ಮೌನ ಮಾತಾದಾಗ
ಸಂತಸದಿ ಸಡಗರದಿ ನಲಿದಿದ್ದೆ ನಾ
ಮಾತೆಲ್ಲ ಮರೆತು ಮೌನ ಹೆಪ್ಪಿಟ್ಟಾಗ
ನೋವಿನ ಬೆಂಕಿಯಲಿ ಬೆಂದಿದ್ದೆ ನಾ

ನಿನ್ನ ಮೌನವೇ ದಹಿಸುವ ಸುಡುಬೆಂಕಿ
ಪ್ರೀತಿಯ ಮಾತಲ್ಲವೇ ನಲ್ಲ ತಣ್ಣೆಳಲು
ಮೌನದ ತೆರೆಸರಿಸಿ ನೀನೊಮ್ಮೆ ನಕ್ಕಾಗ
ನಲ್ಲ ಬಾಳೆಲ್ಲ ಬೆಳದಿಂಗಳ ತಂಪೆರಲು

ಏನಿಹುದು ಬೇಸರ ನನ್ನೊಡನೆ ಮುನಿಸು
ಮಾತು ಮರೆಯುವಷ್ಟು ಮನವು ಕಠೋರವೇ?
ಬಿಡು ಮೌನ ಗೆಳೆಯಾ ನಗುವಿರಲಿ ಮೊಗದಲ್ಲಿ
ನನ್ನ ಕ್ಷಮಿಸೆಂದು ಬೇಡುವೇ ಸಾಕಲ್ಲವೇ?

ನಿನ್ನೊಲವ ಕಣ್ಣೋಟ ಹೆಚ್ಚಿಸುವುದು ಎದೆಬಡಿತ
ಮನವು ಉಯ್ಯಾಲೆಯಲಿ ತೂಗಿದಂತೆ
ಸರಸ ಸಲ್ಲಾಪದ ಮುದವಿತ್ತ ಸಿಹಿನುಡಿಯು
ಸಂತಸದಿ ಬಾನಲ್ಲಿ ಬಾನಾಡಿ ತೇಲಿದಂತೆ

ಮರೆತುಬಿಡು ಗೆಳೆಯ ಮುದುಡಿಸುವ ಮೌನ
ಅನುರಣಿಸಲಿ ನಿತ್ಯ ಒಲವಗಾನ
ನಿನ್ನೊಂದು ಸಿಹಿಮಾತಿನಾ ಮಧುರಲಾಪನ
ನುಡಿಸುವುದು ಎದೆಯಲ್ಲಿ ತೋoತನನ

            ಶೈಲೂ......
[3/11/2021, 10:15 am] Dr. B. N. Shylaja Ramesh: ಥೀಮ್ ##
ಸಾಲಿಗೊಂದು ಕವನ / ವಾಚನ ##

ಶೀರ್ಷಿಕೆ : 

ಅಡಿಗಡಿಗೆ ಕಾಡುವ ನೆನಪುಗಳೇ
***************************

ಅಡಿಗಡಿಗೆ ಕಾಡುವ ನೆನಪುಗಳೇ
ವಿರಮಿಸಿ ಸ್ವಲ್ಪ ಸಮಯ
ನೆನಪಿನ ಬೇಗೆಯಲಿ ಬೆಂದಿರುವೆ
ಸಾವರಿಸಿಕೊಳ್ಳುವೆ ಭ್ರಮೆಯ

ಚಂದಿರನ ಕಂಡ ಅಲೆಗಳಂತೆ
ಅಪ್ಪಳಿಸುವಿರೇಕೆ ಮನದ ದಡಕೆ?
ದೂರದಲ್ಲೆಲ್ಲೋ ಇರುವನವನು
ಹೊಯ್ದಾಟದ ಭ್ರಾಂತಿಯೇಕೆ.?

ಬಿಕೋ ಎನುತಿದೆ ಮನದ ಮನೆಯು
ಬಣಗುಟ್ಟುತ್ತಿದೆ ಮೌನ ತುಂಬಿದೆದೆಯು
ನೆನಪ ಮೂಟೆ ಹೊತ್ತು ತಂದು
ಕಾಡುವಿರಿ ಏಕೆ ಹೀಗೆ ಮನವನಿಂದು

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು
ತಾಕಿತೇಕೆ ಪ್ರೇಮ ಸುಧೆಯು..?
ಬತ್ತಿದ ಕನಸು ಕಂಗಳಲ್ಲಿ
ಬಿತ್ತಿದಿರೇಕೆ ನೆನಪ ಬೆಳೆಯು

ಭಾವ ಬದುಕಿಗೆ ಬೆಂಕಿಯಿಟ್ಟು
ಸುಡುವಿರೇಕೆ ಮನದ ಶಾಂತಿ
ಸುಕ್ಕುಗಟ್ಟಿದೀ ಬರಡು ಬದುಕ
ಹಿಂಡುವಿರೇಕೆ ಮನವ ಹೊಕ್ಕಿ

ತಾಳಿ ನಿಲ್ಲಿ ಅಲ್ಲೇ ದೂರ ದೂರ
ಮರೆಯಬೇಕಿದೆ ಎಲ್ಲವನ್ನೂ
ನಸುನಗೆಯಲೇ ಮೋಡಿ ಹಾಕಿ
ಮನದಲಿ ಮಡುವುಗಟ್ಟಿದ ನೋವನು

ಮನದ ಮೂಲೆಯಲಿ ಬೀಡುಬಿಟ್ಟು
ಸವಿನೆನಪಿನ ಮುಖವಾಡ ಹೊತ್ತು
ಕನಸಿಗೇ ಲಗ್ಗೆ ಇಟ್ಟು ನೆನಪಾಗಿ ಕಾಡುವೆ
ಇರು ಒಂದರೆಗಳಿಗೆ ಮರೆತೆಲ್ಲ ಬದುಕುವೆ

           ಶೈಲೂ.....
[3/11/2021, 10:22 am] Dr. B. N. Shylaja Ramesh: ದೀಪಾವಳಿ
**********

ಸಾಲು ಸಾಲು ದೀಪಗಳು
ಕಣ್ಣ ತುಂಬ ಹೊಳಪುಗಳು
ಮೂಡಿ ಮಂದಹಾಸಗಳು
ತರುವುದದುವೆ ದೀಪಾವಳಿ

ಧರಿಸಿ ಹೊಸ ಉಡುಗೆಗಳ
ಜೋಡಿಸುತಲೆ ಹಣತೆಗಳ
ತುಂಬಿ ಭಕ್ತಿ ಭಾವಗಳ
ಮೆರೆದುದದುವೆ  ದೀಪಾವಳಿ

ತೂಗುತಿದೆ ಆಕಾಶಬುಟ್ಟಿ
ಓಡಿಸಿ ಕತ್ತಲ ಬೆನ್ನತ್ತಿ
ಮುಂಬಾಗಿಲಲಿ ಹಣತೆ ಹೊತ್ತಿ
ಬೆಳಗುದದುವೆ  ದೀಪಾವಳಿ

ಬಗೆಬಗೆ ಸಿಹಿ ತಿನಿಸುಗಳು
ಓಡಿ ಮನದ ಮುನಿಸುಗಳು
ಕಣ್ಣತುಂಬ  ಕನಸುಗಳು
ಬೆರೆಸುವುದದುವೆ  ದೀಪಾವಳಿ

ಇಲ್ಲ ಇಲ್ಲಿ ತಾರತಮ್ಯ
ಬೆಳಕಿಗೆಲ್ಲಿ  ಬೇಧ ಭಾವ
ಜಾತಿ ಮತವ ಮರೆತು ದಿವ್ಯ
ಸ್ನೇಹವದುವೆ ದೀಪಾವಳಿ

ಪಟಾಕಿಗಳ ಸದ್ದಿನಬ್ಬರ
ಹೂಬಾಣಗಳ ಬೆರಗು ನಿಬ್ಬರ
ಸಂಭ್ರಮಿಸಿ ನಲಿವ ಚಿಣ್ಣರ
ಬೆಳಕಿನಾಟವದುವೆ ದೀಪಾವಳಿ

             ಶೈಲೂ.....
[18/11/2021, 4:46 pm] Dr. B. N. Shylaja Ramesh: #ಸಾಕ್ನಿಲ್ಸು_ಮಾರಾಯ

ಸಾಕ್ನಿಲ್ಸ್ಬಿಡು ಮಾರಾಯಾ
ಇನ್ನೆಷ್ಟೂಂತ ಸುರೀತೀಯ
ಮೇಲೆ ಆಕಾಶ ತೂತಾಯ್ತು
ಕೆಳಗ್ಭೂಮಿ ನಲುಗೋಯ್ತು

ಸುರಿಸ್ತಾ ಇದ್ರೇ ನೀ ಹಿಂಗೆ
ಸುಧಾರಿಸ್ಕೊಳೋದ್ಹೆಂಗೆ?
ಕುಳಿರ್ಗಾಳಿಗೆ ಚಳಿನಡುಕ
ಕಾಣ್ಲೇಇಲ್ಲ ಸೂರ್ಯನ್ಬೆಳಕ

ಮೊದ್ಲೇ  ಬಲ್ ತುಟ್ಟೀಕಾಲ
ನೀ  ಹಾಳ್ಮಾಡ್ತಿದ್ರೆ  ಬೆಳೆಗಳ
ರೈತ ಬೆಳೆ  ಬೆಳೆಯೋದ್ಹೆಂನ್ಗೆ
ಏನ್ಗತಿ ನಮ್ಮ ಜೀವನದ ಬಗೆ

ಅಂದಿನ್ತುತ್ಗೆ ಅಂದೇ ದುಡಿತ
ನೀನ್ಹೀಗ್ಬಿದ್ರೆ  ದುಡಿತಕ್ಕಡಿತ
ಜನಜೀವನವೆಲ್ಲ ಅಸ್ತವ್ಯಸ್ತ
ಕೇಳಿಸ್ತಿಲ್ವ  ನಮ್ಮೀ ಮೊರೆತ

ಅಲ್ಲೊಂದಷ್ಟ್ ಡ್ಯಾಂ ತುಂಬೋಯ್ತು
ಇಲ್ಲೊಂದಿಷ್ಟ್ ಮನೆ ಕೊಚ್ಚೋಯ್ತು
ಅಲ್ಲೆಲ್ಲೋ ಬೆಟ್ಟ ಕುಸೀತು
ಬಡವರ ಜೀವನ ಕಸೀತು

ತೆರೀದಿದ್ರೆಸೂರ್ಯನ್ನಂಗಡಿ
ಇಲ್ಲೆಲ್ರಿಗೂ  ಕೆಮ್ಮು  ನೆಗಡಿ
ಮೊದ್ಲೇ ಕೊರೋನಾ ಭಯ
ಜ್ವರ ಹಿಡ್ಕೊಂಡ್ರೆ ಹೆಂಗಯ್ಯ?

ಇಷ್ಟಾದ್ರೂ ನಿನಗ್ತೃಪ್ತಿ ಇಲ್ವಾ?
ವರುಣ ನೀನೆನ್ದೇವರಲ್ವಾ.?
ಬೀರಪ್ಪಾ ನಿನ್ ಕೃಪಾದೃಷ್ಟಿ
ಸಾಕ್ನಿಲ್ಸ್ಬಿಡು ಈ ಅತೀವೃಷ್ಟಿ

             ಶೈಲೂ......
[18/11/2021, 4:58 pm] Dr. B. N. Shylaja Ramesh: ನಿನ್ನಿಂದಾದ್ಹಾವಳೀನೆ ಸಾಕಿನ್ನು
ಗುಡುಗು ಸಿಡಿಲು ಬೇರೆ ಬೇಕೇನು.?
ದುಡಿಯಕ್ಹೋದವರ ಪಾಡೇನು.?
ಸಮಯಕ್ಮನೆಗೆ ಬರದೆ ಬಾರೀ ಟೆನ್ಷನ್ನು
[18/11/2021, 4:58 pm] Dr. B. N. Shylaja Ramesh: #ಸಾಕ್ನಿಲ್ಸು_ಮಾರಾಯ

ಸಾಕ್ನಿಲ್ಸ್ಬಿಡು ಮಾರಾಯಾ
ಇನ್ನೆಷ್ಟೂಂತ ಸುರೀತೀಯ
ಮೇಲೆ ಆಕಾಶ ತೂತಾಯ್ತು
ಕೆಳಗ್ಭೂಮಿ ನಲುಗೋಯ್ತು

ಸುರಿಸ್ತಾ ಇದ್ರೇ ನೀ ಹಿಂಗೆ
ಸುಧಾರಿಸ್ಕೊಳೋದ್ಹೆಂಗೆ?
ಕುಳಿರ್ಗಾಳಿಗೆ ಚಳಿನಡುಕ
ಕಾಣ್ಲೇಇಲ್ಲ ಸೂರ್ಯನ್ಬೆಳಕ

ಮೊದ್ಲೇ  ಬಲ್ ತುಟ್ಟೀಕಾಲ
ನೀ  ಹಾಳ್ಮಾಡ್ತಿದ್ರೆ  ಬೆಳೆಗಳ
ರೈತ ಬೆಳೆ  ಬೆಳೆಯೋದ್ಹೆಂನ್ಗೆ
ಏನ್ಗತಿ ನಮ್ಮ ಜೀವನದ ಬಗೆ

ಅಂದಿನ್ತುತ್ಗೆ ಅಂದೇ ದುಡಿತ
ನೀನ್ಹೀಗ್ಬಿದ್ರೆ  ದುಡಿತಕ್ಕಡಿತ
ಜನಜೀವನವೆಲ್ಲ ಅಸ್ತವ್ಯಸ್ತ
ಕೇಳಿಸ್ತಿಲ್ವ  ನಮ್ಮೀ ಮೊರೆತ

ಅಲ್ಲೊಂದಷ್ಟ್ ಡ್ಯಾಂ ತುಂಬೋಯ್ತು
ಇಲ್ಲೊಂದಿಷ್ಟ್ ಮನೆ ಕೊಚ್ಚೋಯ್ತು
ಅಲ್ಲೆಲ್ಲೋ ಬೆಟ್ಟ ಕುಸೀತು
ಬಡವರ ಜೀವನ ಕಸೀತು

ತೆರೀದಿದ್ರೆಸೂರ್ಯನ್ನಂಗಡಿ
ಇಲ್ಲೆಲ್ರಿಗೂ  ಕೆಮ್ಮು  ನೆಗಡಿ
ಮೊದ್ಲೇ ಕೊರೋನಾ ಭಯ
ಜ್ವರ ಹಿಡ್ಕೊಂಡ್ರೆ ಹೆಂಗಯ್ಯ?

ನಿನ್ನಿಂದಾದ್ಹಾವಳೀನೆ ಸಾಕಿನ್ನು
ಗುಡುಗು ಸಿಡಿಲು ಬೇರೆ ಬೇಕೇನು.?
ದುಡಿಯಕ್ಹೋದವರ ಪಾಡೇನು.?
ಸಮಯಕ್ಮನೆಗೆ ಬರದೆ ಬಾರೀ ಟೆನ್ಷನ್ನು

ಇಷ್ಟಾದ್ರೂ ನಿನಗ್ತೃಪ್ತಿ ಇಲ್ವಾ?
ವರುಣ ನೀನೆನ್ದೇವರಲ್ವಾ.?
ಬೀರಪ್ಪಾ ನಿನ್ ಕೃಪಾದೃಷ್ಟಿ
ಸಾಕ್ನಿಲ್ಸ್ಬಿಡು ಈ ಅತೀವೃಷ್ಟಿ

             ಶೈಲೂ......
[19/11/2021, 9:51 am] Dr. B. N. Shylaja Ramesh: ನೀನೊಂದು 
ಸುಂದರ ಸಾಲುಗಳ
ಅಧಿಪತಿ

ಬರೆಯಲು
ಬೇಕೇಕೆ
ಅನುಮತಿ

ಸುಂದರ ಸಾಲುಗಳು ಸರ್👌👌👍🌷
[27/11/2021, 1:00 pm] Dr. B. N. Shylaja Ramesh: ಬಾಯಿ ಒಡೆದಿರುವುದಕ್ಕೆ ಆಯುರ್ವೇದ ಔಷಧಿ, ಮಾಪಾಳದ ಕಾಯಿಯನ್ನು ಹಾಲಿನಲ್ಲಿ ಅರೆದು ನಾಲಿಗೆಗೆ ಲೇಪಿಸಿ ಒಂದೈದು ನಿಮಿಷ  ಆದಮೇಲೆ ನೀರು ಕುಡಿದು ಲೇಪವನ್ನು ಹೊಟ್ಟೆಗೆ ಇಳಿಸಿ😊
[28/11/2021, 2:26 pm] Dr. B. N. Shylaja Ramesh: ಹಳೆಯ ಕವನ😊

ಮಂಗಳ ಮುಖಿ
*************

ಹೆಣ್ಣಲ್ಲದ .ಗಂಡಲ್ಲದ
ಅಸಹನೀಯ  ಸ್ಥಿತಿ
ಯಾವ  ಪಾಪಕ್ಕೆ ನಮಗೆ
ಇಂತಹ ಪರಿಸ್ಥಿತಿ

ನಾ ಏನು ಬೇಡಿ ಬಂದಿದ್ದೆನೇ
ಅಸಹಜ ಈ  ಸ್ಥಿತಿ
ಯಾರೊಡನೆಯೂ ಬೆರೆಯಲಾರದಾ
ಅಸಹನೀಯ  ಪರಿಸ್ಥಿತಿ

ಯಾರಿಲ್ಲ  ನನಗಿಂದು
ಮಡಿಲಲ್ಲಿಟ್ಟು ಆಧರಿಸುವ ಬಂಧು
ಹೆತ್ತವರಿಗೇ  ಬೇಡವಾದ
ಪಾಪದಾ ಕೂಸು ನಾನಿಂದು

ನನ್ನಂತಹವರೇ ನನ್ನ
ಬಂಧು ಬಳಗ
ನನ್ನ ತಪ್ಪೇನಿದರಲ್ಲಿ
ದೂರೀಕರಿಸಿತೇಕೆ  ನನ್ನ ಬಳಗ

ನಾ  ವಿಧಿಯಾಟದಾ
ಕೈಗೊಂಬೆ
ಬೇಕುಬೇಡಗಳ ನಡುವೆ
ನಾ ನಿರ್ಜೀವ ಗೊಂಬೆ

ನನಗೂ ಉಂಟು
ಸುಂದರ ಮನಸು
ಕಟ್ಟಿ ಕಾಡುತ್ತಿದೆ
ನೂರಾರು ಕನಸು

ಧೈರ್ಯದಿ  ಮುನ್ನುಗ್ಗಲು
ಏನೋ  ಹಿಂಜರಿಕೆ
ಬೆನ್ನುತಟ್ಟಿ ಪ್ರೋತ್ಸಾಹಿಸುವವರಿಲ್ಲ
ತುಳಿವವರೇ ಎಲ್ಲ ಕಾಲಕೆಳಗೆ

ಕೈ ಒಡ್ಡಿ ನಿಲ್ಲುವುದು
ಸತ್ತಂತೆಯೇ ಸರಿ ಸುಳ್ಳಲ್ಲ
ಇದಕೆ ಕಾರಣ ನಿಮ್ಮೀ
ಸಮಾಜವೇ ಎಂಬುದೂ ಸುಳ್ಳಲ್ಲ

ಬೇಡಿ ತಿನ್ನದೇ ನಮಗೇನಿದೆ
ಬೇರೆ ದಾರಿ
ನೆಲೆಯಿಲ್ಲ  ಬದುಕಿಗೇ
ಕೂರಲು ತಳವೂರಿ

ದುಡಿದು ಬದುಕುವಾ
ಆಸೆಯುಂಟು ನಮಗೆ
ಹಠದಿಂದ ಸಾಧಿಸುವ
ಛಲವುಂಟು ನಮಗೆ

ನಿಮ್ಮ ಅನುಕಂಪ ಬೇಡ
ಅವಕಾಶ ನೀಡಿ
ಬೆವರ ಸುರಿಸಿ ಬದುಕಲು
ಆದ್ಯತೆಯ ಕೊಡಿ

ಹೆಸರಿಟ್ಟು ಕರೆದಿರಿ
ಇವಳೇ ಮಂಗಳಮುಖಿ
ಆ ಹೆಸರೇಮಾಡಿತ್ತು
ನಮ್ಮ, ಅಂತರ್ಮುಖಿ..

             ಶೈಲೂ......
[29/11/2021, 3:09 pm] Dr. B. N. Shylaja Ramesh: ಮರೆತೆ ನನ್ನನೇ ಚೆಲುವ ನಿನ್ನ ಕಂಡಾಗ
ಸವಿ ಮಾತನಾಡುತ ನೀನು ಬಳಿ ಬಂದಾಗ
ಸುಮ್ಮನೇ ಸುರಿವ ಒಲವ ಮಳೆಯಲಿ
ಮಿಂದು ಮಡಿಯಾದೆ ಸವಿಪ್ರೇಮ ಧಾರೆಯಲಿ

ಸ್ವರ್ಗವೇ ಧರೆಗಿಳಿದಂತೆ ನೀ ಜೊತೆಯಿರೆ
ನನ್ನ ನೋವುನಲಿವೆಲ್ಲವೂ ನಿನ್ನ ಕೈಸೆರೆ
ನೀ ನಕ್ಕಾಗ, ಸುರಿದಂತೆ ಚಂದ್ರಮನ ಕಾಂತಿ
ನಿನ್ನಪ್ಪುಗೆಯ ಸುಖದಲ್ಲಿ ಎಂಥದೋ ಶಾಂತಿ

ಮೊದಲ ನೋಟಕೆ ನಾನೊಲಿದು ಶರಣಾದೆ
ಚಿನಕುರಳಿ ಮೋಡಿ ಮಾತಿಗೆ ಬೆರಗಾದೆ
ಸೋತೆ ನಾ ನಿನ್ನೊಲವಿಗೆ ಚೆಲುವ ಗೆಳೆಯಾ
ಒಪ್ಪಿದೆ ನೀ ನನ್ನ ಬಾನಪ್ಪಿದಂತೆ ಇಳೆಯ

ಅದಾವ ಜನುಮದ ಬಂಧ ನಮ್ಮಿಬ್ಬರದು
ಅದೆಂಥದೇ ಬಿರುಗಾಳಿಗೂ ಸಡಿಲಾಗದು
ಮರಳಿ ಒಲವಾಗಿದೆ ನಿನ್ನ ಮೇಲೆ
ಆಹಾ ಏನಿದು ಈ ಪ್ರೇಮದ ಲೀಲೆ !
[17/12/2021, 12:33 pm] Dr. B. N. Shylaja Ramesh: ಹೀಗೊಂದು ಆತ್ಮೀಯ ಭೇಟಿ..!

     ಪಟಪಟನೆ ಚಿನಕುರಳಿಯಂತೆ ಮಾತಾಡುವ ಅನಿತಾ ಜೊತೆಗೆ, ನಾನು ತೇಜೂ, ಸುಮ, ಗೆಳತಿ ಜಾನಕಿ ರಾವ್ ಅವರ #ಪಂಚಮಿ_ಗ್ರಾಂಡ್ ಹೋಟೆಲ್ ಗೆ ಲಗ್ಗೆ..
 ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ಇಡೀ ದಿನ ನಮಗಾಗಿ ಸಮಯ ಹೊಂದಿಸಿಕೊಂಡು ತುಂಬಾನೇ ಆತ್ಮೀಯವಾಗಿ ಆದರೋಪಚಾರ ಮಾಡಿದ ಜಾನೂ ಬಗ್ಗೆ ಆತ್ಮೀಯತೆ ಉಕ್ಕಿ ಬರುತ್ತೆ😊
ಇಡೀದಿನ ಮಾತು, ಹರಟೆ, ನಗು ಜೊತೆಗೆ ಸವಿ ಸವಿ ಭೋಜನ.. ಸಮಯ ಸರಿದದ್ದೇ ಗೊತ್ತಾಗದೆ ಕಳೆದ ಕ್ಷಣಗಳನ್ನು ನೆನಪಿಸಿ ಮನೆಗೆ ಕರೆತಂದದ್ದು ಮಗ ಸ್ಮರಣ್. ಅಂತೂ ಮರೆಯಲಾಗದ ನೆನಪಿನ ಸಂಚಿಗೆ ಸೇರಿತು ಆ ದಿನ..!

ಥ್ಯಾಂಕ್ಯೂ ಡಿಯರ್ಸ್ ಸುಂದರ ದಿನಕ್ಕೆ ಸಾಥ್ ಕೊಟ್ಟ ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು..🙏☺
[23/12/2021, 9:44 am] Dr. B. N. Shylaja Ramesh: ಭೂತಾಯಿ ಯೊಡಲ ತಂಪಾಗಿಸಿ

ಜೀವಸಂಕುಲವ ಸೊಂಪಾಗಿಸಿ

ಸೃಷ್ಟಿಯ ಸೊಬಗ ಸೌಂದರ್ಯರಾಶಿ

ಧರೆಗಿಳಿದು ಬಂದ ಹರನರಸಿ..!
[25/12/2021, 7:08 pm] Dr. B. N. Shylaja Ramesh: ಸತ್ಪಥದಲ್ಲಿ ನಡೆಸಿದ ನನ್ನಪ್ಪನಿಗೊಂದು ನಮನ🙏🙏
ಅಪ್ಪ
*****

ಹೊಟ್ಟೆಯಲ್ಲಿಟ್ಟು ಹೊರಲಿಲ್ಲವಾದರೂ
ಅಸರೆಗಿತ್ತು ಅಪ್ಪ ನಿಮ್ಮ ಹೆಗಲು
ಕಷ್ಟವೋ ಸುಖವೋ ಅರಿಯಲಾರದ ವಯಸು
ರಾಣಿಯಂತೆ ಬೆಳೆಸಿದಿರಿ ದೇವನಿಗಿಂತ ಮಿಗಿಲು

ಎಷ್ಟೋ ನೋವನು ನುಂಗಿ ನಗುತ್ತಿದ್ಧಿರಿ ಅಪ್ಪ
ಕಷ್ಟಗಳ ಅರಿವಿರದಂತೆಮ್ಮ ಬೆಳೆಸಿ
ನಡೆದ ಹಾದಿಯಲ್ಲೆಲ್ಲ ಸುಖದ ಹಾಸೇನಿಲ್ಲ
ಆದರೂ ಬೆಳೆಸಿದಿರಿ ಬೇಕಾದ್ದನ್ನೇ ಉಣಿಸಿ

ಸಂಸಾರ ನೊಗಕೆ ಜೋಡೆತ್ತಿನಂತೆ ದುಡಿದಿರಿ
ಮಕ್ಕಳ ಸೌಖ್ಯಕೆ ಬಾರದಂತೆ ಚ್ಯುತಿ
ಎಲ್ಲರಿಗಿಂತ ಮುಂಚೂಣಿಯಲ್ಲಿರಲು
ಬೆನ್ತಟ್ಟಿ ಪ್ರೋತ್ಸಾಹವಿತ್ತಿರಿ ಹೇರದಂತೆ ಮಿತಿ

ದುಡಿದು ದಣಿದು ಬಳಲಿ ಬೇಸತ್ತರೂ ಸರಿ
ಮಕ್ಕಳಿಗದರ ಅರಿವು ಬಾರದಂತೆ
ತಾವುಂಡು ತೃಪ್ತಿ ಪಟ್ಟರೋ ಇಲ್ಲವೋ
ಮಕ್ಕಳ ನಲುಗಿಸಲಿಲ್ಲ ಹಸಿವು ಕಾಣದಂತೆ

ತನಗೆಟುಕದ ವಿದ್ಯೆ, ಸೌಕರ್ಯ ಸವಲತ್ತು
ಅದೆಷ್ಟು ಹೊರೆಯಾದರೂ ಸರಿ ಮಕ್ಕಳಿಗಿರಲಿ
ಯಾರೊಬ್ಬರಿಗೂ ತಲೆಬಾಗದಂತೆ ಇರಬೇಕು
ಅಹಮಿಕೆ ದೂರತಳ್ಳಿ ಸೌಜನ್ಯವಿರಲಿ

ಅಪ್ಪ ನೀವಂದು ತೋರಿದ ಪಥದಲ್ಲೆನ್ನ ನಡೆ
ನಿಮ್ಮ ಆಶೀರ್ವಾದವೆನಗೆ ಶ್ರೀರಕ್ಷೆ
ನೋಡಿ ನಲಿದು ಸಂತಸದಿಂದಿರಿ ಅಪ್ಪ
ನಾನೇನೇ ಗಳಿಸಿದ್ದರೂ ಅದು ನೀವಿತ್ತ ಭಿಕ್ಷೆ..

          ಶೈಲೂ.....
[31/12/2021, 11:28 am] Dr. B. N. Shylaja Ramesh: #2020ರ_ಆಪತ್ತು..!!

ಸದ್ಯ.... ಕಳೆಯುತಿದೆ ಇಪ್ಪತ್ತು ಇಪ್ಪತ್ತು..!
ಹೊತ್ತು ತಂದಿತ್ತು ಮಾರಣಾಂತಿಕ ವಿಪತ್ತು
ವೈರಾಣು ಹರಡಿದ್ದ ವಿಪರೀತ ಆಪತ್ತು
ಈ ವರ್ಷದಲ್ಲಿ ಹೆಣಗಿ.. ನಲುಗಿ ಸಾಕಾಯ್ತು..!

ಅದಾವ ಮಹೂರ್ತದಲ್ಲಿ ಕಾಲಿಟ್ಟಿತೋ ವರ್ಷ.!
ಅಂತರವ ನಿರ್ಮಿಸಿ ಕಸಿಯಿತು ಹರ್ಷ
ಎಲ್ಲ ಸಭೆ ಸಮಾರಂಭಗಳು ಹಿತಮಿತ
ಕಲಿಕೆಗೂ ಅಡೆತಡೆಯಾದದ್ದು ತುಂಬಾ ಅಹಿತ.!

ಬಂಧುಗಳೊಡನೆ ಸಂಬಂಧ  ಕಸಿದು
ಬೆಸೆದಿದ್ದೇನೋ ಕಾಣೆ ಬಾಂಧವ್ಯ ಕುಸಿದು..!
ಮನುಷ್ಯ ಮನುಷ್ಯರಲ್ಲಿ ಕಂದಕವ ಸೃಜಿಸಿ
ಮಾರಣಹೋಮ ನಡೆಸಿದೆ ಎಲ್ಲ ಕಾಲಗರ್ಭದೊಳಗಿರಿಸಿ..!

ಸಾಕಿನ್ನು ಬೇಗ ಹೊರಟುಬಿಡು ಮರೆಯಾಗಿ
ನೀನಿತ್ತ ನೋವ ಮರೆಯುವ  ಸಲುವಾಗಿ
ಆಹ್ವಾನಿಸ ಬೇಕಿದೆ ಹೊಸತೊಂದು ವರ್ಷವ.!
ಮುಂದಾದರೂ ಸಿಗಲಿ ಸುಖ ಹರಿಸಿ ಹರ್ಷವ..!

ಹೇ... ಇಪ್ಪತ್ತು ಇಪ್ಪತ್ತರ ಕರಾಳ ವರ್ಷ
ಕಲಿಸಿಬಿಟ್ಟೆ ನೀ ಮಹತ್ತರ ಪಾಠ..!
ಸಾಮಾಜಿಕ ಅಂತರವಿರಲಿ ಉತ್ತಮ ಆರೋಗ್ಯಕೆ
ಮನುಜರಿಂದ ದೂರವಿದ್ದಷ್ಟೂ ಒಳಿತು ಅದೇ ನೀನಿತ್ತ ಕಲಿಕೆ....!!

ನಿನಗೂ ಉಳಿಗಾಲವಿಲ್ಲ ನಿನಗೂ ಇದೆ ಅಂತ್ಯ
ಸರಿಯಲೇ ಬೇಕು ಕಾಲ ಉರುಳುತ್ತ ನಿತ್ಯ
ನೀ ಹೊರಗಡಿಯಿಟ್ಟ ಶುಭ ಮಹೂರ್ತದಲಿ
ಶುಭವ ಹೊತ್ತು ತರಲಿ ಮತ್ತೊಂದು ವರ್ಷದಲಿ..!!

ಡಾ: B.N. ಶೈಲಜಾ ರಮೇಶ್
[31/12/2021, 11:28 am] Dr. B. N. Shylaja Ramesh: ಹೊಸವರುಷದ  ಶುಭಾಶಯಗಳು 
**************************

ಕಣ್ಮರೆಯಾಗುತ್ತಿರುವ ವರ್ಷಕ್ಕೆ
ಹೇಳುತ್ತ  ವಿದಾಯ
ಸ್ವಾಗತಿಸುತ್ತಿದ್ದೇವೆ  ಮತ್ತದೇ
ಹೊಸತೊಂದು  ಅಧ್ಯಾಯ

ಹಳೆವರ್ಷದ ಕಹಿನೆನಪ
ಮೂಟೆಕಟ್ಟಿ ಬಿಸಾಡಿ
ಬರಲಿರುವ ನಾಳೆಗಳ ಸುಂದರ
ಬದುಕ ಸ್ವಾಗತಿಸಿ  ಓಡೋಡಿ

ಸಂತಸದಿ ಎಳೆಯೋಣ
ಹೊಸವರ್ಷದ ಹೊಸತನದ ಬಂಡಿ
ಇನ್ನಷ್ಟು ಮತ್ತಷ್ಟು ಸ್ನೇಹ ಸ್ಪುರಿಸಲಿ
ಬೆಸೆಯುತ ಗೆಳೆತನದ ಕೊಂಡಿ

ಸಾಧಿಸಿದ್ದೇನು? ಈ ವರ್ಷದಲ್ಲಿ
ತಿರುಗೊಮ್ಮೆ ನೋಡಿ
ನಾಳೆ ಸಾಧಿಸುವ ಕೆಲಸ
ಛಲದಿಂದ ಮಾಡಿ

ಗೆಲ್ಲಲೇಬೇಕೆಂಬ  ಛಲ
ಮೂಡಲಿ ಮನೆಮಾಡಿ
ಗುರಿ ತಲುಪಿದ ಸಂತಸದ
ಚೆಲುವೊಮ್ಮೆ  ನೋಡಿ

ಈ ವರ್ಷದಿ ಮನಕಾನಂದ
ತಂದ ಗೆಳೆಯರೇ ನಿಮಗೆಲ್ಲ
ತುಂಬಿ ತುಳುಕಲಿ ಸಂತಸ
ಜೀವನವಾಗಲಿ  ಸಿಹಿಬೆಲ್ಲ

ಸಂತಸದೊಂದಿಗೆ
ಹೇಳುತ್ತ  ಶುಭಾಶಯ
ಎಲ್ಲರಿಗೂ ಸಂತೃಪ್ತಿ, ಸಂವೃದ್ಧಿ
ಸಿಗಲೆಂಬುದೇ  ಆಶಯ

           ಶೈಲೂ.........
[31/12/2021, 12:40 pm] Dr. B. N. Shylaja Ramesh: ಸಕಾರಾತ್ಮಕ ಗುಣ : ಉತ್ತಮ ಸಂವಹನ ಕೌಶಲ್ಯದವರು, ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಚೆನ್ನಾಗಿದೆ.
ನಕಾರಾತ್ಮಕ ಗುಣ : ಹಠಾತ್ ಪ್ರವೃತ್ತಿಯವರು, ಶೀಘ್ರವಾಗಿ ಖಿನ್ನರಾಗುತ್ತಾರೆ.
ಪ್ರಸಿದ್ಧ ವ್ಯಕ್ತಿಗಳು : ಮಾರ್ಕ್ ಜ್ಯೂಕ್‌ರ್ಬರ್ಗ್, ಆಮೀರ್ ಖಾನ್, ವಿರಾಟ್ ಕೊಹ್ಲಿ
**
ಜನ್ಮ ದಿನಾಂಕ 6, 15, 24:
ಸಂಖ್ಯೆ ಆರರಲ್ಲಿ ಜನ್ಮ ತಾಳಿದವರದು ಆಕರ್ಷಕ ವ್ಯಕ್ತಿತ್ವ. ವೃತ್ತಿಯಲ್ಲಿ ಮುನ್ನಡೆಯುತ್ತಾರೆ. ಪ್ರಚಾರ ಪ್ರಿಯರು. ಹೋಟೆಲ್ ಅಥವಾ ರೆಸ್ಟೋರೆಂಟ್, ಐಷಾರಾಮಿ ಉತ್ಪನ್ನಗಳು ಅಥವಾ ಯಾವುದೇ ರೀತಿಯ ವ್ಯಾಪಾರ ಕ್ಷೇತ್ರಗಳು ಉತ್ತಮ ಆಯ್ಕೆಯಾಗುತ್ತದೆ. ಆ ಕ್ಷೇತ್ರಗಳಲ್ಲಿ ಹೆಸರನ್ನು ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ.
ಸಕಾರಾತ್ಮಕ ಗುಣ : ಮನರಂಜಿಸುವುದು, ಅದೃಷ್ಟವಂತರು, ಆಕರ್ಷಕ ವ್ಯಕ್ತಿತ್ವ
ನಕಾರಾತ್ಮಕ ಗುಣ : ಆಲಸ್ಯ, ರಸಿಕತೆ
ಪ್ರಸಿದ್ಧ ವ್ಯಕ್ತಿಗಳು : ಸಚಿನ್ ತೆಂಡುಲ್ಕರ್, ಅನಿಲ್ ಕಪೂರ್, ಅಜೀಮ್ ಪ್ರೇಮ್‌ಜಿ, ಎಲ್.ಎನ್.ಮಿತ್ತಲ್

**
ಜನ್ಮ ದಿನಾಂಕ 7, 16, 25:
ಸಂಖ್ಯೆ ಏಳರಲ್ಲಿ ಜನ್ಮ ತಾಳಿದವರಲ್ಲಿ ವಿಶ್ಲೇಷಣಾತ್ಮಕ ಗುಣ ಮೇಳೈಸಿರುತ್ತದೆ. ಚತುರಮತಿಗಳು, ಕುಶಲಿಗಳು ಆಗಿರುತ್ತಾರೆ. ಸಂಶೋಧನಾ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಗಳಿಸುತ್ತಾರೆ. ಸ್ವಭಾವತಃ ಸೃಜನಶೀಲರು. ವಿದೇಶ ಸಂಚಾರ ಯೋಗ, ಅನ್ಯ ರಾಷ್ಟ್ರಗಳಲ್ಲಿ ತಮ್ಮದೇ ಉದ್ದಿಮೆ ಸ್ಥಾಪಿಸುವಷ್ಟು ಸಾಮರ್ಥ್ಯ ಹೊಂದಿದವರು. ಈ ನಿಟ್ಟಿನಲ್ಲಿ ದೈವಾನುಕೂಲವೂ ಇವರೊಂದಿಗೆ ಇದೆ. ಹಾಗಾಗಿ ವಿದೇಶೀ ಸಂಸ್ಥೆಗಳಲ್ಲಿ ಕೆಲಸ ಮಾಡುವುದು ಉತ್ತಮ ಆಯ್ಕೆಯಾಗುತ್ತದೆ.
ಸಕಾರಾತ್ಮಕ ಗುಣ : ವಿದ್ವಾಂಸರು, ಕ್ರಿಯೇಟಿವ್, ಸಾಮರ್ಥ್ಯ ಮೀರಿ ಯೋಚಿಸಬಲ್ಲವರು
ನಕಾರಾತ್ಮಕ ಗುಣ : ಖಿನ್ನತೆಯ ಪ್ರವೃತ್ತಿ, ನಿರ್ವಹಣೆಯ ಕೊರತೆ
ಪ್ರಸಿದ್ಧ ವ್ಯಕ್ತಿಗಳು : ಸೈಫ್ ಅಲಿ ಖಾನ್, ಮಹೇಂದ್ರ ಸಿಂಗ್ ಧೋನಿ
**
ಜನ್ಮ ದಿನಾಂಕ 8, 17, 26:

ಸಂಖ್ಯೆ ಎಂಟರಲ್ಲಿ ಜನ್ಮ ತಾಳಿದವರು ಸ್ವಲ್ಪ ಮಟ್ಟಿಗೆ ಅದೃಷ್ಟವಂತರು. ಆದರೆ ಮೂವತ್ತೈದನೇ ವಯಸ್ಸಿನ ನಂತರ ಇವರಿಗೆ ದೈವ ಸಹಾಯ ತಾನಾಗಿಯೇ ಒದಗಿ ಬರುತ್ತದೆ. ಇವರು ಸ್ವಭಾವತಃ ಸರಳ ಸ್ವಭಾವದವರು. ಆದರೆ ಅಷ್ಟೇ ನಿಷ್ಠುರ ವಾದಿಗಳು. ಇದ್ದುದನ್ನು ಇದ್ದ ಹಾಗೇ ಹಿಂದೆ ಮುಂದೆ ಯೋಚಿಸದೇ ಹೇಳುವುದು ಇವರ ಸ್ವಭಾವ. ಕಷ್ಟ ಸಹಿಷ್ಣುಗಳು. ಈ ಸಂಖ್ಯೆಯಲ್ಲಿ ಜನ್ಮ ತಾಳಿದವರು ಮೆಟಲ್ ಅಥವಾ ರಿಯಲ್ ಎಸ್ಟೇಟ್ ಉದ್ಯಮವನ್ನು ಆಯ್ಕೆ ಮಾಡಿಕೊಳ್ಳಬಹುದು. ಕಂಪನಿಗಳಲ್ಲಿ ಕೆಲಸ ಮಾಡುವವರಾದರೆ ಲೆಕ್ಕ ಮತ್ತು ಮಾನವ ಸಂಪನ್ಮೂಲ ವಿಭಾಗ ಇವರಿಗೆ ಸೂಕ್ತ.
ಸಕಾರಾತ್ಮಕ ಗುಣ : ಶ್ರಮಪಟ್ಟು ದುಡಿಯುವ ಗುಣ, ವಿಶ್ವಾಸಕ್ಕೆ ಪಾತ್ರರು.
ನಕಾರಾತ್ಮಕ ಗುಣ : ನಿಷ್ಠುರ ಸ್ವಭಾವದ ಕಾರಣ ಜನರ ಪ್ರತಿರೋಧ ಎದುರಿಸಬೇಕಾಗಬಹುದು.
ಪ್ರಸಿದ್ಧ ವ್ಯಕ್ತಿಗಳು : ನರೇಂದ್ರ ಮೋದಿ, ಮನಮೋಹನ್ ಸಿಂಗ್
**
ಜನ್ಮ ದಿನಾಂಕ 9, 18, 27:
ಸಂಖ್ಯೆ ಒಂಬತ್ತರಲ್ಲಿ ಜನ್ಮ ತಾಳಿದವರಲ್ಲಿ ಅಪಾರ ಸಾಮರ್ಥ್ಯ ಸ್ವಭಾವತಃ ಮೈಗೂಡಿದೆ. ಉತ್ತಮ ದೈಹಿಕ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಹಾಗಾಗಿ ಕ್ರೀಡಾ ಕ್ಷೇತ್ರ ಇವರ ಅತ್ಯುತ್ತಮ ಆಯ್ಕೆಯಾಗುತ್ತದೆ. ಕ್ರೀಡಾಪಟುಗಳಾಗಿ ಹೆಸರು ಗಳಿಸುತ್ತಾರೆ. ಬಹುತೇಕ ಕ್ರೀಡಾಪಟುಗಳ ಜನ್ಮ ಸಂಖ್ಯೆಯೂ ಒಂಬತ್ತೇ ಆಗಿದೆ. ಉದ್ಯಮ ಕ್ಷೇತ್ರ ನಿಮ್ಮ ಆಯ್ಕೆಯಾಗಿದ್ದರೆ ರಿಯಲ್ ಎಸ್ಟೇಟ್ ಉದ್ಯಮ ಸೂಕ್ತವಾಗಿದೆ. ಈ ಸಂಖ್ಯೆಯಲ್ಲಿ ಜನಿಸಿದವರು ಸ್ವಭಾವತಃ ಸಾಹಸಿಗರು, ಧೈರ್ಯವಂತರು. ಯಾವುದೇ ಕ್ಷೇತ್ರದಲ್ಲೂ ಮುನ್ನುಗ್ಗುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಈ ಸಂಖ್ಯೆಯ ಅಧಿಪತಿ ಮಂಗಳ ಅಥವಾ ಕುಜನಾಗಿದ್ದಾನೆ. ಕುಜನ ಬಣ್ಣ ಕೆಂಪು. ತಾಪಮಾನವೂ ಹೆಚ್ಚು. ಹಾಗಾಗಿ ಈ ಸಂಖ್ಯೆಯುಳ್ಳವರಲ್ಲಿ ತೀಕ್ಷ್ಣವಾದ ಗುಣವನ್ನು ಕಾಣಬಹುದು.

ಸಕಾರಾತ್ಮಕ ಗುಣ : ಶಕ್ತಿವಂತರು, ಹುಟ್ಟು ಹೋರಾಟಗಾರರು, ಶ್ರಮಪಟ್ಟು ದುಡಿಮೆಯುವವರು
ನಕಾರಾತ್ಮಕ ಗುಣ : ಮುಂಗೋಪಿಗಳು, ಜಗಳಗಂಟರು
ಪ್ರಸಿದ್ಧ ವ್ಯಕ್ತಿಗಳು : ಮೈಕಲ್ ಫಿಲಿಪ್ಸ್, ಮಹೇಲ ಜಯವರ್ಧನ, ಟಾಮ್ ಕ್ರೂಸ್.

ಸಂಬಂಧಿತ ಸುದ್ದಿ
ಸರ್ಕಾರಿ ಉದ್ಯೋಗವನ್ನು ಪಡೆಯುವ ಜನ್ಮ ಸಂಖ್ಯೆಗಳಿವು..? ನಿಮಗಿದೆಯೇ ಈ ಯೋಗ..?
ವೈದಿಕ ಜ್ಯೋತಿಷ್ಯದ ಪ್ರಕಾರ ಈ ಜನ್ಮ ನಕ್ಷತ್ರದಲ್ಲಿ ಜನಿಸಿದರೆ ಅತ್ಯಂತ ಶುಭ..! ಆ ನಕ್ಷತ್ರಗಳು ಯಾವುವು ಗೊತ್ತಾ?
ಬುಧ ವಕ್ರಿಯ ಸಮಯಲ್ಲಿ ಉಂಟಾಗುವ ಮನೋಸ್ಥಿತಿಯ ಬದಲಾವಣೆಗಳಿಗೆ ಇಲ್ಲಿದೆ ಸರಳ ಪರಿಹಾರ
ಆಮಿಷದ ಮತಾಂತರವನ್ನು ಯಾವ ಧರ್ಮವೂ ಒಪ್ಪಲ್ಲ: ಶ್ರೀಶೈಲ ಜಗದ್ಗುರು
ಜ್ಯೋತಿಷ್ಯದ ಮೂಲಕ ನಿಮ್ಮ ಸಂಗಾತಿಯ ಸ್ವಭಾವದ ಬಗ್ಗೆ ತಿಳಿಯುವುದು ಹೇಗೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ


ಇತ್ತೀಚಿನ ಕಾಮೆಂಟ್‌
ಕನ್ನಡದ ಮೇರು ನಟ ಡಾಕ್ಟರ್ ರಾಜಕುಮಾರ್ ಸಹ ಸಂಕ್ಯೆ 24 ರಲ್ಲಿ ಹುಟ್ಟಿದರಾದರೂ ನೀವು ಯಾಕ್ ಅದನ್ನು ಬಿಟ್ಟೀದ್ದೀರಾ???
Mallikarjun
You have
158 TIMESPOINTSLOGIN
ಕಾಮೆಂಟ್‌ ಮಾಡಿ
ವಿಜಯ ಕರ್ನಾಟಕದಿಂದ ಕ್ಷಣ ಕ್ಷಣದ ಸುದ್ದಿಗಳನ್ನು ತಿಳಿಯಿರಿ
Install
850K+
Likes
172K+
Followers
Subscribe
Follow Us
ಮುಂದಿನ ಲೇಖನ
ದಾರಿ ದೀಪ: ಮೊದಲು ದೋಷಗಳಿಗೆ ಪ್ರಾಯಶ್ಚಿತ್ತ ಆಗಬೇಕು 
ದಾರಿ ದೀಪ: ಮೊದಲು ದೋಷಗಳಿಗೆ ಪ್ರಾಯಶ್ಚಿತ್ತ ಆಗಬೇಕು

ನಿಮ್ಮ ಸುತ್ತಮುತ್ತ ನಡೆಯುವ ಪ್ರಮುಖ ವಿಚಾರಗಳ ಬಗ್ಗೆ ಅಪ್‌ಡೇಟೆಡ್‌ ಆಗಿರಬೇಕೇ?
example@domain.com
ನಿಮ್ಮ ನಗರದ ವಾತಾವರಣ ಹೇಗಿದೆ?

ಬೆಂಗಳೂರು
AQI
37
PM2.5 AT 8AM IST
ಉತ್ತಮ
Web Title : Number of Astrology: Number and Your Career
Kannada News from Vijaya Karnataka, TIL Network
Kannada NewsAstrologyAstroNumber Of Astrology: Number And Your Career
ಮುಂದಿನ ಲೇಖನ
ದಾರಿ ದೀಪ: ಮೊದಲು ದೋಷಗಳಿಗೆ ಪ್ರಾಯಶ್ಚಿತ್ತ ಆಗಬೇಕು
savitri av | Vijaya Karnataka | Updated: 7 Mar 2015, 4:00 am
ಯಾರು ಹೇಳಿದರೂ ನಿಮಗೆ ಕಾಳಸರ್ಪ ದೋಷವಿದೆ ಎಂದು?! ಕುಜ-ಸರ್ಪದೋಷಗಳು ಎರಡೂ ಜಾತಕದಲ್ಲಿ ‘ಇಲ್ಲ.’ ಸಂಬಂಧ ಮುಂದುವರಿಸಬಹುದು. ಮಗನಿಗೆ ನೀಚಗುರುವಿನ ಅಸ್ತದೆಸೆಯ ಪಾಪ ದೋಷವಿದ್ದು ಏಕಾದಶ ರುದ್ರ ಪಾರಾಯಣ ಸಹಿತ ಗುರು ಶಾಂತಿ ವಿಧಿವತ್ ಮಾಡಿಸಿ.
 
*ಮಗನ ಮದುವೆ ಸಂಬಂಧ ಹೊಂದಾಣಿಕೆ ಆಗುವುದೇ. ನೀವು ಹೇಳಿದರೆ ಸಮಾಧಾನ ನಮಗೆ.
ಸುರೇಖಾ, ಬೆಳಗಾವಿ
ದಾರಿ ದೀಪ: ಮೊದಲು ದೋಷಗಳಿಗೆ ಪ್ರಾಯಶ್ಚಿತ್ತ ಆಗಬೇಕು
ಅಮೆಜಾನ್‌ ಆಫರ್‌ ಸೇಲ್‌: ಎಲೆಕ್ಟ್ರಾನಿಕ್‌ ವಸ್ತುಗಳ ಮೇಲೆ ಶೇ.45 ರಷ್ಟು ರಿಯಾಯಿತಿ
ಯಾರು ಹೇಳಿದರೂ ನಿಮಗೆ ಕಾಳಸರ್ಪ ದೋಷವಿದೆ ಎಂದು?! ಕುಜ-ಸರ್ಪದೋಷಗಳು ಎರಡೂ ಜಾತಕದಲ್ಲಿ ‘ಇಲ್ಲ.’ ಸಂಬಂಧ ಮುಂದುವರಿಸಬಹುದು. ಮಗನಿಗೆ ನೀಚಗುರುವಿನ ಅಸ್ತದೆಸೆಯ ಪಾಪ ದೋಷವಿದ್ದು ಏಕಾದಶ ರುದ್ರ ಪಾರಾಯಣ ಸಹಿತ ಗುರು ಶಾಂತಿ ವಿಧಿವತ್ ಮಾಡಿಸಿ.
*ಮದುವೆ ಮುರಿದಿದೆ. ಕೆಲ ವರ್ಷ ಕಳೆದಿದೆ. ಪುನಃ ಆಗಬಹುದೇ, ಒಳಿತಾಗುವುದೇ?
ರಜನಿ, ಮೈಸೂರು
ದೀರ್ಘ ಬಾಳಿನ ಬಂಡಿಗೆ ಒಂಟಿಯಾಗೇ ಇರುವುದು ಕಷ್ಟವೇ ಸರಿ. ಯಾವುದೇ ಲಗ್ನಕೆ ಕುಜ-ಶನಿ ಯಾ ಕುಜ-ಶುಕ್ರರು ಬಾಧಾಕಾರರಿದ್ದರೆ ಕುಟುಂಬ ಜೀವನ ಹಾಳಾಗುತ್ತದೆ. ನಿಮಗಾಗಿರುವುದೂ ಅದೇ. ಸದ್ಯ ರಾಹುದೆಸೆ ಆರಂಭ. ಒಂದೆರಡು ವರ್ಷ ಕಳೆಯಲಿ. ನಂತರ ಪ್ರಯತ್ನ ಮಾಡಿ. ಸೂಚಿತ ದೋಷಗಳಿಗೆ ಸೂಕ್ತ ಪ್ರಾಯಶ್ಚಿತ್ತಗಳೂ ಆಗಬೇಕು.
*ಉದ್ಯೋಗದಲ್ಲಿ ಸ್ಥಿರತೆಯಿಲ್ಲ. ಏನು ಮಾಡಿದರೆ ಭವಿಷ್ಯ ಉತ್ತಮ ತಿಳಿಸಿ.
ದಿವಾಕರ್, ವಿಜಯನಗರ
ಅಸಮದಲಿ ಸಮತೆಯನು, ವಿಷಮದಲಿ ಮೈತ್ರಿಯನು ಸಾಧಿಸಿಕೊಳ್ಳುವುದೇ ಯೋಗವೆನ್ನುವರು ಡಿವಿಜಿ. ಇದೀಗ ಸಮಯ ಉತ್ತಮತೆಗೆ ತಿರುಗುತ್ತಿದೆ. ತಾಳ್ಮೆಯರಲಿ. ಶ್ರೀರಾಮ ಅಷ್ಟೋತ್ತರ ಜಪ, ಅಶ್ವತ್ಥ ಪ್ರದಕ್ಷಿಣೆ ಸೇವೆ 48 ದಿನ ಸೂರ್ಯೋದಯಕ್ಕೆ ಮಾಡಿರಿ. ಇನ್ನಾವ ಪೂಜೆಯೂ ಬೇಡ.
*ಎಂಟು ಹೆಣ್ಣುಮಕ್ಕಳು, ಒಬ್ಬ ಗಂಡು ಮಗ ಇರುವ ಕುಟುಂಬ, ಯಾರೂ ನೆಮ್ಮದಿಯಿಂದ ಇಲ್ಲ. ದಾರಿ ತೋರಿ.
ಶಾಂತಕುಮಾರಿ, ಪಾಂಡಪುರ
ಹೊರಲಾರದೇ ಹೋರುತಿದೆ ವಿಚತ್ರವೀ ಲೋಕಸಂತೆ! ತಂದೆ ತೀರಿಕೊಂಡು, ನಿಮ್ಮ ಇಷ್ಟೂ ಜನರ ಅವ್ಯಸ್ಥೆಯನ್ನು ನೋಡುವರೂ ಇಲ್ಲದಾಗಿದೆ. ತಾಯಿಯೊಂದಿಗೆ ನೀವು ಒಂಬತ್ತು ಜನ ಧರ್ಮಸ್ಥಳ ದೇವಾಲಯದಲ್ಲಿ ಮಹಾಪೂಜೆ ಮಾಡಿಸಿ. ಅಲ್ಲೇ ತೀರ್ಥ ಸ್ನಾನ ಮಾಡಬೇಕು. ಸುಧಾರಿಸುವುದು.
*ಮಗನು ಯೋಗ್ಯನಿದ್ದು ವಿದ್ಯಾಭ್ಯಾಸದಲ್ಲಿ ಹಿಂದೆಯಾಗಿ ಬಹಳ ಕಷ್ಟವಾಗಿದೆ. ಪರಿಹಾರ ಹೇಳಿ ಗುರುಗಳೇ.
ರಾಹುಗ್ರಸ್ತ ಚಂದ್ರನೂ ರವಿ-ಕುಜಗ್ರಸ್ತ ಶುಕ್ರನ ದೆಸೆಯೂ ಸೇರಿ ಇವನ ವಿದ್ಯಾಭಂಗವಾಗುತ್ತಿದೆ. ಚಿಂತೆ ಬಿಡಿ. ಇದೇ ವರ್ಷ ಪೂರೈಸುತ್ತಾನೆ. ಉತ್ತಮ ಪುರೋಹಿತರಿಂದ ಐದು ವಾರ ಚಂಡಿಕಾ ಪಾರಾಯಣೆ-ಕೊನೆಯಲ್ಲಿ ದುರ್ಗಾಶಾಂತಿ ಹೋಮ ಮಾಡಿಸಿ. ತಪ್ಪದೇ.
*ಮಗನ ಮದುವೆ ಕೂಡಿ ಬರುತ್ತಿಲ್ಲ. ನಿಖರವಾಗಿ ಯಾವಾಗ ಎಂದು ತಿಳಿಸಿ ಗುರುಗಳೇ...
ನರಸಿಂಗಯ್ಯ, ದೊಡ್ಡಬಳ್ಳಾಪುರ
ಯಾವ ಮಾಸ, ವರ್ಷದಲ್ಲಿ ಆಗುತ್ತದೆ ಎಂದು ಹೇಳಿದರೆ ಕಾಣಿಕೆ ಕೊಡುವೆ ಎಂದು ಶಾಲೆಯ ಮಕ್ಕಳಿಗೆ ಹೇಳಿದಂತೆ ಹೇಳುವಿರಲ್ಲ! ಏನೇನು ಬೇಕು? ಲಗ್ನಾಧಿಪ ನೀಚ, ಬಾಧಾ ಕುಜ ಸೇರಿ ದೈವ ಪ್ರಕೋಪಗಳಿರುವ ದೋಷಗಳು ಪರಿಹಾರವಾಗದೆ ದಾರಿಯಾಗದು.
*ಯೋಗ್ಯಳೂ, ಉದ್ಯೋಗಸ್ಥೆಯೂ ಆದ ಮಗಳಿಗೆ ಮದುವೆ ಆಗುತ್ತಿಲ್ಲ, ಪರಿಹಾರ ಹೇಳಿ.
ಹೇಮಲತಾ, ಮೈಸೂರು
ಹಸಿವಿರಲು ಬಹಳ, ತುಸು ಅನ್ನ, ಪಲ್ಲೆ ತಿಳಿನೀರು ಉಣುತ್ತೇವೋ?! ಹಾಗೇ ನೀವು ಹತ್ತಾರು ಪೂಜೆ, ಜೋಯಿಸರನ್ನು ಹಿಡಿದು ಕೂತರೆ ಬಾಲಿಷವೆನಿಸದೆ? ನಿಧಾನ ಯೋಚಿಸಿ. ಈ ನಿಟ್ಟಿನಲ್ಲಿ ನಿಮಗೆ ಸೂಕ್ತ ಸಮಾಲೋಚನೆಯ ಅಗತ್ಯವಿದೆ.


ಸಂಬಂಧಿತ ಸುದ್ದಿ
ಸರ್ಕಾರಿ ಉದ್ಯೋಗವನ್ನು ಪಡೆಯುವ ಜನ್ಮ ಸಂಖ್ಯೆಗಳಿವು..? ನಿಮಗಿದೆಯೇ ಈ ಯೋಗ..?
ವೈದಿಕ ಜ್ಯೋತಿಷ್ಯದ ಪ್ರಕಾರ ಈ ಜನ್ಮ ನಕ್ಷತ್ರದಲ್ಲಿ ಜನಿಸಿದರೆ ಅತ್ಯಂತ ಶುಭ..! ಆ ನಕ್ಷತ್ರಗಳು ಯಾವುವು ಗೊತ್ತಾ?
ಬುಧ ವಕ್ರಿಯ ಸಮಯಲ್ಲಿ ಉಂಟಾಗುವ ಮನೋಸ್ಥಿತಿಯ ಬದಲಾವಣೆಗಳಿಗೆ ಇಲ್ಲಿದೆ ಸರಳ ಪರಿಹಾರ
ಆಮಿಷದ ಮತಾಂತರವನ್ನು ಯಾವ ಧರ್ಮವೂ ಒಪ್ಪಲ್ಲ: ಶ್ರೀಶೈಲ ಜಗದ್ಗುರು
ಜ್ಯೋತಿಷ್ಯದ ಮೂಲಕ ನಿಮ್ಮ ಸಂಗಾತಿಯ ಸ್ವಭಾವದ ಬಗ್ಗೆ ತಿಳಿಯುವುದು ಹೇಗೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ
ಕಾಮೆಂಟ್‌ ಮಾಡಿ
ಮುಂದಿನ ಲೇಖನ
ಜ್ಯೋತಿರ್ ವಿಜ್ಞಾನ ಅವಲೋಕನ 
ಜ್ಯೋತಿರ್ ವಿಜ್ಞಾನ ಅವಲೋಕನ
ನಿಮ್ಮ ನಗರದ ವಾತಾವರಣ ಹೇಗಿದೆ?

ಬೆಂಗಳೂರು
AQI
37
PM2.5 AT 8AM IST
ಉತ್ತಮ
Web Title : penance, errors
Kannada News from Vijaya Karnataka, TIL Network
Kannada NewsAstrologyAstroPenance, Errors
ಪೂರ್ಣ ಸುದ್ದಿ ಓದಿ
ಮುಂದಿನ ಲೇಖನ
ಜ್ಯೋತಿರ್ ವಿಜ್ಞಾನ ಅವಲೋಕನ
Muralikrishna P | Vijaya Karnataka | Updated: 28 Feb 2015, 4:27 am
ಜ್ಯೋತಿಷ್ಯಶಾಸ್ತ್ರವು ವಿಜ್ಞಾನವೇ. ಅದರಲ್ಲಿರುವ ವೈಜ್ಞಾನಿಕ ಅಂಶಗಳನ್ನು ಸಾಕಷ್ಟು ಗ್ರಂಥಗಳಲ್ಲಿ ನೋಡಬಹುದು. ವಿಷ್ಣುಸಹಸ್ರನಾಮದಲ್ಲಿರುವ ಉಲ್ಲೇಖವೇನು? ಸಂಶೋಧನೆಗಳು ಹೇಳುವುದೇನು?
 
ಜ್ಯೋತಿಷ್ಯಶಾಸ್ತ್ರವು ವಿಜ್ಞಾನವೇ. ಅದರಲ್ಲಿರುವ ವೈಜ್ಞಾನಿಕ ಅಂಶಗಳನ್ನು ಸಾಕಷ್ಟು ಗ್ರಂಥಗಳಲ್ಲಿ ನೋಡಬಹುದು. ವಿಷ್ಣುಸಹಸ್ರನಾಮದಲ್ಲಿರುವ ಉಲ್ಲೇಖವೇನು? ಸಂಶೋಧನೆಗಳು ಹೇಳುವುದೇನು?
ಜ್ಯೋತಿರ್ ವಿಜ್ಞಾನ ಅವಲೋಕನ
ಅಮೆಜಾನ್‌ ಆಫರ್‌ ಸೇಲ್‌: ಎಲೆಕ್ಟ್ರಾನಿಕ್‌ ವಸ್ತುಗಳ ಮೇಲೆ ಶೇ.45 ರಷ್ಟು ರಿಯಾಯಿತಿ
- ರಂಗರಾಜ ಅಯ್ಯಂಗಾರ್
ಜ್ಯೋತಿಷ್ಯ ಹೇಳುವುದೆಲ್ಲಾ ಸತ್ಯವೇ? ಎಲ್ಲವನ್ನೂ ಕುಂಡಲಿಯಲ್ಲಿರುವ ಗ್ರಹಗಳೇ ನಿರ್ಧರಿಸುವುದಾದರೆ ವಿಜ್ಞಾನಿಗಳೇಕೆ? ವಿಜ್ಞಾನವೇಕೆ?
ಹೌದು, ನಾವಿಂದು ವೈಜ್ಞಾನಿಕ ಯುಗದಲ್ಲಿದ್ದೇವೆ. ಪ್ರತಿಯೊಂದು ವಿಷಯವನ್ನೂ ವಿವೇಚಿಸಿ, ವಿಶ್ಲೇಷಿಸಿ ನೋಡುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದೇವೆ. ವಿಜ್ಞಾನ ಜ್ಯೋತಿಷ್ಯಶಾಸ್ತ್ರದ ಮೂಢನಂಬಿಕೆಗಳತ್ತ ಬೊಟ್ಟು ಮಾಡುತ್ತದೆ. ಕುರುಡು ನಂಬಿಕೆಗಳ ಹಿಂದೋಡುವ ಮುಗ್ಧರನ್ನು ಎಚ್ಚರಿಸುತ್ತದೆ. ಆದರೆ ಜ್ಯೋತಿಷ್ಯಶಾಸ್ತ್ರದ ಮತ್ತೊಂದು ಮುಖದತ್ತ ಮಾತ್ರ ವಿಜ್ಞಾನ ಗಮನ ಹರಿಸುವುದಿಲ್ಲ. ಇಂದು ಸಮಾಜವನ್ನು ಎಚ್ಚರಿಸುವ ಕಾರ್ಯ ಆಗಬೇಕಿದೆ. ಅದರೊಂದಿಗೆ, ನಮ್ಮ ಸನಾತನ ಸಂಸ್ಕೃತಿಯ ಹಿಂದಿರುವ ವೈಜ್ಞಾನಿಕ ನೆಲೆಗಟ್ಟನ್ನು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವೂ ನಮಗಿದೆ. ವಿಜ್ಞಾನ ಹೊಸದೇನನ್ನು ಕಂಡು ಹಿಡಿಯುತ್ತಿಲ್ಲ. ಇರುವುದನ್ನೇ ನೋಡಲಿಕ್ಕೆ ಪ್ರಯತ್ನ ಪಡುತ್ತಿದೆ. ಹಾಗೆ ನೋಡಿದರೆ ನಮ್ಮ ಋಷಿ, ಮುನಿಗಳೂ ಜ್ಯೋತಿರ್ ವಿಜ್ಞಾನಿಗಳೇ! ಅವರು ತಮ್ಮ ವಿವೇಚನೆಯಿಂದ, ಸ್ವಯಂ ವಿಶ್ಲೇಷಣೆಯಿಂದ ಕಂಡುಕೊಂಡ ಜ್ಞಾನವನ್ನೇ ಜ್ಯೋತಿಷ್ಯ, ಜ್ಯೋತಿಷ್ಯಶಾಸ್ತ್ರ ಎಂದರು. ಅವರು ತಮ್ಮ ಪ್ರತಿಪಾದನೆಗಳಿಗೆ ಸೂತ್ರಗಳನ್ನು ಕೊಡಲಿಲ್ಲ. ಬದಲಿಗೆ ತಮ್ಮದೇ ಆದ ಸೈದ್ಧಾಂತಿಕ ಚೌಕಟ್ಟಿನಲ್ಲಿ ವಿವರಿಸಿದರು.
ನಮ್ಮ ಸೌರಮಂಡಲದಲ್ಲಿರುವ ಸೂರ್ಯ, ಮಂಗಳ, ಬುಧ, ಗುರು, ಶುಕ್ರ ಮತ್ತು ಶನಿ ಅದರೊಂದಿಗೆ ಭೂಮಿಯ ಸ್ವರೂಪವನ್ನು ಅದರ ಪರಿಧಿಯಲ್ಲಿರುವ ಚಂದ್ರಗಳ ಮಾಹಿತಿಯನ್ನು ಮಹರ್ಷಿಗಳು ಸಾವಿರಾರು ವರ್ಷಗಳ ಹಿಂದೆಯೇ ನೀಡಿದ್ದಾರೆ. ಅಂದು ಅವರು ತಮ್ಮ ಜ್ಞಾನದಿಂದ ಕಂಡುಕೊಂಡ ಸತ್ಯವನ್ನೇ ವಿಜ್ಞಾನವಿಂದು ಆಧುನಿಕ ಉಪಕರಣಗಳನ್ನು ಬಳಸಿಕೊಂಡು ನೋಡುತ್ತಿದೆ.
ವಿಷ್ಣು ಸಹಸ್ರನಾಮದಲ್ಲಿ
ನಮ್ಮ ಸೌರಮಂಡಲದಲ್ಲಿರುವ ಗ್ರಹಗಳು ತಮ್ಮದೇ ಆದ ಗುರುತ್ವಾಕರ್ಷಣೆ ಮತ್ತು ಅಯಸ್ಕಾಂತೀಯ ಶಕ್ತಿಯನ್ನು ಹೊಂದಿದೆ. ಅವುಗಳ ನೇರ ಪ್ರಭಾವ ನಮ್ಮ ಭೂಮಿಯ ಮೇಲಾಗುತ್ತಿದೆ ಎನ್ನುವ ಅಂಶವನ್ನು ನಮ್ಮ ಪ್ರಾಚೀನ ಮಹರ್ಷಿಗಳು ಈಗಾಗಲೇ ರೂಪಿಸಿದ್ದಾರೆ. ಅದನ್ನೇ ಅವರು ‘ಗ್ರಹ ಭಾವ, ಗ್ರಹ ಪ್ರಭಾವ’ ಎಂದರು. ಮಹಾಭಾರತದ ಭೀಷ್ಮಪರ್ವದಲ್ಲಿ ಉಲ್ಲೇಖವಾಗಿರುವ ವಿಷ್ಣು ಸಹಸ್ರನಾಮದಲ್ಲಿ ನಮ್ಮ ನಭೋ ಮಂಡಲ, ಅದರಲ್ಲಿರುವ ಗ್ರಹ, ನಕ್ಷತ್ರಗಳ ವಿವರಣೆಯಿದೆ. ನಮ್ಮ ಮಹರ್ಷಿಗಳು ಅನಂತವಾದ ನೀಲಾಕಾಶದಲ್ಲಿ ರುವ ಅಸಂಖ್ಯಾತ ನಕ್ಷತ್ರಗಳನ್ನು ಇಪ್ಪತ್ತೇಳು ತಂಡಗಳನ್ನಾಗಿ ಗುರುತಿಸಿದ್ದಾರೆ. ಪ್ರತಿಯೊಂದು ಗುಂಪಿಗೂ ಅನ್ವರ್ಥ ನಾಮಧೇಯವನ್ನು ನೀಡಿದ್ದಾರೆ.
ಪ್ರತಿಯೊಂದು ನಕ್ಷತ್ರವನ್ನೂ ನಾಲ್ಕು ಪಾದಗಳಾಗಿ ವಿಂಗಡಿಸಿದ್ದಾರೆ. ಅಂತೆಯೇ 27 ನಕ್ಷತ್ರಗಳು ್ಡ 4 ಪಾದಗಳು ನೂರ ಎಂಟು ಪಾದಗಳಾಗುತ್ತವೆ. ಆ ನೂರ ಎಂಟು ಪಾದಗಳೇ ಶ್ರೀವಿಷ್ಣು ಸಹಸ್ರನಾಮದ ನೂರ ಎಂಟು ಶ್ಲೋಕಗಳಿಗೆ ಸಮನಾಗಿದೆ. ಜಗತ್ತಿನಲ್ಲಿ ಜನಿಸುವ ಯಾವುದೇ ವ್ಯಕ್ತಿ ಈ ನೂರ ಎಂಟು ಪಾದಗಳ ಯಾವುದಾದರೊಂದರಲ್ಲಿ ಜನಿಸಿರುತ್ತಾನೆ. ಆ ನಕ್ಷತ್ರದ ಆ ಪಾದವನ್ನು ಅವನು ಜಪಿಸಿದರೆ ಅವನೆಲ್ಲ ದುಃಖದುರಿತ ದುಮ್ಮಾನಗಳು ದೂರವಾದೀತೆಂಬುದು ಅನುಭವ ವೇದ್ಯವಾಗಿದೆ.
ರಾಶಿಯ ಪ್ರಭಾವ
ಸೂರ್ಯನ ಚಾಲನೆಯನ್ನು ಗಮನಿಸಿ ಹನ್ನೆರಡು ಭಾಗಗಳಾಗಿ ವಿಂಗಡಿಸಿ ಅವುಗಳನ್ನು ‘ರಾಶಿ’ಗಳು ಎಂದು ಉಲ್ಲೇಖಿಸಿದ್ದಾರೆ. ಈ ರಾಶಿಗಳಿಗೆ ಹಲವಾರು ದೇವತೆ, ಅಧಿದೇವತೆ ಹಾಗೂ ಪ್ರತ್ಯಾದಿ ದೇವತೆಗಳನ್ನು ಗುರುತಿಸಿ ಮಾನವನ ಮೇಲೆ ಅವರ ಪ್ರಭಾವನ್ನು ವಿವರಿಸಿದ್ದಾರೆ. ಪ್ರತಿಯೊಂದು ರಾಶಿಗೂ, ನಕ್ಷತ್ರಗಳ ಒಂಬತ್ತು ಪಾದಗಳನ್ನು ನಿಯೋಜಿಸಲಾಗಿದೆ.
ರಾಶಿಗಳು ಹನ್ನೆರಡು ್ಡ ಒಂಬತ್ತು ಪಾದಗಳು=(12್ಡ9=108) ನೂರ ಎಂಟು ರಾಶಿಗಳ ಪಾದಗಳಾಗಿ ಶ್ರೀವಿಷ್ಣು ಸಹಸ್ರನಾಮದ ನೂರ ಎಂಟು ಶ್ಲೋಕಗಳಿಗೆ ಹಾಗೂ ಒಂಬತ್ತು ಶ್ಲೋಕಗಳಿಗೆ ಮತ್ತು ಒಂಬತ್ತು ಶ್ಲೋಕ ಪಾದಗಳಿಗೆ ಒಂದು ರಾಶಿಯಂತೆ ಹನ್ನೆರಡು ಚಕ್ರಗಳಾಗಿ ಅತ್ಯಂತ ವೈಜ್ಞಾನಿಕವಾಗಿ ಉಲ್ಲೀಖಿಸಿದ್ದಾರೆ.
ಜ್ಯೋತಿ ವಿಜ್ಞಾನದ (ಅಠ್ಟಿಟ್ಞಞಟ್ಞ) ಮತ್ತು ಇದರ ಆಧಾರದಲ್ಲಿಯೇ ಹೊರಬಂದ ಜ್ಯೋತಿಷ್ಯಶಾಸ್ತ್ರವನ್ನು ಮಹರ್ಷಿ ಪರಾಶರ ಭಗರ್ವಾವೇದವ್ಯಾಸ ಇತ್ಯಾದಿ ಮಹರ್ಷಿಗಳು ತಮ್ಮ ಅಪಾರ ತಪಸ್ಸಿನ ಪ್ರಭಾವದಿಂದ, ಆಳವಾದ ಅಧ್ಯಯನ ಸಂಶೋಧನೆಗಳಿಂದ ಗ್ರಹ ನಕ್ಷತ್ರಾದಿಗಳ ಪ್ರಭಾವವನ್ನು ಕೂಲಂಕುಶವಾಗಿ ಸ್ವಯಂ ಅನುಭವಿಸಿ, ಜಗತ್‌ಕಲ್ಯಾಣಕ್ಕಾಗಿ ಮಾನವನ ಒಳಿತಿಗಾಗಿ ಈ ಅಪೂರ್ವಶಾಸ್ತ್ರಗಳನ್ನು ನೀಡಿದ್ದಾರೆ. ಇವುಗಳ ಆಧಾರದಿಂದ ಭೂತ, ಭವಿಷ್ಯತ್, ವರ್ತಮಾನ ಸ್ಥಿತಿಗತಿಗಳನ್ನು ತಿಳಿದು ಸೂಕ್ತ ಪರಿಹಾರವಾಗಿ ಶ್ರೀವಿಷ್ಣು ಸಹಸ್ರನಾಮ (ಗಾಯನ, ಪಾರಾಯಣ ಮಡಲು), ಗ್ರಹ ಗಾಯತ್ರಿ ಇತ್ಯಾದಿ ಹಲವು ಸ್ತೋತ್ರಗಳನ್ನು ನೀಡಿದ್ದಾರೆ.
ನೂರ ಎಂಟರ ವೈಶಿಷ್ಟ್ಯ
ನಮ್ಮ ಸನಾತನ ಧರ್ಮ, ಭಾರತೀಯ ಸಂಸ್ಕೃತಿಯಲ್ಲಿ ನಮ್ಮೆಲ್ಲ ಜಪತಪ, ಪೂಜಾದಿಗಳಲ್ಲಿ ನೂರ ಎಂಟಕ್ಕೆ ವಿಶಿಷ್ಟ ಸ್ಥಾನವಿದೆ. ನಮ್ಮೆಲ್ಲ ದೇವ ದೇವೀ ದೇವತೆಗಳನ್ನು ಅವರವರ ಅಷ್ಟೋತ್ತರಶಕ ನಾಮಾಗಳಿಗಳಿಂದಲೇ ಪೂಜಿಸಿ ಅಂತೆಯೇ ಹೋಮಾದಿಗಳಿಗೆ ನೂರ ಎಂಟು ಹವಿಸ್ಸನ್ನು ಅರ್ಪಿಸಿ ಆ ದೇವತೆಯು ಕೃಪಾಕಟಾಕ್ಷವನ್ನು ಸಾಧಿಸಿಕೊಳ್ಳುತ್ತೇವೆ. ಅಂತೆಯೇ ಶ್ರೀವಿಷ್ಣು ಸಹಸ್ರನಾಮದಲ್ಲೂ ನೂರಎಂಟು ಶ್ಲೋಕಗಳಿರುವುದನ್ನು ಗಮನಿಸಬಹುದು. ನಮ್ಮ ಹಿರಿಯರು ಈ ಸಂಖ್ಯೆಯ ವೈಜ್ಞಾನಿಕತೆಯನ್ನು ಅರಿತೇ ಆಚರಣೆಗೆ ತಂದಿರಬಹುದು.
ನಾವಿರುವ ಭೂಮಿ, ಇದನ್ನು ಪ್ರದಕ್ಷಿಣೆ ಮಾಡುತ್ತಿರುವ ಚಂದ್ರ, ಇವೆರಡೂ ಗ್ರಹಗಳು ತಮ್ಮತಮ್ಮ ಅಕ್ಷದಲ್ಲಿ ಸುತ್ತುತ್ತಾ, ವಿಶಿಷ್ಟ ಪಥದಲ್ಲಿ ಸೂರ್ಯನ ಸುತ್ತ ತಿರುಗುತ್ತಿರುವುದು ಇಂದು ತಿಳಿದ ಅಂಶ. ಇವುಗಳ ವಿಶಿಷ್ಟ ಶಕ್ತಿಯನ್ನು ಪರಸ್ಪರ ಸಂಬಂಧ, ಅಂತರ ಇತ್ಯಾದಿ ವೈಜ್ಞಾನಿಕ ಅಂಶಗಳನ್ನು ಆಧುನಿಕ ಖಗೋಳ ವಿಜ್ಞಾನ ಪ್ರಸ್ತುತಪಡಿಸಿದೆ. ಇವೆಲ್ಲ ಮಾಹಿತಿಗಳನ್ನು ಆಧುನಿಕ ವಿಜ್ಞಾನ ಪ್ರಚಲಿತವಾಗುವುದಕ್ಕೆ ಸಾವಿರಾರು ವರ್ಷಗಳಿಗಿಂತ ಮೊದಲೇ ನಮ್ಮ ಮಹರ್ಷಿಗಳು ಈ ಬಗ್ಗೆ ವಿವರಿಸಿರುವ ಅಂಶಗಳನ್ನು ಕಂಡು ಪಾಶ್ಚಾತ್ಯ ವಿಜ್ಞಾನಿಗಳು ನಿಬ್ಬೆರಗಾಗುವಂತೆ ಮಾಡಿದೆ.
ವಿಷ್ಣು ಸಹಸ್ರನಾಮವೇ ಪರಿಹಾರ
ಅಂತಿಮವಾಗಿ ಯಾವ ನಕ್ಷತ್ರ, ಯಾವ ಪಾದದಲ್ಲಿ ಜನಿಸಿದ್ದೇವೋ ಅದಕ್ಕೆ ಪೂರಕವಾಗಿ ವಿಷ್ಣು ಸಹಸ್ರನಾಮದಲ್ಲಿರುವ ಶ್ಲೋಕವನ್ನು ಪಠಿಸಬೇಕು. ಹೀಗೆ ಮಾಡುವುದರಿಂದ ನಮ್ಮೆಲ್ಲಾ ದೈಹಿಕ, ಮಾನಸಿಕ ದೋಷಗಳು ಪರಿಹಾರವಾಗುತ್ತದೆ ಎಂದು ಮಹರ್ಷಿಗಳು ಪ್ರತಿಪಾದಿಸಿದ್ದಾರೆ. ಹಾಗಾಗಿ ಪ್ರತಿನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಒಳ್ಳೆಯದೆನ್ನುವುದು ನಮ್ಮ ಶಾಸ್ತ್ರಗಳ ಅಭಿಪ್ರಾಯ.

ಸಂಬಂಧಿತ ಸುದ್ದಿ
ಸರ್ಕಾರಿ ಉದ್ಯೋಗವನ್ನು ಪಡೆಯುವ ಜನ್ಮ ಸಂಖ್ಯೆಗಳಿವು..? ನಿಮಗಿದೆಯೇ ಈ ಯೋಗ..?
ವೈದಿಕ ಜ್ಯೋತಿಷ್ಯದ ಪ್ರಕಾರ ಈ ಜನ್ಮ ನಕ್ಷತ್ರದಲ್ಲಿ ಜನಿಸಿದರೆ ಅತ್ಯಂತ ಶುಭ..! ಆ ನಕ್ಷತ್ರಗಳು ಯಾವುವು ಗೊತ್ತಾ?
ಬುಧ ವಕ್ರಿಯ ಸಮಯಲ್ಲಿ ಉಂಟಾಗುವ ಮನೋಸ್ಥಿತಿಯ ಬದಲಾವಣೆಗಳಿಗೆ ಇಲ್ಲ
[1/1/2022, 7:16 pm] Dr. B. N. Shylaja Ramesh: ತಂದೀತೇ ಬಾಳಿನಲಿ ಹೊಸಬೆಳಕು

ಸರಿಸಿ ಹಳೆಯ ವರ್ಷವ
ತರುತ ಹೊಸತು ಹರ್ಷವ
ಬಾಗಿಲ ಬಳಿ ನಿಂತಿದೆ ಹೊಸವರ್ಷ.!
ತಂದೀತೇ ಬಾಳಿನಲ್ಲಿ ಹೊಸಬೆಳಕು.?

ನೋವು ನಲಿವುಗಳ ಆಗರ
ಬದುಕು ಸಾಗುವುದು ದುಸ್ತರ
ಸಾಕುಸಾಕೆನಿಸಿತ್ತು ವರ್ಷ ತಂದ ಆಪತ್ತು.!
ಹೊಸವರ್ಷ ನಿವಾರಿಸೀತೇ ವಿಪತ್ತು.?

ಕಣ್ಣುಗಳಲ್ಲಿ ಭಯದ ಛಾಯೆ
ಆವರಿಸಿ ಮಾಹಾಮಾರಿಯ ಮಾಯೆ
ಎಷ್ಟೆಲ್ಲ ಭೀಕರ ಸಾವು ನೋವುಗಳು.!
ಹೊಸತುವರ್ಷ ತಂದೀತೇ ಬೆಳದಿಂಗಳು.?

ದುಡಿವ ಕೈಗಳು ಖಾಲಿಖಾಲಿ
ಆರ್ಥಿಕತೆ ಹೊಡೆದಿತ್ತು ಜೋಲಿ
ಹೈರಾಣಾಗಿತ್ತು ಜನಜೀವನ ಬೇಸತ್ತು.!
ಹೊಸವರ್ಷವಾದರೂ ತಂದೀತೇ ಸಂಪತ್ತು.?

ಬದುಕು ಬಿಡಿಸಲಾಗದ ಸೊಡಕು
ನಿರೀಕ್ಷೆಗಳಲೇ ಈ ಬದುಕು
ನೆಮ್ಮದಿಯ ನಾಳೆಗಳೆಡೆಗೆ ನಿರುತ ಪ್ರತೀಕ್ಷೆ.!
ನವವರ್ಷ ಗೆಲ್ಲಿಸೀತೇ ಈ ಜೀವನ ಪರೀಕ್ಷೆ.?

ಹತಾಶೆಗಳ ದೂರೀಕರಿಸಿ
ಬದುಕು ಬಂಗಾರವಾಗಿಸಿ
ಮುನ್ನಡೆಸು ಬಾರಾ ನವವರ್ಷ ಕೈಪಿಡಿದು.!
ಬಾಳದಾರಿಗೆ ಜ್ವಲಿಸುವ ಪ್ರಣತಿಯ ಹಿಡಿದು..!

✍️ ಡಾ: ಶೈಲಜಾ ರಮೇಶ್
[4/1/2022, 4:56 pm] Dr. B. N. Shylaja Ramesh: ಸಾಧಿಸಿದ್ದೀನು..?
*************

ದಿನ ಕಳೆಯಿತು, ಮಾಸ ಉರುಳಿತು
ಹೊಸ ಹೊಸ ವರ್ಷಗಳೂ ಬಂತು
ತಾರುಣ್ಯ ಕಳೆದು ಮುಪ್ಪಡರಿತೇ ಹೊರತು
ಸಾಧಿಸಿದ್ದೇನೂ ಇಲ್ಲ ಬದುಕಲ್ಲಿ.😔
ನೂರಾರು ಲೆಕ್ಕಾಚಾರ  ಮನದಲ್ಲಿ
ಇಂದಲ್ಲದಿದ್ದರೂ ನಾಳೆಯಾದರೂ
ಮಾಡುವೆನೆಂಬ ಪೊಳ್ಳು ಭರವಸೆಯಲ್ಲಿ
ದಿನಗಳುರುಳಿತೇ ಹೊರತು
ಸಾಧಿಸುವ ಮನಸ್ಸೇ ಆಗಿಲ್ಲ ಇನ್ನೂ😔
ಕಣ್ಣ ಮುಂದೆಯೇ ನರ್ತಿಸುತ್ತಿದೆ
ಕಂಡ ಕನಸುಗಳ ಮಹಾಪೂರ
ತಲೆಯಲ್ಲಿ ಆಗುಹಿಗುಗಳ ಲೆಕ್ಕಾಚಾರ
ಕಟ್ಟಿದ್ದೇ ಆಯ್ತು ಬಯಕೆಗಳ ಆಶಾಗೋಪುರ.!
ಸದ್ದಿಲ್ಲದೇ ಸರಿಯುತ್ತಿದೆ ಸಮಯ
ಕುಂಟುನೆಪವೊಡ್ಡಿ ಹಿಂದುಳಿದ ಬಯಕೆಯ
ಕುಂಟುತ್ತಾ ಆದರೂ ಸಾಧಿಸುವ ಆಶಯ.!
ಒದಗಿ ಬಂದೀತೆ ಸುಸಮಯ.?
ಮಂಜು ಮಂಜಾದ ಕಣ್ಣುಗಳು
ಪೂರ್ಣ ದೃಷ್ಟಿ ಮಾಸುವ ಮುನ್ನ
ಬೆಳ್ಳಿಗೆರೆ ಮೂಡಿದ ಶಿರವು
ಶ್ವೇತವರ್ಣಕ್ಕೆ ತಿರುಗುವ ಮುನ್ನ
ಹೆಜ್ಜೆ ತಡವರಿಸಿ, ಬೆನ್ನು ಪೂರ್ತಿ ಬಾಗುವ ಮುನ್ನ
ಕಾಲನ ಕರೆ ಬಂದು, ಈ ಲೋಕ ದಾಟುವ ಮುನ್ನ
ಅಂದುಕೊಡದ್ದನ್ನೆಲ್ಲ ಸಾಧಿಸಿ
 ಕಾಣಿಸಬೇಕು ನೆಲೆಯನ್ನ.!
ಮಂಕಾದ ಬುದ್ಧಿಗೆ ಸಾಣೆಹಿಡಿದು
ಬಿಂಕ ತೋರುವ ಮನಸಿನ ಟೊಂಕ ಮುರಿದು
ಅಂಕೆಗೆ ಸಿಗದ ಆಸೆಗಳ ರೆಕ್ಕೆ ಕಡಿದು
ಸಾಧಿಸಲೇಬೇಕೇನಾದರೊಂದು ರಚ್ಚೆ ಹಿಡಿದು.!
[5/1/2022, 7:04 am] Dr. B. N. Shylaja Ramesh: ಕಾಯುತಿದೆ ಸ್ವಗತ
****************

ರಿಗಣಿಸಿದಂತಾಯ್ತು ಬೆಚ್ಚಿ ಎಚ್ಚರಿಸಿ ಎದ್ದೆ
ಹಾಳು, ಯಾರದೋ ಕರೆ ಅವನ ಸುಳಿವಿಲ್ಲ
ಹೆಜ್ಜೆ ಸಪ್ಪಳವಾಯ್ತು ತಟ್ಟನೆದ್ದು ಹೊರಬಂದೆ
ಪೆಚ್ಚುನಗೆ ದಾರಿಹೋಕರದು ಅವನ ಸುಳಿವಿಲ್ಲ

ಪೆಚ್ಚುಮೊರೆಯ ಹಾಕಿ ಕಣ್ಮುಚ್ಚಿ ನಾ ಕುಳಿತೆ
ದುಃಖ ಒತ್ತರಿಸಿ ಬಂದು ಕಣ್ಣು ಕೊಳವಾಯ್ತು
ಬಿಕ್ಕಳಿಸಿ ಅತ್ತದ್ದು ಕೇಳಬಾರದಾರಿಗೆಂದು
ಅಸಂಬದ್ಧ ಮಾತುಕತೆ ಅಲ್ಲೂ ಅವನ್ಹೆಸರಿತ್ತು

ಬಾಗಿಲು ತೆರೆದ ಸದ್ದು ಕಣ್ಣರಳಿಸಿ ನೋಡಿದೆ
ಗಾಳಿ ಸರಿಸಿತ್ತು ಕದವ ಅವನ ಸದ್ದಿಲ್ಲ
ಸಿಟ್ಟೋಸೆಡವೋ ಅರಿಯದೇ ತಟ್ಟನೆದ್ದು ಒಳಬಂದೆ
ಕಣ್ಣು ಕೆಂಪಾಗಿತ್ತು ನನ್ನವನ ಕಾಣದೆ

ಅತ್ತು ಮನ ಸೋತಿತ್ತು ನಿದ್ರೆಯಾವರಿಸಿತ್ತು
ನೇವರಿಸಿತ್ತೊಂದು ಕೈ ಕನಸಿರಬಹುದೇನೋ
ಮುಂಗುರುಳ ನೇವರಿಸಿ ಹೂಮುತ್ತನೊತ್ತಿ
ಕೆನ್ನೆ ಹಿಂಡಿದಂತಾಯ್ತು ಕಣ್ತೆರೆಯಲಿಲ್ಲ

ಕಾಯ್ದು ಸೋತೆಯ ಚಿನ್ನ ಕೋಪವಿಹುದೇ ರನ್ನ
ಬೇಸರವು ಬಹಳೇನು ನಾ ಮಾಡಿದ್ದಾದರೇನೆಂದು
ಜಡೆಯಿಡಿದು ಎಳೆದಾಗ ಕಣ್ಬಿಟ್ಟು ವಾಸ್ತವತೆ ಅರಿತಾಗ
ಪ್ರಿಯಪತಿಯ ತೋಳಿನಲ್ಲಿದ್ದೆ ನಾನಾಗ

          ಶೈಲೂ......
[6/1/2022, 5:22 pm] Dr. B. N. Shylaja Ramesh: ವೈಕುಂಠೇಕಾದಶಿ
***************

ಹರಿಯ ವೈಕುಂಠದಲಿಂದು
ಉತ್ತರದ್ವಾರವನು ತೆರೆದು
ಮುಕ್ಕೋಟಿ ದೇವರುಗಳು
ಪೂಜಿಸುವ ಸಮಯ....

ಕದ ತೆರೆದು ಕರೆದು
ಅಭೂತ ಸೇವೆಯ ಪಡೆದು
ದಿವ್ಯ  ದರುಶನವಿತ್ತು
ಕೃತಾರ್ಥವೀಯುವ ಸಮಯ

ನಿರ್ಜಲ ಉಪವಾಸ
ಹರಿಯಲ್ಲಿ ನಿಶ್ಚಲ ಮನಸ್ಸು
ಕೈಬಿಡದೆ ಕಾಯುವ
ತನ್ನಿರುವಿಕೆಯ ತೋರಿ ವರ್ಚಸ್ಸು

ವೈಕುಂಠ ಪತಿಯ ನಂಟು
ಜೊತೆಗೆ ಮುಕ್ತಿಯ ಗಂಟು
ಬೇಕೊಂದು ಗಟ್ಟಿ ಸೇತುವೆ
ವ್ರತ ಏಕಾದಶಿ ಉಪವಾಸವೆ

ದಿನವೆಲ್ಲ ಪೂಜೆ ಜಪ ತಪ
ನಾಮ ಸಂಕೀರ್ತನೆಯ ಜಾಡು
ವೈಕುಂಠ ದಲೊಂದು ಸ್ಥಾನ
ನಿಶ್ಚಿತವವನ ಕರುಣೆಯ ಜಾದು

                ಶೈಲೂ........
[6/1/2022, 5:22 pm] Dr. B. N. Shylaja Ramesh: #ಶೀರ್ಷಿಕೆ #ಬಾಲ್ಯ

ಬಾಲ್ಯವೆಂದರೆ ಅದೊಂದು ಸುವರ್ಣ ಯುಗ
ಆಹಾ...........ಬೆಳಗುತ್ತಿತ್ತು ಜೀವನ ಜಗಮಗ
ಏನೊಂದೂ ಕೃತ್ರಿಮ ಅರಿಯದ  ವಯಸ್ಸು
ಸದಾ ಆಟ ಹುಡುಗಾಟಿಕೆಯಲ್ಲೇ ಮನಸ್ಸು..!

ಅಕ್ಕ ಅಣ್ಣಂದಿರ ಜೊತೆಯ ಕೂಡು ಕುಟುಂಬ
ಅಪ್ಪನೇ ಆದರ್ಶ ಸಂಸಾರದ ಆಧಾರಸ್ಥಂಭ
ಇದ್ದದ್ದನ್ನೇ ಸಂತಸದಿ ಎಲ್ಲ ಹಂಚಿ ತಿಂದು
ನಲಿಯುತ್ತಿದ್ದೆವು ಸುಖ ಸಂತೋಷದಿ ಮಿಂದು.!

ಮುಗ್ಧಮನದ ತುಂಟಾಟ ಆಹ್ಲಾದ ಆಮೋದ
ಕಪಟವಿಲ್ಲದಿದ್ದರೂ ಆಟದಲ್ಲಾಗುತ್ತಿತ್ತು ಪ್ರಮಾದ
ಗೆಳೆಯರೊಂದಿಗೆ ಕುಣಿದು ಕುಪ್ಪಳಿಸಿ ನಲಿದು
ಹಂಚಿತಿನ್ನಲು ತಿನಿಸು ಕೊಂಡೊಯ್ಯುತ್ತಿದ್ದೆ ಕದ್ದು.!

ಕಣ್ಣಮುಚ್ಚಾಲೆ ಕುಂಟೆಬಿಲ್ಲೆ  ಖೋಖೋ ಲಗೋರಿ
ಎದ್ದುಬಿದ್ದು ಪೆಟ್ಟಾದರೂ ಆಡುತ್ತಿದ್ದೆ ಬಾರಿಬಾರಿ
ಮಾವು  ಸೀಬೆ  ತೋಟದಿ  ಕದ್ದು ಸಿಕ್ಕಿ ಬಿದ್ದು
ಕಂಗೆಟ್ಟಿದ್ದೆ ಅತ್ತು ಅಪ್ಪನಿಂದ ಹೊಡೆತತಿಂದು..!

ಅಮ್ಮನನ್ನು ಕಾಡಿ ಮುದ್ದುಗರೆಯುತ್ತಿದ್ದ ನೆನಪು
ಅಪ್ಪನ್ಹೆಗಲೇರಿ ಆನೆಅಂಬಾರಿ ಆಡುತ್ತಿದ್ದ ನೆನಪು
ಸ್ನೇಹಿತರೊಡನೆ ಮೋಜುಮಸ್ತಿ ಮಾಡುತ್ತಿದ್ದ ನೆನಪು
ಅದೆಷ್ಟು ಚಂದ ಬಾಲ್ಯದ ಆ ದಿನಗಳ ನೆನಪು..!

ಮೊಗೆ ಮೊಗೆದಷ್ಟೂ ಬತ್ತದ ಮಧುರಕ್ಷಣಗಳು
ಬಂದೀತೇ ಮತ್ತೆ ಸೊಗದ ಆ ಬಾಲ್ಯದ ದಿನಗಳು
ಅದೆಷ್ಟು ಸಂಭ್ರಮದ ಸ್ವರ್ಗ ಆ ಬಾಲ್ಯದ ಯುಗ
ಇರಬೇಕಿತ್ತೊಂದು ಸಾಧನ ಮರಳಿ ಕಾಣಲು ಆ ಜಗ..!

            ಶೈಲೂ.....
[7/1/2022, 12:31 pm] Dr. B. N. Shylaja Ramesh: ನೀ ಬಂದು ನಿಂತಾಗ
******************
ಅಂದು ಆ ಸಂಜೆಯಲಿ
ನಾ ನಿನ್ನ ಕಂಡಾಗ
ಮಿಡಿದಿತ್ತು ಮನದಲ್ಲಿ  ಭಾವವೀಣೆ
ತಲೆತಗ್ಗಿ ನಿಂತವಳ ಮುಂದೆ
ನೀ ಬಂದು ನಿಂತಾಗ
ಕೆನ್ನೆ ಕೆಂಪೇರಿದ್ದು ನಾಚಿ ತಾನೇ..

"ಹೇಳು ನಾ ನಿನಗಿಷ್ಟವೇ"
ಹಿಂದಿನಿಂದ  ಬಂದ
ದನಿಗೆ ಬೆಚ್ಚಿ, ಮೆಚ್ಚಿ
ಕಳೆದ ಮನದಲ್ಲಿ
ನವಿಲ ನಾಟ್ಯವ ಕಂಡ
ನಾ  ಅರೆಹುಚ್ಚಿ..

ನಡುಗುತ್ತ ಹಿಡಿದಿದ್ದೆ
ಕಾಫಿ ಲೋಟದ ತಟ್ಟೆ
ಕಣ್ಣರಸಿ ನಿಂದಿದ್ದು ನಿನ್ನ ಮಾತ್ರ
ಜೊತೆಯಲ್ಲಿ ಬಂದಿದ್ದ
ಅತ್ತೆ ಮಾವರ ಮಾತು
ಕೇಳದಿದ್ದುದಕಿದೆ ನಿನ್ನ ಪಾತ್ರ..

ನೀ ಹೊರಟು ನಿಂತಾಗ
ಮನದಲ್ಲಿ ತಳಮಳ 
ಕಿಟಕಿ ಕಿಂಡಿಯಲಿ ನೋಡುತ್ತ ನಿಂತೆ..
ಕಾತರದ ಕಣ್ಣಿಂದ
ತಿರುತಿರುಗಿ ನೋಡುತ್ತ
ಅರೆಬರೆ ಮನಸ್ಸಿಂದ ನೀನು ಹೊರಟೆ..

ಏನೋ ಮರೆತಿದ್ದಂತೆ
ಮತ್ತೆ ಒಳಬಂದಾಗ 
ಹುಡುಕುತ್ತಿತ್ತು ಕಣ್ಣು ನನ್ನನರಸಿ
ಕೋಣೆ ಬಾಗಿಲಲಿಣುಕಿ
"ಹೋಗಿ ಬರಲೇ " ಎಂದಾಗ
ನಾಚಿ ನಾನಿಂತೆ ತಲೆಯಾಡಿಸಿ...

             ಶೈಲೂ......

[8/1/2022, 4:11 pm] Dr. B. N. Shylaja Ramesh: #ಕೃಷ್ಣನ_ನೆನೆದು

ಹಾಗೇ ಸುಮ್ಮನೇ ತಿರುಗಾಡಿ ಬಾ ಮನವೇ
ತುಸುದೂರ ಮೆಲ್ಲ ಮೆಲ್ಲನೇ
ಕೃಷ್ಣನಿಲ್ಲದಿದ್ದರೇನಂತೆ ಸಿಗಬಹುದೇನೋ
ಅವನ ನೆರಳು ಬಿಮ್ಮನೇ..!

ಅವನಿಲ್ಲದ ಚಿಂತೆಯಲಿ ನೀ ಕೊರಗುತಲಿ
ಸೊರಗಿ ಹೋಗಿರುವೆ ತುಂಬಾ
ಅರಸುತ್ತ ಎಲ್ಲೆಡೆಯಲೂ ಅಳೆಯುತಿರುವೆ
ಕಾಣದೆ ಪ್ರಿಯ ಮಾಧವನ ಬಿಂಬ.!

ಯಮುನೆಯ ತಟದಲ್ಲಂದು ಅವನೊಡನೆ
ಕೈಹಿಡಿದು ನಡೆದಿದ್ದ ಕ್ಷಣಗಳು
ಮುದವ ತರಬಹುದೇನೋ ನೊಂದ ಮನಕೆ
ಅವನ ಸವಿಸವಿ ನೆನಪುಗಳು.!

ಸುಳಿಗಾಳಿಯಲಿ ತೇಲಿತೇಲಿ ಬರಬಹುದು
ಅವ ಮೈಗೆ ಪೂಸಿದ್ದ ಶ್ರೀಗಂಧ
ಅನುರಾಗದಾಲಾಪನೆಯ ಕರೆಯು ಕೇಳಿ
ಬರಬಹುದು ಅವನ ಕೊಳಲಿಂದ.!

ಅವನಿಗೂ ನಿನ್ನಂತೆ ಕಾಡುತಿರಬಹುದಲ್ಲ
ಸವಿ ಪ್ರೇಮದ ಆ ನೆನಪು
ಸುಳಿದಾಡುತಿರಬಹುದಲ್ಲಲ್ಲೇ ನೆನೆಯುತ್ತ
ಅಮರ ಪ್ರೀತಿಯ ಒನಪು.!

ಹೋಗಿಬಾ ಮತ್ತೊಮ್ಮೆ ಮನಸೇ ತಡಮಾಡದೆ
ಮನವಿಟ್ಟು ಹುಡುಕು ಅಲ್ಲೇ
ಇನ್ನೆಷ್ಟುದಿನ ಕಾಡುವನು ಸಿಗದೇ, ಇಹನವ
ನೆನೆದವರ ಒಳ ಮನದಲ್ಲೇ.!

             ಶೈಲೂ.....
[9/1/2022, 4:01 am] Dr. B. N. Shylaja Ramesh: ನಿತ್ಯ.ಅಭ್ಯಾಸ ಮುಂಜಾನೆ ನಾಲ್ಕಕ್ಕೆಳುವುದು
ಎದ್ದೊಡನೆ ಹರಿಯ ನೆನೆದವನ ಭಜಿಸುವುದು
ಕಸ ಗುಡಿಸಿ, ಒರೆಸಿ ಮಾಡಿ ಮನೆಯ ಸ್ವಚ್ಛ
ಅಂಗಳದಿ ಚಂದ ರಂಗೋಲಿಯಿಡದಿರೆ ಆ ದೇವ ಮೆಚ್ಚ

ಛೇ, ಆಗಲೇ ಐದೂ ವರೆಯಾಯ್ತು, ಮುಗಿಸಿ ಸ್ನಾನ
ದೇವನಾಲಯ ಸ್ವಚ್ಛಗೊಳಿಸಿ, ಕುಳಿತು ಧ್ಯಾನ
ನೈವೇದ್ಯಕ್ಕಣಿಗೊಳಿಸಿ  ನಿತ್ಯಪೂಜೆ ಮುಗಿಸಿ
ಕುಡಿಯಲು ಬಿಸಿನೀರನ್ನಿಡುವೆ ಪತಿದೇವರನ್ನೆಬ್ಬಿಸಿ

ಓಡುತ್ತಿದೆ ಸಮಯ ಆಗಲೇ ಗಂಟೆ ಏಳಾಯ್ತು
ಲಗುಬಗೆಯಲಿ ತೀಡಿ ಜೊತೆಗೆ ಅಡುಗೆ ರೆದಿಯಾಯ್ತು
ನಡುವೆ ಪತಿದೇವರಿಗೆ ಕಾಫಿ ಸಮಾರಾಧನೆ
ಪೇಪರ್ಹಿಡಿದು ಕುಳಿತವರನ್ನೆಬ್ಬಿಸುವುದೇ ವೇದನೆ
[9/1/2022, 4:20 am] Dr. B. N. Shylaja Ramesh: ಸ್ನಾನ ಪೂಜೆ ಜಪ ಮುಗಿಸವರು ಬರುವ ವೇಳೆಗೆ
ಡಬ್ಬಿಗೆ ಊಟ ತುಂಬಿಸಿ, ತಿಂಡಿ ಬಡಿಸುವೆ ಪ್ಲೇಟಿಗೆ
ಮಾಸ್ಕು, ಕರ್ಚೀಪು, ಸ್ಪೆಕ್ಸು ಧರಿಸಲು ಬಟ್ಟೆ ತೆಗೆದಿರಿಸಿ
ಹೆಲ್ಮೆಟ್ಟು, ಕೀ, ಸಾಕ್ಸು ಹಿಡಿದು ಕಾಯುವೆ ಶೂವನ್ನು ಒರೆಸಿ
[9/1/2022, 12:42 pm] Dr. B. N. Shylaja Ramesh: ಪತಿರಾಯರಾಫೀಸಿಗ್ಹೊರಡುವ ವೇಳೆಗೆ 
ಮಹಡಿಮೇಲಿಂದಿಳಿದು ಬರುವ ಮಗ ಕಾಫಿಗೆ
ಯಜಮಾನರ ಕಳಿಸಿ ಮಗನಿಗೆ ಕಾಫಿ ಬೆರೆಸಿ
ಕುಳಿತುಕೊಳ್ಳುವೆ ಅರೆಕ್ಷಣ ವಿಶ್ರಾಂತಿ ಬಯಸಿ

ಈ ಸಮಯ ನನ್ನದು, ಗಡಿಬಿಡಿಯ ಗೊಡವೆಯಿಲ್ಲ
ದಿನಪತ್ರಿಕೆಯಮೇಲ್ಕಣ್ಣಾಡಿಸುತ್ತಾ, ಹಾಲ್ಕುಡಿವೆ ಮೆಲ್ಲ
ಅಳಿದುಳಿದ ಮನೆ ಕೆಲಸದ ಕಡೆಗೆ ಮತ್ತೆನ್ನ ಗಮನ
ಕೆಲಸದ ಜೊತೆಗೆ ವಿಷ್ಣು ಸಹಸ್ರನಾಮ ಪಾರಾಯಣ
[9/1/2022, 1:32 pm] Dr. B. N. Shylaja Ramesh: #ದಿನಚರಿ_ಕವನ

#ಒಂದು_ಮುಂಜಾನೆ

ನಿತ್ಯ ಅಭ್ಯಾಸ ಮುಂಜಾನೆ ಗಂಟೆ ನಾಲ್ಕಕ್ಕೆಳುವುದು
ಎದ್ದೊಡನೆ ಶ್ರೀಹರಿಯ ನೆನೆದವನ ಭಜಿಸುವುದು
ಕಸ ಗುಡಿಸಿ, ನೆಲ ಒರೆಸಿ ಮಾಡಿ ಮನೆಯ ಸ್ವಚ್ಛ
ಅಂಗಳದಿ ಚಂದ ರಂಗೋಲಿಯಿಡದಿರೆ ಆ ದೇವ ಮೆಚ್ಚ.!

ಛೇ, ಆಗಲೇ ಐದೂ ವರೆಯಾಯ್ತು, ಮುಗಿಸಿ ಸ್ನಾನ
ದೇವನಾಲಯ ಸ್ವಚ್ಛಗೊಳಿಸಿ, ಕುಳಿತು ಧ್ಯಾನ
ನೈವೇದ್ಯಕ್ಕಣಿಗೊಳಿಸಿ  ನಿತ್ಯಪೂಜೆ ಮುಗಿಸಿ
ಕುಡಿಯಲು ಬಿಸಿನೀರನ್ನಿಡುವೆ ಪತಿದೇವರನ್ನೆಬ್ಬಿಸಿ.!

ಓಡುತ್ತಿದೆ ಸಮಯ ಆಗಲೇ ಗಂಟೆ ಏಳಾಯ್ತು
ಲಗುಬಗೆಯಲಿ ತಿಂಡಿ ಜೊತೆಗೆ ಅಡುಗೆ ರೆಡಿಯಾಯ್ತು
ನಡುನಡುವೆ ಪತಿದೇವರಿಗೆ ಕಾಫಿ ಸಮಾರಾಧನೆ
ಪೇಪರ್ಹಿಡಿದು ಕುಳಿತವರನ್ನೆಬ್ಬಿಸುವುದೇ ವೇದನೆ.!

ಸ್ನಾನ ಪೂಜೆ ಜಪ ಮುಗಿಸವರು ಬರುವ ವೇಳೆಗೆ
ಡಬ್ಬಿಗೆ ಊಟ ತುಂಬಿಸಿ, ತಿಂಡಿ ಬಡಿಸುವೆ ಪ್ಲೇಟಿಗೆ
ಮಾಸ್ಕು, ಕರ್ಚೀಪು, ಸ್ಪೆಕ್ಸು ಧರಿಸಲು ಬಟ್ಟೆ ತೆಗೆದಿರಿಸಿ
ಹೆಲ್ಮೆಟ್ಟು, ಕೀ, ಸಾಕ್ಸು ಹಿಡಿದು ಕಾಯುವೆ ಶೂವನ್ನು ಒರೆಸಿ.!

ಪತಿರಾಯರಾಫೀಸಿಗ್ಹೊರಡುವ ಸರಿ ವೇಳೆಗೆ 
ಮಹಡಿಮೇಲಿಂದಿಳಿದು ಬರುವ ಮಗ, ಕಾಫಿಗೆ
ಯಜಮಾನರ ಕಳಿಸಿ ಮಗನಿಗೆ ಕಾಫಿ ಬೆರೆಸಿ
ಕುಳಿತುಕೊಳ್ಳುವೆ ಅರೆಕ್ಷಣ ವಿಶ್ರಾಂತಿ ಬಯಸಿ.!

ಈ ಸಮಯ ನನ್ನದು, ಗಡಿಬಿಡಿಯ ಗೊಡವೆಯಿಲ್ಲ
ದಿನಪತ್ರಿಕೆಯಮೇಲ್ಕಣ್ಣಾಡಿಸುತ್ತಾ, ಹಾಲ್ಕುಡಿವೆ ಮೆಲ್ಲ
ಅಳಿದುಳಿದ ಮನೆ ಕೆಲಸದ ಕಡೆಗೆ ಮತ್ತೆನ್ನ ಗಮನ
ಕೆಲಸದ ಜೊತೆಗೆ ವಿಷ್ಣು ಸಹಸ್ರನಾಮ ಪಾರಾಯಣ.!

ಹೋ, ಆಗಲೇ ಗಂಟೆ ಹತ್ತಾಯ್ತು.! ಮಗನಿಗೆ ಫೋನಾಯಿಸಿ
ಕೆಲಸವಿದೆ ಬಹಳ ತಿಂಡಿಗೆ ಸಮಯವಿಲ್ಲೆಂದವನ ಮಣಿಸಿ
ನಾನೇ ಹೊತ್ತೊಯ್ದು ತಿನಿಸು, ಉಣಿಸಿ ಅನುನಯಿಸುತ್ತಾ
ನನ್ನ ತಿಂಡಿ ಶಾಸ್ತ್ರ ಮುಗಿವ ವೇಳೆಗೆ ಗಂಟೆ ಹನ್ನೊಂದಾಗಿತ್ತ.!

ನಿತ್ಯವೂ ಇದೇ.. ಮುಂಜಾನೆ ದಿನಚರಿ, ಇಲ್ಲ ವ್ಯತ್ಯಾಸ
ವಾರಾಂತ್ಯದಲ್ಲೊಮ್ಮೊಮ್ಮೆ ಘೋರ, ಇದಕ್ಕಿಂತಲೂ ತ್ರಾಸ
ತಡವಾದರೇನಂತೆ ಕೆಲಸ, ಮನೆಮಂದಿಯೊಡನೆ ಕೂಡಿ
ಹಂಚಿ, ಸವಿದು ಉಣ್ಣುವುದೇ ನಮ್ಮ ಮನೆಯ ರೂಢಿ

           ಶೈಲೂ.....
[9/1/2022, 9:37 pm] Dr. B. N. Shylaja Ramesh: ಆತ್ಮೀಯ ಗೆಳತಿ ಸಂಧ್ಯಾಳ ಕೋರಿಕೆಯ ಮೇರೆಗೆ...😊

ನೀ  ದೂರಾಗುವ  ಶಿಕ್ಷೆಗಿಂತಲೂ  ,

ಮಿಗಿಲಾದ  ಶಿಕ್ಷೆಯುಂಟೇ  ಈ  ಜಗದಲ್ಲಿ  !!

ಗೀತಾ......
🌼🌼🌼🌼🌼🌼🌼🌼🌼🌼

ಕೊಳಲು ನೀಡಿ ಹೊರಟನು
ರಾಧೆಯ ಪ್ರಾಣವೇ ತಾನೆನ್ನುವುದ ಮರೆತನು...
ಕಾದು ಕಾದು ಸೋತಿತು ರಾಧೆಯ ಕಣ್ಗಳು
ಅರಿವಾಗಲೇ ಇಲ್ಲಾ ಶ್ರೀಹರಿಗೆ ...ಪ್ರೀತಿಸುವ
ಮನದ ಅಳಲು...

ಸಂಧ್ಯಾ..

🌼🌼🌼🌼🌼🌼🌼🌼🌼🌼🌼🌼🌼🌼🌼

ಪ್ರೀತಿಯು ನೀನೇ ಪ್ರಾಣವೂ ನೀನೇ ಸಖೀ
ನೀನಿಲ್ಲದೀ ಜೀವನದಿ ಹೇಳು ನಾನೆಂಥ ಸುಖೀ.?
ನಾನಿನ್ನ ಮರೆತರಂದೇ, ಪ್ರೀತಿ ಹೆಸರಿಗೇ ಮರಣ
ನಾನಿನ್ನೂ ಜನಮನದಿ ನೆಲೆಸಿರಲು ನೀನೇ ಕಾರಣ
ರಾಧೇ, ನೀನೆ ಸ್ವಚ್ಛ ನಿಷ್ಕಲ್ಮಶ ಪ್ರೀತಿಗೆ ಹೆಸರು
ನಾನೆಲ್ಲಿದ್ದರೂ ನೀನೇ ಸಖೀ ಈ ಮಾಧವನ ಉಸಿರು..!

             ಶೈಲೂ.....
[13/1/2022, 12:24 pm] Dr. B. N. Shylaja Ramesh: ಹೊನ್ನ ನೀರಲ್ಲಿ ಅದ್ಧಿಟ್ಟಂತ  ಹೆಣ್ಣಿವಳು
ಕೈತೊಳೆದುಕೊಂಡೇ ಮುಟ್ಟಬೇಕು
ದಂತಕಾಂತಿಯಂತ ಸುಂದರ ಮೈಯವಳು
ದೊಡ್ಡಪ್ಪನ ಮನೆಯ ಬೆಳಗಿದ ಬೆಳಕು

ಸ್ವಾತಂತ್ರ್ಯ ಪೂರ್ವದಲೇ ಹೆಚ್ಚು ಕಲಿತ ಜಾಣೆ
ನಯವಿನಯವಂತೆ ಸೌಮ್ಯ ಸುಶೀಲೆ
ನುಡಿದರೇ ಮೆಲುಮಾತು ನುಡಿದಂತೆ ವೀಣೆ
ಅಭಿಮಾನ ಅಕ್ಕರೆಗಳ ಬತ್ತದ ಸೆಲೆ
[15/1/2022, 10:06 am] Dr. B. N. Shylaja Ramesh: ಎಳ್ಳು ಕಡಲೆಯು ತುರಿಯು
ಬೆಲ್ಲ ಬೆರೆಸಲು ಸಿಹಿಯು
ಎರೆದು ಕೊಟ್ಟರೆ ಫಲವು
ಆ ಫಲವ ನೀಡಲಿ ಸಂಕ್ರಾಂತಿಯು

ಸಂಕ್ರಾಂತಿ ಹಬ್ಬದ ಶುಭಾಶಯಗಳು💐💐💐
[17/1/2022, 4:23 pm] Dr. B. N. Shylaja Ramesh: ಇದು ತರವೇ..?

ಇನ್ನೆಷ್ಟು ಕಾಡಿಸುವೆ ಕೃಷ್ಣ
ಕಾಯಿಸಿ ಸತಾಯಿಸುವುದು
ಹೇಳು ನಿನಗೆ ತರವೇನು..?
ಎಡೆಬಿಡದಲೇ ಕಾಯುತಿಹ
ಈ ರಾಧೆಯ ಪಾಲಿಗಿನ್ನು
ವಿರಹದುರಿಯೇ ಗತಿಯೇನು.?

ಯಮುನೆಯ ದಡದಲ್ಲಂದು
ಬಳಸೆನ್ನ  ನಡುವನು ಮೆಲ್ಲ
ನೀ ನುಡಿದದ್ದೆಲ್ಲ ಹುಸಿಯೇ..
ಸಮ್ಮೋಹಗೊಳಿಸುವ ಕೊಳಲ
ಆ ಕರ್ಣಾಮೃತ ಕರೆ ಎನ್ನ
ಸೆಳೆದೆಳೆದದ್ದೂ ಹುಸಿಯೇ.?

ಅದೇ ನದಿದಂಡೆಯ ಮೇಲೆ
ಕೈಯ್ಯಲಿಡಿದು ತುಳಸಿಮಾಲೆ
ನಿನಗಾಗಿ ಕಾದಿರುವೆ ಬಾರಾ
ಸಿಹಿನಗುವ ಮರೆತು ಸದಾ
ನಿನ್ನ ಸವಿನೆನಪಲೇ ಮಿಳಿತವಳ
ಕಡೆಗೊಮ್ಮೆ ಕೃಪೆಯ ತೋರಾ.!

ಮನದ ಮಂದಿರದಲ್ಲಿ ನಗುತ
ಕುಳಿತಿರುವ ಹೇ ಮಾಧವನೆ
ಎದುರಿಗೊಮ್ಮೆ ನೀನೇಕೆ ಬರಲೊಲ್ಲೆ
ನಿನ್ನ ಕಾಣದೇ ಕ್ಷಣಕ್ಷಣವು
ಯುಗವಾಗಿ ಪರಿಣಮಿಸಿ
ಬಾಡುತಿಹುದು ಮನದ ಮಲ್ಲೆ..!

ಸಾಕಿನ್ನು ಬಂದುಬಿಡು ಬೇಗ
ಇನ್ನೆಷ್ಟು ಕಾಯಲಿ ಹೇಳು
ಬೇಡ ಕಣ್ಣಾಮುಚ್ಚಾಲೆ ಆಟ
ನಿನ್ನ ಕಾಣುವ ಹಂಬಲದಿ
ನೀ ಬರುವ ದಾರಿಯೆಡೆಗೇ
ಕುಳಿತಿರುವೆ ನೆಟ್ಟು ನೋಟ.!


             ಶೈಲೂ......
[19/1/2022, 5:09 pm] Dr. B. N. Shylaja Ramesh: #ಹೊಂದಿಕೋ_ಮನಸೇ

ಹೊಂದಿಕೋ ಮನಸೇ ನೀ ಸುಮ್ಮನೇ
ಬೇಡದ ನೆನಪಿಗೂ ಕಾಡುವ ಕನಸಿಗೂ
ಕುಂಟು ನೆಪವೊಡ್ಡುವ ಹುಸಿಮುನಿಸಿಗೂ
ನೊಂದುಕೊಳ್ಳಲೇ ಬೇಡ ನೀನೆಂದಿಗೂ

ಅರಿತುಕೊ ಮನಸೇ ಈ ಕಟುಸತ್ಯವ
ನಿನ್ನವರು ಯಾರಿಲ್ಲ ನೀ ಬಿದ್ದರೂ
ಸಂತೈಸುವರಾರಿಲ್ಲ ನೀ ನೊಂದರೂ
ಉರಿದುರಿದು ಬೀಳುವರು ನೀ ಗೆದ್ದರೂ

ತಡೆದುಕೋ ಮನಸೇ ನೀ ದುಃಖವಾ
ಸವಿ ಮಾತಲೇ ಚಾಟಿ ಬೀಸಿದರೂ
ನಗು ನಗುತಲೆ ನಿನ್ನ ಬೆನ್ನಿಗಿರಿದರೂ
ನಡೆವ ಹಾದಿಗವರು ಮುಳ್ಳಾದರೂ

ಕಾಯುತಿರು ಮನಸೇ ನಾಳಿನ ಬೆಳಕಿಗೆ
ಬದುಕ ಕತ್ತಲೆ ಕಳೆವ ಹೊಸ ಹುರುಪಿಗೆ
ಗುರಿಯೆಡೆಗೆ ನಡೆವ ಹೊಸದಾರಿಗೆ

ಇನ್ನೆಷ್ಟು ದಿನ ಕಾಡೀತು ಹೇಳು.?
ಕಿತ್ತು ತಿನ್ನುವ ರಣಹದ್ದ ನೋವು
ಎಲ್ಲಕ್ಕೂ ಇರುವುದು ಕೇಳು ಅಂತ್ಯವು
ತಡೆಹಿಡಿದು ನುಂಗಿಬಿಡು ಹಿಂಡುವ ನೋವು

ಭೂತಕಾಲದ ಬವಣೆ ತಾ ಕರಗಿ
ಭವಿತದ ಮುನ್ನುಡಿಗೆ ದೀಪಬೆಳಗಿ
ಕಂಡ ಕನಸುಗಳೆಲ್ಲ ಸಾಕಾರವಾಗಿ
ಖುಷಿಯ ಕ್ಷಣ ಕಾದಿದೆ ನಿನ್ನ ನಗುವಿಗಾಗಿ

ಸಕಾಲದವರೆಗೆ ಸಾವರಿಸಿಕೋ ಮನವೇ
ನೋವಿಗೂ ನಲಿವಿಗೂ ನೀ ಕುಗ್ಗದೇ
ಭಾವಣೆಗಳ ಭಾರಕ್ಕೆ ನೀ ಜಗ್ಗದೇ
ಹೊಂದಿಕೋ ಮನಸೇ ನೊಂದುಕೊಳ್ಳದೇ

           ಶೈಲೂ......
[19/1/2022, 5:13 pm] Dr. B. N. Shylaja Ramesh: #ಹೊಂದಿಕೋ_ಮನಸೇ

ಹೊಂದಿಕೋ ಮನಸೇ ನೀ ಸುಮ್ಮನೇ
ಬೇಡದ ನೆನಪಿಗೂ ಕಾಡುವ ಕನಸಿಗೂ
ಕುಂಟು ನೆಪವೊಡ್ಡುವ ಹುಸಿಮುನಿಸಿಗೂ
ನೊಂದುಕೊಳ್ಳಲೇ ಬೇಡ ನೀನೆಂದಿಗೂ

ಅರಿತುಕೊ ಮನಸೇ ಈ ಕಟುಸತ್ಯವ
ನಿನ್ನವರು ಯಾರಿಲ್ಲ ನೀ ಬಿದ್ದರೂ
ಸಂತೈಸುವರಾರಿಲ್ಲ ನೀ ನೊಂದರೂ
ಉರಿದುರಿದು ಬೀಳುವರು ನೀ ಗೆದ್ದರೂ

ತಡೆದುಕೋ ಮನಸೇ ನೀ ದುಃಖವಾ
ಸವಿ ಮಾತಲೇ ಚಾಟಿ ಬೀಸಿದರೂ
ನಗು ನಗುತಲೆ ನಿನ್ನ ಬೆನ್ನಿಗಿರಿದರೂ
ನಡೆವ ಹಾದಿಗವರು ಮುಳ್ಳಾದರೂ

ಕಾಯುತಿರು ಮನಸೇ ನಾಳಿನ ಬೆಳಕಿಗೆ
ಬದುಕ ಕತ್ತಲೆ ಕಳೆವ ಹೊಸ ಹುರುಪಿಗೆ
ಗುರಿಯೆಡೆಗೆ ನಡೆಸುವ ಹೊಸದಾರಿಗೆ
ತಲೆಯೆತ್ತಿ ಬಾಳುವ ಹೊಸ ಬದುಕಿಗೆ

ಇನ್ನೆಷ್ಟು ದಿನ ಕಾಡೀತು ಹೇಳು.?
ಕಿತ್ತು ತಿನ್ನುವ ರಣಹದ್ದ ನೋವು
ಎಲ್ಲಕ್ಕೂ ಇರುವುದು ಕೇಳು ಅಂತ್ಯವು
ತಡೆಹಿಡಿದು ನುಂಗಿಬಿಡು ಹಿಂಡುವ ನೋವು

ಭೂತಕಾಲದ ಬವಣೆ ತಾ ಕರಗಿ
ಭವಿತದ ಮುನ್ನುಡಿಗೆ ದೀಪಬೆಳಗಿ
ಕಂಡ ಕನಸುಗಳೆಲ್ಲ ಸಾಕಾರವಾಗಿ
ಖುಷಿಯ ಕ್ಷಣ ಕಾದಿದೆ ನಿನ್ನ ನಗುವಿಗಾಗಿ

ಸಕಾಲದವರೆಗೆ ಸಾವರಿಸಿಕೋ ಮನವೇ
ನೋವಿಗೂ ನಲಿವಿಗೂ ನೀ ಕುಗ್ಗದೇ
ಭಾವಣೆಗಳ ಭಾರಕ್ಕೆ ನೀ ಜಗ್ಗದೇ
ಹೊಂದಿಕೋ ಮನಸೇ ನೊಂದುಕೊಳ್ಳದೇ

           ಶೈಲೂ......
[23/1/2022, 6:16 pm] Dr. B. N. Shylaja Ramesh: ನಾವಿಬ್ಬರೊಂದೇ..!!
*****************

ನಾವಿಬ್ಬರೊಂದೇ ಯಾಕೀ ಮೊರೆತ
ಬೇರಾದರೂ ಬೇರಲ್ಲವಿದು  ಆನೃತ
ಪ್ರುರುಷ - ಪ್ರಕೃತಿ ಒಂದಾದ ವೇಷ
ತಿಳಿ ನಾವರ್ಧನಾರೀ ಪುರುಷ

ನಾ ನಿನ್ನ ಕೈಯೊಳ ಕೊಳಲು
ನೀನಾಗಿ ಹೊಮ್ಮಿ ಅದರ ದನಿ
ಬೆಸೆದು ನವ ರಾಗ ಹೊಸೆಯೇ
ಹೊರಹೊಮ್ಮದೇ  ಇನಿದನಿ.?

ನಾನವನಿ ನೀನಾದೆ ಅಂಬರ
ಭೋರ್ಗರೆದು ಪ್ರೇಮ ಧಾರಾಕಾರ
ಎನಿಂಥ ಚುಂಬಕ ಸೆಳೆತವೀ ಅಮಲು.!
ತಡೆಹಿಡಿಯಿತೇ ಕಯ್ಯಲ್ಲಿನ ಕೊಳಲು ?

ತುಸು ಲಜ್ಜೆ ಬೆರೆಸಲಾರೆ ಕಣ್ಣು
ಇಂಥ ಸನಿಹ ಎದುರಿಸಲ್ಹೇಗೆ ನಾ ಹೆಣ್ಣು.!
ನೀಲದೊಳಗೇ ಗೌರ ಮಿಳಿತು
ನೀಲವಾಯ್ತು ಜಗ ಅವನೊಡನೆ ಕಲೆತು

ಹೇಗಿದ್ದರೂ ನಾವಿಬ್ಬರೊಂದು
ಬಿಡಿಸಲಾಗದ್ದು ಅನಂತವೀ ಸಖ್ಯ
ನಿನ್ನೊಳಗೆ ನಾನಾಗಿ ನನ್ನೊಳು ನೀನು
ದೂರಾಗದೆ ಬೆರೆಯುವುದು ಮುಖ್ಯ

              ಶೈಲೂ.....
[28/1/2022, 2:26 pm] Dr. B. N. Shylaja Ramesh: ಕಿವಿಮಾತು
*********

ಅಂಧಕಾರವ ಸರಿಸು
ಧೃಡಹೆಜ್ಜೆಯನಿರಿಸು
ತಂತಾನೇ ಹೊಳೆಯುವುದು
ಬಾಳಲ್ಲಿ ಬೆಳಕು...

ನಡೆವ ಹಾದಿಯಲುಂಟು
ಕಲ್ಲು ಮುಳ್ಳುಗಳ ನಂಟು
ಸರಿಸುತ್ತ ನಡೆದರಿಹುದು
ಗೆಲುವೆಂಬ ಬೆಳಕು...

ನಿನ್ನನನುಸರಿಸುವವರಿಗೆ
ನೀನಾಗು ಮಾದರಿ
ನುಂಗುತ್ತ ಒಳಗೊಳಗೇ
ಒಡಲೊಳಗೆ ದಳ್ಳುರಿ...

ಹರಿತ ನಂಜು ನಾಲಿಗೆಗೆ
ಆಹಾರವಾಗಬೇಡ
ಗಟ್ಟಿ ಮಾಡಿಕೋ ಮನವ
ದುರುಳಜನರ ಮೆಟ್ಟಿನಿಲ್ಲು...

ಮೃದುಮನದ ಹೂ ನೀನು
ಮುಳ್ಳಾಗು ಒಮ್ಮೊಮ್ಮೆ
ಕಿತ್ತು ನೋಯಿಸುವವರ
ಕೈ ಚುಚ್ಚಿ ಧಿಕ್ಕರಿಸಿ ಬಿಡು...

ಸಜ್ಜಿಗೆಯ ಸಿಹಿಯಾಗು
ಸಜ್ಜನರ ಸವಿ ನುಡಿಗೆ
ತಲೆಬಾಗು ಸಂಯಮದಿ
ಗುರುಹಿರಿಯರಾಣತಿಗೆ...

ದಯೆಯಲಿಹುದು ಸದ್ಧರ್ಮ
ಅದುವೇ ಜೀವನದ ಮರ್ಮ
ಸದ್ವಚನದಾಂಮೃತಪಾನ
ಅದರ್ಶಜೀವನಕೆ ಸೋಪಾನ...
       ಶೈಲೂ....
[31/1/2022, 10:25 am] Dr. B. N. Shylaja Ramesh: ಓದುವುದಕಿರಲಿ ಸದಾಶಯ
ಬರಹಕದೇ ಬಹು ವಿಷಯ
ಅರಿವು ಮೂಡಿದರೆ ತಾನೇ
ಬರಹವೇರುವುದು ಮೇನೇ

ಹಳತೆನ್ನುವುದಾವುದೂ ಇಲ್ಲ
ಓದೇ ಅರಿವಾಗುವುದು ಎಲ್ಲ
ಬರಹಕದೆ ಭವ್ಯ ಅಡಿಪಾಯ
ಎತ್ತೆತ್ತರಕ್ಕೇರಿಸುವ ದ್ವಜಾಯ

ಸೃಜನಶೀಲತೆಯ ದಿವ್ಯಮಂತ್ರ
ಹವ್ಯಾಸವದೇ ಓದುವ ತಂತ್ರ
ಶೋಧಿಸಲೇಬೇಕು ಅಗೆದಗೆದು
ಬುದ್ಧಿಯರಳುವುದು ಜಿಗಿಜಿಗಿದು

ಅರಿವಿನಲರಳಲಿ ನವ್ಯಬರಹ
ಪಸರಿಸುತ ಬೆಳಗಲಿ ಇಹ
ವಿಸ್ತರಿಸುತ ಬಾಹ್ಯ ಅನಂತ
ಉಳಿಯಲಿ ಅಳಿಯದೆ ಶಾಶ್ವತ

      ಶೈಲೂ.....
[31/1/2022, 3:09 pm] Dr. B. N. Shylaja Ramesh: ಜೀವನಯಾನ
************

ಕೈಬೀಸಿ ಕರೆವ ಕನಸುಗಳ
ನಗೆಬೀರಿ ಸೆಳೆವ ಮನಸುಗಳ
ಜೊತೆ ಸಾಗುತಿದೆ ಜೀವನ ಯಾನ

ಹೊಂಗನಸ ತರುವ ಸ್ನೇಹಗಳ
ಮನಕೆ ಮುದ ತರುವ ಪ್ರೇಮಗಳ
ಜೊತೆ ಸಾಗಿದೆ ಜೀವನ ಯಾನ

ಬರುವ ಭರವಸೆಯ ನಾಳೆಗಳಿಗಾಗಿ
ಕಳೆದ ನಿನ್ನೆಗಳ ನೆನಪಿನ ಕುರುಹಾಗಿ
ಸಾಗುತಿದೆ ಜೀವನ ಯಾನ

ಮುದಕೊಟ್ಟ  ಸಾಂಗತ್ಯದ ಸವಿನೆನಪಿನಲ್ಲಿ
ಒತ್ತರಿಸಿ ಬಂದ ಸುಖದಲೆಯಲ್ಲಿ
ಸಾಗುತ್ತಿದೆ ಜೀವನ ಯಾನ

ಮದುರಭಾವಗಳ ತೆರೆಯ ಮರೆಯಲ್ಲಿ
ಮನದ ತಳಮಳದ ಅಲೆಅಲೆಯಲ್ಲಿ
ಸಾಗುತ್ತಿದೆ ಜೀವನಯಾನ....

           ಶೈಲೂ......
[1/2/2022, 6:39 pm] Dr. B. N. Shylaja Ramesh: ನನ್ನ ನಿನ್ನ ನಡುವೆ
ಇತ್ತೊಂದು ಸೇತುವೆ
ಬೇಕಿರಲಿಲ್ಲ ಮಾತ ಗೊಡವೆ
ಅರುಹುತ್ತಿತ್ತೆಲ್ಲ ಮನದ ಭಾವವೇ

ಸೇತುವೆಗೆ ಬೇಕಂತೆ ಸುಂಕ
ಕಟ್ಟದಿರೆ ಪರದೆಯ ಅಂಕ
ಸಂಧಿಸಲಿನ್ನೆಲ್ಲಿದೆ ತಾಣ.?
ಭಾವ ವಿನಿಮಯದ ಅಂಕಣ

ತಿಳಿಯಲ್ಹೇಗಿನ್ನು ಯೋಗಕ್ಷೇಮ
ಜೊತೆಗೆ ಲೇಖನಿಯ ಪರಾಕ್ರಮ
ಮುದಕೊಡುತ್ತಿತ್ತು ನಿನ್ನ ಬರಹ
ಇದ್ದಂತನಿಸುತ್ತಿತ್ತು ನಿನ್ನ ಸನಿಹ

ವಾಟ್ಸಾಪ್ ಫೇಸ್ಬುಕ್ ನಾನೊಲ್ಲೆ
ಅದರಿಂದಾದವಾಂತರ ನೀ ಬಲ್ಲೆ
ಮತ್ತೆಲ್ಲಿ ಸಿಗುವೆಹೇಳು ಗೆಳೆಯಾ
ನಿನ್ನ ಬರಹದಭಿಮಾನಿ ನಾ ಬಲ್ಲೆಯಾ

              ಶೈಲೂ....
[4/2/2022, 1:42 pm] Dr. B. N. Shylaja Ramesh: #ನನ್ನೆದೆಯ_ಭಾವಗಳೇ

ಎಲ್ಲಿ ಅವಿತಿರುವಿರಿ ನನ್ನೆದೆಯ ಭಾವಗಳೇ
ಮನಸಿನರಮನೆಯ ತೆರವುಗೊಳಿಸಿ
ಮನದ ಮಾತನು ಮರೆಸಿ ಮೌನವಾಗಿಹಿರೇಕೆ.?
ಭಾವನೆಯ ತಂತುಗಳ ಬರಿದುಗೊಳಿಸಿ.!

ಭಾವನೆಯೇ ಬರಡಾದರಿನ್ನೇನಿಹುದು ತಿರುಳು
ಮನದ ಮಲ್ಲಿಗೆಯು ಅರಳಲೆಂತು.?
ಸ್ಫೂರ್ತಿಯ ಸೆಲೆಯೇ ಬತ್ತಿಹೋದಂತಾದಾಗ
ನಗೆಮಲ್ಲಿಗೆಯು ಕಂಪು ಬೀರಲೆಂತು.?

ಮುನಿಸ ತೊರೆದು ಮತ್ತೆ ಒಂದಾಗಿ ಭಾವಗಳೇ
ಎದೆನೆಲದಲ್ಲಿ ಸವಿಗನಸು ಬಿತ್ತಿ..!
ಎನ್ನೆದೆಯ ಗುಡಿಯಲ್ಲಿ ನೆಲೆಸಿರಿ ಸತತವೂ
ಬೆಳಗಿ ಸುಜ್ಞಾನ ದೀವಿಗೆಯ ಹೊತ್ತಿ.!

ವಿಷಯಗಳನಂತ ಸಾಲು ಲಗುಬಗೆಯಲಿ ನಿಂತು
ಕಾದಿಹವು ಬರಹ ರೂಪದಿ ತೆರೆಯೇ.!
ಮರೆಯಾಗಿದೆ ಅದೆಲ್ಲೋ ಅರಿವಿನಕ್ಕರಗಳು ಸಿಗದೆ
ಬಿಂಬಿಸಲು ಸೂಕ್ತ ಪದಗಳ ಅರಿಯೇ.!

ಸದ್ವಿಚಾರಗಳನ್ನು ಜೊತೆಗೆ ಬದುಕು ಬವಣೆಗಳನ್ನು
ತೆರೆದಿಡಬೇಕು ಬರಹದೆ ಭವ್ಯವಾಗಿ.!
ಬಿಡಿಸಿ ಹೇಳಲು ಅರಿಯೇ ಮರೆತು ಸುಮ್ಮನಿರಲಾರೆ
ಸೋಲು ಸಹಿಸುತ್ತಿರುವೆ ಮೌನವಾಗಿ.!

ಮನದ ಮಿಡಿತವನರುಹೆ  ಶಬ್ಧಗಳೇ ಸಿಗದಾಗ
ಮೌನವನು ಹೊದ್ದ ಏಕಾಂಗಿ ನಾನು.!
ಭಾವತಂತುಗಳು ಬಳಿಸಾರಿ ತಾ ಬರಲು
ಜೊತೆಗೆನ್ನ ಸದ್ಭಾವ ಬೆರೆಸುವೆನು.!

ಸ್ಪೂರ್ತಿಯುಕ್ಕುವ ಸೆಲೆಯು ಎಲ್ಲಿಹುದೋ ಕಾಣೆ
ಅಗೆದು ಬಗೆಯಬೇಕೇನು ಅರಿವಿನೊಡಲು.?
ಒರೆಗ್ಹಚ್ಚಿದೊಡನೆ ಜೊತೆಯಾಗಲಿ ಭಾವಗಳು
ತುಂಬಿ ತುಳುಕಲಿ ನಿತ್ಯ ನನ್ನ ಮಡಿಲು.!

ಬಂದುಬಿಡಿ ಮತ್ತೇ ನನ್ನೆದೆಯ ಭಾವಗಳೇ
ಸಪ್ತಸಾಗರದಾಚೆ ಅವಿತಿದ್ದರೂ..!
ಮೌನವನು ತುಂಡರಿಸಿ, ಮೂಕಭಾವವನಳಿಸಿ
ಹೆಸರುಳಿಸಿರಿ ನನ್ನ ಉಸಿರಳಿದರೂ..!

            #ಶೈಲೂ....
[4/2/2022, 1:45 pm] Dr. B. N. Shylaja Ramesh: #ನನ್ನೆದೆಯ_ಭಾವಗಳೇ

ಎಲ್ಲಿ ಅವಿತಿರುವಿರಿ ನನ್ನೆದೆಯ ಭಾವಗಳೇ
ಮನಸಿನರಮನೆಯ ತೆರವುಗೊಳಿಸಿ
ಮನದ ಮಾತನು ಮರೆಸಿ ಮೌನವಾಗಿಹಿರೇಕೆ.?
ಭಾವನೆಯ ತಂತುಗಳ ಬರಿದುಗೊಳಿಸಿ.!

ಭಾವನೆಯೇ ಬರಡಾದರಿನ್ನೇನಿಹುದು ತಿರುಳು
ಮನದ ಮಲ್ಲಿಗೆಯು ಅರಳಲೆಂತು.?
ಸ್ಫೂರ್ತಿಯ ಸೆಲೆಯೇ ಬತ್ತಿಹೋದಂತಾದಾಗ
ನಗೆಮಲ್ಲಿಗೆಯು ಕಂಪು ಬೀರಲೆಂತು.?

ವಿಷಯಗಳನಂತ ಸಾಲು ಲಗುಬಗೆಯಲಿ ನಿಂತು
ಕಾದಿಹವು ಬರಹ ರೂಪದಿ ತೆರೆಯೇ.!
ಮರೆಯಾಗಿದೆ ಅದೆಲ್ಲೋ ಅರಿವಿನಕ್ಕರಗಳು ಸಿಗದೆ
ಬಿಂಬಿಸಲು ಸೂಕ್ತ ಪದಗಳ ಅರಿಯೇ.!

ಸದ್ವಿಚಾರಗಳನ್ನು ಜೊತೆಗೆ ಬದುಕು ಬವಣೆಗಳನ್ನು
ತೆರೆದಿಡಬೇಕು ಬರಹದೆ ಭವ್ಯವಾಗಿ.!
ಬಿಡಿಸಿ ಹೇಳಲು ಅರಿಯೇ ಮರೆತು ಸುಮ್ಮನಿರಲಾರೆ
ಸೋಲು ಸಹಿಸುತ್ತಿರುವೆ ಮೌನವಾಗಿ.!

ಮನದ ಮಿಡಿತವನರುಹೆ  ಶಬ್ಧಗಳೇ ಸಿಗದಾಗ
ಮೌನವನು ಹೊದ್ದ ಏಕಾಂಗಿ ನಾನು.!
ಭಾವತಂತುಗಳು ಬಳಿಸಾರಿ ತಾ ಬರಲು
ಜೊತೆಗೆನ್ನ ಸದ್ಭಾವ ಬೆರೆಸುವೆನು.!

ಸ್ಪೂರ್ತಿಯುಕ್ಕುವ ಸೆಲೆಯು ಎಲ್ಲಿಹುದೋ ಕಾಣೆ
ಅಗೆದು ಬಗೆಯಬೇಕೇನು ಅರಿವಿನೊಡಲು.?
ಒರೆಗ್ಹಚ್ಚಿದೊಡನೆ ಜೊತೆಯಾಗಲಿ ಭಾವಗಳು
ತುಂಬಿ ತುಳುಕಲಿ ನಿತ್ಯ ನನ್ನ ಮಡಿಲು.!

ಮುನಿಸ ತೊರೆದು ಮತ್ತೆ ಒಂದಾಗಿ ಭಾವಗಳೇ
ಎದೆನೆಲದಲ್ಲಿ ಸವಿಗನಸು ಬಿತ್ತಿ..!
ಎನ್ನೆದೆಯ ಗುಡಿಯಲ್ಲಿ ನೆಲೆಸಿರಿ ಸತತವೂ
ಬೆಳಗಿ ಸುಜ್ಞಾನ ದೀವಿಗೆಯ ಹೊತ್ತಿ.!

ಬಂದುಬಿಡಿ ಮತ್ತೇ ನನ್ನೆದೆಯ ಭಾವಗಳೇ
ಸಪ್ತಸಾಗರದಾಚೆ ಅವಿತಿದ್ದರೂ..!
ಮೌನವನು ತುಂಡರಿಸಿ, ಮೂಕಭಾವವನಳಿಸಿ
ಹೆಸರುಳಿಸಿರಿ ನನ್ನ ಉಸಿರಳಿದರೂ..!

            #ಶೈಲೂ....
[6/2/2022, 8:06 am] Dr. B. N. Shylaja Ramesh: ಕಳೆದುಹೋಗಿದೆ ಹೃದಯ
*********************

ಎಲ್ಲೋ ಕಳೆದಿದೆ ಗೆಳೆಯ
ಕನಸು ತುಂಬಿದ ಹೃದಯ
ನೆನಪಿನಂಗಳದಿ ಚಿಮ್ಮುತ್ತಿರುವ
ಕಾರಂಜಿಯಲಿ ನಾನಲಿಯುವಾಗ

ಎಲ್ಲೋ ಕಳೆದಿದೆ ಗೆಳೆಯ
ಕಂಡೊಡನೇ ಉಲಿವ  ಹೃದಯ
ಜಾರಿಹೋಗಿದೆಯೇನೋ
ಕಣ್ಣಂಚಲಿ ಮಿಂಚು ಸರಿದಾಗ

ಎಲ್ಲೋ ಕಳೆದಿದೆ ಗೆಳೆಯ
ಹುಚ್ಚು ಮನಸಿನ ಹೃದಯ
ನೀನುಲಿದ ಸ್ವರಮಾಧುರ್ಯದ
ಸವಿಜೇನ ಸವಿಯುವಾಗ

ಎಲ್ಲೋ ಕಳೆದಿದೆ ಗೆಳೆಯ
ನಿನ್ನ ಬಿಂಬ ತುಂಬಿದ.ಹೃದಯ
ನೀನೆದುರು ನಿಂತು ಹುಸಿನಗೆಯ
ಹೂಬಾಣ ಹೂಡಿದಾಗ

ಎಲ್ಲೆಲ್ಲಿ ಹುಡುಕಲಿ ಗೆಳೆಯ
ಕಾಣದಾಗಿದೆ ಬಡ ಹೃದಯ
ಸಿಕ್ಕರೆ ಬಚ್ಚಿಡು ಜೋಪಾನವಾಗಿ
ಹೆಚ್ಚೇನು ಹೇಳಲಿ ಹೆಜ್ಜೆಹಾಕು 
ಜೊತೆಜೊತೆಯಾಗಿ

          ಶೈಲೂ......
[6/2/2022, 8:08 am] Dr. B. N. Shylaja Ramesh: #ನಾನೇಕೆ_ಬರೆಯುತ್ತೇನೆ.?

ಇನ್ನೂ ಅರ್ಥವಾಗಿಲ್ಲ ನನಗೆ ನಾನೇಕೆ ಬರೆಯುತ್ತೇನೆ.?
ಏನಿದ್ದೀತು..?  ವಿಚಾರ ಅರಿಯಲು ಹೆಣಗುತ್ತಿದ್ದೇನೆ
ಭಾವಗಳ ಬಿಂಬಿಸಲು ಪದಪುಂಜ ಸಿಕ್ಕಿದ್ದರಿಂದಿರಬಹುದೇ.?
ಮನದ ಭಾವನೆಯ ಹೊರಕಾಕಿ ನಿಶ್ಚಿಂತಳಾಗಲಿರಬಹುದೇ.?

ಮಡುಗಟ್ಟಿದ ನೋವುಗಳನ್ನೆಲ್ಲ ಪದಗಟ್ಟಲಿ ಬಂಧಿಸಿಟ್ಟು
ಮನದಲುದ್ದೀಪಿಸಿದ ಪ್ರೇಮ ಭಾವ ಸರಾಗ ಹರಿಯಬಿಟ್ಟು
ಸ್ನೇಹ ಸಿಂಚನದಿ ಮನ ಪ್ರಫುಲ್ಲವಾಗಲೆಂದು ತೆರೆದಿಟ್ಟು
ಬರೆಯುತ್ತಿರಬೇಕು ಬಹುಶಃ ಭಾವನೆಗಳಿಗೆ ಬೆಲೆಕೊಟ್ಟು..!

ಕಂಡ ಕನಸುಗಳಿಗೆ ಬಣ್ಣದ ರೆಕ್ಕೆಕಟ್ಟಿ ಸಿಂಗರಿಸಿ ಹಾರಿಸಿ
ನೆನಪುಗಳು ಗರಿಬಿಚ್ಚಿ ಕುಣಿಯಲು ಶಾಂತದಿಂದಾಸ್ವಾದಿಸಿ
ಕಂಡು ಕೇಳಿದ ಕಥೆ, ನಿಜಾಯತಿಯ ಆಸ್ಥೆಯಲಿ ವರ್ಣಿಸಿ
ಓದುಗರ ಮುಂದಿಡಲು ಹಪಹಪಿಸುತ್ತಿರಬೇಕು ಮನ ಬಯಸಿ.!

ಅದೆಷ್ಟೋ ವಿಷಯಗಳೆಡೆ ಭಾವಸಂಘರ್ಷ ಎದೆಯೊಳಗೆ
ಮೆಲುಕಲಿವೆ ಅನೇಕ ಸಿಹಿನೆನಪ ಪಲಕು ಮನದೊಳಗೆ
ಬವಣೆಗಳ ಸುತ್ತ ಭಾವುಕ ಮನದ ನೋವಿನಲಳ ಹುದುರೊಳಗೆ
ತತ್ತರಿಸಿದ ಭಾವದೆಳೆಗಳು ಹೊರಹೊಮ್ಮಿರಬೇಕು ಪದದೊಳಗೆ..!

ಶ್ರೀವಾಣಿಯ ಕೃಪೆಗೊಂದಿಷ್ಟು ಭಕ್ತಿಸಮರ್ಪಣಾ ಭಾವವಿರಬಹುದು
ಹೆತ್ತು ಕೈಪಿಡಿದು ನಡೆಸಿದವರಿಗೆ ಕೃತಜ್ಞತಾಭಾವವಿರಬಹುದು
ಮೆಚ್ಚಿ, ಬದುಕಿತ್ತ ಪ್ರೀತಿಯೆಡೆಗೆ ಆರಾಧನಾಭಾವವಿರಬಹುದು
ಈ ಎಲ್ಲ ರಸಭಾವಗಳು ಕಾವ್ಯವಾಗರಿಯುತ್ತಿರಬಹುದು..!

ಯಾರು ಮೆಚ್ಚಲೆಂದಲ್ಲ ಬರಹ, ಎಲ್ಲ ಭಾವುಕ ಮನದ ಮಾತು
ಮೆಚ್ಚಿ ಹರಸುವ ಮಂದಿಯೊಳಗೆ ಸ್ನೇಹಪೂರ್ವಕ ಬೆರೆತು
ಪ್ರೌಢ, ಭಾವುಕ,ಬಾಲಿಶ ಏನಿದೆಯೋ ಅರಿಯೇ ತಲೆಯೊಳಗೆ
ಬರೆದಿದ್ದೆಲ್ಲವೂ ಸಮರ್ಪಿತ ಎನ್ನೊಡೆಯ ಮಾಧವನ ಪದತಲಕೆ

               #ಶೈಲೂ......
[6/2/2022, 2:36 pm] Dr. B. N. Shylaja Ramesh: #ಭಿನ್ನಳಲ್ಲ_ವಿಭಿನ್ನ

ಕೃಷ್ಣನೊಲುಮೆಯ ಪಡೆದ ಕೃಷ್ಣೆ ನಾ
ಮನಸು ಮಾತ್ರ ಹೊಳೆವ ಚಿನ್ನ
ಪ್ರೀತಿಸುವ ಹೃದಯಕ್ಕಾಕುವೆ ಕನ್ನ
ಎಲ್ಲರಂತಲ್ಲ ನಾ ಸ್ವಲ್ಪ ಭಿನ್ನ..!

ಕಲಿಕೆಯಲಿಹುದು ಅತ್ಯಾಸಕ್ತಿ
ವಿಷಯಗಳಲೆಕೋ ನಿರಾಸಕ್ತಿ😌
ಬಯಸುತ್ತಿದೆ ಮನವೇಕೋ ವಿರಕ್ತಿ
ಎಲ್ಲರಂತಲ್ಲ ನಾ ತುಸು ವಿಭಿನ್ನ..!

ಸ್ವಚ್ಛ ಸ್ನೇಹಕೆ ಸದಾ ಜೈ ಜೈ ಜೈ
ಆದರಿಸುವ ಮನಗಳಿಗೆ ಮುಗಿವೆ ಕೈ
ಸವಾಲು, ಜವಾಬಿಗೂ ಸೈ ಸೈ ಸೈ
ವಿಭಿನ್ನತೆಯಲಿ ನಾನು ಮೇಲುಗೈ

ಕೊಂಕುಮಾತಿಗೆ ಮುದುಡುತ್ತದೆ ಮನ
ಆತ್ಮೀಯತೆಗೆ ತಲೆಬಾಗುವ ಗುಣ
ಎದುರಾಡುವವಳಲ್ಲ ವಿನಾಕಾರಣ
ಎಲ್ಲರಂತಲ್ಲ ನಾ ತುಸುವೇ ಭಿನ್ನ..!

ವಿಷ ಕಾರುವವರೊಡನೆ ಅಂತರ
ಪ್ರೀತಿಸುವವರೊಡನೆ ಸ್ನೇಹ ನಿರಂತರ
ಮೇಲು ಕೀಳಿಲ್ಲ ಎಲ್ಲರಲಿ ಸಮಾನಾಂತರ
ಎಲ್ಲರಂತಲ್ಲ ನಾ ಸ್ವಲ್ಪ ಭಿನ್ನ..!

ಒಳಗೊಂದು ಹೊರಗೊಂದು ನಾನೊಲ್ಲೆ
ನಂಬಿಕೆಗಾಗಿ ಪ್ರಾಣವನೂ ಕೊಡಬಲ್ಲೆ
ಅರಿತವರಿಗೆ ನಾ ಕಂಪು ಬೀರುವ ಮಲ್ಲೆ😊
ಮನವೊಪ್ಪದೆಡೆಯಲ್ಲರೆಕ್ಷಣವೂ ಇರಲೊಲ್ಲೆ

ಹೆಚ್ಚು ಮಾತಿನವಳು ನಾನಲ್ಲ
ಮಾತನಾಡಿದರೆ ಸಿಹಿಸಿಹಿ ಬೆಲ್ಲ
ಮೇಲ್ಕಾಣಿಸುವಷ್ಟೇನೂ ಒರಟಲ್ಲ
ವಿಭಿನ್ನಳು ನಾನು ಎಲ್ಲರಂತಲ್ಲ..!

ಸಂಬಂಧಗಳಿಗೆ ಬೆಲೆಕೊಡುವವಳು
ಸನ್ಮಾರ್ಗದಲ್ಲೇ ನಡೆಯುವವಳು
ದೂರಾದವರಿಂದ ನಾ ಬಹಳವೇ ದೂರ
ದ್ವೇಷಕ್ಕೆ ಕಾಯ್ದುಕೊಳ್ಳುವೆ ಅಂತರ.!

ನನ್ನಲ್ಲೂ ಇದೆ ಅಲ್ಪಸ್ವಲ್ಪ ಅಹಂಭಾವ
ಕಾರಣ ; ನಾನೂ ಮನುಷ್ಯಳೇ ಅಲ್ಲವಾ?
ಯಾರಿಗೂ ಕೇಡು ಬಯಸುವವಳಲ್ಲ..
ಕೇಡೆಣಿಗೆಸುವವರಿಂದ ಸರಿವೆ ಮೆಲ್ಲ.!

ಕನಸುಗಳಿವೆ ಎನಗೆ ನೂರಾರು
ನನಸಾಗುವೆಡೆ ಸಾಗಬೇಕು ಜರೂರು
ಕೈಗೂಡದಿದ್ದರೂ ಇಲ್ಲ ತಕರಾರು
ಕಾರಣ; ಸಾಂಸಾರಿಕ ನೆಮ್ಮದಿಯೇ ಉಸಿರು.!

ಮೇಲಿಹ ಹಣೆಬರಹ ಬರೆದವನು
ಪಾಲಿಸುವೆ ಅವನಿತ್ತನಾಣತಿಯನು
ಭಿನ್ನತೆಯಲೂ ವಿಭಿನ್ನವಾಗಿರಿಸೆನ್ನನು
ತೋರುತಿಹ ಸದಾ ಸನ್ಮಾರ್ಗವನು.!🙏

         ಶೈಲೂ.......
[7/2/2022, 10:06 am] Dr. B. N. Shylaja Ramesh: #ಮರೀಚಿಕೆ

ಬಾಯಾರಿ ಬಳಲಿದ್ದ
ಭೂಮಿಯಂತಾಗಿತ್ತು ನನ್ನ ಮನ
ಸೋನೆ ಮಳೆಯ ಸಿಂಚನದಂತೆ
ಪ್ರೀತಿ ಹೊಳೆ ಹರಿಸಿದ್ದೆ ನೀನಾದಿನ
ಉಬ್ಬಿಹೋಗಿದ್ದೆ ಮುದ್ದು ಮಾತಿಗೆ
ತುಂಬಿ ಕಣ್ಣಲ್ಲಿ ನೂರಾರು ಕನಸು
ಆಸೆ ತೋರಿಸಿ ಮಾಯವಾದದ್ದೇಕೆ
ನುಚ್ಚುನೂರಾಯ್ತು ನನ್ನೀ ಮನಸು
ಆಶಾಗೋಪುರವೆಂದೆಣಿಸಿದ್ದೆ
ನೀನಾದೆ ಬರಿದೇ ಮಾಯಾಜಿಂಕೆ
ಆಸೆಗಳ ಸುತ್ತ ನಾ ಓಡುತ್ತಿದ್ದೆ
ಅರಿವಾಯ್ತು ಅದೊಂದು ಮರೀಚಿಕೆ
ಶೋಕದಾಗಸದಲ್ಲಿ  ಮಿಣುಕುತ್ತಿದ್ದ
ಭರವಸೆಯ ಚುಕ್ಕಿ ಮರೆಯಾಯಿತೇನು
ಕಾರಿರುಳ ಕಿಂಡಿಯಲಿ ಹೊಳೆಯುತ್ತಿದ್ದ ಮಿಂಚು
 ಕೈಗೆಟುಕದ ಮರೀಚಿಕೆಯೇನು

      ಶೈಲೂ......
[8/2/2022, 4:10 pm] Dr. B. N. Shylaja Ramesh: ಗೆಳೆಯಾ....
ನೀ ಬರುವ ದಾರಿಯಲಿ..
ಗದ್ದಲದ ಗೌಜಿಲ್ಲ
ಕಾಯುವ ಕಾತರದ ಕ್ಷಣಗಳಿಲ್ಲ..
ನಿನ್ನಿರುವಿಕೆಯ ಒನಪಿಲ್ಲ ಬಿಸುಪಿಲ್ಲ
ಕದ್ದು ನೋಡುವ ಕಣ್ಣುಗಳಿಲ್ಲ
ಕಾಯುವಿಕೆಯಲ್ಲಿ ಕೌತುಕದ ಅಮಲಿಲ್ಲ
ಕಣ್ಣು ಹಾಯಿಸಿದಷ್ಟೂ 
ನೀ ಬಾರಲೇ ಇಲ್ಲ...

           ಶೈಲೂ....
[9/2/2022, 3:46 pm] Dr. B. N. Shylaja Ramesh: ಪ್ರೀತಿಯು ನೀನೇ ಪ್ರಾಣವೂ ನೀನೇ ಸಖೀ
ನೀನಿಲ್ಲದೀ ಜೀವನದಿ ಹೇಳು ನಾನೆಂಥ ಸುಖೀ.?
ನಾನಿನ್ನ ಮರೆತರಂದೇ, ಪ್ರೀತಿ ಹೆಸರಿಗೇ ಮರಣ
ನಾನಿನ್ನೂ ಜನಮನದಿ ನೆಲೆಸಿರಲು ನೀನೇ ಕಾರಣ
ರಾಧೇ, ನೀನೆ ಸ್ವಚ್ಛ ನಿಷ್ಕಲ್ಮಶ ಪ್ರೀತಿಗೆ ಹೆಸರು
ನಾನೆಲ್ಲಿದ್ದರೂ ನೀನೇ ಸಖೀ ಈ ಮಾಧವನ ಉಸಿರು..!

             ಶೈಲೂ.....
[15/2/2022, 10:45 am] Dr. B. N. Shylaja Ramesh: ಎಲ್ಲಿ ಜಾರಿತೋ ಮನವು

ಮುಂಜಾನೆ ರವಿ ಉದಯದ ಸಮಯ
ಬಲಗಾಲಿಟ್ಟು ಹೊಕ್ಕೆ ನೀ ನನ್ನ ಮನೆಯ
ಕಂಡಂದೇ ಬೆರಗಾದೆ ಆ ನಿನ್ನ ನಿಲುವು
ಎಲ್ಲಿ ಜಾರಿ ಹೋಯಿತೋ ನನ್ನ ಮನವು

ನಕ್ಕರೆ ಮುತ್ತು ಸುರಿದಂತ ಚೆಲುವು
ಚಿನ್ನಕ್ಕಿಂತಲೂ ಹೊಳಪಾದ ಮನವು
ತಲೆದೂಗುವಂತೆ ಮಾಡುವ ಆ ಮಾತಿನ ಮೋಡಿ
ಜಾರಿ ಹೋಯಿತು ಮನವು ಆ ಚೆಲುವ ನೋಡಿ

ಮಿಂಚಿಗಿಂತ ಹೊಳಪು ಆ ಕಣ್ಣ ಕಾಂತಿ
ತೆರೆಗೆ ಸರಿಸುವಂತಿದೆ ಮನದ ಭ್ರಾಂತಿ
ಕಂಡಾಕ್ಷಣವೇ ಜಾರಿಹೋಯಿತು ಮನವು
ಹಿರಿಯರೊಪ್ಪಿಗೆಯಲಿ ಒಂದಾಗಲಿ ತನುಮನವು

            ಶೈಲೂ...
[16/2/2022, 7:45 pm] Dr. B. N. Shylaja Ramesh: ಅವಳು....
ಎಂಥ ಮಾತು ಹೊರಗೆ ಬಂತು, ಹೇಳಿದು ಸರಿಯೇ
ಮುಗ್ಧ ಹೆಣ್ಣು ನಾನು ಎಂದು ನೀನೇಕೆ ಅರಿಯೇ.?
ಮಾನ ಬಿಟ್ಟು ಮನವ ಕೊಟ್ಟು ನಾನು ಉಳಿವೆನೇ.?
ಅಪ್ಪ ಕಂಡರೀಗ ಮತ್ತೆ ನನ್ನ ಹೊರಗೆ ಬಿಡುವನೇ

ಅವನು...
ಮನಸನಷ್ಟೇ ಕೇಳಿದ್ದು ನಾನು, ನಿನ್ನ ಪ್ರಾಣವಲ್ಲ
ಜತನ ಮಾಡಿ ನೋಡಿಕೊಂಬೆ, ಕಣ್ಣೀರು ತರಿಸಲ್ಲ
ನಿನಗೆ ಇಷ್ಟ ಇದ್ದರೇಳು, ಮಾವನ ಮಣಿಸುವೆ
ಮುದ್ದು ಅಳಿಯನ ತೆರದಿ ಅವರ ಮನವ ತಣಿಸುವೆ

ಅವಳು...
ಅಪ್ಪ ಮೆಚ್ಚಿದರಾಯಿತಿನ್ನು ಎನ್ನ ಮನಸು ನಿನ್ನದೇ
ಧಾರೆಯೆರೆದು ಕೊಟ್ಟ ಮೇಲೆ ನನ್ನ ಬದುಕು ನಿನ್ನದೇ
ಅರಿತು ಬೆರೆತು ಜೊತೆಗೆ ಬಾಳ್ವೆ, ಏನೇ ಬಂದರೂ
ಎದೆಯ ಮಿಡಿತ ಮನದ ತುಡಿತ ನಿನಗೇ ಮೀಸಲು

         ಶೈಲೂ.....
[18/2/2022, 4:31 pm] Dr. B. N. Shylaja Ramesh: ಚಿತ್ರಕ್ಕೊಂದು ಕವನ ##

ವಿಚಿತ್ರ - ವಿಸ್ಮಯ
***************
ಇದೆಂಥಾ ವಿಚಿತ್ರ ವಿಸ್ಮಯ ಲೋಕ
ಪ್ರಕೃತಿ ನೀಡಿದ ಕೊಡುಗೆ ಅದ್ಭುತ ನಾಕ
ಒಂದೇ ಬೊಡ್ಡೆಯಿದ್ದ ಕಲ್ಪವೃಕ್ಷವೂ
ಟಿಸಿಲೊಡೆದು ಕೊಂಬೆಪಡೆವುದದ್ಭುತವು

ಗರಿಗಳಿರುತಿತ್ತು ನಿಜ ಹಲವಾರು
ಇದೇನಿದು ಇಲ್ಲಿ ಕೊಂಬೆಗಳ ತೇರು
ಗೊನೆಗಳ ತುಂಬ ಕಾಯಿಗಳ ಕಾರುಬಾರು
ಸಹಜತೆಗೇ ಸವಾಲೆಸೆದಿದೆ ನೋಡು

ಬೆರಿನಿಂದ್ಹಿಡಿದು ನಾರಿನವರೆಗೂ ಬಹೂಪಯೋಗಿ
ತೆಂಗಿಲ್ಲದೇ ಬಾಣಸ ನೀರಸವಾಗಿ
ಉಣಲಾಗದಾವ ಖಾದ್ಯ ರಸಹೀನವೇ
ಶುಭಾಶುಭಗಳಿಗೆ ಶ್ರೇಷ್ಟ ನಾರಿಕೇಳವೆ..!!

ಕಣಕಣವೂ ಮನುಜನಿಗಾಗಿ ಮೀಸಲು
ಕಾಂಡದಿಂದ್ಹಿಡಿದು ಕರಟದವರೆಗೂ
ಎಳನೀರು ಆರೋಗ್ಯಕರ ಆಪ್ಯಾಯಪೇಯ
ಸವಿದಾಗ ಉಲ್ಲಾಸ, ಆಯಾಸ ಮಾಯ

ಆ ದೇವನ ಸೃಷ್ಟಿಯಲಿ ಎಲ್ಲವೂ ವಿಶಿಷ್ಟ
ನಿಯಾಮಕನವ ನೀಡಿದುದೇ ಪರಮ ಪವಿತ್ರ
ಕಲ್ಪವೃಕ್ಷವಿದು ಸಕಲವೀವ ಕಾಮಧೇನು
ಅಂತಾಗಬೇಕು ಮನುಜ ಉಪಯೋಗಿಯಾಗಿ ತಾನು

                 ಶೈಲೂ......
[18/2/2022, 4:35 pm] Dr. B. N. Shylaja Ramesh: #ಶಿಶುಗೀತೆ

#ತಿಳಿಯುವಾ_ಬಾ

ಹೇ ಚಿನ್ನು ನೋಡು ಬಾ ಆಕಾಶ
ಅದೇನಲ್ಲಿ ಮಿನುಗುತಿಹ ಪ್ರಕಾಶ.?
ಉರಿಯುತಿದೆ ಅಲ್ಲಿ ಕೆಂಡದುಂಡೆ.!
ಉರಿದರೂ ಅದು ಕಪ್ಪಾಗಿಲ್ಲ ನೋಡೇ.!

ಬಣ್ಣವೇನೋ ಚಂದ ಆ ಕೆಂಪು ಕೆಂಪು
ಬರಬರುತ್ತಾ ಹೇಗಾಗುತ್ತೆ ತಂಪುತಂಪು.?
ಉರಿದುರಿದು ಮಾಯವಾಯ್ತು ಸಂಜೆಗೆ
ಕೆಂಪಗಿದ್ದದ್ದು ರಾತ್ರಿ ಹೇಗಾಯ್ತು ಬೆಳ್ಳಗೆ.?

ಬೆಳಕಲ್ಲಿ ರವಿಯಂತೆ ರಾತ್ರಿ ಚಂದ್ರ
ಬೆಳಕೀವವನೊಬ್ಬ, ಇನ್ನೊಬ್ಬ ಬಾನಲಾಂದ್ರ.!
ಒಂದೇ ಆಕಾಶ..ಆಳುವವರೇಕಿಬ್ಬರು.?
ಈ ಕತ್ತಲಬೆಳಕಾಟಕೆ ನಾನಾದೆ ಬೆಬ್ಬರು..!

ಇದೆಂಥಾ ಕೌತುಕ....! ಅಲ್ಲವೇನು.?
ಸವಿವರ ಅರಿತುಕೊಳ್ಳಬೇಕಿದೆ ನಾನು
ತಿಳಿಯಬೇಕೆಂದರೆ ಓದಬೇಕು ವಿಜ್ಞಾನ
ಬಾ.. ಓದಿ ಅರಿಯುವಾ ಸುಜ್ಞಾನ..!

          ಶೈಲೂ.....
[18/2/2022, 4:35 pm] Dr. B. N. Shylaja Ramesh: #ಸಿಂಕೇನ್_ಕಾವ್ಯಸ್ಪರ್ಧೆ

#ಅಮ್ಮ

ಅಮ್ಮ
ಮಮತಾಮಯಿ ಕರುಣಾಪೂರ್ಣೆ
ಅಮೃತವುಣಿಸಿ ಬಿಗಿದಪ್ಪಿ ಕಾಯುವಳು
ಮಗುವ ಮುದ್ದಿಸಿ ಲಾಲಿ ಹಾಡುವಳು
ಜನನಿ..!

#ಗುರು

ಗುರು
ಜ್ಞಾನವಾರಿಧಿ ಕರುಣಾಕರ
ಅಕ್ಷರವಿತ್ತು ಕಲಿಸಿ ಕಾಯುವರು
ಕೈಹಿಡಿದು ತಿದ್ದಿ ಬರೆಸಿ ಬೋಧಿಸುವ
ಜ್ಞಾನದಾತ..!

#ಅಣ್ಣ

ಅಣ್ಣ
ಪಿತೃಸಮಾನ ಸನ್ಮಿತ್ರ
ಪ್ರೀತಿಯಿತ್ತು ಆದರಿಸಿ ಪೋಷಿಸುವನು
ತವರಿನ ಸಿರಿಗೆ ಅರ್ಥವಿತ್ತು ಬೆಳಕಾದವ
ಹಿರಿಯಣ್ಣ..!

        #ಶೈಲೂ
[18/2/2022, 4:36 pm] Dr. B. N. Shylaja Ramesh: #ಜಡೇಕವನ

#ಶೀರ್ಷಿಕೆ

#ನನ್ನೆದೆಯಲಿ_ಅವಳ_ನಗುವೇ_ಹಾಡಾಯಿತು

ದೇವತೆಯಂತವಳು ಗಗನದಿಂದಿಳಿದ ಅಪ್ಸರೆ
ಅಪ್ಸರೆಯಂತ ಚೆಲುವವಳದು ನಾನವಳ ಕೈಸೆರೆ
ಕೈಸರೆಯಾದೆನವಳ ಪ್ರೇಮವಾರಿಧಿಯಲ್ಲಿ ಮಿಂದು
ಮಿಂದೆದ್ದೆ ಖುಷಿಯಲ್ಲಿ ನನ್ನವಳೇ ಪ್ರೇಮದ ಸಿಂಧು

ಸಿಂಧೂರ ಹೊಳೆಯುತಿದೆ ಅವಳ ಹಣೆಯನ್ನು ಬೆಳಗಿ
ಬೆಳಗ ಬಂದವಳವಳು ಬದುಕ ಆ ನನ್ನ ಹುಡುಗಿ
ಹುಡುಗಿಯವಳು ನನ್ನ ಮನದನ್ನೇ ಬೇಲೂರ ಬಾಲೆ
ಬಾಲೆ ಹದಿನಾರರ ತರುಣಿ ಮೊಗದೇ ಮುಂಗುರುಳ ಮಾಲೆ

ಮಾಲೆ ಹಾಕಲಿದೆ ಕೊರಳಿಗೆ ಹಿರಿಯರೊಪ್ಪಿಗೆ ಪಡೆದು
ಪಡೆದೆನವಳ ಸಂಗ ಅವಳ ಅದಮ್ಯ ಪ್ರೀತಿಗೆ ಮಣಿದು
ಮಣಿದೆ ಅವಳ ಸೊಗಸಾದ ಮುಖಾರವಿಂದಕೆ
ಅರವಿಂದದಂತೆಯೇ ಸೊಬಗು ಅರಳಿ ನಗುವ ನಯನಕೆ

ನಯನಗಳೆರಡು ಸೆಳೆದೆಳೆದು ಮಾಡಿವೆ ಮೋಡಿ
ಮೋಡಿ ನಗುವೆಸೆದು ನನ್ನೆಡೆಗೆ ಕಾಡುತಿಹಳು ನೋಡಿ
ನೋಡಿ, ನನ್ನವಳ ಪ್ರೇಮಕೆ ವೇದಿಕೆ ನನ್ನೆದೆಯಾಯ್ತು
ನನ್ನೆದೆಯಲಿ ಅವಳ ಸೆಳೆವ ನಗುವೇ ಹಾಡಾಯಿತು..!

      ಶೈಲಜಾ ರಮೇಶ್
[18/2/2022, 4:36 pm] Dr. B. N. Shylaja Ramesh: #ಭಕ್ತಿ_ಗೀತೆ

#ಅನವರತ_ಪೊರೆಯೆಮ್ಮ_ಅಂಜನೀಪುತ್ರ

ಅನವರತ  ಪೊರೆಯೆಮ್ಮ ಅಂಜನೀಪುತ್ರ
ನಿರುತ  ನಿನ್ನನೇ  ನೆನೆವೆ  ಸರಸಿಜ  ನೇತ್ರ
ಕರುಣಿಸು  ಶ್ರೀರಾಮ  ನಾಮದಲಿ ಭಕುತಿ
ಸಕಲ ಕಾರ್ಯಗಳಲ್ಲಿ ಬೆರೆಸು ನಿನ್ನ ಶಕುತಿ

ಉದಯರವಿಯ ಹಣ್ಣೆಂದು ಭ್ರಮಿಸಿದನೆ
ತಿನ್ನಲು  ಆಗಸಕೆ  ಚಂಗನೆ  ನೆಗೆದವನೆ
ಬಾಲ್ಯಕಾಲದಲೇ ನಿನಗೆ ಅದೆಂತಹ ಶಕ್ತಿ
ಕಾರಣವೇ ಆರಾಧ್ಯ ದೈವದಲ್ಲಿನ  ಭಕ್ತಿ

ಅಮಿತಪರಾಕ್ರಮಿ ಸಾಗರವ ಲಂಘಿಸಿದ ಧೀರ
ಲಂಕಿಣಿಯ ಮಣಿಸಿ ಲಂಕೆಯ ಸುಟ್ಟ ಕಪಿವೀರ
ಸಂಜೀವಿನಿ ಪರ್ವತವನೆತ್ತಿ ತಂದ ಪರಾಕ್ರಮಿ
ದೈನ್ಯತೆಯೇ ಮೂರ್ತಿವೆತ್ತ ಸಕಲಜನ ಪ್ರೇಮಿ

ಆಜಾನುಬಾಹು ಹನುಮ ಅಮಿತಬಲತೇಜ
ಬಿತ್ತಿದೆ ಎಲ್ಲೆಡೆ ಶ್ರೀರಾಮ ನಾಮದ ಬೀಜ
ಬುದ್ಧಿರ್ಬಲಕೆ ನಿನಗೆ ಸರಿಸಮರು ಉಂಟೇನು
ವಾಕ್ಪಟುತ್ವಕೆ ಹೆಸರು ಈ ಶ್ರೀರಾಮನ ಭಂಟನು

         ಶೈಲಜಾ ರಮೇಶ್
[18/2/2022, 4:37 pm] Dr. B. N. Shylaja Ramesh: #ಹಾಯ್ಕ

#ಬೆಳದಿಂಗಳು

#೧

ನಿನ್ನ ನಗುವೇ
ನಲ್ಲ ಮನ ತಣಿಸೋ
ಬೆಳದಿಂಗಳು

#೨

 ಬೆಳದಿಂಗಳು
ನಕ್ಕಾಗ, ಸಾಗರಿಯ
 ಉತ್ಕರ್ಷಣವು

#೩

ಹುಣ್ಣಿಮೆ ಚಂದ್ರ
ಬೆಳದಿಂಗಳ ಜಾಲ
ಬೀಸಿ ಸೆಳೆವ

   ಶೈಲಜಾ ರಮೇಶ್
[18/2/2022, 4:37 pm] Dr. B. N. Shylaja Ramesh: #ಚಿತ್ರಕಾವ್ಯ_ಸ್ಪರ್ಧೆ

#ಕಲಿಯುವ_ಬನ್ನಿ_ಮಕ್ಕಳೇ

ನಿಸರ್ಗದಂಗಳದಿ ಪಾಠ ಪ್ರವಚನ
ಗುರುಕುಲ ಪದ್ಧತಿಯ ಅಭಿಯಾನ..!
ಇಲ್ಲಿ ಕನ್ನಡ ಕಲಿಕೆಗೆ ಒತ್ತು ಹೆಚ್ಚು
ಕಲಿಸುವ ಗುರುಗಳೆಲ್ಲರಿಗೂ ಅಚ್ಚುಮೆಚ್ಚು..!

ಸ್ವಚ್ಛ ಪ್ರಕೃತಿಯ ಮಡಿಲಲ್ಲಿ ಪಾಠ
ಕಲಿಕೆ ಮುಗಿದ ನಂತರವೇ  ಆಟ..!
ಆಟಕ್ಕೂ ಪಾಠಕ್ಕೂ ಸಮಾನ ಅನುನಯ
ಕಲಿಕೆಯಿಂದಲೇ ಶ್ರೇಷ್ಠವ್ಯಕ್ತಿ ಉದಯ..!

ವಿದ್ಯೆಯೆಂದಿಗೂ ಕದಿಯಲಾಗದ ಐಶ್ವರ್ಯ
ಕಲಿತಷ್ಟೂ ಮುಗಿಯದ ಸವಿ ಮಾಧುರ್ಯ.!
ಆಪತ್ಕಾಲದಲಿ ನೆರವಾಗುವ ಬಂಧು
ಜ್ಞಾನವಿಜ್ಞಾನವ ಉದ್ದೀಪಿಸುವ ಸಿಂಧು..!

ಆಡಿ ಹಾಡಿ ನಲಿಯುತ ಕಲಿವ ವಿದ್ಯೆಯು
ಮರೆಯದೆಂದಿಗೂ ವಿದ್ಯೆಯಿತ್ತ ಸ್ಪೂರ್ತಿಯು.!
ಬನ್ನಿ ಕಂದಮ್ಮಗಳೇ ಶ್ರದ್ಧೆಯಿಂದ ಕಲಿಯುವ
ಶ್ರೇಷ್ಠರೆನಿಸಿ ಭವ್ಯ ಭಾರತವ ಬೆಳಗುವಾ..!

          ಶೈಲಜಾ ರಮೇಶ್
[18/2/2022, 4:38 pm] Dr. B. N. Shylaja Ramesh: #ಆಧುನಿಕ_ವಚನ

#ಶೀರ್ಷಿಕೆ

#ನಿಷ್ಕಾಮ

ಜೀವನವಿದು   ಮೂರು   ದಿನದ    ಬಾಳು
ಅವನಕರೆ ಬಂದಾಕ್ಷಣ ತೆರಳಬೇಕು ಕೇಳು
ಇದ್ದಾಗಲೇ ಗಳಿಸಿಬಿಡೆಲ್ಲರ ಪ್ರೀತಿ ವಾತ್ಸಲ್ಯ
ಸಹಬಾಳ್ವೆಯಲಿ ತುಂಬಿದೆ ಜೀವನದ ಮೌಲ್ಯ
ಸಕಲಜೀವಿಗಳಲ್ಲಿರಲಿ ನಿಷ್ಕಾಮಪ್ರೇಮದ ಧಾರಾ
ಪ್ರೇಮದಿಂದೆಲ್ಲರ ಗೆಲ್ಲಬಹುದೆಂದ ಶ್ರೀಶೈಲನಾಥೇಶ್ವರ
[18/2/2022, 4:39 pm] Dr. B. N. Shylaja Ramesh: #ಚುಟುಕು_ಸ್ಪರ್ಧೆ

#ಶೀರ್ಷಿಕೆ 

#ದೃಢ_ನಿಲುವು

ಮುಖದಲ್ಲಿ ನಗುವಿರಲಿ  ಮನವೂ ನಗುತಿರಲಿ
ಬೆಳಕು ಬಂದೊಡನೆ  ಓಡಿದಂತೆ ತಮ
ಮನದಲ್ಲಿ  ದೃಢ ನಿಲುವಿರಲು  ಕಷ್ಠಗಳು
ಬಂದಂತೆಯೇ  ಸಾಗುವುವು  ಮುಂದೆ

                                        ಶೈಲೂ....
[18/2/2022, 4:39 pm] Dr. B. N. Shylaja Ramesh: #ಹನಿಗವನಗಳು

#ಅಕ್ಷರ

ಅಕ್ಷರಕ್ಕೊಂದಕ್ಷರವ
ಸೇರಿಸಿದರೆ ಪದ,
ಪದ ಪದಗಳು ಸೇರಿದರೆ
ಅರ್ಥಪೂರ್ಣ
ಸಾಹಿತ್ಯ ಸಂಪದ..!

#ಸೌಜನ್ಯ

ಮಾನವೀಯ
ಬಂಧಗಳ ನಡುವಿದ್ದರೆ
ಸೌಜನ್ಯ
ಗಟ್ಟಿಗೊಳ್ಳುವ ಆ
ಸಂಬಂಧ
ಲೋಕ ಮಾನ್ಯ..!

#ಪ್ರಕೃತಿ

ಹಸಿರಲ್ಲಿ ನಗುವ
ಪ್ರಕೃತಿಮಾತೆ
ಜೀವಕೆ
ಆಸರೆಯಾದವಳು
ಆಸ್ಥೆಯಲಿ ಜತನಮಾಡಿದರೆ
ಎಲ್ಲರ ಉಸಿರಾಗುವಳು..!

             ಶೈಲೂ....
[18/2/2022, 4:39 pm] Dr. B. N. Shylaja Ramesh: #ಹನಿಗವನ_ಸ್ಪರ್ಧೆ

#ಶೀರ್ಷಿಕೆ #ನಿಯತ್ತು

ನಿನ್ನ ಸದ್ಗುಣಗಳ
ಸಂಪತ್ತಿನಲ್ಲಿದ್ದರೆ .. 
ನಿಯತ್ತು..!!
 ನೀನಾಗ
ಬೆಲೆಬಾಳುವ ಮುತ್ತು..!!
ಬರದೆಂದಿಗೂ
ಆಪತ್ತು..!!

          ಶೈಲಜಾ ರಮೇಶ್....
[18/2/2022, 4:40 pm] Dr. B. N. Shylaja Ramesh: #ನ್ಯಾನೊಕಥೆ

#ಅನುಮಾನ

ಗೆಳತಿಯ ಮದುವೆ ಸಂಭ್ರಮದದಲ್ಲಿದ್ದರೂ  ಪಲ್ಲವಿ ಅನ್ಯಮನಸ್ಕಳಾಗಿದ್ದಳು. ಗೆಳತಿಯ ಸುಂದರ ಜೋಡಿಯನ್ನು ನೋಡಿ ಪವನ್ ನ ನೆನೆದು ಕಣ್ಣೀರಿಟ್ಟಿದ್ದಳು. ಪ್ರೀತಿಸಿ, ಜೊತೆಗೆ ಸುತ್ತಾಡಿ, ಮದುವೆಗೆ ಮನೆಯವರ ಅನುಮತಿ ಕೇಳಿಬರುವೆನೆಂದು ಹೋಗಿದ್ದ ಪವನ್ ವರ್ಷಗಳಾದರೂ ಬಂದಿರಲಿಲ್ಲ. ಬಹುಶಃ ಅವನು ಮದುವೆ ಮಾಡಿಕೊಂಡಿರಬಹುದು ಅನ್ನುವ ಅನುಮಾನ, ಸುಂದರ ಹುಡುಗಿಯೊಡನೆ ಮಗುವನ್ನು ಎತ್ತಿಕೊಂಡು ಮದುವೆಮನೆಯಲ್ಲಿ ಓಡಾಡುತ್ತಿದ್ದ ಪವನನನ್ನು ನೋಡಿ ಸಾಬೀತಾಯ್ತು.

          ಶೈಲಜಾ ರಮೇಶ್
[18/2/2022, 4:40 pm] Dr. B. N. Shylaja Ramesh: #ಚುಟುಕು

#ಅನುರಾಗ

ನಲ್ಲ ನನ್ನ ನಿನ್ನ ಕಣ್ಣು ಬೆರೆತಾಗ ;
ಮೂಡಿತು ನಲ್ಮೆಯಲಿ ಅನುರಾಗ.!
ಕಣ್ಣಿನಲ್ಲೇ ನಡೆದು ಸಂಭಾಷಣೆ ;
ಹೃದಯದಲಿ ಪ್ರೀತಿಯ ನವರಾಗ.!

             ಶೈಲಜಾ ರಮೇಶ್
[18/2/2022, 4:40 pm] Dr. B. N. Shylaja Ramesh: #ಆಧುನಿಕ_ವಚನ

#ಸಂಸ್ಕಾರ

ಹಣ ಆಸ್ತಿ ಆಡಂಬರದಲ್ಲಿಲ್ಲ ಸಾರ
ಇದ್ದುದರಲ್ಲೇ ತೃಪ್ತಿಇದ್ದರೆ ಸುಖಸಂಸಾರ
ತಾನುತಾನೆಂದು ಮೆರೆವವರೆಲ್ಲ ಭುವಿಗೆ ಭಾರ
ಕೆಡುಕಿತ್ತವರಿಗೂ ಒಳಿತು ಬಗೆವುದೇ ಸಂಸ್ಕಾರವೆಂದ ಶ್ರೀಶೈಲನಾಥೇಶ್ವರ

       ಶೈಲಜಾ ರಮೇಶ್
[18/2/2022, 4:40 pm] Dr. B. N. Shylaja Ramesh: #ಹನಿಗವನ

#ಶೀರ್ಷಿಕೆ

#ಅಂಬರ

ನಿನ್ನೆದೆಯ
ಅಂಬರದೊಳು
ನಾನಲಿವ...ತಾರೆ
ಎನ್ನ 
ಹೃನ್ಮಂದಿರಕೆ
ನೀ ಒಲಿದು ಬಾರೇ...

      ✍️ ಡಾ: B.N. ಶೈಲಜಾ ರಮೇಶ್
[18/2/2022, 4:41 pm] Dr. B. N. Shylaja Ramesh: #ಚುಟುಕು

#ಶೀರ್ಷಿಕೆ #ಶಿಷ್ಟಾಚಾರ

ಗೌರವಾದರಗಳ ಬಿಸುಟು ಬಹುದೂರ
ತೋರಿಕೆಗಿದ್ದರಾದೀತೇ ಶಿಷ್ಟಾಚಾರ?
ಗುರುಹಿರಿಯಕಿರಿಯರೆನ್ನದೆ ಎಲ್ಲ ಮರೆತು
ಶಿಷ್ಟತೆ ಮಾಯವಾಯ್ತು ಅಹಮಿನಲಿ ಬೆರೆತು

          ಶೈಲೂ.....
[18/2/2022, 4:41 pm] Dr. B. N. Shylaja Ramesh: #ಹನಿಗವನ
#ಶೀರ್ಷಿಕೆ #ಸಿರಿತನ

ಮಾನವೀಯತೆ
ಸೃಜನಶೀಲತೆಯಲ್ಲಿರಲಿ
#ಸಿರಿತನ
ಇದರ ಮುಂದೆ
ಹಣದ ಶ್ರೀಮಂತಿಕೆ
#ಗೌಣ

      ಡಾ: B.N.ಶೈಲಜಾ ರಮೇಶ್
[18/2/2022, 4:41 pm] Dr. B. N. Shylaja Ramesh: #ನ್ಯಾನೊಕಥೆ

#ದೇವರು_ಬರೆದ_ನಾಟಕ

 ರಾಜೇಶ್ ತನ್ನ ಹೆತ್ತವರ ಮಾತನ್ನ ಧಿಕ್ಕರಿಸಿ, ತಾಯಿತಂದೆ ಇಲ್ಲದ ಅನಾಥೆ ರಮ್ಯಾಳನ್ನ  ಪ್ರೇಮಿಸಿ ಮದುವೆಯಾದ. ಆಸ್ತಿವಂತರನ್ನ ಮದುವೆ ಆಗಿದ್ದರೆ.. ಕೈತುಂಬಾ ವರದಕ್ಷಿಣೆ, ಆಸ್ತಿ ಪಾಸ್ತಿ ಸಿಗುತ್ತಿತ್ತು, ಅನಾಥೆಯಿಂದ ಏನು ಸಿಕ್ಕಿತು ಅಂತ ಜಗಳವಾಡಿ ಮಗ ಸೊಸೆಯನ್ನು ಮನೆಯಿಂದ ಹೊರಹಾಕಿ ರಮ್ಯಳನ್ನ ತೊರೆದು ಬಂದರೆ ಮಾತ್ರ ನಮ್ಮ ಆಸ್ತಿಯಲ್ಲಿ ಪಾಲು ಇಲ್ಲದಿದ್ದರೆ ಇಲ್ಲ... ಎಂಬ ಬೆದರಿಕೆ ಹಾಕಿದ ಒಂದೆರಡು ದಿನದಲ್ಲೇ ವರದಕ್ಷಿಣೆ ಕಿರುಕುಳದಿಂದಾಗಿ  ಮಗಳ ಹತ್ಯೆಯಾಯ್ತು. ತಾ ಮಾಡಿದ ಅನ್ಯಾಯಕ್ಕೆ, ತನ್ನ ಮಗಳ ಜೀವ ಹಾರಿಹೋಗಿತ್ತು. ಇದು ಆ ವಿಧಿ ಬರೆದ ನಾಟಕವಲ್ಲದೆ ಮತ್ತೇನು?

ಡಾ:B.N. ಶೈಲಜಾ ರಮೇಶ್
[18/2/2022, 4:45 pm] Dr. B. N. Shylaja Ramesh: #ಜಾನಪದ_ಶೈಲಿ_ಕವನ

#ಶೀರ್ಷಿಕೆ

#ಹಳ್ಳಿಯಲ್ಲಿ_ಅರಳಿದ_ಮಲ್ಲೇ

ಏನ್ ಚಂದ ಕಾಣ್ತೀ
ಹುಸಿ ನಗೆಯ ಗರತಿ
ಅಂದಾಕೆ ಒಡತಿಯೇ ನೀನು|| ಓ ಹೆಣ್ಣೇ||
ನೀ ಹಳ್ಯಾಗೆ ಅರಳಿದ ಮಲ್ಲೇ..

ಹುಬ್ಬು ಕಾಮನಬಿಲ್ಲು
ಲಜ್ಜೆಯಾ ಕಣ್ಣುಗಳು
ಚಂಚಲ ನೋಟವಿಲ್ಲ||ಓ ಹೆಣ್ಣೇ||
ನೀ ಹಳ್ಯಾಗೆ ಅರಳಿದ ಮಲ್ಲೇ..

ನಾಗರ ಜಡೆಯನ್ನ
ಎತ್ಕಟ್ಟಿ ತುರುಬನ್ನ
ಘಮ್ಮೆನ್ನೋ ಮಲ್ಲಿಗಿ ಮುಡಿದು||ಓ ಹೆಣ್ಣೇ|
ನೀ ಹಳ್ಯಾಗೆ ಅರಳಿದ ಮಲ್ಲೇ..

ದುಂಡಾದ ಮುಖದಲ್ಲಿ
ಸೇಬಂತಾ ಕದಪಲ್ಲಿ
ನಾಚಿಕೆ ಹರಡೈತೆ || ಓ ಹೆಣ್ಣೇ||
ನೀ ಹಳ್ಯಾಗೆ ಅರಳಿದ ಮಲ್ಲೇ..

ದೇವತೆ ಕಳೆ ಐತಿ
ಮುಗೀಬೇಕು ಕೈಯೆತ್ತಿ
ನೀಯಾರ ಮನೆಯ ದೀಪ
|| ಓ ಹೆಣ್ಣೇ||
ನೀ ಹಳ್ಯಾಗೆ ಅರಳಿದ ಮಲ್ಲೇ..

     ಶೈಲಜಾ ರಮೇಶ್
[18/2/2022, 4:47 pm] Dr. B. N. Shylaja Ramesh: #ರುಬಾಯಿ_ಸ್ಪರ್ಧೆ

#ಶೀರ್ಷಿಕೆ

#ಹಣ_ಮತ್ತು_ಸಂಬಂಧಿಕರು

#೧
ಹಣವೆಂದರೆ ಹೆಣವೂ ಬಾಯ್ಬಿಡುವುದಂತೆ
ಇನ್ನು ಕೇಳಬೇಕೇನು ನೆಂಟರಿಷ್ಟರ ಸಂತೆ.?
ರಾಗಿಕಲ್ಲು ಆಡ್ತಿದ್ರೆ ರಾಜ್ಯವೆಲ್ಲಾ ನೆಂಟರು.!
ಹುರಿದು ಮುಕ್ಕಿ ತಿಂದುಬಿಡುವರೆಂಬ ಚಿಂತೆ

#೨
ದುಡ್ಡಿದ್ದವನೇ   ದೊಡ್ಡಪ್ಪ   ಗೊತ್ತೇನು..?
ಹಿಂಬಾಲಕ  ನೆಂಟರ ಮಾತು ಸವಿಜೇನು
ಶ್ರೀಮಂತಿಕೆ ಸಾರ ಹೀರಿ ಮಾಡಿ ನಿಸ್ಸಾರ.!
ತೆಗಳಿಜರಿವುದವರ ಕಾರ್ಯವಲ್ಲದೆ ಮತ್ತೇನು?

#೩
ಹಣವೆಂದರೆ  ಬಾಯ್ಬಾಯ್ಬಿಡುವ   ಜನ
ಇದಕೆ ಸಂಬಂಧಿಕರೂ ಹೊರತಲ್ಲ ಕಾಣಾ
ಕುರುಬಿ ಜರಿದು ಕಾಲೆಳೆವವರೇ ಎಲ್ಲಾ..!
ಕೆಳಗೆಬಿದ್ದಾಗ ಹಿಡಿದೆತ್ತುವುದಕಿಲ್ಲ ಮನ

               #ಶೈಲೂ....
[18/2/2022, 4:48 pm] Dr. B. N. Shylaja Ramesh: #ಕಿವಿಯೋಲೆ_ಬರೆಸಿತು_ಒಲವಿನೋಲೆ

ನೀ ತಂದ  ಒಲವಿನ ಮುತ್ತಿನೋಲೆ
ಸಂತಸದಿ ಧರಿಸಿದೆ ಕಿವಿಯಲ್ಲಿ..!
ಕಣ್ಸನ್ನೆಯಲ್ಲೇ ಇತ್ತೆ ಕರೆಯೋಲೆ
ಹೊಳಪು ಝಲಪಿಸಿತೆನ್ನ ಕಣ್ಣಿನಲ್ಲಿ..!

ನೀ ಪ್ರೀತಿಯಿಂದತ್ತ ಉಡುಗೊರೆ
ಬೆಲೆ ಕಟ್ಟಲಾಗದ  ಅನರ್ಘ್ಯ ರತ್ನ..!
ಅದೆಷ್ಟು ಆಸೆಯಿಂದಲಿ ನೀ ಕೊಟ್ಟೆ
ಮಾಡುವೆ ಜತನದಲಿ ಕಾಪಿಡುವ ಯತ್ನ..!

ನಾ ಧರಿಸಿರುವೆ ನೋಡಿಲ್ಲಿ  ನಲ್ಲ
ಚಂದದಿ ತೂಗುತಿದೆ ಓಲೆ ಕಿವಿಯಲ್ಲಿ..!
ನಿನ್ನಂತರಂಗದ ಪ್ರೀತಿಯ ಕೂಗು
ಪಿಸುಗುಡುತ್ತಿದೆ ಕಿವಿಯ ಬಳಿಯಲ್ಲಿ..!

ಹೊಳೆವ ಮುತ್ತುಗಳ ಹೆಕ್ಕಿ ಹೆಕ್ಕಿ
ಅದಮ್ಯ ಪ್ರೀತಿಯ ಬಂಧನದೆ ಬಿಗಿಸಿದೆ..!
ಬಿಡಿಸಲಾರದ  ಬಾಂಧವ್ಯಕ್ಕಿದು ನಂಟು
ಕಿವಿಯೋಲೆ ಒಲವಿನೋಲೆ ಬರೆಸಿದೆ..!

           ಡಾ: ಶೈಲಜಾ ರಮೇಶ್
[18/2/2022, 4:48 pm] Dr. B. N. Shylaja Ramesh: #ಸ್ಪರ್ಧೆಗಾಗಿ_ಅಲ್ಲ

ಹದಿಹರೆಯದ ಹುಡುಗನ ಮುಗ್ಧ ಪ್ರೀತಿ ಹೀಗಿರಬಹುದೆಂಬ ಕಲ್ಪನೆಯಲ್ಲಿ ಬರೆದದ್ದು...😊

ನೀಬರುವ ಹಾದಿಯಲಿ 
ಕಾಯುತಿಹೆ ಹಗಲಿರುಳು ಚೆಲುವೇ..
ತಿರುಗಿ ನೋಡದೇ.. ಹೀಗೆ
ಸತಾಯಿಸುತಿಹೆಯೇಕೆ ಒಲವೇ...

ಕಾತರಿಸುತ್ತಿದೆ ಮನ ನಿನ್ನೊಂದು ನೋಟಕೆ
ಸೆಳೆದೆಳೆವ ದಂತದ ಆ ಮೈಯ್ಯ ಮಾಟಕೆ.!
ತೂಗಿ..ತೂಗಿ ಕರೆವ ಆ ಚೆಲುವ ಮುಂಗುರುಳು
ಕಾಡಿ..ಕಾಡಿಸುತ್ತಿದೆ ಎನ್ನ ಹಗಲೂ... ಇರುಳೂ..

ಬೆರಗು ನೋಟದ ಆ ಕಾಡಿಗೆ ಕಂಗಳ ಚೆಲುವು
ಮೂಡಿಸುತಿದೆ ಎದೆಯಲ್ಲಿ ಬೇಡವೆಂದರೂ ಒಲವು
ಮರೆತು ಇರಲಾರೆ ಚೆಲುವೇ ನಿನ್ನ ಮೋಹಕ ರೂಪ
ನನ್ನೆದೆಯ ಸುಡುತಿಹುದು ವಿರಹದುರಿಯ ತಾಪ

ಕಣ್ಣ ಭಾಷೆಯಲೇ ಮೌನದಲಿ ಕವಿತೆಯ ಹೆಣೆದು
ಕೊಟ್ಟೆನಲ್ಲವೇ ಚೆಲುವೇ.. ಹೃದಯದಲಿ ಕೊರೆದು.!
ತಲುಪಲಿಲ್ಲವೇ..ಹೇಳು ತೊಂಡೆ ತುಟಿಯನು ತೆರೆದು
ತಲುಪಿದರೆ ಬಾ ನಲ್ಲೇ.. ಹೃದಯ ಕದವನು ತೆರೆದು.!

      ಶೈಲಜಾ ರಮೇಶ್....
[18/2/2022, 4:48 pm] Dr. B. N. Shylaja Ramesh: #ಕವನಸ್ಪರ್ಧೆ

#ಶೀರ್ಷಿಕೆ

#ಹರೆಯದ_ಕನಸುಗಳು

ಬಣ್ಣಬಣ್ಣದ ಕನಸುಗಳ ಹೊಸೆತ
ಎದೆಯ ಮಿಡಿತದಲಿ ನಗಾರಿ ಹೊಡೆತ.!
ಕಂಡದ್ದೆಲ್ಲವೂ ಬೇಕೆಂಬ ತುಡಿತ
ಇದು ಹದಿಹರೆಯದ ಕನಸುಗಳ ಮಿಡಿತ.!

ಕನಸು ಕಣ್ಣುಗಳಲ್ಲಿ ಹೊಳೆವ ಮಿಂಚು.!
ಕುಡಿಗಣ್ಣ ನೋಟದಲ್ಲೇ ಸೆಳೆವ ಸಂಚು.!
ಎಲ್ಲದ್ದಕ್ಕೂ ಏಕೋ ಮುಸಿ ಮುಸಿ ನಗು..
ತಾಳ ಮೇಳದಂತೆ ಭಾವಗಳ ಸೊಬಗು.!

ಪ್ರೀತಿಪ್ರೇಮದ ಸೆಳೆತ ದ್ವಂದ್ವ ಮನ
ಹಚ್ಚಿ ಅದಕೆ, ಭಾವನೆಗಳ ಬಣ್ಣ..!!
ಪ್ರಾಯದರವಳಿಕೆಯಲಿ ಶೃಂಗಾರ ಕನಸು.!
ಅರಿವಾಗದಂತಾವರಿಸಿ ಮನದಲ್ಲಿ ತುರಿಸು.!

ಜೀವನದ ಪಯಣಕ್ಕೆ ಮಹತ್ತರ ಘಟ್ಟ
ತನು - ಮನಗಳ ಬೆಳವಣಿಗೆಯ ಹಂತ
ಕತ್ತಿಯಲುಗಿನ ಮೇಲಿನ ನಡೆಯಂತೆ.!
ಮೈಮರೆತರೆ ಬಾಳು ಸುಡುಗಾಡ ಸಂತೆ.!

ಎಚ್ಚರ..!!ಇದು ಹಾದಿ ತಪ್ಪಿಸುವ ಕಾಲ
ಹಿಡಿತದಲಿದ್ದರೆ ಮನ ಸಾಧನೆಗೆ ಸಕಾಲ..!!
ಪ್ರೌಡದೆಡೆಗಿರಲಿ ಪ್ರೌಢಿಮೆಯ ನಡಿಗೆ
ದಾಟಿದರೆ ಈ ಹಂತ ಬದುಕು ಹೊಸಬಗೆ.!

        ಶೈಲಜಾ ರಮೇಶ್....
[18/2/2022, 4:48 pm] Dr. B. N. Shylaja Ramesh: #ಕಾರ್ಗಿಲ್_ವಿಜಯೋತ್ಸದ_ನೆನಪಿಗಾಗಿ

#ಚುಟುಕು_ಸ್ಪರ್ಧೆ

#ನನ್ನದೇಶ

ಇತಿಹಾಸ ಪುರಾಣಗಳಲಿ ಹಸಿರು
ನನ್ನ ದೇಶ ಭವ್ಯಭಾರತದ ಹೆಸರು
ವೀರಯೋಧರಿಗೆ ಜನ್ಮವಿತ್ತ ಪುಣ್ಯಭೂಮಿ
ತಾಯೇ ಭಾರತಿಯೇ ಶಿರಸಾನಮಾಮಿ🙏

#ವೀರಯೋಧ

ಕಾರ್ಗಿಲ್ ವಿಜಯೋತ್ಸವದ ದಿನ
ವೀರಯೋಧರ ಬಲಿದಾನದ ಪ್ರತಿಫಲನ
ಶತ್ರುಗಳ ಸೆದೆಬಡಿದು ಹಿಮ್ಮೆಟ್ಟಿಸಿ
ಅಮರರಾದರು ವಿಜಯವ ಗಳಿಸಿ..!!

          ಶೈಲಜಾ ರಮೇಶ್
[18/2/2022, 4:49 pm] Dr. B. N. Shylaja Ramesh: #ಗಝಲ್_ಸ್ಪರ್ಧೆ

#ದತ್ತ_ಸಾಲು

#ಮಿಡಿತಗಳ_ಅರಿಯದ_ಹೃದಯ_ಮನಸುಗಳ_ತೊರೆವುದೇಕೆ

 ಮಿಡಿತಗಳ ಅರಿಯದ ಹೃದಯ ಮನಸುಗಳ ತೊರೆವುದೇಕೆ ಹೇಳು?
ಎದೆಬಡಿತ ನಿಂತರೂ ಕನಸುಗಳ ತೆರೆವುದೇಕೆ ಹೇಳು?

ನನಸಾಗದ ಆಸೆಗಳಲಿ ಜೀವ ಮಿಳಿತವಾದದ್ದೇಕೋ ಕಾಣೆ
ಬೇಡವೆಂದು ಹಿಂದೆ ಸರಿದರೂ ಅಭಿಲಾಷೆ ಕರೆವುದೇಕೆ ಹೇಳು?

ನಿನ್ನೊಲವ ಸಾಂಗತ್ಯದಲಿ ನೋವುಂಡು ನಿಟ್ಟುಸಿರಿಟ್ಟದ್ದೇ ಬಹಳ
ಕೇಳದಾಗಿದೆ ತನುವು ಸದಾ ಪ್ರಿಯ ನಾಮ ಜಪಿಸುವುದೇಕೆ ಹೇಳು?

ಆಶಿಸಿರಲಿಲ್ಲ ಎಂದೂ ಬಾಳಿಗೆ ಮುಳ್ಳಾಗಿ ಕಾಡುವುದೆಂದು
ಮರೆತೆಲ್ಲ ದುಃಖವನು ನಲಿವಲಿ ಪ್ರೇಮ ಹಿಂದ್ಹಿಂದೆ ಬರುವುದೇಕೆ ಹೇಳು?

ಶೈಲಳಾಂತರ್ಯದಲಿ ಮಡುಗಟ್ಟಿದೆ ತೀರದ ಕಣ್ಣೀರ ವ್ಯಥೆಯ ಕಥೆ
ಮನ್ನಿಸುತ್ತೆಲ್ಲ, ಅಪ್ಪಿ ಹಾರೈಸುವ ಬಯಕೆ ಕಾಡುವುದೇಕೆ ಹೇಳು?

        ಶೈಲಜಾ ರಮೇಶ್
[18/2/2022, 4:49 pm] Dr. B. N. Shylaja Ramesh: #ಸ್ವರಚಿತ_ಒಗಟು

ನೀರು ಬೇಡ, ಗೊಬ್ಬರ ಬೇಡ
ಆದರೂ ಹುಲುಸಾಗಿ ಬೆಳೆಯುತ್ತೆ
ಭೂಮಿಯೂ ಬೇಕಿಲ್ಲ, ಕತ್ತರಿಸಿದಷ್ಟೂ ಚಿಗುರುತ್ತೆ
......ಏನದು?

( ಗಡ್ಡ, ಮೀಸೆ 😀)

ಜಗವೇ ಕುಡುಕರ ಸಂತೆ
ಬೆಳಗಾದರೆ ಇರಲೇ ಬೇಕಂತೆ
ಇದ ಕುಡಿಯದವರು ತೀರಾ ವಿರಳ
..........ಏನದು?

(ಕಾಫಿ, ಟೀ)

         ಶೈಲಜಾ ರಮೇಶ್
[18/2/2022, 4:50 pm] Dr. B. N. Shylaja Ramesh: #ಕವನಸ್ಪರ್ಧೆ

#ಕನಸುಗಳಿಗೆ_ರೆಕ್ಕೆ_ಮೂಡಿದಾಗ_ಮನದ_ಹಕ್ಕಿ_ಗರಿಗೆದರಿದೆ

ನಾನು ನಾನಾಗಿಲ್ಲ ನಿಂತಲ್ಲಿ ನಿಲಲಾರೆನಲ್ಲ
ಮನಸೂ ನನ್ನಲಿಲ್ಲ, ನೀ ಕದ್ದುಬಿಟ್ಟೆಯಲ್ಲ
ಅದೇನು ಮೋಡಿ ಮಾಡಿದೆ ಮನ ನಿನ್ನಲೇ ನೆಲೆಸುವಂತೆ
ಅದೇಕೆ ಹೀಗೆ ನೋಡುವೆ ನೀ ನನ್ನನೇ ನುಂಗುವಂತೆ

ಒಂದೂ ಮಾತನಾಡದೆ ಪರಿಚಯವೂ ನೀಡದೆ
ಅರಿವಿಗೆ ಬಾರದಂತೆ ಹೃದಯ ಕದ್ದೋಡಿದೆ
ಅದಾವ ಸೀಮೆಯ ಮಾಯಗಾರನೊ ನೀನು?
ನಿನ್ನಲೇ ಪರವಶ ಮನ, ನಾ ಕಳೆದು ಹೋದೆನು

ಕಟ್ಟಿದೆ ಕಣ್ಣಲ್ಲಿ ನೂರಾರು ಕನಸು ನನಸಾಗಲೆಂತು?
ಕಾಡುತ್ತಿದೆ ನಿನ್ನಾಸೆ ಬೆಂಬಿಡದೆ ನಿನ್ನ ಸೇರಲೆಂತು?
ನಿನ್ನ ನಸುನಗುವ ಜಾಲ ಸಮ್ಮತಿಯ ಸೂಸಿ ಕರೆದಿದೆ
ಕನಸುಗಳಿಗೆ ರೆಕ್ಕೆ ಮೂಡಿ ಮನದ ಹಕ್ಕಿ ಗರಿಗೆದರಿದೇ

ಹೀಗೆಯೇ ಇರಲಿ ಗೆಳೆಯ ಬಾಳ ಪಥದ ಪ್ರೇಮಯಾತ್ರೆ
ಸದಾ ಗಿಜಿಗುಟ್ಟುತ್ತಿರಲಿ ನೀ ತಂದ ಪ್ರೀತಿಯ ಸೊಗಸಜಾತ್ರೆ
ಉಕ್ಕುತಿರಲಿ ಪ್ರೀತಿಸೆಲೆಯು ಧುಮ್ಮಿಕ್ಕಲಿ ಜಲಪಾತದಂತೆ
ಒಲವ ಹೊತ್ತು ಓಡಿ ಬರುವೆ ನಿನ್ನೆಡೆಗೆ ಸೇರಲು ನದಿಯಂತೆ

   ಡಾ: B.N. ಶೈಲಜಾ ರಮೇಶ್
[18/2/2022, 4:50 pm] Dr. B. N. Shylaja Ramesh: #ಭಕ್ತಿಗೀತೆ_ಸ್ಪರ್ಧೆ

#ಶೀರ್ಷಿಕೆ:-

#ಮನವ_ಗೆದ್ದ_ಗೋಪಿಲೋಲ

ಕೇಳಿಸುತಿದೆ ಇನಿದನಿ
ಮಾಧವನ ಕೊಳಲಗಾನ
ಬನ್ನಿರೇ ಸಖಿ ಅವನನರಸಿ ಹೋಗೋಣ
ಕೂಗುತಿಹ ನೋಡಲ್ಲಿ
ಇನಿದನಿಯ ಕೊಳಲಲ್ಲಿ
ಸೆಳೆಯುತಿದೆ ನನ್ನ ಆ ಮುರಳಿಗಾನ

ಯಮುನೆಯ ತಟದಲ್ಲಿ
ತಮಾಲ ವೃಕ್ಷದಡಿಯಲ್ಲಿ
ಕುಳಿತಿಹನು ನೋಡಲ್ಲಿ ಯಶೋದೆ ಬಾಲ
ಮುಚ್ಚಿದ ಕಣ್ಣೆವೆಗಳಲ್ಲಿ
ನೆನೆಯುತ್ತೆನ್ನ ಮನದಲ್ಲಿ
ಕರೆಯುತಿಹ ಮನವಕದ್ದ ಗೋಪೀಲೋಲ

ನಲಿಯುತಿಹಳು ಯಮುನೆ
ಬೆಳಗುತಿಹನು ಚಂದಿರ
ಮೈಮರೆತಿದೆ ಪ್ರಕೃತಿ ಆ ಕೊಳಲಗಾನಕೆ
ತಲೆದೂಗುತ್ತಿದೆ ಧೇನು
ಅರಳುತಿದೆ ಹೂ ತಾನು
ಮಾಧುರ್ಯ ಸುರಿವ ಆ ವೇಣುನಾದಕೆ

ಅವನಿಂದಲೇ ಬದುಕು
ಅವನೆನ್ನ ಬಾಳ ಬೆಳಕು
ಮನದ ಕಣಕಣದಲೂ ಆವರಿಸಿರುವ
ಅವನ ಪ್ರೇಮದ ಹೊರತು
ಬೇರೆ ಜಗದರಿವಿಲ್ಲೆನಗೆ
ಅವನೆನ್ನ ಹೃದಯವಲ್ಲಭ ಶ್ರೀ ಕೇಶವ

      ಶೈಲಜಾ ರಮೇಶ್
[18/2/2022, 4:51 pm] Dr. B. N. Shylaja Ramesh: #ಭಾವಗೀತೆ_ಸ್ಪರ್ಧೆ

#ಬತ್ತದ_ಪ್ರೀತಿಯ_ಚಿಲುಮೆ
*********************

ಬತ್ತದ  ನಿನ್ನ ಪ್ರೀತಿಯ ಚಿಲುಮೆ
ಚಿಮ್ಮುವ ಕಾರಂಜಿಯಂತೆ ನಿನ್ನೊಲುಮೆ
ಮಿಂದೆದ್ದು ಧನ್ಯಳಾದೆ ನಾನು
ನಿನ್ನೊಲವೇ ಸವಿಯಾದ ಜೇನು

ಬೆಳಕಾಗಿ ಬಂದೆ ನೀ ಬಾಳಿಗೆ
ಮೂಡಿಸಿ ಹೊಂಗನಸು ನಾಳೆಗೆ
ಬಾಳ ನೌಕೆಗೆ ನೀ ತಾನೇ ನಾವಿಕ
ದಡವ  ಸೇರಿಸಿ ಬೆಳಗಿದೆ ಬದುಕ

ನೀನಿತ್ತೆ ಪ್ರೀತಿಯ ಸವಿಯೂಟ
ನಡುವೆ ಹುಸಿ ಮುನಿಸ ಕಾದಾಟ
ಮರುಕ್ಷಣವೇ ಮರೆತೆಲ್ಲ ಮುನಿಸು
ಮೂಡಿಸುವೆ ನವಿರಾದ ಕನಸು

ನೀನಾದೆ ನನ್ನ ಬಾಳ ಹಸಿರು
ಗೆಳೆಯ ನೀನೇ ನನ್ನುಸಿರ ಉಸಿರು
ನಿನ್ನೊಲುಮೆಯಿಂದಲೇ ಈ ಬಾಳು
ಉಲ್ಲಾಸದುಯ್ಯಾಲೆಯಂತೆ ಕೇಳು

ಇರಲಿ ಗೆಳೆಯ ಹೀಗೆಯೇ ಹರುಷ
ಒಲವ ಚಿಲುಮೆ ಚಿಮ್ಮಲಿ ಪ್ರತಿನಿಮಿಷ
ಆ ದೈವದೊಲುಮೆ ತಂದ ಬಲದಿಂದ
ಬದುಕು ಸಾಗಲಿ ನಲಿವಿನಿಂದ

          ಶೈಲೂ......

[8/1/2022, 4:11 pm] Dr. B. N. Shylaja Ramesh: #ಕೃಷ್ಣನ_ನೆನೆದು

ಹಾಗೇ ಸುಮ್ಮನೇ ತಿರುಗಾಡಿ ಬಾ ಮನವೇ
ತುಸುದೂರ ಮೆಲ್ಲ ಮೆಲ್ಲನೇ
ಕೃಷ್ಣನಿಲ್ಲದಿದ್ದರೇನಂತೆ ಸಿಗಬಹುದೇನೋ
ಅವನ ನೆರಳು ಬಿಮ್ಮನೇ..!

ಅವನಿಲ್ಲದ ಚಿಂತೆಯಲಿ ನೀ ಕೊರಗುತಲಿ
ಸೊರಗಿ ಹೋಗಿರುವೆ ತುಂಬಾ
ಅರಸುತ್ತ ಎಲ್ಲೆಡೆಯಲೂ ಅಳೆಯುತಿರುವೆ
ಕಾಣದೆ ಪ್ರಿಯ ಮಾಧವನ ಬಿಂಬ.!

ಯಮುನೆಯ ತಟದಲ್ಲಂದು ಅವನೊಡನೆ
ಕೈಹಿಡಿದು ನಡೆದಿದ್ದ ಕ್ಷಣಗಳು
ಮುದವ ತರಬಹುದೇನೋ ನೊಂದ ಮನಕೆ
ಅವನ ಸವಿಸವಿ ನೆನಪುಗಳು.!

ಸುಳಿಗಾಳಿಯಲಿ ತೇಲಿತೇಲಿ ಬರಬಹುದು
ಅವ ಮೈಗೆ ಪೂಸಿದ್ದ ಶ್ರೀಗಂಧ
ಅನುರಾಗದಾಲಾಪನೆಯ ಕರೆಯು ಕೇಳಿ
ಬರಬಹುದು ಅವನ ಕೊಳಲಿಂದ.!

ಅವನಿಗೂ ನಿನ್ನಂತೆ ಕಾಡುತಿರಬಹುದಲ್ಲ
ಸವಿ ಪ್ರೇಮದ ಆ ನೆನಪು
ಸುಳಿದಾಡುತಿರಬಹುದಲ್ಲಲ್ಲೇ ನೆನೆಯುತ್ತ
ಅಮರ ಪ್ರೀತಿಯ ಒನಪು.!

ಹೋಗಿಬಾ ಮತ್ತೊಮ್ಮೆ ಮನಸೇ ತಡಮಾಡದೆ
ಮನವಿಟ್ಟು ಹುಡುಕು ಅಲ್ಲೇ
ಇನ್ನೆಷ್ಟುದಿನ ಕಾಡುವನು ಸಿಗದೇ, ಇಹನವ
ನೆನೆದವರ ಒಳ ಮನದಲ್ಲೇ.!

             ಶೈಲೂ.....
[9/1/2022, 4:01 am] Dr. B. N. Shylaja Ramesh: ನಿತ್ಯ.ಅಭ್ಯಾಸ ಮುಂಜಾನೆ ನಾಲ್ಕಕ್ಕೆಳುವುದು
ಎದ್ದೊಡನೆ ಹರಿಯ ನೆನೆದವನ ಭಜಿಸುವುದು
ಕಸ ಗುಡಿಸಿ, ಒರೆಸಿ ಮಾಡಿ ಮನೆಯ ಸ್ವಚ್ಛ
ಅಂಗಳದಿ ಚಂದ ರಂಗೋಲಿಯಿಡದಿರೆ ಆ ದೇವ ಮೆಚ್ಚ

ಛೇ, ಆಗಲೇ ಐದೂ ವರೆಯಾಯ್ತು, ಮುಗಿಸಿ ಸ್ನಾನ
ದೇವನಾಲಯ ಸ್ವಚ್ಛಗೊಳಿಸಿ, ಕುಳಿತು ಧ್ಯಾನ
ನೈವೇದ್ಯಕ್ಕಣಿಗೊಳಿಸಿ  ನಿತ್ಯಪೂಜೆ ಮುಗಿಸಿ
ಕುಡಿಯಲು ಬಿಸಿನೀರನ್ನಿಡುವೆ ಪತಿದೇವರನ್ನೆಬ್ಬಿಸಿ

ಓಡುತ್ತಿದೆ ಸಮಯ ಆಗಲೇ ಗಂಟೆ ಏಳಾಯ್ತು
ಲಗುಬಗೆಯಲಿ ತೀಡಿ ಜೊತೆಗೆ ಅಡುಗೆ ರೆದಿಯಾಯ್ತು
ನಡುವೆ ಪತಿದೇವರಿಗೆ ಕಾಫಿ ಸಮಾರಾಧನೆ
ಪೇಪರ್ಹಿಡಿದು ಕುಳಿತವರನ್ನೆಬ್ಬಿಸುವುದೇ ವೇದನೆ
[9/1/2022, 4:20 am] Dr. B. N. Shylaja Ramesh: ಸ್ನಾನ ಪೂಜೆ ಜಪ ಮುಗಿಸವರು ಬರುವ ವೇಳೆಗೆ
ಡಬ್ಬಿಗೆ ಊಟ ತುಂಬಿಸಿ, ತಿಂಡಿ ಬಡಿಸುವೆ ಪ್ಲೇಟಿಗೆ
ಮಾಸ್ಕು, ಕರ್ಚೀಪು, ಸ್ಪೆಕ್ಸು ಧರಿಸಲು ಬಟ್ಟೆ ತೆಗೆದಿರಿಸಿ
ಹೆಲ್ಮೆಟ್ಟು, ಕೀ, ಸಾಕ್ಸು ಹಿಡಿದು ಕಾಯುವೆ ಶೂವನ್ನು ಒರೆಸಿ
[9/1/2022, 12:42 pm] Dr. B. N. Shylaja Ramesh: ಪತಿರಾಯರಾಫೀಸಿಗ್ಹೊರಡುವ ವೇಳೆಗೆ 
ಮಹಡಿಮೇಲಿಂದಿಳಿದು ಬರುವ ಮಗ ಕಾಫಿಗೆ
ಯಜಮಾನರ ಕಳಿಸಿ ಮಗನಿಗೆ ಕಾಫಿ ಬೆರೆಸಿ
ಕುಳಿತುಕೊಳ್ಳುವೆ ಅರೆಕ್ಷಣ ವಿಶ್ರಾಂತಿ ಬಯಸಿ

ಈ ಸಮಯ ನನ್ನದು, ಗಡಿಬಿಡಿಯ ಗೊಡವೆಯಿಲ್ಲ
ದಿನಪತ್ರಿಕೆಯಮೇಲ್ಕಣ್ಣಾಡಿಸುತ್ತಾ, ಹಾಲ್ಕುಡಿವೆ ಮೆಲ್ಲ
ಅಳಿದುಳಿದ ಮನೆ ಕೆಲಸದ ಕಡೆಗೆ ಮತ್ತೆನ್ನ ಗಮನ
ಕೆಲಸದ ಜೊತೆಗೆ ವಿಷ್ಣು ಸಹಸ್ರನಾಮ ಪಾರಾಯಣ
[9/1/2022, 1:32 pm] Dr. B. N. Shylaja Ramesh: #ದಿನಚರಿ_ಕವನ

#ಒಂದು_ಮುಂಜಾನೆ

ನಿತ್ಯ ಅಭ್ಯಾಸ ಮುಂಜಾನೆ ಗಂಟೆ ನಾಲ್ಕಕ್ಕೆಳುವುದು
ಎದ್ದೊಡನೆ ಶ್ರೀಹರಿಯ ನೆನೆದವನ ಭಜಿಸುವುದು
ಕಸ ಗುಡಿಸಿ, ನೆಲ ಒರೆಸಿ ಮಾಡಿ ಮನೆಯ ಸ್ವಚ್ಛ
ಅಂಗಳದಿ ಚಂದ ರಂಗೋಲಿಯಿಡದಿರೆ ಆ ದೇವ ಮೆಚ್ಚ.!

ಛೇ, ಆಗಲೇ ಐದೂ ವರೆಯಾಯ್ತು, ಮುಗಿಸಿ ಸ್ನಾನ
ದೇವನಾಲಯ ಸ್ವಚ್ಛಗೊಳಿಸಿ, ಕುಳಿತು ಧ್ಯಾನ
ನೈವೇದ್ಯಕ್ಕಣಿಗೊಳಿಸಿ  ನಿತ್ಯಪೂಜೆ ಮುಗಿಸಿ
ಕುಡಿಯಲು ಬಿಸಿನೀರನ್ನಿಡುವೆ ಪತಿದೇವರನ್ನೆಬ್ಬಿಸಿ.!

ಓಡುತ್ತಿದೆ ಸಮಯ ಆಗಲೇ ಗಂಟೆ ಏಳಾಯ್ತು
ಲಗುಬಗೆಯಲಿ ತಿಂಡಿ ಜೊತೆಗೆ ಅಡುಗೆ ರೆಡಿಯಾಯ್ತು
ನಡುನಡುವೆ ಪತಿದೇವರಿಗೆ ಕಾಫಿ ಸಮಾರಾಧನೆ
ಪೇಪರ್ಹಿಡಿದು ಕುಳಿತವರನ್ನೆಬ್ಬಿಸುವುದೇ ವೇದನೆ.!

ಸ್ನಾನ ಪೂಜೆ ಜಪ ಮುಗಿಸವರು ಬರುವ ವೇಳೆಗೆ
ಡಬ್ಬಿಗೆ ಊಟ ತುಂಬಿಸಿ, ತಿಂಡಿ ಬಡಿಸುವೆ ಪ್ಲೇಟಿಗೆ
ಮಾಸ್ಕು, ಕರ್ಚೀಪು, ಸ್ಪೆಕ್ಸು ಧರಿಸಲು ಬಟ್ಟೆ ತೆಗೆದಿರಿಸಿ
ಹೆಲ್ಮೆಟ್ಟು, ಕೀ, ಸಾಕ್ಸು ಹಿಡಿದು ಕಾಯುವೆ ಶೂವನ್ನು ಒರೆಸಿ.!

ಪತಿರಾಯರಾಫೀಸಿಗ್ಹೊರಡುವ ಸರಿ ವೇಳೆಗೆ 
ಮಹಡಿಮೇಲಿಂದಿಳಿದು ಬರುವ ಮಗ, ಕಾಫಿಗೆ
ಯಜಮಾನರ ಕಳಿಸಿ ಮಗನಿಗೆ ಕಾಫಿ ಬೆರೆಸಿ
ಕುಳಿತುಕೊಳ್ಳುವೆ ಅರೆಕ್ಷಣ ವಿಶ್ರಾಂತಿ ಬಯಸಿ.!

ಈ ಸಮಯ ನನ್ನದು, ಗಡಿಬಿಡಿಯ ಗೊಡವೆಯಿಲ್ಲ
ದಿನಪತ್ರಿಕೆಯಮೇಲ್ಕಣ್ಣಾಡಿಸುತ್ತಾ, ಹಾಲ್ಕುಡಿವೆ ಮೆಲ್ಲ
ಅಳಿದುಳಿದ ಮನೆ ಕೆಲಸದ ಕಡೆಗೆ ಮತ್ತೆನ್ನ ಗಮನ
ಕೆಲಸದ ಜೊತೆಗೆ ವಿಷ್ಣು ಸಹಸ್ರನಾಮ ಪಾರಾಯಣ.!

ಹೋ, ಆಗಲೇ ಗಂಟೆ ಹತ್ತಾಯ್ತು.! ಮಗನಿಗೆ ಫೋನಾಯಿಸಿ
ಕೆಲಸವಿದೆ ಬಹಳ ತಿಂಡಿಗೆ ಸಮಯವಿಲ್ಲೆಂದವನ ಮಣಿಸಿ
ನಾನೇ ಹೊತ್ತೊಯ್ದು ತಿನಿಸು, ಉಣಿಸಿ ಅನುನಯಿಸುತ್ತಾ
ನನ್ನ ತಿಂಡಿ ಶಾಸ್ತ್ರ ಮುಗಿವ ವೇಳೆಗೆ ಗಂಟೆ ಹನ್ನೊಂದಾಗಿತ್ತ.!

ನಿತ್ಯವೂ ಇದೇ.. ಮುಂಜಾನೆ ದಿನಚರಿ, ಇಲ್ಲ ವ್ಯತ್ಯಾಸ
ವಾರಾಂತ್ಯದಲ್ಲೊಮ್ಮೊಮ್ಮೆ ಘೋರ, ಇದಕ್ಕಿಂತಲೂ ತ್ರಾಸ
ತಡವಾದರೇನಂತೆ ಕೆಲಸ, ಮನೆಮಂದಿಯೊಡನೆ ಕೂಡಿ
ಹಂಚಿ, ಸವಿದು ಉಣ್ಣುವುದೇ ನಮ್ಮ ಮನೆಯ ರೂಢಿ

           ಶೈಲೂ.....
[9/1/2022, 9:37 pm] Dr. B. N. Shylaja Ramesh: ಆತ್ಮೀಯ ಗೆಳತಿ ಸಂಧ್ಯಾಳ ಕೋರಿಕೆಯ ಮೇರೆಗೆ...😊

ನೀ  ದೂರಾಗುವ  ಶಿಕ್ಷೆಗಿಂತಲೂ  ,

ಮಿಗಿಲಾದ  ಶಿಕ್ಷೆಯುಂಟೇ  ಈ  ಜಗದಲ್ಲಿ  !!

ಗೀತಾ......
🌼🌼🌼🌼🌼🌼🌼🌼🌼🌼

ಕೊಳಲು ನೀಡಿ ಹೊರಟನು
ರಾಧೆಯ ಪ್ರಾಣವೇ ತಾನೆನ್ನುವುದ ಮರೆತನು...
ಕಾದು ಕಾದು ಸೋತಿತು ರಾಧೆಯ ಕಣ್ಗಳು
ಅರಿವಾಗಲೇ ಇಲ್ಲಾ ಶ್ರೀಹರಿಗೆ ...ಪ್ರೀತಿಸುವ
ಮನದ ಅಳಲು...

ಸಂಧ್ಯಾ..

🌼🌼🌼🌼🌼🌼🌼🌼🌼🌼🌼🌼🌼🌼🌼

ಪ್ರೀತಿಯು ನೀನೇ ಪ್ರಾಣವೂ ನೀನೇ ಸಖೀ
ನೀನಿಲ್ಲದೀ ಜೀವನದಿ ಹೇಳು ನಾನೆಂಥ ಸುಖೀ.?
ನಾನಿನ್ನ ಮರೆತರಂದೇ, ಪ್ರೀತಿ ಹೆಸರಿಗೇ ಮರಣ
ನಾನಿನ್ನೂ ಜನಮನದಿ ನೆಲೆಸಿರಲು ನೀನೇ ಕಾರಣ
ರಾಧೇ, ನೀನೆ ಸ್ವಚ್ಛ ನಿಷ್ಕಲ್ಮಶ ಪ್ರೀತಿಗೆ ಹೆಸರು
ನಾನೆಲ್ಲಿದ್ದರೂ ನೀನೇ ಸಖೀ ಈ ಮಾಧವನ ಉಸಿರು..!

             ಶೈಲೂ.....
[13/1/2022, 12:24 pm] Dr. B. N. Shylaja Ramesh: ಹೊನ್ನ ನೀರಲ್ಲಿ ಅದ್ಧಿಟ್ಟಂತ  ಹೆಣ್ಣಿವಳು
ಕೈತೊಳೆದುಕೊಂಡೇ ಮುಟ್ಟಬೇಕು
ದಂತಕಾಂತಿಯಂತ ಸುಂದರ ಮೈಯವಳು
ದೊಡ್ಡಪ್ಪನ ಮನೆಯ ಬೆಳಗಿದ ಬೆಳಕು

ಸ್ವಾತಂತ್ರ್ಯ ಪೂರ್ವದಲೇ ಹೆಚ್ಚು ಕಲಿತ ಜಾಣೆ
ನಯವಿನಯವಂತೆ ಸೌಮ್ಯ ಸುಶೀಲೆ
ನುಡಿದರೇ ಮೆಲುಮಾತು ನುಡಿದಂತೆ ವೀಣೆ
ಅಭಿಮಾನ ಅಕ್ಕರೆಗಳ ಬತ್ತದ ಸೆಲೆ
[15/1/2022, 10:06 am] Dr. B. N. Shylaja Ramesh: ಎಳ್ಳು ಕಡಲೆಯು ತುರಿಯು
ಬೆಲ್ಲ ಬೆರೆಸಲು ಸಿಹಿಯು
ಎರೆದು ಕೊಟ್ಟರೆ ಫಲವು
ಆ ಫಲವ ನೀಡಲಿ ಸಂಕ್ರಾಂತಿಯು

ಸಂಕ್ರಾಂತಿ ಹಬ್ಬದ ಶುಭಾಶಯಗಳು💐💐💐
[17/1/2022, 4:23 pm] Dr. B. N. Shylaja Ramesh: ಇದು ತರವೇ..?

ಇನ್ನೆಷ್ಟು ಕಾಡಿಸುವೆ ಕೃಷ್ಣ
ಕಾಯಿಸಿ ಸತಾಯಿಸುವುದು
ಹೇಳು ನಿನಗೆ ತರವೇನು..?
ಎಡೆಬಿಡದಲೇ ಕಾಯುತಿಹ
ಈ ರಾಧೆಯ ಪಾಲಿಗಿನ್ನು
ವಿರಹದುರಿಯೇ ಗತಿಯೇನು.?

ಯಮುನೆಯ ದಡದಲ್ಲಂದು
ಬಳಸೆನ್ನ  ನಡುವನು ಮೆಲ್ಲ
ನೀ ನುಡಿದದ್ದೆಲ್ಲ ಹುಸಿಯೇ..
ಸಮ್ಮೋಹಗೊಳಿಸುವ ಕೊಳಲ
ಆ ಕರ್ಣಾಮೃತ ಕರೆ ಎನ್ನ
ಸೆಳೆದೆಳೆದದ್ದೂ ಹುಸಿಯೇ.?

ಅದೇ ನದಿದಂಡೆಯ ಮೇಲೆ
ಕೈಯ್ಯಲಿಡಿದು ತುಳಸಿಮಾಲೆ
ನಿನಗಾಗಿ ಕಾದಿರುವೆ ಬಾರಾ
ಸಿಹಿನಗುವ ಮರೆತು ಸದಾ
ನಿನ್ನ ಸವಿನೆನಪಲೇ ಮಿಳಿತವಳ
ಕಡೆಗೊಮ್ಮೆ ಕೃಪೆಯ ತೋರಾ.!

ಮನದ ಮಂದಿರದಲ್ಲಿ ನಗುತ
ಕುಳಿತಿರುವ ಹೇ ಮಾಧವನೆ
ಎದುರಿಗೊಮ್ಮೆ ನೀನೇಕೆ ಬರಲೊಲ್ಲೆ
ನಿನ್ನ ಕಾಣದೇ ಕ್ಷಣಕ್ಷಣವು
ಯುಗವಾಗಿ ಪರಿಣಮಿಸಿ
ಬಾಡುತಿಹುದು ಮನದ ಮಲ್ಲೆ..!

ಸಾಕಿನ್ನು ಬಂದುಬಿಡು ಬೇಗ
ಇನ್ನೆಷ್ಟು ಕಾಯಲಿ ಹೇಳು
ಬೇಡ ಕಣ್ಣಾಮುಚ್ಚಾಲೆ ಆಟ
ನಿನ್ನ ಕಾಣುವ ಹಂಬಲದಿ
ನೀ ಬರುವ ದಾರಿಯೆಡೆಗೇ
ಕುಳಿತಿರುವೆ ನೆಟ್ಟು ನೋಟ.!


             ಶೈಲೂ......
[19/1/2022, 5:09 pm] Dr. B. N. Shylaja Ramesh: #ಹೊಂದಿಕೋ_ಮನಸೇ

ಹೊಂದಿಕೋ ಮನಸೇ ನೀ ಸುಮ್ಮನೇ
ಬೇಡದ ನೆನಪಿಗೂ ಕಾಡುವ ಕನಸಿಗೂ
ಕುಂಟು ನೆಪವೊಡ್ಡುವ ಹುಸಿಮುನಿಸಿಗೂ
ನೊಂದುಕೊಳ್ಳಲೇ ಬೇಡ ನೀನೆಂದಿಗೂ

ಅರಿತುಕೊ ಮನಸೇ ಈ ಕಟುಸತ್ಯವ
ನಿನ್ನವರು ಯಾರಿಲ್ಲ ನೀ ಬಿದ್ದರೂ
ಸಂತೈಸುವರಾರಿಲ್ಲ ನೀ ನೊಂದರೂ
ಉರಿದುರಿದು ಬೀಳುವರು ನೀ ಗೆದ್ದರೂ

ತಡೆದುಕೋ ಮನಸೇ ನೀ ದುಃಖವಾ
ಸವಿ ಮಾತಲೇ ಚಾಟಿ ಬೀಸಿದರೂ
ನಗು ನಗುತಲೆ ನಿನ್ನ ಬೆನ್ನಿಗಿರಿದರೂ
ನಡೆವ ಹಾದಿಗವರು ಮುಳ್ಳಾದರೂ

ಕಾಯುತಿರು ಮನಸೇ ನಾಳಿನ ಬೆಳಕಿಗೆ
ಬದುಕ ಕತ್ತಲೆ ಕಳೆವ ಹೊಸ ಹುರುಪಿಗೆ
ಗುರಿಯೆಡೆಗೆ ನಡೆವ ಹೊಸದಾರಿಗೆ

ಇನ್ನೆಷ್ಟು ದಿನ ಕಾಡೀತು ಹೇಳು.?
ಕಿತ್ತು ತಿನ್ನುವ ರಣಹದ್ದ ನೋವು
ಎಲ್ಲಕ್ಕೂ ಇರುವುದು ಕೇಳು ಅಂತ್ಯವು
ತಡೆಹಿಡಿದು ನುಂಗಿಬಿಡು ಹಿಂಡುವ ನೋವು

ಭೂತಕಾಲದ ಬವಣೆ ತಾ ಕರಗಿ
ಭವಿತದ ಮುನ್ನುಡಿಗೆ ದೀಪಬೆಳಗಿ
ಕಂಡ ಕನಸುಗಳೆಲ್ಲ ಸಾಕಾರವಾಗಿ
ಖುಷಿಯ ಕ್ಷಣ ಕಾದಿದೆ ನಿನ್ನ ನಗುವಿಗಾಗಿ

ಸಕಾಲದವರೆಗೆ ಸಾವರಿಸಿಕೋ ಮನವೇ
ನೋವಿಗೂ ನಲಿವಿಗೂ ನೀ ಕುಗ್ಗದೇ
ಭಾವಣೆಗಳ ಭಾರಕ್ಕೆ ನೀ ಜಗ್ಗದೇ
ಹೊಂದಿಕೋ ಮನಸೇ ನೊಂದುಕೊಳ್ಳದೇ

           ಶೈಲೂ......
[19/1/2022, 5:13 pm] Dr. B. N. Shylaja Ramesh: #ಹೊಂದಿಕೋ_ಮನಸೇ

ಹೊಂದಿಕೋ ಮನಸೇ ನೀ ಸುಮ್ಮನೇ
ಬೇಡದ ನೆನಪಿಗೂ ಕಾಡುವ ಕನಸಿಗೂ
ಕುಂಟು ನೆಪವೊಡ್ಡುವ ಹುಸಿಮುನಿಸಿಗೂ
ನೊಂದುಕೊಳ್ಳಲೇ ಬೇಡ ನೀನೆಂದಿಗೂ

ಅರಿತುಕೊ ಮನಸೇ ಈ ಕಟುಸತ್ಯವ
ನಿನ್ನವರು ಯಾರಿಲ್ಲ ನೀ ಬಿದ್ದರೂ
ಸಂತೈಸುವರಾರಿಲ್ಲ ನೀ ನೊಂದರೂ
ಉರಿದುರಿದು ಬೀಳುವರು ನೀ ಗೆದ್ದರೂ

ತಡೆದುಕೋ ಮನಸೇ ನೀ ದುಃಖವಾ
ಸವಿ ಮಾತಲೇ ಚಾಟಿ ಬೀಸಿದರೂ
ನಗು ನಗುತಲೆ ನಿನ್ನ ಬೆನ್ನಿಗಿರಿದರೂ
ನಡೆವ ಹಾದಿಗವರು ಮುಳ್ಳಾದರೂ

ಕಾಯುತಿರು ಮನಸೇ ನಾಳಿನ ಬೆಳಕಿಗೆ
ಬದುಕ ಕತ್ತಲೆ ಕಳೆವ ಹೊಸ ಹುರುಪಿಗೆ
ಗುರಿಯೆಡೆಗೆ ನಡೆಸುವ ಹೊಸದಾರಿಗೆ
ತಲೆಯೆತ್ತಿ ಬಾಳುವ ಹೊಸ ಬದುಕಿಗೆ

ಇನ್ನೆಷ್ಟು ದಿನ ಕಾಡೀತು ಹೇಳು.?
ಕಿತ್ತು ತಿನ್ನುವ ರಣಹದ್ದ ನೋವು
ಎಲ್ಲಕ್ಕೂ ಇರುವುದು ಕೇಳು ಅಂತ್ಯವು
ತಡೆಹಿಡಿದು ನುಂಗಿಬಿಡು ಹಿಂಡುವ ನೋವು

ಭೂತಕಾಲದ ಬವಣೆ ತಾ ಕರಗಿ
ಭವಿತದ ಮುನ್ನುಡಿಗೆ ದೀಪಬೆಳಗಿ
ಕಂಡ ಕನಸುಗಳೆಲ್ಲ ಸಾಕಾರವಾಗಿ
ಖುಷಿಯ ಕ್ಷಣ ಕಾದಿದೆ ನಿನ್ನ ನಗುವಿಗಾಗಿ

ಸಕಾಲದವರೆಗೆ ಸಾವರಿಸಿಕೋ ಮನವೇ
ನೋವಿಗೂ ನಲಿವಿಗೂ ನೀ ಕುಗ್ಗದೇ
ಭಾವಣೆಗಳ ಭಾರಕ್ಕೆ ನೀ ಜಗ್ಗದೇ
ಹೊಂದಿಕೋ ಮನಸೇ ನೊಂದುಕೊಳ್ಳದೇ

           ಶೈಲೂ......
[23/1/2022, 6:16 pm] Dr. B. N. Shylaja Ramesh: ನಾವಿಬ್ಬರೊಂದೇ..!!
*****************

ನಾವಿಬ್ಬರೊಂದೇ ಯಾಕೀ ಮೊರೆತ
ಬೇರಾದರೂ ಬೇರಲ್ಲವಿದು  ಆನೃತ
ಪ್ರುರುಷ - ಪ್ರಕೃತಿ ಒಂದಾದ ವೇಷ
ತಿಳಿ ನಾವರ್ಧನಾರೀ ಪುರುಷ

ನಾ ನಿನ್ನ ಕೈಯೊಳ ಕೊಳಲು
ನೀನಾಗಿ ಹೊಮ್ಮಿ ಅದರ ದನಿ
ಬೆಸೆದು ನವ ರಾಗ ಹೊಸೆಯೇ
ಹೊರಹೊಮ್ಮದೇ  ಇನಿದನಿ.?

ನಾನವನಿ ನೀನಾದೆ ಅಂಬರ
ಭೋರ್ಗರೆದು ಪ್ರೇಮ ಧಾರಾಕಾರ
ಎನಿಂಥ ಚುಂಬಕ ಸೆಳೆತವೀ ಅಮಲು.!
ತಡೆಹಿಡಿಯಿತೇ ಕಯ್ಯಲ್ಲಿನ ಕೊಳಲು ?

ತುಸು ಲಜ್ಜೆ ಬೆರೆಸಲಾರೆ ಕಣ್ಣು
ಇಂಥ ಸನಿಹ ಎದುರಿಸಲ್ಹೇಗೆ ನಾ ಹೆಣ್ಣು.!
ನೀಲದೊಳಗೇ ಗೌರ ಮಿಳಿತು
ನೀಲವಾಯ್ತು ಜಗ ಅವನೊಡನೆ ಕಲೆತು

ಹೇಗಿದ್ದರೂ ನಾವಿಬ್ಬರೊಂದು
ಬಿಡಿಸಲಾಗದ್ದು ಅನಂತವೀ ಸಖ್ಯ
ನಿನ್ನೊಳಗೆ ನಾನಾಗಿ ನನ್ನೊಳು ನೀನು
ದೂರಾಗದೆ ಬೆರೆಯುವುದು ಮುಖ್ಯ

              ಶೈಲೂ.....
[28/1/2022, 2:26 pm] Dr. B. N. Shylaja Ramesh: ಕಿವಿಮಾತು
*********

ಅಂಧಕಾರವ ಸರಿಸು
ಧೃಡಹೆಜ್ಜೆಯನಿರಿಸು
ತಂತಾನೇ ಹೊಳೆಯುವುದು
ಬಾಳಲ್ಲಿ ಬೆಳಕು...

ನಡೆವ ಹಾದಿಯಲುಂಟು
ಕಲ್ಲು ಮುಳ್ಳುಗಳ ನಂಟು
ಸರಿಸುತ್ತ ನಡೆದರಿಹುದು
ಗೆಲುವೆಂಬ ಬೆಳಕು...

ನಿನ್ನನನುಸರಿಸುವವರಿಗೆ
ನೀನಾಗು ಮಾದರಿ
ನುಂಗುತ್ತ ಒಳಗೊಳಗೇ
ಒಡಲೊಳಗೆ ದಳ್ಳುರಿ...

ಹರಿತ ನಂಜು ನಾಲಿಗೆಗೆ
ಆಹಾರವಾಗಬೇಡ
ಗಟ್ಟಿ ಮಾಡಿಕೋ ಮನವ
ದುರುಳಜನರ ಮೆಟ್ಟಿನಿಲ್ಲು...

ಮೃದುಮನದ ಹೂ ನೀನು
ಮುಳ್ಳಾಗು ಒಮ್ಮೊಮ್ಮೆ
ಕಿತ್ತು ನೋಯಿಸುವವರ
ಕೈ ಚುಚ್ಚಿ ಧಿಕ್ಕರಿಸಿ ಬಿಡು...

ಸಜ್ಜಿಗೆಯ ಸಿಹಿಯಾಗು
ಸಜ್ಜನರ ಸವಿ ನುಡಿಗೆ
ತಲೆಬಾಗು ಸಂಯಮದಿ
ಗುರುಹಿರಿಯರಾಣತಿಗೆ...

ದಯೆಯಲಿಹುದು ಸದ್ಧರ್ಮ
ಅದುವೇ ಜೀವನದ ಮರ್ಮ
ಸದ್ವಚನದಾಂಮೃತಪಾನ
ಅದರ್ಶಜೀವನಕೆ ಸೋಪಾನ...
       ಶೈಲೂ....
[31/1/2022, 10:25 am] Dr. B. N. Shylaja Ramesh: ಓದುವುದಕಿರಲಿ ಸದಾಶಯ
ಬರಹಕದೇ ಬಹು ವಿಷಯ
ಅರಿವು ಮೂಡಿದರೆ ತಾನೇ
ಬರಹವೇರುವುದು ಮೇನೇ

ಹಳತೆನ್ನುವುದಾವುದೂ ಇಲ್ಲ
ಓದೇ ಅರಿವಾಗುವುದು ಎಲ್ಲ
ಬರಹಕದೆ ಭವ್ಯ ಅಡಿಪಾಯ
ಎತ್ತೆತ್ತರಕ್ಕೇರಿಸುವ ದ್ವಜಾಯ

ಸೃಜನಶೀಲತೆಯ ದಿವ್ಯಮಂತ್ರ
ಹವ್ಯಾಸವದೇ ಓದುವ ತಂತ್ರ
ಶೋಧಿಸಲೇಬೇಕು ಅಗೆದಗೆದು
ಬುದ್ಧಿಯರಳುವುದು ಜಿಗಿಜಿಗಿದು

ಅರಿವಿನಲರಳಲಿ ನವ್ಯಬರಹ
ಪಸರಿಸುತ ಬೆಳಗಲಿ ಇಹ
ವಿಸ್ತರಿಸುತ ಬಾಹ್ಯ ಅನಂತ
ಉಳಿಯಲಿ ಅಳಿಯದೆ ಶಾಶ್ವತ

      ಶೈಲೂ.....
[31/1/2022, 3:09 pm] Dr. B. N. Shylaja Ramesh: ಜೀವನಯಾನ
************

ಕೈಬೀಸಿ ಕರೆವ ಕನಸುಗಳ
ನಗೆಬೀರಿ ಸೆಳೆವ ಮನಸುಗಳ
ಜೊತೆ ಸಾಗುತಿದೆ ಜೀವನ ಯಾನ

ಹೊಂಗನಸ ತರುವ ಸ್ನೇಹಗಳ
ಮನಕೆ ಮುದ ತರುವ ಪ್ರೇಮಗಳ
ಜೊತೆ ಸಾಗಿದೆ ಜೀವನ ಯಾನ

ಬರುವ ಭರವಸೆಯ ನಾಳೆಗಳಿಗಾಗಿ
ಕಳೆದ ನಿನ್ನೆಗಳ ನೆನಪಿನ ಕುರುಹಾಗಿ
ಸಾಗುತಿದೆ ಜೀವನ ಯಾನ

ಮುದಕೊಟ್ಟ  ಸಾಂಗತ್ಯದ ಸವಿನೆನಪಿನಲ್ಲಿ
ಒತ್ತರಿಸಿ ಬಂದ ಸುಖದಲೆಯಲ್ಲಿ
ಸಾಗುತ್ತಿದೆ ಜೀವನ ಯಾನ

ಮದುರಭಾವಗಳ ತೆರೆಯ ಮರೆಯಲ್ಲಿ
ಮನದ ತಳಮಳದ ಅಲೆಅಲೆಯಲ್ಲಿ
ಸಾಗುತ್ತಿದೆ ಜೀವನಯಾನ....

           ಶೈಲೂ......
[1/2/2022, 6:39 pm] Dr. B. N. Shylaja Ramesh: ನನ್ನ ನಿನ್ನ ನಡುವೆ
ಇತ್ತೊಂದು ಸೇತುವೆ
ಬೇಕಿರಲಿಲ್ಲ ಮಾತ ಗೊಡವೆ
ಅರುಹುತ್ತಿತ್ತೆಲ್ಲ ಮನದ ಭಾವವೇ

ಸೇತುವೆಗೆ ಬೇಕಂತೆ ಸುಂಕ
ಕಟ್ಟದಿರೆ ಪರದೆಯ ಅಂಕ
ಸಂಧಿಸಲಿನ್ನೆಲ್ಲಿದೆ ತಾಣ.?
ಭಾವ ವಿನಿಮಯದ ಅಂಕಣ

ತಿಳಿಯಲ್ಹೇಗಿನ್ನು ಯೋಗಕ್ಷೇಮ
ಜೊತೆಗೆ ಲೇಖನಿಯ ಪರಾಕ್ರಮ
ಮುದಕೊಡುತ್ತಿತ್ತು ನಿನ್ನ ಬರಹ
ಇದ್ದಂತನಿಸುತ್ತಿತ್ತು ನಿನ್ನ ಸನಿಹ

ವಾಟ್ಸಾಪ್ ಫೇಸ್ಬುಕ್ ನಾನೊಲ್ಲೆ
ಅದರಿಂದಾದವಾಂತರ ನೀ ಬಲ್ಲೆ
ಮತ್ತೆಲ್ಲಿ ಸಿಗುವೆಹೇಳು ಗೆಳೆಯಾ
ನಿನ್ನ ಬರಹದಭಿಮಾನಿ ನಾ ಬಲ್ಲೆಯಾ

              ಶೈಲೂ....
[4/2/2022, 1:42 pm] Dr. B. N. Shylaja Ramesh: #ನನ್ನೆದೆಯ_ಭಾವಗಳೇ

ಎಲ್ಲಿ ಅವಿತಿರುವಿರಿ ನನ್ನೆದೆಯ ಭಾವಗಳೇ
ಮನಸಿನರಮನೆಯ ತೆರವುಗೊಳಿಸಿ
ಮನದ ಮಾತನು ಮರೆಸಿ ಮೌನವಾಗಿಹಿರೇಕೆ.?
ಭಾವನೆಯ ತಂತುಗಳ ಬರಿದುಗೊಳಿಸಿ.!

ಭಾವನೆಯೇ ಬರಡಾದರಿನ್ನೇನಿಹುದು ತಿರುಳು
ಮನದ ಮಲ್ಲಿಗೆಯು ಅರಳಲೆಂತು.?
ಸ್ಫೂರ್ತಿಯ ಸೆಲೆಯೇ ಬತ್ತಿಹೋದಂತಾದಾಗ
ನಗೆಮಲ್ಲಿಗೆಯು ಕಂಪು ಬೀರಲೆಂತು.?

ಮುನಿಸ ತೊರೆದು ಮತ್ತೆ ಒಂದಾಗಿ ಭಾವಗಳೇ
ಎದೆನೆಲದಲ್ಲಿ ಸವಿಗನಸು ಬಿತ್ತಿ..!
ಎನ್ನೆದೆಯ ಗುಡಿಯಲ್ಲಿ ನೆಲೆಸಿರಿ ಸತತವೂ
ಬೆಳಗಿ ಸುಜ್ಞಾನ ದೀವಿಗೆಯ ಹೊತ್ತಿ.!

ವಿಷಯಗಳನಂತ ಸಾಲು ಲಗುಬಗೆಯಲಿ ನಿಂತು
ಕಾದಿಹವು ಬರಹ ರೂಪದಿ ತೆರೆಯೇ.!
ಮರೆಯಾಗಿದೆ ಅದೆಲ್ಲೋ ಅರಿವಿನಕ್ಕರಗಳು ಸಿಗದೆ
ಬಿಂಬಿಸಲು ಸೂಕ್ತ ಪದಗಳ ಅರಿಯೇ.!

ಸದ್ವಿಚಾರಗಳನ್ನು ಜೊತೆಗೆ ಬದುಕು ಬವಣೆಗಳನ್ನು
ತೆರೆದಿಡಬೇಕು ಬರಹದೆ ಭವ್ಯವಾಗಿ.!
ಬಿಡಿಸಿ ಹೇಳಲು ಅರಿಯೇ ಮರೆತು ಸುಮ್ಮನಿರಲಾರೆ
ಸೋಲು ಸಹಿಸುತ್ತಿರುವೆ ಮೌನವಾಗಿ.!

ಮನದ ಮಿಡಿತವನರುಹೆ  ಶಬ್ಧಗಳೇ ಸಿಗದಾಗ
ಮೌನವನು ಹೊದ್ದ ಏಕಾಂಗಿ ನಾನು.!
ಭಾವತಂತುಗಳು ಬಳಿಸಾರಿ ತಾ ಬರಲು
ಜೊತೆಗೆನ್ನ ಸದ್ಭಾವ ಬೆರೆಸುವೆನು.!

ಸ್ಪೂರ್ತಿಯುಕ್ಕುವ ಸೆಲೆಯು ಎಲ್ಲಿಹುದೋ ಕಾಣೆ
ಅಗೆದು ಬಗೆಯಬೇಕೇನು ಅರಿವಿನೊಡಲು.?
ಒರೆಗ್ಹಚ್ಚಿದೊಡನೆ ಜೊತೆಯಾಗಲಿ ಭಾವಗಳು
ತುಂಬಿ ತುಳುಕಲಿ ನಿತ್ಯ ನನ್ನ ಮಡಿಲು.!

ಬಂದುಬಿಡಿ ಮತ್ತೇ ನನ್ನೆದೆಯ ಭಾವಗಳೇ
ಸಪ್ತಸಾಗರದಾಚೆ ಅವಿತಿದ್ದರೂ..!
ಮೌನವನು ತುಂಡರಿಸಿ, ಮೂಕಭಾವವನಳಿಸಿ
ಹೆಸರುಳಿಸಿರಿ ನನ್ನ ಉಸಿರಳಿದರೂ..!

            #ಶೈಲೂ....
[4/2/2022, 1:45 pm] Dr. B. N. Shylaja Ramesh: #ನನ್ನೆದೆಯ_ಭಾವಗಳೇ

ಎಲ್ಲಿ ಅವಿತಿರುವಿರಿ ನನ್ನೆದೆಯ ಭಾವಗಳೇ
ಮನಸಿನರಮನೆಯ ತೆರವುಗೊಳಿಸಿ
ಮನದ ಮಾತನು ಮರೆಸಿ ಮೌನವಾಗಿಹಿರೇಕೆ.?
ಭಾವನೆಯ ತಂತುಗಳ ಬರಿದುಗೊಳಿಸಿ.!

ಭಾವನೆಯೇ ಬರಡಾದರಿನ್ನೇನಿಹುದು ತಿರುಳು
ಮನದ ಮಲ್ಲಿಗೆಯು ಅರಳಲೆಂತು.?
ಸ್ಫೂರ್ತಿಯ ಸೆಲೆಯೇ ಬತ್ತಿಹೋದಂತಾದಾಗ
ನಗೆಮಲ್ಲಿಗೆಯು ಕಂಪು ಬೀರಲೆಂತು.?

ವಿಷಯಗಳನಂತ ಸಾಲು ಲಗುಬಗೆಯಲಿ ನಿಂತು
ಕಾದಿಹವು ಬರಹ ರೂಪದಿ ತೆರೆಯೇ.!
ಮರೆಯಾಗಿದೆ ಅದೆಲ್ಲೋ ಅರಿವಿನಕ್ಕರಗಳು ಸಿಗದೆ
ಬಿಂಬಿಸಲು ಸೂಕ್ತ ಪದಗಳ ಅರಿಯೇ.!

ಸದ್ವಿಚಾರಗಳನ್ನು ಜೊತೆಗೆ ಬದುಕು ಬವಣೆಗಳನ್ನು
ತೆರೆದಿಡಬೇಕು ಬರಹದೆ ಭವ್ಯವಾಗಿ.!
ಬಿಡಿಸಿ ಹೇಳಲು ಅರಿಯೇ ಮರೆತು ಸುಮ್ಮನಿರಲಾರೆ
ಸೋಲು ಸಹಿಸುತ್ತಿರುವೆ ಮೌನವಾಗಿ.!

ಮನದ ಮಿಡಿತವನರುಹೆ  ಶಬ್ಧಗಳೇ ಸಿಗದಾಗ
ಮೌನವನು ಹೊದ್ದ ಏಕಾಂಗಿ ನಾನು.!
ಭಾವತಂತುಗಳು ಬಳಿಸಾರಿ ತಾ ಬರಲು
ಜೊತೆಗೆನ್ನ ಸದ್ಭಾವ ಬೆರೆಸುವೆನು.!

ಸ್ಪೂರ್ತಿಯುಕ್ಕುವ ಸೆಲೆಯು ಎಲ್ಲಿಹುದೋ ಕಾಣೆ
ಅಗೆದು ಬಗೆಯಬೇಕೇನು ಅರಿವಿನೊಡಲು.?
ಒರೆಗ್ಹಚ್ಚಿದೊಡನೆ ಜೊತೆಯಾಗಲಿ ಭಾವಗಳು
ತುಂಬಿ ತುಳುಕಲಿ ನಿತ್ಯ ನನ್ನ ಮಡಿಲು.!

ಮುನಿಸ ತೊರೆದು ಮತ್ತೆ ಒಂದಾಗಿ ಭಾವಗಳೇ
ಎದೆನೆಲದಲ್ಲಿ ಸವಿಗನಸು ಬಿತ್ತಿ..!
ಎನ್ನೆದೆಯ ಗುಡಿಯಲ್ಲಿ ನೆಲೆಸಿರಿ ಸತತವೂ
ಬೆಳಗಿ ಸುಜ್ಞಾನ ದೀವಿಗೆಯ ಹೊತ್ತಿ.!

ಬಂದುಬಿಡಿ ಮತ್ತೇ ನನ್ನೆದೆಯ ಭಾವಗಳೇ
ಸಪ್ತಸಾಗರದಾಚೆ ಅವಿತಿದ್ದರೂ..!
ಮೌನವನು ತುಂಡರಿಸಿ, ಮೂಕಭಾವವನಳಿಸಿ
ಹೆಸರುಳಿಸಿರಿ ನನ್ನ ಉಸಿರಳಿದರೂ..!

            #ಶೈಲೂ....
[6/2/2022, 8:06 am] Dr. B. N. Shylaja Ramesh: ಕಳೆದುಹೋಗಿದೆ ಹೃದಯ
*********************

ಎಲ್ಲೋ ಕಳೆದಿದೆ ಗೆಳೆಯ
ಕನಸು ತುಂಬಿದ ಹೃದಯ
ನೆನಪಿನಂಗಳದಿ ಚಿಮ್ಮುತ್ತಿರುವ
ಕಾರಂಜಿಯಲಿ ನಾನಲಿಯುವಾಗ

ಎಲ್ಲೋ ಕಳೆದಿದೆ ಗೆಳೆಯ
ಕಂಡೊಡನೇ ಉಲಿವ  ಹೃದಯ
ಜಾರಿಹೋಗಿದೆಯೇನೋ
ಕಣ್ಣಂಚಲಿ ಮಿಂಚು ಸರಿದಾಗ

ಎಲ್ಲೋ ಕಳೆದಿದೆ ಗೆಳೆಯ
ಹುಚ್ಚು ಮನಸಿನ ಹೃದಯ
ನೀನುಲಿದ ಸ್ವರಮಾಧುರ್ಯದ
ಸವಿಜೇನ ಸವಿಯುವಾಗ

ಎಲ್ಲೋ ಕಳೆದಿದೆ ಗೆಳೆಯ
ನಿನ್ನ ಬಿಂಬ ತುಂಬಿದ.ಹೃದಯ
ನೀನೆದುರು ನಿಂತು ಹುಸಿನಗೆಯ
ಹೂಬಾಣ ಹೂಡಿದಾಗ

ಎಲ್ಲೆಲ್ಲಿ ಹುಡುಕಲಿ ಗೆಳೆಯ
ಕಾಣದಾಗಿದೆ ಬಡ ಹೃದಯ
ಸಿಕ್ಕರೆ ಬಚ್ಚಿಡು ಜೋಪಾನವಾಗಿ
ಹೆಚ್ಚೇನು ಹೇಳಲಿ ಹೆಜ್ಜೆಹಾಕು 
ಜೊತೆಜೊತೆಯಾಗಿ

          ಶೈಲೂ......
[6/2/2022, 8:08 am] Dr. B. N. Shylaja Ramesh: #ನಾನೇಕೆ_ಬರೆಯುತ್ತೇನೆ.?

ಇನ್ನೂ ಅರ್ಥವಾಗಿಲ್ಲ ನನಗೆ ನಾನೇಕೆ ಬರೆಯುತ್ತೇನೆ.?
ಏನಿದ್ದೀತು..?  ವಿಚಾರ ಅರಿಯಲು ಹೆಣಗುತ್ತಿದ್ದೇನೆ
ಭಾವಗಳ ಬಿಂಬಿಸಲು ಪದಪುಂಜ ಸಿಕ್ಕಿದ್ದರಿಂದಿರಬಹುದೇ.?
ಮನದ ಭಾವನೆಯ ಹೊರಕಾಕಿ ನಿಶ್ಚಿಂತಳಾಗಲಿರಬಹುದೇ.?

ಮಡುಗಟ್ಟಿದ ನೋವುಗಳನ್ನೆಲ್ಲ ಪದಗಟ್ಟಲಿ ಬಂಧಿಸಿಟ್ಟು
ಮನದಲುದ್ದೀಪಿಸಿದ ಪ್ರೇಮ ಭಾವ ಸರಾಗ ಹರಿಯಬಿಟ್ಟು
ಸ್ನೇಹ ಸಿಂಚನದಿ ಮನ ಪ್ರಫುಲ್ಲವಾಗಲೆಂದು ತೆರೆದಿಟ್ಟು
ಬರೆಯುತ್ತಿರಬೇಕು ಬಹುಶಃ ಭಾವನೆಗಳಿಗೆ ಬೆಲೆಕೊಟ್ಟು..!

ಕಂಡ ಕನಸುಗಳಿಗೆ ಬಣ್ಣದ ರೆಕ್ಕೆಕಟ್ಟಿ ಸಿಂಗರಿಸಿ ಹಾರಿಸಿ
ನೆನಪುಗಳು ಗರಿಬಿಚ್ಚಿ ಕುಣಿಯಲು ಶಾಂತದಿಂದಾಸ್ವಾದಿಸಿ
ಕಂಡು ಕೇಳಿದ ಕಥೆ, ನಿಜಾಯತಿಯ ಆಸ್ಥೆಯಲಿ ವರ್ಣಿಸಿ
ಓದುಗರ ಮುಂದಿಡಲು ಹಪಹಪಿಸುತ್ತಿರಬೇಕು ಮನ ಬಯಸಿ.!

ಅದೆಷ್ಟೋ ವಿಷಯಗಳೆಡೆ ಭಾವಸಂಘರ್ಷ ಎದೆಯೊಳಗೆ
ಮೆಲುಕಲಿವೆ ಅನೇಕ ಸಿಹಿನೆನಪ ಪಲಕು ಮನದೊಳಗೆ
ಬವಣೆಗಳ ಸುತ್ತ ಭಾವುಕ ಮನದ ನೋವಿನಲಳ ಹುದುರೊಳಗೆ
ತತ್ತರಿಸಿದ ಭಾವದೆಳೆಗಳು ಹೊರಹೊಮ್ಮಿರಬೇಕು ಪದದೊಳಗೆ..!

ಶ್ರೀವಾಣಿಯ ಕೃಪೆಗೊಂದಿಷ್ಟು ಭಕ್ತಿಸಮರ್ಪಣಾ ಭಾವವಿರಬಹುದು
ಹೆತ್ತು ಕೈಪಿಡಿದು ನಡೆಸಿದವರಿಗೆ ಕೃತಜ್ಞತಾಭಾವವಿರಬಹುದು
ಮೆಚ್ಚಿ, ಬದುಕಿತ್ತ ಪ್ರೀತಿಯೆಡೆಗೆ ಆರಾಧನಾಭಾವವಿರಬಹುದು
ಈ ಎಲ್ಲ ರಸಭಾವಗಳು ಕಾವ್ಯವಾಗರಿಯುತ್ತಿರಬಹುದು..!

ಯಾರು ಮೆಚ್ಚಲೆಂದಲ್ಲ ಬರಹ, ಎಲ್ಲ ಭಾವುಕ ಮನದ ಮಾತು
ಮೆಚ್ಚಿ ಹರಸುವ ಮಂದಿಯೊಳಗೆ ಸ್ನೇಹಪೂರ್ವಕ ಬೆರೆತು
ಪ್ರೌಢ, ಭಾವುಕ,ಬಾಲಿಶ ಏನಿದೆಯೋ ಅರಿಯೇ ತಲೆಯೊಳಗೆ
ಬರೆದಿದ್ದೆಲ್ಲವೂ ಸಮರ್ಪಿತ ಎನ್ನೊಡೆಯ ಮಾಧವನ ಪದತಲಕೆ

               #ಶೈಲೂ......
[6/2/2022, 2:36 pm] Dr. B. N. Shylaja Ramesh: #ಭಿನ್ನಳಲ್ಲ_ವಿಭಿನ್ನ

ಕೃಷ್ಣನೊಲುಮೆಯ ಪಡೆದ ಕೃಷ್ಣೆ ನಾ
ಮನಸು ಮಾತ್ರ ಹೊಳೆವ ಚಿನ್ನ
ಪ್ರೀತಿಸುವ ಹೃದಯಕ್ಕಾಕುವೆ ಕನ್ನ
ಎಲ್ಲರಂತಲ್ಲ ನಾ ಸ್ವಲ್ಪ ಭಿನ್ನ..!

ಕಲಿಕೆಯಲಿಹುದು ಅತ್ಯಾಸಕ್ತಿ
ವಿಷಯಗಳಲೆಕೋ ನಿರಾಸಕ್ತಿ😌
ಬಯಸುತ್ತಿದೆ ಮನವೇಕೋ ವಿರಕ್ತಿ
ಎಲ್ಲರಂತಲ್ಲ ನಾ ತುಸು ವಿಭಿನ್ನ..!

ಸ್ವಚ್ಛ ಸ್ನೇಹಕೆ ಸದಾ ಜೈ ಜೈ ಜೈ
ಆದರಿಸುವ ಮನಗಳಿಗೆ ಮುಗಿವೆ ಕೈ
ಸವಾಲು, ಜವಾಬಿಗೂ ಸೈ ಸೈ ಸೈ
ವಿಭಿನ್ನತೆಯಲಿ ನಾನು ಮೇಲುಗೈ

ಕೊಂಕುಮಾತಿಗೆ ಮುದುಡುತ್ತದೆ ಮನ
ಆತ್ಮೀಯತೆಗೆ ತಲೆಬಾಗುವ ಗುಣ
ಎದುರಾಡುವವಳಲ್ಲ ವಿನಾಕಾರಣ
ಎಲ್ಲರಂತಲ್ಲ ನಾ ತುಸುವೇ ಭಿನ್ನ..!

ವಿಷ ಕಾರುವವರೊಡನೆ ಅಂತರ
ಪ್ರೀತಿಸುವವರೊಡನೆ ಸ್ನೇಹ ನಿರಂತರ
ಮೇಲು ಕೀಳಿಲ್ಲ ಎಲ್ಲರಲಿ ಸಮಾನಾಂತರ
ಎಲ್ಲರಂತಲ್ಲ ನಾ ಸ್ವಲ್ಪ ಭಿನ್ನ..!

ಒಳಗೊಂದು ಹೊರಗೊಂದು ನಾನೊಲ್ಲೆ
ನಂಬಿಕೆಗಾಗಿ ಪ್ರಾಣವನೂ ಕೊಡಬಲ್ಲೆ
ಅರಿತವರಿಗೆ ನಾ ಕಂಪು ಬೀರುವ ಮಲ್ಲೆ😊
ಮನವೊಪ್ಪದೆಡೆಯಲ್ಲರೆಕ್ಷಣವೂ ಇರಲೊಲ್ಲೆ

ಹೆಚ್ಚು ಮಾತಿನವಳು ನಾನಲ್ಲ
ಮಾತನಾಡಿದರೆ ಸಿಹಿಸಿಹಿ ಬೆಲ್ಲ
ಮೇಲ್ಕಾಣಿಸುವಷ್ಟೇನೂ ಒರಟಲ್ಲ
ವಿಭಿನ್ನಳು ನಾನು ಎಲ್ಲರಂತಲ್ಲ..!

ಸಂಬಂಧಗಳಿಗೆ ಬೆಲೆಕೊಡುವವಳು
ಸನ್ಮಾರ್ಗದಲ್ಲೇ ನಡೆಯುವವಳು
ದೂರಾದವರಿಂದ ನಾ ಬಹಳವೇ ದೂರ
ದ್ವೇಷಕ್ಕೆ ಕಾಯ್ದುಕೊಳ್ಳುವೆ ಅಂತರ.!

ನನ್ನಲ್ಲೂ ಇದೆ ಅಲ್ಪಸ್ವಲ್ಪ ಅಹಂಭಾವ
ಕಾರಣ ; ನಾನೂ ಮನುಷ್ಯಳೇ ಅಲ್ಲವಾ?
ಯಾರಿಗೂ ಕೇಡು ಬಯಸುವವಳಲ್ಲ..
ಕೇಡೆಣಿಗೆಸುವವರಿಂದ ಸರಿವೆ ಮೆಲ್ಲ.!

ಕನಸುಗಳಿವೆ ಎನಗೆ ನೂರಾರು
ನನಸಾಗುವೆಡೆ ಸಾಗಬೇಕು ಜರೂರು
ಕೈಗೂಡದಿದ್ದರೂ ಇಲ್ಲ ತಕರಾರು
ಕಾರಣ; ಸಾಂಸಾರಿಕ ನೆಮ್ಮದಿಯೇ ಉಸಿರು.!

ಮೇಲಿಹ ಹಣೆಬರಹ ಬರೆದವನು
ಪಾಲಿಸುವೆ ಅವನಿತ್ತನಾಣತಿಯನು
ಭಿನ್ನತೆಯಲೂ ವಿಭಿನ್ನವಾಗಿರಿಸೆನ್ನನು
ತೋರುತಿಹ ಸದಾ ಸನ್ಮಾರ್ಗವನು.!🙏

         ಶೈಲೂ.......
[7/2/2022, 10:06 am] Dr. B. N. Shylaja Ramesh: #ಮರೀಚಿಕೆ

ಬಾಯಾರಿ ಬಳಲಿದ್ದ
ಭೂಮಿಯಂತಾಗಿತ್ತು ನನ್ನ ಮನ
ಸೋನೆ ಮಳೆಯ ಸಿಂಚನದಂತೆ
ಪ್ರೀತಿ ಹೊಳೆ ಹರಿಸಿದ್ದೆ ನೀನಾದಿನ
ಉಬ್ಬಿಹೋಗಿದ್ದೆ ಮುದ್ದು ಮಾತಿಗೆ
ತುಂಬಿ ಕಣ್ಣಲ್ಲಿ ನೂರಾರು ಕನಸು
ಆಸೆ ತೋರಿಸಿ ಮಾಯವಾದದ್ದೇಕೆ
ನುಚ್ಚುನೂರಾಯ್ತು ನನ್ನೀ ಮನಸು
ಆಶಾಗೋಪುರವೆಂದೆಣಿಸಿದ್ದೆ
ನೀನಾದೆ ಬರಿದೇ ಮಾಯಾಜಿಂಕೆ
ಆಸೆಗಳ ಸುತ್ತ ನಾ ಓಡುತ್ತಿದ್ದೆ
ಅರಿವಾಯ್ತು ಅದೊಂದು ಮರೀಚಿಕೆ
ಶೋಕದಾಗಸದಲ್ಲಿ  ಮಿಣುಕುತ್ತಿದ್ದ
ಭರವಸೆಯ ಚುಕ್ಕಿ ಮರೆಯಾಯಿತೇನು
ಕಾರಿರುಳ ಕಿಂಡಿಯಲಿ ಹೊಳೆಯುತ್ತಿದ್ದ ಮಿಂಚು
 ಕೈಗೆಟುಕದ ಮರೀಚಿಕೆಯೇನು

      ಶೈಲೂ......
[8/2/2022, 4:10 pm] Dr. B. N. Shylaja Ramesh: ಗೆಳೆಯಾ....
ನೀ ಬರುವ ದಾರಿಯಲಿ..
ಗದ್ದಲದ ಗೌಜಿಲ್ಲ
ಕಾಯುವ ಕಾತರದ ಕ್ಷಣಗಳಿಲ್ಲ..
ನಿನ್ನಿರುವಿಕೆಯ ಒನಪಿಲ್ಲ ಬಿಸುಪಿಲ್ಲ
ಕದ್ದು ನೋಡುವ ಕಣ್ಣುಗಳಿಲ್ಲ
ಕಾಯುವಿಕೆಯಲ್ಲಿ ಕೌತುಕದ ಅಮಲಿಲ್ಲ
ಕಣ್ಣು ಹಾಯಿಸಿದಷ್ಟೂ 
ನೀ ಬಾರಲೇ ಇಲ್ಲ...

           ಶೈಲೂ....
[9/2/2022, 3:46 pm] Dr. B. N. Shylaja Ramesh: ಪ್ರೀತಿಯು ನೀನೇ ಪ್ರಾಣವೂ ನೀನೇ ಸಖೀ
ನೀನಿಲ್ಲದೀ ಜೀವನದಿ ಹೇಳು ನಾನೆಂಥ ಸುಖೀ.?
ನಾನಿನ್ನ ಮರೆತರಂದೇ, ಪ್ರೀತಿ ಹೆಸರಿಗೇ ಮರಣ
ನಾನಿನ್ನೂ ಜನಮನದಿ ನೆಲೆಸಿರಲು ನೀನೇ ಕಾರಣ
ರಾಧೇ, ನೀನೆ ಸ್ವಚ್ಛ ನಿಷ್ಕಲ್ಮಶ ಪ್ರೀತಿಗೆ ಹೆಸರು
ನಾನೆಲ್ಲಿದ್ದರೂ ನೀನೇ ಸಖೀ ಈ ಮಾಧವನ ಉಸಿರು..!

             ಶೈಲೂ.....
[15/2/2022, 10:45 am] Dr. B. N. Shylaja Ramesh: ಎಲ್ಲಿ ಜಾರಿತೋ ಮನವು

ಮುಂಜಾನೆ ರವಿ ಉದಯದ ಸಮಯ
ಬಲಗಾಲಿಟ್ಟು ಹೊಕ್ಕೆ ನೀ ನನ್ನ ಮನೆಯ
ಕಂಡಂದೇ ಬೆರಗಾದೆ ಆ ನಿನ್ನ ನಿಲುವು
ಎಲ್ಲಿ ಜಾರಿ ಹೋಯಿತೋ ನನ್ನ ಮನವು

ನಕ್ಕರೆ ಮುತ್ತು ಸುರಿದಂತ ಚೆಲುವು
ಚಿನ್ನಕ್ಕಿಂತಲೂ ಹೊಳಪಾದ ಮನವು
ತಲೆದೂಗುವಂತೆ ಮಾಡುವ ಆ ಮಾತಿನ ಮೋಡಿ
ಜಾರಿ ಹೋಯಿತು ಮನವು ಆ ಚೆಲುವ ನೋಡಿ

ಮಿಂಚಿಗಿಂತ ಹೊಳಪು ಆ ಕಣ್ಣ ಕಾಂತಿ
ತೆರೆಗೆ ಸರಿಸುವಂತಿದೆ ಮನದ ಭ್ರಾಂತಿ
ಕಂಡಾಕ್ಷಣವೇ ಜಾರಿಹೋಯಿತು ಮನವು
ಹಿರಿಯರೊಪ್ಪಿಗೆಯಲಿ ಒಂದಾಗಲಿ ತನುಮನವು

            ಶೈಲೂ...
[16/2/2022, 7:45 pm] Dr. B. N. Shylaja Ramesh: ಅವಳು....
ಎಂಥ ಮಾತು ಹೊರಗೆ ಬಂತು, ಹೇಳಿದು ಸರಿಯೇ
ಮುಗ್ಧ ಹೆಣ್ಣು ನಾನು ಎಂದು ನೀನೇಕೆ ಅರಿಯೇ.?
ಮಾನ ಬಿಟ್ಟು ಮನವ ಕೊಟ್ಟು ನಾನು ಉಳಿವೆನೇ.?
ಅಪ್ಪ ಕಂಡರೀಗ ಮತ್ತೆ ನನ್ನ ಹೊರಗೆ ಬಿಡುವನೇ

ಅವನು...
ಮನಸನಷ್ಟೇ ಕೇಳಿದ್ದು ನಾನು, ನಿನ್ನ ಪ್ರಾಣವಲ್ಲ
ಜತನ ಮಾಡಿ ನೋಡಿಕೊಂಬೆ, ಕಣ್ಣೀರು ತರಿಸಲ್ಲ
ನಿನಗೆ ಇಷ್ಟ ಇದ್ದರೇಳು, ಮಾವನ ಮಣಿಸುವೆ
ಮುದ್ದು ಅಳಿಯನ ತೆರದಿ ಅವರ ಮನವ ತಣಿಸುವೆ

ಅವಳು...
ಅಪ್ಪ ಮೆಚ್ಚಿದರಾಯಿತಿನ್ನು ಎನ್ನ ಮನಸು ನಿನ್ನದೇ
ಧಾರೆಯೆರೆದು ಕೊಟ್ಟ ಮೇಲೆ ನನ್ನ ಬದುಕು ನಿನ್ನದೇ
ಅರಿತು ಬೆರೆತು ಜೊತೆಗೆ ಬಾಳ್ವೆ, ಏನೇ ಬಂದರೂ
ಎದೆಯ ಮಿಡಿತ ಮನದ ತುಡಿತ ನಿನಗೇ ಮೀಸಲು

         ಶೈಲೂ.....
[18/2/2022, 4:31 pm] Dr. B. N. Shylaja Ramesh: ಚಿತ್ರಕ್ಕೊಂದು ಕವನ ##

ವಿಚಿತ್ರ - ವಿಸ್ಮಯ
***************
ಇದೆಂಥಾ ವಿಚಿತ್ರ ವಿಸ್ಮಯ ಲೋಕ
ಪ್ರಕೃತಿ ನೀಡಿದ ಕೊಡುಗೆ ಅದ್ಭುತ ನಾಕ
ಒಂದೇ ಬೊಡ್ಡೆಯಿದ್ದ ಕಲ್ಪವೃಕ್ಷವೂ
ಟಿಸಿಲೊಡೆದು ಕೊಂಬೆಪಡೆವುದದ್ಭುತವು

ಗರಿಗಳಿರುತಿತ್ತು ನಿಜ ಹಲವಾರು
ಇದೇನಿದು ಇಲ್ಲಿ ಕೊಂಬೆಗಳ ತೇರು
ಗೊನೆಗಳ ತುಂಬ ಕಾಯಿಗಳ ಕಾರುಬಾರು
ಸಹಜತೆಗೇ ಸವಾಲೆಸೆದಿದೆ ನೋಡು

ಬೆರಿನಿಂದ್ಹಿಡಿದು ನಾರಿನವರೆಗೂ ಬಹೂಪಯೋಗಿ
ತೆಂಗಿಲ್ಲದೇ ಬಾಣಸ ನೀರಸವಾಗಿ
ಉಣಲಾಗದಾವ ಖಾದ್ಯ ರಸಹೀನವೇ
ಶುಭಾಶುಭಗಳಿಗೆ ಶ್ರೇಷ್ಟ ನಾರಿಕೇಳವೆ..!!

ಕಣಕಣವೂ ಮನುಜನಿಗಾಗಿ ಮೀಸಲು
ಕಾಂಡದಿಂದ್ಹಿಡಿದು ಕರಟದವರೆಗೂ
ಎಳನೀರು ಆರೋಗ್ಯಕರ ಆಪ್ಯಾಯಪೇಯ
ಸವಿದಾಗ ಉಲ್ಲಾಸ, ಆಯಾಸ ಮಾಯ

ಆ ದೇವನ ಸೃಷ್ಟಿಯಲಿ ಎಲ್ಲವೂ ವಿಶಿಷ್ಟ
ನಿಯಾಮಕನವ ನೀಡಿದುದೇ ಪರಮ ಪವಿತ್ರ
ಕಲ್ಪವೃಕ್ಷವಿದು ಸಕಲವೀವ ಕಾಮಧೇನು
ಅಂತಾಗಬೇಕು ಮನುಜ ಉಪಯೋಗಿಯಾಗಿ ತಾನು

                 ಶೈಲೂ......
[18/2/2022, 4:35 pm] Dr. B. N. Shylaja Ramesh: #ಶಿಶುಗೀತೆ

#ತಿಳಿಯುವಾ_ಬಾ

ಹೇ ಚಿನ್ನು ನೋಡು ಬಾ ಆಕಾಶ
ಅದೇನಲ್ಲಿ ಮಿನುಗುತಿಹ ಪ್ರಕಾಶ.?
ಉರಿಯುತಿದೆ ಅಲ್ಲಿ ಕೆಂಡದುಂಡೆ.!
ಉರಿದರೂ ಅದು ಕಪ್ಪಾಗಿಲ್ಲ ನೋಡೇ.!

ಬಣ್ಣವೇನೋ ಚಂದ ಆ ಕೆಂಪು ಕೆಂಪು
ಬರಬರುತ್ತಾ ಹೇಗಾಗುತ್ತೆ ತಂಪುತಂಪು.?
ಉರಿದುರಿದು ಮಾಯವಾಯ್ತು ಸಂಜೆಗೆ
ಕೆಂಪಗಿದ್ದದ್ದು ರಾತ್ರಿ ಹೇಗಾಯ್ತು ಬೆಳ್ಳಗೆ.?

ಬೆಳಕಲ್ಲಿ ರವಿಯಂತೆ ರಾತ್ರಿ ಚಂದ್ರ
ಬೆಳಕೀವವನೊಬ್ಬ, ಇನ್ನೊಬ್ಬ ಬಾನಲಾಂದ್ರ.!
ಒಂದೇ ಆಕಾಶ..ಆಳುವವರೇಕಿಬ್ಬರು.?
ಈ ಕತ್ತಲಬೆಳಕಾಟಕೆ ನಾನಾದೆ ಬೆಬ್ಬರು..!

ಇದೆಂಥಾ ಕೌತುಕ....! ಅಲ್ಲವೇನು.?
ಸವಿವರ ಅರಿತುಕೊಳ್ಳಬೇಕಿದೆ ನಾನು
ತಿಳಿಯಬೇಕೆಂದರೆ ಓದಬೇಕು ವಿಜ್ಞಾನ
ಬಾ.. ಓದಿ ಅರಿಯುವಾ ಸುಜ್ಞಾನ..!

          ಶೈಲೂ.....
[18/2/2022, 4:35 pm] Dr. B. N. Shylaja Ramesh: #ಸಿಂಕೇನ್_ಕಾವ್ಯಸ್ಪರ್ಧೆ

#ಅಮ್ಮ

ಅಮ್ಮ
ಮಮತಾಮಯಿ ಕರುಣಾಪೂರ್ಣೆ
ಅಮೃತವುಣಿಸಿ ಬಿಗಿದಪ್ಪಿ ಕಾಯುವಳು
ಮಗುವ ಮುದ್ದಿಸಿ ಲಾಲಿ ಹಾಡುವಳು
ಜನನಿ..!

#ಗುರು

ಗುರು
ಜ್ಞಾನವಾರಿಧಿ ಕರುಣಾಕರ
ಅಕ್ಷರವಿತ್ತು ಕಲಿಸಿ ಕಾಯುವರು
ಕೈಹಿಡಿದು ತಿದ್ದಿ ಬರೆಸಿ ಬೋಧಿಸುವ
ಜ್ಞಾನದಾತ..!

#ಅಣ್ಣ

ಅಣ್ಣ
ಪಿತೃಸಮಾನ ಸನ್ಮಿತ್ರ
ಪ್ರೀತಿಯಿತ್ತು ಆದರಿಸಿ ಪೋಷಿಸುವನು
ತವರಿನ ಸಿರಿಗೆ ಅರ್ಥವಿತ್ತು ಬೆಳಕಾದವ
ಹಿರಿಯಣ್ಣ..!

        #ಶೈಲೂ
[18/2/2022, 4:36 pm] Dr. B. N. Shylaja Ramesh: #ಜಡೇಕವನ

#ಶೀರ್ಷಿಕೆ

#ನನ್ನೆದೆಯಲಿ_ಅವಳ_ನಗುವೇ_ಹಾಡಾಯಿತು

ದೇವತೆಯಂತವಳು ಗಗನದಿಂದಿಳಿದ ಅಪ್ಸರೆ
ಅಪ್ಸರೆಯಂತ ಚೆಲುವವಳದು ನಾನವಳ ಕೈಸೆರೆ
ಕೈಸರೆಯಾದೆನವಳ ಪ್ರೇಮವಾರಿಧಿಯಲ್ಲಿ ಮಿಂದು
ಮಿಂದೆದ್ದೆ ಖುಷಿಯಲ್ಲಿ ನನ್ನವಳೇ ಪ್ರೇಮದ ಸಿಂಧು

ಸಿಂಧೂರ ಹೊಳೆಯುತಿದೆ ಅವಳ ಹಣೆಯನ್ನು ಬೆಳಗಿ
ಬೆಳಗ ಬಂದವಳವಳು ಬದುಕ ಆ ನನ್ನ ಹುಡುಗಿ
ಹುಡುಗಿಯವಳು ನನ್ನ ಮನದನ್ನೇ ಬೇಲೂರ ಬಾಲೆ
ಬಾಲೆ ಹದಿನಾರರ ತರುಣಿ ಮೊಗದೇ ಮುಂಗುರುಳ ಮಾಲೆ

ಮಾಲೆ ಹಾಕಲಿದೆ ಕೊರಳಿಗೆ ಹಿರಿಯರೊಪ್ಪಿಗೆ ಪಡೆದು
ಪಡೆದೆನವಳ ಸಂಗ ಅವಳ ಅದಮ್ಯ ಪ್ರೀತಿಗೆ ಮಣಿದು
ಮಣಿದೆ ಅವಳ ಸೊಗಸಾದ ಮುಖಾರವಿಂದಕೆ
ಅರವಿಂದದಂತೆಯೇ ಸೊಬಗು ಅರಳಿ ನಗುವ ನಯನಕೆ

ನಯನಗಳೆರಡು ಸೆಳೆದೆಳೆದು ಮಾಡಿವೆ ಮೋಡಿ
ಮೋಡಿ ನಗುವೆಸೆದು ನನ್ನೆಡೆಗೆ ಕಾಡುತಿಹಳು ನೋಡಿ
ನೋಡಿ, ನನ್ನವಳ ಪ್ರೇಮಕೆ ವೇದಿಕೆ ನನ್ನೆದೆಯಾಯ್ತು
ನನ್ನೆದೆಯಲಿ ಅವಳ ಸೆಳೆವ ನಗುವೇ ಹಾಡಾಯಿತು..!

      ಶೈಲಜಾ ರಮೇಶ್
[18/2/2022, 4:36 pm] Dr. B. N. Shylaja Ramesh: #ಭಕ್ತಿ_ಗೀತೆ

#ಅನವರತ_ಪೊರೆಯೆಮ್ಮ_ಅಂಜನೀಪುತ್ರ

ಅನವರತ  ಪೊರೆಯೆಮ್ಮ ಅಂಜನೀಪುತ್ರ
ನಿರುತ  ನಿನ್ನನೇ  ನೆನೆವೆ  ಸರಸಿಜ  ನೇತ್ರ
ಕರುಣಿಸು  ಶ್ರೀರಾಮ  ನಾಮದಲಿ ಭಕುತಿ
ಸಕಲ ಕಾರ್ಯಗಳಲ್ಲಿ ಬೆರೆಸು ನಿನ್ನ ಶಕುತಿ

ಉದಯರವಿಯ ಹಣ್ಣೆಂದು ಭ್ರಮಿಸಿದನೆ
ತಿನ್ನಲು  ಆಗಸಕೆ  ಚಂಗನೆ  ನೆಗೆದವನೆ
ಬಾಲ್ಯಕಾಲದಲೇ ನಿನಗೆ ಅದೆಂತಹ ಶಕ್ತಿ
ಕಾರಣವೇ ಆರಾಧ್ಯ ದೈವದಲ್ಲಿನ  ಭಕ್ತಿ

ಅಮಿತಪರಾಕ್ರಮಿ ಸಾಗರವ ಲಂಘಿಸಿದ ಧೀರ
ಲಂಕಿಣಿಯ ಮಣಿಸಿ ಲಂಕೆಯ ಸುಟ್ಟ ಕಪಿವೀರ
ಸಂಜೀವಿನಿ ಪರ್ವತವನೆತ್ತಿ ತಂದ ಪರಾಕ್ರಮಿ
ದೈನ್ಯತೆಯೇ ಮೂರ್ತಿವೆತ್ತ ಸಕಲಜನ ಪ್ರೇಮಿ

ಆಜಾನುಬಾಹು ಹನುಮ ಅಮಿತಬಲತೇಜ
ಬಿತ್ತಿದೆ ಎಲ್ಲೆಡೆ ಶ್ರೀರಾಮ ನಾಮದ ಬೀಜ
ಬುದ್ಧಿರ್ಬಲಕೆ ನಿನಗೆ ಸರಿಸಮರು ಉಂಟೇನು
ವಾಕ್ಪಟುತ್ವಕೆ ಹೆಸರು ಈ ಶ್ರೀರಾಮನ ಭಂಟನು

         ಶೈಲಜಾ ರಮೇಶ್
[18/2/2022, 4:37 pm] Dr. B. N. Shylaja Ramesh: #ಹಾಯ್ಕ

#ಬೆಳದಿಂಗಳು

#೧

ನಿನ್ನ ನಗುವೇ
ನಲ್ಲ ಮನ ತಣಿಸೋ
ಬೆಳದಿಂಗಳು

#೨

 ಬೆಳದಿಂಗಳು
ನಕ್ಕಾಗ, ಸಾಗರಿಯ
 ಉತ್ಕರ್ಷಣವು

#೩

ಹುಣ್ಣಿಮೆ ಚಂದ್ರ
ಬೆಳದಿಂಗಳ ಜಾಲ
ಬೀಸಿ ಸೆಳೆವ

   ಶೈಲಜಾ ರಮೇಶ್
[18/2/2022, 4:37 pm] Dr. B. N. Shylaja Ramesh: #ಚಿತ್ರಕಾವ್ಯ_ಸ್ಪರ್ಧೆ

#ಕಲಿಯುವ_ಬನ್ನಿ_ಮಕ್ಕಳೇ

ನಿಸರ್ಗದಂಗಳದಿ ಪಾಠ ಪ್ರವಚನ
ಗುರುಕುಲ ಪದ್ಧತಿಯ ಅಭಿಯಾನ..!
ಇಲ್ಲಿ ಕನ್ನಡ ಕಲಿಕೆಗೆ ಒತ್ತು ಹೆಚ್ಚು
ಕಲಿಸುವ ಗುರುಗಳೆಲ್ಲರಿಗೂ ಅಚ್ಚುಮೆಚ್ಚು..!

ಸ್ವಚ್ಛ ಪ್ರಕೃತಿಯ ಮಡಿಲಲ್ಲಿ ಪಾಠ
ಕಲಿಕೆ ಮುಗಿದ ನಂತರವೇ  ಆಟ..!
ಆಟಕ್ಕೂ ಪಾಠಕ್ಕೂ ಸಮಾನ ಅನುನಯ
ಕಲಿಕೆಯಿಂದಲೇ ಶ್ರೇಷ್ಠವ್ಯಕ್ತಿ ಉದಯ..!

ವಿದ್ಯೆಯೆಂದಿಗೂ ಕದಿಯಲಾಗದ ಐಶ್ವರ್ಯ
ಕಲಿತಷ್ಟೂ ಮುಗಿಯದ ಸವಿ ಮಾಧುರ್ಯ.!
ಆಪತ್ಕಾಲದಲಿ ನೆರವಾಗುವ ಬಂಧು
ಜ್ಞಾನವಿಜ್ಞಾನವ ಉದ್ದೀಪಿಸುವ ಸಿಂಧು..!

ಆಡಿ ಹಾಡಿ ನಲಿಯುತ ಕಲಿವ ವಿದ್ಯೆಯು
ಮರೆಯದೆಂದಿಗೂ ವಿದ್ಯೆಯಿತ್ತ ಸ್ಪೂರ್ತಿಯು.!
ಬನ್ನಿ ಕಂದಮ್ಮಗಳೇ ಶ್ರದ್ಧೆಯಿಂದ ಕಲಿಯುವ
ಶ್ರೇಷ್ಠರೆನಿಸಿ ಭವ್ಯ ಭಾರತವ ಬೆಳಗುವಾ..!

          ಶೈಲಜಾ ರಮೇಶ್
[18/2/2022, 4:38 pm] Dr. B. N. Shylaja Ramesh: #ಆಧುನಿಕ_ವಚನ

#ಶೀರ್ಷಿಕೆ

#ನಿಷ್ಕಾಮ

ಜೀವನವಿದು   ಮೂರು   ದಿನದ    ಬಾಳು
ಅವನಕರೆ ಬಂದಾಕ್ಷಣ ತೆರಳಬೇಕು ಕೇಳು
ಇದ್ದಾಗಲೇ ಗಳಿಸಿಬಿಡೆಲ್ಲರ ಪ್ರೀತಿ ವಾತ್ಸಲ್ಯ
ಸಹಬಾಳ್ವೆಯಲಿ ತುಂಬಿದೆ ಜೀವನದ ಮೌಲ್ಯ
ಸಕಲಜೀವಿಗಳಲ್ಲಿರಲಿ ನಿಷ್ಕಾಮಪ್ರೇಮದ ಧಾರಾ
ಪ್ರೇಮದಿಂದೆಲ್ಲರ ಗೆಲ್ಲಬಹುದೆಂದ ಶ್ರೀಶೈಲನಾಥೇಶ್ವರ
[18/2/2022, 4:39 pm] Dr. B. N. Shylaja Ramesh: #ಚುಟುಕು_ಸ್ಪರ್ಧೆ

#ಶೀರ್ಷಿಕೆ 

#ದೃಢ_ನಿಲುವು

ಮುಖದಲ್ಲಿ ನಗುವಿರಲಿ  ಮನವೂ ನಗುತಿರಲಿ
ಬೆಳಕು ಬಂದೊಡನೆ  ಓಡಿದಂತೆ ತಮ
ಮನದಲ್ಲಿ  ದೃಢ ನಿಲುವಿರಲು  ಕಷ್ಠಗಳು
ಬಂದಂತೆಯೇ  ಸಾಗುವುವು  ಮುಂದೆ

                                        ಶೈಲೂ....
[18/2/2022, 4:39 pm] Dr. B. N. Shylaja Ramesh: #ಹನಿಗವನಗಳು

#ಅಕ್ಷರ

ಅಕ್ಷರಕ್ಕೊಂದಕ್ಷರವ
ಸೇರಿಸಿದರೆ ಪದ,
ಪದ ಪದಗಳು ಸೇರಿದರೆ
ಅರ್ಥಪೂರ್ಣ
ಸಾಹಿತ್ಯ ಸಂಪದ..!

#ಸೌಜನ್ಯ

ಮಾನವೀಯ
ಬಂಧಗಳ ನಡುವಿದ್ದರೆ
ಸೌಜನ್ಯ
ಗಟ್ಟಿಗೊಳ್ಳುವ ಆ
ಸಂಬಂಧ
ಲೋಕ ಮಾನ್ಯ..!

#ಪ್ರಕೃತಿ

ಹಸಿರಲ್ಲಿ ನಗುವ
ಪ್ರಕೃತಿಮಾತೆ
ಜೀವಕೆ
ಆಸರೆಯಾದವಳು
ಆಸ್ಥೆಯಲಿ ಜತನಮಾಡಿದರೆ
ಎಲ್ಲರ ಉಸಿರಾಗುವಳು..!

             ಶೈಲೂ....
[18/2/2022, 4:39 pm] Dr. B. N. Shylaja Ramesh: #ಹನಿಗವನ_ಸ್ಪರ್ಧೆ

#ಶೀರ್ಷಿಕೆ #ನಿಯತ್ತು

ನಿನ್ನ ಸದ್ಗುಣಗಳ
ಸಂಪತ್ತಿನಲ್ಲಿದ್ದರೆ .. 
ನಿಯತ್ತು..!!
 ನೀನಾಗ
ಬೆಲೆಬಾಳುವ ಮುತ್ತು..!!
ಬರದೆಂದಿಗೂ
ಆಪತ್ತು..!!

          ಶೈಲಜಾ ರಮೇಶ್....
[18/2/2022, 4:40 pm] Dr. B. N. Shylaja Ramesh: #ನ್ಯಾನೊಕಥೆ

#ಅನುಮಾನ

ಗೆಳತಿಯ ಮದುವೆ ಸಂಭ್ರಮದದಲ್ಲಿದ್ದರೂ  ಪಲ್ಲವಿ ಅನ್ಯಮನಸ್ಕಳಾಗಿದ್ದಳು. ಗೆಳತಿಯ ಸುಂದರ ಜೋಡಿಯನ್ನು ನೋಡಿ ಪವನ್ ನ ನೆನೆದು ಕಣ್ಣೀರಿಟ್ಟಿದ್ದಳು. ಪ್ರೀತಿಸಿ, ಜೊತೆಗೆ ಸುತ್ತಾಡಿ, ಮದುವೆಗೆ ಮನೆಯವರ ಅನುಮತಿ ಕೇಳಿಬರುವೆನೆಂದು ಹೋಗಿದ್ದ ಪವನ್ ವರ್ಷಗಳಾದರೂ ಬಂದಿರಲಿಲ್ಲ. ಬಹುಶಃ ಅವನು ಮದುವೆ ಮಾಡಿಕೊಂಡಿರಬಹುದು ಅನ್ನುವ ಅನುಮಾನ, ಸುಂದರ ಹುಡುಗಿಯೊಡನೆ ಮಗುವನ್ನು ಎತ್ತಿಕೊಂಡು ಮದುವೆಮನೆಯಲ್ಲಿ ಓಡಾಡುತ್ತಿದ್ದ ಪವನನನ್ನು ನೋಡಿ ಸಾಬೀತಾಯ್ತು.

          ಶೈಲಜಾ ರಮೇಶ್
[18/2/2022, 4:40 pm] Dr. B. N. Shylaja Ramesh: #ಚುಟುಕು

#ಅನುರಾಗ

ನಲ್ಲ ನನ್ನ ನಿನ್ನ ಕಣ್ಣು ಬೆರೆತಾಗ ;
ಮೂಡಿತು ನಲ್ಮೆಯಲಿ ಅನುರಾಗ.!
ಕಣ್ಣಿನಲ್ಲೇ ನಡೆದು ಸಂಭಾಷಣೆ ;
ಹೃದಯದಲಿ ಪ್ರೀತಿಯ ನವರಾಗ.!

             ಶೈಲಜಾ ರಮೇಶ್
[18/2/2022, 4:40 pm] Dr. B. N. Shylaja Ramesh: #ಆಧುನಿಕ_ವಚನ

#ಸಂಸ್ಕಾರ

ಹಣ ಆಸ್ತಿ ಆಡಂಬರದಲ್ಲಿಲ್ಲ ಸಾರ
ಇದ್ದುದರಲ್ಲೇ ತೃಪ್ತಿಇದ್ದರೆ ಸುಖಸಂಸಾರ
ತಾನುತಾನೆಂದು ಮೆರೆವವರೆಲ್ಲ ಭುವಿಗೆ ಭಾರ
ಕೆಡುಕಿತ್ತವರಿಗೂ ಒಳಿತು ಬಗೆವುದೇ ಸಂಸ್ಕಾರವೆಂದ ಶ್ರೀಶೈಲನಾಥೇಶ್ವರ

       ಶೈಲಜಾ ರಮೇಶ್
[18/2/2022, 4:40 pm] Dr. B. N. Shylaja Ramesh: #ಹನಿಗವನ

#ಶೀರ್ಷಿಕೆ

#ಅಂಬರ

ನಿನ್ನೆದೆಯ
ಅಂಬರದೊಳು
ನಾನಲಿವ...ತಾರೆ
ಎನ್ನ 
ಹೃನ್ಮಂದಿರಕೆ
ನೀ ಒಲಿದು ಬಾರೇ...

      ✍️ ಡಾ: B.N. ಶೈಲಜಾ ರಮೇಶ್
[18/2/2022, 4:41 pm] Dr. B. N. Shylaja Ramesh: #ಚುಟುಕು

#ಶೀರ್ಷಿಕೆ #ಶಿಷ್ಟಾಚಾರ

ಗೌರವಾದರಗಳ ಬಿಸುಟು ಬಹುದೂರ
ತೋರಿಕೆಗಿದ್ದರಾದೀತೇ ಶಿಷ್ಟಾಚಾರ?
ಗುರುಹಿರಿಯಕಿರಿಯರೆನ್ನದೆ ಎಲ್ಲ ಮರೆತು
ಶಿಷ್ಟತೆ ಮಾಯವಾಯ್ತು ಅಹಮಿನಲಿ ಬೆರೆತು

          ಶೈಲೂ.....
[18/2/2022, 4:41 pm] Dr. B. N. Shylaja Ramesh: #ಹನಿಗವನ
#ಶೀರ್ಷಿಕೆ #ಸಿರಿತನ

ಮಾನವೀಯತೆ
ಸೃಜನಶೀಲತೆಯಲ್ಲಿರಲಿ
#ಸಿರಿತನ
ಇದರ ಮುಂದೆ
ಹಣದ ಶ್ರೀಮಂತಿಕೆ
#ಗೌಣ

      ಡಾ: B.N.ಶೈಲಜಾ ರಮೇಶ್
[18/2/2022, 4:41 pm] Dr. B. N. Shylaja Ramesh: #ನ್ಯಾನೊಕಥೆ

#ದೇವರು_ಬರೆದ_ನಾಟಕ

 ರಾಜೇಶ್ ತನ್ನ ಹೆತ್ತವರ ಮಾತನ್ನ ಧಿಕ್ಕರಿಸಿ, ತಾಯಿತಂದೆ ಇಲ್ಲದ ಅನಾಥೆ ರಮ್ಯಾಳನ್ನ  ಪ್ರೇಮಿಸಿ ಮದುವೆಯಾದ. ಆಸ್ತಿವಂತರನ್ನ ಮದುವೆ ಆಗಿದ್ದರೆ.. ಕೈತುಂಬಾ ವರದಕ್ಷಿಣೆ, ಆಸ್ತಿ ಪಾಸ್ತಿ ಸಿಗುತ್ತಿತ್ತು, ಅನಾಥೆಯಿಂದ ಏನು ಸಿಕ್ಕಿತು ಅಂತ ಜಗಳವಾಡಿ ಮಗ ಸೊಸೆಯನ್ನು ಮನೆಯಿಂದ ಹೊರಹಾಕಿ ರಮ್ಯಳನ್ನ ತೊರೆದು ಬಂದರೆ ಮಾತ್ರ ನಮ್ಮ ಆಸ್ತಿಯಲ್ಲಿ ಪಾಲು ಇಲ್ಲದಿದ್ದರೆ ಇಲ್ಲ... ಎಂಬ ಬೆದರಿಕೆ ಹಾಕಿದ ಒಂದೆರಡು ದಿನದಲ್ಲೇ ವರದಕ್ಷಿಣೆ ಕಿರುಕುಳದಿಂದಾಗಿ  ಮಗಳ ಹತ್ಯೆಯಾಯ್ತು. ತಾ ಮಾಡಿದ ಅನ್ಯಾಯಕ್ಕೆ, ತನ್ನ ಮಗಳ ಜೀವ ಹಾರಿಹೋಗಿತ್ತು. ಇದು ಆ ವಿಧಿ ಬರೆದ ನಾಟಕವಲ್ಲದೆ ಮತ್ತೇನು?

ಡಾ:B.N. ಶೈಲಜಾ ರಮೇಶ್
[18/2/2022, 4:45 pm] Dr. B. N. Shylaja Ramesh: #ಜಾನಪದ_ಶೈಲಿ_ಕವನ

#ಶೀರ್ಷಿಕೆ

#ಹಳ್ಳಿಯಲ್ಲಿ_ಅರಳಿದ_ಮಲ್ಲೇ

ಏನ್ ಚಂದ ಕಾಣ್ತೀ
ಹುಸಿ ನಗೆಯ ಗರತಿ
ಅಂದಾಕೆ ಒಡತಿಯೇ ನೀನು|| ಓ ಹೆಣ್ಣೇ||
ನೀ ಹಳ್ಯಾಗೆ ಅರಳಿದ ಮಲ್ಲೇ..

ಹುಬ್ಬು ಕಾಮನಬಿಲ್ಲು
ಲಜ್ಜೆಯಾ ಕಣ್ಣುಗಳು
ಚಂಚಲ ನೋಟವಿಲ್ಲ||ಓ ಹೆಣ್ಣೇ||
ನೀ ಹಳ್ಯಾಗೆ ಅರಳಿದ ಮಲ್ಲೇ..

ನಾಗರ ಜಡೆಯನ್ನ
ಎತ್ಕಟ್ಟಿ ತುರುಬನ್ನ
ಘಮ್ಮೆನ್ನೋ ಮಲ್ಲಿಗಿ ಮುಡಿದು||ಓ ಹೆಣ್ಣೇ|
ನೀ ಹಳ್ಯಾಗೆ ಅರಳಿದ ಮಲ್ಲೇ..

ದುಂಡಾದ ಮುಖದಲ್ಲಿ
ಸೇಬಂತಾ ಕದಪಲ್ಲಿ
ನಾಚಿಕೆ ಹರಡೈತೆ || ಓ ಹೆಣ್ಣೇ||
ನೀ ಹಳ್ಯಾಗೆ ಅರಳಿದ ಮಲ್ಲೇ..

ದೇವತೆ ಕಳೆ ಐತಿ
ಮುಗೀಬೇಕು ಕೈಯೆತ್ತಿ
ನೀಯಾರ ಮನೆಯ ದೀಪ
|| ಓ ಹೆಣ್ಣೇ||
ನೀ ಹಳ್ಯಾಗೆ ಅರಳಿದ ಮಲ್ಲೇ..

     ಶೈಲಜಾ ರಮೇಶ್
[18/2/2022, 4:47 pm] Dr. B. N. Shylaja Ramesh: #ರುಬಾಯಿ_ಸ್ಪರ್ಧೆ

#ಶೀರ್ಷಿಕೆ

#ಹಣ_ಮತ್ತು_ಸಂಬಂಧಿಕರು

#೧
ಹಣವೆಂದರೆ ಹೆಣವೂ ಬಾಯ್ಬಿಡುವುದಂತೆ
ಇನ್ನು ಕೇಳಬೇಕೇನು ನೆಂಟರಿಷ್ಟರ ಸಂತೆ.?
ರಾಗಿಕಲ್ಲು ಆಡ್ತಿದ್ರೆ ರಾಜ್ಯವೆಲ್ಲಾ ನೆಂಟರು.!
ಹುರಿದು ಮುಕ್ಕಿ ತಿಂದುಬಿಡುವರೆಂಬ ಚಿಂತೆ

#೨
ದುಡ್ಡಿದ್ದವನೇ   ದೊಡ್ಡಪ್ಪ   ಗೊತ್ತೇನು..?
ಹಿಂಬಾಲಕ  ನೆಂಟರ ಮಾತು ಸವಿಜೇನು
ಶ್ರೀಮಂತಿಕೆ ಸಾರ ಹೀರಿ ಮಾಡಿ ನಿಸ್ಸಾರ.!
ತೆಗಳಿಜರಿವುದವರ ಕಾರ್ಯವಲ್ಲದೆ ಮತ್ತೇನು?

#೩
ಹಣವೆಂದರೆ  ಬಾಯ್ಬಾಯ್ಬಿಡುವ   ಜನ
ಇದಕೆ ಸಂಬಂಧಿಕರೂ ಹೊರತಲ್ಲ ಕಾಣಾ
ಕುರುಬಿ ಜರಿದು ಕಾಲೆಳೆವವರೇ ಎಲ್ಲಾ..!
ಕೆಳಗೆಬಿದ್ದಾಗ ಹಿಡಿದೆತ್ತುವುದಕಿಲ್ಲ ಮನ

               #ಶೈಲೂ....
[18/2/2022, 4:48 pm] Dr. B. N. Shylaja Ramesh: #ಕಿವಿಯೋಲೆ_ಬರೆಸಿತು_ಒಲವಿನೋಲೆ

ನೀ ತಂದ  ಒಲವಿನ ಮುತ್ತಿನೋಲೆ
ಸಂತಸದಿ ಧರಿಸಿದೆ ಕಿವಿಯಲ್ಲಿ..!
ಕಣ್ಸನ್ನೆಯಲ್ಲೇ ಇತ್ತೆ ಕರೆಯೋಲೆ
ಹೊಳಪು ಝಲಪಿಸಿತೆನ್ನ ಕಣ್ಣಿನಲ್ಲಿ..!

ನೀ ಪ್ರೀತಿಯಿಂದತ್ತ ಉಡುಗೊರೆ
ಬೆಲೆ ಕಟ್ಟಲಾಗದ  ಅನರ್ಘ್ಯ ರತ್ನ..!
ಅದೆಷ್ಟು ಆಸೆಯಿಂದಲಿ ನೀ ಕೊಟ್ಟೆ
ಮಾಡುವೆ ಜತನದಲಿ ಕಾಪಿಡುವ ಯತ್ನ..!

ನಾ ಧರಿಸಿರುವೆ ನೋಡಿಲ್ಲಿ  ನಲ್ಲ
ಚಂದದಿ ತೂಗುತಿದೆ ಓಲೆ ಕಿವಿಯಲ್ಲಿ..!
ನಿನ್ನಂತರಂಗದ ಪ್ರೀತಿಯ ಕೂಗು
ಪಿಸುಗುಡುತ್ತಿದೆ ಕಿವಿಯ ಬಳಿಯಲ್ಲಿ..!

ಹೊಳೆವ ಮುತ್ತುಗಳ ಹೆಕ್ಕಿ ಹೆಕ್ಕಿ
ಅದಮ್ಯ ಪ್ರೀತಿಯ ಬಂಧನದೆ ಬಿಗಿಸಿದೆ..!
ಬಿಡಿಸಲಾರದ  ಬಾಂಧವ್ಯಕ್ಕಿದು ನಂಟು
ಕಿವಿಯೋಲೆ ಒಲವಿನೋಲೆ ಬರೆಸಿದೆ..!

           ಡಾ: ಶೈಲಜಾ ರಮೇಶ್
[18/2/2022, 4:48 pm] Dr. B. N. Shylaja Ramesh: #ಸ್ಪರ್ಧೆಗಾಗಿ_ಅಲ್ಲ

ಹದಿಹರೆಯದ ಹುಡುಗನ ಮುಗ್ಧ ಪ್ರೀತಿ ಹೀಗಿರಬಹುದೆಂಬ ಕಲ್ಪನೆಯಲ್ಲಿ ಬರೆದದ್ದು...😊

ನೀಬರುವ ಹಾದಿಯಲಿ 
ಕಾಯುತಿಹೆ ಹಗಲಿರುಳು ಚೆಲುವೇ..
ತಿರುಗಿ ನೋಡದೇ.. ಹೀಗೆ
ಸತಾಯಿಸುತಿಹೆಯೇಕೆ ಒಲವೇ...

ಕಾತರಿಸುತ್ತಿದೆ ಮನ ನಿನ್ನೊಂದು ನೋಟಕೆ
ಸೆಳೆದೆಳೆವ ದಂತದ ಆ ಮೈಯ್ಯ ಮಾಟಕೆ.!
ತೂಗಿ..ತೂಗಿ ಕರೆವ ಆ ಚೆಲುವ ಮುಂಗುರುಳು
ಕಾಡಿ..ಕಾಡಿಸುತ್ತಿದೆ ಎನ್ನ ಹಗಲೂ... ಇರುಳೂ..

ಬೆರಗು ನೋಟದ ಆ ಕಾಡಿಗೆ ಕಂಗಳ ಚೆಲುವು
ಮೂಡಿಸುತಿದೆ ಎದೆಯಲ್ಲಿ ಬೇಡವೆಂದರೂ ಒಲವು
ಮರೆತು ಇರಲಾರೆ ಚೆಲುವೇ ನಿನ್ನ ಮೋಹಕ ರೂಪ
ನನ್ನೆದೆಯ ಸುಡುತಿಹುದು ವಿರಹದುರಿಯ ತಾಪ

ಕಣ್ಣ ಭಾಷೆಯಲೇ ಮೌನದಲಿ ಕವಿತೆಯ ಹೆಣೆದು
ಕೊಟ್ಟೆನಲ್ಲವೇ ಚೆಲುವೇ.. ಹೃದಯದಲಿ ಕೊರೆದು.!
ತಲುಪಲಿಲ್ಲವೇ..ಹೇಳು ತೊಂಡೆ ತುಟಿಯನು ತೆರೆದು
ತಲುಪಿದರೆ ಬಾ ನಲ್ಲೇ.. ಹೃದಯ ಕದವನು ತೆರೆದು.!

      ಶೈಲಜಾ ರಮೇಶ್....
[18/2/2022, 4:48 pm] Dr. B. N. Shylaja Ramesh: #ಕವನಸ್ಪರ್ಧೆ

#ಶೀರ್ಷಿಕೆ

#ಹರೆಯದ_ಕನಸುಗಳು

ಬಣ್ಣಬಣ್ಣದ ಕನಸುಗಳ ಹೊಸೆತ
ಎದೆಯ ಮಿಡಿತದಲಿ ನಗಾರಿ ಹೊಡೆತ.!
ಕಂಡದ್ದೆಲ್ಲವೂ ಬೇಕೆಂಬ ತುಡಿತ
ಇದು ಹದಿಹರೆಯದ ಕನಸುಗಳ ಮಿಡಿತ.!

ಕನಸು ಕಣ್ಣುಗಳಲ್ಲಿ ಹೊಳೆವ ಮಿಂಚು.!
ಕುಡಿಗಣ್ಣ ನೋಟದಲ್ಲೇ ಸೆಳೆವ ಸಂಚು.!
ಎಲ್ಲದ್ದಕ್ಕೂ ಏಕೋ ಮುಸಿ ಮುಸಿ ನಗು..
ತಾಳ ಮೇಳದಂತೆ ಭಾವಗಳ ಸೊಬಗು.!

ಪ್ರೀತಿಪ್ರೇಮದ ಸೆಳೆತ ದ್ವಂದ್ವ ಮನ
ಹಚ್ಚಿ ಅದಕೆ, ಭಾವನೆಗಳ ಬಣ್ಣ..!!
ಪ್ರಾಯದರವಳಿಕೆಯಲಿ ಶೃಂಗಾರ ಕನಸು.!
ಅರಿವಾಗದಂತಾವರಿಸಿ ಮನದಲ್ಲಿ ತುರಿಸು.!

ಜೀವನದ ಪಯಣಕ್ಕೆ ಮಹತ್ತರ ಘಟ್ಟ
ತನು - ಮನಗಳ ಬೆಳವಣಿಗೆಯ ಹಂತ
ಕತ್ತಿಯಲುಗಿನ ಮೇಲಿನ ನಡೆಯಂತೆ.!
ಮೈಮರೆತರೆ ಬಾಳು ಸುಡುಗಾಡ ಸಂತೆ.!

ಎಚ್ಚರ..!!ಇದು ಹಾದಿ ತಪ್ಪಿಸುವ ಕಾಲ
ಹಿಡಿತದಲಿದ್ದರೆ ಮನ ಸಾಧನೆಗೆ ಸಕಾಲ..!!
ಪ್ರೌಡದೆಡೆಗಿರಲಿ ಪ್ರೌಢಿಮೆಯ ನಡಿಗೆ
ದಾಟಿದರೆ ಈ ಹಂತ ಬದುಕು ಹೊಸಬಗೆ.!

        ಶೈಲಜಾ ರಮೇಶ್....
[18/2/2022, 4:48 pm] Dr. B. N. Shylaja Ramesh: #ಕಾರ್ಗಿಲ್_ವಿಜಯೋತ್ಸದ_ನೆನಪಿಗಾಗಿ

#ಚುಟುಕು_ಸ್ಪರ್ಧೆ

#ನನ್ನದೇಶ

ಇತಿಹಾಸ ಪುರಾಣಗಳಲಿ ಹಸಿರು
ನನ್ನ ದೇಶ ಭವ್ಯಭಾರತದ ಹೆಸರು
ವೀರಯೋಧರಿಗೆ ಜನ್ಮವಿತ್ತ ಪುಣ್ಯಭೂಮಿ
ತಾಯೇ ಭಾರತಿಯೇ ಶಿರಸಾನಮಾಮಿ🙏

#ವೀರಯೋಧ

ಕಾರ್ಗಿಲ್ ವಿಜಯೋತ್ಸವದ ದಿನ
ವೀರಯೋಧರ ಬಲಿದಾನದ ಪ್ರತಿಫಲನ
ಶತ್ರುಗಳ ಸೆದೆಬಡಿದು ಹಿಮ್ಮೆಟ್ಟಿಸಿ
ಅಮರರಾದರು ವಿಜಯವ ಗಳಿಸಿ..!!

          ಶೈಲಜಾ ರಮೇಶ್
[18/2/2022, 4:49 pm] Dr. B. N. Shylaja Ramesh: #ಗಝಲ್_ಸ್ಪರ್ಧೆ

#ದತ್ತ_ಸಾಲು

#ಮಿಡಿತಗಳ_ಅರಿಯದ_ಹೃದಯ_ಮನಸುಗಳ_ತೊರೆವುದೇಕೆ

 ಮಿಡಿತಗಳ ಅರಿಯದ ಹೃದಯ ಮನಸುಗಳ ತೊರೆವುದೇಕೆ ಹೇಳು?
ಎದೆಬಡಿತ ನಿಂತರೂ ಕನಸುಗಳ ತೆರೆವುದೇಕೆ ಹೇಳು?

ನನಸಾಗದ ಆಸೆಗಳಲಿ ಜೀವ ಮಿಳಿತವಾದದ್ದೇಕೋ ಕಾಣೆ
ಬೇಡವೆಂದು ಹಿಂದೆ ಸರಿದರೂ ಅಭಿಲಾಷೆ ಕರೆವುದೇಕೆ ಹೇಳು?

ನಿನ್ನೊಲವ ಸಾಂಗತ್ಯದಲಿ ನೋವುಂಡು ನಿಟ್ಟುಸಿರಿಟ್ಟದ್ದೇ ಬಹಳ
ಕೇಳದಾಗಿದೆ ತನುವು ಸದಾ ಪ್ರಿಯ ನಾಮ ಜಪಿಸುವುದೇಕೆ ಹೇಳು?

ಆಶಿಸಿರಲಿಲ್ಲ ಎಂದೂ ಬಾಳಿಗೆ ಮುಳ್ಳಾಗಿ ಕಾಡುವುದೆಂದು
ಮರೆತೆಲ್ಲ ದುಃಖವನು ನಲಿವಲಿ ಪ್ರೇಮ ಹಿಂದ್ಹಿಂದೆ ಬರುವುದೇಕೆ ಹೇಳು?

ಶೈಲಳಾಂತರ್ಯದಲಿ ಮಡುಗಟ್ಟಿದೆ ತೀರದ ಕಣ್ಣೀರ ವ್ಯಥೆಯ ಕಥೆ
ಮನ್ನಿಸುತ್ತೆಲ್ಲ, ಅಪ್ಪಿ ಹಾರೈಸುವ ಬಯಕೆ ಕಾಡುವುದೇಕೆ ಹೇಳು?

        ಶೈಲಜಾ ರಮೇಶ್
[18/2/2022, 4:49 pm] Dr. B. N. Shylaja Ramesh: #ಸ್ವರಚಿತ_ಒಗಟು

ನೀರು ಬೇಡ, ಗೊಬ್ಬರ ಬೇಡ
ಆದರೂ ಹುಲುಸಾಗಿ ಬೆಳೆಯುತ್ತೆ
ಭೂಮಿಯೂ ಬೇಕಿಲ್ಲ, ಕತ್ತರಿಸಿದಷ್ಟೂ ಚಿಗುರುತ್ತೆ
......ಏನದು?

( ಗಡ್ಡ, ಮೀಸೆ 😀)

ಜಗವೇ ಕುಡುಕರ ಸಂತೆ
ಬೆಳಗಾದರೆ ಇರಲೇ ಬೇಕಂತೆ
ಇದ ಕುಡಿಯದವರು ತೀರಾ ವಿರಳ
..........ಏನದು?

(ಕಾಫಿ, ಟೀ)

         ಶೈಲಜಾ ರಮೇಶ್
[18/2/2022, 4:50 pm] Dr. B. N. Shylaja Ramesh: #ಕವನಸ್ಪರ್ಧೆ

#ಕನಸುಗಳಿಗೆ_ರೆಕ್ಕೆ_ಮೂಡಿದಾಗ_ಮನದ_ಹಕ್ಕಿ_ಗರಿಗೆದರಿದೆ

ನಾನು ನಾನಾಗಿಲ್ಲ ನಿಂತಲ್ಲಿ ನಿಲಲಾರೆನಲ್ಲ
ಮನಸೂ ನನ್ನಲಿಲ್ಲ, ನೀ ಕದ್ದುಬಿಟ್ಟೆಯಲ್ಲ
ಅದೇನು ಮೋಡಿ ಮಾಡಿದೆ ಮನ ನಿನ್ನಲೇ ನೆಲೆಸುವಂತೆ
ಅದೇಕೆ ಹೀಗೆ ನೋಡುವೆ ನೀ ನನ್ನನೇ ನುಂಗುವಂತೆ

ಒಂದೂ ಮಾತನಾಡದೆ ಪರಿಚಯವೂ ನೀಡದೆ
ಅರಿವಿಗೆ ಬಾರದಂತೆ ಹೃದಯ ಕದ್ದೋಡಿದೆ
ಅದಾವ ಸೀಮೆಯ ಮಾಯಗಾರನೊ ನೀನು?
ನಿನ್ನಲೇ ಪರವಶ ಮನ, ನಾ ಕಳೆದು ಹೋದೆನು

ಕಟ್ಟಿದೆ ಕಣ್ಣಲ್ಲಿ ನೂರಾರು ಕನಸು ನನಸಾಗಲೆಂತು?
ಕಾಡುತ್ತಿದೆ ನಿನ್ನಾಸೆ ಬೆಂಬಿಡದೆ ನಿನ್ನ ಸೇರಲೆಂತು?
ನಿನ್ನ ನಸುನಗುವ ಜಾಲ ಸಮ್ಮತಿಯ ಸೂಸಿ ಕರೆದಿದೆ
ಕನಸುಗಳಿಗೆ ರೆಕ್ಕೆ ಮೂಡಿ ಮನದ ಹಕ್ಕಿ ಗರಿಗೆದರಿದೇ

ಹೀಗೆಯೇ ಇರಲಿ ಗೆಳೆಯ ಬಾಳ ಪಥದ ಪ್ರೇಮಯಾತ್ರೆ
ಸದಾ ಗಿಜಿಗುಟ್ಟುತ್ತಿರಲಿ ನೀ ತಂದ ಪ್ರೀತಿಯ ಸೊಗಸಜಾತ್ರೆ
ಉಕ್ಕುತಿರಲಿ ಪ್ರೀತಿಸೆಲೆಯು ಧುಮ್ಮಿಕ್ಕಲಿ ಜಲಪಾತದಂತೆ
ಒಲವ ಹೊತ್ತು ಓಡಿ ಬರುವೆ ನಿನ್ನೆಡೆಗೆ ಸೇರಲು ನದಿಯಂತೆ

   ಡಾ: B.N. ಶೈಲಜಾ ರಮೇಶ್
[18/2/2022, 4:50 pm] Dr. B. N. Shylaja Ramesh: #ಭಕ್ತಿಗೀತೆ_ಸ್ಪರ್ಧೆ

#ಶೀರ್ಷಿಕೆ:-

#ಮನವ_ಗೆದ್ದ_ಗೋಪಿಲೋಲ

ಕೇಳಿಸುತಿದೆ ಇನಿದನಿ
ಮಾಧವನ ಕೊಳಲಗಾನ
ಬನ್ನಿರೇ ಸಖಿ ಅವನನರಸಿ ಹೋಗೋಣ
ಕೂಗುತಿಹ ನೋಡಲ್ಲಿ
ಇನಿದನಿಯ ಕೊಳಲಲ್ಲಿ
ಸೆಳೆಯುತಿದೆ ನನ್ನ ಆ ಮುರಳಿಗಾನ

ಯಮುನೆಯ ತಟದಲ್ಲಿ
ತಮಾಲ ವೃಕ್ಷದಡಿಯಲ್ಲಿ
ಕುಳಿತಿಹನು ನೋಡಲ್ಲಿ ಯಶೋದೆ ಬಾಲ
ಮುಚ್ಚಿದ ಕಣ್ಣೆವೆಗಳಲ್ಲಿ
ನೆನೆಯುತ್ತೆನ್ನ ಮನದಲ್ಲಿ
ಕರೆಯುತಿಹ ಮನವಕದ್ದ ಗೋಪೀಲೋಲ

ನಲಿಯುತಿಹಳು ಯಮುನೆ
ಬೆಳಗುತಿಹನು ಚಂದಿರ
ಮೈಮರೆತಿದೆ ಪ್ರಕೃತಿ ಆ ಕೊಳಲಗಾನಕೆ
ತಲೆದೂಗುತ್ತಿದೆ ಧೇನು
ಅರಳುತಿದೆ ಹೂ ತಾನು
ಮಾಧುರ್ಯ ಸುರಿವ ಆ ವೇಣುನಾದಕೆ

ಅವನಿಂದಲೇ ಬದುಕು
ಅವನೆನ್ನ ಬಾಳ ಬೆಳಕು
ಮನದ ಕಣಕಣದಲೂ ಆವರಿಸಿರುವ
ಅವನ ಪ್ರೇಮದ ಹೊರತು
ಬೇರೆ ಜಗದರಿವಿಲ್ಲೆನಗೆ
ಅವನೆನ್ನ ಹೃದಯವಲ್ಲಭ ಶ್ರೀ ಕೇಶವ

      ಶೈಲಜಾ ರಮೇಶ್
[18/2/2022, 4:51 pm] Dr. B. N. Shylaja Ramesh: #ಭಾವಗೀತೆ_ಸ್ಪರ್ಧೆ

#ಬತ್ತದ_ಪ್ರೀತಿಯ_ಚಿಲುಮೆ
*********************

ಬತ್ತದ  ನಿನ್ನ ಪ್ರೀತಿಯ ಚಿಲುಮೆ
ಚಿಮ್ಮುವ ಕಾರಂಜಿಯಂತೆ ನಿನ್ನೊಲುಮೆ
ಮಿಂದೆದ್ದು ಧನ್ಯಳಾದೆ ನಾನು
ನಿನ್ನೊಲವೇ ಸವಿಯಾದ ಜೇನು

ಬೆಳಕಾಗಿ ಬಂದೆ ನೀ ಬಾಳಿಗೆ
ಮೂಡಿಸಿ ಹೊಂಗನಸು ನಾಳೆಗೆ
ಬಾಳ ನೌಕೆಗೆ ನೀ ತಾನೇ ನಾವಿಕ
ದಡವ  ಸೇರಿಸಿ ಬೆಳಗಿದೆ ಬದುಕ

ನೀನಿತ್ತೆ ಪ್ರೀತಿಯ ಸವಿಯೂಟ
ನಡುವೆ ಹುಸಿ ಮುನಿಸ ಕಾದಾಟ
ಮರುಕ್ಷಣವೇ ಮರೆತೆಲ್ಲ ಮುನಿಸು
ಮೂಡಿಸುವೆ ನವಿರಾದ ಕನಸು

ನೀನಾದೆ ನನ್ನ ಬಾಳ ಹಸಿರು
ಗೆಳೆಯ ನೀನೇ ನನ್ನುಸಿರ ಉಸಿರು
ನಿನ್ನೊಲುಮೆಯಿಂದಲೇ ಈ ಬಾಳು
ಉಲ್ಲಾಸದುಯ್ಯಾಲೆಯಂತೆ ಕೇಳು

ಇರಲಿ ಗೆಳೆಯ ಹೀಗೆಯೇ ಹರುಷ
ಒಲವ ಚಿಲುಮೆ ಚಿಮ್ಮಲಿ ಪ್ರತಿನಿಮಿಷ
ಆ ದೈವದೊಲುಮೆ ತಂದ ಬಲದಿಂದ
ಬದುಕು ಸಾಗಲಿ ನಲಿವಿನಿಂದ

          ಶೈಲೂ......

[18/2/2022, 4:52 pm] Dr. B. N. Shylaja Ramesh: #ಹನಿಗವನ_ಸ್ಪರ್ಧೆ

#ಶೀರ್ಷಿಕೆ :--

#ವಾತ್ಸಲ್ಯದ_ಮಡಿಲು

(ರುಬಾಯಿ ಮಾದರಿಯಲ್ಲಿ ಬರೆದಿದ್ದೀನಿ)

ತಾಯಿಯದು ವಿಶಿಷ್ಟ ಶಕ್ತಿಗಳ ಸಂಗಮ
ಪ್ರೀತಿ, ಮಮತೆ ವಾತ್ಸಲ್ಯಗಳ  ಸಂಭ್ರಮ
ಕರುಳ ಕುಡಿಯ ಅಕ್ಕರೆಯಿಂದ ಬೆಳೆಸುವತ್ತ
ತುಡಿತ, ಅದು ತಾಯಿಯ ಅಸಾಮಾನ್ಯ ಪ್ರೇಮ

ಪಶುಪಕ್ಷಿ, ಖಗನಖವೂ ಹೊರತಲ್ಲ ಮಮತೆಗೆ
ಗುಟುಕಿತ್ತು ಕಾಪಿಡುವವು ಮನುಜನ ಹಾಗೇ
ಹೆಕ್ಕಿತಂದು ಕಸಕಡ್ಡಿ ಕಟ್ಟಿ ಮೆತ್ತನೆಯ ಗೂಡು
ಅಕ್ಕರೆಯ ವಾತ್ಸಲ್ಯಾಮೃತವಿತ್ತು ಕಾವಿಡುವುದು ತತ್ತಿಗೆ

         ಶೈಲೂ......
[18/2/2022, 4:52 pm] Dr. B. N. Shylaja Ramesh: #ಕವನಸ್ಪರ್ಧೆ

#ವಿಷಯ:--

#ಬಾಳ_ದಾರಿಯಲ್ಲಿ_ಒಲವಿನ_ಪ್ರಯಾಣ

ಬಾಳದಾರಿಯಲಿ ಒಲವಿನ ಪಯಣ
ಸರಾಗ ಸಾಗುತ್ತಿದೆ ನಿನ್ನೊಡನೆ ಜೀವನ
ಬಾಳ ಬಂಡಿಯ ಚಾಲಕ ನೀ ತಾನೇ
ಅನುಸರಿಸಿ ಸಾಗುವೆ ಜೊತೆಗೆನೇ

ನನ್ನ ಪಯಣ ನಿನ್ನ ಜೊತೆ ಜೊತೆಗೆ
ಸುಭದ್ರ ಬದುಕೆನ್ನೆದು ನಿನ್ನೊಂದಿಗೆ
ನೀ ಜೊತೆಗಿರಲಿನ್ನೇತರ ಭಯ
ಕ್ಷಣಕ್ಷಣವೂ ಸುಂದರ ಇನಿಯಾ

ಬಡತನವಿದ್ದರೇನಂತೆ ಬಾಳಲ್ಲಿ
ದುಡಿದು ಗಳಿಸೋಣ ಜೊತೆಯಲ್ಲಿ
ಗಂಜಿಯುಂಡರೇನಂತೆ ಬಿಡು
ಪ್ರೀತಿಯoಮೃತವ ನೀ ಕೊಡು

ಮೋಟಾರಿನಂತೆಯೇ ಈ ಬದುಕು
ಪ್ರೀತಿಯ ತೈಲವ ತುಂಬಬೇಕು
ಆಗಲೇ ತಾನೇ ಚಲನೆ ಸರಾಗ
ನಮ್ಮ ನಡುವಿದ್ದಂತೆ ಅನುರಾಗ

ಚಲಿಸಲಿ ಹೀಗೆಯೇ ಬಾಳಬಂಡಿ
ಬೆಸೆದಿರಲಿ ಜೊತೆಗೆ ಪ್ರೀತಿಯ ಕೊಂಡಿ
ನೀ ನನಗೆ, ನಾನೆಂದೆಂದಿಗೂ ನಿನಗೆ
ನಗುತ ಸಾಗೋಣ ಜೊತೆ ಜೊತೆಗೆ

           ಶೈಲೂ......
[18/2/2022, 4:52 pm] Dr. B. N. Shylaja Ramesh: #ಹನಿಗವನ_ಸ್ಪರ್ಧೆ

#ಸಾಹಿತ್ಯ_ಸಂಸ್ಕಾರ_ಬರೆಯುವ_ಕೈಗಳಿಗೆ_ಪುರಸ್ಕಾರ

ಸಾಹಿತ್ಯ ದೇವಿಯ ಸಹಕಾರವಿದ್ದರೆ
ಸಾಹಿತ್ಯದಲ್ಲಿ ಕಾಣುವುದು ಸಂಸ್ಕಾರ
ಸಂಸ್ಕಾರಯುತ ಸಾಹಿತ್ಯವೆಲ್ಲರ ಮನಗೆದ್ದರದುವೇ
ಬರಯುವ ಕೈಗಳಿಗಿತ್ತ ಪುರಸ್ಕಾರ

         ಶೈಲೂ.....
[18/2/2022, 4:52 pm] Dr. B. N. Shylaja Ramesh: #ಆಶುಕವನ

#ಮನದ ಭಾವನೆಗಳಿಗೆ ಅಕ್ಷರ ರೂಪ

ಮನದಲ್ಲಿ ಮೂಡಿದ ಭಾವ ಅಕ್ಷರಗಳೊಡನೆ ಬೆರೆತಾಗ
ಆಗುವುದು ಚಂದದ ಬರಹ
ಪದ ಪದಗಳಲಿ ಮಿಳಿತು ಅದಮ್ಯ ಮನೋಭಿಲಾಷೆ ಹೊರಹೊಮ್ಮಿದಾಗ ಕವಿಗದು ಆತ್ಮಾಭಿಮಾನದ ಚೇತನ

ಹೇಳಲಾಗದ ಭಾವಗಳೂ ಚಂದದ ಪದಗಳಲಿ ಬೆರೆತು
ಹೊಮ್ಮಿಸುವುದು ರಸಧಾರೆ
ಕಷ್ಟವೋ ಸುಖವೊ ಮನದ ಭಾವದ ಸಾರವನ್ನೆಲ್ಲಾ ಹಿಡಿದು
ಒಂದೆಡೆ ಕಲೆಸಿ ಒಲಿಸಿ ಬೆರೆಸಿ ಬಡಿಸುವುಸು ಕವಿಯ ಜಾಣ್ಮೆ
       ಶೈಲೂ...
[18/2/2022, 4:53 pm] Dr. B. N. Shylaja Ramesh: ಚುಟುಕು ಸ್ಪರ್ಧೆ##

ವಿಷಯ :-- ಸಾಹಿತ್ಯ ಮೇರು ಪರ್ವತ

ಸಾಹಿತ್ಯವೆಂಬುದೇ ಒಂದು ಮೇರುಪರ್ವತ
ಅತೀವ ಶ್ರದ್ಧೆಯಿರಬೇಕೇರಲು ಅನವರತ
ಪದಪದಗಳಲಿ ಜೀವ ತುಂಬಿ ಬೆಸೆದಾಗಲೇ
ಸಾಹಿತ್ಯ ಕ್ಷೇತ್ರದಲ್ಹೆಸರುಳಿವುದು ಶಾಶ್ವತ..!!

            ಡಾ: ಶೈಲಜಾ ರಮೇಶ್...
[18/2/2022, 4:53 pm] Dr. B. N. Shylaja Ramesh: ಶಿಶುಗೀತೆ ಸ್ಪರ್ಧೆ##

ಶೀರ್ಷಿಕೆ :---
ಅರಳುವ ಕುಸುಮಗಳು
********************

ನಾವೆಲ್ಲಾ ನಲ್ಮೆಯ ಗೆಳೆಯರು
ಹಾಡುತ ಆಡುತ ನಲಿಯುವೆವು
ಗುರುಗಳು ಹೇಳಿದ ಶಿಸ್ತಿನ ಪಾಠವ
ಗಮನವಿಟ್ಟು ನಾವ್ ಕಲಿಯುವೆವು

ಆಟವು ಪಾಠವು ನಮ್ಮಿಷ್ಟದ ವಿಷಯ
ನಾವ್ ಎಲ್ಲದರಲ್ಲೂ ಮುಂದಿರುವೆವು
ಸೋಲಿನ ಗೆಲುವಿನ ಚೆಂತೆ ಎಮಗಿಲ್ಲ
ನಾವ್ ಉತ್ಸಾಹದಿ ಮುನ್ನುಗ್ಗುವೆವು

ಇಂದಿಗೆ ನಾವು ಚಿಕ್ಕ ಮಕ್ಕಳು 
ನಾಳೆಗೆ ನಾಡಿನ ಹಿರಿಯರು ನಾವು
ಹಿರಿಯರು ತೋರಿದ ಸನ್ಮಾರ್ಗದಲ್ಲಿ
ಹೆಜ್ಜೆ ಹಾಕುತ್ತಾ ನಡೆಯುವೆವು

ದೇಶಸೇವೆಯೇ ಈಶ ಸೇವೆಯು
ನಮಗಾಗಲಿ ಇದು ದಿವ್ಯಮಂತ್ರ
ಸನ್ನಡೆತೆಯ ಹಾದಿ ತೋರಿರಿ ಹಿರಿಯರೇ
ನೀವೇ ನಮ್ಮ ಬಾಳಬಂಡಿಯ ಸೂತ್ರ

ಅದಮ್ಯ ಬಯಕೆಯೊತ್ತ ಮೊಗ್ಗುಗಳು
ಘಮಿಸುತ ಅರಳುವ ಕುಸುಮಗಳು
ಪ್ರೀತಿಯ ನೀರೆರೆದು ಪೋಷಿಸಿರಿ
ನಾವ್ ಮನೆಮನೆ ಬೆಳಗುವ ದೀಪಗಳು

ಮುಗ್ಧ ಮನಸಿನ ಚಿಣ್ಣರು ನಾವು
ನಾಳೆಗೆ ಅರಳುವ ಕುಸುಮಗಳು
ಬೇಧ ಭಾವದ ಅರಿವೆಮಗಿಲ್ಲ
ಸ್ನೇಹ ಭಾವದಿ ಬೆರೆಯುವೆವು

           ಶೈಲೂ.....
[18/2/2022, 4:53 pm] Dr. B. N. Shylaja Ramesh: ಆಧುನಿಕ ವಚನ##

ಅಕ್ಷರದೊಡತಿಯ ಅಕ್ಕರೆಯಲಿ ನೆನೆದು
ಅಕ್ಕರದ ವಿದ್ಯೆಯ ಕರುಣಿಸೆಂದು ಬೇಡುತ್ತ
ನಯವಿನಯ ಭಯಭಕ್ತಿಯಲಿ ನಡೆದೊಡೆ
ಪರಬೊಮ್ಮನರಸಿ ವೀಣಾಪಾಣಿ ಸರಸತಿ
ಮೊಗೆಮೊಗೆದು ಜ್ಞಾನಭಂಡಾರ ನೀಡುವಳು 
ಕಾಣೆ0ದ  ನನ್ನೊಡೆಯ ಶ್ರೀ ಶೈಲನಾಥೇಶ್ವರ

               ಶೈಲೂ....
[18/2/2022, 9:22 pm] Dr. B. N. Shylaja Ramesh: ಇಂದು   ಗುರುದೇವ  ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿ .....
                ಜೈ  ಗುರುದೇವ

ಶ್ರೀ ರಾಮಕೃಷ್ಣ
*************

ತೋರು ಶ್ರೀ ಚರಣ ಅರ್ಪಿಸುವೆ ನಮನ
ಕಾಯೋ ಕರುಣಾನಿಧೇ ಶ್ರೀ ರಾಮಕೃಷ್ಣ

ಕೊ ನೆಯಿಲ್ಲದಾ  ದುಃಖ ಪಾರುಗಾಣಿಸೋ ತಂದೆ
ನಿನ್ನ ಪಾದಾರವಿಂದವನು ನಂಬಿ ನಾ ಬಂದೆ

ಕರುಣಾರಸ ಸಿಂಧು ದೀನ ಭಕ್ತರ ಬಂಧು
ಪೊರೆಯಬೇಕಿಂದು ಹರಸುತಲಿ ಬಳಿಬಂದು

ಜ್ಞಾನ ಭಕ್ತಿಯ ನೀಡು ಅಹಮಿಕೆಯ ಹೊರದೂಡು
ವಿವೇಕ ವೈರಾಗ್ಯ ಗಳ ಕರುಣಿಸುವ ಕೃಪೆಮಾಡು
 
ಸೂರ್ಯತೇಜ ಸಮ ಕಾಂತಿ ಹೊಮ್ಮುವ ಬೆಳಕ
ಪ್ರಭೆಯ ಪ್ರಕಾಶದಲಿ ಬೆಳಗೆಮ್ಮ ಬದುಕ

ಕಾಮಕ್ರೋಧವ ಅಳಿಸು ನೇಮನಿಷ್ಠೆಯ ನೀಡು
ಭಾವತಾರಿಣಿಯ ಪದತಲದೇ ಎನ್ನ ಮನವನು ಇರಿಸು

ಸರ್ವಧರ್ಮಗಳ ಸಮನ್ವಯ ಮೂರುತಿ ನೀ ತಂದೆ
ದೈವ ಸಾಕ್ಷಾತ್ಕಾರಕೆ  ಎಲ್ಲ ಧರ್ಮಗಳೊಂದೆ ಎಂದೆ

ಸಕಲಶಾಸ್ತ್ರಗಳ ಸಾರ ನಿನ್ನ ಮಹಿಮೆ ಅಪಾರ
ತೋರು ಕರುಣಾಮಹಾಪೂರ ದಾಟಿಸು ಭವ ಸಾಗರ

ಕಮಲದಳ ನಯನ ಪ್ರಭು ರಾಮಕೃಷ್ಣ
ತಾಪ ತಿಮಿರವ ಕಳೆದು ನಿನ್ನಲೇ ಬೆರೆಸೆನ್ನ ಮನ

            ಶೈಲೂ.....
 
Photo sources ( Internet / social media)
[18/2/2022, 9:22 pm] Dr. B. N. Shylaja Ramesh: #ಗುರುವಂದನಾ_ಕಾರ್ಯಕ್ರಮ

🙏 *ಶ್ರೀ ಗುರುಭ್ಯೋನಮಃ* 🙏

 #ಅಜ್ಞಾನತಿಮಿರಾಂಧಸ್ಯ_ಜ್ಞಾನಾಂಜನ_ಶಲಾಕಯಾ 
#ಚಕ್ಷುರುನ್ಮೀಲಿತಂಯೇನ_ತಸ್ಮೈ_ಶ್ರೀ_ಗುರುವೇನಮಃ 

          ಅಜ್ಞಾನದ ಕತ್ತಲೆಯನ್ನು ಕಳೆದು ಜ್ಞಾನದ ಬೆಳಕನ್ನ ಹರಿಸುವ ವ್ಯಕ್ತಿಯೇ ಗುರು, ಅಂತಹ ಗುರುವಿಗೆ ನಮಸ್ಕಾರ ಎನ್ನುತ್ತದೆ ವೇದಮಂತ್ರಗಳು.
    ಕಲಿಯುವವನಿಗೆ ಸತ್ಯ ದರ್ಶನ ಮಾಡಿಸುವ, ಸನ್ಮಾರ್ಗವನ್ನು ತೋರಿಸುವ ಪೂಜ್ಯ ಸ್ಥಾನದಲ್ಲಿರುವ ವ್ಯಕ್ತಿಯೇ ಗುರು.

         #ಗುರು' ಶಬ್ದವು ಗು ಮತ್ತು ರು ಅಕ್ಷರಗಳಿಂದ ರಚಿತವಾಗಲ್ಪಟ್ಟಿದೆ. #ಗುಕಾರೋಂಧಕಾರತ್ವಾತ್ #ರುಕಾರೋತನ್ನಿವಾರಕಃ" ’ಗು’ ಎಂದರೆ ’ಅಂಧಕಾರ’ ಎಂದರ್ಥವಿದೆ. ’ರು’ ಎಂದರೆ ’ನಾಶಪಡಿಸುವವನು’ ಅಂದರೆ ಅಂಧಕಾರವನ್ನು ನಾಶ ಪಡಿಸುವವನು ಎಂದಾಗುತ್ತದೆ.
ಜಗತ್ತಿನಲ್ಲಿ ಯಾವುದೇ ವಿಷಯವನ್ನು ಕಲಿಯಬೇಕಾದರೆ ಗುರುವಿನ ಸಾನ್ನಿಧ್ಯ ಬೇಕು. ಭಾರತೀಯ ಪರಂಪರೆಯಲ್ಲಿ ಶಿಷ್ಯ ಮತ್ತು ಗುರುವಿಗೆ ಮಹತ್ತರ ಸಂಬಂಧವಿದೆ. ವ್ಯಕ್ತಿಯು ಭಗವಂತನ ಕಡೆಗೆ ಹೋಗಲು ಆಧ್ಯಾತ್ಮಿಕ ಶಕ್ತಿ, ಧ್ಯಾನ, ದೀಕ್ಷೆ, ಅಗತ್ಯ ಮಂತ್ರವನ್ನು ಹೇಳಿಕೊಟ್ಟು ಮಾರ್ಗದರ್ಶನ ಮಾಡುವುದು ಗುರುವಿನ ಕೆಲಸ . ಅಲ್ಲದೆ ಹಿಂದಿನಿಂದಲೂ ಗುರುವಿಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ.
    #ಗುರುಬ್ರಹ್ಮ_ಗುರುರ್ವಿಷ್ಣು_ಗುರುದೇವೋ_ಮಹೇಶ್ವರಃ* 
 #ಗುರುಸಾಕ್ಷಾತ್ಪರಬ್ರಹ್ಮ_ತಸ್ಮೈ_ಶ್ರೀಗುರವೇ_ನಮಃ*
ಎಂದು ಗುರುವನ್ನು ತ್ರಿಮೂರ್ತಿಗಳಿಗೆ ಹೋಲಿಸಿದ್ದಾರೆ.
 ಗುರು ಸೃಷ್ಟಿ ಸ್ಥಿತಿ ಮತ್ತು ಲಯಕಾರಕಾನೂ ಹೌದಲ್ಲವೇ? ಶಿಕ್ಷಕ ಭೌತಿಕವಾಗಿ ಏನನ್ನೂ ಸೃಷ್ಟಿಸದಿರಬಹುದು, ಆದರೆ ಮಕ್ಕಳ / ವಿದ್ಯಾರ್ಥಿಗಳ ಜೀವನದ ಗುರಿ, ಉದ್ದೇಶಗಳನ್ನು, ಅವುಗಳನ್ನು ಸಾಧಿಸುವ ಮಾರ್ಗಗಳನ್ನು, ಧ್ಯೇಯವನ್ನು, ವಿದ್ಯಾರ್ಥಿಗಳ ಮನಸಲ್ಲಿ ಸೃಷ್ಟಿ ಮಾಡುವವನು, ಅವು ಪಕ್ವವಾಗಿ ಬೆಳೆಯುವಂತೆ ವಿವಿಧ ತತ್ವಗಳನ್ನು ತಲೆಯಲ್ಲಿ ತುಂಬುವವನು ಮತ್ತು ದಾರಿತಪ್ಪುವ ವಿದ್ಯಾರ್ಥಿಗಳ ನಡೆ ನುಡಿಗಳನ್ನು, ವಿದ್ಯಾರ್ಥಿಗಳಲ್ಲಿನ ಕೆಟ್ಟ ಯೋಚನೆಗಳನ್ನು ನಾಶಮಾಡಿ ಸರಿಯಾದ ದಾರಿಯನ್ನು ತೋರುವವನು ಗುರುವೇ ಆಗಿದ್ದಾನೆ.

       ಹುಟ್ಟುತ್ತಲೇ ಏನೇನೂ ತಿಳಿಯದ ಮಗು ಕ್ರಮೇಣ ತನ್ನ ಸುತ್ತಮುತ್ತಲಿನವ ಭಾಷೆಯನ್ನು ಗಮನಿಸುತ್ತಾ ಕೆಲವು ಶಬ್ದಗಳನ್ನು ಕಲಿಯುತ್ತದೆ. ನಿಧಾನವಾಗಿ ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ಕಂಡುಬರುವ ವಿವಿಧ ಜನರು, ವಸ್ತುಗಳಿಂದ ಅನೇಕ ವಿಷಯಗಳನ್ನು ಕಲಿಯುತ್ತದೆ. ಆದರೆ ಶೈಶವಾವಸ್ಥೆ ಕಳೆದು ಬಾಲ್ಯಕ್ಕೆ ಅಡಿಯಿಟ್ಟಾಗ ಮಕ್ಕಳಿಗೆ ಸಾಮಾಜಿಕ ಜೀವನದ ಪರಿಚಯ ಆಗುತ್ತಾ ಹೋಗುತ್ತದೆ. ಈ ಹಂತದಿಂದ ಮಗುವಿನ ಕಲಿಕೆಯ ರೀತಿ ಮತ್ತು ಅದರ ವೇಗ ಎರಡೂ ಬದಲಾಗುತ್ತಾ ಹೋಗುತ್ತದೆ. ಇದು ಬಹಳ ಮನುಷ್ಯನ ಜೀವನದ ಗುರಿಯನ್ನು ರೂಪಿಸುವ ಪ್ರಮುಖ ಹಂತವಾಗಿದ್ದು, ಇಲ್ಲಿಂದ ಮಕ್ಕಳಿಗೆ ಉತ್ತಮ ಗುರುವಿನ ಮಾರ್ಗದರ್ಶನ ಅತ್ಯಗತ್ಯವಾಗಿ ಬೇಕಾಗುತ್ತದೆ. ಗುರು ಎಂದರೆ ಕೇವಲ ಶಾಲೆಗಳಲ್ಲಿ ಅಕ್ಷರ ಹೇಳಿಕೊಡುವ ಗುರುಗಳಷ್ಟೇ ಅಲ್ಲ. ಮನೆಯಲ್ಲಿ ತಾಯಿ ತಂದೆ ಅಜ್ಜ ಅಜ್ಜಿಯರು, ಬಂಧು ಬಳಗದವರು ಸ್ನೇಹಿತರು, ದಿನಾಲೂ ನಾವು ನೋಡುವ ಮಾತಾಡಿಸುವ ಜನರನ್ನೂ, ಸಮಾಜದಲ್ಲಿ ಎತ್ತರದಲ್ಲಿರುವ ಗಣ್ಯ ವ್ಯಕ್ತಿಗಳು, ಮಹನೀಯರನ್ನೂ ಸಹ ಗುರುಗಳಾಗಿ ಭಾವಿಸಿದರೆ, ಮನುಷ್ಯ ಬಹಳ ಎತ್ತರಕ್ಕೆ ಏರಬಹುದು. ‘ #ಗುರುವಿನ_ಗುಲಾಮನಾಗುವ_ತನಕ_ದೊರೆಯದಣ್ಣ_ಮುಕುತಿ’* ಎಂದು ದಾಸವಾಣಿ ಇದೆ, ಅಂದರೆ ಏನೂ ತಿಳಿಯದ ಒಬ್ಬ ಸಾಮಾನ್ಯ ಮನುಷ್ಯನನ್ನು ಜೀವನದ ಮೌಲ್ಯಗಳು, ಜೀವನದ ಅರ್ಥ, ಗುರಿ ಆ ಗುರಿಯನ್ನು ಸಾಧಿಸಲು ಇರುವ ಮಾರ್ಗ ಮುಂತಾದವುಗಳನ್ನು ಗುರುವಿನ ಮಾರ್ಗದರ್ಶನವಿಲ್ಲದೆ ತಿಳಿಯಲು ಸಾಧ್ಯವಿಲ್ಲ. ಪ್ರಪಂಚದ ಮಹಾನ್ ವ್ಯಕ್ತಿಗಳು, ದಾರ್ಶನಿಕರು, ಸಂತರು, ರಾಜಕೀಯ ಮುತ್ಸದ್ದಿಗಳ ಜೀವನದ ವಿವಿಧ ಹಂತಗಳನ್ನು ಗಮನಿಸಿದಾಗ ಅವರ ಜೀವನದ ಪ್ರತಿ ಹಂತದಲ್ಲಿ ಮಾರ್ಗದರ್ಶಕರಾಗಿ ಒಬ್ಬ ಗುರು ಜೊತೆಗಿದ್ದನೆಂದು ತಿಳಿಯುತ್ತದೆ. ಮನಸ್ಸು ಎಲ್ಲ ಕಡೆಗೂ ಓಡುತ್ತಿರುತ್ತದೆ. ಆದರೆ ಅಂತಹ ಮನಸ್ಸಿಗೆ ಸರಿಯಾದ ದಾರಿ ತೋರುವ, ಬುದ್ದಿಯನ್ನು ಉಪಯೋಗಿಸಿ ಸಮಾಜಕ್ಕೆ ಒಳಿತು ಮಾಡುವ ಮಾರ್ಗದರ್ಶನ ತೋರಿಸುವ ಶಕ್ತಿಯಿರುವುದು ಕೇವಲ ಗುರುವಿನಲ್ಲಿ ಮಾತ್ರ.
ಹಾಗಾಗಿಯೇ ಗುರು ಒಬ್ಬ ಆದರ್ಶ ವ್ಯಕ್ತಿ, ತ್ರಿಮೂರ್ತಿ ಗಳಿಗೆ ಸಮನಾದವರು.  ಇಂತಹ ಗುರುವಿನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.

         ಈ ಗುರುವಂದನಾ.ಅಭಿಯಾನದ ಸಂದರ್ಭದಲ್ಲಿ ನನ್ನನ್ನು ತಿದ್ದಿ ತೀಡಿದ ಅನೇಕರನನ್ನು ಗೌರವದಿಂದ ನೆನೆಯುತ್ತೇನೆ🙏
ಮೊದಲಿಗೆ ನನ್ನ ತಾಯಿ,  ತುಂಬು ಸಂಸಾರದ ಒಡತಿ, ಕ್ಷಣಮಾತ್ರವೂ ಬಿಡುವಿಲ್ಲದ ಜೀವನ ಶೈಲಿಯಲ್ಲೂ ಹೆಜ್ಜೆಜ್ಜೆಗೂ ಅಕ್ಷರಜ್ಞಾನವನ್ನು ಕೊಟ್ಟು, ಕಥೆಗಳ ಮೂಲಕವೇ ಶಿಕ್ಷಣ ವನ್ನು ಕೊಟ್ಟಾಕೆ. ಸರಳ ಉದಾಹರಣೆಗಳ  ಮೂಲಕವೇ ಗಣಿತವನ್ನು ಕಲಿಸಿದಾಕೆ. ನನ್ನಮ್ಮ, ನನ್ನ ಅಪ್ಪನ ಮಾರ್ಗದರ್ಶನ ದಿಂದ ಶಾಲೆಗೆ ಸೇರುವ ಮೊದಲೇ  ಪುಸ್ತಕ ವನ್ನು ಓದಲು ಕಲಿತಿದ್ದೆ.

        ನನ್ನ ಅಣ್ಣಂದಿರು, ಅಕ್ಕ, ನಾನು ಮತ್ತೂ ಕಲಿತು ಮತ್ತೊಬ್ಬರಿಗೆ ಕಲಿಸುವಷ್ಟು ಜ್ಞಾನ ಕೊಟ್ಟ ಗುರುಗಳು.
ಇನ್ನು ನನ್ನ ಪ್ರಾಥಮಿಕ ಶಾಲಾ ದಿನಗಳ ನನ್ನ ಅಚ್ಚುಮೆಚ್ಚಿನ , ನಂಜಯ್ಯ ಮಾಸ್ಟರ್, ರಾಮಕೃಷ್ಣಯ್ಯ ಮಾಸ್ಟರ್, ಮಾಧೂರಾವ್ ಮಾಸ್ಟರ್, ಚಂಪಕವಲ್ಲಿ ಮೇಡಂ... ಇವರ ಗರಡಿಯಲ್ಲಿ, ಅಚ್ಚುಮೆಚ್ಚಿನ ಶಿಷ್ಯಳಾಗಿ,  ಶಾಲೆಗೇ ಪ್ರಥಮ ಸ್ಥಾನ ಗಳಿಸುವಲ್ಲಿ ಸಹಕಾರಿಯಾಯ್ತು,

         ನನ್ನೆಲ್ಲಾ ಯಶಸ್ಸಿಗೆ ಬೆನ್ತಟ್ಟಿ ಪ್ರೋತ್ಸಾಹಿಸುತ್ತಾ ಮತ್ತೂ ಕಲಿಕೆಗೆ ಆಸ್ಥೆ ತುಂಬಿದವರು ನನ್ನಜ್ಜ ಶ್ರೀಮೆಂಕಟರಾಮಯ್ಯ ನವರು.
       ಹೈಸ್ಕೂಲ್ ನಲ್ಲಿದ್ದದ್ದು ಎಲ್ಲಾ ನನ್ನ ಮೆಚ್ಚಿನ ಗುರುಗಳೇ...ASN ಸರ್, CV ಸರ್, CGS ಸರ್ ಕನ್ನಡ ಮಾಸ್ಟರ್ ಶಿವಶಂಕರ್, PT ಮಾಸ್ಟರ್ ,  ಸದಾ ಬಿಗುಮುಖದಲ್ಲೇ ಇದ್ದರೂ, ಕಲಿಸುವುದರಲ್ಲಿ ನಿಸ್ಸೀಮರಾದ ಮ್ಯಾತ್ಸ್ ಮಾಸ್ಟರ್ GS, ಇವರೆಲ್ಲರ ಪ್ರೀತಿಯ ಆಶೀರ್ವಾದ ನನ್ನ ಮೇಲಿದೆ. ಈ ಗುರುಗಳನ್ನ ಅದೆಷ್ಟು ಸ್ಮರಿಸಿದರೂ ಕಡಿಮೆಯೇ..
       ಇನ್ನು PU ಕಾಲೇಜ್ನ  ರುದ್ರಾಣಿ ಮಿಸ್, ವೈಜಯಂತಿ ಮಿಸ್, ಲಲಿತ ಮಿಸ್ ಇವರ ಆದರಣೆ ವಿಶ್ವಾಸವನ್ನಂತೂ ಹೇಳತೀರದು.
ಡಿಗ್ರಿ ಕಾಲೇಜಿನ ನನ್ನ ಅಚ್ಚುಮೆಚ್ಚಿನ ಗುರುಗಳಾದ ಬಚ್ಚನ್ ಮಾಸ್ಟರ್( ತುಂಬಾ ಉದ್ದ ಇದ್ದಿದ್ರಿಂದ ಹಾಗೆ ಕರೀತಾ ಇದ್ದದ್ದು ನಾನು😊ಅವರ ಹೆಸರು ಶಿವರಾಮ ರೆಡ್ಡಿ) ಜಯ ಮೇಡಂ ಇವರೆಲ್ಲರ, ಉದಾರ ಮನಸ್ಸಿನ , ನಿಸ್ವಾರ್ಥ ಕಲಿಸುವಿಕೆಯ ಕಾರಣದಿಂದಾಗಿ ನನ್ನ ವ್ಯಕ್ತಿತ್ವವನ್ನ ರೂಪಿಸಿಕೊಳ್ಳುವಲ್ಲಿ ಸಹಕಾರಿಯಾಯ್ತು🙏ಇವರೆಲ್ಲರಿಗೂ ನಾನು ಋಣಿ.

        ನನ್ನ ಆಧ್ಯಾತ್ಮ ಗುರುಗಳು #ಶ್ರೀರಾಮಕೃಷ್ಣಾಶ್ರಮದ  ಶ್ರೀಮತ್ ಸ್ವಾಮಿ  ಪುರುಷೋತ್ತಮಾನಂದಜಿ ಮಹಾರಾಜ್, ಶ್ರೀಮತ್ ಸ್ವಾಮಿ ಹರ್ಷಾನಂದಜಿ ಮಹಾರಾಜ್, ಶ್ರೀಮತ್ ಸ್ವಾಮಿ  ತಪತ್ಸ್ಯಾನಂದಜಿ ಮಹಾರಾಜ್ ಇವರುಗಳ  ನಿಷ್ಕಾಮ, ನಿಸ್ವಾರ್ಥ, ಸಪ್ರೇಮ ಮಾರ್ಗದರ್ಶನ ದಲ್ಲಿ ನನ್ನ ಸ್ವಚ್ಛ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ಯಶಸ್ವೀಯಾದೆ.  ಇದು ನನ್ನ ದೈವ ಶ್ರೀಕೃಷ್ಣ ಕಲ್ಪಿಸಿದ ಅಹೋಭಾಗ್ಯ🙏 ನನ್ನಲ್ಲಿ ಆಧ್ಯಾತ್ಮಿಕ, ಧಾರ್ಮಿಕ ಭಾವನೆಗಳನ್ನು ಉದ್ದೀಪಿಸುವಲ್ಲಿ ಶ್ರೀರಾಮಕೃಷ್ಣ ಆಶ್ರಮದ ಪಾತ್ರ ಮಹತ್ವವಾದದ್ದು. ಆ ಮಹೋನ್ನತ ಭಾಗ್ಯವನ್ನಿತ್ತ ನನ್ನ ಆಧ್ಯಾತ್ಮಿಕ ಗುರುಗಳಿಗೇ ನಾನು ಚಿರಋಣಿ🙏🙏
      ಇನ್ನು ಜ್ಯೋತಿಷ್ಯ ಕಲಿಕೆಗೆ ಓಂನಾಮ ಹಾಡಿದ್ದು  ನನ್ನ ತಂದೆ ಹಾಗೂ ನನ್ನ ಅಣ್ಣ ಆದ್ರೂ.... ಶಾಸ್ತ್ರೀಯವಾಗಿ ಕಲಿತದ್ದು  ದಿವ್ಯಜ್ಯೋತಿ ಕಾಲೇಜ್ ಆಫ್ ಅಸ್ತ್ರಾಲಜಿ ಯಲ್ಲಿ ಅಲ್ಲಿನ  ಗುರುಗಳಾದ ಶ್ರೀಮಾನ್, ಚಂದ್ರಶೇಖರ್, ಸರ್, ಸುಧೀಂದ್ರ ಸರ್, ಬದ್ರೀನಾಥ ಸರ್, ರಾಮಮೂರ್ತಿ ಸರ್, ವಿಶೇಷವಾಗಿ G.V.ಮೂರ್ತಿ ಸರ್, ಜ್ಯೋತಿ ಪ್ರಕಾಶ್ ಸರ್, ಸುರೇಶ್ ಸರ್.. ಇವರೆಲ್ಲರ ಮಾರ್ಗದರ್ಶನ ದಿಂದ ಇಂದು ಜ್ಯೋತಿಷ್ಯ ದಲ್ಲಿ ಸಂಶೋಧನೆ ಮಾಡಿ.ಡಾಕ್ಟರೇಟ್ ಪಡೆಯುವಲ್ಲಿ ಸಹಕಾರಿಯಾಯ್ತು.  ನನ್ನೆಲ್ಲಾ ಜ್ಯೋತಿಷ್ಯ ಗುರುಗಳ ಸಲಹೆ, ಸಹಕಾರ, ಆಶೀರ್ವಾದದ ಪ್ರತಿಫಲ ಇಂದು ನಾನೊಬ್ಬ ಉತ್ತಮ ಜ್ಯೋತಿಷಿ. ಹಾಗೂ " #ನಕ್ಷತ್ರ_ಮಾಲಿಕೆ"* ಅನ್ನುವ ಜ್ಯೋತಿಷ್ಯ ಪುಸ್ತಕ ಬರೆಯಲು ಪ್ರೇರೇಪಿಸಿತು. ನನ್ನ ಜ್ಯೋತಿಷ್ಯ ದ ಸರ್ವ.ಗುರುಗಳಿಗೂ ನಾನು ಅಭಾರಿ🙏🙏

       ಇನ್ನು ಸಾಹಿತ್ಯ ವಿಷಯಕ್ಕೆ ಬಂದರೆ..  ಚಿಕ್ಕಂದಿನಿಂದಲೂ ಬರೆಯುವ ತುಡಿತ ಇದ್ದದ್ದು ನಿಜವೇ ಆದರೂ...ಅದನ್ನ ಸಮರ್ಪಕವಾಗಿ ಬಳಸಿಕೊಂಡದ್ದು ನನ್ನ ಮುದ್ದು ಮಗ ಚಿಕ್ಕ ಹುಡುಗನಾಗಿದ್ದಾಗ  ಅವನಲ್ಲಿ  ಬಾಲಭಾಷೆಯ ಸಾಹಿತ್ಯ ಮೊಳೆತಾಗ..!!!  8ರ ಹರೆಯದ ಪೋರ ತನ್ನ ಅನಿಸಿಕೆಗಳನ್ನು ಪದಗಳಲ್ಲಿ ಹಿಡಿದಿಡುವ ಸಾಹಸ ಮಾಡುತ್ತಿದ್ದಾಗ..!!
ಆಗಲೇ ನನ್ನಲ್ಲಿ ಸುಪ್ತವಾಗಿದ್ದ ಕವಯತ್ರಿ ತಲೆಯೆತ್ತಿದ್ದು. ನನಗೆ ಸ್ಫೂರ್ತಿಯಾಗಿ ನಿಂತದ್ದು ನನ್ನ ಮುದ್ದುಮಗ.  ಆನಂತರ ಸಾಮಾಜಿಕ ಜಾಲತಾಣದಲ್ಲಿ ನನ್ನನ್ನ ತಿದ್ದಿ ತೀಡಿದ್ದು  *ಶ್ರೀಮಾನ್ ಗಣೇಶ್ ಪ್ರಸಾದ ಪಾಂಡೇಲು* ಗುರುಗಳು, ಅವರ ಮಾರ್ಗದರ್ಶನದಲ್ಲಿ ಸಾಹಿತ್ಯ ಅಭಿಯಾನ ನಿರಾತಂಕವಾಗಿ ಸಾಗಿದೆ. ಅವರ ನಂತರದ ಸ್ಥಾನ *ನಾಗೇಶ್ Mn* ಅವರದ್ದು .
ನನ್ನೆಲ್ಲಾ ತಪ್ಪು ಒಪ್ಪುಗಳನ್ನು ತಿಳಿಸಿ ತಿದ್ದಿ ತೀಡಿದ ಪ್ರತಿಯೊಬ್ಬ ವ್ಯಕ್ತಿಯೂ ನನಗೆ ಗುರುಸಮಾನರು🙏 ಎಲ್ಲರಿಂದ ಬೆಳೆದಿದ್ದೇನೆ, ಬೆಳೆಯುತ್ತಿದ್ದೇನೆ.
        ಬಾಲ್ಯದಿಂದ ಇಂದಿನವರೆಗೂ... ಪ್ರತಿಹಂತದಲ್ಲೂ ನನ್ನ ಬೆಳವಣಿಗೆಗೆ ಮಾರ್ಗದರ್ಶಕರಾಗಿ, ಸಹಕಾರವಿತ್ತ ನನ್ನೆಲ್ಲ ಗುರುಗಳಿಗೂ, ಗುರು ಸಮಾನರಿಗೂ.... ಬದುಕಿನ ಅನೇಕ ಪಾಠಗಳನ್ನು ಕಲಿಯಲು ಸಹಕಾರರಾದ ನನ್ನೆಲ್ಲಾ ಸ್ನೇಹಿತವರ್ಗವನ್ನೂ, ನೋವು ಕೊಟ್ಟು, ಮಹತ್ತರ ಪಾಠ ಕಲಿಸಿದ, ಎಲ್ಲರನ್ನೂ ಗುರುವೆಂದು ನೆನೆಯುತ್ತಾ, ನಮಿಸುತ್ತಾ.... ಈ ಗುರುವಂದನಾ ಕಾರ್ಯಕ್ರಮ ದ ಅಭಿಯಾನಕ್ಕೆ ನನ್ನನ್ನು ಆಹ್ವಾನಿಸಿದ ಪ್ರೀತಿಯ ಗೆಳತಿ, ಸಹೋದರಿ, ಶ್ರೀಮತಿ #ಸುಮಾ_ಹೆಗಡೆಯವರಿಗೆ ಧನ್ಯವಾದಗಳನ್ನು ತಿಳಿಸುತ್ತಾ ನನ್ನ ಬರಹವನ್ನು ಮುಗಿಸುತ್ತಿದ್ದೇನೆ🙏
ನಾನು ಯಾರನ್ನೂ ಈ ಅಭಿಯಾನವನ್ನು ಮುಂದುವರೆಸಲು ಆಹ್ವಾನಿಸಿಲ್ಲ,  ಆಸಕ್ತರು ಆಹ್ವಾನವೆಂದು ಮನ್ನಿಸಿ... ಈ ಸುಂದರ ಕಾರ್ಯಕ್ರಮ ವನ್ನು ಮುಂದುವರೆಸಬೇಕೆಂದು ಕೋರುತ್ತೇನೆ🙏🙏
ಈ ಮೂಲಕವಾಗಿಯಾದರೂ ಎಲ್ಲಾ ಹಂತದಲ್ಲೂ ನಮ್ಮನ್ನು ತಿದ್ದಿತೀಡಿ ಕೈಹಿಡಿದು ನಡೆಸಿದ ನಡೆಸುತ್ತಿರುವ ಎಲ್ಲ ಗುರುಗಳಿಗೂ ಧನ್ಯವಾದಗಳನ್ನು ಅರ್ಪಿಸುವ ಈ ಕಾರ್ಯ ಸಂಪನ್ನವಾಗಲಿ🙏
    ಜೈ ಗುರುದೇವ 🙏🙏
ಸರ್ವಂ ಇದಂ ಶ್ರೀರಾಮಕೃಷ್ಣಾರ್ಪಣ ಮಸ್ತು🙏🙏

✍️ಡಾ: B.N. ಶೈಲಜಾ ರಮೇಶ್
[23/2/2022, 1:43 pm] Dr. B. N. Shylaja Ramesh: ಗುಣಿತಾಕ್ಷರ ಗಳ ಕವನ

ತ ಯಿಂದ ತಂ ವರೆಗೆ

#ತ  ತವರಿಗೆ  ತವರೇ ಸಾಟಿ
#ತಾ ತಾಯಿ ತಾಳ್ಮೆಯ ಪ್ರತಿ
#ತಿ  ತಿಳಿಸಿ ತಿದ್ದುವಳು ತಪ್ಪುಗಳ
#ತೀ ತೀರದ ತೀವ್ರ ಪ್ರೀತಿಯನಿತ್ತು
#ತು ತುತ್ತು ತುತ್ತಿಗೂ ಹರಿಸುತ್ತ ವಾತ್ಸಲ್ಯ
#ತೂ ತೂಗುಯ್ಯಾಲೆಯಲಿ ತೂಗುತ್ತ ಹಾಡುವಳು
#ತೃ ತೃಣವಾದರೂ ಬಯಕೆಯಿಲ್ಲ ತೃಪ್ತ ಮನದವಳು
#ತೆ ತೆಳು ಹಾಸ್ಯದ ತಿಳಿ ನಗೆಯವಳು
#ತೇ  ತೇರಿನಂತೆಳೆವಳು ಬದುಕ ಬಂಡಿ 
#ತೊ ತೊರೆಯಬಹುದೇ ತಾಯಿ ಪ್ರೀತಿಯ        ಮರೆತು
#ತೋ ತೋರುವರಾರಿಲ್ಲಿ  ನಿಸ್ವಾರ್ಥ ಪ್ರೀತಿ, ತೋರಿಕೆಯ ಜನರೇ ತುಂಬಿರುವಾಗ
#ತೌ ತೌರಿನ ಸಿರಿದೇವಿ ನೀ ತಾಯಿ
#ತಂ ತಂಪನೀಯುವ  ಕಂಪನೀಯುವ ತಂಬೆರಲು ನೀನಮ್ಮ
                 ಶೈಲೂ.....
[25/2/2022, 3:02 pm] Dr. B. N. Shylaja Ramesh: ಹೇಳಲಾಗದ ಮಾತು
*****************
ನೀ ಹೇಳಬೇಕಿಲ್ಲ ಏನೂ
ಹೇಳದೆ ಅರಿತೆ ಎಲ್ಲವನೂ
ಬೆರೆತಿಹೆ ನಾನು ನಿನ್ನಲ್ಲೇ
ನಾ ನಿನ್ನಂತರಂಗ ಬಲ್ಲೇ

ಕಾಣುತಿದೆ ನಿನ್ನೊಳನೋಟ
ಕಣ್ಣಲ್ಲೇ ಹೂಡುವ ಮಾಟ
ಕದಡಿ ಕಲಕುತಿದೆ ಆಂತರ್ಯ
ಏಕೋ ಎಲ್ಲವೂ ನವನಾವೀನ್ಯ

ನಿನ್ನ ಚಿತ್ತದಲೆನ್ನ ಮನಸು
ನನ್ನ ಚಿತ್ತದೆ ನಿನ್ನ ಕನಸು
ದೃಷ್ಟಿಸಿ ಮೊತ್ತ ನೇರಾನೇರಾ
ತಣಿಸಿ ಪ್ರೇಮದ ಮಹಾಪೂರ

ಮಾತಾಡಲೆಲ್ಲಿದೆ ಮಾತು ಮೌನ
ಹೇಳಬೇಕಿದ್ದೆಲ್ಲವೂ ನಿನ್ನಲೇ ಲೀನ
ಹೇಳಿದ್ದರೆ ನಿರಾಳವಿತ್ತು ಮನಸು
ಸಂಭ್ರಮಿಸಿ ನನಸಾಗುತ್ತಿತ್ತು ಕನಸು

ಏನೋ ಕೋಲಾಹಲ ಕುತೂಹಲ
ಸರಿಯುತ್ತಿದೆ ಸುಮ್ಮನೆ ಕಾಲ
ನಾನರಿತೆನೆಂದರಿತು ನೀನು
ಸುಮ್ಮನಾದರೆ ಸರಿಯೇನು?

ಹೇಳಲಿದೆ ಸಾವಿರ ಸಾವಿರ ಮಾತು
ಹೇಳಲಾರದೆ ಗಂಟಲುಬ್ಬಿಬಂತು
ಶುರುವಾದದ್ದಲ್ಲಿಗೇನೇ ನಿಂತು
ತವಕಕೆ ತಡೆಯನೊಡ್ಡಿ ನಿಂತಿತು

               ಶೈಲೂ.....
Picture source: internet / social media.... Taken from Muniraj sir wall
Thank you Muniraj Raj sir🙏🙏
[1/3/2022, 1:36 pm] Dr. B. N. Shylaja Ramesh: ಕವಿತೆಯೆಂದರೆ.....

ಮನದಾಳದಲುದ್ಭವಿಸಿದ
ಭಾವಗಳೊಡನೆ
ಸುಂದರ ಪದಗಳ
ಸಮ್ಮೇಳನ..!
ಪದ ಪದಗಳಲ್ಲೂ
ಹಾಸುಹೊಕ್ಕಾದ
ಭಾವನೆಗಳ 
ಸಿಹಿ ಹೂರಣ..!!

ಥೇಟ್ ನಿನ್ನಂತೆಯೇ ಹುಡುಗಾ...😊

ವೆರಿ ನೈಸ್ ಸರ್👌👌👌💐💐💐
[1/3/2022, 2:03 pm] Dr. B. N. Shylaja Ramesh: ಓಂ  ನಮಃ ಶಿವಾಯ
*******************

ಹರಹರ ಶಶಿಧರ  ಶರಣಂ
ಜಯತು ಜಟಾಧರ ತವ ಶರಣಂ ||

ವಿಶ್ವವ್ಯಾಪಕಾ  ಮಂಜುನಾಥ  ಶಿವ
ಚಂದ್ರ ಶೇಖರಾ  ಭೂತನಾಥಾ  ||

ಗಂಗಾಧರಾ  ಸರ್ಪಹಾರ  ಶಿವ
ವಿಶ್ವೇಶ್ವರಾ ನಿರ್ವಿಕಾರಾ  ||

ಮಲ್ಲಿಕಾರ್ಜುನಾ  ಶ್ರೀಶೈಲವಾಸಾ  ಶಿವ
ನಿಗಮಗೋಚರಾ ಮುನಿವೇಶಾ ||

ಗಜಚರ್ಮಾಂಬರ ಧಾರಿ  ಶಿವ
ಲೀಲಾ ವಿನೋದ ವಿಹಾರೀ  ||

ಪಂಚಾನನಾ  ತ್ರಿನೇತ್ರ  ಶಿವ
ನಾಟ್ಯಗಾನಪ್ರಿಯ  ಸುನೇತ್ರಾ ||

ವೃಷವಾಹನಾ ತ್ರಿಶೂಲೀ  ಶಿವ
ಶ್ರೀಗೌರೀವರ  ವನ ಸಂಚಾರೀ ||

ಭೂತಾಧಿಪಾ ಪ್ರಮಥನಾಥ ಶಿವ
ವಿಶ್ವ0ಬರಾ  ವಿಶ್ವನಾಥಾ  ||

ತ್ರಿಪುರಾಂತಕಾ  ಮಹಾಕಾಲಾ  ಶಿವ
ಹರ ಮಹಾದೇವ ತ್ರಿಲೋಕಪಾಲಾ ||

ಮೃತ್ಯುಂಜಯ ಕೃತಿವಾಸಾ  ಶಿವ
ಈಶ್ವರಾ ಕೈಲಾಸವಾಸಾ  ||

ಹರಹರ  ಶಶಿಧರ  ಶರಣಂ
ಜಯತು ಜಟಾಧರ ತವ  ಶರಣಂ  ||

             ಶೈಲೂ.......
[5/3/2022, 10:25 pm] Dr. B. N. Shylaja Ramesh: ಕಣ್ಣಂಚಿನಲ್ಲಿ ತುಳುಕಲಾರದೆ
ಒಡಲೊಳಗದುಮಿಡಲಾರದೆ
ಕಾಡುವ ಶೋಕವಿದೆಯಲ್ಲಾ
ತಗ್ಗಿಸಿಬಿಡುತ್ತದೆ ಮನುಜನನ್ನು...

ಬಿಚ್ಚಿಡಲಾರದಂತೆ ಹಿಂಸಿಸುವ
ಮುಚ್ಚಿಡಲಾರದಂತೆ ಕಾಡುವ
ಕೆಲವೊಂದು ಸಂಗತಿಗಳಿವೆಯೆಲ್ಲಾ
ಒಳಗೊಳಗೇ ಕೊಲ್ಲುತ್ತದೆ ಮನುಜನನ್ನು...

ಆಂತರ್ಯದ ನೋವ ಜ್ವಾಲೆ 
ಅಂತರ್ಗಾಮಿನಿಯ ಒಳಹರಿವಿನಂತೆ
ಉಸುಕಿನೊಳಗಣ ಸುಡುವ ಬಿಸಿಯಂತೆ
ಒಳಗೊಳಗೇ ದಹಿಸಿ ನರಳಿಸುತ್ತದೆ ಮನುಜನನ್ನು....

               ಶೈಲೂ.......
[6/3/2022, 7:35 am] Dr. B. N. Shylaja Ramesh: ಈ ಮುಂಜಾನೆ ರವಿಕಿರಣ
ತಂದಿದೆ ಬಾಳಲ್ಲಿ ಹೊಂಗಿರಣ
ಅದಮ್ಯ ಭಾಗ್ಯದ ಅನಾವರಣ
ಎಲ್ಲದಕೂ ಅವನೊಲುಮೆ ಕಾರಣ
[8/3/2022, 3:04 pm] Dr. B. N. Shylaja Ramesh: #ಹೆಣ್ಣೆಂಬ_ಸ್ವರ್ಣಪಾತ್ರೆ

       ದೈವಸೃಷ್ಟಿಯಲ್ಲಿ ಅತ್ಯದ್ಭುತ ಸೃಷ್ಟಿಯೇ #ಹೆಣ್ಣು. ಜಗತ್ಸೃಷ್ಟಿಯಲ್ಲಿ ಮಾಹಾ ಸೂತ್ರಧಾರಿಣಿ ಆಕೆ.  ತಾಯಿಯಾಗಿ, ಸೋದರಿಯಾಗಿ, ಹೆಂಡತಿಯಾಗಿ, ಮಗಳಾಗಿ ಅವಳ ಪಾತ್ರ ಅದ್ಭುತ. ಹೆಣ್ಣು ಬದುಕಿನ ನದಿಗೆ ನೀರಿದ್ದಂತೆ. ಬದುಕು ಸಾಗುವುದೇ ಹೆಣ್ಣಿನ ಆಗಮನದಿಂದ. ಅವಳು ಶಕ್ತಿ ಸ್ವರೂಪಿಣಿ, ಶಾಂತಿ ಸ್ವರೂಪಿಣಿ, ಬದುಕಿನ ನವರಸಗಳ ಒಟ್ಟು ಮೊತ್ತವೇ ಹೆಣ್ಣು.  ಜಗತ್ತಿನ ಆದಿಯಿಂದ ಹಿಡಿದು, ಇಂದಿನವರೆಗೂ, ಮುಂದೆಯೂ ಕೂಡ ಹೆಣ್ಣು ಬದುಕಿನ ಜೀವನಾಡಿ.  ಗಂಡಿನ ಪ್ರೇರಕ ಶಕ್ತಿಯಾಗಿ, ಸ್ಪೂರ್ತಿದಾಯಕಳಾಗಿ, ಜೀವನದ ತಂತು ಬೆಸೆವವಳೇ ಹೆಣ್ಣು.  ಜಗತ್ತಿನಲ್ಲಿ ಗಂಡು ಹೆಣ್ಣು ಇಬ್ಬರ ಅಗತ್ಯವಿದ್ದರೂ ಹೆಣ್ಣಿನ ಪಾತ್ರ ಅಧಿಕ. ಅವಳ ಅಂತಃಕರಣ, ಅವಳ ಅಂತಃಶಕ್ತಿ , ಅವಳ ಧಾರಣ - ಪೋಷಣ ಶಕ್ತಿ, ಅವಳ ಮಮತಾಪೂರ್ಣ ಪ್ರೀತಿ,  ಅದು ಆ ದೇವ ಅವಳಲ್ಲಿಟ್ಟ ಅಪೂರ್ವ ಸ್ವತ್ತು.!!    ಅವಳೇ ಸಸಿನೆಟ್ಟು, ಬೆಳೆಸಿ, ಪೋಷಿಸುವ  ಅವಳ ಗುಣ ಅಪೂರ್ವವಾದುದು.  ಹೆಣ್ಣು... ಪ್ರಕೃತಿ ಒದಗಿಸಿದ ಅಪೂರ್ವ ಹಾಗೂ ಮಹತ್ತರ ಆಶ್ರಯತಾಣ.  ಭ್ರೂಣಾವಸ್ಥೆಯ ಜೀವ ..ಒಂದು ರೂಪ ತಾಳುವಾಗಿನ ಆ ನವಮಾಸಗಳಿಂದ ಹಿಡಿದು ಈ ಜೀವ ಜಗತ್ತಿಗೆ ಬಂದಮೇಲೂ  ಆ ಜೀವಕ್ಕೆ ಹೆಣ್ಣೇ ಆಸರೆ.  ಮಾನವನ ಜೀವನದಲ್ಲಿ ಮಾತೆಯ ಮಮತೆ ಅವಿಸ್ಮರಣೀಯ.  ತನ್ನೊಂದು ಕರುಳ ಕುಡಿಗಾಗಿ ತನ್ನ ಶರೀರವನ್ನು ಗಂಧದಂತೆ ಸವೆಸುವ ತಾಯಿಯು... ಸಾಕ್ಷಾತ್ ದೇವತೆ🙏.

         ಎಲ್ಲಾ ಕಾಲಕ್ಕೂ, ಎಲ್ಲ ಜನರಿಗೂ, ಎಲ್ಲ ಸಂಸ್ಕೃತಿಗೂ ಹೆಣ್ಣೇ ಸಂವಾಹಕಳು.   ಎಲ್ಲಾ ಧರ್ಮದಲ್ಲೂ ಹೆಣ್ಣಿಗೆ ಮಹತ್ವ ಇದ್ದೆ ಇದೆ.  ನಮ್ಮ ಧರ್ಮದಲ್ಲಿ ಹೆಣ್ಣಿಗಿತ್ತ ಸ್ಥಾನ  ಹಿಮಾಲಯದಷ್ಟು. "#ಯತ್ರ_ನಾರೀ_ಪೂಜ್ಯಂತೆ_ರಮಂತೇ_ತತ್ರ_ದೇವತಾಃ" ಅನ್ನುವ ವೇದವಾಣಿ ಸಾರುತ್ತದೆ ಹೆಣ್ಣಿನ ಘನತೆಯನ್ನು.  ಇನ್ನು ಸಕಲವನ್ನೂ ಹೆಣ್ಣೆಂದೇ ಗುರುತಿಸುವ ನಮ್ಮ ಸಂಸ್ಕೃತಿ ಅಭಿನಂದನಾರ್ಹ.  

         ಸಕಲ ಸಂಪತ್ತಿನ ಖನಿಯಾದ ಪೃಥ್ವಿಯನ್ನು #ಭೂದೇವಿ ಎನ್ನುತ್ತೇವೆ.  ಸಕಲ ಸಂಪತ್ತಿಗೆ ಒಡೆಯಳೆ0ದು #ಲಕ್ಷ್ಮಿ ಯನ್ನು ಹೆಸರಿಸುತ್ತೇವೆ.  ವಿದ್ಯಾದಾಯಿನಿ ಎಂದು #ಸರಸ್ವತಿಯನ್ನು ಪೂಜಿಸುತ್ತೇವೆ.  ಶಕ್ತಿ ರೂಪಿಣಿಯಾಗಿ #ದುರ್ಗೆ ಎಂದು ನಂಬುತ್ತೇವೆ. ನದಿಗಳು ಪ್ರಕೃತಿಯ ಮುಖ್ಯ ಅಂಗ,  ಅವುಗಳನ್ನೂ ಕೂಡ ಸ್ತ್ರೀನಾಮದಿಂದಲೇ ಕರೆಯುತ್ತೇವೆ. ಸಕಲರ  ಪಾಪಗಳನ್ನು ತೊಳೆದು ಪುನೀತರನ್ನಾಗಿಸುವ #ದೇವಗಂಗೆಯೂ ಹೆಣ್ಣೇ. ಅಷ್ಟೇಕೆ ಮಹಾಮಂತ್ರವೆನಿಸಿರುವ #ಗಾಯತ್ರಿ ಮಂತ್ರಕ್ಕೆ ಅಧಿದೇವತೆ ಹೆಣ್ಣು. ಸಕಲ ಸಂಪತ್ತನ್ನೂ,  ಸಂವೃದ್ಧಿಯನ್ನು ಕೊಡುವ #ಕಾಮಧೇನು ಹೆಣ್ಣು.  ಅಷ್ಟೈಶ್ವರ್ಯ ಕೊಡುವ  ಅಷ್ಟಶಕ್ತಿಗಳೂ ಸ್ತ್ರೀಸ್ವರೂಪರೇ..!!  ಆದಿಯಿಂದ ಅನಾದಿ ಕಾಲಕ್ಕೂ ಸ್ತ್ರೀಶಕ್ತಿ ಅಂತಃಶ್ರೋತವಾಗಿ ಬಾಳೆಲ್ಲಾ ತುಂಬಿದೆ.  ಹಾಗೆಯೇ... ನಮ್ಮ ದೇಶ #ತಾಯಿನಾಡು, ನಮ್ಮ ಭಾಷೆ #ಮಾತೃಭಾಷೆ,  ಅಷ್ಟೆಕೆ... ಆಬಾಲವೃದ್ಧರಾದಿಯಾಗಿ ಬೇಕಾಗುವ ಕ್ಷೀರವನುಣಿಸುವ ಹಸು #ಗೋಮಾತೆ ಸ್ತ್ರೀಸ್ವರೂಪಿಣಿ.

        ಹಾಲುಣ್ಣುವ ಕಂದಮ್ಮಗೆ ಮಮತೆಯ ಮಡಿಲಾಗಿ, ಗಂಡಿನ ಬಾಳ ಸಂಗಾತಿಯಾಗಿ, ಹೆಣ್ಣು ನಿರ್ವಹಿಸುವ ಪಾತ್ರ ಮಹತ್ತರವಾದದ್ದು.  ಸಕಲ ಜೀವ ರಾಶಿಗಳಲ್ಲೂ ಹೆಣ್ಣಿನ  ಸ್ಥಾನವೇ ಮುಖ್ಯ. ಆದರೆ ಮನುಷ್ಯನ ಸ್ವಾರ್ಥ, ದುರಾಸೆ, ಲಾಲಸೆಗಳಿಂದ ಹೆಣ್ಣೆ0ಬ ಜೀವ ತನ್ನ ಪ್ರಕೃತಿದತ್ತ ಶಕ್ತಿಯನ್ನು ಮರೆತು  ದೌರ್ಬಲ್ಯದಿಂದ, ಶೋಷಣೀಯ, ತುಳಿತದ ಕೇಂದ್ರಬಿಂದುವಾಗಿದ್ದಾಳೆ. ದೌರ್ಜನ್ಯಕ್ಕೊಳಗಾಗುತ್ತಿದ್ದಾಳೆ.  ಹೆಣ್ಣಿನ ಮಾನ, ರಕ್ಷಣೆಯ ಸೋಗಿನಲ್ಲಿ ಅವಳನ್ನು ಬಂಧಿಸುವವರೆ ಅಧಿಕ.  ಹಣ್ಣು ಕೀಳುವ ನೆಪದಲ್ಲಿ ಮರಕ್ಕೆ ಕಲ್ಲು ಹೊಡೆವಂತೆ,  ಹೂ ಕೇಳುವ ನೆಪದಲ್ಲಿ ಗಿಡವನ್ನೇ ಹೊಸಕುವಂತೆ... ಹೆಣ್ಣೂ ಕೂಡ ಪಾತಕಿಗಳ ಕೈಯಲ್ಲಿ ಸಿಕ್ಕು ನಲುಗುತ್ತಿದ್ದಾಳೆ.  ತಾಯಿ, ಹೆಂಡತಿ, ಸೊಸೆ ಈ ಮೂವರೂ ದಾಸೀರೂಪವೆಂದು ದುಡಿಸಿಕೊಳ್ಳುವ ಪಾಷಾಣ ಹೃದಯದ ಪಾತಕಿಗಳೂ ಇಲ್ಲದಿಲ್ಲ.   ಹಾಗೆಯೇ ಮಂಗಳ ರೂಪಿಣಿಯಾದ ಹೆಣ್ಣು... ಮಾಯೆಯೂ, ನಿಗೂಢ ವ್ಯಕ್ತಿತ್ವದವಳೂ, ಅರ್ಥವಾಗದವಳೂ, ಅನರ್ಥವನ್ನು ತರುವವಳೂ ಕೂಡ ಹೌದು. ಹೆಣ್ಣು ಒಂದು #ಸ್ವರ್ಣಪಾತ್ರೆ, ಅದರಲ್ಲಿ ವಿಷ ತುಂಬಿದರೂ ಸರಿ, ಅಮೃತವಿದ್ದರೂ ಸರಿ,  ಬಂಗಾರ ಬಂಗಾರವೇ,👍  ಅಮೃತವೋ... ವಿಷವೋ... ಅದನ್ನು ಉಪಯೋಗಿಸುವವರ ಕೈಯಲ್ಲಿದೆ.

      ಡಾ: B.N. ಶೈಲಜಾ ರಮೇಶ್
[8/3/2022, 3:07 pm] Dr. B. N. Shylaja Ramesh: ಎಲ್ಲ ಸಹೋದರಿಯರಿಗೂ ಅಂತಾರಾಷ್ಟ್ರೀಯ ಮಹಿಳಾದಿನದ ಶುಭಾಶಯಗಳು

ಮಹಿಳೆ
******
ಮನೆಯ ಕಣ್ಣಿವಳು
ಎಲ್ಲರ ಒಲುಮೆಯ ಹೆಣ್ಣು
ಅಪ್ಪಿ ಹರಸುವ ಮಾತೇ
ಕುಟುಂಬದ ಶಕ್ತಿಧಾತೆ

ಮಗಳು ಮಡದಿ ಮಾತೆ
ಮನೆಮನೆಯ ಸಿರಿವಂತೆ
ಮಹಿಳೆಯಿದ್ದರೇ ಮನೆಯು
ಮನೆಯಜಮಾನನ ಸಿರಿಯು

ದುಃಖ ಸಹಿಷ್ಣು ಆಕೆ
ಎಲ್ಲ ನೋವನು ಅದುಮಿಟ್ಟು
ನಗುನಗುತಲೆ ಇರುವಳು
ಕಷ್ಟ ಕೋಟಲೆ ಬದಿಗಿಟ್ಟು

ಭೂಮಿಯಷ್ಟು ಸಹನೆ
ಜರಿವವರನೂ ಮನ್ನಿಸಿ
ತೋರುವಳು ಕರುಣೆ
ನೊಂದವರ ಆಲಂಗಿಸಿ

ಎಣೆಯುಂಟೆ ಮಹಿಳೆ ನಿನಗೆ
ಯಾರಿಲ್ಲ  ಸರಿಸಮಕೇ
ಕ್ಷಮಯಾಧರಿತ್ರಿ ನೀನೇ
ಉಪಮೆ ನೀ ಭೂಮಿ ತೂಕಕೆ

ಮೀಸಲಂತೆ ನಿನಗೀದಿನ
ಎಲ್ಲೆಲ್ಲೂ ನಿನದೇ ಹಾಡು
ನೀನಿಲ್ಲದಿದ್ದರೇ ಪ್ರತಿದಿನ
ಸಂಸಾರಕೆ ನಾಯಿ ಪಾಡು

            ಶೈಲೂ......
[12/3/2022, 10:05 am] Dr. B. N. Shylaja Ramesh: ಬಿಡು ಮುನಿಸು ಕೊಡು ಮನಸು
*************************

ಕೋಪವೇಕೆ ಚಿನ್ನ
ನೀ ನಗುನಗುತಿರೇ ಚೆನ್ನ
ಚಿನಕುರಲಿ ಮಾತಿಲ್ಲದೇ
ನೀ ಮೌನವಾದರೇನು ಚೆನ್ನ?

ಹಂಬಲಿಸಿ ನಾ ಬಂದೆ
ಚೆಲುವ ಮೊಗ ನೋಡಲೆಂದೇ
ಆದರೆಕೋ ಈ ಮುನಿಸು
ಮುದ್ದು ಮುಖ ಬಾಡಿದೆ..!!

ನೀನಿಲ್ಲದೇ ಸೊಗವೆಲ್ಲಿ?
ನಲಿವಿರದು ಬಾಳಲ್ಲಿ
ಚಂದ್ರನಿಲ್ಲದ ಬಾನಂತೆ
ನೀನಿಲ್ಲದೇ ತಂಪೆಲ್ಲಿ?

ಅರಳಿರುವ ಹೂ ನೋಡು
ದುಂಬಿಯದೇ ಸವಿ ಹಾಡು
ಬಿರಿದಿದೆ ಮನ ಮಲ್ಲಿಗೆ
ಮುದುಡಿದರೆ ಘಮ್ಮೆನ್ನದು..!!

ಬೇಡ ಕಂಬನಿ ಧಾರೆ
ದುಗುಡವೇಕೆ ನೀರೆ?
ಏನಿದೆ ಮನದಲಿ ನೋವು
ಹೇಳಿ ಬಿಡು ಮನಸಾರೆ..!!

ಬಿಡುಮುನಿಸು ಕೊಡು ಮನಸು
ನೀನಲ್ಲವೇ ನನ್ನ ಕನಸು?
ನೀ ಮೌನವಾದರೆ ಹೀಗೆ
ಎಲ್ಲಿದೆ ಬಾಳಲ್ಲಿ ಸೊಗಸು?

            ಶೈಲೂ......
[12/3/2022, 10:06 am] Dr. B. N. Shylaja Ramesh: *ಆಕಾಶ* 

ಫರಿಧಿಯುಂಟೆ ಶರಧಿಗೆ
ಅಂತೆಯೇ ನೀಲಾಕಾಶಕೆ
ವ್ಯಾಪ್ತಿಯರಿವದಕಿಲ್ಲ..
 ನೋಡಿದಷ್ಟೂ ಬೆತ್ತಲೇ..

ಒಡಲಲ್ಲಿ ಅಡಗಿಸಿಟ್ಟು
ಗ್ರಹತಾರೆಗಳ ವಿಸ್ಮಯ
ನಗುವ ಬೆಳದಿಂಗಳಲ್ಲಿ
ಜನ ಜೀವನ ತನ್ಮಯ

ಮುಂಜಾವಿಗೆ ಅರುಣೋದಯ
ಹೊಂಬಣ್ಣದ ಪ್ರತಿಫಲನ
ತೂಗಾಡುವ ಮೇಘದೂತ
ಆಕಾಶಕೆ ಚೆಲುವ ಸಂಚಲನ

ಅತ್ಯದ್ಭುತ ವಿಸ್ಮಯದ ಲೋಕ
ಕವಿಕಾವ್ಯಕೆ ಸ್ಫೂರ್ತಿ
ಅಗಣಿತ ಜ್ಞಾನದಾಗರ
ವಿಜ್ಞಾನ ದಾಹಕೆ ಕೀರ್ತಿ

ಅದ್ಭುತ ಚಮತ್ಕಾರವಿಹುದು
ಎಲ್ಲಿಹುದೋ ಮಳೆಯ ಬಸಿರು
ಚುಮುಕಿಸುತ್ತ ಹನಿಹನಿ ಮೊತ್ತ
ಭುವಿಯ ಸಂಭ್ರಮಕೇ ಉಸಿರು

ಗಗನ ಗರ್ಭದಲ್ಲಿ ತೇಲಾಡುವ
ಅಸಂಖ್ಯಾತ ಸೌರವ್ಯೂಹ
ಆದರೆಕೋ ಬಲು ನಿರ್ಲಿಪ್ತ
ಅಂಟಿದರೂ ಅಂಟದ ಮೋಹ

ಧೀರ ಗಂಭೀರ ವದನ
ಆಕಾಶವೆಂಬ ಸದನ
ಕೌತುಕಗಳ ಆಗರವಿದು
ತಣಿಯದ ಜ್ಞಾನದಾಹ

                ಶೈಲೂ....
[14/3/2022, 2:56 pm] Dr. B. N. Shylaja Ramesh: ಬತ್ತಿದ ಭಾವಗಳೇ
***************
ಬತ್ತಿದ  ಭಾವಗಳೇ ಮತ್ತೆ ಬನ್ನಿರಿ
ಸೊರಗಿದೆದೆಯ ನೆಲದಿ ನಗೆಯ ಬಿತ್ತಿರಿ ||

ಲೋಕಕೆ ಬಿಮ್ಮನೆ ಬೆಳಕನು
 ಕೊಡುವ ರವಿಯ ಕಿರಣದಂತೆ
ಉರಿಬಿಸಿಲ ಧಗೆಯ ಝಳವ 
ಹೊಡೆದೋಡಿಸುವ ತಂಪುಗಾಳಿಯಂತೆ 
|| ಬತ್ತಿದ ||

ಹೂಬಿಸಿಲ ತನಿಯಲಿ
ಮೆಲ್ಲನರಳುವ ಮೊಲ್ಲೆ ಮೊಗ್ಗಿನಂತೆ
ಕಾರಿರುಳ ಬನದಲಿ ಹೊಳೆದು
ಹೊಳೆಯುವ ಚಂದ್ರಕಾಂತಿಯಂತೆ
 || ಬತ್ತಿದ ||

ಮೇಘಗರ್ಭದಿಂ ಭುವಿಗೆ ಸುರಿಯುವ
ಚಿಟಪಟ ಹನಿಯಂತೆ
ಹನಿ ಹನಿ ಸೇರಿ ತೊರೆ
ತೊರೆಯಾಗಿ ಹರಿವ ನೀರಿನಂತೆ
 || ಬತ್ತಿದ ||

ಬಿತ್ತಿದ ಕಾಳದು ಹನಿಹನಿ ನೀರಲಿ
ಟಿಸಿಲೊಡೆದು ಮೊಳೆತಂತೆ
ಹಚ್ಚ ಹಸಿರಲಿ ಪಚ್ಚೆ ತೆನೆಯು
ಉಲ್ಲಾಸದಿ ತೊನೆದಂತೆ 
|| ಬತ್ತಿದ ||

ಕಣ್ಣ ನೀರದು ಆವಿಯಾಗಲಿ
ಸಂತಸದ ಕಳೆ ತುಂಬಿ
ಭಾವದಲೆಯಲಿ ತೇಲಿಹೋಗಲಿ
ನಗೇಯ ಚಿಲುಮೆ ಚಿಮ್ಮಿ 
|| ಬತ್ತಿದ ||

             ಶೈಲೂ........
[15/3/2022, 2:13 pm] Dr. B. N. Shylaja Ramesh: ಕಾಮನಬಿಲ್ಲು
************
ಮುಗಿಲಂಚಿಲಿ  ಬಣ್ಣದ ಚಿತ್ತಾರ
ಬರೆದವನ್ಯಾರೋ ಬಲು ಸುಂದರ
ಏಳು ಬಣ್ಣಗಳ ಚಂದದ ಕಮಾನು
ಇಮ್ಮಡಿಸಿದೆ ಗಗನದ ಚೆಲುವನ್ನು

ಯಾರಿಟ್ಟಿರಬಹುದು ನಭದಲಿ
ಚಂದದ ಎಳೆ ಬಿಡಿಸುತಲಿ
ಕಲ್ಪನೆಗೂ  ನಿಲುಕದ ಭಾವ
ರಂಗಿನ ಚಿತ್ತಾರದ ಶೃಂಗಾರ ಕಾವ್ಯ

ವರುಣ - ದಿನಮಣಿಯ ಚಂದದ ಆಟ
ನಭದ ಪರದೆಯಲಿ ಮೂಡಿತು ಮಾಟ
ಮಳೆಹನಿ ಸಿಂಚನಕೆ ಕಿರಣನ ಸಂಗ
ಹೊಸೆಯಿತೇಳು ಬಣ್ಣಗಳ ಸ್ವರ್ಗ

ಭುವಿಯ ಬಾಗಿಲಿಗೆ ಆ ಬಾನು
ಕಟ್ಟಿದಂತಿದೆ  ಚಂದದ ಕಮಾನು
ಮೇಳೈಸಿ ಮನದಲೂ ಬಣ್ಣಗಳ ಹಬ್ಬ
ಮುದವೀವ ಸಾಂಗತ್ಯ ಅನುಭಾವದ ಸೊಗ

ಹರೆಯಕೆ ಮೆರುಗು ಮಳೆಬಿಲ್ಲ ಬೆರಗು
ಕಣ್ಣಂಚಿನ ಮಿಂಚು ಕೌತುಕದ ಸೊಬಗು
ವಿವಿಧ ಮನಗಳ ಭಾವನೆಯ ಬೆಸುಗೆ
ರಂಗಿನಾಟ ತಂದ ಕಲ್ಪನೆಯ ಒಸಗೆ

ಬಾಳ ಬಯಲಲ್ಲಿ  ಇಂದ್ರಾಚಾಪದ ಹೊಳಪು
ಭ್ರಮ ನಿರಸನವಾಗದಿರಲಿ ಹಾಗೇ ಕರಗಿದ ಒನಪು
ಅವರವರ ಕಲ್ಪನೆಗೆ ಬಿಟ್ಟಂತ ನಂಬಿಕೆ
ಕಲ್ಪನಾತೀತ ಬದುಕಿಗೆ ಮಳೆಬಿಲ್ಲ  ಹೋಲಿಕೆ

               ಶೈಲೂ......
[17/3/2022, 6:25 pm] Dr. B. N. Shylaja Ramesh: #ನಗೆಯೂರ_ದೊರೆ

ಸಂಭ್ರಮದ ಜನುಮದಿನವಿಂದು
ಸಂಭ್ರಮಾಚಾರಣೆಗೆ ನೀನಿಲ್ಲ ಅಪ್ಪು
ನಗೆಯೂರ ರಾಜಕುಮಾರ ನೀನು
ನಗಲಿಂದು ನೀನೇ ಇಲ್ಲವಲ್ಲ ಅಪ್ಪು

ಸರಳ ಸಜ್ಜನಿಕೆಯ ಸಾಕಾರ ಮೂರ್ತಿ
ಸದ್ಗುಣಗಳ ಗಣಿ ನೀನು ಪುನೀತಾ
ತನುವಳಿದರೇನಂತೆ ಅಜರಾಮರ ನೀ
ಅಚ್ಚಳಿಯದೆ ಜನಮಾನಸದೆ ಜೀವಂತ

ಕರುನಾಡಿನ ಮನೆಮನೆ ಮಗ ನೀನು
ಅಭಿಮಾನಿಗಳೆದೆಯ ಆರಾಧ್ಯದೈವ
ಆದರ್ಶಪ್ರಾಯ ಯುವರತ್ನ ನೀನು
ಸದ್ಗತಿ ನೀಡಲಿ ನಿನಗೆನ್ನ ಮಾಧವ..!

        ಶೈಲೂ....
[17/3/2022, 6:37 pm] Dr. B. N. Shylaja Ramesh: #ನಗೆಯೂರ_ದೊರೆಯೇ

ನಗೆಯೂರ ದೊರೆಯಿವನು 
ನಗೆಗಡಲಲ್ಲೇ ತೇಲಿಸಿದವನು
ನಟನೆಯಲ್ಲಿ ಮನಸೆಳೆದವನು
ನಾಟ್ಯದಲ್ಲೆದುರಿಲ್ಲದವನು

ಗಾಜನೂರಿನ ಗಂದೆಡೆಯ ಗಂಡು
ಗಾಯನದಲೂ ಸಂತೃಪ್ತಿಯನುಂಡು
ಗಾರುಡಿಗನಂತೆ ಮನಮನವ ಕದ್ದು
ಗಮನಸೆಳೆದ ವಿನಯವನು ಹೊದ್ದು

ಜನುಮದಿನವಂತೆ ಅವನದು ಇಂದು
ಜನಮಾನಸದೆ ಅಚ್ಚಳಿಯದೆ ನಿಂದು
ಝಗಮಗಿಸುವ ಆರಾಧ್ಯರೆದೆಯಲಿ
ಜಗಮೆಚ್ಚಿದನಿವ ಅಜರಾಮರವಾಗಲಿ

            ಶೈಲೂ....
[18/3/2022, 7:10 pm] Dr. B. N. Shylaja Ramesh: ಎಲ್ಲಾ ಬಾಂಧವರಿಗೂ ಹೋಳಿ ಹುಣ್ಣಿಮೆಯ ಶುಭಾಶಯಗಳು🌹🌹🌹

🌹ರಂಗಿನೋಕುಳಿ🌹
********************

ಎಲ್ಲೆಲ್ಲಿ ನೋಡಲಿ ರಂಗಿನದೇ ಗುಂಗು
ರಂಗಿನೋಕುಳಿಯಲ್ಲಿ ರಂಗನದೇ ಮೆರುಗು
ಬಣ್ಣಬಣ್ಣಗಳ ಸುಗ್ಗಿ ಸುರಿವ ವರ್ಷಧಾರೆ
ಚೇತೋಹಾರೀ ಸಮಯ ನಿಲ್ಲದ ಹರ್ಷದಾರೆ

ಮೋಹಕ ಕೃಷ್ಣನ ಮೊಗದೇ ತುಂಟತನದ ರಂಗು
ಕಣ್ತಪ್ಪಿಸಿ ಓಡುವ ರಾಧೆಗೆ ಲಜ್ಜೆಯೇ ಮೆರುಗು
ಗೋಗರೆದರೂ ಬಿಡನಲ್ಲನಿವ  ಓಕುಳಿಯ ಸಿಂಚನ
ನೆನೆದು ಹಿಗ್ಗಿದವಳಿಗೆ ತಣಿದಿತ್ತು ಮನದಂಗಣ

ಮೇಲಿಹುದು ತುಸುಕೋಪ ಲಜ್ಜೆಯಾಭಾರಣ
ಒಡಲಲ್ಲಿ ಬಯಸಿದೆ ಮಾಧವನ ಪ್ರೇಮಾಲಿಂಗನ
ಮೋಹವಲ್ಲದ ಪವಿತ್ರಪ್ರೇಮದ ಮಧುರಾಲಾಪನ
ರಂಗಿನೊಕುಳಿಯಲ್ಲಿ ಮಿಂದೆದ್ದು ರಾಸಾಸ್ವಾದನ

ಒಲಿದ ಮನಗಳೆರಡರ ಅನುರಾಗ ಸಂಗಮ
ಕಣ್ಣೋಟದಲ್ಲೇ ನುಡಿಸಿ ಸಂಗೀತ ಸರಿಗಮ
ಪಾವಿತ್ರ್ಯತೆಗೆ ಹೆಸರು ರಾಧಾಮಾಧವರ ಪ್ರೇಮ
ನೆನೆದಾಕ್ಷಣವೇ ವ್ಯಥೆಯ ತರಿದು ಬಿಸುಟುವ ಶ್ಯಾಮ

ಕನಸುಗಳಿಗೆ ಬಳಿದನಿನ ರಂಗುರಂಗಿನ ಬಣ್ಣ
ಭಾವಾoತರಂಗದಲಿ ತುಂಬಿ ಭಕ್ತಿಯ ಹೂರಣ
ಕಾಮನೆಗಳ ದಹನವೆ ಹೋಲಿಯ ನಿಜಾಂತರಂಗ
ಪ್ರೇಮಭಕ್ತಿಯೇ ತುಂಬಿರಲಿ ಅಂತರಂಗ ಬಹಿರಂಗ

ಬೃಂದಾವನದ ತುಂಬೆಲ್ಲ ಹೋಲಿಯ ಸಂಭ್ರಮ
ಗೋಪಿಯರ ನಡುವಲ್ಲಿವ  ನಗುವ ಚಂದ್ರಮಾ
ಆಂತರ್ಯದ ತಮದ ಕೊಳೆ ಮಲಿನ ತೊಳೆಯುತ
ಸಿಂಪರಿಸುತಿರುವ  ಜೀವಕೆ ಹೊಸರಂಗು ತುಂಬುತ
             ಶೈಲೂ....
[21/3/2022, 10:54 am] Dr. B. N. Shylaja Ramesh: ಥೇಟ್... ನಿನ್ನಂತೆಯೇ

ಬಿಟ್ಟೂ ಬಿಡದಂತೆ ಸುರಿಯುತ್ತಿದೆ ಜಡಿ ಮಳೆ
ಥೇಟ್.. ನಿನ್ನ ನೆನಪಿನಂತೆಯೇ...
ಕುಳಿರ್ಗಾಳಿ ಹೊಡೆತಕೆ ನಡುಗುತ್ತಿದೆ ಮೈ ಮನ
ಥೇಟ್.. ನಿನ್ನ ಸ್ಪರ್ಷದಂತೆಯೇ...
ಚಳಿಯ ಈ ಝಳಕೆ ಬೇಕೆನಿಸುತ್ತಿದೆ ಬಿಸಿಬಿಸಿ ಕಾಫಿ
ಥೇಟ್.. ನಿನ್ನ ಸನಿಹದಂತೆಯೇ...
ಸುರಿವ ಮಳೆಯ ತಂಪಿಗೆ ನೀರೂರಿಸುವ ಮಿರ್ಚಿಯ ಕಂಪು
ಥೇಟ್.. ನಿನ್ನ ಬಿಸಿಯಪ್ಪುಗೆಯಂತೆಯೇ..
ನಡುಗುವ ಮೈಯ್ಯ ಆಚರಿಸಿರುವ ಈ ಸ್ವೆಟರ್
ಥೇಟ್... ನಿನ್ನಂತೆಯೇ...
ಧೋ ಎಂದು ಸುರಿವ ಮಳೆಗೂ.. ನಿನಗೂ ಅವಿನಾಭಾವ ಸಂಬಂಧ
ಥೇಟ್... ನಮ್ಮ ಪ್ರೀತಿಯಂತೆಯೇ...
            ಶೈಲೂ.....
[21/3/2022, 3:02 pm] Dr. B. N. Shylaja Ramesh: ವಿಶ್ವ ಕವಿತಾ ದಿನಕ್ಕೊಂದು ಕವಿತೆ😊

ನನ್ನ ಕವಿತೆ
*********

ನನ್ನ ಕವಿತೆ.....
 ಭಾವನೆಗಳ ಹೊರಹಾಕುವ ಸಾಧನ
ಮನದ ಮಾತಿನ ಮಾರ್ದನ
ಎಲ್ಲ ಸರಿಯಿದ್ದರೆ ಸುಗ್ರಾಸ ಭೋಜನ
ಭಾವಾಂತರಂಗದ ಭಾವನೆಗಳ ಕೂಜನ

ನನ್ನ ಕವಿತೆ.....
ಅಂತರಿಕ್ಷದಿಂದ ಹಾರಿಬಂದ ನಿಹಾರಿಕೆ
ಅಲ್ಲೊಂದು ಭಾವಗಳ ಝೇಂಕರಿಕೆ
ಪದಪದಗಳಲಿ ಭಾವಗಳ ಬೆಸೆದು
ಹೊಸೆದು ಪೋಣಿಸಿದ ಹೂ ಮಾಲಿಕೆ

ನನ್ನ ಕವಿತೆ......
ಭಾವಗಳ ಮೊಗೆಮೊಗೆದು ಸುರಿವ ಪಾತ್ರೆ
ನೋವಿನೆಳೆಯನು ಅಳಿಸಿ ನಗುತುಂಬುವ ಪಾತ್ರೆ
ಅಕ್ಷರಗಳಿಗೆ ಉಸಿರಿತ್ತು ಕುಣಿಸುವ ಆಟ
ಮನದಂಗಳದಲಿ ಭಾವನೆಗಳ ಕೂಟ

             ಶೈಲೂ......
[21/3/2022, 3:02 pm] Dr. B. N. Shylaja Ramesh: ವಿಶ್ವ ಕವಿತಾ ದಿನಕ್ಕೊಂದು ಬರಹ
****************************

ಬರೆದರೆ ಹೀಗಿರಬೇಕು
******************

ಬರೆದರೆ ಬರೆಯಬೇಕು ಕವಿತೆ
ಮನ ಅರಳುವ ಹಾಗೆ
ತನು ಕುಣಿಯುವಹಾಗೆ
ಭಾವ  ಬೆಸೆಯುವ ಹಾಗೆ
ಕನಸು ಮೂಡುವ ಹಾಗೆ
ಕಂಡ ಕನಸು ನನಸಾಗೋ ಹಾಗೆ

ಬರೆದರೆ  ಬರೆಯಬೇಕು 
ನುಡಿ ಮುತ್ತಿನಂತಿರಬೇಕು
ಅರ್ಥವತ್ತಾಗಿರಬೇಕು
ಹಾಸ್ಯ ಲಾಸ್ಯವಿರಬೇಕು
ಓದುಗರ ಮನ ತಣಿಯಬೇಕು
ತುಟಿಯಂಚಿಲಿ ಮೆಲುನಗೆ
ಮೂಡುವಂತಿರಬೇಕು

ಬರೆದರೆ ಬರೆಯಬೇಕು ಕವಿತೆ
ಸುಮದ .ಸೌಗಂಧದಂತೆ
ಘಮ  ಘಮಿಸಬೇಕು
ಹಸುಮಗುವ ನಸುನಗೆಯಂತೆ
ರಮಿಸಬೇಕು,  ತಿಂಗಳಿನ
ಬೆಳದಿಂಗಳಂತೆ ತಂಪೆರೆಯಬೇಕು

ಬರೆದರೆ ಬರೆಯಬೇಕು ಕವಿತೆ
ಮನಕಾಹ್ಲಾದ ಕೊಡಬೇಕು
ಕಷ್ಟಗಳ ಮರೆಸಿ ಸುಖವನೀಯಬೇಕು
ಸದ್ಭಾವದ ಕವಿತೆಯಲಿ
ಬದುಕ ಭರವಸೆಗೆ
ಬೆನ್ನುತಟ್ಟುವಂತಿರಬೇಕು

ಬರೆವ ಬರಹದಲಿ
ತೃಪ್ತಿಯದು  ಸಿಗಬೇಕು
ಮಾನ ಸಮ್ಮಾನಗಳ ಮುದ ನೀಡಬೇಕು
ಮೆಚ್ಚಿ ಆಸ್ವಾದಿಸುವ ಮನದ
ಮಾತಿನ ನುಡಿಗೆ, ಮತ್ತೆ
ಹೊಸಕವಿತೆ ಮೂಡಬೇಕು

          ಶೈಲೂ......
[21/3/2022, 4:02 pm] Dr. B. N. Shylaja Ramesh: ವಿಶ್ವ ಕವಿತಾ ದಿನಕ್ಕೊಂದು ಬರಹ
****************************

ಬರೆದರೆ ಹೀಗಿರಬೇಕು
******************

ಬರೆದರೆ ಬರೆಯಬೇಕು ಕವಿತೆ
ಮನ ಅರಳುವ ಹಾಗೆ
ತನು ಕುಣಿಯುವಹಾಗೆ
ಭಾವ  ಬೆಸೆಯುವ ಹಾಗೆ
ಕನಸು ಮೂಡುವ ಹಾಗೆ
ಕಂಡ ಕನಸು ನನಸಾಗೋ ಹಾಗೆ

ಬರೆದರೆ  ಬರೆಯಬೇಕು 
ನುಡಿ ಮುತ್ತಿನಂತಿರಬೇಕು
ಅರ್ಥವತ್ತಾಗಿರಬೇಕು
ಹಾಸ್ಯ ಲಾಸ್ಯವಿರಬೇಕು
ಓದುಗರ ಮನ ತಣಿಯಬೇಕು
ತುಟಿಯಂಚಿಲಿ ಮೆಲುನಗೆ
ಮೂಡುವಂತಿರಬೇಕು

ಬರೆದರೆ ಬರೆಯಬೇಕು ಕವಿತೆ
ಸುಮದ .ಸೌಗಂಧದಂತೆ
ಘಮ  ಘಮಿಸಬೇಕು
ಹಸುಮಗುವ ನಸುನಗೆಯಂತೆ
ರಮಿಸಬೇಕು,  ತಿಂಗಳಿನ
ಬೆಳದಿಂಗಳಂತೆ ತಂಪೆರೆಯಬೇಕು

ಬರೆದರೆ ಬರೆಯಬೇಕು ಕವಿತೆ
ಮನಕಾಹ್ಲಾದ ಕೊಡಬೇಕು
ಕಷ್ಟಗಳ ಮರೆಸಿ ಸುಖವನೀಯಬೇಕು
ಸದ್ಭಾವದ ಕವಿತೆಯಲಿ
ಬದುಕ ಭರವಸೆಗೆ
ಬೆನ್ನುತಟ್ಟುವಂತಿರಬೇಕು

ಬರೆವ ಬರಹದಲಿ
ತೃಪ್ತಿಯದು  ಸಿಗಬೇಕು
ಮಾನ ಸಮ್ಮಾನಗಳ ಮುದ ನೀಡಬೇಕು
ಮೆಚ್ಚಿ ಆಸ್ವಾದಿಸುವ ಮನದ
ಮಾತಿನ ನುಡಿಗೆ, ಮತ್ತೆ
ಹೊಸಕವಿತೆ ಮೂಡಬೇಕು

          ಶೈಲೂ......
[22/3/2022, 9:06 pm] Dr. B. N. Shylaja Ramesh: ವಿಶ್ವ ಜಲ ದಿನಕ್ಕೊಂದು ಸಂದೇಶ
**************************
      ಜೀವ ಜಲ
     **********

ಹಸಿರಿಗೂ ಬೇಕು ನೀರು
ಉಸಿರಿಗೂ ಬೇಕು ನೀರು
 ನೀರಿಲ್ಲದೆ ಉಳಿದೀತೇ
ಸಸ್ಯ ಸಂಕುಲ
ನೀರಿಲ್ಲದೆ  ಬಾಳಲಾದೀತೆ
ಮನುಜ ಕುಲ

ಬತ್ತಿ ಹೋಗಿದೆ, ನದಿ
ಕೆರೆ ತೊರೆಯ ಜಲ
ಬಳಲಿ ಬೆಂಡಾಗಿದೆ
ಪಕ್ಷಿ, ಪ್ರಾಣಿ ಸಂಕುಲ
ಬಿಸಿಲ ಬೇಗೆಯಲ್ಲಿ ದಣಿದಾಗ
ಬೇಕೇ ಬೇಕಲ್ಲ  ಜೀವಜಲ

ಅಂತರ್ಜಲ ಮಟ್ಟ ಕುಸಿದು
ಪಾತಾಳ ಸೇರಿಬಿಟ್ಟಿದೆ
ಕಾಡುಗಳ ಕಡಿದು
ನಾಡಾಗಿಸುವ  ಮತ್ತಿಗೆ
ಜೀವಾಮೃತ, ಜೀವ..
ಜಲವೇ ಬತ್ತಿ ಹೋಗಿದೆ

ಬಯಲೆಲ್ಲವೂ ಮಾಯವಾಗಿ
ಎಲ್ಲೆಡೆಯೂ ಕಾಂಕ್ರೀಟ್ ಮಯ
ಸುರಿದ ಮಳೆ ನೀರು ಹಿಂಗಿ
ಭೂಮಿ ತಣಿಯಲ್ಲ್ಲಿದೆ ನೆಲ
ಬೆಂಗಾಡಿನ ಬಿಸಿ ತಾಪಕೆ
ಜನ ಜೀವನ ಅಯೋಮಯ

ಅರಿವಿರದೆ ಕಳೆದಾಯ್ತು
ನದಿ ಭಾವಿ ಕೆರೆಯ ಜಲದ ಸೆಲೆ
ಈಗ  ಅರಿವಾಗುತ್ತಿದೆ
ಜೀವ ಜಲದ ಬೆಲೆ
ಭೂಸಿರಿಯ ಹಸಿರು ಮರುಟಿ
ಜೀವಿಗಳಿಗೆ ಇಲ್ಲವಾಯ್ತು ನೆಲೆ

ಇನ್ನಾದರೂ ಎಚ್ಚರಗೊಳ್ಳಬೇಕು
ಅಕಾರಣ ಪೋಲಾಗುವುದ
ತಡೆಯಬೇಕು,  ಸುರಿವ ಮಳೆ
ನೀರು ಹರಿದು ಹೋಗದಂತೆ
ಮುಂದಾಲೋಚನೆಯಿಂದ
ಮಳೆನೀರ ಕೊಯ್ಲು ಮಾಡಬೇಕು

ಅಗತ್ಯಕ್ಕಷ್ಟೇ ಬಳಸಿ ಜಲವ
ಮುಂದಿನ ದಿನಕೆ ಕಾಪಿಡಬೇಕು
ಪೂರ್ಣ ಅರಿವಿರಲಿ ಮನುಜ
ನೀರಿಲ್ಲದೇ ಹಸಿರಿಲ್ಲ..!!
ಹಸಿರಿಲ್ಲದೆ ನಾವಿಲ್ಲ..!!
ನೀರೇ ಎಲ್ಲಕ್ಕೂ ಮೂಲ..!!

          ಶೈಲೂ......
[25/3/2022, 1:47 pm] Dr. B. N. Shylaja Ramesh: ಜನುಮದಿನದ  ಶುಭಾಶಯಗಳು
***************************
🌹🌹🌹🌹🌹🌹🌹🌹🌹
ಬಾಳ ನಂದನದ ಸುಂದರ
ಒಲುಮೆಯ ಹೂದೋಟದೆ
ಹೂವೊಂದು ಅರಳಿದ ದಿನ
ಹೂವಿನ ಚಂದದಲಿ
ಪರಿಮಳದ ಗಂಧದಲಿ
ಮೈಮರೆತು ನಕ್ಕದಿನ
ಅದುವೇ.. ನನ್ನ ಮುದ್ದು..
ಕಂದನ  ಜನುಮದಿನ
ಸುದಿನ.... ಈ ದಿನ....

ಚಂದಿರನ ಮೊಗದಂದ
ಧರಿಸಿ ಇಳೆಗೆ ಬಂದ
ಉದಯರವಿ ಕಾಂತಿಯ
ಮೀರಿಸುವ ನಗು ಚಂದ
ಆ ದೇವನಾ ಕೃಪೆಯಿಂದ
ಬಂದೆ ಮನೆಗೆ ನೀ ಕಂದ
ನಿನ್ನ ನಸುನಗೆಯಿಂದ
ಬಾಳು ಬೆಳಗಿತು ಕಂದ
ನೀನಾದೆ.. ನಮ್ಮ ಆನಂದ ಕಂದ ..

ಜನುಮದಿನದ ಈ ಗಳಿಗೆ
ಆಗಲೆಂದೂ ಅಮೃತಘಳಿಗೆ
ಸಕಲ ಸಿರಿ ಸೌಭಾಗ್ಯ ನಿನ್ನನರಸಿ
ಬರಲಿ ಕಂದ ಸದಾ ಒಳಿತನೇ ಬೆರೆಸಿ
ಸಕಲರೊಳಗೆ ಮಾನ್ಯನಾಗು
ನಳನಳಿಸಿ ಚೈತನ್ಯದ ಚಿಲುಮೆಯಾಗು
ಸಹನೆ ಸಹಿಷ್ಣುತೆಗೆ ದೊರೆಯಾಗು
ನನ್ನ ಬಾಳ ಬೆಳಕೇ.. ಹರಕೆಯಿದು
ನೀ  ಚಿರಂಜೀವಿಯಾಗು..

ಆ ಕೃಷ್ಣನಾ ದಯೆಯಿರಲಿ
ಕಿರಿನಗೆಯ ಜ್ಯೋತಿ ಬೆಳಗುತಿರಲಿ
ನೀನಡೆವ ಹಾದಿಯಲಿ ಕಲ್ಮುಳ್ಳು ಇರದಿರಲಿ
ಬಿರುದು - ಬಾವಲಿಗಳು ಹೂವರಳಿ ನಗಲಿ
ಸಕಲ ಸುಖ ನಿನದಾಗಲಿ
ನನ್ನ ನಲ್ಮೆಯ ಹಾರೈಕೆಯಿದು ಕಂದ
ಸಕಲ ಶುಭಗಳೂ ನಿನಗಿರಲಿ
ಗುರು ಹಿರಿಯರ ಆಶೀರ್ವಾದ ಬಲದಿಂದ
ಅಡಿಗಡಿಗೆ ಜಯಶ್ರೀಯು ಒಲಿದೊಲಿದು  ಬರಲಿ
🌹🌹🌹🌹🌹🌹🌹🌹

            ಶೈಲೂ......
[25/3/2022, 1:47 pm] Dr. B. N. Shylaja Ramesh: ಜನುಮದಿನದ  ಹಾರೈಕೆ
********************

ನನ್ನ ತುಟಿಮೇಲಿನ ನಸುನಗುವು ನೀನೇ
ಕಂದ ನೀನೇ ನನ್ನ ಕಣ್ಣ ಕಾಂತಿ

ನನ್ನ ಕಣ್ಣಿನೊಳಗಿನ ಕನಸು ನೀನೇ
ಕಂದ ನೀನೇ ನನ್ನ ಮನದ ಶಾಂತಿ

ಬಾಳ ಬಾಂದಳದ  ಚಂದ್ರ ನೀನೇ
ಕಂದಾ ನೀನೇ ನನ್ನ ಬಾಳ ಬೆಳಕು

ಕಾರಿರುಳಲಿ ಬೆಳಗೊ ನಕ್ಷತ್ರ ಮಾಲೆ ನೀನೇ
ಕಂದಾ ನೀನೇ ನನ್ನ ಕಣ್ಣ ಹೊಳಪು

ಜಗವ ಬೆಳಗೊ ಸೂರ್ಯತೇಜ ಕಾಂತಿಯಂತೆ
ಕಂದ ನೀ ನನ್ನ ಮನೆ ಬೆಳಗೊ ಜ್ಯೋತಿರೂಪ

ಬಾಳ ಪಯಣದ ಇಕ್ಕೆಲದ ತಂಪು ನೆರಳಂತೆ ಬಂದೆ
ಕಂದಾ ನೀ ಆಯಾಸ ತಣಿಸುವ ತಂಗಾಳಿ ರೂಪ

ಜನುಮದಿನದೇ ಅಂತರಾಳದ ಹಾರೈಕೆ ನಿನಗೆ
ಆಗು ನೀ ಎಲ್ಲರಕ್ಕರೆಯ ಆಕಾಶ ದೀಪ

ಆಯುರಾರೋಗ್ಯ ಸುಖ ಶಾಂತಿ  ಕರುಣಿಸಿ
ಕಾಯಲೆನ್ನ ದೈವ..ಕಂದಾ ನೀ ನನ್ನ ಕುಲದೀಪಕ

               ಶೈಲೂ......
[25/3/2022, 1:49 pm] Dr. B. N. Shylaja Ramesh: 🌹ಹುಟ್ಟುಹಬ್ಬದ ಶುಭಾಶಯಗಳು ಕಂದ🌹

ಅರುಣೋದಯದ ಹೊನ್ನ ಕಿರಣ
ನನ್ನ ಮಡಿಲು ಸೇರಿದ ಸುದಿನ..!
ಹೊನ್ನ ಪ್ರಭೆಯಿಂದ ಬಾಳು ಬೆಳಗಿದ
ಮುದ್ದುಕಂದನಿಗಿಂದು ಶುಭ ಜನ್ಮದಿನ

ಹೊಳೆವ ಚಂದ್ರಿಕೆಯ ತುಣುಕೊಂಡು
ಮುದ್ದು ಮಗುವಾಗಿ ಬಳಿಬಂದು..!
ಬಾಳಿನಂಗಳದಲ್ಲಿ ಬೆಳದಿಂಗಳ ಚೆಲ್ಲಿ
ನಸುನಕ್ಕ ಕಂದನಿಗಿಂದು ಶುಭ ಜನ್ಮದಿನ

ಬಾನಿಂದ ಜಾರಿದ ಬೆಳ್ಳಿಚುಕ್ಕಿ
ಎನ್ನ ಮಡಿಲನು ಹೊಕ್ಕಿ..!
ಬದುಕು ಹೊಳಪಿಸಲು ಬಂದ
ಕಂದ ನಿನಗಿಂದು ಶುಭ ಜನ್ಮದಿನ

ನನ್ನ ಬಾಳಿನಾಗಸದ ಸೂರ್ಯ
ತಂಪು ಸುರಿಸುವ ಚಂದ್ರ..!
ಹೊಳೆವ ತಾರಾಗಣ ನೀನೇ
ನನ್ನ ಬಾಳ ಬೆಳಕೇ ಶುಭ ಜನ್ಮದಿನ

ಸಕಲ ಶುಭವು ನಿನಗಿರಲಿ ಕಂದ
ನೂರ್ಕಾಲ ಬದುಕು ಆನಂದದಿಂದ..!
ಕಂಡ ಕನಸುಗಳೆಲ್ಲ ಸಾಕಾರವಾಗಲಿ
ಸಕಲ ಜಯವೆಲ್ಲ ನಿನಗೊಲಿದುಬರಲಿ

ಜನ್ಮೋತ್ಸವದ ಶುಭಾಶಯಗಳು ನಿನಗೆ
ಹಿರಿಯರಾಶೀರ್ವಾದವಾಗಲಿ ದಾರಿದೀವಿಗೆ.!
ಎನ್ನೊಡೆಯ ಮಾಧವನ ಕೃಪಾಕಟಾಕ್ಷ
ಅಡಿಗಡಿಗೂ ನಿನಗಿರಲಿ ಗುರುವಿನ ರಕ್ಷ..!

           ಶೈಲಜಾ ರಮೇಶ್
[31/3/2022, 3:36 pm] Dr. B. N. Shylaja Ramesh: ಶ್ರೀ ರಾಮ ರಾಮ
****************

ನನ್ನೆದೆಯ ಆರಾಧ್ಯದೈವ ನೀ ರಾಮಾ
ಎನ್ನುಸಿರ ಉಸಿರಲ್ಲೂ ನಿನ್ನದೇ ನಾಮಾ ||

ಇರಿಸು ಸಜ್ಜನರಲ್ಲಿ  ಸಿಹಿಯಾಗಿ ರಾಮಾ
ಬೆರೆಸು ಕಣಕಣದಲ್ಲೂ ನಿನ್ನದೇ ನಾಮಾ |
ಸುಳಿಯದಿರಲಿ ಮನದಲ್ಲಿ ಬೇರೇನೂ ರಾಮಾ
ಅನುರೇಣು ತೃಣದಲ್ಲೂ ನೀನಿರುವೆ ರಾಮಾ ||

ಪಿತನೀನೆ ಸಖನೀನೆ ನೀನೆನ್ನ ರಾಮಾ
ಭಕ್ತಿ ಪರವಶತೆಗೆ ವಶ ನೀನು ರಾಮಾ |
ಏನೊಂದು ನಾನರಿಯೆ ನಾ  ನಿಷ್ಕಾಮಿ ರಾಮಾ
ಅನುರಣಿಸುತ್ತಿದೇ ಎಲ್ಲೆಲ್ಲೂ ನಿನ್ನದೇ ನಾಮಾ||

ಎದುರಲ್ಲಿ ನೀನಿರಲು ಬೇರೆ ಬೇಕೇನು ರಾಮಾ
ನಿನ್ನ ಮನಸ್ಸಿನೊಳಿನಿತು ಸ್ಥಳ ನೀಡೆನಗೆ ರಾಮಾ |
ಹೃದಯಮಂದಿರದೊಳು ನೆಲೆನಿಲ್ಲು ರಾಮಾ
ಮುಕ್ತಿ ದೊರೆಯಲು ಬೇಕು ನಿನ್ನದೇ ನಾಮಾ ||

ಕಷ್ಟ ಸಹಿಸುವ ಶಕ್ತಿ ನೀಡಿನಗೆ ರಾಮಾ
ಕಷ್ಟದಲಿಯೂ ಭಜಿಸುವ ವರನೀಡು ರಾಮಾ |
ಮಾತೆ ಮಮತೆಯ ತೋರಿ ಸಲಹೆನ್ನ ರಾಮಾ
ಮಡಿಲೊಳಗೆ ಮಗುವಾಗಿ ಮೈಮರೆವೆ ರಾಮಾ ||

ನೀನೆನ್ನ ಮನ ನೀನೆನ್ನ ಧನ ನೀ ಪ್ರಾಣ ರಾಮಾ
ಭಂಟ ನಾನಿನಗೆ ನೀಡು ಚರಣಾಶ್ರಯ ರಾಮಾ |
ಬಿಡಿಸು ಭವಬಂಧನವ  ಜಪಿಸುವೇ ರಾಮಾ
ನೀಡು  ಶರಣಾಗತಿಯ ನಿನ್ನಲ್ಲಿ ರಾಮಾ||

          ಶೈಲೂ......
[1/4/2022, 6:57 pm] Dr. B. N. Shylaja Ramesh: ಮನದಲ್ಲಿ ಮೂಡುತ್ತಿದ್ದರೂ ಅಕ್ಷರ
ಹೂಡುತ್ತಿದೆ ಏಕೋ ಲೇಖನಿ ಮುಷ್ಕರ
ಭಾವನೆಗಳು ಬರಡಾಗಿಯಂತೂ ಅಲ್ಲ
ಲೇಖನಿಯ ದಾಹ ಕಡಿಮೆಯಾಯ್ತೆನೋ😔
ಯಾಕೋ.. ನನಗೂ ಇಂಥದ್ದೇ ತಳಮಳ
ಬರಹ ನಿಂತೀತೇ ಎಂಬ ಕಳವಳ.😔
ಬಂದರೂ ಪದಪುಂಜಗಳು ಸಾಲುಸಾಲಾಗಿ 
ಬರೆಯಲಾಗುತ್ತಿಲ್ಲ ಏಕೋ ಸೊಗಸಾಗಿ
ಗ್ರಹಣ ಹಿಡಿದಂತಿದೆ ಮನದ ಚಂದ್ರನಿಗೆ
ತೆರೆಸರಿದ ಮೇಲೆ ಮೂಡಬಹುದೇನೋ ಬರವಣಿಗೆ
ಕಾಯಬೇಕು ಉತ್ಸಾಹದ ಕದ ತೆರೆವವರೆಗೆ
ನಂತರ ಸುಮಧುರ ಬರಹದ್ದೇ ಮೆರವಣಿಗೆ👍

ಒಮ್ಮೊಮ್ಮೆ ಹೀಗಾಗುತ್ತೆ ಸಿಸ್.. ಆದಷ್ಟೂ ಮನವನ್ನು ಶಾಂತವಾಗಿಡಿ🙂💐
[1/4/2022, 8:25 pm] Dr. B. N. Shylaja Ramesh: ಯುಗಾದಿಯ ಸಂಭ್ರಮ
🌿🌹🌿🌹🌿🌹🌿

ಹಳತೆಲ್ಲ ಕಳೆದು
ಹೊಸತು ಬರುತಿದೆ ನೋಡು
ತುಂಬಿ ಹೊಸ ತನ
ಎಲ್ಲೆಲ್ಲೂ ನವಚೇತನ ಹಾಡು
ಇದೇ ನವ ಯುಗಾದಿಯ ಜಾಡು

ಶಿಶಿರ  ಋತು ಕಳೆದು
ರಾಜ ವಸಂತನಾಗಮನ
ನಳನಳಿಸುತ ಪ್ರಕೃತಿ 
ಕಣ ಕಣದಿ ತುಂಬಿ ಹೊಸಚೇತನ
ಇದೇ ಯುಗಾದಿಯ ಹೊಸತನ

ಹಣ್ಣೆಲೆ ಕಳಚುದುರಿ
ಹೊಸ ಚಿಗುರು ಚಿಗುರಿ
ಹಸಿರು ಪೀತಾಂಬರಿ
ಉಟ್ಟು ಮೆರೆವ ಸರದಿ
ಇದೇ ಸಂಭ್ರಮದ ಯುಗಾದಿ

ಮಾವು ಬೇವು ತೋರಣ
ಬೇವು ಬೆಲ್ಲದ ಮಿಶ್ರಣ
ಸಿಹಿ - ಕಹಿಯು ಸಮವಿರಲಿ
ಬದುಕಾಗಲೀ ಪೂರ್ಣ
ಇದೇ ಯುಗಾದಿಯ ಹೂರಣ

ಬೇಳೆಯ ಸಿಹಿ ಹೋಳಿಗೆ
ಜೊತೆ ಪಂಚಾಂಗದ ಶ್ರವಣ
ನಾಳಿನ ಭವಿತದ ಚಿಂತೆ
ಸುಖ ಸಂತೋಷದ ಮಜ್ಜನ
ಇದೇ ಯುಗಾದಿಯ ಪ್ರೇರಣ

ಹೊಸತು ಬದುಕು ಸಹಬಾಳ್ವೆ
ಸಂಬಂಧದ  ಜೊತೆ ಜೊತೆಗೆ
ಹಳತು ನೋವನೆಲ್ಲ ಕಳೆದು
ನಾಳೆಗಳ ಕನಸಿನಲಿ
ಯುಗದ ಆದಿಯ ಸಂಭ್ರಮ

           ಶೈಲೂ........

ಎಲ್ಲಾ ಬಾಂಧವರಿಗೂ ಯುಗಾದಿ ಹಬ್ಬದ ಶುಭಾಶಯಗಳು💐💐💐💐
ಶ್ರೀ ವಿಕಾರಿ ನಾಮ ಸಂವತ್ಸರವು ಎಲ್ಲಾ ಸುಖ ಶಾಂತಿಗಳನ್ನು ತಂದು ಬದುಕು ಹಸನಾಗಲಿ💐💐💐💐💐
[1/4/2022, 10:11 pm] Dr. B. N. Shylaja Ramesh: 🥭🌿🌹ಯುಗಾದಿ🌹🌿🥭

ಮತ್ತೆ ಬಂದಿತು ಯುಗಾದಿ
ತಂತು ಹೊಸ ಹರುಷದ ಗಾದಿ
ಹೊಸ  ಬದುಕಿನ ಹೊಸರಾಗಕೆ ..!
ಋತುಗಾನಕೆ ಇದೋ ನಾಂದಿ
ನವಪಲ್ಲವದೆಡೆಗಿದು ಆದಿ
ಸೆಳೆವ ನಿಸರ್ಗದ ಚೆಲುವಿನಾಟಕೆ.. !!

ತೂಗುತ್ತಿದೆ ಶುಭ ತೋರಣ
ತಳಿರು ಮಾವುಬೇವು ಮಿಶ್ರಣ
ಕಳೆ ತಂದಿದೆ ಮನೆ ಬಾಗಿಲಿಗೆ..!
ಮಲ್ಲೆಮಲ್ಲಿಗೆ ಹೂವ ಕಂಪು 
ಹೊಂಗೆಯ  ಮರದ ತಂಪು
ಸುಖ ನೀಡಲಿ ಎಲ್ಲರ ಬಾಳಿಗೆ..!!

ಬೇವು ಬೆಲ್ಲದ ಸಿಹಿ ಕಹಿಯ
ಮಿಡಿಮಾವಿನ ಒಗರು ರುಚಿಯ
ಜೊತೆಗೆ ಸಿಹಿ ಹೋಳಿಗೆ ಭೋಜನ..!
ಸೃಷ್ಟಿಸೊಬಗ ಚೆಲುವ ಖನಿಯ
ಮಾವಿನ ಚಿಗುರುಂಡ ಹಕ್ಕಿಯ
ಸುಶ್ರಾವ್ಯ ಕುಹು ಕುಹೂ ಕೂಜನ..!!

ಶುಭಕೃತು ನಾಮ ಸಂವತ್ಸರ
ಅಳಿಸುತ ಮನುಜರ ಮತ್ಸರ
ಸಹಬಾಳ್ವೆಗೆ ನಾಂದಿ ಹಾಡಲಿ..!
ಮೇಲು ಕೀಳು ದ್ವೇಷ ಕಳೆದು
ಬ್ರಾತೃಭಾವ ಸ್ನೇಹ ಹೊಸೆದು
ಎಲ್ಲೆಡೆಯಲೂ ನಲಿವೇ ಕಾಣಲಿ..!!

✍️ಡಾ: B.N.ಶೈಲಜಾ ರಮೇಶ್
[2/4/2022, 9:07 am] Dr. B. N. Shylaja Ramesh: ಅಡಿಯಿಡುತ ವಸಂತನಾಗಮನ
ಎಲ್ಲೆಡೆಯೂ ನವ ಚೈತ್ರ ಗಾನ
ಸಂವತ್ಸರ ಶುಭ ಶ್ರೀಶುಭಕೃತು ವಿನ
ಶುಭಾಶೀರ್ವಾದವಿರಲಿ ಅನುದಿನ
ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು
💐💐💐💐💐💐💐
[7/4/2022, 2:41 pm] Dr. B. N. Shylaja Ramesh: #ಚಿತ್ರಕಾವ್ಯ_ಅಭಿಯಾನ_೨೬

#ಶೀರ್ಷಿಕೆ

#ಕಳಚಿಬಿದ್ದಿತೇ_ಮುಖವಾಡ

ಕಳಚಿಬಿದ್ದಿತೇ ತೊಟ್ಟ ಮುಖವಾಡ
ಈ ಜಗದ ಸಂತೆ ಬಯಲಿನಲಿ
ಅದೆಷ್ಟು ಅಹಂಕಾರದ ತೆವಲಿತ್ತು
ದೇಹದ ಈ ಕಂತೆ ಬೊಂತೆಯಲಿ

ಸಜ್ಜನಿಕೆಯ ಸೋಗು ಎಷ್ಟು ದಿನವಿದ್ದೀತು?
ಅಪ್ರಮಾಣಿಕತೆ ಹೊರಬರಲೇಬೇಕು
ನೈಜತೆಯ ಮುಚ್ಚಿಟ್ಟು ಬದುಕಲಾದೀತೆ?
ಒಂದು ದಿನ ಬಣ್ಣ ಬಯಲಾಗಬೇಕು

ಮರುಳು ಮಾಡುತ್ತೆಲ್ಲರನು
ಸತ್ಯ ಮುಚ್ಚಿಡಲಾದೀತೆ ಹೇಳು
ಕೊನೆಗೆ ಎಲ್ಲವೂ ಬಯಲಾಯ್ತು
ತಿಳಿ ಮೂರು ದಿನವೀ ಬಾಳು

ವಿಧವಿಧದ ವೇಷವ ಧರಿಸಲಾದೀತೆ?
ಜಗದೊಡೆಯ ಮೇಲಿಹನು ನೋಡುತ
ವಿಧಿ ಬರಹವನ್ನು ಬದಲಿಸಲಾದೀತೇ?
ಸೃಜಿಸಿದವನ ಆಜ್ಞೆಯನು ಮೀರುತಾ

ಇನ್ನಾದರೂ ತಿಳಿ ಮನುಜ ನೀತಿ ನಿಯಮ
ಭುವಿಗೆ ಬಂದದ್ದು ಆ ದೇವನ ಅರಿಯಲು
ಸತ್ಯಮಾರ್ಗದಲಿ ನಡೆವುದೇ ಸದ್ಧರ್ಮ
ಆಗಲೇ ಸೇರಲಾದೀತು ಅವನ ಮಡಿಲು

ಮುಖವಾಡ ತರವಲ್ಲ ಜೀವ ಶಾಶ್ವತವಲ್ಲ 
ನೀರ ಮೇಲಿನ ಗುಳ್ಳೆಯಂತೆ ಬದುಕು
ಅವನ ಕರೆ ಬಂದೊಡನೆಯೇ ಪಯಣ
ಇದ್ದಷ್ಟು ದಿನ ನಮ್ಮ ನಡೆ ಜಗಮೆಚ್ಚಬೇಕು

     ಡಾ: B.N.ಶೈಲಜಾ ರಮೇಶ್
[7/4/2022, 2:49 pm] Dr. B. N. Shylaja Ramesh: #ಸಂಸಾರನೌಕೆ

ಬಂಡಿಯ ತೆರನಂತೆ ಈ ಬದುಕು
ಎಳೆವರಲಿ ತಾಳ್ಮೆ ಸಮರಸವಿರಬೇಕು
ನೊಗಕ್ಕೆ ಕಟ್ಟಿದ ಎತ್ತುಗಳಂತೆ ಸತಿಪತಿ
ಸರಾಗ ನಡೆಸೆ ಬದುಕು ಹೂವಿನ ರೀತಿ

ಬದುಕೊಂದು ಅನಂತ ವಿಶಾಲ ಶರಧಿ
ಸಂಸಾರ ನೌಕೆಗೆ ದಾಂಪತ್ಯವೇ ಪರಿಧಿ
ಕಷ್ಟ -  ಸುಖದ  ಏರಿಳಿತಗಳು  ಸಹಜ
ಮುಳುಗದಂತೆ ನಡೆಸಬೇಕು ಮನುಜ

ಎರಡು ಶುಭ್ರ ಮನಸುಗಳ ಶುಭ ವೇದಿಕೆ
ಸಂಸಾರ  ಬಂಧನದಲ್ಲಿ ಈ  ಬಾಳ  ನೌಕೆ
ಸುಖದುಃಖಗಳ ಭಾರಿ ಅಲೆಗಳಿಗ್ಹೆದರದೆ
ಸುಖದ ತರಂಗ ಪ್ರವಹಿಸುತ್ತಿರಲಿ ಮನದೆ

ನಂಬಿಕೆ ಮೇಲೆಯೇ ನಿಂತಿಹುದು ಬಾಳು
ಸುಖದಾಂಪತ್ಯದಲಿ ಸವಿಯಿಹುದು ಕೇಳು
ತಾಳ್ಮೆ ಸಹನೆಯೇ ಸುಖಸಂಸಾರದ ಗುಟ್ಟು
ನಗುತ್ತಿರಬೇಕು  ನೋವುಗಳ  ಅವಿತಿಟ್ಟು

            ಶೈಲಜಾ ರಮೇಶ್
[7/4/2022, 2:53 pm] Dr. B. N. Shylaja Ramesh: ಹೇಡಿ
*****

ಬದುಕಲಾರೆನೆಂದು ಜೀವ
ಕಳೆದುಕೊಂಡರಾದೀತೆ ಹೇಳು
ಬದುಕುವ ಛಲ ತಳೆದು
ಸೆಟೆದೆದ್ದು ನಿಲ್ಲಬೇಕು ಬಾಳಲಿ

ಕೈಲಾಗದೆಂದು ಹೇಡಿಯಂತೆ
ಕುಳಿತರಾದೀತೇ  ಹೇಳು
ಕೈಲಾಗದ್ದೇನೇನೂ ಇಲ್ಲ
ಮನಸ್ಸೊಂದಿದ್ದರೆ ಮಾರ್ಗ ಬಾಳಲಿ

ದುಡಿಮೆಯೇ ದೇವರು ತಾನೇ
ಸೋಮಾರಿಯಾದರಾದೀತೆ ಹೇಳು
ಶ್ರದ್ದೆಯೊಳಗಿತ್ತು ಮನವ ದುಡಿದರೆ
ಸಿರಿತನ ನಿನ್ನ ಕಾಲ ಬಳಿಯಲಿ

ದುಃಖವಿರಬಹುದು ಇಂದು
ಅತ್ತು ಕುಳಿತರಾದೀತೆ ಹೇಳು
ತೆರೆದಿಟ್ಟು ಮನವ  ಹಗುರಾಗಿಸು
ನಿನ್ನವರಿಲ್ಲವೇನು ಬದುಕಲಿ?

ಕತ್ತಲೆಯಾಯ್ತೆಂದು ಬೆಚ್ಚಿ
ಮೂಲೆಹಿಡಿದು ಕುಳಿತರಾದೀತೆ ಹೇಳು
ತಾಳಿ, ಕಾಯಬೇಕು ಬೆಳಕಿಗಾಗಿ
ಬಂದೇ ಬರುವ ರವಿ ಬಾನಲಿ

ಇರುಳು ಕಳೆದೊಡನೇ ಇದೆ
ಭರವಸೆಯ ಬೆಳಕು ಕೇಳು
ಬೆಚ್ಚದೆ ಹಚ್ಚು ಜ್ಞಾನ ದೇವಿಗೆ
ಮನದ ತಮ ಓಡುವುದು ಕ್ಷಣದಲಿ

ತಾಳಿದವನು ಬಾಳಿಯಾನು ಗೊತ್ತೇ
ಇದರರ್ಥ ವಿಶಾಲವಿದೆ ಕೇಳು
ಬಿದ್ದರೇನಂತೆ ಎದ್ದುನಿಲ್ಲು ಛಲದಲಿ
ಹೇಡಿಬದುಕು ಹೀನಾಯ ಬಾಳಲಿ

ಏನಾದರೂ ಸಾಧಿಸು ಬದುಕಿದ್ದು
ಸಾವಿನಾಚೆಗೂ ಘನತೆ ತರುವುದು ಕೇಳು
ಹಾದಿಯುಂಟು ಆಯ್ಕೆಯುಂಟು ಬಹಳ
ಹೇಡಿಯಾಗದೆ ಸಾಧಿಸಿ ತೋರು ಬಾಳಲಿ

             ಶೈಲೂ.....
[7/4/2022, 10:45 pm] Dr. B. N. Shylaja Ramesh: ಮನದಲ್ಲೇ ಅಚ್ಚಾಗಿರಬಹುದೆಂದೇಣಿಸಿದ್ದೆ  ಹುಡುಗ

ಅಕ್ಷಿಪಟಲದ ಮೇಲೆ ಆಗಾಗ ಸುಳಿಯಬಹುದೇನೋ
ಎಂದೇಣಿಸಿದ್ದೆ..

Dp  ಸೇವ್ ಮಾಡಿ..
ನನ್ನ ಎಣಿಕೆ ಯನ್ನು ಹುಸಿಮಾಡಿ
ನನ್ನನೇ delite ಮಾಡಿದೆಯಲ್ಲೋ ಹುಡುಗ😊😊
ಚಂದದ.ಚುಟುಕು ಸರ್ 👍👍👌💐💐
ನಿಮ್ಮ ಚುಟುಕಿಗೆ ಏನಾದ್ರೂ ಬರೆಯೋಣ ಅನ್ನಿಸುತ್ತೆ.. ಹಾಗಾಗಿ ಮನಕ್ಕೆ ಅನಿಸಿದ್ದನ್ನ ಇಲ್ಲಿ ಟೈಪಿಸುತ್ತೇನೆ...
ಅನ್ಯಥಾ ಭಾವಿಸಬೇಡಿ..🙏🙏

ತಮಾಷೆಗೆ.ಬರೆದದ್ದು
[8/4/2022, 10:46 am] Dr. B. N. Shylaja Ramesh: ಸಾಲಿಗೊಂದು ಕವನ##
ಶೀರ್ಷಿಕೆ ;---

ಬೆಳಕಿನ ಜೊತೆಯಾಗಿ ನಡೆದು ಬರುವುದು ನೆರಳು
******************************************

ಬೆಳಕಿನ ಜೊತೆಯಾಗಿ ನಡೆದು ಬರುವುದು ನೆರಳು
ಸುಖದುಃಖ ಒಟ್ಟೊಟ್ಟಿಗಿರುವುದು ಬಾಳಿನ ತಿರುಳು
ಒಂದರಹಿಂದೊಂದರಂತೆ ನೋವು ನಲಿವಿನ ಪಾಠ
ಕುಗ್ಗದಂತೆ ತಲೆಯೆತ್ತಿ ನಡೆಯಲು ಕಷ್ಟಗಳೇ ಓಟ

ಅಳುಕಿರದ ಬದುಕಲ್ಲಿ ಗೆಲುವಿನ ಹಾದಿ ನಿಶ್ಚಿತ
ಆತ್ಮವಿಶ್ವಾಸದ ದಿಟ್ಟ ಹೆಜ್ಜೆಗೆ ಗೆಲುವು ಖಚಿತ
ಜೊತೆಜೊತೆಗೆ ಹೊಂದಿಕೊಂಡಂತೆ ಹಗಲು ಇರುಳು
ಇರುಳಾದ ಮೇಲೇ ಇಹುದು ಹೊಳೆಯುವ ಹಗಲು

ಜೊತೆಯಿದ್ದರೂ ಕೈಗೆ ಸಿಗದ ಮಾಯೆ ಈ ನೆರಳು
ಮನದ ಓಟದ ಓಘಕೆ ನೀಡಬಾರದು ಕೊರಳು
ಸಾವಧಾನ ಚಿತ್ತವಿರೇ ಮನಸ ಅರ್ಥೈಸಲು ಸಾಧ್ಯ
ದುಡುಕು ಬುದ್ಧಿಯ ಕೈಲಿಟ್ಟರೆ ಬದುಕು ಅಭೇದ್ಯ

ಬಿಡಿಸಲಾರದ ಅನುಬಂಧ ಬೆಳಕಿಗೂ ನೆರಳಿಗೂ
ಅಂತೆಯೇ ಸಂಘರ್ಷ ಬುದ್ಧಿಗೂ ಮನಸ್ಸಿಗೂ
ಎಂದೆಂದಿಗೂ ಜೊತೆಗಿರುವ ನೆರಳು ಸಂಗಾತಿ
ದೇಹದೊಳು ಸಮವಾಗಿ ಉಸಿರು ಬೆರೆತ ರೀತಿ

              ಶೈಲೂ......
[8/4/2022, 10:47 am] Dr. B. N. Shylaja Ramesh: #ಸಂಸಾರನೌಕೆ

ಬಂಡಿಯ ತೆರನಂತೆ ಈ ಬದುಕು
ಎಳೆವರಲಿ ತಾಳ್ಮೆ ಸಮರಸವಿರಬೇಕು
ನೊಗಕ್ಕೆ ಕಟ್ಟಿದ ಎತ್ತುಗಳಂತೆ ಸತಿಪತಿ
ಸರಾಗ ನಡೆಸೆ ಬದುಕು ಹೂವಿನ ರೀತಿ

ಬದುಕೊಂದು ಅನಂತ ವಿಶಾಲ ಶರಧಿ
ಸಂಸಾರ ನೌಕೆಗೆ ದಾಂಪತ್ಯವೇ ಪರಿಧಿ
ಕಷ್ಟ -  ಸುಖದ  ಏರಿಳಿತಗಳು  ಸಹಜ
ಮುಳುಗದಂತೆ ನಡೆಸಬೇಕು ಮನುಜ

ಎರಡು ಶುಭ್ರ ಮನಸುಗಳ ಶುಭ ವೇದಿಕೆ
ಸಂಸಾರ  ಬಂಧನದಲ್ಲಿ ಈ  ಬಾಳ  ನೌಕೆ
ಸುಖದುಃಖಗಳ ಭಾರಿ ಅಲೆಗಳಿಗ್ಹೆದರದೆ
ಸುಖದ ತರಂಗ ಪ್ರವಹಿಸುತ್ತಿರಲಿ ಮನದೆ

ನಂಬಿಕೆ ಮೇಲೆಯೇ ನಿಂತಿಹುದು ಬಾಳು
ಸುಖದಾಂಪತ್ಯದಲಿ ಸವಿಯಿಹುದು ಕೇಳು
ತಾಳ್ಮೆ ಸಹನೆಯೇ ಸುಖಸಂಸಾರದ ಗುಟ್ಟು
ನಗುತ್ತಿರಬೇಕು  ನೋವುಗಳ  ಅವಿತಿಟ್ಟು

            ಶೈಲಜಾ ರಮೇಶ್
[8/4/2022, 10:49 am] Dr. B. N. Shylaja Ramesh: ಶ್ರೀಮಾನ್ ರಮೇಶ್ ಗುಬ್ಬಿ ಅವರ ಜೋಕೆ ಮನಸೇ ಕವನದಿಂದ ಪ್ರೇರಿತ

ಥ್ಯಾಂಕ್ಸ್ ರಮೇಶ್ ಸರ್🙏🙏

 ಜೋಕೆ... ಮನಸೇ..!!
******************

ಅಭಿಮಾನವುಕ್ಕಿಸುವ
ಆತ್ಮಗೌರವವಿರಬೇಕೆ..ಹೊರತು
ಅದಃಪತನಕ್ಕೆ ತಳ್ಳುವ
ಅಹಂಕಾರ ವಿರಬಾರದು

ಎಲ್ಲ ಮೆಚ್ಚುವ ತೆರದಿ
ತಗ್ಗಿನಡೆವ ವಿಧೇಯತೆಬೇಕೆ ಹೊರತು
ತುಳಿಸಿಕೊಂಡು ಮರುಗುವ
ಶೋಷಿತರಾಗಬಾರದು

ಕಾರ್ಯ ಕಾರಣದಲಿ
ಉತ್ಸಾಹಿಯಾಗಿರಬೇಕೆ ಹೊರತು
ಆಪತ್ತು ವಿಪತ್ತೊ ಡ್ಡುವ
ಉನ್ಮತ್ತನಾಗಬಾರದು

ತೀರದ ಪ್ರೀತಿಯ
ಹಂಬಲವಿರಬೇಕೆ ಹೊರತು
ಪರದಾಸ್ಯಕ್ಕೆಡೆಕೊಡುವ
ಕುರುಡು ಪ್ರೇಮವಿರಬಾರದು

ಭರವಸೆಯ ಬಾಳಿನ
ಕನಸು ಕಾಣಬೇಕೆ ಹೊರತು
ಬಾಳಿನ ಭರವಸೆಯೇ
ಕನಸಾಗಬಾರದು

ಪ್ರೀತಿಯಲಿ ಜಗವ ಗೆಲ್ಲುವೆನೆಂಬ
ದಿಟ್ಟ ಭರವಸೆಯಿರಬೇಕೇ ಹೊರತು
ಜಗವೇ ನನ್ನದೆಂಬ ಕುರುಡು
ಭ್ರಮೆಯಲ್ಲಿ ಮುಳುಗಬಾರದು

ಆರೋಗ್ಯಕರ ಹಿತ
ಕೋಪವಿರಬೇಕೇ ಹೊರತು
ಅಂತರಂಗವನ್ನೇ ದಹಿಸುವ
ಜ್ವಾಲಾಮುಖಿ ಯಾಗಬಾರದು

ದಯಾ ಪ್ರೇಮಪೂರಿತ
ಆರಾಧನೆಯಿರಬೇಕೇ ಹೊರತು
ವಿವೇಕ ಶೂನ್ಯತೆಯಲಿ
ಅಂಧರಾಗಬಾರದು

ಬಾಳ ಬೆಳಗಿಸಲು
ಜ್ಯೋತಿಯಾಗಬೇಕೇ ಹೊರತು
ಉನ್ಮತ್ತತೆಯಲಿ ಮೆರೆದು
ದಹಿಸುವ ಜ್ವಾಲೆಯಾಗಬಾರದು

ಮನವರಳಿಸುವ ನಲಿವಿನ
ಮಧುರ ನೆನೆಪಾಗಬೇಕೇ ಹೊರತು
ಮನಹಿಂಡುವ ನೋವಿನ
ವ್ಯಥೆಯ ಕಥೆಯಾಗಬಾರದು

          ಶೈಲೂ......
[8/4/2022, 10:54 am] Dr. B. N. Shylaja Ramesh: ಸಾಧಿಸುವ ಛಲವೊಂದಿದ್ದರೆ ಬಾಳಿನಲ್ಲಿ
*********************************
ಸಾಧಿಸುವ ಚಲವೊಂದಿದ್ದರೆ ಬಾಳಿನಲಿ
ಬೆಟ್ಟದಷ್ಟು ಕಷ್ಟ ಕರಗಿ ಗುಟ್ಟವಾಗುವುದು ಕೇಳು
ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ ಬದುಕಿನಲಿ
ಗೆಲುವಿನೊಂದೊಂದೆ ಮೆಟ್ಟಿಲು ಕಾಣುವುದು ಕೇಳು

ಆರೂ ಅರಿಯರಿಲ್ಲಿ ಮನದ ಪ್ರೇಮ ಭಾವಸಮ್ಮಿಲನ
ಕಂಡರೂ ಕಾಣದಂತೆ ನಿರ್ಲಕ್ಷಿಸುವರು ಕೇಳು
ಆಡಿಕೊಳ್ಳುವವರ ಮುಂದೆ ಸಾಗಬೇಕು ಮುಂದೆಮುಂದೆ
ಯಶೋಕೀರ್ತಿ ಮಾನಸಮ್ಮಾನ ಗಳಿಸಿ ವಿಜಯಿಯಾಗಿ ಬಾಳು

ಅಮಾನವೀಯ ಜಗದೊಳು ಕಪಟತೆಯೇ ದೈವ
ಶುದ್ಧ ಮನಕೆ ಬೆಲೆಕೊಡುವವರಾರೂ ಇಲ್ಲ
ಸ್ವಾರ್ಥಲಾಲಸೆ ಮೋಸ ತುಂಬಿದೀ ಜಗದಲಿ ಮುಗ್ಧತೆಯಲೂಟಿ ಮಾಡುವರೇ ಎಲ್ಲ

ಮಾತು ಮುತ್ತಂತೆ ಕಾಪಿಡಬೇಕು ಸದಾ
ಗೌರವ ಘನತೆಯ ತೂಕ ಮಾತಿನಲ್ಲಿರಲಿ
ಕಳೆದುದೆಂದೂ ಮತ್ತೆ ಹಿಂತಿರುಗಿ ಬಾರದು
ಕ್ಷಣಕ್ಷಣವೂ  ಬೆಲೆಯುಳ್ಳದ್ದು ಉಪಯೋಗಿಸುವ ಕ್ಷಮತೆಯಿರಲಿ

ಶಕ್ತಿಯಿಂದಾಗದ್ದು ಯುಕ್ತಿಯಿಂ ಗೆಲಬೇಕು
ನಿನ್ನ ಆತ್ಮವಿಶ್ವಾಸದಲಿ ನಂಬಿಕೆಯಿರಲಿ
ಆಗಲಾಗದ್ದು ಯಾವುದೂ ಇಲ್ಲವೆಂದು ತಿಳಿ
ದೃಢಸಂಕಲ್ಪದಿಂದ ಸಾಧಿಸುವ ಛಲವಿರಲಿ

            ಶೈಲೂ.....
[8/4/2022, 10:54 am] Dr. B. N. Shylaja Ramesh: ಆಶಾವಾದ
**********

ಸೋತೆವೆಂದು ಕಂಗೆಟ್ಟು
ಕುಳಿತರೆ ಹೇಗೆ..?
ಬತ್ತಿ ಹೋದಾವು ಆಸೆ
ಮುಚ್ಚೀತು ಬದುಕುವ ಬಗೆ..

ಗೆಲುವ ನಶೆಯೇರಿಸಿ
ಬಾಗದೆ ಬೀಗಿದರೆ ಹೇಗೆ..?
ತಲೆಗೇರಿ ಮತ್ತು..
ಬಿದ್ದೀಯ ಜೋಕೆ..!

ಸೋಲು ಪಾಠವಾಗಬೇಕು
ತಪ್ಪಿನ ಅರಿವು ಮೂಡಿಸಿ
ಗೆಲುವು ಸ್ಪೂರ್ತಿಯಾಗಬೇಕು
ಬದುಕಲು  ಛಲವ ಬೆರೆಸಿ

ಬದುಕೊಂದು ಜೋಕಾಲಿ
ಏರಿಳಿತಗಳ ಗಮನವಿರಲಿ
ಒಮ್ಮೆ ಮೇಲೆ, ಮತ್ತೊಮ್ಮೆ ಕೆಳಗೆ
ಒಮ್ಮತವಿರಲಿ ಸೋಲು ಗೆಲುವಿಗೆ

ಏರುವ ಹುಮ್ಮಸ್ಸಿನಲ್ಲಿ
ಬಾಳಿಗಾನಂದವಿರಲಿ
ಇಳಿಯುವ ಕಂಪನದಲಿ
ಸಂಭಾಳಿಸುವ ಕಲೆಯಿರಲಿ

ಸೋಲು ಗೆಲುವಿನ ಆಟ
ಇದು ಬಾಳಿನ ಪರಿಪಾಠ
ಹಿಗ್ಗದೆ ...ಕುಗ್ಗದೆ ನಡೆದರೆ
ಬದುಕು ಸಂತಸದ ಕೂಟ

             ಶೈಲೂ.....
[8/4/2022, 11:01 am] Dr. B. N. Shylaja Ramesh: #ಚಿತ್ರ_ಕಾವ್ಯ_ಅಭಿಯಾನ

#ಶೀರ್ಷಿಕೆ:--

#ಮನೋಮಂಥನ

ಮಾಯೆಯಾವರಿಸಿ ಮನಸಿಗೆ
ಮನದ ಸ್ಥಿತಿ ಬದಲಾಗಿದೆ
ಮತ್ತೇರಿದಂತೆ ಬುದ್ಧಿಭ್ರಮಣೆ
ಮತ್ತದೇ ಚಿತ್ತ ಚಂಚಲತೆ

ನಾನೇ ಉತ್ತಮನೆಂಬ ಭಾವ
ನನ್ನದೇ ಎಲ್ಲೆಡೆಯೂ ಪ್ರಭಾವ
ನೆತ್ತಿಗೇರಿದಂತೆ ಅಹಂಕಾರದಬ್ಬರ
ನೆಮ್ಮದಿಯೇ ಇಲ್ಲದೆ ತತ್ತರ

ಒಮ್ಮೊಮ್ಮೆ ಒಂದೊಂದು ಭಾವ
ಒಮ್ಮೆಗೇ ಮೆರೆಯುತ್ತ ಜೀವ
ಒಂದೊಂದು ವೇಷದೊಳಾವೃತ ಮನ
ಒಬ್ಬಂಟಿಯಂತೆ ಕೊನೆಗೆ ಜೀವನ

ಭಾವಾಂತರಂಗದಲಿ ಏನೋ ವಿಚಿತ್ರ
ಬಹುವೇಷದೊಳು ಮನ ಸಚಿತ್ರ
ಬಂಧಿಯಾಗಿಹುದು ಕೆಳಸ್ತರದಲಿ ಮನ
ಭಾವವುದ್ದೀಪಿಸಿ ಏನೋ ತಲ್ಲಣ

ವಿಕೃತ ಮನದ ನಾನಾ ಸ್ತರ
ವೇಷದೊಳು ಲೀನ ಮಹತ್ತರ
ವೇದಿಕೆಯಾಯ್ತೆಕೆ ಚಿಂತನೆಗೆ
ವಿಶ್ವಾಸವಿಡು ಮನೋ ಮಂಥನಕೆ

ನಾನು ನಾನೆಂಬುದನಳಿಸಿ
ನನ್ನಲಿಹ ಕಲ್ಮಶವ ಬಿಡಿಸಿ
ನೀನೇ ಪ್ರಭುವೆಂಬುದ ಬೆಳೆಸಿ
ನಿನ್ನಡಿಯಲಿಡಬೇಕು ಶಿರ ಮಣಿಸಿ

ತೊಡೆ ಈ ವಿಕೃತ ಮನದ ತಾಪ
ತಡೆ ಮನದ ಸಹಜ ಬಹುರೂಪ
ತೊರೆದೆಲ್ಲ ಅಟ್ಟಹಾಸದ ಬದುಕು
ತಮವ ತೊಡೆವ ಬೆಳಕಾಗಬೇಕು..

   ಡಾ: B.N. ಶೈಲಜಾ ರಮೇಶ್
[8/4/2022, 11:03 am] Dr. B. N. Shylaja Ramesh: ಕದನ
*****

ಬದುಕೊಂದು ನಿರಂತರ
ನಿಲ್ಲದ ಬಗೆಹರಿಯದ ಕದನ
ಉಗ್ರ ಹೋರಾಟ ಕಾದಾಟ
ಸಿದ್ಧರಿರಬೇಕು ಎದುರಿಸಲು ಜತನ

ಮುಗಿಯಿತೊಂದೆನ್ನುವಷ್ಟರಲ್ಲೇ
ಮತ್ತೊಂದು ಯುದ್ಧಸನ್ನದ್ಧ
ಯುದ್ಧವೋ ವಾಗ್ಯುದ್ಧವೋ
ಸೆಣೆಸಲಿರಬೇಕು ಸದಾ ಸಿದ್ಧ

ಮೊಳಗುತ್ತಿದೆ ರಣಭೇರಿ
ಸೆಣೆಸಲು ಕಾಲನೊಡನೆ
ಮೊಳಗಿಸಲೇಬೇಕು ಜಯಭೇರಿ
ನಿಲ್ಲದ ನೋವುಬಾವುಗಳೊಡನೆ

ಝಲಪಿಸುತ್ತಿದೆ ಸಾವಿರ ಸಾವಿರ
ಸಮಸ್ಯೆಗಳ ತೀಕ್ಷ್ಣ   ಶಸ್ತ್ರಾಸ್ತ್ರ
ಯುಕ್ತಿಯಿoದೆದುರಿಸಿ ನಿವಾರಿಸಲು
ಬಳಸಬೇಕು ಬಗೆಬಗೆಯ ದಿವ್ಯಾಸ್ತ್ರ

ಗೆದ್ದೇವೆಂದು ಬೀಗುವಷ್ಟರಲ್ಲಿಯೇ
ಎಲ್ಲಿಂದಲೋ ಆವರಿಸಿ ಸೋಲಿನ ಕರಿನೆರಳು
ಕಬಳಿಸುವುದು ಆತ್ಮವಿಶ್ವಾಸ
ಹತಾಶೆಯಲಿ ಬುದ್ಧಿ ಅರಳು ಮರುಳು

ಸಹಿಸಬೇಕು ಎಲ್ಲ ಕೋಪತಾಪಗಳ
ಪ್ರಕ್ಷುಬ್ಧ ಮನದ ಕೋಲಾಹಲಗಳ
ಸನ್ನದ್ಧವಾಗಿರಬೇಕು ಧರಿಸಿ ಶಸ್ತ್ರಾಸ್ತ್ರ
ಸಹನೆ  ಸಹಿಷ್ಣುತೆ ಯ ಬ್ರಹ್ಮಾಸ್ತ್ರ

ದೇಹದ ರಥದಲ್ಲಿ ವಿರಾಜಿಸುತಿಹ
ಆ ದೇವನೆಂಬ ಅಂತರಾತ್ಮ
ಒಳದನಿಯಲೇ ಬೋಧಿಸುತಿಹ
ಭಗವದ್ಗೀತೆಯ ಆ ಪರಮಾತ್ಮ

ಮನ್ನಿಸಬೇಕು ಅಂತರಾತ್ಮನ
ಉದ್ಧರಿಸುವ ಕೊರಳದನಿಗೆ
ಬೇಡ ನಿರ್ಲಕ್ಷ್ಯ...ಅನುಸರಿಸು
ಅದೇ ಬದುಕು ಬೆಳಗುವ ದೀವಿಗೆ

ಮರೆತೆಯಾದರೆ ಒಡಲ ಮಾರ್ದನಿ
ಕವಿದೀತು ಕತ್ತಲೆ ಸತ್ಯ ಕಾಣದಂತೆ
ಬದುಕ ಬಂಡಿಯ ಸೂತ್ರವವನ ಕೈಲಿ
ಸೋಲಿಲ್ಲ ಶರಣಾಗತಿಯ ಭಾವವಿದ್ದರೆ

            ಶೈಲೂ.....
[8/4/2022, 11:06 am] Dr. B. N. Shylaja Ramesh: ಸ್ವಯಂಕೃತ
**********

ಯಾರ ಜರಿಯಲಿ ನಾನು
ಜರಿಯಲು ಕಾರಣವೇನು ??
ಅರಿಷಡ್ವರ್ಗಗಳ ಜೊತೆಗೆ
ವಿಶ್ವಾಸದಿಂದಿದ್ದು
ತೋಡಿಹೆ ಆಳದ  ಕೂಪ
ಮುಳುಗಿಹೆ ಅದರಲ್ಲೇ
ಆಸೆಯ ನೀರದು ಚಿಮ್ಮಿ
ಕೂಪ  ತುಂಬುತಿದೆ
ಈಜಲಾರದೆ ನಾನು
ಮುಳುಗುತಿಹೆನದರಲ್ಲೇ
ನನಗೆ ನಾನೇ ವೈರಿ
ದೂಷಿಸಲಿ  ಯಾರಲ್ಲಿ
ತಡೆಯಲಿ ನಾ ಹೇಗೆ
ಚಿಮ್ಮುತಿಹ ಆಸೆಯ  ಜಲವ
ಮೇಲೆದ್ದು  ನುಗ್ಗುತಿದೆ
ಉಸಿರುಗಟ್ಟಿಸುತ್ತಿದೆ
ನಾನೇ ತೋಡಿದ ಭಾವಿ
ಬಿದ್ದಿರುವೆ ಅದರೊಳಗೆ
ಎದ್ದುಬರಲಾರದೇ
ಮೊರೆಯಿಟ್ಟೆ ನಿನ್ನಲ್ಲಿ
ನೀನೊಬ್ಬನೇ   ರಕ್ಷೆ...
ಸಾಕಿನ್ನು  ಈ .ಶಿಕ್ಷೆ
ನೀಡು  ಕರುಣೆಯ ಭಿಕ್ಷೆ
ಬೇಕಿಲ್ಲ ಸತ್ವ ಪರೀಕ್ಷೆ
ಪ್ರೇಮಪೂರಿತ ಮನದೆ
ತೇಲಿಸೆನ್ನನು  ತಂದೆ
ದಾಟಿಸು ಭವ ಸಾಗರವ...

         ಶೈಲೂ..........
[8/4/2022, 11:07 am] Dr. B. N. Shylaja Ramesh: ಮನಸ್ಸಿದ್ದರೆ ಮಾರ್ಗ
****************
ಕೈಲಾಗದೆಂದು ಕೈಕಟ್ಟಿ ಕುಳಿತರಾದೀತೇ ಹೇಳು?
ಮಗ್ನವಿರಲಿ ಮನವು ಸಾಧನೆಯ ಹಾದಿಯಲ್ಲಿ
ಛಲದಿಂದ ಮುನ್ನುಗ್ಗಿದರೆ ಜಯ ಕಟ್ಟಿಟ್ಟ ಬುತ್ತಿ ಕೇಳು
ಮನಸ್ಸೊಂದಿದ್ದರೆ ಚುಕ್ಕಿ ಚಂದ್ರಮರೂ ಕೈಗೆಟುಕುವರು

ತನ್ನಿಂದೇನೂ ಆಗದೆಂದು ಸೋತು ಕಂಗೆಟ್ಟರಾದೀತೇ?
ಧೃಢನಿಶ್ಚಯವೇ ಮನುಜ ದಾರಿ ತೋರುವ ಗುರುವು
ವಿಶ್ವಾಸವಿರಲಿ ಸದಾಕಾಲ ನಿನ್ನಸ್ಥಿತ್ವದ ಮೇಲೆ
ಸಂಶಯವೇ ಆತ್ಮವಿಶ್ವಾಸವ ಕುಗ್ಗಿಸುವ ನಿಜವೈರಿ

ಸಾಧಿಸಿಯೇ ತೀರುವೆನೆಂಬ ಛಲವೊಂದಿದ್ದರೇ ಸಾಕು
ಆತ್ಮಬಲವೂ ನುಗ್ಗಿ ಕೈ ಜೋಡಿಸುವುದು ಕೇಳು
ಪ್ರಬುದ್ಧಾಲೋಚನೆಯಲಿ ಶುದ್ಧ ಪ್ರಯತ್ನವೊಂದಿರೆ
ಯಶಸ್ಸು ಶ್ರೇಯಸ್ಸು ನಿನ್ನ
ಕಾಲಡಿಯ ಸ್ವತ್ತು

ಶುದ್ಧ ಮನ ಆತ್ಮವಿಶ್ವಾಸವೇ ಜಯದ ಮೂಲಮಂತ್ರ
ನಿಸ್ವಾರ್ಥ ಪ್ರೇಮ ಸತ್ಯದ ನಡೆನುಡಿ ಜಯವ ಸೆಳೆವ ತಂತ್ರ
ಪ್ರಕ್ಷುಬ್ಧಕ್ಕೆಡೆಕೊಟ್ಟರೇ ಹಿಂದೆಯೇ ಸೋಲಿಸುವ ಕುತಂತ್ರ
ದೈವಬಲವಿದ್ದರೆ ಸಾಧನೆಗೆ ಮನುಜ ನೀ ನಿಮಿತ್ತ ಮಾತ್ರ

            ಶೈಲೂ......
[8/4/2022, 11:08 am] Dr. B. N. Shylaja Ramesh: ಇದುವೇ  ಜೀವನ
***************
 

ಗಾಢಾಂಧಕಾರದ ಇರುಳಿದ್ದರೂ
ನಾಳಿನ ಅರುಣೋದಯದ
ನಿರೀಕ್ಷೆ ಯೇ ಜೀವನ...
ಬಾಳದಾರಿಯಲ್ಲಿ ಕಲ್ಮುಳ್ಳು ಇದ್ದರೂ
ಹಸಿರು ಹಾದಿಯ
ಪ್ರತೀಕ್ಷೆಯೇ ಜೀವನ...
ಕಾರ್ಮೋಡ ಕವಿದು ಕತ್ತಲೆ ಅವರಿಸಿದರೇನು
ಸುರಿವ ಹನಿಯ ತನಿಯಲ್ಲಿ
ಹಸಿರೊಡೆವುದೇ ಜೀವನ...
ಸೋತು ಕೈಚಲ್ಲಿ ಕುಳಿತಿದ್ದರೂ
ನಾಳೆ ಗೆಲ್ಲುವ
ಭರವಸೆಯೇ ಜೀವನ...
ಇಂದು ನಷ್ಟದ ಕಷ್ಟವಿದ್ದರೇನು
ನಾಳಿನ ಲಾಭದ ಗಳಿಕೆಯ
ಆಸೆಯೇ ಜೀವನ...
ಮಣ್ಣಲ್ಲಿ ಮಣ್ಣಾಗಿ ಬೆರೆತಿದ್ದರೇನು
ಕಾಲ ಮಾಗಿದಾಗ
ಟಿಸಿಲೊಡೆಯದೇ ಕಾಳು..?
ಇಂದು ಬೇಸತ್ತು ಬಸವಳಿದಿದ್ದರೇನು
ನಾಳೆ ನಮಗಾಗಿ ಕಾದಿದೆ
ಸುಂದರ ಬಾಳು...!
ಕುಗ್ಗದಿರು ಜಗ್ಗದಿರು ಕಷ್ಟಕಾರ್ಪಣ್ಯಕೆ
ಇರಲಿ ಎಲ್ಲ ಮೀರಿ
ಪುಟಿದೇಳುವ ಬಯಕೆ...!
ನೋವುಂಡ ಮನಕೆ ತುಂಬು ಉತ್ಸಾಹ
ಹಾಲುಣ್ಣಲಾಗದೇ  ಮುಂದೇ.?
ಭರವಸೆಯಿರಲಿ ಬೆಳೆಸು ಆತ್ಮವಿಶ್ವಾಸ...!

              ಶೈಲೂ.....
[8/4/2022, 11:09 am] Dr. B. N. Shylaja Ramesh: ಕಿವಿಮಾತು
*********

ಅಂಧಕಾರವ ಸರಿಸು
ಧೃಡಹೆಜ್ಜೆಯನಿರಿಸು
ತಂತಾನೇ ಹೊಳೆಯುವುದು
ಬಾಳಲ್ಲಿ ಬೆಳಕು...

ನಡೆವ ಹಾದಿಯಲುಂಟು
ಕಲ್ಲು ಮುಳ್ಳುಗಳ ನಂಟು
ಸರಿಸುತ್ತ ನಡೆದರಿಹುದು
ಗೆಲುವೆಂಬ ಬೆಳಕು...

ನಿನ್ನನನುಸರಿಸುವವರಿಗೆ
ನೀನಾಗು ಮಾದರಿ
ನುಂಗುತ್ತ ಒಳಗೊಳಗೇ
ಒಡಲೊಳಗೆ ದಳ್ಳುರಿ...

ಹರಿತ ನಂಜು ನಾಲಿಗೆಗೆ
ಆಹಾರವಾಗಬೇಡ
ಗಟ್ಟಿ ಮಾಡಿಕೋ ಮನವ
ದುರುಳಜನರ ಮೆಟ್ಟಿನಿಲ್ಲು...

ಮೃದುಮನದ ಹೂ ನೀನು
ಮುಳ್ಳಾಗು ಒಮ್ಮೊಮ್ಮೆ
ಕಿತ್ತು ನೋಯಿಸುವವರ
ಕೈ ಚುಚ್ಚಿ ಧಿಕ್ಕರಿಸಿ ಬಿಡು...

ಸಜ್ಜಿಗೆಯ ಸಿಹಿಯಾಗು
ಸಜ್ಜನರ ಸವಿ ನುಡಿಗೆ
ತಲೆಬಾಗು ಸಂಯಮದಿ
ಗುರುಹಿರಿಯರಾಣತಿಗೆ...

ದಯೆಯಲಿಹುದು ಸದ್ಧರ್ಮ
ಅದುವೇ ಜೀವನದ ಮರ್ಮ
ಸದ್ವಚನದಾಂಮೃತಪಾನ
ಅದರ್ಶಜೀವನಕೆ ಸೋಪಾನ...
       ಶೈಲೂ....
[8/4/2022, 11:11 am] Dr. B. N. Shylaja Ramesh: ಪರೀಕ್ಷೆ
******

ಕಷ್ಟಗಳಿಗೆ ಎದೆಯೊಡ್ಡಿ
ಸಂಕಷ್ಟಗಳ ಸರಮಾಲೆಗಳನ್ನೆದುರಿಸಿ
ಸರಿದಾರಿಯಲಿ ನಡೆದರೂ
ಚುಚ್ಚು ನುಡಿಗಳಿಗೆ ಬೆಚ್ಚಿ
ತಲೆಬಾಗುವವರು ಹೆಜ್ಜೆಜ್ಜೆಗೂ
ಅಗ್ನಿಪರೀಕ್ಷೆ ಗೆ ಗುರಿಯಾಗಿ
ನೊಂದು ಬೆಂದು ಕೊನೆಗೆ ಹೆಸರಾಗುಳಿವರು...!!
ರಾಮಾಯಣದ ಕಥನದಲಿ
ವನವಾಸವನನುಭವಿಸಿದ್ದು,
ಪತಿ ಪರಾಯಣೆಯಾದರೂ
ಅಗ್ನಿಪರೀಕ್ಷೆಯನ್ನೆದುರಿಸಿದ್ದು
ಸಾಧ್ವೀ ಮಣಿ  ಮಾತೇ ಸೀತೆ...!!
ದುಷ್ಟ ಕೈಕೆಯಿಯೂ ಅಲ್ಲ
ಕನಿಷ್ಠ ಮಂಥರೆಯೂ ಅಲ್ಲ..
ಮಹಾಭಾರತದ ಕರ್ಮಭೂಮಿಯಲಿ
ಧರ್ಮಪರಾಯಣ ಪಾಂಡವರಿಗಷ್ಟೇ ಕಷ್ಟ
ವನವಾಸ ಅಜ್ಞಾತಗಳನನುಭವಿಸಿದರೂ
ತೋಲಗಲಿಲ್ಲ ಅನಿಷ್ಟ..!!
ನ್ಯಾಯನೀತಿಯ ರಾಜ ನೀತಿಯನುನಸರಿಸಿದ 
ವಿದುರಗೆ ಬಡತನದ ಕಷ್ಟ..
ದೇವದೇವನಿಗೂ ತಪ್ಪಲಿಲ್ಲ ವಿಧಿ
ಶ್ರೀರಾಮರಿಗೆ ವನವಾಸವಾದರೆ
ಶ್ರೀಕೃಷ್ಣ ನಿಗೆ ಮಾಯಾವಿ ಮೊಸಗಾರನೆಂಬ ಹಣೆಪಟ್ಟಿ
ಮುಕ್ಕಣ್ಣನಂತೂ ಹಾಲಾಹಲವನೇ ಕುಡಿದ..!!
ಮೂಲೋಕದೊಡೆಯರೇ 
ಕಷ್ಟದಿ ನಲುಗಿದ್ದಾಗ,,, ಮನುಜ..
ನಿನ್ನ ಕಷ್ಟವದು ಹೆಚ್ಚೇನು..?
ಸರ್ವರಿಗೂ  ಉಂಟು ಪರೀಕ್ಷೆ
ಸರಿದಾರಿಯಲಿ ನಡೆದು, ಇರಲಿ
ಉತ್ತೀರ್ಣನಾಗುವ  ನಿರೀಕ್ಷೆ
ಬೇಡ ಪ್ರತಿಪಲಾಪೇಕ್ಷೆ
ಆಗಲೇ ನೀಡುವ  ಆ ದೇವ ಸುರಕ್ಷೆ...

             ಶೈಲೂ.......
[8/4/2022, 11:13 am] Dr. B. N. Shylaja Ramesh: ಚದುರಂಗ
 

ಬಾಳೊಂದು ಚದುರಂಗದಾಟ
ನಿಯಾಮಕನವ ಸೂತ್ರಧಾರ
ನಾವೆಲ್ಲಾ ದಾಳದ ಬೊಂಬೆಗಳು

ನಮ್ಮ ವಿಧಿಲಿಖಿತದಂತಿಹುದು
ನಾವಾಡುವಾ ಪಾತ್ರದಾಟ
ಸೋಲೊ ಗೆಲುವೋ ಅವ ತಾ ಬಲ್ಲ

ಕೆಲವೊಮ್ಮೆ ಸೋಲು ಕೆಲವೊಮ್ಮೆ ಗೆಲುವು
ಅವನ ಹಿಡಿತದಲಿಹುದು ಸೂತ್ರ
ಜೀವನದಲಿಹುದಂತೆ ಏರಿಳಿತ

ಹೂಟವೋ ಮಾಟವೋ ಆಟವೋ
ಆಡಲೇ ಬೇಕಿಲ್ಲಿ ಆಟ 
ತಂತ್ರಕ್ಕೆ ಹೊಸೆದು ಪ್ರತಿತಂತ್ರ

ಗೆಲುವ ಗಮ್ಯ ಸೇರಲಿಹುದು
ಹತ್ತಾರು ಅಡೆತಡೆ ಸವಾಲು
ಚಿತ್ತವಿರಿಸಿ ನುಗ್ಗೆ ಗೆಲುವು ನಿನ್ನ ಪಾಲು

ಸೋಲು ಗೆಲುವಿಹುದು ಸಹಜ
ಹಿಗ್ಗಿ ಕುಗ್ಗುವುದು ಹೇಯ
ಸಮಚಿತ್ತದಲಿ ಬೆರೆಯೆ ಇಲ್ಲ ಅಪಾಯ

ಇಲ್ಲಿ ಅಧಮ ಉತ್ತಮರಿಲ್ಲ
ಎಲ್ಲರೊಂದೆ ಅವನ ಸೃಷ್ಟಿಯಲಿ
ಪ್ರಾಮಾಣಿಕ ವಿಜೇತ ಅವನ ದೃಷ್ಟಿಯಲಿ

ಸೋಲುಗೆಲುವು ನೋವು ನಲಿವು
ಎಲ್ಲರಿಗೂ ಸಮಾನ ಅವನಿತ್ತ ಪಾತ್ರ
ಮುಗಿದೊಡನೆ ಆಟ ಎಲ್ಲ ಅವನಲ್ಲೇ ಮಿಳಿತ

          ಶೈಲೂ........
[8/4/2022, 12:01 pm] Dr. B. N. Shylaja Ramesh: ಮುಖವಾಡಗಳು
**************
ಜಗದ ಈ ಸಂತೆಯಲಿ
ಅದೆಷ್ಟೋ ಮುಖವಾಡಗಳ ಮುಖ
ಮೂರೇ ದಿನದ ಬಾಳೆಂದರಿತರೂ
ಮುಖವಾಡಗಳ ಅಖಾಡವೇ ಸುಖ

ಮೋಸ ನಯವಂಚಕರ
ದುರುಳತನದ ಅಟ್ಟಹಾಸದಲೂ
ತೊಡೆತಟ್ಟಿ ಮೆರೆಯುತಿದೆ
ವಿನಮ್ರತೆಯ ಮುಖವಾಡ

ತನ್ನೆಲ್ಲ ದುಃಖದುಮ್ಮಾನಗಳ ನುಂಗಿ
ಮೌನ ರೋಧನದ ಹಿಂದಿರಬಹುದು
ನರಳಿಕೆಯಲೂ ನಲಿವ ಮನಸಿನ
ನಗು ಮೊಗ ಹೊತ್ತ ಮುಖವಾಡ

ಸಾಧುಸಂತರ ಸೋಗಿನಲೆಷ್ಟೋ
ಗೋಮುಖ ವ್ಯಾಘ್ರರ ದಂಡು
ಸಹಾಯಹಸ್ತದ ಹಿಂದಿರಬಹುದು
ನಯವಂಚಕ ದುರುಳತನದ ಜಾಡು

ಮನೆ - ಮಂದಿರ - ಮಠವೂ ಹೊರತಲ್ಲ
ಮುಖವಾಡದ ದಿರಿಸು ಹೊತ್ತು
ಹಚ್ಚಿ ಕಿಚ್ಚು ದಳ್ಳುರಿಯ ಜ್ವಾಲೆ ವ್ಯಾಪಿಸಿ
ನೆಮ್ಮದಿಯ ಬದುಕಿಗೇ ಕುತ್ತು

ಸುಖ ಲೋಲುಪತೆಯ ಐಸಿರಿ
ಐಷಾರಾಮಿ ಬದುಕಿನಲಿ
ನೆಮ್ಮದಿಗೇ ಬರಸಿಡಿಲು ಬಡಿದು
ಹೊತ್ತಿಹರು ಮೌನದ ಮುಖವಾಡ

ಕಷ್ಟದ ಕರಿನೆರಳ ಛಾಯೆಯಲಿ
ನೆಮ್ಮದಿಯ ನಗುವೆಂಬ ಆಶಾಕಿರಣ
ಝಗಮಗಿಸುವ ಜಗದೊಳಗೆ
ಬಗೆಬಗೆಯ ಮುಖವಾಡದಾಭರಣ

ಬಯಲಾಗಲೇಬೇಕೊಂದುದಿನ
ಅಂಕದ ಪರದೆ ತೆರೆ ಸರಿದೊಡನೆ
ಮುಖವಾಡದಂಕ ಸರಿಯುವುದು
ಜಗದ ಸೂತ್ರಧಾರ ಕರೆದೊಡನೆ

            ಶೈಲೂ.....
ರಮೇಶ ಕೈಗಾ ಅವರ" ಮುಖವಾಡ"  ಕವನದಿಂದ ಪ್ರೇರಿತ ಕವನ...
ಚಿತ್ರವನ್ನೂ ಅವರ ವಾಲಿಂದಲೇ ತೆಗೆದುಕೊಂಡಿದ್ದು
ಥ್ಯಾಂಕ್ಯೂ ರಮೇಶ್ ಸರ್🙏🙏
[13/4/2022, 2:24 pm] Dr. B. N. Shylaja Ramesh: ಸಹಜತೆ ಇರಲಿ
*************

ಕೆಳಗಿಳಿದು ಹರಿಯುವುದೇ
ಜಲದ ನಿಜ ಗುಣವಯ್ಯ
ಜೀವ ಜೀವಗಳುಳಿಸೆ
ಪ್ರಕೃತಿ ಚೇತನಗೊಳಿಸೆ
ಬೀಸುವುದು ಗಾಳಿಯ ಗುಣ
ಹಿರಿದಾದರೂ  ಸರಿಯೇ 
ಕಿರಿದಾದರೂ  ಸರಿಯೇ
ಮುಟ್ಟಿದೊಡನೆಯೇ ದಹಿಸುವುದು
ಅಗ್ನಿಯ ಸಹಜ ಗುಣ
ಭೇಧಭಾವವ ತೋರದಲೇ
ಸರ್ವರಿಗೂ  ಸಮಶಾಖ
ನೀಡುವುದು ರವಿಯ ಗುಣ
ಹರಿಸಿ ಶೀತಲ ಕಾಂತಿ
ಅಳಿಸಿ ಮನದ ಭ್ರಾಂತಿ
ಸರ್ವರಿಗೂ  ತಂಪೆರಲು
ನೀಡುವುದು ಶಶಿಯ ಗುಣ
ಯಾವುದೂ ತೋರದು ಬೇಧವನು
ಮರೆಯದು ತನ್ನ ತನವನು
ಎಲ್ಲರನೂ  ಸಮತೆಯಲಿ
ಕಾಣ್ವುದೇ ಸೃಷ್ಟಿಯ ತತ್ವ
ಆದರೆ.. ಹೀಗೇಕೆ ..ನೀ ಮನುಜ.
ಮರೆತೆ ಮನುಷ್ಯತ್ವ..
ನಿಜಗುಣವ ನೀ   ಮರೆತು
ಪಡೆದೆಯೇಕೆ ಮೃಗೀಯಭಾವ
ದ್ವೇಷಾಸೂಯೆಯ ಪ್ರಭಲ ಕಿಚ್ಚಿನಲಿ
ಸರ್ವರನೂ ದಹಿಸುತ ನೀನೂ  ಭಸ್ಮವಾಗುತಿಹೆ
ಅರಿವಾಗುತ್ತಿಲ್ಲ ನಿನಗೆ ನಿನ್ನ ಅದಃಪತನ
ನೀ ಅಂದುಕೊಂಡಿರಬಹುದು ನೀನೇ ಜಾಣ
ಕಣ್ತೆರೆದು ನೋಡೋಮ್ಮೆ
ಹೃದಯಾಂತರಾಳವನು
ಹರಿಸು ಎಲ್ಲರೆಡೆಗೆ ಮಾನವೀಯತೆಯನು
ಹೃದಯ ಕದವನು ತೆರೆದು
ಅಪ್ಪಿ ಎಲ್ಲರೊನ್ನೊಮ್ಮೆ , ಹರಿಸು
ಕರುಣರಸವ  ಎಲ್ಲರೊಡನೆ
ಸಹಜತೆಯಲಿ ಬಾಳು
ದೂಡು ದ್ವೇಷದ ಹಗೆಯ
ಹೊರದೂಡು ವಿಷಾನಿಲ
ಸಿರಿ ಸ್ನೇಹದ ತಂಗಾಳಿ
ಬೀಸಿ ಬದುಕ ಹಸಿರಾಗಿಸು..

           ಶೈಲೂ......
[16/4/2022, 9:06 pm] Dr. B. N. Shylaja Ramesh: ಆವ ರೂಪದಲುಬಂದರು ಸರಿಯೇ
**************************

ಹೇ ನನ್ನ  ಪ್ರಿಯ ಬಂಧು 
ದೀನ ದಯಾಕರ ಮಾಧವ
ಆಶೀರ್ವದಿಸಿ ತೋರೆನಗೆ
ನಿನ್ನ  ಆವಿರ್ಭಾವ..!

ನೀನಾವ ರೂಪದಲ್ಲಿ
ಬಂದರೂ .ಸರಿಯೇ
ನೀ ನನ್ನವನೆಂಬುದ
ಎಂದಿಗೂ   ಮರೆಯೇ..!

ತಾಯ್ತ0ದೆ  ನೀನೇನು.?
ಭಕ್ತಿಯಲಿ  ಸೇವಿಪೆನು
ಕೆಟ್ಹೆಸರ ತರದಂತೆ
ಕೊನೆವರೆಗೂ ಬಾಳುವೆನು..!

ನೀ ನನ್ನ  ಸಖನೇನು.?
ನನ್ನೇ ಮರೆತು  ಸುಖಿಸುವೆನು
ನೆರಳಂತೆ ನಾ  ನಡೆದು
ಉಸಿರುಸಿರಿನಲಿ ಬೆರೆಯುವೆನು..!

ಬಂಧುವಾದರೆ ನೀನು
ಬಾಂಧವ್ಯ ಬೆಸೆಯುವೆನು
ಜೀವ ಭಾವದೊಳು ನಿನ್ನ
ಅನುಸರಿಸಿ ನಡೆಯುವೆನು..!

ಗೆಳೆಯನಾದೊಡೆ  ನೀನು
ಸವಿ ಸ್ನೇಹ ಹಂಚುವೆನು
ಆಟಪಾಠದೆ ನಲಿದು
ನನ್ನನೇ ಮರೆಯುವೆನು..!

ನೀ ನನ್ನ  ಮಗುವೇನು ?
ತಾಯಿಯಾಗುವೆ ನಾನು
ಮಡಿಲ ತೊಟ್ಟಿಲೊಳಿಟ್ಟು
ವಾತ್ಸಲ್ಯ ಸುಧೆ ಉಣಿಸುವೆನು..!

ನೀ ನನ್ನ  ಗುರುವೇನು ?
ಗೌರವಾಧರದಲೇ ನಾನು
ನೀ ಕಲಿಸಿದ ವಿಧ್ಯೆಯನು
ಆಸ್ಥೆಯಲಿ  ಕಲಿಯುವೆನು..!

ವಿದ್ಯೆಯೇ ನೀನೇನು
ಆದರಿಸಿ ಪೂಜಿಪೆನು
ಮನವ  ಶ್ರದ್ಧೆಯೋಳಿಟ್ಟು
ಕಲಿತು ನಾ  ಕಲಿಸುವೆನು..!

ನೀ  ಹೇಗೆ ಬಂದರೂ ಸರಿಯೇ
 ನೀ  ನನ್ನ ಜೊತೆಯಲಿರು
ದೇಹ ಕಳಚಿ  ಬೀಳುವ  ತನಕ
ಉಸಿರಲೊಂದಾಗಿರು...!

              ಶೈಲೂ.....
[17/4/2022, 6:28 pm] Dr. B. N. Shylaja Ramesh: ಜೀವಾವಧಿ ಶಿಕ್ಷೆ
**************

ಮನದ ಬಾಗಿಲ ಮುರಿದು
ಅಡಿಮೇಲೆ ಅಡಿಯಿಟ್ಟು
ಯಾರಿಗೂ  ಕಾಣದ ತೆರದಿ
ಮೆಲ್ಲನೆ ಒಳನುಸುಳಿ
ಮೈಮನವನಾಕ್ರಮಿಸಿ
ಕದ್ದಿಹೆ  ಎನ್ನಯ  ಚಿತ್ತ....

ಕಳೆದುಕೊಂಡಿಹೆ ನಾ
ಬೆಲೆಬಾಳುವ ಮನವ
ಎಲ್ಲೆಲ್ಲಿ ಹೂಡಿಕಿದರೂ
ಅದರ ಸುಳಿವೇ ಇಲ್ಲ
ಕದ್ದಿರುವೆ.. ನೀ.. ಕಳ್ಳ..
ಎನ್ನ  ಹೃನ್ಮನವನ್ನು....

ಎನ್ನ ಹೃನ್ಮಂದಿರದಲಿದ್ದ
ಭಕ್ತಿಯ ನವನೀತವನು
ಕದ್ದು ಮೆದ್ದಿಹ  ಚೋರ
ಶಿಕ್ಷೆ ಯ ಬಲ್ಲೆಯೇನು.?
ಅಪರಾಧ  ಚಿಕ್ಕದೇನು.?
ಕದ್ದಿರುವೆ ಮನವನ್ನು....

ಪ್ರೀತಿಯ ಬೇಡಿಯ ತೊಡಿಸಿ
ಭಾವಗಳಲಿ  ಬಂಧಿಸಿ
ಮನದ ಕಾರಾಗೃಹದೇ
ನಿನಗೆ.ಜೀವಾವಧಿ ಶಿಕ್ಷೆ..!
ಬಿಡುಗಡೆಯ  ಮಾತಿಲ್ಲ
ಈ ತನುವ  ಕೊನೆವರೆಗೆ..!!

            ಶೈಲೂ.....
[27/4/2022, 12:36 pm] Dr. B. N. Shylaja Ramesh: ಅಳೆಯಾಲರಾದಷ್ಟು ವಿಸ್ತಾರ ನೀಲಗಗನ
ತೇಲುತ್ತ ಸಾಗುತ್ತಿದೆ ವಿಮಾನ ಯಾನ
ಹತ್ತಿಯುಂಡೆಗಳಂಥ ಆ ಬಿಳಿಯ ಮೋಡ
ಆಹಾ... ಕೈಗೆಟುಕುವಂತೆಯೇ ಭಾಸ ನೋಡಾ....
        ಶೈಲೂ.....
[1/5/2022, 1:42 pm] Dr. B. N. Shylaja Ramesh: ಎಲ್ಲಾ ಶ್ರಮಿಕವರ್ಗಕ್ಕೂ ಕಾರ್ಮಿಕ ದಿನಾಚರಣೆಯ ಶುಭಾಶಯಗಳು💐💐💐💐💐

ಕಾರ್ಮಿಕ ದಿನಾಚರಣೆ
*******************

ಬಂಡವಾಳಶಾಹಿಗಳ ಹಿಡಿತದಲಿ
ದುಡಿವ ವರ್ಗವಿದು ನಿತ್ಯ ನರಳುತಲಿ
ಶೋಷಣೆಗೆ ಒಳಪಟ್ಟ ಶ್ರಮಿಕವರ್ಗ
ಸಿಡಿದು ನಿಂತಾಗ ಆಯ್ತು ಕಾರ್ಮಿಕ ಪರ್ವ

ಅನಿರ್ದಿಷ್ಟ ಅವಧಿಯ ದುಡಿತದ ಶ್ರಮ
ಶ್ರೀಮಂತರಿಗಾಗಿಯೇ ದುಡಿವ ಕರ್ಮ
ನಿರಂತರ ಶೋಷಣೆಯ ವಿರುದ್ಧ ಹೋರಾಟ
ಫಲನೀಡಿತ್ತು 8 ಗಂಟೆಗಳ ದುಡಿತದ ಹಠ

ಸರ್ಕಾರದ ಸ್ವಾಮ್ಯದಡಿಯ ಸಂಘಟಿತರು
ಖಾಸಗಿಉದ್ದಿಮೆಗಳಲಿ ದುಡಿವ ಅಸಂಘಟಿತರು
ನಿರ್ಧಿಷ್ಟ ಕೂಲಿಯದು ಗಗನ ಕುಸುಮ
ದಿನಗೂಲಿ ಲೆಕ್ಕದಲೂ ದುಡಿಮೆ ಅಸಮ

ಶೋಷಣೆಯಲೇ ಬದುಕುತ್ತಿರುವ ಕಾರ್ಮಿಕ ಸಂತ
ಅವರ ದುಡಿಮೆಯಲ್ಲಿ ದುಪ್ಪಟ್ಟಾದ ಶ್ರೀಮಂತ
ದುಡಿವವರು ದುಡಿದು ದುಡಿದೂ ಸೋಲು
ಶ್ರಮವಿತ್ತರೂ ಕೊನೆಗೆ ಹಸನಾಗಲಿಲ್ಲ ಬಾಳು

ಇರಬೇಕು ಕಾರ್ಮಿಕರಲಿ ಐಕ್ಯತೆಯ ಮಂತ್ರ
ಶ್ರಮಿಕರಿಗೆ ನೆರವಾಯ್ತು ಒಕ್ಕೂಟ ಸೂತ್ರ
ಬಂಡವಾಳಶಾಹಿ ವಿರುದ್ಧ ಕೂಗು ಹೋರಾಟ
ಕಾರ್ಮಿಕ ದಿನಾಚರಣೆ ಎಂಬ ಆವಿಷ್ಕಾರ

ದುಡಿದು ದುಡಿದೂ ಬಸವಳಿದ ಕಾರ್ಮಿಕ
ಇಂದೊಂದು ದಿನವಾದರೂ ವಿಶ್ರಾಂತಿ ಕಾಯಕ
ಅಮರವಾಗಲಿ ನಿಮ್ಮ ದುಡಿತದ ಫಲದ ಗದ್ದುಗೆ
ಜಯವಾಗಲೀ ಕಾರ್ಮಿಕ ದಿನಾಚರಣೆಯ ಹಾದಿಗೆ

                ಶೈಲೂ.....
[1/5/2022, 1:43 pm] Dr. B. N. Shylaja Ramesh: ಆತ್ಮೀಯ ಗೆಳತಿ ಸಂಧ್ಯಾ ಸುರೇಶ್ ಅವರ ಆಗ್ರಹದ ಮೇರೆಗೆ ಅವರು ಕೊಟ್ಟ ಸಾಲಿಗೆ ನನ್ನದೊಂದು ಕವನ

ಭಾವಗಳ ಉಯ್ಯಾಲೆ
******************

ಮನವೆಂಬ ಸಾಗರದಲೆಗಳ ಮೇಲೆ
ತೂಗುತಿದೆ ಭಾವನೆಗಳ ಉಯ್ಯಾಲೆ
ಒಮ್ಮೆ ಕೆಳಗೆ ಮತ್ತೊಮ್ಮೆಲೇ ಮೇಲೆ
ಜುಳುಜುಳನೆ ಬಂದು ದಡಕ್ಕಪ್ಪಳಿಸಿದಂತೆ ಅಲೆ

ಅಡಗಿದೆ ಮನದ ಶರಧಿಯೊಡಲಲ್ಲಿ
ಭಾವನೆಗಳ ಮುತ್ತುರತ್ನ ಪಚ್ಚೆ ಹವಳ
ಹೆಕ್ಕಿ ತೆಗೆಯಬೇಕು ಮನದಾಳದಿಂದ
ಸಂಯಮವಿರೇ ಹೊಳಪಿಸುವುದು ಸರಳ

ಮನದ ಮಾನಸ ಸರೋವರದೆ
ಮಿಂದೆದ್ದಿದೆ ಭಾವಗಳ ಅಹವಾಲು
ಹೊರಹೊಮ್ಮಲು ಅದೇಕೋ ತಲ್ಲಣ
ಬಿಂಬಸುವ ಚಾಣಾಕ್ಷತೆಗಿಲ್ಲಿ ಸವಾಲು

ಮನದ ನೀಲಾಗಸದಲಿ ಮುಚ್ಚಿದೆ
ಭಾವನಾ ಚಂದ್ರನಿಗೆ ಕಾರ್ಮೋಡ
ಧೃಢತೆಯ ಬಿರುಗಾಳಿಗೆ ಚೆದುರಿದರೆ
ಬೆಳದಿಂಗಳಂತೀ ಭಾವನೆಯು ನೋಡಾ

ಹೊಳೆವ ರವಿಕಾಂತಿಯಂತಿಹುದು
ಈ ಮನದ ಭಾವನೆಗಳ ಸಾರ
ನೋವ ನಿಷೇಯೊಡಲ ಸೀಳಿ
ಬೆಳಕು ತಂದಾಗಲೇ ಸುಖ ಸಂಸಾರ

          ಶೈಲೂ.......
[1/5/2022, 1:43 pm] Dr. B. N. Shylaja Ramesh: ದೇವಕಿಯ  ಅಳಲು
****************

ಬರಿದಾದ ಮಡಿಲು ಹೆತ್ತೊಟ್ಟೆಯ ಅಳಲು
ಯಾರಿಗ್ಹೇಳಲಿ ಸಂಕಟ ಬರೀ ನೋವೇ ಅಕಟಕಟಾ!
ಹೇಳಲಷ್ಟೇ ಅಷ್ಟಪುತ್ರವತಿ.! ಮಾಡಿಲಲ್ಲಾಡದ ದುರ್ಗತಿ.!
ಯಾರಿಗೂ ಬರದಿರಲಿಂಥ ನೋವು ಇದಕ್ಕಿಂತ ಮಿಗಿಲು ಸಾವು

ನನ್ನದೇನಪರಾಧವಿತ್ತು? ವಸುದೇವನ ಮಾಡದಿಯಾದದ್ದು
ವಿಜೃಂಭಣೆಯಿಂದ ನಡೆಸಿದನಣ್ಣ ವಿವಾಹ
ರಾಜಬೀದಿಯಲ್ಲಿ ಮೆರವಣಿಗೆ ಮೇಳೈಸಿತ್ತು ದೇವಲೋಕ ಧರೆಗೆ
ಕಾದಿತ್ತು ವಿಷಾದ..!! ಅಶರೀರವಾಣಿಯದ್ದೇ ಪ್ರಮಾದ.!

ಎನ್ನಷ್ಟಮ ಗರ್ಭಸಂಜಾತ ಅನ್ನ ಕಂಸನ ವಧಾನಿಮಿತ್ತ
ಧರೆಗಿಳಿದು ಬರುವನಂತೆ ಅದೇ ಎನ್ನಣ್ಣಗೆ ಚಿಂತೆ..!!
ಅದಾವ ದೈವದ ಶಾಪ ಕಾಡಿತ್ತೀಗೆಮ್ಮನು ಪಾಪ..!!
ನವವಿವಾಹಿತ ವಧು ನಾನು ಸೆರೆಯಲ್ಲಿಟ್ಟನಣ್ಣ ತಾನು

ಹೆತ್ತ ಒಂದೊಂದೂ ಮಕ್ಕಳನ್ನು ಕೊಂದುಬಿಟ್ಟ ಕಂಸ ತಾನು
ಹೆತ್ತೊಟ್ಟೆಗೆ ಕಿಚ್ಚನಿಟ್ಟು ಮೆರೆದಿದ್ದನವ ಸಂಭ್ರಮಪಟ್ಟು
ಕರುಳಬಳ್ಳಿಯ ಕಡಿದು ಹೇಗಿರಲಿ ನಾ ಉಸಿರ್ಹಿಡಿದು
ಕಾಡಿಬೇಡಿದರೂ ಕೇಳದಾದ ಅಹಂಕಾರದಲಿ ಕುರುಡಾದ

ಮತ್ತೆ ಹೊತ್ತಿದ್ದೆ ಬಸಿರು ಭವಿಷ್ಯವ ನೆನೆದು ನಿಟ್ಟುಸಿರು
ರಾಜಾ ಕಂಸನಿಗೆ ದುಃಸ್ವಪ್ನವಾದ ನನ್ನ ಅಷ್ಟಮಗರ್ಭ
ಭಯವಿಹ್ವಲ.! ಮುಂದೆಂತೊದಗುವುದೋ ಸಂದರ್ಭ
ಮೊರೆಯಿಟ್ಟೆ ದೈವಕೆ ಇದನ್ಹೇಗಾದರೂ ಉಳಿಸು ದೇವ

ಕಿವಿಗೊಟ್ಟನೆನ್ನ ಮೊರೆಗೆ ಅವತರಿಸಿ ಬಂದ ಧರೆಗೆ
ದೇವನಾಣತಿಗೆಲ್ಲ ಸ್ಥಬ್ದ ಬಂಧೀಕಾನೆ ನಿಶ್ಯಬ್ದ..!!
ಆವರಿಸೆಲ್ಲೆಲ್ಲೂ ಮಾಯೆ ಗಾಢ ನಿದಿರೆಯ ಛಾಯೆ.!
ಆ ದೇವ ಕರುಣೆಯ ಕಡಲು ತುಂಬಿತ್ತೆನ್ನ ತಾಯ್ಮಡಿಲು..!!

ಆದರೇನು ಎಲ್ಲವೂ ಕ್ಷಣಿಕ ಕಂದನ ಕೊಂದಾನೆಂಬ ನಡುಕ
ಮಣಿದು ಆ ದೇವನಾಣತಿಗೆ ಕಂದನನ್ನಿಟ್ಟಾಯ್ತು ಯಶೋಧೆ ಮಡಿಲಿಗೆ
ಮಡಿಲಲಿ ಕಂದನಿಲ್ಲದೇ ಮೌನ ಸುರಕ್ಷೆಯಲಿಹನೆಂಬ ಸಮಾಧಾನ
ಅಷ್ಟಪುತ್ರರನ್ನಡೆದ ಪುಣ್ಯವತಿ ಕಣ್ಣೆದುರಿಗಿಲ್ಲ ಸಂತತಿ

ಹೇಗಿರಬಹುದೋ ಕಂದ ಚಂದವಿರಬಹುದು ಮುಖಾರವಿಂದ
ಅಳುತ್ತಿರಬಹುದೇನೋ ಹಸಿದು! ಎಂದರಿತು ಮನ ಮುದುಡುತ್ತದೆ ಮಿಡಿದು
ಜೋಗುಳವಾಡುವ ಭಾಗ್ಯ ಇಲ್ಲವಾಯ್ತೆನಗೆಂತಹ ದೌರ್ಭಾಗ್ಯ.!
ಕಂದನ ಬಾಲಲೀಲೆಯ ಸೊಬಗು ಕಾಣಲಾಗಳಿಲ್ಲೆಂಬ ಕೊರಗು.!

ಮಾಡಿಲೊಳಿತ್ತು ಮಲಗಿಸಿ ಸವಿಲಾಲಿ ಹಾಡ ಕೇಳಿಸಿ
ಬಾನಂಗಳದ ಚಂದಿರನ್ನ ತೋರಿಸಿ ಮುದ್ದು ಮಾಡಿ ಉಣಿಸಿ
ತೊಡರಿ ಬೀಳುವ ಅಂಬೆಗಾಲ ನಡಿಗೆ
ಕಣ್ತುಂಬಿಕೊಳ್ಳುವ ಆ ರಸಘಳಿಗೆ ಇಲ್ಲವಾಯ್ತೆನ್ನ ಪಾಲಿಗೆ

ಹದವಾದ ಬಿಸಿನೀರೆರೆದು ಮಜ್ಜನವ ಮಾಡಿಸಿ
ಜರತಾರಿ ಪೀತಾಂಬರವ ನಡುವಿಗುಡಿಸಿ
ಹೊಳೆವ ಚಂದಾದಾಭರಣಗಳಿಂದಲಂಕರಿಸಿ
ದೃಷ್ಟಿ ತಾಕದಿರಲೆಂದು ಬೊಟ್ಟನಿರಿಸಿ

ಮಮತೆಯ ವಾತ್ಸಲ್ಯಾಮೃತ ಪಾನ ಜೊತೆಗೆ ಸವಿಗಾನ
ತುತ್ತಿಗೊಂದೊಂದು ಕಥನ ಮರೆತು ಮೈಮನ
ತೊದಲ್ನುಡಿಯ ಅಮ್ಮಾ ಎಂಬ ಕರೆಗೆ, ಬೆರಗಾಗಿ ನಿಲ್ಲುವ ಪರಿಗೆ
ವಂಚನೆಯೆಕಾಯ್ತೋ ಅದುಷ್ಟವಿಲ್ಲವೆನಗೆ..!!

ಹೇ ಯಶೋಧೆ ನೀನೆಂತಹ ಭಾಗ್ಯವಂತೆ..!!
ಜಗದೊದ್ಧಾರಕನನ್ನೇ ಲಾಲಿಸುವ ಪುಣ್ಯವಂತೆ.!!
ನನಗಿಲ್ಲದ  ಮಾತೃವಾತ್ಸಲ್ಯದ ಸೌಭಾಗ್ಯ ನಿನಗೆ.!
ಈ ಪರಿಯ ಭಾಗ್ಯವೆಂದೋದಗುವುದೋ ಎನಗೆ.

          ಶೈಲೂ.....
[1/5/2022, 1:44 pm] Dr. B. N. Shylaja Ramesh: ಕಾರ್ಮಿಕರೇ ನಿಮಗಿದೋ ನಮನ
****************************

ಶ್ರಮಿಕರಿದ್ದರೇನೇ ಶ್ರೀಮಂತರು
ಶ್ರಮವಹಿಸಿ ದುಡಿವವರೆ ಕಾರ್ಮಿಕರು
ಕೆಲಸದಲಿ ಮೇಲುಕೀಳೆಂಬ ಭಾವವಿಲ್ಲ
ದುಡಿಯದಿರೆ ಹಸಿದ್ಹೊಟ್ಟೆಗೆ ಅನ್ನವಿಲ್ಲ

ಮಳೆಗಾಳಿ ಎನದೇ ಉತ್ತು ಬಿತ್ತುವನು ರೈತ
ಜಗದ ಜನರಿಗವನೆ ನಿಜದಿ ಅನ್ನದಾತ
ತನಗಾಗದೆಂದು ಹಿಂದೆ ಸರಿದರೆ ಅವ
ತರುವುದೆಲ್ಲಿಂದ ಹೇಳಿ ಹಿಡಿ ಅನ್ನವ?

ಹೊತ್ತು ಸಿಮೆಂಟು ಮರಳು ಜಲ್ಲಿಕಲ್ಲು
ಇಟ್ಟಿಗೆ ಮೇಲಿಟ್ಟಿಗೆ ಪೇರಿಸಿದಾಗ ಮಹಲು
ಕ್ಷಮತೆಯಲಿ ಕಟ್ಟುವನವ ಸುಂದರ ಭವನವ
ಆದರವ ಹರುಕು ಗುಡಿಸಿಲಲ್ಲೇ ವಾಸಿಸುವ

ಹಗಲಿರುಳೆನ್ನದೆ ದುಡಿವ ಸೈನಿಕರು
ಪ್ರಾಣಪಣಕ್ಕಿಟ್ಟು ಕಾಪಿಡುವ ಪಾಲಕರು
ಸಮಾಜವ ನಿರೀಕ್ಷಿಸುವನವ ಆರಕ್ಷಕರ
ಆಪತ್ಕಾಲಕ್ಕಿವನೇ ಸಕಲರ ಜೀವರಕ್ಷಕ

ನಿಜ, ವೈದ್ಯೋ ನಾರಾಯಣೋ ಹರಿಃ.!
ಆರೋಗ್ಯವೇ ಸಕಲ ಭಾಗ್ಯಗಳ ಐಸಿರಿ.!
ದುಡಿವ ಜಗಕೆ ತಾನೂ ಅಭಿಯಂತರ.!
ನಿರಂತರ ನಿಲ್ಲದ ನಡೆಯ ಆವಿಷ್ಕಾರ.!

ಎಲ್ಲರದ್ದೊದ್ದೊಂದೊಂದು ಕಾಯಕ
ಎಲ್ಲವೂ ಒಂದಕ್ಕೊಂದು ಪೂರಕ
ಶ್ರೇಷ್ಠ ಕನಿಷ್ಟವಾವುದೂ ಇಲ್ಲ ತಿಳಿ
ಎಲ್ಲರನ್ನೂ ಗೌರವಿಸುವುದ ಕಲಿ

ಕಾರ್ಮಿಕರೇ ದೇಶದ ದೊಡ್ಡ ಆಸ್ತಿ
ನಾನುನಾನೆಂದು ಮಾಡದಿರಿ ಕುಸ್ತಿ
ಕಾಯಕವಿದು ಎಲ್ಲವೂ ಸರಿ ಸಮಾನ
ಕಾರ್ಮಿಕರೇ ನಿಮಗಿದೋ ನಮನ🙏🙏

               ಶೈಲೂ.......
[5/5/2022, 4:19 pm] Dr. B. N. Shylaja Ramesh: ಮಾತು ಮೌನದ ಹುದುರೊಳಗೆ ಬಂಧಿ
ಮನಸು, ಮಾತು-ಮೌನದ ಜೊತೆ ಇಬ್ಬಂದಿ
[6/5/2022, 9:46 am] Dr. B. N. Shylaja Ramesh: ಶ್ರೀನಾರಸಿಂಹ ನಮಾಮಿ
*********************

ಸ್ಮರಣೆ ಮಾತ್ರದಲೇ ದೇವ
ಬಂದು ಹರಸುತ  ಕಾವ
ಕ್ಷಣಮಾತ್ರದಲೇ ನೋವ
ದಹಿಸಿ ಮುಕ್ತಿಯನೀವ

ಕಂಬದಿಂದುಧ್ಭವಿಸಿ
ಭಕ್ತ ಕಂದನ ಹರಸಿ
ದುರುಳ ರಕ್ಕಸನ ತರಿದು
ಬಂದೆ ನರಹರಿ ಇಂದು

ಮೋಕ್ಷ ಫಲಗಳ ಕೊಡುವ
ಕಲ್ಪತರು ನೀನು
ಜನ್ಮ ಸಫಲವಗೈದು
ಫಲವೀವ ಕಾಮಧೇನು

ಇಹಪರಕೆ ನೀನೇ ಗತಿ
ನೀ ಎನ್ನ ಪ್ರಿಯ ಬಂಧು
ಹರಿಸಿ ಸಂಕಟಗಳನ್ನು
ಕಾಯೋ ಎನ್ನ  ಬಳಿ ಬಂದು

ಉಗ್ರನಾದರೆ  ಏನು
ನೀ ವ್ಯಾಘ್ರನಾದರೂ  ಏನು
ದುರಿತರಾಶಿಯ ತರಿದು
ಪೊರೆವ ನಿನ್ನಾಂತರ್ಯ ಸವಿಜೇನು

ರೂಪವಾದರೂ  ಘೋರ
ಮನವುಕರುಣರಸ ಸಾಗರ
ಪಿತನಂತೆ ಬಂದೆ ಉದಿಸಿ
ಶ್ರೀ ನಾರಸಿಂಹನೆಂದೆನಿಸಿ.

🙏🙏🙏🙏🙏🙏🙏🙏
       ಶೈಲೂ.....

ಶೋಭನಾದ್ರಿ ನಿವಾಸಾಯ
ಶೋಭಿತಾರ್ಥ ಪ್ರದಾಯಿನೇ
ರಾಜಲಕ್ಷ್ಮೀ ಸಮೇತಾಯ
ಶ್ರೀ ನಾರಸಿಂಹಾಯ  ಮಂಗಳಂ
[6/5/2022, 5:24 pm] Dr. B. N. Shylaja Ramesh: #ಬರುವೆಯೇನು.?

ಇಳಿಸಂಜೆ ಸಮಯದಲಿ
ನೆನಪಾಗಿ ಕಾಡುವೆ ನೀನು
ಮರೆತ ಘಟನೆಗಳನ್ನೆಲ್ಲ ಮತ್ತೆ ಕೆದಕಿ
ಹುಸಿ ಮುನಿಸ ಭಾವದಲಿ
ಕಳೆದ ಇರುಳನು ನಾನು
ನೆನಪ ಸಾಮ್ರಾಜ್ಯದಲ್ಲಿ ಸುಖವ ಬೆದಕಿ

ಬರೀ ಕಹಿ ಘಟನೆಗಳೇ
ಎದುರಿಸುತ್ತ ಸಾಗಿದ್ದು
ರಾಶಿ ರಾಶಿ ಸಂಯಮವ ಒಗ್ಗೂಡಿಸಿ
ಹರಿವ ಹೊಳೆ ನೀರಲ್ಲಿ
ಹುಣಸೆಹಣ್ಣು ತೊಳೆದಂತೆ
ಆಯ್ತೇಕೆ ನಮ್ಮೊಲವು ಮಣ್ಣಾಗಿಸಿ

ಅದೆಂಥ ಕಹಿ ಘಳಿಗೆಯೋ
ಸಂಯಮವ ಹಿಮ್ಮೆಟ್ಟಿ
ಘಾಸಿ ಮಾಡಿದೆ ಮನಕೆ ಒಲವ ಮರೆಸಿ
ಗಾಯ ಹಿರಿದಿರುವಾಗ
ಮುನಿದು ನಡೆದರೆ ಹೇಗೆ?
ಸಹನೆಯಿರಬೇಕಿತ್ತು ಕೊಂಚ ಕೋಪ ಮಣಿಸಿ

ಆದರಿನ್ನೂ ಆಸೆ ಒಂದಿನಿತೂ
ಕರಗಿಲ್ಲ ಕೇಳು ಗೆಳೆಯಾ
ನೀನಿತ್ತ ಭಾಷೆಯ ನಿರೀಕ್ಷೆಯಿಹುದು
ನಿನ್ನ ಬೆಚ್ಚಗಿನ ಒಲವ
ಬಿಸಿಯಪ್ಪುಗೆಯನಿತ್ತು
ಸಂತೈಸಲೆಂದು ಮನ ಬಯಸುತಿಹುಸು

ಸರಿಯುತಿದೆ ಈ ಇರುಳು
ತುಂಬು ಬೆಳಕನು ಹರಿಸಿ
ಬೆಳಕಾದೀತೇ ಬಾಳು ಹೇಳು ನೀನು.?
ಮತ್ತಿನ್ನಷ್ಟು ಕಾಯಿಸದೆ
ಭರವಸೆ ಹುಸಿಯಾಗಿಸದೆ
ದಯಮಾಡಿ ಬದುಕಿಗೆ ಬರುವೆಯೇನು.?

         ಶೈಲೂ.....
[7/5/2022, 4:51 pm] Dr. B. N. Shylaja Ramesh: ತವರ ಸೆಳೆತ
***********

ಕಣ್ಮುಚ್ಚಿದರೆ ನನ್ನ ಅಮ್ಮ ಬರುವಳು ಮುಂದೆ
ಅಪ್ಪನದೆ ನೆನಪು ಮನಸ್ಸಿನೊಳಗೆ
ಇಷ್ಟು ವರ್ಷವಾದರೂ ಮರೆತಿಲ್ಲ ತವರ
ಕಟ್ಟಿಹುದು ಕಣ್ಮುಂದೆ ಚಿತ್ರದಂತೆ
ಅಣ್ಣನಾ ವಾತ್ಸಲ್ಯ ನೆನೆದು ಹನಿಗೂಡಿಹುದು ಕಣ್ಣು
ಕೈಬೀಸಿ ಕರೆಯುತಿದೆ ತವರ ಮಮತೆ
ಹೋಗಿ ಬರಲೇನು ನಲ್ಲ ತವರು ಮನೆಗೆ

ನಿಮ್ಮ ಪ್ರೀತಿಯಲೇನು ಹುಳುಕು ಕಾಣುತ್ತಿಲ್ಲ
ಸ್ವರ್ಗವಿಹುದು ನಿಮ್ಮ ತೋಳಿನೊಳಗೆ
ತವರ ಮರೆಸುವ ಪ್ರೀತಿ ನೀಡಿದರೂ 
ನಲ್ಲ ಮರೆಯಲಾರೆನಾ ತವರ ಸೆಳೆತ
ಪ್ರತಿಯುಸಿರಿನಲ್ಲೂ  ನೆನೆಯುವಳು ನನ್ನಮ್ಮ
ತುತ್ತಿ ಗೊಂದಿಷ್ಟು ನಲ್ಲ ನನ್ನ ಮಾತೇ
ಮರೆಯಲಾಗುತ್ತಿಲ್ಲ ಹೋಗಿ ಬರಲೇನು ತವರುಮನೆಗೆ

ಇಲ್ಲಿ ಕೊರತೆ ಇಹುದೇನೆಂದು ಕೇಳದಿರಿ
ನಿಮ್ಮ ಮಡಿಲಲ್ಲಿ ನಾನು ಚಿಕ್ಕ ಮಗುವೇ
ತವರಿನಲ್ಲಿದ್ದಂತೆ ಸ್ವತಂತ್ರ ವಿಹುದಿಲ್ಲಿ
ನಿಮ್ಮಆಶ್ರಯದಲ್ಲಿ ನಾನು ಪರಮ ಸುಖಿಯು
ತಾಯಿ ಪ್ರೀತಿಯೇ ಬೇರೆ ತಂದೆ ಮಮತೆಯೇ ಬೇರೆ
ಅಳೇಯಲಾಗದು ಅದನು ತೂಕ ಮಾಡಿ
ಹೋಗೊಮ್ಮೆ ಬರಲೇನು ತಾಳಲಾರದು ಮನವು
ಕಟ್ಟಿ ಎಳೆಯುತ್ತಿದೆ ತಾಯ ಕರುಳಬಳ್ಳಿ.

         ಶೈಲೂ......
[8/5/2022, 5:21 pm] Dr. B. N. Shylaja Ramesh: ಗುಣಿತಾಕ್ಷರ ಕವನ##

 *ಮ  ಯಿಂದ ಮಂ ವರೆಗೆ* 

 *ಮ  ಕಾರದಲ್ಲಿ  ಮಾಧವ*
************************

ಮನದಲಿ ನಿಂತ ಮಮತೆಯ ಮೂರ್ತಿ
 *ಮಾಧವಾ* ಸದಾ ನಿನದೇ ನೆನಪು
ಮಿಡಿವ ಮನದಲಿ  ನೆಲೆನಿಂತವ ನೀನು
ಮೀಟುತಿಹೆ ಸುಶ್ರಾವ್ಯದಿ ಹೃದಯ ವೀಣೆಯನು
ಮುದ ನೀಡುತಿದೆ ನಿನ್ನ ಮುರಳೀಗಾನ
ಮೂಡುತಿದೆ ಮನದಲಿ ನಿನ್ನೊಲವ ಗಾನ
ಮೃದು ನುಡಿಗಳಕ್ಕರದ  ಭಾವದಲಿ
ಮೆಲ್ಲ ಮೆಲ್ಲನೆ ಜಾರುತಿದೆ ಮನಸು
ಮೇಳೈಸಲಿ ನಮ್ಮೀಒಲವ ರಂಗಮಂಚ
ಮೈಮರೆತಿರುವೆ ನಿನ್ನನುಭಾವದಲ್ಲೇ ನಾ
         ಮೈದೋರು ದೊರೆಯೇ
ಮೊಗದ ತುಂಬೆಲ್ಲ ನಸುನಗೆಯ ಭಾವ
ಮೋಹನ ನಿನ್ನೀ ಮೋಹಕ ರೂಪದ ಪ್ರಭಾವ
ಮೌನ ರೂಪಕವಾದೆ ನಾ ಮರೆತೆಲ್ಲ ಮಾತುಗಳ
ಮಂದಿರವಾಯ್ತೆನ್ನೆದೆಯು ನಿನಗಾಗಿ
           ಮಹಾ ಮಹಿಮ ಮುನಿಸು ತೋರದೆ 
           ಬಾರೆನ್ನ ಹೃನ್ಮ0ದಿರಕೆ....

         ಶೈಲೂ......
[8/5/2022, 5:21 pm] Dr. B. N. Shylaja Ramesh: ಇಂದಿನ ನನ್ನ ಪದ 
ಅಮ್ಮ##

ಅಮ್ಮ ಎಂದರೆ ಒಂದು ಶಕ್ತಿ ಸಂಚಯ
ನೆನೆಯುತ್ತಲೇ ಮನಸಲ್ಲಿ ವಿದ್ಯುತ್ಪ್ರವಾಹ
ಮಿಡಿದಂತೆ ಸಾವಿರ ತಂತಿ ವೀಣೆ
ಜೀವನೋತ್ಸಾಹ ಅಮ್ಮ ನಿನ್ನಿಂದ ತಾನೇ

ಕೋಟಿ ದೇವರಿಗೂ ಮಿಗಿಲು ಅಮ್ಮಾ
ನೀ ಕಣ್ಮುಂದಿರುವ ದೈವ  ನಿಜದಿ
ಉಸಿರ ಏರಿಳಿತದಲೇ ಅರಿವೆ
ಕರುಳಕುಡಿಗಳ ನೋವು ಸಂಕಟದ ಛಾಯೆ

ತಪ್ಪಿ ನಡೆಯದಂತೆ ತಿದ್ದಿ ತೀಡಿದವಳು
ಅಪ್ಪಿ ಸಕಲರ ಜಗಮೆಚ್ಚುವಂತೆ ನಡೆದವಳು
ಗುರು ದೈವ ಸಖ ಒಡನಾಡಿ ನೀನಾಗಿ
ಹಗಲಿರುಳು ಶ್ರಮಿಸುತ್ತ ಮಗುವ ಕಾಯ್ದವಳು

ಹೋಲಿಸಲಾದೀತೆ ಅಮ್ಮನಿಗೆ ಬದಲು
ಯಾರಿರುವರಂಥವರು ಅವಳ ಮೀರುವವರು
ದೇವನೂ ಎಲ್ಲೆಡೆ ಇರಲಾರದಾಗದೆಂದು
ಮಮತೆ ಮೂರ್ತಿಮಾತೆಯ ಸೃಜಿಸಿದನಂತೆ

ಹೇಳಲಾದೀತೆ ಅಮ್ಮ ನಿನ್ನ ಗುಣಗಾನ
ನೆನೆದೊಡನೆಯೇ ಮಾಡಿದಂತೆ ಅಮೃತಪಾನ
ಎಂತು ತೀರಿಸಲಿ ಮಾತೇ ನಿನ್ನ ಋಣವ
ಮರೆಯಲಾದೀತೆ ಆಮ್ಮಾ ಮಡಿಲೋಳಾಡಿದ ಸುಖವ
               ಶೈಲೂ
[8/5/2022, 5:22 pm] Dr. B. N. Shylaja Ramesh: ## ಇಂದಿನ ನನ್ನ ಸಾಲು ##

ಚಿನ್ನಾ..ನೀನನ್ನ ಹೃದಯದರಸಿ
ಎಂದು ಬರುವೆ ಬಾಳ ಬೆಳಕಾಗಿಸಿ
ನೀನಿಲ್ಲದೇ ಬದುಕೇಕೋ ಕಸಿವಿಸಿ
ನೆನೆವೆ ಪ್ರತಿದಿನವೂ ಮನದೊಳಿರಿಸಿ

ಇಂತುಲಿದು ಹೃದಯ ಕದವ ತಟ್ಟಿದ್ದ
ನನ್ನವನ ನೆನೆಯುತ್ತಾ ಭಾವುಕಳಾಗಿದ್ದೆ
ಪ್ರೇಮಪೂರಿತ ತೆರೆದ ಹೃದಯದಿಂದ
ಅವನ ನಲ್ನುಡಿಗಾಗಿ ಕಾತರಿಸುತ್ತಿದ್ದೆ

ಅವನೊಲುಮೆಯ ಸಿರಿಗೆ ಚಾತಕ ಪಕ್ಷಿಯಂತೆ  
ಅವನ ಬರುವಿಗಾಗಿ ಕಾಯುತ್ತಾ ಕುಳಿತೆ
ಕನಸಿನ ಲೋಕದಲ್ಲಿ ವಿಹರಿಸುತ್ತಾ ಮೂಕಳಾದೆ
ಹೃದಯ ಮಂದಿರದಲ್ಲವನ ಪೂಜಿಸಿದೆ

ಬಂದೇ ಬಿಟ್ಟಿತಿಂದು ಆ ಶುಭಗಳಿಗೆ
ಒಲವಿನ ಪೂಜಾಫಲ ಫಲಿಸಿದ್ದ ಗಳಿಗೆ
ಹೆಜ್ಜೆಯನ್ನನುಸರಿಸಿ ಇಡಲು ಸಪ್ತಪದಿ
ಕಂಡ ಕನಸು ನನಸಾಯ್ತು ಸರಿದು ಬೇಗುದಿ
              ಶೈಲೂ.........
[8/5/2022, 5:23 pm] Dr. B. N. Shylaja Ramesh: ನನ್ನ ಸಾಲು##

ತಾಯಿ ಋಣ
************

ಒಂದೊಂದಾಗಿ ಚುಕ್ತಾ 
ಮಾಡಲು ಲೆಕ್ಕ ಹಾಕಿದೆ
ಸೋತೆನು ತಾಯೇ ನಿನ್ನ ಋಣದ
 ಲೆಕ್ಕ ಮುಗಿಲು ಮುಟ್ಟಿದೇ

ಗರ್ಭದಲಿರಿಸಿ ನವಮಾಸಗಳು
ನಲ್ಮೆಯಲಿ ಪೋಷಿಸಿದೆ
ನಿರ್ಜೀವ ಪಿಂಡಕೆ ರಕ್ತ ಮಾಂಸವ
ಬಸಿದು ಜೀವ ತುಂಬಿಸಿದೆ

ಜೀವದ್ಹ ಂಗನು ತೊರೆದು
ಜೀವವಿತ್ತು ಭುವಿಗೆ ಕರೆತಂದೆ
ಅಪ್ಪಿ ಬಿಗಿದಪ್ಪಿ.ಹರಸಿ
ಅಮೃತವಿತ್ತು ಪಾಲಿಸಿದೆ

ಮುದ್ದುಮಾಡಿ ರಮಿಸಿ ಕೈತುತ್ತು
ಉಣಿಸಿ ಪ್ರೀತಿಯಿಂದ ಬೆಳೆಸಿದೆ
ಬಿದ್ದಾಗ ಎತ್ತಿ  ಕಣ್ತುಂಬ ಅತ್ತು
ಕೈಹಿಡಿದು ಸರಿಯಾಗಿ ನಡೆಸಿದ್ದೆ

ತೊದಲ್ನುಡಿಯಲ್ಮೊದಳು ಅಮ್ಮಾ
ಎಂದಾಗ ನಕ್ಕು ಸಂಭ್ರಮಿಸಿ ಕುಣಿದಿದ್ದೆ
ತಿದ್ದಿ ತೀಡಿ ಕೈಹಿಡಿದು ಬರೆಸಿ
ಮೊದ್ಲಗುರುವು ನೀನಾದೆ

ಸೋತಾಗ ಸಂತೈಸಿ ಗೆದ್ದಾಗ ಹರಸಿ
ಸಾಧನೆಗೆ ಸೇತುವಾದೆ
ಯಶದ ಮೆಟ್ಟಿಲೊಂದೊಂದೆ ತುಳಿದಾಗ
ಆನಂದಭಾಷ್ಪ ಹರಿಸಿದ್ದೆ

ನಿನ್ನ ಮಮತೆಯ ಹೊಳೆಗೆ
ಎಣೆಯಾವುದು  ಮಾತೇ
ಸರಿಸಮವೇ ಸಕಲರ ಪೊರೆವ
ದೇವ ಗಂಗೆ ತುಂಗೆ ಕಾವೇರಿ

ತಪ್ಪನ್ನುಮನ್ನಿಸಿ ಕೈಹಿಡಿದು ನಡೆಸಿದ ನಿನಗೆ
ಸಾಟಿಯೇನೆ ಈ ಕ್ಷಮಯಾಧರಿತ್ರಿ
ಎಲ್ಲೆಡೆ ಇರಲಾರನಂತೆ ದೇವನು
ಆ ದೇವನ ಪ್ರತಿರೂಪ ನೀನು

ಭುವಿಗಿಳಿಸಲು ಪಟ್ಟ ಸಂಕಟಕೆ ಲೆಕ್ಕವಿಡಲಾದೀತೇ?
ಜೀವವುಳಿಸಲು ಸ್ರವಿಸಿದ
 ಜೀವಾಮೃತವ ಮರೆಯಲಾದೀತೆ?
ಅಮ್ಮಾ ನಿನ್ನ ಋಣವ ನಾ ತೀರಿಸಲಾದೀತೆ.?

ನಿದ್ದೆಗೆಟ್ಟು ಮಾಡಿದ್ದ ಆರೈಕೆಯ
ಶ್ರಮವ ಎಣಿಸಲಾದೀತೆ.?
ಸಹಿಸಿ ಮಾನಾಪಮಾನಗಳ 
ಸುರಿಸಿದ್ದ ಬೆವರ ಲೆಕ್ಕವಿದಲಾದೀತೆ.?

ಆ ದೇವನಿತ್ತ ಪುಣ್ಯದ ಫಲ ನೀನೆನಗೆ
ವಾತ್ಸಲ್ಯಮಯೀ ತಾಯಿ ನೀನೇ ದೈವವೆನಗೆ
ಮಮತೆ ವಾತ್ಸಲ್ಯದ ಪರಿಯ ಮರೆಯಲಾದೀತೆ
ಹೆತ್ತೊಡಲ ಋಣವ ತೀರಿಸಲಾದೀತೆ.?

             ಶೈಲೂ......
[8/5/2022, 5:24 pm] Dr. B. N. Shylaja Ramesh: #ನನ್ನ ಸಾಲು#

ಮನಸು ಅನ್ನೋದು  ಹೊಸ ಕನಸುಗಳ
ಸೃಷ್ಟಿಸುವ ಕಾರ್ಖಾನೆ
ನಿನ್ನ ಕುರಿತ  ಕನಸುಗಳಿಂದಲೇ
ತುಂಬಿದೆ ಈ ನನ್ನ ಖಜಾನೆ

ನನ್ನ ನಿನ್ನ ಬಂಧಿಸಿದ್ದು
ನಿರ್ಮಲ ಪ್ರೀತಿ ಪ್ರೇಮಾನೆ
ಆ ಬಂಧನದೊಳಗಾನಂದ
 ಚಿಮ್ಮುತ್ತಿದೇ ಇದು ನಿಜಾನೇ..

ಖಜಾನೆಯೊಳಗಡಗಿಹುದು
ನಿನ್ನ ನೆನಪೆಂಬ ಮುತ್ತು ರತ್ನ
ಅದ ಹೆಕ್ಕಿತಂದು ಅಭಿಮಾನದಿ
ಅಪ್ಪಿದಾಗ ಉಲ್ಲಾಸ ತನುಮನ

ಮನದ ಕಾರ್ಖಾನೆಯಲ್ಲಿ ಉಗಮ
ಹೊಸ ಹೊಸ ಹೊಂಗನಸ ಸರಕು
ನಿನ್ನೊಡನಾಟದಲಿ ಬಿಕರಿಯಾದಾಗಲಷ್ಟೇ
ಆ ಸರಕಿಗೊಂದು ಮೆರಗು

ಮೆರಗು ತುಂಬುವ ಸರದಾರ
ನನಸಾಗಿಸಲು ನೀನೆಂದು ಬರುವೆ
ನಿನ್ನಾಗಮನದ ಹೊಂಗನಸ ಕಾಣುತ್ತಾ
ನಿನಗಾಗಿಯೇ ಕಾಯುವೆ.....

        ಶೈಲೂ.......
[8/5/2022, 5:25 pm] Dr. B. N. Shylaja Ramesh: # ನನ್ನ  ಸಾಲು #

ಮೌನದ ಸತ್ಯವಾಗಿಹಳು ಧರಿತ್ರಿ
ತಾಳ್ಮೆಯ ಪ್ರತಿರೂಪದ ಪವಿತ್ರಿ
ಪರಮ ಪಾವನೆ ನಿತ್ಯ ಹರಿದ್ವರ್ಣೆ
ಚರಾಚರಕೆ ಅನ್ನವೀವ ಅನ್ನಪೂರ್ಣೆ

ಸಕಲ ಚರಾಚರದ ದಿವ್ಯನೆಲೆ
ಸರ್ವರ ಸಲಹುವ ನಿರ್ಮಲೆ
ಶ್ರೀಹರಿಯರಸಿ ಭೂದೇವಿ
ಸಿರಿಸಂಪದವೊಡಲೊಳಗಡಗಿಸಿಹ ಶ್ರೀದೇವಿ

ಬಡಬಾಗ್ನಿಯೂ ಉಂಟು ಒಡಲಲ್ಲಿ
ಆದರೂ ಆಧರಿಸಿ ಪೊರೆವಳು ಮಡಿಲಲ್ಲಿ
ಜೀವಜಲವನೊತ್ತ ಸರ್ವಮಾನ್ಯೇ ಮಾನಿನಿ
ಸಕಲರ ಉದ್ಧರಿಸಿ ಕಾಪಿಡುವ ಧಾರಿಣಿ

ಅದೆಷ್ಟು ನೆತ್ತರರಿಯಿತೋ ಇವಳಿಗಾಗಿ
ನಾನು ನನ್ನದೆಂಬ ಸ್ವಾರ್ಥ ಲಾಲಸೆಗಾಗಿ
ಹೆತ್ತಮ್ಮನಂತೆ ಮನ್ನಿಸಿದಳು ಹರಸಿ
ಅದಕ್ಕೆಂದೇ ಹೆಸರು ಕ್ಷಮಯಾಧರಿತ್ರಿ..!!

           ಶೈಲೂ......
[8/5/2022, 5:26 pm] Dr. B. N. Shylaja Ramesh: ಚಲಿಸುವ ಮೋಡಗಳು
*******************

ಹತ್ತಿಯುಂಡೆಯಂಥಾ ಮೋಡ
ಮೆತ್ತನೇ ತಾ ಚಲಿಸಿ
ನಭಕೆ ಚಿತ್ತಾರ ಬರೆದಿದೆ ನೋಡಾ
ರವಿಯ ಪ್ರಖರ ಕಿರಣ
ತನ್ನೊಳಗೆ ಪ್ರತಿಫಲಿಸಿಸಿ
ಹೊಳೆದು ಮೋಡಿ ಮಾಡಿದೆ ನೋಡಾ

ಪ್ರಖರತೆಯ ಬಿಸಿಲಿಗೆ
ಮೈಯೊಡ್ಡಿ ತನ್ನನೇ
ನೀಡುತಿದೆ ಭುವಿಗೆ ನೆರಳು
ಬಿಳಿಮೋಡದಂಚಿಗೇ 
ಕಾರ್ಮೋಡ ತಾ ಸೇರಿ
ಶೋಭಿಸುತ್ತಿದೆ ಬಿಚ್ಚಿದಂತೆ ಹೆರಳು

ಮುಗಿಲ ಒಡಲೊಳಗೆ
ಮೋಡಗಳ ಕದನ
ಒಂದಕ್ಕೊಂದು ಬಡಿದು
ಗುಡುಗುಡಿಸಿ ತಾ ಗುಡುಗು
ನಡುವಲ್ಲಿ ಮಿಂಚ್ಹೊಳೆದು
ಧೋ ಎಂದು ಮಳೆಯು ಸುರಿದು

ಭುವಿಯ ತಂಪಾಗಿಸಿ
ಕೆರೆಕಟ್ಟೆ ನದಿ ಹೊಳೆ ಹಳ್ಳ
ಮೈದುಂಬಿ ಹರಿಯುವಂತೆ
ಭೂತಾಯಿಯೊಡಲಲ್ಲಿ
ಭರವಸೆಯ ಕುಡಿ ಚಿಗುರಿ
ನಾಡೆಲ್ಲಾ ನಳನಳಿಸುವಂತೆ

ಮೋಡಿ ಮಾಡಿದೆ ನೋಡ
ಜಗದುಸಿರು ನೀ ಮೋಡ
ಕಾಲಕಾಲಕ್ಕೆ ನೀ ಘನೀಭವಿಸು
ಇಳೆಯು ತಾ ಒಣಗಿ
ಜೀವ ಜಲ ಕುಸಿಯದಂತೆ
ಭಾವೋತ್ಕರ್ಷದಿ ಸ್ರವಿಸು..

               ಶೈಲೂ....
[8/5/2022, 5:27 pm] Dr. B. N. Shylaja Ramesh: ಕವಿತೆ
*****

ಕಲ್ಪನೆಗೆ ಜೀವ ತುಂಬಿ
 ಬರೆದಾಗಲಷ್ಟೇ ..ಕವಿತೆ..!!

ಭಾವನೆಗಳ ಬಿಂಬಕ್ಕೆ 
ಬಣ್ಣ ಬಳಿದಾಗಲಷ್ಟೇ...ಕವಿತೆ...!!

ಸತ್ಯಾಸತ್ಯತೆಯ ಭಾವವಿಲ್ಲದಿದ್ದರೂ
ಸತ್ವಯುತ ಪದಪುಂಜ.... ಕವಿತೆ....!!

                        ಶೈಲೂ.....
[8/5/2022, 5:27 pm] Dr. B. N. Shylaja Ramesh: ಮರೆಯಲಿ ಹೇಗೆ ?
**************
ಮಧುರ ನೆನಪುಗಳ 
ಕಿತ್ತೊಗೆದು ಬಿಸುಟು
ಮರೆತು ನೆಮ್ಮದಿಯಲಿ
ಇ.. ರು..ವು..ದಾ.. ದ..ರೂ..
ಹೇಗೇಳು..??

ಮರೆಯಲಾದೀತೆ ಜೀವವ
ತೊರೆಯಲಾದೀತೆ ಉಸಿರ
ಮರೆತಂತೆ ನಟಿಸಲೊಲ್ಲೆ
ಮದುರಕ್ಷಣಗಳ ಮೆಲುಕುತ್ತಾ
ಇ.. ರು..ವು..ದ..ರ..ಲ್ಲೇ..
ಸವೆಸುತ್ತೇನೆ ಬಾಳು..

               ಶೈಲೂ.......
[8/5/2022, 5:28 pm] Dr. B. N. Shylaja Ramesh: ಆತ್ಮ ವಿಶ್ವಾಸ
***********

ಬರಡು ನೆಲವಾದರೇನು
ಬಲಕ್ಕೆ ಬರವಿಲ್ಲ
ಬದುಕೇ ತೀರುವೆ
ಭರವಸೆಯುಂಟು  ನನಗೆ

ಅವಕಾಶಗಳಿರಬೇಕು ನಿಜ
ಇಲ್ಲದಿದ್ದರೂ ಆಶಾಕಿರಣವಿರಬೇಕು
ಗೆದ್ದೇಗೆಲ್ಲುತ್ತೇನೆಂಬ  ಛಲ ಬೇಕು
ನಮ್ಮ.ಶಕ್ತಿಯಲ್ಲಿ ನಂಬಿಕೆಯಿರಬೇಕು

ಅವಕಾಶದ ಹಾದಿಯ ಹುಡುಕಬೇಕು
ಆಶಾವಾದದಲಿ ಮುನ್ನುಗ್ಗಬೇಕು
ಅಡೆತಡೆಯ ಮೀರಿ ಬೆಳೆಯಬೇಕು
ಆತ್ಮವಿಶ್ವಾಸ ಗಳಿಸಬೇಕು

ಬೆಳೆಯುವ ಸಿರಿ ಮೊಳಕೆಯಲ್ಲಿ
ಚಿಗುರೊಡೆವ ಕನಸು ಮನದಲ್ಲಿ
ಕನಸು ನನಸಾಗಿಸುವ ಛಲವಿರಲಿ
ಆತ್ಮ ಬಲದ ಮೇಲೆ ನಂಬಿಕೆಯಿರಲಿ

ತೆರೆದಿದೆ ಸದವಕಾಶದ ಬಾಗಿಲು
ಏರು ಎತ್ತರೆತ್ತರಕ್ಕೆ ಮುಗಿಲು
ವಿಫುಲಾವಕಾಶ ಕಾದಿದೆ ನಮಗೆ
ಛಲವಿದ್ದರೇನೇ‌  ಬಲವು ಗೆಲುವಿಗೆ   
            ಶೈಲೂ....
[8/5/2022, 5:29 pm] Dr. B. N. Shylaja Ramesh: ಇಂದಿನ ಥೀಮ್ ಬರಹಕ್ಕೆ ನನ್ನದೆರಡು ಸಾಲುಗಳು
*****************************************

ಹೇಗೇ ಇರಲಿ ಅದು ನನ್ನ.ತವರು ಮನೆ
ನನ್ನ ಪಾಲಿಗೆ ಅದುವೇ .ಅರಮನೆ..!

ಅಪ್ಪ ರಾಜನಿಗಿಂತೇನು ಕಡಿಮೆಯಿಲ್ಲ
ಅಮ್ಮ ರಾಣಿಯಾದರೂ ರಾಣಿಯಲ್ಲ

ಕಷ್ಟ ಸುಖವೇನಿತ್ತೋ ಅದರ ಅರಿವಾಗಲೇ ಇಲ್ಲ
ರಾಜಕುಮಾರಿಯಂತೆಯೇ ಬೆಳೆಸಿದರಲ್ಲ

ಮುರುಕು ಮಾಡಾದರೂ  ಸರಿಯೇ
ಬೆಳೆದ ತವರು ಅರಮನೆಗಿಂತಲೂ ಬೆಲೆಯೇ..!

ಅದೆಷ್ಟು ಕನಸುಗಳು ಉದ್ಭವಿಸಿದವಿಲ್ಲಿ
ನನಸಾಗಿಸಲು ಚೆಲುವ ಮನಸುಗಳು ಹರಸಿದವಿಲ್ಲಿ

ಇರಬಹುದೇನೋ ತಿಂದುಡಲು ಬಡತನ
ಪ್ರೀತಿಯಲ್ಲಿಹುದು ಅಳೆಯಲಾರದ ಸಿರಿತನ

ಚಂದದಿ ಹಬ್ಬಿಹರಡಲಿ ತವರ ಕರುಳ ಬಳ್ಳಿ
ಪ್ರೀತಿಯೊಸಗೆಯ ಮನಸುಗಳಿಗೆ ಆಸರೆಯಾಗಲಿ 

ಹೇಗೆ ಇರಲಿ ಅದೆನ್ನ ತವರುಮನೆ
ನನ್ನ ಪಾಲಿಗದುವೇ ಪ್ರೀತಿ ತುಂಬಿದರಮನೆ
........      ಶೈಲೂ.......
[8/5/2022, 5:30 pm] Dr. B. N. Shylaja Ramesh: ಇದು ನನ್ನ ಸಾಲು

ಅಂತರಾಳದಲ್ಲಿ ನೋವಿದೆ
ಆದರೂ ಮೊಗದಲ್ಲಿ ನಗುವಿದೆ
ನೋವನ್ನ ತೋರಿಸಿಕೊಳ್ಳಲಾಗದೆ
ನಗುವನ್ನು ಮೊಗದಲ್ಲಿ ತುಂಬಿದೆ

ನೊಂದ ಜೀವದ ಅಳಲು ನೂರಿದೆ
ಸಾಂತ್ವನದ ಹೆಗಲೊಂದು ಬೇಕಿದೆ
ನೀನಿರದೆ ನೋವಿಗೆಲ್ಲಿ ಕೊನೆಯಿದೆ
ನಗುನಗುತ ನೀ ಬಳಿ ಬರಬಾರದೇ
              ಶೈಲೂ....
[8/5/2022, 5:30 pm] Dr. B. N. Shylaja Ramesh: ಮನವೆಲ್ಲಾ ಬೃಂದಾವನದ ಕಡೆ
**************************
ಸಂಜೆಯಾಗುತಿದೆ...
ಮನವೆಲ್ಲಾ ಬೃಂದಾವನದ ಕಡೆ
ದೂರದಲೆಲ್ಲೋ ಕೊಳಲಿನ ನಾದ
ಅನುರಣಿಸಿ ಕೂಗಿ ಕರೆಯುತಿದೆ
ತಮಾಲವೃಕ್ಷ ಗಳ ಕಡು ಕಪ್ಪುಬಣ್ಣ
ಕೃಷ್ಣ ನಿದ್ದಂತೆಯೇ ತೋರುತ್ತಿದೆ
ಅದಕೊರಗಿ ತಾ ಕೃಷ್ಣ ಉಲ್ಲಾಸದೊಳ್
ಮುರಳಿ ನುಡಿಸಿದಂತೆನಿಸುತ್ತಿದೆ
ದಟ್ಟಡವಿಯಲಿ  ಇಳಿದು
ಇರುಳು ಕವಿಯುತಿದೇ
ಮಾಧವ ನ ಕಪ್ಪನೆಯ ಸುರಳಿ
ಕೂದಲಿಹುದೆಂತೆನಿಸುತ್ತಿದೆ
ತುಟಿಗಿತ್ತು ಕೊಳಲು ಉಸಿರ ತುಂಬುತ
ಮೋಹನ ರಾಗದೆ ಎಳೆದೆಳೆಯುತ್ತಿದೆ
ತಿಳಿಮೊಡದಂಚಿನಿಂದ
ಬೆಳದಿಂಗಳ ಮಳೆ ಸುರಿಯುತಿದೆ
ಯಮುನಾಂತರಂಗದಲ್ಲಿ ರಾಧಾ -- ಮಾಧವರ
ವಿನೋದ ಹಾಸ ಉಕ್ಕುತಿದೆ
ಕೊಳಲಿನುಲಿಯಲಿ ಬೆರೆತು ತನ್ನನೇ ಮರೆತು
ಗುನುಗಿ ನವರಾಗದ ಪಲುಕು ಈ ಜಗವನಾವರಿಸಿದೇ
ಎಂಥ  ಚಂದದ ನೋಟ ಮೈಮರೆತು ನಲಿವಾಟ
ಸೂತ್ರಧಾರನ ಕೈಚಳಕದಲಿ
ಜಗವೇ ಮೈಮರೆತು ಕುಣಿಯುತಿದೆ..

       ಶೈಲೂ......
[8/5/2022, 5:31 pm] Dr. B. N. Shylaja Ramesh: ನಾಗೇಶ್ M. N. ಸರ್ ರವರ  "ಇಷ್ಟೇ ನೋಡಿ ಜೀವನ"  ಕವನದಿಂದ ಪ್ರೇರಿತ...!!!
             ಥ್ಯಾಂಕ್ಯೂ ನಾಗೇಶ್ ಸರ್🙏🙏
ಭೋಜನ
********

ಪ್ರತಿದಿನ ಅನ್ನ ಸಾರು
ಜೊತೆಗೊಂದೆರಡು 
ಉಪ್ಪಿನಕಾಯಿ ಚೂರು
ಕೊನೆಗೆ ಮಜ್ಜಿಗೆ ಮೊಸರು
ದಿನನಿತ್ಯದ ಭೋಜನ
ಬೇಕಿಲ್ಲ ಬೇರೆ ವ್ಯಂಜನ....

ಸೊಪ್ಪು ತರಕಾರಿಗಳ ಹುಳಿ
ಸಮವಿರೆ ಉಪ್ಪು ಖಾರ ಹುಳಿ
ಪಕ್ಕದಲ್ಲೊಂದು ರಾಗಿ ಮುದ್ದೆ
ಮೆದ್ದು  ಮಲಗಿದರೇನು ಗೊತ್ತೇ..?
ಎಚ್ಚರಾಗದ ಸವಿ ಸವಿ ನಿದ್ದೆ
ಸಾಕಲ್ಲವೇ ನೆಮ್ಮದಿಗಿಷ್ಟೇ....

ಜೋಳದ ಖಡಕ್ ರೊಟ್ಟಿ
ಸುತ್ತ ಮುತ್ತ ತರಾವರಿ ಚಟ್ನಿ
ಹೆಸರು  ಹಲಸಂದಿ ಪುಂಡಿ ಪಲ್ಲೆ
ಗುಂಡು ಬದನೆ ಎಣ್ಣೆಗಾಯಿ 
ಎಣಿಸುತ್ತಿರಬೇಕು ರೊಟ್ಟಿ ಯ ಲೆಖ್ಖ
ಸುಖ ಭೋಜನವಿದು ಪಕ್ಕಾ....

ತಿಂಡಿಗೂ ಒಮ್ಮೆಮ್ಮೆ ಚಿತ್ರಾನ್ನ
ಬಿಸಿಬೆಳೆಬಾಥ್ ಮೊಸರನ್ನ
ನಡುನಡುವೆ ಗೀರೈಸ್ ಗ್ರೇವಿ
ಪುಲಾವ್ ಮೊಸರು ಬಜ್ಜಿ
ಖಾರಬಾತ್ ಕೇಶರೀಬಾತ್
ಮೈಸೂರು ಬದನೆ ವಾಂಗೀಬಾತ್....

ಹಬ್ಬಕ್ಕೆ ಮೃಷ್ಟಾನ್ನ ಭೋಜನ
ಗೊಜ್ಜು ಪಲ್ಯ ಚಟ್ನಿ ಕೋಸಂಬರಿ
ತೊವ್ವೆ ಪಳದ್ಯ ತರತರದ ವ್ಯಂಜನ
ಚಿರೋಟಿ ಆಂಬೊಡೆ ಹೋಳಿಗೆ
ರುಚಿಯಿಳಿದು ಅಚ್ಚುಕಟ್ಟು ನಾಲಿಗೆ
ತಿನ್ನಲಾದೀತೆ ನಿತ್ಯ ಪ್ರತಿನಿತ್ಯ
ಅಪರೂಪಕ್ಕಿರಲಿ ಆಗಲೇ ಸ್ವಾದ ಸತ್ಯ...

             ಶೈಲೂ.......
[8/5/2022, 5:35 pm] Dr. B. N. Shylaja Ramesh: ಮಳೆಯ  ಆರ್ಭಟ
****************

ಹೋ..  ಆಕಾಶವೇ ಕಳಚಿ
 ಬೀಳುತಿದೆ
ಅವಿತಿದ್ದ ಕಾರ್ಮೋಡ ಕರಗಿ
  ನೀರಾಗುತಿದೆ

ಸುಯ್ ಗುಡುವ ಸುಳಿಗಾಳಿಗೆ
 ಮರವೇ ಬುಡಮೇಲು
ಗೂಡಲಿ ಮುದುರಿ ಕುಳಿತಿದ್ದ
 ಹಕ್ಕಿಪಕ್ಷಿಗಳು ದಿಕ್ಕಾಪಾಲು

ಗಾಳಿಯ ರಭಸಕ್ಕೆ ಹಾರಿ
ಹೋದವೆಷ್ಟೋ ಮನೆಯ ಮಾಡು
ಜನಜೀವನವೇ ಅಸ್ತವ್ಯಸ್ತ
ಬದುಕೇ ನಾಯಿ ಪಾಡು

ತೇಲುತಿದೆ  ಹರಿವ ನೀರಲಿ
ಕಾರು ಬೈಕುಗಳು
ಎಲ್ಲೆಡೆಯೂ ಜಲಾವೃತ
ಮುಗಿಲ ಮುಟ್ಟಿದೆ ಆಕ್ರಂದನಗಳು

ಇರಲಿ ವರುಣ ಸಹನೆ
ತೋರು ನೀ  ಕರುಣೆ
ಹದವಿರಲಿ ಸುರಿತ
ತೋರು ಕೃಪೆ ಅನವರತ

          ಶೈಲೂ....
[8/5/2022, 5:35 pm] Dr. B. N. Shylaja Ramesh: ಮತ್ತದೇ .... ಬೇಸರ..!
*******************

ಸುತ್ತಲೂ ವ್ಯಾಪಿಸುತಿದೆ ಸಂಜೆಗತ್ತಲು
ಅಲ್ಲಲ್ಲಿ ಮೈದಳೆದ ಕಾರ್ಮೋಡಗಳು
ಬೆಳಗುವ ಶಶಿಯಿಲ್ಲ
ಚುಕ್ಕಿಗಳ ಸುಳಿವಿಲ್ಲ
ತಂಪಾದ ಗಾಳಿಯ
ನರುಗಂಪುತನವಿಲ್ಲ
ಸೊಗವಿಲ್ಲ, ಸೊಡರಿಲ್ಲ
ಎಲ್ಲೆಲ್ಲೂ ಹಬ್ಬಿ ಹರಡಿದೇ ನೀರವ ಮೌನ
ದೂರದಲ್ಲೆಲ್ಲೋ ಗುಡುಗುವ ಸಣ್ಣದನಿ
ದಿಗಂತದಂಚಿನಲಿ ಸುಳಿದು
ಮರೆಯಾದ ಕೋಲ್ಮಿಂಚು
ಎಲ್ಲಿಯೋ ಮಳೆಹನಿ ಸುರಿದಂತೆ  ಭಾಸ
ಮನದಲೂ ಕಾರ್ಮೋಡ
ಹೆಪ್ಪುಗಟ್ಟಿ ಆಯ್ತು ಅಭಾಸ
ಏಕೆ..? ಈ ಪರಿಯ ತೊಳಲಾಟ
ಏನಿದು..? ನಿಷ್ಕಾರಣ ಬೇಸರ
ಅರಿಯಲಾರದ ಅಸಹನೆ
ವಿವರಿಸಲಾಗದ ನೋವು
ಮನ ಗುನುಗುತಿದೆ ಒಳದನಿಯಲಿ
ಮತ್ತದೇ ಬೇಸರ... ಅದೆ ಸಂಜೆ... ಅದೇ  ಏಕಾಂತ....

            ಶೈಲೂ....
[10/5/2022, 10:30 pm] Dr. B. N. Shylaja Ramesh: ಮಹಾಬ್ರಾಹ್ಮಣ ರಾವಣ
ಮದತುಂಬಿ ತನು ಮನ
ಮಾತೃ ಪ್ರೀತಿಯಲಿ ನಿಷ್ಠೆ
ಶಿವನಲಿ ಭಕ್ತಿ ಪರಾಕಾಷ್ಠೆ

ಸ್ರೀಮೋಹದ ದೌರ್ಬಲ್ಯ
ನುಂಗಿತ್ತು ಭಕ್ತಿ ಸಾಫಲ್ಯ
ಸಾವಿರ ಚಂದ ಚಿತ್ತಾರವ
ನುಂಗಿದಂತೆ ಕಪ್ಪುಚುಕ್ಕಿ
[13/5/2022, 4:43 pm] Dr. B. N. Shylaja Ramesh: ತಂಗಾಳಿಯಲಿ ತೇಲಿ ತೇಲಿ ಬಂತು ನೋಡು
ತಾವರೆಕಂಗಳ ಬೆಡಗಿಯ ಹೂನಗು
ತಿರುತಿರುಗಿ ನೋಡುವಂತೆ ಸೆಳೆಯುವ
ತೀಡಿದ ಹುಬ್ಬಗಳ ಚೆಲುವೆ
ತುಂಟತನದ ಆ ನೋಟದಲಿ
ತೂರಿ ಎನ್ನೆಡೆಗೆ ಒಲವ ಸಂದೇಶ
ತೃಪ್ತಿಯಿಂದಲಿ ನಕ್ಕಳೊಮ್ಮೆ ನಸುನಾಚಿ
ತೆರೆಯಿತು ಹೃದಯದರಮನೆಯ ಕದ
ತೇರನೆಳೇಯಿತು ಮನ ನನ್ನವಳ ಕುಳ್ಳಿರಿಸಿ
ತೈಲವನೆರೆದು ಪ್ರೀತಿಯ,ಹಚ್ಚಿದೆನೊಲವ ದೀಪ
ತೊಡಿಸುವೆ ಪ್ರೇಮದಾಭಾರಣ ಒಲವ ಮುದ್ರೆಯನೊತ್ತಿ
ತೋರುತ ನಿನ್ನೆಡೆಗೆ ಕರಗದ ಅದಮ್ಯ ಪ್ರೀತಿ
ತೌರಿನ ನೆನಪೆಂದಿಗೂ ನಿನಗಾಗದಂತೆ
[14/5/2022, 9:54 pm] Dr. B. N. Shylaja Ramesh: ಹುಡುಕಬೇಕಿದೆ
*************

ಹುಡುಕಬೇಕಿದೆ
ನನ್ನನೇ ನಾನು
ಎಲ್ಲೋ ಕಳೆದುಹೋಗಿರುವೆ
ಜಗದ  ಸಂತೆಯಲಿ
ಮೈಮರೆತು  ನನ್ನೇ
ದಾರಿ ಮರೆತಿರುವೆನು

ದಣಿದು ಬೇಸತ್ತು
ಹೋಗಿರುವೆ, ಕೈಗೂಡದ
ಮರೀಚಿಕೆಯ ಹಿಂದೇ
ಮೋಹಪಾಷದಿ ಸಿಲುಕಿ
ತೊಳಲಾಡುತಿರುವೆ
ಬರಲಾರದೆ ಹಿಂದೆ

ನಾನಿಲ್ಲಿಗೆ ಬಂದ ಉದ್ದೇಶ
ಬೇರೆಯೇಇಹುದು ಮರೆತೇಹೋಯ್ತು 
ಗದ್ದಲದ ಈ  ಜಾತ್ರೆಯಲ್ಲಿ
ತಲುಪಬೇಕಿದೆ ಗುರಿಯ
ಅಡಿಯಿಟ್ಟು ಮುಂದೆ
ಕೊಸರಿ ಈ ಹಗ್ಗಜಗ್ಗಾಟದಲಿ

ಸಿಹಿಯೆಂದರಿತು
ಕುಡಿಯುತಿಹೆನು ವಿಷವ
ಮುಚ್ಚಿಬಿಟ್ಟಿದೆ  ಕಣ್ಣು
ಮಾಯೆಯಾ ಪಟ್ಟಿ
ವಿಷವಾವರಿಸಿ ಸಾಯುವಾ ಮುನ್ನ
ತೆರೆಯಬೇಕಿದೆ ಒಳಗಣ್ಣು

ಮಾಯೆಯಾವರಿಸಿ ಕುರುಡಾಗಿಹೆನು
ಕಾಣದಾಗಿದೆ ಅರಿವಿನೆಡೆಗೆ
ಸಾಗುವ ದಾರಿ
ಗುರುವಿದ್ದರೂ  ಗುರಿ
ಕಾಣದಾಯ್ತು ತುಳಿದು
ಕವಾಲುದಾರಿ

ಬಲತ್ಕಾರವಾಗಿಯಾದರೂ
ಕಡಿಯಬೇಕಿದೆ, ಮನವಾವರಿಸಿರುವ
ಮೋಹಜಾಲದ ಪಾಶ
ಅರಿವಿನೆಡೆಗೆ ಸಾಗದಿದ್ದರೆ
ಕಾಣಲೇಬೇಕು
ಘನಘೋರ ವಿಷ

              ಶೈಲೂ.....
[16/5/2022, 5:00 pm] Dr. B. N. Shylaja Ramesh: #ಚಿತ್ರಕಾವ್ಯ_ಅಭಿಯಾನ_೨೭

#ನಾನಾಗಲಾರೆ_ಬುದ್ಧ

ಮಧ್ಯರಾತ್ರಿಯಲೆದ್ದು
ಮಡದಿಮಕ್ಕಳ ಬಿಟ್ಟು
ರಾಜಭೋಗವ ತೊರೆದು
ಹೊರಟನಂತೆ ಸಿದ್ಧಾರ್ಥ.!
ಅವನಿಗೇನಿತ್ತೋ ಹಾಗೆ
ಜೀವನದಲ್ಲಿ ಅನಾದರ.!
ಕಾಷಾಯ ಧರಿಸಿದ ಮಾತ್ರಕ್ಕೆ
ಬದಲಾದೀತೆ ಪ್ರಪಂಚ.?
ಪ್ರತಿದಿನವೂ ಯುದ್ಧವೇ
ಹೆಣ್ಣು ಹೊನ್ನು ಮಣ್ಣಿಗಾಗಿ.!
ಬುದ್ಧನೊಬ್ಬ ತೊರೆದೆದ್ದರೆ
ನಿಂತೀತೇ... ಕದನ?
ಜಗವೆಲ್ಲವೂ ದ್ವೇಷ _
ಅಸೂಯೆಗಳ ಸದನ.!
ತಿದ್ದಿ ತೀಡಲೆದ್ದು ಹೊರಟ
ಬುದ್ಧ ಉಪದೇಶಿಸಿದ ಶಾಂತಿಮಂತ್ರ!
#ಆಸೆಯೇ_ದುಃಖಕ್ಕೆ_ಮೂಲ
ಅವನೊಬ್ಬ ತೊರೆದರಾದೀತೆ ಆಸೆ?
ಮತ್ತದೇ ಅತಿಯಾಸೆಯ ಸುತ್ತ
ಗಿರಕಿ ಹೊಡೆಯುತ್ತಿದೆ ಜಗ.!
ಅರಿಷಡ್ವರ್ಗಗಳ ಅವನೊಬ್ಬ ಗೆದ್ದ.!
ಜಗವೇನನ್ನೂ ಗೆಲ್ಲಲಿಲ್ಲ.!
ರಾಜಭೋಗದ ನಡುವೆಯೂ
ಮಾಡಬಹುದಿತ್ತಲ್ಲವೇ ಜನಸೇವೆ.!
ಉಪದೇಶಿಸಬಹುದಿತ್ತು ಸದ್ಭುದ್ಧಿ.!
ಸಂಸಾರದಲ್ಲಿದ್ದೆ ಗೆಲ್ಲಬಹುದು ಮನವ.!
ಮಾಯೆಯ ತೆರೆ ಸರಿಸಬಹುದು.!
ಇದ ತೋರಿಸಿದವರಿಹರು ಹಲವಾರು.!
ನನ್ನದೂ ಅವರಂತೆಯೇ ನಡೆ.!
ಸಂಸಾರಸಾಗರದಲಿ ಈಸಲು ಸಿದ್ಧ.!
ಹಾಗಾಗಿ... ನಾನಾಗಲಾರೆ ಬುದ್ಧ.!!

      ಡಾ: B.N. ಶೈಲಜಾ ರಮೇಶ್
[16/5/2022, 7:50 pm] Dr. B. N. Shylaja Ramesh: ಇರಲೀಸುಖ ಅನವರತ
********************

ಯಾಕೋ ತುಸು ಆರಾಮಿಲ್ಲ
ಮಲಗಲೇ ಮಡಿಲಲಿ ನಲ್ಲ
ಕೈಕಾಲುಗಳಲೆನೋ ಸುಸ್ತು ಸೆಳೆತ
ಓಡಾಡಲಾಗದೇನೋ ನೋವು ಎಳೆತ

ಬಾ ಮಲಗು ರಾಧೇ
ನೀಗಿಸುವೆ ನಿನ್ನೆಲ್ಲ ಬಾಧೆ
ಏನಾಯಿತ್ಹೇಳೇ ಚಿನ್ನಾ
ಪರಿಹರಿಸುವೆ ನೋವನ್ನ

ಎನಿಲ್ಲವೋ ಗೋಪಾಲ
ನಿನ್ನನರಸುತ ಕಳೆದೆ ಕಾಲ
ಹುಡುಕಿ ಹುಡುಕಿ ಸುಸ್ತಾದೆ
ಅಲೆದಲೆದು ಆಯಾಸವಾಗಿದೆ

ಹೌದೇನೇ ರಾಧಾಮಣಿ
ನೆನೆದಿದ್ದರೆ ಸಾಕಿತ್ತಲವೇ ರಾಣಿ
ಓಡೋಡಿ ಬಂದಿರುತ್ತಿದ್ದೆ
ನೆನೆದೊಡನೆ ಹಾಜರು ಕಣ್ಮುಂದೆ

ಸಾಕು ಬಿಡು ಬಡಿವಾರ
ನಿನ್ನನೆನಪೇ ಪ್ರತಿದಿನ ವಾರ
ನೀನೇನೋ  ಜಗದಾದಿಪತಿ
ಇಹುದೆಲ್ಲಿ ನನ್ನೊಳು ಮತಿ

ನೆನೆದೊಡನೆ ಬಂದೆನಲ್ಲವೇ ನಾನು
ಹೇಳು ಜಾಣೆ ಮನದಳಲನ್ನು
ನಿನ್ನೊಡನೆಯೇ ನಾನಿಹೆನಲ್ಲ
ಜಗವೇ ರಾಧಾಕೃಷ್ಣ ಎನುವರಲ್ಲ

ಹೆಸರೊಂದೇ ಸಾಕೇ ನಲ್ಲ
ನಿನ್ನೊಡನಾಟ ಬೇಕಲ್ಲ
ಸದಾ ನಿನ್ನೊಡನಿರಬೇಕು
ಜಗದ ಪರಿವೇ ಮರೆಯಬೇಕು

ಹಾಗೆಂದರಾದೀತೇ ಹೇಳು
ಬೇಕಲ್ಲ ಎಲ್ಲರಿಗೂ ಸಮ ಪಾಲು
ನಿನ್ನೊಡನಾಟದ ಸಿರಿ ಸ್ನೇಹ ಸಖ್ಯ
ಜಗವ ತಣಿಸುವುದೂ ಅಷ್ಟೇ ಮುಖ್ಯ

ಸರಿ ಬಿಡು ಬಿಡು ಮಾಧವಾ
ಅರಿತಿರುವೆ ನಿನ್ನ ಮನವಾ
ಜಗವ ಪಾಲಿಪ ಸ್ವಾಮಿ ನೀನು
ನನಗೇ ಮೀಸಲಿರಲೆಂದು ಬಯೆಸೆನು

ಹೋಗಲಿ ಆ ಮಾತ ಬಿಡು ರಾಧೇ
ಇಂದಿನ ಇಡೀ ಸಮಯ ನಮ್ಮದೇ
ಸುಂದರ ಈ ಪ್ರಕೃತಿ ಮಡಿಲಿನಲಿ
ಕಳೆಯೋಣ ಸುಸಮಯ ಏಕಾಂತದಲಿ

ಅದಕೆಂದೇ ಬಯಸಿದೆ ಮಡಿಲು
ಎದೆಗೊರಗಿ ಆನಂದ ಸವಿಯಲು
ಆಹಾ ಏನೀಸುಖಮಯ ಪ್ರಶಾಂತ
ಇರಲೀ ಬೆಸುಗೆ ನಿತ್ಯ ಅನವರತ
  
                ಶೈಲೂ....

ಚಿತ್ರಕೃಪೆ :  Bhaskaraks ksbhaskar
ಥ್ಯಾಂಕ್ಯೂ  ಸರ್
[16/5/2022, 7:51 pm] Dr. B. N. Shylaja Ramesh: ಕೃಷ್ಣ ಪ್ರಿಯ ಕಲಾ ಬಳಗದಲ್ಲಿ ಆಯೋಜಿಸಿದ್ದ  #ಕುಟುಂಬ ಕುರಿತಾದ ವಿಶಯಕ್ಕೆ ಬರೆದ ಕವನವನ್ನು ಅತ್ಯುತ್ತಮ ವೆಂದು ಪರಿಗಣಿಸಿ #ಕಲಾ_ವೈಜಯಂತಿ ಪ್ರಶಸ್ತಿಯನ್ನು ದಯಪಾಲಿಸಿದ್ದಾರೆ😊
ಧನ್ಯವಾದಗಳು ಕೃಷ್ಣ ಪ್ರಿಯ ಕಲಾ ಬಳಗದ ನಿರ್ವಾಹಕ ಬಂಧುಗಳಿಗೆ🙏🙏🙏

#ಸಾಹಿತ್ಯ_ಲಾಲಿತ್ಯ

#ದ್ವಿಪದಿ_ಸ್ಪರ್ಧೆ

#ಶೀರ್ಷಿಕೆ :-- #ಕುಟುಂಬ

ಕುಟುಂಬಕಾಧಾರ ಅಪ್ಪ ಅಮ್ಮನ ಸಾಂಗತ್ಯಬೆಸೆದ ಬಂಧ
ಕರುಳಕುಡಿಗಳ ಕಾಪಿಡುವ ದೇವಮಂದಿರವಿದು ಒಲವಿನಿಂದ

ನಡೆನುಡಿಗಳ ತಿದ್ದಿತೀಡಿ ಜೀವನಮೌಲ್ಯ ತಿಳಿಸುವ ಗುಡಿ
ಚಿಂತನೆಯ ಒರೆಗೆಹಚ್ಚಿ ಬದುಕಲು ಕಲಿಸುವ ನಲ್ಮೆಯ ನುಡಿ

ಬಾಳನರಿತುಬೆರೆತು ಎಲ್ಲರೊಂದುಗೂಡಿ ನಲಿವ ಬೃಂದಾವನ
ನಂಬಿಕೆಯ ನೆಲೆಗಟ್ಟಿನಲ್ಲಿ ಸಮರ್ಪಣಾಭಾವದ ನಂದನವನ

ನಿಸ್ವಾರ್ಥ ಸೇವಾಮನೋಭಾವ ಕಷ್ಟಕ್ಕಾಗುವ ಗುಣ
ಸಮಸ್ಯೆ ಸರಳೀಕರಣಗೊಳಿಸಿ ಕಿರಿಯರಕಾವ ಮನ

ಪ್ರತಿದಿನ ಹಬ್ಬದ ವಾತಾವರಣ ಇದು ಸುಂದರ ಕುಟುಂಬ
ಹಿರಿಯರೊಲುಮೆಯ ಸೂರಿನಡಿಯಲ್ಲಿ ಸುಖವಿಹುದು ತುಂಬಾ

      ಡಾ: ಶೈಲಜಾ ರಮೇಶ್
[21/5/2022, 4:13 pm] Dr. B. N. Shylaja Ramesh: ನೀನೇ ಮುರಿಯಬೇಕು ಮೌನ
*************************

ಮೌನವಾಗಿದೆ ಮಾತು
ಭಾವನೆಗಳ ಮರೆತು
ನುಡಿಯಲು ಸಾವಿರ ಮಾತಿದ್ದರೂ
ತುಟಿಯಂಚಲಿ ಜಾರಲು
ತಹತಹಿಸುತ್ತಿದ್ದರೂ
ಮನವೇಕೋ ಹಿಂಜರಿದಿದೆ
ಒಳಮನ ಭಾವನೆಗಳ ಬಿಗಿದಿಟ್ಟಿದೆ
ಸೋಲಲೊಪ್ಪದು ಮನ..
ಈ ತಹತಹಿಕೆ ನನಗೆ
ಮಾತ್ರವಿದೆಯೇಕೆ..???
ಅವನಿಗಿಲ್ಲವೇಕೆ..???
ಇರಬಹುದು ಅವನಿಗೂ..
ಹಮ್ಮುಬಿಮ್ಮುಗಳ ತಾಕಲಾಟದಲಿ
ಮಾತು ಮರೆತಿರಬಹುದು..
ತಪ್ಪುಗಳನ್ನೊಪ್ಪದೆ ನಾನೆಂಬ
ಹಮ್ಮು ಕಾಡುತ್ತಿರಬಹುದು..
ನಾನೂ ಸಹ ಸಿದ್ಧವಿಲ್ಲ
ನನ್ನ ತನವ ಮರೆತು ನಿನ್ನ
ಓಲೈಸುವ ಬಯಕೆ ಎನಗಿಲ್ಲ
ಇರಲಿ ಬಿಡು ಹೀಗೆಯೇ..
ನಡೆಯುತ್ತಿರಲಿ ಅಷ್ಟು ದಿನ
ಮೌನ ಕರಗಿ ತುಟಿಬಿರಿದು
ಚೆನ್ನಡಿ ಬರುವ ತನಕ ಕಾಯುತ್ತೇನೆ..
ಎಂದಿಗಾದರೂ  ಸರಿ
ನೀನೇ ಮುರಿಯಬೇಕು ಮೌನ..!

          ಶೈಲೂ.....
[5/6/2022, 10:53 pm] Dr. B. N. Shylaja Ramesh: ವಿಶ್ವ ಪರಿಸರ ದಿನಾಚರಣೆ
**********************

ನೆಡಿ  ಮನೆಗೊಂದರಂತೆ ಮರ
ಆಗಲೇ ಉಳಿವುದು ಪರಿಸರ
ಸುತ್ತಲಿದೆ ಕಲುಷಿತ ವಾತಾವರಣ
ಹಸಿರು ಹಚ್ಚುವುದು ಜೀವಂತಿಕೆ ಲೇಪನ

ಹಸಿರಿದ್ದರೇನೆ  ನಮ್ಮೆಲ್ಲರಿಗೆ ಉಸಿರು
ಉಸಿರನುಳಿಸಲು  ಬೇಕು ಹಸಿರು
ಸುತ್ತಲಿರಲಿ ಸ್ವಚ್ಛತೆಯ ಪರಿಸರ
ಕಡೆಗಣಿಸಲಿಹುದು ನಷ್ಟ ಅಪಾರ

ಕಲುಷಿತವಾದರೆ ಜೀವಜಲ, ನೆಲ
ಉಳಿದೀತೇ ಜೀವ ಸಂಕುಲ
ರಕ್ಷಣೆ ಯ ಹೊಣೆಯು ನಮ್ಮದೇ
ಉಳಿಸಿ ಬೆಳೆಸಲು ಸುಖವೂ ನಮ್ಮದೇ

ಬಿಸಿಯೇರುತಿದೆ ಜಗದ ತಾಪಮಾನ
ಉಸಿರನುಳಿಸುವ ತಂಗಾಳಿ ಬಣ ಬಣ
ಧರೆಗುರುಳಿಸಿ ಎತ್ತರದ ಗಿಡ ಮರ
ಹಾಳುಗೆಡವದಿರಿ ತಂಪಾದ ಪರಿಸರ

ನಾಲ್ಕಕ್ಷರವೂ ತಿಳಿಯದ ಆ  ನಾರಿ
ಪರಿಸರ ಕಾಳಜಿಯ ಉದಾತ್ತ ಪರಿ
ಸಾಲು ಸಾಲು ಮರವ ಬೆಳೆಸಿದ ಅಕ್ಕ
ಉಳಿದೆ ನೀ ಶಾಶ್ವತವಾಗಿ ತಿಮ್ಮಕ್ಕ

ನಮಗೂ ಇರಬೇಕು ಕಾಳಜಿಯ ಚಿಂತನೆ
ಸುತ್ತಮುತ್ತೆಲ್ಲ ನಳನಳಿಸುವ ಕಲ್ಪನೆ
ಹಾದಿಬೀದಿಯಲೆಲ್ಲ ಕೊಳೆತು ನಾರುವ ಕಸ
ಸ್ವಚ್ಛವಿರಿಸಿದರಷ್ಟೇ ಉತ್ತಮ ಉಚ್ವಾಸ

ಪರಿಸರ ಕಾಳಜಿಗೆ  ಬೇಕೇಕೆ ಒಂದುದಿನ
ಸ್ವಚ್ಛತೆಯ ಕಾಳಜಿ ಇರಬೇಕು ಪ್ರತಿದಿನ
ಉಳಿಯಲಿ ನಿರಂತರ ನೆಲ ಜಲ
ಅದರೊಂದಿಗೆ ನಲಿಯಲಿ ಜೀವಸಂಕುಲ

            ಶೈಲೂ.......
[5/6/2022, 10:53 pm] Dr. B. N. Shylaja Ramesh: ಪರಿಸರ ಸಂರಕ್ಷಣೆ
***************

ಜೀವ ಸಂಕುಲದ ಉಳಿವಿಗಿರಬೇಕು ಕಾಡು
ಗಿಡಮರವ ಕಡಿದು ಬೋಳಾಗಿಸಿ ಮಾಡಿಹರು ನಾಡು
ಅರಿವಿನ ಕೊರತೆಗೆ ವಾಯು ನೆಲ ಜಲ ಕಲುಷಿತ
ಅವಿವೇಕದ ನಡತೆಗೆ ಪರಿಸರವೇ ದೂಷಿತ

ಪರಿಶುದ್ಧ ಗಾಳಿಗೂ ಬಂತು ಸಂಚಕಾರ
ಗಿಡಮರವ ಕಡಿದು ತಂಪಿಲ್ಲದೆ ಆಹಾಕಾರ
ಅಧಿಕ ಹೊಗೆಯುಗುಳುವ ಕಾರ್ಖಾನೆ ವಾಹನ
ಪರಿಶುದ್ಧ ಗಾಳಿಯಿರದೆ ಜೀವಕೆಲ್ಲಿ ಚೇತನ

ಜೀವ ಜಲಕೂ ತ್ಯಾಜ್ಯ ವಸ್ತುಗಳ ಸುರಿವರೀ ಜನ
ಶುದ್ಧತೆ ಇನ್ನೆಲ್ಲಿ ಕೊಳಕಿನಿಂದಲೇ ರೋಗರುಜಿನ
ಹಸಿರೆಲ್ಲ ಕನಸು ಬರಿದೇ ಕಾಂಕ್ರೀಟ್ ಕಾಡು
ಮುಂದೊಮ್ಮೆ ಕಾದಿದೆ ಮನುಜನಿಗೆ ನಾಯಿಪಾಡು

ಹಸಿರಿನ ಸ್ವಚ್ಛ ಪರಿಸರ ಜಗದ ಜೀವನಾಡಿ
ಗಿಡನೆಡಿ ಮುಂದೊಮ್ಮೆ ಅದುವೆನಮ್ಮ ಒಡನಾಡಿ
ಮನುಜನ ಕೈಯಲ್ಲಿದೆ ಅಳಿವುಉಳಿವಿನ ಪ್ರಶ್ನೆ
ಮರೆಯದೇ ಮಾಡಿ ಪರಿಸರ ಸಂರಕ್ಷಣೆ

             ಶೈಲೂ.....
[7/6/2022, 2:35 pm] Dr. B. N. Shylaja Ramesh: 25 ವರ್ಷದ ಸಾಂಗತ್ಯ

25 ಕಳೆಯಿತು ವರುಷ ನಾನಿವರ ವರಿಸಿ
ಭರವಸೆಯ ಬದುಕಿನತ್ತ ಏಳುಹೆಜ್ಜೆ ಇರಿಸಿ
ಬೆಸೆದ ಭಾಂದವ್ಯಕೆ  ಆ ದೇವ ಆಶೀರ್ವದಿಸಿ
ಗಟ್ಟಿಮೇಳದ ನಡುವೆ ಗುರುಹಿರಿಯರರಸಿ

ಎಲ್ಲೋ ಇದ್ದ ಹೃದಯವೆರಡರ ನಡುವೆ
ಎಂದೂ ಬಿರುಕಾಗದಂತ್ಹೆಣೆದೊಲವ ಸೇತುವೆ
ಹೊಸೆದ ಹೊಂಗನಸುಗಳಿಗೆ  ಸಾಕಾರವಾಗಿ
ಬಳಿ ಬಂದೆ ನೀ ಒಲವೇ ಬಾಳ ಬೆಳಕಾಗಿ..!

ಅದಾವ ದೇವನಿತ್ತ ವರವೋ ನೀ ಬಂದೆ ಬಾಳಿಗೆ
ಒಲವ ಈ ಬಂಧನದಲಿ ಕನಸುಕಂಡೆ ನಾಳೆಗೆ
 ನೋವು ನಲಿವಿನಲೂ ಬಾಡದಂತೆ ಕಿರುನಗೆ
ಬೆಳಗಿದೆ ನೀ ಬದುಕ ಹಚ್ಚಿಟ್ಟು ಪ್ರೇಮದೀವಿಗೆ

ಬಾಳ ಗೆಳೆಯನೇ ಕೇಳು ನೀನೆನ್ನ ಉಸಿರು
ಬೆರೆತುಹೋಗಿದೆ ಉಸಿರಲಿ ಆ ನಿನ್ನ ಹೆಸರು
ಆ ದೇವನ ದಯದಿ ಬಿಗಿಯಾಗಿರಲಿ ಈ ಬೆಸುಗೆ
ಬದುಕೊಂದು ಸುಂದರ ಕವಿತೆ ನೀನಿರಲು ಜೊತೆಗೆ

             _ ನಿಮ್ಮ ಶೈಲೂ...
[8/6/2022, 1:33 pm] Dr. B. N. Shylaja Ramesh: ಈ..... ಬಂಧ....

ಬಾಳದೋಣಿಯ ಪಯಣಿಗರು ನಾವು
ಸಂಸಾರ ಸಾಗರದಿ ಈಸುತಿಹೆವು
ಉಪ್ಪುನೀರಿನ ನಂಟು ಏರಿಳಿತವೂ ಉಂಟು
ಸುಖದುಃಖಗಳ ಜೊತೆಗೆ ಕನಸು ನೂರೆಂಟು

ಬಾಳಿನುಯ್ಯಾಲೆಯಲಿ ಸಂಗಡಿಗರು ನಾವು
ಜೀಕುತ್ತ ಜೀಕುತ್ತ ಮರೆಯುವೆವು ನೋವು
ಮೇಲೊಮ್ಮೆ ಕೆಳಗೊಮ್ಮೆ ತೂಗುವುದು ಉಯ್ಯಾಲೆ
ಸಮರಸದಿ ಬಾಳುವೆವು ಏರುಪೇರಿಗಂಜದಲೇ

ಬಾಳ ದೋಣಿಯಲಡಿಯಿಟ್ಟ ದಿನದಿಂದ
ಹಿಗ್ಗಿಹೆವು ಕುಗ್ಗಿಹೆವು ನೋವು ನಲಿವಿಂದ
ಬದುಕಲೆಂಥದೇ ಬಿರುಗಾಳಿ ಬರಲಿ
ನಮ್ಮೊಲವ ಸಾಂಗತ್ಯ ಬಂಧ ಬಿಗಿಯಿರಲಿ

ಹಗಳಿರುಳಿನ ದುಡಿತ ನೀಡಿದೆ ಶುಭಫಲಿತ
ಬಂಧಿಸಿಟ್ಟಿದೆ ನಮ್ಮನು ಒಲವ ಸೆಳೆತ
ಬರುವ ಕಷ್ಟಸುಖಗಳೆಲ್ಲ ಬೇವುಬೆಲ್ಲದ ತೆರದಿ
ಬದುಕ ಸಂಭ್ರಮಿಸಲದುವೆ ನಿತ್ಯ ಯುಗಾದಿ

ಜೊತೆಗೂಡಿಬಂದ ದಿನಕಿಂದು 24ರ ಸಂಭ್ರಮ
ಮಧುರ ನೆನಪ ಬುತ್ತಿಯಲಿ ಒಲವ ಸಂಗಮ
ನನ್ನ ವಿಜಯದ ನಗೆಗಿರಲಿ ನಿಮ್ಮ ಕೊಡುಗೆ
ಅನುಸರಿಸಿ ಬಾಳುವೆ ನಾ ಕೊನೆಯುಸಿರವವರೆಗೆ

          ಶೈಲಜಾ ರಮೇಶ್
[24/6/2022, 5:28 pm] Dr. B. N. Shylaja Ramesh: #ಜೀವನೋತ್ಸಾಹ

ಜೀವನೋತ್ಸಾಹವೆಂದರೆ...
ಇದ್ದುದನು ಮರೆತು ಇಲ್ಲದುದರೆಡೆಗೆ ತುಡಿದು
ಪಡೆವಾತುರದಲಿ ತನ್ನದೆಲ್ಲವ ಕಳೆದು
ಕೈಗೆಟುಕದಿದನು ಕೈಚಾಚಿ ಕಸಿವ ಹರಸಾಹಸವಲ್ಲ.!

ಜೀವನೋತ್ಸಾಹವೆಂದರೆ...
ಸಕಲವನೂ ಜಯಿಸಿ ತನ್ನತನವನು ಮಣಿಸಿ
ಯಾರದೋ ಮೆಚ್ಚುಗೆಗೆ ಬಿಚ್ಚುಗತ್ತಿಯ ಝಳಪಿಸಿ
ಯಾರಿಲ್ಲದೂರಿಗೆ ನಾಯಕನಾಗುವ ರಣೋತ್ಸಾಹವಲ್ಲ.!

ಜೀವನೋತ್ಸಾಹವೆಂದರೆ...
ಉಳಿಯ ಒಂದೊಂದು ಪೆಟ್ಟಿಗೂ ಮೈಯೊಡ್ಡಿ
ಛಿದ್ರಛಿದ್ರವಾದರೂ ಭದ್ರಮೂರುತಿಯಾಗಿ
ನೆಲೆನಿಂತು ಸಕಲರಿಂದ ಪೂಜಿಪ ಶಿಲಾಮೂರ್ತಿಯ ಹಾಗೆ.!

ಜೀವನೋತ್ಸಾಹವೆಂದರೆ...
ಕೊಡಲಿಯೆತ್ತಿದವರಿಗೂ ಕರುಣೆತೋರಿ ನೆರಳಿತ್ತು
ಹೂವಿತ್ತು, ಹಣ್ಣಿತ್ತು, ಪ್ರಾಣವಾಯುವನೂ ಇತ್ತು
ಜೀವ ಜೀವನ ಕೊಡುವ ವೃಕ್ಷಮಾತೆಯ ಹಾಗೆ..!

ಜೀವನೋತ್ಸಾಹವೆಂದರೆ...
ಕ್ಷಣಿಕ ಬದುಕಿದ್ದರೂ ಅರಳಿ ಬಿರಿದು ಸೆಳೆದು
ದೇವನಡಿಗೋ ನಾರಿಮುಡಿಗೋ ಹುತಾತ್ಮರೆದೆಗೊ
ತನ್ನನರ್ಪಿಸಿ ಸಾರ್ಥಕತೆ ಮೆರೆದ ಹೂವಿನ ಹಾಗೆ..!

ಜೀವನೋತ್ಸಾಹವೆಂದರೆ...
ಅಜ್ಞಾನದ ತಮವ ಸರಿಸಿ
ಜ್ಞಾನದ ಬೆಳಕೀವ ಕಿರು ಸೊಡರ ಹಾಗೆ.!
ಕಗ್ಗಲ್ಲನಡುವಲೂ ಟಿಸಿಲೊಡೆದು ಬೃಹತ್ತಾಗಿ
ಬೆಳೆಯಲು ಹಪಹಪಿಸುವ ಸಸಿಯ ಹಾಗೆ..!

ಡಾ: B.N ಶೈಲಜಾ ರಮೇಶ್
[27/6/2022, 3:02 pm] Dr. B. N. Shylaja Ramesh: ದೇಶಭಕ್ತಿ
********

ವೇಷ ಭಾಷೆ ಯಾವುದಾದರೇನು?
ನಮ್ಮ ದೇಶವೊಂದೇ ಭಾರತ..!
ಜಾತಿ ಬೇಧ ಭಾವ ಮರೆತು
ಎಲ್ಲರಲಿರಲಿ ಒಮ್ಮತ..!!

ದೇಶಭಕ್ತಿ  - ನಮ್ಮಶಕ್ತಿ
ಒಗ್ಗಟ್ಟಿನಲ್ಲಿದೆ ಬಲ ...!!
ಕಾದುವ ಅರಿಗಳ ಹಿಮ್ಮೆಟ್ಟಿಸಿ
ತೋರಿಸೋಣ  ಭುಜಬಲ..!!

ಕಾಶ್ಮೀರ ಕಣಿವೆಯಿಂದಿಡಿದು
ಕನ್ಯಾಕುಮಾರಿಯ ವರೆವಿಗೂ
ವಿವಿಧ ಸಂಸ್ಕೃತಿ ವೇಷ ಭಾಷೆ
ಇದು ತಾಯ್ನಾಡಿಗೆ ಮೆರುಗು..!!

ನಾವೆಲ್ಲರೊಂದೇ ಇಲ್ಲಿ
ಭಾರತಾಂಬೆಯ ಪುತ್ರರು
ಭಾವೈಕ್ಯತೆಯ ಸಾರುವ
ಮಂದಿ ನಮಗೆಲ್ಲ ಹಿತವರು..!!

ಸಾಮರಸ್ಯ ಸಹಬಾಳ್ವೆ
ನಮಗಾಗಲಿ ಸೂತ್ರ..!!
ಒಂದೇ ಮಾತರಂ ಇದು
ಭಾವೈಕ್ಯತೆಯ ಮಂತ್ರ..!!

ದೇಶಭಕ್ತಿಯೇ ನಮ್ಮ ಶಕ್ತಿ
ಇರಲಿ ಪ್ರೀತಿ  ಸಂತತ..!!
ತನು ಮನ ಧನವೆಲ್ಲವೂ
ಭರತ ಮಾತೆಗೆ ಅರ್ಪಿತ..!!

    ಡಾ: B.N.ಶೈಲಜಾ ರಮೇಶ್
[27/6/2022, 3:04 pm] Dr. B. N. Shylaja Ramesh: ದೇಶಭಕ್ತಿ
********

ವೇಷ ಭಾಷೆ ಯಾವುದಾದರೇನು?
ನಮ್ಮ ದೇಶವೊಂದೇ ಭಾರತ..!
ಜಾತಿ ಬೇಧ ಭಾವ ಮರೆತು
ಎಲ್ಲರಲ್ಲಿರಲಿ ಒಮ್ಮತ..!!

ದೇಶಭಕ್ತಿ  - ನಮ್ಮಶಕ್ತಿ
ಒಗ್ಗಟ್ಟಿನಲ್ಲಿದೆ ಅಮಿತ ಬಲ ...!!
ಕಾದುವ ಅರಿಗಳ ಹಿಮ್ಮೆಟ್ಟಿಸಿ
ತೋರಿಸೋಣ  ಭುಜಬಲ..!!

ಕಾಶ್ಮೀರ ಕಣಿವೆಯಿಂದಿಡಿದು
ಕನ್ಯಾಕುಮಾರಿಯ ವರೆವಿಗೂ
ವಿವಿಧ ಸಂಸ್ಕೃತಿ ವೇಷ ಭಾಷೆ
ಇದು ತಾಯ್ನಾಡಿನ ಮೆರುಗು..!!

ನಾವೆಲ್ಲರೊಂದೇ ಇಲ್ಲಿ
ಭಾರತಾಂಬೆಯ ಪುತ್ರರು
ಭಾವೈಕ್ಯತೆಯ ಸಾರುವ
ಮಂದಿ ನಮಗೆಲ್ಲ ಹಿತವರು..!!

ಸಾಮರಸ್ಯ ಸಹಬಾಳ್ವೆ
ನಮಗಾಗಲಿ ಸೂತ್ರ..!!
ಒಂದೇ ಮಾತರಂ ಇದು
ಭಾವೈಕ್ಯತೆಯ ಮಂತ್ರ..!!

ದೇಶಭಕ್ತಿಯೇ ನಮ್ಮ ಶಕ್ತಿ
ಇರಲಿ ಪ್ರೀತಿ  ಸಂತತ..!!
ತನು ಮನ ಧನವೆಲ್ಲವೂ
ಭರತ ಮಾತೆಗೆ ಅರ್ಪಿತ..!!

    ಡಾ: B.N.ಶೈಲಜಾ ರಮೇಶ್
[27/6/2022, 4:46 pm] Dr. B. N. Shylaja Ramesh: ಸಾಧಿಸುವ ಚಲವೊಂದಿದ್ದರೆ ಬಾಳಿನಲಿ
ಬೆಟ್ಟದಷ್ಟು ಕಷ್ಟ ಕರಗಿ ಗುಟ್ಟವಾಗುವುದು ಕೇಳು
ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ ಬದುಕಿನಲಿ
ಗೆಲುವಿನೊಂದೊಂದೆ ಮೆಟ್ಟಿಲು ಕಾಣುವುದು ಕೇಳು

ಆರೂ ಅರಿಯರಿಲ್ಲಿ ಮನದ ಪ್ರೇಮ ಭಾವಸಮ್ಮಿಲನ
ಕಂಡರೂ ಕಾಣದಂತೆ ನಿರ್ಲಕ್ಷಿಸುವರು ಕೇಳು
ಆಡಿಕೊಳ್ಳುವವರ ಮುಂದೆ ಸಾಗಬೇಕು ಮುಂದೆಮುಂದೆ
ಯಶೋಕೀರ್ತಿ ಮಾನಸಮ್ಮಾನ ಗಳಿಸಿ ವಿಜಯಿಯಾಗಿ ಬಾಳು

ಅಮಾನವೀಯ ಜಗದೊಳು ಕಪಟತೆಯೇ ದೈವ
ಶುದ್ಧ ಮನಕೆ ಬೆಲೆಕೊಡುವವರಾರೂ ಇಲ್ಲ
ಸ್ವಾರ್ಥಲಾಲಸೆ ಮೋಸ ತುಂಬಿದೀ ಜಗದಲಿ ಮುಗ್ಧತೆಯಲೂಟಿ ಮಾಡುವರೇ ಎಲ್ಲ

ಮಾತು ಮುತ್ತಂತೆ ಕಾಪಿಡಬೇಕು ಸದಾ
ಗೌರವ ಘನತೆಯ ತೂಕ ಮಾತಿನಲ್ಲಿರಲಿ
ಕಳೆದುದೆಂದೂ ಮತ್ತೆ ಹಿಂತಿರುಗಿ ಬಾರದು
ಕ್ಷಣಕ್ಷಣವೂ  ಬೆಲೆಯುಳ್ಳದ್ದು ಉಪಯೋಗಿಸುವ ಕ್ಷಮತೆಯಿರಲಿ

ಶಕ್ತಿಯಿಂದಾಗದ್ದು ಯುಕ್ತಿಯಿಂ ಗೆಲಬೇಕು
ನಿನ್ನ ಆತ್ಮವಿಶ್ವಾಸದಲಿ ನಂಬಿಕೆಯಿರಲಿ
ಆಗಲಾಗದ್ದು ಯಾವುದೂ ಇಲ್ಲವೆಂದು ತಿಳಿ
ದೃಢಸಂಕಲ್ಪದಿಂದ ಸಾಧಿಸುವ ಛಲವಿರಲಿ
[30/6/2022, 4:02 pm] Dr. B. N. Shylaja Ramesh: ಕೇಳದೇನು ಎದೆಯ ಸದ್ದು
ಮಿಡಿಯೇ ನಿನ್ನ ಹೆಸರನು
ಕೇಳದೆಯೇ ಮುಡಿಪಿಟ್ಟುಬಿಟ್ಟೆ
ನಿನಗಾಗಿ ಮಿಡಿವ ಉಸಿರನು

ಕಾಣದೇನು ಪ್ರೀತಿ ಹೊದ್ದು
ಮೈಮರೆತಿರುವ ಮನಸನು
ಹೇಳದೆಯೇ ಕಣ್ಣ ಹೊಕ್ಕು
ಕಂಡ ನೂರಾರು ಕನಸನು

ಭಾವ ಬಂಧ ಹೊಸೆದು ಬೆಸೆದು
ಕಟ್ಟಿಕೊಂಡ ಬದುಕನು
ಮಧುರಭಾವ ಮಿಳಿತವಾಗಿ
ತುಟಿಯಂಚಲುಲಿವ ಮಾತನು

ಆಸೆ ಭಾಷೆ ಮೋಹ ಪಾಶ
ಮೀರಿ ನಿಂತ ಒಲವನು
ಕ್ಲಿಷ್ಟ ಸಮಯವನ್ನು ಸಹಿಸಿ
ಗಟ್ಟಿನಿಂತ ಪ್ರೀತಿ ಬಲವನು

ಹೇಳದೆಯೂ ಅರಿವಾಗುವಂಥ
ಸ್ವಚ್ಛ ಸುಂದರ ಪ್ರೀತಿ ನಮ್ಮಲಿ
ಏರಿಳಿತಗಳನೂ ದಾಟಿ ನಿಂತು
ಒಲವ ಬಳ್ಳಿ ತಬ್ಬಿಹಬ್ಬಲಿ

        ಶೈಲೂ......
[30/6/2022, 4:52 pm] Dr. B. N. Shylaja Ramesh: Perfectly said!
Very nice sir,👌👌💐💐
ನಿಮ್ಮ ಈ ಅರ್ಥಪೂರ್ಣ ಕವಿತೆಗೆ ತಲೆಬಾಗಿ ನನ್ನ ಮನದಲ್ಲುದಿಸಿದ್ದು ಹೀಗೆ😊

ಮೌನವಾಗಿರಬೇಕು
ಹಮ್ಮು ತೋರುವ ಜನರೆದುರು
ಬಿಂಕ ತೋರುವವರಿಗೆ
ಸುಂಕವದು ಮೌನ..!

ಹಿಮ್ಮೆಟ್ಟಬಾರದೆಂದಿಗೂ
ಅವಮಾನಿಸುವೆಡೆಯಿಂದ
ಅರ್ಥಮಾಡಿಸಬೇಕು
ಸ್ವಸಾಮರ್ಥ್ಯದಲ್ಲಿರಿಸಿ ಧ್ಯಾನ..!

ನಿಲ್ಲಬಾರದೆಂದಿಗೂ
ಅನುಮಾನಿಸುವೆಡೆಯಲ್ಲಿ
ಬೆಳೆದು ತೋರಿಸಬೇಕು
ಮಾಡುವಂತೆ ಸನ್ಮಾನ..!

ಭವ್ಯ ಘನತೆಗೆ ಅಡಿಪಾಯ
ನಮ್ಮದೇ ದಿವ್ಯ ನಡತೆ
ಜ್ವಲಿಸಿ ಹೊಳೆಯಲು ಬೇಕು
ಸಹನೆಯೆಂಬ ಪ್ರಣತೆ..!

        ಶೈಲೂ....... 

[4/7/2022, 10:30 am] Dr. B. N. Shylaja Ramesh: ಇವತ್ತು  ಏಕಾದಶಿ ರೀ
       ಉಪವಾಸ
ನಾವೇನೂ  ತಿನ್ನೋದಿಲ್ಲ
       ಉಪಾಹಾರ
ಅಂತೂ  ಮುಟ್ಟೋದೆ ಇಲ್ಲ
        ಆದರೂ
ನಮ್ಮಲ್ಲಿರುವ  ಪರಮಾತ್ಮನ್ನ
        ನೋಯಿಸಬಾರದಲ್ವಾ
ಹಾಗಾಗಿ ಫಲಾಹಾರ  ಅಷ್ಟೇ
          ಬಾಳೆಹಣ್ಣು, 
ಮಾವಿನಹಣ್ಣು,  ಆಪಲ್ಲು
        ಸೀಜನ್ ಅಲ್ವಾ
ಹಾಗಾಗಿ  ಹಲಸಿನ  ಹಣ್ಣು
        ಜಾಸ್ತಿ ಏನಿಲ್ಲ ಬಿಡ್ರಿ
ಬರೀ ಎರಡೆರಡು  ಕೆ ಜಿ ಅಷ್ಟೇ
           ಇವತ್ತು
ನಿರ್ಜಲ  ಉಪವಾಸ ರೀ
         ನೀರನ್ನೂ
ಸಹ  ಮುಟ್ಟೋದಿಲ್ಲ
       ಅರ್ಧ ಕೆ ಜಿ
ಬಾದಾಮಿ  ಅರೆದ  ಹಾಲಷ್ಟೇ ಅದೂ
       ಬರೀ  ಎರಡೇ ಲೀಟರ್
ಕಾಫಿ ಹಾರ್ಲಿಕ್ಸು ಬೂಷ್ಟು ಕುಡಿಯೊಹಂಗಿಲ್ಲ
       ಯಾಕಂದ್ರೆ
ಇವತ್ತು  ಏಕಾದಶಿ ರೀ
       ಉಪವಾಸ
ನಾವೇನೂ  ಮುಟ್ಟೋದೇ ಇಲ್ಲ......

       ಶೈಲೂ
[5/7/2022, 2:19 pm] Dr. B. N. Shylaja Ramesh: ಸುಂದರ ಚಿತ್ರ ಹಾಗೆಯೇ ಅರ್ಥಪೂರ್ಣ ಕವನ ವಿಜು👌👌💐💐

ಅಂದೂ ಇತ್ತು ಇಂಥದ್ದೇ ಮನಸ್ಥಿತಿ
ಇಂದೂ ಅಂಥದ್ದೇ ಬದಲಾಗದ ಪರಿಸ್ಥಿತಿ
ಅಂದು ತಿಳಿಗೊಳಿಸಲು ಹರಸಾಹಸ ಪಟ್ಟವನೂ ಅವನೇ
ಇಂದೂ ಬರುತ್ತಾನವ, ತೆರೆದಿಟ್ಟಿರಬೇಕು ಮನ - ಮನೆ

ಧರ್ಮದ ಹಾನಿಯಾದಾಗಲೆಲ್ಲಾ ಉದ್ಭವಿಸುವ
ಅಧರ್ಮಿಗಳ ಸೆದೆಬಡಿದು ಹೆಡೆಮುರಿ ಕಟ್ಟುವ
ರಕ್ತಬೀಜಾಸುರನಂತೆ ಮತ್ತೆ ತೆಲೆಯೆತ್ತಿ ನಿಲ್ಲುವ
ಪಾಪಿಗಳ ಅಟ್ಟಹಾಸ ಹುಟ್ಟಡಗಿಸಲು ಬರುವ.!
[7/7/2022, 12:44 pm] Dr. B. N. Shylaja Ramesh: #ಭಾವದ_ಮುಗಿಲು

ಭಾವಗಳ ಮುಗಿಲಲ್ಲಿ ನೀ ಹೊಳೆವ ಚಂದ್ರಮಾ
ಬೆಳದಿಂಗಳ ತಂಪಿನಲಿ ನನ್ನಾ ನಿನ್ನ ಸಮಾಗಮ.!
ಮಿಲನಮಹೋತ್ಸವಕಿದು ಭಾವಮುಗಿಲ ವೇದಿಕೆ
ಮೂಡಿತೊಂದು ಕವಿತೆ ನೀ ತಂದ ಈ ಸಂಭ್ರಮಕೇ.!

ನಾನೇನೋ ಅಲ್ಲಲ್ಲಿ ಮಿಂಚಿ ಮರೆಯಾಗುವ ತಾರೆ
ಮಿನುಗಿಸಿಬಿಟ್ಟೆನೀ ಸುರಿಸಿ ಪ್ರೀತಿ ಬೆಳದಿಂಗಳ ಧಾರೆ
ಅನುದಿನವೂ ಇರಲಿ ಹೀಗೇ ಸಂತಸದ ಪೌರ್ಣಿಮೆ
ಸುಮ್ಮನೇ ಹರಿವ ಸಂಭ್ರಮದ ಹೊನಲಿಗೆ ಪ್ರೀತಿಯದೆ ಹಿರಿಮೆ

ಹೂ ಮನದ ಭಿತ್ತಿಯಲಿ ಅಚ್ಚಾಗಿದೆ ನಿನ್ನ ಹೆಸರು
ಸ್ವಚ್ಛ ಸುಂದರ ಬದುಕಿಗೆ ಗೆಳೆಯ ನೀನಾದೆ ಉಸಿರು
ಉತ್ಕರ್ಷಿಸುತಿದೆ ಹರುಷ ಸದಾ ನೀನಿರಲು ಜೊತೆಗೆ
ಆವ ಸಿಡಿಲೂ ಛೇದಿಸದಿರಲಿ ನಮ್ಮೀ ಭಾವಗಳ ಬೆಸುಗೆ

    #ಶೈಲೂ...
(ಡಾ: B.N.ಶೈಲಜಾ ರಮೇಶ್)
[9/7/2022, 3:46 pm] Dr. B. N. Shylaja Ramesh: ಅದೆಷ್ಟೇ ತಡೆಯಬೇಕೆಂದರೂ
ತಡೆಯಲಾಗದು ಗೆಳೆಯಾ
ನಿನ್ನ ನೆನೆದಾಗ ಸುಮ್ಮನೇ ಸುರಿವ
ಕಣ್ಣಂಚಿನ ನೀರನ್ನು..!

ಮರೆಯಬೇಕೆಂದರೂ ಏಕೋ
ಮರೆಯಲಾಗದು ನೋಡು
ನಿನ್ನೊಡನಾಟವಿಲ್ಲದ, ಬರಡು 
ಬದುಕಿನ ಈ ನೋವನ್ನು..!

ಆದರೂ.. ಸುಮ್ಮನೆ ಆಸ್ವಾದಿಸುತ್ತಿರುವೆ
ತುಟಿಯಂಚಲಿ ನಗುವನ್ನು ತುಂಬಿ
ಆಪ್ಯಾಯಮಾನವಾದ ಘಳಿಗೆ
ನಾ ನಿನ್ನೊಡನೆ ಕಳೆದ ಕ್ಷಣವನ್ನು..!

ನನ್ನ ನೋವಿಗೂ ನಲಿವಿಗೂ
ನಿನ್ನದೇ ಬಹು ಮುಖ್ಯ ಪಾಲು.!
ಕಷ್ಟ ಸುಖಕೆ ಸ್ಪಂದಿಸುತ ಸದಾ
ತುಂಬಿಬಿಡು ಗೆಳೆಯಾ ಮೊಗದಲ್ಲಿ ನಗುವನ್ನು.!

       ಶೈಲೂ.....
[11/7/2022, 1:39 pm] Dr. B. N. Shylaja Ramesh: ಸದಾ ಜೊತೆಗಿದ್ದರೆ ಪತಿ
ಸಂತಸಕ್ಕಿಲ್ಲ ಇತಿಮಿತಿ
ದೂರಾದರೂ ಅರೆಕ್ಷಣ
ಮನದಲ್ಲೆಂಥದೋ ತಲ್ಲಣ
ಕಾರಣ.....................
ನನ್ನವರ ಸುತ್ತ ಸುತ್ತುವರಿದ
ಹೆಂಗಳೆಯರ ದಿಬ್ಬಣ..!😜

          ಶೈಲೂ...
[27/7/2022, 10:41 pm] Dr. B. N. Shylaja Ramesh: ಉಮ್ಮಳಿಸಿ ಬರುವ ನೆನಪುಗಳ ಅಲೆಯಲ್ಲಿ
ತೇಲುತ್ತ ಮುಳುಗುತ್ತ
[1/8/2022, 11:47 am] Dr. B. N. Shylaja Ramesh: ಬೇಸಿಗೆಯ ಉರಿ ಬಿಸಿಲ
ಮಧ್ಯಾನ್ಹದಲ್ಲೊಂದು ದಿನ ನೋಡಿದ್ದೆ
ರಸ್ತೆಗೆ ಸುರಿದಿದ್ದ ಬಿಸಿ ಡಾಂಬರಿನ
ಹಬೆಯ ಮೇಲೊಂದು ಮರಿನಾಗ ಹಾದು ಹೋದ ದೃಶ್ಯ......
 ವಿಲವಿಲ ಒದ್ದಾಡಿತು ಪಾಪ
ಮೇಲೆ ಬಿಸಿಲ ಝಳ
ಕೆಳಗೆ ಕುದಿವ  ಡಾಂಬರು
ಬೇಗ ಸರಿಯಲಾರದೆ, ಉರಿಯ ತಾಳಲಾರದೆ
ಒದ್ದಾಡಿ ಪ್ರಾಣ ಬಿಟ್ಟಿದ್ದ ನಾಗ.......
ಅಯ್ಯೋ ಎಂದು ಮರುಗಿದವರ ಮಧ್ಯದಲ್ಲಿ
ವಿಷಸರ್ಪ ಸತ್ತಿತು, ಒಳ್ಳೆಯದಾಯ್ತೆಂದು
ಹಿರಿ ಹಿರಿ ಹಿಗ್ಗಿದವರೆಷ್ಟೋ
ಚೀರಿ  ಹೇಳಿದ್ದೆ  ಆಗ
ನಿಮಗಿಂತ  ವಿಷವೇ ಅದು?
ಸಿಕ್ಕವರ ನೆತ್ತರನ್ನು  ಹೀರುವ  ರಾಕ್ಷಸರು ನೀವು
 ತೊಂದರೆ ಕೊಡುವವರಿಗಷ್ಟೇ ಬುಸುಗುಟ್ಟುವ  ಈ  ನಾಗ
ನಿಮಗಿಂತಲೂ  ಸಾವಿರ ಪಾಲು  ಮೇಲು..... 
ದುಃಖದಿಂದ ದನ್ನ ಸಂಸ್ಕರಿಸಿ
ಶ್ರೀ ಕ್ಷೇತ್ರದಲ್ಲೊಮ್ಮೆ ಪೂಜೆ ಮಾಡಿಸಿ ಬಂದಿದ್ದೆ..

ಇಂದು  ನಾಗನಾ ಪೂಜಿಸುವ ಪುಣ್ಯದಿನ
ಒಡಹುಟ್ಟಿದವರ ಕ್ಷೇಮ ಕೋರಲು ಆರಾಧಿಸುವ ದಿನ
ಹೊಟ್ಟೆ ತಣ್ಣಗೆ ಬೆನ್ನು ತಣ್ಣಗೆ ಇಟ್ಟಿರು ನನ್ನ  ಸಹೋದರರನ್ನು
ಎಂದು ಹಾಲೆರೆಯುವಾಗ.......
ವಿಲಿವಿಲೀ ಒದ್ದಾಡಿ ಪ್ರಾಣ ಬಿಟ್ಟ  ಆ
ಮರಿನಾಗನಾ ದೃಶ್ಯ  ಕಣ್ಮುಂದೆ ನಿಂತು ಕಾಡಿತ್ತು
ಕಾಡನ್ನೆಲ್ಲ  ನಾಡು ಮಾಡುವಾ ಭರದಲಿ
ಜೀವ ಸಂಕುಲದ  ಮಾರಣ ಹೋಮ ಮಾಡುವ
ಈ  ಮನುಜ ಕುಲದ ವಿರುದ್ದ  ಚೀರಿತ್ತು  ನನ್ನ ಮನಸು
ಹೇ ದೇವ ನಿನಗೆ.ರಕ್ಷಣೆ ಕೊಡದಾ, ನಮ್ಮನ್ನು
ರಕ್ಷಿಸು ಎಂದು  ಬೇಡುವುದು ಅದ್ಯಾವ ನ್ಯಾಯ...

ಆದರೂ  ಬೇಡುತಿಹೆ ಸುಖದಿಂದಿಟ್ಟಿರು ನನ್ನೆಲ್ಲ  ಸಹೋದರರನ್ನು............
                              ಶೈಲೂ........
[2/8/2022, 6:17 pm] Dr. B. N. Shylaja Ramesh: ನೀಲಾಗಾಸದ ನಡುವೆ
ದಟ್ಟೈಸಿರುವ ಕರಿಮೋಡ
ಒಮ್ಮೊಮ್ಮೆ ತುಂತುರು ಹನಿ
ಹಿಂದೆಯೇ ಧೋ ಎಂದು 
ಸುರಿದು ಕಾಡುವ ಬಿರುಮಳೆ
ಸಂಜೆ ಸಂಗೀತವೂ ಸೇರ್ಪಡೆ
ಮಳೆಹನಿಯ ದನಿಯ ಜೊತೆಗೆ
ಅಂಗಳದ ತುಳಸಿಯ ಸಂಜೆ ದೀಪ
ತುಂತುರಿನ ಸಿಡಿತಕೆ ನಂದಿತು, ಪಾಪ..
[2/8/2022, 6:23 pm] Dr. B. N. Shylaja Ramesh: ಹಬ್ಬಗಳ ಸಾಲಿಗೆ ಹೆಂಗಳೆಯರ ದಿಬ್ಬಣ
ಬೆಳ್ಳಿ ಕಾಲ್ಗೆಜ್ಜೆಯ ಝಣಝಣ ರಿಂಗಣ
ಸೇವಂತಿಗೆ, ಸಂಪಿಗೆ, ಮಲ್ಲಿಗೆಯ ಕಂಪು
[2/8/2022, 8:09 pm] Dr. B. N. Shylaja Ramesh: ಹರಿಶಿನ ಕುಂಕುಮ ತಾಂಬೂಲದ ಸೊಂಪು
ಹಬ್ಬದ ಅಡುಗೆಯ ಘಮಘಮ
ಬಂಧುಗಳೊಡನೆ ಸ್ನೇಹಿತರ ಸಂಗಮ
ಬಣ್ಣಬಣ್ಣದುಡುಗೆಗಳ ಪ್ರಭಾವಳಿ
[2/8/2022, 8:19 pm] Dr. B. N. Shylaja Ramesh: ನೀಲಾಗಾಸದ ನಡುವೆ
ದಟ್ಟೈಸಿರುವ ಕರಿಮೋಡ
ಒಮ್ಮೊಮ್ಮೆ ತುಂತುರು ಹನಿ
ಹಿಂದೆಯೇ ಧೋ ಎಂದು 
ಸುರಿದು ಕಾಡುವ ಬಿರುಮಳೆ
ಸಂಜೆ ಸಂಗೀತವೂ ಸೇರ್ಪಡೆ
ಮಳೆಹನಿಯ ದನಿಯ ಜೊತೆಗೆ
ಅಂಗಳದ ತುಳಸಿಯ ಸಂಜೆ ದೀಪ
ತುಂತುರಿನ ಸಿಡಿತಕೆ ನಂದಿತು, ಪಾಪ..
ಹಬ್ಬಗಳ ಸಾಲಿಗೆ ಹೆಂಗಳೆಯರ ದಿಬ್ಬಣ
ಬೆಳ್ಳಿ ಕಾಲ್ಗೆಜ್ಜೆಯ ಝಣಝಣ ರಿಂಗಣ
ಸೇವಂತಿಗೆ, ಸಂಪಿಗೆ, ಮಲ್ಲಿಗೆಯ ಕಂಪು
ಹರಿಶಿನ ಕುಂಕುಮ ತಾಂಬೂಲದ ಸೊಂಪು
ಹಬ್ಬದ ಅಡುಗೆಯ ಘಮಘಮ
ಬಂಧುಗಳೊಡನೆ ಸ್ನೇಹಿತರ ಸಂಗಮ
ಬಣ್ಣಬಣ್ಣದುಡುಗೆಗಳ ಪ್ರಭಾವಳಿ
ಎಲ್ಲೆಲ್ಲೂ ಸಂತಸದ ವಿನೋದಾವಳಿ
[3/8/2022, 9:46 am] Dr. B. N. Shylaja Ramesh: ನೀಲಾಗಾಸದ ನಡುವೆ
ದಟ್ಟೈಸಿರುವ ಕರಿಮೋಡ
ಒಮ್ಮೊಮ್ಮೆ ತುಂತುರು ಹನಿ
ಹಿಂದೆಯೇ ಧೋ ಎಂದು 
ಸುರಿದು ಕಾಡುವ ಬಿರುಮಳೆ
ಸಂಜೆ ಸಂಗೀತವೂ ಸೇರ್ಪಡೆ
ಮಳೆಹನಿಯ ದನಿಯ ಜೊತೆಗೆ
ಅಂಗಳದ ತುಳಸಿಯ ಸಂಜೆ ದೀಪ
ತುಂತುರಿನ ಸಿಡಿತಕೆ ನಂದಿತು, ಪಾಪ..
ಹಬ್ಬಗಳ ಸಾಲಿಗೆ ಹೆಂಗಳೆಯರ ದಿಬ್ಬಣ
ಬೆಳ್ಳಿ ಕಾಲ್ಗೆಜ್ಜೆಯ ಝಣಝಣ ರಿಂಗಣ
ಸೇವಂತಿಗೆ, ಸಂಪಿಗೆ, ಮಲ್ಲಿಗೆಯ ಕಂಪು
ಹರಿಶಿನ ಕುಂಕುಮ ತಾಂಬೂಲದ ಸೊಂಪು
ಹಬ್ಬದ ಅಡುಗೆಯ ಘಮಘಮ
ಬಂಧುಗಳೊಡನೆ ಸ್ನೇಹಿತರ ಸಂಗಮ
ಬಣ್ಣಬಣ್ಣದುಡುಗೆಗಳ ಪ್ರಭಾವಳಿ
ಎಲ್ಲೆಲ್ಲೂ ಸಂತಸದ ವಿನೋದಾವಳಿ
ಎಲ್ಲಕೂ ಕಾರಣ ಶ್ರಾವಣ ಮಾಸ
ಶ್ರಾವಣದ ಸಂಜೆಯಲಿ ಆಹಾ ಅದೆಂಥ ಸುಹಾಸ.!

        ಶೈಲೂ.....
(ಡಾ: B.N.ಶೈಲಜಾ ರಮೇಶ್)
[3/8/2022, 2:00 pm] Dr. B. N. Shylaja Ramesh: ಆ ನಗುವಿನಲ್ಲಿ ಯಾಕಿ ಮನದ ವೇದನೆ ನಗುವೇ ಭೂಷಣ ಮರೆತು ನೋವು, ನಗುತ್ತಿರು ಅನುದಿನ.                                   ಮಾತು ಮರೆಯಾದಾಗ ಮೌನವೇ ಆಭರಣವಾದರು.    ಶೋಭಿಸದು ನಿನಗದು.                ನಲಿವು ನೋವು ಸಹಜ ನಗುತಿರ ಬೇಕು ನಾಲ್ಕು ದಿನದ.      ಈ ಬದುಕು.                      ಮುಂದೇನು ಬಲ್ಲವರಾರು ಬಾಳಬೇಕು ಮರೆಯದೆ ಹೃದಯದ ಪ್ರೀತಿಯ ಜೊತೆ.
[5/8/2022, 11:52 am] Dr. B. N. Shylaja Ramesh: ನುಡಿಯಲಿದೆ ಸಾವಿರ
******************

ನುಡಿಯಲಿದೆ ಸಾವಿರ
ಮಾತಾಡೆ ಮನ ಹಗುರ
ಮಾತನಾಡದೇಕೋ ತುಟಿಬಿಚ್ಚಿ
ಹೊರಬಿದ್ದ ಮಾತಿಗ್ಹೆದರಿ ತುಟಿಕಚ್ಚಿ

ಕೈ ಹಿಂದಿಕ್ಕಿ ನಿಂತ ಭಂಗಿ
ಸೊಗಸು ತೊಟ್ಟ ನಿಲುವಂಗಿ
ಕಣ್ಣಲ್ಲೇ ಮಾತುಗಳ ವಿನಿಮಯ
ನೋಟದ ಕೂಟದಲೇ ತನ್ಮಯ

ತಲೆತಗ್ಗಿದ್ದರೂ ದೃಷ್ಟಿಯಿದೆ ನೇರ
ಕಣ್ಣಂಚು ದಾಟಿ ತುಳುಕಿದೆ ವಿಚಾರ
ಗಾಂಭೀರ್ಯ ಗತ್ತಲೆಂತೋ ವಿಷಯ
ಬೀಸುವ ಬಲೆ ಇದೆಂಬ ಸಂಶಯ

ಇರಬಹುದು ಆಧುನಿಕ ನಾರಿ
ದಾಟಿಲ್ಲವೆಂದು ಸಭ್ಯತೆಯ ಮೀರಿ
ಏನಾದರಾಗಲಿ ನಿಲ್ಲು ನೀ ದೂರ
ಪ್ರಾಯವಿದು ಬೆಂಕಿ ಇರಲಿ ಅಂತರ

ಅದರೆಕೋ ಬೇಡವೆನ್ನದ ಮನಸು
ಸನಿಹ ಬಯಸಿ ಕಾಣುವ ಕನಸು
ಅರ್ಥವಾಗದಿದು ದ್ವಂದ್ವ ವಿಷಯ
ಹೆಜ್ಜೆಯಿಡಲದೇಕೋ ಭಯ 

             ಶೈಲೂ.....
[5/8/2022, 12:00 pm] Dr. B. N. Shylaja Ramesh: ನಟ್ಟಿರುಳ  ಕನಸಿನಲಿ
ನಿದ್ರಾದೇವಿಯ ಮಡಿಲಲ್ಲಿ
ಹೊರಳುತ್ತ ತುಸು
ಕನವರಿಸಿದರೂ ಅಲ್ಲಿ
ಇಲ್ಲೆನ್ನ ಮನದಲ್ಲಿ
ನೋವ ತೊಳಲಿಕೆ...

ನಿದ್ರೆ ಬಾರದ
ನೀರವ ರಾತ್ರಿಯಲಲ್ಲಿ
ನರಳಿ  ಬೇಸತ್ತರೂ ಸಾಕು
ಕನಲಿ ಬೆಂಡಾಗುವುದಿಲ್ಲಿ
ತಳಮಳಿಸಿ ಈ ಜೀವ
ದಿನವೆಲ್ಲ  ಹಪಹಪಿಕೆ

ಕನಸಲ್ಲೋ ಮನಸಲ್ಲೋ
ಒಮ್ಮೆ ನೀ ನೆನೆದರೂ ಸಾಕು
ಹೃದಯ ತುಂಬಿದ ಭಾವ
ತಡೆಲಾಗದು ನೋವ
ಕ್ಷಣ ಕ್ಷಣವೂ ಕನವರಿಸಿ
ನಿಂತಲ್ಲೇ ಬಿಕ್ಕಳಿಕೆ..

ದೂರ ನೀನಿದ್ದರೇನು
ಕಣ್ಣಿಂದ ಮರೆಯಾದರೇನು
ಮಿಡಿಯುವುದು ಈ ಜೀವ
ನಿನಗಾಗಿ ಅನುದಿನ  ಅನುಕ್ಷಣ
ಜೀವ ಭಾವವ ಬೆಸೆದು ಸ್ಮೃತಿಯಲ್ಲಿ
ನೀನಿರುವೆ, ದೂರವಿಹುದಷ್ಟೇ ದೇಹಕೆ
            ಶೈಲೂ.......
[5/8/2022, 12:21 pm] Dr. B. N. Shylaja Ramesh: #ಶ್ರಾವಣ_ಶುಕ್ರವಾರದಿ_ನಲಿಯುತ_ಬಾರೇ_ವರಮಹಾಲಕ್ಷ್ಮೀ

ಬಾರೇ ನಮ್ಮ ಮನೆಗೆ ವರಮಹಾಲಕ್ಷ್ಮಿ...
ಬಾರೇ ನಮ್ಮ ಮನೆಗೆ..
ಬಾರೇ ನಮ್ಮ ಮನೆಗೆ ನಡೆಮುಡಿ ಹಾಸುವೆ 
ಅಡಿಗೆರಗುವೆ ತಾಯೇ ಕ್ಷೀರಸಾಗರಶಯನನ ರಾಣಿ ||ಬಾರೇ||

ಕಾಲಲಂದುಗೆ ಗೆಜ್ಜೆ ಘಲಿಘಲಿರೆನಿಸುತ
ಬೇಡಿದ ಭಕ್ತರಿಗೆ ವರಗಳ ನೀಡುತ್ತಾ
ಶುಕ್ರವಾರದ ಪೂಜಾ ಸಮಯಕೆ  ನಮ್ಮ ಮನೆಗೆ... ||ಬಾರೇ||

ಮುತ್ತಿನ ಮಂಟಪದಿ ಮುದದಿಂದ ಕೂರಿಸಿ
ಮಂಗಳಾಂಗಿಗೆ ಮಂಗಳದ್ರವ್ಯವನ್ನರ್ಪಿಸಿ
ಮಲ್ಲಿಗೆ ಮಾಲೆಯ ಚಂದದಿ ಮುಡಿಸುವೆ || ಬಾರೇ ||

ಪದ್ಮೋಧ್ಬವೇ ಪದ್ಮದಳನಯನೇ ಪದ್ಮನಾಭನ ರಾಣಿ ಪದ್ಮಿನಿ, ನಿನ್ನ ಪಾದಪದ್ಮವ 
ಪಂಚಾಮೃತದಿ ತೊಳೆಯುವೆ ||ಬಾರೇ ||

ನೊರೆಹಾಲು ಸಕ್ಕರೆ ಅರ್ತಿಯಲಿ ಅರ್ಪಿಸುವೆ
ಬಡವರ ಸಂಕಷ್ಟ ಹರಿಸುತ್ತ ಬಾರೇ
ಸಿರಿವಂತರ ಸೆರೆಯ ತೊರೆದು ನೀ ಬಾರೇ ||ಬಾರೇ ||

        ಶೈಲಜಾ ರಮೇಶ್....
[6/8/2022, 9:16 am] Dr. B. N. Shylaja Ramesh: ಮುದ್ದು ಮೊಗದ ಮಾಂತ್ರಿಕ
************************

ಎಲ್ಲೆಲ್ಲಿ ನೋಡಿದರೂ
ಅಲ್ಲಿ ನೀನೇ ಕೃಷ್ಣ
ಎಲ್ಲ ಕಡೆಯಲೂ ನೀನು
ಅಡಗಿ ಕುಳಿತಿಹೆಯಲ್ಲ..!

ಅಮ್ಮ ಯಶೋಧೆಯ
ಮಡಿಲಲ್ಲಿ ಮುದ್ದು ಮಗು
ಗೋಪಿಯರೊಡನೆ ನಿನ್ನ
ಪ್ರೇಮಗಾನದ  ಗುನುಗು..!

ಓರಗೆಯ ಗೆಳೆಯರೊಡನೆ
ಕೂಡಿ ಆಡಿ ತುಂಟಾಟ
ಗೋಪಬಾಲೆಯರೊಡನೆ
ಕಣ್ಣ ಮುಚ್ಚಿ.ಚೆಲ್ಲಾಟ..!

ಗೋವ ಕಾಯ್ವ ತಾವಿನಲೂ
ತುಂಟ ನಿನ್ನದೇ ಮೆರುಗು
ಮೋಹಕ ಮುರಳೀ ಗಾನಕೆ
ಸೃಷ್ಟಿಯೇ ಪರವಶ ಬೆರಗು..!

ಮರದ ಮೇಲೇರಿ ಆಡಿ
ಮರಕೋತಿಯಾಟ
ಗೆಳೆಯರ ನಲಿಸಿ ನಗಿಸಿ
ಹಾಡಿ ಆಡುವ ಚೆಲುವ ನೋಟ..!

ಹಸಿರ ವನಸಿರಿಯಲ್ಲೂ
ನಿನ್ನ ಮೋಹಕ ರೂಪ
ನೀಲಿ ಬಾಂದಳದಲ್ಲೂ
ನಿನ್ನ ಪ್ರತಿರೂಪ...!

ಮುದ್ದು ಮೊಗದ ಮಗುವಿನ
ಚೆಲುವ ಆ ಮುಗ್ಧ ನೋಟಕೆ
ಶರಣಾಗಿದೆ ಇಡೀ ಜಗವೇ
ಮಾಂತ್ರಿಕ ಆ ಮಾಯಾಜಾಲಕೇ..!

ಅಣು ರೇಣು ತೃಣಕಾಷ್ಠದಲೂ
ನಿನ್ನ ಆವಿರ್ಭಾವ..
ಮಗುವೋ..  ಆ ನಗುವೋ..
ಜಗದಗಲ ನಿಂತೆ ನಾ ಹೇಗೆ ಅರಿಯಲಿ ದೇವ..!

         ಶೈಲೂ.....

ಚಿತ್ರ ಕೃಪೆ : ಶ್ರೀಮತಿ  ಸುಮಾ..B. R
ಥ್ಯಾಂಕ್ಯೂ  ಸುಮಾ
[13/8/2022, 7:37 pm] Dr. B. N. Shylaja Ramesh: #ಸೊಬಗಿನ_ಒಡತಿಯ_ಪ್ರೀತಿ 
ಮನವ ಕದ್ದ ತರಳೆ ನೀನ್ಯಾರೇ.?
ನಿನ್ನ ಪ್ರೀತಿಯಲದೆಂತ ಮರುಳೆ?
ಮುಳುಗಿ ಹೋಗಿಹೆ ಮೇಲೆಳದಂತೆ
ಮೇಲೆಳಲೂ ಸಹ ಮನವಿಲ್ಲದಂತೆ.!

ಅದೆಂಥ ಸೆಳೆತವೋ ಕಾಣೆ ನಿನ್ನಲ್ಲಿ
ಸೂಜಿಗಲ್ಲಂತೆ ಸೆಳೆದೇ ನೀ ಕಣ್ಣಲ್ಲಿ
ನೆಟ್ಟಿರುವೆ ಮನವನ್ನು ನಿನ್ನಲ್ಲೇ
ಸೊಬಗಿನಒಡತಿಯ ಪ್ರೀತಿಗುಂಗಲ್ಲೇ

ಹೊತ್ತಿಹೇ ನೂರಾಸೆಯ ಕನಸು
ತೋರದೇ ನೀನು ಹುಸಿಮುನಿಸು
ಬಾರೇ ಬದುಕಿಗೆ ನೀ ಬೆಳಕಾಗಿ
ಇರುವೆ ಕಷ್ಟ ಸುಖದಲ್ಲಿ ನೆರಳಾಗಿ

        ಡಾ: ಶೈಲಜಾ ರಮೇಶ್
[23/8/2022, 12:46 pm] Dr. B. N. Shylaja Ramesh: #ನನ್ನ_ಪ್ರೀತಿಯ_ಕರೆಯೋಲೆ 
ಬರೆದೆ ನಾನು ನಿನಗೊಂದು ಪತ್ರ
ಆದರೇಕೋ ಭಯ ನಿನಗೆ ಕೊಡಲು
ಅದೆಷ್ಟು ಸಲುಗೆ ಇತ್ತಂದು ನಿನ್ನ ಹತ್ರ
ಈಗೇಕೋ ಭಯ ನಿನ್ನ ನೋಡಲು.!

ಪುಟಿಯುತ್ತಿರುವ ಪ್ರೀತಿ, ಕಾಳಜಿ
ವ್ಯಕ್ತಪಡಿಸಲು ಕಾಡುತ್ತಿದೆ ಸಂಕೋಚ
ಅದುಮಿಡಲೂ ಸಹ ಆಗಲಾರದೆ
ಬರೆಯುತ್ತಿರುವೆ ಓಲೆ ಹಿಡಿದು ಕುಂಚ.!

ನೀನೂ ಸಹ ಓದುತ್ತಿಲ್ಲ ನನ್ನ ಮನ
ಕಣ್ಣಿಗೆ ಕಣ್ಣು ಬೆರೆಸಲೂ ಇಲ್ಲ ಏಕೋ
ಮನಸಿದ್ದರೂ ಮನಸು ಮಾಡುತ್ತಿಲ್ಲ
ನಾನೇ ಸೋಲಲೆಂಬ ಹಠವೇಕೋ.?

ಸೋತರೂ ಶರಣಾದರೂ ನಾನೆಂದೂ
ನಿನಗಾಗಿಯೇ ಬದುಕುವೆ ಗೆಳೆಯಾ
ನಾ ಬರೆದ ಬರಹದೆಲ್ಲದರ ಸಾರ
ನನ್ನ ನಿನ್ನ ಪ್ರೀತಿ ಕಥೆಯೇ ಬಲ್ಲೆಯಾ.?

      ಶೈಲೂ....
[24/8/2022, 5:20 pm] Dr. B. N. Shylaja Ramesh: ಬಾಳ ಪಯಣದ ಹಾದಿ
ಏಕೋ ತುಂಬಾ ಕಠಿಣವೆನಿಸುತ್ತಿದೆ
ಜೊತೆಗೆ ನೀನಿಲ್ಲದ ಮೇಲೆ
ಕ್ರಮಿಸುವುದೂ ದುಸ್ತರವೆನಿಸುತ್ತಿದೆ

ಹಾದಿಗುಂಟ ನಿನ್ನ ನೆನಪಿನ
ಹೂಮಳೆ ಸುಮ್ಮನೆ ಸುರಿಯುತ್ತಿದೆ
ನೆನಪಿನ ಮಳೆಯಲಿ ತೋಯ್ದು
ಕಣ್ಣೀರು ಧಾರಾಕಾರ  ದ್ರವಿಸುತ್ತಿದೆ

ಸವಿನೆನಪಿನ ಜೊತೆ ಜೊತೆಗೆ
ಬಿರುಮಾತಿನ ಮನ ಹಿಂಡಿದ ಸಮಯ
ನೆನೆನೆನೆದು ಒತ್ತರಿಸಿ  ದುಃಖ
ಬಾಳ ಪಯಣವೇ ಅಯೋಮಯ

           ಡಾ: ಶೈಲಜಾ ರಮೇಶ್
[25/8/2022, 12:01 pm] Dr. B. N. Shylaja Ramesh: ಜನ್ಮಕ್ಕಾಗುವಷ್ಟು ಪ್ರೀತಿಸಿದೆ ಗೆಳೆಯಾ
ಪ್ರತಿಜನುಮಕ್ಕೂ ಸುರಿವೆ ಪ್ರೀತಿ ಮಳೆಯ

ನೀನೆಂದರೆ ನನ್ನ ಬಾಳಬಾಂದಳದ ಚಂದ್ರಮ
ನಿನ್ನ ನೆನಪಿನಲ್ಲಿ ಅದೆಂಥದೋ ಸಂಭ್ರಮ
ಹುಣ್ಣಿಮೆಯ ಕಂಡು ಕಡಲುಕ್ಕಿ ಹರಿದಂತೆ
ನೀನಾವರಿಸಿದ ಈ ಮನದಲಿ ಸಂತಸದ ಸಂತೆ

      ಡಾ: ಬಿ.ನ್. ಶೈಲಜಾ ರಮೇಶ್
[25/8/2022, 12:02 pm] Dr. B. N. Shylaja Ramesh: #ನಿನ್ನ_ನೆನೆಯುವ_ಪ್ರತಿಕ್ಷಣ 

ನಿನ್ನ ನೆನೆಯುವ ಪ್ರತಿಕ್ಷಣವೂ ಹಬ್ಬ
ಆವರಿಸಿಬಿಟ್ಟಿರುವೆ ನೀ ಮನದ ತುಂಬಾ
ಅದೇನು ಸಂತಸ ಆವೇಗ ನಿನ್ನ ನೆನೆದಾಗ
ಚಿಮ್ಮುತ್ತಿದೆ ಸುಮ್ಮನೇ ಅನುರಾಗದ ರಾಗ

ನಿನ್ನ ಕಂಡಂದೇ ಮರುಳಾಗಿ ಶರಣಾದೆ
ನಿನ್ನ ಪ್ರೀತಿ ಸಾಗರದಿ ಮಿಂದು ಮಡಿಯಾದೆ
ಜನ್ಮಕ್ಕಾಗುವಷ್ಟು ಪ್ರೀತಿಸಿದೆ ಗೆಳೆಯಾ
ಪ್ರತಿಜನುಮಕ್ಕೂ ಸುರಿವೆ ಪ್ರೀತಿ ಮಳೆಯ

ನೀನೆಂದರೆ ನನ್ನ ಬಾಳಬಾಂದಳದ ಚಂದ್ರಮ
ನಿನ್ನ ನೆನಪಿನಲ್ಲಿ ಅದೆಂಥದೋ ಸಂಭ್ರಮ
ಹುಣ್ಣಿಮೆಯ ಕಂಡು ಕಡಲುಕ್ಕಿ ಹರಿದಂತೆ
ನೀನಾವರಿಸಿದ ಈ ಮನದಲಿ ಸಂತಸದ ಸಂತೆ

      ಡಾ: ಬಿ.ನ್. ಶೈಲಜಾ ರಮೇಶ್
[9/9/2022, 8:15 pm] Dr. B. N. Shylaja Ramesh: ನೆನಪಿನ ಸಾಗರದಲಿ
ತೇಲುತಿದೆ ಮನದ ದೋಣಿ
ಅಲೆಗಳ ಹೊಡೆತಕ್ಕೆ
ತತ್ತರಿಸುತ್ತಿದೆ ಜೀವವೆಂಬ ಪ್ರಾಣಿ

ಏರಿಳಿತಕ್ಕೆ ಪ್ರಕ್ಷುಬ್ಧ
ಅಲುಗಾಡುತ್ತಿದೆ  ಮನಸ್ಸು
ಎಲ್ಲಿ ಮುಳುಗಿಬಿಡುವುದೋ
ಆಸ್ಥೆಯಲಿ ಕಟ್ಟಿಕೊಂಡ ಕನಸು

ಸಮತೋಲನವಿರೇ ಮನ
ಹುಟ್ಟುಹಾಕಲು ಸರಾಗ
ಧುತ್ತನೆದುರಾಗಿ ಬರುವ
ಕಷ್ಟಗಳ ಹುಟ್ಟಡಗಿಸಲು ಸುಲಭ

ನೋವೋ ನಲಿವೋ ಏನಿರಲಿ
ಸಾಗಲೇಬೇಕಲ್ಲವೇ ಪಯಣ
ನೆನಪಿನಲೇಯ ಹೊಡೆತಕ್ಕೆ ಸಿಕ್ಕಿ
ದುಸ್ತರವಾಗದಿರಲಿ ಜೀವನ.!

ಇಷ್ಟಪಟ್ಟು ಸಾಗಿದರಾಯ್ತು
ಕಷ್ಟವೆಸುವುದಿಲ್ಲ ಜೀವನ
ಕಷ್ಟವೆನಿಸಿದರೂ ಸಹಿಸಿ
ನಗುನಗುತ್ತಿದ್ದಾಗಲೇ ಜೀವನ ಪಾವನ

ಡಾ:ಬಿ.ಎನ್ ಶೈಲಜಾ ರಮೇಶ್
[12/9/2022, 1:32 pm] Dr. B. N. Shylaja Ramesh: ಮನವೇಕೋ ಹೂಡಿದೆ ಮೌನ
ಅದೇನೋ ತಿಳಿಯುತ್ತಿಲ್ಲ ಕಾರಣ
ಏನಿಹುದೋ ಒಳಮನದ ತಲ್ಲಣ
ಮಾತೇ ಮರೆತಂತೆ ಕಾಡಿದೆ ಮೌನ

ಎದೆಯಲ್ಲಿ ಬಾರೀ ಕೋಲಾಹಲ
ಉಕ್ಕುತ್ತಿದೆ ಕೋಪದ ಹಾಲಾಹಲ
ಏನಾದೀತೋ ಎಂಬಂತೆ ತಳಮಳ
ಸಿಟ್ಟೇರಿ  ಮೆರೆದೀತೆಂಬ ಕಳವಳ 

ಸಹಿಸಲಾಗುತ್ತಿಲ್ಲ ಮೌನದ ನೀರ 
ನೀರವತೆಗೆ ನನ್ನದೇನಿಲ್ಲ ಪ್ರಭಾವ
ಸುಮ್ಮನೆ ಪ್ರೀತಿಸುವುದೆನ್ನ ಸ್ವಭಾವ
ಸೇರು ಬಾರೆನ್ನ ತೊರೆದು ಮೌನದ ಭಾವ
....... ಶೈಲೂ.
[14/9/2022, 7:58 pm] Dr. B. N. Shylaja Ramesh: ಎಲ್ಲದಕ್ಕೂ ಒಂದೊಂದು
ಅವಿನಾಭಾವ ಸಂಬಂಧ
ಒಂದಿಲ್ಲದೇ ಮತ್ತೊಂದು
ಇದ್ದರೆ ಆದೇನು ಚಂದ.?
ಹೂವಿಗಾಗಿಯೇ ದುಂಬಿ
ದುಂಬಿಯಿಹುದು ಹೂವ ನಂಬಿ
ಹಕ್ಕಿಗೆ ಬೇಕು ಬಾನು
ಸ್ವಚ್ಛಂದ ಹಾರಲು ತಾನು
ಎಲ್ಲವೂ ಪ್ರಕೃತಿ ನಿಯಮ
ಒಂದಕ್ಕೊಂದು ಪೂರಕ
ಇದ್ದರೇನೇ ಕ್ಷೇಮ..!
[14/9/2022, 8:02 pm] Dr. B. N. Shylaja Ramesh: ಮರಳಿ ಮನಸಾಗಿದೆ

ಹುಸಿಕೋಪವಿತ್ತು ನಿನ್ನಲಿ
ಮತ್ತೆಂದೂ ಎದುರು ಸುಳಿಯದಂತೆ
ಪರಿತಾಪ ತಾಳೆ ಮನದಲಿ
ಮರೆತೆನೆಂದರೂ ಮರೆಯಲಾರದಂತೆ

ಅದಾವುದೋ ವಿಷಘಳಿಗೆ
ನಮ್ಮಿಬ್ಬರನ್ನೂ ದೂರಮಾಡಿ ವಿಧಿಯು
ಮನಸ್ತಾಪ ಹೆಚ್ಚಾದಂತೆಯೇ
ಮರೆತೇ ಹೋಯ್ತು ಮನದ ನುಡಿಯು

ಮನಸ್ಸಿನಿಂದ ದೂರವಿಡಲು
ಮಾಡಿದ ಹರಸಾಹಸ ಅಷ್ಟಿಷ್ಟಲ್ಲ
ದೂರವಿಡಲು ಸಾಧ್ಯವಾಗದೆ
ಮತ್ತೆಮತ್ತೆ ಮರಳಿ ಮನಸಾಯಿತಲ್ಲ

ಬಂದುಬಿಡು ಮತ್ತೆ ಮನಸಿಗೆ
ಗೆಳೆಯಾ ನೀನಿಲ್ಲದೇ ಬದುಕಿಲ್ಲವೆನಗೆ
ನೀ ಬಂದರೆನ್ನ ಬಾಳ ತೆರೆಗೆ
ತೆರೆದಂತೆ ಭಾಗ್ಯದ ಬಾಗಿಲು ಬಾಳಿಗೆ

    ಡಾ: ಶೈಲಜಾ ರಮೇಶ್
[16/9/2022, 4:15 pm] Dr. B. N. Shylaja Ramesh: #ಇಂದಾದರು_ನೀ_ಬರಬಾರದೇನು 
ನಿನಗಾಗಿಯೇ ಕಾಯುತಿಹೆ
ಪ್ರತಿದಿನ  ದಾರಿಯನೆದಿರುನೋಡುತ್ತ
ಎಂದಾದರೂ ನೀ ಬರುವೆಯೆಂದು
ಕಾತರದಿಂದ ನಿನ್ನನೇ ಹಂಬಲಿಸುತ್ತಾ

ನಿನ್ನ ನಗುಮೊಗವ ಕಣ್ತುಂಬಿ
ಆಸ್ಥೆಯಲಿ ಮನದಲ್ಲೇ ಆರಾಧಿಸುತ್ತಾ
ಆ ಕಿಲಕಿಲ ಸಿಹಿನಗುವ ಚೆಲುವ
ಕುಳಿತಲ್ಲೇ ಮನತುಂಬಿ ಆಸ್ವಾದಿಸುತ್ತಾ

ಕರ್ಣಾಮೃತದ ಚೆಲುನುಡಿಯ
ಸಿಹಿ ಸ್ವಾದವನನುಭವಿಸಿ ಸಂಭ್ರಮಿಸುತ್ತಾ
ನಿನ್ನೊಡನಾಟದ ಸನಿಹಸುಖವನು
ನೆನೆನೆನೆದು ಮನದೊಳಗೇ ಕಂಪಿಸುತ್ತಾ

ಸಾಕಾಯಿತಿಂದು ಗೆಳೆಯಾ
ಮನದಲವಿತ ನೋವನು ಸಂತೈಸುಸುತ್ತಾ
ಇಂದಾದರೂ ಬರಬಾರದೇನು
ನೀ ಮಾಡಿದ ಗಾಯಕ್ಕೆ ಮದ್ದೆರೆಯುತ್ತಾ

ಡಾ: ಶೈಲಜಾ ರಮೇಶ್
[19/9/2022, 1:20 pm] Dr. B. N. Shylaja Ramesh: #ಒಡಲಾಳದ_ಪ್ರೀತಿ 
ಯಾಕಳುವೆ ಎಲೆ ಕಂದ
ಬೇಡಿ ತಂದಾದರೂ ಹಾಲುಣಿಸುವೆ
ಅಮ್ಮ ಇಲ್ಲದಿದ್ದರೇನಂತೆ
ನಿನ್ನ ಸಲಹಲು ಅಣ್ಣ ನಾನಿಲ್ಲವೇ.?

ಬಿಸಿಲಿಗಾಸರೆ ಇಲ್ಲ, ಬಡವ
ಆದರೇನಂತೆ ನನ್ನ ತೋಳಿನಾಸರೆಯಿದೆ
ಆಡಿ ಬೆಳೆ ನೀ ಕಂದ ಸುಮ್ಮನೆ
ತಬ್ಬಲಿ ನೀನಲ್ಲ ನಿನಗೆನ್ನ ಮಡಿಲಿದೆ..!

ನಿನ್ನಾಟಪಾಟ ಸಾಗಲಿ
ನೋಡಿ ನಲಿಯಲು ಕಂದ, ನಾನಿಹೆನಿಲ್ಲಿ
ಎಲ್ಲ ನೋವನು ಮರೆತು
ಬಾಳಲಿ ಬೆಳಕ ಕಾಣುವೆ ನಿನ್ನ ನಗುವಲ್ಲಿ

ನಿನಗೆ ನಾನಾಸರೆಯಾಗುವೆ
ಮಗುವೇ ನೀನೇ ನನ್ನ ಬಾಳಿಗಾಸರೆ
ಒಡಲಾಳದ ಪ್ರೀತಿ ಬತ್ತದೆಂದೂ
ಪ್ರೀತಿಯೊಂದೇ ಕಂದ ನಮಗಾಸರೆ..!

ಡಾ: ಶೈಲಜಾ ರಮೇಶ್
[21/9/2022, 10:30 am] Dr. B. N. Shylaja Ramesh: #ಒಲವಿನ_ಜೀವ 
ನೀ ನನ್ನೊಲವಿನ ಜೀವ
ಪ್ರೀತಿಸುವುದೇ ನಿನ್ನ ಸ್ವಭಾವ
ನನ್ನ ಮೇಲೆ ನಿನ್ನದೇ ಪ್ರಭಾವ
ಉದ್ದೀಪಿಸಿದೆ ನೀ ಪ್ರೇಮಭಾವ

ಎಲ್ಲೋ ಸುಮ್ಮನಿದ್ದೆ ನಾನು
ಅದೆಲ್ಲಿಂದ ಬಂದೆಯೋ ನೀನು
ಸುಮ್ಮನಿದ್ದ ಮನದ ಕದವ ತೆರೆದು
ಕುಳಿತುಬಿಟ್ಟೆಯೇಕೆ ನಿನ್ಹೆಸರ ಬರೆದು

ಅಂದಿನಿಂದ ನನ್ನ ಜೀವವಾದೆ
ಆರಾಧಿಸುವೆ ನಿನ್ನ ಅನುರಾಗದೆ
ಕ್ಷಣ ದೂರಾದರೂ ಏಕೋ ಚಡಪಡಿಕೆ
ಕನಸುಮನಸಲೂ ನಿನ್ನದೇ ಕನವರಿಕೆ

ಹೇ ನನ್ನೊಲವಿನ ಜೀವ
ನೀಡೆನೆಂದಿಗೂ ಇನಿತೂ ನೋವ
ಸಾವಿರ ಕಷ್ಟ ಬಂದರೂ ಸಹಿಸುತ
ಜೊತೆಗೆ ಹೆಜ್ಜೆಹಾಕುವೆ ನಿನ್ನನುಸರಿಸಿತ

      ಡಾ: ಬಿ ಎನ್ ಶೈಲಜಾ ರಮೇಶ್
[22/9/2022, 6:55 pm] Dr. B. N. Shylaja Ramesh: #ಬದುಕು_ತಲ್ಲಣಗಳೊಳಗೆ_ಪ್ರೀತಿಸು

ಬದುಕು ಸದಾ ತಲ್ಲಣಗಳ ಸಂತೆ
ಆ ತಲ್ಲಣದೊಳಗೂ ಬದುಕಲೇಬೇಕಂತೆ
ಬೆಳಗು ಸಂಜೆಯಾದರೆ ಕಳವಳ
ಬದುಕು ಮುಂದೇನೋ ಎಂಬ ತಳಮಳ

ನಾವೆಣಿಸಿದಂತಾದರೆ ಬದುಕು
ಸದಾ ಸುಖ ಸಂತೋಷದ ಹೊಂಬೆಳಕು
ಹಳಿತಪ್ಪಿದರೆ ಬದುಕು ಬರಡು
ಏನೊಂದೂ ಅರಿವಾಗದ ಹಗಲುಗುರುಡು

ಜೀವನದಲ್ಲಿರಬೇಕು ಹೊಸತು
ಜೊತೆಗೆ ಬೆಂಬಲವಾಗಿರಲೇಬೇಕು ಹಳತು
ಹಳೆಬೇರಿನ ಜೊತೆಗೇ ಚಿಗುರು
ಕೂಡಿ ಬೆಳೆದರೆ ತಾನೇ ಮರದ ಸೊಗಸು.!

ಬದುಕಿನಲಿಹುದು  ಅಡೆತಡೆ 
ದಾಟಿ ನಡೆಯಲಿರಬೇಕು ಸಹನೆ, ಭಿಡೆ.!
ತಲ್ಲಣಗಳೊಳಗೇ ಬದುಕ ಚಿತ್ರಣ
ಜೀವನವಿದು ಸುಖ ದುಃಖಗಳ ಮಿಶ್ರಣ.!

ಪ್ರೀತಿಯೊಂದೇ ಆತ್ಮಸಂಗಾತಿ
ಪ್ರೀತಿಸುವುದರಲೇ ಇದೆ ಸುಖದ ಸಂಗತಿ
ನೊಂದುಬೆಂದರೇನಿದೆ ಬದುಕು.?
ನೋವಿನಡಿಯಲ್ಲಿಯೇ ಕಳೆದ ಸುಖವ ಹುಡುಕು.!

ಡಾ: B.N ಶೈಲಜಾ ರಮೇಶ್
[22/9/2022, 7:18 pm] Dr. B. N. Shylaja Ramesh: #ಬದುಕು_ತಲ್ಲಣಗಳೊಳಗೆ_ಪ್ರೀತಿಸು

ಬದುಕು ಸದಾ ತಲ್ಲಣಗಳ ಸಂತೆ
ಆ ತಲ್ಲಣದೊಳಗೂ ಬದುಕಲೇಬೇಕಂತೆ
ಬೆಳಗು ಸಂಜೆಯಾದರೆ ಕಳವಳ
ಬದುಕು ಮುಂದೇನೋ ಎಂಬ ತಳಮಳ

ನಾವೆಣಿಸಿದಂತಾದರೆ ಬದುಕು
ಸದಾ ಸುಖ ಸಂತೋಷದ ಹೊಂಬೆಳಕು
ಹಳಿತಪ್ಪಿದರೆ ಬದುಕು ಬರಡು
ಏನೊಂದೂ ಅರಿವಾಗದ ಹಗಲುಗುರುಡು

ಜೀವನದಲ್ಲಿರಬೇಕು ಹೊಸತು
ಜೊತೆಗೆ ಬೆಂಬಲವಾಗಿರಲೇಬೇಕು ಹಳತು
ಹಳೆಬೇರಿನ ಜೊತೆಗೇ ಚಿಗುರು
ಕೂಡಿ ಬೆಳೆದರೆ ತಾನೇ ಮರದ ಸೊಗಸು.!

ಬದುಕಿನಲಿಹುದು  ಅಡೆತಡೆ 
ದಾಟಿ ನಡೆಯಲಿರಬೇಕು ಸಹನೆ, ಭಿಡೆ.!
ತಲ್ಲಣಗಳೊಳಗೇ ಬದುಕ ಚಿತ್ರಣ
ಜೀವನವಿದು ಸುಖ ದುಃಖಗಳ ಮಿಶ್ರಣ.!

ಪ್ರೀತಿಯೊಂದೇ ಆತ್ಮಸಂಗಾತಿ
ಪ್ರೀತಿಸುವುದರಲೇ ಇದೆ ಸುಖದ ಸಂಗತಿ
ನೊಂದುಬೆಂದರೇನಿದೆ ಬದುಕು.?
ನೋವಿನಡಿಯಲ್ಲಿಯೇ ಕಳೆದ ಸುಖವ ಹುಡುಕು.!

ಡಾ: B.N ಶೈಲಜಾ ರಮೇಶ್
[23/9/2022, 1:53 pm] Dr. B. N. Shylaja Ramesh: #ಕನಸಲು_ನಿನ್ನದೆ_ಕನವರಿಕೆ 
ಈಗ ಬರುವೆನೆಂದು ಹೋದವ ನೀನು
ನಿನಗಾಗಿಯೇ ಕಾದು ಕುಳಿತೆನು ನಾನು
ಬರುವ ದಾರಿ ಮರೆತು ಹೋಯಿತೇನು
ನೀ ಆಡಿದ ಮಾತುಗಳೆಲ್ಲ ಪೊಳ್ಳೇನು಼.?

ಅರ್ಥವಾಯ್ತು ಬಿಡು ಪ್ರೀತಿಯೆಲ್ಲ ಸುಳ್ಳು
ಆ ನಾಟಕದ ಪ್ರೀತಿಯಲೇನಿಲ್ಲ ಹುರುಳು 
ನೀನಾಡಿದ್ದ ಮಾತಿಗೆಲ್ಲ ತೂಗಿದ್ದೆ ಕೊರಳು
ಅರ್ಥವಾಗ್ದಾಯ್ತೆಕೆ ನಿನ್ನ ಮಾತಿನ ತಿರುಳು

ನೀ ಏನಾದರೂ ಸರಿ ನಾನಿನ್ನ ಪ್ರೀತಿಸಿದ್ದೆ
ಮನದ ಗುಡಿಯಲಿಟ್ಟು ನಾ ಆರಾಧಿಸಿದ್ದೆ
ನೆನೆನೆನೆದು ಕನಸುಮನಸಲಿ ಕನವರಿಸಿದ್ದೆ
ಪ್ರೀತಿಯನರಿಯದೆ ನೀ ತೊರೆದು ಹೋದೆ

ದಾರಿ ಕಾಯುತಲಿಹೇ ಬಂದುಬಿಡು ಬೇಗ
ನೀ ಬಳಿಇಲ್ಲದೇ ಸಾಗದು ಜೀವನ ಸರಾಗ
ಒಬ್ಬರನ್ನೊಬ್ಬರು ಅರಿತಾಗಲೇ ಅನುರಾಗ
ನುಡಿಸು ಬಾರೆಯಾ ಹರುಷದಲಿ ಜೀವನರಾಗ

ಡಾ: ಶೈಲಜಾ ರಮೇಶ್
[26/9/2022, 4:47 pm] Dr. B. N. Shylaja Ramesh: #ನವರಾತ್ರಿ_ವಿಶೇಷ_ಕವನ_ಸಂಚಿಕೆ

#ಶೈಲಪುತ್ರಿ

ನವದುರ್ಗೆಯರಲ್ಲಿ ಪ್ರಥಮ ಪೂಜಿತಳು
ಪರ್ವತರಾಜ ಹಿಮವಂತನ ಮಗಳಿವಳು
ಸತಿ, ಶಿವೆ, ಪಾರ್ವತಿ ಆದಿಶಕ್ತಿ ಸ್ವರೂಪಿಣಿ
ವೃಷರುಧ ದೇವಿ ಇವಳು ವೃಷಭವಾಹಿನಿ..!

ಮೂಲಾಧಾರ ಚಕ್ತದ ದೇವತೆ ಯೋಗಿನಿ
ಜಾಗೃತಳಾಗೆ ಪ್ರಗತಿ ಆಧ್ಯಾತ್ಮಿಕರೂಪಿಣಿ
ಶ್ವೇತವರ್ಣಪ್ರಿಯೆ ದೇವಿ ಶ್ವೇತಪುಷ್ಪ ಪೂಜಿತೆ
ತ್ರಿಶೂಲ, ಕಮಲಧಾರಿಣಿ ಸಕಲರ ಮಾತೇ.!

ದ್ವೇಷಾಸೂಯೆ ಈರ್ಷೆಯ ನಿಯಂತ್ರಿಣಿ
ಚಂಚಲತೆಯ ಮನದ ತ್ರಿತಾಪಹಾರಿಣಿ
ಶರನ್ನವರಾತ್ರಿಯ ಪ್ರಥಮದಿನ ಪೂಜಿತೆ
ಶಾಂತ ಸ್ವರೂಪಿಣಿ ದೇವಿ ಭಾಗ್ಯಪ್ರದಾತೆ.!

ಧರ್ಮಾರ್ಥಕಾಮಮೋಕ್ಷ ಪ್ರದಾಯಿನಿ
ಭಕ್ತಿಯಲಿ ಪೂಜಿಸೆ ಸಕಲ ದುಃಖಹಾರಿಣಿ
ಶಿವನವರಿಸಲು ಧರೆಗಿಳಿದ ದಾಕ್ಷಾಯಿಣಿ
ಸಕಲ ಸಂಕಷ್ಟಗಳ ತರಿವ ಪಾಪಹಾರಿಣಿ.!

ಡಾ: ಶೈಲಜಾ ರಮೇಶ್

(12 ಸಾಲಿನ ಮಿತಿ ಹೇಳಿದ್ದೀರಿ, ಆದರೆ ನಾನು 16 ಸಾಲುಗಳಲ್ಲಿ ಬರೆದಿದ್ದೇನೆ, ಸಾಧ್ಯವಾದರೆ ಸ್ಪರ್ಧೆಗೆ ಪರಿಗಣಿಸಿ..
ಇಲ್ಲವಾವರೆ... ಸುಮ್ಮನೆ ಕವಿತೆ ಎಂದು ಸ್ವೀಕರಿಸಿ🙏🙏
ಕ್ಷಮೆಯಿರಲಿ🙏🙏)
[27/9/2022, 4:05 pm] Dr. B. N. Shylaja Ramesh: #ಬ್ರಹ್ಮಚಾರಿಣಿ

ದುರ್ಗೆಯ ನವಾವತಾರದಲಿ ದ್ವಿತೀಯಳು
ಶ್ರೀಶೈಲರಾಜ ಹಿಮವಂತನ ಮುದ್ದು ಮಗಳು
ಶಿವನ ಪಡೆಯಲು ಘೋರ ತಪವನಾಚರಿಸಿ
ನೆಲೆನಿಂತಳು ಕಮಂಡಲು ಜಪಮಾಲೆ ಧರಿಸಿ..!

ಶ್ವೇತವಸ್ತ್ರವಿಭೂಷತೆ ಶ್ವೇತ ಪುಷ್ಪ ಪ್ರಿಯೆ
ಶಾಂತಿ ಆಹ್ಲಾದಕಾರಿಣಿ ಶ್ರೀ ಶಿವಪ್ರಿಯೆ
ಜ್ಞಾನಪ್ರದಾಯಿನಿ ಶಿವೆ ತಾಪಹಾರಿಣಿ
ಭಕ್ತಿಯಲಿ ಪೂಜಿಸೆ ಭೌಮ ಗ್ರಹದೋಷಹಾರಿಣಿ..!

ಬ್ರಹ್ಮಹಚಾರಿಣಿಯ ಪೂಜೆ ತಪಸ್ಸಿನ ಸಮಾನ
ದೇವಿಯೀವಳು ತೃಪ್ತಿ ಸುಖ ಸಂಪತ್ತು ಸದ್ಗುಣ
ಎಲ್ಲ ರೀತಿಯ ಅಡೆತಡೆಗಳೆಲ್ಲ ನಿವಾರಣೆ
ಕೃಪೆತೋರಿ ನೀಡುವಳು ಯಶಸ್ಸಿಗೆ ಪ್ರೇರಣೆ..!

✍️ಡಾ: B.N ಶೈಲಜಾ ರಮೇಶ್
(ಶೈಲೂ)
[28/9/2022, 7:18 pm] Dr. B. N. Shylaja Ramesh: #ನವರಾತ್ರಿ_ವಿಶೇಷ_ಸಂಚಿಕೆ

#ಚಂದ್ರಘಂಟ

ಮೈನಾ ಹಿಮವಂತನ ಗರ್ಭಸಂಜಾತೇ
ನವರಾತ್ರಿಯ ತದಿಗೆಯಲಿ ಉಪಾಸಿತೇ
ಹೇಮವರ್ಣದ ಹೊಳಪುಳ್ಳಂತ ಶರೀರಿಣಿ
ದುಷ್ಟ ದಮನವಗೈವ ತಾಯೆ ತಾರಿಣಿ..!

ರಣಚಂಡಿಯಿವಳು ದುಷ್ಟ ಜನರ ಸಂಹಾರಿಣಿ
ಫಾಲನೇತ್ರವ ಸದಾ ಕಾಲ ತೆರೆದಿಟ್ಟ ತ್ರಿನಯನಿ
ಪ್ರೇತಬಾಧೆ, ಮಾನಸಿಕ ಕ್ಲೇಶವ ಹರಿಸುವ ದೇವಿ
ಶಿವನ ಶಕ್ತಿಯಿವಳು ತಾಯೆ ಅರ್ಧನಾರೀಶ್ವರಿ, ಶಿವೆ

ಸಿಂಹವಾಹಿನಿ ಸಕಲರ ಪೊರೆವ ಜನನಿ
ಸಮಸ್ತ ಪಾಪಗಳ ತರಿವ ಭವತಾರಿಣಿ
ಶಿರದಲಿ ಚಂದ್ರನ ಧರಿಸಿ ಯುದ್ಧಕ್ಕೆ ಹೊರಟ
ದಶಭುಜದಿ ಶಸ್ತ್ರಾಸ್ತ್ರವ ಪಿಡಿದ ಚಂದ್ರಘಂಟ..!

 ತಾಯ ಕರುಣದಿ ಮನ ಮಣಿಪೂರದಿ ನೆಲೆನಿಂತು
ಕೃಪೆಯಗೈದು ತೋರಿಸುವಳು ಅಲೌಕಿಕ ವಸ್ತು
ದಿವ್ಯ ಮಂಗಳ ಪ್ರಭೆಯ ದಿವ್ಯಾನುಭವವಿತ್ತು
ನೀಡುವಳು ದೇವಿ ಸಕಲ ಸುಖ ಸಂವೃದ್ಧಿಯ ಸ್ವತ್ತು.!

ಡಾ: B.N ಶೈಲಜಾ ರಮೇಶ್
[29/9/2022, 2:42 pm] Dr. B. N. Shylaja Ramesh: #ಕೂಷ್ಮಾಂಡ_ದೇವಿ

ನವದುರ್ಗೆಯ ಚತುರ್ಥರೂಪ ಕೂಷ್ಮಾಂಡ
ಗಾಢಾಂಧಕಾರದಿಂದ ತುಂಬಿರಲು ಬ್ರಹ್ಮಾಂಡ
ಸೂರ್ಯನೊಡಲ ಕೇಂದ್ರದಲ್ಲಿ ಪ್ರಭೆಯ ಬೆರೆಸಿ
ಬೆಳಕಾದಳು ತಾಯಿ ಬ್ರಹ್ಮಾಂಡವ ಸೃಜಿಸಿ...!

ಕಮಂಡಲು ಗಧೆ ಜಪಮಾಲೆ ಪಿಡಿದ ಅಷ್ಟಭುಜೆ
ಕಮಲ ಕಳಸ ಧನುರ್ಬಾಣ ಅಭಯಹಸ್ತದ ಗಿರಿಜೆ
ದಯೆ ಧರ್ಮದ ಪ್ರತೀಕವಿವಳು ವ್ಯಾಘ್ರವಾಹಿನಿ
ನಂಬಿದ ಭಕ್ತರ ಪೊರೆವ ಅಭಯದಾಯಿನಿ..!

ಅಷ್ಟಸಿದ್ದಿ, ನವನಿಧಿ ಪ್ರದಾತೆ ತಾಯೆ ಕೂಷ್ಮಾಂಡ
ನಿನ್ನ ಮುಗುಳ್ನಗೆಯಲೇ ಬೆಳಗುತಿಹುದು ಬ್ರಹ್ಮಾಂಡ
ಕೂಷ್ಮಾಂಡಫಲ ಬಲಿ ಸರ್ವದೋಷಾಪಹಾರಿ
ತಾಯಿಯಿವಳನು ಪೂಜಿಸೆ ಸರ್ವರೋಗತಾಪಹಾರಿ..!

ರಕ್ತವರ್ಣಪ್ರಿಯೆ ದೇವಿ ರಕ್ತಪುಶ್ಪೋಪಶೋಭಿತೆ
ಮನದ ಕ್ಲೇಶಕಳೆದು ಜ್ಞಾನದ ಬೆಳಕೀವ ಮಂದಸ್ಮಿತೆ
ನಿನ್ನೊಡಲೊಳಗಡಗಿದೆ ದೇವಿ ಬ್ರಹ್ಮಾಂಡದ ಚೈತನ್ಯ
ನೀನೊಲಿದ ಭಕ್ತಜಬರೆಂದೆಂದಿಗೂ ಲೋಕಮಾನ್ಯ..!

✍️ ಡಾ: B.N ಶೈಲಜಾ ರಮೇಶ್
[30/9/2022, 2:33 pm] Dr. B. N. Shylaja Ramesh: #ಸ್ಕಂದಮಾತಾ

 ಜಗದ್ಕಲ್ಯಾಣಕರರೂಪ, ತರಿಯುವಳು ತ್ರಿತಾಪ
ಪದ್ಮಾಸನಾ ವಿರಾಜಿತೆ ಗೌರವರ್ಣದ ರೂಪ
ಅಭಯ ಹಸ್ತದ ಚತುರ್ಭುಜಧರೇ ದೇವಿ
ನಿನ್ನ ಕರುಣಾಕಟಾಕ್ಷದಲಿ ಬೆಳಕಾಯಿತು ಭುವಿ..!

ಬ್ರಹ್ಮದೇವನ ವರದ ಬಲದಿಂದ ಮೆರೆದ
ದೇವಲೋಕವನು ತನ್ಹಿಡಿತದಲಿಟ್ಟು ತರಿದ
ದುಷ್ಟ ತಾರಕನ ಅಟ್ಟಹಾಸದಲಿ ನಲುಗಿ
ದೇವಗಣ ತತ್ತರಿಸಿಬಿಟ್ಟಿತು ಹೆದರಿ ನಡುಗಿ..!


ಶಿವ-ಶಿವೆಯರ ಸಮಾಗಮದಿಂದ  ಜನಿಸಿದ
ಕಂದನಿಂದಲೇ ಮರಣ ನೀಡೆಂದು ಬೇಡಿದ
ರಕ್ಕಸನ ಬೇಡಿಕೆಗೆ ಬ್ರಹ್ಮ ತಥಾಸ್ತು ಎಂದುಸುರಿದ
ಬೆಸೆಯಿತಾಗ ಜಗದ್ಮಾತಾಪಿತರ ಸಂಬಂಧ..!

ತಾರಕಾಸುರನ  ವಧಿಸಲು ಜನಿಸಿದ ಮಾತೆಯ ಕಂದ
ಷಣ್ಮುಖ, ಸ್ಕಂದನೆಂದೇನಿಸಿ ದೇವ ಸೇನಾನಿಯಾದ
ತರಿದು ರಕ್ಕಸನ  ಲೋಕಕಲ್ಯಾಣಕೆ ಕಾರಣೀಭೂತ
ದೇವತೆಗಳ ಹರ್ಷೋದ್ಗಾರಕೆ ಕಾರಣ ಸ್ಕಂದಮಾತ..!

ದೇವಿಯಾರಾಧನೆಯಿಂದ  ಸುಖಸಂಪತ್ತು ಸಂವೃದ್ಧಿ
ಬುಧ ಗ್ರಹದ ಕೃಪೆದೊರೆತು ಸದ್ವಿದ್ಯೆ, ವೃದ್ಧಿ ಸದ್ಬುದ್ಧಿ
ಕೆಂಪುಗುಲಾಬಿ ಪುಷ್ಪದರ್ಚನೆ ಪ್ರಿಯ ಸ್ಕಂದಮಾತೆಗೆ
ತಾಯಕೃಪಾಶೀರ್ವಾದ ಬೇಕು ಜೀವನದ ಸದ್ಗತಿಗೆ..!

✍️ ಡಾ: B.N ಶೈಲಜಾ ರಮೇಶ್
(ಶೈಲೂ...)
[1/10/2022, 6:48 pm] Dr. B. N. Shylaja Ramesh: #ಕಾತ್ಯಾಯಿನಿ

ದುರ್ಗಾದೇವಿಯ ಆರನೇ ರೂಪ
ಕಾತ್ಯಾಯಿನಿ ತಾಯೆ ಹರಿಸು ತ್ರಿತಾಪ
ಮಹಿಷಾಸುರನ ಶಿರವ ಮರ್ಧಿಸಿದಂತೆಯೇ
ಮನದೊಳಗಡಗಿಹ ರಕ್ಕಸನ ದಹಿಸು ತಾಯೇ 

ಕಾತ್ಯಾಯಯನಪುತ್ರಿ ಬ್ರಜ ಮಂಡಲಾಧಿದೇವಿ
ಅವಿವಾಹಿತರಿಗೆ ಕಂಕಣ ಭಾಗ್ಯವೀವ ದೇವಿ
ನಿನ್ನ ಪೂಜಿಸೆ ಸಕಲ ದಾಂಪತ್ಯದೋಷ ದೂರ
ನಂಬಿಭಜಿಪ ಭಕ್ತರ ಮೇಲೆ ನಿನ್ನ ಕೃಪೆ ಅಪಾರ

ಶಾರ್ದೂಲವಾಹನೆ ದೇವಿ ದಾನವ ನಾಶಿನಿ
ಸರ್ವಭೂತಸ್ಥಿತೆ ಶ್ರೀಮಾತಾ ಕಾತ್ಯಾಯಿನಿ
ಸುಜನರಕ್ಷಕಿ ದೇವಿ ಆಯುರಾರೋಗ್ಯ ಪ್ರದಾಯಿನಿ
ಜಪಾಪುಷ್ಪ ಸಂಪ್ರೀತೆ  ಸೌಂದರ್ಯವರ್ಧಿನಿ

ಹೇಮವರ್ಣ ಶರೀರೇ ಚತುರ್ಭುಜ ಧಾರಿಣಿ
ಅಭಯಮುದ್ರಾ ದೇವಿ ಗುರುಗ್ರಹದೋಷ ಹಾರಿಣಿ
ಭಕ್ತಿಯಲಿ ಪೂಜಿಸುವೆ ಕರುಣಿಸು ಸುಜ್ಞಾನ ವಿವೇಕ
ಜ್ಞಾನಮಾರ್ಗದಲಿ ನಡೆಸಿ ಕಾಪಾಡು ಈ ಲೋಕ

✍️ ಡಾ: ಶೈಲಜಾ ರಮೇಶ್
[2/10/2022, 6:48 pm] Dr. B. N. Shylaja Ramesh: #ಕಾಳರಾತ್ರಿ

ನವದುರ್ಗೆಯ ಸಪ್ತಮಾವತಾರಿಣಿ
ಕಾಳರಾತ್ರಿ ಶುಂಭನಿಶುಂಭ ಮರ್ಧಿನಿ
ಕಡುಶ್ಯಾಮವರ್ಣೆ ಗಾರ್ದಭ  ವಾಹಿನಿ
ಹೇ.. ಮಾತೇ... ಭಯಂಕರ ರೂಪಿಣಿ..!

ರಕ್ತಸಿಕ್ತ ರಸಾಲ ಕೆಂಡದುಂಡೆಯಂಥ ನಯನ
ರಕ್ತವಸ್ತ್ರಧಾರಿಣಿ ಅತಿ ಉಗ್ರಯುಕ್ತ ವದನ
ದುಷ್ಟವಿನಾಶಕಾರಿ ಅತ್ಯುಗ್ರ ದೃಷ್ಟಿಯ ನೋಟ
ಕರಾಳ ರಾತ್ರಿಯಧಿಪತ್ಯಿನಿ ವಿದ್ವಂಸಿಸು ಹೂಟ..!

ರಕ್ತಬೀಜಾಸುರನ ನೀ ಕೊಂದೇಯಂತೆ
ನಮ್ಮೊಳಡಗಿಹ ದುಷ್ಟತನವ ತರಿಯೇ ಮಾತೇ
ಕೈಯಲಿಡಿದ ಖಡ್ಗದಿಂದ ಅತಿಯಾಸೆಯ ಮಣಿಸು
ಅಭಯ ಹಸ್ತವನೆತ್ತಿ ಶುಭವನಿತ್ತು ಹರಸು..!

ನಿನ್ನ ಪೂಜಿಸಲು ಸಕಲ ಸಿದ್ಧಿಗಳು ಲಭ್ಯ
ತಂತ್ರ - ಮಂತ್ರ ಕಾರ್ಯಗಳಲ್ಲಿ ಜಯ
ನಿನ್ನ ನೆನೆಯಲು  ಓಡಿ ಹೋಗುವುವು ಭಯ
ದುಷ್ಟಶಕ್ತಿಗಳಿಂದ ತಾಯೆ ನೀಡಮ್ಮ ಅಭಯ..!

ಡಾ: B.N ಶೈಲಜಾ ರಮೇಶ್
[2/10/2022, 7:41 pm] Dr. B. N. Shylaja Ramesh: ಶ್ರೀ ದುರ್ಗೆ - ಜಯ ದುರ್ಗೆ
*********************

ಜಯ ಜಯ ದುರ್ಗೆ ದುರ್ಗತಿ ನಾಶಿನಿ
ಜಯ ಜಯ ಅಂಬೇ ಸಿಂಹವಾಹಿನಿ
ಜಯ ಜಯ ದುರ್ಗೆ ಮಹಿಷಮರ್ಧಿನಿ
ಜಯ ಜಯ ದುರ್ಗೆ ದುಷ್ಟ ಧ್ವಂಸಿನಿ || ಜಯ ||

ತ್ರಿಮೂರ್ತಿಗಳ ಅಸ್ತ್ರವ ಪಡೆದು
ಲಕ್ಷ್ಮಿ ಶಾರದೆಯರ ಶಕ್ತಿಯ ಹೊಂದಿ
ಶುಂಭ ನಿಶುಂಭರ ಭಸ್ಮವ ಮಾಡಿ
ಭಕ್ತರ ಸಲಹಿದ ಭಕ್ತಾಗ್ರಣಿಯೇ || ಜಯ ||

ಚಂಡ ಮುಂಡರ ರುಂಡವ ಕಡಿದು
ಭಂಡ ದೈತ್ಯರ ಹೆಡೆಮುರಿಕಟ್ಟಿ
ರಕ್ತಬೀಜಾಸುರನ ನೆಲಸಮಮಾಡಿ
ಶಿಷ್ಟರ ಪೊರೆವ ಜಯ ಜಗನ್ಮಾತೆಯೇ || ಜಯ ||

ಪಾಶಾಂಕುಶಧರೆ ಸಿಂಹವಾಹಿನಿ
ದುರುಳ ದೈತ್ಯರಿಗೆ ಸಿಂಹ ರೂಪಿಣಿ
ಪರಮೇಶ್ವರನ ಹೃದಯನಿವಾಸಿನಿ
ಸರ್ವರ ಪೊರೆಯೇ ಜಯಜಗಜ್ಜನನಿ || ಜಯ ||

ಸಾಧುಜನವಂದಿತೆ ಜಯಮಹಿಮಾನ್ವಿತೆ
ವಂದಿಪೆ ಜನನಿ ಜಯ ಜಗದ್ವಂದಿತೆ
ಸನ್ಮತಿ ನೀಡು ಜಯಜಗದಂಬಿಕೆ
ಜಯತು ಜಯ ಜಯ ಜಯ ದುರ್ಗಾ0ಬಿಕೆ || ಜಯ ||

             ಶೈಲೂ...
[3/10/2022, 8:00 pm] Dr. B. N. Shylaja Ramesh: #ಮಹಾಗೌರಿ

ಗಿರಿರಾಜನ ಮಗಳು ಗಿರಿಜೆ ಮಹಾಗೌರಿಯಿವಳು
ಶಿವನ ವರಿಸಲು ಮಾನವರೂಪ ತಾಳಿ ಬಂದವಳು
ಸಹಸ್ರ ವರ್ಷಗಳ ಕಠಿಣ ತಪೋ ಬಲದ ಕಾರಣ
ಶಿವ ಶಿವೆಯರ ಶುಭ ಮಹಾಕಲ್ಯಾಣದ ಕಥನ

ತಾಯಿ ಮಹಾಗೌರಿ ಸದಾ ಹದಿನಾರರ ನವ ತರುಣಿ
ಶರನ್ನವರಾತ್ರಿಯ ಅಷ್ಟಮಿ ದಿನ ಪೂಜೆಗೊಳ್ಳುವ ರಮಣಿ
ಚತುರ್ಭುಜೆ ಇವಳು ವೃಷಭವೇರಿ ಕುಳಿತವಳು
ತ್ರಿಶೂಲಡಮರು ಕೈಯಲ್ಹಿಡಿದು ಅಭಯನೀಡುವಳು

ಶಾಂತಸ್ವರೂಪಿಣಿ ಶ್ವೇತವಸ್ತ್ರಧರೆ ಗೌರವರ್ಣೆ
ಮಂದಸ್ಮಿತಳೆ ಚಂದ್ರವದನೆ ತೇಜೋಪೂರ್ಣೆ
ರಾಹುದೋಷವನು ಕಳೆದು ಶುಭವೀವ ಜಗಜ್ಜನನಿ
ಇಷ್ಟಾರ್ಥವ ನೀಡಿ ಹರಸುವ ಗೌರಿಮಾ ಕಾತ್ಯಾಯನಿ

ವರವನೀಡೆ ಶುದ್ಧ ಮನಸ್ಸಿನಿಂದಲಿ ಪೂಜಿಸುವೆ
ಗೌರಿದೇವಿ ನಿನಗಿಷ್ಟದ ಮಲ್ಲಿಗೆಯನರ್ಪಿಸುವೆ 
ಆಯುರಾರೋಗ್ಯದ ಜೊತೆಗೆ ಸುಖಸಂಪತ್ತು
ಸರಿ ಮಾರ್ಗದಲ್ಲಿ ನಡೆಸಿ ನೀಗಿಸು ತಾಯೇ ಆಪತ್ತು

ಡಾ: ಶೈಲಜಾ ರಮೇಶ್
(ಶೈಲೂ)
[4/10/2022, 4:09 pm] Dr. B. N. Shylaja Ramesh: #ಸಿದ್ಧಿಧಾತ್ರಿ

ನವರಾತ್ರಿಯ ಮಹಾನವಮಿಯಲಿ ಪೂಜಿತೆ
ಸರ್ವಶಕ್ತಿ, ವೈಭವ, ನವವಿಧ ಭಕ್ತಿ ಪ್ರದಾತೆ
ಸಿದ್ಧಿದಾತ್ರಿ ಅಣಿಮಾದಿ ಅಷ್ಟ ಸಿದ್ಧಿಗಳ ಒಡತಿ
ಇಷ್ಟಕಾಮ್ಯಗಳಲಿ ಪರಿಪೂರ್ಣತೆಯೀವ ಆದಿಶಕ್ತಿ

ಮಹಾಲಕ್ಷ್ಮಿ, ಮಹಾಗೌರಿ, ಸರಸ್ವತಿಯ ಪ್ರತಿರೂಪ
ಸುಖಸಂಪತ್ತುಗಳನಿತ್ತು ಹರಿಸುವಳು ತ್ರಿತಾಪ
ನವದುರ್ಗೆಯರ ನವಶಕ್ತಿಯ ವೈಭವದ ಅನಾವರಣ 
ಭೌತಿಕ, ಲೌಕಿಕ, ಆಧ್ಯಾತ್ಮಿಕತೆಯ ಯಶಸ್ಸಿಗೆ ಕಾರಣ

ತ್ರಿಮೂರ್ತಿಗಳ ದಿವ್ಯಶಕ್ತಿ, ಶಿವಾಂಶೇ ಅರ್ಧನಾರೀಶ್ವರಿ
ದುಷ್ಟ ದಮನೆ ಶಿಷ್ಟಪಾಲಕಿ ತಾಯೇ ಅಭಯಂಕರಿ
ಸಂಸಾರದುಃಖಹಾರಿಣಿ
ಜೀವನ್ಮುಕ್ತಿ, ಜ್ಞಾನ ಮೋಕ್ಷ ಪ್ರದಾತೆ
ಸಿದ್ಧಿದಾತ್ರಿ ನಿನ್ನ ಭಜಿಸಿ ಪೂಜಿಸಲು ಜೀವನಸಾರ್ಥಕತೆ

ಕಮಲಿನಿ ಕಮಲವದನೆ ಕಮಲಪುಷ್ಪಧಾರಿಣಿ
ಶಂಖ ಚಕ್ರ ಗಧಾ ಪದ್ಮಧರೆ ದೇವಿ ಸಿಂಹವಾಹಿನಿ
ಭಕ್ತರಿಗಭಯ ಕೊಡುವ ಅತ್ಯಂತ ಪ್ರಸನ್ನ ರೂಪಳೆ
ನಮಿಪೇ ತಾಯೇ ಸಹಸ್ರಾರ ಚಕ್ರದಲ್ಲಿ ನಿಂತವಳೇ

ಡಾ: ಶೈಲಜಾ ರಮೇಶ್
[5/10/2022, 7:39 pm] Dr. B. N. Shylaja Ramesh: ಸರಸ್ವತಿಗೆ
*********

ಕೈಯಲ್ಲೊಂದು ಪುಸ್ತಕವ ಹಿಡಿದು
ಸದಾ ವೀಣಾವಾದನದ  ಗುಂಗು
ಮಂತ್ರಮುಗ್ಧ ವಾದನದ ಜೊತೆ
ಜಪಮಾಲೆಯ ಹಿಡಿದು ಧ್ಯಾನ ತಲ್ಲೀನ..!
ಮಂದಹಾಸ ದ ಮುಗುಳ್ನಗೆಯೊಂದಿಗೆ
ಸದಾ ಶ್ವೇತಾಂಬರಧಾರಿಣಿ..!
ಜುಳುಜುಳು ಹರಿವ ನೀರಿನ ನಾದ
ಹಂಸ,  ನವಿಲ ನರ್ತನದ ಆಮೋದ..!

ನಿನ್ನ  ಪತಿರಾಯರದೋ..ಪರರ
ಹಣೆಬರಹ ಬರೆಯುವ ಕಾಯಕ
ಜೀವನವಿಷ್ಟೇ.. ಎಂದ್ಹೇಳುವ  ನಿಯಾಮಕ
ಮೂರ್ಹೊತ್ತೂ  ಸೃಷ್ಟಿಯಲ್ಲೇ...
ಮುಳುಗಿ ಹಣ್ಣಾದ ಕಾಯ..!
ಅವ ಲಲಾಟದಿ ಕೊರೆದ ಲಿಪಿಗೆ
ಬಳಲಿ ಬೆಂಡಾದ ಪಾಮರರದು
ಪೂಜೆ ಸಲ್ಲಬಾರದೆಂಬ ಅಭಿಪ್ರಾಯ
ಬೇಕಿತ್ತೇ ಅವಗೆ ಯಾರಿಗಿಲ್ಲದ ಉಸಾಬರಿ..!

ಸಾಗರದ ಅಲೆಗಳ ನಡುವೆ
ಲೋಕಾಭಿರಾಮದ ಏಕಾಂತ
ಆದರೂ ಒಬ್ಬರನ್ನೊಬ್ಬರು ನೋಡಲಿಹುದೇ  ಸಮಯ..?
ಹೇಳಿಬಿಡು... ಶಾರದೆ.. ನಿನ್ನವಗೆ..
ಮಾನವೀಯತೆಯ ಮೆರೆವ
ಮನುಜರ ಸೃಷ್ಟಿಸೆಂದು..!
ಕೆಡುಕನೆಣಿಸದೇ  ಕಾಯ್ದು ಕಾಪಾಡುವ
ಸಹಜ ಪ್ರೀತಿಯ ಉಳಿಸೆಂದು..!
ನೀಡವನ.. ಸೃಷ್ಟಿಗೆ ಸದ್ವಿದ್ಯೆಯನು
ಅಜ್ಞಾನದ ಪೊರೆ ಕಳಚಲೆಂದು
ಸನ್ಮತಿಯಿತ್ತು ಪಾಲಿಸು
ಸುಜ್ಞಾನದ ಜ್ಯೋತಿಯ ಬೆಳಗಲೆಂದು..!!

     ಶೈಲೂ.....
[6/10/2022, 3:47 pm] Dr. B. N. Shylaja Ramesh: #ನವರಾತ್ರಿ

ನವವಿಧ ದೇವಿಯರ ಆರಾಧಿಸುವ ನವರಾತ್ರಿ
ನಲಿದು ಹಸಿರುಟ್ಟು ಕಂಗೊಳಿಸುವಳು ಧರಿತ್ರಿ
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಾಚಾರಿಸುವ ಹಬ್ಬ
ನವಶಕ್ತಿಯಾರಾಧನೆಯ ವಿಶಿಷ್ಟತೆಯ ಹಬ್ಬ
ಅಸುರೀತನಕೆ ಮಂಗಳವ ಹಾಡಿದ ದುರ್ಗೆಯ ಹಬ್ಬ
ಜೈತ್ರಯಾತ್ರೆಯ ಗೆಲುವಿಗಾಚಾರಿಸುವ ಅರಸರ ನಾಡಹಬ್ಬ 

      ಶೈಲೂ...
[6/10/2022, 4:13 pm] Dr. B. N. Shylaja Ramesh: #ಅಂಗಾನದಾನ

ಸಾವಿನಲ್ಲೂ ಶ್ರೇಷ್ಠತೆಯ ಮೆರೆದ ಮಹನೀಯರು
ಸಾವಿನಾಚೆಗೂ ಬದುಕುಳಿದ ಅಂಗಾಂಗ ದಾನಿಗಳು
ಜೀವಿತದ ನಂತರವೂ ಬೆಳಕು ಮತ್ತೊಬ್ಬರ ಬದುಕಿಗೆ 
ಅಂಗಾಂಗಗಳ ದಾನ
ದಾನಗಳಲ್ಲೇ ಶ್ರೇಷ್ಟವೆನಿಸಿದೆ 
ಪುರಾಣದಲೂ  ಈ ಶ್ರೇಷ್ಠದಾನದ ಬಗ್ಗೆ ಉಲ್ಲೇಖ
ಮಹಾದಾನಿ  ಶಿಭಿ ಮಹಾರಾಜರಿಗೆ ಬಹುಪರಾಕ

#ಶೈಲೂ...
[6/10/2022, 4:13 pm] Dr. B. N. Shylaja Ramesh: #ನವರಾತ್ರಿ

ನವವಿಧ ದೇವಿಯರ ಆರಾಧಿಸುವ ನವರಾತ್ರಿ
ನಲಿದು ಹಸಿರುಟ್ಟು ಕಂಗೊಳಿಸುವಳು ಧರಿತ್ರಿ
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಾಚಾರಿಸುವ ಹಬ್ಬ
ನವಶಕ್ತಿಯಾರಾಧನೆಯ ವಿಶಿಷ್ಟತೆಯ ಹಬ್ಬ
ಅಸುರೀತನಕೆ ಮಂಗಳವ ಹಾಡಿದ ದುರ್ಗೆಯ ಹಬ್ಬ
ಜೈತ್ರಯಾತ್ರೆಯ ಗೆಲುವಿಗಾಚಾರಿಸುವ ಅರಸರ ನಾಡಹಬ್ಬ 

      ಶೈಲೂ...
[6/10/2022, 4:13 pm] Dr. B. N. Shylaja Ramesh: #ನವರಾತ್ರಿ

ನವವಿಧ ದೇವಿಯರ ಆರಾಧಿಸುವ ನವರಾತ್ರಿ
ನಲಿದು ಹಸಿರುಟ್ಟು ಕಂಗೊಳಿಸುವಳು ಧರಿತ್ರಿ
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಾಚಾರಿಸುವ ಹಬ್ಬ
ನವಶಕ್ತಿಯಾರಾಧನೆಯ ವಿಶಿಷ್ಟತೆಯ ಹಬ್ಬ
ಅಸುರೀತನಕೆ ಮಂಗಳವ ಹಾಡಿದ ದುರ್ಗೆಯ ಹಬ್ಬ
ಜೈತ್ರಯಾತ್ರೆಯ ಗೆಲುವಿಗಾಚಾರಿಸುವ ಅರಸರ ನಾಡಹಬ್ಬ 

      ಶೈಲೂ...

#ಅಂಗಾನದಾನ

ಸಾವಿನಲ್ಲೂ ಶ್ರೇಷ್ಠತೆಯ ಮೆರೆದ ಮಹನೀಯರು
ಸಾವಿನಾಚೆಗೂ ಬದುಕುಳಿದ ಅಂಗಾಂಗ ದಾನಿಗಳು
ಜೀವಿತದ ನಂತರವೂ ಬೆಳಕು ಮತ್ತೊಬ್ಬರ ಬದುಕಿಗೆ 
ಅಂಗಾಂಗಗಳ ದಾನ
ದಾನಗಳಲ್ಲೇ ಶ್ರೇಷ್ಟವೆನಿಸಿದೆ 
ಪುರಾಣದಲೂ  ಈ ಶ್ರೇಷ್ಠದಾನದ ಬಗ್ಗೆ ಉಲ್ಲೇಖ
ಮಹಾದಾನಿ  ಶಿಭಿ ಮಹಾರಾಜರಿಗೆ ಬಹುಪರಾಕ

#ಶೈಲೂ...
[7/10/2022, 10:14 am] Dr. B. N. Shylaja Ramesh: #ಬೆಳದಿಂಗಳ_ರಾತ್ರಿಯಲಿ 
ನೀ ಬರುವ ದಾರಿಯಲಿ
ಕಾಯುತ್ತಾ ನಿಂತಿಹೆ ಗೆಳೆಯಾ
ಕಣ್ತುಂಬಿಬಂದ ಕನಸಿನಲಿ
ನಿನ್ನ ರೂಪವೇ ನಿಂತಿದೆ ಇನಿಯಾ

ಸಂಭ್ರಮಿಸುತ್ತಿದೆ ಮನಸು
ನಿನ್ನ ಕಾಣುವ ತವಕವ ಹೊತ್ತು
ನೀ ಬಾರದಿದ್ದರೆ ಮುನಿಸು
ಮನದ ತಲ್ಲಣ ನಿನಗೇನು ಗೊತ್ತು..?

ನೋಯಿಸದಿರು ಬಾ ಬೇಗ
ನಿನ್ನಿಂದ ನನ್ನ ಬಾಳೆಲ್ಲ ಬೆಳಗಲಿ
ಪ್ರೀತಿ ಬೆಳದಿಂಗಳ ಸುರಿಸು
ಈ ಚೆಲ್ವ ಬೆಳದಿಂಗಳ ರಾತ್ರಿಯಲ್ಲಿ.   

   ಡಾ: ಬಿ ಎನ್ ಶೈಲಜಾ ರಮೇಶ್

         ( ಶೈಲೂ...)
[7/10/2022, 12:50 pm] Dr. B. N. Shylaja Ramesh: ಜೀವನದ ಹಾದಿಯಲ್ಲಿ ನಾನು ನೀನು
ಜೊತೆಯಾಗಿ ಕೈಹಿಡಿದು ಸಾಗೋಣವೇನು
ನೋವುಗಳೇನೇ ಬರಲಿ, ನಗುನಗುತ್ತಾ
ಗೆಲ್ಲೋಣ ಜೀವನಸಮರ ಒಂದಾಗುತಾ

ನಿನಗೆ ನಾನು ನನಗೆ ನೀನು ಆಶ್ರಯವಾಗಿ
ಕಷ್ಟಸುಖಗಳಲ್ಲಿ ಒಬ್ಬರಿಗೊಬ್ಬರು ಜೊತೆಯಾಗಿ
ಮಾದರಿಯಾಗೋಣ ಎಲ್ಲ ಪ್ರೇಮಿಗಳಿಗೆ
ಸವಿಯೋಣ ಬಾ ಜೀವನದ ರಸಘಳಿಗೆ
[7/10/2022, 1:21 pm] Dr. B. N. Shylaja Ramesh: #ಜೀವನದ_ಹಾದಿಯಲ್ಲಿ_ನಾನು_ನೀನು

ಜೀವನದ ಹಾದಿಯಲ್ಲಿ ನಾನು ನೀನು
ಜೊತೆಯಾಗಿ ಕೈಹಿಡಿದು ಸಾಗೋಣವೇನು
ನೋವುಗಳೇನೇ ಬರಲಿ, ನಗುನಗುತ್ತಾ
ಗೆಲ್ಲೋಣ ಜೀವನಸಮರ ಒಂದಾಗುತಾ

ನಿನಗೆ ನಾನು ನನಗೆ ನೀನು ಆಶ್ರಯವಾಗಿ
ಕಷ್ಟಸುಖಗಳಲ್ಲಿ ಒಬ್ಬರಿಗೊಬ್ಬರು ಜೊತೆಯಾಗಿ
ಮಾದರಿಯಾಗೋಣ ಎಲ್ಲ ಪ್ರೇಮಿಗಳಿಗೆ
ಸವಿಯೋಣ ಬಾ ಜೀವನದ ರಸಘಳಿಗೆ

ಸವಿಗನಸು ಹುಸಿಮುನಿಸು ಜೊತೆಗಿರಲಿ
ತುಸುಮೌನ ಪಿಸುಮಾತು ಜೀವಕಳೆ ತರಲಿ
ದಿನದಿನವೂ ನಗುನಗುತ ಬಾಳಯಾತ್ರೆ ಸಾಗಲಿ
ಇದ್ದುದರಲೇ ತೃಪ್ತಿಪಡುವ ಬುದ್ದಿ ನಮ್ಮದಾಗಲಿ

ಹೆಚ್ಚೇನೂ ಆಸೆಯಿಲ್ಲ, ನೀಡು ತೃಪ್ತ ಜೀವನ
ನೀನೊಲಿದು ಬಂದರೆ ಮಾತ್ರ ಜೀವ ಪಾವನ
ನೋವಿನೆಳೆಯು ಸೋಕದಂತೆ ಜೋಪಾನಮಾಡುವೆ
ಬಾ ಕೂದಲೆಳೆಯು ಕೊಂಕದಂತೆ ಕಾವಲಾಗುವೆ

✍️ ಡಾ: B.N ಶೈಲಜಾ ರಮೇಶ್
(ಶೈಲೂ..)
[9/10/2022, 6:52 pm] Dr. B. N. Shylaja Ramesh: ನಿದರ್ಶನ..!!
***********

ಕಡುಕ್ರೂರಿ ಅಜ್ಞಾನಿ
 ಕಾಡಿನ ಬೇಡ
ಸಿಕ್ಕವರ ಕೊಲ್ಲುತ್ತ 
ಪಾಪಿಯಾಗಿದ್ದ ಮೂಢ

ಸುಜ್ಞಾನದ ಸುಳಿವೊಂದು 
ಸೆಳೆದು ಎಳೆದಿತ್ತು
ಅಜ್ಞಾನದ ಕಾರ್ಮೋಡ 
ತೆರೆಯ ಸರಿಸಿತ್ತು

ಮರ ಮರ ಎನ್ನುತ್ತಲೇ 
ಶ್ರೀ ರಾಮನಾಮವ ಜಪಿಸಿ
ಅಜರಾಮರ ತಾರಕ ಮಂತ್ರವ 
ಭಕ್ತಿಯಲಿ ಪಠಿಸಿ

ತನ್ನೆಲ್ಲ ಕ್ರೂರತನ
 ಬಿಟ್ಟು ಬದಲಾದ
ಕಾಣದ ಕೈಯ ಅಗೋಚರ 
ನಡೆಗೆ ನಮಿಸಿ ಶರಣಾದ

ದೃಢ ಸಂಕಲ್ಪವಿತ್ತು
 ಹೊಕ್ಕ ಜ್ಞಾನದ ಹುತ್ತ
ಸಾಕ್ಷಾತ್ಕರಿಸಿತ್ತು ತ್ರಿಕಾಲಜ್ಞಾನ 
ಅಜ್ಞಾನದ ತೆರೆಯ ಸರಿಸುತ್ತ

ವಲ್ಮೀಕದೇ ಪಡೆದ 
ಜ್ಞಾನಕೆ ವಾಲ್ಮೀಕಿಯಾದ
ರಾಮನುದಿಸುವ ಮೊದಲೇ  
ವೃತ್ತಾಂತ ಗ್ರಹಿಸಿದ

ಸೃಜಿಸಿದ ಶ್ರೀ ರಾಮಾಯಣ
ಮಹಾಕಾವ್ಯ ಆಕರ  ಗ್ರಂಥ
ಸಾಧಿಸಿದ್ದ ದಿವ್ಯಜ್ಞಾನ 
ಜಾತಿಮತದ ಎಲ್ಲೆ ಮೀರುತ
 
ಪ್ರತಿಜೀವಿಯೆದೆಯಲ್ಲೂ ಇದೆ
ಅಗಾಧ ಚೈತನ್ಯ ಚಿಲುಮೆ
ಜಗವನೆಲ್ಲ  ಬೆಳಗಿಸಬಲ್ಲ 
ಅಪಾರ ತೇಜಸ್ಸಿನ ಮಹಿಮೆ

ಗುಪ್ತವಾಗಡಗಿದೆ ಎಲ್ಲರಲೂ 
ದಿವ್ಯ ಸುಪ್ತ ಚೇತನ
ಸಾಧನೆಯಲಿ ಸಾಕಾರಗೊಳಿಸಬೇಕು
 ದೂಡಿ ಮೂಢತನ

ಕ್ರೂರನಾಗಿದ್ದರೂ ಸರಿಯೇ 
ಇದ್ದರೆ ಆ ದೇವನ ಹರಕೆ
ಸಾತ್ವಿಕ ಋಷಿಯಾಗಬಲ್ಲ , 
ವಾಲ್ಮೀಕಿ ಯೊಬ್ಬ ಸಾಕು ಯೋಗ್ಯನಿದರ್ಶನಕೆ....
                           
                                ಶೈಲೂ......
[9/10/2022, 9:27 pm] Dr. B. N. Shylaja Ramesh: #ಆತ್ಮವಿಶ್ವಾಸ

ಆತ್ಮವಿಶ್ವಾಸವಿರಲು ಬಾಳಿನಲ್ಲಿ
ಚಿಗುರದೇನು ಬದುಕು ಹೇಳು.?
ಬದುಕಲೇ ಬೇಕೆನ್ನುವ ಛಲ
ಉಸಿರು ತುಂಬದೇನು ಹೇಳು.?

ಮೇಲ್ನೋಟಕ್ಕೆ ಸೊರಗಿದಂತೆ ಕಂಡರೂ
ಒಳಗೊಳಗೇ ಪುಟಿದೇಳುವ ಚಲವಿದೆ
ಬೆಳೆಯಲು ಸಲಹಿ ನೀರುಣಿಸಿದವರಲೂ
ಕೃತಜ್ಞತಾಭಾವ ತುಂಬಿದ ಒಲವಿದೆ

ಬಾಳಿ ಬದುಕುವುದು ಎಲ್ಲರ ಹಕ್ಕು
ತುಳಿಯದೆ ಸಹಕರಿಸಬೇಕು ಎಲ್ಲ
ಕುಗ್ಗಲು ಬರಬಹುದು ಅಡತಡೆ ಸುಕ್ಕು
ಬಿಡಿಸಿ ಮುನ್ನುಗ್ಗುತ್ತಿರಬೇಕು ಮೆಲ್ಲ

ಟಿಸಿಲೊದೆಡೆದು ಮೆಲ್ಲನೆ ಚಿಗುರುತಿರೇ
ಸೊರಗಿ ದಣಿದ ನೋವೆಲ್ಲವೂ ಮಾಯ
ಮೊಗ್ಗರಳಿ ಹೂ ಬಿರಿದು ಫಲ ನೀಡುತಿರೇ
ಬಿದ್ದಪೆಟ್ಟೆಲ್ಲಮರೆಸಿ ಮಾಯುವುದು ಗಾಯ

ಶೈಲಜಾ ರಮೇಶ್
(ಶೈಲೂ..)
[10/10/2022, 4:30 pm] Dr. B. N. Shylaja Ramesh: #ಬಂಧನ

ಹೇ, ಗೆಳೆಯಾ ನಮ್ಮಿಬ್ಬರದು ಪ್ರೀತಿ ಬಂಧನ
ಎಂದಿಗೂ ಬಿಡದಂತೆ ಕೈಹಿಡಿದು ಸಾಗೋಣ
ನಮ್ಮ ಪ್ರೇಮವದು ಘಮ್ಮೆನ್ನುವ ಚಂದನ
ದೇವನ ದಯದಿಂದ ಸಾಗಿದೆ ಸಂತೃಪ್ತ ಜೀವನ.!
[11/10/2022, 2:18 pm] Dr. B. N. Shylaja Ramesh: ಗಝಲ್

ಗೆಳೆಯಾ ನಿನ್ನ ನೆನಪನೇ ನೆನೆಸಿ ಹೃದಯ ತುಂಬಿದೆ
ಗತನೆನಪುಗಳೆಲ್ಲಾ ಮರುಕಳಿಸಿ ಹೃದಯ ತುಂಬಿದೆ

ಪ್ರತಿ ಮಾತಿಗೊಂದುತ್ತರವನಿತ್ತು ನಗಿಸುತಲಿದ್ದೆ
ಬಾಯಿ ಬಿಗಿದಿಂದು ಮೌನವಾವರಿಸಿ ಹೃದಯ ತುಂಬಿದೆ

ಮೋಹಕ ರೂಪವೇ ಮನದಿ ನಿಂತು ಕಣ್ಣು ನೀರಾಡಿದೆ
ಕನಸಿನಲ್ಲೂ ಕಾಡಿ ಕನವರಿಸಿ ಹೃದಯ ತುಂಬಿದೆ

ಕಾಣುವಾತುರವನು ಹತ್ತಿಕ್ಕಿ ಬದುಕಿರಲಾರದಾಗಿದೆ
ಕಂಡ ಆ ಕ್ಷಣ ಮನವನಾವರಿಸಿ ಹೃದಯ ತುಂಬಿದೆ

ರಣ ಬಿಸಿಲಿನಲ್ಲೂ ತಂಪು ನೆರಳಿನಂತೆ ನಿನ್ನಾಶ್ರಯವು
ಹಿತವಿತ್ತ ಸಾಂಗತ್ಯ ಕಸಿವಿಸಿಗೊಳಿಸಿ ಹೃದಯ ತುಂಬಿದೆ

ನೀನಿತ್ತ ಒಲವಿನುಡುಗೊರೆಯ ಸಿಹಿ ಕಹಿ ಘಳಿಗೆ
ಅಕ್ಷಿಪಟಲವನಾಕ್ರಮಿಸಿ ನಿಟ್ಟುಸಿರಿರಿಸಿ ಹೃದಯ ತುಂಬಿದೆ

ಎಲ್ಲ ಘಟನೆಗಳ ಬೃಹತ್ ಮೊತ್ತ ಶೈಲಳಾಂತರ್ಯದಲಿ
ಪುಟಿದೇಳುತ್ತ ತೇಲಿಸಿ ಮುಳುಗಿಸಿ ಹೃದಯ ತುಂಬಿದೆ

    ✍️ ಡಾ: B.N ಶೈಲಜಾ ರಮೇಶ್
     (ಶೈಲೂ..)
[12/10/2022, 1:04 pm] Dr. B. N. Shylaja Ramesh: #ಕಳೆದ_ಕನಸು

ಕಳೆದಿದೆ ಕನಸು
ನಿನ್ನ ಮುನಿಸಲಿ
ಮುನಿಸ ನಡುವಲೂ
ನಿಂತೆ ಮನಸಲಿ

ಕಂಡಿದ್ದೆ ಕನಸು
ನಿನ್ನೊಲವ ಬಲದಲಿ
ಕುಗ್ಗಿತು ಮನಸು
ಕಳೆದ ಒಲವಲಿ

 ಹಿಗ್ಗಿತು ಮನಸು
ಪ್ರೀತಿ ಮಾತಲಿ
ಇಣುಕಿತು ಮುನಿಸು
ಮಾತಿನಿರಿತದಲಿ

 ಮಾತು ಮನಸು ಕನಸು
ಶುದ್ಧವಿದ್ದರೆ ಚಂದ
ಶುದ್ಧ ಪ್ರೇಮವಿದ್ದರೆ
ಬೆಸೆಯುವುದು ಬಂಧ

ನಿನ್ನೊಲವ ಕರೆಗೆ
ಕಾದಿದೆ ಈ ಹೃದಯ
ನನ್ನ ಹೃದಯದ ಕರೆಯ
ನೀ ಕೇಳಲೇಕೆ ಗೆಳೆಯಾ.?

      ಶೈಲೂ....
[13/10/2022, 12:24 pm] Dr. B. N. Shylaja Ramesh: ಗುಣದಲ್ಲಿ ಶ್ರೀರಾಮ
ರೂಪದಲೂ ಯಾರಿಲ್ಲ ಸಮ
ಮಾತು ಕೊಟ್ಟರೆ ಇಟ್ಟ ಬಾಣದಂತೆ
ಅವರ ಹೆಸರು ರಮೇಶನಂತೆ
[13/10/2022, 12:24 pm] Dr. B. N. Shylaja Ramesh: #ಚುಟುಕು

#ಉಸಿರು
1)
ಉಸಿರಿನಲ್ಲಿ ಬೆರೆತಿದೆ ನಿನ್ಹೆಸರು
ನಿನ್ಹೆಸರಿನಿಂದಲೇ ನನ್ನುಸಿರು
ನೀನಿದ್ದರೇನೆ ಬಾಳು ಹಸಿರು
ನೀ ಮುನಿದರೆ ನಿಂತೀತು ಉಸಿರು.!

      ಶೈಲಜಾ ರಮೇಶ್
[14/10/2022, 1:18 pm] Dr. B. N. Shylaja Ramesh: #ಟಂಕ_ಸ್ಪರ್ಧೆ

1)
#ಗುಬ್ಬಚ್ಚಿ_ಗೂಡು

ನಿನ್ನ ಹೊನ್ನೆದೆ
ಗುಬ್ಬಚ್ಚಿ ಗೂಡೆನಗೆ
ಅತೀವ ಖುಷಿ
ಅನವರತ ಸುಖ
ವಾಸಿಸಲು ನಾನಲ್ಲಿ

2)
#ಆಶಾಗೋಪುರ

ಆಶಾಗೋಪುರ
ಕಟ್ಟಿದೆನೆದೆಯಲ್ಲಿ
ಜೊತೆ ನೀನಿರೆ
ಅದಮ್ಯ ಸುಖೀ ತಾಣ
ಸುಖಿಸುತಿದೆ ಮನ

3)
#ನಗುವ_ಹೂವು

ಪ್ರೀತಿಸಲು ನೀ
ನಾನಾದೆ, ಅರಳಿದ
ನಗುವ ಹೂವು
ನಿನ್ನ ಪ್ರೀತಿಯ ಗಂಧ
ಘಮಿಸುತಿದೆ ನನ್ನ

4)
#ಮೊದಲ_ಹೆಜ್ಜೆ

ಮೊದಲ ಹೆಜ್ಜೆ
ನಿನ್ನೊಡನೆ ಇಟ್ಟಾಗ
ರೋಮಾಂಚನವೇ
ಇಂದಿಗೂ ಸಹ ಅದೇ
ರೀತಿಯ ಅನುಭವ.!

5)
#ಉಸಿರೇ_ನೀನು

ನಗುವ ತಂದ
ಗೆಳೆಯ, ಎಂದೆಂದಿಗೂ
ನೀನೇ ಉಸಿರು
ಉಸಿರುಸಿರಿನಲಿ
ಬರೆದೆ ನಿನ್ಹೆಸರು.!

     ಡಾ: B. N ಶೈಲಜಾ ರಮೇಶ್
        (ಶೈಲೂ...)
[14/10/2022, 2:07 pm] Dr. B. N. Shylaja Ramesh: #ಸಾವಿರ_ಆಸೆ_ಕನಸುಗಳ_ಜೊತೆ 
ಸಾವಿರ ಆಸೆ, ಕನಸುಗಳ ಜೊತೆಗೆ
ಬಯಸಿರುವೆ ನಿನ್ನ ಬೆಳಕಾಗು ಬಾಳಿಗೆ
ಕಂಡ ಕನಸೆಲ್ಲ ನನಸಾಗಲು ನಾಳೆಗೆ
ಕೈಹಿಡಿದು ನಡೆಸು ಬಾ ಗೆಳೆಯ ಮೆಲ್ಲಗೆ

ಏನೇನೋ ಬಯಕೆ ಆವರಿಸಿ ಮನಸನನು
ಕಟ್ಟಿದೆ ಆಶಾಗೋಪುರ ತಟ್ಟಿ ಕನಸನು
ಬೆಟ್ಟದಂತಿದೆ ಬದುಕು, ಒಬ್ಬಂಟಿ ನಾನು
ಹತ್ತಲಾರೆನು ಗೆಳೆಯಾ ಇಲ್ಲದೇ ನೀನು

ಬದುಕಿನ ಹೊನ್ನ ಶಿಖರಕೆ ನೀನಾಗು ಕಳಶ
ಪ್ರೀತಿಯಿಂದರ್ಚಿಸುವೆ ನಿನ್ನ ಪ್ರತೀ ದಿವಸ
ಮನವ ಮೆಚ್ಚಿದ ನೀ ಬಂಗಾರದ ಮನುಷ
ನೀ ಜೊತೆಗಿರಲು ಬಾಳಲ್ಲಿ ನಿತ್ಯ ಹರುಷ

ಕನಸುಗಳ ಹೆಣೆಯಲು ರೂವಾರಿ ನೀನು
ನನಸಾಗಿಸಲು ಗೆಳೆಯ ಬರಬಾರದೇನು
ಆಸೆ ತುಂಬಿದ ಕಂಗಳಲಿ ಬಿಂಬ ನೀನು
ಆ ಬಿಂಬವ ಕಣ್ತುಂಬಿಕೊಂಡ ಪ್ರತಿಬಿಂಬ ನಾನು

ಶೈಲಜಾ ರಮೇಶ್
( ಶೈಲೂ...)
[15/10/2022, 4:12 pm] Dr. B. N. Shylaja Ramesh: #ಭಾವನೆಗಳ_ಸುಳಿಯಲ್ಲಿ 
ಭಾವನೆಗಳ ಸುಳಿಯಲ್ಲಿ 
ಮುಳುಗಿಹೋಗಿಹೆ ನಾನು
ಉಸಿರುಗಟ್ಟಿ, ಮೇಲೇಳಲಾರದಂತೆ
ಮನದ ಭಾವಗಳೊಡನೆ
ಆಟವಾಡಿದ ಜನರನು
ಎಂದಿಗೂ ಮರೆಯಲಾರದಂತೆ..!

ಬೆಣ್ಣೆಯ ಮುದ್ದೆಯಲಿ
ಕೂದಲೆಳೆಯ ತೆಗೆದಂತೆ
ಆಹಾ.. ಎಂಥ ನಯವಿನಯದ ಮಾತು
ಬೆಣ್ಣೆಯಂಥ ಆ ನುಡಿಗೆ
ಕರಗಿದರೆ ನೀರಾದರೆ
ಅಧೋಗತಿ, ಜೀವನ ಅಲ್ಲಿಗೇ ಮುಗಿಯಿತು

ಮನವನ್ನು ಮಣಿಸಲಿವರದು
ಏನೆಲ್ಲ ಕಸರತ್ತು ಹರಸಾಹಸ
ಇವರು ತಮ್ಮ ಬೇಳೆ ಬೇಯಿಸಿಕೊಳ್ಳಲು
ಕಾರ್ಯಸಾಧನೆಯಾದ ಮೇಲೆ
ನಾವ್ಯಾರೋ ಅವರ್ಯಾರೋ
ಕಾರಣ ಸಾಕಲ್ಲ, ಮನ ಮುರಿದುಕೊಳ್ಳಲು

ಭಾವನೆಗಳನು  ಹೊಸಕಿ
ಕಣ್ಣೀರು ತಂದವರನು
ಮರೆತೆನೆಂದರೂ ಮರೆಯಲಾಗದು
ನೋವನ್ನೇ ಕೊಟ್ಟು
ಜೀವ ಹೊಸಕಿದವರನು
ಎಂದೆಂದಿಗೂ ಕ್ಷಮಿಸಲಾಗದು..!

ಡಾ: B.N ಶೈಲಜಾ ರಮೇಶ್
   ( ಶೈಲೂ....)
[15/10/2022, 6:47 pm] Dr. B. N. Shylaja Ramesh: ಬರೆಯಬೇಕು
ಮನದ ಮಾತು
ಪ್ರೀತಿ ಬೆರೆತ
ಪದಗಳಲಿ

ಮನದ ಆಸೆ
ಕಣ್ಣ ಭಾಷೆ
ಬಿಂಬಿಸಬೇಕು
ಲೇಖನಿಯಲಿ

ಮನದ ಮಿಡಿತ
ಹೃದಯ ಬಡಿತ
ತುಡಿತ ಬೇಕು
ಬರಹದಲಿ

ಬದುಕು ಬವಣೆ
ಇರಲಿ ಏನೇ
ಕಾಣದೇನೂ
ಒಲವಿನಲಿ

ನೋವೇ ಇರಲಿ
ನಲುವು ಬರಲಿ
ನಿನ್ನ ಪ್ರೀತಿ
ಹುಸಿಯಾಗದಿರಲಿ

ಬರೆಯೆ ನೀನು
ಬೆರೆಯೆ ನಾನು
ಅರ್ಥವಿಹುದು
ಬಾಳಿನಲಿ

        ಶೈಲೂ......
[18/10/2022, 3:04 pm] Dr. B. N. Shylaja Ramesh: #ಹೆಣ್ಣೆಂಬ_ಸ್ವರ್ಣಪಾತ್ರೆ

       ದೈವಸೃಷ್ಟಿಯಲ್ಲಿ ಅತ್ಯದ್ಭುತ ಸೃಷ್ಟಿಯೇ #ಹೆಣ್ಣು. ಜಗತ್ಸೃಷ್ಟಿಯಲ್ಲಿ ಮಾಹಾ ಸೂತ್ರಧಾರಿಣಿ ಆಕೆ.  ತಾಯಿಯಾಗಿ, ಸೋದರಿಯಾಗಿ, ಹೆಂಡತಿಯಾಗಿ, ಮಗಳಾಗಿ ಅವಳ ಪಾತ್ರ ಅದ್ಭುತ. ಹೆಣ್ಣು ಬದುಕಿನ ನದಿಗೆ ನೀರಿದ್ದಂತೆ. ಬದುಕು ಸಾಗುವುದೇ ಹೆಣ್ಣಿನ ಆಗಮನದಿಂದ. ಅವಳು ಶಕ್ತಿ ಸ್ವರೂಪಿಣಿ, ಶಾಂತಿ ಸ್ವರೂಪಿಣಿ, ಬದುಕಿನ ನವರಸಗಳ ಒಟ್ಟು ಮೊತ್ತವೇ ಹೆಣ್ಣು.  ಜಗತ್ತಿನ ಆದಿಯಿಂದ ಹಿಡಿದು, ಇಂದಿನವರೆಗೂ, ಮುಂದೆಯೂ ಕೂಡ ಹೆಣ್ಣು ಬದುಕಿನ ಜೀವನಾಡಿ.  ಗಂಡಿನ ಪ್ರೇರಕ ಶಕ್ತಿಯಾಗಿ, ಸ್ಪೂರ್ತಿದಾಯಕಳಾಗಿ, ಜೀವನದ ತಂತು ಬೆಸೆವವಳೇ ಹೆಣ್ಣು.  ಜಗತ್ತಿನಲ್ಲಿ ಗಂಡು ಹೆಣ್ಣು ಇಬ್ಬರ ಅಗತ್ಯವಿದ್ದರೂ ಹೆಣ್ಣಿನ ಪಾತ್ರ ಅಧಿಕ. ಅವಳ ಅಂತಃಕರಣ, ಅವಳ ಅಂತಃಶಕ್ತಿ , ಅವಳ ಧಾರಣ - ಪೋಷಣ ಶಕ್ತಿ, ಅವಳ ಮಮತಾಪೂರ್ಣ ಪ್ರೀತಿ,  ಅದು ಆ ದೇವ ಅವಳಲ್ಲಿಟ್ಟ ಅಪೂರ್ವ ಸ್ವತ್ತು.!!    ಅವಳೇ ಸಸಿನೆಟ್ಟು, ಬೆಳೆಸಿ, ಪೋಷಿಸುವ  ಅವಳ ಗುಣ ಅಪೂರ್ವವಾದುದು.  ಹೆಣ್ಣು... ಪ್ರಕೃತಿ ಒದಗಿಸಿದ ಅಪೂರ್ವ ಹಾಗೂ ಮಹತ್ತರ ಆಶ್ರಯತಾಣ.  ಭ್ರೂಣಾವಸ್ಥೆಯ ಜೀವ ..ಒಂದು ರೂಪ ತಾಳುವಾಗಿನ ಆ ನವಮಾಸಗಳಿಂದ ಹಿಡಿದು ಈ ಜೀವ ಜಗತ್ತಿಗೆ ಬಂದಮೇಲೂ  ಆ ಜೀವಕ್ಕೆ ಹೆಣ್ಣೇ ಆಸರೆ.  ಮಾನವನ ಜೀವನದಲ್ಲಿ ಮಾತೆಯ ಮಮತೆ ಅವಿಸ್ಮರಣೀಯ.  ತನ್ನೊಂದು ಕರುಳ ಕುಡಿಗಾಗಿ ತನ್ನ ಶರೀರವನ್ನು ಗಂಧದಂತೆ ಸವೆಸುವ ತಾಯಿಯು... ಸಾಕ್ಷಾತ್ ದೇವತೆ🙏.

         ಎಲ್ಲಾ ಕಾಲಕ್ಕೂ, ಎಲ್ಲ ಜನರಿಗೂ, ಎಲ್ಲ ಸಂಸ್ಕೃತಿಗೂ ಹೆಣ್ಣೇ ಸಂವಾಹಕಳು.   ಎಲ್ಲಾ ಧರ್ಮದಲ್ಲೂ ಹೆಣ್ಣಿಗೆ ಮಹತ್ವ ಇದ್ದೆ ಇದೆ.  ನಮ್ಮ ಧರ್ಮದಲ್ಲಿ ಹೆಣ್ಣಿಗಿತ್ತ ಸ್ಥಾನ  ಹಿಮಾಲಯದಷ್ಟು. "#ಯತ್ರ_ನಾರೀ_ಪೂಜ್ಯಂತೆ_ರಮಂತೇ_ತತ್ರ_ದೇವತಾಃ" ಅನ್ನುವ ವೇದವಾಣಿ ಸಾರುತ್ತದೆ ಹೆಣ್ಣಿನ ಘನತೆಯನ್ನು.  ಇನ್ನು ಸಕಲವನ್ನೂ ಹೆಣ್ಣೆಂದೇ ಗುರುತಿಸುವ ನಮ್ಮ ಸಂಸ್ಕೃತಿ ಅಭಿನಂದನಾರ್ಹ.  

         ಸಕಲ ಸಂಪತ್ತಿನ ಖನಿಯಾದ ಪೃಥ್ವಿಯನ್ನು #ಭೂದೇವಿ ಎನ್ನುತ್ತೇವೆ.  ಸಕಲ ಸಂಪತ್ತಿಗೆ ಒಡೆಯಳೆ0ದು #ಲಕ್ಷ್ಮಿ ಯನ್ನು ಹೆಸರಿಸುತ್ತೇವೆ.  ವಿದ್ಯಾದಾಯಿನಿ ಎಂದು #ಸರಸ್ವತಿಯನ್ನು ಪೂಜಿಸುತ್ತೇವೆ.  ಶಕ್ತಿ ರೂಪಿಣಿಯಾಗಿ #ದುರ್ಗೆ ಎಂದು ನಂಬುತ್ತೇವೆ. ನದಿಗಳು ಪ್ರಕೃತಿಯ ಮುಖ್ಯ ಅಂಗ,  ಅವುಗಳನ್ನೂ ಕೂಡ ಸ್ತ್ರೀನಾಮದಿಂದಲೇ ಕರೆಯುತ್ತೇವೆ. ಸಕಲರ  ಪಾಪಗಳನ್ನು ತೊಳೆದು ಪುನೀತರನ್ನಾಗಿಸುವ #ದೇವಗಂಗೆಯೂ ಹೆಣ್ಣೇ. ಅಷ್ಟೇಕೆ ಮಹಾಮಂತ್ರವೆನಿಸಿರುವ #ಗಾಯತ್ರಿ ಮಂತ್ರಕ್ಕೆ ಅಧಿದೇವತೆ ಹೆಣ್ಣು. ಸಕಲ ಸಂಪತ್ತನ್ನೂ,  ಸಂವೃದ್ಧಿಯನ್ನು ಕೊಡುವ #ಕಾಮಧೇನು ಹೆಣ್ಣು.  ಅಷ್ಟೈಶ್ವರ್ಯ ಕೊಡುವ  ಅಷ್ಟಶಕ್ತಿಗಳೂ ಸ್ತ್ರೀಸ್ವರೂಪರೇ..!!  ಆದಿಯಿಂದ ಅನಾದಿ ಕಾಲಕ್ಕೂ ಸ್ತ್ರೀಶಕ್ತಿ ಅಂತಃಶ್ರೋತವಾಗಿ ಬಾಳೆಲ್ಲಾ ತುಂಬಿದೆ.  ಹಾಗೆಯೇ... ನಮ್ಮ ದೇಶ #ತಾಯಿನಾಡು, ನಮ್ಮ ಭಾಷೆ #ಮಾತೃಭಾಷೆ,  ಅಷ್ಟೆಕೆ... ಆಬಾಲವೃದ್ಧರಾದಿಯಾಗಿ ಬೇಕಾಗುವ ಕ್ಷೀರವನುಣಿಸುವ ಹಸು #ಗೋಮಾತೆ ಸ್ತ್ರೀಸ್ವರೂಪಿಣಿ.

        ಹಾಲುಣ್ಣುವ ಕಂದಮ್ಮಗೆ ಮಮತೆಯ ಮಡಿಲಾಗಿ, ಗಂಡಿನ ಬಾಳ ಸಂಗಾತಿಯಾಗಿ, ಹೆಣ್ಣು ನಿರ್ವಹಿಸುವ ಪಾತ್ರ ಮಹತ್ತರವಾದದ್ದು.  ಸಕಲ ಜೀವ ರಾಶಿಗಳಲ್ಲೂ ಹೆಣ್ಣಿನ  ಸ್ಥಾನವೇ ಮುಖ್ಯ. ಆದರೆ ಮನುಷ್ಯನ ಸ್ವಾರ್ಥ, ದುರಾಸೆ, ಲಾಲಸೆಗಳಿಂದ ಹೆಣ್ಣೆ0ಬ ಜೀವ ತನ್ನ ಪ್ರಕೃತಿದತ್ತ ಶಕ್ತಿಯನ್ನು ಮರೆತು  ದೌರ್ಬಲ್ಯದಿಂದ, ಶೋಷಣೀಯ, ತುಳಿತದ ಕೇಂದ್ರಬಿಂದುವಾಗಿದ್ದಾಳೆ. ದೌರ್ಜನ್ಯಕ್ಕೊಳಗಾಗುತ್ತಿದ್ದಾಳೆ.  ಹೆಣ್ಣಿನ ಮಾನ, ರಕ್ಷಣೆಯ ಸೋಗಿನಲ್ಲಿ ಅವಳನ್ನು ಬಂಧಿಸುವವರೆ ಅಧಿಕ.  ಹಣ್ಣು ಕೀಳುವ ನೆಪದಲ್ಲಿ ಮರಕ್ಕೆ ಕಲ್ಲು ಹೊಡೆವಂತೆ,  ಹೂ ಕೇಳುವ ನೆಪದಲ್ಲಿ ಗಿಡವನ್ನೇ ಹೊಸಕುವಂತೆ... ಹೆಣ್ಣೂ ಕೂಡ ಪಾತಕಿಗಳ ಕೈಯಲ್ಲಿ ಸಿಕ್ಕು ನಲುಗುತ್ತಿದ್ದಾಳೆ.  ತಾಯಿ, ಹೆಂಡತಿ, ಸೊಸೆ ಈ ಮೂವರೂ ದಾಸೀರೂಪವೆಂದು ದುಡಿಸಿಕೊಳ್ಳುವ ಪಾಷಾಣ ಹೃದಯದ ಪಾತಕಿಗಳೂ ಇಲ್ಲದಿಲ್ಲ.   ಹಾಗೆಯೇ ಮಂಗಳ ರೂಪಿಣಿಯಾದ ಹೆಣ್ಣು... ಮಾಯೆಯೂ, ನಿಗೂಢ ವ್ಯಕ್ತಿತ್ವದವಳೂ, ಅರ್ಥವಾಗದವಳೂ, ಅನರ್ಥವನ್ನು ತರುವವಳೂ ಕೂಡ ಹೌದು. ಹೆಣ್ಣು ಒಂದು #ಸ್ವರ್ಣಪಾತ್ರೆ, ಅದರಲ್ಲಿ ವಿಷ ತುಂಬಿದರೂ ಸರಿ, ಅಮೃತವಿದ್ದರೂ ಸರಿ,  ಬಂಗಾರ ಬಂಗಾರವೇ,👍  ಅಮೃತವೋ... ವಿಷವೋ... ಅದನ್ನು ಉಪಯೋಗಿಸುವವರ ಕೈಯಲ್ಲಿದೆ.

      ಡಾ: B.N. ಶೈಲಜಾ ರಮೇಶ್
[18/10/2022, 6:28 pm] Dr. B. N. Shylaja Ramesh: ಸಾಮರಸ್ಯ

ಮನಸು ಮನಸುಗಳ ಮಧ್ಯೆ ಇದ್ದರೆ ಸಾಮರಸ್ಯ
ಅದೇ ಸುಖೀ ಜೀವನದ ರಹಸ್ಯ..!
ಜೊತೆಗಿದ್ದರೆ ಮನ ಅರಳಿಸುವ ಲಘು ಹಾಸ್ಯ
ಸಂತಸ ಸಂಭ್ರಮಕ್ಕದು ಬರೆದ ಭಾಷ್ಯ..!
[19/10/2022, 3:43 pm] Dr. B. N. Shylaja Ramesh: #ಒಲವಿನ_ಹೂನಗೆ 
ಮುಂಜಾನೆಯ ಮಂಜಿಗೆ ಬಿರಿದ
ಗುಲಾಬಿ ದಳದಂತೆ ನಿನ್ನ ಹೂನಗೆ
ಮನದೊಳಗೆ ಬಣ್ಣದ ಚಿಟ್ಟೆ ಹಾರಿ
ನವಿರಾದ ಕಂಪನ ನೀ ತಂದೆ ಬಾಳಿಗೆ

ನಿನ್ನೊಂದು ಸಮ್ಮೋಹಕ ನುಡಿಮುತ್ತು ನೋವನಳಿಸಿ ಬದುಕಲು ಚೇತೋಹಾರಿ
ಆ ಬಿರಿದ ಸುಮದ ಮೊಗದ ಹೂನಗೆ
ತಂಗಾಳಿಯ ತಂಪಂತೆ ತೇಜೋಹಾರಿ

ಆ ಮುದ್ದು ಮೊಗದ ಸೊಗದ ಸೆಳೆತ
ಬಂಧಿಸಿಹುದು ಬಾಳಲಿ ಒಲವಲೆನ್ನ 
ಮನದ ಆಸೆ ಕಣ್ಣ ಭಾಷೆ ಸೆಳೆದಿಹುದು
ಮುಳುಗಿದೆ ಅನುಭಾವಿಸುತ್ತ ಆ ನಗೆಯನ್ನ

       ಡಾ: ಬಿ ಎನ್ ಶೈಲಜಾ ರಮೇಶ್
                (  ಶೈಲೂ......  )
[20/10/2022, 2:31 pm] Dr. B. N. Shylaja Ramesh: ಒತ್ತಡದದ ಈ ಜೀವನದಲ್ಲಿ
ಭಾವ ಬತ್ತದಂತೆ
ಸುತ್ತಲೂ ಇರಿವ ಜಂಜಡದಲಿ 
ನಿರ್ಜೀವವಾಗದಂತೆ
ನೋವಿನಿಂದಿಳಿವ ಕಣ್ಣೀರಿನಲಿ
ಕರಗಿಹೋಗದಂತೆ
ಚಿಂತೆಯ ಈ ಸಂತೆಯಲಿ
ಕಳೆದು ಹೋಗದಂತೆ
ನನ್ನೊಳಗೇ ಮೊಳಗಿ ಮೊಳಗಿ
ಉಳಿದುಬಿಡು ಕವಿತಾ...
[21/10/2022, 2:48 pm] Dr. B. N. Shylaja Ramesh: ಮನದಾಸೆ ಹಕ್ಕಿಯಾಗಿ ಹಾರುತಿದೆ
ಭಾವನೆಗಳ ರೆಕ್ಕೆ ಬಡಿದು ಬಾನಿನಲ್ಲಿ
ನಿನ್ನಿರುವಿಕೆ ಹೊಸತನವನು ತರುತಿದೆ
ಪ್ರೀತಿ ಎಂಬ ಪ್ರಣತೆ ಹಚ್ಚಿ ಬಾಳಿನಲ್ಲಿ
[21/10/2022, 2:54 pm] Dr. B. N. Shylaja Ramesh: ಆ ನಗುಮೊಗದ ಸೊಗವೇ ಬೆಳಕು
ಕತ್ತಲು ತುಂಬಿದ ಈ ಬದುಕಿನಲ್ಲಿ
ನಿನ್ನೊಲವೆನಗೆ ಬೆಳದಿಂಗಳಂಥ ತಂಪು
ಬಿರು ಬಿಸಿಲಿನಂತೆ ಬಾಡಿದ ಈ ಬಾಳಿನಲ್ಲಿ
[21/10/2022, 3:01 pm] Dr. B. N. Shylaja Ramesh: ಆ ದೇವನ ಅತೀವ ಕರುಣೆಯ ಫಲ
ನೀ ಜೊತೆಯಾದೆ ಬಾಳ ಹಾದಿಗೆ
ಬೆಂಗಾಡಿನಲಿ ತಣಿಸುವ ಜೀವಜಲ
ಹಸಿರಾದೆ ನೀ ಬರಡಾದ ಬಾಳಿಗೆ
[21/10/2022, 3:03 pm] Dr. B. N. Shylaja Ramesh: #ಮನದಾಸೆ_ಹಕ್ಕಿಯಾಗಿ

ಮನದಾಸೆ ಹಕ್ಕಿಯಾಗಿ ಹಾರುತಿದೆ
ಭಾವನೆಗಳ ರೆಕ್ಕೆ ಬಡಿದು ಬಾನಿನಲ್ಲಿ
ನಿನ್ನಿರುವಿಕೆ ಹೊಸತನವನು ತರುತಿದೆ
ಪ್ರೀತಿ ಎಂಬ ಪ್ರಣತೆ ಹಚ್ಚಿ ಬಾಳಿನಲ್ಲಿ

ಆ ನಗುಮೊಗದ ಸೊಗವೇ ಬೆಳಕು
ಕತ್ತಲು ತುಂಬಿದ ಈ ಬದುಕಿನಲ್ಲಿ
ನಿನ್ನೊಲವೆನಗೆ ಬೆಳದಿಂಗಳಂಥ ತಂಪು
ಬಿರು ಬಿಸಿಲಿನಂತೆ ಬಾಡಿದ ಈ ಬಾಳಿನಲ್ಲಿ

ಆ ದೇವನ ಅತೀವ ಕರುಣೆಯ ಫಲ
ನೀ ಜೊತೆಯಾದೆ ಬಾಳ ಹಾದಿಗೆ
ಬೆಂಗಾಡಿನಲಿ ತಣಿಸುವ ಜೀವಜಲ
ಹಸಿರಾದೆ ನೀ ಬರಡಾದ ಬಾಳಿಗೆ

ಶೈಲಜಾ ರಮೇಶ್
   ( ಶೈಲೂ..)
[22/10/2022, 11:56 am] Dr. B. N. Shylaja Ramesh: #ದೀಪದೆಡೆಗೆ_ಪಯಣ 
ಸಾಕಿನ್ನು ಈ ಅಜ್ಞಾನದ ಕತ್ತಲೆ ಕೂಪ
ಬನ್ನಿ ಜ್ಞಾನದ ದೀಪದೆಡೆಗೆ ಹೋಗೋಣ
ಮನದಲ್ಲಿ ತುಂಬಿರುವ ಮೌಢ್ಯದ ತೆರೆ
ಅಳಿಸಲು ಜ್ಞಾನಜ್ಯೋತಿಯ ಬೆಳಗೋಣ

ಅವಿಶ್ವಾಸದ ಅಂಧಕಾರವ ತೊಡೆಯೇ
ನಂಬಿಕೆಯ ಹೊನ್ನದೀಪ ಹಚ್ಚೋಣ. 
ದ್ವೇಷ ದಳ್ಳುರಿಯ ಕಾರ್ಗತ್ತಲ ಕಳೆಯೇ
ಪ್ರೀತಿ ಎಂಬ ಪ್ರಣತಿಯ ಉರಿಸೋಣ    

ವ್ಯಕ್ತಿಯಿಂದವ್ಯಕ್ತಿಗೆ ಸ್ನೇಹದ ಬೆಳಕ ತೋರಿ
ಅವ್ಯಾಜ ಪ್ರೇಮವನು ತುಂಬೋಣ
ಅಸಮಾನತೆಯೆಂಬ ಕಳೆಯ ಕಿತ್ತೊಗೆದು
ಮಾನವತೆಯ ಬೀಜವನು ಬಿತ್ತೋಣ

ಕುಬುದ್ಧಿಯ ಕರ್ಮಕಾಂಡವನಳಿಸಲು
ಸನ್ಮಾರ್ಗದ ಹಾದಿಯಲಿ ನಡೆಯೋಣ
ಮಾನವತೆಯನ್ನೇ ಉತ್ತುಂಗಕ್ಕೆ ತರಲು
ಇರಲಿ ಬೆಳಕಿನ ಜೊತೆ ಜೊತೆಗೇ ಪಯಣ

ಡಾ: ಶೈಲಜಾ ರಮೇಶ್
(ಶೈಲೂ..)
[22/10/2022, 6:15 pm] Dr. B. N. Shylaja Ramesh: #ಕವನವಾಗು_ಬಾ_ಭಾವವೇ

ಕಳೆದುಹೋಯಿತೆಲ್ಲಿ ಪುಟಿಯುತ್ತಿದ್ದ ಭಾವ
ಪಟಪಟನೆ ಸಿಡಿಯುತ್ತಿದ್ದ ಮಾತಿಗೂ ಅಭಾವ
ಮಿಡಿಯುತ್ತಿದ್ದ ಮನಸಲೂ ಏಕೋ ಕತ್ತಲು
ಆವರಿಸಿದಂತೆನಿಸುತ್ತಿದೆ ಮೋಡ ಸುತ್ತಮುತ್ತಲೂ

ಗುಪ್ತವಾಗಡಗಿಹ ಸುಪ್ತ ಭಾವಗಳು
ಸತ್ತಂತೆ ಮಲಗಿತೇಕೆ ಮರೆತು ತನ್ನಿರುವು
ಹೊರಹಾಕದಿದ್ದರೆ ಮನದ ತುಮುಲ
ಜೀವನ ಹೇಗಾದೀತು ಹೇಳು ಸರಳ.?

ಅಕ್ಷರಕ್ಷರವ ಪೋಣಿಸಿ ಪದವಾಗಿಸಲು
ಪದಕ್ಕೆ ಪದವ ಬೆಸೆದು ಕಾವ್ಯವಾಗಿಸಲು
ಸುತ್ತಮುತ್ತ ಜರುಗುತ್ತಿರುವ ವಿಷಯವೇ
ಹೆಣೆದು ಚಂದದ ಕವನವಾಗಿಸು ಬಾ ಭಾವವೇ..

ಡಾ: B.N ಶೈಲಜಾ ರಮೇಶ್
       ( ಶೈಲೂ...)
[23/10/2022, 6:48 pm] Dr. B. N. Shylaja Ramesh: #ಜಗದ_ಬೆಳಕು_ನೀನೇ 
ಎಲ್ಲೆಲ್ಲೂ ತುಂಬಿದೆ ಅಂಧಕಾರ
ಝಗಮಗಿಸುತ್ತಿದ್ದರೂ ಬೆಳಕಿನ ಪ್ರಾಕಾರ
ಸಾಮರಸ್ಯವೇ ಇಲ್ಲದ ಮೇಲೆ
ಮಿಣುಕು ದೀಪ ಅಳಿಸಬಲ್ಲುದೇ ಕಲೆ..? 

ಮನಸುಮನಸುಗಳ ಮದ್ಯೆ ಬೇಲಿ
ಪ್ರೀತಿವಿಶ್ವಾಸವಿಲ್ಲದೇ ಜೀವಕೆ ನೆಲೆ ಎಲ್ಲಿ.?
ಹೊರಗೆ ವಿಜೃಂಭಿಸುತಿರೇ ಬೆಳಕು
ತೊಳೆದು ಹೋದೀತೇ ಮನದ ಹುಳುಕು.?

ಬೆಳಗಲೇ ಬೇಕೆಂದರೆ ಬದುಕು
ರಕ್ಕಸತನವ ತೊಡೆದು ಹಾಕಲೇ ಬೇಕು
ಹರಿಸಿ ಮನ ಮಂದಿರಕೆ ಬೆಳಕು
ಪಸರಿಸಬೇಕು ಸುತ್ತ ಮುತ್ತೆಲ್ಲ ಜಗಕೂ

ಹೇ ದೇವ ನೀನೊಲಿದು ಬಂದರೆ
ಸಂಶಯವಿಲ್ಲ ಸ್ವರ್ಗದಂತಾಗುವುದು ಈ ಧರೆ 
ತಮವನಳಿಸಿ ಬೆಳಕೇರುವುದು ಮೇನೇ
ಕಾರಣ, ಜಗ ಬೆಳಗುವ ಬೆಳಕು ನೀನೇ ತಾನೇ

ಡಾ ಶೈಲಜಾ ರಮೇಶ್
        ( ಶೈಲೂ..)
[23/10/2022, 9:42 pm] Dr. B. N. Shylaja Ramesh: ಅಂದ ಮೊಗವು
ಚಂದ ನಗುವು
ಕಂದ ಮುದ್ದು ಕೃಷ್ಣನು
ಬಂದ ನಗುತ
ತಂದ ಕನಸ
[24/10/2022, 1:06 pm] Dr. B. N. Shylaja Ramesh: . Shylaja Ramesh: ಗ್ರಹಣ
*******

ಸೂರ್ಯ  ಚಂದ್ರರ ನಡುವೆ
ಭೂಮಿ ಬಂದಾಗ  ಚಂದ್ರಗ್ರಹಣ
ಹುಣ್ಣಿಮೆ ಚಂದ್ರನಾದರೂ
ಕೆಲವುಗಂಟೆಗಳ ಸಮಯ
ತನ್ನೆಲ್ಲಾ ಹೊಳಪು ಕಳೆದು
ಅಮಾವಾಸ್ಯೆಯ  ಕಾರಿರುಳ 
ಮರೆಯಲ್ಲಿ ನಲುಗುವಂತೆ
ಸಂಪೂರ್ಣ ಮರೆಯಾಗುತ್ತಾನೆ
ಇದು ಬಾನಂಗಳದ ಕೌತುಕ...
ವೈಜ್ಞಾನಿಕ ರೀತಿಯಲಿ....!

ದೇವದಾನವರಿಗೆ ಅಮೃತವ
ಹಂಚಿಕೆಯ ಸಮಯ
ದುರುಳ ರಕ್ಕಸನೊಬ್ಬ, ದೇವತೆಗಳ
ಸಾಲಿನಲ್ಲಿ ನುಸುಳಿ, ಮೋಸದಲಿ
ಅಮೃತಪಾನಿಸಿದ್ದ ಗಮನಿಸಿದ
ಚಂದ್ರಾದಿತ್ಯರ ದೆಸೆಯಿಂದ
ಶಿರಶ್ಚೇದನಗೊಂಡ ರಾಹು/ಕೇತುಗಳ
ಕೋಪದಿಂ ಹಿಡಿದ ಬಂಧನವೇ ಗ್ರಹಣ....
ಇದು ಪೌರಾಣಿಕ ಹಿನ್ನೆಲೆಯಲಿ....!

ವೈಜ್ಞಾನಿಕವೋ... ಪೌರಾಣಿಕವೋ...
ಏನೇ ಆದರೂ  ಸರಿ..
ಕೆಲವು ಗಂಟೆಗಳ ಆಗ್ರಹದಿಂದ
ಮುಕ್ತವಾಗುತ್ತದೆ ಗ್ರಹಣವೆಂಬ
ಹಿಡಿಯುವಿಕೆಯ  ಭೂತ...!

ಮತ್ತದೇ... ಸ್ವಚ್ಛ ನೀಲಾಕಾಶ..!
ಮತ್ತದೇ..  ಹೊಳೆಯುವ  ಚಂದ್ರ..!

ಆದರೆ....

ನಮಗ್ಹಿಡಿದ ಗ್ರಹಣವದದು
ಬಿಡುವುದೆಂದು..?
ಜಗಕ0ಟಿದ  ಸೂತಕವು
ತೊಲಗುವುದೆಂದು..?

ದ್ವೇಷಾಸೂಯೆಗಳ ಗ್ರಹಣ.!
ಹಿಂಸೆ ಕ್ರೂರತೆಯ ಗ್ರಹಣ.!
ಆರೋಪ - ಪ್ರತ್ಯಾರೋಪ
ನಾನೆಂಬ  ಅಹಂ ನ ಗ್ರಹಣ.!
ಅಧಿಕಾರ ಲಾಲಸೆಯ ಗ್ರಹಣ.!
ಜಾತಿ - ಬೇಧಗಳ, ಹಗೆತನದ
ಅಟ್ಟಹಾಸದ ಗ್ರಹಣ..!
ಎಲ್ಲವೂ ತನಗೇ ಇರಲೆಂಬ
ದುರಾಸೆಯ ಗ್ರಹಣ..!
ಧರ್ಮಾಂಧತೆಯ ಧರ್ಮಾಧರ್ಮಗಳ ಗ್ರಹಣ..!
ಮೊಹಾಂಧಕಾರದ ವಿಷಬೀಜಗಳ ಗ್ರಹಣ..!

ಮುಗಿಯುವುದೆಂದು..??
ಈ ಜಗವು ಎಲ್ಲಾ ಆಗ್ರಹಗಳಿಂದ
ಮುಕ್ತವಾಗುವುದೆಂದು..??
ಮನುಜ - ಮನುಜರ ನಡುವೆ
ಪ್ರೀತಿ ಮೂಡುವುದೆಂದು,
 ದ್ವೇಷ ಅಳಿಯುವುದೆಂದು..??

ಸಿಗಬಹುದೇ ಈ  ಎಲ್ಲಾ ಗ್ರಹಣಗಳಿಂದ ಮನುಜರಿಗೆ ಮುಕ್ತಿ..!
ಸ್ವಚ್ಛವಾದೀತೆ ಮನಸು..??
ಹರಿದೀತೇ.. ಸೂತಕದ ಛಾಯೆ..??
ಬಿಟ್ಟೀತೇ ಭ್ರಮೆಯ ಮಾಯೆ..??

         ಶೈಲೂ......
[24/10/2022, 1:14 pm] Dr. B. N. Shylaja Ramesh: ಜೋಗದ ಸಿರಿ
************

ಹೋದವೆಲ್ಲಿ ರಾಜ ರಾಣಿ
ರೋರರ್ರಾಕೇಟ್ಗಳ ಭವ್ಯ ಜಲಧಾರೆ
ಆ ನಾಲ್ಕರ ಸಂಗಮವೇ ಇದು..??
ಆವರಿಸಿ ಬಿಟ್ಟಿದೆ ಸುತ್ತ ಧರೆ..!!

ಧಾರೆಧಾರೆ ಸುರಿತ ಜೋಗ ಜಲಪಾತ
ಲೆಕ್ಕಕ್ಕೆ ಸಿಗದ ಮೊತ್ತ ಅನುಪಾತ
ಹಾಲ್ನೊರೆಯ ಸೊಬಗು ಕಣ್ಣೆದುರಿಗೆ
ಹಾಲ್ಗಡಲೇ ಇಳಿದು ಬಂದಂತೆ ಧರೆಗೆ...!!

ರುದ್ರ ರಮಣೀಯ ಮೊರೆತ
ಕಬಳಿಸಿ ಗುಡ್ಡಗಾಡು ಸಹಿತ
ಇಳಿದುಬಂದಳೆ ಹರನ ಜಡೆಯಿಂದ ನೇರ.?
ಹರಿದುಬಂದಳೆ ಪ್ರವಾಹದ ತೆರದಿ ಅಪಾರ..!!

ನಿಸರ್ಗ ರಮಣಿಗೆ ಓಕಳಿಯ ಮಜ್ಜನ
ಹಸಿರು ತೆರೆಯ ಸರಿಸಿ ಪೀತಾಂಬರ ವಸ್ತ್ರ ಲಾಂಛನ
ಪಸರಿಸೆಲ್ಲೆಡೆ ಹನಿ ಹನಿಯ ಸಿಂಚನ
ಕಾಣಲಾವೈಭವ ಅತೀವ ರೋಮಾಂಚನ..!!

            ಶೈಲೂ.
[24/10/2022, 1:16 pm] Dr. B. N. Shylaja Ramesh: ಮಧುರ ನೆನಪುಗಳ 
ಕಿತ್ತೊಗೆದು ಬಿಸುಟು
ಮರೆತು ನೆಮ್ಮದಿಯಲಿ
ಇ.. ರು..ವು..ದಾ.. ದ..ರೂ..
ಹೇಗೇಳು..??

ಮರೆಯಲಾದೀತೆ ಜೀವವ
ತೊರೆಯಲಾದೀತೆ ಉಸಿರ
ಮರೆತಂತೆ ನಟಿಸಲೊಲ್ಲೆ
ಮದುರಾಕ್ಷಣಗಳ ಮೇಲುಕುತ್ತಾ
ಇ.. ರು..ವು..ದ..ರ..ಲ್ಲೇ..
ಸವೆಸುತ್ತೇನೆ ಬಾಳು..
[24/10/2022, 1:17 pm] Dr. B. N. Shylaja Ramesh: ಕಲ್ಪನೆಗೆ ಜೀವತುಂಬಿ
ಬರೆದಾಗಲಷ್ಟೇ ಕವಿತೆ

ಭಾವನೆಗಳ ಬಿಂಬಕ್ಕೆ
ಜೀವ ತುಂಬಿದಾಗಲಷ್ಟೇ ಕವಿತೆ

ಸತ್ಯಾಸತ್ಯತೆ ಯ 
ಭಾವವಿಲ್ಲದಿದ್ದರೂ
ಸತ್ವಯುತ.ಪದಪುಂಜ ಕವಿತೆ
[24/10/2022, 1:17 pm] Dr. B. N. Shylaja Ramesh: ಸಮಾಧಿ
*******

ಮನಸ್ಸಿಲ್ಲದ.ಮನಸ್ಸಿನಿಂದಲೇ
ನಿನ್ನ ಅಸ್ತಿತ್ವವ ಮರೆತು
ನಿನ್ನ ನೆನಪುಗಳಿಗೊಂದು
ಸಮಾಧಿಯ ಕಟ್ಟಲನುವಾದೇ...

ನಂತರವೇ ಅರಿವಾದದ್ದು.....

ಅದು ನಿನ್ನ ನೆನಪುಗಳ
ಸಮಾಧಿಯಲ್ಲ.. ನನ್ನನೇ
ಬಲಿಕೊಟ್ಟು.. ನನ್ನ ಅಸ್ತಿತ್ವವೇ
ಸಮಾಧಿಯಾಯ್ತೆಂದು....😔

           ಶೈಲೂ....
[24/10/2022, 1:19 pm] Dr. B. N. Shylaja Ramesh: ಬಾಲ ಭಾಸ್ಕರ
**************

ನಿಶೆ ಯೊಡಲ ಸೀಳಿ
ದಿಶೆ ಬೆಳಗಲೆಂದು
ಉಷೆ ಯೊಡನೆ ಕೂಡಿ
ನಶೆ ಕಳೆದು ಬಂದ
ಬಾಲ ಭಾಸ್ಕರ....

             ಶೈಲೂ......

ಸರ್ವರಿಗೂ ಶುಭ ಮುಂಜಾವು
💐💐💐💐💐💐💐💐
ಬೆಳಕಿನ ಹಬ್ಬ ದೀಪಾವಳಿಯ
ಶುಭಾಷಯಗಳು
[24/10/2022, 1:19 pm] Dr. B. N. Shylaja Ramesh: ತೇರನೇರಿಬಂದ
**************
ಬಾನಂಗಳದಲ್ಲಿ ಹೊನ್ನ 
ನೀರು ಚೆಲ್ಲುತಾ
ಕವಿದ ಕಟ್ಟಲೆಯನಟ್ಟಿ 
ಬೆಳಕು ಬೀರುತಾ
ಮೂಡಿಬಂದ ಉದಯರವಿ ಹೊನ್ನ ತೇರನೇರುತಾ
            
                 ಶೈಲೂ.......

ಸರ್ವರಿಗೂ.  ಶುಭೋದಯ. ಶುಭದಿನ
💐💐💐💐💐💐💐💐💐💐💐
ದೀಪಾವಳಿ ಹಬ್ಬದ ಶುಭಾಶಯಗಳು
[24/10/2022, 1:20 pm] Dr. B. N. Shylaja Ramesh: ಬೆಳಗಲಿ ದೀಪ
************

ಜನಮನದ  ತಮ ತೊಳೆದು
ಬಾಂಧವ್ಯಗಳ ಬೆಸೆದು
ಅಂತರಂಗದೊಳಾವೃತ
ದ್ವೇಷಾಸೂಯೆಯ ಕಳೆ ತೆಗೆದು
ದೈದೀಪ್ಯಮಾನದಿ ಬೆಳಗಲೀ ದೀಪ

ಪಸರಿಸೆಲ್ಲೆಡೆ ಜ್ಞಾನ ನಿರಂತರ ಧಾರೆ
ಅಳಿಸಲಿ ಅಜ್ಞಾನ ಮೋಹಗಳ ಪೊರೆ
ನಾನುನಾನೆಂಬ ಖೂಳ ಮನವ ಧಮನಿಸಿ
ಅಮಿತಾನಂದದ ಸ್ನೇಹ ರಸವನರಿಸಿ
ದೈದೀಪ್ಯಮಾನದಿ ಬೆಳಗಲೀ ದೀಪ

ನಿರಂತರ ಕಾಮನೆಗಳಟ್ಟಹಾಸವ
ದಹಿಸಿ, ಮೂಡಿಸಲಿ ಮಂದಹಾಸವ
ಬೇರುಬಿಟ್ಟ ತಾಮಸದ ಕಳೆ ತೆಗೆದು
ತಬ್ಬಿ ಮೆರೆಯುವ ಸಾತ್ವಿಕದ ಬೆಳೆ ಬೆಳೆ ಬೆಳೆದು
ದೈದೀಪ್ಯಮಾನದಿ ಬೆಳಗಲೀ ದೀಪ

ಸತತ ಹೋರಾಟ ಜೀವನಯಾನ
ಕತ್ತಲು ಬೆಳಕಿನಾಟ ಇದುವೇ ಜೀವನ
ಸಾಮರಸ್ಯಕೆ ಇರಲಿ ಅಂತಿಮ ಗೆಲವು 
ಪ್ರೀತಿಯಲೆಯಲಿ ತೊಳೆದುಹೋಗಲಿ ತಮವು
ದೈದೀಪ್ಯಮಾನದಿ ಬೆಳಗಲಿ ದೀಪವು

           ಶೈಲೂ.......
[24/10/2022, 1:21 pm] Dr. B. N. Shylaja Ramesh: ದೀಪ ಹಚ್ಚೋಣ
**************

ದೀಪ ಹಚ್ಚೋಣ
ಕತ್ತ್ತಲೇ ತುಂಬಿದ
ಮನಸು ಮನಸುಗಳ ನಡುವೆ
ಕಳೆದ ತನ್ನಿರುವ
ಬೆಳಕ ಕುರುಹನ್ನು ಕಾಣಲು...

ದೀಪ ಹಚ್ಚೋಣ
ಬರಿದೇ ದ್ವೇಷಕೆ
ಬಡಿದಾಡೋ ಬಡಾಯಿಗಳ ನಡುವೆ
ವಿರಸವದಳಿದು
ಸರಸದ ಪ್ರೀತಿಯ ಕಾಣಲು...

ದೀಪ ಹಚ್ಚೋಣ
ದಾರಿ ಕಾಣದ
ಅಂಧಕಾರದಳ್ಳುರಿಯ ನಡುವೆ
ಸಿಟ್ಟುಸೆಡವ ಕಿತ್ತೊಗೆದು
ಶಾಂತಿ ಕಾಣಲು....

ದೀಪ.ಹಚ್ಚೋಣ
ಅಹಮಿನ ಸೊಕ್ಕಲಿ
ಕಣ್ಣುಕಾಣದ ಗಾವಿಲರ ನಡುವೆ
ತಮವ ಸರಿಸಿ
ಸಮರಸದಿ ಬಾಳಲು....

ದೀಪ ಹಚ್ಚೋಣ
ನಲಿವ ಬಾಳಿಗೆ
ಸ್ನೇಹಬತ್ತಿಗೆ ಒಲವ ತೈಲವನೆರೆದು
ಬೆಳಗಿ ಬದುಕು
ಸಂತಸವ ಕಾಣಲು...

              ಶೈಲೂ......
[24/10/2022, 1:22 pm] Dr. B. N. Shylaja Ramesh: ಜ್ಞಾನ ದೀವಿಗೆ
************
ಹಚ್ಚಿದೆ ದೀಪ
ಅಜ್ಞಾನದ ಸುತ್ತ
ಬೆಳಗಿತು ಬಾಳು
ಜ್ಞಾನ ನೀಡುತ್ತಾ

ಚೈತನ್ಯವಿತ್ತು ಮನಕೆ
ಬೆಳಗಿದೆ ಜ್ಞಾನದೀವಿಗೆ
ವಿಷಯಾವಲೋಕನ
ಬೌದ್ಧಿಕ ಬೆಳವಣಿಗೆ

ಆಕರ ಗ್ರಂಥವಿದು
ಬುದ್ಧಿಮತ್ತೆ ಬೆಳೆಸುತ್ತ
ಜ್ಞಾನಾಂಕುರದ ಪ್ರಭೆಯಿದು
ಅಜ್ಞಾನ ಓಡಿಸುವತ್ತ

ಕೋಶ ಓದಬೇಕು
ದೇಶ ಸುತ್ತಬೇಕು
ನೋಡಿ ಕಲಿಯಬೇಕು
ಮಾಡಿ ತಿಳಿಯಬೇಕು


ಅಂಧಕಾರವನಳಿಸಿ
ಜ್ಞಾನಾಗ್ನಿಯ ಪ್ರಜ್ವಲಿಸಿ
ಬೆಳಕು ನೀಡುವ ಹೊತ್ತಿಗೆ..
ಇದೇ ಜ್ಞಾನ ದೀವಿಗೆ...
[25/10/2022, 12:53 pm] Dr. B. N. Shylaja Ramesh: ರಾಜಾ ಪ್ರತ್ಯಕ್ಷ ದೈವ ಅಂತಾರೆ... ಈಗ ರಾಜರ ಆಳ್ವಿಕೆ ಇಲ್ಲ ನಿಜ..  ಆದರೆ ದೇಶವನ್ನು ಸುಭಿಕ್ಷ ವಾಗಿ, ಚಾಣಾಕ್ಷ ತನದಿಂದ, ಪ್ರಜೆಗಳನ್ನು ತಂದೆಯ ರೀತಿಯಲ್ಲಿ ಸಲಹುತ್ತಾ ಮುನ್ನಡೆಸುವವನೆ ರಾಜ... ರಾಜಾಜ್ಞೆಯನ್ನು ಪಾಲಿಸುವುದು ಪ್ರಜೆಗಳ ಧರ್ಮ... ಅಲ್ಲದೆ ಒತ್ತಾಯ ಹೇರದೆ ಸಾಧ್ಯವಾದರೆ ಅನುಸರಿಸಿ ಎಂದು ನಮ್ರತೆಯಿಂದ ಹೇಳುವ ರಾಜ ನಿಜಕ್ಕೂ ದೈವ ಸಮಾನ....

          ನಮ್ಮ ದೇಶದ ರಾಜ ( ಪ್ರಧಾನ ಮಂತ್ರಿಯವರು ) ಶ್ರೀಮಾನ್ ಮೋದಿಯವರೂ ವಿನಮ್ರ ವಾಗಿ ಇಂದು ರಾತ್ರಿ 9 ಗಂಟೆಗೆ ದೀಪಬೆಳಗುವುದರ ಮೂಲಕ ಐಕ್ಯತೆಯನ್ನು ಕಾಪಾಡಿ ಎಂದು ಮನವಿಯಿತ್ತ ಹಿನ್ನೆಲೆಯಲ್ಲಿ   ಈ ದೇಶದ ಪ್ರತಿಯೊಬ್ಬ ಸತ್ಪ್ರಜೆಯೂ ಅವರ ಮನವಿಯನ್ನು   ಪಾಲಿಸಬೇಕಾದ್ದು ಧರ್ಮ.

      ಜಗತ್ತೇ ಕೊರೊನಾದ ಅಟ್ಟಹಾಸದ ಅಂಧಕಾರದಿಂದ ಮುಳುಗಿದೆ... ಅಸಹಾಯಕ ಜನ ಹೊರಬರಲೂ ಹೆದರಿ ನಡುಗುವಂತ ಪರಿಸ್ಥಿತಿ,  ನಮಗಾಗಿ ಜೀವದ ಹಂಗನ್ನು ತೊರೆದು ವೈದ್ಯರು ಹಾಗೂ ವೈದ್ಯ ಸಿಬ್ಬಂದಿ, ಆರಕ್ಷಕರು, ಪೌರಕಾರ್ಮಿಕರು, ಮಾಧ್ಯಮದವರು ಕಷ್ಟಪಟ್ಟು ಹೋರಾಡುತ್ತಿರುವಾಗ.....  ಅವರ ತ್ಯಾಗಕ್ಕೆ ಗೌರವ ಸೂಚಿಸುವ ಸಲುವಾಗಿ ದೀಪ ಬೆಳಗುವುದು ನಮ್ಮ ಕರ್ತವ್ಯ....  ಅಲ್ಲದೆ ನಮ್ಮ ಹಿಂದೂ ಆಚರಣೆಯಲ್ಲಿ ದೀಪ ಬೆಳಗುವುದು ಒಂದು ಪವಿತ್ರಕಾರ್ಯವೂ ಹೌದಲ್ಲವೇ... ಅದನ್ನು.. ನಾವೆಲ್ಲಾ ಒಂದಾಗಿ ಪಾಲಿಸೋಣ... ಬನ್ನಿ ಬಾಂಧವರೆ ನಾವುಗಳು ದೀಪ ಬೆಳಗೋಣ🙏🙏

ದೀಪ ಹಚ್ಚೋಣ ಬನ್ನಿ
******************

ದೀಪ ಹಚ್ಚೋಣ ಬನ್ನಿ
ಸಕಲವ ಬದಲಿಸುವ
ಹುಚ್ಚು ಭ್ರಮೆಯಿಂದಲ್ಲ
ನಮ್ಮೊಳಗಿರುವ ತಮವ ಕಳೆಯಲು

ದೀಪವ ಹಚ್ಚೋಣ ಬನ್ನಿ
ನಿಶೆಯ ದೂಡಿಬಿಡುವೆನೆಂದ 
ದರ್ಪ ಅಹಂಭಾವದಿಂದಲ್ಲ
ಅಂಧಕಾರದಲ್ಲಿ ಕಳೆದ ನಮ್ಮತನವ ಹುಡುಕಲು

ದೀಪ ಹಚ್ಚೋಣ ಬನ್ನಿ
ಏನೋ ಸಾಧಿಸಿಬಿಡುವೆವೆಂಬ 
ಡಂಬಾಚಾರದಿಂದಲ್ಲ
ಆತ್ಮೀಯರೊಡನಿರುವ ನಮ್ಮನ್ನ ಹುಡುಕಲು

ದೀಪ ಹಚ್ಚೋಣ ಬನ್ನಿ
ನಮ್ಮಿಂದಲೇ ಜಗಕೆ ಬೆಳಕು
ಎಂಬ ಹುಂಬತನದಿಂದಲ್ಲ
ಝಗಮಗಿಸುವ ಬೆಳಕಲ್ಲಿ ನಮ್ಮ ಬಾಳು ಬೆಳಗಲು

ದೀಪ ಹಚ್ಚೋಣ ಬನ್ನಿ
ಎಲ್ಲರಿಗಿಂತ ಮೇಲೆಂಬ
ದರ್ಪದ ಭಾವನೆಯಿಂದಲ್ಲ
ಉರಿವ ದೀಪಗಳಲ್ಲಿ ಏಕತೆಯ ಕಾಣಲು

ದೀಪ ಹಚ್ಚೋಣ ಬನ್ನಿ
ಮೂಢನಂಬಿಕೆಯಿಂದಲ್ಲ
ಅಸಹಾಯಕರ ಒಳದನಿಗೆ
ಪ್ರತಿದ್ವನಿಯಾಗಲು

ದೀಪ ಹಚ್ಚೋಣ ಬನ್ನಿ
ನಮ್ಮ ಮನೆಯಷ್ಟೇ ಬೆಳಗಲಲ್ಲ
ತುತ್ತನ್ನಕೂ ಪರಿತಪಿಸುವವರ
ನೋವಿನರಿವಾಗಲೆಂದು

ದೀಪ ಹಚ್ಚೋಣ ಬನ್ನಿ
ನಮಗಷ್ಟೇ ಬೆಳಕು ಬೇಕೆಂಬ
ದುರಭಿಮಾನದಿಂದಲ್ಲ
ದ್ವೇಷಾಸೂಯೆಯಲಿ ಕುದಿವವರರಿಗೂ
ಒಳಿತಾಗಲೆಂದು

ದೀಪ ಹಚ್ಚೋಣ ಬನ್ನಿ
ಪ್ರೀತಿಯಿಂದ, ಭಕ್ತಿಯಿಂದ
ಜಗವ ಪೀಡಿಸುತ್ತಿರುವ
 ಮಹಾಮಾರಿಯ ವಕ್ರದೃಷ್ಟಿಯಿಂದ
ಸರ್ವರಿಗೊಳಿತಾಗಲೆಂದು

     ಡಾ : ಶೈಲಜಾ ರಮೇಶ್
[25/10/2022, 12:57 pm] Dr. B. N. Shylaja Ramesh: ಹಣತೆ
******
           
ಹಚ್ಚಬೇಕು  ಹಣತೆ
ತಮ ಬೆಚ್ಚಿ ಬೀಳುವಂತೆ
ಸುತ್ತಲೂ ಹಬ್ಬಿ ಬೆಳಕು
ಮನ ಹರುಷವಾಗುವಂತೆ

ನಿತ್ಯ ಬೆಳಗಬೇಕು
ಜ್ಯೋತಿ ಹೊತ್ತಿ ಉರಿಯಬೇಕು
ಮನದ  ವಿಷವ ತೊಳೆದು
ಪ್ರೀತಿ ಹಬ್ಬಿ ನಲಿಯಬೇಕು

ದ್ವೇಷದಂಧಕಾರ
ನಾಚಿ ತೊಲಗಬೇಕು
ಅಜ್ಞಾನ ಕೊಳೆಯ ತೊಳೆದು
ಜ್ಞಾನ ಪಸರಬೇಕು

ಮೃತ್ಯು ಮುಖದ ಶಕ್ತಿ
ಬೆಚ್ಚಿ ಓಡುವಂತೆ
ಅಮೃತತ್ವದೆಡೆಗೆ ಬದುಕು
ಸಾಗಿ ನಲಿಯುವಂತೆ

ಹಚ್ಚಬೇಕು  ಹಣತೆ
ನಗುವೆಲ್ಲೆಡೆ ತುಂಬುವಂತೆ
ಸೌಹಾರ್ದ ಬದುಕ ಬಯಸಿ
ಶಾಂತಿ  ಹರಡುವಂತೆ

          ಶೈಲೂ.....
[26/10/2022, 6:19 pm] Dr. B. N. Shylaja Ramesh: ಬೆಳಕು
******
ಅಜ್ಞಾನದ ತಮವ ಓಡಿಸಲು ಕಾದಿದೆ
ಬಾಗಿಲ ಬಳಿಯಲ್ಲಿ ನಿಂದು ಹೊಂಬೆಳಕು
ತೆರೆದು ಮನದ ಕದವ ಬರಮಾಡಿಕೊ ಬೇಗ
ತೊಳೆಯಲೀ ಅಹಮಿಕೆಯ ಬೆಳಗಿ ನಲ್ಬೆಳಕು

ಹಗಲಿಗಿಹುದು ದಿನಕರನ ಪ್ರಭೆಯ ಹೊಂಬೆಳಕು
ಇರುಳಿಗಿದೆ ನಗುವ ತಿಂಗಳನ ಬೆಳಕು
ಮನವ ಬೆಳಗಲಿಹುದು ಜ್ಞಾನದ ಬೆಳಕು
ಅಂತರಂಗದ ಚೆಲುವಿಗೆ ನಗುವೆ ಬೆಳಕು

ಮನದ ಜಡ ತೊಲಗೆ ಉತ್ಸಾಹದ ಬೆಳಕು
ದ್ವೇಷಾಸೂಯೆಯ ತಮಕೇ ಪ್ರೀತಿ ಬೆಳಕು
ಅಜ್ಞಾನ ಓಡಿಸಲು ಅರಿವೆಂಬ ಬೆಳಕು
ಪ್ರಜ್ವಲಿಸಲೇಲ್ಲೆಲ್ಲೂ ಮಾನವತೆಯ ಬೆಳಕು

ಮನಮುದುಡಿ ಕುಳಿತಿರಳು ಆಶೆಯ ಬೆಳಕು
ನೊಂದ ಜೀವಗಳಿಗೆ ಕರುಣೆಯ ಬೆಳಕು
ವರ್ಣಬೇಧದ ದಳ್ಳುರಿಗೆ ಸ್ನೇಹದ ಬೆಳಕು
ಮನುಕುಲವುಳಿಯಲು ಶಾಂತಿಯಾ ಬೆಳಕು

ಮೌಢ್ಯತೆಯ ಬದಿಗಿರಿಸಿ ಹಚ್ಚೋಣ ಹಣತೆ
ಬೆಳಗಲೆಲ್ಲರ  ಬಾಳು ನಿಸ್ವಾರ್ಥದ ಪ್ರಣತೆ
ಸುತ್ತಲೂ ಪಸರಿಸಿ ಜ್ಞಾನಜ್ಯೋತಿಯ ಬೆಳಕು
ಮನದಂಗಳದಿ ಪ್ರಜ್ವಲಿಸಲಿ ಕಿರುನಗೆಯ ಬೆಳಕು

          ಶೈಲೂ.....
[28/10/2022, 1:09 pm] Dr. B. N. Shylaja Ramesh: ಕಲ್ಪನೆಯೊಂದರ ಅರಿವಿದಲ್ಲ
ನಿಜ, ನಿನ್ನ ಆ ಸ್ಪರ್ಶದ ಕಂಪನವಿದು
ನುಡಿಗಟ್ಟಿಗೆ ಎಟುಕುವುದಿದಲ್ಲ
ಆಂತರ್ಯದಲೇ ಅನುಭಾವಿಸುವ ಸತ್ಯವಿದು

ತೆರೆದಿದೇ ನೋಡು ಸುಮನಸು
ಮೆಲ್ಲನಡಿಯಿಟ್ಟು ನುಸುಳುವ ಪ್ರೀತಿಗೆ
ಮನವು ಹಾಗೇ ಕಂಡಿದೆ ಕನಸು
ಅರಿವೇ ಆಗದೆ ಮನವನಪಹರಿಪ ರೀತಿಗೆ

ನೀನಿಟ್ಟ ಹೆಜ್ಜೆಯ ಕಂಪನದ ಸದ್ದು
ಭೋರ್ಗರೆದಾರ್ಭಟಿಪ ಕಡಲಲೆಯ ರೀತಿ
ನೀನೊಂದು ಗೊಂಬೆಯಂಥ ಮುದ್ದು
ಕೇಳದೇನೆ ಮನವನಾಕ್ರಮಿಸಿಬಿಟ್ಟಿದೆ ಪ್ರೀತಿ

ನುಡಿಯುತಿದೆ ಮೌನದಲೇ
ಅಸಂಖ್ಯ ರಾಗವನು ಹೃದಯವೀಣೆ
ರಾಗ ಮಾಧುರ್ಯಕೆ ಮಣಿದೆ
ಹೃದಯ ಮೀಟುವ ವೈಣಿಕ ನೀನೇ ತಾನೇ

ಸರಿಯದಿರಲೆಂದಿಗೂ ಕಾಲ
ಹೀಗೆಯೇ ಇರಲಿ ಭವ್ಯ ಅನಂತ ಪ್ರೀತಿ
ಮುರಿಯದಿರಲೆಂದಿಗೂ ಮನಸು
ಜನ್ಮಾಂತರಕೂ ಬರಲಿ ದಿವ್ಯ ಪ್ರೇಮ ದೀಪ್ತಿ

              ಶೈಲಜಾ ರಮೇಶ್
                 ( ಶೈಲೂ..)

ಚಂದದ ಭಾವ ಧಾರೆ ಸರ್
ತುಂಬಾ ಇಷ್ಟ ಆಯ್ತು😊

ನಿಮ್ಮ ಆ ಭಾವಕ್ಕೆ.ನನ್ನೆರಡು ಸಾಲುಗಳು😊
[28/10/2022, 1:11 pm] Dr. B. N. Shylaja Ramesh: ಇನ್ನೆಷ್ಟು ಕಾಯಲಿ ಹೇಳು
ಬರಬಾರದೇನು ಬಳಿಗೆ ಗೆಳೆಯಾ
ಕಳೆದುಹೋಯ್ತು ಸಂವತ್ಸರಗಳೇ
ಸುರಿಸಲಿಲ್ಲವೇಕೆ ನೀ ಪ್ರೀತಿ ಮಳೆಯ.?

ಕಣ್ಣು ಹಾಯಿಸುವಷ್ಟೂ ದೂರ
ಬರೀ ಬೆಂಗಾಡು ಕಲ್ಲುಮುಳ್ಳಿನ ಹಾದಿ
ನೀ ಅಡಿಯಿಟ್ಟರಷ್ಟೇ ಪ್ರಖರ
ಅಡಿಗೆ ಹೂಹಾಸಿ ನಲಿಯುವಳು ಪ್ರಕೃತಿ

ಅರೆ ಘಳಿಗೆ ಬಿಡುವಿಲ್ಲ ಕಣ್ಣಿಗೆ
ನೀ ಬರುವ ದಾರಿಯಲೇ ನೆಟ್ಟು ನೋಟ
ವಿಶ್ರಮಿಸಲೂ ಮನವಿಲ್ಲ ಅಕ್ಷಿಗೆ
ಆ ಎಳೆ ನಗುವ ಕಂಣ್ತುಂಬಿಕೊಳ್ಳುವ ಚಟ

ಒಮ್ಮೆಯಾದರೂ ಬಂದು ನಿಲ್ಲೆದುರು
ನೀ ನಿಂತೆದೆಯ ನೋಯಿಸಬೇಡ
ಹಾದಿಹೋಕರ ಕೆಡು ದೃಷ್ಟಿಗೆ ಸಿಲುಕಿಸಿ
ಆಡಿಕೊಳ್ಳುವವರಿಗೆ ವಸ್ತುವಾಗಿಸಬೇಡ

            ಶೈಲೂ......

ಆ ಸುಂದರ ಚಿತ್ರಕ್ಕೆ ನನ್ನೆರಡು ಸಾಲು😊
[29/10/2022, 1:19 pm] Dr. B. N. Shylaja Ramesh: #ಅಪ್ಪು 
ಕಣ್ಣೀರು ಹೇಳಿದ ಕಥೆಯಲಿ
ನೀ ರಾಜಕುಮಾರ
ಅಭಿಮಾನಿಗಳ ಎದೆಯಲಿ
ನೀನೆಂದೂ ಅಜರಾಮರ

ಸಾವಪ್ಪಿದರೂ ಸಾವನ್ನೇ ಸೋಲಿಸಿ
ಪುಟಿದೆದ್ದುಬಂದೆ ನೀನು
ನಗೆಯೂರಿನ ನಗುಮೊಗದ ದೊರೆ
ಸಾವಿನಂತರವೂ ಜೀವಂತ ನೀನು.!

ಉರುಳಿತ್ಹೇಗೋ ಸಂವತ್ಸರ
ನೀರಸ.!, ನೀನಿಲ್ಲದೆಂಥ ಚಂದ..?
ಮುಳುಗೇಳುತ್ತಿದೆ ಅಭಿಮಾನಿ ಬಳಗ
ಕಣ್ಣೀರಕಡಲಲ್ಲಿ ನೋವಿನಿಂದ

ಬಾನದಾರಿಯ ಬೆಳಗಿದ ಸೂರ್ಯ
ನೀ ಬೇಗ ಜಾರಿ ಹೋದೆ   
ಬಾಳದಾರಿಯಲ್ಲಿ ನೊಂದವರಿಗೆ 
ನೆರವಾಗುತ ದಂತಕಥೆಯಾದೆ

ಗಂಧದಗುಡಿಯ ಚಂದನ
ಪಸರಿಸುತೆಲ್ಲೆಡೆ ಸುಗಂಧ
ರಾರಾಜಿಸುತ್ತಿರುವ ಯುವರತ್ನ
ಇವ ಕರುನಾಡಿನ ಮನೆ ಮನೆ ಕಂದ

          ಡಾ: ಶೈಲಜಾ ರಮೇಶ್
                (  ಶೈಲೂ )
[29/10/2022, 4:35 pm] Dr. B. N. Shylaja Ramesh: ಎಸ್ ಲಲಿತಾ ಮಂಡ್ಯ  ಅವರ ಕವಿತೆಯಿಂದ ಪ್ರೇರಿತ...😊

ಗೆಳೆಯಾ...
ನೀನಿಲ್ಲದೂರಲ್ಲಿ 
ಸೊಗಸಿಲ್ಲ ಸೊಗಡಿಲ್ಲ 
ಸೌಂದರ್ಯವಿಲ್ಲ
ನಲಿವಿಲ್ಲ ಗೆಲುವಿಲ್ಲ 
ನಗುವೆಂಬುದೂ ಇಲ್ಲ
ಸೊಗದ ಮಾತಿಲ್ಲ ಸರಸವೂ ಇಲ್ಲ
ಹಸಿರು ಗಿಡಮರಗಳ ಸೊಂಪಿಲ್ಲ ಕಂಪಿಲ್ಲ ಹಾಡುಹಕ್ಕಿಯ ಇನಿದನಿಯಿಲ್ಲ,
ತಂಗಾಳಿ ಕಲರವದಿ ತಣಿವಿಲ್ಲ ತಂಪಿಲ್ಲ
ಬಿರುಗಾಳಿ ಬೀಸಿದರೂ ಅಬ್ಬರವಿಲ್ಲ..!

ಗೆಳೆಯಾ....
ನೀ ಬರುವ ದಾರಿಯಲಿ..
ಗದ್ದಲದ ಗೌಜಿಲ್ಲ
ಕಾಯುವ ಕಾತರದ ಕ್ಷಣಗಳಿಲ್ಲ..
ನಿನ್ನಿರುವಿಕೆಯ ಒನಪಿಲ್ಲ ಬಿಸುಪಿಲ್ಲ
ಕದ್ದು ನೋಡುವ ಕಣ್ಣುಗಳಿಲ್ಲ
ಕಾಯುವಿಕೆಯಲ್ಲಿ ಕೌತುಕದ ಅಮಲಿಲ್ಲ
ಕಣ್ಣು ಹಾಯಿಸಿದಷ್ಟೂ 
ನೀ ಬಾರಲೇ ಇಲ್ಲ...

           ಶೈಲೂ....
[29/10/2022, 4:50 pm] Dr. B. N. Shylaja Ramesh: ಚಳಿಗಾಲ
********

ಹೇಮಂತದ ಕೊರೆವ ಚಳಿಗಾಲ
ಹಿಮಸುರಿದು ದಾರಿ ಮಸುಕು
ಗಡಗಡ ನಡುಗುವ ದೇಹಕೆ
ಬೆಚ್ಚಗಿನ ಕಂಬಳಿಯ ಮುಸುಕು

ಮಂಜು ಮುಸುಕಿದ ಮುಂಜಾವು
ತಣ್ಣನೆ ಕುಳಿರ್ಗಾಳಿಗೆ ನಡುಕ
ಹೊತ್ತಾದರೂ ರವಿಯ ಸುಳಿವಿಲ್ಲ
ತಡವಾದರೂ ಎಡೆಬಿಡದ ಕಾಯಕ

ಥರಗುಟ್ಟಿಸುವ ಚಳಿಗಾಲ
ಮೇಲೆ ಕೊರೆತ ಒಳಗೆ ಬಿಗಿತ
ಎದೆಕಾವಿಗೆ ತನುಕಂಪಿಸುವ ಕಾಲ
ಮನದಲಿ ಭಾವನೆಗಳ ಮೊರೆತ

ಆಹಾ ಇದು ಚಳಿಚಳಿಗಾಲ
ಆಸೆಗಳು ಹಣ್ಣಾಗುವ ಕಾಲ
ಬಯಕೆಗಳು ಕೆಣಕುವ ಕಾಲ
ಸಮ್ಮಿಲನದ ಅರೆಮಾಗಿದ ಮಾಗಿಕಾಲ

ಹೇಮಂತನ ಚಳಿಯ ಕಳೆದು
ಶಿಶಿರನ ಸೆಳೆವ ಚೆಲುವ ಕಂಡು
ವಸಂತನಾಗಮನಕ್ಕೆ ಕಾಯುವ
ವಿರಹಿಗಳಿಗಿದು ಸಂವೇದನಾಕಾಲ

             ಶೈಲೂ.....
[29/10/2022, 6:15 pm] Dr. B. N. Shylaja Ramesh: ಕೇಳಿಸದೇ ಕರೆ
************

ಕೇಳಿಸದೇ ಇನಿಯಾ ಒಲವ ಕರೆಯೋಲೆ
ಒಲುಮೆಯಲಿ ಕಾಯ್ದೆ ಹಿಡಿದು ಹೂ ಮಾಲೆ

ಹಾಸಿದ್ದೆ ಹೂ ರಾಶಿ ನೀ ಬರುವ ಹಾದಿಯಲಿ
ಘಮ್ಮೆನ್ನೋ ಸುಮರಾಜಿ ಅರಳಿತ್ತು ಆಸೆಯಲಿ

ಅರೆಬಿರಿದ ಅಧರದಲಿ ನಿಂನ್ಹೆಸರ ಗುನುಗುತಲಿ
ಆಸೆ ಕಂಗಳ ತೆರೆದು ಕಾಯುತಿಹೆ ಪ್ರೀತಿಯಲಿ

ದಿಟ್ಟಿಸಿ ನೋಡುತಿಹೆ ದೂರ ತೀರದ ತನಕ
ಬಾರದಿಹೆಯೇಕೆ ಸಖಾ ಬೇಡವೇ ಸನಿಹ

ಬರುವೆಯೆಂದೆನ್ನುವುದು ಬರೀ ಬೆರಗು ಮಾತೇನು?
ಬಣ್ಣನೆಗೂ ಮೀರಿದ ಪ್ರೀತಿ ತುಟಿಯಂಚಿನ ನುಡಿಯೇನು?

ಕನಸು ತುಂಬಿ ಕಣ್ಣಲ್ಲಿ ಕಾಯುತಿಹೆ ನಿನಗಾಗಿ
ಕಿರುನಗೆಯ ಪರಿಯನ್ನು ಕಾಣುವಾ ಸಲುವಾಗಿ

ಕಣೆಗಣಿಸದಿರು ಕರೆಯ ನೀನೆನ್ನ ಪ್ರಿಯಬಂಧು
ಬಾಡಿದ ಮೊಗದಲ್ಲಿ ನಗುತುಂಬು ಬಳಿಬಂದು

         ಶೈಲೂ.......
[31/10/2022, 12:28 pm] Dr. B. N. Shylaja Ramesh: ಎಲ್ಲರನ್ನೂ ಪ್ರೀತಿಯಿಂದಪ್ಪಿ ಕರುನಾಡಿನ ಮನೆ ಮಗನಾಗಿದ್ದ ಅಪ್ಪು ಅವನ ಜನಪ್ರಿಯತೆಗೆ ಕುರುಬಿ ಸಾವಿನಿಂದಪ್ಪಿ ಆ ದೇವ ಮಾಡಿಬಿಟ್ಟ ತಪ್ಪು.
[1/11/2022, 10:01 am] Dr. B. N. Shylaja Ramesh: ಕನ್ನಡದ ಲಿಪಿಯದು ದುಂಡುಮಲ್ಲಿಗೆ
ಕನ್ನಡದ ಕಂಪದು ಕೆಂಡ ಸಂಪಿಗೆ
ಭಾಷೆಯೋ ಸವಿದಂತೆ ಸಿಹಿಜೇನು
ಕನ್ನಡಾಂಬೆ ತಾ ಪೊರೆವ ಸುರಧೇನು.!

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
💐💐💐
[1/11/2022, 10:15 am] Dr. B. N. Shylaja Ramesh: ಕನ್ನಡದ ಲಿಪಿಯದು ದುಂಡುಮಲ್ಲಿಗೆ
ಕನ್ನಡದ ಕಂಪದು ಕೆಂಡ ಸಂಪಿಗೆ
ಭಾಷೆಯೋ ಸವಿದಂತೆ ಸಿಹಿಜೇನು
ಕನ್ನಡಾಂಬೆ ತಾ ಪೊರೆವ ಸುರಧೇನು.!
[1/11/2022, 11:49 am] Dr. B. N. Shylaja Ramesh: #ಕನ್ನಡಮ್ಮನ_ಹಿರಿಮೆ

#ದ್ವಿರುಕ್ತಿ_ಕವನ

ಕಣಕಣದಲ್ಲೂ ಸಾರುತಿದೆ ಕನ್ನಡಮ್ಮನ ವೈಭವ
ಉಸಿರುಸಿರಲೂ ಬೆರೆತಿದೆ ಭಾಷಾಭಿಮಾನದ ಪ್ರಭಾವ
ಜನಮನದಲ್ಲಿ ನೆಲೆಸಿಹಳು ತಾಯಿ ಭುವನೇಶ್ವರಿ
ಬಗೆಬಗೆಯಲಿ ಸ್ತುತಿಸುವರು ತಾಯ ಐಸಿರಿಯ ಪರಿ

ಹೆಜ್ಜೆಜ್ಜೆಗೂ ಹರಡಲಿ ಕನ್ನಡ ಭಾಷೆಯ ಕಂಪು
ಅಣುವಣುವಲೂ ಬೆರೆಯಲಿ ತಾಯ ಹಿರಿಮೆ ಪೆಂಪು
ಮನೆಮನೆಯಲೂ ಮೊಳಗಲಿ ಜೈಕಾರದ ಘೋಷ
ಎಳೆದೆಳೆದು ಬಂಧಿಸಲಿ ತಾಯ್ನುಡಿಯ ಪ್ರೀತಿ ಪಾಶ

ನಡೆನುಡಿಯಲಿ ಮೇಳೈಸಲಿ ಮಾತೃಭಾಷೆ ಭಕ್ತಿ
ನರನಾಡಿಯಲಿ ತುಂಬುವುದು ನಾಡುನುಡಿಯ ಶಕ್ತಿ
ಸಾಲುಸಾಲು ಗುಡುಗೋಪುರಗಳು ಕಾಣಸಿಗುವುದಿಲ್ಲಿ
ಹಡಿಬದೆಯ ಧರ್ಮಸಾರ ನೆಲೆಯೂರಿಹುದಿಲ್ಲಿ

ತಲತಲನೆ ಹರಿವ ಜೀವನದಿಗಳ ನಾಡು
ಕ್ಷಣಕ್ಷಣಕ್ಕೂ ಅಚ್ಚರಿಯ ಅನಾವರಣವಿಲ್ಲಿ ನೋಡು
ಕಣ್ಮನಗಳ ಸೆಳೆದೆಳೆವ ಶಿಲ್ಪಕಲೆಯ ವೈಭವ
ಮನಮನದಲೂ ಕಿಚ್ಚೆಬ್ಬಿಸುವ ಕನ್ನಡರಾಜ್ಯೋತ್ಸವ

ಪದಪದದಲಿ ತುಂಬಲಹುದೇ ಕನ್ನಡದ ಹಿರಿಮೆ
ವಿವಿಧತೆಯಲಿ ಏಕತೆಯೇ ತಾಯಿನಾಡ ಗರಿಮೆ
ಎಲ್ಲೆಲ್ಲಿ ನೋಡಲಿ ಹಾರುತಿದೆ ಹಳದಿ ಕೆಂಪು ಭಾವುಟ
ಅಚ್ಚಳಿಯದೆ ನೆಲೆನಿಂತಿದೆ ಇತಿಹಾಸದ ಪುಟಪುಟ..!!

ಡಾ: B.N. ಶೈಲಜಾ ರಮೇಶ್
[1/11/2022, 11:52 am] Dr. B. N. Shylaja Ramesh: #ಹಚ್ಚ_ಬನ್ನಿ_ಕರುನಾಡ_ದೀಪವ

ಹಚ್ಚೋಣ ಬನ್ನಿ ಕರುನಾಡ ದೀಪ
ತೊಡೆಯಲೆಲ್ಲ ದ್ವೇಷಾಸೂಯೆಯ ಪಾಪ
ಬೆಳಗಲಿ ಎಲ್ಲೆಲ್ಲೂ ಕನ್ನಡಮ್ಮನ ಕೀರ್ತಿ.!
ಹರಡಲವಳ ಹೆಸರು ಈ ದೇಶದ ಭರ್ತಿ..!!

ಹಚ್ಚಿ ಪ್ರಣತಿ ಕಸ್ತೂರಿ ತೈಲವನೆರೆದು
ದೈದೀಪ್ಯಮಾನದಲುರಿಯಲಿ ಮೆರೆದು
ಬೆಳಗಲಿ ಜ್ಞಾನ; ಅಜ್ಞಾನ ತಮ ಕಳೆದು..!
ತೊಲಗಲೆಲ್ಲರ ಪಾಪಗಳು ಉರಿದುರಿದು ಉರಿದು..!!

ಕನ್ನಡ ನಾಡಿದು ದೇವಮಂದಿರದಂತೆ
ಪೊರೆವ ತಾಯಿ ಭುವನೇಶ್ವರಿಯಂತೆ
ಕಾವಳೆಮ್ಮನು ತನ್ನ ಮಡಿಲ ತೆಕ್ಕೆಯಲಿರಿಸಿ..!
ಧೀಮಂತ ಸಂಸ್ಕೃತಿಯ ಜ್ಞಾನದಮೃತವ ಕುಡಿಸಿ..!!

ಎನಿತು ಸುಂದರ ಈ ಕರುನಾಡ ಮಂದಿರವು
ಜೀವಂತ ನೆಲೆ ಆ ನಿತ್ಯ ಹರಿದ್ವರ್ಣವೂ
ಜೀವಸೆಲೆಗಿಹುದು ಜೀವನದಿ ಕಾವೇರಿ..!
ಹೊಳೆಯುತಿದೆ ಶಿಲ್ಪಕಲೆ ವೈಭವದ ಸಿರಿ..!!

ಬೆರೆತಿದೆ ಕನ್ನಡಕೆ ಮಂಗಳದ್ರವ್ಯದ ಸಂಭ್ರಮ
ಅಂತೆಯೇ ಕೀರ್ತಿದ್ವಜ ಹರಿಷಿನ ಕುಂಕುಮಾ
ಹಾರಾಡಬೇಕು ಬಾವುಟ ಗಗನದೆತ್ತೆತ್ತರಕೆ..!
ಕೀರ್ತಿ ಪಸರಿಸಬೇಕು  ಸಮಸ್ತ ಭುವನಕೆ..!!

ಶಾಂತಿ ಪ್ರಿಯರಿಲ್ಲಿ ಕರುನಾಡ ಬಂಧುಗಳು
ಸ್ನೇಹಹಸ್ತವ ಚಾಚೆ ಪ್ರೀತಿ ಮಳೆ ಸುರಿಸುವರು
ಅಸನವಸನವನಿತ್ತು ತಾಯಂತೆ ಪೊರೆವರು..!
ದ್ವೇಷ ಅಸೂಯೆಯನು ಲವಲೇಶ ಸಹಿಸರು..!!

     ಡಾ: B.N. ಶೈಲಜಾ ರಮೇಶ್
[1/11/2022, 11:56 am] Dr. B. N. Shylaja Ramesh: ಕನ್ನಡ ತಾಯ.ಹಿರಿಮೆ
*******************

ಸೌಂದರ್ಯವಿಹುದು
ಕನ್ನಡನಾಡಿನ ಇಂಚಿಂಚಿನಲ್ಲಿ
ಸೌಗಂಧವಿಹುದು
ಕನ್ನಡ ನಾಡಿನ.ಶ್ರೀಗಂಧಧಲ್ಲಿ
ಮಾಧುರ್ಯವಿಹುದು
ಕನ್ನಡದ ಸವಿ ನುಡಿಯಲ್ಲಿ
ಔದಾರ್ಯವಿಹುದು
ಸಿರಿಗನ್ನಡದ ಜನಮನದಲ್ಲಿ
ಕೆಚ್ಚೆದೆಯ ವೀರತ್ವವಿಹುದು
ಇತಿಹಾಸದ ಪುಟಪುಟಗಳಲ್ಲಿ
ತಲೆದೂಗುವ ಸಾಹಿತ್ಯವಿಹುದು
ಕನ್ನಡದ ಕವಿಪುಂಗವರಲ್ಲಿ
ಜನಮನವ ತಣಿಸಲಿಹುದು
ಜೀವನದಿ ಕಾವೇರಿ
ಸರ್ವರ ಆದರಿಸುವ ಗುಣವುಂಟು
ಜಾತ್ಯಾತೀತತೆ ಬೇರೂರಿ
ಕಲೆಗಳ ತವರೂರು
ಅದರಂದ ಚಂದವ ಶಿಲ್ಪಕಲೆಯಲ್ಲಿ ನೋಡು
ಸರ್ವಧರ್ಮಗಳ ಬೀಡು
ಹೃದಯ ವೈಶಾಲ್ಯತೆಯನು ನೋಡು
ಕನ್ನಡ ಕಸ್ತೂರಿ ಕಂಪಿನಲಿ
ಮೆರೆವ.ನಾವು ಧನ್ಯ
ಕನ್ನಡ ಭುವನೇಶ್ವರಿಯ ಕರುಣೆಯ ಕಂದ
ಸರ್ವ ಜನರಲ್ಲಿ ಮಾನ್ಯ

              ಶೈಲೂ......
[1/11/2022, 12:02 pm] Dr. B. N. Shylaja Ramesh: ಕನ್ನಡಾಂಬೆ* 
🌹🌹🌹🌹

ಸ್ನೇಹ  ಚಾಚುವ ಹರಿಷಿನ
ಪ್ರೀತಿ ಸೂಸುವ  ಕುಂಕುಮ
ಹಚ್ಚಿ ಮೆರೆಯುತಿಹ 
ನನ್ನಮ್ಮ ಸೌಭಾಗ್ಯವತಿ,
 ಅವಳೇ ಕನ್ನಡತಿ
ಅವಳ ಮಮತೆ
ಹಾಲ್ಜೇನು  ಸವಿದಂತೆ
 ಸವಿ ನುಡಿಯದುವೆ
ಅಮೃತ ಫಲದಂತೆ
ಕಂಪು ಸೂಸುವ 
ಪ್ರಾಚೀನ  ಲಿಪಿಯದುವೆ
ಸುಂದರ  ಹೂಗುಚ್ಛ ದಂತೆ
ಕನ್ನಡಾಂಬೆಯ ಕಿರೀಟ
ಸಹ್ಯಾದ್ರಿ ಪರ್ವತವು
ಅವಳ ಹರ್ಷೋದ್ಗಾರ
ಜೋಗ ಜಲಪಾತ
ಅವಳ ಕರುಣಾರಸವೆ
ಜೀವನದಿ ಕಾವೇರಿ
ಅವಳಂತರಂಗದಾ  ಸೆಲೆ
ತಾಯಿ ತುಂಗಭದ್ರೆ
ಅವಳ  ಮುಗುಳುನಗೆಗೆ
ಅರಳಿದೆ ಮಲೆನಾಡು
ಅವಳ  ಸೌಂದರ್ಯ ವು
ರಮ್ಯ ಕೊಡಚಾದ್ರಿಯಲ್ಲಿ
ನನ್ನಮ್ಮ  ಶ್ರೀಮಂತೆ  ಗಂಭೀರೆ
ಅವಳ ಗರ್ಭದಲ್ಲಡಗಿಹುದು
ಲೋಹಗಳ  ಕಾಂತಿ
ಸೌಗಂಧ ಸೂಸಿ ಹರಡಿದೆಲ್ಲೆಡೆ
ತಾಯ ಶ್ರೀಗಂಧದ ಮೈಕಾಂತಿ
ರಾಜ, ಋಷಿ, ದಾರ್ಶನಿಕ
ಕವಿ ಕಲಾವಿದರ  ಹಡೆದವ್ವ
ಧೀಮಂತೇ ನನ್ನ  ಕನ್ನಡಾಂಬೆ
ಕನ್ನಡ  ರಾಜರಾಜೇಶ್ವರಿ
ರಾರಾಜಿಸುತಿಹಳಿಲ್ಲಿ
ಕನ್ನಡದ ಕಂಪು  ಸೌರಭವ ಚೆಲ್ಲಿ
ಉಸಿರಿತ್ತು, ತುತ್ತಿತ್ತು, ಪೊರೆಯುತಿಹ
ಕರುನಾಡ  ಭುವನೇಶ್ವರಿ
ನಿನಗೆ  ಶರಣು ಶರಣೆಂಬೆ
[1/11/2022, 12:09 pm] Dr. B. N. Shylaja Ramesh: ಗ್ರಹಣ
******

ಬಾನಲ್ಲಿ ಬೆಳಗುತಿಹ
ಚಂದ್ರನಿಗೆ ಹಿಡಿದಂತೆ
ರಾಹುವೆಂಬ ತಿಮಿರ
ಹಿಡಿಯುತ್ತದೆ ಮನಸ್ಸಿಗೂ
ಕಷ್ಟ ನೋವುಗಳ ಗ್ರಹಣ
ಉತ್ಸಾಹದ ಮನವನಾಕ್ರಮಿಸಿ
ಹಿಂಡಿ ಹಿಪ್ಪೆ ಮಾಡಿ
ಪ್ರಚಂಡ ನೋವುಣಿಸಿ
ಬದುಕ ಕತ್ತಲೆಡೆಗೆ ದೂಡಿ
ಆರಡಿಯ ಮನುಜನ
ಮೂರಡಿಯ ಮಾಡಿ
ಸಾಕು ಸಾಕೆನಿಸುವ ತೆರದಿ..!
ಈ ನಷ್ಟದ ಕಷ್ಟ ಸ್ಥಿರವೇನಲ್ಲ
ಕಾರ್ಗತ್ತಲಲ್ಲೂ ಭರವಸೆಯ
ಚಂದಿರ ಬಂದಂತೆ
ಕಾರಿರುಳಲ್ಲೂ ಚುಕ್ಕಿಗಳು
ಹೊಳಪಿಸಿ ನಗುವಂತೆ
ಸೂರ್ಯನುದಯವಾದೊಡೆ
ತಮ ಕರಗಿ ಹೋದಂತೆ...!
ನಾಳೆಗಳ ಚಂದದ ಬದುಕಿಗೆ
ಮೂಡಿ ಕಿರುನಗೆಯ ಆಶಾಕಿರಣ
ಹರಿಸಿ ಸೂತಕದ ಗ್ರಹಣ
ಬೆಳಗುವುದು ಸುಖದ ಜೀವನ....
ಸಹಿಸಬೇಕಷ್ಠೆ  ಕೆಲ ಸಮಯ
ಜೊತೆಗಿರಲಿ ಸಂಯಮ
ಭರವಸೆಯಿರಬೇಕು
ನಾಳೆ ಬರುವ ಬೆಳಕಿಗಾಗಿ
ಕಷ್ಟ ದಲ್ಲಿ ತೊಳಲುವಾಗ
ಹರಿಯನಾಮ ಸ್ಮರಿಸಬೇಕು
ಕಷ್ಟಗಳು ಕಳೆಯೆ ಗ್ರಹಣ ಕಳೆದಂತೆ
ಸಂಭ್ರಮಕೇ ಕೊನೆಯೆಲ್ಲಿ...!
ಹೃದಯ ಸ್ಪಂದನೆಗೆ ಮಿಗಿಲೆಲ್ಲಿ...!

           ಶೈಲೂ.

[1/11/2022, 6:23 pm] Dr. B. N. Shylaja Ramesh: #ಹಚ್ಚೇವು_ಕನ್ನಡದ_ದೀಪ

ನಾವು ಹಚ್ಚೇವು ಕನ್ನಡದ ದೀಪ
ತೊಡೆಯಲೆಲ್ಲ ದ್ವೇಷಾಸೂಯೆಯ ಪಾಪ
ಬೆಳಗಲಿ ಎಲ್ಲೆಲ್ಲೂ ಕನ್ನಡಮ್ಮನ ಕೀರ್ತಿ.!
ಹರಡಲವಳ ಹೆಸರು ಈ ದೇಶದ ಪೂರ್ತಿ..!!

ಹಚ್ಚಿ ಪ್ರಣತಿ ಕಸ್ತೂರಿ ತೈಲವನೆರೆದು
ದೈದೀಪ್ಯಮಾನದಲುರಿಯಲಿ ಮೆರೆದು
ಬೆಳಗಲಿ ಜ್ಞಾನ; ಅಜ್ಞಾನ ತಮ ಕಳೆದು..!
ತೊಲಗಲೆಲ್ಲರ ಪಾಪಗಳು ಉರಿದುರಿದು ಉರಿದು..!!

ಕನ್ನಡ ನಾಡಿದು ದೇವಮಂದಿರದಂತೆ
ಪೊರೆವ ತಾಯಿ ಭುವನೇಶ್ವರಿಯಂತೆ
ಕಾವಳೆಮ್ಮನು ತನ್ನ ಮಡಿಲ ತೆಕ್ಕೆಯಲಿರಿಸಿ..!
ಧೀಮಂತ ಸಂಸ್ಕೃತಿಯ ಜ್ಞಾನದಮೃತವ ಕುಡಿಸಿ..!!

ಬೆರೆತಿದೆ ಕನ್ನಡಕೆ ಮಂಗಳದ್ರವ್ಯದ ಸಂಭ್ರಮ
ಅಂತೆಯೇ ಕೀರ್ತಿದ್ವಜ ಹರಿಷಿನ ಕುಂಕುಮಾ
ಹಾರಾಡಬೇಕು ಬಾವುಟ ಗಗನದೆತ್ತೆತ್ತರಕೆ..!
ಕೀರ್ತಿ ಪಸರಿಸಬೇಕು  ಸಮಸ್ತ ಭುವನಕೆ..!!

     ಡಾ: B.N. ಶೈಲಜಾ ರಮೇಶ್
[1/11/2022, 6:23 pm] Dr. B. N. Shylaja Ramesh: #ಹಚ್ಚೇವು_ಕನ್ನಡದ_ದೀಪ

ನಾವು ಹಚ್ಚೇವು ಕನ್ನಡದ ದೀಪ
ತೊಡೆಯಲಿ ದ್ವೇಷಾಸೂಯೆಯ ಪಾಪ
ಬೆಳಗಲಿ ಎಲ್ಲೆಲ್ಲೂ ಕನ್ನಡಮ್ಮನ ಕೀರ್ತಿ.!
ಹರಡಲವಳ ಹೆಸರು ಈ ದೇಶದ ಪೂರ್ತಿ..!!

ಹಚ್ಚಿ ಪ್ರಣತಿ ಕಸ್ತೂರಿ ತೈಲವನೆರೆದು
ದೈದೀಪ್ಯಮಾನದಲುರಿಯಲಿ ಮೆರೆದು
ಬೆಳಗಲಿ ಜ್ಞಾನ; ಅಜ್ಞಾನ ತಮ ಕಳೆದು..!
ತೊಲಗಲೆಲ್ಲರ ಪಾಪಗಳು ಉರಿದುರಿದು ಉರಿದು..!!

ಕನ್ನಡ ನಾಡಿದು ದೇವಮಂದಿರದಂತೆ
ಪೊರೆವ ತಾಯಿ ಭುವನೇಶ್ವರಿಯಂತೆ
ಕಾವಳೆಮ್ಮನು ತನ್ನ ಮಡಿಲ ತೆಕ್ಕೆಯಲಿರಿಸಿ..!
ಧೀಮಂತ ಸಂಸ್ಕೃತಿಯ ಜ್ಞಾನದಮೃತವ ಕುಡಿಸಿ..!!

ಬೆರೆತಿದೆ ಕನ್ನಡಕೆ ಮಂಗಳದ್ರವ್ಯದ ಸಂಭ್ರಮ
ಅಂತೆಯೇ ಕೀರ್ತಿದ್ವಜ ಹರಿಷಿನ ಕುಂಕುಮಾ
ಹಾರಾಡಬೇಕು ಬಾವುಟ ಗಗನದೆತ್ತೆತ್ತರಕೆ..!
ಕೀರ್ತಿ ಪಸರಿಸಬೇಕು  ಸಮಸ್ತ ಭುವನಕೆ..!!

     ಡಾ: B.N. ಶೈಲಜಾ ರಮೇಶ್
[1/11/2022, 6:40 pm] Dr. B. N. Shylaja Ramesh: #ಕನ್ನಡವೇ_ನಮ್ಮುಸಿರು

ಮಾತೃಭಾಷೆಯಿದು ಅಮ್ಮನಂತೆಯೇ ಅಕ್ಕರೆ
ಸುಲಲಿತ ಭಾಷೆಯಿದು ಆಹಾ.. ಸವಿ ಸಕ್ಕರೆ..!
ಎಷ್ಟೊಂದು ಇತಿಹಾಸ ಕನ್ನಡ ನಾಡಿನ ಬಗ್ಗೆ
ನೆನೆದೊಡನೆ ಚಿಲ್ಲನುಕ್ಕುವುದು ಸಂತಸದ ಬಗ್ಗೆ.!

ಕವಿಕಬ್ಬಿಗರ ಕನ್ನಡ ಚೆಲುವಿನ ಭಾಷೆ
ಶ್ರೀಮಂತ ನುಡಿಗಟ್ಟು ಬೆಳಗುವ ಪ್ರಣತೆ.!
ಸುಲಿದಂತೆ ಹಣ್ಣನು, ಕಲಿಯಲು ಸರಳ
ಕಲಿಯಲಾರದ ಮನುಜ ನಿಜದಿ ಮರುಳ.!

ಭಾಷೆಯ ಸೊಗಡಲ್ಲಿ ವಿವಿಧತೆಯ ಉಚ್ಛಾರ
ಒಂದೊಂದು ಪ್ರಾಂತ್ಯದಲೂ
ಅದರದ್ದೇ ಶೃಂಗಾರ.!
ವಿವಿಧತೆಯಲ್ಲಿ ಏಕತೆಯೇ ಕನ್ನಡ ಭಾಷೆಯ ಗುಟ್ಟು
ಕಲಿಯಬೇಕು, ತಾಯಿಗೆ ಮಣಿದು ಪೊಡಮಟ್ಟು

ಎಷ್ಟು ಪುಣ್ಯದ ಫಲವೋ ತಾಯ ಮಡಿಲಲ್ಲಿ ಜನನ
ಭಾಷಾಮಾಧುರ್ಯಕೆ ಸೋತು ಮನದಿ ತೊಂತನನ
ಸವಿ ಜೇನ ಹನಿಯಂತ ಕನ್ನಡವೇ ನನ್ನುಸಿರು.!
ಬಾಳಿ ಬೆಳಗಲಿ ದಿಗ್ದಿಗಂತರದ ವರೆಗೂ ಕನ್ನಡ ಹೆಸರು..!

          ಶೈಲೂ....
(ಡಾ : B.N ಶೈಲಜಾ ರಮೇಶ್)
[1/11/2022, 6:46 pm] Dr. B. N. Shylaja Ramesh: ಕನ್ನಡ ತಾಯ.ಹಿರಿಮೆ
*******************

ಸೌಂದರ್ಯವಿಹುದು
ಕನ್ನಡನಾಡಿನ ಇಂಚಿಂಚಿನಲ್ಲಿ
ಸೌಗಂಧವಿಹುದು ಕನ್ನಡ ನಾಡಿನ ಶ್ರೀಗಂಧಧಲ್ಲಿ
ಮಾಧುರ್ಯವಿಹುದು
ಕನ್ನಡದ ಸವಿ ನುಡಿಯಲ್ಲಿ
ಔದಾರ್ಯವಿಹುದು
ಸಿರಿಗನ್ನಡದ ಜನಮನದಲ್ಲಿ

ಕೆಚ್ಚೆದೆಯ ವೀರತ್ವವಿಹುದು
ಇತಿಹಾಸದ ಪುಟಪುಟಗಳಲ್ಲಿ
ತಲೆದೂಗುವ ಸಾಹಿತ್ಯವಿಹುದು
ಕನ್ನಡದ ಕವಿಪುಂಗವರಲ್ಲಿ
ಜನಮನವ ತಣಿಸಲಿಹುದು
ಜೀವನದಿ ಕಾವೇರಿ
ಸರ್ವರ ಆದರಿಸುವ ಗುಣವುಂಟು
ಜಾತ್ಯಾತೀತತೆ ಬೇರೂರಿ

ಕಲೆಗಳ ತವರೂರ ಚಂದವ ಶಿಲ್ಪಕಲೆಯಲ್ಲಿ ನೋಡು
ಸರ್ವಧರ್ಮಗಳ ಬೀಡು
ಹೃದಯ ವೈಶಾಲ್ಯತೆಯನು ನೋಡು
ಕನ್ನಡ ಕಸ್ತೂರಿ ಕಂಪಿನಲಿ
ಮೆರೆವ.ನಾವು ಧನ್ಯ
ಕನ್ನಡ ಭುವನೇಶ್ವರಿಯ ಕರುಣೆಯ ಕಂದ
ಸರ್ವ ಜನರಲ್ಲಿ ಮಾನ್ಯ

              ಶೈಲೂ......
[2/11/2022, 10:29 am] Dr. B. N. Shylaja Ramesh: #ನನ್ನವರು

ಹುಟ್ಟುಹಬ್ಬದ ಶುಭಾಶಯಗಳು ಪತಿದೇವರೆ💐💐💐

ನಕ್ಕರೆ, ಚಂದದ ವದನ ಚಂದ್ರಮನಂತೆ
ಗಾಂಭೀರ್ಯದಲಿ ಸಿಂಹದ ತೆರದಂತೆ
ಮನಸೋ... ಅತಿ ಮಧುರ ಜೇನು..!
ಪುಟಕ್ಕಿಟ್ಟ ಚಿನ್ನದಂತೆ ನನ್ನವನು..!

ನನ್ನ ಬಾಳ ಹೊತ್ತಿಗೆಯ ಕಥಾನಾಯಕ
ಪ್ರೀತಿಯುಣಬಡಿಸುವುದೇ ಕಾಯಕ
ಅಪರೂಪಕ್ಕೊಮ್ಮೊಮ್ಮೆ ಹುಸಿಮುನಿಸು.!
ಎಲ್ಲವನ್ನೂ ಮೀರಿದ ಮಗುವಿನ ಮನಸು..!

ಸಿಟ್ಟು ಸೆಡವು, ಕಠಿಣ ಮಾತು ಮಥನ
ಸುಳಿವೇ ಇಲ್ಲದ ಅತಿ ಸುಂದರ ಜೀವನ
ನಿಷ್ಕಲ್ಮಶ ಪ್ರೀತಿಗೆಂದಿಗೂ ಕುಂದಿಲ್ಲ..!
ನಡೆನುಡಿಯಲೆಳ್ಳಷ್ಟೂ ಅನುಮಾನವಿಲ್ಲ..!

ಸ್ನೇಹಕ್ಕಿವರಲ್ಲಿ ಸದಾ ತೆರೆದ ಹೃದಯ
ಕೇಡೆಣಿಸುವವರಿಗೆ ಅಲ್ಲಲ್ಲೇ ವಿದಾಯ
ಕಷ್ಟವೆಂದವರಿಗೆ ಶಕ್ತಿ ಮೀರಿ ಸಹಾಯ.!
ನೋವುಂಡವರಿಗವರದು ಮಿಡಿವ ಹೃದಯ.!

ಈ ಹೃದಯವಂತನಿಗಿಂದು ಜನ್ಮದಿನ
ಹಾರೈಸುವೆನೆಂದೆಂದಿಗೂ ತುಂಬಿ ಮನ
ಜಯವಿರಲಿ ಸಕಲ ಕಾರ್ಯಗಳಲ್ಲಿ ನಿಮಗೆ.!
ಶುಭವ ತರಲೆಲ್ಲರ ಹಾರೈಕೆ ನಾಳೆಗೆ...!

       ನಿಮ್ಮ  ಶೈಲೂ.....😊
[2/11/2022, 10:32 am] Dr. B. N. Shylaja Ramesh: 🌹ಜನುಮದಿನಕೆ ಶುಭಹಾರೈಕೆ🌹

ಹೆಚ್ಚು ಮಾತಿನವರಲ್ಲ..
ಮುತ್ತಂತೆ ಆಡಿದ ಮಾತೆಲ್ಲ
ಗಾಂಭೀರ್ಯದ ನಿಲುವು..
ಹೃದಯ ತುಂಬೆಲ್ಲ ಒಲವು

ನಕ್ಕರೆ ಹೂಮಳೆ ಸುರಿದಂತೆ..
ಮಾತಿನಲಿ ಸಿಹಿಜೇನ ಹೊನಲು
ಸ್ನೇಹವಿತ್ತರೆ ಜೀವಕೊಟ್ಟಂತೆ..
ಪ್ರೀತಿತುಂಬಿದಮೃತದ ಬಟ್ಟಲು

ಸೌಮ್ಯತೆಯಲಿ ಶ್ರೀರಾಮನಂತೆ..
ನನ್ನೊಲುಮೆಯ ಬಾಳಜ್ಯೋತಿ
ಬಿರುಬೇಸಿಗೆಯ ತಂಗಾಳಿಯಂತೆ..
ತಣಿಸಿತೆನ್ನನು ನಿನ್ನ ಪ್ರೀತಿ

ಇಂದು ಜನ್ಮೋತ್ಸವದ ಸುದಿನ..
ಹಾರೈಸುವೆನೊಲವೆ ಹೃದಯದಿಂದ
ತುಂಬ್ಹರಿಯಲಿ ಸಂತಸ ಪ್ರತಿದಿನ..
ಗಟ್ಟಿಗೊಳ್ಳಲಿ ಈ ಪ್ರೇಮಾನುಬಂಧ

ಆಯುರಾರೋಗ್ಯಭಾಗ್ಯವನಿತ್ತು..
ಹರಸಲೆನ್ನ ದೈವ ಶ್ರೀ ಮಾಧವ
ಕಳೆದೆಲ್ಲ ದುಃಖ ದುಗುಡ ನೋವು..
ಶುಭವಾಗಲೆಂದವನು ಹರಸುವ

ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು ಪತಿದೇವರೆ😊
🌹🌹🌹🌹🌹
                 ಶೈಲೂ...
[2/11/2022, 10:35 am] Dr. B. N. Shylaja Ramesh: 🌹🌹🌹🌹🌹🌹🌹🌹

ಜನುಮ ದಿನದ 
ಈ ಶುಭ ಘಳಿಗೆ
ತುಂಬಿ ಹರಿಯಲಿ ಹರುಷ
ಇದುವೇ  ರಸಘಳಿಗೆ

ಉಸಿರು ಉಸಿರಲಿ ಬೆರೆತ
ನನ್ನುಸಿರೇ  ನಿಮಗೆ
ಪ್ರತಿ ಉಸಿರಲೂ
ಹಾರೈಸುವೆ ನಿಮ್ಮ ಏಳಿಗೆ

ಆಯುರಾರೋಗ್ಯ ಭಾಗ್ಯ
ವರ ನೀಡಲಿ ಆ ದೇವ ಹರಸುತ
ಸ್ನಿಗ್ಧ ಚಲುವ ಕಾಂತಿ
ಬಾಡದಂತೆ ಕಾಯ್ವೆ ಸತತ

ನಗುವು ತುಂಬಿರಲಿ
ಬಾಳಿನಲಿ ಅನವರತ
ಚರಣ ಸೇವಾ ಭಾಗ್ಯ
ಇರಲೆನಗೆ  ಅವಿರತ

ಪ್ರಿಯ ಗೆಳೆಯ ಪ್ರಿಯ ಬಂಧು
ಪ್ರಿಯ ಸಖ ಪ್ರಿಯ ಪತಿ
ಹೇಗೆಂದು  ಭಾವಿಸಿದರೂ
ನಡೆಯು ಅದರಂತೆ

ಸಾಧಿಸಲು ಛಲ ಬಲ
ತುಂಬಿದ ಸ್ಫೂರ್ತಿ ದೇವತೆ
ಬಾಳಪಯಣದ ಜೊತೆ
ನಾನಾಗುವೆ ಕಿರು ಹಣತೆ

ಪ್ರತಿ ಹೆಜ್ಜೆಜ್ಜೆಗೂ
ಕಾಯ್ವನೆನ್ನ ಗೋಪಾಲ
ಬಾಳ ಜ್ಯೋತಿ ಬೆಳಗಿ
ಶುಭ ನೀಡುವನು ಸಕಲ

ಮುಗ್ಧ ಮಗುವಿನ ಮನಸ
ಹಸನ್ಮುಖಿ ಪ್ರಿಯ  ಗೆಳೆಯ
ಹಾರೈಸಿವೆ ನಿಮಗೆ
ಜನ್ಮದಿನದ  ಶುಭಾಶಯ
🌹🌹🌹🌹🌹🌹🌹🌹

          ಶೈಲೂ.......
[2/11/2022, 11:24 am] Dr. B. N. Shylaja Ramesh: ಇದು ನಾನು ಶ್ರೀಕೃಷ್ಣನ ಮೇಲೆ ಬರೆದ ಮೊದಲನೇ ಕವನ....  ಸರಿ ಸುಮಾರು 12 ಪ್ಯಾರಾಗಳನ್ನೊಳಗೊಂಡ  ದೀರ್ಘವಾದ ಕವನ... ನನ್ನ ಮೆಚ್ಚಿನ ಕವನ ... ಬರೀ 10 ನಿಮಿಶಗಳಲ್ಲಿ ಬರೆದ ಸುಧೀರ್ಘ ಕವನ... ದೊಡ್ಡದಾಗಿದ್ದರೆ ಯಾರೂ ಗಮನವಿಟ್ಟು ಓದೋದಿಲ್ಲ ಅಂತ  ಚಿಕ್ಕ ಚಿಕ್ಕದಾಗಿ ಮೂರು ನಾಲ್ಕು ದಿನ ಪೋಸ್ಟ್ ಮಾಡಿದ್ದೆ...
ಇದನ್ನ ಬರೆಯುವಾಗ ಕಣ್ಣೀರ ಕೊಡಿ ಹರಿದಿತ್ತು,  ನನ್ನನ್ನೇ ರಾಧೇಯನ್ನಾಗಿ ಪರಿಕಲ್ಪಿಸಿಕೊಂಡು  ಬರೆದಿದ್ದೆ... 
       ಎಂಥಾ ಅದ್ಭುತವೆಂದರೆ ... ನಾ ಬರೆವಾಗ  ಯಾರೋ ಮನದಲ್ಲಿ ನಿಂತು ಹೇಳಿ ಬರೆಸಿದಂತೆ ಭಾಸವಾಯ್ತು...12 ನುಡಿಗಳ ಈ ಕವನವನ್ನ 10 ನಿಮಿಷಗಳಲ್ಲಿ ಬರೆದಿದ್ದೆ.... ಹಾಡೊದಕ್ಕೂ  ಚನ್ನಾಗಿದೆ...
        ಯಾರಾದ್ರೂ ಸಹೃದಯ ಸಂಗೀತಗಾರರು ಇದನ್ನ ಹಾಡಿದರೆ ನನಗೆ ತುಂಬಾ ಸಂತೋಷ ...  ಆ ಕೃಷ್ಣನ್ನೇ  ನೋಡಿ ಆನಂದ ಪಟ್ಟಷ್ಟು ಸಂತೋಷವಾಗುತ್ತೆ

ಕೃಷ್ಣನ ಕೊಳಲಿನ ಕರೆ
******************

ಎಲ್ಲೋ ದೂರದಿ
ಕೊಳಲಿನ ಇನಿದನಿ
ಕೇಳುತಿದೇ ಇಂಪಾಗಿ..
ಅದು ನನ್ನ ಕೃಷ್ಣನ
ಮುರಳೀ ಗಾನವೇ
ಹೇಳೆಲೆ  ನೀ ಸಖಿ
ನನಗಾಗಿ...........

ಬಾನಂಚಲಿ
ತೇಲುವ  ಕಾರ್ಮುಗಿಲೊಳ್
ಕೃಷ್ಣನ .ರೂಪವೇ
ಕಾಣುವುದೂ..
ಮೇಘಶ್ಯಾಮನ
ಮೋಹಕ  ಕಿರುನಗೆ
ಕೋಲ್ಮಿಂಚಿನೋಲ್
ತೋರುವುದೂ.........

ಯಮುನಾ ತೀರದ
ಸುಂದರ  ಹೆಮ್ಮರ
ಕೃಷ್ಣನಂತೆಯೇ 
ತೋರುವುದೂ..
ಮರವನು ಒರಗಿ
ಮುರಲಿಯ ನುಡಿಸುವ
ಸುಂದರ  ರೂಪವೇ
ಕಾಣುವುದೂ......

                                  ಶೈಲೂ.........
[2/11/2022, 2:33 pm] Dr. B. N. Shylaja Ramesh: ಜಯತು ಕನ್ನಡಾಂಬೆ ಜಯತು ಜಯತು
ಭರತ ಮಾತೆಯ ಪುತ್ರಿ ಜಯತು ಜಯತು
[2/11/2022, 2:59 pm] Dr. B. N. Shylaja Ramesh: ತಾಯೆ ಭುವನೇಶ್ವರಿ ನಿನಗೆ ಪೊಡಮಡುವೆ
ಹರಸು ತಾಯೆ ಕರುಣೆಯಲಿ ನಾನಿನ್ನ ಮಗುವೇ
[2/11/2022, 3:06 pm] Dr. B. N. Shylaja Ramesh: ನಿನ್ನ ಸಿರಿ ನುಡಿಯು ಸುರಿದಂತೆ ಸವಿಜೇನು
ನಿನ್ನ ದುಂಡಕ್ಷರದ ಅಭಿಮಾನಿ ನಾನು
ನಿತ್ಯವೂ ಬರೆಯುವೆ ಚೆಲ್ವ ಪದಗಳಲ್ಲಿ
ಹಿರಿದರ್ಥ ಕೊಡುವಂತ ನಲ್ಮೆ ನುಡಿಗಳಲ್ಲಿ
[2/11/2022, 3:13 pm] Dr. B. N. Shylaja Ramesh: ನಿನ್ನೊಡಲ ಹಿಡಿಮಣ್ಣು  ಚಿನ್ನದಂತೆ ಚೆಲುವು
ನಿನ್ನೊಲವ ಆಸರೆಯೇ ಅಮ್ಮ, ನಮ್ಮ ಬಲವು
[2/11/2022, 3:25 pm] Dr. B. N. Shylaja Ramesh: ನಿನ್ನೊಡಲ ಹಿಡಿಮಣ್ಣು ನವನಿಧಿಗಿಂತಧಿಕ
ನಿನ್ನ ಮಡಿಲಾಶ್ರಯವು ಸ್ವರ್ಗದೈಸಿರಿಗಿಂತಧಿಕ 
ನಿನ್ನೊಡಲ ತಿಳಿಜಲವು ಅಮೃತದಿಂತಧಿಕ
ಗಿರಿಶಿಖರಗಳಿಂಶೋಭಿಸುವ ನಿನ್ನೊಡಲೇ ನಾಕ
[2/11/2022, 3:36 pm] Dr. B. N. Shylaja Ramesh: ಜಯತು ಕನ್ನಡಾಂಬೆ ಜಯತು ಜಯತು
ಭರತ ಮಾತೆಯ ಪುತ್ರಿ ಜಯತು ಜಯತು
ತಾಯೆ ಭುವನೇಶ್ವರಿ ನಿನಗೆ ಪೊಡಮಡುವೆ
ಹರಸು ತಾಯೆ ಕರುಣೆಯಲಿ ನಾನಿನ್ನ ಮಗುವೇ

ನಿನ್ನ ಸಿರಿ ನುಡಿಯು ಸುರಿದಂತೆ ಸವಿಜೇನು
ನಿನ್ನ ದುಂಡಕ್ಷರದ ಅಭಿಮಾನಿ ನಾನು
ನಿತ್ಯವೂ ಬರೆಯುವೆ ಚೆಲ್ವ ಪದಗಳಲ್ಲಿ
ಹಿರಿದರ್ಥ ಕೊಡುವಂತ ನಲ್ಮೆ ನುಡಿಗಳಲ್ಲಿ

ನಿನ್ನೊಡಲ ಹಿಡಿಮಣ್ಣು ನವನಿಧಿಗಿಂತಧಿಕ
ನಿನ್ನ ಮಡಿಲಾಶ್ರಯವು ಸ್ವರ್ಗದೈಸಿರಿಗಿಂತಧಿಕ 
ನಿನ್ನೊಡಲ ತಿಳಿಜಲವು ಅಮೃತದಿಂತಧಿಕ
ಗಿರಿಶಿಖರಗಳಿಂಶೋಭಿಸುವ ನಿನ್ನೊಡಲೇ ನಾಕ

ನಿನ್ನ ವರ ಚರಿತೆ ಆ ದೈವಕ್ಕಿಂತಲೂ ಮಿಗಿಲು
ಕಲ್ಪತರು ನೀ ತಾಯೆ ಕರುಣಾರಸದ ಕಡಲು
ಎಂತು ಪೇಳಲಿ ಮಹಿಮೆ ತಾಯೆ ನಿನ್ನ ಹಿರಿಮೆ
ಎಷ್ಟು ಜನುಮವೇತ್ತಿದರೂ ಇರಲೆನಗೆ ಒಲುವೆ
[2/11/2022, 3:37 pm] Dr. B. N. Shylaja Ramesh: ಜಯತು ಕನ್ನಡಾಂಬೆ ಜಯತು ಜಯತು
ಭರತ ಮಾತೆಯ ಪುತ್ರಿ ಜಯತು ಜಯತು
ತಾಯೆ ಭುವನೇಶ್ವರಿ ನಿನಗೆ ಪೊಡಮಡುವೆ
ಹರಸು ತಾಯೆ ಕರುಣೆಯಲಿ ನಾನಿನ್ನ ಮಗುವೇ

ನಿನ್ನೊಡಲ ಹಿಡಿಮಣ್ಣು ನವನಿಧಿಗಿಂತಧಿಕ
ನಿನ್ನ ಮಡಿಲಾಶ್ರಯವು ಸ್ವರ್ಗದೈಸಿರಿಗಿಂತಧಿಕ 
ನಿನ್ನೊಡಲ ತಿಳಿಜಲವು ಅಮೃತದಿಂತಧಿಕ
ಗಿರಿಶಿಖರಗಳಿಂಶೋಭಿಸುವ ನಿನ್ನೊಡಲೇ ನಾಕ

ನಿನ್ನ ವರ ಚರಿತೆ ಆ ದೈವಕ್ಕಿಂತಲೂ ಮಿಗಿಲು
ಕಲ್ಪತರು ನೀ ತಾಯೆ ಕರುಣಾರಸದ ಕಡಲು
ಎಂತು ಪೇಳಲಿ ಮಹಿಮೆ ತಾಯೆ ನಿನ್ನ ಹಿರಿಮೆ
ಎಷ್ಟು ಜನುಮವೇತ್ತಿದರೂ ಇರಲೆನಗೆ ಒಲುಮೆ
[2/11/2022, 3:37 pm] Dr. B. N. Shylaja Ramesh: ನಿನ್ನ ಸಿರಿ ನುಡಿಯು ಸುರಿದಂತೆ ಸವಿಜೇನು
ನಿನ್ನ ದುಂಡಕ್ಷರದ ಅಭಿಮಾನಿ ನಾನು
ನಿತ್ಯವೂ ಬರೆಯುವೆ ಚೆಲ್ವ ಪದಗಳಲ್ಲಿ
ಹಿರಿದರ್ಥ ಕೊಡುವಂತ ನಲ್ಮೆ ನುಡಿಗಳಲ್ಲಿ
[2/11/2022, 4:23 pm] Dr. B. N. Shylaja Ramesh: ನಮ್ಮ ಕನ್ನಡ ರಾಜ್ಯೋತ್ಸವ
ಕರ್ನಾಟಕದ ಹೆಮ್ಮೆಯ ಹಬ್ಬ
ಗಣರಾಜ್ಯೋತ್ಸವದ ನಂತರ
ಉದಯಿಸಿದ ಕರುನಾಡಿನ ಹಬ್ಬ

ಛಿದ್ರಗೊಂದು ಹಂಚಿ ಹೋಗಿದ್ದ ನಾಡ
ಏಕೀಕರಣವಾದ ನಲ್ಮೆಯ ಹಬ್ಬ
ಭಾಷಾವಾರು ಪ್ರಾಂತ್ಯಗಳನು
ವಿಲೀನಗೊಳಿಸಿದ ಹೆಮ್ಮೆಯ ಹಬ್ಬ

ಸೌಭಾಗ್ಯಕರ ಹಳದಿ ಕೆಂಪು ಮಿಳಿತು
ನಾಡದ್ವಜವಾಗಿ ರಾರಾಜಿಸುವ ಹಬ್ಬ
#ಜಯ_ಭಾರತ_ಜನನಿಯ_ತನುಜಾತೆ
ನಾಡಗೀತೆ ಮೊಳಗುವ ನಾಡಹಬ್ಬ
[2/11/2022, 4:31 pm] Dr. B. N. Shylaja Ramesh: #ನಮ್ಮ_ಕನ್ನಡ_ರಾಜ್ಯೋತ್ಸವ

ನಮ್ಮ ಕನ್ನಡ ರಾಜ್ಯೋತ್ಸವ
ಕರ್ನಾಟಕದ ಹೆಮ್ಮೆಯ ಹಬ್ಬ
ಗಣರಾಜ್ಯೋತ್ಸವದ ನಂತರ
ಉದಯಿಸಿದ ಕರುನಾಡಿನ ಹಬ್ಬ

ಛಿದ್ರಗೊಂದು ಹಂಚಿ ಹೋಗಿದ್ದ ನಾಡ
ಏಕೀಕರಣವಾದ ನಲ್ಮೆಯ ಹಬ್ಬ
ಭಾಷಾವಾರು ಪ್ರಾಂತ್ಯಗಳನು
ವಿಲೀನಗೊಳಿಸಿದ ಹೆಮ್ಮೆಯ ಹಬ್ಬ

ಸೌಭಾಗ್ಯಕರ ಹಳದಿ ಕೆಂಪು ಮಿಳಿತು
ನಾಡದ್ವಜವಾಗಿ ರಾರಾಜಿಸುವ ಹಬ್ಬ
#ಜಯ_ಭಾರತ_ಜನನಿಯ_ತನುಜಾತೆ
ನಾಡಗೀತೆ ಮೊಳಗುವ ನಾಡಹಬ್ಬ

ತಾಯಿ ಭುವನೇಶ್ವರಿಯ ಸ್ಮರಿಸುತ
ಜೈ ಜೈಕಾರ ಘೋಷಿಸುವ ಹಬ್ಬ
ಕನ್ನಡಿಗರ ಎದೆಯುಬ್ಬಿ ಹೆಮ್ಮೆಪಡುವಂತ
ಕನ್ನಡ ನಾಡಿನ ಮನೆಮನೆಯ ಹಬ್ಬ

ಡಾ: ಶೈಲಜಾ ರಮೇಶ್
[2/11/2022, 9:03 pm] Dr. B. N. Shylaja Ramesh: ಇಲ್ಲಿನನ್ನವನುಂಡು ಹೀಗಳೆಯುವವರಲ್ಲಿ
ಅಸನವಸನವ ಪಡೆದು ಕೆಡುನುಡಿವವರಲ್ಲಿ
ಆಧುನಿಕತೆಗೆ ಮೊರೆಹೊಕ್ಕು ತಾಯ್ನುಡಿಯ ಮರೆವಲ್ಲಿ
ಅನ್ಯಭಾಷೆಯ ವ್ಯಾಮೋಹಕೆ ಸಿಲುಕಿದವರಲ್ಲಿ
[3/11/2022, 2:08 pm] Dr. B. N. Shylaja Ramesh: #ಸೋಜಿಗವು_ಈ_ಜಗವು

ನೋಡೆಂಥ ರಮ್ಯ ತಾಣವಿದು
ಎತ್ತರದ ಗಿರಿಶಿಖರ ಗಗನಚುಂಬಿ ಮರ
[3/11/2022, 2:35 pm] Dr. B. N. Shylaja Ramesh: ಇಲ್ಲಿನನ್ನವನುಂಡು ಹೀಗಳೆಯುವವರಲ್ಲಿ
ಅಸನವಸನವ ಪಡೆದು ಕೆಡುನುಡಿವವರಲ್ಲಿ
ಆಧುನಿಕತೆಗೆ ಮೊರೆಹೊಕ್ಕು ತಾಯ್ನುಡಿಯ ಮರೆವಲ್ಲಿ
ಅನ್ಯಭಾಷೆಯ ವ್ಯಾಮೋಹಕೆ ಸಿಲುಕಿದವರಲ್ಲಿ
ಅಣುವಣುವನೂ ತೃಣವಾಗಿ ಕಂಡವರಲ್ಲಿ
ಸಿರಿಯ ಸೆರೆಯಲಿ ಸಿಕ್ಕಿ ಮೈಮರೆಯುವವರಲ್ಲಿ
ಸಂಸ್ಕೃತಿಯನು ಮರೆತ ಬೀಡಾಡಿ ಜನರಲ್ಲಿ
ನೆತ್ತಿ ಸುಳಿಯಲ್ಲಿ ಸುಳಿವ ಅಹಮಿಕೆಯ ತೆಕ್ಕೆಯಲಿ
ಮಧುರ ನಲ್ಮೆಯ ಕನ್ನಡ ನುಡಿಯು ನಲಿದಾಡಲಿ

        ಶೈಲೂ....

ಸುಂದರ ಪದಪುಂಜಗಳ ಆತ್ಯದ್ಭುಕ ಕವಿತೆ..! ತುಂಬಾ ಇಷ್ಟ ಆಯ್ತು ಸರ್

ಇಂಥಕಡೆಯಲ್ಲೂ ಕನ್ನಡನುಡಿ ರಾರಾಜಿಸಲಿ ಎನ್ನುವ ಆಸೆ, ಆಸ್ಥೆಯಿಂದ  ನಿಮ್ಮ ಸುಂದರ ಸಾಲುಗಳಿಗೆ ನನ್ನೆರಡು ಸಾಲುಗಳು😊
[3/11/2022, 2:59 pm] Dr. B. N. Shylaja Ramesh: ಮರೆಯದ_ಸ್ನೇಹ 
ಅಂದು ನೀ ಬಂದೆ ಬಾಳಿಗೆ
ಸ್ನೇಹ ಸುರಿದೆ ಮಡಿಲಿಗೆ
ಬರಿದಾಗದೆಂದೆಂದಿಗೂ
ಬಂದೀತೇ ಮರುಜನ್ಮಕೂ.?

ಮೊಗೆಮೊಗೆದಿತ್ತೆ ಸ್ನೇಹ
ತಣಿಸಲು ತೀರದ ದಾಹ
ಜನ್ಮಕ್ಕಾಗುವಷ್ಟಾಯ್ತು
ಒಂಟಿತನ ಮರೆತುಹೋಯ್ತು

ಕಷ್ಟಕ್ಕೆ ನೆರವಾದೆ
ಸುಖದಲ್ಲಿ ಜೊತೆಯಾದೆ
ಕಣ್ಣಿನಿಂದಿಳಿದ ಕಂಬನಿಯ
ಒರೆಸಿ ಸಂತೈಸಿದೆ ಗೆಳೆಯಾ

ಸಾಧನೆಗೆ ಹಿಗ್ಗಿದೆ
ವೇಧನೆಗೆ ಕುಗ್ಗಿದೆ
ತೋರಿ ಸರಿ ದಾರಿಯನು
ಜೊತೆಜೊತೆಗೆ ಬಂದವನು

ಜೀವನ ಸಂಗ್ರಾಮವನು
ಜಯಿಸಲು ಕಲಿಸಿದವನು
ಸೋಲಿಗೆಂದು ಅಂಜದೆ
ತುಂಬಿಕೊಟ್ಟೆ ಗಂಡೆದೆ

ಬಾಳಿಗರ್ಥ ಕೊಟ್ಟವ
ಸುಮನಸ ಮಾನವ
ಆತ್ಮೀಯ ಬಾಂಧವ
ಮರೆಯಲ್ಹೇಗೆ ಸ್ನೇಹವ..?

#ಡಾ_ಶೈಲಜಾ_ರಮೇಶ್
[7/11/2022, 2:18 pm] Dr. B. N. Shylaja Ramesh: ಬಿರುಬೇಸಿಗೆಯಂತೆ
 ಸುಡುವ ಒಲವಿಗೆ
 ಹೇಮಂತನ ಕುಳಿರ್ಗಾಳಿ, ತಣ್ಣನೆಯ 
ಅನುಭವ ನೀಡಿರಲು ಏನೋ ಉಲ್ಲಾಸ 
ಈ ಮುಸ್ಸಂಜೆಯಲ್ಲಿ, ಬೇಸತ್ತು ಬಸವಳಿದ ಸೂರ್ಯನೂ
 ಭೂತಾಯಿಯ ತಂಪಿನೊಡಲ ಸೇರಲು ಮೆಲ್ಲನೆ ಜಾರುತ್ತಿರುವ ಈ
 ಮುಸ್ಸಂಜೆಯಲ್ಲಿ, ಖಾಲಿ ಅಂಬರಕೆ ತಾನೇ ಒಡೆಯನೆಂದು ಸದ್ದಿಲ್ಲದೇ
 ಮೇಲೇರುತ್ತಿರುವ ಶಶಿ ಬಾನಿನೆಡೆಗೆ, ಈ ಪ್ರಕೃತಿಯಾಟಕೆ ಮನಸೋತು ನಲಿದೆ 
ಈ ಮುಸ್ಸಂಜೆ ಕವನದಲ್ಲಿ.....!

– ಶೈಲೂ
[7/11/2022, 3:36 pm] Dr. B. N. Shylaja Ramesh: ಬಿರುಬೇಸಿಗೆಯಂತೆ

 ಸುಡುವ ಒಲವಿಗೆ

 ಹೇಮಂತನ ಕುಳಿರ್ಗಾಳಿ, ತಣ್ಣನೆಯ 

ಅನುಭವ ನೀಡಿರಲು ಏನೋ ಉಲ್ಲಾಸ 

ಈ ಮುಸ್ಸಂಜೆಯಲ್ಲಿ, ಬೇಸತ್ತು ಬಸವಳಿದ ಸೂರ್ಯನೂ

 ಭೂತಾಯಿಯ ತಂಪಿನೊಡಲ ಸೇರಲು ಮೆಲ್ಲನೆ ಜಾರುತ್ತಿರುವ ಈ

 ಮುಸ್ಸಂಜೆಯಲ್ಲಿ, ಖಾಲಿ ಅಂಬರಕೆ ತಾನೇ ಒಡೆಯನೆಂದು ಸದ್ದಿಲ್ಲದೇ
 ಮೇಲೇರುತ್ತಿರುವನು

ಶಶಿ ಬಾನಿನೆಡೆಗೆ, ಈ ಪ್ರಕೃತಿಯಾಟಕೆ ಮನಸೋತು ನಲಿದೆ 
 ಮುಸ್ಸಂಜೆ ಕವನದಲ್ಲಿ.....!

– ಶೈಲೂ
ಶೈಲಜಾ ರಮೇಶ್
[8/11/2022, 11:03 am] Dr. B. N. Shylaja Ramesh: ನಾ ಬರೆವ ಬರಹಕೆಲ್ಲ  
ಗೆಳೆಯಾ ನೀನೇ ಸ್ಫೂರ್ತಿ
ನಿನ್ನನೇ ನೆನೆಸುತ್ತ ದಿನವೂ
ಬರೆವೆ ನಾ ಜೀವನ ಪೂರ್ತಿ

ಭಾವಬಿಂಬಿಸಲು ಪದಗಳು
ಹೊಳೆಯದಿದ್ದಾಗ ನಿನ್ನ ನೆನೆವೆ
ಉಕ್ಕುಕ್ಕಿ ಬರುತ್ತವೆ ಪದಪುಂಜ
ಕಾರಣ, ಆ ನಿನ್ನ ಸೆಳೆವ ನಗುವೇ.!

ಬೇಸರದಲಿ, ನಾ ಎಲ್ಲ ಮರೆತು
ಯೋಚಿಸುತ್ತ ಕುಳಿತಾಗಲೂ
ಏನೋ ಮೋಡಿ ಮಾಡಿ ಬಿಡುವೆ
ದುಃಖ ಸರಿಸಿ, ನಗು ಮೂಡಿಸಲು

ಬರೆದ ಬರಹದಲ್ಲೆಲ್ಲ ಗೆಳೆಯಾ
ನಿನ್ನ ಅಭಿವ್ಯಕ್ತಿಯ ಕುರುಹು
ಏನೂ ಬರೆಯಲಾರೆ ನೀನಿಲ್ಲದೇ
ನೀನೇ ಎನ್ನ ಬುದ್ಧಿಯ ಹೊಳಹು

ಪ್ರತಿ ಪದಗಳೂ ನಿನಗಾಗಿಯೇ
ನನ್ನೆಲ್ಲ ಬರಹದಲಿ ಅಡಗಿಹೆ ನೀ
ದುಃಖವೊ ಸುಖವೊ ನಗುವೋ
ಎಲ್ಲ ಬರಹಕ್ಕೂ ಕಾರಣ ನೀನೇ
[8/11/2022, 2:35 pm] Dr. B. N. Shylaja Ramesh: ಗ್ರಹಣ
******

ಬಾನಲ್ಲಿ ಬೆಳಗುತಿಹ
ಚಂದ್ರನಿಗೆ ಹಿಡಿದಂತೆ
ರಾಹುವೆಂಬ ತಿಮಿರ
ಹಿಡಿಯುತ್ತದೆ ಮನಸ್ಸಿಗೂ
ಕಷ್ಟ ನೋವುಗಳ ಗ್ರಹಣ
ಉತ್ಸಾಹದ ಮನವನಾಕ್ರಮಿಸಿ
ಹಿಂಡಿ ಹಿಪ್ಪೆ ಮಾಡಿ
ಪ್ರಚಂಡ ನೋವುಣಿಸಿ
ಬದುಕ ಕತ್ತಲೆಡೆಗೆ ದೂಡಿ
ಆರಡಿಯ ಮನುಜನ
ಮೂರಡಿಯ ಮಾಡಿ
ಸಾಕು ಸಾಕೆನಿಸುವ ತೆರದಿ..!
ಈ ನಷ್ಟದ ಕಷ್ಟ ಸ್ಥಿರವೇನಲ್ಲ
ಕಾರ್ಗತ್ತಲಲ್ಲೂ ಭರವಸೆಯ
ಚಂದಿರ ಬಂದಂತೆ
ಕಾರಿರುಳಲ್ಲೂ ಚುಕ್ಕಿಗಳು
ಹೊಳಪಿಸಿ ನಗುವಂತೆ
ಸೂರ್ಯನುದಯವಾದೊಡೆ
ತಮ ಕರಗಿ ಹೋದಂತೆ...!
ನಾಳೆಗಳ ಚಂದದ ಬದುಕಿಗೆ
ಮೂಡಿ ಕಿರುನಗೆಯ ಆಶಾಕಿರಣ
ಹರಿಸಿ ಸೂತಕದ ಗ್ರಹಣ
ಬೆಳಗುವುದು ಸುಖದ ಜೀವನ....
ಸಹಿಸಬೇಕಷ್ಠೆ  ಕೆಲ ಸಮಯ
ಜೊತೆಗಿರಲಿ ಸಂಯಮ
ಭರವಸೆಯಿರಬೇಕು
ನಾಳೆ ಬರುವ ಬೆಳಕಿಗಾಗಿ
ಕಷ್ಟ ದಲ್ಲಿ ತೊಳಲುವಾಗ
ಹರಿಯನಾಮ ಸ್ಮರಿಸಬೇಕು
ಕಷ್ಟಗಳು ಕಳೆಯೆ ಗ್ರಹಣ ಕಳೆದಂತೆ
ಸಂಭ್ರಮಕೇ ಕೊನೆಯೆಲ್ಲಿ...!
ಹೃದಯ ಸ್ಪಂದನೆಗೆ ಮಿಗಿಲೆಲ್ಲಿ...!

           ಶೈಲೂ.
[10/11/2022, 4:59 pm] Dr. B. N. Shylaja Ramesh: ಮಾನವೀಯತೆ
ಎಲ್ಲರಲ್ಲೂ ಇರಲ್ಲ
ಇದ್ದವ, ಅವ
ನಿಜವಾಗಿ ಮನುಜ
[11/11/2022, 4:55 pm] Dr. B. N. Shylaja Ramesh: #ಶೈಲೂ_ಬರಹ 

#ಎಲ್ಲಾ_ನಮ್ಮ_ಕೈಯಲ್ಲಿಯೇ_ಇದೆ

ಬಾಳೊಂದು ಸುಂದರ ನಂದನವನ
ಎಲ್ಲ ಮರೆತು ನಡೆ, ಇದೇ ಹೂಬನ
ಹಾಕು ಸುಂದರ ಕ್ಷಣ ಗಳ ಮೆಲುಕು
ನೋವಿನ ನೆನಪು  ಏಕೆ ಬೇಕು..??

ಯಾರಿಗಿಲ್ಲ ನೋವು ಯಾರಿಗಿಲ್ಲ ಸಾವು
ಕೆಚ್ಚೆದೆಯ ಮನವಿರೇ ಭುವಿಯೇ ಸ್ವರ್ಗವು
ದೂಡು ಕಹಿನೆನಪು ಮೂಡಲಿ ನಗುವು
ಆಗಿರಲಿ ಪ್ರತಿದಿನವೂ ಹೊಸತನದ ಹಬ್ಬವು

ಧೈರ್ಯವಿದ್ದರೆ ಜೊತೆಯಲಿ ಬಂದಾಗ ಕಷ್ಟ
ಎದುರಿಸಿ ಮುನ್ನಡಿಯಿರಿಸೆ ಕಷ್ಟವೂ  ಕನಿಷ್ಠ
ತಿಳಿ ಮನುಜ ಇದೇ ಜೀವನದ ಸತ್ಯ
ಮೆಟ್ಟಿನಿಲ್ಲು ಬದುಕ ಆಗ ಕಷ್ಟಗಳೂ ಅನಿತ್ಯ

ಸಾಧಿಸಲೇ ಬೇಕು ಏನಾದರೂ  ನುಗ್ಗಿ ಮುಂದೆ
ಯಶ ಹುಡುಕಿ ಬರುವುದು ಆಗ ಬೆನ್ನ ಹಿಂದೆ
ಹುಟ್ಟಿನ ಉದ್ದೇಶ ಎನಿಹುದೋ ಏನೋ
ಸರಿದಾರಿಯಲಿ ನಡೆದರೆ ತಿಳಿಯಬಹುದೇನೋ

ಬದುಕಿನರಮನೆಯ ಕೀಲಿ ನಮ್ಮಕೈಲಿಹುದು
ಸ್ನೇಹ ಪ್ರೀತಿಯ ತೋರು ಅಲ್ಲಿ ಸ್ವರ್ಗವಿಹುದು
ಇಂದೋ ನಾಳೆಯೋ ಬಹುದು ಕರೆಯು ಅವನಿಂದ
ಜಗ ಮೆಚ್ಚುವ ತೆರದಿ ಬಾಳು ಅದೇ ಅವಗೆ ಪರಮಾನಂದ

            ಶೈಲೂ.......
[11/11/2022, 4:55 pm] Dr. B. N. Shylaja Ramesh: #ಶೈಲೂ_ಬರಹ 

ಎಲ್ಲಿ ಜಾರಿತೋ ಮನವು

ಮುಂಜಾನೆ ರವಿ ಉದಯದ ಸಮಯ
ಬಲಗಾಲಿಟ್ಟು ಹೊಕ್ಕೆ ನೀ ನನ್ನ ಮನೆಯ
ಕಂಡಂದೇ ಬೆರಗಾದೆ ಆ ನಿನ್ನ ನಿಲುವು
ಎಲ್ಲಿ ಜಾರಿ ಹೋಯಿತೋ ನನ್ನ ಮನವು

ನಕ್ಕರೆ ಮುತ್ತು ಸುರಿದಂತ ಚೆಲುವು
ಚಿನ್ನಕ್ಕಿಂತಲೂ ಹೊಳಪಾದ ಮನವು
ತಲೆದೂಗುವಂತೆ ಮಾಡುವ ಆ ಮಾತಿನ ಮೋಡಿ
ಜಾರಿ ಹೋಯಿತು ಮನವು ಆ ಚೆಲುವ ನೋಡಿ

ಮಿಂಚಿಗಿಂತ ಹೊಳಪು ಆ ಕಣ್ಣ ಕಾಂತಿ
ತೆರೆಗೆ ಸರಿಸುವಂತಿದೆ ಮನದ ಭ್ರಾಂತಿ
ಕಂಡಾಕ್ಷಣವೇ ಜಾರಿಹೋಯಿತು ಮನವು
ಹಿರಿಯರೊಪ್ಪಿಗೆಯಲಿ ಒಂದಾಗಲಿ ತನುಮನವು

            ಶೈಲೂ...
Picture source: internet/social media
[11/11/2022, 4:57 pm] Dr. B. N. Shylaja Ramesh: #ಶೈಲೂ_ಬರಹ 

ಭಾವನೆಗಳ ಬೆನ್ನೇರಿ
******************

ಭಾವಾಂತರಂಗದಲ್ಲೊಂದು
ಭಾವುಕ ಪಯಣ
ಭಾವನೆಗಳ  ಬೆನ್ನೇರಿ
ಬಂದಿತೀ ಚರಣ

ಮನದ ಮೂಲೆಯಲ್ಲಿದ್ದ
ಮನಸುಗಳ ಮಾತು
ಮುನ್ನಡಿಯಿತ್ತು
ಮುದದಿ  ಸ್ವಾಗತಿಸಿತ್ತು

ನಗುವ ನಯನಗಳ
ನಗೆಯ ದೀವಟಿಕೆ
ನನಸಾದ ಕನಸಿನ
ನಲ್ಮೆಯ ಹಿಮ್ಮೇಳವದಕೆ

ಅಕ್ಕರೆಯ ಮಾತುಗಳ
ಅಕ್ಷರಗಳ  ಸಾಲು
ಆಲಂಗಿಸಿ, ಸಿಂಪರಿಸಿದೆ
ಅಮೃತ ಸಿಂಚನ

ಗರಿಗೆದರಿ.ಹಾರಿತ್ತು
ಗಗಣದೆಡೆಗೆ ಮನ
ಗುರಿಯ ಗಮ್ಯದೆಡೆಗೆ
ಗಂಧರ್ವ ಗಾನ

ಕನಸುಕಾಣುವ ಕಣ್ಣಲಿ
ಕಾಮನಬಿಲ್ಲಿನ ರಂಗು
ಕಲ್ಪನೆಯ  ಬೆನ್ನೇರಿ
ಕದಪಿಗೆ ನಲಿವಿನ ಗುಂಗು

ಲಾಸ್ಯದ ನೆನಪುಂಡು
ಲಜ್ಜೆಯಾವರಿಸಿ ಮನಕೆ
ಲಕ್ಷ್ಯವಿತ್ತು ಕನಸಿಗೆ
ಲಘುವಾಯ್ತು ತನುವು

          ಶೈಲೂ....
[11/11/2022, 4:57 pm] Dr. B. N. Shylaja Ramesh: #ಶೈಲೂ_ಬರಹ 
ಗಝಲ್
*******

ಹೇಳಲಿದೆ ಸಾವಿರ ಹೇಗೆ ಹೇಳಲಿ ಹೇಳು.?
ನಾಚಿಕೆಯಿದೆ ಪೂರ ಹೇಗೆ ಹೇಳಲಿ ಹೇಳು.?

ತಲೆಯೆತ್ತಿ ನೋಡಲೆಕೋ ಕಾಡುತಿದೆ ಲಜ್ಜೆ
ಹೃದಯವೇಕೋ ಭಾರ ಹೇಗೆ ಹೇಳಲಿ ಹೇಳು.?

ಕುಡಿಗಣ್ಣ ಸವಿನೋಟ ಅರ್ಥವಾಗದ ಮಾತೇ?
ಸಾಕಿನ್ನು ಸರದಾರ ಹೇಗೆ ಹೇಳಲಿ ಹೇಳು.?

ನಯನಗಳೇ ಬಿಡಿಸುತ್ತಿವೆ ಮನದ ಚಿತ್ತಾರ
ಆಸೆಗಳು ಭರಪೂರ ಹೇಗೆ ಹೇಳಲಿ ಹೇಳು.?

ಹೇಳ ಬಂದರೆ ಕಾಡಿ ಕಾಡಿಸುವೆ ಹೀಗೇಕೆ?
ನಿನ್ನದೇ ಸುವಿಚಾರ ಹೇಗೆ ಹೇಳಲಿ ಹೇಳು.?

ಅಳುಕುತಿದೆ ಎದೆ ಕಂಪಿಸುತಿದೆ ತನು
ಹಿಡಿಯಬಾರದೆ ಕರ ಹೇಗೆ ಹೇಳಲಿ ಹೇಳು.?

ಶೈಲ ಶರಣಾಗಿಯಾಯ್ತು ಬಿಚ್ಚಿಡಲಿನ್ನೇನಿದೆ.?
ಪ್ರೀತಿಯ ಮಹಾಪೂರ ಹೇಗೆ ಹೇಳಲಿ ಹೇಳು.?

              ಶೈಲೂ.......
ಚಿತ್ರ : ಇಂಟರ್ನೆಟ್ ನಿಂದ ತೊಗೊಂಡದ್ದು
[11/11/2022, 4:58 pm] Dr. B. N. Shylaja Ramesh: #ಶೈಲೂ_ಬರಹ
#ಭರವಸೆಯಿದೆ

ಮತ್ತೆ ಬರುವ ಭರವಸೆ
ಇಲ್ಲದಿದ್ದರೂ ಕೂಡ
ದುರುಳ ವೈರಿಗಳ ಹಿಮ್ಮೆಟ್ಟಿಸಿ
ತಾಯ್ನಾಡಿಗಾಗಿ ದುಡಿವ
ನೆತ್ತರ ಹರಿಸಿ ಮಡಿವ
ಅದಮ್ಯ ಭರವಸೆಯಿದೆ

ದೇಶಸೇವೆಗಾಗಿಯೇ ನನ್ನ
ನೊಸಲಿಗೆ  ತಿಲಕವನ್ನಿಟ್ಟು
ಮರಳಿ ಬಾ ಮಗು ಕಾಯುತ್ತಿರುವೆನೆಂದು
ಭಾರವಾದ ಹೃದಯದಿಂದ ಬಿಗಿದಪ್ಪಿ
ಕಳುಹಿದ್ದ ನನ್ನಮ್ಮನ  ಮಡಿಲಲಿ
ಮತ್ತೆ ಮಗುವಾಗುವ ಭರವಸೆ ಇದೆ

ಮುಪ್ಪಿನಲಿ ಆಧಾರ ಮಗನೆಂದು
ಬಹು ಅಕ್ಕರೆಯಲಿ ಸಲಹಿದ
ನನ್ನಪ್ಪನ ಕನವರಿಕೆಯ
ಕನಸು ಸಾಕಾರವಾಗದಿದ್ದರೂ
ತಾಯ್ನಾಡು ತಾಯಿಗೂ ಮಿಗಿಲೆಂದು
ಕಾಪಿಡುವ ಭರವಸೆಯಿದೆ

ಜನುಮಜನುಮಕೂ ಸದಾ
ಜೊತೆಯಾಗಿರುವೆನೆಂದು
ಕೈಹಿಡಿದಿದ್ದ ಸಹಧರ್ಮಿಣಿಯ
ಬದುಕಿಗೆ ಬೆಳಕಾಗದಿದ್ದರೂ
ವೀರಯೋಧನ ವೀರಪತ್ನಿಯ
ಪಟ್ಟ ಕೊಡುವ ಭರವಸೆಯಿದೆ

 ಮುದ್ದುಮೊಗದ ಮುದ್ದುಕಂದನ 
ಮಡಿಲಲಿಟ್ಟು ಲಾಲಿಸದಿದ್ದರೂ
ಎದೆಗವಚಿ ಮುದ್ದಿಸದಿದ್ದರೂ
ಮುಂದೊಂದು ದಿನ ಹೆಮ್ಮೆಯ
ಆದರ್ಶ ಪಿತನೆಂಬ ಹೆಗ್ಗಳಿಕೆಗೆ
ಭಾಜನನಾಗುವ ಭರವಸೆಯಿದೆ

             ಶೈಲೂ......
{Picture source: internet/social media}
[11/11/2022, 4:59 pm] Dr. B. N. Shylaja Ramesh: #ಶೈಲೂ_ಬರಹ 

#ಯಾಂತ್ರಿಕತೆ
*********

ಸೂರ್ಯನುದಿಸುವ ಮೊದಲೇ
ನಿತ್ಯಕರ್ಮಗಳ ಮುಗಿಸಿ
ತನಗೂ ತನ್ನವರಿಗೂ
ತಿನ್ನಲೊಂದಷ್ಟು ಬೇಯಿಸಿ
ಗಂಡ ಮಕ್ಕಳ ಡಬ್ಬಿಗಳಿಗೊಂದಿಷ್ಟು 
ತುಂಬಿಸಿ ಪೇರಿಸಿ
ಸವಿಗನಸ ತೆಕ್ಕೆಯಲ್ಲಿರುವ
ಗಂಡ - ಮಕ್ಕಳನ್ನೆಬ್ಬಿಸಿ
ಲಗುಬಗೆಯಲಿ ಓಡಾಡಿ
ಎಲ್ಲರನ್ನೂ  ಸಾವರಿಸಿ, ಕಳಿಸಿ
ಒಂದೇ ಉಸಿರಿನಲಿ ಒಂದೆರಡು
ತುತ್ತು ತನ್ನ ಹೊಟ್ಟೆಗೂ ಸೇರಿಸಿ
ಗಡಿಬಿಡಿಯಲಿ ಉಳಿದ
ಕೆಲಸವ ಮುಗಿಸಿ
ನಾಗಾಲೋಟದಿ ಓಡೋಡಿ
ಕಛೇರಿಯೆಡೆಗೆ.ಧಾವಿಸಿ
ಕಡತಗಳ ಗೂಡೊಳಗೆ
ಮಸ್ತಕವನಿರಿಸಿ
ಏದುಸಿರಿನಲಿ  ತನ್ನೆಲ್ಲ 
ಕರ್ತವ್ಯ ಮುಗಿಸಿ
ಧೂರ್ತನೋಟದ.ದುರುಳ
ಜನರನೂ ಸಹಿಸಿ
ಮರ್ಕಟ ಮನದ ನೂರೊಂದು
ಬಯಕೆಗಳ ದಹಿಸಿ
ನಿತ್ಯ ನೂರಾರು ಕಲಹ
ವಿರಹಗಳನು ಸಹಿಸಿ
ಮತ್ತೆ ನಾಳಿನ ಬದುಕಲಿ
ಶಾಂತಿಯನ್ನು  ಬಯಸಿ
ದುಃಖ ಹತಾಶೆಗಳ
ತೆರೆಮರೆಗೆ ಸರಿಸಿ
ಕರುಳ ಕುಡಿಗಳ ವಿದ್ಯೆ
ಭವಿಷ್ಯಡೆದೆ ಮನವಿರಿಸಿ
ತಿದ್ದಿ ತೀಡಿ ಒಳಿತು ನೀಡಿ
ಕೈಹಿಡಿದು ಬರೆಸಿ
ಮನೆಮಂದಿಯ ಸರ್ವ
ಪೂರೈಕೆಗಳ ಸಲಿಸಿ
ಯಾಂತ್ರಿಕತೆಯ ಜೀವನದಲಿ
ಯಂತ್ರದಂತವಳು
ಒಳ ಹೊರಗೂ  ಮೈಮುರಿದು
ದುಡಿಯುವ ಹೆಣ್ಣು...

         ಶೈಲೂ.....
[11/11/2022, 5:02 pm] Dr. B. N. Shylaja Ramesh: #ಶೈಲೂ_ಬರಹ 

#ಗಣರಾಜ್ಯೋತ್ಸವ

ಸ್ವಾತಂತ್ರ್ಯ ಸಿಕ್ಕರೂ ಇರಲಿಲ್ಲ
ಸ್ವರಾಜ್ಯವಾಳುವ ಪ್ರೌಢಿಮೆ..!!
ಸಂವಿಧಾನ ರಚನೆಯಾನಂತರವೇ
ಗಣರಾಜ್ಯೋತ್ಸವದ ಗರಿಮೆ..!!

ಪರದಾಸ್ಯದಿಂದ ಮುಕ್ತಿ
ನಮ್ಮದೇ ಆಳ್ವಿಕೆಯ ಶಕ್ತಿ..!!
ಇರಲಿ ಭರತಾಂಬೆಯಲಿ 
ಅರ್ಪಣಾಭಾವದ ಭಕ್ತಿ..!!

ಬಾಬಾ ಸಾಹೇಬ್ ಅಂಬೇಡ್ಕರ್
ಸಂವಿಧಾನದ ಹರಿಕಾರ..!!
ಮುಖ್ಯಪಾತ್ರಧಾರಿಗಳು
ತೆರೆಮರೆಯಲ್ಲಿ ಸಾಕಾರ ..!!

ಪ್ರಜಾರಾಜ್ಯ ಪಾಲನೆಗೆ ಸಿಕ್ಕ
ಶಾಸನಬದ್ದ ಅನುಮೋದನೆ..!!
ಪ್ರಜೆಗಳಿಂದ ಪ್ರಜೆಗಳಿಗಾಗಿಯೇ
ಪ್ರಜೆಗಳೇ ರಾಜ್ಯವಾಳುವ ಸೂಚನೆ..!!

ಗಣತಂತ್ರದ ಈ ಸುದಿನದ
ಹಿಂದಿಹುದು ಸಹಸ್ತ್ರಾರು
ದೇಶಭಕ್ತರ , ಯೋಧರ
ಹುತಾತ್ಮರ ರಕ್ತ ತರ್ಪಣ..!!

ಶುದ್ಧ ರಾಜತಾಂತ್ರಿಕ ನಡೆ
ನ್ಯಾಯಾನ್ಯಾಯ ವಿವೇಚನೆ ಕಡೆ..!!
ಇದ್ದರೆಮ್ಮ ನಡೆನುಡಿ ಸಗ್ಗವಿಲ್ಲೇ
ಇದುವೇ ಭರತಮಾತೆಗರ್ಪಣ..!!

✍️   ಶೈಲಜಾ ರಮೇಶ್
[11/11/2022, 5:03 pm] Dr. B. N. Shylaja Ramesh: #ಶೈಲೂ_ಬರಹ 

ಯಾರಿವನು  ???
**************

ಸುಮ್ಮನಿದ್ದ ಮನಸಿನಲ್ಲಿ
ಮಳ್ಳನಂತೆ ಕುಳಿತನಲ್ಲ
ಓರೆ ನೋಟದಿಂದ ಮನವ
ಕದ್ದು ಓಡಿ ಹೋದನಲ್ಲ

ಮೋಡಿ ಮಾತಿನಿಂದ ಮನದೆ
ಪ್ರೀತಿ ಬಿತ್ತಿ ಹೋದನಲ್ಲ
ಕಣ್ಣ ತುಂಬಾ ಅವನೇ ಕುಳಿತು
ಬೇರೇನೂ  ಕಾಣಿಸದಲ್ಲ

ಪ್ರೀತಿ ಮಾತಿನಲ್ಲಿ
ತುಂಬಿದಂತೆ  ಸಿಹಿ ಬೆಲ್ಲ
ಸನಿಹ ಬಂದ ಕ್ಷಣವೇ
ಹೃದಯ ಹಗುರವಾಯಿತಲ್ಲ

ನಗೆಯ ಮೋಡಿ ಧನಿಯಲ್ಲಿ
ಮಿಂಚು ಹರಿದಂತಾಯಿತಲ್ಲ
ಏಳು ಬಣ್ಣದ ಕಾಮನಬಿಲ್ಲು
ಮನದಲ್ಲೇ ಮೂಡಿತಲ್ಲ

ಹೃದಯದಲ್ಲಿ ಸಪ್ತಸ್ವರದ
ಸಂಗೀತ ಕಾರಂಜಿ ಚಿಮ್ಮಿದಂತೆ
ಭಾವ ತುಂಬಿ ಒಲವಗೀತೆ
ಸುಶ್ರಾವ್ಯ ದಿ  ಹಾಡಿದಂತೆ

ಕಂಡಾಕ್ಷಣ ಚೆಲುವ ವದನ
ಮನದಲಿ ನವಿಲ ನರ್ತನ
ವಸಂತವೇಕೆ ಬೇಕು
ಕೂಗಲು ಮನ ಕುಹೂ ಕುಹೂ

ಭೋರ್ಗರೆಯುತ್ತಿದೆ ಮನದೆ
ಧುಮ್ಮಿಕ್ಕಿ ಒಲವಧಾರೆ
ಓಡುತಿದೆ ನದಿಯ ತೆರದಿ
ಸೇರಲವನ  ಕಾತರದೆ

ಸೂರ್ಯಕಿರಣ ಬಂದಾಕ್ಷಣ
ಮೋಡ ಚದುರಿ ಹೋಗುವಂತೆ
ನಗುವ ಮೊಗವಾ ಕಂಡಾಕ್ಷಣ
ಕಹಿನೆನಪು  ಓಡುವುದು

ಸೇರಿಹೋದೆ  ಅವನಲ್ಲೇ ನಾ
ಹೂವಲಿ ಗಂಧ ಬೆರೆಸಿದಂತೆ
ಕೂಗಿ ಬಿಡಲೇ ಅವನ ಹೆಸರ
ಎಲ್ಲೆಲ್ಲೂ ಪ್ರತಿಧ್ವನಿಸುವಂತೆ

         ಶೈಲೂ.......
[11/11/2022, 5:03 pm] Dr. B. N. Shylaja Ramesh: #ಶೈಲೂ_ಬರಹ 

ಜಗವೊಂದು ಸಂತೆ
************

ಜಗವೊಂದು ಸಂತೆ
ಆ ವಿಧಿಯೇ ವ್ಯಾಪಾರಿ..!
ನಾವೆಲ್ಲ ಗ್ರಾಹಕರು
ಅವರವರ ಅನುಕೂಲಕ್ಕೆ
ತಕ್ಕಂತೆ ವ್ಯಾಪಾರ..!
ನಮ್ಮ ನಮ್ಮ ಕರ್ಮಫಲವೆ
ನಮ್ಮ ಖಾತೆಯಲ್ಲಿಹ ಧನವು
ನಿನ್ನಿಂದ ಒಳಿತಾಗಿದ್ದರೆ
ನಿನಗುಂಟು ಸಕಲ ಸೌಲಭ್ಯ..!
ಸಂತೆಯಲ್ಲಿರುವ ಅತ್ಯುತ್ತಮ
ವಸ್ತು ಪಡೆಯುವ ಯೋಗ್ಯತೆ..!
ನೀನೊಬ್ಬರಿಂದ ಕಸಿದು ಉಂಡಿದ್ದರಂದು
ನಿನ್ನ ಖಾತೆಯ ಪುಣ್ಯ ವಜಾ..!
ದುರ್ವಿಧಿಯ ಫಲವುಣ್ಣ ಬೇಕು
ಇದು ಆ ದೈವ ನೀಡುವ  ಸಜಾ..!
ವರ್ತಕನ ಬಳಿಯಲಿಹುದು
ಕಣ್ಣು ಕೋರೈಸುವಷ್ಟು ಸರಕು
ಮೃಷ್ಟಾನ್ನ ಭೋಜನದ ದಿನಸಿ
ಜಗಮಗಿಸುವ ಐಷಾರಾಮಿ
ಸುಖೋಪಭೋಗದ ವಸ್ತು..!
ಅಂತೆಯೇ ಕೊಳೆತ, ಕಳಪೆ ಪದಾರ್ಥ..!
ಬೇಡವೆನ್ನುವ ಹಾಗಿಲ್ಲ
ಅಗತ್ಯಗಳ ಪೂರೈಸಲೇ ಬೇಕು
ಕ್ರಯ- ವಿಕ್ರಯ ಮಾಡಲೇಬೇಕು..!
ಪುಣ್ಯಫಲದ ಖಾತೆ ಬರಿದಾಗುವ ತನಕ
ಸಾಗಲೀ ವ್ಯಾಪಾರ..!
ಮುಗಿದೊಡನೆ  ಸಂತೆಯಿಂದ
ನಿರ್ಗಮನ ಬಹು ದೂರ ದೂರ..!!

       ಶೈಲೂ.....
[11/11/2022, 5:05 pm] Dr. B. N. Shylaja Ramesh: #ಶೈಲೂ_ಬರಹ 

ಗೋಮಾತೆ ಪೂಜೆಯ ಜೊತೆ
ಕಿಚ್ಚು ಹಾಯಿಸುವ ಕಥೆ
ಬಣ್ಣ ಬಣ್ಣದ  ರಂಗೋಲಿ ಎಳೆ
ಸಿಹಿ ಹುಗ್ಗಿ ಕಡಲೆ ಅವರೆ
ಮೆಲ್ಲುತ ನಲಿವ  ಸಂಕ್ರಾಂತಿ

           ಶೈಲೂ......
[11/11/2022, 5:07 pm] Dr. B. N. Shylaja Ramesh: #ಶೈಲೂ_ಬರಹ 

ತಂದೀತೇ ಬಾಳಿನಲ್ಲಿ ಹೊಸಬೆಳಕು.?

ಸರಿಸಿ ಹಳೆಯ ವರ್ಷವ
ತರುತ ಹೊಸತು ಹರ್ಷವ
ಬಾಗಿಲ ಬಳಿ ನಿಂತಿದೆ ಹೊಸವರ್ಷ.!
ತಂದೀತೇ ಬಾಳಿನಲ್ಲಿ ಹೊಸಬೆಳಕು.?

ನೋವು ನಲಿವುಗಳ ಆಗರ
ಬದುಕು ಸಾಗುವುದು ದುಸ್ತರ
ಸಾಕುಸಾಕೆನಿಸಿತ್ತು ವರ್ಷ ತಂದ ಆಪತ್ತು.!
ಹೊಸವರ್ಷ ನಿವಾರಿಸೀತೇ ವಿಪತ್ತು.?

ಕಣ್ಣುಗಳಲ್ಲಿ ಭಯದ ಛಾಯೆ
ಆವರಿಸಿ ಮಾಹಾಮಾರಿಯ ಮಾಯೆ
ಎಷ್ಟೆಲ್ಲ ಭೀಕರ ಸಾವು ನೋವುಗಳು.!
ಹೊಸತುವರ್ಷ ತಂದೀತೇ ಬೆಳದಿಂಗಳು.?

ದುಡಿವ ಕೈಗಳು ಖಾಲಿಖಾಲಿ
ಆರ್ಥಿಕತೆ ಹೊಡೆದಿತ್ತು ಜೋಲಿ
ಹೈರಾಣಾಗಿತ್ತು ಜನಜೀವನ ಬೇಸತ್ತು.!
ಹೊಸವರ್ಷವಾದರೂ ತಂದೀತೇ ಸಂಪತ್ತು.?

ಬದುಕು ಬಿಡಿಸಲಾಗದ ಸೊಡಕು
ನಿರೀಕ್ಷೆಗಳಲೇ ಈ ಬದುಕು
ನೆಮ್ಮದಿಯ ನಾಳೆಗಳೆಡೆಗೆ ನಿರುತ ಪ್ರತೀಕ್ಷೆ.!
ನವವರ್ಷ ಗೆಲ್ಲಿಸೀತೇ ಈ ಜೀವನ ಪರೀಕ್ಷೆ.?

ಹತಾಶೆಗಳ ದೂರೀಕರಿಸಿ
ಬದುಕು ಬಂಗಾರವಾಗಿಸಿ
ಮುನ್ನಡೆಸು ಬಾರಾ ನವವರ್ಷ ಕೈಪಿಡಿದು.!
ಬಾಳದಾರಿಗೆ ಜ್ವಲಿಸುವ ಪ್ರಣತಿಯ ಹಿಡಿದು..!

✍️ ಡಾ: ಶೈಲಜಾ ರಮೇಶ್
[11/11/2022, 5:08 pm] Dr. B. N. Shylaja Ramesh: #ಶೈಲೂ_ಬರಹ 

#2020_21ರ_ಆಪತ್ತು..!!

ಸದ್ಯ.... ಕಳೆಯುತಿದೆ ಇಪ್ಪತ್ತು ಇಪ್ಪತ್ತೊಂದು..!
ಹೈರಾಣಾಗಿಸಿತ್ತು ಮಾರಣಾಂತಿಕ ವಿಪತ್ತನ್ನು ತಂದು
ವೈರಾಣು ಹರಡಿದ್ದ ವಿಪರೀತ ಆಪತ್ತು
ಈ ವರ್ಷದಲ್ಲಿ ಹೆಣಗಿ.. ನಲುಗಿ ಸಾಕಾಯ್ತು..!

ಅದಾವ ಮಹೂರ್ತದಲ್ಲಿ ಕಾಲಿಟ್ಟಿತೋ ವರ್ಷ.!
ಅಂತರವ ನಿರ್ಮಿಸಿ ಕಸಿಯಿತು ಹರ್ಷ
ಎಲ್ಲ ಸಭೆ ಸಮಾರಂಭಗಳು ಹಿತಮಿತ
ಕಲಿಕೆಗೂ ಅಡೆತಡೆಯಾದದ್ದು ತುಂಬಾ ಅಹಿತ.!

ಬಂಧುಗಳೊಡನೆ ಸಂಬಂಧ  ಕಸಿದು
ಬೆಸೆದಿದ್ದೇನೋ ಕಾಣೆ ಬಾಂಧವ್ಯ ಕುಸಿದು..!
ಮನುಷ್ಯ ಮನುಷ್ಯರಲ್ಲಿ ಕಂದಕವ ಸೃಜಿಸಿ
ಮಾರಣಹೋಮ ನಡೆಸಿದೆ ಎಲ್ಲ ಕಾಲಗರ್ಭದೊಳಗಿರಿಸಿ..!

ಸಾಕಿನ್ನು ಬೇಗ ಹೊರಟುಬಿಡು ಮರೆಯಾಗಿ
ನೀನಿತ್ತ ನೋವ ಮರೆಯುವ  ಸಲುವಾಗಿ
ಆಹ್ವಾನಿಸ ಬೇಕಿದೆ ಹೊಸತೊಂದು ವರ್ಷವ.!
ಮುಂದಾದರೂ ಸಿಗಲಿ ಸುಖ ಹರಿಸಿ ಹರ್ಷವ..!

ಹೇ... ಇಪ್ಪತ್ತು ಇಪ್ಪತ್ತೊಂದರ ಕರಾಳ ವರ್ಷ
ಕಲಿಸಿಬಿಟ್ಟೆ ನೀ ಮಹತ್ತರ ಪಾಠ..!
ಸಾಮಾಜಿಕ ಅಂತರವಿರಲಿ ಉತ್ತಮ ಆರೋಗ್ಯಕೆ
ಮನುಜರಿಂದ ದೂರವಿದ್ದಷ್ಟೂ ಒಳಿತು ಅದೇ ನೀನಿತ್ತ ಕಲಿಕೆ....!!

ನಿನಗೂ ಉಳಿಗಾಲವಿಲ್ಲ ನಿನಗೂ ಇದೆ ಅಂತ್ಯ
ಸರಿಯಲೇ ಬೇಕು ಕಾಲ ಉರುಳುತ್ತ ನಿತ್ಯ
ನೀ ಹೊರಗಡಿಯಿಟ್ಟ ಶುಭ ಮಹೂರ್ತದಲಿ
ಶುಭವ ಹೊತ್ತು ತರಲಿ ಮತ್ತೊಂದು ವರ್ಷದಲಿ..!!

ಡಾ: B.N. ಶೈಲಜಾ ರಮೇಶ್
[11/11/2022, 5:22 pm] Dr. B. N. Shylaja Ramesh: #ಶೈಲೂ_ಬರಹ 

#ಸ್ವರಗಳಲ್ಲಿ_ನನ್ನವರು

ಅಮ್ಮನ ಮೆಚ್ಚಿನ ಮಗ ನನ್ನವರು
ಆಡಂಬರ ಇಷ್ಟಪಡದವರು
ಇಹುದೆನ್ನ ಮೇಲೆ ಅತ್ಯಧಿಕ ಪ್ರೇಮ
ಈಶನಂತೆಯೇ ಬಯಕೆಗಳಲಿ ನಿಷ್ಕಾಮ
ಉದಯ ರವಿಯಂತೆ ಸೊಗಸು
ಊರುಗೋಲಂತವರು, ಸ್ವಚ್ಛ ಮನಸು
ಋಷಿಗಳಂತೆ ಸಾತ್ವಿಕ ಗುಣ
ಎಲ್ಲರನ್ನೂ ಆಧರಿಸುವ ಮನ
ಏಳುಬೀಳುಗಳನ್ನೂ ಕಂಡವರು
ಐದು ಜನ ಗಂಡುಮಕ್ಕಳಲ್ಲೊಬ್ಬರು
ಒಂದಾಗಿ ಎಲ್ಲರಲ್ಲೂ ಬೆರೆವವರು
ಓದಲೆನಗೆ ಪ್ರೋತ್ಸಾಹ ಕೊಟ್ಟವರು
ಔನತ್ಯವಿಹುದು ಅವರ ಗುಣದಲ್ಲಿ
ಅಂದಗಾರ ಸೊಗಸುಗಾರ ನನ್ನವ
ಅಹಂಕಾರ ಲವಲೇಶವೂ ಇಲ್ಲದವ..!!

ಡಾ: ಶೈಲಜಾ ರಮೇಶ್
[11/11/2022, 5:27 pm] Dr. B. N. Shylaja Ramesh: #ಶೈಲೂ_ಬರಹ 

ನನ್ನ ಮನದಲ್ಲಿ ಮಿಂಚುವ ನಿಲುಕದ ನಕ್ಷತ್ರ ನೀನು
******************************

ನೀನೇಕೆ ಬಂದೆ ಮನದೊಳಗೆ
ಕಟ್ಟುತ್ತಾ ಆಶಾ ಗೋಪುರ
ಮನೆಮಾಡಿನಿಂತೆ ಎದೆಯೊಳಗೆ
ಕುಣಿದುಬಿಟ್ಟೆ ಕಟ್ಟಿ ನೂಪುರ

ಕನಸುಗಳ ಹೊಸೆದೆ ನೂರಾರು
ಬಿತ್ತಿ ಮನದೊಳಗೆ ಆಸೆ 
ಅದೇನು ಮಾಧುರ್ಯ ಮನಕೆ
ನೀ ನುಡಿವ ಪ್ರೇಮಭಾಷೆ

 ನೀನಾದೆ ನನ್ನ ಜೀವದಜೀವ
ನಾ ಮೆಚ್ಚಿದ ಸ್ವಚ್ಛ ಮನಸು ನೀನೇ
ನೀನಾದೆ ನನ್ನ ಕಣ್ಣ ಕಾಂತಿ
ನನ್ನ ಬಾಳಿನ ಬೆಳಕು ನೀನು

ನೀ ಬಾಳ ಬಾನ ಚಂದ್ರಮಾ
ಬೆಳ್ಬೆಳದಿಂಗಳು ನೀನು
ಬಾಳ ಬೆಳಗೊ ರವಿಕಿರಣ
ಕಣ್ಣುಕೋರೈಸುವ ಪ್ರಭೆಯು ನೀನು

ನನ್ನ ಮನದಲ್ಲಿ ಮಿಂಚುವ
ನಿಲುಕದ ನಕ್ಷತ್ರ ನೀನು
ನಿನ್ನ ನೆನಪ ಅಮಲಲ್ಲಿಯೇ
ಜೀವ ಸವೆಸುವೆ ನಾನು

           ಶೈಲೂ......
[12/11/2022, 8:18 pm] Dr. B. N. Shylaja Ramesh: #ಕನ್ನಡಮ್ಮನ_ಹಿರಿಮೆ

#ದ್ವಿರುಕ್ತಿ_ಕವನ

ಕಣಕಣದಲ್ಲೂ ಸಾರುತಿದೆ ಕನ್ನಡಮ್ಮನ ವೈಭವ
ಉಸಿರುಸಿರಲೂ ಬೆರೆತಿದೆ ಭಾಷಾಭಿಮಾನದ ಪ್ರಭಾವ
ಜನಮನದಲ್ಲಿ ನೆಲೆಸಿಹಳು ತಾಯಿ ಭುವನೇಶ್ವರಿ
ಬಗೆಬಗೆಯಲಿ ಸ್ತುತಿಸುವರು ತಾಯ ಐಸಿರಿಯ ಪರಿ

ಹೆಜ್ಜೆಜ್ಜೆಗೂ ಹರಡಲಿ ಕನ್ನಡ ಭಾಷೆಯ ಕಂಪು
ಅಣುವಣುವಲೂ ಬೆರೆಯಲಿ ತಾಯ ಹಿರಿಮೆ ಪೆಂಪು
ಮನೆಮನೆಯಲೂ ಮೊಳಗಲಿ ಜೈಕಾರದ ಘೋಷ
ಎಳೆದೆಳೆದು ಬಂಧಿಸಲಿ ತಾಯ್ನುಡಿಯ ಪ್ರೀತಿ ಪಾಶ

ನಡೆನುಡಿಯಲಿ ಮೇಳೈಸಲಿ ಮಾತೃಭಾಷೆ ಭಕ್ತಿ
ನರನಾಡಿಯಲಿ ತುಂಬುವುದು ನಾಡುನುಡಿಯ ಶಕ್ತಿ
ಸಾಲುಸಾಲು ಗುಡುಗೋಪುರಗಳು ಕಾಣಸಿಗುವುದಿಲ್ಲಿ
ಹಡಿಬದೆಯ ಧರ್ಮಸಾರ ನೆಲೆಯೂರಿಹುದಿಲ್ಲಿ

ತಲತಲನೆ ಹರಿವ ಜೀವನದಿಗಳ ನಾಡು
ಕ್ಷಣಕ್ಷಣಕ್ಕೂ ಅಚ್ಚರಿಯ ಅನಾವರಣವಿಲ್ಲಿ ನೋಡು
ಕಣ್ಮನಗಳ ಸೆಳೆದೆಳೆವ ಶಿಲ್ಪಕಲೆಯ ವೈಭವ
ಮನಮನದಲೂ ಕಿಚ್ಚೆಬ್ಬಿಸುವ ಕನ್ನಡರಾಜ್ಯೋತ್ಸವ

ಪದಪದದಲಿ ತುಂಬಲಹುದೇ ಕನ್ನಡದ ಹಿರಿಮೆ
ವಿವಿಧತೆಯಲಿ ಏಕತೆಯೇ ತಾಯಿನಾಡ ಗರಿಮೆ
ಎಲ್ಲೆಲ್ಲಿ ನೋಡಲಿ ಹಾರುತಿದೆ ಹಳದಿ ಕೆಂಪು ಭಾವುಟ
ಅಚ್ಚಳಿಯದೆ ನೆಲೆನಿಂತಿದೆ ಇತಿಹಾಸದ ಪುಟಪುಟ..!!

ಡಾ: B.N. ಶೈಲಜಾ ರಮೇಶ್
[22/11/2022, 3:38 pm] Dr. B. N. Shylaja Ramesh: ಆತ್ಮೀಯ ಗೆಳತಿ ಸಂಧ್ಯಾ ಸುರೇಶ್ ಅವರ ಆಗ್ರಹದ ಮೇರೆಗೆ ಅವರು ಕೊಟ್ಟ ಸಾಲಿಗೆ ನನ್ನದೊಂದು ಕವನ

ಭಾವಗಳ ಉಯ್ಯಾಲೆ
******************

ಮನವೆಂಬ ಸಾಗರದಲೆಗಳ ಮೇಲೆ
ತೂಗುತಿದೆ ಭಾವನೆಗಳ ಉಯ್ಯಾಲೆ
ಒಮ್ಮೆ ಕೆಳಗೆ ಮತ್ತೊಮ್ಮೆಲೇ ಮೇಲೆ
ಜುಳುಜುಳನೆ ಬಂದು ದಡಕ್ಕಪ್ಪಳಿಸಿದಂತೆ ಅಲೆ

ಅಡಗಿದೆ ಮನದ ಶರಧಿಯೊಡಲಲ್ಲಿ
ಭಾವನೆಗಳ ಮುತ್ತುರತ್ನ ಪಚ್ಚೆ ಹವಳ
ಹೆಕ್ಕಿ ತೆಗೆಯಬೇಕು ಮನದಾಳದಿಂದ
ಸಂಯಮವಿರೇ ಹೊಳಪಿಸುವುದು ಸರಳ

ಮನದ ಮಾನಸ ಸರೋವರದೆ
ಮಿಂದೆದ್ದಿದೆ ಭಾವಗಳ ಅಹವಾಲು
ಹೊರಹೊಮ್ಮಲು ಅದೇಕೋ ತಲ್ಲಣ
ಬಿಂಬಸುವ ಚಾಣಾಕ್ಷತೆಗಿಲ್ಲಿ ಸವಾಲು

ಮನದ ನೀಲಾಗಸದಲಿ ಮುಚ್ಚಿದೆ
ಭಾವನಾ ಚಂದ್ರನಿಗೆ ಕಾರ್ಮೋಡ
ಧೃಢತೆಯ ಬಿರುಗಾಳಿಗೆ ಚೆದುರಿದರೆ
ಬೆಳದಿಂಗಳಂತೀ ಭಾವನೆಯು ನೋಡಾ

ಹೊಳೆವ ರವಿಕಾಂತಿಯಂತಿಹುದು
ಈ ಮನದ ಭಾವನೆಗಳ ಸಾರ
ನೋವ ನಿಷೇಯೊಡಲ ಸೀಳಿ
ಬೆಳಕು ತಂದಾಗಲೇ ಸುಖ ಸಂಸಾರ

          ಶೈಲೂ.......
[22/11/2022, 3:38 pm] Dr. B. N. Shylaja Ramesh: #ನನ್ನ ಸಾಲು#

ಮನಸು ಅನ್ನೋದು  ಹೊಸ ಕನಸುಗಳ
ಸೃಷ್ಟಿಸುವ ಕಾರ್ಖಾನೆ
ನಿನ್ನ ಕುರಿತ  ಕನಸುಗಳಿಂದಲೇ
ತುಂಬಿದೆ ಈ ನನ್ನ ಖಜಾನೆ

ನನ್ನ ನಿನ್ನ ಬಂಧಿಸಿದ್ದು
ನಿರ್ಮಲ ಪ್ರೀತಿ ಪ್ರೇಮಾನೆ
ಆ ಬಂಧನದೊಳಗಾನಂದ
 ಚಿಮ್ಮುತ್ತಿದೇ ಇದು ನಿಜಾನೇ..

ಖಜಾನೆಯೊಳಗಡಗಿಹುದು
ನಿನ್ನ ನೆನಪೆಂಬ ಮುತ್ತು ರತ್ನ
ಅದ ಹೆಕ್ಕಿತಂದು ಅಭಿಮಾನದಿ
ಅಪ್ಪಿದಾಗ ಉಲ್ಲಾಸ ತನುಮನ

ಮನದ ಕಾರ್ಖಾನೆಯಲ್ಲಿ ಉಗಮ
ಹೊಸ ಹೊಸ ಹೊಂಗನಸ ಸರಕು
ನಿನ್ನೊಡನಾಟದಲಿ ಬಿಕರಿಯಾದಾಗಲಷ್ಟೇ
ಆ ಸರಕಿಗೊಂದು ಮೆರಗು

ಮೆರಗು ತುಂಬುವ ಸರದಾರ
ನನಸಾಗಿಸಲು ನೀನೆಂದು ಬರುವೆ
ನಿನ್ನಾಗಮನದ ಹೊಂಗನಸ ಕಾಣುತ್ತಾ
ನಿನಗಾಗಿಯೇ ಕಾಯುವೆ.....

        ಶೈಲೂ.......
[22/11/2022, 3:38 pm] Dr. B. N. Shylaja Ramesh: #ಹೊಂದಿಕೋ_ಮನಸೇ

ಹೊಂದಿಕೋ ಮನಸೇ ನೀ ಸುಮ್ಮನೇ
ಬೇಡದ ನೆನಪಿಗೂ ಕಾಡುವ ಕನಸಿಗೂ
ಕುಂಟು ನೆಪವೊಡ್ಡುವ ಹುಸಿಮುನಿಸಿಗೂ
ನೊಂದುಕೊಳ್ಳಲೇ ಬೇಡ ನೀನೆಂದಿಗೂ

ಅರಿತುಕೊ ಮನಸೇ ಈ ಕಟುಸತ್ಯವ
ನಿನ್ನವರು ಯಾರಿಲ್ಲ ನೀ ಬಿದ್ದರೂ
ಸಂತೈಸುವರಾರಿಲ್ಲ ನೀ ನೊಂದರೂ
ಉರಿದುರಿದು ಬೀಳುವರು ನೀ ಗೆದ್ದರೂ

ತಡೆದುಕೋ ಮನಸೇ ನೀ ದುಃಖವಾ
ಸವಿ ಮಾತಲೇ ಚಾಟಿ ಬೀಸಿದರೂ
ನಗು ನಗುತಲೆ ನಿನ್ನ ಬೆನ್ನಿಗಿರಿದರೂ
ನಡೆವ ಹಾದಿಗವರು ಮುಳ್ಳಾದರೂ

ಕಾಯುತಿರು ಮನಸೇ ನಾಳಿನ ಬೆಳಕಿಗೆ
ಬದುಕ ಕತ್ತಲೆ ಕಳೆವ ಹೊಸ ಹುರುಪಿಗೆ
ಗುರಿಯೆಡೆಗೆ ನಡೆಸುವ ಹೊಸದಾರಿಗೆ
ತಲೆಯೆತ್ತಿ ಬಾಳುವ ಹೊಸ ಬದುಕಿಗೆ

ಇನ್ನೆಷ್ಟು ದಿನ ಕಾಡೀತು ಹೇಳು.?
ಕಿತ್ತು ತಿನ್ನುವ ರಣಹದ್ದ ನೋವು
ಎಲ್ಲಕ್ಕೂ ಇರುವುದು ಕೇಳು ಅಂತ್ಯವು
ತಡೆಹಿಡಿದು ನುಂಗಿಬಿಡು ಹಿಂಡುವ ನೋವು

ಭೂತಕಾಲದ ಬವಣೆ ತಾ ಕರಗಿ
ಭವಿತದ ಮುನ್ನುಡಿಗೆ ದೀಪಬೆಳಗಿ
ಕಂಡ ಕನಸುಗಳೆಲ್ಲ ಸಾಕಾರವಾಗಿ
ಖುಷಿಯ ಕ್ಷಣ ಕಾದಿದೆ ನಿನ್ನ ನಗುವಿಗಾಗಿ

ಸಕಾಲದವರೆಗೆ ಸಾವರಿಸಿಕೋ ಮನವೇ
ನೋವಿಗೂ ನಲಿವಿಗೂ ನೀ ಕುಗ್ಗದೇ
ಭಾವಣೆಗಳ ಭಾರಕ್ಕೆ ನೀ ಜಗ್ಗದೇ
ಹೊಂದಿಕೋ ಮನಸೇ ನೊಂದುಕೊಳ್ಳದೇ

           ಶೈಲೂ......
[22/11/2022, 4:22 pm] Dr. B. N. Shylaja Ramesh: #ವನಸಿರಿ

ಆಹಾ..ಎಂಥ ರಮ್ಯ.!! ಹಸಿರಿನ ವನಸಿರಿ
ಕಂಗಳೆಷ್ಟು ಧನ್ಯ.!! ಕಾಣಲೀ ಚೆಲುವಿನ ಪರಿ
ಕರುನಾಡೇ ಮಾನ್ಯ.!! ತುಂಬಿರಲು ಸೊಬಗ ಐಸಿರಿ
ಸಿರಿತನವು ಜನ್ಯ.!! ನಗುತಿರೆ ಭೂಸಿರಿ
            ಶೈಲೂ....
[22/11/2022, 5:05 pm] Dr. B. N. Shylaja Ramesh: ಶ್ರೀಮಾನ್ Tkv Bharathy Bharathy  ಸರ್ ರವರ ಸುಂದರ ಕವನಕ್ಕೆ ಪ್ರತಿಯಾಗಿ ಬರೆದದ್ದು😊
ಚಿತ್ರವೂ ಅವರ ವಾಲಿಂದ ತೆಗೆದುಕೊಂಡಿದ್ದು, ಈ ಚಿತ್ರವೇ ಈ ಕವಿತೆಯನ್ನು ಬರೆಸಿಕೊಂಡದ್ದು😊

ಕಳೆಯುತ್ತಿದೆ ಕಾಲ
ನಿನ್ನ ಹುಡುಕುವಿಕೆಯಲ್ಲೇ
ಸರಿದುರುಳುತ್ತಿದೆ ಸುಮ್ಮನೇ
ನಿನ್ನ ಸುಳಿವಿಲ್ಲ, ನೀನೆಲ್ಲಿರುವೆ.?

ಕಣ್ಣು ಹಾಯಿಸಿದಷ್ಟೂ ದೂರ
ಬರಿದೇ ಶೂನ್ಯ, ನಿಡಿದಾದ ಹಾದಿ
ಇಕ್ಕೆಲಗಳಲೂ ದೃಷ್ಟಿ ಹರಿಸಿದರೂ
ನಿನ್ನಿರುವಿಲ್ಲ, ಹೇಳು ನೀನೆಲ್ಲಿರುವೆ..?

ಮನದಲ್ಲೇನೋ ತೊಳಲಾಟ
ಭಾವನೆಗಳ ತೀರದ ತಾಕಲಾಟ
ಇನಿತೂ ನೆಮ್ಮದಿಯಿಲ್ಲ, ಕಾಣದೆ
ಕುರುಹೇ ಕಾಣದು, ನೀ ಎಲ್ಲಿರುವೆ.?

ಮಾತುಗಳೆಲ್ಲ ಮೌನವಾಗಿ
ಏಕಾಂತವಿದು ಅತಿ ಘೋರವಾಗಿ
ಕಾಡಿ ಕಾಡಿಸಿ, ನೋಯಿಸುವ ಮುನ್ನ
ತಿಳಿಸಿಬಿಡು ಗೆಳೆಯ ನೀ ಎಲ್ಲಿರುವೆ..?

ಕಂಡಿದ್ದ ಸವಿ ಕನಸುಗಳೆಲ್ಲ
ಕಣ್ಣೀರಾಗಿ ಕರಗಿ, ಮಾರ್ದನಿಸುವ ನಿನ್ಹೆಸರ ದನಿ ಉಡುಗಿಹೋಗುವ ಮುನ್ನ
ಹೇಳಿಬಿಡು ಬೇಗ, ನೀ ಎಲ್ಲಿರುವೆ..?

ಶೈಲಜಾ ರಮೇಶ್
[22/11/2022, 6:47 pm] Dr. B. N. Shylaja Ramesh: ಕ್ಷಣ_ಹೊತ್ತು_ಸ್ವಲ್ಪ_ಯೋಚಿಸು

ಸ್ವಾಭಿಮಾನ ಒಳ್ಳೆಯದೇ
ಆದರೆ, ಸ್ವೇಚ್ಛಾಚಾರ ಸಲ್ಲದು
ಸಮಾನತೆಯೂ ಬೇಕಾದ್ದೇ
ಆದರೆ, ದುರಭಿಮಾನ ಕೆಟ್ಟದ್ದು.!

ವಿದ್ಯೆ ಬೇಕೇಬೇಕು ನಿಜ
ಪೂರಕವಾಗಿ ವಿನಯವಿರಬೇಕು
ಸುಜ್ಞಾನದೊಳಿದೆ ಮಜಾ
ಗಳಿಸಲು ಶ್ರದ್ಧೆ, ತಾಳ್ಮೆಯಿರಬೇಕು

ಆತ್ಮಾಭಿಮಾನ ಇರಲೇಬೇಕು
ಆದರೆ ಅಹಂಕಾರ ಬೇಡವೇಬೇಡ
ಎಲ್ಲರನ್ನಾಧರಿಸುವ ಗುಣಬೇಕು
ಮರೆತಾದರೂ ಕೊಂಕುನುಡಿ ಬೇಡ

ಎಲ್ಲರೊಡನೆ ಬೆರೆಯಬೇಕು
ಯಾರನ್ನೂ ಕೀಳಾಗಿ ಕಾಣಬಾರದು
ಕೆಟ್ಟದ್ದನ್ನಲ್ಲಲ್ಲೇ ತೊರೆಯಬೇಕು
ಒಳ್ಳೆಯದ್ದನ್ನೆಂದಿಗೂ ಮರೆಯಬಾರದು

ಓ.. ಹೆಣ್ಣೇ ನನ್ನ ಮಾತನ್ನಾಲಿಸು
#ಕ್ಷಣ_ಹೊತ್ತು_ಒಮ್ಮೆ_ಯೋಚಿಸು
[22/11/2022, 8:04 pm] Dr. B. N. Shylaja Ramesh: #ಮನಸಿನಮಾತು 

ಹೇಗೆ ಹೇಳಲಿ ಹೇಳು
ನನ್ನ ಮನದ ಮಾತು
ತಾಳ್ಮೆಯಿದೆಯಾ ಕೇಳಲು
ಬಳಿಯಲ್ಲಿ ಕುಳಿತು.?

ಹೇಳಲಿದೆ ಸಾವಿರ
ಮನಸಿನ ಮಾರ್ದನಿ
ಅರ್ಥವಾಗುವುದೇನು
ನನ್ನೊಳಮನದ ದನಿ.?

ಮನದಲ್ಲಿ ತುಂಬಿರುವ
ನೋವು ನಲಿವುಗಳು
ಕಾಣಿಸದೇನು ಹೇಳು
ನನ್ನೊಡಲ ಅಳಲುಗಳು.?

ಏನೇನೋ ಕನಸುಗಳು
ಎದೆಯ ತುಮುಲಗಳು
ಅರ್ಥೈಸಲಾರದೇನು 
ಹಸಿ ಹಸಿ ಭಾವಗಳಳಲು.?

ಅರ್ಥೈಸಿಕೊಂಡಷ್ಟೂ
ನಿಗೂಢವೆನಿಸುತ್ತಿದೆ
ಅರ್ಥವೇ ಆಗದ
ಈ #ಮನದ_ಮಾತುಗಳು.!

     ಶೈಲೂ.....
[23/11/2022, 12:12 pm] Dr. B. N. Shylaja Ramesh: #ಜೀವನದ_ಪ್ರತಿ_ಹೆಜ್ಜೆಯಲ್ಲಿ 
ನಿನ್ನ ಜೊತೆಗೇ ಇರಬೇಕೆಂಬಾಸೆ
ನನ್ನ ಮನಸ್ಥಿತಿಯ ಅರಿಯುವಲ್ಲಿ
ತಡಮಾಡದೆ, ನನ್ನೇ ಪ್ರೀತಿಸೇ..!

ಜೊತೆಗೇ ಇರುವೆ ಸುಖ ದುಃಖದಲಿ
ನಿನ್ನ ನೋವಿಗೆ ಸ್ಪಂದಿಸುವ ಹೆಗಲಾಗಿ
ತೇಲಿಸಿ ಮುಳುಗಿಸುವೆ ನಗುವಿನಲಿ
ಬೆಳಗುವೆನು ಬಾಳು ಬೆಳಕು ನಾನಾಗಿ

         ಡಾ: ಶೈಲಜಾ ರಮೇಶ್
[24/11/2022, 2:34 pm] Dr. B. N. Shylaja Ramesh: #ವಿಷಯ_ಒಲವು

#ಶೀರ್ಷಿಕೆ #ಬದುಕೊಂದು_ಹೂದೋಟ

ಒಲವುಂಡ ಜೀವವಿದು, ಸದಾಕಾಲ ಸಂತಸವೇ
ನಲಿವುಂಡ ಬದುಕಲ್ಲಿ, ಸಾವಧಾನ ಸಂಯಮವೇ
ನೋವಿಗಿಲ್ಲಿ ಸ್ಥಳವಿಲ್ಲ, ಪ್ರತಿದಿನ ನವೀನವೇ..!
ನಗೆಮಲ್ಲೇ ಅರಳಿದೆ, ಬದುಕೊಂದು ಹೂದೋಟವೇ..!

   ಡಾ: ಶೈಲಜಾ ರಮೇಶ್
[25/11/2022, 10:04 am] Dr. B. N. Shylaja Ramesh: #ಕನಸಿನರಮನೆ
************

ಕೇಳು  ಗೆಳತಿ.....
ನೀ ನನ್ನ ಹೃದಯದ ಒಡತಿ
ಕಟ್ಟಿರುವೆ ನಾನೊಂದು ಕನಸಿನರಮನೆಯ
ನಮ್ಮ ಪ್ರೀತಿಯೇ ಅದಕೆ  ಅಡಿಪಾಯ
ಭಾಂಧವ್ಯ ಬೆಸೆದು ಕಟ್ಟಿರುವೆ
ಮಹಲಿನ ಮೇಲೊಂದು ಮಹಲು
ನನ್ನ ಒಲುಮೆಯ ಹೂಗಳ ಜೊತೆಗೆ
ನಿನ್ನ ನಗೆ ಮುತ್ತುಗಳ ಚಂದದ ಮಾಲೆ
ಅಲಂಕರಿಸಲು ಆಲಯವ ಸಾಕಾಗಬಹುದಲ್ಲೇ
ಹೃದಯದರಮನೆಯಲ್ಲಿ  ನೀನೇ ಮಹಾರಾಣಿ
ಕಾದಿರುವೆ ನಾ ಅರಸಿಯ  ಆಣಿಮುತ್ತಿ ಗೆ
ಬೆಳೆಸೋಣ  ಚಂದದಲಿ ಜೀವನದ ಹೂಬನವ
ಆಸೆ ಕುಸುಮವ ಬೆಳೆಸಿ ಪ್ರೀತಿ ನೀರನು ಹೊಯ್ದು
ಅದುವೇ ಅಲಂಕಾರ ಪ್ರೀತಿಯರಮನೆಗೆ
ನನ್ನೆಲ್ಲ ಆಸೆಗಳ ಬೆರೆಸಿ ಕಟ್ಟಿದ ಗೋಪುರ
ಅರಮನೆಯ ಅಂದಕದು ಮುಕುಟ ತಾನೇ ??
ಆಸೆ ಕನಸುಗಳ ಬೆರೆಸಿ ಕಟ್ಟಿದರಮನೆಯು
ಗಟ್ಟಿಯಾಗಿರಲಿ ಅದು ಕೋಟೆಯಂತೆ
ಕನಸು ನನಸಾಗಿ ನಲಿವ ಮನೆಯೊಳಗೆ
ಬಾರದಿರಲಿ ಎಂದಿಗೂ ಒಲವ ಚಿಂತೆ

         ಶೈಲೂ......
Shylaja Ramesh
[26/11/2022, 10:13 am] Dr. B. N. Shylaja Ramesh: #ಬಚ್ಚಿಟ್ಟ_ಕನಸು 
ಬಚ್ಚಿಡಲೇನಿದೆ ಹೇಳು
ಎಲ್ಲವೂ ನಿಚ್ಚಳವೇ
ನನ್ನೆಲ್ಲ ಕನಸನ್ನು
ನಿನ್ನೊಂದಿಗೆ ಹಂಚಿಕೊಂಡಿದ್ದೇನೆ
ಮನಸ್ಸು ಮಾಡಬೇಕಷ್ಠೆ

ಒಳಮನದ ಭಾವಗಳನ್ನ
ಎಳೆಎಳೆಯಾಗಿ 
ಬಿಚ್ಚಿಟ್ಟಿರುವೆ, ನಿನ್ನೆದುರಿಗೆ    
ತಳಮಳಿಸುವ ಹೃದಯದಳಲ
ಹರಿಯಬಿಟ್ಟಿರುವೆ ನಿನ್ನೆಡೆಗೆ

ಕಂಡ ಕನಸುಗಳು ಸಾರ
ಮುಗುದೆ ಮನಸಿನ ಭಾವ
ಸುತ್ತಲಡಗಿದ ನೋವ
ಮುಕ್ತ ಮಾತಿನ ಧಾರ
ಎಲ್ಲ ಅರುಹಿರುವೆ ನಿನಗೆ

ಮುಚ್ಚಿಡಲಿನ್ನೇನಿಲ್ಲ
ಉಸುರಿರುವೆ ಎಲ್ಲ
ಉಸಿರ ಕೊನೆತನಕ
ನೀ ಸಾಗಬೇಕಷ್ಠೆ
ಕೈಹಿಡಿದು ನಡೆಸಬೇಕಷ್ಠೆ

ಎಲ್ಲ ನಿನಗೇ ಬಿಟ್ಟಿರುವೆ
ನಿನಗನಿಸಿದಂತೇ ಮಾಡು
ಮನವ ನಿನ್ನಲೇ ನೆಟ್ಟಿರುವೆ
ಕಣ್ಣು ತೆರೆದೊಮ್ಮೆ ನೋಡು
ಇರಲಿ ಒಲವಿನ ಹಾಡು

ಶೈಲಜಾ ರಮೇಶ್
[26/11/2022, 10:39 am] Dr. B. N. Shylaja Ramesh: #ನೋವು_ಮರೆಮಾಚಿದ_ಮುಗುಳುನಗೆ 

ನೀನಂದು ಬಂದೆ ಬಾಳಿಗೆ
ತುಂಬುತ್ತ ಪ್ರೀತಿ ಜೋಳಿಗೆ
ಬದುಕು ಸುಂದರವೆನಿಸಿತ್ತು
ನಡುವೆ ನಗುವೇ ತುಂಬಿತ್ತು

ಬಿಚ್ಚಿಟ್ಟು ಮನಸಿನ ಮಾತು
ಹರಟಿದೆವಲ್ಲ  ಬಳಿ ಕುಳಿತು 
ಕಂಡ ಕನಸುಗಳು ಅದೆಷ್ಟೋ
ಹರಿದ ಭಾವನೆಗಳು ಅದೆಷ್ಟೋ

ಒಬ್ಬರಿಗೊಬ್ಬರು ಹೆಗಲಾಗಿ
ಸಂತಸದಿ ನಲಿಯುತ್ತ ಸಾಗಿ
ಕಳೆದವು ಅದೆಷ್ಟೋ ಸಮಯ
ಸುರಿಸುತ್ತ ಪ್ರೀತಿಯ ಮಳೆಯ

ಅದಾರ ಕೆಟ್ಟದೃಷ್ಟಿ ತಾಕಿತೋ   
ಅಥವಾ  ವಿಧಿಯ ತಾಕೀತೋ
ನೀ ದೂರವಾದೆ ಬಾಳಿನಿಂದ
ನಾ ನರಳುತ್ತಿರುವೆ ನೋವಿಂದ

ಸವೆಸಬೇಕಲ್ಲವೇ ಬದುಕ ಹಾದಿ
ಹುಡುಕುತ್ತ ಬಾಳುವೆಗೆ ನೆಮ್ಮದಿ
ಹಾಕಿಬಿಟ್ಟಿರುವೆ ನಗುವ ಸೋಗು
#ನೋವು_ಮರೆಮಾಚಿದ_ಮುಗುಳ್ನಗು

     ಡಾ: ಶೈಲಜಾ ರಮೇಶ್
[26/11/2022, 1:04 pm] Dr. B. N. Shylaja Ramesh: #ಅಪ್ಪ
            #ಒಂದು_ನೆನಪು..😔

           ಹೇ ... ಎಷ್ಟು ಧೈರ್ಯನೋ ನಿನಗೆ ನನ್ನ ಮಗಳನ್ನ ಹೊಡೆಯೋಕ್ಕೆ... ಅದೆಷ್ಟು ಕೊಬ್ಬು ಇದ್ರೆ ನನ್ನ ಮಗಳ ಮೈ ಮುಟ್ತೀಯಾ?  ಏನು ತಪ್ಪು ಮಾಡಿದ್ಲು ಅಂತ ಹೊಡೆದೆ... ಏನು ತಬ್ಬಲಿ ಅಂತ ತಿಳಿದ್ಯಾ ಹ್ಯಾಗೆ? ನಮ್ಮನೆ ಅನ್ನ ತಿಂದು ಕೊಬ್ಬು ಹೆಚ್ಚಾಗಿದೆ ನಿನ್ಗೆ....  ಬಾ ಇನ್ನೊಂದ್ಸಾರಿ ಮನೆಹತ್ರ... ಇದೆ ನಿನ್ಗೆ  ಅಂತ ನಡು ಬೀದಿಯಲ್ಲಿ ತರಾಟೆಗೆ ತೊಗೊಂಡಿದ್ರು... ಹಂಗಾಮಿ ಸ್ಕೂಲ್ ಮಾಸ್ಟರ್ ಮೇಲೆ ಅಪ್ಪ...   ಹಾಗಂತ ... ಮಾಸ್ಟರ್ ಮೇಲೆ ಹಗೆ ಅಂತಲ್ಲ....  ಅವರನ್ನ  ಓದಿಸಿ...  ನಮ್ಮ ಸ್ಕೂಲ್ ಟೀಚರ್ ಹುಷಾರಿಲ್ಲದೆ 5 - 6 ತಿಂಗಳು ರಜೆ ಮೇಲಿದ್ದಾಗ ನಮ್ಮ ಮನೆಯಲ್ಲಿ ದಿನಗೂಲಿ ಕೆಲಸಕ್ಕಿದ್ದ ಆಂಜಿನಪ್ಪನ ಮಗ ಪೋಲಿ ತಿರುಗುತ್ತಿದ್ದ ಮುನಿರಾಜನನ್ನು ಹಂಗಾಮಿ ಶಿಕ್ಷಕನಾಗಿ ಕೆಲಸಕ್ಕೆ ಸೇರಿಸಿದ್ದೂ ಅಪ್ಪನೇ.....  ಕೆಲಸದಾಳಾದರೂ... ಸ್ನೇಹಿತರಂತೆ ಕಾಣುತ್ತಿದ್ದ ಅಪ್ಪ,  ನೀವುಗಳು ಕಷ್ಟಪಟ್ಟು ದುಡಿದಿದ್ದು ಸಾಕು ಮಕ್ಕಳಾದರೂ ಓದಿ ಬುದ್ಧಿವಂತರಾಗಲಿ, ಒಳ್ಳೆ ಕೆಲಸ ಹಿಡಿದು ಗೌರವಾನ್ವಿತರಾಗಿ ಬಾಳಲಿ ಅಂತ  ಬಲವಂತದಿಂದ  
TCh ವರೆಗೂ ಓದಿಸಿದ್ದರು ಅಪ್ಪ,  ಅದನ್ನೂ ಓದಲು ಇಷ್ಟವಿಲ್ಲದ ಮುನಿರಾಜ್ ನನ್ನು ಮುಂದಿನ ಜೀವನದ ಬಗ್ಗೆ ತಿಳುವಳಿಕೆ ನೀಡಿ ಕಾಲೇಜು ಬಿಡದಂತೆ ತಡೆಹಿಡಿದಿದ್ದರು...  ಜಸ್ಟ್ ಪಾಸಾದರೂ ಸಾಕು ... ನಿಮಗೆ ಕೆಲಸ ಸಿಕ್ಕುತ್ತೆ.. ಆರಾಮಾಗಿ ಜೀವನ ಸಾಗಿಸಬಹುದು ಅಂತ ಪುಸಲಾಯಿಸಿ ,  ಅಣ್ಣನಿಂದ ಟ್ಯೂಷನ್ ಹೇಳಿಸಿ ಅಂತೂ ಇಂತೂ ಟಿಸಿಹೆಚ್ ಮಾಡಿಸಿದ್ದರು...  ಇನ್ನೂ ಕೆಲಸ ಸಿಗದೆ ಅಲೆಯುತ್ತಿದ್ದ  ಮುನಿರಾಜ್ ಗೆ ನಮ್ಮ ಸ್ಕೂಲಲ್ಲೇ ಕೆಲಸ ಸಿಕ್ಕುವಂತೆ ಮಾಡಿದ್ದರು ಅಪ್ಪ.

            ನಮ್ಮದು ಸರ್ಕಾರಿ ಕನ್ನಡ ಶಾಲೆ, ನಮ್ಮ ಊರಲ್ಲಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಇರಲಿಲ್ಲ ಆಗ,  ಅಣ್ಣಂದಿರು  ಬೆಂಗಳೂರಿನಲ್ಲಿ ಕಲಿಯುತ್ತಿದ್ದರಾದರೂ ನಾನು ತುಂಬಾ ಚಿಕ್ಕವಳಾದ್ದರಿಂದ ನಾನು ಊರಲ್ಲೇ ಇದ್ದೆ, ಅಲ್ಲದೆ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿಯೇ ಆಗಬೇಕೆಂಬುದು ನನ್ನ ಅಪ್ಪನ ನಿಲುವು, ಭಾಷೆಯ ಮೇಲೆ ಹಿಡಿತ ಸಾಧಿಸಬೇಕಂದ್ರೆ ಅದರ ಮೇಲೆ ಆಳ ಅಧ್ಯಯನ ಬೇಕು, ಅದನ್ನು ಚಿಕ್ಕಂದಿನಿಂದಲೇ ಕಲಿಯಬೇಕೆಂಬುದು ನನ್ನಪ್ಪನ ವಾದ.... ಹಾಗಾಗಿ  ಕನ್ನಡ ಮಾದ್ಯಮದಲ್ಲಿಯೇ ಅಭ್ಯಾಸ.  ಅಲ್ಲದೆ ಉತ್ತಮ ಶಿಕ್ಷಕರು, ಒಳ್ಳೆಯ ಆಡಳಿತ ಮಂಡಳಿ ಇದ್ದ ನಮ್ಮೂರ ಶಾಲೆ ಸುತ್ತ ಮುತ್ತಲ ಊರಿಗೆಲ್ಲ ಹೆಸರುವಾಸಿ, ಅಕ್ಕಪಕ್ಕದ ಊರಿನವರೂ ಕೂಡ ನಮ್ಮ ಸ್ಕೂಲ್ಗೆ ಬರ್ತಾಯಿದ್ರು. ನಾನು ಆಗಿನ್ನೂ ಮೂರನೆ  ಕ್ಲಾಸ್ ಇರಬಹುದು,  5 ನೇ ತರಗತಿಯಿಂದ ಇಂಗ್ಲಿಷ್, 6ನೇ ಯರಗತಿಯಿಂದ ಹಿಂದಿ ಅಭ್ಯಾಸ ಇದ್ದ ಸಮಯ,  ಹಾಗಾಗಿ ಕನ್ನಡ ಬಿಟ್ಟರೆ ಬೇರೆ ಭಾಷೆ ಇಲ್ಲ.  ಸ್ಲೇಟ್ ಬಿಟ್ಟರೆ ನೋಟ್ಬುಕ್ಸ್ ಪರಿಚಯ ಇಲ್ಲ.  ಏನೇ ಹೊಂವರ್ಕ್ ಕೊಟ್ಟರೂ ಸ್ಲೇಟ್ನಲ್ಲೇ ಬರೀಬೇಕಿತ್ತು.
ನನ್ನ.ಅಣ್ಣಂದಿರು ಕಾಲೇಜ್ ಅಬ್ಯಾಸ ಮುಗಿಸಿ ಕೆಲಸ ಹಿಡಿದಿದ್ದರು, ಅಕ್ಕ ಕಾಲೇಜ್ ಓದ್ತಾ ಇದ್ದರು,  ಅಣ್ಣಂದಿರು ಓದಿನಲ್ಲಿ ಮುಂದು ಹಾಗೂ ತುಂಬಾ ಅಚ್ಚುಕಟ್ಟು,  ಯಾವತ್ತೂ ಯಾವುದೇ ರಿಮಾರ್ಕ್ಸ್ ಇಲ್ಲದೆ ವಿದ್ಯಾಭ್ಯಾಸ ಮುಗಿಸಿದ್ದರು...  ಆ ನಿಟ್ಟಿನಲ್ಲಿ ನನಗೂ ಮಾರ್ಗದರ್ಶನ ಮಾಡ್ತಾ.... ಕೆಲವೇ ಸಬ್ಜೆಕ್ಟ್ ಗಳಿದ್ದರೂ... ಸ್ಲೇಟ್ನಲ್ಲೇ ಬರೆಯಬೇಕಾಗಿದ್ದರೂ...ಸಹ ನೋಟ್ಬುಕ್ಸ್ ನಲ್ಲಿ ನೋಟ್ಸ್ ಮಾಡುವ ಅಭ್ಯಾಸ ಮಾಡಿಸಿದ್ದರು...  ಅಲ್ಲದೇ ಮನೆಯಲ್ಲಿಯೇ ಇಂಗ್ಲಿಷ್ ಅಭ್ಯಾಸ ಕೂಡಾ ಆಗ್ತಿತ್ತು.. ಅಣ್ಣಂದಿರು ಅಕ್ಕ ಮನೆಗೆ ಬಂದಾಗ... ಇಲ್ಲವೇ ಅಮ್ಮ, ಅಪ್ಪ ಬಿಡುವಿದ್ದಾಗ ನನಗೆ ಇಂಗ್ಲೀಷ್ ಹೇಳಿಕೊಡ್ತಾಯಿದ್ರು...  ಆಗ ಕನ್ನಡ ಮೀಡಿಯಂ ಶಾಲೆಯಲ್ಲಿ 5 ನೆ ತರಗತಿಯಿಂದ ಇಂಗ್ಲಿಷ್ ಅಭ್ಯಾಸ ಇದ್ರೂ... ನಾನು ಮೂರನೇ ತರಗತಿಗೇ .. 7ನೆ ತರಗತಿಯ ಪುಸ್ತಕವನ್ನು ಓದುವಷ್ಟು... ಸುಮಾರಾಗಿ ಅರ್ಥ ಮಾಡಿಕೊಳ್ಳುವಷ್ಟು ಕಲಿತಿದ್ದೆ.. ಹಾಗಾಗಿ ನಾನು ಆ ಸ್ಕೂಲ್ನಲ್ಲಿ ಮಾದರಿ ವಿದ್ಯಾರ್ಥಿನಿ...  ಯಾವುದೇ ಕ್ಲಾಸ್ನ ಯಾರೇ ವಿದ್ಯಾರ್ಥಿಗೆ ಯಾವುದೇ ಇಂಗ್ಲೀಷ್ ಪದದ ಸ್ಪೆಲ್ಲಿಂಗ್ ಗೊತ್ತಿಲ್ಲಅಂದ್ರೇ... ನನ್ನ ಕ್ಲಾಸಿಂದ ನನ್ನನ್ನ ಕರೆಸಿ ಸ್ಪೆಲ್ಲಿಂಗ್ ಕೇಳ್ತಾಯಿದ್ರು.. ನಾನೇನಾದ್ರೂ ಸರಿಯಾಗಿ ಹೇಳ್ದೆ ಅಂದ್ರೆ.. ತಪ್ಪಾಗಿ ಹೇಳಿದ್ದ ಸ್ಟೂಡೆಂಟ್ ಗೆ  ಅವರು ಯಾರೇ ಆಗಿದ್ರೂ.. ಎಷ್ಟೇ ದೊಡ್ಡವರಾಗಿದ್ರೂ ನನ್ನ ಕೈಯಿಂದ ಕಪಾಳ ಮೋಕ್ಷ...
      ಒಮ್ಮೆ ಸ್ಕೂಲಲ್ಲಿ ಇನ್ಸ್ಪೆಕ್ಷನ್ ಇತ್ತು .. ನಮ್ಮ ಕ್ಲಾಸ್ ರೂಮ್ನಲ್ಲಿ ಮುನಿರಾಜ್ ಸರ್ ಕ್ಲಾಸ್ ತೊಗೊಂಡು ಪಾಠ ಮಾಡ್ತಾಯಿದ್ರು... ಆಗ ಇನ್ಸ್ಪೆಕ್ಟರ್ ಬಂದ್ರು... ಯಾರನ್ನೇ ಪ್ರಶ್ನೆ ಕೇಳಿದ್ರೂ ಕೇಳಿದ್ದ ಪ್ರಶ್ನೆಗಳಿಗೆಲ್ಲಾ ಉತ್ತರ ನಾನೇ ಹೇಳ್ತಾಇದ್ದೆ.. ಇನ್ಸ್ಪೆಕ್ಟರ್... ಬೆರೆಯವರೂ ಹೇಳಲಿ ಸುಮ್ಮನಿರಮ್ಮ ಅಂತ ಹೇಳಿದ್ರು... ಆಗ ಮುನಿರಾಜು... ಹ ಸರ್... ಈ ಹುಡುಗಿ ಒಂಥರಾ ಅಧಿಕ ಪ್ರಸಂಗಿ... ಎಲ್ಲಾ ಗೊತ್ತು  ಅನ್ನುವ ಅಹಂಕಾರ... ಬೇರೆಯವರು ಕಲಿಯೋಕ್ಕೆ ಬಿಡಲ್ಲ ಅಂತ ನನ್ನ ಮೇಲೆ.ದೂರು ಹೇಳಿದ್ರು.. ಇನ್ಸ್ಪೆಕ್ಟರ್ ನನ್ನ ಮುಖವನ್ನೊಮ್ಮೆ ಅವರನ್ನೊಮ್ಮೆ ನೋಡಿ ನಕ್ಕು  ಇಂಥಾ ಸ್ಟುಡೆಂಟ್ ಇದ್ದಾರೆ ಅಂಥ ಖುಷಿ ಪಡಿ...ಅಂತ ಅಂದದ್ದಕ್ಕೆ... ಹ  ಸರ್, ಮುಂದಿನ ಕ್ಲಾಸ್ಗೆ ಅನುಕೂಲ ಆಗ್ಲಿ ಅಂತ ಇಂಗ್ಲೀಷ್ ಎಲ್ಲಾ ಹೇಳಿ ಕೊಡ್ತಾಇದ್ದೀನಿ  ಸರ್, ಶಿಸ್ತು ಬರಲಿ, ಎಲ್ಲಾ ಪ್ರಶ್ನೆಗಳಿಗೂ ಉತ್ತರ ಹುಡುಕುವ ಜಾಣ್ಮೆ ಬರಲಿ ಅಂತ ನೋಟ್ಸ್ ಬರಿಸ್ತಾಇದ್ದೀನಿ ...  ಎಲ್ಲಿ  ಶೈಲಾ ನಿನ್ನ ನೋಟ್ಸ್ ತೊಗೊಂಡು ಬಾ.. ಅಂತ ಅಂದ್ರು.. ನಾನು ನನ್ನ ನೋಟ್ಸ್ನೆಲ್ಲಾ  ತೋರಿಸಿದ್ದೆ..  ಆಗ ಗುಡ್  ಒಳ್ಳೆ ಕೆಲಸ ಮಾಡ್ತಾ ಇದ್ದೀರಾ.. ಎಲ್ಲಾ ಮಕ್ಕಳನ್ನೂ ಹೀಗೇ ಪ್ರಿಪೇರ್ ಮಾಡಿ.. ಎಲ್ಲಿ  ಬೆರೆಯವರದ್ದೂ  ನೋಟ್ಸ್ ತೋರಿಸಿ ಅಂದಾಗ..  ಏನೋ ಹೇಳಿ ಸುಮ್ಮನಾದರು... ಆಗ ನಾನು ಇಲ್ಲಾ ಸಾರ್... ಇದು ನಮ್ಮ್ ಅಣ್ಣ ಬರೆಸಿದ್ದು.. ನಮ್ಮ ಟೀಚರ್ ಬರೆಸಿದ್ದು ಅಲ್ಲಾ.. ಅಂತ ನಿಜವನ್ನೇ ನುಡಿದಿದ್ದೆ... ಅಲ್ಲಿಗೆ ಅವರಿಗೆ ಅವಮಾನ ಆಯ್ತು... ಅಲ್ಲದೇ  .. 6 ನೇ ತರಗತಿಯಲ್ಲಿ ಮುನಿರಾಜ್ ಸರ್ ಇಂಗ್ಲೀಷ್ ಹೇಳಿಕೊಡೋವಾಗ ಆನೆ ಯ ಸ್ಪೆಲ್ಲಿಂಗ್ ಅನ್ನು ( elifent ) ಅಂತ ಬರೆದಿದ್ದರು.. ಅದನ್ನು ನೋಡಿದ ಇನ್ಸ್ಪೆಕ್ಟರ್ ನನ್ನನೇ  ಕರೆಸಿ... ಬೋರ್ಡ್ ಮೇಲೆ ಬರೆದಿದ್ದ  elifent ಸ್ಪೆಲ್ಲಿಂಗ್ ಕರೆಕ್ಟಾಗಿದೆ ಅಲ್ವಾ  ಅಂದ್ರು... ನಾನು ಇಲ್ಲ ಸಾರ್ ಇದು ತಪ್ಪು...  elephant   ಸರಿ.. ಅಂತ ಹೇಳಿದ್ದೆ... ಇದೂ ಕೂಡ ಅವರಿಗೆ ಅವಮಾನವಾದಂತಾಗಿತ್ತು..    ಆ ಕೋಪ ನನ್ನ.ಮೇಲಿತ್ತು...   ನನ್ನ ಕ್ಲಾಸ್ಗೆ ಬಂದವರೇ...  ಏನೋ ಬರೆಯುತ್ತಿದ್ದ ನನನ್ನು  ಗಲಾಟೆ ಮಾಡ್ತಾ ಇದ್ದೀನಿ ಅಂತ ಕೋಲು ತೊಗೊಂಡು ಬೆನ್ನಿನ ಮೇಲೆ, ಅಂಗೈಗೆ ಬಾಸುಂಡೆ ಬರೋ ಹಾಗೆ ಹೊಡೆದೇ ಬಿಟ್ಟರು... ಏನೂ ತಪ್ಪು ಮಾಡದ ನನಗೆ ಬರೆ ಬೀಳುವಷ್ಟು ಹೊಡೆತ.... ಮನೆಗೆ ಬಂದೊಡನೇ ಕೈಕಾಲು ತೊಳೆಯಲಾರದೆ ನೋವಿಗೆ, ಉರಿಗೆ ಹಿಂಸೆ ಪಡುತ್ತಿದ್ದ ನನ್ನನ್ನು ನೋಡಿ ಕಾರಣ ಕೇಳಿ ಸಿಡಿಮಿಡಿಗೊಂಡಿದ್ದರು ಅಪ್ಪ... ತಕ್ಷಣವೇ ಮುನಿರಾಜನನ್ನ ಹುಡುಕಿ ನಡು ಬೀದಿಯಲ್ಲೇ ತರಾಟೆಗೆ ತೆಗೆದುಕೊಂಡಿದ್ದರು...
ಮೊದಲಿಗೆ ನನ್ನದೇ ತಪ್ಪು ಅಂತ ವಾದಿಸ್ತಿದ್ದ ಮುನಿರಾಜ್... ನಿಮ್ಮ ಮಗಳಿಗೆ ತುಂಬಾ ಅಹಂಕಾರ, ಫ್ರೆಂಡ್ಸ್ ನೆಲ್ಲಾ ಕೀಳಾಗಿ ನೋಡ್ತಾಳೆ, ಟೀಚರ್ಸ್ಗೆ ಗೌರವ ಕೊಡೋಲ್ಲ,  ಕ್ಲಾಸ್ ರೂಮ್ನಲ್ಲಿ ತುಂಬಾ ಗಲಾಟೆ... ಅವಳು ಹೇಳಿದ್ದೇ ನಡೀಬೇಕು... ಅಂತ ಜೋರು ಮಾಡ್ತಾಳೆ.. ಅದಕ್ಕೇ ಹೊಡೆದದ್ದು...  ಅಂತ ಸಮರ್ಥಿಸಿಕೊಂಡರು...  ನನ್ನಪ್ಪ.. ನನ್ನ ಮಗಳು ಏನು ಅಂತ ಗೊತ್ತು,  ಅವಳ ಬಗ್ಗೆ ನಿನ್ನಿಂದ ತಿಳೀಬೇಕಿಲ್ಲ...  ನೆಟ್ಟಗೆ ಪಾಠ ಹೇಳ್ಕೊಡೋಕ್ಕೆ ಬರಲ್ಲ... ನನ್ನ ಮಗಳನ್ನ ಹೊಡೀತೀಯಾ...  ಇನ್ನೊಂದು ಸಾರಿ ನನ್ನ ಮಗಳಿಗೆ ನಿನ್ನಿಂದ ಹೊಡೆತ ಏನಾದ್ರೂ ಬಿದ್ರೆ ನಿನಗಿದೆ ಮಾರೀಹಬ್ಬ...
ಅವಳು ತಪ್ಪು ಮಾಡಿದ್ರೆ ಹೊಡಿ, ಬಯ್ಯಿ  ಬೇಡ ಅನ್ನೋಲ್ಲ...  ಏನೂ ತಪ್ಪು ಮಾಡದೆ ಅವಳಿಗೆ ಶಿಕ್ಷೆ ಕೊಟ್ಟೆಯೋ... ನಾನು ಕೆಟ್ಟವನಾಗಬೇಕಾಗುತ್ತೆ...  ನನ್ನ ಮಗಳು ಯಾರೂ ಇಲ್ಲದ ತಬ್ಬಲಿ ಅಲ್ಲ...ನನ್ನ ಮಗಳು  ನಿನ್ನಿಂದ ಹೊಡೆತ ತಿನ್ನೋಕೆ .. ಹುಷಾರ್  ಎಂದಿದ್ರು...
       ಸ್ಕೂಲ್ನಲ್ಲೂ ಮುನಿರಾಜ್ ಸರ್ ಮೇಲೆ ಒಳ್ಳೆ ಅಭಿಪ್ರಾಯ ಇರಲಿಲ್ಲ...  ನನ್ನನ್ನು ಹೊಡೆದ ಘಟನೆ ನಡೆದಮೇಲಂತೂ  ಎಲ್ಲಾ ಟೀಚರ್ಸ್ಗೂ ಅವರ ಮೇಲೆ ತುಂಬಾ ಸಿಟ್ಟು.... ಅವರು ಪರ್ಮನೆಂಟ್ ಟೀಚರ್ ಕೂಡ ಅಲ್ಲದ್ದರಿಂದ ಅವರನ್ನು ಕೆಲಸದಿಂದ ತೆಗೆಯಲು ಯೋಚಿಸಿದ್ರು... ಆದರೆ ನನ್ನ ತಂದೆಯೇ  ಅವರನ್ನ ಕೆಲಸಕ್ಕೆ ಸೇರಿಸಿದ್ದರಿಂದ ... ತೆಗೆಯಲೂ ಹಿಂದು ಮುಂದು ನೋಡ್ತಿದ್ರು...  
ಆದ್ರೆ ನನ್ನಪ್ಪ... ಮುನಿರಾಜ್ ಸರ್ ಮೇಲೆ ಹಗೆ  ಸಾಧಿಸದೆ... ಅವರನ್ನು ಅಲ್ಲೇ ಕೆಲಸದಲ್ಲಿ ಉಳಿಯುವಂತೆ ಮಾಡಿದ್ರು...  ನಂತರ ಅವರಿಗೆ ಕೆಲಸದಲ್ಲಿ ಪರ್ಮನೆಂಟ್ ಆಯ್ತು... ಅದು ಬೇರೆ ವಿಷಯ...

        ಮುನಿರಾಜ್ ಸರ್ ಅವರನ್ನಷ್ಟೇ ಅಲ್ಲ...ತನಗೆ ನೋವಿತ್ತವರನ್ನೂ,  ಹಗೆ  ಸಾಧಿಸಿದವರನ್ನೂ, ತೊಂದರೆ ಕೊಟ್ಟವರನ್ನೂ,  ಬೆನ್ನಿಗೇ ಚೂರಿ ಹಾಕಿದವರನ್ನೂ... ನನ್ನಪ್ಪ ಕ್ಷಮಿಸುತ್ತಲೇ ಸಾಗುತ್ತಿದ್ರು...  
ನನ್ನಪ್ಪನ ಸಹಾಯದಿಂದ ವಿದ್ಯಾವಂತರಾದವರೆಷ್ಟೋ... ಆ ಲಿಸ್ಟ್ನಲ್ಲಿ ಪ್ರಖ್ಯಾತ ಲಾಯರ್, ಡಾಕ್ಟರ್ ಗಳೂ ಇದ್ದಾರೆ,  ಕಷ್ಟ ಅಂತ ಬಂದವರಿಗೆ ತನ್ನಲ್ಲಿದ್ದದ್ದನ್ನ ಹಿಂದೆ ಮುಂದೆ ಯೋಚಿಸದೆ ಕೊಡ್ತಾಯಿದ್ರು...  ಸ್ವತಃ ಜ್ಯೋತಿಷಿಯೂ ಆದ್ದರಿಂದ,  ಅದೆಷ್ಟೋ ಜನರ ಸಮಸ್ಯೆಯನ್ನ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿವಾರಿಸಿದ್ದಾರೆ... ಬಾಲಗ್ರಹ ಯಂತ್ರ ಬರೆದು ಕೊಡುತ್ತಿದ್ದ ನನ್ನ ಅಪ್ಪ... ನೂರಾರು.ಮಕ್ಕಳ ಪ್ರಾಣವನ್ನ ಉಳಿಸಿದ್ದಾರೆ...  ಯಾರದೇ ಮಕ್ಕಳಿಗೆ ತುಂಬಾ ಹುಷಾರಿಲ್ಲದಿದ್ದಾಗ  ಅರ್ಧ ರಾತ್ರಿಯಲ್ಲಿ ಬಂದು ಕರೆದರೂ... ಅವರಿಗೆ ಸ್ಪಂಧಿಸಿ ಮಕ್ಕಳ ಪ್ರಾಣ ಉಳಿಸಿದ್ದಾರೆ..  ತುಂಬಾ ಜನರ ಪ್ರೀತಿಗೆ ಪಾತ್ರರಾಗಿದ್ದ ಅಪ್ಪ.... ನಮ್ಮನ್ನೆಲ್ಲಾ ಬಿಟ್ಟುಹೋಗಿ ಇಂದಿಗೆ ಒಂದು ವರ್ಷವಾಯ್ತುಯ್ತು...😔  ನನ್ನ ಮಗಳೇನು ತಬ್ಬಲಿ ಅಂದ್ಕೊಂಡ್ಯಾ ಅಂತ ಅವತ್ತು ಸರ್ ಜೊತೆ ಜಗಳವಾಡಿದ್ದ ಅಪ್ಪ... ಇಂದು ನಮ್ಮನ್ನು ತಬ್ಬಲಿ ಮಾಡಿ ಹೋಗಿದ್ದಾರೆ😔  ಅಗಾಧ ಪ್ರೀತಿಯನ್ನು ಧಾರೆ ಎರೆದು ಬೆಳೆಸಿದ್ದ ನನ್ನಪ್ಪ  ಪಂಚ ಭೂತಗಳಲ್ಲಿ ಲೀನವಾಗಿ ಒಂದು ವರ್ಷ ಕಳೆಯಿತು😢  
ಡೇಟ್ ಪ್ರಕಾರ ನವೆಂಬರ್ 26 ಕ್ಕೆ ಒಂದು ವರ್ಷವಾದ್ರೂ  ಪಂಚಾಂಗದ ಪ್ರಕಾರ  ಕಾರ್ತಿಕ ಮಾಸದ ಕೊನೆ ದಿನವಾದ ಅಮಾವಾಸ್ಯೆಯದಿನಕ್ಕೆ ಒಂದು ವರ್ಷ..
ಆಗಲೇ ಎಷ್ಟು ಬೇಗ ವರ್ಷ ಆಗೋಯ್ತು ಪಪ್ಪ.😢
ಪಪ್ಪಾ... ನೀವಿಲ್ಲದಿದ್ದರೂ... ನಿಮ್ಮ ನೆನಪಲ್ಲೇ ಸದಾ ಕಾಲ ಕಳೆಯುತ್ತಿರುವ.... ಪ್ರತಿಕ್ಷಣ  ಮನಮಿಡಿಯುವ ನಿಮ್ಮ ನೆನಪನ್ನೇ ಮೆಲುಕು ಹಾಕುತ್ತಾ ದಿನ ದೂಡುತ್ತಿದ್ದೀನಿ....
    I miss you pappa😢😢

                                           ಶೈಲೂ....

#ತಬ್ಬಲಿ_ನಾನಾದೆ😢😢

ಇಂದು ನಾನಾದೆ ತಬ್ಬಲಿ😢
ಅಪ್ಪಾ ಎಂದು ಇನ್ನಾರನ್ನು ತಬ್ಬಲಿ?
ಉಂಡುಹೋಗು ಮಗಳೇ
ಎಂದೇಳುವರಿನ್ನಾರು?
ಮನದಾಳದಳಲನ್ನು  ಕೇಳುವರಿನ್ನಾರು?
ನೋವಿನಲಳಲ್ಲಿ ತಲೆನೇವರಿಸಿ 
ಸಂತೈಸುವರಿನ್ನಾರು?
ನಲಿವಿನ ವೇಳೆಯಲ್ಲಿ 
ಬೊಚ್ಚುಬಾಯಗಿಲಿಸಿ 
ಖುಷಿಪಡುವರಿನ್ನಾರು?
ಸಮಸ್ಯೆಗಳ ಸುಳಿಯಲ್ಲಿ
ಸಲಹೆ ನೀಡುವರಿನ್ನಾರು?
ಸಂತಸವ ಇಮ್ಮಡಿಸಿ ಹಂಚಿ
ನಗುವು ತುಂಬುವರಾರು?
ಬಿದ್ದುಹೋಯಿತು ಏಕೆ
ತವರ ಆಧಾರಸ್ಥ0ಭ.?
ಅಪ್ಪ ನೀವಾದಿರೇಕೆ
ಚಿತ್ರಪಟದೊಳಗಿನ ಬಿಂಬ?
ತೀರಿಸಲಿ ನಾ ಹೇಗೆ ನಿಮ್ಮ
ಪ್ರೀತಿವಾತ್ಸಲ್ಯದ ಋಣವ
ನನ್ನಮ್ಮ ನೀ ಎಂದು ನಲಿದು
 ತಬ್ಬಿದ ಅಪ್ಯಾಯತೆ ಸುಖವ
ಹುಟ್ಟಿಬನ್ನಿ ಮತ್ತೆ ನನ್ನ
ಮನೆಯಂಗಳದೆ ಮಗುವಾಗಿ
ರಾಶಿ ರಾಶಿ ಪ್ರೀತಿಯಿತ್ತು
ಕಾಯುವೆ ನನ್ನ ಕಣ್ಣಾಗಿ

             ಶೈಲೂ.....

[26/11/2022, 4:00 pm] Dr. B. N. Shylaja Ramesh: #ಸೆಡೋಕಾ

#ನಿತ್ಯೋತ್ಸವ

ನಿತ್ಯ ಉತ್ಸವ
ಭುವನೇಶ್ವರಿಯದು
ಕನ್ನಡದಂಗಳದಿ..!
ಕಾವ್ಯದುತ್ಸವ
ಕನ್ನಡಾಂಬೆ ನಿನಗೆ
ಕವಿಗಳಂಗಳದಿ..!

#ಭಾರತ

ತಾಯೆ ಭಾರತಿ
ನಿನ್ನ ಮಡಿಲೊಳಗೆ
ಕಂದಮ್ಮಗಳು ನಾವು
ಮನ್ನಿಸಿ ಬಿಡು
ಅರಿಯದೆ ಮಾಡಿದ
ತಪ್ಪೊಪ್ಪುಗಳನ್ನೆಲ್ಲ..!

       ಡಾ: B.N ಶೈಲಜಾ ರಮೇಶ್
[27/11/2022, 4:14 pm] Dr. B. N. Shylaja Ramesh: #ಚೋಕಾ_ರಚನೆ

#ವಿನಂತಿ

ದೇವಾ.. ನಿನ್ನಲಿ
ವಿನಂತಿಯಿದೆಯೊಂದು
ಸಲಹೆಲ್ಲರ
ಕಷ್ಟವು ಬಾರದಂತೆ
ಸಹನೆಯಲಿ
ವ್ಯವಹರಿಸುವಂತೆ
ದ್ವೇಷವೆಲ್ಲವ
ಮರೆತು, ಬಾಳುವಂತೆ
ಸರಿದಾರಿಲಿ ನಡೆಸು

      ಶೈಲಜಾ ರಮೇಶ್
[1/12/2022, 4:09 pm] Dr. B. N. Shylaja Ramesh: #ಓ_ಹೆಣ್ಣೀ_ನೀ_ಎಷ್ಟು_ಮೌನಿ 
ಈಗೀಗ ಮೌನವೇ ಹಿತವೆನಿಸುತ್ತಿದೆ
ಮಾತನಾಡಿ ನಿಷ್ಠುರವಾಗುವ ಬದಲು
ಏಕೋ ಏಕಾಂತ ಬೇಕೆಂದೆನಿಸುತ್ತಿದೆ
ಮೌನಕ್ಕೆ ವ್ಯಾಖ್ಯಾನ ಬರೆವ ಮೊದಲು

ಪ್ರತಿ ಪದದಲ್ಲೂ ತಪ್ಪನ್ನಷ್ಟೇ ಹುಡುಕಿ
ವಾಖ್ಯಾರ್ಥಗಳನು ತಿರುಚಿ ಮುರುಚಿ
ವಿಶೇಷಾರ್ಥಗಳನು ಕಲ್ಪಿಸಿ ಮೊಟುಕಿ
ಮನ ಕದಡುವುದರಲ್ಲಿಹುದೇ ರುಚಿ.?

ಮನದ ಭಾವಗಳನ್ನೆಲ್ಲ ಬದಿಗೆ ಸರಿಸಿ
ಕಾಣದಂತೆ ಉಕ್ಕಿಬರುವ ಕಣ್ಣೀರಹನಿ
ಮನದ ಆಸೆ ಆಕಾಂಕ್ಷೆಗಳನ್ನೆಲ್ಲ ದಹಿಸಿ
ಮಾತೆಲ್ಲವ ಮರೆತು ನಾನಾದೆ ಮೌನಿ.!

        ಶೈಲಜಾ ರಮೇಶ್
[3/12/2022, 12:55 pm] Dr. B. N. Shylaja Ramesh: #ಪ್ರೇಮ_ಕೊಡಪಾನ 
ಏನೋ ಕಸಿವಿಸಿ ಮನದಲಿ
ಕಳೆಯೇ ಇಲ್ಲ ನಗುವಲಿ
ಯಾವುದರಲ್ಲೂ ಆಸಕ್ತಿಯಿಲ್ಲ
ಇರುಸುಮುರುಸು ಬದುಕೆಲ್ಲ

ಏನೋ ಕಳೆದುಕೊಂಡ ಭಾವ
ಮೌನದ್ದೇ ಹೆಚ್ಚಿನ ಪ್ರಭಾವ
ಮಂಕು ಕವಿದಂತೇಕೋ ಬುದ್ಧಿಗೆ
ಸುಮ್ಮನೆ ಜಾರುತ್ತೇನೆ ನಿದ್ದೆಗೆ  

ನಿದ್ದೆಯಲ್ಲಿ ಬಣ್ಣ ಬಣ್ಣದ ಕನಸು
ಕಂಡು ಸುಂದರಿಯ ಸೊಗಸು
ಮನದಲೆಂಥದೋ ಆಹ್ಲಾದ
ಏನಂದ ಆ ಎಳೆನಗುವ ಸ್ವಾದ .!

ರೆಕ್ಕೆ ಬಂತು ಪ್ರೇಮದ ಕನಸಿಗೆ
ಕಚಗುಳಿಯಿಟ್ಟಂತೆ ಮನಸಿಗೆ
ಗಿರಕಿಹೊಡೆಯುತ್ತಿದೆ ಅವಳ ಸುತ್ತ
ಜಾರಿತೇ ಮನಸು ಪ್ರೀತಿಯತ್ತ..?

ತಣಿಸಬೇಕೀ ಪ್ರೇಮದ ದಾಹ
ಹರಿಸು ಸಖೀ ಪ್ರೀತಿ  ಪ್ರವಾಹ 
ಸುರಿಸು ನೀ ಪ್ರೇಮಕೊಡಪಾನ 
ತಣಿಸೆನ್ನ ನೀಡುತ್ತ  ಸುಧಾಪಾನ 
   
ಡಾ:ಶೈಲಜಾ ರಾಮೇಶ್
[4/12/2022, 11:29 am] Dr. B. N. Shylaja Ramesh: ಪರೀಕ್ಷೆ
******

ಕಷ್ಟಗಳಿಗೆ ಎದೆಯೊಡ್ಡಿ
ಸಂಕಷ್ಟಗಳ ಸರಮಾಲೆಗಳನ್ನೆದುರಿಸಿ
ಸರಿದಾರಿಯಲಿ ನಡೆದರೂ
ಚುಚ್ಚು ನುಡಿಗಳಿಗೆ ಬೆಚ್ಚಿ
ತಲೆಬಾಗುವವರು ಹೆಜ್ಜೆಜ್ಜೆಗೂ
ಅಗ್ನಿಪರೀಕ್ಷೆ ಗೆ ಗುರಿಯಾಗಿ
ನೊಂದು ಬೆಂದು ಕೊನೆಗೆ ಹೆಸರಾಗುಳಿವರು...!!
ರಾಮಾಯಣದ ಕಥನದಲಿ
ವನವಾಸವನನುಭವಿಸಿದ್ದು,
ಪತಿ ಪರಾಯಣೆಯಾದರೂ
ಅಗ್ನಿಪರೀಕ್ಷೆಯನ್ನೆದುರಿಸಿದ್ದು
ಸಾಧ್ವೀ ಮಣಿ  ಮಾತೇ ಸೀತೆ...!!
ದುಷ್ಟ ಕೈಕೆಯಿಯೂ ಅಲ್ಲ
ಕನಿಷ್ಠ ಮಂಥರೆಯೂ ಅಲ್ಲ..
ಮಹಾಭಾರತದ ಕರ್ಮಭೂಮಿಯಲಿ
ಧರ್ಮಪರಾಯಣ ಪಾಂಡವರಿಗಷ್ಟೇ ಕಷ್ಟ
ವನವಾಸ ಅಜ್ಞಾತಗಳನನುಭವಿಸಿದರೂ
ತೋಲಗಲಿಲ್ಲ ಅನಿಷ್ಟ..!!
ನ್ಯಾಯನೀತಿಯ ರಾಜ ನೀತಿಯನುನಸರಿಸಿದ 
ವಿದುರಗೆ ಬಡತನದ ಕಷ್ಟ..
ದೇವದೇವನಿಗೂ ತಪ್ಪಲಿಲ್ಲ ವಿಧಿ
ಶ್ರೀರಾಮರಿಗೆ ವನವಾಸವಾದರೆ
ಶ್ರೀಕೃಷ್ಣ ನಿಗೆ ಮಾಯಾವಿ ಮೊಸಗಾರನೆಂಬ ಹಣೆಪಟ್ಟಿ
ಮುಕ್ಕಣ್ಣನಂತೂ ಹಾಲಾಹಲವನೇ ಕುಡಿದ..!!
ಮೂಲೋಕದೊಡೆಯರೇ 
ಕಷ್ಟದಿ ನಲುಗಿದ್ದಾಗ,,, ಮನುಜ..
ನಿನ್ನ ಕಷ್ಟವದು ಹೆಚ್ಚೇನು..?
ಸರ್ವರಿಗೂ  ಉಂಟು ಪರೀಕ್ಷೆ
ಸರಿದಾರಿಯಲಿ ನಡೆದು, ಇರಲಿ
ಉತ್ತೀರ್ಣನಾಗುವ  ನಿರೀಕ್ಷೆ
ಬೇಡ ಪ್ರತಿಪಲಾಪೇಕ್ಷೆ
ಆಗಲೇ ನೀಡುವ  ಆ ದೇವ ಸುರಕ್ಷೆ...

             ಶೈಲೂ.......
[4/12/2022, 1:00 pm] Dr. B. N. Shylaja Ramesh: ನನ್ನ ಆರಾಧ್ಯ ದೈವ ಶ್ರೀಕೃಷ್ಣನನ್ನು ನೆನೆದು ಕಣ್ಮುಚ್ಚಿದಾಗ ಮನದಲ್ಲಿ ಮೂಡಿದ  ಸಾಲುಗಳಿವು😊

#ಯಾವುದೀ_ರೂಪ

ಯಾಕೆ ಕಾಡುತಿದೆ
ಸುಮ್ಮನೆ ನನ್ನನು
ಯಾವುದು ಈ ರೂಪ
ಒಂದೇ ಸಮನೆ
ಮೂಡಿದೆ ಮನದಲಿ
ಅದು ತೀರದ ತಾಪ....

ಯಾವುದೋ ರಾಗವ
ನುಡಿಸಿ ಹಾಡುತಿದೆ
ಕೈಯಲ್ಲಿನ  ಕೊಳಲು
ಕರೆದಿದೆ ತಣ್ಣನೆ
ನಸುನಗು ಬೆರೆಸುತ
ಬಳಿ ಸಾಗುತ ಬರಲು...

ಹುಣ್ಣಿಮೆ ರಾತ್ರಿಯ
ಬೆಳದಿಂಗಳಲಿ
ತುಂಬಿದೆ ನೀರವ ಶಾಂತಿ
ಮನವೋ ಹಾಡಿದೆ
ಒಲವಿನ ರಾಗವ
ತುಂಬುತ ಪ್ರೇಮದ ಕಾಂತಿ...

ಕಣ್ಮುಚ್ಚಿದರೂ
ತೇಲುತ ಬರುತಿದೆ
ಮನಸಿನ ಒಳಸುಳಿಯಲ್ಲಿ
ಅಚ್ಚೋತ್ತಿದೆ ಎದೆಯಲ್ಲಿ
ಬೆಳಗುವ ಪ್ರಭೆಯು
ಮುಳುಗಿದೆ  ಮನದಾಳದಲ್ಲಿ...

ಉಸಿರುಸಿರಿನಲು
ಬೆರೆತಿದೆ ಅವನ
ಕೃಷ್ಣನೇನ್ನುವ  ಹೆಸರು
ಹಸಿರು ತುಂಬಿದೆ
ಮನದಂಗಳದೆ
ಅವನೇ ನನ್ನುಸಿರು...

            ಶೈಲೂ......
[4/12/2022, 1:01 pm] Dr. B. N. Shylaja Ramesh: ಮುಕ್ಕೋಟಿ ದೇವತೆಗಳಲ್ಲಿ ಮಾನವರಿಗೆ ಅತೀ ಸುಲಭ ರೀತಿಯಲ್ಲಿ ಸಿಕ್ಕುವ ದೇವರೆಂದರೆ,  ಭಕ್ತಪರಾಧೀನ, ನನ್ನ ಮಾಧವ.! ಕೇವಲ ಭಕ್ತಿಯಿಂದ ಮಾಡುವ ನಾಮಸಂಕೀರ್ತನೆಯೊಂದೇ ಸಾಕು ಅವನನ್ನು ಒಲಿಸಿಕೊಳ್ಳಲು..! ಅಲ್ಲದೆ ಕೃಷ್ಣನನ್ನು ಯಾರು ಯಾವ್ಯಾವ ರೀತಿಯಲ್ಲಿ ಬೇಕೋ ಹಾಗೆಲ್ಲ ಭಾವಿಸಬಹುದು.  ಕೃಷ್ಣ ಮಗುವಾಗಿ, ಗೆಳೆಯನಾಗಿ, ಬಂಧುವಾಗಿ, ಸಖನಾಗಿ, ಎಲ್ಲರ ಪೊರೆವ ತಂದೆಯಾಗಿ, ಒಬ್ಬ ಮುಂದಾಳುವಾಗಿ, ದೇವರಾಗಿ ... ಯಾವ ಭಾವದಲ್ಲಿ ಕಲ್ಪಿಸಿದರೆ ಆಯಾ ಭಾವದಲ್ಲೇ  ಕಾಣ ಸಿಗುವ ಏಕೈಕ ದೈವ...! ಹಾಗಾಗಿಯೇ ಇರಬೇಕು, ಸಾಮಾನ್ಯವಾಗಿ ಎಲ್ಲರೂ ಕೃಷ್ಣನನ್ನು ಪೂಜಿಸುವುದು..! ಅತ್ಯಂತ ಜನಪ್ರಿಯ ಯೂನಿವರ್ಸಲ್ ದೇವರು ಅಂದ್ರೆ... ಅವನೇ.... #ಶ್ರೀಕೃಷ್ಣ.  ನಾನಂತೂ ಕೃಷ್ಣನನ್ನು ಈ ಎಲ್ಲಾ ಭಾವದಲ್ಲೂ ಆರಾಧಿಸುತ್ತೇನೆ😊
#ಜೈ_ಶ್ರೀ_ಕೃಷ್ಣ🙏

#ಬೇಡಿಕೆ

ಕಂದ ನೀನೆಂದು
ಮುದ್ದಾಡಿದಾಕ್ಷಣ
ಪುಟ್ಟ ಹೆಜ್ಜೆಯನಿಟ್ಟು
ಮುದ್ದುಗರೆವುತ ಬಂದು
ಮಡಿಲ ತುಂಬಿದ 
ಹಸುಮಗುವು ನೀನು.!

ಓರಗೆಯ ಗೆಳೆಯನೆಂದು
ಕೂಡಾಡಿ ನಲಿದೊಡೆ
ಅತೀವ ಆನಂದದ
ಕಡಲಲ್ಲಿ ಮುಳುಗಿಸಿ
ಅಮಿತೋತ್ಸಾಹ
ಬಾಳಲ್ಲಿ ತಂದವನು ನೀನು.!

ಬಂಧುವೆನ್ನುತ 
ನಿನ್ನ ಭಾವದಿಂ
ಅಪ್ಪಿದೊಡೆ, ಸಕಲ
ದುಗುಡದುಃಖ ಸರಿಸಿ
ಸುಖದ ನೆಲೆಯಲಿ
ತೇಲಾಡಿಸಿದವ ನೀನು.!

ಸಖ ನೀನೆಂದು
ಸಕಲವ ನಿನ್ನ
ಹೃದಯಪದ್ಮದೊಲಿರಿಸೆ
ಬಿಗಿದಪ್ಪಿ ಸಂತೈಸಿ
ಪ್ರೇಮಾಮೃತವ
ಧಾರೆಯೆರೆದವನು ನೀನು.!

ದೇವರದೇವ ನೀನೆಂದು
ಭಾವ ಭಕ್ತಿಯಲಿ ಮಿಂದು
ಅನವರತ ನಿನ್ನನ್ನೇ
ಆಸ್ಥೆಯಲಿ ಸ್ತುತಿಸುತ್ತ
ಶರಣಾಗತಳಾಗೆ
ಉದ್ಧರಿಸಿದವ ನೀನು.!

ಬೇಡದೆ ಎಲ್ಲವನಿತ್ತೆ
ಸಿರಿ ಸಂಪದವನಿತ್ತೆ
ನಿನ್ನ ಕರುಣೆಯ ಕೃಪೆಗೆ
ಪಾತ್ರಳಾದೇನು ತಂದೆ
ಕೊರಗೊಂದುಳಿದಿಹುದು
ಜ್ಞಾನ ಭಕ್ತಿ ವಿವೇಕ 
ವೈರಾಗ್ಯನೀಡೆನಗೆ ತಂದೆ.!

            ಶೈಲೂ......
[4/12/2022, 1:04 pm] Dr. B. N. Shylaja Ramesh: ಆವ ರೂಪದಲುಬಂದರು ಸರಿಯೇ
**************************

ಹೇ ನನ್ನ  ಪ್ರಿಯ ಬಂಧು 
ದೀನ ದಯಾಕರ ಮಾಧವ
ಆಶೀರ್ವದಿಸಿ ತೋರೆನಗೆ
ನಿನ್ನ  ಆವಿರ್ಭಾವ..!

ನೀನಾವ ರೂಪದಲ್ಲಿ
ಬಂದರೂ .ಸರಿಯೇ
ನೀ ನನ್ನವನೆಂಬುದ
ಎಂದಿಗೂ   ಮರೆಯೇ..!

ತಾಯ್ತ0ದೆ  ನೀನೇನು.?
ಭಕ್ತಿಯಲಿ  ಸೇವಿಪೆನು
ಕೆಟ್ಹೆಸರ ತರದಂತೆ
ಕೊನೆವರೆಗೂ ಬಾಳುವೆನು..!

ನೀ ನನ್ನ  ಸಖನೇನು.?
ನನ್ನೇ ಮರೆತು  ಸುಖಿಸುವೆನು
ನೆರಳಂತೆ ನಾ  ನಡೆದು
ಉಸಿರುಸಿರಿನಲಿ ಬೆರೆಯುವೆನು..!

ಬಂಧುವಾದರೆ ನೀನು
ಬಾಂಧವ್ಯ ಬೆಸೆಯುವೆನು
ಜೀವ ಭಾವದೊಳು ನಿನ್ನ
ಅನುಸರಿಸಿ ನಡೆಯುವೆನು..!

ಗೆಳೆಯನಾದೊಡೆ  ನೀನು
ಸವಿ ಸ್ನೇಹ ಹಂಚುವೆನು
ಆಟಪಾಠದೆ ನಲಿದು
ನನ್ನನೇ ಮರೆಯುವೆನು..!

ನೀ ನನ್ನ  ಮಗುವೇನು ?
ತಾಯಿಯಾಗುವೆ ನಾನು
ಮಡಿಲ ತೊಟ್ಟಿಲೊಳಿಟ್ಟು
ವಾತ್ಸಲ್ಯ ಸುಧೆ ಉಣಿಸುವೆನು..!

ನೀ ನನ್ನ  ಗುರುವೇನು ?
ಗೌರವಾಧರದಲೇ ನಾನು
ನೀ ಕಲಿಸಿದ ವಿಧ್ಯೆಯನು
ಆಸ್ಥೆಯಲಿ  ಕಲಿಯುವೆನು..!

ವಿದ್ಯೆಯೇ ನೀನೇನು
ಆದರಿಸಿ ಪೂಜಿಪೆನು
ಮನವ  ಶ್ರದ್ಧೆಯೋಳಿಟ್ಟು
ಕಲಿತು ನಾ  ಕಲಿಸುವೆನು..!

ನೀ  ಹೇಗೆ ಬಂದರೂ ಸರಿಯೇ
 ನೀ  ನನ್ನ ಜೊತೆಯಲಿರು
ದೇಹ ಕಳಚಿ  ಬೀಳುವ  ತನಕ
ಉಸಿರಲೊಂದಾಗಿರು...!

              ಶೈಲೂ.....
[4/12/2022, 1:07 pm] Dr. B. N. Shylaja Ramesh: ಮತ್ತೆಲ್ಲಿಗೆ ಹೋದ
***************

ಇಲ್ಲೇ ಇದ್ದನಲ್ಲ ಕೃಷ್ಣ
ಮತ್ತೆಲ್ಲಿಗೆ ಹೋದ ಗೆಳತಿ
ಮುದ್ದು ಮಾತು ಆಡುತ್ತಿದ್ದ
ಮತ್ತೆ ಮಾಯವಾದನೇ....??

ಹಸಿವುತಾಳೆನೆನಂದಾಕ್ಷಣ
ಮಾವು ಹಲಸು ತಂದನಲ್ಲ
ಮುದದಿ  ಬಾಯಲಿಟ್ಟು
ಮತ್ತೆ ಮಾಯವಾದನೆ....??

ಬೇಸರವ ಕಳೆಯಲೆಂದು
ಕೊಳಲನೂದಿ ರಮಿಸುತ್ತಿದ್ದ
ನಾಟ್ಯವಾಡುತ್ತಿದ್ದನವನು
ಮತ್ತೆ ಮಾಯವಾದನೆ ....??

ನಡೆಯಲಾಗಲಾರದೆಂದು
ಬಳಸಿ ಎನ್ನ ಎತ್ತಿ ನಡೆದು
ಈಗ ಬರುವೆನೆಂದು ಹೇಳಿ
ಮತ್ತೆ ಮಾಯವಾದನೆ....??

ಬಿಸಿಲ ಬೇಗೆ ತಾಳೇನೆಂದು
ತಂಪು ಸೂಸೋ ಚಂದ್ರನಾಗಿ
ನಕ್ಷತ್ರ ಮಾಲೆ ತರುವೆನೆಂದು
ಮತ್ತೆ ಮಾಯವಾದನೆ....??

ಕಣ್ಣಲೇನೋ ಬಿದ್ದಿತೆಂದು
ಕಣ್ಣಿನಲ್ಲೇ ನೆಟ್ಟುನೋಟ
ಕನಸು ಮೂಡುವಷ್ಟರಲ್ಲೇ
ಮಾಯವಾಗಿಬಿಟ್ಟನೇ ....??

ಮೋಡಿಮಾಡಿ ಕಾಡಿಬೇಡಿ
ಸುತ್ತ ಮುತ್ತ ಸುಳಿದಾಡಿ
ಕಣ್ತುಂಬಿಕೊಳ್ಳುವಷ್ಠರಲ್ಲೇ
ಮಾಯವಾಗಿಬಿಟ್ಟನೇ ....??

ಹುಸಿಮುನಿಸು ಮೂಡುತಿರಲು
ನಸುನಗುತ ಮುಂದೆನಿಂತು
ನಗುವುಮೂಡುವಷ್ಟರಲ್ಲೇ
ಮಾಯವಾಗಿಬಿಟ್ಟನೇ....??

ಸಹಿಸಲಾರೆನಿನ್ನು ಗೆಳತಿ
ಆ ಮಾಯಗಾರನಾಟವನ್ನು
ಮೋಡಿ ಮಾತುಗಳಿಗೆ
ನಾನು ಮರುಳಾಗಿಬಿಟ್ಟನೆ

ಇಲ್ಲೇ ಎಲ್ಲೋ ಅವಿತಿರುವ
ನಮ್ಮ ಮಾತುಗಳಿಗೆ ನಗುತ್ತಿರುವ
ಕೋಪದಲಳ ದೂಡಿ ಅವನು
ಮೌನಭೇಧಿಸಿ ಬಿಡುವನೇ ...??

          ಶೈಲೂ......
[4/12/2022, 1:09 pm] Dr. B. N. Shylaja Ramesh: ನಿನ್ನೊಳಗೆನ್ನಾತ್ಮ ಲೀನವಾಗಲಿ
**************************

ಗುಡಿಯ ಶಿಲೆಯಾಗಲು ಬೇಡ
ದೇಗುಲದ ಮೆಟ್ಟಿಲ
 ಹಾಸುಗಲ್ಲಾಗಿಸು ದೇವ
ಭಕ್ತರ ತುಳಿತಕ್ಕೊಳಗಾಗಿ
ನನ್ನ ಅಹಂ ಕರಗಲಿ..

ಕಣ್ಮನ ಸೆಳೆವ ಹೂವಾಗುವುದು ಬೇಡ
ಉದುರಿ ಮಣ್ಣೊಳು ಮಣ್ಣಾಗುವ
ತರಗೆಲೆಯಾಸಿಸು ದೇವ
ಅನಿಶ್ಚಿತತೆಯಲ್ಲಿ  ಹಾರುತ
ನನ್ನ ಅಹಂ ಕರಗಲಿ..

ಔನತ್ಯ ಪದವಿತ್ತು ಮತ್ತೇರಿಸಬೇಡ
ನಿನ್ನಂತರಂಗ ಭಕ್ತರ ಭಕ್ತರ
ಪಾದಧೂಳಿಯಾಗಿಸು ದೇವ
ಸಜ್ಜನರ ಸಿರಿ ಪಾದ ಸೋಕಿ
ಎನ್ನ ಅಹಂ ಕರಗಲಿ..

ಹೆತ್ತವ್ವೆ ಯಂತೆ ಅಡಿಗಡಿಗೆ
ಪೊರೆದೆನ್ನಅಪ್ಪಿಹರಸೋ ದೇವ
ನೋವಿಗಾಸರೆಯಾದ
ಪ್ರಿಯಬಾಂಧವ ನೀನೆಂದು
ನನ್ನ ಮನ ಅರಿಯಲಿ...

ನೀನಿಲ್ಲದೆನಿಲ್ಲ ನಿನದೇ ಜಗವೆಲ್ಲ
ಪಾದ ತೊಳೆಯುವ ನೀರಾಗಿಸು ದೇವ
ಪಾದಪೂಜೆಗಣಿಗೊಳಿಸೆನ್ನ
ಅಣುರೇಣುತೃಣಕಾಷ್ಠದೊಳು
ನೀನಿಹೆಯೆಂದು ತನು ಮರೆಯಲಿ..

ಕೊಟ್ಟು ಕೈಹಿಡಿವವನೂ ನೀನೇ
ಬಿಟ್ಟು ನೋವಿತ್ತವನೂ ನೀನೇ
ಸ್ಥಿತಪ್ರಜ್ಞನಾಗಿಸು ದೇವ
ಸಮಚಿತ್ತದೊಳು ಎನ್ನಾತ್ಮ
ನಿನ್ನೊಳಗೆ ಲೀನವಾಗಲಿ...

               ಶೈಲೂ.......
[4/12/2022, 1:11 pm] Dr. B. N. Shylaja Ramesh: ಎಲ್ಲವೂ  ನೀನೇ
*************

ನನ್ನೊಲವ ಮಂದಿರದಿ
ನೆಲೆಸಿಹ ಮೂರುತಿ ನೀನೇ
ಕಿರುನಗೆಯ ಜ್ಯೋತಿಯನು
ಬೆಳಗುವವನೂ ನೀನೇ

ನನ್ನೊಲವ ಬದುಕಿನಲಿ
ಬೆಳಕಂತೆ  ತಾ  ಬಂದು
ಕಹಿಯ ಕತ್ತಲ ದೂಡಿ
ಬಾಳು ಬೆಳಗುವವ ನೀನೇ

ನನ್ನೊಲವ ಹೂ ಬನದಿ
ಬಿರಿದು ಮಲ್ಲಿಗೆಯಂತೆ
ಸೊಗವಿತ್ತು  ಹೂ ಬನಕೆ
ಗಂಧ ಪಸರಿಸಿದವ ನೀನೇ

ನನ್ನೊಲವ  ಆಗಸದಿ
ಸರಿಸಿ ದುಃಖದ ಮೋಡ
ಶುಭ್ರಾಗಸದಿ ನಗುತ
ಪ್ರಭೆ ಬೀರೋ ಸೂರ್ಯನೂ ನೀನೇ

ಅಡಗಿ  ಮೋಡದ ಹಿಂದೆ
ಇಣುಕಿಣುಕಿ  ನೋಡುತಲಿ
ಒಲವ ಅಮೃತದ ಧಾರೆ
ಸುರಿವ ಚಂದ್ರಮನೂ  ನೀನೇ

ಬಿರಿದ ಮಲ್ಲಿಗೆಯಂತ
ಮನದ ಕುಸುಮದ ಜೇನು
ಮೊಗೆಮೊಗೆದು ಹೀರುವ
ನನ್ನೊಲವ ಭ್ರಮರವು ನೀನೇ

ಒಲವ ಸುಂದರ ಬದುಕು
ತೂಗೋ ಉಯ್ಯಾಲೆಯ ತೆರದಿ
ಹಾಗೊಮ್ಮೆ ಹೀಗೊಮ್ಮೆ ಅಳಿಸಿ ನಲಿಸಿ
ಜೀಕುವವನೂ  ನೀನೇ

ನಾ  ಏನ ಹೇಳಲಿ ಕೃಷ್ಣ
ನನ್ನದಿನಿತೂ ಇಲ್ಲ,, ಜಗವ
ಮಾಯೆಯೋಳಾಡಿಸೋ
ಸರ್ವೋತ್ತಮನೂ  ನೀನೇ

             ಶೈಲೂ....
[4/12/2022, 1:15 pm] Dr. B. N. Shylaja Ramesh: ಹಳೆಯದು....😊

ಶ್ರೀಪಾದ ಶ್ರೀವಲ್ಲಭ ಸ್ತೋತ್ರ
***********************

ಶ್ರೀಪಾದರಾಜಾ ತವಶರಣಮ್  ಗುರು ಶ್ರೀ ಪಾದ ಶ್ರೀ ವಲ್ಲಭ ತವಶರಣಮ್ ||
ಶ್ರೀನಿವಾಸ ಪದ್ಮಾವತಿ ರೂಪ ಅನಾಘಾ ದತ್ತ ತವಶರಣಮ್ ||

ಸುಮತೀ ನಂದನ ತವಶರಣಮ್ ಗುರು ಅಪ್ಪಲ ರಾಜಸು ತ ತವಶರಣಮ್ ||
ಪೀಠಿಕಾಪುರ ನಿವಾಸಿ ಶ್ರೀಪಾದ ಶ್ರೀವಲ್ಲಭ ದೇವ ತವಶರಣಮ್ ||

ದಿಗಂಬರಾ ತವಶರಣಮ್  ಗುರು ಧೀನೋದ್ಧಾರ ತವಶರಣ0 ||
ದೈನ್ಯನಾಶನಾ  ದಾರಿದ್ರ್ಯದಹನ ದೀನರಕ್ಷಕಾ ತವ ಶರಣಂ ||

ವಿಶ್ವಾತ್ಮಕಾ ತವಶರಣಂ ಗುರು ವಿಶ್ವ ರಕ್ಷಕಾ ತವಶರಣಂ ||
ವಿಶ್ವೇಶ್ವರ ವಿಶ್ವನಾಥ ವಿಶ್ವ ವ್ಯಾಪಕ ತವಶರಣಂ ||

ಕರುಣಾಮೂರ್ತೆ ತವಶರಣಂ ಗುರು ಕರುಣಾ ಸಾಗರ ತವಶರಣಂ ||
ಕಲ್ಯಾಣದಾಯಕ ಕರುಣಾಪೂರ್ಣ ಕುರುಗಡ್ಡೆ ವಾಸಿ ತವಶರಣಂ ||

ಪರಾಮಪುರುಷ ತವಶರಣಂ ಗುರು ಪಾಪನಾಶನಾ ತವಶರಣಂ ||
ಪಾಪವಿದೂರ ಪತಿತೋದ್ಧಾರ ಪರಮ ಪಾವನಾ ತವಶರಣಂ ||

ದತ್ತಾತ್ರೇಯ ತವಶರಣಂ ಗುರು ಔದುಂಬರ ವಾಸ ತವಶರಣಂ ||
ಧರ್ಮ ರಕ್ಷಕ  ದುರಿತವಿದೂರ ದೀನಧಯಾಧನ ತವಶರಣಂ ||

ಮಂದಸ್ಮಿತ ತವಶರಣಂ ಗುರು ಮುಕ್ತಿದಾಯಕಾ ತವಶರಣಂ ||
ಶ್ರೀಮದನಂತ ಮೋಹನರೂಪ ಮಧುರಭಾಷಿ ತವಶರಣಂ ||

ತ್ರಿಮೂರ್ತಿರೂಪ ತವಶರಣಂ
 ಗುರು ತ್ರೈಲೋಕ್ಯಪೂಜಿತ ತವಶರಣಂ ||
ತ್ರಿಗುಣಾತೀತ ತ್ರೈಲೋಕಪಾಲಕ ತಾಪಹರಣಾ ತವಶರಣಂ ||

ಪುರುಷೋತ್ತಮ ತವಶರಣಂ ಗುರು ಪುಣ್ಯಪುರುಷ ತವಶರಣಂ ||
ಪೀಠಿಕಾಪುರಾಧೀಶ  ಪಾವನಪುರುಷ ಶ್ರೀಪಾದ ಶ್ರೀವಲ್ಲಭ ತವಶರಣಂ ||

            ಶೈಲೂ.......
[4/12/2022, 1:18 pm] Dr. B. N. Shylaja Ramesh: ಕವಿ..ಶ್ರೀಯುತ ನಾರಾಯಣ್ ಭಟ್ ರವರ ಕವನ ದಿಂದ ಪ್ರೇರಿತ

ಥ್ಯಾಂಕ್ಯೂ ನಾರಾಯಣ್ ಭಟ್ ಸರ್🙏🙏

ಕರಪಿಡಿದು ಸಲಹದಿರುವನೆ..?
*************************

ಹಕ್ಕಿಯ ರೆಕ್ಕೆಗೆ ಶಕ್ತಿಯ ತುಂಬುತ
ಹಾರಲು ಕಲಿಸಿದವನಿವನೇನು..!!!
ಬಣ್ಣದ ರೆಕ್ಕೆಯ ಪಾತರಗಿತ್ತಿಗೆ 
ಚೆಲುವನು ಇತ್ತವನಿವನೇನು...!!!

ಬಣ್ಣವ ತುಂಬಿದ ಕಾಮನಬಿಲ್ಲಿಗೆ
ಬಾಗಲು ಕಲಿಸಿದವನಿವನೇನು...!!!
ಸಿಹಿ ಕಹಿ ಜೀವನವಿದ್ದರೂ ಬಾಳಲಿ 
ಭರವಸೆ ತುಂಬುವನಿವನೇನು...!!!

ಅರಳುಗಣ್ಣಿನ ಕಂದನ ಮುಖದಲಿ
ಮುಗ್ಧತೆ ತುಂಬಿದವನಿವನೇನು...!!!
ಚೆಂದುಟಿ ಮೇಲಿನ ಕಿರುನಗೆಯೊಳಗೆ
ಸೆಳೆತವನಿಟ್ಟವ ನಿವನೇನು...!!!

ತಂಗಾಳಿಯ ಹೊಡೆತಕೆ ತೊಯ್ದಾಡುವ
 ತೆನೆಯಲಿಲಾಸ್ಯವನಿಟ್ಟವನಿವನೇನು...!!!
ಕಬ್ಬಿನ ಮೈಯಲ್ಲಿ ರಸವನ್ನು ತುಂಬುತ
ಸಿಹಿಯಭಾಷ್ಯವ ಬರೆದವನಿವನೇನು...!!!

ಭಕ್ತಿಯ ಬಿನ್ನಹ ಕೇಳಲು ಮುದದಲಿ 
ಕಷ್ಟವು ಕಳೆಯುವವನಿವನೇನು..!!
ಅನುಕ್ಷಣ ಮನದಲಿ ನಿಲ್ಲಿಸಿ ಭಜಿಸಲು
ಕರಪಿಡಿದು ಸಲಹದೇ ಇಹನೇನು...!!!

           ಶೈಲೂ....
[4/12/2022, 1:21 pm] Dr. B. N. Shylaja Ramesh: ನನ್ನಲಿರುವೆ ನೀನು
****************

ನನ್ನ  ತನುವಿನ ಕಣ
ಕಣದಲೂ ನೀನಿರುವೆ ಕೃಷ್ಣಾ
ನೀ ನೆಲೆಸಿರುವ  ಈ ಮನವೇ
ದೇವಾಲಯ...!!

ಉಸಿರು ಉಸಿರಿನ 
ಏರಿಳಿತದಲೂ ನೀನಿರುವೆ
ನಿನ್ನ ಸಿರಿ ನಾಮವದುವೆ
ಜೀವಾಮೃತ...!!

ಹೃದಯ ಸಿಂಹಾಸನದಲ್ಲಿ
ರಾರಾಜಿಸುತ್ತಿರುವೆ
ನೀನಿರುವ  ಈ  ತಾಣ
ಪ್ರೇಮಾಲಯ...!!

ಚೈತನ್ಯವೀವ ನೆತ್ತರಿನಂದದಿ
ಧಮನಿ ಧಮನಿಯಲು
ಪ್ರವಹಿಸುತ್ತಿರುವೆ ಕೃಷ್ಣಾ
ನೀನೆನ್ನ  ಚೇತನಾ...!!

ಮಾತಿನಲಿ ಸಿಹಿತುಂಬಿ
ಮಾಧುರ್ಯವೀಯುತಿಹೆ
ನುಡಿನುಡಿಯಲ್ಲೂ  ತುಂಬಿರುವೆ
ಮೃದುವಚನ...!!

ಮನತುಂಬಿ ಹಾಡಲು
ಕಣ್ತುಂಬಿ ಬರುವುದು
ತನುವಲ್ಲಿ ಅವರ್ಣನೀಯ
ರೋಮಾಂಚನಾ...!!

ಹೆಜ್ಜೆ ಹೆಜ್ಜೆಗೂ
ನಿನ್ನದೇ ನಾಮ
ನಾ ನಡೆವ ಹಾದಿಯದು
ಬೃಂದಾವನಾ...!!

ನನ್ನಲ್ಲಿ ನೀ ನೆಲೆಸಿ
ನಲಿವನ್ನು ತುಂಬುತಿಹೆ
ಎಲ್ಲಿಹುದು ವಿರಹದುರಿ
ಬರಿದೇ ಆರಾಧನಾ...!!

          ಶೈಲೂ......
[4/12/2022, 1:23 pm] Dr. B. N. Shylaja Ramesh: ಸೋತು ಗೆದ್ದವನು
***************

ಜಗದ ನಡೆಯಿದು ಹೀಗೆಯೇ
ಇರಬೇಕೆಂಬ  ತಹತಹಿಕೆಯಲಿ
ಈ  ಕೊಡುಕೊಂಬುವಾಟದಲಿ
ಸೋತು ಗೆದ್ದವನು  ನೀನು....!

ಜನನಿ - ಜನ್ಮದಾತೆಯ ಮರೆತು
ಸಾಕಿದವಳ ಪ್ರೀತಿಯಲಿ  ಬೆರೆತು
ವಿಷವುಣಿಸಿದವಳ ತೆಕ್ಕೆಯಲೂ ಮಲಗಿ
ಸೋತು ಗೆದ್ದವನು  ನೀನು....!

ಕಿರುಗೆಜ್ಜೆಯನು ಘಲಿಸಿ, ಎಲ್ಲರನು ನಗಿಸಿ
ವಿಷಕಾರುವ ಕಾಲಿಂಗನನು ಮಣಿಸಿ
ಜಗವನ್ನೇ ತನ್ನೊಡಲಲ್ಲಿ ಧರಿಸಿ
ಸೋತು ಗೆದ್ದವನು  ನೀನು....!

ಗೋಪಿಕೆಯರ ವಸ್ತ್ರಾಪಹರಣವಂತೆ
ಮತ್ತೊಂದೆಡೆ ಸೀರೆಯ ಮೆಗೆಮೊಗೆದಿತ್ತೆಯಂತೆ
ತುಸು ಪ್ರೀತಿ ಕೊಟ್ಟರೂ ಅಪ್ಪಿ ಹರಸುವೆಯಂತೆ
ನಿಜವಾಗಿಯೂ ನೀನು ಸೋತು ಗೆದ್ದವನಂತೆ....!

ಹಿಡಿ ಅವಲಕ್ಕಿಯ  ಋಣಭಾರಕೆ
ಕಡು  ಭಾರದ ಸಿರಿಯ ನೀನಿತ್ತೆ
ಸ್ನೇಹಭಾವದ ಸವಿಯಪ್ಪುಗೆಯ ಬಿಸಿಗೆ
ಕರಗಿ ಸೋತು ಗೆದ್ದವನು ನೀನು....!

ನಂಬಿ ಬಂದವರ ಕಣ್ಣೀರನೊರೆಸಿ
ದ್ವೇಷಅಂಧಕಾರಗಳ ತೆರೆಯನ್ನು ಸರಿಸಿ
ಸವಿ ಮಾತುಗಳ ಅಕ್ಕರೆಯ ಉಣಿಸಿ
ಸೋತು ಗೆದ್ದವನು ನೀನು....!

ಜಗದ ಜೀವಿಗಳ ಹಸಿವೆ ತಣಿಸಿದವ
ತುಸು ಮೊಸರು ಬೆಣ್ಣೆಗೆ ತನ್ನನೆ ಕೊಟ್ಟವ
ಆದರೂ ಹೊತ್ತು ಕಳ್ಳನ ಪಟ್ಟವ
ಸೋತು ಗೆದ್ದವನು ನೀನು....!

ಹೂವ ತರುವರ ಮನೆಗೆ ಹುಲ್ಲ ತರುವವನು
ಭಕ್ತಿ ಭಾವಕೆ ಕಟ್ಟು ಬಿದ್ದವನು
ಅಪವಾದವೆಲ್ಲವ ತಾನೇ ಹೊತ್ತವನು
ನಿಜದಿ ನೀ ಸೋತು ಗೆದ್ದವನು....!

ಜಗದೊದ್ಧಾರಕೆ ಗೀತಾಮೃತವಿತ್ತ
ಫಲಾಫಲಗಳ ಹೊರೆಯ ತಾನೇ ಹೊತ್ತ
ನಂಬಿದವರ ಕಷ್ಟ ನಿವಾರಿಸುತ್ತ
ಸೋತು ಗೆದ್ದವನು ನೀನು....!

ಮೂಲೋಕದ ಕೀಲಿ ತನ್ನ ಕೈಯಲ್ಲಿ
ಆದರೂ ಮರುಳಾಗಿ ಮಾಯೆಗೆ ಜನಿಸಿದನಿಲ್ಲಿ
ನಾಮದ ಬಲದಿಂದಲೇ ಜಗವ ಕಾಯುವವನು
ಪ್ರೇಮಭಕ್ತಿ ಗೆ ಸೋತು ಗೆದ್ದವನು....!

ಸಕಲ ಚರಾಚರ ನಿನ್ನಾಧೀನ..!
ನೀನು ಮರುಳ.. ಭಕ್ತರಾಧೀನ..!
ಎಲ್ಲರ ಅರಿವಿನ ಕಣ್ಣನು ತೆರೆಸಿ..!
ಪೊರೆಯುವೆ ಸ್ವಾಮಿ ಕೃಷ್ಣನೆಂದೆನಿಸಿ..!

                ಶೈಲೂ......
[5/12/2022, 10:28 am] Dr. B. N. Shylaja Ramesh: #ಮಂಕು_ಕವಿದಾಗ 

ಭಾವನೆಗಳ ಬಣ್ಣವೇ ಮಾಸಿತು
ಬದುಕಿನಿಂದ ನೀ ದೂರಾದಾಗ
ಆಸಕ್ತಿಎಂಬುದೇ ದೂರಾಯಿತು
ನೀನಿಲ್ಲದೇ ಮಂಕು ಕವಿದಾಗ..!

ದಿನದ ನನ್ನೆಲ್ಲ ಚಟುವಟಿಕೆಗಳಿಗೆ 
ನೀ ಜೊತೆಗೆ ಇರಬೇಕು ಗೆಳೆಯಾ
ನೀನಿದ್ದರೇನೇಕಳೆ ಸಂಭ್ರಮಗಳಿಗೆ 
ದಾಟುವೆನು ಏರಿಳಿತಗಳಲೆಯಾ.!

ನಕ್ಕು ಸಂಭ್ರಮಿಸಿದೆಲ್ಲ ಘಳಿಗೆಗೂ
ನೀನು ನೀಡಿದ ಪ್ರೀತಿಯ ವರವಿತ್ತು 
ನಾ ಸಾಧಿಸಿದ ಪ್ರತಿ  ಕೆಲಸಗಳಿಗೂ 
ನಿನ್ನ ಬೆಂಬಲದ ಬಲವೊಂದಿತ್ತು..! 

ಅದಾರ ದೃಷ್ಟಿ ತಾಕಿತೋ ಕಾಣೆನು
ಬಾಳಿಗೆ ಬರ ಸಿಡಿಲು ತಾಕಿತಿಂದು
ಹೀಗೇಕಾಯಿತೆಂದೂ ನಾ ಕೇಳೆನು
ದ್ವನಿ ಉಡುಗಿತು ಮನನೊಂದು.!

ಮಂಕು ಕವಿದೀ ಬಾಳಿಗೆ ಬೆಳಕಾಗಿ
ದಾರಿ ತೋರು ಬಾರಾ ಗುರುವಾಗಿ

    ಶೈಲಜಾ ರಮೇಶ್
[5/12/2022, 5:02 pm] Dr. B. N. Shylaja Ramesh: #ಕಚಗುಳಿ_ಕೊಟ್ಟರೂ_ನಗದವರು 
ಸದಾ ಧುಮುಗುಡುವ ಮುಖ
ಇರದಿದ್ದರೂ ಏನೂ ದುಃಖ
ಸಿಡಿಸಿಡಿಗುಟ್ಟುತ ಮಾತುಕತೆ
ಅಯ್ಯೋ, ಅದೇನಿದೆಯೋ ವ್ಯಥೆ! 

ನಗುವಿಲೆಳೆ ಲವಲೇಶವೂ ಇಲ್ಲ
ಕಿಡಿಗಣ್ಣ ನೋಟಕೆ ಬರವಿಲ್ಲ
ಯಾರೊಡನೆಯೂ ಇಲ್ಲ ಮಿತ್ರತ್ವ
ಕಾಣೆ, ಅದಾವ ಜನ್ಮದ್ದೋ ಶತ್ರುತ್ವ!

ಮೃದು ಮನವೇ ಇಲ್ಲದವರು
ಮಧುರನುಡಿ ಗೊತ್ತಿಲ್ಲದವರು
ಎಲ್ಲರ ನಿಂದಿಸಿ ಹೀಗಳೆಯುತ್ತಾ
ಏಕಾಂತ ನಿರ್ಮಿಸಿದರು ಸುತ್ತಮುತ್ತ!

ತಾನೇ ಹಿರಿಯವನೆಂಬ ಭಾವ  
ಹೇರುತ್ತ ಎಲ್ಲರ ಮೇಲೆ ಪ್ರಭಾವ
ಉರಿದುರಿವ ಕೀಳು ಮನದವರು
ಕಚಗುಳಿಯಿಟ್ಟರೂ ಸಹ ನಗದವರು!

ಸುತ್ತ ಮುತ್ತಲೆಲ್ಲ ಇಂಥದೇ ಜನರು
ಸಂತಸವೇನೆಂಬುದನ್ನೇ ಕಾಣರು
ಇತರರ ಸಂತಸವನೂ ಸಹಿಸರು
ಹಿತವಾರಿಗೂ ಬಯಸದವರು!
ಶೈಲೂ
[6/12/2022, 3:41 pm] Dr. B. N. Shylaja Ramesh: #ಸ್ವಾಭಿಮಾನಿ_ಮಹಿಳೆಯರ_ವೇದಿಕೆ
#ನೆಮ್ಮದಿಗೆ_ಅವಳೇ_ಒಡತಿ 
ಬಾಳಬಂಡಿಯ ನೊಗಕೆ 
ಕಟ್ಟಿದ ಎತ್ತಿನಂತವಳು..!
ಅಡೆತಡೆಯೇನೇ ಬರಲಿ
ಸಹನೆಯಲಿ ಎಳೆವವಳು
ನಾಲ್ಕು ಚಕ್ರದಹಿಡಿತವನು
ತನ್ನ ಕೈಯೊಳಗಿಡಿದು ತಾ
ಸಂಸಾರದ ಬಂಡಿಯನು
ಸರಾಗ ಮುನ್ನಡೆಸುವಳು.!

ಮನೆಮಂದಿಯವರನೆಲ್ಲ
ಸಹಿಸಿ, ಅನುನಯಿಸುತ
ಬಂದ ಟೀಕೆಟಿಪ್ಪಣಿಗಳನ್ನೆಲ್ಲ
ಕುಶಲತೆಯಲಿ ಸಮರ್ಥಿಸುತ್ತ 
ಎಲ್ಲರ ಬೇಕುಬೇಡಗಳನ್ನೆಲ್ಲ 
ಕಾಲ ಕಾಲಕೆ ನಿರ್ವಹಿಸುತ್ತ 
ಮನೆ ಮನವ ಬೆಳಗುವಳು
ತನಗೆತಾನೇ ದಹಿಸಿಕೊಳ್ಳುತ್ತ

ತಾನೇಷ್ಟೇ ನೋವನುಂಡರೂ
ತೋರಗೊಡದಂತೆ ಸಹಿಸಿ
ನಗೆಮಲ್ಲಿಗೆಯ ಹರಡುವಳು
ಸುತ್ತಮುತ್ತೆಲ್ಲ ಕಂಪ ಸೂಸಿ.!
ಪ್ರಣತೆ ಇವಳೇ ಬಾಳಿಗೆ
ಒಡತಿಯಿವಳು ನೆಮ್ಮದಿಗೆ.!

ಡಾ: ಶೈಲಜಾ
[6/12/2022, 5:01 pm] Dr. B. N. Shylaja Ramesh: ನೆಮ್ಮದಿಗೆ_ಅವಳೇ_ಒಡತಿ 

ಬಾಳಬಂಡಿಯ ನೊಗಕೆ ಕಟ್ಟಿದ ಎತ್ತಿನಂತವಳು..!
ಅಡೆತಡೆಯೇನೇ ಬರಲಿ ಸಹನೆಯಲಿ ಎಳೆವವಳು
ನಾಲ್ಕು ಚಕ್ರದಹಿಡಿತವನು ತನ್ನ ಕೈಯೊಳಗಿಡಿದು ತಾ
ಸಂಸಾರದ ಬಂಡಿಯನು ಸರಾಗ ಮುನ್ನಡೆಸುವಳು.!

ಮನೆಮಂದಿಯವರನೆಲ್ಲ ಸಹಿಸಿ, ಅನುನಯಿಸುತ
ಬಂದ ಟೀಕೆಟಿಪ್ಪಣಿಗಳನ್ನೆಲ್ಲ ಕುಶಲತೆಯಲಿ ಸಮರ್ಥಿಸುತ್ತ 
ಎಲ್ಲರ ಬೇಕುಬೇಡಗಳನ್ನೆಲ್ಲ  ಕಾಲ ಕಾಲಕೆ ನಿರ್ವಹಿಸುತ್ತ 
ಮನೆ ಮನವ ಬೆಳಗುವಳು ತನಗೆತಾನೇ ದಹಿಸಿಕೊಳ್ಳುತ್ತ

ತಾನೇಷ್ಟೇ ನೋವನುಂಡರೂ ತೋರಗೊಡದಂತೆ ಸಹಿಸಿ
ನಗೆಮಲ್ಲಿಗೆಯ ಹರಡುವಳು ಸುತ್ತಮುತ್ತೆಲ್ಲ ಕಂಪ ಸೂಸಿ.!
ಅವಳಿದ್ದರೇನೇ ಬದುಕು, ಅದಕು, ಇದಕು, ಎದಕು
ಪ್ರಣತೆ ಇವಳೇ ಬಾಳಿಗೆ ಒಡತಿಯಿವಳು ನೆಮ್ಮದಿಗೆ.!

        ಶೈಲೂ....
[8/12/2022, 5:20 pm] Dr. B. N. Shylaja Ramesh: #ಶೈಲೂ_ಬರಹ 

ಅಂಗಳದಿ
ಅರಳಿರುವ
ಅಂದದ ಮಲ್ಲಿಗೆಯ ತೆರದಿ
ಆಕರ್ಷಿಸಿ
ಅತೀವ
ಆನಂದದ
ಆಸರೆಯಾದ
ಅಂತರಂಗದ ಬಂಧು
ಅಮಿತೋತ್ಸಾಹದ
ಆನಂದ ಸಿಂಧು
ಅರಸ ನೀನೆನಗೆ
ಅರಸುತ್ತಿರುವೆ ನಿನ್ನ
ಆಸರೆಯ 
ಅನುಗೊಳಿಸು
ಅದಮ್ಯ ಚೇತನನೆ ನೀ
ಆರದಿರುವಂತೆ
ಆಸರೆಯ  ಬೆಳಕು
                   ಶೈಲೂ...
[8/12/2022, 5:58 pm] Dr. B. N. Shylaja Ramesh: #ಶೈಲೂ_ಬರಹ 

ಪ್ರೇಮ.ಸಂಭಾಷಣೆ
*****************

ನುಡಿಸುವುದು ಹೇಗೆ
ಕೃಷ್ಣ ನಿನ್ನ ಕೊಳಲು
ನುಡಿಸಿ ಮರೆಯಬೇಕಿದೆ
ನನ್ನ ಮನದ ಅಳಲು

ಹಿಡಿಯಲ್ಹೇಗೆ ಕೈಯಲಿ
ಯಾವುದು ತುದಿ ಮೊದಲು
ತುಟಿಯಲಿಟ್ಟು ಉಸಿರು ತುಂಬಿ
ಹೇಳಿಕೊಡು ನುಡಿಸಲು

ಶ್.!! ಸುಮ್ಮನಿರು ರಾಧೇ
ಇಲ್ಲ ಸಮಯ ನುಡಿಯಲು
ಸ್ವರ್ಗ ಸುಖವ ನೀಡುತಿದೆ
ಪ್ರೇಮ ತುಂಬಿದ ಮಡಿಲು

ತುಂಬಿ ನನ್ನ ಕಣ್ಣಲೇ ನಿನ್ನ
ಮರೆವೆ ಜಗದ ಪರಿವೆಯ
ಸ್ಫೂರ್ತಿ ನೀನೇ ಮುನ್ನಡೆಸಲು
ಶಕ್ತಿ ನೀನೇ ಅರಿತೆಯಾ

ಸಾಕು ಬಡಿವಾರ ಬಿಡು
ಬರಿದೇ ಮಾತಿನ ಮಲ್ಲ
ನುಡಿಸಲ್ಹೇಗೆ ಹೇಳಿಕೊಡು
ಊದಬೇಕು ಬಿದಿರುಕೊಳಲ

ನನ್ನೆದೆಯ ಮಾತುಗಳ
ಹಾಡಾಗಿಸಿ ನುಡಿಸಿ
ತುಂಬ ಬೇಕು ಪ್ರೇಮಭಕ್ತಿ
ನಿನ್ನೊಲುಮೆಯಲಿ ಕರಗಿ

ನುಡಿಸಲಾರೆ ಬಿಡು ಸಖಿ
ಹೊಮ್ಮುವ ರಾಗ ನೀನೇ
ಕರದಲಿ ನವಿರಾಗಿ ಹಿಡಿದ
ಬಿದಿರು ಕೊಳಲು ನಾನೇ

ನಿನ್ನ ಕೈಯ ಹಿಡಿತದಲಿ
ಮೆರೆವ ಕೊಳಲು ನಾನು
ಮಾಂತ್ರಿಕ ಸ್ಪರ್ಶದಲೇ
ಮಿಡಿವ ನಾದ ನೀನು

ನಾನು ನೀನು, ನೀನು ನಾನು
ಸೇರಿದರೇ ನವರಾಗ ತಾನೇ
ವೇಣು ನಾನು ನಾದ ನೀನು
ನುಡಿಸಿದರೇ ಸ್ವರ್ಗ ತಾನೇ

             ಶೈಲೂ......
[8/12/2022, 6:14 pm] Dr. B. N. Shylaja Ramesh: #ಶೈಲೂ_ಬರಹ 

ಈ ಸುಂದರ ಚಿತ್ರ ನೋಡಿದಾಗ ಮೂಡಿದ  ಸಾಲುಗಳಿವು😊

#ನಾವಿಬ್ಬರೊಂದೇ..!!
****************

ನಾವಿಬ್ಬರೊಂದೇ ಯಾಕೀ ಮೊರೆತ
ಬೇರಾದರೂ ಬೇರಲ್ಲವಿದು  ಆನೃತ
ಪ್ರುರುಷ - ಪ್ರಕೃತಿ ಒಂದಾದ ವೇಷ
ತಿಳಿ ನಾವರ್ಧನಾರೀ ಪುರುಷ

ನಾ ನಿನ್ನ ಕೈಯೊಳ ಕೊಳಲು
ನೀನಾಗಿ ಹೊಮ್ಮಿ ಅದರ ದನಿ
ಬೆಸೆದು ನವ ರಾಗ ಹೊಸೆಯೇ
ಹೊರಹೊಮ್ಮದೇ  ಇನಿದನಿ.?

ನಾನವನಿ ನೀನಾದೆ ಅಂಬರ
ಭೋರ್ಗರೆದು ಪ್ರೇಮ ಧಾರಾಕಾರ
ಎನಿಂಥ ಚುಂಬಕ ಸೆಳೆತವೀ ಅಮಲು.!
ತಡೆಹಿಡಿಯಿತೇ ಕಯ್ಯಲ್ಲಿನ ಕೊಳಲು ?

ತುಸು ಲಜ್ಜೆ ಬೆರೆಸಲಾರೆ ಕಣ್ಣು
ಇಂಥ ಸನಿಹ ಎದುರಿಸಲ್ಹೇಗೆ ನಾ ಹೆಣ್ಣು.!
ನೀಲದೊಳಗೇ ಗೌರ ಮಿಳಿತು
ನೀಲವಾಯ್ತು ಜಗ ಅವನೊಡನೆ ಕಲೆತು

ಹೇಗಿದ್ದರೂ ನಾವಿಬ್ಬರೊಂದು
ಬಿಡಿಸಲಾಗದ್ದು ಅನಂತವೀ ಸಖ್ಯ
ನಿನ್ನೊಳಗೆ ನಾನಾಗಿ ನನ್ನೊಳು ನೀನು
ದೂರಾಗದೆ ಬೆರೆಯುವುದು ಮುಖ್ಯ

              ಶೈಲೂ.....
[8/12/2022, 6:16 pm] Dr. B. N. Shylaja Ramesh: #ಶೈಲೂ_ಬರಹ 

ಭಾವನೆಗಳ ಬೆನ್ನೇರಿ
******************

ಭಾವಾಂತರಂಗದಲ್ಲೊಂದು
ಭಾವುಕ ಪಯಣ
ಭಾವನೆಗಳ  ಬೆನ್ನೇರಿ
ಬಂದಿತೀ ಚರಣ

ಮನದ ಮೂಲೆಯಲ್ಲಿದ್ದ
ಮನಸುಗಳ ಮಾತು
ಮುನ್ನಡಿಯಿತ್ತು
ಮುದದಿ  ಸ್ವಾಗತಿಸಿತ್ತು

ನಗುವ ನಯನಗಳ
ನಗೆಯ ದೀವಟಿಕೆ
ನನಸಾದ ಕನಸಿನ
ನಲ್ಮೆಯ ಹಿಮ್ಮೇಳವದಕೆ

ಅಕ್ಕರೆಯ ಮಾತುಗಳ
ಅಕ್ಷರಗಳ  ಸಾಲು
ಆಲಂಗಿಸಿ, ಸಿಂಪರಿಸಿದೆ
ಅಮೃತ ಸಿಂಚನ

ಗರಿಗೆದರಿ.ಹಾರಿತ್ತು
ಗಗಣದೆಡೆಗೆ ಮನ
ಗುರಿಯ ಗಮ್ಯದೆಡೆಗೆ
ಗಂಧರ್ವ ಗಾನ

ಕನಸುಕಾಣುವ ಕಣ್ಣಲಿ
ಕಾಮನಬಿಲ್ಲಿನ ರಂಗು
ಕಲ್ಪನೆಯ  ಬೆನ್ನೇರಿ
ಕದಪಿಗೆ ನಲಿವಿನ ಗುಂಗು

ಲಾಸ್ಯದ ನೆನಪುಂಡು
ಲಜ್ಜೆಯಾವರಿಸಿ ಮನಕೆ
ಲಕ್ಷ್ಯವಿತ್ತು ಕನಸಿಗೆ
ಲಘುವಾಯ್ತು ತನುವು

          ಶೈಲೂ....
[8/12/2022, 6:20 pm] Dr. B. N. Shylaja Ramesh: #ಶೈಲೂ_ಬರಹ 
ಸ್ವೇಚ್ಛೆ
******

ಸ್ವತಂತ್ರ್ಯತೆಯ ಕಲ್ಪನೆಯಲಿ
ಸ್ವೇಚ್ಛೆ ಯ ದಾರಿ
ಮಿತಿಮೀರಿದ  ಆಸೆಯಲಿ
ತುಳಿದು ಕವಲು ದಾರಿ

ತೀರದ ಆಸೆಗಳ
ಅತೃಪ್ತ ಮನಸಿನಲ್ಲಿ
ಗೊಂದಲದ ಗೂಡಾಯ್ತು ಮನ
ಒತ್ತಡದ ಜಂಜಾಟದಲಿ

ಹೀಗೇಕಾಯ್ತೆಂಬ 
ಪ್ರಶ್ನೆಗಳ  ಸುರಿಮಳೆಯಲಿ
ಆತಂತ್ರತೆಯ ಬದುಕು
ಸಾಗುತಿದೆ ಎಲ್ಲಿ..??

ಎಳೆಯುತಿದೆ  ಬದುಕ ಬಂಡಿ
ಅನಿಶ್ಚಿತತೆಯ  ದಾರಿಯಲಿ
ಗೊತ್ತು ಗುರಿಯಿಲ್ಲದ ಹಾದಿ
ಬದುಕಿಹುದು ನಿಗೂಢತೆಯಲಿ

         ಶೈಲೂ......
[8/12/2022, 7:16 pm] Dr. B. N. Shylaja Ramesh: ಅಂಗಳದಿ ಅರಳಿರುವ
ಅಂದದ ಮಲ್ಲಿಗೆಯ ತೆರದಿ
ಆಕರ್ಷಿಸಿ ಅತೀವ
ಆನಂದದ ಆಸರೆಯಾದ
ಅಂತರಂಗದ ಬಂಧು
ಅಮಿತೋತ್ಸಾಹದ ಆನಂದ ಸಿಂಧು
ಅರಸ ಆಸರೆ ನೀನೆನಗೆ
ಅರಸುತ್ತಿರುವೆ ನಿನ್ನ
ಆಸರೆಯ ಅನುಗೊಳಿಸು
ಅದಮ್ಯ ಚೇತನನೆ ನೀ
ಆರದಿರುವಂತೆ
ಆಸರೆಯ  ಬೆಳಕು
                   ಶೈಲೂ...
[8/12/2022, 7:22 pm] Dr. B. N. Shylaja Ramesh: ಅಂತರಂಗದಲಿ ಅರಳಿದೆ
ಅಕ್ಕರೆಯಲಿ ಆನಂದದ ಹೂ
[9/12/2022, 9:51 pm] Dr. B. N. Shylaja Ramesh: "ಇದು ಪ್ರಸ್ತುತ ಜಗದ ಪರಿಸ್ಥಿತಿಯ ಕವಿತೆ. ಪ್ರಸಕ್ತ ಬಹುಪಾಲು ಜನರ ಮನಸ್ಥಿತಿಯ ಭಾವಗೀತೆ. ಯಾರನ್ನೂ, ಏನನ್ನೂ ಪ್ರತಿಭಟಿಸದೆ, ಕಣ್ಣೆದುರಿನ ಅನ್ಯಾಯ-ಅಕ್ರಮ ಎಲ್ಲಕೂ ರಾಜಿಯಾಗುತ ತಾವು ಸುಖವಾಗಿ, ಎಲ್ಲರಿಂದ ಸಮ್ಮಾನಿತರಾಗಿದ್ದರೆ ಸಾಕು ಎನ್ನುವ ಜೀವನ. ಸಮಯ ಸಾಧಕತೆಯೇ ಬದುಕಿನ ಸಾಧನ. ಸುತ್ತಲೂ ಇಂತಹವರೇ ಹೆಚ್ಚು, ಇವರೇ ಸಕಲರಿಗೂ ಅಚ್ಚುಮೆಚ್ಚು. ಏನಂತೀರಾ.?" - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.

ಸಮಯ ಸಾಧಕರು.!

ಅವನೆಷ್ಟು ಮಹಾ ಧಗಾಕೋರನಾದರೇನು?
ಕಂಡಕಂಡವರ ವಂಚಿಸುತ ಮೆರೆದಿದ್ದರೇನು?
ಅವನ ಮೋಸಗಳ ಪಟ್ಟಿ ನನಗೇಕೆ ಬೇಕು?
ನನಗವನಿಂದ ನಿತ್ಯ ಆದಾಯವಾದರೆ ಸಾಕು.!

ಇವನೆಷ್ಟು ಕಡುದುಷ್ಟ ಪಾಪಿಯಾದರೇನು.?
ಸಿಕ್ಕ ಸಿಕ್ಕವರ ಸಿಗಿಯುತ ಬಗೆದಿದ್ದರೇನು.?
ಇವನ ಪಾಪಗಳ ಪ್ರವರ ನನಗೇಕೆ ಬೇಕು.?
ನನಗಿವನಿಂದ ಸದಾ ಲಾಭವಾದರೆ ಸಾಕು.!

ಮಾಡಿವರ ಪಾಪ ವೃಥಾ ಆಡುವವರಿಗಂತೆ
ನಮಗೇಕೆ ಬೇಕು ಅವರಿವರ ಕರ್ಮದ ಚಿಂತೆ?
ಕಣ್ಣೆದುರು ಕಂಡರು ಸುಮ್ಮನಿರುವುದೇ ಲೇಸು
ನುಡಿದು ಕಟ್ಟಿಕೊಳ್ಳಬಾರದು ಯಾರ ಮುನಿಸು!

ನೋಡಿಯೂ ನೋಡದಂತಿರಬೇಕು ದಿನವು
ಕೇಳಿಯೂ ಕೇಳದಂತಿರಬೇಕು ಪ್ರತಿಕ್ಷಣವು
ಹೊಡೆದವನಿಗೂ ಭೇಷ್ ಎಂದೆನ್ನುತಿರಬೇಕು
ಹೊಡೆಸಿಕೊಂಡವನಿಗೂ ಅಯ್ಯೋ ಅನ್ನಬೇಕು!

ಅಲ್ಲೂ ತಲೆಯಾಡಿಸಿ ಇಲ್ಲೂ ಗೋಣಾಡಿಸಿ
ಎಲ್ಲ ಕಡೆಯೂ ಸಂಭಾಳಿಸುತಿರಬೇಕು ಬಂಧ.!
ಅವರನ್ನೂ ಓಲೈಸಿ, ಇವರನ್ನೂ ಮೇಲೇರಿಸಿ
ಸಕಲರೊಂದಿಗೆ ಉಳಿಸಿಕೊಳ್ಳಬೇಕು ಸಂಬಂಧ.!

ನಾನು ಮತ್ತು ನನ್ನಂತವರು ಇರುವುದೇ ಹೀಗೆ
ಯಾರನ್ನೆಂದೂ ಎದುರು ಹಾಕಿಕೊಳ್ಳದ ಹಾಗೆ
ಯಾರಿಂದೇನು ಬೇಕಾಗಬಹುದೋ ನಾಳೆಗಳಿಗೆ?
ಯಾರು ಉಪಯೋಗವೋ ಆ ವೇಳೆ ಘಳಿಗೆಗೆ.?

ಎಂದಿಗು ದೂರ ಮಾಡಿಕೊಳ್ಳಬಾರದು ಜನಾನ
ಸಹಿಸಿ ಸುಖವಾಗಿಸಿಕೊಳ್ಳಬೇಕು ನಮ್ಮ ಜೀವನ 
ಕಾರ್ಯವಾಸಿ ಕತ್ತೆಕಾಲು ನಮ್ಮೀ ಜಾಯಮಾನ
ನಮ್ಮಂತಹವರಿಗೇ ಇಂದು ಒಳ್ಳೆಯ ಜಮಾನ.!

ಎ.ಎನ್.ರಮೇಶ್.ಗುಬ್ಬಿ.
[9/12/2022, 10:04 pm] Dr. B. N. Shylaja Ramesh: ನಾನು, ನನ್ನ ಸಂಸಾರ, ನನ್ನ ಪರಿವಾರ
ಚೆಂದಿದ್ದರಷ್ಟೇ ಸಾಕು, ಬೇಡ ಬೇರೆ ಬಡಿವಾರ
ಯಾರು ಕೂಗಾಡಿ ಬಡಿದಾಡಿದರೇನಂತೆ.?
ಬೇಕಿಲ್ಲ ನಮಗಾವ ಜಗದ ಚಿಂತೆ..!

ಮತ್ತೂ ಒಳ್ಳೆಯದೇ, ಅವರವರು ಬಡಿದಾಡಿಕೊಂಡರೆ
ಉಪಯೋಗವಾದೀತೆಮಗೆ ಅವ ನೊಂದುಕೊಂಡರೆ
ನೆರೆಮನೆಯ ಸುಡುವ ಬೆಂಕಿಯಲಿ ಚಳಿಕಾಯಿಸಿ
ಮೋಜುಪಡೆಯಬಹುದವರನು ನೆಲಕಚ್ಚಿಸಿ..!
[9/12/2022, 10:12 pm] Dr. B. N. Shylaja Ramesh: ಅವನಾರಾದರೇನಂತೆ ನಮಗೇನು.?
ಲೂಟಿಹೊಡೆದು ಬದುಕುವ ಖದೀಮನಾದರೇನು
ಗೆದ್ದೆತ್ತಿನ ಬಾಲಹಿಡಿವ ನಾವು ಅತೀ ಚಾಣಾಕ್ಷರು
ಬಿದ್ದವರನ್ನಲ್ಲಲ್ಲೇ ತುಳಿದೇಳುವ ಬುದ್ಧಿವಂತರು
[15/12/2022, 2:42 pm] Dr. B. N. Shylaja Ramesh: ಶ್ರೀಮಾತಾ ಶ್ರೀ ಶಾರದಾ ದೇವಿಯರ ಜನ್ಮೋತ್ಸವದ  ಹಿನ್ನೆಲೆಯಲ್ಲಿ  ಬರೆದ  ಕವಿತೆ

ಅಮ್ಮಾ ಅಪ್ಪಿಕೋ ಎನ್ನ
*******************

ಅಮ್ಮಾ ಅಮ್ಮಾ ಎಂದು ಹಾತೊರೆದು ನಾ ಬಂದೆ
ಬಳಿಸಾರಿ  ಪ್ರೀತಿಯಲ್ಲಿ ಪೊರೆಯೆನ್ನ ತಾಯೇ. ||

ಹೊಕ್ಕಿಹುದು ಹೃದಯದೊಳು ಹೆರತನದ  ಹೆದರಿಕೆಯು
ಬದುಕ  ಜಂಜಾಟದಲ್ಲಿ ಜೀವ ಸಿಕ್ಕಿಹುದು
ಬವಣೆಯ  ಹುದುರೊಳಗೆ ಬುದ್ಧಿ ಮಂಕಾಗಿಹುದು
ನನ್ನತನವೇನಾಯ್ತೋ  ಕಾಣದಾಗಿಹುದೂ.  ||

ಎಲ್ಲೆಲ್ಲಿ  ನೋಡಿದರೂ ಸಿಕ್ಕುಗಳು  ಬದುಕಲ್ಲಿ
ನರಳಿ ಬದುಕಲು ಕಷ್ಟ  ಕಾಯಬೇಕಿಲ್ಲಿ
ಬೆದರಿಕೆಯ  ಮುಸುಕೊಳಗೆ ಉಸಿರು ಬಿಗಿದಂತಾಗಿ
ತಾಳಲಾರೆನು ತಾಯೇ  ಪಾರುಗಾಣಿಸೆಲೇ. ||

ಸಿಲುಕಿ ನಿಂತಿಹೆ ನಾನು ಆಸೆ ಮಾಯೆಯ ಒಳಗೆ
ನೀಡು ನಾಮದ ಬಲವ ದಾಟುವೆ ಭವಸಾಗರವ
ಮುಚ್ಚುಮರೆ ಮಾಡದೇ ಎತ್ತಿ ನಿಲಿಸು ತಾಯೇ
ಹೊದಿಸಿ ಪ್ರೀತಿಯ  ಸೆರಗ ಅಪ್ಪಿಕೊ ಎನ್ನ . ||

            ಶೈಲೂ......
[15/12/2022, 2:52 pm] Dr. B. N. Shylaja Ramesh: ಶ್ರೀ  ಶಾರದಾ ಮಾತೆ
******************

ಕರುಣೆಯೇ ಮೂರ್ತ ವೆತ್ತ ಸ್ವರೂಪ
ಅದು ತಾಯೇ ನಿನ್ನದೇ ರೂಪ

ಡಕಾಯಿತನಲ್ಲೂ  ನೀ ಹರಿಸಿದೆ ಪ್ರೀತಿ
ಅದು ನಿಜದೇ ತಾಯಿ ನೀಡುವಾ ರೀತಿ

ನೀ ಕಾಳಿ ನೀ ಲಕ್ಮಿ  ನೀ  ಬಿಜ್ಜೆಯಂತೆ
ಸರಿಸುತ್ತ ದೈವತ್ವ ನೀ  ಬಾಳ್ದೆ ಸಾಮಾನ್ಯಳಂತೆ

ಶ್ರೀ ರಾಮಕೃಷ್ಣ ರ ತಪಸ್ಸಿನ ಫಲವೋ
ಕರುಣಾರೂಪಿಣಿ  ನೀನಾದೆ  ಅಮೃತಫಲವೂ

ಜಗಜ್ಜನನಿ ನೀ  ತ್ರೈಲೋಕ ಪಾಲಿನಿ
ಸನ್ಮತಿದಾಯಿನಿ  ನೀ  ಚಿರಸುಖ ದಾಯಿನಿ

ತ್ಯಾಗವಿಭೂಷತೆ  ನೀ  ಜ್ಞಾನದಾತೆ
ಸರ್ವರಿಂದರ್ಚಿಸೋ ನೀ  ಯೋಗವಿದಾತೆ

ದೀನರ ಈ  ಆರ್ತ ಮೊರೆಯನು ಕೇಳಿ
ಬಂದೆಯಾ ಮಾತೇ ಶ್ರೀ ಶಾರದಾ ರೂಪ ತಾಳಿ

ಸಂಕಗಳನೇ ಹೊತ್ತ ನೀ  ಅಗ್ನಿಪರ್ವತ
ಕಳೆಯುವೆ ಕೊಳೆಯ ಕರೆದರೆ ತಾಯಿಯೆ ನುತ

ಆಕಾಶದಂತೆ  ನೀ ಗಾಂಭೀರ್ಯವಂತೆ
ಆವರಿಸಿತ್ತೇಕೆ ಮನದಿ ನೂರಾರು ಚಿಂತೆ

ದೀನೋದ್ಧಾರಕೆಂದೇ ನೀ  ದೀನರೂಪದಿ  ಬಂದೆ
ಅಭಯ ನೀಡು ತಾಯೇ  ನಾ  ಅಮ್ಮಾ  ಎಂದೆ

ಕೊನೆಯಿಲ್ಲದ ದುಃಖದಿಂದೆನ್ನ ಉದ್ಧರಿಸು
ಮನದ  ದೇಗುಲದಲ್ಲಿ ತಾಯೇ ನೀ  ಬಂದು ನೆಲೆಸು

             ಶೈಲೂ.......
[17/12/2022, 6:40 pm] Dr. B. N. Shylaja Ramesh: #ಸ್ವರಚಿತ_ಒಗಟು

ನೀರು ಬೇಡ, ಗೊಬ್ಬರ ಬೇಡ
ಆದರೂ ಹುಲುಸಾಗಿ ಬೆಳೆಯುತ್ತೆ
ಭೂಮಿಯೂ ಬೇಕಿಲ್ಲ, ಕತ್ತರಿಸಿದಷ್ಟೂ ಚಿಗುರುತ್ತೆ
......ಏನದು?

( ಗಡ್ಡ, ಮೀಸೆ 😀)

ಜಗವೇ ಕುಡುಕರ ಸಂತೆ
ಬೆಳಗಾದರೆ ಇರಲೇ ಬೇಕಂತೆ
ಇದ ಕುಡಿಯದವರು ತೀರಾ ವಿರಳ
..........ಏನದು?

(ಕಾಫಿ, ಟೀ)

         ಶೈಲಜಾ ರಮೇಶ್
[20/12/2022, 7:01 pm] Dr. B. N. Shylaja Ramesh: #ಅವತ್ತೇಹೇಳಿಬಿಡಬೇಕಿತ್ತು 
ಮನದ ಮಾತುಗಳನು
ಆಸ್ಥೆಯಲಿ ಕಟ್ಟಿಕೊಂಡ
ನಿನ್ನೆಡೆಗಿನ ಕನಸುಗಳನು

ಒಡಲಾಳದಲಿ ಹುದುಗಿರುವ
ನಿನ್ನೊಂದಿಗಿನ ಪ್ರೀತಿಯನು
ನಿನ್ನೆಡೆಗೆ ನನಗಿರುವ ಅದಮ್ಯ
ತೀರಲಾರದ ವಿಶ್ವಾಸವನು

ಕ್ಷಣಕ್ಷಣವೂ ಜಪಿಸುತ್ತಿರುವ
ನಿನ್ನ ಮುದ್ದು ನಾಮವನು
ಮನದ ಮೂಲೆಯಲವಿತ
ಹೇಳಲಾರದ ಭಾವವನು

ಕಣ್ಣ ಗೋಳಗಳಲವಿತ
ಆ ದಿವ್ಯ ರೂಪವನು
ತುಟಿಬಿಚ್ಚಿ ಹೇಳದಿದ್ದ
ನನ್ನೊಲವ ನುಡಿಗಳನು

ಹೇಳದಿದ್ದುದರಿಂದಲೇ
ಮಡುವುಗಟ್ಟಿದೆ ಮುನಿಸು
ತೆರೆದಿಟ್ಟಿದ್ದಿದ್ದರೆ ಮನಸು
ನನಸಾಗುತ್ತಿತ್ತೇನೋ ಕನಸು

ಇನ್ನಾದರೂ ಹೇಳಿಬಿಡುವೆ
ಎಂದು ಸಿಗುವೆ ಒಲವೇ
ಮುನಿಸು ಕಳೆದು ಮನಸು ತೆರೆದು
ಬಂದುಬಿಡು ಬಳಿಗೆ 

  ಡಾ: ಶೈಲಜಾ ರಮೇಶ್
[26/12/2022, 6:55 pm] Dr. B. N. Shylaja Ramesh: ನಾಡಿನ ರೈತ
ದೇಶದ ಬೆನ್ನೆಲುಬು
ದುಡಿದರವ
ಜೀವಸಂಕುಲಕನ್ನ
ನಿಸ್ವಾರ್ಥ ಸೇವೆ
ಅವನ ಮೂಲ ಧ್ಯೇಯ
ಮಳೆ ಬಿಸಿಲ
ಲೆಕ್ಕಿಸದೆ ದುಡಿವ
ದೇಶದ ಅನ್ನದಾತ..!
[26/12/2022, 7:06 pm] Dr. B. N. Shylaja Ramesh: ರೈತನಂತೆಯೇ
ಈತನೂ ಬೆನ್ನೆಲುಬು
ದೇಶ ರಕ್ಷಣೆ
ಈತನ ಮೂಲ ಧ್ಯೇಯ
ಚಳಿಯೆನ್ನದೆ
ಮಳೆಬಿಸಿಲೆನ್ನದೆ
ತನ್ನನೇ ತೇಯ್ದು
ಶತೃವನು ತರಿದು
ದೇಶ ರಕ್ಷಿಪ ಯೋಧ..!
[27/12/2022, 9:52 am] Dr. B. N. Shylaja Ramesh: ನಿವೃತ್ತಿಯೆಂಬುದು ವೃತ್ತಿ ಜೀವನದಲ್ಲಿ ಒಂದು ಪ್ರಮುಖ ಘಟ್ಟ. ಬೆಳಗ್ಗಿನಿಂದ ಸಾಯಂಕಾಲ ತನಕ ಎಡೆಬಿಡದೆ ತಮ್ಮನ್ನು ಕೆಲಸಗಳಲ್ಲಿ ತೊಡಗಿಸಿಕೊಂಡಿರುವಾಗ ನಿವೃತ್ತಿಯ ಮರುದಿನವೇ, ದಿನಾ ಕಚೇರಿಯಲ್ಲಿ ಮಾಡುತ್ತಿದ್ದ ಕಲಸಗಳಿಲ್ಲದೆ ತಾನೇನು ಮಾಡಲಿ… ಹೇಗೆ ಸಮಯ ಕಳೆಯಲಿ.. ಎಂದು ಕಕ್ಕಾಬಿಕ್ಕಿಯಾಗುವುದು ಸಹಜ ತಾನೇ…? ಬಿಕೋ ಎನ್ನುವ ಮನಸ್ಸು ಏನೂ ಮಾಡಗೊಡುವುದಿಲ್ಲ.ಮನಸ್ಸಿನ ಸಮತೋಲನ ಕಾಪಿಡುವುದು ಈ ಸಮಯದಲ್ಲಿ ಬಹಳ ಮುಖ್ಯ. ಮಹಿಳೆಯರಿಗೂ ಮನೆಯಲ್ಲಿ ಕೆಲಸಗಳು ಬಹಳ ಭೇಗ ಮುಗಿದು ಹೋಗುವುದು.. ಇರುವುದು ಇಬ್ಬರೇ ತಾನೇ ?ಮತ್ತೆ, ದೂರದರ್ಶನದ  ಧಾರಾವಾಹಿಗಳ ಗೀಳು ಹತ್ತಿದರೆ ಅವರನ್ನು ದೇವರೇ ಕಾಪಾಡಬೇಕಷ್ಟೆ..! ಕೆಲವು ಜನ ಗಂಡಸರು ಬೆಳಿಗ್ಗೆದ್ದು ಕಾಪಿ ಕುಡಿದು, ಪೇಪರಿನ ಒಂದಕ್ಷರವನ್ನೂ ಬಿಡದೆ ಓದಿ,ಮಲಗಿ ಕಾಲಕಳೆಯುವುದನ್ನು ನೋಡಬಹುದು. ಈ ಜೀವನ ಸ್ವಲ್ಪ ಸಮಯದಲ್ಲೇ ಬೇಸರ ಬರುವುದು ಖಚಿತ. ಒಂದಿಗೇ “ಕೆಲಸಗಳಿಲ್ಲದ ಮನ ದೆವ್ವಗಳ ಅರಮನೆ” ಎಂಬಂತೆ ಚಿಂತೆಗಳು ಮುತ್ತಲು ಸುರುವಾಗುವುದು. ತಗೊಳ್ಳಿ… ಆಮೇಲೆ ಸರದಿಯಂತೆ ಒಂದೊಂದೇ ರೋಗಗಳು  ಆಗಮನ… ಇದಕ್ಕೇ ಬೇಕು.. ಸದಾ ಮನಸ್ಸಿಗೂ ದೇಹಕ್ಕೂ ಕೆಲಸಗಳು..ಅದೇ ಉತ್ತಮ ಹವ್ಯಾಸಗಳು…ವಿವಿಧ ರೀತಿಯ ಮನೋವೃತ್ತಿಯವರಿಗೆ ತಮ್ಮ ವೃತ್ತಿಯ ಬಳಿಗ ನಿವೃತ್ತಿ ಜೀವನದಲ್ಲಿ ಈ ಉತ್ತಮ ಪ್ರವೃತ್ತಿಗಳೇ ಶಕ್ತಿ ತುಂಬುವುವು.ಸಾಧಾರಣ 58-60 ವರ್ಷ ವಯಸ್ಸಿನ ಬಳಿಕ ತಮ್ಮ ಮಕ್ಕಳ ಜವಾಬ್ದಾರಿಯೆಲ್ಲಾ ಮುಗಿದು ಮಕ್ಕಳು ಸ್ವತಂತ್ರರಾಗಿರುತ್ತಾರೆ. ಆಮೇಲೆ ಮನೆಯಲ್ಲಿ ಇಬ್ಬರೇ.. ನಿನಗೆ ನಾನು..ನನಗೆ ನೀನು ಎಂಬಂತೆ. ಮಕ್ಕಳು, ಮೊಮ್ಮಕ್ಕಳು ಹತ್ತಿರವಿದ್ದರೆ ರಜೆಗಳಲ್ಲಿ ಆಗಾಗ  ಆಗಮನ. ದೂರವಿದ್ದರೆ ಆಗಮನದ ಕಾಲವೂ ದೂರ
[27/12/2022, 1:14 pm] Dr. B. N. Shylaja Ramesh: #ಗೌರವಯಾವತ್ತಿಗೂಪರಸ್ಪರ 

ಗೌರವ ನಾವೊಬ್ಬರಿಗಿತ್ತರೆ
ನಮಗೂ ಗೌರವದಲೇ ಉತ್ತರ
ಒಬ್ಬರಿಗೊಬ್ಬರು ಪರಸ್ಪರ
ಗೌರವದಿಂದಾದರಿಸುವುದು ಸಂಸ್ಕಾರ.!

ಮಾತಿನಲ್ಲಷ್ಟೇ ಇದ್ದರೆ ಸಾಲದು
ಹೃದಯದಿಂದಾದರಿಸುವುದು ಒಳ್ಳೇದು
ಎದುರಲ್ಲಟ್ಟಕ್ಕೇರಿಸಿ ಮೆರೆಸಿ
ಬೆನ್ನಿಗಿರಿದು ಸಂಭ್ರಮಿಸುವುದು ಕೆಟ್ಟದು

ನೀಡಿ, ಪಡೆದಾಗ ಎಲ್ಲವೂ ಚೆನ್ನ
ನೀಡದೇ ನಿರೀಕ್ಷಿಸುವುದೇನು ಚೆನ್ನ.?
ನಾ ನಿನಗಿದ್ದರಷ್ಟೇ.. ನೀನು ನನಗೆ 
ಇದುವೇ ಲೋಕದ ನೀತಿ ಕಥೆಯೆಮಗೆ.!


         ಶೈಲಜಾ ರಮೇಶ್
[27/12/2022, 1:36 pm] Dr. B. N. Shylaja Ramesh: #ಶಾಶ್ವತವಲ್ಲ_ತೋರ್ಪಡಿಕೆ_ಜೀವನ 

ತನ್ನತನವನ್ನು ಬದಿಗೊತ್ತಿ
ಎಷ್ಟು ದಿನ ನಟಿಸಲಾದೀತು.?
ಸಹಜತೆಯನು ಅದುಮಿಟ್ಟು
ಹೇಗೆ ತಾನೇ ಮೆರೆಯಲಾದೀತು.?

ನೋವುಗಳ ಒಳಗೇ ನುಂಗಿ
ನಗುವುದು ಎಷ್ಟು ದಿನ.? 
ಕಣ್ಣಿನಿಂದಿಳಿದ ಕಂಬನಿಯೊರೆಸುತ್ತ
ಸಾಗಿಸಲಾದೀತೇ ಜೀವನ.?

ದುರುಳತನವನು ಮರೆಮಾಚಿ
ಎಷ್ಟುದಿನವಿದ್ದೀತು ಒಳ್ಳೆಯತನ.?
ದ್ವೇಷಾಸೂಯೆಗಳನು ಬೆನ್ನತ್ತಿ
ಬದುಕಲಾದೀತೇನು ಶುಭ್ರ ಮನ.?

ಸಹಜತೆಯಿದ್ದರೇನೇ ಬದುಕು ಸರಳ
ನಾಟಕೀಯತೆ ಸುಖ ಕೊಡದು
ನಾವಿದ್ದಂತೆಯೇ ಸ್ವೀಕರಿಸಲಿ ಜಗವು
ತೋರ್ಪಡಿಕೆ ಜೀವನ ಸಲ್ಲದು..!

          ಶೈಲಜಾ ರಮೇಶ್
[27/12/2022, 2:39 pm] Dr. B. N. Shylaja Ramesh: #ಹಾಯ್ಕುಗಳು

#ಅಪಶಕುನ

ಅಪಶಕುನ
ಅವನೆನ್ನ ಬಾಳಿಗೆ
ಸರಿಸು ದೂರ

#ಸಂದೇಹ

ಸಂದೇಹವಿಲ್ಲ
ಅವ ಜೊತೆಗಿದ್ದರೆ
ಬಾಳು ಸುಂದರ..!

 #ಸಂಶಯ

ಬಿಡು ಸಂಶಯ
ಜೊತೆಗೇ ಬರುವೆನು
ಬಾಳಿನುದ್ದಕ್ಕೂ...!

#ಅವ್ಯಕ್ತ

ಅರಿಯಲಾರೆ
ನಿನ್ನೊಳ ಮನದ ಆ
ಅವ್ಯಕ್ತ ಭಾವ..!

#ದಕ್ಷಿಣೆ

ದಕ್ಷಿಣೆ ನೀಡು
ಸದ್ಬ್ರಾಹ್ಮಣರಿಗೆ ನೀ
ದೋಷ ಪೋಪುದು

ಡಾ: B.N ಶೈಲಜಾ ರಮೇಶ್
[27/12/2022, 3:28 pm] Dr. B. N. Shylaja Ramesh: ಸೂರ್ಯ (ಕಾವ್ಯಾತ್ಮಕವಾಗಿ)
********
 
ಮೂಡಣದಿ ಚೆಲ್ಲಿಹುದು ಹೊನ್ನ ಬಣ್ಣದ ನೀರು
ಏರಿ ಹೊರಟಿಹ ಇನನು ಸಪ್ತಾಶ್ವದ ತೇರು..!
ತಮವ ಸರಿಸಿ ಬೆಳಕೆಲ್ಲೆಡೆ ಪಸರಿಸುತ
ಧರೆಯಂಗಳಕ್ಕಿಳಿದ ಚರಾಚಾರವನ್ನೆಬ್ಬಿಸುತ..!

ಜಡವ ತರಿದು ತುಂಬಿ ಜೀವನೋತ್ಸಾಹ
ಭ್ರಮೆಯ ಅಳಿಸಿ ಬೆರೆಸಿ ಶಕ್ತಿಪ್ರವಾಹ..!
ಪುಟಿದೇಳಿಸುವ ಅದಮ್ಯ ನಿತ್ಯ ಚೈತನ್ಯ
ಮರೆಯಾದೊಡನೆ ಕವಿದಿರುಳು ಜಗವು ಶೂನ್ಯ

ಸರ್ವ ಜೀವಿಗಳ ಚಲನವಲನಕಿವ ಬೇಕು
ಆರೋಗ್ಯಭಾಗ್ಯ ಜಡತ್ವಕಿವನೀವ ಬೆಳಕು
ಇವನಿಂದಲೇ ಬೆಳಗು ಬೈಗು ಕತ್ತಲೆಯ ಚಿತ್ರಣ
ಇವ ಮುನಿದರೆ ಜಗದ ಜೀವಿಗಳಿಗೆಲ್ಲಿದೆ ತ್ರಾಣ.?

        ✍️ಡಾ: ಶೈಲಜಾ ರಮೇಶ್
[27/12/2022, 3:41 pm] Dr. B. N. Shylaja Ramesh: ಸೂರ್ಯ(ವೈಜ್ಞಾನಿಕವಾಗಿ)
**********************

ಕ್ಷೀರ ಪಥದಲ್ಲಿ ಉರಿದುರಿವ ಗೋಳ
ವ್ಯಾಪಿಸುತ್ತೆಲ್ಲ ಬಿಸಿ ಬಿಸಿಯ ಅನಿಲ
ಹೊಳೆವ ಸೌರವ್ಯೂಹದ ಕೇಂದ್ರ ಬಿಂದು...
ಹೆಸರಿಸುತ್ತಾರದನನು ಸೂರ್ಯನೆಂದು.!

ಹೈಡ್ರೋಜನ್ ಹೀಲಿಯಮ್ ಸಮ್ಮೇಳ
ಭಾಗವೆರಡು, ವಾತಾವರಣ ದ್ಯುತಿಗೋಳ
ಬೆಳಕು ಶಾಖ ಶಕ್ತಿಯ ಪ್ರಮುಖ ಮೂಲ
ಇವಿಲ್ಲದೇ ಜೀವಿಯ ಜೀವನ ಸಾಧ್ಯವಿಲ್ಲ.!

ಯುವಿ ಕಿರಣದ ಪ್ರಖರತೆ ಹಾನಿಕಾರಕ
ಬರಿಗಣ್ಣಿನ ನೋಟ ದೃಷ್ಟಿಗೆ ಮಾರಕ..
ಆದರೂ ಜೀವ ಜೀವನಕೆ ಸೂರ್ಯ ಪ್ರಮುಖ
ಜಗದ ಚಟುವಟಿಕೆಗಳಿಗೆ ಸೂರ್ಯ ಪ್ರೇರಕ.!

ದ್ಯುತಿ ಸಂಶ್ಲೇಷಣೆಗೆ ಸಹಾಯಕಾರಿ
ಅತೀ ನೇರಳೆ ಬಣ್ಣ ಅಪಾಯಕಾರಿ
ಭೂಮಿಯ ನೂರು ಪಟ್ಟು ಗಾತ್ರದಲಿ
ಪ್ರಮುಖ ಪಾತ್ರ, ಸೌರಮಂಡಲದಲಿ.!

ಗ್ರಹವಲ್ಲವಿದು ಹೊಳೆದೊಳೆವ ನಕ್ಷತ್ರ
ಅದಮ್ಯ ಶಕ್ತಿಮಾಧ್ಯಮದ ಮೂಲಕ್ಷೇತ್ರ
ಗ್ರಹಗಳನ್ನೆಲ್ಲ ಹಿಡಿತದಲ್ಹಿಡಿದ ಶಕ್ತಿ
ಗುರುತ್ವಾಕರ್ಷಣ ತತ್ವಕಿದು ಸತ್ಯ ಸೂಕ್ತಿ.!

✍️ ಡಾ: B.N ಶೈಲಜಾ ರಮೇಶ್
[27/12/2022, 3:51 pm] Dr. B. N. Shylaja Ramesh: ಸೂರ್ಯ (ಪುರಾಣ ಕಂಡಂತೆ)
**********************

ಆದಿತ್ಯ ಮಾರ್ತಾಂಡ ಭಾನು ರವಿ ದಿನಕರ
ಅತಿಶ್ರೇಷ್ಠ ಸಂತಾನನಿವ ಅದಿತಿ ಕಶ್ಯಪರ
ಬುಧನ ಶಾಪಕ್ರೋಧಕೆ ಜನಿಸಿದ ಮೃತಶಿಶು
ಹರಿ, ಪಿತನನುಗ್ರಹದಿ ಬದುಕಿದ ವರಶಿಶು..!

ಪ್ರಭಾವ ಸಂವತ್ಸರ ರಥಸಪ್ತಮಿ ಜನನ
ಉಡುಗೆ ತೊಡುಗೆ ರಥ ಕಮಲ ರಕ್ತವರ್ಣ
ಆಕರ್ಷಕ ಚೇತೋಹಾರಕ ಅನುಪಮ ರೂಪ
ಮಿತಭಾಷಿ ಗಂಭೀರ ಚತುರಮತಿ ಪ್ರತಾಪ

ಸಂಜ್ಞಾ, ಛಾಯೆಯರ ಪತಿ, ಈ ದಿನಪತಿ
ಸಕಲ ಚರಾಚರಕೆ ಬೆಳಕೀವ ಅಧಿಪತಿ
ಯಮ, ಯಮುನೆ, ಶನೈಶ್ಚರರ ಪಿತನು
ಜಗದ ಚಕ್ಷುವೆನಿಸುವ ಸೂರ್ಯ ಆದಿತ್ಯನು.!

✍️ ಡಾ: B.N ಶೈಲಜಾ ರಮೇಶ್
[27/12/2022, 4:01 pm] Dr. B. N. Shylaja Ramesh: ಸೂರ್ಯ (ಜ್ಯೋತಿಶ್ಶಾಸ್ತ್ರ ಕಂಡಂತೆ)
***************************

ಗ್ರಹಗಳಲಗ್ರಗಣ್ಯ ರಾಜಗ್ರಹನು
ಸಿಂಹರಾಶ್ಯಾಧಿಪನಿವ ಆತ್ಮಕಾರಕನು
ಉಚ್ಚನಿವ ಮೇಷದಲಿ ತುಲಾದಲಿ ನೀಚ
ಸ್ವಗೃಹದಲೇ ಮೂಲ ತ್ರಿಕೋಣಸ್ಥ...!

ಉನ್ನತಾಧಿಕಾರಿ ಜ್ಞಾನಾನವಂತ ಸಾಹಸಿ
ಅಹಂಕಾರಿ ಉಷ್ಣದೇಹದ ರಾಜಸಿ
ಪಿತೃವಿಗಧಿಪತಿಯಿವನೇ ಕ್ಷತ್ರಿಯವರ್ಣ
ವೈದ್ಯಶಾಸ್ತ್ರ ವಿದ್ಯುತ್ಕೆಲಸದಲಿ ತೀಕ್ಷ್ಣ..!

ಅಸ್ಥಿ, ಮಜ್ಜೆ, ಬಲದಕ್ಷಿಗೆ ಕಾರಕ
ಒಲಿಯಲಿವ ಆರೋಗ್ಯ ಪ್ರದಾಯಕ
ಶುಭನಾದರೆ ಪಾರಮಾರ್ಥಿಕ ಗುಣ
ರಾಶಿಯಿಂರಾಶಿಗಡಿಯಿಡೆ ಸಂಕ್ರಮಣ..!

ಸಪ್ತಮದೃಷ್ಟಿ, ಚತುರ್ಥ ಬಲಹೀನಸ್ಥಿತಿ
ದಶಮದಲಿ ದಿಗ್ಬಲ ಉದ್ಯೋಗದಲ್ಲಿ ಪ್ರಗತಿ
ಸ್ಥಿರಸ್ವಭಾವದ ಮಿತ್ರ ಧೀರಶೂರ ಗಂಭೀರ
ಗ್ರೀಷ್ಮಋತುವಿಗಧಿಪತಿ ಚತುರ ದಿವಾಕರ.!

✍️ ಡಾ:B.N ಶೈಲಜಾ ರಮೇಶ್
[28/12/2022, 2:27 pm] Dr. B. N. Shylaja Ramesh: ಚಂದ್ರಮುಖಿ

ಅಂದಗಾತಿ ವಸುಮತಿ ಸೆಳೆವಳು ಮನವನು
ಚೆಲುವಿನ ವೈಯಾರದಿ ಕದಿವಳು ಎದೆಯನು
ನೋಟದಲ್ಲೇ ಮೋಡಿಮಾಡಿ  ಕರೆವಳು ಬಳಿಗೆನ್ನ
ಲಜ್ಜೆಯಲಿ ನುಡಿವಳು ನೀನೇಎನ್ನ ಮನದನ್ನ..!

ಕಾಡುವಳು ಕನಸಲಿ ಮುದ್ದುಮಾತು ನುಡಿಯುತ
ಬರುವಳು ಎದುರಲಿ ಪ್ರೇಮಗಾಥೆ ಬರೆಯುತ
ಅವಳೆನ್ನ ಪ್ರೇಮದೇವಿ ಆಜನ್ಮದ ಪ್ರಿಯಸಖಿ
ಚೆಲುವನ್ನೇ ನಾಚಿಸುವ ದೇವತೆಯೀ ಚಂದ್ರಮುಖಿ

    ಡಾ: ಶೈಲಜಾ ರಮೇಶ್
[28/12/2022, 3:38 pm] Dr. B. N. Shylaja Ramesh: #ಅಳಿಸಲಾಗದ_ಪ್ರೀತಿ 

ಅಳಿಸಲಾಗದ ಪ್ರೀತಿ ನಮ್ಮದು
ಬೆಸೆದುಬಿಟ್ಟಿದೇ ಭಾವ ಬಂಧನ 
ಬಿಡಿಸಲಾರದ ಬಂಧ ನಮ್ಮದು
ಒಲವ ಬದುಕು ಚೆಲುವ ನಂದನ

ಭಾವ ಬೆಸುಗೆಯ ಒಡನಾಟ
ಘಮ  ಘಮಿಸುವ  ಚಂದನ
ಪ್ರೀತಿಯಾಮೃತದ ಸವಿಯೂಟ
ಈ ಬದುಕೇ ನಿತ್ಯ ನೂತನ..!

ನೀನು ನನಗಾಗಿ ನಾನು ನಿನಗೆ
ಸಾಗುತಿರಲಿ ಒಲವ ಜೀವನ
ನಿನ್ನ ಪ್ರೇಮದ ಸವಿಯನುಂಡು
ಈ ಜೀವವು ಪರಮ ಪಾವನ..!

 ಶೈಲಜಾ ರಮೇಶ್
[28/12/2022, 4:29 pm] Dr. B. N. Shylaja Ramesh: #ಕ್ಷಮಾಗುಣ 

ತಪ್ಪೊಪ್ಪುಗಳು ಬದುಕಲಿ ಸಹಜ
ಹಾಗಂತ ತಪ್ಪುಗಳನ್ನೇ ಮಾಡುವುದು ಹೇಯ
ತಪ್ಪನ್ನೆಲ್ಲವ ತಿದ್ದಿಕೊಂಡ ಮನುಜ
ಬಾಳಲಿ ಎತ್ತರಕ್ಕೇರುವುದು ಅವನ ಧ್ಯೇಯ..!

ಬೇಕಂತಲೇ ತಪ್ಪುಗಳಾಗುವುದಿಲ್ಲ
ಅದೆಲ್ಲವೂ ಒಮ್ಮೊಮ್ಮೆ ಕೈಮೀರಿ ನಡೆದ ಕ್ಷಣ..!  
ಅದನ್ನೇ ಎತ್ಹಿಡಿದು ದ್ವೇಷಕಾರುವುದಲ್ಲ
ಕ್ಷಮಿಸಿ ದಾರಿತೋರಿಸುವುದು ಒಳ್ಳೆಯ ಗುಣ..!

     ಡಾ: ಬಿ ಎನ್ ಶೈಲಜಾ ರಮೇಶ್
[29/12/2022, 3:10 pm] Dr. B. N. Shylaja Ramesh: #ಮನೋಬಲ

ಮನೋಬಲ ಒಂದಿದ್ದರೆ ಎಲ್ಲವೂ ಸಾಧ್ಯ
ಮುನ್ನುಗ್ಗುವ ಚಲವಿದ್ದರೆ ಎಲ್ಲವೂ ಭೇದ್ಯ
ಕೈಲಾಗದ ಮಾತಿಗಿಲ್ಲಿ ಇನಿತೂ ಬೆಲೆಯಿಲ್ಲ
ಧೈರ್ಯವೇ ಮೂಲವೆಂದರಿತು ನಡೆ ಮೆಲ್ಲ

ಹಿಂದಿಹರು ಸಕಲಕೂ ತಡೆಯೊಡ್ಡುವ ಜನ
ಕೆಣಕಿ ಕೆರಳಿಸಿ ನೋಯಿಸುತ್ತಾರೆ ಮನ
ಎಲ್ಲರ ಮಾತಿಗಂಜಿ ನೋಯುವುದು ಬೇಡ
ಮಣೆ ಹಾಕಿದವರೆಲ್ಲ ಬಯಸುವರು ಕೇಡ

ಎಲ್ಲವನ್ನ ಹಿಂದಿಕ್ಕಿ ಆಗಬೇಕು ಸಬಲ
ಆಗಲೇ ಬದುಕಬಹುದು ಆಗಿ ಪ್ರಭಲ
ಮನದ ಸುಸ್ಥಿತಿಯು ಎಲ್ಲಕ್ಕೂ ಮುಖ್ಯ
ಬೆಳೆಸಬಹುದಾಗ ಗೆಲುವಿನ ಸಖ್ಯ...!
[29/12/2022, 4:54 pm] Dr. B. N. Shylaja Ramesh: ಜ್ಞಾನಪೀಠ ಪ್ರಶಸ್ತಿ ವಿಜೇತ, ಕನ್ನಡ ಸಾರಸ್ವತ ಲೋಕದ ಅವಧೂತ, ರಾಷ್ಟ್ರಕವಿ, ವರಕವಿ ದಿ|| ಕುವೆಂಪು ರವರ ಜನ್ಮೋತ್ಸವದ ನನಪಿಗಾಗಿ ಈ ಪುಟ್ಟ ಕವನದ ಅರ್ಪಣೆ.😊

ಜನುಮದಿನದೆ ಕವಿಗೆ ನಮನ
***********************

ವರಕವಿಯ ಜನುಮದಿನ
ಸಾಹಿತ್ಯ ಕ್ಷೇತ್ರದೇ ಸಂಚಲನ
ರಸಋಷಿಯೆಂದುಸುರಿ
ವಿಶ್ವಮಾನವಗೆ ಕೀರ್ತಿ ಗರಿ

ಕನ್ನಡವೆಂದರೆ ಮಿಡಿದು
ಕುಣಿಯಿತೀ ಕವಿ ಹೃದಯ
ಎಲ್ಲಿದ್ದರೂ ಎಂತಿದ್ದರೂ ಸೈ
ಕನ್ನಡ.ಭಾಷೆಯ ಕಾವ್ಯ

ಬೇರೂರಿ ಚಿಗುರಿ ನಳನಳಿಸಿ
ಕನ್ನಡ ಕಾವ್ಯಾಮೃತ ಬಡಿಸಿ
ಮಲೆನಾಡ ಸೊಗದ ಪದಮಾಲೆ
ಇರಿಸಿ ಕನ್ನಡಮ್ಮನ ಪದತಲದಲೇ

ಮಲೆಗಳಲ್ಲಿ ಮದುಮಗಳ ನರ್ತನ
ಕನೂರಿನ ಹೆಗ್ಗಡತಿ ಮೇರುಕೃತಿ
ಬೃಹತ್ ರಾಮಾಯಣ ದರ್ಶನ
ತಂತು ಜ್ಞಾನಪೀಠ ಪ್ರಶಸ್ತಿ

ಇದಾವ ಜನ್ಮಜನ್ಮದ.ಮೈತ್ರಿ
ಕನ್ನಡಭಾಷಾಭ್ಯುದಯ ಖಾತ್ರಿ
ತೆರೆದಿತ್ತು ಕನ್ನಡಮ್ಮನ ಬಸಿರು
ಓ ಅತಿಥಿ ನೀನಾದೆ ಕನ್ನಡದ ಉಸಿರು

ಬಿರುದು ಬಾವಲಿಗಳ ಮಹಾಪೂರ
ಅಸಂಖ್ಯಾತ ಸಾಹಿತ್ಯ ಸಾಗರ
ಜ್ಞಾನಲೋಕದ ದೈದೀಪ್ಯ ಪ್ರಣತಿ
ಕಸ್ತೂರಿ ಕನ್ನಡದ ಹೆಮ್ಮೆಯ ಕೀರ್ತಿ

ಮಲೆನಾಡ ಬನದ ಹೆಮ್ಮೆಯ ಕೋಗಿಲೆ
ನೆಲೆಸಿದಿರನವರತ ಕವಿ ಶೈಲದಲೇ
ಚಿರಸ್ಥಾಯಿ ಅನವರತ ನಿಮ್ಮ್ಹೆಸರು
ಕನ್ನಡ ಸಾರಸ್ವತ ಲೋಕದುಸಿರು

ಕನ್ನಡ ನಾಡಿನ ಹೆಮ್ಮೆಯರತ್ನ
ರಾಷ್ಟ್ರಕವಿ ಬಿರುದಿಗೆ ಭಾಜನ
ಕನ್ನಡಾಂಬೆಯ ಮುಕುಟದ ಗರಿ
ಕುವೆಂಪು ನೀವ್ಕನ್ನಡದ ಐಸಿರಿ

            ಶೈಲೂ......
[29/12/2022, 6:32 pm] Dr. B. N. Shylaja Ramesh: #ತಂದೀತೇ_ಬಾಳಿನಲಿ_ಹೊಸಬೆಳಕು

ಸರಿಸಿ ಹಳೆಯ ವರ್ಷವ
ತರುತ ಹೊಸತು ಹರ್ಷವ
ಬಾಗಿಲ ಬಳಿ ನಿಂತಿದೆ ಹೊಸವರ್ಷ.!
ತಂದೀತೇ ಬಾಳಿನಲ್ಲಿ ಹೊಸಬೆಳಕು.?

ನೋವು ನಲಿವುಗಳ ಆಗರ
ಬದುಕು ಸಾಗುವುದು ದುಸ್ತರ
ಸಾಕುಸಾಕೆನಿಸಿತ್ತು ವರ್ಷ ತಂದ ಆಪತ್ತು.!
ಹೊಸವರ್ಷ ನಿವಾರಿಸೀತೇ ವಿಪತ್ತು.?

ಕಣ್ಣುಗಳಲ್ಲಿ ಭಯದ ಛಾಯೆ
ಆವರಿಸಿ ಮಾಹಾಮಾರಿಯ ಮಾಯೆ
ಎಷ್ಟೆಲ್ಲ ಭೀಕರ ಸಾವು ನೋವುಗಳು.!
ಹೊಸತುವರ್ಷ ತಂದೀತೇ ಬೆಳದಿಂಗಳು.?

ದುಡಿವ ಕೈಗಳು ಖಾಲಿಖಾಲಿ
ಆರ್ಥಿಕತೆ ಹೊಡೆದಿತ್ತು ಜೋಲಿ
ಹೈರಾಣಾಗಿತ್ತು ಜನಜೀವನ ಬೇಸತ್ತು.!
ಹೊಸವರ್ಷವಾದರೂ ತಂದೀತೇ ಸಂಪತ್ತು.?

ಬದುಕು ಬಿಡಿಸಲಾಗದ ಸೊಡಕು
ನಿರೀಕ್ಷೆಗಳಲೇ ಈ ಬದುಕು
ನೆಮ್ಮದಿಯ ನಾಳೆಗಳೆಡೆಗೆ ನಿರುತ ಪ್ರತೀಕ್ಷೆ.!
ನವವರ್ಷ ಗೆಲ್ಲಿಸೀತೇ ಈ ಜೀವನ ಪರೀಕ್ಷೆ.?

ಹತಾಶೆಗಳ ದೂರೀಕರಿಸಿ
ಬದುಕು ಬಂಗಾರವಾಗಿಸಿ
ಮುನ್ನಡೆಸು ಬಾರಾ ನವವರ್ಷ ಕೈಪಿಡಿದು.!
ಬಾಳದಾರಿಗೆ ಜ್ವಲಿಸುವ ಪ್ರಣತಿಯ ಹಿಡಿದು..!

✍️ ಡಾ: ಶೈಲಜಾ ರಮೇಶ್
[29/12/2022, 6:51 pm] Dr. B. N. Shylaja Ramesh: ವರಕವಿಯ ಜನುಮದಿನ
ಸಾಹಿತ್ಯ ಕ್ಷೇತ್ರದೇ ಸಂಚಲನ
ರಸಋಷಿಯೆಂದುಸುರಿ
ವಿಶ್ವಮಾನವಗೆ ಕೀರ್ತಿ ಗರಿ

ಕನ್ನಡವೆಂದರೆ ಮಿಡಿದು
ಕುಣಿಯಿತೀ ಕವಿ ಹೃದಯ
ಎಲ್ಲಿದ್ದರೂ ಎಂತಿದ್ದರೂ ಸೈ
ಕನ್ನಡ.ಭಾಷೆಯ ಕಾವ್ಯ

ಬೇರೂರಿ ಚಿಗುರಿ ನಳನಳಿಸಿ
ಕನ್ನಡ ಕಾವ್ಯಾಮೃತ ಬಡಿಸಿ
ಮಲೆನಾಡ ಸೊಗದ ಪದಮಾಲೆ
ಇರಿಸಿ ಕನ್ನಡಮ್ಮನ ಪದತಲದಲೇ

ಮಲೆಗಳಲ್ಲಿ ಮದುಮಗಳ ನರ್ತನ
ಕನೂರಿನ ಹೆಗ್ಗಡತಿ ಮೇರುಕೃತಿ
ಬೃಹತ್ ರಾಮಾಯಣ ದರ್ಶನ
ತಂತು ಜ್ಞಾನಪೀಠ ಪ್ರಶಸ್ತಿ

ಇದಾವ ಜನ್ಮಜನ್ಮದ.ಮೈತ್ರಿ
ಕನ್ನಡಭಾಷಾಭ್ಯುದಯ ಖಾತ್ರಿ
ತೆರೆದಿತ್ತು ಕನ್ನಡಮ್ಮನ ಬಸಿರು
ಓ ಅತಿಥಿ ನೀನಾದೆ ಕನ್ನಡದ ಉಸಿರು

ಬಿರುದು ಬಾವಲಿಗಳ ಮಹಾಪೂರ
ಅಸಂಖ್ಯಾತ ಸಾಹಿತ್ಯ ಸಾಗರ
ಜ್ಞಾನಲೋಕದ ದೈದೀಪ್ಯ ಪ್ರಣತಿ
ಕಸ್ತೂರಿ ಕನ್ನಡದ ಹೆಮ್ಮೆಯ ಕೀರ್ತಿ

ಮಲೆನಾಡ ಬನದ ಹೆಮ್ಮೆಯ ಕೋಗಿಲೆ
ನೆಲೆಸಿದಿರನವರತ ಕವಿ ಶೈಲದಲೇ
ಚಿರಸ್ಥಾಯಿ ಅನವರತ ನಿಮ್ಮ್ಹೆಸರು
ಕನ್ನಡ ಸಾರಸ್ವತ ಲೋಕದುಸಿರು

ಕನ್ನಡ ನಾಡಿನ ಹೆಮ್ಮೆಯರತ್ನ
ರಾಷ್ಟ್ರಕವಿ ಬಿರುದಿಗೆ ಭಾಜನ
ಕನ್ನಡಾಂಬೆಯ ಮುಕುಟದ ಗರಿ
ಕುವೆಂಪು ನೀವ್ಕನ್ನಡದ ಐಸಿರಿ

            ಶೈಲೂ......
[29/12/2022, 7:16 pm] Dr. B. N. Shylaja Ramesh: #ಕುವೆಂಪು
********
ಶ್ಯಾಮಲ ಕಾನನ
ಶೃಂಗ ತರಂಗಿತ
ಸಹ್ಯಾದ್ರಿಯ ಒಡಲು
ರಸಋಷಿ ಉಗಮಕೆ
ಲಗುಬಗೆಯಲಿ ಸಿದ್ಧವಾಯ್ತು 
ಮಲೆನಾಡಿನ ಮಡಿಲು

ನಿಸರ್ಗದ ಚೆಲುವ
ನಿಗೂಢತೆಯ ಭೇದಿಸಿ, 
ಪದಸಂಪತ್ತಿನಲ್ಲಿ ಬೆರೆಸಿ
ರಸಕಾವ್ಯಧಾರೆ ಹರಿಸಿ
ಕುಪ್ಪಳ್ಳಿಯ ಪುಟ್ಟಪ್ಪ
ಮರೆಯಲಾರದ ರಸಋಷಿ

ಮೇರು ಸಾಹಿತ್ಯದ
ಶಿಖರದ ಶಿಖೆಯಲಿ
ಕನ್ನಡಮ್ಮನ ಕೀರ್ತಿ
ಪತಾಕೆ ಎತ್ತಿಹಿಡಿಯುತ
ವಿಶ್ವಮಾನವನಾಗಿ ನಿಂತ
ಮುಗಿಲೆತ್ತರ ರಸಋಷಿ

ಮಹಾನ್ಕಾವ್ಯಗಳ ಸೃಜಿಸಿ
ರಾಷ್ಟ್ರಕವಿಯೆಂದೆನಿಸಿ
ವರಕವಿ ಮಹಾನ್ಚೇತನ
ಸಾಹಿತ್ಯಕ್ಕೊಂದು ಹೊಸಆಯಾಮ
ಪಸರಿಸಿ ಕನ್ನಡದ ಕಂಪು
ತಾನಾದ ಮರೆಯದ ಕುವೆಂಪು

           ಶೈಲೂ......
   ( ಶೈಲಜಾ ರಮೇಶ್)
[30/12/2022, 1:52 pm] Dr. B. N. Shylaja Ramesh: ಶಿಲೆಯಲ್ಲಿ

ಅರಳಿದೆ ಕಲೆ

ಕಲಾಕಾರನ ಕೈಚಳಕ ವಿಜೃಂಭಿಸಿದೆ

ಎಲ್ಲರ ಮನವನ್ನು ಸೆಳೆದು ಹಿಡಿದಿಡುತ್ತಾ

ತನ್ನತ್ತಲೇ ಸೆಳೆಯುತ್ತಿದೆ ಕಲಾಪ್ರೇಮಿಗಳ ಕೈಬೀಸಿ ಕರೆಯುತ್ತ

ಇದೆಂಥ ಅದ್ಭುತ..! ಉದ್ಗಾರ ಹೊರಟಿದೆ ನೋಡುಗರ ಬಾಯಲ್ಲಿ..

ಕಣ್ಮುಚ್ಚಿದರೂ ಕಲೆಯ ಬಲೆಯೇ ಬಿಡದೆ ನರ್ತಿಸುತ್ತಿದೆ ವೀಕ್ಷಕರ ಕಣ್ಣಲ್ಲಿ..

ಕುಸುರಿ ಕಲೆಯ ಚಿತ್ತಾರ ಅಚ್ಚೋತ್ತಿ ಕುಳಿತು ಬಿಟ್ಟಿದೆ ಪ್ರೇಕ್ಷಕರ ಮನದಲ್ಲಿ

ಎಲ್ಲರ ಮನಸನೂ ಸೆಳೆದ ಕಲೆಯ ಬಲೆಗೆ ಜೈ.! ಸೃಜಿಸಿದ ಶಿಲ್ಪಿಗೆ ಜೈಜೈ..!

         ಡಾ: ಶೈಲಜಾ ರಮೇಶ್
[30/12/2022, 8:38 pm] Dr. B. N. Shylaja Ramesh: #ತುಟಿಮೇಲೆ_ನಿಂತಮಾತು 
ಹೊರಬರಲು ಕಾತರಿಸುತ್ತಿತ್ತು
ನಿನ್ನ ಬಿಗು ಮೊಗವನ್ನು ನೋಡಿ
ಹೆದರಿ ಅಲ್ಲೇ ಅಡಗಿ ಕುಳಿತಿತು

ಉರಿದುರಿವ ಕಣ್ಣುಗಳಿಗೆ ಬೆದರಿ
ಪುಂಖಾನುಪುಂಖ ಬೈಗುಳಕೆ ಮುದುರಿ
ಎತ್ತಿದ ಕೈ ಹೊಡೆತಕೆ ನಡುಗಿ
ಹೇಳಬೇಕಿದ್ದದ್ದೆಲ್ಲ ಮರೆತೇಹೋಯ್ತು

      ಶೈಲೂ....
[4/1/2023, 4:10 pm] Dr. B. N. Shylaja Ramesh: ತಲೆಕಡಿದರೇನಂತೆ.?
*****************

ರೆಕ್ಕೆ ಕತ್ತರಿಸಿದ ಹಾರಲಾರದ
ಹಕ್ಕಿಯಂತಲ್ಲ ನಾನು..
ತಲೆ ಕಡಿದರೂ ಭಯವಿಲ್ಲ
ಧರೆಯೊಳಗೆ ನಾ ಬೇರೂರಿಹೆನು

ಬಹುಸಂತಾನ ಫಲವಂತ ನಾ
ಬುಡದಲ್ಲಿಹುದು ನನ್ನ ಸಾರಸತ್ವ
ತೊಗಟೆಯ ಸಿಗಿದು ಸೀಳಿದರೂನೂ
ಬದಲಾಗದು ಎನ್ನ ಹಿರಿಮೆ ಮಹತ್ವ.!

ಒರಟಿರಬಹುದು ಮೇಲ್ನೋಟಕ್ಕೆ
ಒಳಗೆ ಸಿಹಿಸಿಹಿ ರುಚಿಯ ಹಣ್ಣು
ಅಂಟಿನ ನಂಟು ಒಳಮೈಯೆಲ್ಲಾ
ರುಚಿಯದ್ಭುತ ಜೊತೆಗಿದ್ದರೆ ಜೇನು.!

ಅಡಗಿ ಕುಳಿತಿರಲಾಗದೆನಗೆ
ಮಾರು ದೂರದವರೆಗೂ ಘಮಲು
ಒಮ್ಮೆ ರುಚಿ ಹತ್ತಿದರೆ ಬಿಡಲಾಗದು
ಸೆಳೆದೆಳೆಯುತ್ತದೆ ಸಿಹಿರುಚಿಯ ಅಮಲು

ಹಸಿದೆಷ್ಟು ತಿಂದರೂ ಆರೋಗ್ಯವೇ
ಕೊನೆಗೊಂದು ಹಸಿಬೀಜ ಮೆದ್ದರೆ
ಬಳಸುವರು ಅನೇಕ ಖಾದ್ಯಗಳಿಗೆ 
ಸರ್ವರಿಗೂ ಪ್ರಿಯ ಹಲಸು ಎಂದರೆ.!

          ಶೈಲಜಾ ರಮೇಶ್
[6/1/2023, 7:40 pm] Dr. B. N. Shylaja Ramesh: ಈ ನಡುವೆ ಏಕೋ ನಡು ಹಿಡಿದುಕೊಂಡು
ನಡೆಯಲಾಗದ  ಈ ನನ್ನ ನಡೆ ಬಲು ಹಿಂಸೆ
ಆ ದೇವನ ನೆನೆದು, ಕಣ್ಣೀರಲ್ಲಿ ನೆನೆದು
ಈ ನೋವಿನ ಬೇಡಿಯ ಬಿಡಿಸೆಂದು ಬೇಡಿಕೊಳ್ಳುತ್ತಿದ್ದೇನೆ
ಅವ ನನ್ನ ನೋವನು ಸರಿಸಿ ಸರಿಮಾಡಬಹುದು
[7/1/2023, 5:07 pm] Dr. B. N. Shylaja Ramesh: ದೂರವಾಗಿಹ ನೋವ
ಸರಿಸುತಲಿ ಸವಿಭಾವ
ನೆನಪುಗಳ ಆ  ಮೊತ್ತ
ಒಳ್ಳೆ  ಕವಿಯಾಗಿಸುತ್ತ
ಜನಮಾನಸದೆ ಬೆರೆಸಿ
ಭವ್ಯಬಾಂಧವ್ಯ ಬೆಳೆಸಿ

[8/1/2023, 6:12 am] Dr. B. N. Shylaja Ramesh: #ಮನದ_ಭಾವ_ತುಂಬಲು_ಬರೆದಿಡುವೇ ಮನಸೊಮ್ಮೊಮ್ಮೆ ಖಾಲಿ ಖಾಲಿ ಎನಿಸಿದಾಗ
.ಮಾತೆಲ್ಲವೂ  ಮರೆತು ಆವರಿಸಿ ಮೌನರಾಗ  
ಬದುಕಲ್ಲಿ ಏನೊಂದೂ ಬೇಡವೆನಿಸಿ
ಏಕೋ ಅಂತರಾಳದಲ್ಲಿ ಕಸಿವಿಸಿ
ನನ್ನವರಾರೂ ಇಲ್ಲವಿನೋ ಅನ್ನುವ ಭಾವ
ನೋವು ಆವರಿಸಿ ಉಕ್ಕುಕ್ಕಿ ಬರುವ ಅಳುವ
ತಡೆಹಿಡಿದಿಟ್ಟು, ಮನವ ಹುರಿದುಂಬಿಸಿ
ಶುಭವಾದುದನ್ನೇ ಚಿಂತಿಸಿ, ಅನುನಯಿಸಿ
ಕಳೆದುಹೋದ ನಿನ್ನೆಗಳ ಮರೆತು
ಎದುರಿರುವ ನಾಳೆಗಳ ಕುರಿತು 
ಚಿಂತನೆಗೆ ಎಡೆ ಮಾಡಿಕೊಡುವೆ
ಮನದ ಭಾವ ತುಂಬಲು ಬರೆದಿಡುವೆ
ಬರವಣಿಗೆ ಮನಕೇನೋ ಹಿತಕಾರಿ
ನೋವ ಹೊರಹಾಕಲು ಸಹಕಾರಿ
ತೋಚಿದ್ದನ್ನು ಗೀಚಿ, ಹೊರಹಾಕಿ ಅನಿಸಿಕೆ 
ಸಮಾಧಾನ ಪಡಿಸುವೆ ಪ್ರಕ್ಷುಬ್ಧ ಮನಕೆ.!

ಡಾ: ಬಿ. ಎನ್.ಶೈಲಜಾ ರಮೇಶ್
[8/1/2023, 6:36 am] Dr. B. N. Shylaja Ramesh: #ನನ್ನಚೆಲುವಿ 
ಏನ್ ಚಂದ ಕಾಣ್ತಾಳೆ ನನ್ಚೆಲುವಿ
ನಗುವಲ್ಲೇ ಕೊಲ್ತಾಳೆ ಈ ಬೆಡಗಿ
ಬೆಳದಿಂಗಳ ನಾಚಿಸುವ ಆ ಮೊಗದೆ
ಸೆಳೆದೆಳೆದು ಕಾಡ್ತಾಳೆ ಈ ಮುಗುದೆ

ಸುಳಿಮಿಂಚಿನಂಥ ಕಣ್ಣೋಟ
ಅಪ್ಸರೆಯ ನಾಚಿಸುವ ಮೈಮಾಟ
ತೂಗಾಡಿ ಕಳೆ ಕೊಟ್ಟ ಮುಂಗುರುಳು
ಎಲ್ಲಕ್ಕೂ ಸ್ಪಂದಿಸುವ ಹೆಂಗರುಳು

ಅರೆಬಿರಿದ ತುಟಿಯಂಚ ಕಿರುನಗೆ
ಹಿತವಾದ ಅನುಭವ ಈ ಮನಸಿಗೆ
ಅವಳೊಮ್ಮೆ  ಹಿತವಾಗಿ ನುಡಿಯಲು
ಭಾವ ತಂತಿ ಮೀಟಿದಂತೆ ಮನದೊಳು

ಚೆಲುವಲ್ಲಿ ಚೆಲುವೆ ನನ್ನುಡುಗಿ
ನೆಲೆಸಿಹಳು ಮನದಲ್ಲೇ ಈ ಬೆಡಗಿ
ಅವಳ ನಗುವೇ ಜೀವಿಸಲು ಉತ್ಸಾಹ
ಏನಾದರು ಸಾಧಿಸಲು ಪ್ರೋತ್ಸಾಹ.!

ಡಾ: ಬಿ.ಎನ್. ಶೈಲಜಾ ರಮೇಶ್
[9/1/2023, 4:36 pm] Dr. B. N. Shylaja Ramesh: ಹೇಗೆ ವರ್ಣಿಸಲಿ.?

ಮನವನು ತುಂಬಿದ ಚೆಲುವೆ
ಕಾಣುವೆನೆಲ್ಲೆಲ್ಲೂ ನಿನ್ನ ಮೊಗವೇ
ಕಣ್ಮುಚ್ಚಿದರೆ ಕನಸಲೂ ನೀನೇ
ನೀ ಸೌಂದರ್ಯವನ್ನೇ ಹೊತ್ತ ಮೇನೆ

ನೋಡಿದೆಡೆಯಲ್ಲೆಲ್ಲ ನಿನ್ನ ರೂಪ
ತಂಪನೆರೆದು ನೀಗಿಸುತ್ತದೆ ತಾಪ
ಬಳಿಯಲ್ಲೇ ಸುಳಿದು ಗಮನ ಸೆಳೆದು
ಕಾಡುವೆಯೇಕ್ಹೀಗೆ  ಒಲಿದು ನಲಿದು

ತಲತಲನೆ ಹರಿದರಿವ ನೀರಿನಂತೆ
ಕಿಲಕಿಲನೆ ನಗುವು ಹೂ ಬಿರಿದಂತೆ
ನಾಟ್ಯರಾಣಿಯ ಗೆಜ್ಜೆಯುಲಿತದ ಮೇಳ
ನಿನ್ನ ಚಿನಕುರಳಿ ಮಾತಿನ  ವೇಳಾ

ತಂಬೆಲರ ಕಂಪಂತೆ ನಿನ್ನ ವದನ
ಸುಳಿಮಿಂಚು ಹೊಳೆದಂತೆ ಆ ನಯನ
ಬಾನಂಚಿನಲ್ಲಿದ್ದಂತೆ ಇಂದ್ರಾಚಾಪ
ವರ್ಣಿಸಲಿ ಹೇಗೇಳು ನಿನ್ನ ರೂಪ.?

        ಶೈಲಜಾ ರಮೇಶ್

ತುಂಬಾ ಚಂದದ ಕವಿತೆ ಸರ್👌👌
ಇಲ್ಲಿ ಚಿತ್ರಕ್ಕಿಂತಾ ಕವಿತೆಯದೆ ಹೈಲೈಟ್.. ನನಗಂತೂ ತುಂಬಾನೇ ಇಷ್ಟ ಆಯ್ತು..

ನಿಮ್ಮ ಸುಂದರ  ಮನಸೆಳೆವ ಕವಿತೆಗೆ.. ನನ್ನೇರಡು ಪ್ರತಿಸಾಲು😊
[9/1/2023, 10:32 pm] Dr. B. N. Shylaja Ramesh: ಮನದ ಭಾವನೆಗಳೆಲ್ಲ
ಲೇಖನಿಯ ಶಾಯಿಯಾಗಿ
ಹೊರ ಹೊಮ್ಮುತ್ತಿರಲು...
ಎದೆಯ ಪುಟಗಳ ಮೇಲೆ
ನರ್ತಿಸುತ್ತಿದೆ ಭಾವದ ಹೊನಲು..

ಇಳಿದ ಹನಿಹನಿಯಲ್ಲೂ
ಭಾವದೊಲುಮೆಯ ಸಮ್ಮೇಳ
ಕವಿಮನದಲುದಿಸಿದ ಮಧುರಗಾನ
ನೋವುನಲಿವುಗಳೆಲ್ಲ ಬರೆಯುತ್ತ 
ಮೆಲ್ಲ ಸಾಗುತ್ತಿದೆ ಈ ಭಾವಯಾನ..!

ಸಂತಸದ ಸಮಯದಲ್ಲಿ
ಮನ ತೂಗಿ, ಹಾಡುತಿರಲು
ನವಿರುಭಾವದ ಸುಧೆಯು ವನಿತೆಯಾಗಿ
ಮನಬಿಚ್ಚಿ ಹೊರಬಿದ್ದ, ರಾಗಮಾಧುರ್ಯ
ಇಂಪಾಗಿ ಕೇಳಿಸಿತು ಕವಿತೆಯಾಗಿ..!

ಹರಿತ ಲೇಖನಿಯೊಳಗೆ
ಅಡಗಿಹುದು ಇತಿಹಾಸ
ಒಳಗೆ ತುಂಬಿರುವ ಶಾಯಿಯಂತೆ
ಹನಿಹನಿಯಲಿ ಸದ್ಭಾವವಿರೇ
ಶಾಂತಿಯುತವೀಜಗವು ಮಂದಿರದಂತೆ.!

       ಶೈಲಜಾ ರಮೇಶ್

ಚಿತ್ರಕ್ಕೆ ತಕ್ಕಂತ ನಿಮ್ಮ ಬರಹಕ್ಕೆ ನನ್ನ ಚಿತ್ತದಲುದ್ಭವಿಸಿದ್ದು ಹೀಗೆ...😊
[10/1/2023, 12:49 pm] Dr. B. N. Shylaja Ramesh: ಬಯಕೆಗಳ ಬಾನಲ್ಲಿ ಹಾರಾಡಬಿಡಬೇಡ
ರೆಕ್ಕೆ ಬಲಿತಿಲ್ಲ, ಬೀಳುವ ಸಂಭವ ಹೆಚ್ಚು
ಇತಿಮಿತಿಯಲೇ ಇರು
[10/1/2023, 12:51 pm] Dr. B. N. Shylaja Ramesh: #ಕಣ್ಮುಚ್ಚಿ_ಧ್ಯಾನಿಸು_ಕೂಡಿಟ್ಟ_ಕನಸುಗಳಿವೆ 

ಭಾವನೆಗಳ ಅಲೆಗಳಿಗೆ ಸಿಲುಕಬೇಡ
ತನ್ನತನವೆಂಬುದೇ ಕೊಚ್ಚಿ ಹೋದಾವು
ಯೋಚಿಸದೆ ಅರೆಕ್ಷಣವೂ ದುಡುಕಬೇಡ 
ಬಾಳು ಬೆಳಗುವ ಜ್ಯೋತಿ ಆರಿಹೋದಾವು

ಕಷ್ಟಗಳಿಗಂಜದೆ ಎದುರಿಸಿ ಮೆಟ್ಟಿನಿಲ್ಲು
ಕಾಡುವ ಸಮಸ್ಯೆಗಳೆಲ್ಲ ಹಿಂದೆಸರಿದಾವು
ಧೈರ್ಯದಿಂದ ಮುನ್ನುಗ್ಗಿ ಅರಿಯ ಗೆಲ್ಲು
ಕೈಮುಗಿದು ಕಾಲ್ಹಿಡಿದು ಶರಣಾದಾವು 

ಮಿತಿಮೀರಿದ ಆಸೆಗಳಿಗೆ ಬಲಿಯಾಗಬೇಡ
ಕ್ಷಣಕ್ಷಣಕ್ಕೂ ಹಾದಿತಪ್ಪಿಸುವ ದಾರಿಗಳಿವೆ 
ಮನವನು ಹಿಡಿದಿಡು, ಹರಿಯಬಿಡಬೇಡ
ಕಣ್ಮುಚ್ಚಿ ಧ್ಯಾನಿಸು, ಕೂಡಿಟ್ಟ ಕನಸುಗಳಿವೆ

ಬಯಕೆಗಳ ಬಾನಲ್ಲಿ ಹಾರಾಡಬಿಡಬೇಡ
ರೆಕ್ಕೆ ಬಲಿತಿಲ್ಲ, ಬೀಳುವ ಸಂಭವ ಹೆಚ್ಚು
ಇತಿಮಿತಿಯಲೇ ಇರು  ಮೆರೆದಾಡಬೇಡ
ಆಗಲೇ ಸರ್ವ ಜನರಿಗಾಗುವೆ ನೀ ಅಚ್ಚುಮೆಚ್ಚು

       ಡಾ: ಶೈಲಜಾ ರಮೇಶ
[10/1/2023, 3:21 pm] Dr. B. N. Shylaja Ramesh: ಸುಗ್ಗಿಯ ಹಬ್ಬವು ಹುಗ್ಗಿಯ ಹಬ್ಬವು ಬರುತಿದೆ
ಹಿಗ್ಗಿದ ಮನವು ಉಲ್ಲಾಸ ಉತ್ಸಾಹದಿ ನಲಿದಿದೆ
[11/1/2023, 11:31 am] Dr. B. N. Shylaja Ramesh: ಬದುಕೇ ಒಂದು ಕಾವ್ಯ
ಪ್ರತಿದಿನವೂ ನವ್ಯ...!
ಯೋಚನೆಗಳಿದ್ದರೆ ಭವ್ಯ
ಜೀವನವೇ ರಸಕಾವ್ಯ..!
[11/1/2023, 12:46 pm] Dr. B. N. Shylaja Ramesh: ನಿಷ್ಕಾಮ ಕರ್ಮ

ಮಾಡುವ ಕಾರ್ಯದಲ್ಲಿದ್ದರೆ ಸ್ವಾರ್ಥ
ಸಿಗಬಹುದೇ ಹೇಳು ಪರಮಾರ್ಥ...?
ಬೇಕೆಂದರೆ ಬದುಕಿಗೊಂದು ನಿಜಾರ್ಥ
ಅನುಸರಿಸಬೇಕು ಸತ್ಯ ಜೊತೆಗೆ ನಿಸ್ವಾರ್ಥ.!

ಹಲವು ಕಾಮನೆಗಳಿಗೆ ದಾಸರೇ ಎಲ್ಲರೂ
ನೋವು ದುಃಖಗಳಲಿ ಬಳಲಿ ಬೆಂದರೂ
ನಲಿವನ್ನೇ ಕಾಣದೆ  ನಲುಗಿ ಸೋತರೂ
ವಾಮ ಮಾರ್ಗವನೆಂದಿಗೂ ಬಿಡರು.!

ನ್ಯಾಯನಿಷ್ಠೆಯ ಅನುಕರಿಸುವುದು ಧರ್ಮ
ತಿಳಿವುದಾಗ ಸತ್ಪಥದ ಬಾಳಿನ ಮರ್ಮ
ದೇವನ ನೆನೆದು ಮಾಡು ನಿಷ್ಕಾಮ ಕರ್ಮ
ಪಾವನವಾಗುವುದಾಗ ಈ ನರಜನ್ಮ..!

    ಡಾ ಶೈಲಜಾ ರಮೇಶ್
[11/1/2023, 4:19 pm] Dr. B. N. Shylaja Ramesh: #ಮನಸಿನ_ಪಿಸುಮಾತಲ್ಲಿ 
ಬರೀ ನಿನ್ನದೇ ಹೆಸರು
ಬದುಕು ಹಸನಾಗಿಸಿ
ಆಗಿದೆ ನನ್ನುಸಿರು ..!

ಮಿಡಿವ ಮನದಲಿ 
ನಿನ್ಹೆಸರಿನದೇ ಸದ್ದು
ಕನಸು ಕಂಗಳ ತುಂಬಾ
ಆಸೆ ಸಾವಿರ ಹೊದ್ದು..!

ಕಣ್ಮುಚ್ಚಿ ಕುಳಿತರೂ
ನಿನ್ನ ಚೆನ್ನುಡಿಯ ಮೇಳ
ತನುವು ಕಂಪಿಸಿತು
ನೀ ಪಿಸುಗುಟ್ಟಿದ ವೇಳಾ

ಲಜ್ಜೆ ಚಾದರ ಹೊದ್ದು
ತುಸು ಬಾಗಿತು ಮೊಗವು
ಬಿರಿದ ತುಟಿಗಳ ನಡುವೆ
ರಾರಾಜಿಸಿತು ನಗುವು

ಸುಳಿಮಿಂಚು ಕಣ್ಣಲಿ
ಹರಡಿ ಪ್ರಖರ ಪ್ರಭೆಯು
ನವಿರಾದ ಸುಖ ತಂತು
ನಿನ್ನ ಪಿಸುಮಾತ ಸುಧೆಯು

   ಡಾ: ಬಿ ಎನ್ ಶೈಲಜಾ ರಮೇಶ್
[12/1/2023, 1:27 pm] Dr. B. N. Shylaja Ramesh: 🌹🌹 *ಶ್ರೀ ವಿವೇಕಾನಂದ* 🌹🌹
**************************

ಅಳಿಸಿ ಜಗದಳಲು
ಬೆಳೆಸಿ ದೇಶ ಪ್ರೇಮ
ಬಿತ್ತಿ ನಿಜ ಪ್ರೀತಿ
ತೋರಿ ಸರಳತೆಯ
ಬೀರಿ ಜ್ಞಾನ ಸುಧೆಯ
ಸಾರಿ ಸಮನ್ವಯದ ಬಾಳ್ವೆ
ಗಳಿಸಿದ ಪರಮಾನಂದ
ಅವರೇ *ಶ್ರೀ ವಿವೇಕಾನಂದ* 

ಬಂದು **ಸಪ್ತಋಷಿಯ
ಭುವನದಿಂದ** 
ಗರ್ಭ ಹೊಕ್ಕು ಪರಶಿವನ
ವರಪ್ರಸಾದದಿಂದ
ವಿಶ್ವನಾಥ ದತ್ತ ಭುವನೇಶ್ವರಿ
ದೇವಿಯರ ಮುದ್ದುಕಂದ
ನರೇಂದ್ರನೆಂಬ  ತುಂಟಕಂದ
ಅವನೇ. *ಶ್ರೀ ವಿವೇಕಾನಂದ* 

ತೀವ್ರ ಭಕ್ತಿ ಜ್ಞಾನದ ಸೆಲೆ
ಹುಡುಕುತ ಸತ್ಯ ಅಲೆಯುತಲೆ
 *ಶ್ರೀ ಗುರುದೇವರ* ಪರಮ
ಪ್ರಿಯ ಶಿಷ್ಯನಾಗುತಲೆ
ಮೋಕ್ಷಜ್ಞಾನ ಅರಿಯುತಲೆ
ದೀನಜನರ ಸೇವೆಯಲೇ
ಸ್ವರ್ಗ ವಿಹುದು ಅಂಗೈಯಲೇ
ಸಾರಿದಾತ *ಶ್ರೀ ವಿವೇಕಾನಂದ* 

ಧರ್ಮವೇ ಜಗದ ಬುನಾದಿ
ಭಗವದ್ಗೀತಾಮೃತವೇ ಅನಾದಿ
ಹೊತ್ತು ಎಲ್ಲ ಧರ್ಮ ಸಾರ
ಹಿಂದೂಧರ್ಮ ಅಜರಾಮರ
ಮೊಳಗಿದ ಧನಿಗೆ ಜಗ ನಿಬ್ಬೆರ
ಎತ್ತಿಹಿಡಿದ ಜ್ಯೋತಿ ಭರತ ಕುವರ
ವೀರ ಸನ್ಯಾಸಿ ಇವ ಧೀರ
ಇವರೇ *ಶ್ರೀ ವಿವೇಕಾನಂದ* 

ನರರೊಳುತ್ತಮ ಈತ
ಮೊಳಗಿಸಿ *ಉತ್ತಿಷ್ಠತೆಯ* ಗೀತ
ಭ್ರಮೆಯ ಕತ್ತಲನಳಿಸಿ
ಆತ್ಮಜ್ಯೋತಿಯ ಬೆಳಗಿಸಿ
ಎಚ್ಚರಿಸಿ ಜಗದ ಜನರ
ಸತ್ಯಭೋಧಿಸಿದ ಚತುರ
ಯುವಶಕ್ತಿ ಪ್ರಭೆಯ ಪ್ರೇರಕ
ಇವ *ವಿವೇಕ + ಆನಂದ* ದಾಯಕ

          *ಶೈಲೂ......*
[12/1/2023, 1:31 pm] Dr. B. N. Shylaja Ramesh: ಕನಸಲ್ಲಿ ಕಂಡೆ
************

ಕನಸಿನೂರಲಿ ನಾ ನಿನ್ನ ಕಂಡೆ
ಅಚ್ಚಾಯ್ತು ಎದೆಯೊಳಗೆ ನಿನ್ನ ರೂಪ
ನಸುನಕ್ಕ ಮುಖದೊಳಗೆ
ಬಾಳ ದಾರಿಯ ಕಂಡೆ
ತೋರಿಸಿತ್ತು ಹಿಡಿದಂತೆ ದಾರಿದೀಪ..
ದಾರಿ ಸಾಗುತ ಬಂದೆ
ನಡೆದು ಮುಂದೆ ಮುಂದೆ
ಹಿಂತಿರುಗಿ ನೋಡಿದರೆ ಬರೀ ನನ್ನ ನೆರಳು
ಮಾಯವಾಗಿದ್ದೆ ನೀನು
ಎತ್ತ ಹೋದದ್ದೋ ಕಾಣೆ
ಹೆದರಿ ನಡುಗಿದ್ದೆ ಆ ಇರುಳು..
ದೂರದಲ್ಲೆಲ್ಲೋ ಕೇಳಿದಂತಿತ್ತು
ಸುಮಧುರ ಕಂಠದೊಳಗೆ ನನ್ನ ಹೆಸರು
ಆಲಿಸುತ್ತ ನಾ ನಿಂತೆ
ಭಾವವಿಗ್ರಹದಂತೆ
ಕೆನ್ನೆ ಸವರಿದಂತಿತ್ತು ಆ ಬಿಸಿಯುಸಿರು..
ನೂರು ಸೂರ್ಯರ ಕಾಂತಿ ಒಮ್ಮೆಗೇ ನುಗ್ಗಿತ್ತು
ಕಾಂತಿ ಭರಿಸಲಾರದೆ ಕಣ್ಣು ಮುಚ್ಚಿ
ಮಧುರರಾಗವ ಹಾಡಿ
ಕುಣಿದು ನರ್ತಿಸುತ್ತಿತ್ತು
ಒಲವ ಬಿತ್ತಿದ್ದ ನಿನ್ನ ಮನವ ಮೆಚ್ಚಿ..
ಎಲ್ಲೋ ತೇಲಿದಂತಿತ್ತು ತೂಗಿದಂತಿತ್ತು
ಎತ್ತೆತ್ತರೆತ್ತರಕೆ ಹಗುರಾಗಿ ಹಾರಿ
ಕೈಗೆ ಸಿಕ್ಕಂತೆ ಚಂದ್ರಮ ಭಾಸವಾಗಿತ್ತು ಮನಕೆ
ಸಂತಸದಿ ಕಣ್ಬಿಟ್ಟು  ನೋಡಿದರೆ
ಬಾಲ ರವಿಕಿರಣ ಬಂದಿತ್ತು ಕಿಟಕಿಯಿಂದ ತೂರಿ..
ಇದು ಕನಸು ಎಂದರಿವಾಗುವಷ್ಟರಲ್ಲೇ
ಅಚ್ಚಾಗಿ ಬಿಟ್ಟಿತ್ತು  ಮನದೊಳಗೆ
ಆ ನಸುನಗೆಯ ಮೋಡಿ
ಹುಡುಕುತ್ತಿದ್ದೇನೆ ದಿನವೂ ಜಗಜಾತ್ರೆಯಲಿ
ಸಿಗಬಹುದು ನೀನು ಎಂದಾದರೊಂದುದಿನ
ಎಂಬಾಸೆಯಲಿ ಕೂಡಿ
           ಶೈಲೂ......
[12/1/2023, 1:39 pm] Dr. B. N. Shylaja Ramesh: ಕನಸಲ್ಲಿ ಕಂಡೆ
************

ಕನಸಿನೂರಲಿ ನಾ ನಿನ್ನ ಕಂಡೆ
ಅಚ್ಚಾಯ್ತು ಎದೆಯೊಳಗೆ ನಿನ್ನ ರೂಪ
ನಸುನಕ್ಕ ಮುಖದೊಳಗೆ
ಬಾಳ ದಾರಿಯ ಕಂಡೆ
ತೋರಿಸಿತ್ತು ಹಿಡಿದಂತೆ ದಾರಿದೀಪ..
ದಾರಿ ಸಾಗುತ ಬಂದೆ
ನಡೆದು ಮುಂದೆ ಮುಂದೆ
ಹಿಂತಿರುಗಿ ನೋಡಿದರೆ ಬರೀ ನನ್ನ ನೆರಳು
ಮಾಯವಾಗಿದ್ದೆ ನೀನು
ಎತ್ತ ಹೋದದ್ದೋ ಕಾಣೆ
ಹೆದರಿ ನಡುಗಿದ್ದೆ ಆ ಇರುಳು..
ದೂರದಲ್ಲೆಲ್ಲೋ ಕೇಳಿದಂತಿತ್ತು
ಸುಮಧುರ ಕಂಠದೊಳಗೆ ನನ್ನ ಹೆಸರು
ಆಲಿಸುತ್ತ ನಾ ನಿಂತೆ
ಭಾವವಿಗ್ರಹದಂತೆ
ಕೆನ್ನೆ ಸವರಿದಂತಿತ್ತು ಆ ಬಿಸಿಯುಸಿರು..
ನೂರು ಸೂರ್ಯರ ಕಾಂತಿ ಒಮ್ಮೆಗೇ ನುಗ್ಗಿತ್ತು
ಕಾಂತಿ ಭರಿಸಲಾರದೆ ಕಣ್ಣು ಮುಚ್ಚಿ
ಮಧುರರಾಗವ ಹಾಡಿ
ಕುಣಿದು ನರ್ತಿಸುತ್ತಿತ್ತು
ಒಲವ ಬಿತ್ತಿದ್ದ ನಿನ್ನ ಮನವ ಮೆಚ್ಚಿ..
ಎಲ್ಲೋ ತೇಲಿದಂತಿತ್ತು ತೂಗಿದಂತಿತ್ತು
ಎತ್ತೆತ್ತರೆತ್ತರಕೆ ಹಗುರಾಗಿ ಹಾರಿ
ಕೈಗೆ ಸಿಕ್ಕಂತೆ ಚಂದ್ರಮ ಭಾಸವಾಗಿತ್ತು ಮನಕೆ
ಸಂತಸದಿ ಕಣ್ಬಿಟ್ಟು  ನೋಡಿದರೆ
ಬಾಲ ರವಿಕಿರಣ ಬಂದಿತ್ತು ಕಿಟಕಿಯಿಂದ ತೂರಿ..
ಇದು ಕನಸು ಎಂದರಿವಾಗುವಷ್ಟರಲ್ಲೇ
ಅಚ್ಚಾಗಿ ಬಿಟ್ಟಿತ್ತು  ಮನದೊಳಗೆ
ಆ ನಸುನಗೆಯ ಮೋಡಿ
ಹುಡುಕುತ್ತಿದ್ದೇನೆ ದಿನವೂ ಜಗಜಾತ್ರೆಯಲಿ
ಸಿಗಬಹುದು ನೀನು ಎಂದಾದರೊಂದುದಿನ
ಎಂಬಾಸೆಯಲಿ ಕೂಡಿ
           ಶೈಲೂ......
[12/1/2023, 1:39 pm] Dr. B. N. Shylaja Ramesh: ಕನಸು
******

ಸುಪ್ತ ಮನಸಿನ  ಭಾವ
ಗುಪ್ತವಾಗಿರುತ
ಸುಷುಪ್ತ ಭಾವದಲಿ
ಅರಳುವುದು  ಕನಸು

ಮನಸ್ಸಿನೊಳಗಣ ಭಾವ
ತೆರೆಮರೆಯಲಿ ನಿಂತು
ಕಣ್ಣೆದುರೇ ನಡೆವಂತೆ
ಭಾವಿಸುವುದು  ಕನಸು

ಯೋಚನಾಲಹರಿಯಲಿ
ಮನಃಪಟಲದಲಿ ಬಂದ
ಸುಂದರಾಲೋಚನೆಯ
ಹೆಕ್ಕಿ ತರುವುದು ಕನಸು

ಸುಪ್ತ ಆಸೆಯ ಭಾವ
ಅಂತರಾತ್ಮದ ನೋವು
ನಿದ್ದೆಯಂಗಳದಿ ಬಂದು
ಕಾಡುವುದು ಕನಸು

ಕನಸು ಕಾಣಲು ಬೇಕು
ಅಮೃತಫಲದಾಸೆಗೆ
ನನಸು ಮಾಡಲು ಬೇಕು
ಹೊಸಹರುಷದಾಚೆಗೆ

ಸಿಹಿ ಸ್ವಪ್ನವನು ಕಂಡು
ಕಹಿನೆನಪ ಕಡೆಗಣಿಸಿ
ಸುಖದ ಉಯ್ಯಾಲೆ ಯಲಿ
ತೂಗಲೀ ಮನಸು

        ಶೈಲೂ......
[12/1/2023, 2:16 pm] Dr. B. N. Shylaja Ramesh: #ರೇಷಿಮೆ_ಸೀರೆ 

ಬಣ್ಣ ಬಣ್ಣದ ರೇಶಿಮೆ ಸೀರೆ
ಮುದ್ದು ಗೌರಿ, ಉಟ್ಟ ನೀರೆ.!
ರೇಶ್ಮೆಯು ಸಿರಿತನದ ಪ್ರತೀಕ
ಸತ್ಸಂಪ್ರದಾಯದ ದ್ಯೋತಕ

ಶುಭಕಾರ್ಯಕೆ ಬೇಕೇಬೇಕು
ಪೂಜೆಗೂ ಮಡಿಯಾಗಬೇಕು
ರೇಶ್ಮೆಯಿಲ್ಲದೆ ವಿವಾಹವಿಲ್ಲ
ರೇಶ್ಮೆಯುಡದ ವ್ಯಕ್ತಿಯೇಇಲ್ಲ

ಉಟ್ಟರೆ ನಾರಿ, ದೈವೀಕ ಕಳೆ
ಮೆಚ್ಚಿ, ಹೊಗಳಿಕೆ ಸುರಿಮಳೆ
ವೆಚ್ಚಹೆಚ್ಚಾದರೂ ರೇಷ್ಮೆ ಬೇಕು
ಉಡದಿದ್ದರೂ ಸಂಗ್ರಹವಿರಬೇಕು

ಶೈಲಜಾ ರಮೇಶ್
[13/1/2023, 12:21 pm] Dr. B. N. Shylaja Ramesh: #ಸಾಹಿತ್ಯವೆಂದರೆ 
ಅರ್ಥಪೂರ್ಣ ಪದಗಳಲ್ಲಿ
ಹಿಡಿದಿಟ್ಟ ಭಾವನೆಯ ಪ್ರವಾಹ..!
ತಲೆದೂಗಿ ಆಸ್ವಾಧಿಸಿದರೂ
ತೀರದ ದಾಹ..!
ಸಾಹಿತ್ಯವೆಂದರೆ....
ಬರೀ ಭಾವನೆಗಳ ಮೇಳವಲ್ಲ
ಅರ್ಥಪೂರ್ಣ ಶಬ್ದ ಭಂಡಾರ .!
ಸಾಹಿತ್ಯವೆಂದರೆ...
ಬರಿದೇ ಪದಗಳ ಪಾಳಯವಲ್ಲ
ಪ್ರಾಸ, ಛಂದಸ್ಸಿನ ಔನತ್ಯ..!
ಮನ ಸೂರೆಗೊಳ್ಳುವ ಲಾಲಿತ್ಯ..!
ಸಾಹಿತ್ಯವೆಂದರೆ...
ಅದೊಂದು ಕಲೆ..!
ಕಲೆಯ ಬಲೆ..!

     ಡಾ: ಬಿ.ಎನ್ ಶೈಲಜಾ ರಮೇಶ್
[14/1/2023, 11:36 am] Dr. B. N. Shylaja Ramesh: : 🌹ನಮ್ಮೂರ ಜಾತ್ರೆ🌹
********************
 ಬನ್ನಿ ಗೆಳೆಯರೇ ನಮ್ಮೂರ ಜಾತ್ರೆಗೆ
ನಕ್ಕು ನಲಿಯುವ ಅಮೃತದ ಪಾತ್ರೆಗೆ
ಮಾಘಮಾಸದ ರಥಸಪ್ತಮಿಯ ವಿಶೇಷ
ಅದ್ದೂರಿ ಜಾತ್ರೆಗೆ ಬರಲೇಕೆ ಮೀನಾಮೇಷ?

ಎಲ್ಲೆಲ್ಲೂ ಅಂದು ಜನಜಂಗುಳಿಯ ಜಾತ್ರೆ
ಬಣ್ಣಬಣ್ಣದ ದಿರಿಸಿದ ವೈಭವದ ಯಾತ್ರೆ
ಅಬಾಲವೃದ್ಧರೆಲ್ಲರೂ ಹರುಷದಿ ನಲಿಯುತ
ಇಲ್ಲಿ ಪೂಜಿಪ ದೇವನವನೆ ಹನುಮಂತ.!!

ದೇವ ದರುಷನಕೆ ಸಾಲಾಗಿ ಸಾಗುವ
ಶಿಸ್ತು ತಪ್ಪಿದರೆ ಪೊಲೀಸು ಬೈಯ್ಯುವ
ಅತ್ಯದ್ಭುತ ಅಲಂಕಾರ ಹನುಮನಿಗೆ
ಭಕ್ತಿಯಲಿ ನಮಿಸೆ ವರವೀಯುವನೆಮಗೆ

ದರ್ಶನವ ಮುಗಿಸಿ ಹಾಗೇ ಬಂದರಾಯ್ತು
ಘಮ್ಮೆನ್ನುವ ಭೂರಿ ಭೋಜನದ ಗಮ್ಮತ್ತು
ತೃಪ್ತಿಯಾಗುವಷ್ಟೂ ಸವಿಯಬಹುದು
ತಿಂದುಂಡು ಚೆಲ್ಲಬೇಡಿ ಪ್ರಸಾದವಹುದು

ಹಾಗೇ ಪರಿಷೆಯೊಳಗೊಂದು ಸುತ್ತು
ವಿವಿಧ ಬಗೆ ಆಟೋಟಗಳ ಕಸರತ್ತು
ಅಂಗಡಿಗಳಲ್ಲಿ ತರಾವರಿ ತಿಂಡಿ ತಿನಿಸು
ಓಡಿಹೋಗುವುದು ಸಂಗಾತಿಯ ಮುನಿಸು

ಏನೆಲ್ಲಾ ಮನಸೆಳೆವ ಆಟಿಕೆಗಳ ಬ್ರಾಂಡು
ತೆರೆದಂಗಡಿಯ ಸುತ್ತ ಮಕ್ಕಳ ದಂಡು
ಕರ್ಕಶಪೀಪಿ ಡಮರು ಡೋಲು ಬಲೂನು
ಮಕ್ಕಳೊಂದಿಗೆ ಮಕ್ಕಳಾಗುವರು ಹಿರಿಯರೂನು

ಹೆಂಗಳೆಯರ ಮನವ  ಸೆಳೆಯುವ
ತರ ತರಾವರಿ ಶೃಂಗಾರ ಸಾಧನ
ಬಣ್ಣಬಣ್ಣದ ಬಳೆ, ಸ್ಟಿಕ್ಕರ್ರು, ರಿಬ್ಬನ್ನು
ವ್ಯಾನಿಟಿಬ್ಯಾಗು ಪರ್ಸು ಇನ್ನೂ ಬೇಕೇನೇನೂ?

ಕೊನೆಗೆ ಮಂಡಕ್ಕಿ ಚರುಮುರಿ ಬತ್ತಾಸು
 ಮಿರ್ಚಿ, ಸೇವು, ಐಸ್ಕ್ರೀಮು ಮೈಸೂರ್ಪಾಕು
ಗೃಹೋಪಯೋಗಿ ಸಾಮಾನು ಸರಂಜಾಮು
ಅಲ್ಲಿಗೆ ಮುಗಿದಿತ್ತು ಜೇಬಿನೊಳಗಿದ್ದ ಕಾಸು

ಏನಾದರಾಗಲಿ ಬೇಕೊಂದು ಜಾತ್ರೆ
ಮೈಮರೆತು ನಲಿಯುವ ಸಂಭ್ರಮದ ಯಾತ್ರೆ
ಬಂಧು ಬಳಗದೊಂದಿಗೊಂದು ಸುತ್ತು
ದುಃಖದುಮ್ಮಾನ ಬದಿಗಿರಿಸಿ ಮನವು ನಲಿದೀತು

            ಶೈಲೂ......
[14/1/2023, 11:37 am] Dr. B. N. Shylaja Ramesh: ಅವಿಭಕ್ತ ಕುಟುಂಬದ ಅಕ್ಕರೆಯಲಿ ಸಕ್ಕರೆಯ ಸಂಕ್ರಾಂತಿ :---

ಅಂದಿತ್ತು ಮನೆಯಲ್ಲಿ ತುಂಬಿದ ಜನಸಂಗ
ಅವಿಭಾಜ್ಯ ಕುಟುಂಬದ ಖುಷಿಯ ಉತ್ತುಂಗ
ಹಬ್ಬ ಹರಿದಿನದಲೂ ದಿಬ್ಬಣದ ಸಂಭ್ರಮ
ರಕ್ತ ಸಂಬಂಧಿಗಳ ನಲಿವಿನ ಸಂಗಮ

ದೊಡ್ಡದಾದ ಮನೆ ಅದಕ್ಕಿಂತ ಮನ ಹಿರಿದು
ಸಂತೋಷ ಸಂಭ್ರಮದ ಜಾತ್ರೆ ಹಿರಿದು
ಇರಲಿಲ್ಲ ಯಾರೊಬ್ಬರಲೂ ಬೇಧಭಾವ
ಪ್ರೀತಿ ಪ್ರೇಮ ವಾತ್ಸಲ್ಯ ಮಮತೆಗಿರಲಿಲ್ಲ ಅಭಾವ

ಹಿರಿಯರಾಣತಿಗಿತ್ತು ಹಿರಿದಾದ ಗೌರವ
ಕಿರಿಯರ ಕೈಹಿಡಿದು ದಡತಲುಪಿಸುವ ಹಿರಿಜೀವ
ಒಬ್ಬೊಬ್ಬರದ್ದೊಂದೊಂದು ಜವಾಬ್ದಾರಿ ಕೆಲಸ
ಸಹಕಾರವಿತ್ತು ಎಲ್ಲರಲೂ ಇರಲಿಲ್ಲ ವಿರಸ

ಹಬ್ಬ ಬಂತೆಂದರೆ  ಮೃಷ್ಟಾನ್ನದ ತಯಾರಿ
ತರತರದ ಅಡುಗೆಗಳಿಗೆ ಅಜ್ಜಿ ರೂವಾರಿ
ಎಷ್ಟುoಡರೂ ಮಮತೆಯಲುಣಲಿಕ್ಕುವ ತಾಯಿ
ಆ ಅಮೃತದ ಸವಿ ರುಚಿಯ ಅಳೆಯಲಾರದು ಬಾಯಿ

ಅವಿಭಕ್ತ ಕುಟುಂಬದ ಅಕ್ಕರೆಯಲಿ ನಾ ಕಂಡೆ
ಪ್ರೀತಿಯಕ್ಕರೆಯ ಬೆರೆಸಿದ ಸಕ್ಕರೆಯ ಸಂಕ್ರಾಂತಿ
ಸಾಟಿಯಿಲ್ಲವು ಬೇರೆ ಕೂಡಿಬಾಳುವ ಬದುಕಿಗೆ
ಬಂಧವಿರದ ವಿಭಕ್ತ ಕುಟುಂಬದಲ್ಲೇನಿದೆ ಸುಖ..ಬಿಡು ಭ್ರಾಂತಿ

           ಶೈಲೂ.....
[14/1/2023, 11:38 am] Dr. B. N. Shylaja Ramesh: 🌹🌹 *ಶ್ರೀ ವಿವೇಕಾನಂದ* 🌹🌹
**************************

ಅಳಿಸಿ ಜಗದಳಲು
ಬೆಳೆಸಿ ದೇಶ ಪ್ರೇಮ
ಬಿತ್ತಿ ನಿಜ ಪ್ರೀತಿ
ತೋರಿ ಸರಳತೆಯ
ಬೀರಿ ಜ್ಞಾನ ಸುಧೆಯ
ಸಾರಿ ಸಮನ್ವಯದ ಬಾಳ್ವೆ
ಗಳಿಸಿದ ಪರಮಾನಂದ
ಅವರೇ *ಶ್ರೀ ವಿವೇಕಾನಂದ* 

ಬಂದು **ಸಪ್ತಋಷಿಯ
ಭುವನದಿಂದ** 
ಗರ್ಭ ಹೊಕ್ಕು ಪರಶಿವನ
ವರಪ್ರಸಾದದಿಂದ
ವಿಶ್ವನಾಥ ದತ್ತ ಭುವನೇಶ್ವರಿ
ದೇವಿಯರ ಮುದ್ದುಕಂದ
ನರೇಂದ್ರನೆಂಬ  ತುಂಟಕಂದ
ಅವನೇ. *ಶ್ರೀ ವಿವೇಕಾನಂದ* 

ತೀವ್ರ ಭಕ್ತಿ ಜ್ಞಾನದ ಸೆಲೆ
ಹುಡುಕುತ ಸತ್ಯ ಅಲೆಯುತಲೆ
 *ಶ್ರೀ ಗುರುದೇವರ* ಪರಮ
ಪ್ರಿಯ ಶಿಷ್ಯನಾಗುತಲೆ
ಮೋಕ್ಷಜ್ಞಾನ ಅರಿಯುತಲೆ
ದೀನಜನರ ಸೇವೆಯಲೇ
ಸ್ವರ್ಗ ವಿಹುದು ಅಂಗೈಯಲೇ
ಸಾರಿದಾತ *ಶ್ರೀ ವಿವೇಕಾನಂದ* 

ಧರ್ಮವೇ ಜಗದ ಬುನಾದಿ
ಭಗವದ್ಗೀತಾಮೃತವೇ ಅನಾದಿ
ಹೊತ್ತು ಎಲ್ಲ ಧರ್ಮ ಸಾರ
ಹಿಂದೂಧರ್ಮ ಅಜರಾಮರ
ಮೊಳಗಿದ ಧನಿಗೆ ಜಗ ನಿಬ್ಬೆರ
ಎತ್ತಿಹಿಡಿದ ಜ್ಯೋತಿ ಭರತ ಕುವರ
ವೀರ ಸನ್ಯಾಸಿ ಇವ ಧೀರ
ಇವರೇ *ಶ್ರೀ ವಿವೇಕಾನಂದ* 

ನರರೊಳುತ್ತಮ ಈತ
ಮೊಳಗಿಸಿ *ಉತ್ತಿಷ್ಠತೆಯ* ಗೀತ
ಭ್ರಮೆಯ ಕತ್ತಲನಳಿಸಿ
ಆತ್ಮಜ್ಯೋತಿಯ ಬೆಳಗಿಸಿ
ಎಚ್ಚರಿಸಿ ಜಗದ ಜನರ
ಸತ್ಯಭೋಧಿಸಿದ ಚತುರ
ಯುವಶಕ್ತಿ ಪ್ರಭೆಯ ಪ್ರೇರಕ
ಇವ *ವಿವೇಕ + ಆನಂದ* ದಾಯಕ

          *ಶೈಲೂ......*
[14/1/2023, 11:39 am] Dr. B. N. Shylaja Ramesh: : ಏಳಿ ಏಳಿ ಎದ್ದೇಳಿ
ಗುರಿಮುಟ್ಟುವ ತನಕ
ನಿಲ್ಲದಿರಿ ಎಂದೆಂದೂ
ಮಮತೆಯ ದೇಹವಲ್ಲ 
ಅಮರಾತ್ಮ ಅಮೃತ ಪುತ್ರ,
 ಪರಿಪೂರ್ಣ ಆತ್ಮಾನಂದಕೆ
ಅಪರಿಮಿತ ಇಚ್ಛಾಶಕ್ತಿ ಪಡೆ
ಎಂದವ ಇವ *ಶ್ರೀ* *ವಿವೇಕಾನಂದ*
[14/1/2023, 11:40 am] Dr. B. N. Shylaja Ramesh: ಶೀರ್ಷಿಕೆ :--
ಪಚ್ಚೆ ಪೈರಿನ ಸಿರಿಯು ಬಳುಕಲು
**************************

ಪಚ್ಚೆ ಪೈರಿನ ಸಿರಿಯು ಬಳುಕಲು
ಭೂತಾಯಿಗಂದು ಸಂಭ್ರಮದ ಹೊನಲು
ಉತ್ತು ಬಿತ್ತಿದ್ದ ಕಾಳು ತೆನೆಯೊಡೆದು ತುಳುಕಲು
ಸುಗ್ಗಿ ಸಂಭ್ರಮದ ಸಂಕ್ರಾಂತಿ ಎಲ್ಲೆಲ್ಲೂ.!

ಕೃಷಿಕರಿಗೆ ದುಡಿಮೆಯ ಪ್ರತಿಫಲ
ತೊನೆಯುವ ತೆನೆಯ ಒಡಲಲ್ಲಿ
ರಸತುಂಬಿ ಕಟ್ಟಿದ ಕಾಳುಗಳ ಮಡಿಲಲ್ಲಿ
ರೈತ ಸಂಭ್ರಮದಿ ನಲಿವನಿಲ್ಲಿ.!
ಸುಗ್ಗಿ ಸಂಭ್ರಮದ ಸಂಕ್ರಾಂತಿ ಎಲ್ಲೆಲ್ಲೂ

ಬೆಳೆದ ಪೈರುಪಚ್ಚೆಯ ಒಕ್ಕಣೆ ಮಾಡಿ
ಹಸಿವೆ ನೀಗಿಸುವ ಸಿರಿಧಾನ್ಯವನು ನೋಡಿ
ವರ್ಷದ ದುಡಿಮೆಯ ಫಲ ಧಾನ್ಯ ರಾಶಿಯಲ್ಲಿ
ಸುಗ್ಗಿ ಸಂಭ್ರಮದ ಸಂಕ್ರಾಂತಿ ಎಲ್ಲೆಲ್ಲೂ
ಮನೆ ಮನೆಯಲ್ಲೂ ಸಿಹಿ ಹುಗ್ಗಿಯ ಘಮಲು

              ಶೈಲೂ......
[14/1/2023, 11:41 am] Dr. B. N. Shylaja Ramesh: ಗುಣಿತಾಕ್ಷರ ಕವನ

ತ ಯಿಂದ ತಂ ವರೆಗೆ

ತ #  ತನುಮನವನರ್ಪಿಸು ಭಾರತಿಗೆ
ತಾ# ತಾಯ್ನೆಲದ ಋಣವ ತೀರಿಸಲು
ತಿ# ತಿಳಿಗೊಳದಂದದಿ ಇರಲಿ ತಾಯ್ನಾಡು
ತೀ# ತೀವ್ರ ಪ್ರೇಮವ ಹರಿಸಿ
ತು#  ತುಡುಗುಮಾಡುವವರ ಸೆದೆಬಡಿದು
ತೂ# ತೂಕಡಿಸುವವರ ಎಚ್ಚರಿಸಿ
ತೃ # ತೃಣದಷ್ಟಾದರೂ ಮಾತೆ ಸೇವೆಯಮಾಡಿ
ತೆ # ತೆರೆಮರೆಯಲ್ಲಿಯೇ ನಿಂತು
ತೇ# ತೇಜದ ತಾಯ ತೇರಿಗೆ ನಮಿಸಿ
ತೈ # ತೈಲದೀಪವ ಬೆಳಗಿ
ತೊ#  ತೊಳೆಯೆಂದು ತಮವನ್ನು
ತೋ# ತೋರುತಲಿ ನಿಜ ಭಕ್ತಿ
ತೌ # ತೌರು ಬೆಳೆಯಲಿ ಸದಾ ಎಂದು
ತಂ # ತಂಪಾಗಿ ಹರಸುತ್ತಾ... ತಾಯಿ ಭಾರತಿಯಲ್ಲಿಂದು ಬೇಡುವೆನು
          ಶೈಲೂ.....
[14/1/2023, 11:46 am] Dr. B. N. Shylaja Ramesh: ಸುಗ್ಗಿಕಾಲ
*********

ಬಂದಿದೆ ನೋಡು ಸುಗ್ಗಿಕಾಲ
ವರ್ಷದ ದುಡಿಮೆಯ ಪ್ರತಿಫಲ
ಉತ್ತು,ಬಿತ್ತು, ಕಳೆ, ಸುಗ್ಗಿ ಕೊಯ್ಲು
ಇಂದು ಈ ಕಣದಲಿ ಬಟಾ ಬಯಲು

ಮನೆಮಂದಿಗೆಲ್ಲ ಕೈತುಂಬ ಕೆಲಸ
ವರ್ಷಂಪ್ರತಿ ದಿನ ಪ್ರತಿದಿವಸ
ದುಡಿದು ದಣಿದು ಭೂತಾಯಿ ಸೇವೆಮಾಡಿ
ಉದರನಿಮಿತ್ತ ಬೆಳೆದದ್ದು ಕಾಳುಕಡಿ

ಮಳೆ ಚಳಿ ಬಿಸಿಲೆನ್ನದ ಕಾಯಕ
ತುತ್ತು ಕೂಳಿಗೂ ಒಮ್ಮೊಮ್ಮೆ ಕಂಟಕ
ದುಡಿತದ ಪ್ರತಿಫಲಕೆ ಕಾಯಬೇಕು ವರ್ಷ
ರಾಶಿಯಲಿ ಧಾನ್ಯವ ಕಂಡಾಗ ಹರುಷ

ಸುಗ್ಗಿಯೆಂದರೇನೋ ಹಿಗ್ಗು ಮನಕೆ
ತೆನೆಯಲಿ ಪೋಣಿಸಿದ್ದ ಕಾಳ ಹೆಕ್ಕುವ ಬಯಕೆ
ಕೊಯ್ದ ಪೈರು ಕಲ್ಲುಗುಂಡಲಿ ತುಳಿಸಿ
ಬೇರ್ಪಡಿಸಿದ್ದ ಕಾಳ ರಾಶಿಯನ್ನಾಗಿಸಿ

ಹೊಟ್ಟು ಬೇರ್ಪಡಿಸಿ ಗಟ್ಟಿಕಾಳನ್ನಾರಿಸಿ
ತೂರಿ ಕೇರಿ ಜೊಳ್ಳುಗಳ ಪ್ರತ್ಯೇಕಿಸಿ
ರಾಶಿಯಾಗಿಸಿ ಹಣ್ಣುಕಾಯಿತ್ತು ಪೂಜಿಸಿ
ಮೊರತುಂಬಿದ ಕಾಳು ಬಡವನಿಗರ್ಪಿಸಿ

ವಂದಿಸಿ ಬೆಳೆಯಿತ್ತ ಭೂತಾಯಿಗೆ
ಸಹಕರಿಸಿ ಜೊತೆಯಾದ ದನ ಕರುವಿಗೆ
ಬೆಳೆದ ರೈತನಿಗೆ ನಂತರವೇ ತುತ್ತು
ಇದುವೇ ತಾನೇ ಸತ್ಸಂಸ್ಕಾರದ ಗತ್ತು

               ಶೈಲೂ.......
[14/1/2023, 12:32 pm] Dr. B. N. Shylaja Ramesh: ಶ್ರೀಯುತ #ನಾಗೇಶ್_ಮೈಸೂರು ರವರ ಸಂಕ್ರಾಂತಿ ಮಳೆ ಅನ್ನುವ ಕವನಕ್ಕೆ ಬರೆದ ಪ್ರತಿ ಕವನ...
ಚಿತ್ರ ಕೂಡ ಅವರ ವಾಲಿಂದ ತೊಗೊಂಡಿದ್ದು

ಥ್ಯಾಂಕ್ಯೂ ನಾಗೇಶ್ ಸರ್🙏

#ಸಂಕ್ರಾಂತಿ_ಮಳೆ

ಮೋಡ ಕಟ್ಟಿದೆ ಮನದ ಮುಗಿಲಲ್ಲಿ
ಮಳೆ ಹನಿಸುವ ಮುನ್ಸೂಚನೆಯಲ್ಲಿ
ದುಗುಡ ಮರೆವ ಪ್ರೀತಿ ಹನಿ ಸಿಂಪರಿಸೆ
ನಿತ್ಯ ಸಂಭ್ರಮದ ಸಂಕ್ರಾಂತಿಯೇ ಇಲ್ಲಿ..!

ನಿನ್ನದೇ ಕನಸು ಏಕೋ ನಿನ್ನಲೇ ಮನಸು
ಅರಿಯೆಯೇನು ಮುಗ್ಧ ಮನದ ತಪನೆ.?
ಎದೆಯ ತುಂಬೆಲ್ಲಾ  ಬಿತ್ತಿ  ಪ್ರೀತಿ ಕನಸು
ಕಣ್ಣಂಚಿನಲ್ಲಿ ತುಂಬಿದಂದದ ಚಿತ್ರ ನೀನೇ.!

ಬೆಲ್ಲ ಕಡಲೆ ಬೆರೆಸಿದಂತಿದೆ ನಮ್ಮೀಪ್ರೀತಿ
ಚಿತ್ತದಲ್ಲಚ್ಚಾದ  ಸಕ್ಕರೆಯಚ್ಚು  ನೀನು
ಹದವಾಗಿ ಬೆರೆತ ಸಿಹಿಯಂತಿರಲಿ ಬದುಕು
ಬೆಸೆವ ಬಂಧಕೆ ಕಾರಣ ಎಳ್ಳು ತಾನು..!

ಮಳೆಯಂತೆಯೇ ಸುರಿಸುವ ಪ್ರೀತಿಯ
ಹದವಾಗಿ ನೆನೆಯಲಿ ಮನದ ಬಯಲು.!
ಬೆಸೆದ ಅನುಬಂಧವಿರಲಿ ಜೊತೆಗೆ ಶಾಶ್ವತ
ಸಂಭ್ರಮಿಸಲಿ ಸುಗ್ಗಿ ಸಂಕ್ರಾಂತಿ ಹೊನಲು.!

             ಶೈಲೂ....
[14/1/2023, 12:33 pm] Dr. B. N. Shylaja Ramesh: #ಚುಟುಕು

#ಸುಗ್ಗಿಕಾಲ

ದಣಿದು ದುಡಿದು ಕಾಯ್ದು ವರ್ಷವೆಲ್ಲ
ರೈತಾಪಿವರ್ಗ ಸುರಿಸಿದ ಬೆವರಿನ ಫಲ.!
ಬೆಳೆದು ನೀಡಿದೆಯೀಗ ಸಮೃದ್ಧ ಫಸಲ
ಬಂತು ನೋಡು ಸಂಭ್ರಮಕೆ ಸುಗ್ಗಿಕಾಲ.!

                 #ಶೈಲೂ....
[14/1/2023, 12:34 pm] Dr. B. N. Shylaja Ramesh: #ಸುಗ್ಗಿ_ಸಂಭ್ರಮ

ಸುಗ್ಗಿಯ ಹಿಗ್ಗಿದು ಬಂದಿದೆ ನೋಡು
ರೈತರ ಮೊಗದಲ್ಲಿ ಸಂತಸದ ಜಾಡು
ವರ್ಷದ ಮೊದಲ ಹೊಸ ಬೆಳೆಯ ಸಂಭ್ರಮ
ಬೆವರ ದುಡಿಮೆಗೆ ಸಿಕ್ಕ ಫಲಿತದ ಸಂಗಮ
ಸೃಷ್ಟಿಯಲೂ ಏನೋ ನವಚೇತನ..!
ರವಿಯು ಪಥ ಬದಲಿಸುವ ಸಂಕ್ರಮಣ.!
ಸಂಕ್ರಾಂತಿಯ ಸಂಭ್ರಮಕಿದೋ ಎಳ್ಳುಬೆಲ್ಲ
ತಿಂದು ಒಳ್ಳೆ ಮಾತಾಡುವ ನಾವೆಲ್ಲ..!

             ಶೈಲೂ.....
[14/1/2023, 12:37 pm] Dr. B. N. Shylaja Ramesh: ಹರಿಃ ಓಂ

ಸಂಕ್ರಾಂತಿ

         ದೈನಂದಿನ ಸಮಾಜಿಕ ಧಾರ್ಮಿಕ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿರುವಂತಹದ್ದೆ. "ಹಬ್ಬಗಳು". ಇಡೀ ಮನುಷ್ಯ ಸಮೂಹಕ್ಕೆ ಸಂತೋಷ, ಸಡಗರ ಸಹಜ ಪ್ರೀತಿಯ ವಿಷಯವಾಗಿರುವುದೇ ಹಬ್ಬಗಳು. ಇಂದಿನ ಆಧುನಿಕ ಒತ್ತಡಯುಕ್ತ ಜೀವನದಲ್ಲಿ ತೊಡಗಿದ್ದಾಗಲೂ, ಹಬ್ಬಹರಿದಿನಗಳ ಬಗೆಗಿನ ಆಸಕ್ತಿಯು ಕಳೆದುಕೊಂಡಿಲ್ಲದ್ದನ್ನು ಕಾಣಬಹುದು. ಹಬ್ಬವೆಂಬುದು ಕೆಲವೇ ಧರ್ಮ ಸಂಪ್ರದಾಯಕ್ಕೆ ಸೀಮಿತವಾದುದಲ್ಲ. ಎಲ್ಲಾ ಧರ್ಮಗಳಲ್ಲೂ ಅವರ ಆಚರಣೆಗೆ ತಕ್ಕಂತೆ ಹಬ್ಬಗಳಿರುವುದನ್ನು ಗಮನಿಸಬಹುದು.ಜಾತ್ಯಾತೀತ ರಾಷ್ಟ್ರವಾದ ನಮ್ಮ ಭಾರತದಲ್ಲಂತು ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ ವೈವಿದ್ಯಮಯವಾದ ಹಬ್ಬಹರಿದಿನಗಳನ್ನು ಕಾಣಬಹುದು. ಕೆಲವು ಹಬ್ಬಹರಿದಿನಗಳಂತು ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು, ರೀತಿ ನೀತಿಯಿಂದ ಆಚರಿಸುತ್ತಿರುವುದನ್ನು ಕಾಣಬಹುದು. ಹಬ್ಬ ಒಂದೇ ಆದರೂ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದ ಆಚರಿಸುವಂತಹ ಬಹಳಷ್ಟು ಹಬ್ಬಗಳಿದ್ದು "ಸಂಕ್ರಾಂತಿ" ಹಬ್ಬವು ಆ ರೀತಿ ಆಚರಣೆಗೆ ಒಳಪಡುವ ಹಬ್ಬಗಳಲ್ಲಿ ಒಂದು.

          ಸಂಕ್ರಾಂತಿ ಹಬ್ಬ ದೇಶದಾದ್ಯಂತ ಬೇರೆ ಬೇರೆ ಹೆಸರುಗಳಲ್ಲಿ ಆಚರಿಸುವ ಒಂದು ಸುಗ್ಗಿ ಹಬ್ಬ.     ಕನ್ನಡನಾಡಿನಲ್ಲಿ ಮತ್ತು ಆಂಧ್ರಪ್ರದೇಶದಲ್ಲಿ ಸಂಕ್ರಾಂತಿ ಎಂದು ಆಚರಿಸಿದರೆ, ಅದನ್ನು ತಮಿಳುನಾಡಿನಲ್ಲಿ ಪೊಂಗಲ್ ಎಂದು ಆಚರಿಸುತ್ತಾರೆ. ಸಂಕ್ರಾಂತಿಯ ನಾಯಕ ಬೆಳಕು ನೀಡುವ ಸೂರ್ಯನಾದರೆ, ನಾಯಕಿ ಸಸ್ಯ ಬೆಳೆಯಲು ಅನುವು ಮಾಡುವ ಭೂಮಿತಾಯಿ. ಹೀಗಾಗಿ ನಮ್ಮ ದೇಶಗಳಲ್ಲಿ ಇದನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ.

         ಸಂಕ್ರಾಂತಿ ಹಬ್ಬದ ಹಿಂದಿನ ದಿನವೇ ಭೋಗಿ ಹಬ್ಬ. ಅಂದು ಹಳೆಯದನ್ನು ತೊರೆದು ಹೊಸದನ್ನು ಪಡೆದು ಸಂತೋಷ ಪಡುವ ಸಡಗರ. ಮನೆಯನ್ನು ಶುದ್ಧಿಗೊಳಿಸುವುದು, ಮನೆ ಮಂದಿಯೆಲ್ಲಾ ಎಣ್ಣೆ ಸ್ನಾನ ಮಾಡಿ ನೂತನ ವಸ್ತ್ರಗಳನ್ನು ಧರಿಸುವುದು, ಮೂರನೆಯ ದಿನ ಹೊಸ ಫಸಲನ್ನು ಉಂಡು ಸಂತೋಷಪಡಲು ಎಲ್ಲಾ ಸನ್ನದ್ಧತೆ ನಡೆಸುತ್ತಾರೆ. ಮನೆಯ ಮುಂದೆ ವಿವಿಧ ರೀತಿಯಲ್ಲಿ ಬಣ್ಣ ಬಣ್ಣದ ರಂಗೋಲಿಯಿಂದ ಅಲಂಕಾರ ಮಾಡುತ್ತಾರೆ.

        ಸಂಕ್ರಾಂತಿ ಮುಖ್ಯವಾಗಿ ಸುಗ್ಗಿಯ ಹಬ್ಬ,. ದವಸ ಧಾನ್ಯಗಳನ್ನು ಬೆಳೆಯಲು ಸಹಾಯಕವಾದ ರೈತನ ಸ್ನೇಹಿತ ದನಕರುಗಳಿಗೂ ಆ ದಿನ ರೈತರು ಕೃತಜ್ಞಯನ್ನು ಸಲ್ಲಿಸುತ್ತಾರೆ, ದನಕರುಗಳನ್ನು ವಿಶೇಷವಾಗಿ ಸಿಂಗರಿ ಸುತ್ತಾರೆ.  ಕೊಂಬುಗಳನ್ನು ಬಣ್ಣಗಳಿಂದ ಅಲಂಕರಿಸುತ್ತಾರೆ. ಕಬ್ಬು ಬೆಲ್ಲ, ಬಾಳೆಹಣ್ಣು ಮನೆಯಲ್ಲಿ ಮಾಡಿದ ವಿಶೇಷ ತಿನಿಸುಗಳನ್ನು ತಿನ್ನಿಸುತ್ತಾರೆ.  ವೈಭವದ  ಮೆರವಣಿಗೆಯಲ್ಲಿ ಊರೆಲ್ಲಾ ಮೆರವಣಿಗೆ,  ಹಾಗೂ ಕಿಚ್ಚು ಹಾಯಿಸುವುದು ಮಾಡುತ್ತಾರೆ. ವರ್ಷವಿಡೀ ದುಡಿದ ಪ್ರಾಣಿಗಳಿಗೆ  ಗೌರವ ಕೊಡುತ್ತಾರೆ.  ಹೀಗೆ ಸಂಕ್ರಾಂತಿ ಯ  ಸಂಭ್ರಮ ನಾಡಿನ ಎಲ್ಲಾ ಭಾಗಗಳಲ್ಲಿ ಕಾಣಬಹುದು.

ಪೌರಾಣಿಕ ಮತ್ತು ವೈಜ್ಞಾನಿಕ ಹಿನ್ನೆಲೆ

          ಎಲ್ಲಾ ಚಟುವಟಿಕೆಗಳಿಗು ಆಧಾರಪ್ರಾಯವಾದ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಕಾಲವನ್ನು "ಸಂಕ್ರಮಣ ಅಥವಾ ಸಂಕ್ರಾಂತಿ" ಎಂದು ಜ್ಯೋತಿಷ್ಯಾಧಾರದ ಮೇಲೆ ಪರಿಗಣಿಸಲಾಗುವುದು. ಸಂಕ್ರಾಂತಿಯು ಒಂದು ವಿಧದಲ್ಲಿ ಸೂರ್ಯನ ಆರಾಧನೆಯಾಗಿದ್ದು, ಉತ್ತರಾಯಣ ದಕ್ಷಿಯಾಣಗಳ ಪ್ರಾರಂಭದ ದಿನವಾದ್ದರಿಂದ ಹೆಚ್ಚಿನ ಮಹತ್ವವನ್ನು ಪಡೆದಿದೆ. ಸಾಮಾನ್ಯವಾಗಿ ಸುಗ್ಗಿಯ ಸಂದರ್ಭದಲ್ಲಿ ಆಚರಿಸುವ ಸಂಕ್ರಾಂತಿ ಹಬ್ಬವು ಭಾರತೀಯ ಕಾಲಮಾನ ’ಪುಷ್ಯಮಾಸದಲ್ಲಿ’ ಬರುವುದು. ಉತ್ತರಾಯಣದ 
ಪುಣ್ಯಕಾಲವೆಂತಲೂ ಕರೆಯಲಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಭಕ್ತರು ಪುಣ್ಯ ನದಿಗಳಲ್ಲಿ ಸ್ನಾನ ಮಾಡುವರು. ಸೂರ್ಯ ಈ ವರೆಗೆ  ದಕ್ಷಿಣದತ್ತ ವಾಲಿ ಸಂಚರಿಸುತ್ತಿದ್ದು,  ಸಂಕ್ರಾಂತಿಯ ದಿನದಿಂದ  ಉತ್ತರದ ಕಡೆ ಪಥ ಬದಲಾಯಿಸುತ್ತಾನೆ.  ಈ ರೀತಿ ಸೂರ್ಯನ ಪಥ ಬದಲಾವಣೆಯಿಂದ ಕೊರೆಯುವ.ಚಳಿ  ಕಡಿಮೆಯಾಗುತ್ತದೆ.
.
         ಸೂರ್ಯನು ಮಕರ ಸಂಕ್ರಾಂತಿಯಂದು ಮಕರ ರಾಶಿಯನ್ನು ಪ್ರವೇಶ ಮಾಡುತ್ತಾನೆ. ಆದ್ದರಿಂದಲೇ ಉತ್ತರ ಭಾರತದಲ್ಲಿ ಈ ಹಬ್ಬಕ್ಕೆ ಮಕರ ಸಂಕ್ರಾಂತಿಯೆಂದು ಹೆಸರು. ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ಈ ದೇಶಗಳಲ್ಲಿಯೂ ಇದನ್ನು ಹೆಚ್ಚಾಗಿ ಮಕರ ಸಂಕ್ರಾಂತಿಯೆಂದೇ ಆಚರಿಸುತ್ತಾರೆ. ಆ ದಿನ ತಮಗೆ ವರ್ಷವಿಡೀ ಧನ, ಧಾನ್ಯ, ಅಭಿವೃದ್ಧಿಯನ್ನು ಮಾಡಿದ ಸೂರ್ಯನಿಗೆ ಮತ್ತು ಭೂಮಿಗೆ ಹಾಗೂ ವ್ಯವಸಾಯದಲ್ಲಿ ಸಹಾಯಕವಾಗಿ ನಿಂತು ನೆರವು ನೀಡಿದ ದನಕರುಗಳಿಗೆ ಗೌರವ ನೀಡುವ ಹಬ್ಬ. ಕರ್ನಾಟಕದಲ್ಲಿ ಮುಖ್ಯವಾಗಿ ಎಳ್ಳು, ಬೆಲ್ಲ ಮುಂತಾದವುಗಳನ್ನು ಮಿಶ್ರ ಮಾಡಿ ಊರಿನಲ್ಲೆಲ್ಲಾ ಹಂಚುವುದು. ಇದರೊಂದಿಗೆ ಹೊಸ ಬೆಳೆ, ಕಬ್ಬು, ಎಲಚಿಕಾಯಿ ಮುಂತಾದವುಗಳನ್ನು ಸೇರಿಸಿ ಎಲ್ಲರಿಗೂ ನೀಡಿ ಸಂತೋಷಪಡುವುದು.

         ಎಳ್ಳು ಬೆಲ್ಲವನ್ನು ಆಕರ್ಷಣೀಯವಾಗಿ ತಯಾರಿಸಿ ಹಂಚುವ ರೂಢಿ ಇದೀಗ ಎಲ್ಲೆಲ್ಲೂ ಹೆಚ್ಚು ಪ್ರಚಲಿತವಿದೆ.

           ಜನವರಿ 15 ರಂದು, ಎಳ್ಳು - ಬೆಲ್ಲವನ್ನು ಬಂಧು ಮಿತ್ರರಿಗೆ ಹಂಚುವ ನಲ್ಮೆಯ ಸಾಮಾಜಿಕ ಸಂಪ್ರದಾಯ, ಮಕರ ಸಂಕ್ರಾಂತಿಯ ಒಂದು ವಿಶೇಷ. 
         ಸಂಕ್ರಾಂತಿ ಪುಣ್ಯ ಕಾಲದಲ್ಲಿ, ನದಿ ಸ್ನಾನ, ದೇವತೆಗಳಿಗೆ, ಪಿತೃಗಳಿಗೆ ತರ್ಪಣ, ಉಪವಾಸ, ಹೋಮ, ಜಪ, ದಾನಗಳಿಗೆ ಪ್ರಶಸ್ತವೆನಿಸಿದ್ದು, ವಿಧ್ಯುಕ್ತವಾಗಿ ನಡೆಸಬೇಕಾದ ಕಾರ್ಯಗಳು. 

        ಆಯನವೆಂದರೆ ಸೂರ್ಯನು ಚಲಿಸುವ ಮಾರ್ಗ. ಸೂರ್ಯನು ಕಟಕ ಸಂಕ್ರಾಂತಿಯಿಂದ ದಕ್ಷಿಣದತ್ತ ವಾಲಿ ಚಲಿಸುತ್ತಿದ್ದು, ಮಕರ ಸಂಕ್ರಾಂತ್ರಿಯಿಂದ ತನ್ನ ಮಾರ್ಗವನ್ನು ಬದಲಾಯಿಸಿ, ಉತ್ತರದ ಕಡೆ ವಾಲಿ ಚಲಿಸುತ್ತಾನೆ. ಹಗಲು ಜಾಸ್ತಿಯಾಗಿ, ಕತ್ತಲು ಕಡಿಮೆಯಾಗುತ್ತದೆ. ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿ ಪ್ರಾರಂಭವೆಂದು ಪುರಾಣದಲ್ಲಿದೆ. ದಕ್ಷಿಣಾಯನದಲ್ಲಿ ಮುಚ್ಚಿದ ಸ್ವರ್ಗದ ಬಾಗಿಲು, ಈ ಉತ್ತರಾಯಣದಲ್ಲಿ ತೆರೆಯುತ್ತದೆ. ಅದಕ್ಕಾಗಿಯೇ ಭೀಷ್ಮ ಪಿತಾಮಹರು ದೇಹ ತ್ಯಜಿಸಲು, ಉತ್ತರಾಯಣದ ಕಾಲದವರೆಗೂ, ಶರಶಯ್ಯೆಯಲ್ಲಿ ಹರಿಸ್ಮರಣೆ ಮಾಡುತ್ತಾ ಕಾದಿದ್ದರು. ಉತ್ತರಾಯಣವು ದೇವತೆಗಳ ಕಾಲ, ದಕ್ಷಿಣಾಯನ ಪಿತೃಗಳ ಕಾಲವಾಗಿರುತ್ತದೆ. ಆದ್ದರಿಂದ ಯಜ್ಞ ಯಾಗಾದಿಗಳಿಗೆ, ಸಮಸ್ತ ದೇವತಾ ಕಾರ್ಯ ಶುಭಕಾರ್ಯಗಳಿಗೆ ಉತ್ತರಾಯಣ ಕಾಲ ಶ್ರೇಷ್ಠವಾಗಿದೆ. 

         , ಜನವರಿ 15ರಂದು ಮಕರ ಸಂಕ್ರಾತಿಯನ್ನು ಆಚರಿಸಲಾಗುತ್ತದೆ. ಜನವರಿ 15 ರಂದು ಹಗಲು ಪೂರ್ತಿ ಅಂದರೆ ಸೂರ್ಯೋದಯದಿಂದ, ಸೂರ್ಯಾಸ್ತದವರೆಗೆ ಪುಣ್ಯ ಕಾಲವಿರುತ್ತದೆ. ಈ ಪುಣ್ಯ ಕಾಲದಲ್ಲಿ ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ಎಳ್ಳು ದಾನ ಮಾಡಬೇಕು. ದೇವಸ್ಥಾನಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚಬೇಕು. ಮಾಡಿದ ದಾನಕ್ಕೆ ಜನ್ಮ ಜನ್ಮದಲ್ಲೂ ಸದಾ ನಮಗೆ ಫಲ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ. ಇದಕ್ಕಾಗಿಯೇ ಎಳ್ಳು - ಬೆಲ್ಲ ಹಂಚುವುದು. 

         ಎಳ್ಳು - ಬೆಲ್ಲ, ಶೀತ - ವಾತದಿಂದ ಉಂಟಾಗುವ ಜಡ್ಡು, ಆಲಸ್ಯಗಳನ್ನು ದೂರಮಾಡುವ ಸ್ನೇಹ ದ್ರವ್ಯಗಳ ಹಂಚಿಕೆ, ಸೇವನೆ, ದಾನ ಈ ಸಂಕ್ರಾಂತಿಯ ವೈಶಿಷ್ಟ. 'ಎಳ್ಳು - ಬೆಲ್ಲ ತಿಂದು ಒಳ್ಳೆ ಮಾತಾಡು' ಎನ್ನುವುದೇ ಮಕರ ಸಂಕ್ರಾಂತಿಯ ಸಂದೇಶವಾಗಿದೆ.

 ✍ ಡಾ: ಶೈಲಜಾ ರಮೇಶ್
           ಅಸ್ತ್ರಾಲಜರ್
[14/1/2023, 12:37 pm] Dr. B. N. Shylaja Ramesh: ಸಂಕ್ರಾಂತಿ
**********

ಸುಗ್ಗಿಯ  ಸಂಭ್ರಮಕೆ
ಸಂತಸದ ಸಂಕ್ರಾಂತಿ
ಉತ್ತರಾಯಣದ ಕಡೆಗೆ
ರವಿಯ ಪಥ ಬದಲಿಸುವ
ಮಕರ ಸಂಕ್ರಾಂತಿ

ಎಳ್ಳು ಕಡಲೆಯ ಜೊತೆಗೆ
ಬೆಲ್ಲ ಹದ ಬೆರೆಸಿ
ರುಚಿಗೆ ಕೊಬ್ಬರಿ  ಸೇರಿ
ಫಲದೊಡನೆ ಎರೆದು
ಸಂಭ್ರಮಿಸೋ ಸಂಕ್ರಾಂತಿ

ಕಬ್ಬಿನ ರಸ ಜೊತೆಗೆ
ಸಿಹಿ ಸಕ್ಕರೆಯಚ್ಚಿನ
ಸವಿ ಮೆದ್ದು  ಮೆದ್ದು
ಒಳ್ಳೊಳ್ಳೆ ಹಿತ ಮಾತಿನ ಜತೆ
ಸಡಗರದ ಸಂಕ್ರಾಂತಿ

ಗೋಮಾತೆ ಪೂಜೆಯ ಜೊತೆ
ಕಿಚ್ಚು ಹಾಯಿಸುವ ಕಥೆ
ಬಣ್ಣ ಬಣ್ಣದ  ರಂಗೋಲಿ ಎಳೆ
ಸಿಹಿ ಹುಗ್ಗಿ ಕಡಲೆ ಅವರೆ
ಮೆಲ್ಲುತ ನಲಿವ  ಸಂಕ್ರಾಂತಿ

ಸುಗ್ಗಿ ಸಂಭ್ರಮದ ಜೊತೆ
ರಾಗ ದ್ವೇಷವ ಮರೆತು
ಎಲ್ಲರೊಂದಿಗೆ ಕಲೆತು
ಸಿಹಿಯಂತೆ ಜೊತೆ ಬೆರೆತು
ಸಂಭ್ರಮಿಸೋ ಸಂಕ್ರಾಂತಿ

            ಶೈಲೂ......
[14/1/2023, 12:38 pm] Dr. B. N. Shylaja Ramesh: ಸಂಕ್ರಾಂತಿ
**********
ರಜತದ್ಹರಿವಾಣದಲಿ 
ಕುಸರಿಕಲೆ ಕಸೂತಿ ವಸ್ತ್ರ
ಬೆಳ್ಳಿ ಬಟ್ಟಲಲಿದೋ 
ಎಳ್ಳು ಬೆಲ್ಲದ ಮಿಶ್ರ
ಕಡಲೆ ಕೊಬ್ಬರಿ ಮಿಳಿತ
 ಹದವಾದ ಪಾತ್ರ
ಜೊತೆಗಿಹುದು ಸಿಹಿಯ 
ಮೃದು ಸಕ್ಕರೆ ಅಚ್ಚು
ಅದರೊಡನೆ ಕಲೆತು 
ಎಲಚಿಯ ಗುಚ್ಚು
ಕದಳಿಫಲದ ಜೊತೆ 
ರಸಭರಿತ ಕಬ್ಭು
ಹರಿಷಿನ ಕುಂಕುಮ ಹೂ
 ತಾಂಬೂಲದ ಸೊಬಗು
ಎಳ್ಳು ಬೀರುತ
 ಸಂಬಂಧಗಳಿಗೆ ಬೆಸುಗೆ
ಗಟ್ಟಿಗೊಳಿಸುವ 
ಬಾಂಧವ್ಯಗಳ ಒಸಗೆ
ಎಳ್ಳುಬೆಲ್ಲ ಸವಿದು 
ಒಳ್ಳೊಳ್ಳೆ ಮಾತಾಡಿ
ಸಂಕ್ರಾಂತಿಯಿಂದ
 ಶುಭಕ್ರಾಂತಿಗೆ ಮುನ್ನುಡಿ...

         ಡಾ:  ಶೈಲಜಾ ರಮೇಶ್
[14/1/2023, 12:38 pm] Dr. B. N. Shylaja Ramesh: ಸಂಕ್ರಾಂತಿ
**********

ಸಂಕ್ರಾಂತಿಯ ಸಂಭ್ರಮ ಸಡಗರ
ಬಣ್ಣ ಬಣ್ಣದ ರಂಗವಲ್ಲಿ ಚಿತ್ತಾರ
ಗೆಲುವಿನ ಕಳೆ ರೈತ ವರ್ಗದಲಿ
ಚಿಣ್ಣರ ಉತ್ಸಾಹ ನಗು ಮೊಗದಲಿ

ಉತ್ತರಾಯಣಡೆದೆಗೆ ರವಿಯ ಪಥ
ಮಕರ ಸಂಕ್ರಾಂತಿಯ ಪುಣ್ಯ ಚರಿತ
ಆರಾಧ್ಯ ದೈವವಿಲ್ಲಿ ಸೂರ್ಯ ನಾರಾಯಣ
ಫಸಲಿತ್ತ ಭೂರಮೆಗೆ ಹುಗ್ಗಿಯ ನಿವೇದನ

ಹದವಾಗಿ ಬೆರೆತಿಹುದು ಮೊದಲ ಫಸಲು
ಎಳ್ಳು ಬೆಲ್ಲ ಕಡಲೆ ಕಾಯಿ ಮೊದಲು
ಭಾವೈಕ್ಯತೆಯ ಸಾರುವ ಸ್ನೇಹ ಬಂಧ
ಎಳ್ಳು ಬೆಲ್ಲ, ಸವಿ ನುಡಿಯ ಅಂದ ಚೆಂದ

ಮಾಗಿಚಳಿಯಿಂದ ತೀಕ್ಷ್ಣ ಬಿಸಿಲಿನೆಡೆಗೆ
ಋತುಮಾನ ತಂದ ಮಹತ್ತರ ಕೊಡುಗೆ
ಆಧ್ಯಾತ್ಮ, ದೈವೀಕತೆಯಲೂ ಕ್ರಾಂತಿ
ಎಲ್ಲೆಡೆಯೂ ಹರುಷ ತಂದ ಸಂಕ್ರಾಂತಿ

                ಶೈಲೂ.......
[14/1/2023, 12:38 pm] Dr. B. N. Shylaja Ramesh: ಚುಟುಕು ##
ಮಕರ ಸಂಕ್ರಮಣ
***************
ದಕ್ಷಿಣಾಯಣದಿಂದ ಉತ್ತರಾಯಣದ ಕಡೆ
ರವಿ ತನ್ನ ಪಥವ ಬದಲಿಸುವ ಹೊತ್ತು
ಧನುರ್ಮಾಸದಿಂದ ಮಕರಮಾಸದೆಡೆ
ಪಯಣವೇ ಮಕರ ಸಂಕ್ರಮಣದ ಗಮ್ಮತ್ತು..!!

              ಶೈಲೂ....
[14/1/2023, 2:35 pm] Dr. B. N. Shylaja Ramesh: #ಒಂಟಿ_ರೋಡಲ್ಲಿ 

ಗಗನಚುಂಬಿ ಮರಗಳ ನೆರಳು
ಮಂಜು ಮುಸುಕಿನ ಹಾದಿ 
ಏಕೋ ಕಾರಿರುಳಿನಂತೆ ಭಾಸ
ಮಸುಕಾಗುತ್ತಿದೆ ಹಾದಿಯೆಲ್ಲ

ಈ ಬೇಸರದ ಒಬ್ಬಂಟಿ ಯಾನ
ಪ್ರಯಾಸವೆನಿಸುತ್ತಿದೆ ಪಯಣ
ಕ್ರಮಿಸಬೇಕಾದ ಹಾದಿಎಷ್ಟೋ
ಸಾಕೆನಿಸುತ್ತಿದೆ ಒಂಟಿ ಜೀವನ

ಅಳಲು ತೋಡಿಕೊಳ್ಳಲೂ ಸಹ
ಒಂದು ನರ ಜೀವವಿಲ್ಲ ಜೊತೆಗೆ
ಸುಖದುಃಖಗಳ ವಿನಿಮಯವಿರದೆ 
ಖುಷಿ ದುಪ್ಪಟ್ಟಾಗುವುದು ಹೇಗೆ ?

ಹಿಂದು ಮುಂದಿಲ್ಲದ  ಬದುಕು 
ಸಾರ್ಥಕವಿಲ್ಲ ಯಾವುದಕ್ಕೂ
ಬೇಕೊಂದು ಸಾಂತ್ವನದ ಹೆಗಲು
ಮಾಗಿ ಜೀವನ ಪರಿಪಕ್ವವಾಗಲು 

     ಶೈಲಜಾ ರಮೇಶ್
[15/1/2023, 11:27 am] Dr. B. N. Shylaja Ramesh: ಸುಗ್ಗಿ_ಸಂಭ್ರಮ

ಸುಗ್ಗಿಯ ಹಿಗ್ಗಿದು ಬಂದಿದೆ ನೋಡು
ರೈತರ ಮೊಗದಲ್ಲಿ ಸಂತಸದ ಜಾಡು
ವರ್ಷದ ಮೊದಲ ಹೊಸ ಬೆಳೆಯ ಸಂಭ್ರಮ
ಬೆವರ ದುಡಿಮೆಗೆ ಸಿಕ್ಕ ಫಲಿತದ ಸಂಗಮ
ಸೃಷ್ಟಿಯಲೂ ಏನೋ ನವಚೇತನ..!
ರವಿಯು ಪಥ ಬದಲಿಸುವ ಸಂಕ್ರಮಣ.!
ಸಂಕ್ರಾಂತಿಯ ಸಂಭ್ರಮಕಿದೋ ಎಳ್ಳುಬೆಲ್ಲ
ತಿಂದು ಒಳ್ಳೆ ಮಾತಾಡುವ ನಾವೆಲ್ಲ..!

             ಶೈಲೂ.....
[16/1/2023, 5:09 pm] Dr. B. N. Shylaja Ramesh: #ಹೆಚ್ಚಿದಶೀತಗಾಳಿ 
ಕುಳಿರ್ಗಾಳಿಯ ಹೊಡೆತಕ್ಕೆ
ತನುವೆಲ್ಲಾ ಗಡಗಡ..!
ಎಷ್ಟು ಹೊದ್ದರೂ ಸಾಲದು
ತಣ್ಣೀರಲ್ಲದ್ದಿಟ್ಟಂತೆ ನೋಡಾ.!

ಬಿಸಿಯೂ ತಾಕದು ಮೈಗೆ
ಪಾಪ ಸೂರ್ಯನೂ ಸೋತಿದ್ದಾನೆ
ಚಳಿಯಲ್ಲವನೂ ನಡುಗಿ
ಶಾಖವಿಲ್ಲದೆ ಸೊರಗಿದ್ದಾನೆ

ಸಾಕಾಗಿದೆ ಚಳಿಚಳಿ ಕಾಟ
ಅಭ್ಯಾಸವಿಲ್ಲದ ಕಾಫಿಯ ಸಖ್ಯ
ದೂರಭ್ಯಾಸವಾದರೂ ಚಿಂತಿಲ್ಲ
ಸದ್ಯ, ಚಳಿಯಿಂದ ಮುಕ್ತಿ ಮುಖ್ಯ

ಬೇಕೆನಿಸುತ್ತಿದೆ ಬಿಸಿ ಬಿಸಿ ಖಾದ್ಯ
ಹೆಚ್ಚಾಯ್ತು ಬಾಯಿ ಚಪಲ
ಎಷ್ಟು ತಿಂದರೂ ತೃಪ್ತಿಯಿಲ್ಲ 
ಬಜ್ಜಿ ಬೋಂಡ ಮಿರ್ಚಿ ಮಸಾಲ 

ತಾತ್ಕಾಲಿಕ ಶಮನವಿದೆಲ್ಲ
ಮತ್ತದೇ ಚಳಿ ಚಳಿಯ ಕಾಟ
ಶೀತಗಾಳಿಯ ಹೊಡೆತ ನಿಂತರೆ
 ಶುರು ಬಿರುಬಿಸಿಲಿನ ಮೊರೆತ 

     ಡಾ: ಶೈಲಜಾ ರಮೇಶ್
[17/1/2023, 1:11 pm] Dr. B. N. Shylaja Ramesh: #ಕೂಡಿಬಾಳೋಣ 
ಒಗ್ಗಟ್ಟಿನಲ್ಲಿದೆ ಬಲ
ಹೆಬ್ಬಂಡೆಯ ಮೈಯಂತೆ
ಅಲುಗಿಸಲಾಗದು ಎಂದೂ
ಬೇರೂರಿದ ಹೆಮ್ಮರದಂತೆ.!

ಒಮ್ಮತದ ಮನಗಳಲಿ
ವಿಶ್ವಾಸವೇ ಪ್ರಾಧಾನ್ಯ
ಒಬ್ಬರಿಗೊಬ್ಬರು ಗೌರವಿಸುತ
ಬನ್ನಿ ಕೂಡಿಬಾಳೋಣ.!

ಕೈಕೈ ಸೇರಿದರೆ ಚಪ್ಪಾಳೆ 
ಮಿಡಿವ ಮನಸುಗಳ ಬಂಧ
ಕಷ್ಟ ಸುಖದೊಳೊಟ್ಟಿಗೆ
ಮಿಡಿಯೇ, ಗಟ್ಟಿ... ಸಂಬಂಧ.! 

ಕೂಡಿ ಬಾಳಿದರೆ ಸ್ವರ್ಗಸುಖ
ಇದು ಒಗ್ಗಟ್ಟಿನ ಮೂಲಮಂತ್ರ
ವಿಭಕ್ತ ಕುಟುಂಬದಲ್ಲೇನಿದೆ.?
ಅದು ಗಾಳಿಪಟದ ಹರಿದ ಸೂತ್ರ..! 

       ಶೈಲಜಾ ರಮೇಶ್
[17/1/2023, 2:56 pm] Dr. B. N. Shylaja Ramesh: ಇಲ್ಲಿ ಯಾರಿಗೆ ಯಾರೋ ಬಲ್ಲವರಾರು.?
ಹೆಗಲಾಗುತ ಮಡಿಲಾಗುತ ಜೊತೆಯಾದವರು
ಕಣ್ಣೀರೊರೆಸಿ, ಸಂತೈಸಿ ಬದುಕನಿತ್ತವರು
ಕ್ಷಣಿಕದ ಬದುಕಿಗೆ ತಕ್ಷಣ ಸ್ಪಂದಿಸುವರು
ಅವರೇ ನಮ್ಮವರು,
[17/1/2023, 4:56 pm] Dr. B. N. Shylaja Ramesh: #ಹೆಣ್ಣಿನ_ಬದುಕಿನಲ್ಲೊಂದು_ಭರವಸೆ 

ಸ್ವಾಭಿಮಾನಿ ಹೆಣ್ಣಿಗೆ
ಸಾಕ್ಷರತೆಯೇ ಭರವಸೆ
ಮತ್ತೊಬ್ಬರ ಅಡಿಯಾಳಾಗದ
ಸ್ವದುಡಿಮೆಯೇ ಭರವಸೆ.!

ಸುಂದರ ಬಾಳ ಹಾದಿಗೆ
ಸನ್ನಡತೆಯೇ ಭರವಸೆ
ಎಲ್ಲರನ್ನೂ ಅಪ್ಪಿ ಹರಸುವ
ತಾಯ್ತನವೇ ಭರವಸೆ..!

ಸಂಸಾರದ ಕಣ್ಣಾದ ಹೆಣ್ಣಿಗೆ
ವಾತ್ಸಲ್ಯ ಮಮತೆಯೇ ಭರವಸೆ
ಅವಳ ಸುಖೀ ಸಂಸಾರಕೆ
ಮನದನ್ನನೇ ಭರವಸೆ..!

ಸಮಾಜದಲ್ಲಿ ತಲೆಯೆತ್ತಿ ಬಾಳಲು
ಭವ್ಯ ಕುಟುಂಬವೇ ಭರವಸೆ
ಬದುಕಿಗೊಂದರ್ಥ ಕಾಣಲು
ಕರುಳ ಕುಡಿಯೇ ಭರವಸೆ..!

ಹರಿವ ಗಂಗೆಯಂತೆ ಹೆಣ್ಣು
ಉಗಮದಿಂದ ಕೊನೆಯವರೆವಿಗೂ
ಇಕ್ಕೆಲಗಳಲ್ಲಿರವವರ ಸಂತೈಸುವ
ಸಾದ್ವೀಮಣಿಯೇ ಕುಟುಂಬದ ಭರವಸೆ.!

       ಶೈಲಜಾ ರಮೇಶ್
[19/1/2023, 12:36 pm] Dr. B. N. Shylaja Ramesh: #ತನವು_ಮನವು_ನಿನ್ನದೇ_ನೆನಪು 

ಮರೆವೇನೆಂದರೂ ಹೇಗೆ ಮರೆಯಲಿ ಹೇಳು?
ತನುಮನವನಾಕ್ರಮಿಸಿದ ಮನದನ್ನ ನೀನು.!
ಉಸಿರಿನ ಪ್ರತಿ ಏರಿಳಿತದಲೂ  ನಿನ್ನ ಹೆಸರೇ 
ಉಸಿರ ಕಣಕಣದಲೂ ಬೆರೆತುಸಿರು ನೀನು..!

ನೀನೇ ನನ್ನ ಮನದ ಪ್ರತಿ ಭಾವನೆಯ ಮಿಡಿತ
ಬದುಕಿನ ಒಳಹೊರಗೂ ಬೆರೆತವನು ನೀನೇ.!
ನುಡಿವ ಪ್ರತಿ ಪದಪದದಲೂ ನಿನ್ನದೇ ನೆನಪು
ಬರೆವ ಅಕ್ಷರಕ್ಷರಗಳಲಿ ಕುಳಿತವನು ನೀನೇ..! 
 
ನಡೆನುಡಿಯಲ್ಲಿ ನೀನೇ ಹಾಸುಹೊಕ್ಕಾಗಿರಲು
ಗೆಳೆಯಾ ನಿನ್ನನು ಮರೆಯಲಹುದೇ ನಾನು..?
ಬಾಳ ಪುಟಪುಟದಲೂ ನೆನಪೇ ಅಚ್ಚಾಗಿರಲು
ಮರೆತು ಜೀವದಿಂದಿರಬಹುದೇನು ನಾನು...?

ಡಾ: ಬಿ ಎನ್ ಶೈಲಜಾ ರಮೇಶ್
[19/1/2023, 1:27 pm] Dr. B. N. Shylaja Ramesh: #ಕಂಗಳು_ವಂದನೆ_ಹೇಳಿದೆ 

ಬೇಸರವಾಗಿತ್ತು ಬದುಕು
ಸಾವಿರ ನೋವುಗಳನುಂಡು
ಮನ ಕದಡಿ ಹೋಗಿತ್ತು
ಹೀಯಾಳಿಕೆಯಲಿ ನೊಂದು..!

ಮಾಡದ ತಪ್ಪುಗಳ ಹೇರಿ
ತಪ್ಪಿತಸ್ಥಳೆಂದು ಬಿಂಬಿಸುತ
ಆತ್ಮವಿಶ್ವಾಸವೇ ಕುಸಿದು
ಬಂದೆರಗಿತ್ತತೀವ ಆಘಾತ.!

ಬದುಕೇ ಬೇಡವೆನಿಸಿತ್ತು
ಬಾಳುವ ಆಸೆಯೇ ಕಮರಿ 
ಸಾವಿನ ಬಾಗಿಲ ತಟ್ಟಿದ್ದೆ
ತಡೆಯಲಾರದೆ ಹಿಂಸೆದಳ್ಳುರಿ .!

ಎಲ್ಲಿದ್ದೆಯೋ ಏನೋ ನೀ
ಬಾಳಿಗೆ ಹೊಂಬೆಳಕಾಗಿ ಬಂದೆ 
ಎದುರಿಸಿ ನಿಲ್ಲುವ ಛಲ
ಆತ್ಮವಿಶ್ವಾಸ, ದೈರ್ಯವ ತಂದೆ..!

ಇಂದು ನಾ ಬೆಳೆದೆ, ಬೆಳಗಿದೆ 
ಬದುಕ ಕತ್ತಲೆಯನ್ನು ದೂಡಿ
ಕಾರಣ ನೀನೇ,ಅಭಿನಂದಿಸುವೆ
ಕಂಗಳಲೇ ವಂದನೆಯ ಮಾಡಿ..!

      ಡಾ: B.N ಶೈಲಜಾ ರಮೇಶ್
[19/1/2023, 3:12 pm] Dr. B. N. Shylaja Ramesh: #ದತ್ತ_ಸಾಲು
#ಅತ್ತ_ಕೋಣೆಯಲ್ಲಿ_ಬೆಳಕು

ಅತ್ತ ಕೋಣೆಯಲಿ ಬೆಳಕು
ಆದರಿತ್ತ ಮನದಲಿ ಕತ್ತಲು
ಕತ್ತಲೆಕೂಪದಿಂದೊರಬರದಿರೆ
ಹರಡೀತೇ ಬೆಳಕು ಸುತ್ತಲೂ.?

ಮನವಿದು ಯೋಚನೆಗಳ ತವರು
ಯೋಜಿಸಬೇಕು ಹೊರಬರಲು
ನಿರಂತರ ಚಿಂತೆಯಲಿ ಸಿಲುಕೆ
ಚಿಂತನೆಯು ಭಾರವಹುದು ಹೊರಲು.!

ಸದ್ವಿಚಾರಗಳಡಿಯಲಿ ಚಿಂತನೆ
ಸದ್ಭಾವದಲಿ ವಿಷಯ ಮಂಡನೆ
ಸತ್ಕರ್ಮಗಳಲಿ ಕರ್ಮನಿಯೋಜನೆ
ನೀಡಬಹುದು ಬೆಳಕ ರಂಜನೆ..!

ಕೋಣೆಯಲುರಿವ ಬೆಳಕಿನಂದದಲಿ
ಮನದೊಳಗೂ ಪ್ರಭೆಯ ಕಾಣಲು
ಅರಿಷಡ್ವರ್ಗಗಳ ಬಲು ದೂರವಿರಿಸಿ
ಅವನ ಭಜಿಸಲು ಹರ್ಷದ ಹೊನಲು.!

     ಡಾ : ಶೈಲಜಾ ರಮೇಶ್
[20/1/2023, 2:33 pm] Dr. B. N. Shylaja Ramesh: #ಚುಟುಕು

#ತಪ್ಪು

ಈ ಜಗದಲಿ ತಪ್ಪು ಮಾಡದವರಾರು.?
ಆದರೆ ತಪ್ಪನ್ನು ತಪ್ಪೆಂದೊಪ್ಪದವರು ಖೂಳರು
ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡುವವರು ದುರುಳರು
ತಪ್ಪನೊಪ್ಪಿ, ಸರಿಪಡಿಸಿಕೊಳ್ಳುವವರು ಜಾಣರು

ತಪ್ಪೇ ಮಾಡದಂತ ನಡೆನುಡಿಯಿದ್ದವರು ಶುದ್ಧರು
ಬೇರೊಬ್ಬರ ತಪ್ಪುತಿದ್ದಿ ನಡೆಸುವವರು ಮಾನ್ಯರು
ಮಾಡಿದ ತಪ್ಪುಗಳನೆತ್ತಿ ನಿಂದಿಸುವವರು ಹೀನರು
ಕ್ಷಮಿಸಿ, ಮತ್ತೆ ತಪ್ಪೆಸಗದಂತೆ ಕಾಯ್ವರು ದೇವರು

       ಡಾ: ಶೈಲಜಾ ರಮೇಶ್
[21/1/2023, 2:46 pm] Dr. B. N. Shylaja Ramesh: #ನಗು

ನಗುವೊಂದು ಬೆಲೆಬಾಳುವ ನಗ
ನಗದ ಬೆಲೆಯರಿಯಬೇಕು ಈ ಜಗ
ಜಗದೊಡೆಯನಲ್ಲಿ ಒಂದು ಬೇಡಿಕೆ
ಬೇಡಿಕೆ, ನಗುವಿನ ವರ ನೀಡೆಂದು ಜನಕೆ
[21/1/2023, 3:14 pm] Dr. B. N. Shylaja Ramesh: ಜನರ ಮನವ ಪ್ರಫುಲ್ಲವಾಗಿ ಇರಿಸು
ಇರಿಸು ಎಲ್ಲರಲೀ ವಾತ್ಯಲ್ಯದ ದಿರಿಸು
[21/1/2023, 3:43 pm] Dr. B. N. Shylaja Ramesh: ಕೆಲ ಸಂಬಂಧಗಳೇ ಹಾಗೆ, ನುಂಗಲೂ ಆಗದ ಉಗುಳಲೂ ಆಗದ ಬಿಸಿ ತುಪ್ಪದಂತೆ. ಬಿಡಿಸಲಾರದ ಸಿಕ್ಕಿಡಿದ ದಾರದಂತೆ.  ಹಚ್ಚಿಕೊಂಡರೆ ತಲೆನೋವು, ಬಿಟ್ಟರೆ ಬರೀ ನೋವು.  ಅವಶ್ಯಕತೆಗಷ್ಟೇ ಸೀಮಿತವಾದ, ಜಿಗಣೆಗಳಂತೆ ರಕ್ತ ಹೀರುವ, ತಗ್ಗಿದಷ್ಟೂ ಭಾರ ಹೇರುವ ಈ ಬಂಧಗಳನ್ನು ಕಡಿದುಕೊಳ್ಳಲೂ ಕಷ್ಟ, ಸಹಿಸಿಕೊಂಡರೆ ವಿಪರೀತ ನಷ್ಟ. ಇಂಥ ಬಂಧನದಲ್ಲಿ ಸಿಕ್ಕಿ ಗರಿಮುರಿದ ಹಕ್ಕಿಯಂತಾಗಿದೆ ಬದುಕು😔  ಬಾಗಿದಷ್ಟೂ ಬೆನ್ನುಮೂಳೇಯನ್ನೇ ಮುರಿವ ಈ ಬಂಧನದಿಂದ ಬಿಡುಗಡೆಯೇ ಇಲ್ಲವೇ? 
     ಕುಹಕ, ತಿರಸ್ಕಾರ, ಒಂಟಿತನ, ಅನುಭವಿಸಿ ದುಃಖದ ಭಾರದಿಂದ ಮಂಕಾದ ಮನಸ್ಸಿಗೆ ಸಾಂತ್ವನ ಹೇಳುವಾಗ ಮೂಡಿದ ಸಾಲುಗಳಿವು🙂

#ಹೊಂದಿಕೋ_ಮನಸೇ

ಹೊಂದಿಕೋ ಮನಸೇ ನೀ ಸುಮ್ಮನೇ
ಬೇಡದ ನೆನಪಿಗೂ ಕಾಡುವ ಕನಸಿಗೂ
ಕುಂಟು ನೆಪವೊಡ್ಡುವ ಹುಸಿಮುನಿಸಿಗೂ
ನೊಂದುಕೊಳ್ಳಲೇ ಬೇಡ ನೀನೆಂದಿಗೂ..

ಅರಿತುಕೊ ಮನಸೇ ಈ ಕಟುಸತ್ಯವ
ನಿನ್ನವರು ಯಾರಿಲ್ಲ ನೀ ಬಿದ್ದರೂ
ಸಂತೈಸುವರಾರಿಲ್ಲ ನೀ ನೊಂದರೂ
ಉರಿದುರಿದು ಬೀಳುವರು ನೀ ಗೆದ್ದರೂ..

ತಡೆದುಕೋ ಮನಸೇ ನೀ ದುಃಖವಾ
ಸವಿ ಮಾತಲೇ ಚಾಟಿ ಬೀಸಿದರೂ
ನಗು ನಗುತಲೆ ನಿನ್ನ ಬೆನ್ನಿಗಿರಿದರೂ
ನಡೆವ ಹಾದಿಗವರು ಮುಳ್ಳಾದರೂ..

ಕಾಯುತಿರು ಮನಸೇ ನಾಳಿನ ಬೆಳಕಿಗೆ
ಬದುಕ ಕತ್ತಲೆ ಕಳೆವ ಹೊಸ ಹುರುಪಿಗೆ
ಗುರಿಯೆಡೆಗೆ ನಡೆಸುವ ಹೊಸದಾರಿಗೆ
ತಲೆಯೆತ್ತಿ ಬಾಳುವ ಹೊಸ ಬದುಕಿಗೆ..

ಇನ್ನೆಷ್ಟು  ದಿನ  ಕಾಡೀತು  ಹೇಳು.?
ಕಿತ್ತು ತಿನ್ನುವ ರಣಹದ್ದಿನಂಥ ಬಾವು
ಎಲ್ಲಕ್ಕೂ ಇರುವುದು ಕೇಳು ಅಂತ್ಯವು
ತಡೆಹಿಡಿದು ನುಂಗಿಬಿಡು ಹಿಂಡುವ ನೋವು..

ಭೂತಕಾಲದ ಬವಣೆ ತಾ ಕರಗಿ
ಭವಿತದ ಮುನ್ನುಡಿಗೆ ದೀಪಬೆಳಗಿ
ಕಂಡ ಕನಸುಗಳೆಲ್ಲ ಸಾಕಾರವಾಗಿ
ಖುಷಿಯ ಕ್ಷಣ ಕಾದಿದೆ ನಿನ್ನ ನಗುವಿಗಾಗಿ..

ಸಕಾಲದವರೆಗೆ ಸಾವರಿಸಿಕೋ ಮನವೇ
ನೋವಿಗೂ ನಲಿವಿಗೂ ನೀ ಕುಗ್ಗದೇ
ಬವಣೆಗಳ ಭಾರಕ್ಕೆ ನೀ ಜಗ್ಗದೇ.👍
ಹೊಂದಿಕೋ ಮನಸೇ ನೊಂದುಕೊಳ್ಳದೇ..

           ಶೈಲೂ......
[21/1/2023, 3:56 pm] Dr. B. N. Shylaja Ramesh: ಬೆಳದಿಂಗಳಂತೆ ನೀನೆನ್ನ ಬಾಳಿಗೆ ಗೆಳೆಯ
ಗೆಳೆಯಾ, ನೀನೇ ನನ್ನ ಜೀವರ ಜೀವ
ಜೀವ ಭಾವದಲ್ಲೆಲ್ಲಾ ಹೆಸರು ನಿನದೇ
ನಿನದೇ ಈ ಜೀವ, ನೆಲೆಸಿರುವೆ ಮನದೇ...
[21/1/2023, 9:39 pm] Dr. B. N. Shylaja Ramesh: #ನೀನಿರಲು 

 ನೀನಿರಲು ಜೊತೆಗೆ
ಬದುಕು ಸಂತಸದ ಮಳಿಗೆ
ಜೀವನೋತ್ಸಾಹ ತುಂಬಿ
ಬೆಳಕಾಗಿ ಬಂದೆ ಬಾಳಿಗೆ

ನೀ ಜೊತೆಗಿದ್ದರೇ ಹೀಗೆ
ದುಃಖ ದೂರಾಗುವ ಬಗೆ
ಹೂವಾದ ಮನದ ಖುಷಿ
ನಾ ಹೇಗೆ ಹೇಳಲಿ ನಿನಗೆ 

ಬದುಕಿಡೀ ಜೊತೆಜೊತೆಗೆ
ನಲಿವ ಆ ರಸಮಯ ಘಳಿಗೆ
ಕಂಡ ಕನಸನು ನನಸಾಗಿಸಿ
ತೊಳೆವುದೆಲ್ಲ ಮನದ ಬೇಗೆ

ಈ ಬದುಕು ನಿನ್ನೊಂದಿಗೆ
ಆ ದೇವ ಬೆಸೆದ ಬೆಸುಗೆ
ಜನುಮ ಜನುಮಕೂ ಇರಲಿ
ಬದುಕ ಸಂಭ್ರಮದ ಒಸಗೆ

    ಡಾ: ಶೈಲಜಾ ರಮೇಶ್
[23/1/2023, 2:29 pm] Dr. B. N. Shylaja Ramesh: ನನ್ನೊಳಗಿನ ನಾನು
****************

ನನ್ನೊಳಗೊಂದು ಅಭಿವ್ಯಕ್ತಿ
ಉದ್ಭವಿಸಿದೆ ನನ್ನದೇ ಭಿತ್ತಿ
ನೋವು ನಲಿವುಗಳಿಗೆ ಸಂಗಾತಿ
ನನ್ನೊಳಿಹ ಉತ್ತಮೊತ್ತಮ ಗೆಳತಿ

ದೃಢಹೆಜ್ಜೆಗೆ ಸಹಕಾರಿಯಾದವಳು
ತಪ್ಪೋಪ್ಪುಗಳ ತಿಳಿಹೇಳಿದವಳು
ಕಣ್ಣೀರೊರೆಸಿ ನೋವ ಮರೆಸಿದವಳು
ಸೋತು ಕಂಗೆಟ್ಟಾಗ ಮಡಿಲಾದವಳು

ಮುಂದಡಿಯಿಡಲು ಒತ್ತಾಸೆಯಾದವಳು
ಆತ್ಮವಿಶ್ವಾಸ ನೀಡಿ ನಲಿವಿತ್ತವಳು
ಗುರಿಯೆಡೆಗೆ ಗುರುವಿನಂತಾದವಳು
ಏಕಾಂಗಿತನಕೆ ಜೊತೆಯಾದವಳು

ಬದುಕಿಗೆ ಭರವಸೆಯಿತ್ತವಳು
ಸಾಧಿಸುವ ಚಲವಿತ್ತ ವಳು
ಕಾಲೆಳೆವವರ ಕಡೆಗಣಿಸೆ0ದವಳು
ನನಗಾಗಿ ಕಣ್ಣೀರಸುರಿಸುವವಳು

ನನ್ನೊಳಗಿನ ಈ ನಾನು ಅಹಂ ಅಲ್ಲ
ಎಲ್ಲದೋಳರಿವಿತ್ತ ಸುಮನಸೇ ಎಲ್ಲ
ಧೈರ್ಯ ಗುಂದದಂತೆ ನೀಡಿ ಶಕ್ತಿ
ನನ್ನತನವ ಎತ್ತಿ ಹಿಡಿವ ಅಭಿವ್ಯಕ್ತಿ..!!

           ಶೈಲೂ...
[23/1/2023, 6:28 pm] Dr. B. N. Shylaja Ramesh: ಬದುಕು

ಹೊಂದಿಕೊಂಡು ಹೋದರಿಬ್ಬರೂ ಸಮಕು
ದಾಂಪತ್ಯದಲ್ಲಿ ಬಾರದೆಂದಿಗೂ ಒಡಕು
ಸಿಡಿಮಿಡಿಗೊಳ್ಳದೆ ಅದಕು ಇದಕು ಎದಕು
ಅನುಸರಿಸಿಕೊಂಡರುಂಟು ಚಂದ ಬದುಕು
[23/1/2023, 6:37 pm] Dr. B. N. Shylaja Ramesh: #ಗಿಣಿ_ಕವನ

ನನ್ನ ಆಯ್ಕೆಯ ಪದಗಳು  #ಬದುಕು #ಒಲವು

#ಬದುಕು

ಹೊಂದಿಕೊಂಡು ಹೋದರಿಬ್ಬರೂ ಸಮಕು
ದಾಂಪತ್ಯದಲ್ಲಿ ಬಾರದೆಂದಿಗೂ ಒಡಕು
ಸಿಡಿಮಿಡಿಗೊಳ್ಳದೆ ಅದಕು ಇದಕು ಎದಕು
ಅನುಸರಿಸಿಕೊಂಡರುಂಟು ಚಂದ ಬದುಕು

#ಒಲವು

ನಮ್ಮಿಬ್ಬರ ಪರಿಶುದ್ಧ ಒಲವು
ತುಂಬಿತು ಬಾಳಿಗೆ ಬಲವು
ಏನೇ ಬಂದರೂ ನೋವುನಲಿವು
ಎದುರಿಸೋಣ ಕಾಣಲು ಗೆಲುವು

      ಡಾ: ಶೈಲಜಾ ರಮೇಶ್
[24/1/2023, 4:17 pm] Dr. B. N. Shylaja Ramesh: #ಚುಮುಚುಮು_ಚಳಿಯಲ್ಲಿ_ಮನಸುಗಳ_ಮಿಲನ

ಮಾಗಿಯ ಚಳಿಯಲ್ಲಿ ಒಂದು ಸಂಜೆ
ಸುಯ್ಯೆಂದು ಬೀಸುವ ಕುಳಿರ್ಗಾಳಿ
ಮೇಲೆ ನಿರ್ಮಲ ನಿರಬ್ರ ನೀಲಾಕಾಶ
ಮನದಲ್ಲಿ ನಿನ್ನ ನೆನಪಿನ ರಂಗಿನೊಕುಳಿ

ನೀಲಾಕಾಶದಿ ಬೆಳ್ಳಿಗೆರೆ ಎಳೆದಂತೆ
ಕಂಡೂ ಕಾಣದ ಬಿದಿಗೆಯ ಚಂದ್ರಮ
ಮತ್ತೇರಿಸುವ ಮಲ್ಲಿಗೆಯ ನರುಗಂಪು
ನಿನ್ನ ನೆನಪಾಗಿ ಮನದಲೇನೋ ಸಂಭ್ರಮ

ಆಗಸದಂಚಿನ ಆ ಬೆಳ್ಳಿಗೆರೆಗೊಂದು
ಬೆಳ್ಳಿಚುಕ್ಕಿಯ ಸಂಭ್ರಮದ ಸಹಜೀವನ
ನಿನ್ನ ನೆನಪ ನವಿರು ಭಾವದ ಮುದದೊಳಿರೆ
ನೀರವ ಮೌನವ ಮುರಿವ ಹಕ್ಕಿಗಳ ಕೂಜನ

ಹಬ್ಬಿ ಹರಡಿದ ತರುಲತೆಗಳಿಗೆ ಇಬ್ಬನಿಯ ಸೊಂಪು
ಸವಿಗನಸ ಬಿತ್ತಿದ್ದ ನನಗೆ ನಿನದೇ ನೆನಪು
ಸರಸದಾಮೋದದಲಿ ತೇಲಿ ಅರ್ಧನಿಮೀಲಿತ ನಯನ
ಚುಮುಚುಮು ಚಳಿಯಲ್ಲಿ ಮನಸುಗಳ ಮಿಲನ

              ಶೈಲೂ.......
[25/1/2023, 6:53 am] Dr. B. N. Shylaja Ramesh: #ಬಂದನದೋ

ಕಾರಿರುಳ ಬಂಧನದೆ
ನಲುಗಿದೀ ಧರೆಯ
ಸೆರೆಯ ಬಿಡಿಸಲು ಬಂದನದೋ ಭಾಸ್ಕರ..!

ಸುರಿದ ಮಂಜಿನ ತೆರೆಯ
ಸರಿಸಿ ಇಳೆಗದು ಬೆಳಕ
ಪ್ರಭೆಯ ಹರಡಲು ಬಂದನದೋ ದಿನಕರ..!

ತಮವು ಹರಡಿದ ಜಡವ
ಹರಿಸಿ ಜನರಿಗೆ ಸುಖದ ಚಂದ
ಬಂಧ ಬೆಸೆಯಲು ಬಂದನದೋ ದಿನಮಣಿ..!

ತಬ್ಬಿ ಹಿಡಿದಿದ್ದ ಹಿಡಿತ
ರವಿಯ ಪ್ರಭೆಗದು ಹೆದರಿ
ಸಡಿಲಗೊಳಿಸುತ ಸರಿದನದೋ ಹಿಮಮಣಿ..!

         ಶೈಲೂ......
  (ಡಾ: ಶೈಲಜಾ ರಮೇಶ್)
[25/1/2023, 5:29 pm] Dr. B. N. Shylaja Ramesh: #ಹೆಣ್ಣು

ಹೆಣ್ಣವಳು ಬಾಳಿನ ಕಣ್ಣು ನಿಜವು
ಅವಳು ನಗುತಿರೇ ಬಾಳೇ ಸ್ವರ್ಗವು
ಅವಳೊಲಿದರೆ ಬಾಳು ಬೆಳಕು
ಮುನಿದರಾಕೆ ಬದುಕೇ ಮಂಕು
ಹೆಣ್ಣಿದ್ದರೇ ತಾನೇ ಮನೆಮನದಿ ನಗುವು
[25/1/2023, 5:38 pm] Dr. B. N. Shylaja Ramesh: #ಸ್ತ್ರೀ

ತಾಯಿ ತಂಗಿ ಮಡದಿ ಮಗಳವಳು
ಎಲ್ಲ ಪಾತ್ರಗಲನರೆದು ಕುಡಿದವಳು
ಸಂಸಾರದ ಪ್ರಗತಿಗೆ ಗಾಣದೆತ್ತಾಗಿ 
ದುಡಿದೇನೂ ಬಯಸದೇ ಮಡಿವ ತ್ಯಾಗಿ
[25/1/2023, 6:49 pm] Dr. B. N. Shylaja Ramesh: ಪ್ರಶಾಂತ  ಸಂಧ್ಯಾಸಮಯ
ತಂಗಾಳಿ ತಾಕಿ ಎನ್ನೆದೆಯ
ಅಲೆಅಲೆಯಾಗಿ ನೆನಪ ಸುರಳಿ
ಬಿಚ್ಚಿ ನೀಡುತಿದೆ ಕಚಗುಳಿ

ತಂಗಾಳಿ ತಂದ ಪರಿಮಳದ ಗಂಧ
ನೆನಪಿಸುತಿದೆ ನಿನ್ನ ವದನದ ಅಂದ
ಬಿರಿದ ತುಟಿಯಂಚಿನಿಂದ..ಆ
ಸೊಗಸ ಕರೆಯ ಕೇಳುವುದೇ ಚಂದ

ಮುಳುಗುತಿಹ ಆ ರವಿಯ ಕಿರಣ
ಮುಗುಳುನಗೆ ತಂದ ಪ್ರೀತಿಯ ಸ್ಪುರಣ
ಕಾಡುವೆಯೇಕೆ ಈ ಪರಿ ಅಕಾರಣ
ಮೋಡಿ ಮಾಡಿ ಕೆರಳಿಸಿದೆ ಮನವನ್ನ

ಚಿಲಿಪಿಲಿಯ ದ್ವನಿ ಹೊರಳಿ
ಹೊರಟಿದೆ ಮರಳಿ  ಗೂಡಿಗೆ
ನಿನ್ನೀ ಪ್ರೀತಿಯ ಕಲರವ
ತುಂಬಿಬಿಟ್ಟಿದೆ  ಎದೆಯೊಳಗೆ

ನೇಸರನಿಗೂ ಅವಸರ ಅಡಗಲು
ಭೂದೇವಿಯ ಒಲವ ಮಡಿಲೊಳು
ಕೆಂಪರಡಿ ಕೆನ್ನೆ ನಾಚಿ ನೀರಾದೆ
ಕನವರಿಸಿ ನಿನ್ನ ಮನದೊಳು

ಈ ಪ್ರಶಾಂತ ಸಂಜೆಗೂ
ನಿನಗೂ ಏನಿಹುದು  ಬಂಧ..?
ಕಾತರದ ಅಳಲಿನೊಲು
ಮನ ಬಯಸಿದೆ ನಿನ್ನ ಮುದದಿಂದ...

           ಶೈಲೂ.....
[28/1/2023, 11:02 am] Dr. B. N. Shylaja Ramesh: ಹಳೆಯದು..😊
ಮಂಜಿನ ಲೀಲೆ
*************

ಆಹಾ....!!!
ಎಂಥ  ಪ್ರೀತಿಯೇ ಇದು  ??
ಬಿರಿಯಲೂ  ಬಿಡದಂತೆ
ಆವರಿಸಿದ್ದಾನೆ ಮಂಜು...!!

ದುಂಬಿಯೆಡೆಗೆ  ಪಂದ್ಯವಿಟ್ಟಂತೆ
ಮಕರಂದವ ಹೀರಿ ಹೀರಿ
ಮೈಮರೆತು ಬಿಟ್ಟಿದ್ದಾನೆ...!!

ಪಳಕೆ ಪಳಕೆಯ ಮೇಲೂ
ಸುರಿಸಿ ಪ್ರೀತಿಯ  ಒಲವ
ಚಂದದ ಕೈಚಳಕ ತೋರಿದ್ದಾನೆ...!!

ಬಯಸಿ, ಬಂಧನದೆ ರಮಿಸಿ
ಮಂಜಿನ ಮೇಲ್ಪದರದ ಮುಸುಕು
ಚಿತ್ತಾರದ ಕುಸುರಿ ಹೆಣೆದಿದ್ದಾನೆ...!!

ಪುಲಕಗೊಂಡ  ಓ.. ಕುಸುಮಬಾಲೇ
ಮೈತುಂಬ ಚಂದದ ರಂಗೋಲಿ ಎಳೆ
ಮುತ್ತಿ, ಮುತ್ತಿಟ್ಟಂತಿದೆ ಆ ಮಂಜಿನ ಹನಿ ಲೀಲೆ...!!

          ಶೈಲೂ.......
[28/1/2023, 5:13 pm] Dr. B. N. Shylaja Ramesh: #ಮುತ್ತಿನ_ಕನಸು 
ಮುತ್ತೆಂದರೆಕೋ ಇರಿಸುಮುರಿಸು
ಮತ್ತೆಲ್ಲಿ ಕಂಡಾರು ಕನಸು..?
ಮತ್ತೇರಿಸುವ ಮುತ್ತಿನ ಖದರಿಗೆ
ಮತ್ತೆ ಮತ್ತೆ ಹಾತೊರೆವುದೇ ಮನಸು

ಮಡಿವಂತರಿಗಿದು ಅಸಹ್ಯ ಖಾದ್ಯ
ಪ್ರೇಮಿಗಳಿಗಿದೇ ಪ್ರಿಯ ನೈವೇದ್ಯ.!
ಆಪ್ಯಾಯಮಾನದ ಮುತ್ತಿನ ಮಳೆ
ಪರಿಹರಿಸಬಹುದು ನೋವಿನ ಎಳೆ.!

ಬಲು ಸವಿಯಿಹುದು ಮಾತೆಯ ಮುತ್ತು
[28/1/2023, 10:00 pm] Dr. B. N. Shylaja Ramesh: ಭಾಸ್ಕರ ಬಂದ
ರಥಸಪ್ತಮಿಯಂದು
ಸಪ್ತಾಶ್ವ ರಥವೇರಿ
ಪ್ರಖರತೆಯ
ತೀಕ್ಷ್ಣ ಕಿರಣ ಹೊತ್ತು
ಬೇಸಿಗೆ  ಶುರುವಾಯ್ತು
[28/1/2023, 10:18 pm] Dr. B. N. Shylaja Ramesh: ಭಾರತಾಂಬೆಯ
ಮಕ್ಕಳು ನಾವೆಲ್ಲರೂ
ತಾಯ ಪದತಲದಿ
ಶಿರವ ಬಾಗಿ
ನಮಿಸುತ್ತ ಬೇಡೋಣ
ದೇಶಭಕ್ತಿ ನೀಡೆಂದು


ಭಾಸ್ಕರ ಬಂದ
ರಥಸಪ್ತಮಿಯಂದು
ಸಪ್ತಾಶ್ವ ರಥವೇರಿ
ಪ್ರಖರತೆಯ
ತೀಕ್ಷ್ಣ ಕಿರಣ ಹೊತ್ತು
ಬೇಸಿಗೆ  ಶುರುವಾಯ್ತು
[28/1/2023, 10:20 pm] Dr. B. N. Shylaja Ramesh: #ಭಾರತಿ

ಭಾರತಾಂಬೆಯ
ಮಕ್ಕಳು ನಾವೆಲ್ಲರೂ
ತಾಯ ಪದತಲದಿ
ಶಿರವ ಬಾಗಿ
ನಮಿಸುತ್ತ ಬೇಡೋಣ
ದೇಶಭಕ್ತಿ ನೀಡೆಂದು

# ಭಾಸ್ಕರ
ಭಾಸ್ಕರ ಬಂದ
ರಥಸಪ್ತಮಿಯಂದು
ಸಪ್ತಾಶ್ವ ರಥವೇರಿ
ಪ್ರಖರತೆಯ
ತೀಕ್ಷ್ಣ ಕಿರಣ ಹೊತ್ತು
ಬೇಸಿಗೆ  ಶುರುವಾಯ್ತು
[29/1/2023, 5:55 pm] Dr. B. N. Shylaja Ramesh: #ಪ್ರೀತಿ_ಮನವೇ_ನೀನೇನಾ 
ನೀ ನನ್ನ ಜೀವವಾಗಿದ್ದೆ
ಉಸಿರುಸಿರಿನಲೂ ಬೆರೆತಿದ್ದೆ
ನನ್ನೇ ನಾ ಮರೆತೋಗುವಂತೆ
ನೀ ನನ್ನನಾವರಿಸಿಬಿಟ್ಟಿದ್ದೆ

ಇಬ್ಬರು ಕಂಡ ಕನಸುಗಳೆಷ್ಟೋ
ಪಿಸುಗುಟ್ಟಿದ್ದ ಮಾತುಗಳೆಷ್ಟೋ 
ಕೈ ಕೈ ಹಿಡಿದು ಜೊತೆಗೂಡಿ
ನಡೆದಾಡಿದ ದಾರಿಗಳದೆಷ್ಟೋ. 

ಅದೆಷ್ಟು ಭಾವಗಳ ವಿನಿಮಯ
ಅದೆಷ್ಟೋ ನೋವುಂಡ ಸಮಯ
ಮನಸು ಮನಸುಗಳ ಬೆಸೆದು
ಬಾಳ ಪುಟದಲ್ಲಿ ಬರೆದ ಅಧ್ಯಾಯ

ಇಂದೇಕೋ ಎಲ್ಲ ಕನಸಂತೆ ಭಾಸ 
ಅದೇನಾಯ್ತೋ ನಡುವೆ ಅಭಾಸ
ಮನಸು ಮುರಿದುಬಿದ್ದು ನೊಂದು
ಕಳೆದುಹೋಗಿದೆ ಮೊಗದ ಸುಹಾಸ

ಮರೆಯಲಾಗುತ್ತಿಲ್ಲ ನಿನ್ನ, ನೆನಪು
ಸೆಳೆದೆಳೆವ ಆ ನಗೆಮೊಗದ ಒನಪು
ಮೌನವಾಗಿ ಬಿಕ್ಕಳಿಸಿದರೂ ಮನಸು
ನೀನೇ ಈ ಹೃದಯ ಪಿಸುಗುಟ್ಟಿದ ಗುನುಗು

       ಶೈಲಜಾ ರಮೇಶ್
[30/1/2023, 7:39 pm] Dr. B. N. Shylaja Ramesh: #ಲೈಫು_ಇಷ್ಟೇ_ನಾ 
ಸುಖದ ಸುಪ್ಪತ್ತಿಗೆ ಎಂದು ಬೀಗಬೇಡ
ಸುತ್ತಲಿರುವುದು  ನೋವಿನ  ಅಖಾಡ
ಒಮ್ಮೆ ಬಿದ್ದರಾಯ್ತು ಒಳಗೆ ಬರೀಚಿಂತೆ
ಬಿಡಿಸಲಾಗದು ಇದು ಕಗ್ಗಂಟಿನ ಸಂತೆ.!

ತೋರಿಕೆಗೆ ಇಲ್ಲಿ  ಎಲ್ಲರೂ  ನಮ್ಮವರೇ
ಅಂತರಾಳದಿಂದ ಎಲ್ಲರೂ ಬೇರೆ ಬೇರೆ 
ಅವರವರ ಬೇಳೆ  ಬೇಯಿಸಿಕೊಳ್ಳಲೆಲ್ಲ
ನಮ್ಮವರಂತೆ ನಟಿಸಿ ಕತ್ತು ಕೊಯ್ದರೆಲ್ಲ

ನಿಜದಿ, ಕಾಲವಲ್ಲವಿದು  ಒಳ್ಳೆಯತನಕೆ 
ಒಳಿತು ಮಾಡಿದರೂ ಹಿಂಸೆಯೇಮನಕೆ
ತನ್ನತನವ ಬದಿಗೊತ್ತಿ ಸೇವೆಮಾಡಿದರೂ
ಮಾಡಿದ್ದೇನೆಂದು ಸುಮ್ಮನೆ ದೂರುವರು

ಆದರೂಇಂತಹವರ ನಡುವೆಯೇಬದುಕು
ಏನಾದರೂ ಸರಿ ಹೊಂದಿಕೊಳ್ಳಲೇ ಬೇಕು 
ಏನೇ ಬಂದರೂ ಪ್ರೀತಿಸಬೇಕು ಬದುಕನ್ನೇ
ನಕ್ಕುಬಿಡೊಮ್ಮೆಏಕೆಂದರೆ ಲೈಫು ಇಷ್ಟೇನೇ..!

    ಶೈಲಜಾ ರಮೇಶ್
[31/1/2023, 9:29 am] Dr. B. N. Shylaja Ramesh: ಕಾರ್ಗತ್ತಲಿರುಳ ಬಾನಿನಲ್ಲಿ
ಬೆಳ್ಳಿಬೆಳಕು ಹರಿಸಲು ಹರಸಾಹಸ ಪಡುತ್ತಿರುವ ಕ್ಷೀಣ ಚಂದಿರಗೆ, ಅಲ್ಲಲ್ಲಿ ಮಿಣುಕು ದೀಪ ಹಚ್ಚಿಟ್ಟಂತೆ ಹೊಳೆವ
ತಾರಾಗಣವೂ ಹೂಡಿದೆ ಮುಷ್ಕರ.!
ಜೊತೆಗೆ ತಿಳಿ ಮೋಡಗಳ ಹರತಾಳ..!
ಬೇಸತ್ತು ಬಳಲಿದ ಚಂದ್ರಮನು ತನ್ನ ಪಾಳಿ ಮುಗಿಸಿ
ಬಾನನು ಬೆಳಗಲು ರವಿಗಾಹ್ವಾನವಿತ್ತು
ಗಗನದಂಚಲಿ ಮರೆಯಾದ..!
ಇಬ್ಬನಿಯ ಬೊಬ್ಬೆಯಲಿ, ಕೊರೆವ ಚಳಿಗೆ ಮುದುಡಿ ಮಲಗಿದ್ದ ಭಾಸ್ಕರ
ತನ್ನ ಪಾಳಿಯ ಕೆಲಸಕ್ಹೊರಡಲು ಅಣಿಯಾದ..!

          ಶೈಲೂ...
[31/1/2023, 9:39 pm] Dr. B. N. Shylaja Ramesh: ಮೂಡಣದ ನಭದಿ ನೇಸರನಾಗಮನ..
ಪ್ರಕೃತಿ ಮಾತೆಯ ಎದೆಯಲಿ ಹೊಸದೊಂದು ಸಂಚಲನ..
ತಂಬೆಲುರುಗಳಲಿಯ ಇಬ್ಬನಿಗೆ ಒಲವಿನ ಕಂಪನ..
ಖಗಗಳೊಡಗೂಡಿ ದುಂಬಿಯ ಜೇಂಕಾರ ಗಾನ..
ಬಿರಿಯೇ ಮೊಗ್ಗದು ಬೇಡುತಿದೆ ನವ ಜೀವನ..
ಗುಡಿ-ಗೋಪುರಗಳಲಿ ಧ್ವನಿಸುತಿದೆ ಮಂತ್ರಗಳ ಪಠಣ..
ಇರುಳ ಕನಸಿಂದೆದ್ದ ಹೂ ಮನಕೆ 'ಉದಯರವಿ' ಸೋಕಿಸಲಿ ಉತ್ಸಾಹದ ಕಾಂತಿ ಕಿರಣ..!
ಮುಂಜಾನೆಯ ಶುಭಾಶಯ ಕೋರಲು ನಿಮಗಾಗಿಯೇ ಹೆಣೆದೆ ಈ ಕವನ..!
   ಶುಭೋದಯ! ಶುಭದಿನ!
[31/1/2023, 9:40 pm] Dr. B. N. Shylaja Ramesh: ಬೆಳಗು
******

ಮುಂಜಾವಿಗೆ ದಿನಕರನ ಸ್ಪರ್ಷ
ಮೂಡಿ ಸಂಚಲನ ಕಾಣುತಿದೆ ಹರ್ಷ
ಜೀವ ಸಂಕುಲಗಳಿಗೆ 
ಉಲ್ಲಾಸದ ನವೋದಯ
ಸೃಷ್ಟಿ ಯ ಈ  ನವಿರ ಗಾಯನಕೆ
ಕಾರಣವೇ ಸೂರ್ಯೋದಯ
ಮುಂಜಾನೆಯ ಮಬ್ಬಿನಲಿ
ಇಬ್ಬನಿಯ ಸಿಂಚನ
ರವಿಯ ಸ್ಪರ್ಶದಿ ಇಬ್ಬನಿಯ
ಹನಿ ಹನಿಗೂ ನವಚೇತನ
ಬೆಳಗಿನ ಸವಿಗಂಪಿಗೆ
ತೆರೆದು ತನುಮನ
ಮೂಡಲಿ ಉತ್ಸಾಹ ದ ದಿನಚರಿಗೆ
ಅದಮ್ಯ ಚೇತನ....

        ಶೈಲೂ.....
[31/1/2023, 9:40 pm] Dr. B. N. Shylaja Ramesh: ಇರುಳು ಸರಿದು
ರವಿ ಉದಯಿಸುವ ಸಮಯ
ಚೆಲ್ಲಿ ಬಂಗಾರ ದೋಕುಳಿ
ಬಾನೆಲ್ಲಾ ಸ್ವರ್ಣಮಯ

ಮಂಜಿನ ತೆರೆಸರಿದು, ಇಬ್ಬನಿಯಲಿ
ರವಿಯ ಬಿಂಬ ಆಹ್ಲಾದಮಯ
ಹಕ್ಕಿಗಳ ಚಿಲಿಪಿಲಿ ಕಲರವದೆ
ಜಗವೆಲ್ಲಾ ನಾದಮಯ

ಅರಳಿದ ಸುಮಗಳ
ಕಂಪು ಸೌಗಂಧಮಯ
ಬಿರಿದ ಹೂಗಳೊಡನಾಡುವ
ದುಂಬಿ ಝೇಂಕಾರ ಶೃಂಗಾರಮಯ

ಬಂದೇ ಬಿಟ್ಟಿದೆ ಶುಭೋದಯ
ಹೇಳುವ ಸುಸಮಯ
ಬಾಂಧವರೆ ನಿಮಗಿದೋ
ಶುಭದಿನದ ಶುಭೋದಯ..
🌹🌹🌹🌹🌹🌹🌹

       ಶೈಲೂ..
[1/2/2023, 4:12 pm] Dr. B. N. Shylaja Ramesh: ಎದೆಯುಬ್ಬಿಸಿ ಅನಿಸಿದ್ದನ್ನ ಗೀಚಿ
ನಾನಾದೇನೆಂದುಕೊಂಡೇ ಬೀಚಿ
ಓದುಗರ ಹಿಡಿದಿಡುವಲ್ಲಿ ಎಡವಿ
ಸುಮ್ಮನೇ ಹಿಂದುಳಿದುಬಿಟ್ಟೆ ನಾಚಿ.!

ಸಾಕುಬಿಡು ಬರೆದದ್ದು, ಸುಮ್ಮನೆ ತ್ರಾಸ
ತೆಗೆ ಹಣೆಪಟ್ಟಿ ಕವಿ ಎಂಬ ವೇಷ
ಅರ್ಥವಿಲ್ಲದ ಮೇಲೆ ಎಲ್ಲವೂ ವ್ಯರ್ಥ
ಆಗಲೇ ಶುರುವಾದದ್ದು ಮನದ ಕ್ಲೇಶ.!

ಏಕೋ ಸುಮ್ಮನೇ ಇರಲಾಗುತ್ತಿಲ್ಲ
ಕಸಿವಿಸಿ ಬರೆಯದಿರೆ ಮನವೆಲ್ಲಾ
ಇರಬಹುದೇ ನನ್ನುಸಿರಾಗಿ ಬರಹ.?
ಬರೆದರೆಂಥದೋ ಪ್ರಫುಲ್ಲತೆ ದಿನವೆಲ್ಲಾ

        ಡಾ: ಶೈಲಜಾ ರಮೇಶ್
[2/2/2023, 2:15 pm] Dr. B. N. Shylaja Ramesh: #ಹೃದಯದ_ನೋವುಗಳು_ನೂರು 
ಹರಿವ ಕಣ್ಣೀರ ಯಾರೂ ಅರಿಯರು
ಮಾತು ಮಾತಲ್ಲೇ ಚುಚ್ಚಿ ನೋಯಿಸಿ
ನಗುನಗುತ್ತಲೇ ಚೂರಿ ಬೆನ್ನಿಗಿರಿವರು

ಅಲ್ಲಾರೋ ಮಾತಲ್ಲೇ ಮರುಳುಮಾಡಿ
ಇಲ್ಲಾರೋ ನಡೆವ ಹಾದಿಗೆ ಮುಳ್ಳುಹರಡಿ
ಮತ್ತಾರೋ ಭಾವನೆಗಳೊಡನೆ  ಸೆಣೆಸಿ ಹೃದಯವ ನೋಯಿಸಿಯೇಬಿಟ್ಟರು ಕಾಡಿ

ಯಾರಲ್ಲೂ ಹೇಳಲಾಗದಂತ ನೋವು 
ಮಡುವುಗಟ್ಟಿ ಎದೆಯಲ್ಲಿ ತೀರದ ಕಾವು 
ಸಮಸ್ಯೆಗಳ ಜೊತೆ ಜೊತೆಗೇನೇ ಸೆಣೆಸಿ 
ಕಾಣೆಯಾಗಬಹುದೇ ಮನದ ಬಾವು..?

       ಡಾ: ಶೈಲಜಾ ರಮೇಶ್
[2/2/2023, 3:02 pm] Dr. B. N. Shylaja Ramesh: ಯುಗಾದಿ

ವಸಂತನಾಗಮನದಿ ಮಾಮರವು ಚಿಗುರಿರಲು
ಬೇವಿನ ಚಿಗುರೊಡನೆ ಸಿಹಿ ಬೆರೆಯಿತು

ವಸಂತನಾಗಮನದಿ ಮಾಮರವು ಚಿಗುರಿರಲು
ಬೇವಿನ ಚಿಗುರೊಡನೆ ಸಿಹಿ ಬೆರೆಯಿತು..!!
ತಳಿರು ತೋರಣದ ಒಸಗೆ ಕೈಬೀಸಿ ಕರೆದಿರಲು
ಹೊಸ ವರುಷ ಹರುಷದಲಿ ತಾ ನಲಿಯಿತು..!!

ಮಾಮರದ ಚಿಗುರೆಲೆಯ ಸವಿಯು ತಾನುಂಡು
ಕೋಕಿಲದ  ಕುಹೂ ದನಿಯು ತಾ ಮೆರೆಯಿತು..!!
ಹೊಂಗೆಯ ತೊಂಗಲಲ್ಲಿ ಘಮ್ಮೆನ್ನೋ ಸುಮರಾಶಿ
ಮಧುಹೀರಿ ಭೃಂಗವು ತಾ ಝೇಂಕರಿಸಿತು..!!

ಹಣ್ಣೆಲೆಯ ತಾವಿನಲಿ ನವ ಚಿಗುರು ಪಲ್ಲವಿಸಿ
ವಸಂತೋತ್ಸವದ ಋತುಗಾನ ಮೇಳೈಸಿತು..!!
ಭೂರಮೆಯ ಚೆಲುವಿಗೆ ಸ್ವರ್ಗವೇ ಮನಸೋತು
ನವ ಯುಗಾದಿಯ ಗಾದಿಯಲಿ ಮೈಮರೆಯಿತು..!!

ಹೊಸತು ಜನ್ಮದ ಹರುಷದಲಿ ಪ್ರಕೃತಿಯು ನಲಿದಿರಲು
ಎಲ್ಲೆಲ್ಲೂ ಸಂಭ್ರಮದ ಉತ್ಸಾಹದುಲ್ಲಾಸ ಮೈದಳೆಯಿತು..!!
ಬೆವುಬೆಲ್ಲದ ಸಹಿತ ಸಿಹಿ ಹೋಳಿಗೆಯ ರುಚಿಯಲ್ಲಿ
ಜನಮನದ ಸಂತಸವು ನೂರ್ಮಡಿಸಿತು..!!!

              ಶೈಲೂ..
[2/2/2023, 3:07 pm] Dr. B. N. Shylaja Ramesh: ನ್ಯಾನೊಕಥೆ

#ಒಂಟಿಬದುಕು

              ತಾಯ್ತoದೆ ಇಲ್ಲದ ಮಾಲಾ, ಕಂಡವರ ಕೈಕೆಳಗೆ ಬೆಳೆದು ಕಷ್ಟದ ಜೀವನ ಅನುಭವಿಸುತ್ತಿದ್ದಳು, ಅನಿವಾರ್ಯವಾಗಿ ಆಕೆ ವಯಸ್ಸಾದ ಹುಡುಗನನ್ನು ಮದುವೆಯಾಗಬೇಕಾಯ್ತು, ವಯಸಾಗಿದ್ದರೂ ಒಳ್ಳೆಯ ಮನಸಿವನಾದ ಗಂಡ, ಅವನ ಮನೆಯವರು ಮಾಲಾಳನ್ನ ತುಂಬಾ ಚೆನ್ನಾಗಿ ರಾಣಿಯಂತೆಯೇ ನೋಡಿಕೊಳ್ಳುತ್ತಿದ್ದರು.  ಅವಳಿಗೆ ಬೇಕಾದ ಒಡವೆ ವಸ್ತ್ರ, ಕೇಳಿ ಕೇಳಿದ್ದನ್ನೆಲ್ಲಾ ಪ್ರೀತಿಯಿಂದ ಕೊಡಿಸುತ್ತಿದ್ದ ಗಂಡ. ಮಾಲಾಳದ್ದು ನೆಮ್ಮದಿಯ ಜೀವನವೇ ಆಗಿತ್ತು. 
            ಮಾಲಾಳ ದೂರದ ಸಂಬಂಧಿ ಅವಳ ಮದುವೆಗೆ ಬಂದಿರಲಿಲ್ಲವಾದ್ದರಿಂದ ಒಮ್ಮೆ ಅವಳ ಗಂಡನ ಮನೆಗೆ ಬಂದ. ಅವಳ ನೆಮ್ಮದಿಯ ಜೀವನ ಕಂಡು ಒಳಗೇ ಹೊಟ್ಟೆಕಿಚ್ಚಿನಿಂದ ಕುದಿಯುತ್ತಿದ್ದ. ಕಸಮುಸುರೆ ತಿಕ್ಕಿಕೊಂಡಿದ್ದವಳಿಗೆ.. ಇಲ್ಲಿಯ ಅವಳ ವೈಭವೋಪೇತ ಜೀವನ ಕಂಡು ಕಣ್ಣು ಕುಕ್ಕಿದಂತಾಗಿತ್ತು.   ಮಾಲಾ..  ನೀನು ಇಷ್ಟು ಚಂದ ಇದ್ದೀಯಾ... ಆದ್ರೆ ನಿನ್ನ ಗಂಡ ವಯಸ್ಸಾದವನು.... ಯಾಕೆ ನಿನಗೆ ಇವನಿಗಿಂತಲೂ ಒಳ್ಳೆ ಗಂಡು ಸಿಕ್ಕುತ್ತಿರಲಿಲ್ವಾ? ನೀನು ಇವನ ಜೊತೆ ಸಂತೋಷವಾಗಿದ್ದೀಯಾ?   ನಿನಗೆ ಮಕ್ಕಳಾಗುತ್ತಾ? ...ಬಂಜೆಯಾಗಿಯೇ ಉಳಿಯುತ್ತೀಯೋ ಏನೋ.. ಕೊನೆಗೆ ಎಲ್ಲರ ಕಾಲಕಸವಾಗಿ, ಇಲ್ಲಿಯೂ ಕಸ ಮುಸುರೆ ಮಾಡಿಕೊಂಡಿರಬೇಕಾಗುತ್ತೆ.ಅಷ್ಟೇ... ಎಂದು ಇಲ್ಲಸಲ್ಲದ ವಿಚಾರವನ್ನೆಲ್ಲಾ ಅವಳ ತಲೆಗೆ ತುಂಬಿಸಿ... ಅವರೀರ್ವರನ್ನ ಬೇರ್ಪಡಿಸುವಲ್ಲಿ ಯಶಸ್ವಿಯಾದ.   ಮಾಲಾಳನ್ನ ತನ್ನ ಮನೆಗೆ ಕರೆದೊಯ್ದು, ಗಂಡನಿಗೆ ಡೈವೋರ್ಸ್ ಕೊಡಿಸಿ, ಲಕ್ಷಾಂತರ ರೂಪಾಯಿಗಳನ್ನ ಅವಳಿಗೆ ಪರಿಹಾರವಾಗಿ ಕೊಡಿಸಿದ.. ಸ್ವಲ್ಪದಿನ ಅವಳನ್ನ ಚನ್ನಾಗಿ ನೋಡಿಕೊಳ್ಳುವ ನಾಟಕವಾಡಿ... ಕೊನೆಗೆ ನಡುನೀರಲ್ಲಿ ಕೈಬಿಟ್ಟ....  ಅಲ್ಲೂ ಇಲ್ಲದೆ..ಇಲ್ಲೂ ಇಲ್ಲದೆ ಈಗ ಮಾಲಾಳದ್ದು ಒಂಟಿ ಬದುಕು.

       ಡಾ: ಶೈಲಜಾ ರಮೇಶ್
[2/2/2023, 4:12 pm] Dr. B. N. Shylaja Ramesh: ಒತ್ತಕ್ಷರ ಕವನ
ಚ್ಚ

ಸ್ವಚ್ಛಮನದ, ಕರುಣೆ ಕಾಳಜಿಯೇ ಮೂರ್ತಿವೆತ್ತ
ಅಚ್ಚುಮೆಚ್ಚಿನ, ಸಿಹಿಮನದ ಸ್ನೇಹಿತ ನನ್ನವನು
ಬಿಚ್ಚು ಮನದವ, ಲವಲೇಶವೂ ಅಹಂಇಲ್ಲದ
ಸಚ್ಚಾರಿತ್ರ್ಯದ ಮನುಜ ಶ್ರೀರಾಮನಂಥವನು.!

ಇಚ್ಛೆಯಲ್ಲದ ಕಾರ್ಯವನು ಮಾಡದಿದ್ದರೂ
ತುಚ್ಛವಾಗಿ ಯಾವುದನ್ನೂ ಸಹ ಕಾಣದವನು
ಸ್ವೇಚ್ಛಾ ಜೀವನವನ್ನು  ದ್ವೇಷಿಸಿದರೂನೂ
ಸ್ವಇಚ್ಛೆಗೆ ಅತೀ ಗೌರವ ಕೊಡುವವನು..!

ಅನ್ಯರಲ್ಲಿ ಕಿಚ್ಚೆಬ್ಬಿಸುವ ಸುರಸುಂದರಾಂಗ
ಜೊತೆಗಿರಲು ಬೆಚ್ಚನೆಯ ಭಾವ ಉದ್ದೀಪಿಸುವ
ಸತ್ಯವಂತನಿವ ಮುಚ್ಚುಮರೆಯಿಲ್ಲದ ವ್ಯಕ್ತಿ
ಹೆಚ್ಚೇನು ಹೇಳಲಿ, ಇವನೆನ್ನ ಬಾಳು ಬೆಳಗಿದವ

    ಡಾ: B.N. ಶೈಲಜಾ ರಮೇಶ್
[3/2/2023, 12:56 pm] Dr. B. N. Shylaja Ramesh: #ಬಡವನ_ಪ್ರೀತಿ 
@ಸಾಹಿತ್ಯ_ಸಿರಿ 

ಬಡವನಾದರೇನಂತೆ
ಪ್ರೀತಿಗಿಲ್ಲ ಕೊರತೆ
ಬವಣೆ ಬದುಕ ನಡುವೆಯೂ
ಬೆಳಗಿದೆ ಒಲವ ಹಣತೆ.!

ರಾಶಿ ರಾಶಿಯ ಹಣವಿಲ್ಲ
ಆಡಂಬರ ಕಂಡಿಲ್ಲ 
ಬದುಕಲಿ ನೆಮ್ಮದಿ ಕಾಣಲು
ಪ್ರೀತಿಯೊಂದೇ ಸಾಕಲ್ಲ.!

ಮೃಷ್ಟಾನ್ನವಿಲ್ಲದಿದ್ದರೇನಂತೆ
ಅಕ್ಕರೆ ಸವಿಮಾತೇ
ಸಿಹಿ ಹೋಳಿಗೆ ತುಪ್ಪದ ಔತಣ
ಸವಿದ ನಾನೇ ಅತಿತೃಪ್ತೆ.! 

ನೀನಿತ್ತ ಪ್ರೀತಿಯ ತುತ್ತು
ಅದೇ ಎನ್ನ ಸಂಪತ್ತು 
ತುಂಬಿದ ಪ್ರೀತಿಯ ಬಟ್ಟಲು
ತಣಿಸುವುದ್ಹಸಿದ ಹೊತ್ತು.!

ಡಾ: ಶೈಲಜಾ ರಮೇಶ್
[3/2/2023, 3:48 pm] Dr. B. N. Shylaja Ramesh: #ಇಂದಿನ_ರಾಮಾಯಣ

ಅಂದಿದ್ದ ಶ್ರೀರಾಮ ಆದರ್ಶಗಳ ಮೈಗೂಡಿಸಿಕೊಂಡು
ಇಂದೂ ಇದ್ದಾರೆ ರಾಮರು ಆದರ್ಶಗಳಿಂದ ದೂರ ಸರಿದು

ಅಣ್ಣನ ಹಾದಿಯಲ್ಲೇ ನಡೆದ  ಅನುಜ ಲಕ್ಷ್ಮಣ ಇದ್ದನಂದು
ಇಂದೂ ಇದ್ದಾರೆ ಅಣ್ಣತಮ್ಮಂದಿರು ಬರೀ ದ್ವೇಷದಲ್ಲೇ ಕುದ್ದು

ತಂದೆ ಕೊಟ್ಟಮಾತಿಗೆ, ವನವಾಸಕ್ಹೊರಟ ಪುತ್ರರಿದ್ದರಾಗ
ತಾಯ್ತಂದೆಯನ್ನೇ ಜರಿದು ಬೀದಿಗಟ್ಟುವ ಪುತ್ರರಿರುವರೀಗ

ಪತಿಯ ಸಾನಿಧ್ಯವೇ ಸಿರಿಯರಮನೆಯೆಂದಳಾ ಸಾದ್ವೀ
ಸಿರಿಯಿದ್ದರಷ್ಟೇ ವರಿಸುವೆನೆನ್ನುವಳು ಇಂದಿನ ಸಾದ್ವೀ

ಅಂದಿನಂತೆಯೇ ಇಂದೂ ಇದೆ ಮಾಯಾಮೃಗದ ಸೆಳೆತ
ಅವಶ್ಯಕತೆಗೂ ಮೀರಿದೇ ಸೆಳೆತದಿಂದೋಡುವ ತುಡಿತ

ಅಂದಿದ್ದನೊಬ್ಬನೇ ರಾವಣ ಹೆಣ್ಣುಬಾಕ, ಇಂದನೇಕರಿಹರು
ಸ್ವಾಮಿಭಕ್ತ ಹನುಮನಂಥವರೊಬ್ಬರೂ ಕಾಣರು

ಇಂದೂ ಇದ್ದಾರನೇಕ ಪತಿಭಕ್ತೆ ಪರಿತ್ಯಕ್ತ ಸೀತೆಯರು
ಅಂದಿಗಿಂತಲೂ ಇಂದ್ಹೆಚ್ಚು ಸಂಸಾರ ಮುರಿವ ಅಗಸನಂಥವರು

ದುಷ್ಟ ಬುದ್ಧಿಯ ಮಂಥರೆಯಂಥವರು ಮನೆಗೊಬ್ಬೊಬ್ಬರು
ಅಪರೂಪದಲ್ಲಪರೂಪ ಪ್ರಾಣಸ್ನೇಹಿತ ಸುಗ್ರೀವನಂತವರು

ರಾಮರಾಜ್ಯದ ಸುಖದ ಸಿರಿಯ ಕಂಡಿದ್ದ ಕಾಲವದು
ಅಧಿಕಾರದಾಹದಲ್ಲಿಂದು ರಾಮರಾಜ್ಯ ಕನಸಾಗಿಹುದು

ಹೋಲಿಕೆಗೆ ನಿಲುಕದ ರಾಮಾಯಣ ಅಂದಿಗೂ ಇಂದಿಗೂ
ಮರ್ಯಾದಾ ಪುರುಷೋತ್ತಮನ ಕಾಲ ಬರದೆಂದೆಂದಿಗೂ

ಡಾ: ಶೈಲಜಾ ರಮೇಶ್
[4/2/2023, 9:23 pm] Dr. B. N. Shylaja Ramesh: ನಾನ್ಯಾರು..??
*************

ಉತ್ತರವಿಲ್ಲದ ಪ್ರಶ್ನೆಯ
ಸುತ್ತ   ಸುತ್ತುತ್ತ
ಪ್ರಶ್ನಿಸುತ್ತಿದ್ದೇನೆ
ನನ್ನ ನಾನೇ... ನಾನ್ಯಾರು..??

ಇಲ್ಲಿದ್ದೇನೆ  ಏಕೆ.?
ಎಲ್ಲಿಂದ ನಾ  ಬಂದೆ.?
ಎಲ್ಲಿಗ್ಹೋಗಬೇಕು.?
ಯಾವುದು....ನನ್ನೂರು..??
..
ಸುತ್ತೆಲ್ಲ  ಜನರು
ವಿಷಕಾರುತಿಹರು
ಬೆಳವಣಿಗೆ ಸಹಿಸರು
ಯಾರು.. ..ನನ್ನೋರು..??

ದ್ವೇಷಾಸೂಯೆಯ ಬಿತ್ತಿ
ಹೆಮ್ಮರವ  ಬೆಳೆಸುತಿಹರು
ವಿಷಾನಿಲದ ಉಚ್ಚ್ವಾಸಕೆ
ಕಟ್ಟಿಹುದೆನ್ನ....ಉಸಿರು..!!

ಪಾಪ ಪುಣ್ಯಗಳ  ಬಂಧನದೆ
ಬಿಗಿದು  ಹಂಗಿನರಮನೆಯ
ಕಾತರಕೆ,  ಕಾತರಿಸುವ
ಮನವೇ ಹೇಳು.... ನೀನಾರು..?

          ಶೈಲೂ.........
[5/2/2023, 12:26 pm] Dr. B. N. Shylaja Ramesh: ಉಪಯೋಗವಿದ್ದರಷ್ಟೇ ಎಲ್ಲಕ್ಕೂ ಬೆಲೆ
ನಿರೂಪಯುಕ್ತನಾದರಿಲ್ಲ ಎಲ್ಲಿಯೂ ನೆಲೆ
ರಾಗಿಕಲ್ಲಾಡ್ತಿದ್ರೆ ಮಾತ್ರ ರಾಜ್ಯವೆಲ್ಲ ನೆಂಟರು
ಬೇಡಿಕೆ ಮರೆಯಾದಾಕ್ಷಣ ಮರೆವ ಬಂಟರು.!

ರಾಣಿಯಂತೆ ಮೆರೆದಿದ್ದ ಕಾಲವೊಂದಿತ್ತು
ಥಳಥಳಿಸುವ ಕೆಂಪು ಬಣ್ಣವ ಹೊತ್ತು
ಅದೆಷ್ಟೋ ಜನರ ಮನದ ಮಾತ ಮಡಿಲೊಳಗಿರಿಸಿ
[6/2/2023, 11:45 am] Dr. B. N. Shylaja Ramesh: #ಕಾವ್ಯಕ್ಕೊಂದು_ತೋರಣ 
ಹೆಣ್ಣೆಂದು ಜರಿಯಬೇಡ
ಕಡೆಗಣಿಸಿ ನೋಡಬೇಡ
ಅಬಲೆ, ಕೈಲಾಗದವಳೆಂದು
ಕೀಳಾಗಿ ಬಿಂಬಿಸದಿರೆಂದು
ನಾ ಹೆಣ್ಣು, ಎಲ್ಲವನ್ನೂ ಸಹಿಸುವವಳು.! 

ವಿದ್ಯೆ ಇಲ್ಲದಿದ್ದರೇನು
ಬುದ್ಧಿಯಿದೆ ಗೊತ್ತೇನು
ಹೊಸಕಿ ತುಳಿದವರಿಗೂ
ಆಗುವಂತೆ ಅತಿ ಬೆರಗು
ನಾ ಹೆಣ್ಣು, ಎಲ್ಲವನ್ನೂ ಸಹಿಸುವವಳು.!

ಗಂಡ ದೂರಾದರೇನು
ಕುಡಿದು ಥಳಿಸಿದರೇನು
ತುತ್ತನ್ನಕೇ ಬರವಾದರೂ
ಹಸಿದಸಿದು ಸತ್ತರೂ
ನಾ ಹೆಣ್ಣು, ಎಲ್ಲವನ್ನೂ ಸಹಿಸುವವಳು.!

ಎಷ್ಟು ಹೊತ್ತರೇನು ಭಾರ
ಜೊತೆಗಿರದಿದ್ದರೂ ಸರದಾರ
ಕಂಕುಳಲ್ಲಿ ಕಂದನ ಹೊತ್ತು
ಸಂಸಾರ ತೂಗಿಸುವುದೂ ಗೊತ್ತು
ನಾ ಹೆಣ್ಣು, ಎಲ್ಲವನ್ನೂ ಸಹಿಸುವವಳು.!

ಛಲವುಳ್ಳವಳು ನಾನು
ಬದುಕಿ ತೋರಿಸುವೆನು.!
ಶೈಲೂ
[6/2/2023, 7:15 pm] Dr. B. N. Shylaja Ramesh: ಬೆಳಕು
******

ಬಾನಂಗಳದ ಹೊನ್ನ
ಹೊಸ್ತಿಲ ಮೇಲೆ
ಅರುಣೋದಯದ
ಚಂದದ ರಂಗೋಲಿ
ಬೆಳ್ಮುಗಿಲು ಮುದದಿಂದ
ಅಡಿಮೇಲೆ ಅಡಿಯಿಟ್ಟು
ತಮದ ಕೊಳೆ ಹರಿಸುತ್ತ
ಬೆಳಕ ಚಲ್ಲಿಹುದು
ಸಕಲ ಜೀವರ
ಉಸಿರಾದ ತಂಗಾಳಿ
ಹೂವ ಪರಿಮಳವ
ಹೊತ್ತು ಸಾಗಿಹುದು
ಸೂರ್ಯನೊಡಲಿಂದ
ಚಿಮ್ಮುತಿಹ ಕಿರಣವು
ಇಳೆಯ ಕೊಳೆ  ತೊಳೆದು
ಬೆಳಕು ಹರಿಸಿಹುದು
ಜಗ ಬೆಳಗುವ  ಬೆಳಕೆ
ಕಳೆ ಮನದ ಕೊಳೆಯನ್ನು
ಸಕಲ ಜೀವಾತ್ಮರಲು
ತೋರು ನೀ ಪ್ರಭೆಯನ್ನು
[6/2/2023, 7:25 pm] Dr. B. N. Shylaja Ramesh: ಬೆಳಗು
******

ಮುಂಜಾವಿಗೆ ದಿನಕರನ ಸ್ಪರ್ಷ
ಮೂಡಿ ಸಂಚಲನ ಕಾಣುತಿದೆ ಹರ್ಷ
ಜೀವ ಸಂಕುಲಗಳಿಗೆ 
ಉಲ್ಲಾಸದ ನವೋದಯ
ಸೃಷ್ಟಿ ಯ ಈ  ನವಿರ ಗಾಯನಕೆ
ಕಾರಣವೇ ಸೂರ್ಯೋದಯ
ಮುಂಜಾನೆಯ ಮಬ್ಬಿನಲಿ
ಇಬ್ಬನಿಯ ಸಿಂಚನ
ರವಿಯ ಸ್ಪರ್ಶದಿ ಇಬ್ಬನಿಯ
ಹನಿ ಹನಿಗೂ ನವಚೇತನ
ಬೆಳಗಿನ ಸವಿಗಂಪಿಗೆ
ತೆರೆದು ತನುಮನ
ಮೂಡಲಿ ಉತ್ಸಾಹ ದ ದಿನಚರಿಗೆ
ಅದಮ್ಯ ಚೇತನ....

        ಶೈಲೂ.....
[6/2/2023, 7:27 pm] Dr. B. N. Shylaja Ramesh: ಯುಗಾದಿ🌹🌿
★★★★★★★★★★

ಮತ್ತೆ ಬಂತು ನವ ಯುಗಾದಿ
ಯುಗವು ನಡೆದು ಬಂದ ಹಾದಿ
ಚೈತ್ರದ  ಚಿಗುರ ತಂಬೆಲರಲಿ
ಋತು ರಾಜನಿಗೆ ಜಯದ ಹಾದಿ

ಮಾವು ಬೇವ ತೋರಣದೆ
ಮಲ್ಲೆ ಮೊಗ್ಗು  ಹಾಸಿದೆ
ಕೋಗಿಲೆ ಇಂಪಿನ ಗಾಯನದೇ
ಸ್ವಾಗತವನೆ  ಕೋರಿದೆ

ಪಲ್ಲವಿಸಿತು ಗಿಡ ಮರದೆ
ಚೈತ್ರದ ಎಳೆ ಚಿಗುರು
ಅರಳಿತು ಸಂಭ್ರಮದೇ
ನಿಸರ್ಗದ ಒಳ ಹೊರಗೂ

ತಿರುತಿರುಗಿ ಋತುಚಕ್ರದ ಗಾಲಿ
ಬಂತು ನವೋಲ್ಲಾಸ ತೇಲಿ
ಬೇವು ಬೆಲ್ಲದ  ಸಿಹಿ ಕಹಿಯ
ಸವಿದು  ಬದುಕು ಹಸನಾಗಲೀ

ಬೇಳೆ ಬೆಲ್ಲ ಸಮ್ಮಿಶ್ರಣದೇ
ಸವಿ ಸ್ವಾದಿಷ್ಟ  ಹೋಳಿಗೆ
ಮುಂದಿರುವ ದಿನಗಳವು
ಸುಖ ತರಲೆಂದು  ಬಾಳಿಗೆ

ಪ್ರಕೃತಿಯೂ ನಲಿಯುತಿಹುದು
ಕಳೆದು ಹಳೆಯ ಕೊಳಕನೆಲ್ಲ
ನಾಳೆಗಳಿಗೆ ಚಿಗುರುತಿಹುದು
ಸಂಭ್ರಮಿಸಿ ಮೆಲ್ಲ ಮೆಲ್ಲ ಮೆಲ್ಲ

ನಮಗೂ ಇದೆ ಹೊಸತು ಬದುಕು
ಕಳಚಬೇಕು ಮುಖವಾಡಗಳನು
ಬೆಸೆಯ ಬೇಕು ಸಿರಿ ಸ್ನೇಹ ಬಂಧ
ದೂರಮಾಡಿ ಪಾಪಕೂಪಗಳನು

ಹೇಳು ಮನುಜ ಶುಭ ವಿದಾಯ
ಹಳೆಯ ಕಷ್ಟ ನಷ್ಟಗಳಿಗೆ
ಸ್ವಾಗತಿಸು  ಸಂತಸದೆ
ಮುಂದೆ ನಿಂತ ನಾಳೆಗಳಿಗೆ
🌿🌹🌿🌹🌿🌹🌿🌹🌿
           ಶೈಲೂ.......
[6/2/2023, 7:27 pm] Dr. B. N. Shylaja Ramesh: ಋತುಗಳು
*********

ಮಾವಿನ ಮರದಲಿ ಹಾಡುವ  ಕೋಗಿಲೆ ನಲಿವಿನೊಂದಿಗೆ ಇಂಪನು ಬೆರೆಸಿ
ಹೊಂಗೆಹೂವ ತಂಪೆರಲಿನಲಿ ಭೃಂಗಗಳು ಝೇಂಕರಿಸಿ
ಎಳೆಬಿಸಿಲ ಹೊದಿಕೆಯಲಿ ಹಕ್ಕಿಗಳು ಚಿಲಿಪಿಲಿ ರಾಗವ ಬೆರೆಸಿ
ವರ್ಷೋದಯದಿ ನವೋಲ್ಲಾಸ  ಪ್ರಕೃತಿಯೆಡೆಗೆ ಹರಿಸಿ
ಬಂದ ಹೇ ಋತುಗಳ ರಾಜ ಮೃದು ವಸಂತವೇ
ನಿನಗಿಂದು ತಳಿರು ತೋರಣದ ಸ್ವಾಗತ
🌿💐🌿💐🌿💐🌿

ಬಿರುಬೇಸಿಗೆಯ ನಡುಹಗಲಿನ  ಬಿಸಿಲ ಝಳದಿ ತೋಯಿಸಿ
ಬಾಯಾರಿದ ಜೀವಿಗಳಿಗೆ ಆತ್ಮದ ಕೂಗು ಕೇಳಿಸಿ
ಬತ್ತಿದ ಹೊಳೆ ಬತ್ತಿದ ಕೆರೆ ಬತ್ತಿದ ಹುಲ್ಲಿನ ರಾಶಿ
ಬಿಸಿಗಾಳಿಗೆ ಬಿಸಿಯುಸಿರಿನ ನಿಟ್ಟುಸಿರಲಿ ಬೇಯಿಸಿ
ಸಿರಿವಸಂತದ ಚೆಲುವ ಕುಂದಿಸಿ ಬಂದ ಗ್ರೀಷ್ಮ ಋತುವೇ
ನಿನಗಿದೋ ಉರಿಬಿಸಿಲಿನ  ಸ್ವಾಗತ
🍁🥀🍁🥀🍁🥀🍁

ಬಾನಂಚಲಿ ಕಟ್ಟಿದ ಕಾರ್ಮೋಡ ಮನೆ ಮನೆ ಬಾಗಿಲ ತಟ್ಟಿ
ಹನಿತುಂಬಿದ ಗಾಳಿ ಬೀಸಿ ಗಿಡಮರವನು  ಬಗ್ಗಿಸಿ
ಗುಡುಗು ಮಿಂಚಿನಾರ್ಭಟದಿ ಪುಟ್ಟ ಕಂದನ ನಡುಗಿಸಿ
ಭಾರವಾಗಿದ್ದ ಮುಗಿಲ ಒಡಲನು ಸದ್ದು ಮಾಡುತ ಬಸೆಯಿಸಿ
ವರ್ಷದ ಮೊದಲ ಮಳೆಗೆ ಜಗವನೆಲ್ಲ ತೋಯಿಸಿ
ಆರ್ಭಟದಿ ಬಂದ ಋತು ವರ್ಷವೇ ನಿನಗೆ ನಲ್ಮೆಯ ಸ್ವಾಗತ
⛈🌿⛈🌿⛈🌿⛈🌿

ಇಂದ್ರನೀಲದ ನೀಲಾಂಬರದಿ ರಾತ್ರಿಯದು ದರ್ಪಣದಂತೆ
ಚಂದಿರ ತಾರಾಗಣಗಳ ನಡುವೆ
ಭಾಂಧವ್ಯದ ಸಿರಿ ಬೆಸೆದಂತೆ
ಹಸಿರೆಲೆಯಂಚಲಿ ಹಳದಿ ಕೆಂಪಿನ ಹೂದಳ ಬಿರಿಯುವಂತೆ
ತೂಗುವ ಹಳದಿಯ ತೆನೆಗಳು ಉಲ್ಲಾಸದಿ ಗೀತೆ ಹಾಡುವಂತೆ
ಹಬ್ಬದಿಬ್ಬಣಗಳ ಮೆರಗು ಜಗವ ತಬ್ಬಿ ಆಲಂಗಿಸುವಂತೆ
ಬಾರೇ ನೀರೆ ಋತುಗಳ ರಾಣಿ ಶರದೃತು ತಾರಾಮಣಿ
🌾🌻🌾🌺🌾🌻🌾

ಹಿಮಸುರಿದು ಹಾದಿಯಲಿ ಬಿಳಿಯ ದಾರಿಯ ಮಾಡಿ
ಗಿಡಗಂಟಿಗಳ ಮೇಲೆ  ಮುತ್ತಿ ಮಾಡುತಿದೆ ಮೋಡಿ
ಚಳಿಗಾಳಿಯೊಡೆತಕೆ ಜೀವಕೆ ನಡುಕವ ನೀಡಿ
ಕುಳಿರ್ಗಾಳಿಯ ಹರಿತ ಬಾಣವಹೂಡಿ ಬದುಕ ತಲ್ಲಣ ಮಾಡಿ
ಮಾಗಿಯ ಮಂಜಿನ ಮುಸುಕೆಳೆದು ಕಣ್ಣಿಗೆ ಮೋಸವ ಮಾಡಿ
ಬಂದಿಹನು ಹೇಮಂತ ಬನ್ನಿ  ಸ್ವಾಗತ ಮಾಡಿ
🌹🌿🌹🌿🌹🌿🌹

ಚಳಿಗಾಲದ ಬಿಳಿಬಾನಲಿ  ಸೂರ್ಯನೂ ಮಂಕಾಗುವನು
ಬೆಚ್ಚನೆ ಮೂಲೆಯ ಹಿಡಿದು ಚಂದಿರನೂ ಅಲೆದಲೆಯುವನು
ಕೊರೆದು ಚಲಿಯಲೆಯಲಿ ಉತ್ಸಾಹವೇ ಕಸಿಯುವನು
ಹೊದ್ದು ಕಂಬಳಿ ಜಡ್ಡು ಹಿಡಿದು ಮೂಲೆಗೆ ಮುದುರಿ ಮಲಗಿಸುವನು
ತರುಳತೆಗಳ ಹಿಡಿದಲ್ಲಾಡಿಸಿ ಬರೀ ಬೆತ್ತಲೆ ಮಾಡುವನು
ಕಾಲವೀಣೆಯ ನುಡಿಸಲು ಶಿಶಿರ ಸ್ವಾಗತವನ್ನು ಕೋರುತಿಹನು
🍃🍂🍃🍂🍃🍂🍃🍂🍃

            ಶೈಲೂ......
[8/2/2023, 10:55 am] Dr. B. N. Shylaja Ramesh: #ಮನೆಯ_ಬೆಳದಿಂಗಳು 

ನನ್ನ ಬಾಳ ಬಾಂದಳದಲಿ
ಗೆಳೆಯಾ ನೀ ನಗುವ ಚಂದ್ರಮಾ  
ನಿನ್ನ ನಗೆ ಬೆಳದಿಂಗಳಲಿ
ನನ್ನ ಬಾಳಿನೆಂಥದೋ ಸಂಭ್ರಮಾ 

ನಿನ್ನೊಂದು ಸವಿ ಮಾತು
ಸುಮ್ಮನೆ ಸುರಿದಂತೆ ಸಿಹಿ ಜೇನು
ಒಲವ ಮಾಧುರ್ಯದ ಸವಿ
 ಬಾಂಧವ್ಯ ಬೆಸೆಯದೇ ತಾನು.?

ಬದುಕಿನ  ಕಾರ್ಗತ್ತಲಳಿಸಿ
ಬಾಳು ಬೆಳಗಲು ಬಂದ ಚಂದ್ರಿಕೆ
ನೊಂದ ಮನಕಾಸರೆಯಾಗಿ
ನಗುವ ತುಂಬುವೇಎಂಬ ನಂಬಿಕೆ

ಕವಿದ ಮೋಡವ ಸರಿಸುತ್ತಾ
ಇಣುಕಿದ ಬಾಂದಳದ ಬೆಳದಿಂಗಳು
ಸುರಿಸುತ್ತಾ ಮನಕೆ ತಂಪು
ಬೆಳಕಾಗಿಸದೇನು ಬಾಳಿನಿರುಳು.? 

ಡಾ: ಶೈಲಜಾ ರಮೇಶ್
[9/2/2023, 7:30 am] Dr. B. N. Shylaja Ramesh: ಬಾನ ಬಯಲಲ್ಲಿ ಚೆಲ್ಲುತ್ತ ಹೊನ್ನ ನೀರು
ಏರಿ ಬರುತಿಹ ಭಾಸ್ಕರ ತನ್ನ ತೇರು
ಹಿಡಿದಿರುಳ ತಮದ ಕೊಳೆಯ ತೊಳೆಯುತ್ತಾ
ಉಲ್ಲಾಸಿತ ನವಿರು ಪ್ರಭೆಯ ಬೀರುತ್ತಾ
ನಲುಗಿದಿಳೆಗೆ ನವಚೈತನ್ಯವ ನೀಡಲು  
ಮಂಕು ಬಿಡಿಸಿ ಶುಭ ಸುಪ್ರಭಾತ ಹೇಳಲು
[9/2/2023, 11:48 am] Dr. B. N. Shylaja Ramesh: #ಅಂತ್ಯ_ಚೆನ್ನಾಗಿದ್ದರೆ_ಎಲ್ಲವೂ_ಚೆನ್ನಾಗಿರುತ್ತದೆ 
ಅಂತ್ಯ ಚನ್ನಾಗಿದ್ದರೆಲ್ಲವೂ ಚಂದ ಹೇಗೆ.?
ಅರ್ಥವಾಗಲೇ ಇಲ್ಲ ಈ ಟಾಸ್ಕಿನ ಬಗೆ.! 
ಆರಂಭ ಚೆನ್ನಿದ್ದರೂ ಕೂಡ ಅಂತ್ಯ ಕಷ್ಟ
ಅಂತ್ಯದಚೆನ್ನಕನುಭವಿಸಬೇಕನೇಕಕಷ್ಟನಷ್ಟ.!

ಬೆಳಗು ಮೂಡಲು ಕಳೆಯಬೇಕು ಕತ್ತಲು 
ಸುಖವೆಲ್ಲಿದೆ.? ಅನೇಕಾನೇಕ ಕಷ್ಟ ಮುತ್ತಲು 
ಕಡಲೊಡಲ ಸೇರಿ ಸುಖಿಸಬೇಕೆಂದರೆ ನದಿ
ಅದೆಷ್ಟೋ ಏರಿಳಿತಗಳ ದಾಟಿದರೆ ನೆಮ್ಮದಿ.!

ಬೆಳೆದುಣ್ಣಲೂ ಸಹ ಭೂಮಿ ಬಗೆಯಬೇಕು
ನೀರು ತೆಗೆಯಲು ನೆಲಗುದ್ದಿ ನೋಯಬೇಕು
ದೇಗುಲದ ಪೂಜನೀಯ ಶಿಲೆಯಾಗಲು ಕಲ್ಲು 
ನಲುಗಬೇಕು ಉಳಿಪೆಟ್ಟಿನ ಜೊತೆಯಲ್ಲೂ .!

ನೋವಿನ ಜೊತೆ ಜೊತೆಗೇನೇ  ನಲಿವ ನಡೆ 
ನಲಿವಿನ ಹಿಂದ್ಹಿಂದೆಯೇ ನೋವೆಂಬ ಭಿಡೆ
ಆ ದೇವ ಜಗಕಿತ್ತ ನಿಯಮವೇ ಹೀಗಿರಲು
ಎಲ್ಲವೂ ಚಂದ ಹೇಗೆ.? ಸುಖದ ಅಂತ್ಯವಿರಲು

            ಡಾ: ಶೈಲಜಾ ರಮೇಶ್
[14/2/2023, 7:22 pm] Dr. B. N. Shylaja Ramesh: ನೀ ಬಂದು ನಿಂತಾಗ
*****************
ಅಂದು ಆ ಸಂಜೆಯಲಿ
ನಾನಿನ್ನ ಕಂಡಾಗ
ಮಿಡಿದಿತ್ತು ಮನದಲ್ಲಿ ಭಾವವೀಣೆ
ತಲೆತಗ್ಗಿ ನಿಂತವಳ  ಮುಂದೆ
ನೀ ಬಂದು ನಿಂತು ನಕ್ಕಾಗ
ಕೆನ್ನೆ ಕೆಂಪೇರಿದ್ದು ನಾಚಿ ತಾನೇ

ನಡುಗುತ್ತ ಹಿಡಿದಿದ್ದೆ
ಕಾಫಿಲೋಟದ ತಟ್ಟೆ
ಕಣ್ಣರಸಿ ನಿಂದಿದ್ದು ನಿನ್ನ ಮಾತ್ರ
ಜೊತೆಯಲ್ಲಿ ಬಂದಿದ್ದ
ಅತ್ತೆ ಮಾವರ ಮಾತು
ಕೇಳಿಸದಿದ್ದುದಕಿದೆ ನಿನ್ನ ಪಾತ್ರ

ಹೇಳು ನಾ ನಿನಗಿಷ್ಟವೇ
ಹಿಂದಿನಿಂದ ಬಂದ
ಧ್ವನಿಗೆ ನಾ ಬೆಚ್ಚಿ ಮೆಚ್ಚಿ
ಕಳೆದ ಮನದಲ್ಲೇ
ನವಿಲ ನಾಟ್ಯವ ಕಂಡ
ಮಧುರಭಾವದ  ಅರೆಹುಚ್ಚಿ

ನೀ ಹೊರಟು ನಿಂತಾಗ
ಮನದಲ್ಲಿ ತಳಮಳ
ಕಿಟಕಿ ಕಿಂಡಿಯಲಿ ನೋಡುತ್ತ ನಿಂತೆ
ಕಾತರದ ಕಣ್ಣಿಂದ
ತಿರುತಿರುಗಿ ನೋಡುತ್ತ
ಅರೆಬರೆ ಮನಸ್ಸಿನಿಂದ ನೀನು ಹೊರಟೆ

ಏನೋ ಮರೆತಿದ್ದಂತೆ
ನಟಿಸಿ ಒಳಬಂದಾಗ
ಹುಡುಕುತ್ತಿತ್ತು ಕಣ್ಣು ನನ್ನನರಸಿ
ಕೋಣೆ ಬಾಗಿಲಲಿಣುಕಿ
ಹೋಗಿಬರಲೇ ಎಂದಾಗ
ನಾಚಿ ನಾ ನಿಂತೆ ತಲೆಯಾಡಿಸಿ

ಒಣಗಿದ್ದ ಬಟ್ಟೆಯ
ತರುವ ನೆಪವೊಡ್ಡಿ
ಆತುರದಿ ಹತ್ತಿದ್ದೆ ಮನೆಮಾಳಿಗೆ
ಹಿಂತಿರುಗಿ ನೋಡುತ್ತ
ಕೈಬೀಸಿ ನಡೆದಿದ್ದ
ನಿನ್ನ ಚಿತ್ರ ಅಚ್ಚಾಯ್ತು ಮನದೊಳಗೆ
[14/2/2023, 7:26 pm] Dr. B. N. Shylaja Ramesh: ನೀ ಬಂದು ನಿಂತಾಗ
*****************
ಅಂದು ಆ ಸಂಜೆಯಲಿ ನಾನಿನ್ನ ಕಂಡಾಗ
ಮಿಡಿದಿತ್ತು ಮನದಲ್ಲಿ ಭಾವವೀಣೆ
ತಲೆತಗ್ಗಿ ನಿಂತವಳ ಮುಂದೆ ನೀ ನಿಂತು ನಕ್ಕಾಗ
ಕೆನ್ನೆ ಕೆಂಪೇರಿದ್ದು ನಾಚಿ ತಾನೇ

ನಡುಗುತ್ತ ಹಿಡಿದಿದ್ದೆ ಕಾಫಿಲೋಟದ ತಟ್ಟೆ
ಕಣ್ಣರಸಿ ನಿಂದಿದ್ದು ನಿನ್ನ ಮಾತ್ರ
ಜೊತೆಯಲ್ಲಿ ಬಂದಿದ್ದ ಅತ್ತೆ ಮಾವರ ಮಾತು
ಕೇಳಿಸದಿದ್ದುದಕಿದೆ ನಿನ್ನ ಪಾತ್ರ

ಹೇಳು ನಾ ನಿನಗಿಷ್ಟವೇ ಹಿಂದಿನಿಂದ ಬಂದ
ಧ್ವನಿಗೆ ನಾ ಬೆಚ್ಚಿ ಮೆಚ್ಚಿ ಕಳೆದ ಮನದಲ್ಲೇ ನವಿಲ ನಾಟ್ಯವ ಕಂಡ
ಮಧುರಭಾವದ  ಅರೆಹುಚ್ಚಿ

ನೀ ಹೊರಟು ನಿಂತಾಗ ಮನದಲ್ಲಿ ತಳಮಳ
ಕಿಟಕಿ ಕಿಂಡಿಯಲಿ ನೋಡುತ್ತ ನಿಂತೆ
ಕಾತರದ ಕಣ್ಣಿಂದ ತಿರುತಿರುಗಿ ನೋಡುತ್ತ
ಅರೆಬರೆ ಮನಸ್ಸಿನಿಂದ ನೀನು ಹೊರಟೆ

ಏನೋ ಮರೆತಿದ್ದಂತೆ ನಟಿಸಿ ಒಳಬಂದಾಗ
ಹುಡುಕುತ್ತಿತ್ತು ಕಣ್ಣು ನನ್ನನರಸಿ
ಕೋಣೆ ಬಾಗಿಲಲಿಣುಕಿ ಹೋಗಿಬರಲೇ ಎಂದಾಗ
ನಾಚಿ ನಾ ನಿಂತೆ ತಲೆಯಾಡಿಸಿ

ಒಣಗಿದ್ದ ಬಟ್ಟೆಯ ತರುವ ನೆಪವೊಡ್ಡಿ
ಆತುರದಿ ಹತ್ತಿದ್ದೆ ಮನೆಮಾಳಿಗೆ
ಹಿಂತಿರುಗಿ ನೋಡುತ್ತ ಕೈಬೀಸಿ ನಡೆದಿದ್ದ
ನಿನ್ನ ಚಿತ್ರ ಅಚ್ಚಾಯ್ತು ಮನದೊಳಗೆ

       ಡಾ: ಶೈಲಜಾ ರಮೇಶ್
[15/2/2023, 2:03 pm] Dr. B. N. Shylaja Ramesh: ಅರಿವಿರಲಿಲ್ಲ...
************

ಅರಿವಿರಲಿಲ್ಲ ನೀ ಬರುವವರೆಗೆ
ಪ್ರೀತಿಯಾಳ ಎಷ್ಟೆಂದು
ಅದರಲ್ಲೇ ನಾ
 ಮುಳುಗಬಹುದೆಂದು

ಅರಿವಿರಲಿಲ್ಲ ನೀ ಬರುವವರೆಗೆ
ಒಲವೆಂದರೆ ಏನೆಂದು
ಅದರಿಂದಲೇ  ಬಾಳು
ಬೆಳಗುವುದೆಂದು

ಅರಿವಿರಲಿಲ್ಲ ನೀ ಬರುವವರೆಗೆ
ಪ್ರೀತಿ ಜೀವಜಲದಂತೆಂದು
ಒಣಗಿದ ಕೊರಡಲೂ ಹಸಿರು
ಮೂಡಿಸಬಹುದೆಂದು

ಅರಿವಿರಲಿಲ್ಲ  ನೀ  ಬರುವವರೆಗೆ
ಪ್ರೀತಿ  ಚೇತನವೆಂದು
ಚೈತನ್ಯವಿರದೊಡಲಿಗೆ
ಉಸಿರಾಗಬಹುದೆಂದು

ಅರಿವಿರಲಿಲ್ಲ ನೀ  ಬರುವವರೆಗೆ
ಪ್ರೀತಿ  ಸಿಹಿ ಜೇನೆಂದು
ಅದರ ಸವಿಯಿಂದ ಬಾಳಿಗೆ
ಸಿಹಿ ತುಂಬಬಹುದೆಂದು

ಕಮರಿದ್ದ ಬಾಳಿಗೆ ಒಲವ
ರಸಧಾರೆಯೆರೆದು
 ಜೀವಕಳೆ ತರಬಹುದೆಂದು
ಬಾಳು ಬದಲಾಗಬಹುದೆಂದು

ಅರಿವಾಯ್ತು ಒಲವೇ
ನೀ ಬಂದಮೇಲೆಯೇ ಅರಿತೆ
ಬದುಕು ಸುಂದರ ಹೂದೋಟವೆಂದು
ಪಡೆದೆ ಸಾರ್ಥಕತೆಯ ನಿನ್ನೊಲುಮೆಯಲಿ ಮಿಂದು

       ಶೈಲೂ.......
[15/2/2023, 4:58 pm] Dr. B. N. Shylaja Ramesh: ನೋಡಿಕೊಂಡ ಕಂದ
ತನ್ನ ಮೊಗದ ಚಂದ
ಮುಕುರದೊಳಗೆ ಪ್ರಖರ
ಚಕಿತ ಮುಗ್ಧನಗುವ ಆಕರ

ಮೊಗದಲೆಂಥ ಸೊಗಸು
ಮಗುವಿಗಿಂತ ಮಗುವು ಮನಸು
ಕಾಣುತ ಆ ಚಂದ ವಿಸ್ಮಯ
ಕಂದ ಅಲ್ಲೇ ತನ್ಮಯ..!
[15/2/2023, 5:07 pm] Dr. B. N. Shylaja Ramesh: ಗದ್ದ ತಾಕಿ ಕೈಯ್ಯಿ
ತುಸುವೇ ಬಾಗಿ ಮೈಯ್ಯಿ 
ನೆಟ್ಟು ನೆಟ್ಟ ನೋಟ
ನಗುವ ಚೆಂದದಾಟ

ಸೃಷ್ಠಿದಾತ ತಾನೂ
ಮರೆತು ಕುಳಿತನೇನು.?
ತನ್ನ ಸೊಗಸ ಕಂಡು
ಮೆಚ್ಚಿ ನಲಿದನೇನು.?
[16/2/2023, 8:03 pm] Dr. B. N. Shylaja Ramesh: ಪ್ರೀತಿಯೆಂದರೆ

ತಂಪೆರಚುವ

ತಂಗಾಳಿ ಎಂದೆಣಿಸಿದ್ದೆ

ಅದೇಕೋ ಉರಿಬಿಸಿಲಂತೆ ಕಾಡುತ್ತಿದೆ

ಪ್ರೀತಿಯೆಂದರೆ

ಮೈಮನ ತಣಿಸುವ ತಂಬೆಲರಂತೆಣಿಸಿದ್ದೆ

ಅದೇಕೋ ಉರಿಕೆಂಡದಂತೆ ಸುಡುತ್ತಿದೆ

ಗೆಳೆಯಾ.. ನೀ.. ಪ್ರೀತಿ ಬೆಳದಿಂಗಳ

ಸ್ಪುರಿಸುವ ಚಂದ್ರಮನೆಂದೆಣಿಸಿದ್ದೆ.. ನೀನೇಕೆ ಉರಿದುರಿವ ಅಗ್ನಿಯಾಗಿಬಿಟ್ಟೆ

ಬೇಯುತ್ತಿದೆ ಒಡಲು

ಕಣ್ಣೀರ ಕಡಲು ಆದರೂ ಬಿಟ್ಟಿರಲಾರೆ ನಿನ್ನ

ಬಾ ಅಪ್ಪಿಕೋ ಚಿನ್ನ

ಡಾ: ಶೈಲಜಾ ರಮೇಶ್
[16/2/2023, 8:04 pm] Dr. B. N. Shylaja Ramesh: ಹೇಗೆ ಮರೆಯಲಿ ಹೇಳು

ನಿನ್ನೊಂದಿಗಿನ ಆ ಸವಿ ಸವಿ

ನೆನಪುಗಳನ್ನು.?

ಹುಸಿಕೋಪವ ತಣಿಸಲು ಮುದ್ದುಗರೆಯುತ್ತಿದ್ದ ಆ ಸಿಹಿ ಮಾತುಗಳನ್ನು..!

ಕನವರಿಸಿ ಕಾಡುವ ನಿನ್ನೊಂದಿಗಿನ ಆ ಸವಿಗನಸನ್ನು..!

ಮೋಡಿಮಾಡಿ ಸೆಳೆದೆಳೆವ ಆ ಮಾಂತ್ರಿಕ ನಗುವನ್ನು..!

ನಾ ಅಳಿದರೂ... ತಾ ಅಳಿಯದು ಶಾಶ್ವತವಾದ ನಿನ್ನೀ ನೆನಪು..!

ಅಚ್ಚಳಿಯದೆ

ಅಚ್ಚಾಗಿದೆ ಮನದಲಿ ನಿನ್ನಾ ಪ್ರೀತಿಯ ಒನಪು..!
[17/2/2023, 7:40 pm] Dr. B. N. Shylaja Ramesh: #ಭಾವನೆಗಳ_ಸಂಘರ್ಷ 
ನಿತ್ಯವೂ ಸಂಘರ್ಷವೇ ಭಾವನೆಗಳದ್ದು
ತಿಳಿಹೇಳಿದರೂ ಮೀರುತ್ತವೇ ಸರಹದ್ದು 
ಒಮ್ಮೊಮ್ಮೆ ಮುಗ್ಧ ಮಗುವಿನಂತಿದ್ದು 
ಮತ್ತೊಮ್ಮೆ ಸಿಡಿದೇಳುತ್ತದೆ ಕೋಪಹೊದ್ದು

ಸಂಘರ್ಷಗಳ ತಾಕಲಾಟ ಮನದೊಳಗೆ
ಏನೇನೋ ಲೆಕ್ಕಾಚಾರ ಆ ಭಾವನೆಗಳಿಗೆ
ಕೈಕೊಟ್ಟವರನೇ ನೆನೆನೆನೆದು ಕುಗ್ಗಿನೊಂದು
ನಗುವನ್ನೇ ಮರೆಸಿಬಿಟ್ಟಿದೆ ಸಂತಸವ ಕೊಂದು

ಒಮ್ಮೊಮ್ಮೆ ಅತೀ ಬುದ್ಧಿವಂತಿಕೆ ಮೆರೆದು
ಮಗದೊಮ್ಮೆ ಉತ್ಸಾಹವನ್ನೇ ತೊರೆದು
ಯಾವಾಗಲೊಮ್ಮೆ ಎದೆಯ ತಂತಿ ಮೀಟಿ
ಹಿಂದೆಯೇ ಇರಿದು ಚುಚ್ಚಿಬಿಡುತ್ತದೆ ಈಟಿ 

ಈ ಭಾವನೆಗಳ ಸಂಘರ್ಷದಿ ಕರಗಿ ಕನಸು
ಬದುಕಿನ ಮೇಲೆಯೇ ಮೂಡಿದೆ ಮುನಿಸು
ಸಂಘರ್ಷದ ಭಾರದ ಹೊರೆ ಹೆಗಲ ಮೇಲೆ
ಸಂತಸವೆಲ್ಲಿದೆ ಭಾವವೇ ಬುಡಮೇಲಾದಮೇಲೆ

     ಶೈಲಜಾ ರಮೇಶ್
[18/2/2023, 1:45 pm] Dr. B. N. Shylaja Ramesh: ಮುನಿಸು ತೊರೆದರೇನೇ ಪ್ರೀತಿ ಪ್ರಖರ
ನಿನ್ನೊಂದು ನಗುವೇ ಬಾಳ ಶಿಖರ
[18/2/2023, 1:46 pm] Dr. B. N. Shylaja Ramesh: #ನೀನೊಂದು_ಮುಗಿಯದ_ಮೌನ 

ನೀನೊಂದು ಮುಗಿಯದ ಮೌನ
ಹೇಳು ನಾ ಹೇಗೆ ಬೆರೆಯಲಿ ನಿನ್ನ 
ಸನಿಹ ಬಂದಷ್ಟೂ ನೀ ದೂರಾಗುತ 
ಕಡೆಗಣಿಸುವೆಯೇಕೆ ನೋವುಣಿಸುತ

ಹೇಳು ನನ್ನಿಂದಾದ ಮಹಾಪರಾಧ
ನಿಲ್ಲು ಮಾತಾಡು ನೀ ಸೀದಾ ಸಾದಾ 
ಮಾತೇ ಸಮಸ್ಯೆ ಪರಿಹರಿಪ ಸಾಧನ
ಮೌನ ತೊರೆದು ಮಾತಾಡೇ. ಚಿನ್ನ..!

ಹೇಳು ಜಾಣೆ ಬಯಕೆಯಿದೆ ಏನೇನು 
ಪೂರೈಸಲು ಪ್ರಯತ್ನ ಪಡುವೆ ನಾನು
ಬೇಕೇನು ಆ  ರವಿ ಚಂದ್ರ ತಾರಾಗಣ 
ಹೇಳೇನಿದೆ ಆಸೆ ಬೇಕೇನು ಬೆಳ್ಳಿಚಿನ್ನ

ಏನು ಬೇಕಾದರೂ ತಂದು ಕೊಡುವೆ
ಮೌನತೊರೆದು ಮಾತಾಡು ತುಸುವೇ 
ನೀನೊಲಿದರೆನೇ ಜಾಣೆ ಬೆಳಗುಬೈಗು 
ನೀನೇ ತುಂಬಿರುವೆ ನನ್ನೊಳಹೊರಗೂ

     ಡಾ: ಶೈಲಜಾ ರಮೇಶ್
[18/2/2023, 3:49 pm] Dr. B. N. Shylaja Ramesh: #ಶಿವನೊಲಿದರೆ_ಭಯವಿಲ್ಲ 
ಹೇಳೆಲ್ಲಿದೆ ಭಯ ಶಿವನೊಲಿದರೆ
ನೀಡುವನವ  ಅಭಯ ಕೈಮುಗಿದರೆ
ಓಂ ನಮಃ ಶಿವಾಯ ಎಂದರೆ ಸಾಕು 
ಕತ್ತಲು ಕಳೆದು ಮೂಡುವುದು ಬೆಳಕು

 ನಂಜನ್ನೇ ನುಂಗಿ ಜಗವನುಳಿಸಿದವ
ಹಿಡಿದು ಕಟ್ಟಿದ ಧುಮ್ಮಿಕ್ಕುವ ಜಲವ
ಬೇಡಿದ್ದನ್ನೆಲ್ಲ ಕೊಡುವ ಮುಕ್ಕಣ್ಣನಿವ
ಭಕ್ತರ ಪೊರೆವ ನಮ್ಮ ಪರಮ ಶಿವ

ಭಕ್ತಿಯ ಪರಾಕಾಷ್ಠೆಗೆ ಮೆಚ್ಚುವನಿವ
ಜವರಾಯನಿರುವನ್ನೇ ಹಿಮ್ಮೆಟ್ಟಿಸುವ
ವಿಧಿ ಬರಹವನ್ನೇ ತಿರುಚಿ ಬರೆಯಿಸಿ
ಸಾಯುಜ್ಯವನ್ನೀಯುವನಿವ ಕರುಣಿಸಿ

     ಡಾ: ಶೈಲಜಾ ರಮೇಶ್
[19/2/2023, 9:35 pm] Dr. B. N. Shylaja Ramesh: ಒಬ್ಬಳೇ ಗುಡಿಸಿ ಗುಡಿಸಿ
ಸೊಂಟ ನೋಯುತ್ತಿತ್ತು
ಬಗ್ಗೋದಕ್ಕೂ ಆಗದಂತೆ
[23/2/2023, 9:49 am] Dr. B. N. Shylaja Ramesh: ಚುನಾವಣೆ ಎಂಬ ಹಣಾಹಣಿ 
ಹಲವರ ಪಾಲಿಗೆ ಚಿತಾವಣೆ ಮತ್ತಾರದೋ ಪಾಲಿಗೆ ಜನಮನ್ನಣೆ ಕುರಿಗಳಾಗುವುದು ಮಾತ್ರ ಪ್ರಜೆ ತಾನೇ.?
[24/2/2023, 10:37 am] Dr. B. N. Shylaja Ramesh: ಲಕುಮಿಯ ವರನಾದ ಶ್ರೀ ಹರಿಯು ವರವನೀಡುತ
ಸಿರಿಯೊಡಗೂಡಿ ಕೃಪೆತೋರಿ ಸಿರಿಯ ನೀಡುತ
'ಸರಸಿ'ಜೆಯ ಸಹಿತ ನಲ್ಮೆಯಲಿ ಸರಸವಾಡುತ
[26/2/2023, 1:35 pm] Dr. B. N. Shylaja Ramesh: ಅಬಲೆಯೇನಲ್ಲ
*************

ಹೆಣ್ಣೆಂದು ಜರಿಯಬೇಡ
ಕಡೆಗಣಿಸಿ ನೋಡಬೇಡ
ಅಬಲೆ, ಕೈಲಾಗದವಳೆಂದು
ಕೀಳಾಗಿ ಬಿಂಬಿಸದಿರೆಂದು
ನಾ ಹೆಣ್ಣು, ಎಲ್ಲವನ್ನೂ ಸಹಿಸುವವಳು.! 

ವಿದ್ಯೆ ಇಲ್ಲದಿದ್ದರೇನು
ಬುದ್ಧಿಯಿದೆ ಗೊತ್ತೇನು
ಹೊಸಕಿ ತುಳಿದವರಿಗೂ
ಆಗುವಂತೆ ಅತಿ ಬೆರಗು
ನಾ ಹೆಣ್ಣು, ಎಲ್ಲವನ್ನೂ ಸಹಿಸುವವಳು.!

ಗಂಡ ದೂರಾದರೇನು
ಕುಡಿದು ಥಳಿಸಿದರೇನು
ತುತ್ತನ್ನಕೇ ಬರವಾದರೂ
ಹಸಿದಸಿದು ಸತ್ತರೂ
ನಾ ಹೆಣ್ಣು, ಎಲ್ಲವನ್ನೂ ಸಹಿಸುವವಳು.!

ಎಷ್ಟು ಹೊತ್ತರೇನು ಭಾರ
ಜೊತೆಗಿರದಿದ್ದರೂ ಸರದಾರ
ಕಂಕುಳಲ್ಲಿ ಕಂದನ ಹೊತ್ತು
ಸಂಸಾರ ತೂಗಿಸುವುದೂ ಗೊತ್ತು
ನಾ ಹೆಣ್ಣು, ಎಲ್ಲವನ್ನೂ ಸಹಿಸುವವಳು.!

ದೇವತೆಗಳ ಹೊತ್ತರೂ
ಸ್ವಾಭಿಮಾನವೇ ಉಸಿರು
ಛಲವುಳ್ಳವಳು ನಾನು
ಬದುಕಿ ತೋರಿಸುವೆನು.!
ನಾ ಹೆಣ್ಣು,ಎಲ್ಲವನ್ನೂ ಸಹಿಸುವವಳು.!

ಡಾ: ಶೈಲಜಾ ರಮೇಶ್
      ಶೈಲೂ....
[27/2/2023, 7:05 am] Dr. B. N. Shylaja Ramesh: ಅರುಣ ಕಿರಣ
ಬೆಳಕ ಸುರಿದು
ಕವಿದ ತಮದ
ಮೌಢ್ಯವರಿದು
ಜಗದ ಜನಕೆ
ಶುಭ ಸುಪ್ರಭಾತ
ಒಲುಮೆಯಲುಲಿದ
ಆ ವಿಧಾತ..!
[27/2/2023, 10:44 am] Dr. B. N. Shylaja Ramesh: #ಪ್ರೀತಿ
ಪ್ರೀತಿ ಎಂದರೆ
ನಿನ್ನೆನಪಷ್ಟೇ ಸಖ
ಬೇರೇನೂ ಬೇಡ
ನಿನ್ನ ನಗುವಿನಲ್ಲೇ
ಅಡಗಿಹುದು ಸುಖ..!

#ಮಗು

ಮಗುವ ನಗು
ತಂಗಾಳಿಯಂತೆ ತಂಪು
ಚೆಲುವ ಮೊಗ
ಮಲ್ಲಿಗೆಯಂತರಳಿ
ಬೀರುತ್ತಲಿದೆ ಕಂಪು..!

#ದುಸ್ತರ

ದುಸ್ತರ ಅಲ್ಲ
ಜೊತೆಗೆ ನೀನಿದ್ದರೆ,
ಬಾಳು ಸುಂದರ.!
ಕೈಹಿಡಿದು ಹೆಜ್ಜೆಜ್ಜೆ
ಜೊತೆಯಾಗಿ ಬಂದರೆ..!

   ಡಾ: B.N. ಶೈಲಜಾ ರಮೇಶ್
[1/3/2023, 2:30 pm] Dr. B. N. Shylaja Ramesh: #ಪ್ರೇಮ_ಬರಹವಿದು 

ಹೇ ಒಲವೇ ನಾ ನಿನಗಾಗೇ ಬರೆದ
ಸ್ವಚ್ಛ ಮನಸಿನ ಪ್ರೇಮ ಬರಹವಿದು
ಕೇಳು ಒಲವೇ ನಿನಗಾಗಿಯೇ ಮಿಡಿದ
ಪೂರ್ಣಪ್ರೀತಿಯ ಎದೆಯ ಬಡಿತವಿದು 

ಹೇ ಒಲವೇ ನಿನ್ನ ಕಾಣದೆ ನೊಂದ
ಮನದ ಅಳಲಿನ ಪ್ರೇಮ ನಿವೇದನೆಯಿದು
ಕೇಳು ಒಲವೇ ನಿನ್ನ ನೆನಪಲಿ ಬೆಂದ
ಈ ಸುಪ್ತ ಮನದ ಭಾವದಳಲು ಇದು 

ಹೇ ಒಲವೇ ನೀನು ನನಗಾಗಿ
ನಾನು ನಿನಗಾಗಿ ಬೆಸೆದ ಬಂಧವಿದು
ಕೇಳು ಒಲವೇ ಜನುಮ ಜನುಮಕೂ
ಜೊತೆಯಾಗೇ ಸಾಗುವ ಒಲವ ಯಾನವಿದು

ಹೇ ಒಲವೇ ನೀನನ್ನನರಿತರೂ
ಚಂದವೇನದು ದೂರ ಓಡುವುದು?
ಕೇಳು ಒಲವೇ ಎಷ್ಟೇ ದೂರಿದರೂ
ಕಷ್ಟವೆನಿಸದು ನಿನ್ನ ಜೊತೆಗೆ ಸಾಗುವುದು

ಬಂದುಬಿಡು ನನಗಾಗಿ ಜೊತೆಜೊತೆಯಾಗೇ ಸಾಗೋಣ ಒಲವಯಾನ 
ಮಾದರಿಯಾಗಲಿ ನಮ್ಮೀ ಪ್ರೇಮಪಯಣ
[2/3/2023, 2:28 pm] Dr. B. N. Shylaja Ramesh: ಮೂಡಣದಿ ಮೂಡುತಿಹ ಭಾಸ್ಕರ ಚೆಲ್ಲುತ್ತಿದ್ದಾನೆ ಹೊಂಬೆಳಕ ಹೊನಲು ಪೂರ್ಣಿಮೆಯ ಬೆಳದಿಂಗಳಿಗೆ ಶುಭ ಜನ್ಮದಿನದ ಶುಭಾಶಯ ಕೋರಲು ಮಾವಿನ ತಳಿರಲಿ ಅಡಗಿಹ ಕೋಕಿಲ ನಲ್ಕೆಯಲಿ ಹಾಡುತ್ತಿದೆ ಗೆಳತಿಗೆ ಜನ್ಮದಿನಕೆ ಶುಭ ಶುಭಾಶಯ ಆ ತರುವಿಗೆ ಹಬ್ಬಿದ ಲತೆಯಲಿ ಹೂವು ಅರಳುತ ಮೆಲ್ಲನೆ ಪಸರಿಸಿ ಘಮಲು ಹೇಳುತಿದೆ ಜನ್ಮದಿನದ ಶುಭಾಶಯ ಮೆಚ್ಚಿನ ಗೆಳತಿಗೆ ಕವಿತೆಯ ಕೊಡುಗೆ ಶತವರ್ಷ ದಾಟಲೀ ಬದುಕಿನ ನಡಿಗೆ ಯಶಸ್ಸಿನ ಪಥದಲ್ಲಿ ನಿನಗಿರಲೆಂದು ಗೆಲುವು ಹಾರೈಸುವೇ ಗೆಳತಿ ಜನ್ಮದಿನಕೆ ಶುಭಾಶಯ
[3/3/2023, 9:59 am] Dr. B. N. Shylaja Ramesh: ಅವಳೆಂದರೆ ಹಾಗೇ...
ಸಕಲ ಗುಣದವಳು
ಕಲ್ಪನೆಗೂ ಸಿಗದವಳು
ಪದಗಳಿಗೆ ನಿಲುಕದವಳು
ಒಪ್ಪಿದಷ್ಟೂ ಅಪ್ಪುವಳು
ತಬ್ಬಿದರೆ ತಂಗಾಳಿ
ಹಬ್ಬಿದರೆ ಹೂಬಳ್ಳಿ
ಮೆಚ್ಚಿದಿರೋ ಸಕಲಕ್ಕೂ ಸುಲಭದವಳು
ಹಚ್ಚಿಕೊಂಡರಂತೂ
ಹುಚ್ಚಳಂತೆ ಪ್ರೀತಿಸುವಳು
ಗೌರವಿಸೆ ದೇವತೆಯಂತೆ
ಚುಚ್ಚು ನುಡಿದರೂ 
ಹೆಚ್ಚೇನೂ ಉಪದ್ರವಿಲ್ಲದವಳು
ಹೇಳಲಿನ್ನೇನಿದೆ..? ಹೆಚ್ಚು
ಪ್ರತಿ ಮನೆಯ ಪ್ರಣತಿ ಇವಳು..!

ಚಂದ ಬರೆದಿದ್ದೀರಿ ಸರ್👌👌💐💐
ನಿಮ್ಮ ಈ ಚಂದ ಕವನಕ್ಕೆ ನನ್ನ ಮನದಲುದಿಸಿದ್ದು  ಹೀಗೆ...😊
[3/3/2023, 10:06 am] Dr. B. N. Shylaja Ramesh: ಹ್ಯಾಪೀ ಹ್ಯಾಪಿ ಬರ್ತ್ ಡೇ

ಮೆಲ್ಲಮೆಲ್ಲನೇ ಮೇಲೇರುತಿಹ ರವಿಯು
ಚೆಲ್ಲುತ್ತಿದ್ದಾನೆ ಹೊಂಬೆಳಕಿನ ಹೊನಲು
ನಗೆಮೊಗದ ಚೆಲುವ ಗೆಳೆಯನಿಗೆ
ಜನ್ಮದಿನಕೆ ಶುಭವನ್ನು ಕೋರಲು..!

ತೂಗುತಿದೆ ನಲ್ಮೆಯಲಿ ಹೂ ಬಳ್ಳಿ ತಾನು
ಬಿರಿದ,  ಘಮಲಿನ ಹೂವನ್ನು ಹೊತ್ತು
ನಡೆಮುಡಿಯ ಹಾಸಲು ಅಡಿಗಡಿಗೆ
ಗೆಳೆಯ ತಾ ನಡೆದು ಬರುವ ಹೊತ್ತು

ಮೆಲ್ಲ ಬೀಸಿದ ತಂಗಾಳಿಯ ಸ್ನೇಹಕೆ
ಕಮ್ಮನೆ ಪಸರಿಸುತ ಹೂವ ಘಮಲು 
ನರುಗಂಪಿನಮಲಿನಲಿ ತೇಲಿಮುಳುಗಿಸುತ್ತ
ಸಾಗುತ್ತಿದೆ ಜನ್ಮದಿನದ ಶುಭಾಶಯ ಹೇಳಲು

ಹುಟ್ಟುಹಬ್ಬದ ದಿನಕ್ಕೆ ನನ್ನದೂ ಹಾರೈಕೆ
ನನ್ನ ಕೃಷ್ಣ ಪೂರೈಸಲಿ ನಿಮ್ಮೆಲ್ಲ ಬಯಕೆ
ಯಶಸ್ಸಿನ ಪಥದ ಬದುಕ ನಡಿಗೆಯಲಿ
ಸಕಲ ರೀತಿಯ ಗೆಲವು ನಿಮಗಿರಲಿ

         ಶೈಲೂ.....
[6/3/2023, 6:33 pm] Dr. B. N. Shylaja Ramesh: ಹಾಡು ಹಕ್ಕಿ ಮೌನ ತಾಳಿದೆ ಏಕೋ
ಉಕ್ಕಿ ಹರಿಯುತ್ತಿದ್ದ ಭಾವನೆಗಳಿಗಡ್ಡಕಟ್ಟಿ
ಸಾರಸ್ವತ ಲೋಕ ಬಳಲಿ ಬಡವಾಗುತ್ತಿದೆ
ಭಾವಪೂರ್ಣ ಬರಹ
[7/3/2023, 4:16 pm] Dr. B. N. Shylaja Ramesh: #ಮೌನಅರಿಯುವಆಪ್ತ 

ಮೌನವನರಿಯುವ ಆಪ್ತ
ಅವನಲ್ಲದೇ ಇನ್ಯಾರಿಹರು.?
ಮೆಲ್ಲನೇ ಮಾತಿಗೆಳೆದೆಳೆದು
ಮನತಣಿಸುವ ಮನದರಸ
ಅವನಲ್ಲದೇ ಮತ್ಯಾರಿಹರು.?

ನೋವಿನೊಂದೆಳೆ ಕಂಡರೂ ಸಾಕು
ತಾನೇ ಮನದಲಿ ನೋಯುತ್ತ
ಕಾಣದೇ ಕಂಬನಿಯೊರೆಸುತ್ತ
ಮೇಲೆಮೇಲೆ ಮುಖದಿ ನಗುವ ತುಂಬಿ
ಹಾಸ್ಯದೊನಲ ಹರಿಸುತ್ತ, 
ನೋವ ಮರೆಸುವಾತ ಮತ್ಯಾರಿಹರು.?

ನೋವಿಗೂ ನಲಿವಿಗೂ ಸಖನವನೇ
ಕಿರುಬೆರಳ ಹಿಡಿದು ನಡೆಸುವವ
ದಾರಿಗಂಟಿದ ಮುಳ್ಳನೆಲ್ಲ ಸರಿಸಿ
ಸಾಧನೆಯ ಹಾದಿಗೆ ನೆರವಾದವ
ಜನುಮದ ಜೊತೆಗಾರನವ ನನ್ನವ

ಡಾ: ಶೈಲಜಾ ರಮೇಶ್
[8/3/2023, 6:49 am] Dr. B. N. Shylaja Ramesh: B.N. Shylaja Ramesh: ಹೆಣ್ಣು
******

ಹೆಂಗರುಳ  ಹೃದಯವೇ
ನಿನ್ನ  ಹುಟ್ಟು  ಆ ದೇವನಾ ಗುಟ್ಟು
ದೇವತೆಗಳ  ಹೆಸರ  ಹೊತ್ತು
ದುಃಖ ದುಮ್ಮಾನಗಳ ಹೊರೆಯ ಹೊತ್ತು
ನಿರ್ಜೀವ ಬದುಕ ಬದುಕುವ ನೀನು
ಪ್ರಕೃತಿಯ ಜೀವ  ಸೆಲೆ
ಅಮ್ಮ, ಮಗಳು, ಸಹೋದರಿ, ಮಡದಿ
ರಸಿಕತೆಗೆ ರಂಭೆ
ಸಂಸ್ಕೃತಿಗೆ ಸುಂದರ  ಗೊಂಬೆ
ಸಂಸಾರಕೆ  ಸೌಭಾಗ್ಯವತಿ
ಕವಿಯ ಕಾವ್ಯಕೆ ಸ್ಪೂರ್ತಿ
ಬೆಡಗು ಬಿನ್ನಾಣಗಳರಸಿ
ಆದರೂ  ನೀ  ಎಲ್ಲರ  ಸೇವಕಿ
ಅವರವರ  ಭಾವಕ್ಕೆ ತಿಳಿವವರು  ನಿನ್ನನು
ನಿನ್ನಂತರಂಗ ವ  ಅರಿತವರು  ಯಾರು
ಜೀವ ಹಿಂಡುತಿದೆ ಬಾಳಲ್ಲಿ ಬರುವ  ತಿರುವುಗಳು
ನಡೆಯಲಾರದ ಜೀವನದ  ಹಾದಿಗಳು
ನಿನ್ನದಲ್ಲದ ಆಯ್ಕೆ
ಆದರೂ  ಬದುಕುವ  ಬಯಕೆ
ಬದುಕಬೇಕಲ್ಲ  ದಿನಗಳ ದೂಡಿ
ಸಾಗುತಿದೆ ಕಾಲ  ಓಡೋಡಿ
ಎದ್ದೇಳಬೇಕು ಝಾಡಿಸಿ  ಜಡತ್ವ
ದೂಡಿ ಕರಿನೆರಳ  ಮೂಢತ್ವ
ನಿನಗೊಂದು ಮನವಿದೆಯೆಂದು
ನೀ ಅರಿಯಬೇಕು
ಜಗದ ಚಾಲನೆಗೆ ಮುನ್ನುಡಿ
ನೀನೇ ಎಂದು ಜಗವರಿಯಬೇಕು

         ಶೈಲೂ......
[8/3/2023, 6:52 am] Dr. B. N. Shylaja Ramesh: ಹೆಣ್ಣು★★

ನವ ಮಾಸ ಧರಿಸಿ
ನೋವ ಭರಿಸಿ
ಅಮೃತವನುಣಿಸಿ
ಕಣ್ಣೀರೊರೆಸಿ, ಕೈ ಹಿಡಿದು ನಡೆಸಿ
ಬದುಕಲು ಕಲಿಸಿ
ಹರಸುವಾ ಮಾತೆ ಹೆಣ್ಣು
ಜನ್ಮದಾತೆ ಹೆಣ್ಣು...........

ಮುದ್ದು ಮಾತನಾಡುತ್ತಾ
ಪುಟ್ಟ ಹೆಜ್ಜೆಯನಿಟ್ಟು ಕಿಲ ಕಿಲ ನಗುತ್ತಾ
ನೋವ  ಮರೆಸುವಾ
ಬದುಕಿಗೆ  ಬೆಳದಿಂಗಳ ನೀವ
ಮುದ್ದು ಮಗಳು  ಹೆಣ್ಣು 
ಸವಿ ರುಚಿಯ  ಹಣ್ಣು..........

ನಸು ನಗೆಯ ಬೀರಿ
ಹುಸಿ ಮುನಿಸ ತೋರಿ
ಲಘು ಜಗಳವಾಡಿ, ನಿಜ ಪ್ರೀತಿ ತೋರಿ
ಮೃಧು ನುಡಿಗಳಾಡಿ
ನೋವು ನಲಿವಿನ  ಭಾಗಸ್ತ್ ಎ
ಮುದ್ದಿನ ಸಹೋದರಿ ಹೆಣ್ಣು
ಅವಳು  ಮನೆಯ ಕಣ್ಣು..........

ತನ್ನವರನ್ನೆಲ್ಲ ಮರೆತು
ಪರಿಚಯವಿಲ್ಲದವರಲಿ  ಬೆರೆತು
ಹೊಸ ರೀತಿ ನೀತಿಗಳನರಿತು
ಪತಿಯಾಣತಿಯಂತೆ  ಕಲೆತು
ಎಲ್ಲರೊಡನೆ ಬೆರೆತು , ನೋವನ್ನು ಮರೆತು
ಜೀವ ತೇಯುವಳು  ಮಡದಿ
ಇವಳೂ ಒಂದು ಹೆಣ್ಣು 
ಬದುಕಿನಾ ಕಣ್ಣು..............

ನೋವಿನಲ್ಲಿ ಸ್ಪಂದಿಸುತ
ನಲಿವಿನಲಿ  ಉಲಿಯುತ
ನೀ  ನಕ್ಕಾಗ ನಕ್ಕು  ಅತ್ತಾಗ  ಅತ್ತು
ಸಾಂತ್ವನವ ಹೇಳುತ್ತಾ
ನೋವ  ಮರೆಸುವಳು  ಗೆಳತಿ
ಅವಳೂ  ಒಂದು  ಹೆಣ್ಣು
ಸಿರಿ ಸ್ನೇಹದ  ಕಣ್ಣು.........
[8/3/2023, 11:02 am] Dr. B. N. Shylaja Ramesh: ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾಃ
ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾಃ ಕ್ರಿಯಾಃ||
[8/3/2023, 11:25 am] Dr. B. N. Shylaja Ramesh: ಎಲ್ಲ ಪಾತ್ರಗಳಿಗೂ ಜೀವತುಂಬಿ
ಸರ್ವರನೂ ಸೇವಿಸುವಳು ಮನತುಂಬಿ
ಎಲ್ಲ ಜವಾಬ್ದಾರಿಗಳನ್ನು ಹೆಗಲಲ್ಹೊತ್ತು
ನಿಭಾಯಿಸುವ ಇವಳೊಂದು ಆಣಿಮುತ್ತು
ಇವಳ ಸಾಧನೆಗೆ ಮೀಸಲಂತೊಂದು ದಿನ
ಅದುವೇ ಅಂತಾರಾಷ್ಟ್ರೀಯ ಮಹಿಳಾದಿನ
[9/3/2023, 7:03 pm] Dr. B. N. Shylaja Ramesh: ನಿನ್ನ ಕಾಣದೆ ಮನವು ನೊಂದಿದೆ
ಎಲ್ಲಿ ಹೋದೆಯೋ ಮಾಧವಾ
ನಿನ್ನ ಕಾಣುವ ಹಂಬಲದಿಂದ
ಹಿಡಿದುಹೊಂದಿಹೆ ಈ ಜೀವವ

[10/3/2023, 3:26 pm] Dr. B. N. Shylaja Ramesh: #ಮೌನರಾಗ

ವಿಜೃಂಭಿಸಿದೆ ಮುನಿಸು ಮಾತು ಮರೆಸಿ
ಬಿಕ್ಕಳಿಸುತ್ತಿದೆ ದ್ವನಿ ಕಣ್ಣೀರ ಸುರಿಸಿ
ಯಾರದೋ ತಪ್ಪಿಗೆ ಇಲ್ಲಾರಿಗೋ ಶಿಕ್ಷೆ
ಪರಿಸ್ಥಿತಿ ಅರಿವಾಗಬಹುದೆಂಬ ನಿರೀಕ್ಷೆ

ಅರಿತರೇ ತಾನೆ ಬಿಗುವಿನೀವಾತಾವರಣ ಸಡಿಲ
ನಿಷ್ಟುರತೆ ಬೇಡ, ಮನವಿದು ಅತಿ ಮೃದುಲ
ಪರಸ್ಪರ ಅರಿತು ಬಾಳಿದರೆ ಜೀವನ ಸರಾಗ
ಅರಿವಿನೊಡಲಲಿ ಬಿರುಕು ಮೂಡೆ ಬಾಳೇ ಮೌನರಾಗ.!

ಡಾ: ಶೈಲಜಾ ರಮೇಶ್
[10/3/2023, 7:29 pm] Dr. B. N. Shylaja Ramesh: #ಪ್ರೀತಿಯ_ಕಾವಲುಗಾರ

ನನ್ನ ಹೃದಯ ಕದ್ದ ಚೋರ ಸುಮನಸಿನ ರಾಜಕುಮಾರ ಸುರಿವ ಪ್ರೇಮಾಮೃತಧಾರಾ ಅವನೆನ್ನ ಬಾಳ ಬಂಗಾರ..!

ಬದುಕಿಗೆ ಬೆಳಕಾದವ ಧೀರ ಬಾಳ ಬಾಂದಳದ ಚಂದಿರ ನಗೆಮೊಗದ ಸುರಸುಂದರ ಅವನೊಡಲು ಒಲವ ಮಂದಿರ.!

ಪ್ರೀತಿಯಲವ ಸಾಹುಕಾರ ಸಿರಿ ಸ್ನೇಹದ ಬಂಧುರ ಮಾತಿಹುದು ನೇರಾ ನೇರ ಅವ ಪ್ರೀತಿಗೆ ಕಾವಲುಗಾರ..!

ಡಾ: ಶೈಲಜಾ ರಮೇಶ್
[12/3/2023, 10:21 pm] Dr. B. N. Shylaja Ramesh: ಮಾತು ಮೌನದಲ್ಲಿ ಲೀನ
ಮನ ನಿನ್ನ ಧ್ಯಾನದಲ್ಲಿ ತಲ್ಲೀನ
ಮಾತು ಮೌನಗಳ ಮಧ್ಯದಲಿ
ಧ್ಯಾನ ಲೀನಗಳ ಜೊತೆಯಲ್ಲಿ
ಸಾಗುತಿದೆ ಬದುಕ ಬಂಡಿ ನಿನ್ನ ನೆನಪಲ್ಲಿ
[14/3/2023, 7:42 pm] Dr. B. N. Shylaja Ramesh: #ಇರಬೇಕು_ಇರುವಂತೆ 

ಬದುಕೆಂದರೇ.... ಹೀಗೆ
ನೋವು ನಲಿವು ಬಗೆಬಗೆ
ಒಮ್ಮೆ ನೋವುಂಡರೆ..
ಮತ್ತೊಮ್ಮೆ ಹಾಲು ಸಕ್ಕರೆ
ಒಮ್ಮೊಮ್ಮೆ ಬೆಡಗು ಬಿನ್ನಾಣ
ಮತ್ತದೇ ಅಳುವ ಚಿತ್ರಣ
ಒಮ್ಮೆ ಬಯಸದೇ ಬಂದ ಭಾಗ್ಯ
ಹಾಗೆಯೇ ಎಲ್ಲವನ್ನೂ ಕಳೆವ ದೌರ್ಭಾಗ್ಯ
ಸ್ವರ್ಗವೇ ಧರೆಗಿಳಿದಂತೊಮ್ಮೆ
ನರಕ ಯಾತನೆ ಇನ್ನೊಮ್ಮೆ
ಹೃದಯ ಅರಳಿದ ಹಿಂದೆಯೇ
ಎದೆ ಹಿಂಡಿದಂಥ ನೋವು
ನೋವಿತ್ತವರನೆಲ್ಲ ಮನ್ನಿಸಿ
ಬಾಚಿ ತಬ್ಬುವ ಮನವು...!
ಬದುಕನ್ನು ಬಂದಂತೆಯೇ ಸ್ವೀಕರಿಸಿ
ಬಾಳಬೇಕು ಎಲ್ಲವನನುಸರಿಸಿ
ಮಾಡದೇ ಯಾವುದೇ ಚಿಂತೆ
ಇರಬೇಕು ನಾವು ಇರುವಂತೆ..! 

ಡಾ: ಶೈಲಜಾ ರಮೇಶ್
[21/3/2023, 10:29 am] Dr. B. N. Shylaja Ramesh: #ಹೊಸಚಿಗುರು_ಹೊಸಭರವಸೆ 
ಅದೇ ಗಿಡ, ಅದೇ ಮರ
ಪ್ರತಿದಿನವೂ ಹೊಸತರ
ಎಲೆ ಉದುರಿ ಮತ್ತೆ ಚಿಗುರಿ
ನಳನಳಿಸುವ ಆ ಹೊಸಪರಿ 

ಹೊಸಭರವಸೆ ಹೊತ್ತ ವಸಂತ
ಬಾಳು ಬೆಳಗಲು ಬಂದ ಸಂತ 
ಚಿಗುರೊಡೆಸಿ ಕಾಯಿ ಕಟ್ಟಿಸುತ
ಹಣ್ಣಾಗಿಸಿ, ಹಸಿವು ನೀಗಿಸುತ

ಚಿಗುರು ಮಾವು ತೋರಣ
ಬೇಳೆಬೆಲ್ಲದ ಸಿಹಿ ಹೂರಣ 
ಕಹಿಬೇವಿನೊಗರ ಸೇವನೆ
ಆಯುರಾರೋಗ್ಯವರ್ಧನೆ 

ತಣ್ಣನೆಯ ತಂಪು ತಂಗಾಳಿ
ಬೀಸುತ ತನ್ನತನವನು ಆಳಿ 
ಆಯಾಸನಳಿಸುವ ಅತ್ಯಾಸೆ 
ತುಂಬಿ ಜೀವನೋತ್ಸಾಹ ಭರವಸೆ

ಎಲ್ಲ ಸೊಗಸ ಹೊತ್ತು
ನವಯುಗಾದಿ ಬಂತು
ಶೋಭಕ್ರುತು ಶುಭವ ತರಲಿ
ಸಂತಸ ಸಂಭ್ರಮ ಹರಡಲಿ.!

ಕೂ ಸ್ನೇಹಿತರೆಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು💐💐💐

ಡಾ: ಶೈಲಜಾ ರಮೇಶ್
[21/3/2023, 6:35 pm] Dr. B. N. Shylaja Ramesh: 🌹🌿🌹🌿🌹🌿🌹

ಬೇವಿನ ಕಹಿಯ ಮರೆತು
ಬೆಲ್ಲದ ಸಿಹಿಯ ಜೊತೆಗೆ
ಬೇಳೆಯ  ಸವಿ  ಹೂರಣ

ಹಳೆಯದೆಲ್ಲ ಕಹಿ ಮರೆತು
ಹೊಸವರ್ಶದ ಸಂಭ್ರಮದೇ
ಬದುಕಾಗಲಿ ಪೂರ್ಣ

ನನ್ನೆಲ್ಲ ಸನ್ಮಿತ್ರರಿಗೆ ಶ್ರೀ ಶಾರ್ವರಿ ನಾಮ  ಸಂವತ್ಸರವು ಸಕಲ ವಿಧವಾದ  ಸುಖ ಸಂಪದ  ತರಲೆಂದು ಹಾರೈಸುವೆ

ಶಾರ್ವರಿಯ ಆಗಮನದಿಂದ ಮಹಾಮಾರಿ ಕೊರೊನಾ ನಿರ್ಮೂಲನವಾಗುವ ಹೆಬ್ಬಯಕೆಯೊಂದಿಗೆ....

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

ಡಾ :  B.N.ಶೈಲಜಾ  ರಮೇಶ್

🌿🌹🌿🌹🌿🌹🌿
[21/3/2023, 6:46 pm] Dr. B. N. Shylaja Ramesh: ಕೋಗಿಲೆ
********

ಕೋಗಿಲೆಯೇ ಕೋಗಿಲೆಯೇ ನಿನ್ನ ಇಂಪಾದ ದ್ವನಿಯ ಜೊತೆಗೆ
ನನ್ನ ದ್ವನಿಯ ಸೇರಿಸುವೆನು ಬಾರೆ ಈಗಲೇ ||

ನಿನ್ನ ಕಲೆಗೆ ಸ್ಫೂರ್ತಿ ತರಲು ವಸಂತ ಬಂದಿದೆ
ನಿನ್ನ ದ್ವನಿಗೆ ಇಂಪು ಕೊಡಲು ಮಾವು ಚಿಗುರಿದೇ
ನೀ ಯಾರಿಗೂ  ಕಾಣಲಾರೆ ಏಕೆ ಕೋಗಿಲೆ.?
ನಿನ್ನ ಜೊತೆಗೆ  ಹಾಡುವಾಸೆ  ಬಾರೆ ಈಗಲೇ ||

ನಿನ್ನ ಮಧುರ ದ್ವನಿಯು ಮನಕೆ ಹರುಷ ತಂದಿದೆ
ಸರಸ್ವತಿಯ  ವೀಣೆ ಇಂಪು ನಿನ್ನ ದ್ವನಿಗಿದೆ
ಕುಹೂ... ದ್ವನಿಗೆ  ಸಾಟಿ ಯಾರು ಹೇಳೇ ಕೋಗಿಲೆ
ನಿನ್ನ ಜೊತೆಗೆ  ಹಾಡುವಾಸೆ ಬಾರೆ ಈಗಲೇ.. ||

         ಶೈಲೂ....
[21/3/2023, 6:49 pm] Dr. B. N. Shylaja Ramesh: ಬರಹ
*****

ಬರೆಯಲ್ಹೊರಟೆ ನಾನು
ಮಆನಸ್ಸಿಗೆ  ಅನಿಸಿದ್ದನ್ನ
ತೋಚಿದ್ದನ್ನು ಗೀಚುತ್ತಾ
ನಲಿದೆ ಸಂತಸದಲಿ ನಾ
ತಪ್ಪೋ ಒಪ್ಪೋ ಬರೆದೆ
ಯಾರೋ.ಮೆಚ್ಚಲಿಕ್ಕಲ್ಲ
ಒಳದನಿಯ ಕಿರು ಸಾಲು
ಮನಕೆ ಮುದ ನೀಡಲಿಕೆ
ಒಮ್ಮೊಮ್ಮೆ.. ಒತ್ತೋತ್ತಿ
ಬರುತ್ತವೆ  ಪದಪುಂಜಗಳು
ಸುಂದರ ಸಾಲುಗಳು
ಮನಸೂರೆಗೊಳ್ಳೋ
ಮನದ ಮಾತುಗಳು
ಒಮ್ಮೊಮ್ಮೆ  ಮಸ್ತಕವೆಲ್ಲಾ
ಖಾಲಿ ಖಾಲಿ ಖಾಲಿ..
ತಡಕಾಡಿ ತಿಣುಕಿದರೂ
ಹೊಳೆಯದೊಂದೂ ಅಕ್ಷರ
ಮಿದುಳೊಳಗೆ ಕೈಹಾಕಿ
ಬುದ್ಧಿಯನ್ನೆಲ್ಲಾ  ಕಿತ್ತೊಗೆದಂತೆ
ಮನಕೆ ಶೂನ್ಯವಾವರಿಸಿದಂತೆ
ಒಮ್ಮೊಮ್ಮೆ  ಬರೆದ ಬರಹಕೆ
ಬುಡವೇ ಇಲ್ಲ...
ಪದಗಳಲ್ಲಿ  ಹುರುಳಿಲ್ಲ
ಕಾವ್ಯದಲಿ ತಿರುಳಿಲ್ಲ
ಅರ್ಥವಾಗದ ಬರೀ ಅಕ್ಷರಗಳ ಸಾಲು
ಹೀಗೆಯೇ ಸಾಗುತಿದೆ
ನನ್ನ ಬರಹದ ದಾರಿ
ಕೊನೆಮೊದಲಿಲ್ಲದ
ಭಾವನೆಗಳ ತಯಾರಿ....
    
         ಶೈಲೂ.......
[21/3/2023, 7:15 pm] Dr. B. N. Shylaja Ramesh: ಯುಗಾದಿಯ ಸಂಭ್ರಮ
🌿🌹🌿🌹🌿🌹🌿

ಹಳತೆಲ್ಲ ಕಳೆದು
ಹೊಸತು ಬರುತಿದೆ ನೋಡು
ತುಂಬಿ ಹೊಸ ತನ
ಎಲ್ಲೆಲ್ಲೂ ನವಚೇತನ ಹಾಡು
ಇದೇ ನವ ಯುಗಾದಿಯ ಜಾಡು

ಶಿಶಿರ  ಋತು ಕಳೆದು
ರಾಜ ವಸಂತನಾಗಮನ
ನಳನಳಿಸುತ ಪ್ರಕೃತಿ 
ಕಣ ಕಣದಿ ತುಂಬಿ ಹೊಸಚೇತನ
ಇದೇ ಯುಗಾದಿಯ ಹೊಸತನ

ಹಣ್ಣೆಲೆ ಕಳಚುದುರಿ
ಹೊಸ ಚಿಗುರು ಚಿಗುರಿ
ಹಸಿರು ಪೀತಾಂಬರಿ
ಉಟ್ಟು ಮೆರೆವ ಸರದಿ
ಇದೇ ಸಂಭ್ರಮದ ಯುಗಾದಿ

ಮಾವು ಬೇವು ತೋರಣ
ಬೇವು ಬೆಲ್ಲದ ಮಿಶ್ರಣ
ಸಿಹಿ - ಕಹಿಯು ಸಮವಿರಲಿ
ಬದುಕಾಗಲೀ ಪೂರ್ಣ
ಇದೇ ಯುಗಾದಿಯ ಹೂರಣ

ಬೇಳೆಯ ಸಿಹಿ ಹೋಳಿಗೆ
ಜೊತೆ ಪಂಚಾಂಗದ ಶ್ರವಣ
ನಾಳಿನ ಭವಿತದ ಚಿಂತೆ
ಸುಖ ಸಂತೋಷದ ಮಜ್ಜನ
ಇದೇ ಯುಗಾದಿಯ ಪ್ರೇರಣ

ಹೊಸತು ಬದುಕು ಸಹಬಾಳ್ವೆ
ಸಂಬಂಧದ  ಜೊತೆ ಜೊತೆಗೆ
ಹಳತು ನೋವನೆಲ್ಲ ಕಳೆದು
ನಾಳೆಗಳ ಕನಸಿನಲಿ
ಯುಗದ ಆದಿಯ ಸಂಭ್ರಮ

           ಶೈಲೂ........
[21/3/2023, 7:18 pm] Dr. B. N. Shylaja Ramesh: ವಸಂತನಾಗಮನದಿ ಮಾಮರವು ಚಿಗುರಿರಲು
ಬೇವಿನ ಚಿಗುರೊಡನೆ ಸಿಹಿ ಬೆರೆಯಿತು..!!
ತಳಿರು ತೋರಣದ ಒಸಗೆ ಕೈಬೀಸಿ ಕರೆದಿರಲು
ಹೊಸ ವರುಷ ಹರುಷದಲಿ ತಾ ನಲಿಯಿತು..!!

ಮಾಮರದ ಚಿಗುರೆಲೆಯ ಸವಿಯು ತಾನುಂಡು
ಕೋಕಿಲದ  ಕುಹೂ ದನಿಯು ತಾ ಮೆರೆಯಿತು..!!
ಹೊಂಗೆಯ ತೊಂಗಲಲ್ಲಿ ಘಮ್ಮೆನ್ನೋ ಸುಮರಾಶಿ
ಮಧುಹೀರಿ ಭೃಂಗವು ತಾ ಝೇಂಕರಿಸಿತು..!!

ಹಣ್ಣೆಲೆಯ ತಾವಿನಲಿ ನವ ಚಿಗುರು ಪಲ್ಲವಿಸಿ
ವಸಂತೋತ್ಸವದ ಋತುಗಾನ ಮೇಳೈಸಿತು..!!
ಭೂರಮೆಯ ಚೆಲುವಿಗೆ ಸ್ವರ್ಗವೇ ಮನಸೋತು
ನವ ಯುಗಾದಿಯ ಗಾದಿಯಲಿ ಮೈಮರೆಯಿತು..!!

ಹೊಸತು ಜನ್ಮದ ಹರುಷದಲಿ ಪ್ರಕೃತಿಯು ನಲಿದಿರಲು
ಎಲ್ಲೆಲ್ಲೂ ಸಂಭ್ರಮದ ಉತ್ಸಾಹದುಲ್ಲಾಸ ಮೈದಳೆಯಿತು..!!
ಬೆವುಬೆಲ್ಲದ ಸಹಿತ ಸಿಹಿ ಹೋಳಿಗೆಯ ರುಚಿಯಲ್ಲಿ
ಜನಮನದ ಸಂತಸವು ನೂರ್ಮಡಿಸಿತು..!!!

              ಶೈಲೂ.....
[21/3/2023, 7:19 pm] Dr. B. N. Shylaja Ramesh: ಹೊಸವರುಷ ತರಲಿ ಹರುಷ
************************
ಹೊಸ ವರುಷ ತರಲಿ ಹರುಷ
ಪ್ರತಿಯೊಬ್ಬರ ಬಾಳಿನಲೂ
ಬೇವಿನ ಕಹಿ ರುಚಿಯೊಡನೆ
ಬೆಲ್ಲವಿರಲಿ ಕಹಿ ಮರೆಸಲು..

ತಳಿರು ತೋರಣದ ಜೊತೆಗೆ
ವರ್ಣಮಯ ರಂಗವಲ್ಲಿ
ಮಧುಹೀರಿ ಮತ್ತೇರಿದ ಭೃಂಗ
ಝೇಂಕರಿಸಿತು ಹೊಂಗೆ ತೊಂಗಲಲ್ಲಿ..

ವಸಂತನ ಋತುಗಾನದೇ
ಚಿಗುರೊಡೆಯಿತು ತರುಲತೆ
ತಳಿರೊಡೆದ ಮಾಮರದಲಿ
ಕೋಕಿಲದ ಒಲವ ಕುಹೂ ಗೀತೆ..

ನವ ಚೈತ್ರದ ಹೊಸ್ತಿಲಿನಲಿ
ಹೋಳಿಗೆಯ ಸಿಹಿ ಸಂಭ್ರಮ
ಹೊಸವರುಷದ ಹೊಸತನದಲಿ
ಬದುಕಾಗಲೀ ಪೂರ್ಣಿಮಾ..

ನವಮನ್ವಂತರದ ಈ ಹಾದಿ
ಸುಗಮವಾಗಲಿ ಎಲ್ಲರಿಗೂ
ಶುಭಯುಗಾದಿಯ ಋತುಪರ್ಣಿಕೆ
ಶುಭವೀಯಲಿ ಸರ್ವರಿಗೂ..

         ಶೈಲೂ......
[21/3/2023, 7:23 pm] Dr. B. N. Shylaja Ramesh: #ಮನದ ಭಾವನೆಗಳಿಗೆ ಅಕ್ಷರ ರೂಪ

ಮನದಲ್ಲಿ ಮೂಡಿದ ಭಾವ
ಅಕ್ಷರಗಳೊಡನೆ ಬೆರೆತಾಗ
ಆಗುವುದು ಚಂದದ ಬರಹ
ಪದ ಪದಗಳಲಿ ಮಿಳಿತು
ಅದಮ್ಯ ಮನೋಭಿಲಾಷೆ
ಹೊರಹೊಮ್ಮಿದಾಗ ಕವಿಗದು
ಆತ್ಮಾಭಿಮಾನದ ಚೇತನ

ಹೇಳಲಾಗದ ಭಾವಗಳೂ
ಚಂದದ ಪದಗಳಲಿ ಬೆರೆತು
ಹೊಮ್ಮಿಸುವುದು ರಸಧಾರೆ
ಕಷ್ಟವೋ ಸುಖವೊ ಮನದ
ಭಾವದ ಸಾರವನ್ನೆಲ್ಲಾ ಹಿಡಿದು
ಒಂದೆಡೆ ಕಲೆಸಿ ಒಲಿಸಿ ಬೆರೆಸಿ
ಬಡಿಸುವುಸು ಕವಿಯ ಜಾಣ್ಮೆ
       ಶೈಲೂ...
[22/3/2023, 1:48 pm] Dr. B. N. Shylaja Ramesh: ಬೇವಿನ ಕಹಿಯ ಮರೆತು
ಬೆಲ್ಲದ ಸಿಹಿಯ ಜೊತೆಗೆ
ಬೇಳೆಯ ಸಿಹಿ ಹೂರಣ

ಹಳೆಯದೆಲ್ಲ ಕಹಿ ಮರೆತು
ಹೊಸವರ್ಷದ ಸಂಭ್ರಮದೇ
ಬದುಕಾಗಲೀ ನವನವೀನ.!

ಶೋಭಕೃತ್ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು
💐💐💐💐
[10/4/2023, 6:33 pm] Dr. B. N. Shylaja Ramesh: ಸಕಲ ತೀರ್ಥಗಳಲಿ ಮಿಂದು
ಭಕ್ತಿ ಭಾವದಲಿ ನಿಂದು
ಸರ್ವ ಪಾಪಗಳ ಕಳೆದು
ಮನುಜ ದೈವ ಪ್ರೀತಿಯ ಹೊಂದು

ಕಳೆದು ನೋವು ನಲಿವುಗಳು
ಮೂಡಿ ಆಶಾ ಭಾವಗಳು
ಆ ಹರಿಯ ಶ್ರೀ ಚರಣಗಳು
ತರಿವುದೆಮ್ಮ ದುರಿತಗಳು

ಒಂದು ಫಲ ತೀರ್ಥಯಾತ್ರೆಗೆ
ನಾಲ್ಕು ಫಲ ಸಾಧುಸಂಘಕೆ
ಅನೇಕವಿಹುದು ಸದ್ಗುರು ಕೃಪೆಗೆ
ಅನಂತಫಲವಂತೆ ಹೆತ್ತವರ ಸೇವೆಗೆ

ಅರಿವಿಗಿರಬೇಕು ಕೋಶಗಳ ನೆರವು
ತಿಳಿವಿಗಿರಬೇಕು ಯಾತ್ರೆಯ ಚೆಲುವು
ದೊಡ್ಡವನೇನಲ್ಲ ಎಲ್ಲ ಅರಿತವನು
ಮಾತಾಪಿತರನು ಸೇವಿಪಗೆ ದೇವನೊಲಿಯುವನು
[19/4/2023, 10:35 pm] Dr. B. N. Shylaja Ramesh: #ಹೊಸಬೆಸುಗೆ 
ನಾನೆಲ್ಲೂ ಇದ್ದೆ ನನ್ನ ಪಾಡಿಗೆ
ಸುಮ್ಮನೆ, ಅನ್ನಿಸಿದ್ದನ್ನು ಗೀಚುತ್ತ
ನೀ ಎಲ್ಲಿಂದಲೊ ಬಂದೆ ಜೊತೆಗೆ
ನನ್ನೆಲ್ಲ ಬರಹವನ್ನು ಮೆಚ್ಚಿಕೊಳ್ಳುತ್ತ

ಬರಕ್ಕೊಂದು ಮೆಚ್ಚು ಬರಹ
ಅದ್ಭುತ ಪದಪುಂಜಗಳ ಜೋಡಿಸಿ 
ವಿಮರ್ಶಾತ್ಮಕ ಸತ್ವಯುತ ತುಲನೆ 
ಒಳಾರ್ಥ ಗೂಢಾರ್ಥಗಳ ಬಿಡಿಸಿ 

ಎಂದಾದರೊಂದು ದಿನ, ಬರಹ
ಮೂಡದಿದ್ದರೆ ಬೇಸರದಲಿ
ಅದೆಲ್ಲಿರುವೆಯೋ ಒಡನೊಡನೆ
ಬಂದಿಸೆನ್ನ ಹೊಸಬೆಸುಗೆಯಲಿ

ರಮಿಸಿ, ನಗಿಸಿ, ನಲಿಸಿ ಬೇಸರವನೋಡಿಸಿ
ನನ್ನೆಲ್ಲ ಬರಹಕೆ ಸ್ಪೂರ್ತಿಯಾಗಿ ನೆಲೆನಿಂತು
ಕಂಡೊಡನೆಯೇ ಒಡಮೂಡುವಂತೆ ಬರಹ
ಮೋಡಿಮಾಡಿರುವೆ ಗೆಳೆಯ ಮನದಲಿ ನಿಂತು

ಡಾ: ಶೈಲಜಾ ರಮೇಶ್
[23/4/2023, 12:40 pm] Dr. B. N. Shylaja Ramesh: ಜಗಜ್ಯೋತಿ ಬಸವೇಶ್ವರ
*********************

ಕಾಯಕವೇ ಕೈಲಾಸ ದುಡಿದರಿಹುದು ಉಲ್ಲಾಸ
ದುಡಿಮೆಯಲಿಹನು ದೇವರು ಶ್ರದ್ಧೆಯಿಂದ ದುಡಿಯುತಿರು

ದಯೆಯಲಿಹುದು ಧರ್ಮ ಕರುಣೆಯದರ ಮರ್ಮ
ಮೂಢನಂಬಿಕೆಯ ಮೌಢ್ಯ ಅಳಿಸಿ ಬಿಸುಟು ಆಗುನೀ ಪ್ರೌಢ

ಜಾತಿವಿಜಾತಿಯಾವುದಿಹುದು ಜಗಕಿಹುದೊಂದೆ ಜಾತಿ
ಭಕ್ತಿಯ ಬಾಂಡ ದೊಳಗಿಹ ಶಿವಶರಣರಿಗಿಲ್ಲ ಯಾವ ಜಾತಿ

ಭಕ್ತಿ ಚಳುವಳಿಯ ಹರಿಕಾರ ಇಷ್ಟಲಿಂಗವದರಾಧಾರ
ಜಾತಿಬೇಧಗಳಿಗಿತ್ತಿತ್ತು ಕೊನೆ ಅನುಭವ ಮಂಟಪದ ಮಹಾಮನೆ

ಏನಗಿಂತ ಕಿರಿಯರಿಲ್ಲೆಂಬ ಸರಳ ಸಜ್ಜನಿಕೆಯ ಶರಣಾಗತಿ
ಶಿವಶರಣರಿಗಿಂತ ಹಿರಿಯರಿಲ್ಲೆಂಬ ಅನುಭವದ ಮಹಾಮತಿ

ಹಸಿದವರಿಗೆ ಅನ್ನವಿಕ್ಕುವ ಮಹಾ ಅನ್ನದಾನ ದಾಸೋಹ
ಇಷ್ಟಲಿಂಗ ಪೂಜಾಕೈಂಕರ್ಯ ಸಾಕಾರ ಶಿವನಿಗಿಷ್ಟು ಸನಿಹ

ದೇಹವಿದು ದೇಗುಲ ನಿಜಭಕ್ತಿಯಲರ್ಚಿಸಲವನು ಸಲಿಲ
ಮೃದುವಚನವೇ ಮಂತ್ರ ಆ ದೇವನೊಲಿಯುವಿಕೆಯ ತಂತ್ರ

ನೀಡಿ ವಚನಾಮೃತ ವಾಣಿ ಬಸವಣ್ಣ ನೀವಾದಿರೆಲ್ಲರ ಕಣ್ಮಣಿ
ಕ್ರಾಂತಿಯ ಹರಿಕಾರ ನಿಜಗುಣ ಭಕ್ತಿ ಭಂಡಾರಿ ಬಸವಣ್ಣ

ಜಗವ ಬೆಳಗಿದ ಜ್ಯೋತಿ ಮಹಾ ಮಾನವತಾವಾದಿ ಬಸವಣ್ಣ
ದೇವನೊಲಿಯುವ ಪರಿಗಿಹುದು ಶರಣು ಶರಣಾರ್ಥಿ ಶರಣ್ಯ

             ಶೈಲೂ......
[23/4/2023, 12:43 pm] Dr. B. N. Shylaja Ramesh: #ಚುಟುಕು


#ಬಂಗಾರ

ಅಕ್ಷಯ ತದಿಗೆಯಂದು ಅರಿಕೆ ಆ ದೇವನಲಿ
ಸಕಲ ಉತ್ತಮೋತ್ತಮ ಗುಣವು ಮೈಗೂಡಲಿ
ಸಿರಿ ಸಂಪತ್ತಿನೊಡನೆ ಬಾಳು ಬಂಗಾರವಾಗಲಿ
ಆಯುರಾರೋಗ್ಯ ವಿದ್ಯಾಬುದ್ಧಿ ಅಕ್ಷಯವಾಗಲಿ

        ಶೈಲೂ....
[23/4/2023, 12:45 pm] Dr. B. N. Shylaja Ramesh: ಹಲವು ಶುಭಗಳ ಪರ್ವದಿನವಿದುವೆ
ವೈಶಾಖ ಶುದ್ಧ ಅಕ್ಷಯ ತದಿಗೆ
ದಾನಗಳಿಗೆ ಅತಿ ಮಹತ್ವವೀದಿನ
ಫಲಗಳು ಅಕ್ಷಯವಾಗಿಸುವ ಸುದಿನ

ವಿಶ್ವವಿಖ್ಯಾತರ ಜನ್ಮಮಹೋತ್ಸವದ ದಿನ
ಕ್ಷತ್ರಿಯ ದ್ವೇಷಿ ಪರುಶುರಾಮನ ಜನನ
ಜಗಜ್ಯೋತಿ ಬಸವೇಶ್ವರರುದಿಸಿದ ದಿನ
ಭರವಸೆಯ ಹೊಸ ಹೊಂಬೆಳಕಿನ ಕಥನ

ಬರೆದನಿಂದು ಗಣಪ ವ್ಯಾಸಭಾರತ
ಭಗೀರಥನೈತಂದ ಗಂಗೆ ಧುಮ್ಮಿಕ್ಕುತ
ಕೃಷ್ಣನೊಲುಮೆಗೆ ವಸ್ತ್ರ ಅಕ್ಷಯವಾಗುತ
ಕ್ಷಯಿಸಿತ್ತಧರ್ಮ ಧರ್ಮಕೆ ಜೈ ಎನುತ

ಚೈತ್ರದ ಗೌರಿಗಿಂದು ವಿಶೇಷ ಪೂಜಾದಿನ
ಅಕ್ಷಯವಾಗುವುದು ಮಂಗಳದ್ರವ್ಯಗಳ ದಾನ
ಕೊಟ್ಟವಗೆ ಕೊಟ್ಟದ್ದು ದುಪ್ಪಟ್ಟು ಫಲವಂತೆ
ಶುಭಕಾರ್ಯದಾರಂಭ ಶುಭಫಲಪ್ರದವಂತೆ

ಅಕ್ಷಯದ ದಿನವಿಂದು ಅರಿಕೆ ಆ ದೇವನಲಿ
ಸಕಲ ಉತ್ತಮೊತ್ತಮ ಗುಣವು ಮೈಗೂಡಲಿ
ಅಕ್ಷಯ ಸಿರಿ ಸಂಪತ್ತಿನೊಡನೆ ಬಾಳಿನಲಿ
ಮೌಢ್ಯ ತೊರೆದು ವಿದ್ಯಾಬುದ್ಧಿ ಅಕ್ಷಯವಾಗಲಿ

          ಶೈಲೂ......
[23/4/2023, 12:48 pm] Dr. B. N. Shylaja Ramesh: ಜಗಜ್ಯೋತಿ ಬಸವೇಶ್ವರ
********************
ಇವ ಮಹಾನ್ಚೇತನ ಯುಗಪುರುಷ
ಕಾಯಕದಲ್ಲೇ ಕೈಲಾಸವ ಕಂಡವ
ಧೀಮಂತನಿವ ಅತಿ ಕರುಣೆಯ ಮನ

ಕಂದಾಚಾರ, ಮೌಢ್ಯಗಳ ಬದಿಗೊತ್ತಿ
ಸಾಮಾಜಿಕ ಅಸಮಾನತೆಗೆ ಮುಕ್ತಿ
ಮಾನವತಾವಾದಕ್ಕೆ ಇವನೇ ಸೂಕ್ತಿ

ಪ್ರತಿಪಾದಕನಿವ ಮಾನವ ಹಕ್ಕುಗಳಿಗೆ
ದಾರಿದೀಪನಿವ ಅತಿ ದೀನ ದಲಿತರಿಗೆ
ಸಮಾನತೆಯಿತ್ತ ಮಹಿಳಾ ಸಾಧಕರಿಗೆ

ಅನುಭವ ಮಂಟಪದ ರೂವಾರಿ
ತೋರಿದನಿವ ಭಕ್ತಿಮಾರ್ಗಕ್ಕೆ ದಾರಿ
ಸರಳತೆಗಿವ ಜಗತ್ತಿಗೇ ಮಾದರಿ

ಜಾತಿಯಿಲ್ಲ,ಭಕ್ತರದ್ದೊಂದೇ ಜಾತಿ ಎಂದ
ದಯೆಯೊಂದೇ ಧರ್ಮಕ್ಕೆ ಮೂಲವೆಂದ
ಸಕಲ ಜೀವರಲಿ ಶಿವ ನೆಲೆಸಿಹನೆಂದ

ಆ ದೇವನಿತ್ತ ಕೊಡುಗೆ ಈ ಭುವಿಗೆ
ದೇವನಂತೆಯೇ ಕಂಡನಿವ ಅರಿತವರಿಗೆ
ಬಸವ ನೀನೇ ಹೊಂಬೆಳಕು ಈ ಜಗತ್ತಿಗೆ

            ಶೈಲೂ......
[14/5/2023, 12:02 pm] Dr. B. N. Shylaja Ramesh: ಎಲ್ಲಾ ಅಮ್ಮಂದಿರಿಗೂ ವಿಶ್ವ ಅಮ್ಮಂದಿರ ದಿನದ ಶುಭಾಶಯಗಳು💐💐💐

#ಅಮ್ಮ

ಅಮ್ಮ ಎಂಬ ಬೃಹತ್
ಆಲದ ಮರದಡಿಯಲ್ಲಿ
ನಾನೊಂದು ಪುಟ್ಟ ಚಿಗುರು
ಕ್ಷಣಕ್ಷಣವೂ ಕಾಪಿಡುವ
ಆ ನಿಸ್ವಾರ್ಥ ಮೂರ್ತಿಗೆ
ದೇವನಿಟ್ಟ ಅಮ್ಮಾ ಎಂಬ ಹೆಸರು

ಅದೆಷ್ಟು ಕಷ್ಟಗಳ ಸಹಿಸಿ
ದಹಿಸಿ ಹೋಗುತ್ತಿದ್ದರೂ
ನಗುವೇ ಅವಳ ಬಂಡವಾಳ
ಕ್ಷಣಕ್ಷಣವೂ ಬೇಸತ್ತು ಬಳಲಿ
ಬೆಂಡಾದರೂ ಅರಿಯಲಿಲ್ಲವಳ ಅಂತರಾಳ

ತಾನುಂಡಳೋ ಇಲ್ಲವೋ
ಮನೆ ಮಂದಿಯ ಹಸಿವೆ
ನೀಗಿಸುವ ಅಮ್ಮ ಅನ್ನಪೂರ್ಣೆ
ನೂರು ನೋವಿತ್ತವರನೂ
ಕ್ಷಮಿಸಿ ಆದರಿಸುವ ಅಮ್ಮ
ದೈವದಂತವಳು ಸದಾಪೂರ್ಣೆ

ಕರುಳಕುಡಿಯ ಕಾಪಿಡಲು
ಉತ್ತಮ ವ್ಯಕ್ತಿತ್ವ ರೂಪಿಸಲು
ಅಮ್ಮನೇ ಮುಖ್ಯ ಪಾತ್ರಧಾರಿಣಿ
ಮೊದಲ ಗುರುವಾಗಿ ಕಲಿಸಿ
ಅಕ್ಕರಗಳ ತಿದ್ದಿತೀಡಿ ಬೆಳೆಸಿ
ಎತ್ತೆತ್ತರಕ್ಕೆ ಬೆಳೆಯಲಿವಳು ಸೂತ್ರಧಾರಿಣಿ

ಪದಗಳುಂಟೆ ಬಣ್ಣಿಸಲವಳ
ಅದಾವ ಪದಗಳಿಗೂ ನಿಲುಕದ
ಅಮ್ಮನದು ನಿಜದಿ ಮೇರು ವ್ಯಕ್ತಿತ್ವ
ಬರೀ ದೇವತೆಯಲ್ಲವಳು
ಆ ದೇವರಿಗಿಂತಲೂ ಮಿಗಿಲು
ವರ್ಣನೆಗೂ ನಿಲುಕದವಳ ಶುದ್ಧ ಮಾತೃತ್ವ

     ಡಾ: B.N.ಶೈಲಜಾ ರಮೇಶ್
[14/5/2023, 12:04 pm] Dr. B. N. Shylaja Ramesh: Happy mother's day💐💐💐

            ಅಮ್ಮ” ಎಂಬ ಎರಡಕ್ಷರದಲ್ಲಿ ಅದೆಂಥಾ ಮಾಂತ್ರಕತೆಯಿದೆ! ಆ ಶಬ್ದ ಮಾತ್ರ ಉಳಿದ ಶಬ್ದಗಳಂತೆ ಅಧರದಿಂದ ಹೊರಡದೇ ಹೃದಯದಿಂದ ಹೊರಡುತ್ತದೆ. ಇದು ಅತ್ಯಂತ ಹೆಚ್ಚು ಬಾರಿ ಉಚ್ಛರಿಸಲ್ಪಡುವ ಶಬ್ದವೂ ಹೌದು. ಪುಟ್ಟ ಮಗು ಸಂಪೂರ್ಣವಾಗಿ ಅಮ್ಮನನ್ನು ಆಶ್ರಯಿಸಿರುತ್ತದೆ. ಸಂತೋಷವಾದರೂ, ದುಃಖವಾದರೂ, ಭಯವಾದರೂ, ಬಿದ್ದು ನೋವು ಮಾಡಿಕೊಂಡರೂ ಮಗುವಿನ ಬಾಯಿಂದ ಮೊದಲು ಹೊರಬೀಳುವ ಶಬ್ದ “ಅಮ್ಮಾ.” ಎಂದಾಗಿರುತ್ತದೆ. ಮಗು ಬೆಳೆದು ಎಷ್ಟೇ ದೊಡ್ಡವನಾ/ಳಾದರೂ “ಅಮ್ಮ” ಎಂಬ ಆಪ್ತ ಸಂಬಂಧದಿಂದ ಕಳಚಿಕೊಳ್ಳಲು ಸಾಧ್ಯವೇ ಇಲ್ಲ. ಕ್ರೂರ ಹೃದಯದ ಕಟುಕನಿಗೂ “ಅಮ್ಮ” ಎಂಬ ಪದ ಉಚ್ಛರಿಸುವಾಗ ಮನಸ್ಸು ಆರ್ದ್ರವಾಗುತ್ತದೆ.

          ‘ಅಮ್ಮ’. ಎಂತಹ ಕ್ರೂರ ಹೃದಯವನ್ನು ಕೂಡ ಒಂದು ಕ್ಷಣಕ್ಕೆ ಹೂವಾಗಿಸಬಲ್ಲ ಏಕೈಕ ಪದ. ಕೇಳಿದ ತಕ್ಷಣ ಮೊಗದಲ್ಲಿ ಕಿರುನಗು ತರಿಸಬಲ್ಲ ಪದ. ಬುದ್ಧಿ ಬಲಿತಿರದ ಒಂದು ಪುಟ್ಟ ಮಗು ಕೂಡ ಕೇಳಿದ ತಕ್ಷಣ ಸಂತಸದಿ ನಲಿಯುವಂತೆ ಮಾಡುವ ಪದ. ಅದರ ಶಕ್ತಿಯೇ ಅಂತಹುದು. ಆ ವ್ಯಕ್ತಿತ್ವವೇ ಅಂತಹುದು. ಆಕೆ ಮಮತಾಮಯಿ. ಪ್ರೀತಿಯ ಸಾಕಾರಮೂರ್ತಿ.

          ನಮ್ಮನ್ನು ಒಂಭತ್ತು ತಿಂಗಳುಗಳ ಕಾಲ ತನ್ನ ಗರ್ಭದಲ್ಲಿ ಇಟ್ಟುಕೊಂಡು ಕಾಪಾಡಿ, ಅಲ್ಲಿಂದ ಹೊರಬರುತ್ತಿದ್ದಂತೆ ತನ್ನ ಮಡಿಲಿನಲ್ಲಿ ಮಲಗಿಸಿ ಎದೆಹಾಲೆಂಬ ಅಮೃತಪಾನ ಮಾಡಿಸುವ ದೇವತೆಗಳ ದೇವತೆ ಅವಳು. ಈ ಜಗತ್ತಿನಲ್ಲಿ ಪರಿಚಯದ ಅವಶ್ಯಕತೆಯಿರದ ಏಕೈಕ ಸಂಬಂಧ ಎಂದರೆ ತಾಯಿ-ಮಗುವಿನ ಸಂಬಂಧ. ಅವಳ ಪ್ರೀತಿಯನ್ನು ಪದಗಳಲ್ಲಿ ಹಿಡಿದಿಡಲು ಬಹುಷಃ ಯಾವ ಭಾಷೆಯಲ್ಲೂ ಸಾಧ್ಯವಾಗದು. ಪ್ರತಿಫಲಾಪೇಕ್ಷೆ ಇಲ್ಲದೇ ತನ್ನಿಂದ ಸಾಧ್ಯವಾಗುವುದೆಲ್ಲವನ್ನೂ ತನ್ನ ಮಗುವಿಗೆ ಧಾರೆಯೆರೆಯುವವಳು ತಾಯಿ. ಮಗುವಿನ ಪುಟ್ಟ ಪುಟ್ಟ ಹೆಜ್ಜೆಗಳ ಜೊತೆ ಹೆಜ್ಜೆ ಹಾಕುತ್ತ ಹಾಕುತ್ತ ತಾನೆ ಮಗುವಾಗುವ ಮುಗ್ಧ ಮನಸು ತಾಯಿಯದು. ಆಕೆಯ ವ್ಯಕ್ತಿತ್ವ ಅಂತಹುದು-ಇಂತಹುದು ಎಂದು ಹೇಳಹೊರಟರೆ ಅದು ಹುಚ್ಚುತನವಾದೀತು. ಏಕೆಂದರೆ ಆಕೆಯದು ಪರಿಪೂರ್ಣ ವ್ಯಕ್ತಿತ್ವ. ಅದನ್ನು ವಿವರಿಸಲು ಸಹ ಶಕ್ಯವಿಲ್ಲದ ಅಪರಿಪೂರ್ಣತೆ ನನ್ನದು.

      ‘ಅಮ್ಮ’ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ? ” ಎಂಬ ಸಾಲಿನಂತೆ, ನೀವು ನೂರು ದೇವರುಗಳನ್ನು ನೂರು ರೀತಿ ಬೇಡಿಕೊಳ್ಳುವ ಬದಲು, ವಿಧವಿಧದ ಹರಕೆ ಹೊತ್ತು ದೇವಸ್ಥಾನಗಳಲ್ಲಿ ಉರುಳು ಸೇವೆ ಮಾಡುವ ಬದಲು, ‘ಅಮ್ಮ’ ಎಂದು ಒಮ್ಮೆ ಮನಸ್ಪೂರ್ವಕವಾಗಿ ಕರೆದರೆ ಅದರಷ್ಟು ಪುಣ್ಯ ಇನ್ಯಾವುದೂ ಇಲ್ಲ. ಆಕೆಗೊಂದಿಷ್ಟು ಪ್ರೀತಿ ತೋರಿಸಿದರೆ ಸಾಕು ಎಲ್ಲ ದೇವರುಗಳ ಆಶೀರ್ವಾದವೂ ಒಮ್ಮೆಲೇ ನಮ್ಮದಾಗುವುದು. ನಾವು ಹೇಳದೇ ನಮ್ಮ ಎಲ್ಲ ಆಸೆಗಳನ್ನು ಪೂರೈಸುವ ಒಬ್ಬಳೇ ದೇವರು ಎಂದರೆ ಅದು ತಾಯಿ. ಈ ಸಮಯದಲ್ಲಿ ತಾಯಿಯ ಬಗೆಗಿನ ಇನ್ನೊಂದು ಸಾಲು ನೆನಪಾಗುತ್ತಿದೆ; “ಬ್ರಹ್ಮ, ವಿಷ್ಣು, ಶಿವ ಎದೆ ಹಾಲು ಕುಡಿದರು. ತಾಯಿ ನೀನೆ ದೈವ ಎಂದು ಕೈಯ ಮುಗಿದರು”. ತಾಯಿಯ ಶ್ರೇಷ್ಠತೆಯನ್ನು ಬಿಂಬಿಸಲು ಬಳಸಿಕೊಂಡ ಅತಿ ಸುಂದರವಾದ ಸಾಲುಗಳವು. ನಾವೆಲ್ಲ ರಾಶಿಗಟ್ಟಲೆ ಬೇಡಿಕೆಗಳನ್ನು ಯಾರ ಮುಂದಿಡುತ್ತೇವೋ, ಆ ಹರಿ ಹರ ಬ್ರಹ್ಮರಿಗೂ ಎದೆಹಾಲು ಕುಡಿಸಿದ ಒಬ್ಬ ತಾಯಿ ಇದ್ದಾಳೆ; ಆ ತಾಯಿಗೆ ತ್ರಿಮೂರ್ತಿಗಳೂ ತಲೆಬಾಗುತ್ತಾರಂತೆ. ಅಂದಮೇಲೆ ಆ ವ್ಯಕ್ತಿತ್ವದ ಎತ್ತರದ ಎದುರು ನಾವೆಲ್ಲರೂ ಅದೆಷ್ಟು ಕುಬ್ಜರು ಎಂಬುದನ್ನು ಅರಿಯಬಹುದು. ಆಕೆ ತಾಳ್ಮೆಯ ಭೌತಿಕರೂಪ. ಪುಟ್ಟ ಮಗುವಾಗಿರುವಾಗ ತನ್ನ ಪುಟ್ಟ ಕಾಲ್ಗಳಿಂದ ಮಡಿಲನ್ನು ತುಳಿಯುವ ಮಗುವನ್ನು ತಾಳ್ಮೆಯಿಂದ ಸಹಿಸಿ ಮುದ್ದಾಡುವ ತಾಯಿ ಅದೇ ಮಗು ಬೆಳೆದು ದೊಡ್ಡದಾಗಿ ತನ್ನನ್ನು ತಿರಸ್ಕರಿಸಿ ತನ್ನ ಮಾತುಗಳಿಂದ ತುಳಿದು ಮನೆಯಿಂದ ಹೊರಹಾಕಿದರೂ ಅದನ್ನು ಕೂಡ ಅಷ್ಟೇ ತಾಳ್ಮೆಯಿಂದ ಸಹಿಸಿ ತನ್ನ ಕರುಳ ಕುಡಿಗೆ ಒಳಿತನ್ನೇ ಹಾರೈಸುತ್ತಾಳೆ. ಬೇರೆ ಯಾವುದಾದರೂ ವ್ಯಕ್ತಿ ಅಥವಾ ಸಂಬಂಧದಿಂದ ಇದನ್ನು ನಿರೀಕ್ಷಿಸಲು ಸಾಧ್ಯವೇ? ಖಂಡಿತ ಇಲ್ಲ.

        ಅಮ್ಮ ಎಂದರೆ ದೇವರು ಎನ್ನುತ್ತಾರೆ. ಅದು ಸುಲಭವಾಗಿ ಸಿಗುವ ಹೋಲಿಕೆ ಕೂಡ. ಆದರೆ ಅಮ್ಮನನ್ನು ನಾನು ದೇವರಿಗೆ ಹೋಲಿಸುವುದಿಲ್ಲ. ಏಕೆಂದರೆ, ಬೇಕೆಂದಾಗ ದೇವರು ನಮ್ಮ ಕೈಗೆ ಸಿಗುವುದಿಲ್ಲ. ಅಮ್ಮ ಹಾಗಲ್ಲ – ನನ್ನ ಕಷ್ಟಸುಖಗಳಿಗೆ ಜೊತೆಯಾಗಿ ಸದಾ ನನ್ನೊಂದಿಗೆ ಇರುತ್ತಾಳೆ. ಆದ್ದರಿಂದ ಅಮ್ಮ ‘ನನ್ನ ಆಪ್ತಗೆಳತಿ’ ಎಂದು ಹೇಳಿಕೊಳ್ಳುತ್ತೇನೆ.   ಯಾರೊಂದಿಗೂ ಹೇಳಿಕೊಳ್ಳಲಾಗದ ವಿಷಯವನ್ನು ಅಮ್ಮನ ಹತ್ರ ಹೇಳಿ ಮನಸ್ಸನ್ನ ಹಗುರಾಗಿಸಿಕೊಳ್ತೀನಿ...ಅಮ್ಮನನ್ನ ಮನಸ್ಸಿನ ನೋವಿನ ಮುಲಾಮು...ಅದೆಷ್ಟೇ..ಜಟಿಲ ಸಮಸ್ಯೆಯನ್ನೂ ಕ್ಷಣಾರ್ಧದಲ್ಲಿ ಪರಿಹರಿಸುವ ನನ್ನಮ್ಮ ನಿಜಕ್ಕೂ ದೇವತೆಯೇ.

          83 ರ ಇಳಿ ವಯಸ್ಸಿನಲ್ಲೂ... ವಯೋಸಹಜ ಅನಾರೋಗ್ಯ ದಿಂದ ಬಳಲುತ್ತಿದ್ದರೂ ಇಂದಿಗೂ ಉತ್ಸಾಹದ ಚಿಲುಮೆ ನನ್ನಮ್ಮ... ಈಗಲೂ.ಕಲಿಕೆಯಲ್ಲಿ ಅದೆಷ್ಟು ಆಸ್ಥೆ...ಯಾವುದೇ ವಿಚಾರವನ್ನೂ ಆಮೂಲಾಗ್ರವಾಗಿ ಕಲಿಯಬೇಕೆನ್ನುವ ನನ್ನಮ್ಮ...ಕಲಿಯುವವರಿಗೆ ಸ್ಫೂರ್ತಿ.  ಕಷ್ಟಗಳ ಸರಮಾಲೆಯಲ್ಲೇ ನಲುಗಿ ಹೋಗಿದ್ದರೂ...ಯಾವುದನ್ನೂ ತೋರಗೊಡದೆ.. ನಿತ್ಯ ನಳನಳಿಸುವ  ನನ್ನಮ್ಮ ಎಂದಿಗೂ ಬಾಡದ ಹೂವು... ಆ ಹೂವ ಸೌಗಂಧವ  ಅಘ್ರಾಣಿಸುತ್ತಾ ಬೆಳೆದ ನಾನು ನಿಜಕ್ಕೂ ಧನ್ಯೇ🙏
       ಡಾ:B.N. ಶೈಲಜಾ ರಮೇಶ್
[22/5/2023, 6:58 am] Dr. B. N. Shylaja Ramesh: ಕಂದನ ಮೂಗಿನ ಸುತ್ತ
ಗಿರಕಿ ಹೊಡೆಯುತ್ತ
ಅನುಮಾನದ ಹುತ್ತ
ಬೆಳೆಯಿತು ಗಂಡನತ್ತ
ತಿರುತಿರುಗಿ ನೋಡುತ್ತ
ಕ್ರೋಧ ಭುಸುಗುಡುತ್ತ
ಆ ಬಡಪಾಯಿ ಜೀವಿತ
ಅಂತ್ಯವಾದೀತಾ....?
[23/5/2023, 6:28 pm] Dr. B. N. Shylaja Ramesh: ಚಂದದ ಕವನ ಜಾನೂ
ಮನಕಲಕಿತು..😔

ಹೋಗಿ ಬಾ ಎನ್ನೊಡೆಯ
ಮತ್ತೆ ಹಿಂತಿರುಗಿ ಬರುವ ಕನಸನ್ಹೊತ್ತು
ತರಿದು ಬಾ ಶತ್ರುಗಳೆದೆಯ
ದಾರಿಕಾಯುತ್ತಿರುವೆ ಬಾಗಿಲಲಿ ನಿಂತು

ನೀ ವೀರ ಸೈನಿಕ ಗಂಡುಗಲಿ
ಭಾರತಾಂಬೆಯ ರಕ್ಷಣೆಯ ಹೊಣೆಯಿದೆ
ಪ್ರತಾಪ ತೋರಿಸು ಗಡಿಯಲಿ
ನೀ ಗೆದ್ದೇ ತೀರುವೆಯೆಂಬ ನಂಬಿಕೆಯಿದೆ

ಆಶಾವಾದವ ಹೊತ್ತು ಹೊರಡು
ಗೆಲುವ ಅವಕಾಶ ತಂತಾನೇ ತೆರೆಯುದು
ಏನಾಗುವುದೋ ಎಂಬ ಭಯಬಿಡು
ರಣಕಲಿ ನಿನಗದು ಶೋಭಿಸದು

(ಸಮಾಧಾನಕ್ಕೋಸ್ಕರ ಇಲ್ಲೇ ಟೈಪಿಸಿದೆ)
[2/6/2023, 8:22 pm] Dr. B. N. Shylaja Ramesh: #ಕೊನೆಕಾಣದಆಸೆಗಳು 

ಬದುಕಿದು ಬಯಕೆಗಳ ಸಂತೆ
ದಿನದಿನವೂ ಒಂದೊಂದು ಚಿಂತೆ
ಕೈಗೂಡದ ಬಯಕೆಯ ಮಧ್ಯದಲೂ
ನೂರಾಸೆಯ ಹೊತ್ತ ಕನಸುಗಳು..!

ಎಂದಿಗೂ ಎಟುಕಲಾರದ ಆಕಾಶ 
ಯಾವುದಕ್ಕೂ ಸಿಗದ ಅವಕಾಶ
ಬದುಕ ಬವಣೆಯ ಮಧ್ಯದಲೂ
ಮಿಂಚಿ ಮರೆಯಾದ ಆಸೆಗಳು..!

ತೂಗುತಿದೆ ನಡುನೆತ್ತಿಯ ಮೇಲೆ ಕತ್ತಿ
ಜೀವ ನೋವಲಿ ಉರಿಯುತ್ತಿದೆ ಹೊತ್ತಿ 
ಸಾವಿನೊಡನಾಟದ ಮಧ್ಯದಲೂ...
ಕೊನೆಯೇ ಕಾಣದ ಆಸೆಗಳು...!

ಆಸೆ ಎಂಬುದು  ಹೀಗೆಯೇ ಏನೋ..!
ಬೆಂಬಿಡದ ಭೂತದಂತಿರಬಹುದೇನೋ
ಮನವ ಹಿಡಿದಿಡುವಾಟದ ಮಧ್ಯದಲೂ
ದುತ್ತನೆದುರು ನಿಲ್ಲುವ ತೀರದ ಆಸೆಗಳು..!

ಡಾ: ಬಿ. ಎನ್ ಶೈಲಜಾ ರಮೇಶ್
[2/6/2023, 10:32 pm] Dr. B. N. Shylaja Ramesh: #ನನ್ನೊಲವಿನ_ಹೂವು 

ಬಾಳೆಂಬ ಹೂದೋಟದಲಿ
ಅರಳಿದೆ ನಿನ್ನ ನಗೆಯ ಮಲ್ಲಿಗೆ.!
ನೀ ಬೀರುವ ಪ್ರೀತಿ ಪರಿಮಳವ
ಆಗ್ರಾಣಿಸಲು ನಾ ಬಂದೆ ಮೆಲ್ಲಗೆ.!
[3/6/2023, 7:05 pm] Dr. B. N. Shylaja Ramesh: #ಎಟುಕದ_ನಕ್ಷತ್ರ 

ಎಟುಕದ ನಕ್ಷತ್ರವಾಗಿಬಿಟ್ಟೆ
ನೀ ನನ್ನ ಪಾಲಿಗೆ
ಕತ್ತಲೆಯನ್ನೇ ಸುರಿದೆಯೇಕೆ 
ಈ ನನ್ನ ಬಾಳಿಗೆ..

ನೀ ಮಿಂಚಿ ಮರೆಯಾಗಿಬಿಟ್ಟೆ
ಅದಮ್ಯ ಆಸೆ ಬಿತ್ತಿ
ಟಿಸಿಲನ್ನೇ ಕಿತ್ತೆಸೆದೆಯೇತಕೆ
ತೀರದ ಕಳಂಕ ಮೆತ್ತಿ..

ಹಗಳಿರುಳೂ ನಿನ್ನದೇ ಧ್ಯಾನ
ಆರಾಧ್ಯ ದೈವ ನೀನೇ
ನಿಲುಕದ ತಾರೆಯಾದರೇನಂತೆ 
ಎಂದಿಗೂ ಪ್ರಾಣ ನೀನೇ..

ಎಂದಿಗಾದರೊಂದು ದಿನ ನೀ
ಸಿಗುವೆ ಎಂಬಾಸೆ ಹೊತ್ತು 
ಕಾಯುವೆನು ನಿನಗಾಗಿ ನಾ..
ನಗುನಗುತಲೇ ನೀ ಬರುವ ಹೊತ್ತು..

ಡಾ: ಶೈಲಜಾ ರಮೇಶ್
[3/6/2023, 8:01 pm] Dr. B. N. Shylaja Ramesh: #ಪಂಜರದ_ಪ್ರೇಮಿ 

ನಿನ್ನ ಹೃದಯ ಪಂಜರದಲಿ
ಬಂಧಿಸಲ್ಪಟ್ಟ ಪ್ರೇಮ ಖೈದಿ ನಾನು
ನಿನ್ನ ಮನವ ಕದ್ದ ಶಿಕ್ಷೆಗೆ
ಹೃದಯದಲೇ ಬಂಧಿಸಿಟ್ಟೆಯೇನು.?

ಈ ಬಂಧನದಲ್ಲಿದೆ ಸಂತೃಪ್ತಿ
ಅನಂತವಿದೆ ಸುಖದ ಸೋಪಾನ
ದಿನವೂ ಹೊಸತನದ ದೀಪ್ತಿ 
ಪ್ರತಿಕ್ಷಣವೂ ಪ್ರೇಮ ಸುರಾಪಾನ.!

ನಿನ್ನ ಪ್ರೇಮ ಪಂಜರದಲ್ಲಿದೆ 
ಕಟ್ಟಿಹಾಕದ ಸ್ವತಂತ್ರತೆಯವಕಾಶ
ಖುಷಿಯಲ್ಹಾರುವ ಅರಗಿಣಿ ನಾ 
ಪಂಜರವಲ್ಲವಿದು ಅನಂತ ಆಕಾಶ.!


ಡಾ: ಶೈಲಜಾ ರಮೇಶ್
[11/6/2023, 11:03 am] Dr. B. N. Shylaja Ramesh: #ಆಂತರಿಕ_ಶತ್ರುಗಳು 

ಹೊರಜಗತ್ತಿನ ಶತ್ರುಗಳಿಗಿಂತ
ಆಂತರಿಕ ಶತ್ರುಗಳೇ ಅಪಾಯಕಾರಿ.!
ಹೊರ ಶತ್ರುಗಳ ದಮನಿಸಬಹುದು
ತನ್ನೊಳ ಶತ್ರು ನಡೆ ಬಹು ವಿಸ್ಮಯಕಾರಿ.!

ಎಲ್ಲ ಸರಿ ಇಹುದೆಂದು ಬೀಗುತ್ತಿದ್ದರೆ
ಎಲ್ಲಿಂದಲೋ ತೂರಿ ಬರುವುದು ರಾಗದ್ವೇಷ
ಅಲ್ಲಲ್ಲೇ ಅದುಮಿಡಲು ಬಯಸಿದರೆ
ಹಿಡಿತಕ್ಕೆ ಸಿಗದೆಂದೆಂದಿಗೂ ಲವಲೇಶ.!

ಆಸೆಗಳ ತೊರೆದೆನೆಂದುಕೊಂಡರೆ
ಬೆನ್ಹತ್ತಿ  ಬರುವುದು ವಿಷಯಾಸಕ್ತಿ ಹಿಂಡು.!
ಹೋಗಲಿ ತಣಿಸುವೆನೆಂದ್ಹೊರಟರೆ 
ಓಡೋಡಿಬಂದೆರಗುವುದು ಕಾಮನೆಗಳ ದಂಡು.!

ತನಗಿಂತ ಹಿರಿಯನಾದರೆ ಒಬ್ಬ
ಸಹಿಸಲಸಾಧ್ಯ ಅಸೂಯೆಯ ಮಾಯೆ.!
ಕೆಳಗೆ ಬಿದ್ದವನಿಗಿಂತ ತಾ ಹಿರಿದಾಗೆ
ಮದವೇರುವುದು ಅಹಂಕಾರದ ಛಾಯೆ.!

ಡಾ: ಶೈಲಜಾ ರಮೇಶ್
[13/6/2023, 2:29 pm] Dr. B. N. Shylaja Ramesh: Very nice 👍

ತೆರೆದಿದೆ ಮನೆ ಮನದ ಬಾಗಿಲು
ಇಷ್ಟವಿದ್ದವರು ಒಳಗೆ ಬರಲು
ಕಷ್ಟವಾದರೆ ಹೊರ ಹೋಗಲು

ಸ್ವಾಗತವಿದೆ ಅನಿಸಿಕೆಗಳಿಗೆಲ್ಲ
ಹೀಗೇತಕೆಂದು ಪ್ರಶ್ನಿಸುವುದಿಲ್ಲ
ಇಷ್ಟಾನಿಷ್ಠವ ಹೇರುವುದೂ ಇಲ್ಲ

ಸ್ವಚ್ಛ ಸ್ನೇಹಕ್ಕೆ ಆದರದ ಸ್ವಾಗತ
ಬಿಚ್ಚು ಮನಸಿಗೆ ಬಾಗಿ ನಮಿಸುತ
ರಚ್ಚೆ ಹಿಡಿವವರಿಗೆ ವಿದಾಯ ಕೋರುತ

ಅವರವರ ಭಾವಕ್ಕೆ ಅವರವರ ಭಕುತಿಗೆ
ಭೇದವೆಣಿಸದೆ ಕೊಟ್ಟ ಸ್ನೇಹ ಪ್ರೀತಿಗೆ..!
ನಿಲುಕುವುದು ಈ ಮನ ತನ್ನ ಶಕುತಿಗೆ..!

ತೆರೆದಿದೆ ಮನೆ, ಓ... ಬಾ ಅತಿಥಿ..!
ಕರೆದು ಆದರಿಸುವುದೆಮ್ಮ ರೀತಿ ನೀತಿ
ಬಹುದೋ..ಬಾಹುದೋ ಅದು ನಿಮ್ಮ ಪ್ರೀತಿ.!
😊
[13/6/2023, 10:04 pm] Dr. B. N. Shylaja Ramesh: ದುಗುಡ ಸಾಗರದ ತೀರದಲ್ಲಿ
ಭಾವನೆಗಳ ಮೌನ ಯಾನ.!
ದಡಕ್ಕಪ್ಪಳಿಸುವ ಅಲೆಗಳಂತೆ
ನೋವಿನೆಳೆಯ ತೊಂತನನ.!

ಹೊಸೆದ ಕನಸುಗಳ ನಡುವೆ
ಬೆಸೆದಿದ್ದ ಬಂಧನದ ಕಡಿತ..!
ಹಳಸಿದ ಸಂಬಂಧದ ಜೊತೆ
ಮರೆಯಲೇ ಆಗದ ಮಿಡಿತ.!

ನವಿರು ಭಾವಗಳ ಹೊಸಕಿ
ಧುತ್ತನೆದುರು ಬರುವ ನೋವು
ಮಡುವುಗಟ್ಟಿದ ದುಗುಡ
ಎಂದಿಗೂ ಮಾಯಲಾರದ ಬಾವು.!

ನೋವು ಬಾವುಗಳ ಜೊತೆಯೇ
ಸಾಗುತಿದೆ ಬದುಕ ನಾವೆ...!
ಎಲ್ಲ ಆಗುಹೋಗುಗಳ ನಡುವೆ
ಜೀವನದ ಜವಾಬ್ದಾರಿ ನಾವೇ..!

    ಡಾ: ಶೈಲಜಾ ರಮೇಶ್

ನಿನ್ನ ಚಂದದ ಸಾಲುಗಳಿಗೆ ನನ್ನದೊಂದು ಭಾವ ಸ್ಪಂದನ  ಲತಾ😊
ಸುಮ್ಮನಿದ್ದರೂ ಬರೆಸುವಂಥ ಚಿತ್ರಗಳು ಭಾರತಿ ಸರ್...
ತುಂಬಾನೇ ಚಂದವಿದೆ😊
[14/6/2023, 3:57 pm] Dr. B. N. Shylaja Ramesh: #ಆಂತರಿಕ_ಶತ್ರುಗಳು 

ಹೊರಜಗತ್ತಿನ ಶತ್ರುಗಳಿಗಿಂತ
ಆಂತರಿಕ ಶತ್ರುಗಳೇ ಅಪಾಯಕಾರಿ.!
ಹೊರ ಶತ್ರುಗಳ ದಮನಿಸಬಹುದು
ತನ್ನೊಳ ಶತ್ರು ನಡೆ ಬಹು ವಿಸ್ಮಯಕಾರಿ.!

ಎಲ್ಲ ಸರಿ ಇಹುದೆಂದು ಬೀಗುತ್ತಿದ್ದರೆ
ಎಲ್ಲಿಂದಲೋ ತೂರಿ ಬರುವುದು ರಾಗದ್ವೇಷ
ಅಲ್ಲಲ್ಲೇ ಅದುಮಿಡಲು ಬಯಸಿದರೆ
ಹಿಡಿತಕ್ಕೆ ಸಿಗದೆಂದೆಂದಿಗೂ ಲವಲೇಶ.!

ಆಸೆಗಳ ತೊರೆದೆನೆಂದುಕೊಂಡರೆ
ಬೆನ್ಹತ್ತಿ  ಬರುವುದು ವಿಷಯಾಸಕ್ತಿ ಹಿಂಡು.!
ಹೋಗಲಿ ತಣಿಸುವೆನೆಂದ್ಹೊರಟರೆ 
ಓಡೋಡಿಬಂದೆರಗುವುದು ಕಾಮನೆಗಳ ದಂಡು.!

ತನಗಿಂತ ಹಿರಿಯನಾದರೆ ಒಬ್ಬ
ಸಹಿಸಲಸಾಧ್ಯ ಅಸೂಯೆಯ ಮಾಯೆ.!
ಕೆಳಗೆ ಬಿದ್ದವನಿಗಿಂತ ತಾ ಹಿರಿದಾಗೆ
ಮದವೇರುವುದು ಅಹಂಕಾರದ ಛಾಯೆ.!

ಹೊರಗೇನಿಲ್ಲ ಶತ್ರುಗಳ ಪಡೆ
ತನ್ನೊಳಗಡೆಯೇ ನಿಂತು ಅಟ್ಟಹಾಸ
ಅರಿಷಡ್ವೈರಿಗಳ ವಿಪರೀತ ನಡೆ
ದಾರಿತಪ್ಪಿಸುವುದೆಂಥ ವಿಪರ್ಯಾಸ..!

ಡಾ: ಶೈಲಜಾ ರಮೇಶ್
[14/6/2023, 5:17 pm] Dr. B. N. Shylaja Ramesh: #ನೀನಿರದ_ಜೀವನ 

ನೀನಿರದ ಈ ಜೀವನ
ಮರಳುಗಾಡಿನ ಪಯಣ
ತಂಬೆಲರಿಲ್ಲದೇ ಜೀವ
ಆದೀತ್ಹೇಗೆ ಪಾವನ..?

ನೀನಿರದ ನಾನು
ನೀರಿರದ ಮೀನು
ವಿಲವಿಲನೊದ್ದಾಡಿ
ಅಸು ನೀಗದೇನು..?

ನಿನ್ನೊಂದಿಗಿನ ಬಾಳು
ಸಿಹಿಮಾವಿನ ಹೋಳು
ತುಸು ಹೆಚ್ಚೇ ಸವಿದು
[14/6/2023, 10:42 pm] Dr. B. N. Shylaja Ramesh: ಎತ್ತ ನೋಡುವೆ ಮುಗುದೆ
ಇತ್ತ ತಿರುಗೊಮ್ಮೆ
ಚಿತ್ತ ಭಿತ್ತಿಯಲೆಲ್ಲ ತರಳೆ
ಕತ್ತಲಾವರಿಸಿತೇನೆ ?

ಮುಖವ ಮರೆಸಿದರೇನು
ದುಃಖ ದೂರವಾಗುವುದೇ.?
ಅತ್ತು ಕಣ್ಣೊರೆಸಿದರೇನು
ಛಾಯೆ ಕಾಣದಿಹುದೇ..?

ಸಿರಿ ಮೊಗದಿ ನಗು ಬರಲಿ
ದುಗುಡ ಬದಿಗೆ ಸರಿಸಿ
ನಗೆಮಲ್ಲೇ ಅರಳಿ ನಗಲಿ
ಬದುಕ ಸಂಭ್ರಮಿಸಿ..!

ಜೀವನವಿದು ಎಲ್ಲ ಇಹುದು
ನೋವು ನಲಿವಿನ ಸಮ್ಮೇಳ
ದುಃಖ ದೂರವಿರಿಸಿ ನಗುವುದೇ
ಬಾಳ  ಹಸನಾಗಿಸುವ ದಾಳ.!

ಶೈಲಜಾ ರಮೇಶ್
[15/6/2023, 3:01 pm] Dr. B. N. Shylaja Ramesh: ಎಲ್ಲ ಮೋಹವ ಬಿಟ್ಟು
ಕೈಯ ಕೈಯೊಳಗಿಟ್ಟು
ಜಗದ ಜಂಜಡ ತೊರೆದು
ದೂರ ಹೋಗುವ ಬಾ....

ದಣಿದಿರುವೆ ಬಹಳವೇ
ವಿಶ್ರಾಂತಿ ಬಯಸುವೆ
ನೋವಿತ್ತ ಸಂಸಾರಸಾಗರವ
ತೊರೆದು ಹೋಗುವ ಬಾ...

ಹರೆಯದ ಕಾಲದಲಿ
ಜಗದ ವ್ಯಾಪಾರದಲ್ಲಿ
ಮುಳುಗಿ ಹೋಗಿದ್ದು ಸಾಕು
ನಮ್ಮ ನಾವರಿಯೋಣವೀಗ ಬಾ...

ದುಡಿದುಡಿದು ದಣಿದು
ದೇಹ ಬಾಗಿದೆ ಸವೆದು
ಕಸುವಿಲ್ಲದ ಮೇಲಿನ್ನು
ಮಕ್ಕಳಿಗೆ ಹೊರೆಯಾಗದೇನು.?

ರೆಕ್ಕೆ ಬಲಿತ ಹಕ್ಕಿಗಳವರು
ಪುರ್ರೆಂದು ಹಾರಿ ಹೋದಾರು
ಗೂಡು ಬರಿದಾಗುವ ಮುನ್ನ
ನಾವೇ ಹೊರಡೋಣ ಬಾ....

ನಿನಗಾಸರೆಯಾಗುವೆನೆಂದು
ಸಪ್ತಪದಿ ತುಳಿದು ಕರೆತಂದು
ಬಟ್ಟ ಬಯಲಲ್ಲಿ ನಿಂತಿಹೆವಿಂದು😔
ಸಾಧ್ಯವಾದರೆನ್ನ ಮನ್ನಿಸಿಬಿಡು🙏🙏

ನಿಮ್ಮ ಬರಹಕ್ಕೆ ನನ್ನ ಮನದಲುದಿಸಿದ್ದು  ಹೀಗೆ... ವಿಜಯ ನಿರ್ಮಲ😊
[15/6/2023, 10:24 pm] Dr. B. N. Shylaja Ramesh: #ಮರೆಯಾಗಿ_ಹೇಗಿರುವೆ 
ದಿನವೂ ಇಣುಕುತ್ತಿದ್ದೇ
ಉದಯ ಸೂರ್ಯನ ಹಾಗೆ
ಬಾಳ ಬಾನ ಬಯಲಲಿ
ಕಿರಣ ಚೆಲ್ಲಿ ಬಾಳು ಬೆಳಗಿ..!

ನಿತ್ಯವೂ ಹುಣ್ಣಿಮೆಯೇ
ನಗೆ ಮೊಗದ ಆ ಸೊಗಸು
ಕಾಣಲಾಗದಿದ್ದರೊಮ್ಮೊಮ್ಮೆ
ಬಿರುಗಾಳಿಯಂಥ ಮುನಿಸು..!

ಮುತ್ತುದುರಿದಂತೆ ಸವಿಮಾತು
ಚಿನಕುರುಳಿಯಾದರೂ ಲಯಬದ್ದ
ಕೇಳದಿರಲೊಮ್ಮೆ ಬಲು ಆತಂಕ
ಜೀವನವಾದಂತೆ ಅಸಂಬದ್ಧ..!

ನೀ ಒಲಿದು  ನಡೆದು ಬಂದರೇ
ಮೊಗ್ಗರಳಿ ಹೂವಾದಂತೆ ಭಾಸ
ಧೂಳರಡಿ ಕಣ್ಣು ನೀರಾದರೂ
ಬಿರುಮಳೆಯಡಿಯಲ್ಲಿದ್ದಂತೆ ವಾಸ.!

ಪ್ರತಿನಡೆನುಡಿಯಲ್ಲೂ ಆವರಿಸಿರುವೆ 
ನಿನ್ನಿರುವಿಕೆಯಿಲ್ಲದೆ ನಾ ಬಳಲಿರುವೆ
ದೇಹದೊಳಗಿನ ಉಸಿರಿನಂತೆ ನಾವು
ಮರೆತು ಮರೆಯಾಗಿ ನೀ ಹೇಗಿರುವೆ.?

ಡಾ: ಶೈಲಜಾ ರಮೇಶ್
[17/6/2023, 12:13 pm] Dr. B. N. Shylaja Ramesh: ತನಗ ಪ್ರಾಕಾರವು
ಫಿಲಿಪೈನ್ಸ್  ಮೂಲದ
ಏಳಕ್ಷರದ ನಾಲ್ಕು
ಸಾಲುಗಳ ಸಾಹಿತ್ಯ

ಶೀರ್ಷಿಕೆಯೇ ಇಲ್ಲದ
ಅಂತ್ಯಪ್ರಾಸದ ಕಾವ್ಯ
ಭಾವನೆಯೇ ತುಂಬಿದ
ಬರಹವದು ಭವ್ಯ. !

ಸಾಹಿತ್ಯದ ಪ್ರಾಕಾರ
[17/6/2023, 7:52 pm] Dr. B. N. Shylaja Ramesh: #ಬಾಡದಂತ_ಹೂವೆ_ಬಾಡುವಾಸೆ_ಏಕೆ 
@ಕೂ_ಕವನ_ಸಂಗಮ_ಬಳಗ 
ನಿನ್ನೊಂದು ನುಡಿ ಮುತ್ತು ಸಾಕಿತ್ತು
ನನ್ನೀ ಮುಖದಲ್ಲಿ ನಗುಮೂಡಲು
ನಿನ್ನೊಂದು ಆ ಹಿತ ಸ್ಪರ್ಶ ಸಾಕಿತ್ತು 
ನನ್ನೀ ಮೈ ಮನಸು ನವಿರೇಳಲು.!

ನೀನು ನನ್ನೆದುರು ನಿಂತರೇ ಸಾಕಿತ್ತು 
ನನ್ನೀ  ಮುದುಡಿದ ಮೊಗವರಳಲು 
ನಿನ್ನ ಒಲುಮೆಯ ನೋಟವೊಂದೇ
ಕಾರಣವೆನಗೆ ಹೊಂಗನಸು ಕಾಣಲು 

ನನ್ನೆಡೆಗಿನ  ನಿನ್ನೀ  ಕಾಳಜಿ  ಕಾರಣ 
ಎದೆಯ ನೆಲದಲಿ ಪ್ರೀತಿ  ಅರಳಲು 
ಆದರೇಕಿಂದು  ನನ್ನೆಡೆಗೆ  ತಿರಸ್ಕಾರ 
ನಿನಗಿಷ್ಟವೇ ನನ್ನಳುವ ನೋಡಲು 

ನಳನಳಿಸುತ್ತಿದ್ದ ಜೀವನದ ಹೂವ
ಬಾಡದಂತೆ ಕಾಯ್ವಹೊಣೆ ನಿನ್ನದು 
ಪ್ರೀತಿ ಜಲವ ಸಿಂಪಡಿಸೆ ಒಲವಿಂದ
ನಿನ್ನನು ಅನುಸರಿಸುವ ನಡೆ ನನ್ನದು 

ಶೈಲೂ...
[20/6/2023, 8:39 pm] Dr. B. N. Shylaja Ramesh: #ಹೆಣ್ಣೇ_ನೀನು_ನೀನಾಗಿರು 

ಓ... ಹೆಣ್ಣೇ..ನಿನಗೂ ಒಂದಿದೆ ವ್ಯಕ್ತಿತ್ವ
ಅಡಗಿದೆ ಅದರಲ್ಲಿ ಸಂಸ್ಕಾರದ ಸತ್ವ..!
ನೀ..ಬರಿದೆ ಬೆಡಗಿಗೆ ಕರಗಿ ಜಾರದಿರು 
ನಿನ್ನತನ ಕಳೆಯದೆ ನೀನು ನೀನಾಗಿರು 

ದಾರಿತಪ್ಪಿಸುವ ಮಂದಿಯಿಹರಿಲ್ಲಿ ಬಹಳ
ಗೌರವಾದರ ನೀಡುವವರಿಲ್ಲಿ ವಿರಳ..!
ಮಾತಿನಲ್ಲಿಹುದವರಲ್ಲಿ ನಯವಾದ ಬೆಣ್ಣೆ 
ಮೊಹಾಂಧಕಾರದಲಿ ಬೀಳದಿರು ಹೆಣ್ಣೇ.!

ಪ್ರತಿ ನಡೆ ನುಡಿಯಲ್ಲಿ ಇರಬೇಕು ಜಾಣ್ಮೆ 
ಸಂಸಾರಸಾಗರವ ದಾಟುವಲ್ಲಿರಲಿ ತಾಳ್ಮೆ 
ಇಲ್ಲೆಲ್ಲರಿಗೂ ಮಾದರಿಯಾಗುವಂತಿರು..!
ಎಂಥದೇ ಸಮಯದಲೂ ನೀನು ನೀನಾಗಿರು

ಡಾ: ಶೈಲಜಾ ರಮೇಶ್
[21/6/2023, 8:41 pm] Dr. B. N. Shylaja Ramesh: #ರಂಗೇರಿದ_ಮೋಡ

ದಟ್ಟೈಸಿ ಮೋಡಗಳು
ಬೆಪ್ಪಾದನೋ ಸೂರ್ಯ
ಶಾಖವನು ಹಿಡಿದಿದ್ದೂ...
ಮರೆತನವನ ಕಾರ್ಯ

ಸುತ್ತುವರಿದು ಮೇಘ
ರವಿಯ ಸೆರೆಹಿಡಿದು
ಬಿಸಿಯ ತಂಪಾಗಿಸುತ
ವರ್ಷವನೆ ಕರೆದು

ತೆರೆಯ ಮರೆಗಟ್ಟಿ
ನಿಶೆಯು ಆವರಿಸಿ
ಭೋರ್ಘರೆದ ಮೇಘ
ಇಳೆಗೆ ತಂಪೆರಚಿ

ಸುಡುವ ಬೆಂಕಿಯುಂಡೆ
ಮೋಡದೆದುರು ಸೋತು
ಸಮಯ ಕಾಯುತ್ತಿರುವ
ಧಗಧಗಿಸಲು ಮತ್ತೂ...

ಸೋಲು ಗೆಲುವುಗಳು
ಜಗಕಂಟಿದ ನಿಯಮ
ಪಂಚಭೂತಗಳಿಗೂ
ಅನ್ವಯಿಸುವ ಕರ್ಮ.!

     ಶೈಲೂ....
[24/6/2023, 12:30 pm] Dr. B. N. Shylaja Ramesh: ಇದೇನಿದು ತನಗ.?
ಬರಲಿಲ್ಲ ನನಗ.!
ಅದಕ್ಕೇ ಮೌನರಾಗ
ಹೇಳಿಕೊಡಿರೇನಗ😊
[24/6/2023, 4:19 pm] Dr. B. N. Shylaja Ramesh: 👌👌💐

ಯೋಗಕ್ಕೂ.... .ಯೋಗಾಯೋಗ..!
ದೇಹ ದಂಡಿಸುವ ಯಾಗ
ಯೋಗದಿಂದಲೇ ಆರೋಗ್ಯ ಭೋಗ
ಯೋಗದಲಿ ಜೀವ ಸರಾಗ
[24/6/2023, 4:19 pm] Dr. B. N. Shylaja Ramesh: ಚಂದದ ವರ್ಣನೆ👌👌💐💐

ರಂಗೇರಿದ ಮೋಡ

ದಟ್ಟೈಸಿ ಮೋಡಗಳು
ಬೆಪ್ಪಾದನೋ ಸೂರ್ಯ
ಶಾಖವನು ಹಿಡಿದಿದ್ದೂ...
ಮರೆತನವನ ಕಾರ್ಯ

ಸುತ್ತುವರಿದು ಮೇಘ
ರವಿಯ ಸೆರೆಹಿಡಿದು
ಬಿಸಿಯ ತಂಪಾಗಿಸುತ
ವರ್ಷವನೆ ಕರೆದು

ತೆರೆಯ ಮರೆಗಟ್ಟಿ
ನಿಶೆಯು ಆವರಿಸಿ
ಭೋರ್ಘರೆದ ಮೇಘ
ಇಳೆಗೆ ತಂಪೆರಚಿ

ಸುಡುವ ಬೆಂಕಿಯುಂಡೆ
ಮೋಡದೆದುರು ಸೋತು
ಸಮಯ ಕಾಯುತ್ತಿರುವ
ಧಗಧಗಿಸಲು ಮತ್ತೂ...

ಸೋಲು ಗೆಲುವುಗಳು
ಜಗಕಂಟಿದ ನಿಯಮ
ಪಂಚಭೂತಗಳಿಗೂ
ಅನ್ವಯಿಸುವ ಕರ್ಮ.!

       ಶೈಲೂ....
[24/6/2023, 4:20 pm] Dr. B. N. Shylaja Ramesh: 🙏🙏🙏
ಭಕ್ತಿ ಭಾವದ ರಚನೆ👌👌💐💐

ಎನ್ನೊಡೆಯ ಮಾಧವನ ಪಾದ
ಭಜಿಸಿ ಆರಾಧಿಸಲು ಮೋದ
ಬಿಡದೆ ಪೊರೆವನು ದೇವ
ಇರಲಿ ಭಕ್ತಿಯ ಭಾವ

ಶಿಲೆಗಂದು ಜೀವವಿತ್ತುದಿದೇ ಪಾದ
ಬಲಿಯ ಪಾತಾಳಕಟ್ಟಿದ ಪಾದ
ಮೂಜಗವನಳೆದುದಿದು
ನಿತ್ಯಭಕ್ತರ ಪೊರೆವುದು

ಮನವನಿಟ್ಟು ಕರೆದರೆ ಸಾಕವಗೆ
ಹರಸಿ ತರಿದು ಹರಿಸುವ ಬೇಗೆ
ದೃಢನಂಬಿಕೆಯೊಂದೇ ಸಾಕು
ಒಲಿದರವನಿನ್ನೇನು ಬೇಕು
[29/6/2023, 7:06 pm] Dr. B. N. Shylaja Ramesh: #ದೌರ್ಬಲ್ಯವೇ_ಗುಲಾಮಗಿರಿಗೆ_ದಾರಿ 
ಬೇಕು ಬೇಡಗಳ ಹುಡುಕಾಟದಲ್ಲಿ
ತಮ್ಮತನವೆಂದು ಮರೆಯಾಗದಿರಲಿ
ಅತಿಯಾಸೆಯೇ ದುಃಖಕ್ಕೆ ಮೂಲ
ಗುಲಾಮಗಿರಿಗೆ ತಳ್ಳುತ್ತೆ ದೌರ್ಬಲ್ಯ.! 

ಅಗತ್ಯವಿದ್ದದ್ದನ್ನಷ್ಟೇ ಬಯಸಬೇಕು 
ಹಾಸಿಗೆಯಿದ್ದಷ್ಟೇ ಕಾಲು ಚಾಚಬೇಕು
ದುಡಿದದ್ದರಲ್ಲಿ ಪಡೆದರಷ್ಟೇ ಮೌಲ್ಯ 
ಗುಲಾಮಗಿರಿಗೆ ತಳ್ಳುತ್ತೆ ದೌರ್ಬಲ್ಯ.! 

ನೋವುನಲಿವುಗಳು ಬಾಳಲಿ ಸಹಜ
ಸ್ಥಿತಪ್ರಜ್ಞತೆಯಲಿ ಬಾಳಬೇಕು ಮನುಜ
ಎದೆಗುಂದದಲೇ ಸಾಗಬೇಕು ಮುಂದೆ
ಗೆಲುವೋಡಿ ಬರುವುದು ಹಿಂದ್ಹಿಂದೆ.!

ಅರಸುತ್ತಾ ಹೋದರೆಮ್ಮ ಇಷ್ಟಾನಿಷ್ಠ 
ಉಳಿದವರ ಸ್ನೇಹ ಗಳಿಸುವುದು ಕಷ್ಟ 
ದೌರ್ಬಲ್ಯವೆಂದರೇ ಅಂಧಕಾರಮಯ
ಗುಲಾಮಗಿರಿ ಆಘಾತಕಾರಿ ವಿಷಯ.!

ಡಾ: ಶೈಲಜಾ ರಮೇಶ್
[3/7/2023, 12:43 pm] Dr. B. N. Shylaja Ramesh: ಗುರಿಯತ್ತ ಗುರುಚಿತ್ತ
******************

ಗುರಿಯತ್ತ ಚಿತ್ತ ಬೆಳೆಸುತ್ತ
ಚಿತ್ತಕೊಂದು  ಗುರಿಯಿತ್ತ
ಗುರಿಯತ್ತಲೇ ಸಾಗುವತ್ತ
ಮಾರ್ಗದರ್ಶನ ಮಾಡುವಾತ

ಉತ್ತಮ ಸಲಹೆ ನೀಡುತ್ತ
ಸನ್ಮಾರ್ಗ ತೋರುವಾತ
ಚಿಂತನೆಯ ತಕ್ಕಡಿಯಲಿ ಮನವಿರಿಸಿ  
ತಪ್ಪೋಪ್ಪುಗಳ ಸರಿತೂಗಿಸುವಾತ

ಅಂಧಕಾರವ ಅಳಿಸುವ
ಜ್ಞಾನ ಜ್ಯೋತಿಯಾತ
ಸುಜ್ಞಾನವಿತ್ತು ಅರಿವಿಗೆ
ಅಜ್ಞಾನವ ನೀಗಿಸುವಾತ

ಅರಿವಿನೊರತೆಗೆ ಒರೆಹಚ್ಚಿ
ಹೊಳಪು ತುಂಬಿಸುವಾತ
ಹೊಳೆ ಹೊಳೆವ ಬೆಳಕಿನಡಿಯಲಿ
ದಾರಿತೋರುವ ಉತ್ತಮನೀತ

ಗುರಿಯತ್ತ ಸಾಗಿಸುವ ಗುರುಚಿತ್ತ
ಮತಿಯ  ಸಾಣೆ ಹಿಡಿಯುವತ್ತ
ಕೃಪೆ ತೋರಿ ಹರಸಿರೆಂದು ಬೇಡುತ್ತ
ಗಮ್ಯ ಸೇರಿದರೂ ಇರಲಿ ಸಮಚಿತ್ತ

🙏🙏🙏🙏🙏🙏🙏🙏🙏🙏
          ಶೈಲೂ......
Picture source: internet / social media
[6/7/2023, 9:38 pm] Dr. B. N. Shylaja Ramesh: ಹಾಲುಗೆನ್ನೆಯ ಕಂದ
ಚಂದದ ಮುಖಾರವಿಂದ
ನಸುನಗೆಯ ಆ ಮೋಡಿ
ಸೆಳೆದೆಳೆಯಿತು ಮೂಕನ ಮಾಡಿ

ಇದೇನಿದು ಕೈಲಿ ಸುದರ್ಶನ.?
ಇವನೇನಾ ಮಧುಸೂದನ.?
ಹಿಡಿದು ಕೈಯಲ್ಲಿ ಗಧೆ
ಶಿಕ್ಷಿಸುವವನೇನಿವನು ನಿಜದೆ.?

ಶಿರಕ್ಕಿಂತಲೂ ಹಿರಿದು ಕಿರೀಟ 
ಧರಿಸಿ ನಿಂತವನದೆಂಥ ಮಾಟ.!
ಕಿರೀಟ ಹಾರ ಕೇಯೂರವೆಲ್ಲ
ಆ ಮಂದಸ್ಮಿತಕೆ ಸರಿಸಾಟಿಯಲ್ಲ
[7/7/2023, 5:28 pm] Dr. B. N. Shylaja Ramesh: ಆ ಹೊಳೆವ ಕಂಗಳ ಕಾಂತಿ
ನೀಗುವುದು ಮನದ ಭ್ರಾಂತಿ
ನುಡಿಯೋ ಮುತ್ತುದುರಿದಂತೆ ಮಧುರ
ಜಗವ ಕಾವನಿವನೇನು ಚದುರ.?
[8/7/2023, 5:18 pm] Dr. B. N. Shylaja Ramesh: ಮನೆಯ ಬಾಗಿಲಿಗೆ ಬೀಗವಿಕ್ಕೆ
ಮನವು ತೆರೆಯದೇ.?
ಮನದ ತೆರೆದ ಬಾಗಿಲನ್ನು
ಮನಗಾಣದೆ ಮರೆಯಬಹುದೇ.?

ಮನಸು ಮನೆಯ ಕದಗಳೆರಡು
ಮನಸಾರೆ ನಿನಗೆ ತೆಗೆದಿಹುದು
ಮನಸು ಮಾಡಿ ಅಡಿಯನಿಡು
 ಮನದ  ಮನೆಯ ಒಳಗಡೆಗೆ 

ಮರೆಯಲಾರೆನೆನೆಂದಿಗೂ
ಮನಸು ಕದ್ದ ಜಾಣನನ್ನ 
ಮರೆತರಂದೇ ತೆರೆದಂತೆ ತಿಳಿ
ಮಸಣದ ಮನೆಯ ಬಾಗಿಲನ್ನ

ಮರೆಯದಲೇ ನೀನೂ ನನ್ನನು
ಮಧುರ ನುಡಿಗಳನಾಡುತ್ತಾ
ಮನವ ತೆರೆದು  ಮುನಿಸು ತೊರೆದು 
ಮನದಿನಿಯ ಬಳಿಗೆ ಬಾರಾ....

       ಡಾ: ಶೈಲಜಾ ರಮೇಶ್
[8/7/2023, 7:50 pm] Dr. B. N. Shylaja Ramesh: ನೀ
ಕಾವ್ಯ
ಕನ್ನಿಕೆ.!
ಅರಳಿಹೇ
ಕೆಸರಿನಲ್ಲಿ.!
ಒಂದೆರಡಾಗುತ್ತ
ಬಿಂಬವೋ ಪ್ರತಿಬಿಂಬವೋ
ಅಂದದ ಮೆರವಣಿಗೆಗೆ
ಸಜ್ಜಾಗಿ ನಿಂತಂತಿದೆ ನೀನು, ಹೇ
ಪ್ರಿಯಳು ನೀ
ಮಹಾಲಕ್ಷ್ಮಿ ದೇವಿಗೆ
ಹೊರಟೆಯೇನವಳ ಪಾದಪೂಜೆಗೆ

     ಶೈಲಜಾ ರಮೇಶ್
[8/7/2023, 9:36 pm] Dr. B. N. Shylaja Ramesh: #ನಮ್ಮ_ಸುತ್ತಲಿನ_ಕತ್ತಲೆ 

ನಮ್ಮ ಸುತ್ತಲೂ ಮುತ್ತಿದೆ ಕತ್ತಲೆ
ಸುಜ್ಞಾನದ ಬೆಳಕ ನಂದಿಸುತ್ತಾ
ಅಡಿಯಿಡಲೂ.. ಕಾಣದು ಹಾದಿ
ಬದುಕುತ್ತಿದ್ದೇವದಕ್ಕೆ ಸ್ಪಂದಿಸುತ್ತ.!

ಅಂಧಕಾರದಿ ಮುಳುಗೇಳುತ್ತಿದೆ ಬದುಕು
ಏಳು ಬೀಳುಗಳ ಹೊರತಾಗಿಯೂ 
ಅದೆಷ್ಟು ನೋವುಗಳು ಕಲ್ಲುಮುಳ್ಳುಗಳು
ಆದರೂ ಅರಿವಿಲ್ಲ ಬೆಳಕಾಗಿಸಲು..!

ಮುತ್ತಿರುವ ಅಜ್ಞಾನ ಕತ್ತಲೆಯ ಹೊಡೆದಟ್ಟಿ
ಬೆಳಗಬೇಕಿದೆಯಿನ್ನು ಸುಜ್ಞಾನಜ್ಯೋತಿ
ಬಾಳು ಬೆಳಗುವ ಝಗಮಗಿಪ ಬೆಳಕ್ಹಚ್ಚಿ 
ಹೊಳೆಯಬೇಕಿದೆ ನಮ್ಮೊಳಗಿನ ಮತಿ..!

ಡಾ: ಶೈಲಜಾ ರಮೇಶ್
       ( ಶೈಲೂ.....)
[8/7/2023, 10:02 pm] Dr. B. N. Shylaja Ramesh: ನೀ
ಬಂದೆ
ಬಾಳಿಗೆ
ಬೆಳಕಾಗಿ
ನನ್ನೀಬದುಕ
ಕತ್ತಲೆಯ
ಕಳೆದ
ದೀಪ
ನೀ
[8/7/2023, 10:11 pm] Dr. B. N. Shylaja Ramesh: ಬಾ
ಜ್ಯೋತಿ
ಬೆಳಗು
ಬದುಕನ್ನು
ಕತ್ತಲೆಯನ್ನು
ಓಡಿಸುತ
ಉರಿಸು
ದೀಪ
ಬಾ
[10/7/2023, 1:19 pm] Dr. B. N. Shylaja Ramesh: ಮರಳಲೂ ಲಿಂಗ
ಮಾಡಲೊ ರಂಗ
ಭಕುತಿ ಭಾವದಿ
ಪೂಜಿಸೋಣ..

ಶುಭ ಅಂತರಂಗ
ಒಲಿವ ಧವಳಗಂಗ
ಶರಣು ಶರಣೆನುತ
ಭಜಿಸೋಣ..

ತೋರಿಕೆಗವನಲ್ಲ
ಏನೂ ಬಯಸುವುದಿಲ್ಲ
ಶುಭಭಕ್ತಿಯನಿತ್ತು
ನಿತ್ಯ ನೆನೆಯೋಣ..

ಅಂದು ಶ್ರೀರಾಮನಿಂದ
ಇಂದು ತಮ್ಮೆಲ್ಲರಿಂದ
ಮರಳಲಾವಿರ್ಭವಿಸಿದ
ಶಂಭುವ ಧ್ಯಾನಿಸೋಣ..

ತ್ರಿದಳ ಬಿಲ್ವವನಿತ್ತು
ಭಸ್ಮಲೇಪಿಸುತ್ತ
ಮಾರವೈರಿಯ ಸ್ತುತಿ
ಪಠಿಸಿ ಆರಾಧಿಸೋಣ..

🙏🙏🙏

ಶೈಲಜಾ ರಮೇಶ್
[10/7/2023, 6:36 pm] Dr. B. N. Shylaja Ramesh: ಪದವ ಬರೀಬೇಕು ಪದುಮನಾಭ ಮೆಚ್ಚುಹಂಗ
ಪ್ರೀತಿಯಿಂದ ಬಿಗಿದಪ್ಪಿ ಪರಮಪದವ ನೀಡುಹಂಗ🙏
[10/7/2023, 7:54 pm] Dr. B. N. Shylaja Ramesh: #ಸಾಮರಸ್ಯವೇ_ಜೀವನ 
ಸರಿತೂಗಿಸಿದರಷ್ಟೇ ಬಾಳು
ಇಲ್ಲವೇ ಬಾಳೆಲ್ಲ ಗೋಳು.!
ಏಳುಬೀಳುಗಳ ತೂಗಿಸಿ
ಸಾಗಬೇಕು ಬದುಕ ಮುನ್ನಡೆಸಿ.!

ಇಲ್ಲೊಬ್ಬೊಬ್ಬರೊಂದುದುತರ
ಅಭಿಪ್ರಾಯ ಬೇಧಗಳ ಸಮರ 
ತೂಗಲೊಲ್ಲದೆಲ್ಲವೂ ಸರಿತೂಕ
ಸಾಮರಸ್ಯವಿಲ್ಲದಿರೆ ನರಕ ..!

ಇದ್ದರೆ ಹೊಂದಿ ಬಾಳುವ ಗುಣ 
ನೋವು ಕಷ್ಟನಷ್ಟಗಳೆಲ್ಲವೂ ತೃಣ 
ಎಲ್ಲರನ್ನೂ ಅರಿತು ಬೆರೆತರೆ
ಸ್ವರ್ಗದಂತೆಯೇ ಈ ಧರೆ..!

ಡಾ: ಶೈಲಜಾ ರಮೇಶ್

[12/7/2023, 4:19 pm] Dr. B. N. Shylaja Ramesh: ಒಂದು ಅಮೂರ್ತ ಪರಿಕಲ್ಪನೆಯಾಗಿರುವ ಪ್ರೀತಿ, ಬೇರೊಬ್ಬ ವ್ಯಕ್ತಿಯ ಮೇಲೆ ತೋರುವ ಸೂಕ್ಷ್ಮವಾದ ಕಾಳಜಿಯ ಆಳವಾದ ಮತ್ತು ಅನಿರ್ವಚನೀಯ ಭಾವನೆಗಳನ್ನು ಸಾಮಾನ್ಯವಾಗಿ ಸೂಚಿಸುತ್ತದೆ. ಆದರೂ,  ಪ್ರೀತಿಯ ಭಾವೋದ್ರಿಕ್ತ ವಾಂಛೆ ಹಾಗೂ ಅನ್ಯೋನ್ಯತೆಯ ಸಾತ್ವಿಕ ಪ್ರೀತಿ ಭಾವನಾತ್ಮಕ ನಿಕಟತೆಯವರೆಗೆ, ಮತ್ತು ಅಲ್ಲಿಂದ, ಧಾರ್ಮಿಕ ಪ್ರೀತಿ ಗಾಢ ಐಕ್ಯತೆ ಅಥವಾ ಉಪಾಸನೆಯವರೆಗಿನ ವಿವಿಧ ಭಾವನೆಗಳ ಅನುಭೂತಿಗಳ ಶ್ರೀಮಂತಿಕೆಯನ್ನು  ಒಳಗೊಳ್ಳುತ್ತದೆ.
 ಇಂಥದ್ದೇ ನಿಷ್ಕಾಮ, ನಿರ್ಮೋಹ, ಅವ್ಯಾಜ ಪ್ರೀತಿ ರಾಧಾಮಾಧವರದ್ದು.  ನಿಷ್ಕಾಮ ಪ್ರೀತಿಗೆ ಒಂದು ಅದ್ಭುತ ಉದಾಹರಣೆ ರಾಧೆ.!  ಬೃಂದಾವನದಲ್ಲಿ, ಯಮುನಾ ತಟದಲ್ಲಿ ಕೃಷ್ಣನನ್ನು ಪ್ರತೀ ದಿನ ಭೇಟಿಯಾಗುತ್ತಿದ್ದ  ರಾಧೆ,  ಕೃಷ್ಣ  ಮಥುರಾನಗರಕ್ಕೆ ಹೋದಮೇಲೆ ತುಂಬಾ ಮೌನಿಯಾದಳಂತೆ.! ,ಕೃಷ್ಣನದೇ ನೆನಪಲ್ಲಿ ದಿನವೂ ಯಮುನಾತಟದಲ್ಲಿ  ಕೃಷ್ಣ ಬರಬಹುದೇನೋ ಎಂದು ಕಾದು ಕುಳಿತಿರುತ್ತಿದ್ದಳಂತೆ ಕಾಯುವಿಕೆಯನ್ನೇ ವರವಾಗಿ ಪಡೆದ ರಾಧೆ..!
      ಒಂದು ಕ್ಷಣ ಕೃಷ್ಣನನ್ನು ನೆನೆದು ನಾನೇ ರಾಧೆಯಾದಾಗ ಮೂಡಿದ ಕವಿತೆ ಇದು..😊   

 #ಕೃಷ್ಣನ_ನೆನೆದು

ಹಾಗೇ ಸುಮ್ಮನೇ ತಿರುಗಾಡಿ ಬಾ ಮನವೇ
ತುಸುದೂರ ಮೆಲ್ಲ ಮೆಲ್ಲನೇ
ಕೃಷ್ಣನಿಲ್ಲದಿದ್ದರೇನಂತೆ ಸಿಗಬಹುದೇನೋ
ಅವನ ನೆರಳು ಬಿಮ್ಮನೇ..!

ಅವನಿಲ್ಲದ ಚಿಂತೆಯಲಿ ನೀ ಕೊರಗುತಲಿ
ಸೊರಗಿ ಹೋಗಿರುವೆ ತುಂಬಾ
ಅರಸುತ್ತ ಎಲ್ಲೆಡೆಯಲೂ ಅಲೆಯುತಿರುವೆ
ಕಾಣದೆ ಪ್ರಿಯ ಮಾಧವನ ಬಿಂಬ.!

ಯಮುನೆಯ ತಟದಲ್ಲಂದು ಅವನೊಡನೆ
ಕೈಹಿಡಿದು ನಡೆದಿದ್ದ ಕ್ಷಣಗಳು
ಮುದವ ತರಬಹುದೇನೋ ನೊಂದ ಮನಕೆ
ಅವನ ಸವಿಸವಿ ನೆನಪುಗಳು.!

ಸುಳಿಗಾಳಿಯಲಿ ತೇಲಿತೇಲಿ ಬರಬಹುದು
ಅವ ಮೈಗೆ ಪೂಸಿದ್ದ ಶ್ರೀಗಂಧ
ಅನುರಾಗದಾಲಾಪನೆಯ ಕರೆಯು ಕೇಳಿ
ಬರಬಹುದು ಅವನ ಕೊಳಲಿಂದ.!

ಅವನಿಗೂ ನಿನ್ನಂತೆ ಕಾಡುತಿರಬಹುದಲ್ಲ
ಸವಿ ಪ್ರೇಮದ ಆ ನೆನಪು
ಸುಳಿದಾಡುತಿರಬಹುದಲ್ಲಲ್ಲೇ ನೆನೆಯುತ್ತ
ಅಮರ ಪ್ರೀತಿಯ ಒನಪು.!

ಹೋಗಿಬಾ ಮತ್ತೊಮ್ಮೆ ಮನಸೇ ತಡಮಾಡದೆ
ಮನವಿಟ್ಟು ಹುಡುಕು ಅಲ್ಲೇ
ಇನ್ನೆಷ್ಟುದಿನ ಕಾಡುವನು ಸಿಗದೇ, ಇಹನವ
ನೆನೆದವರ ಒಳ ಮನದಲ್ಲೇ.!

             ಶೈಲೂ.....
[12/7/2023, 10:04 pm] Dr. B. N. Shylaja Ramesh: #ಕರುಣೆ_ಕಡಲು

ಕರುಣೆ ಕಡಲು
ಮುರಳಿ ಒಡಲು
ಭಕುತಿ ಮತಿಗೆ ಮಣಿವನು
ಪ್ರೀತಿ ಸುರಿಸಿ
ಭೀತಿ ಅಳಿಸಿ
ಒಲವ ಸುಧೆಯ ಸುರಿವನು

ಅರುಣ ಕಿರಣ
ಅವನ ಕರುಣ
ಸಿಹಿಯ ಮಧುವ ಅಂಬುಧಿ
ಜಗದ ಪ್ರಾಣ
ಜನರ ತ್ರಾಣ
ನೊಂದ ಮನಕೆ ಔಷಧಿ.!

ಅವನ ಒಲುಮೆ
ಇರಲು ಗೆಲುವೆ
ನಮ್ಮ ಭಾರ ಅವನದೇ
ಖುಷಿಯ ಹಂಚಿ
ಬದುಕು ಮಿಂಚಿ
ಜೀವ ಭಾವ ನಲಿದಿದೇ

ಡಾ: ಶೈಲಜಾ ರಮೇಶ್

ಇದು ತಲ ಷಟ್ಪದಿ ಆಗುತ್ತಾ
[12/7/2023, 10:31 pm] Dr. B. N. Shylaja Ramesh: ನಾನು ಎನ್ನುವುದು ‘ *ಆತ್ಮ* ’. ಇದುವೇ ಎಲ್ಲರೊಳಗೂ ಅಂತರ್ಗತವಾಗಿರುವ ‘ *ನಾನು* ’. ಆದರೆ ಈ ನಾನು ನನ್ನದಲ್ಲ, ಅದು ದೈವ. ಸಕಲ ಚರಾಚರಾಗಳಲ್ಲಿಯೂ ಅಡಗಿರುವ *ಸರ್ವಾಂತರ್ಯಾಮಿ* .
[30/7/2023, 3:55 pm] Dr. B. N. Shylaja Ramesh: #ಮಳೆ

ಸುರಿದ ಮಳೆಗೆ
ನೆರೆಯು ಬಂದು
ಕೆರೆಯು ಆಯಿತು ಭೂಮಿ
ಧರೆಯ ಜನರ
ಮೊರೆಯು ಕೇಳದೆ
ವರುಣ ದೇವ ಸ್ವಾಮಿ..!

ಎಷ್ಟು ಸುರಿವೆ
ನಷ್ಟ ಬಹಳ
ಕಷ್ಟ ಜನರ ಬದುಕು
ಸೃಷ್ಟಿಗೊಡೆಯ
ಸ್ಪಷ್ಟ ಕೇಳು
ಪುಷ್ಟಗೊಳಿಸು ಸಾಕು.!

ಎತ್ತ ನೋಡು
ಸುತ್ತ ಮುತ್ತ
ತತ್ತರಗೊಂಡಿದೆ ಜೀವ
ಸುತ್ತಿ ಸುಳಿದು
ಮತ್ತೆ ಮಳೆಯ
ಬಿತ್ತೆ ಬದುಕಿಗಭಾವ.!

ಶೈಲಜಾ ರಮೇಶ್
[5/9/2023, 3:42 pm] Dr. B. N. Shylaja Ramesh: ಗುರಿಯತ್ತ ಗುರುಚಿತ್ತ
******************

ಗುರಿಯತ್ತ ಚಿತ್ತ ಬೆಳೆಸುತ್ತ
ಚಿತ್ತಕೊಂದು  ಗುರಿಯಿತ್ತ
ಗುರಿಯತ್ತಲೇ ಸಾಗುವತ್ತ
ಮಾರ್ಗದರ್ಶನ ಮಾಡುವಾತ

ಉತ್ತಮ ಸಲಹೆ ನೀಡುತ್ತ
ಸನ್ಮಾರ್ಗ ತೋರುವಾತ
ಚಿಂತನೆಯ ತಕ್ಕಡಿಯಲಿ ಮನವಿರಿಸಿ  
ತಪ್ಪೋಪ್ಪುಗಳ ಸರಿತೂಗಿಸುವಾತ

ಅಂಧಕಾರವ ಅಳಿಸುವ
ಜ್ಞಾನ ಜ್ಯೋತಿಯಾತ
ಸುಜ್ಞಾನವಿತ್ತು ಅರಿವಿಗೆ
ಅಜ್ಞಾನವ ನೀಗಿಸುವಾತ

ಅರಿವಿನೊರತೆಗೆ ಒರೆಹಚ್ಚಿ
ಹೊಳಪು ತುಂಬಿಸುವಾತ
ಹೊಳೆ ಹೊಳೆವ ಬೆಳಕಿನಡಿಯಲಿ
ದಾರಿತೋರುವ ಉತ್ತಮನೀತ

ಗುರಿಯತ್ತ ಸಾಗಿಸುವ ಗುರುಚಿತ್ತ
ಮತಿಯ  ಸಾಣೆ ಹಿಡಿಯುವತ್ತ
ಕೃಪೆ ತೋರಿ ಹರಸಿರೆಂದು ಬೇಡುತ್ತ
ಗಮ್ಯ ಸೇರಿದರೂ ಇರಲಿ ಸಮಚಿತ್ತ

🙏🙏🙏🙏🙏🙏🙏🙏🙏🙏
          ಶೈಲೂ......
Picture source: internet / social media
[5/9/2023, 8:50 pm] Dr. B. N. Shylaja Ramesh: ಬಿರುಮಳೆಯ ಗಾಢಾಂಧಕಾರದ ರಾತ್ರಿ
ಹರಿಯುದಿಸಿ ಪಾವನಗೈದ ಈ ಧರಿತ್ರಿ
ಸಂಕಲ್ಪವಿತ್ತವನದು ದುಷ್ಟಶಿಕ್ಷೆಯೆಡೆಗೆ ಗಮನ
ಸದಾ ಶಿಷ್ಟರಕ್ಷಣೆ ಪೋಷಣೆಯದೇ ಮನನ
[7/9/2023, 6:43 am] Dr. B. N. Shylaja Ramesh: ಎಲ್ಲೋ ಇಹನೆಂದು ಸುಮ್ಮನ್ಹುಡುಕಲು ಬೇಡ
ಇಲ್ಲೇ ಇಹನವ ಭಕ್ತರಂತರಂಗದಲಿ
ಅದಾದ ದೇಗುಲದಲೂ ತಾ ಅಡಗಿ ಕುಳಿತಿಲ್ಲ
ಇಲ್ಲಿಹನು ನೋಡು ನಮ್ಮ ಮನೋ ಮಂದಿರದಲಿ
[8/9/2023, 4:51 pm] Dr. B. N. Shylaja Ramesh: #ಜನ್ಮದಿನದ_ಶುಭಾಶಯಗಳು

ಅವಳಿಗೆ ಇವಳು, ಇವಳಿಗೆ ಅವಳು
ಸದಾ ಮಿಡಿವ ಹೆಂಗರುಳು.!
ಇವಳಿಗೇನಿಷ್ಟ, ಅವಳಿಗದೇ ಇಷ್ಟ
ಸದಾ ಒಂದರ ಮೇಲೇ ಕಂಗಳು.!

ಒಬ್ಬಳಂದದ ತಾರೆ, ಮತ್ತೊಬ್ಬಳದಂಥದೇ ಮೋರೆ
ಸದಾ ನಗು ನಗುವ ವದನ.!
ಒಬ್ಬಳತ್ತರೆ ಸಾಕು, ಮತ್ತೊಬ್ಬಳಳಲೇ ಬೇಕು
ಸದಾ ಹುಡುಗಾಟಿಕೆಯ ಕದನ.!

ಮಾತು ಚಿನಕುರುಳಿ, ನಗುಮೊಗವರಳಿ 
ಕುತೂಹಲದ ಬೆರಗಿನ ನೋಟ.!
ಒಬ್ಬಳ ಸುಸಂಗೀತ, ಮತ್ತೊಬ್ಬಳ ಕುಣಿತ
ಅವರಿಗವರೇ ಕಲಿವ ಪಾಠ.!

ಮುದ್ದು ಗಿಳಿಮರಿ, ಅಂದದ ರಾಜಕುಮಾರಿ
ತುಂಟ ತರಲೆಗಳಿವು ಅವಳಿ ಜವಳಿ.!
ಒಂದು ಚಂದ್ರಮ, ಮತ್ತೊಂದು ಆರ್ಯಮ
ಆ ದೇವನಿತ್ತ ಭವ್ಯ ಬಳುವಳಿ.!

ಭುವಿಗೆ ಬಂದ ದಿನ, ಸಂಭ್ರಮವನುದಿನ
ಹುಟ್ಟುಹಬ್ಬದ ಶುಭಾಶಯಗಳು ನಿಮಗೆ.!
ಇರಲಿ ನೂರು ವರ್ಷ, ನಿತ್ಯವೂ ಹರ್ಷ
ಆಯುರಾರೋಗ್ಯ ವೃದ್ಧಿಸಲಿ ನಿಮಗೆ.!

    ಡಾ: ಶೈಲಜಾ ರಮೇಶ್
[10/9/2023, 8:40 am] Dr. B. N. Shylaja Ramesh: Awesome...!!!
ಇದು ಎಲ್ಲರ ಬದುಕ ಬವಣೆ
ಏನೂ ಮಾಡಲಾಗದ ತಪನೆ
ಊಳಿಡುವ ಶುನಕಗಳೇ ಸುತ್ತ
ಮುಚ್ಚಿಬಿಟ್ಟಿದೆ ದಾರಿ ಸುತ್ತಮುತ್ತ.!

ಅಕಟಕಟಾ. ಅತ್ತ ದರಿ ಇತ್ತ ಪುಲಿ.!
ನಲಿವ್ಹೇಗೆ ಮೂಡೀತು ಹೇಳಿ..?
ಬರೆಯಾಲಾದೀತೆ ನಗುವಿನ ಜಾಡು
ಹಾಡಲಾದೀತೆ ಸಂತಸದ ಹಾಡು.?
[14/9/2023, 6:19 pm] Dr. B. N. Shylaja Ramesh: : ಸಿರಿ ಗೌರಿ ಪಾಲಿಸು
****************

ಸಿರಿ ಗೌರಿ ಪಾಲಿಸು
ಪರಶಿವನರಸಿ
ಸಕಲ ಸೌಭಾಗ್ಯ ನೀಡು
ದುರಿತವ ಹರಿಸಿ

ಹರಿಶಿನ ಕುಂಕುಮ
ಹೂವು ಪರಿಮಳ ಗಂಧ
ಭಕ್ತಿಯಲಿತ್ತು ಪೂಜಿಪೆ
ನೀಡು ಮುತ್ತೈದೆತನದಂದ

ಹಿಮವಂತನ ತನಯಳೆ
ಮತಿಯಿತ್ತು ಸಲಹು
ಮಂದ ಮತಿಯು ನಾನು
ತೋರು ಜ್ಞಾನದ ಬೆಳಕು

ಭಕ್ತಿ ಗಮ್ಯಳೆ ನೀಡು
ನಿನ್ನಲ್ಲಿ ಸ್ಥಿರ ಭಕ್ತಿ
ಭಕ್ತಿ ವಶ್ಯಳೆ ನೀಡು
ಉತ್ತಮ ಮನಃಶಕ್ತಿ

ಕರಗಳ ಜೋಡಿಸಿ
ವರಗಳ ಬೇಡುವೆ
ಜನನಿ ಮಂಗಳೇ ನಿತ್ಯ
ಸೌಭಾಗ್ಯವಿತ್ತು ಪಾಲಿಸೆ

ಪರಾಶಿವನಾರ್ಧಾಂಗಿ
ದುರಿತವ ಕಳೆಯೆನ್ನ
ಸೌಮಂಗಲ್ಯ ತನವಿತ್ತು
ಪರಮಪದವ ನೀಡೆಲೆ

             ಶೈಲೂ.....
[17/9/2023, 7:49 pm] Dr. B. N. Shylaja Ramesh: ಹರಸು  ಹೇರಂಭ
***************

ಹರಸು ಎಮ್ಮನು ಹೇರಂಭ
ನೀನು ಕರುಣೆಯ ಪ್ರತಿಬಿಂಬ

ಸರ್ವ ಪ್ರಥಮದಿ ಪೂಜಿಸುವೆ
ಸದ್ಬುದ್ಧಿಯನ್ನು ಬೇಡುತಿರುವೆ

ಭಾದ್ರಪದ ಶುದ್ಧ  ಚೌತಿಯ ದಿನದಿ
ಪೂಜಿಸುವೆನು ಹರಿಸು ಸಂಕಷ್ಟ ಮುದದಿ

ಅರ್ಪಿಸುವೆ ಕಬ್ಬು ಕಡಲೆ ಮೋದಕ
ಸ್ವೀಕರಿಸಿ ಹರಸೆಮ್ಮನು ವಿನಾಯಕ

ಮೋದಕಪ್ರಿಯ ನೀ ಮೂಷಿಕ ವಾಹನ
ಲಂಬೋಧರ ನೀ ಪಾರ್ವತಿ ತನಯ

ಮುನಿಗಣ.ಸೇವಿತ ಶ್ರೀ ಸಿದ್ಧಿದಾಯಕ
ವಿಘ್ನವ ತರಿದು ಕೊಡು ಎಮಗೆ ಜ್ಞಾನದ ಬೆಳಕ

             ಶೈಲೂ......
[17/9/2023, 8:07 pm] Dr. B. N. Shylaja Ramesh: ಗಣಪನ ಜನನ
*************
ಅಂದು ಏಕಾಂತ ಬೇಸರದ ದಿನ
ಶಿವನನುಪಸ್ಥಿತಿಯಲ್ಲಿ ಶಿವೆಯ ತಲ್ಲಣ..
ನಿರಾಸಕ್ತಿ...ಎಲ್ಲದಕೂ ಏನೋ ಚಡಪಡಿಕೆ
ಶಿವನಿಲ್ಲದೀ ಹೊತ್ತು ಮನೆ ಮಾಡಿತ್ತು ಬೇಸರಿಕೆ

ಪ್ರಕೃತಿಯೂ ನೀರಸ ಸೋತು ಸೊರಗಿದಂತೆ
ತಂಪಿಲ್ಲ.. ಉರಿ ಧಗೆಯು ಬೆವರ ಹರಿಸಿತ್ತೇ...
ಮಾತಿಲ್ಲ ಮೌನ ಅನ್ಯಮನಸು
ಕೂತಳೊಬ್ಬಂಟಿ ಏನೋ ಕನಸು

ಗಲ್ಲಕಾನಿಸಿ ತಲೆಯ ನೆಲದ ಮಣ್ಣಲ್ಲಿ
ಬೆರಳಾಡುತ್ತಿತ್ತು ಒಣ ಹವೆಯಲಿ
ಮೈಯ ಬೆವರು ಹನಿ ಮುತ್ತಂತೆ ಜಾರಿ
ಒಣ ಮಣ್ಣಾಯ್ತು ಹಸಿ ಮೃದುವಾದ ಜೇಡಿ

ಮತ್ತಷ್ಟು ಸ್ವೇದ ಮೈಯಿಂದ ಹರಿಸಿ
ಮಥಿಸಿದಳು ಮಣ್ಣುoಡೆ ಪ್ರೀತಿ ಬೆರೆಸಿ
ಉದಿಸಿತ್ತು ಮನದಲೊಂದು ಸುಂದರ ರೂಪ
ಕುತೂಹಲದಿ ಸೃಜಿಸಿದಳು ಮನದ ಪ್ರತಿರೂಪ

ಚಂದಿರನ ಮೊಗದ ಬಾಲಕನ ಪ್ರತಿಮೆ
ಮೂಡಿಸಿ ಮನೆಮಾಡಿತ್ತು ಮನದಲ್ಲಿ ಹೆಮ್ಮೆ
ಜೀವವಿತ್ತರೆ ಹೇಗೆ ಅಂದದ ಪ್ರತಿಮೆಗೆ
ತಣಿಸಿ ಬೇಸರ ಸಿಕ್ಕೀತು ಮಾತಿಗೆ

ಕೈಲಾಸದಲಿ ನಾ ಒಂಟಿ ಬೇಕಲ್ಲ ಜೊತೆಗಿರಲು
ಮೀಯುವ ಗಳಿಗೆಯಲ್ಲಿ ಆಗುವುದು ಕಾವಲು
ಮನಕೆ ಬಂದಾಕ್ಷಣವೇ ನೀಡಿದಳು ಜೀವ
ನಗುತ ನಿಂತ ಬಾಲಕ ಮರೆಸೆಲ್ಲ ಮನದ ನೋವ

ಆಹ್ಲಾದ ಮೋದ ಆಮೋದ
ಕಂದನ ಜೊತೆಗಾಡಿ ಉಲ್ಲಾಸದ ವಿನೋದ
ಆಟ ಒಡನಾಟ ಮರೆಸಿತ್ತು ಬೇಸರ
ಏಕಾಂತದ ವಿಹಾರಕ್ಕೆ ಗಣಪನೆಂಬ ಸಹಚರ

ಮಾತೆಯ ಮಮತೆಯ ಆಣಿಮುತ್ತು
ವಿದ್ಯಾ ಬುದ್ಧಿವಿವೇಕ ಎಲ್ಲವನು ಹೊತ್ತು
ಅಮ್ಮನೇಕಾಂತಕೆ ಕಾವಲಿನ ಶಿಸ್ತು
ಆಂತಾಯಿತು ಗಣಪನ ಜನನ ಶುಭಮಸ್ತು......

          ಶೈಲೂ.....
[21/9/2023, 12:55 pm] Dr. B. N. Shylaja Ramesh: #ಮುಕ್ತಕ

ತಾಯಿಜೊತೆ ಬಂದಿದ್ದ ಗಣಪತಿಯು ಹಬ್ಬಕ್ಕೆ
ನೋಯಿಸದೆ, ಭಕ್ತಿಯಲಿ ಕರೆದವರ ಮನವನ್ನು
ಕಾಯಿಬೆಲ್ಲ ಬೆರೆಸಿದ್ದ ಕಡುಬನ್ನು ತಿನ್ನುತಲಿ
ಜಯವಿತ್ತು, ವಿದಾಯವೆಂದ ಶೈಲೇಶ...

      ಡಾ: ಶೈಲಜಾ ರಮೇಶ್
[22/9/2023, 6:15 am] Dr. B. N. Shylaja Ramesh: ಆವಳಿವಳು
ಚಂದದ್ಹೆಣ್ಣು
ಚಂದ್ರ ಮೊರೆ ಸುಂದರಿ
ಸ್ವರ್ಗದಿಂದ
ಧರೆಗಿಳಿದ
ಬಾನ ತಾರೆ ಕಿನ್ನರಿ

ಕಣ್ಣು ನೋಡು
ಹೊಳೆವ ದೀಪ
ಬೆಳಕು ಬಾಳ ದಾರಿಗೆ
ಕತ್ತಲಲ್ಲೂ
ಕೈಹಿಡಿದು
ನಡೆಸುವಂಥ.ದೀವಿಗೆ
[22/9/2023, 6:32 am] Dr. B. N. Shylaja Ramesh: ಕೆಂಡ ಸಂಪಿಗೆ
ಅಂದಕ್ಕಿಂತ
ಚಂದ ನೀಳ ನಾಸಿಕ
ಮುತ್ತಿನ ನತ್ತು
ತೋರಿ ಗತ್ತು
[23/9/2023, 1:01 pm] Dr. B. N. Shylaja Ramesh: ವರ್ಷಗಳ ನಂತರ ಮತ್ತೊಮ್ಮೆ ಜುಗಲ್ಬಂಧಿಯ ಮೇಳ... 😊

ಒಂದು ವಾರದ ಹಿಂದೆ ನಾನು ಪೋಸ್ಟ್ ಮಾಡಿದ್ದ ಕೃಷ್ಣನ ಬಗ್ಗೆ ರಾಧೆಯ  #ಮಿಡಿವ_ಮನದ_ಮಾತು ಕವಿತೆಗೆ ಸಹೋದರ #ಅಭಿಷೇಕ್_ ಭಾರದ್ವಾಜ್ ರ ಪ್ರತಿಸ್ಪಂದನ ಕವಿತೆ ತುಂಬಾನೇ ಇಷ್ಟವಾಗಿ ಅಲ್ಲೇ ರಾಧಾಮಾಧವರ ಸಂವಾದದಂತೆ ನಡೆದ ನನ್ನ ಹಾಗೂ ಅಭಿಯ ಜುಗಲ್ಬಂದಿ ಕವನೋತ್ಸವ ನಿಮ್ಮ ಮುಂದೆ😊

ಥ್ಯಾಂಕ್ಯೂ ಅಭಿ😊  ಆಶುಕವನಗಳ ಜುಗಲ್ಬಂದಿ ನನಗಂತೂ ತುಂಬಾನೇ ಖುಷಿ ಕೊಡ್ತು😊


#ಮಿಡಿವ_ಮನದ_ಮಾತು
*********************

ಮೋಡವಾವರಿಸಿದ ಈ ಇಳಿಸಂಜೆ
ಕ್ಷೀಣಿಸುತ್ತಿರುವ ಈ ತಿಳಿಬೆಳಕು
ಮುಂದಡಿಯಿಡಲೆಕೋ ಭಯ
ಬಂದು ನೀಡೆನಗೆ ಅಭಯ

ಸುತ್ತಲೂ ಮುತ್ತುತ್ತಿದೆ ಕತ್ತಲೆ
ಏನೇನೂ ಕಾಣಲೊಲ್ಲದು ನೋಡು
ಬಾಳುಹೇಗೆ ಬೆಳಕಾದೀತು
ನೀಡುನಿನ್ನ ಕಣ್ಣ ಕಾಂತಿಯ ಬೆಳಕು

ತವಕಿಸುತ್ತಿದೆ ಮನ ಉಸುರಲೆನೋ
ಪ್ರಾಸ ಮರೆತು ಪದಪುಂಜ ಖಾಲಿ
ಹೇಗೇಹೇಳಲಿ ಮನದ ಮಾತು
ತುಟಿಬಿಚ್ಚಲಾಗದ ಮೌನ

ಬಣ್ಣಕಳಚಿದ ಬರಡು ಬದುಕು
ಕನಸ ಕಣ್ಣೊಳಗೆ ನವರಂಗು
ಅಲೆದು ಬಳಲಿರುವೆ ಗೆಳೆಯ
ಬಣ್ಣ ತುಂಬಲು ನೀನೆಂದು ಬರುವೆ

ನಿನಗೆಂದೇ ಬರೆದ ಎರಡು ಸಾಲು
ಹೃದಯದಂಚೆಗೆ ರವಾನಿಸಿರುವೆ
ಕಾತರದಿ ಕಾಯುತಿರುವೆ ಗೆಳೆಯ
ಮಾರುತ್ತರಕೆ ಮನವನೆಟ್ಟು

ಲೋಕವೆಲ್ಲ ಕಿವುಡಾದರೂ ಸರಿ
ಯಾರಗೊಡವೆ ಬೇಕಿಲ್ಲೆನಗೆ
ನಿನ್ನೊಬ್ಬನಿಗೇ ಕೇಳಿದರೆ ಸಾಕು
ನಿನಗೆಂದೇ ಮಿಡಿವ ನನ್ನೆದೆಯ ಮಾತು

   ಡಾ: B.N. ಶೈಲಜಾ ರಮೇಶ್

ನಿನ್ನೋಲೆಯು ತಲುಪಿಸುವುದು ಎನಗೆ ಗೆಳತಿ 
ನಾನಿರುವಾಗ ಭಯವೇಕೆ ಮನವಾಗಲಿ ನಿರ್ಭೀತಿ
ಇಳಿಸಂಜೆಯ ತಂಪು ತಂಗಾಳಿ 
ನಿನ್ನ ಹೃನ್ಮನದರಸನ ಮನದಿ ತಿಳಿ 

ನೀ ಉಸುರಲೋಗುವ ದನಿಗೆ ನಾ ಧನಿ
ನಿನಗಾಗಿ ತವಕಿಸುತಲಿದೀ ಎನ್ನ ಧಮನಿ
ಮೋಹನನ ಅಭಯವಿರಲು ನೀ ಯಾಕೆ ಮರುಗುತೀ
ಮುರುಳಿಯ ನಾದವೇ ನೀನಾಗಿ ಎನ್ನ ಕಾಡುತೀ

ತುಟಿಬಿಚ್ಚದೇ ನೀನಾಡಿದ ಮಾತಿಗೆ ನಿನ್ನ ಕಣ್ಣೇ ಕನ್ನಡಿ
ನೀ ಜೊತೆಗಿರದೆ ಮನವಾಗಿದೆ ಖಾಲಿ ಗರಡಿ
ಆದರೂ ಸದಾ ನನ್ನ ಮನದಿ ನಿನ್ನ ನಿವಾಸ
ರಾಧೇ ನಿನ್ನ ಹೆಸರೇ ನನ್ನೆಲ್ಲ ಕವಿತೆಗಳಿಗೆ ಪ್ರಾಸ 

 ಬರಾಡಾದದ್ದು ನಿನ್ನ  ಮನವಲ್ಲ ನಾರಿ
ನಿನ್ನ ಮನದಿ ಮೂಡಿಹುದು ವಿರಹದ ಬೆಂಕಿಯ ಉರಿ 
ಚಿಂತಿಸಿ ಸೊರಗದಿರು ನೀ ಈ ಪರಿ 
ಅತಿ ಶೀಘ್ರದಿ ಬರುವೆ  ಗರುಡನನ್ನೇರಿ

ಲೋಕದ ಗೊಡವೆಗೆ ನಾ ಕಿವಿಗೊಡುವುದಿಲ್ಲ ಕಾಂತೆ
ಒಬ್ಬೊಬ್ಬ ಮನಕೆ ಒಂದೊಂದು ಚಿಂತೆ
ಚಿಂತೆಯಿಲ್ಲದ ಮನವೆಲ್ಲಿಹುದು ನಲ್ಲೆ 

ಎಲ್ಲರೂ ಸಿಲುಕಲೇ ಬೇಕಲ್ಲ ಕಾಲಚಕ್ರನ ಚಿತೆಯಲ್ಲೇ
ಕೊರಗದಿರು ನೀ ನನ್ನ ನೆನಪಿನಲಿ 
ಸದಾ ನಿನ್ನೊಟ್ಟಿಗಿರುವೆ ನಿನ್ನ ಆತ್ಮವಾಗಿ ಜೊತೆಯಲ್ಲಿ
ದೇಹಗಳೆರೆಡಾದರೂ ನಮ್ಮೀರ್ವರ ಆತ್ಮಗಳು ಒಂದೇ 
ನೀ ಮನದಿ ಕದ ತೆರೆದು ನೋಡು ನಾ ಆ ಕದದ ಬದಿಯಲ್ಲೇ ನಿಂತಿದ್ದೆ 

ಈಗಲಾದರೂ ನಗಬಾರದೇನು 
ನನ್ನೆಲ್ಲ ಭಾವನೆಗಳ ಭಾವ ನೀನು 
ನಿನ್ನ ತುಟಿಯಂಚಿನ ನಗು ನಾನು
ನನ್ನ ಉಸಿರ ಹೆಸರೇ ನೀನು. 
                    🌹 ಸವಿಶ್ರೀನಿವಾಸ 🌹

ತಲುಪಿತೇನು ನನ್ನೊಲವಿನೋಲೆ.? ಆದರೂ ಬರಲಿಲ್ಲೇಕೆ ಎದುರಲ್ಲೇ.?
ನೀ ಬರೀ ಮಾತುಗಾರ ನಾ ಬಲ್ಲೆ 😏
ಸುಮ್ಮನಿಡುವೆ ಹೂವ ಕಿವಿಯಲ್ಲೆ 😏

ಬರಿದೆ ಚತುರ ನುಡಿಯುಸುರುವುದ ಬಿಟ್ಟು
ಬಾರೋ ಮುರಳಿ ನನ್ನೀ ಕರೆಗೆ ಓಗೊಟ್ಟು ಕುಳಿತಿರುವೆ ನಾ ನಿನ್ನಲೇ ಮನವ ನೆಟ್ಟು
ಅರಿವಾಗದೇನು ನನ್ನಂತರಂಗದ ಗುಟ್ಟು

ಕಾಯುವಿಕೆಯೇ ರಾಧೆಗೆ ವರವೇನು.? 
ಹೆಸರಿಗಷ್ಟೇ ರಾಧಾಮಾಧವ ಪದವೇನು.?
ಪರಿತಪಿಸುವ ಪಾಡು ಒಬ್ಬಳಿಗೇ ಮಾತ್ರವೇನು.?
ಈ ರಾಧೆ ಬದುಕಲಿ ನಿನ್ನ ನಿಜ ಪಾತ್ರವೇನು.?

ಸುಮ್ಮನೆ ನಗುತ್ತಿರು ನೀನೆಂದರೆ ಹೇಗೆ.?
ಕಾಣದೇನು ಸುಡುವ ವಿರಹದ ಬೇಗೆ
ನೀ ನನ್ನೊಂದಿಗಿದ್ದರೆ ತಾನೇ ನಗುವ ಬಗೆ
ನೀ ಕಣ್ಣಮುಂದಿರದೆ ನಾನಿರುವುದಾದರೂ ಹೇಗೆ.?

ಶೈಲಜಾ ರಮೇಶ್.

ಅಭಿ ನಿಮ್ಮ ಚಂದದ ಪ್ರತಿಸ್ಪಂದನೆ ಕವನಕ್ಕೆ ನನ್ನ ಮನಸಲ್ಲಿ ಬಂದದ್ದು ಹೀಗೆ 😊

ತಲುಪಿಹುದು ನಿನ್ನೊಲವಿನೋಲೆ
 ಜಗದಕಾರ್ಯದ ನಿಮಿತ್ತ ಬರಲಾರೆ ನಿನ್ನೆದುರಲ್ಲೆ 
ನೀ ಅರ್ಥೈಸಿಕೊಳ್ಳದೆ ಛೇಡಿಸಿರುವುದ ನಾ ಬಲ್ಲೆ
 ಎಂದಿಗೂ ನೀನಿರುವೆ ಈ ಮಾಧವನ ಉಸಿರಲ್ಲೆ

ತಲಿಪಿದ್ದಕ್ಕೆ ಪ್ರತ್ಯುತ್ತರವ ನೀಡಿಹೆನಲ್ಲ ನಲ್ಲೆ ನಾನಿರುವೆ ಸದಾ ಉಸಿರಂತೆ ನಿನ್ನಲ್ಲೇ 
ನಾ ಮಾತುಗಾರನಾಗಲು ಕಾರಣ ನೀನು 
ನೀ ಮುಡಿದ ಮಲ್ಲಿಗೆಯೆ ನಾನು

ಇದು ಚತುರ ನುಡಿಯುಸಿರಲ್ಲ ಬಾಲೆ ನನ್ನನೆಂದೋ ಬಂಧಿಸಿದೆ ನಿನ್ನೀ ಪ್ರೇಮದ ಬಲೆ ನಿನಗಾಗಿಯೇ ಈ ನನ್ನ ಹೃನ್ಮನದರಮನೆ
 ನಿಂದಿಸುವೇಕೆ ಅರಿಯದೆ ಈ ಮಾಧವನ ಸುಮ್ಮನೆ

ಕಾಯುವುದು ವರವಲ್ಲ ನಲ್ಲೆ 
ನಿನ್ನೀ ವಿರಹವ ನಾ ಬಲ್ಲೆ
 ಪರಿತಪಿಸುವುದೇಕೆ ಬಾಲೆ
 ನನ್ನ ಹೃನ್ಮನವೇ ನಿನ್ನ ನೆಲೆ

ನಿನ್ನ ನಗುವೇ ಎನ್ನ ಮನಕೆ ಅಮೃತದ ಸಿಂಚನ
 ನಾನಾಗುವೆ ನಿನ್ನೆಲ್ಲಾ  ವಿರಹಗಳ ಹೊಡೆದೋಡಿಸುವ ಬಾಣ
 ನಿನ್ನ ನಗುಮೊಗವೇ ಚೈತ್ರದ ತುಂಬಿದ ಬನ
 ಅದಕಾಗಿಯೇ ರಾಧಾ ನಿನಗಾಗಿ ಈ ಕವನ

ನಿನ್ನ ಸುಡುವ ವಿರಹಕ್ಕೆ ಸುರಿಸುವೆನು ನನ್ನೀ ಪ್ರೇಮಾಮೃತದ ಮಳೆ 
ನಿನ್ನ ಸೇರಲು ಬಯಸುತಿದೆ ನನ್ನೀ ಮನದ ಇಳೆ 
ರಾಧಾ ಮಾಧವರೆಂದರೆ ಪ್ರೇಮಕ್ಕೆ ಕಳೆ 
ರಾಧಾಮಾಧವರ ಪ್ರೇಮ ಎಂದಿಗೂ ಬಿಡಿಸವಾಗದ ಬಲೆ

ಕೊರಗದಿರು ರಮಣಿ 
ನೀ ಎನ್ನ ಹೃನ್ಮನದ ದಿನಮಣಿ 
ಮಾಧವನಿಗೆ ಎಂದೆಂದಿಗೂ ನೀನೇ ಕಣ್ಮಣಿ
 ನಿನಗಾಗಿಯೇ ರಚಿಸಿಹೆನು ಈ ಪದಪುಂಜಗಳ ಗಣಿ

ಸವಿಶ್ರೀನಿವಾಸ

ಇದು ಛೇಡಿಸುವಿಕೆಯಲ್ಲ ಹರಿ
ನನ್ನೀಮನವ ತಿಳಿಸುವ ಪರಿ
ನೀನೇನೋ ಜಗತ್ಕಾರ್ಯದಲಿ ವ್ಯಸ್ಥ
ಆದರಿಲ್ಲಿ ನನ್ನೀ ಬದುಕು ಅಸ್ತವ್ಯಸ್ತ.!😢

ನಿನ್ನನರ್ಥೈಸುವುದರಲಿ ನಾನೇ ಮೊದಲು
ಅದೇ ಕಾರಣವಲ್ಲವೇ ನೀ ಮಥುರೆಗೆ ಹೋಗಲು
ಹೃದಯವನ್ನೇ ಕಿತ್ತಿಟ್ಟು ಕಳುಹಿಸಿದೆ ನಿನ್ನನಂದು
ಉಸಿರೇ ನಿಂತಂತಾಯ್ತು ಗೊತ್ತೇ ಆಜನ್ಮಬಂಧು.!

ಎಂದಾದರೂ ಕೊಟ್ಟಿದ್ದಾಳೆಯೇ ಬಾಧೆ.?
ಉಸಿರೇ ನೀನೆಂದುಕೊಂಡಿರುವ ರಾಧೆ.!
ಅನುಕ್ಷಣ ನಿನ್ನ ಕ್ಷೇಮದ್ದೇ ಪರಿತಪನೆ
ಎಂದೆಂದಿಗೂ ನಿನ್ನದೇ ಆರಾಧನೆ..!

ನೀನೆಲ್ಲಿದ್ದರೂ ಮರೆಯದಿರು ಮಾಧವ
ನಿನ್ನಲ್ಲೇ ಜೀವವಿಟ್ಟಿರುವ ರಾಧೆ ಮನವ
ನಿನ್ನ ಪ್ರೇಮಧಾರೆಯೇ ಎನಗೆ ಜೀವನದಿ
ಮರುಜನ್ಮದಲ್ಲಾದರೂ ಇರಲೆನಗೆ ನಿನ್ನ ಸನ್ನಿಧಿ.!

ಮಾಧವನ ಮನದ ಮಾತಿಗೆ ರಾಧೆಯ ಉತ್ತರ ಹೀಗೆಯೇ ಇತ್ತೇನೋ ಅಲ್ವಾ ಅಭಿ😊

ನಿನ್ನ ಮನದ ಬಾಧೆಯ ನಾನರಿತಿರುವೆ ರಾಧೆ
ನನಗೂ ಮನದಿ ಮೂಡಿದೆ ನಿನ್ನ ನೋಡದೇ ಬಾಧೆ
ಪ್ರೀತಿಹೆಚ್ಚಿರುವಲ್ಲಿಯೇ ಕೋಪ ತಾಪಗಳ ನೆಲೆ 
ನನ್ನ ವೇಣು ವಾದನದಲ್ಲಿ  ನಿನ್ನ ಹೆಸರಿನದ್ದೇ ಓಲೆ 

ನನ್ನನರ್ಥೈಸುವುದರಲಿ ನೀನೇ ಮೊದಲು
ನನ್ನ ತುಟಿಯಂಚಲಿ ಸದಾ ನಿನ್ನ ನಾಮದ ತೊದಲು
ಸದಾ ಈಮಾಧವನ ಮನಕೆ ರಾಧೆಯೇ ಅಮಲು 
ಅದಕಾಗಿಯೇ ಮನದಿ ಕಟ್ಟಿಹೆನು ನಿನಗಾಗಿ ಪ್ರೇಮದ ಮಹಲು

ರಾಧಾ ಮಾಧವರಿಗೆ ಸದಾ ವಿರಹದ ಬಾಧೆ 
ನಸೀಬಿನನಲ್ಲಿಲ್ಲ ಕೂಡಿ ಬಾಳುವ ಯಶೋಗಾಥೆ
ಅನುಕ್ಷಣವು ಅನುದಿನವು ಮಾಧವನಿಗೆ ರಾಧೆಯದ್ದೇ ಪರಿತಪನೆ 
ಅವನ ವೇಣುವಿನ ನಾದವೇ ನಿನಗೆ ಅರ್ಪಣೆ 

ಮರೆಯಲಾದಿತೇ ಮಾಧವನಿಂದ ರಾಧೆಯ 
ಪವಿತ್ರ ಪ್ರೇಮಬಂಧನದ ಸವಿಯ 
ಜೊತೆಗಿರದಿದ್ದರೂ  ಸದಾ ನೀನಿರುವೆ ಮನದೊಳಗೆ 
ರಾಧಾ ಮಾಧವರ ಪ್ರೇಮ ಅಜರಾಮರ ಈ ಜಗದೊಳಗೆ 
                                                  🌹ಸವಿಶ್ರೀನಿವಾಸ 🌹
[23/9/2023, 1:41 pm] Dr. B. N. Shylaja Ramesh: ನಿಜವಾದ ಪ್ರೀತಿಯೆಂದರೆ.... 
ಮಾತುಮಾತಲಿ ಹೊಗಳುವ ಪರಿಯಲ್ಲ
ನೀನನಗಿದ್ದರೆ ನಾನಿನಗೆಂಬ ಒಡಂಬಡಿಕೆಯಲ್ಲ
ಚಾಟಿಯಿಲ್ಲದೆ ಬುಗುರಿಯಾಡಿಸುವ ಛಾತಿಯಲ್ಲ
ಅದು..ಅಂತರಾಳದಿಂದ ಚಿಮ್ಮುವ ಅನುರಾಗ..!

ಪ್ರೀತಿಯೆಂದರೆ.....
ನಿರೀಕ್ಷೆಗಳೇ ಇರದ
[25/9/2023, 3:14 pm] Dr. B. N. Shylaja Ramesh: #ಗಝಲ್

ಮಡಿಚಿಟ್ಟ ಪ್ರೇಮಪತ್ರನನ್ನೊಮ್ಮೆ ಬಿಚ್ಚಿನೋಡು ಪ್ರೀತಿ ಬದುಕಿದೆ
ಬರೆದ ಒಲವ ಸಾಲುಗಳ ಓದಿ ನೋಡು ಪ್ರೀತಿ ಬದುಕಿದೆ..!

ಜೇನಿನಲ್ಲದ್ದಿಟ್ಟಂತ ವಾಕ್ಯಗಳನ್ನೇಕೆ ಮೆಲುಕದಿರುವೆ
ಕಪಟತನದ ವಾಕ್ಯಗಳಲ್ಲವದು ತೆರೆದುನೋಡು ಪ್ರೀತಿ ಬದುಕಿದೆ..!

ಬಲು ಹಿತವಾದ ಸ್ನೇಹದಲ್ಲೇ ಸ್ಪರ್ಶಿಸಿರುವೆ ಗೆಳೆಯಾ
ನಿಷ್ಕಲ್ಮಶ ನುಡಿಯಲ್ಲದಗಿರುವ ಬೆರಗುನೋಡು ಪ್ರೀತಿ ಬದುಕಿದೆ..!

ಕೆಳೆತನವ ಕೊಂದು ತಿಲಾಂಜಲಿಯಿಟ್ಟವನು ನೀನು
ನಗುತಲೆ ಎಲ್ಲವನ್ನೊಪ್ಪಿಕೊಂಡ ಎನ್ನೆಡೆಗೆನೋಡು ಪ್ರೀತಿ ಬದುಕಿದೆ..!

ಶೈಲಳಾಂತರ್ಯದಲಿ ಮಡುಗಟ್ಟಿದ ನೋವಿನಲ್ಲೂ ನಿನ್ನ ನೆರಳಿದೆ
ಹೇ..ಮರುಳ, ಕ್ರೋಧದ ತೆರೆಯ ಸರಿಸಿನೋಡು ಪ್ರೀತಿ ಬದುಕಿದೆ..!

      ಶೈಲಜಾ ರಮೇಶ್
[9/10/2023, 8:23 pm] Dr. B. N. Shylaja Ramesh: ಆಹಾ,ಬಣ್ಣಿಸಲಸಾಧ್ಯ ಈ ಮೊಗದಂದ
ಕೆಂದಾವರೆಯ ಚೆಲುವಿಗಿಂತಲೂ ಚಂದ
ಅಂತರಂಗವನ್ನೇ ಕಲಕುವ ನಯನ
ಆ ಸ್ನಿಗ್ಧ ನಗುವೇ ಸೆಳೆವುದೆಲ್ಲರ ಮನ
ಕಂದ, ನೀನಾರ ಮನೆ ಬೆಳಗುವ ಬೆಳಕು.?
ಇರಬಹುದೇನೋ ನೀ ನಕ್ಕರೇ ರವಿಗೂ ಬೆಳಗು
ನಿನ್ನಂದಕೆ ಚಂದಿರನು ಸಾಟಿಯೇನು.?
ಈ ಧರೆಗಿಳಿದ ದೇವತೆಯೇ ನೀನು.!
[10/10/2023, 1:13 pm] Dr. B. N. Shylaja Ramesh: #ಅಕ್ಷರ_ನಾದ

ಕವನಸ್ಪರ್ಧೆ

#ಶೀರ್ಷಿಕೆ #ಹಳ್ಳಿಯ_ಜೀವನ_ಹಸನಾದ_ಆರೋಗ್ಯಕ್ಕೆ_ಸೋಪಾನ

ಹದವಾಗಿ ಸುರಿದ ಮಳೆಗೆ ಇಳೆಯು ತಂಪಾಯ್ತು
ಮುದದಿ ಬಿತ್ತಿದ್ದ ಕಾಳು ಚಿಗುರೊಡೆದು ಹಸಿರಾಯ್ತು
ಚಂದದ ನಿಸರ್ಗ ಸೊಬಗು ಹಳ್ಳಿಯ ಪರಿಸರದಲಿ
ಅಂದದ ಬದುಕಿನ ಚಿತ್ರಣ ಊರ ಮಡಿಲಿನಲಿ

ಹಿರಿಯರಾಣತಿಗೆ ತಲೆಬಾಗಿ ಬದುಕುವ ಕರುಳ ಕುಡಿಗಳು
ಕಿರಿಯರ ಏಳಿಗೆಗೆ ತುಡಿವ ಹಿರಿಯ ಮನಗಳು..!
ಬೆರೆತು ಬಾಳಲು ಸಲಹೆ, ಕಲೆತು ಎಲ್ಲರೊಂದಿಗೆ
ಅರಿತು ಪೂರೈಸುವ ಆಶಯ, ಒಡೆಯ ಮನೆಮಂದಿಗೆ

ಬಳ್ಳಿಯನು ತರುವು ತಬ್ಬಿ ಹಿಡಿದಂತೆ ಹಿರಿಯರೊಲವು
ತಳ್ಳಿದರೂ ಬೇರಾಗದಂಥ ಬೆಸುಗೆ ಬಾಂಧವ್ಯದ ಬಲವು
ಒಳ್ಳೆಯ ಹಿತನುಡಿಗಳ ಸೊಗವು ಮಾಡಿದಂತೆ ಸುಧಾಪಾನ
ಹಳ್ಳಿಯ ಜೀವನವೇ ಹಸನಾದ ಆರೋಗ್ಯಕ್ಕೆ ಸೋಪಾನ.!

ಡಾ: B.N. ಶೈಲಜಾ ರಮೇಶ್
[15/10/2023, 3:09 pm] Dr. B. N. Shylaja Ramesh: ಶರನ್ನವರಾತ್ರಿಯ ಸಂಭ್ರಮದ ಸಡಗರ
ನಾಡಲ್ಲೆಲ್ಲೆಲ್ಲೂ ಸಂತೋಷದ ಆಗರ
ದುರ್ಗಾಮಾತೆಯ ಸತ್ಯ ನವಾವತಾರ
ಪೊರೆವ ಮಾತೆಗೆ ನಿತ್ಯ ಅಲಂಕಾರ.!

ಡಾ: ಶೈಲಜಾ ರಮೇಶ್
[16/10/2023, 12:07 pm] Dr. B. N. Shylaja Ramesh: ನವರಾತ್ರಿ ಹಬ್ಬದ ಎರಡನೇ ದಿನದಂದು ದುರ್ಗಾ ದೇವಿಯ ಎರಡನೇ ಅವತಾರವಾದ ಬ್ರಹ್ಮಚಾರಿಣಿ ರೂಪವನ್ನು ಪೂಜಿಸಲಾಗುವುದು.
ಹೆಸರೇ ಸೂಚಿಸುವಂತೆ ತಾಯಿ ಬ್ರಹ್ಮಚಾರಿಣಿ ಒಂದು ಕೈಯಲ್ಲಿ ಜಪಮಾಲೆಯನ್ನು ಮತ್ತು ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದಿದ್ದಾಳೆ. 

ಹಿಮಾಲಯನ ಪುತ್ರಿಯಾಗಿ ಜನಿಸಿದ ದೇವಿಯು ಶಿವನನ್ನು ಪತಿಯಾಗಿ ಪಡೆಯಲು ನಾರದರ ಉಪದೇಶದಂತೆ ಕಠಿಣ ತಪಸ್ಸನ್ನು ಮಾಡುತ್ತಾಳೆ. ಬಹಳ ಕಠಿಣವಾದ ತಪಸ್ಸು ಮಾಡಿದ ಕಾರಣದಿಂದ ದೇವಿಗೆ ತಪಶ್ಚಾರಿಣೀ ಅರ್ಥಾತ್ ಬ್ರಹ್ಮಚಾರಿಣಿ ಎನ್ನುವ ಹೆಸರು ಬಂತು. ತಪಸ್ಸು ಮಾಡುತ್ತಿರುವ ಕಾಲದಲ್ಲಿ ಬರೀ ಹೂವು, ಹಣ್ಣುಗಳನ್ನು ಹಾಗೂ ಎಲೆಗಳನ್ನು ಮಾತ್ರ ಒಂದು ಕಾಲದವರೆಗೂ ಸೇವಿಸುತ್ತಿದ್ದಳು. ನಂತರದಲ್ಲಿ ಎಲೆಯ ಸೇವನೆಯನ್ನೂ ನಿಲ್ಲಿಸಿದಳು. ಪರ್ಣವೆಂದರೆ ಎಲೆ. ಹಾಗಾಗಿ ಈಕೆಯನ್ನು ಅಪರ್ಣಾ ಎಂದೂ ಕರೆಯುತ್ತಾರೆ. ನಂತರ ಶಿವನೇ ಒಬ್ಬ ಸನ್ಯಾಸಿಯ ರೂಪವನ್ನು ತಾಳಿ ಬಂದು, ಶಿವನಲ್ಲಿ ಈಕೆಗೆ ಇರುವ ನಿಷ್ಠೆಯನ್ನು ಪರೀಕ್ಷಿಸಿದನು. ಪಾರ್ವತಿಯ ಅಖಂಡ ನಿಷ್ಠೆಗೆ ಮೆಚ್ಚಿದ ಶಿವನು ಆಕೆಗೆ ಒಲಿಯುತ್ತಾನೆ.

ಬ್ರಹ್ಮಚಾರಿಣಿ ಮಾತೆಯನ್ನು ಪೂಜಿಸುವ ವ್ಯಕ್ತಿಗಳಿಗೆ ಶಾಂತಿ ಮತ್ತು ಸಂತೋಷವು ದೊರೆಯುತ್ತದೆ.    ಬ್ರಹ್ಮಚಾರಿಣಿಯ ಆರಾಧನೆಯು ತಪಸ್ಸಿಗೆ ಸಮವಾಗಿರುತ್ತದೆ. ಭಕ್ತರಲ್ಲಿರುವ ದುರ್ಗುಣಗಳು ಕಳೆದು ಉದಾತ್ತತೆ, ಸದ್ಗುಣಗಳು ಬೆಳೆಯುತ್ತದೆ. ಯಶಸ್ಸಿಗೆ ಅಡ್ಡಲಾಗಿರುವ ಎಲ್ಲಾ ತೊಡಕುಗಳೂ ಸರಿದು ಮನಸ್ಸಿಗೆ ಶಾಂತಿ ಹಾಗೂ ಮಾಡುವ ಎಲ್ಲಾ ಕೆಲಸದಲ್ಲೂ ನೆಮ್ಮದಿ ದೊರೆಯುವುದು ಎನ್ನುವ ನಂಬಿಕೆಯಿದೆ.
[16/10/2023, 12:09 pm] Dr. B. N. Shylaja Ramesh: ನವರಾತ್ರಿ ಹಬ್ಬದ ಎರಡನೇ ದಿನದಂದು ದುರ್ಗಾ ದೇವಿಯ ಎರಡನೇ ಅವತಾರವಾದ ಬ್ರಹ್ಮಚಾರಿಣಿ ರೂಪವನ್ನು ಪೂಜಿಸಲಾಗುವುದು.
ಹೆಸರೇ ಸೂಚಿಸುವಂತೆ ತಾಯಿ ಬ್ರಹ್ಮಚಾರಿಣಿ ಒಂದು ಕೈಯಲ್ಲಿ ಜಪಮಾಲೆಯನ್ನು ಮತ್ತು ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದಿದ್ದಾಳೆ. 

ಹಿಮಾಲಯನ ಪುತ್ರಿಯಾಗಿ ಜನಿಸಿದ ದೇವಿಯು ಶಿವನನ್ನು ಪತಿಯಾಗಿ ಪಡೆಯಲು ನಾರದರ ಉಪದೇಶದಂತೆ ಕಠಿಣ ತಪಸ್ಸನ್ನು ಮಾಡುತ್ತಾಳೆ. ಬಹಳ ಕಠಿಣವಾದ ತಪಸ್ಸು ಮಾಡಿದ ಕಾರಣದಿಂದ ದೇವಿಗೆ ತಪಶ್ಚಾರಿಣೀ ಅರ್ಥಾತ್ ಬ್ರಹ್ಮಚಾರಿಣಿ ಎನ್ನುವ ಹೆಸರು ಬಂತು. ತಪಸ್ಸು ಮಾಡುತ್ತಿರುವ ಕಾಲದಲ್ಲಿ ಬರೀ ಹೂವು, ಹಣ್ಣುಗಳನ್ನು ಹಾಗೂ ಎಲೆಗಳನ್ನು ಮಾತ್ರ ಒಂದು ಕಾಲದವರೆಗೂ ಸೇವಿಸುತ್ತಿದ್ದಳು. ನಂತರದಲ್ಲಿ ಎಲೆಯ ಸೇವನೆಯನ್ನೂ ನಿಲ್ಲಿಸಿದಳು. ಪರ್ಣವೆಂದರೆ ಎಲೆ. ಹಾಗಾಗಿ ಈಕೆಯನ್ನು ಅಪರ್ಣಾ ಎಂದೂ ಕರೆಯುತ್ತಾರೆ. ನಂತರ ಶಿವನೇ ಒಬ್ಬ ಸನ್ಯಾಸಿಯ ರೂಪವನ್ನು ತಾಳಿ ಬಂದು, ಶಿವನಲ್ಲಿ ಈಕೆಗೆ ಇರುವ ನಿಷ್ಠೆಯನ್ನು ಪರೀಕ್ಷಿಸಿದನು. ಪಾರ್ವತಿಯ ಅಖಂಡ ನಿಷ್ಠೆಗೆ ಮೆಚ್ಚಿದ ಶಿವನು ಆಕೆಗೆ ಒಲಿಯುತ್ತಾನೆ.

ಬ್ರಹ್ಮಚಾರಿಣಿ ಮಾತೆಯನ್ನು ಪೂಜಿಸುವ ವ್ಯಕ್ತಿಗಳಿಗೆ ಶಾಂತಿ ಮತ್ತು ಸಂತೋಷವು ದೊರೆಯುತ್ತದೆ.    ಬ್ರಹ್ಮಚಾರಿಣಿಯ ಆರಾಧನೆಯು ತಪಸ್ಸಿಗೆ ಸಮವಾಗಿರುತ್ತದೆ. ಭಕ್ತರಲ್ಲಿರುವ ದುರ್ಗುಣಗಳು ಕಳೆದು ಉದಾತ್ತತೆ, ಸದ್ಗುಣಗಳು ಬೆಳೆಯುತ್ತದೆ. ಯಶಸ್ಸಿಗೆ ಅಡ್ಡಲಾಗಿರುವ ಎಲ್ಲಾ ತೊಡಕುಗಳೂ ಸರಿದು ಮನಸ್ಸಿಗೆ ಶಾಂತಿ ಹಾಗೂ ಮಾಡುವ ಎಲ್ಲಾ ಕೆಲಸದಲ್ಲೂ ನೆಮ್ಮದಿ ದೊರೆಯುವುದು ಎನ್ನುವ ನಂಬಿಕೆಯಿದೆ.

#ಬ್ರಹ್ಮಚಾರಿಣಿ

ದುರ್ಗೆಯ ನವಾವತಾರದಲಿ ದ್ವಿತೀಯಳು
ಶ್ರೀಶೈಲರಾಜ ಹಿಮವಂತನ ಮುದ್ದು ಮಗಳು
ಶಿವನ ಪಡೆಯಲು ಘೋರ ತಪವನಾಚರಿಸಿ
ನೆಲೆನಿಂತಳು ಕಮಂಡಲು ಜಪಮಾಲೆ ಧರಿಸಿ..!

ಶ್ವೇತವಸ್ತ್ರವಿಭೂಷತೆ ಶ್ವೇತ ಪುಷ್ಪ ಪ್ರಿಯೆ
ಶಾಂತಿ ಆಹ್ಲಾದಕಾರಿಣಿ ಶ್ರೀ ಶಿವಪ್ರಿಯೆ
ಜ್ಞಾನಪ್ರದಾಯಿನಿ ಶಿವೆ ತಾಪಹಾರಿಣಿ
ಭಕ್ತಿಯಲಿ ಪೂಜಿಸೆ ಭೌಮ ಗ್ರಹದೋಷಹಾರಿಣಿ..!

ಬ್ರಹ್ಮಹಚಾರಿಣಿಯ ಪೂಜೆ ತಪಸ್ಸಿನ ಸಮಾನ
ದೇವಿಯೀವಳು ತೃಪ್ತಿ ಸುಖ ಸಂಪತ್ತು ಸದ್ಗುಣ
ಎಲ್ಲ ರೀತಿಯ ಅಡೆತಡೆಗಳೆಲ್ಲ ನಿವಾರಣೆ
ಕೃಪೆತೋರಿ ನೀಡುವಳು ಯಶಸ್ಸಿಗೆ ಪ್ರೇರಣೆ..!

✍️ಡಾ: B.N ಶೈಲಜಾ ರಮೇಶ್
(ಶೈಲೂ)
[16/10/2023, 3:51 pm] Dr. B. N. Shylaja Ramesh: #ಮೈಸೂರು_ದಸರಾ

ಸುಪ್ರಸಿದ್ಧ ಮೈಸೂರು ದಸರಾದ ಕೀರುತಿ
ನಾಡದೇವಿ ಚಾಮುಂಡಿಗೆ ಮುತ್ತಿನಾರಾತಿ
ದುಷ್ಟಮಹಿಷನ ತರಿದು, ಭಕ್ತರಿಗಿತ್ತು ಪ್ರೀತಿ
ಪೊರೆವಳೆಲ್ಲರನು ದೇವಿ ಇತ್ತು ಸನ್ಮತಿ

ಡಾ: ಶೈಲಜಾ ರಮೇಶ್
[16/10/2023, 3:57 pm] Dr. B. N. Shylaja Ramesh: ಅಂಬಾರಿ ಮೇಲೆ ಅಂಬೆಯ ಮೆರವಣಿಗೆ
ಗಜ ಪಡೆಗಳ ಪಥ ಸಂಚಲನ, ಜೊತೆಗೆ
ದೀಪಾಲಂಕಾರದ ಭವ್ಯ ಸುಂದರ ದೃಶ್ಯ ಕಣ್ಣಿಗೆ.!
ಇದು ಮೈಸೂರು ದಸರೆಯ ಕೊಡುಗೆ..!
[17/10/2023, 1:10 pm] Dr. B. N. Shylaja Ramesh: ನವರಾತ್ರಿಯ ಮೂರನೇ ದಿನದಂದು ಚಂದ್ರಘಂಟಾ ದೇವಿಯನ್ನು ಆರಾಧಿಸಲಾಗುತ್ತದೆ. ದುರ್ಗಾದೇವಿಯ ಒಂಭತ್ತು ಅವತಾರಗಳಲ್ಲಿ ಚಂದ್ರಘಂಟಾ ಅವತಾರವೂ ಒಂದಾಗಿದೆ. ತನ್ನ ಭಕ್ತರ ಕಷ್ಟಗಳನ್ನು ಕ್ಷಣಮಾತ್ರದಲ್ಲೇ ನಿವಾರಿಸಿ, ಸಂತೋಷ, ಸಮೃದ್ಧಿಯನ್ನು ನೀಡುವ ತಾಯಿಯೇ ಚಂದ್ರಘಂಟಾ ದೇವಿ.
ದುರ್ಗಾ ಮಾತೆಯ ರೌದ್ರಸ್ವರೂಪವಾಗಿಯೂ ಚಂದ್ರಘಂಟಾ ಕಂಡುಬರುತ್ತಾಳೆ. ದುಷ್ಟಶಕ್ತಿಗಳಿಗೆ ಸಿಂಹಸ್ವಪ್ನವಾಗಿ ತನ್ನ ಭಕ್ತರನ್ನು ಪ್ರೀತಿಯಿಂದ ಸಲಹುವ ತಾಯಿ ಈಕೆ.
ಚಂದ್ರಘಂಟಾ ಅಂದರೆ ಘಂಟೆಯಾಕಾರದ ಚಂದ್ರನನ್ನು ಮಸ್ತಕದಲ್ಲಿ ಧರಿಸಿದವಳು ಎಂದರ್ಥ. ಚಂದ್ರಘಂಟಾ ದೇವಿಯ ಮೂರನೇ ಕಣ್ಣು ತೆರೆದೇ ಇರುತ್ತದೆ. ಯಾವ ಸಮಯದಲ್ಲಿ ಆದರೂ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಸಿದ್ಧಳಾಗಿರುವಂತೆ ಕಾಣುತ್ತಾಳೆ. ಚಂದ್ರಘಂಟಾ ದೇವಿಯನ್ನು ಚಂದ್ರಿಕಾ, ರಣಚಂಡಿ ಎಂದೂ ಕರೆಯುತ್ತಾರೆ. ಇವಳಿಗೆ ಹತ್ತು ಕೈಗಳಿದ್ದು, ಹತ್ತೂ ಕೈಗಳಲ್ಲಿ ಶಸ್ತ್ರಾಸ್ತ್ರ ಹಿಡಿದುಕೊಂಡು ಸಿಂಹವಾಹಿನಿಯಾಗಿ ರಾರಾಜಿಸುತ್ತಾಳೆ.ಹೊಸದಾಗಿ ವಿವಾಹವಾದ ಸ್ವರೂಪವನ್ನು ದುರ್ಗಾಮಾತೆಯು ಚಂದ್ರಘಂಟಾ ರೂಪದಲ್ಲಿ ನೋಡಬಹುದು. ಪಾರ್ವತಿ ದೇವಿಯು ಕಠಿಣವಾದ ತಪಸ್ಸನ್ನು ಮಾಡಿ, ಶಿವನನ್ನು ಮದುವೆಯಾಗುವಲ್ಲಿ ಸಫಲರಾಗುತ್ತಾರೆ. ವಿವಾಹ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯ ಅರಮನೆಯನ್ನು ಪ್ರವೇಶಿಸುತ್ತಾನೆ. ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯ ತಾಯಿ ಮೂರ್ಛೆಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟಾ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ

ಚಂದ್ರಘಂಟ ದೇವಿಯು ಶುಕ್ರ ಗ್ರಹದ ಅಧಿದೇವತೆಯಾಗಿದ್ದಾಳೆ. ಈಕೆ ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಸಂತೋಷವನ್ನು ನೀಡುವ ತಾಯಿ. ಇವಳ ಆರಾಧನೆಯಿಂದ ಸಂಪತ್ತು ಹಾಗೂ ಸಮೃದ್ಧಿಯನ್ನು ಪಡೆಯಬಹುದು. ಈಕೆಯ ಆಶೀರ್ವಾದದಿಂದ ನಿಮ್ಮ ಮನೆಯಲ್ಲಿ ಎಂದಿಗೂ ಆಹಾರ ಕೊರತೆ ಕಂಡುಬರದು.
[17/10/2023, 1:15 pm] Dr. B. N. Shylaja Ramesh: #ನವರಾತ್ರಿ_ವಿಶೇಷ_ಸಂಚಿಕೆ
ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು💐💐💐💐   
#ದುರ್ಗಾ_ನವಾವತಾರ

         ನವರಾತ್ರಿಯ ಮೂರನೇ ದಿನದಂದು ಚಂದ್ರಘಂಟಾ ದೇವಿಯನ್ನು ಆರಾಧಿಸಲಾಗುತ್ತದೆ. ದುರ್ಗಾದೇವಿಯ ಒಂಭತ್ತು ಅವತಾರಗಳಲ್ಲಿ ಚಂದ್ರಘಂಟಾ ಅವತಾರವೂ ಒಂದಾಗಿದೆ. ತನ್ನ ಭಕ್ತರ ಕಷ್ಟಗಳನ್ನು ಕ್ಷಣಮಾತ್ರದಲ್ಲೇ ನಿವಾರಿಸಿ, ಸಂತೋಷ, ಸಮೃದ್ಧಿಯನ್ನು ನೀಡುವ ತಾಯಿಯೇ ಚಂದ್ರಘಂಟಾ ದೇವಿ.
ದುರ್ಗಾ ಮಾತೆಯ ರೌದ್ರಸ್ವರೂಪವಾಗಿಯೂ ಚಂದ್ರಘಂಟಾ ಕಂಡುಬರುತ್ತಾಳೆ. ದುಷ್ಟಶಕ್ತಿಗಳಿಗೆ ಸಿಂಹಸ್ವಪ್ನವಾಗಿ ತನ್ನ ಭಕ್ತರನ್ನು ಪ್ರೀತಿಯಿಂದ ಸಲಹುವ ತಾಯಿ ಈಕೆ.
ಚಂದ್ರಘಂಟಾ ಅಂದರೆ ಘಂಟೆಯಾಕಾರದ ಚಂದ್ರನನ್ನು ಮಸ್ತಕದಲ್ಲಿ ಧರಿಸಿದವಳು ಎಂದರ್ಥ. ಚಂದ್ರಘಂಟಾ ದೇವಿಯ ಮೂರನೇ ಕಣ್ಣು ತೆರೆದೇ ಇರುತ್ತದೆ. ಯಾವ ಸಮಯದಲ್ಲಿ ಆದರೂ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಸಿದ್ಧಳಾಗಿರುವಂತೆ ಕಾಣುತ್ತಾಳೆ. ಚಂದ್ರಘಂಟಾ ದೇವಿಯನ್ನು ಚಂದ್ರಿಕಾ, ರಣಚಂಡಿ ಎಂದೂ ಕರೆಯುತ್ತಾರೆ. ಇವಳಿಗೆ ಹತ್ತು ಕೈಗಳಿದ್ದು, ಹತ್ತೂ ಕೈಗಳಲ್ಲಿ ಶಸ್ತ್ರಾಸ್ತ್ರ ಹಿಡಿದುಕೊಂಡು ಸಿಂಹವಾಹಿನಿಯಾಗಿ ರಾರಾಜಿಸುತ್ತಾಳೆ.

       ಹೊಸದಾಗಿ ವಿವಾಹವಾದ ಸ್ವರೂಪವನ್ನು ದುರ್ಗಾಮಾತೆಯು ಚಂದ್ರಘಂಟಾ ರೂಪದಲ್ಲಿ ನೋಡಬಹುದು. ಪಾರ್ವತಿ ದೇವಿಯು ಕಠಿಣವಾದ ತಪಸ್ಸನ್ನು ಮಾಡಿ, ಶಿವನನ್ನು ಮದುವೆಯಾಗುವಲ್ಲಿ ಸಫಲರಾಗುತ್ತಾರೆ. ವಿವಾಹ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯ ಅರಮನೆಯನ್ನು ಪ್ರವೇಶಿಸುತ್ತಾನೆ. ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯ ತಾಯಿ ಮೂರ್ಛೆಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟಾ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ

ಚಂದ್ರಘಂಟ ದೇವಿಯು ಶುಕ್ರ ಗ್ರಹದ ಅಧಿದೇವತೆಯಾಗಿದ್ದಾಳೆ. ಈಕೆ ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಸಂತೋಷವನ್ನು ನೀಡುವ ತಾಯಿ. ಇವಳ ಆರಾಧನೆಯಿಂದ ಸಂಪತ್ತು ಹಾಗೂ ಸಮೃದ್ಧಿಯನ್ನು ಪಡೆಯಬಹುದು. ಈಕೆಯ ಆಶೀರ್ವಾದದಿಂದ ನಿಮ್ಮ ಮನೆಯಲ್ಲಿ ಎಂದಿಗೂ ಆಹಾರ ಕೊರತೆ ಕಂಡುಬರದು.


#ಚಂದ್ರಘಂಟ

ಮೈನಾ ಹಿಮವಂತನ ಗರ್ಭಸಂಜಾತೇ
ನವರಾತ್ರಿಯ ತದಿಗೆಯಲಿ ಉಪಾಸಿತೇ
ಹೇಮವರ್ಣದ ಹೊಳಪುಳ್ಳಂತ ಶರೀರಿಣಿ
ದುಷ್ಟ ದಮನವಗೈವ ತಾಯೆ ತಾರಿಣಿ..!

ರಣಚಂಡಿಯಿವಳು ದುಷ್ಟ ಜನರ ಸಂಹಾರಿಣಿ
ಫಾಲನೇತ್ರವ ಸದಾ ಕಾಲ ತೆರೆದಿಟ್ಟ ತ್ರಿನಯನಿ
ಪ್ರೇತಬಾಧೆ, ಮಾನಸಿಕ ಕ್ಲೇಶವ ಹರಿಸುವ ದೇವಿ
ಶಿವನ ಶಕ್ತಿಯಿವಳು ತಾಯೆ ಅರ್ಧನಾರೀಶ್ವರಿ, ಶಿವೆ

ಸಿಂಹವಾಹಿನಿ ಸಕಲರ ಪೊರೆವ ಜನನಿ
ಸಮಸ್ತ ಪಾಪಗಳ ತರಿವ ಭವತಾರಿಣಿ
ಶಿರದಲಿ ಚಂದ್ರನ ಧರಿಸಿ ಯುದ್ಧಕ್ಕೆ ಹೊರಟ
ದಶಭುಜದಿ ಶಸ್ತ್ರಾಸ್ತ್ರವ ಪಿಡಿದ ಚಂದ್ರಘಂಟ..!

 ತಾಯ ಕರುಣದಿ ಮನ ಮಣಿಪೂರದಿ ನೆಲೆನಿಂತು
ಕೃಪೆಯಗೈದು ತೋರಿಸುವಳು ಅಲೌಕಿಕ ವಸ್ತು
ದಿವ್ಯ ಮಂಗಳ ಪ್ರಭೆಯ ದಿವ್ಯಾನುಭವವಿತ್ತು
ನೀಡುವಳು ದೇವಿ ಸಕಲ ಸುಖ ಸಂವೃದ್ಧಿಯ ಸ್ವತ್ತು.!

ಡಾ: B.N ಶೈಲಜಾ ರಮೇಶ್
[18/10/2023, 1:27 pm] Dr. B. N. Shylaja Ramesh: #ನವರಾತ್ರಿಯ_ವಿಶೇಷ_ಸಂಚಿಕೆ

#ದುರ್ಗಾ_ನವಾವತಾರ

ಎಲ್ಲರಿಗೂ ನವರಾತ್ರಿಯ ಶುಭಾಶಯಗಳು💐💐💐

ನವರಾತ್ರಿಯ ನಾಲ್ಕನೇ ದಿನದಂದು  ದುರ್ಗಾ ದೇವಿಯ ನವಾವತಾರದಲ್ಲಿ ನಾಲ್ಕನೇ ಅವತಾರವಾದ ಕೂಷ್ಮಾಂಡಾ ದೇವಿಯನ್ನು ಪೂಜಿಸಲಾಗುವುದು. ಕೂಷ್ಮಾಂಡಾವೆಂದರೆ ಭೂಮಿಯನ್ನು ಸೃಷ್ಟಿಸಿದ ದೇವಿ ಎಂದರ್ಥ. ಸಿಂಹರೂಪಿಣಿಯಾಗಿರುವ ದೇವಿಗೆ ಎಂಟು ಹಸ್ತುಗಳಿದ್ದು, ಇದರಲ್ಲಿ ಏಳರಲ್ಲಿ ಆಯುಧಗಳಿವೆ ಮತ್ತು ಒಂದರಲ್ಲಿ ಜಪಮಾಲೆ.

ಕೂಷ್ಮಾಂಡಾ ದೇವಿಯನ್ನು ಆದಿಶಕ್ತಿಯೆಂದು ಸಹ ಕರೆಯಲಾಗುವುದು. ಯಾಕೆಂದರೆ ಭೂಮಿಯ ಸೃಷ್ಟಿಕರ್ತೆಯೇ ಆಕೆ ಎನ್ನಲಾಗುತ್ತದೆ.  ಆಕೆ ಸೂರ್ಯದೇವರ ವಾಸಸ್ಥಾನದಲ್ಲಿ ವಾಸಿಸುವ ಕಾರಣದಿಂದಾಗಿ ಭೂಮಿ ಮೇಲಿರುವ ಎಲ್ಲಾ ಅಂಧಕಾರವನ್ನು ನಿವಾರಣೆ ಮಾಡುವಳು. ಕೂಷ್ಮಾಂಡಾ ದೇವಿಯು ಮೊದಲು ಬ್ರಹ್ಮಾಂಡ ವನ್ನು  ಸೃಷ್ಟಿಸಿ, ಅದರಿಂದ ಸಂಪೂರ್ಣ ಜೀವಸಂಕುಲಗಳಿಗೆ ಜೀವ ನೀಡಿದಳು ಎನ್ನುವ ಪ್ರತೀತಿ ಇದೆ. ಈ ದೇವಿಯು ಸೂರ್ಯನಿಗೆ ಬೆಳಕು ನೀಡುವರು. ಆಕೆ ಸೂರ್ಯನಿಗೂ ಅಧಿಪತಿಯಾಗಿರುವ ಕಾರಣದಿಂದಾಗಿ ಕೂಷ್ಮಾಂಡಾ ದೇವಿಯನ್ನು ಪೂಜಿಸುವುದ ಜನ್ಮ ಜಾತಕದಲ್ಲಿ ಸೂರ್ಯನಿಂದಾಗಿರುವ ಕೆಡುಕನ್ನು ಸಹ ನಿವಾರಣೆ ಮಾಡಬಹುದಾಗಿದೆ. ಇದರೊಂದಿಗೆ ಕೂಷ್ಮಾಂಡಾ ದೇವಿಯ ಪೂಜಿಸುವ ಜನರು ಎಲ್ಲಾ ರೀತಿಯ ಸಮಸ್ಯೆಗಳಿಂದ ಪರಿಹಾರ ಮತ್ತು ಸಮಾಜದಲ್ಲಿ ಪ್ರಸಿದ್ಧಿ ಪಡೆಯುವರು.ದೇವಿಯ ನಗು ಜೀವನದಲ್ಲಿ ಧನಾತ್ಮಕತೆ ಉಂಟು ಮಾಡುವುದು, ಶಕ್ತಿ ನೀಡಿ ಎಲ್ಲಾ ರೀತಿಯಿಂದಲೂ ಒಳ್ಳೆಯದನ್ನು ಮಾಡುವುದು.

#ಕೂಷ್ಮಾಂಡ_ದೇವಿ

ನವದುರ್ಗೆಯ ಚತುರ್ಥರೂಪ ಕೂಷ್ಮಾಂಡ
ಗಾಢಾಂಧಕಾರದಿಂದ ತುಂಬಿರಲು ಬ್ರಹ್ಮಾಂಡ
ಸೂರ್ಯನೊಡಲ ಕೇಂದ್ರದಲ್ಲಿ ಪ್ರಭೆಯ ಬೆರೆಸಿ
ಬೆಳಕಾದಳು ತಾಯಿ ಬ್ರಹ್ಮಾಂಡವ ಸೃಜಿಸಿ...!

ಕಮಂಡಲು ಗಧೆ ಜಪಮಾಲೆ ಪಿಡಿದ ಅಷ್ಟಭುಜೆ
ಕಮಲ ಕಳಸ ಧನುರ್ಬಾಣ ಅಭಯಹಸ್ತದ ಗಿರಿಜೆ
ದಯೆ ಧರ್ಮದ ಪ್ರತೀಕವಿವಳು ವ್ಯಾಘ್ರವಾಹಿನಿ
ನಂಬಿದ ಭಕ್ತರ ಪೊರೆವ ಅಭಯದಾಯಿನಿ..!

ಅಷ್ಟಸಿದ್ದಿ, ನವನಿಧಿ ಪ್ರದಾತೆ ತಾಯೆ ಕೂಷ್ಮಾಂಡ
ನಿನ್ನ ಮುಗುಳ್ನಗೆಯಲೇ ಬೆಳಗುತಿಹುದು ಬ್ರಹ್ಮಾಂಡ
ಕೂಷ್ಮಾಂಡಫಲ ಬಲಿ ಸರ್ವದೋಷಾಪಹಾರಿ
ತಾಯಿಯಿವಳನು ಪೂಜಿಸೆ ಸರ್ವರೋಗತಾಪಹಾರಿ..!

ರಕ್ತವರ್ಣಪ್ರಿಯೆ ದೇವಿ ರಕ್ತಪುಶ್ಪೋಪಶೋಭಿತೆ
ಮನದ ಕ್ಲೇಶಕಳೆದು ಜ್ಞಾನದ ಬೆಳಕೀವ ಮಂದಸ್ಮಿತೆ
ನಿನ್ನೊಡಲೊಳಗಡಗಿದೆ ದೇವಿ ಬ್ರಹ್ಮಾಂಡದ ಚೈತನ್ಯ
ನೀನೊಲಿದ ಭಕ್ತಜನರೆಂದೆಂದಿಗೂ ಲೋಕಮಾನ್ಯ..!

✍️ ಡಾ: B.N ಶೈಲಜಾ ರಮೇಶ್
[19/10/2023, 11:42 am] Dr. B. N. Shylaja Ramesh: #ನವರಾತ್ರಿ_ವಿಶೇಷ_ಸಂಚಿಕೆ
ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು💐💐💐

#ದುರ್ಗಾ_ನವಾವತಾರ

ಪಂಚಮಿ ತಿಥಿಯಂದು ಅಂದರೆ ನವರಾತ್ರಿಯ ಐದನೇ ದಿನ ದುರ್ಗಾಮಾತೆಯ ಅವತಾರವಾದ ಸ್ಕಂದ ಮಾತೆಯನ್ನು ಆರಾಧಿಸಲಾಗುತ್ತದೆ. ಸ್ಕಂದ ಎಂದರೆ ಕಾರ್ತಿಕೇಯ ಅಥವಾ ಸುಬ್ರಹ್ಮಣ್ಯ. ಕಾರ್ತಿಕೇಯನ ತಾಯಿಯೇ ಸ್ಕಂದ ಮಾತೆ. ಹಾಗಾಗಿ ಭಗವಾನ್‌ ಸ್ಕಂದನ ಮಾತೆಯಾಗಿ ದುರ್ಗೆಯು ಅವತರಿಸಿದ್ದರಿಂದ #ಸ್ಕಂದಮಾತಾ ಎಂದು ಪ್ರಸಿದ್ಧಳಾಗಿದ್ದಾಳೆ. ಕಾರ್ತಿಕೇಯನನ್ನು ತನ್ನ ತೊಡೆಯ ಮೇಲೆ ಕೂರಿಸಿರುವ ರೂಪದಲ್ಲಿ ಈ ದೇವಿಯು ಕಾಣಿಸಿಕೊಳ್ಳುತ್ತಾಳೆ. ದೇವಿಯನ್ನು ಆರಾಧಿಸುವ ಭಕ್ತರು ಮಾತೆಯ ಆಶೀರ್ವಾದದ ಜೊತೆಗೆ ಮಗನಾದ ಸ್ಕಂದನ ಆಶೀರ್ವಾದವನ್ನೂ ಪಡೆಯಬಹುದು. ಸ್ಕಂದ ಮಾತೆಗೆ ನಾಲ್ಕು ಭುಜಗಳಿದ್ದು ಒಂದು ಕೈಯಲ್ಲಿ ಸ್ಕಂದನನ್ನು ಹಾಗೂ ಎರಡು ಕೈಯಲ್ಲಿ ಕಮಲವನ್ನು ಹಿಡಿದಿರುತ್ತಾಳೆ. ಇನ್ನೊಂದು ಹಸ್ತವು ಅಭಯ ಮುದ್ರೆಯಲ್ಲಿದ್ದು, ಸದಾ ತನ್ನ ಭಕ್ತರನ್ನು ಆಶೀರ್ವಾದ ಮಾಡುತ್ತಾಳೆ. ಇವಳ ಶರೀರದ ಬಣ್ಣವೂ ಸಂಪೂರ್ಣವಾಗಿ ಬೆಳ್ಳಗಿದ್ದು, ಕಮಲದ ಆಸನದಲ್ಲಿ ವಿರಾಜಮಾನಳಾಗಿದ್ದಾಳೆ. ಈ ಕಾರಣಕ್ಕಾಗಿ ಇವಳನ್ನು ಪದ್ಮಾಸನಾ ದೇವಿ ಎಂದು ಕರೆಯುತ್ತಾರೆ. ಈ ಅವತಾರದಲ್ಲಿರುವ ಮಾತೆಯನ್ನು ಪೂಜಿಸುವುದರಿಂದ ಭಕ್ತರು ತಮ್ಮ ಎಲ್ಲಾ ಕಷ್ಟಗಳಿಂದ ಮುಕ್ತರಾಗಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ ಎಂಬ ನಂಬಿಕೆ ಇದೆ. 
ತಾರಕಾಸುರ ಎನ್ನುವ ರಾಕ್ಷಸನನ್ನು ಸಂಹಾರ ಮಾಡುವುದಕ್ಕೆ ದೇವಿ ಸ್ಕಂದಳಿಗೆ ಜನ್ಮ ಕೊಡುತ್ತಾಳೆ. ಅದಕ್ಕಾಗಿಯೇ ಈಕೆಯನ್ನು ಸ್ಕಂದಮಾತಾ ಎಂದು ಕರೆಯಲಾಗುತ್ತದೆ. ಇನ್ನು ಸಪ್ತಲೋಕಗಳಾದ  ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ ಮತ್ತು ಸತ್ಯ ಇವುಗಳ  ನಿಯಂತ್ರಣ ಮಾಡುವ ಮಾತೆಯೇ ಸ್ಕಂದಮಾತೆ. 
ಸ್ಕಂದ ಮಾತೆಯು ಬುಧಗ್ರಹದ ಮೇಲೆ ಅಧಿಪತ್ಯವನ್ನು ಹೊಂದಿರುವುದರಿಂದ ಜನ್ಮ ಕುಂಡಲಿ ಅಥವಾ ಜಾತಕದಲ್ಲಿ ಬುಧನು ಪ್ರತಿಕೂಲ ಸ್ಥಾನದಲ್ಲಿದ್ದರೆ ಉಂಟಾಗುವ ತೊಂದರೆಯನ್ನು ದೇವಿಯ ಆರಾಧನೆಯಿಂದ ನಿವಾರಿಸಿಕೊಳ್ಳಬಹುದು. ಶುದ್ಧ ಮನಸ್ಸು, ಭಕ್ತಿಯಿಂದ ಯಾರು ದೇವಿಯ ಆರಾಧನೆ ಮಾಡುತ್ತಾರೋ ಅವರಿಗೆ ಸಂಪತ್ತು ಹಾಗೂ ಸಮೃದ್ಧಿ ಪ್ರಾಪ್ತವಾಗುತ್ತದೆ.

#ಸ್ಕಂದಮಾತಾ

 ಜಗದ್ಕಲ್ಯಾಣಕರರೂಪ, ತರಿಯುವಳು ತ್ರಿತಾಪ
ಪದ್ಮಾಸನಾ ವಿರಾಜಿತೆ ಗೌರವರ್ಣದ ರೂಪ
ಅಭಯ ಹಸ್ತದ ಚತುರ್ಭುಜಧರೇ ದೇವಿ
ನಿನ್ನ ಕರುಣಾಕಟಾಕ್ಷದಲಿ ಬೆಳಕಾಯಿತು ಭುವಿ..!

ಬ್ರಹ್ಮದೇವನ ವರದ ಬಲದಿಂದ ಮೆರೆದ
ದೇವಲೋಕವನು ತನ್ಹಿಡಿತದಲಿಟ್ಟು ತರಿದ
ದುಷ್ಟ ತಾರಕನ ಅಟ್ಟಹಾಸದಲಿ ನಲುಗಿ
ದೇವಗಣ ತತ್ತರಿಸಿಬಿಟ್ಟಿತು ಹೆದರಿ ನಡುಗಿ..!


ಶಿವ-ಶಿವೆಯರ ಸಮಾಗಮದಿಂದ  ಜನಿಸಿದ
ಕಂದನಿಂದಲೇ ಮರಣ ನೀಡೆಂದು ಬೇಡಿದ
ರಕ್ಕಸನ ಬೇಡಿಕೆಗೆ ಬ್ರಹ್ಮ ತಥಾಸ್ತು ಎಂದುಸುರಿದ
ಬೆಸೆಯಿತಾಗ ಜಗದ್ಮಾತಾಪಿತರ ಸಂಬಂಧ..!

ತಾರಕಾಸುರನ  ವಧಿಸಲು ಜನಿಸಿದ ಮಾತೆಯ ಕಂದ
ಷಣ್ಮುಖ, ಸ್ಕಂದನೆಂದೇನಿಸಿ ದೇವ ಸೇನಾನಿಯಾದ
ತರಿದು ರಕ್ಕಸನ  ಲೋಕಕಲ್ಯಾಣಕೆ ಕಾರಣೀಭೂತ
ದೇವತೆಗಳ ಹರ್ಷೋದ್ಗಾರಕೆ ಕಾರಣ ಸ್ಕಂದಮಾತ..!

ದೇವಿಯಾರಾಧನೆಯಿಂದ  ಸುಖಸಂಪತ್ತು ಸಂವೃದ್ಧಿ
ಬುಧ ಗ್ರಹದ ಕೃಪೆದೊರೆತು ಸದ್ವಿದ್ಯೆ, ವೃದ್ಧಿ ಸದ್ಬುದ್ಧಿ
ಕೆಂಪುಗುಲಾಬಿ ಪುಷ್ಪದರ್ಚನೆ ಪ್ರಿಯ ಸ್ಕಂದಮಾತೆಗೆ
ತಾಯಕೃಪಾಶೀರ್ವಾದ ಬೇಕು ಜೀವನದ ಸದ್ಗತಿಗೆ..!

✍️ ಡಾ: B.N ಶೈಲಜಾ ರಮೇಶ್
(ಶೈಲೂ...)
[20/10/2023, 11:47 am] Dr. B. N. Shylaja Ramesh: #ನವರಾತ್ರಿ_ವಿಶೇಷ_ಸಂಚಿಕೆ

ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು💐💐💐💐

#ದುರ್ಗಾ_ನವಾವತಾರ

#ಕಾತ್ಯಾಯಿನಿ

ದುರ್ಗಾ ದೇವಿಯ ಆರನೇ ಅವತಾರವಾದ ಕಾತ್ಯಾಯಿನಿ ದೇವಿಯನ್ನು  ಯುದ್ಧದ ದೇವತೆ ಎಂದೂ ಕರೆಯುತ್ತಾರೆ. ಈಕೆಯದು ಉಗ್ರರೂಪ.

  ದೇವಿ ದುರ್ಗೆಯ ಪರಮ ಭಕ್ತನಾದ ಮಹರ್ಷಿ ಕಾತ್ಯಾಯನ ದಂಪತಿಗೆ ಮಕ್ಕಳಿರಲಿಲ್ಲ. ಅವರು ದೇವಿಯನ್ನು ಕುರಿತು ತಪಸ್ಸು ಕೈಗೊಂಡಾಗ ಆಕೆ ಪ್ರತ್ಯಕ್ಷವಾಗಿ ತಾನು ಕಾತ್ಯಾಯನ ಮಹರ್ಷಿಯ ಮಗಳಾಗಿ ಜನಿಸುವುದಾಗಿ ಆಶೀರ್ವಾದ ಮಾಡಿದಳು ಎಂದು ಪುರಾಣದ ಕಥೆ ಹೇಳುತ್ತದೆ. ಕಾತ್ಯಾಯನರ ಮಗಳಾದ ಕಾರಣದಿಂದ ಅವಳನ್ನು ಕಾತ್ಯಾಯಿನಿ ಎಂದು ಕರೆಯಲಾಗುತ್ತದೆ. ದೇವಿಯು ಜನಿಸುವ ಮುನ್ನ ಮಹಿಷಾಸುರನೆಂಬ  ರಾಕ್ಷಸನ ದೌರ್ಜನ್ಯವು ಲೋಕದಲ್ಲಿ ಬಹಳಷ್ಟು ಹೆಚ್ಚಾಗಿತ್ತು. ರಾಕ್ಷಸರು ಸ್ವರ್ಗ ಹಾಗೂ ಭೂಮಿಯಲ್ಲಿ ಗದ್ದಲ ಸೃಷ್ಟಿಸಿ ಅಲ್ಲೋಲ ಕಲ್ಲೋಲ ಉಂಟು ಮಾಡಿದ್ದರು. 
ಕಾತ್ಯಾಯಿನಿ ದೇವಿಯು ಮಹಿಷಾಸುರನನ್ನು ಕೊಂದು ದೇವತೆಗಳನ್ನು ರಾಕ್ಷಸರಿಂದ ರಕ್ಷಿಸಿದ ದೇವತೆ ಈಕೆ. ಸ್ವರ್ಗವನ್ನು ಆಕ್ರಮಿಸಿಕೊಂಡು ದೇವತೆಗಳನ್ನು ಸೆರೆಯಲ್ಲಿರಿಸಿದ್ದ  ಶುಂಭ ಮತ್ತು ನಿಶುಂಭರನ್ನೂ ಕೂಡ ಕೊಂದಳು. ಅಷ್ಟೇ ಅಲ್ಲ, ರಾಕ್ಷಸರು ಸೆರೆಯಲ್ಲಿ ಇಟ್ಟಿದ್ದ ಎಲ್ಲಾ ಒಂಬತ್ತು ಗ್ರಹಗಳು ಕೂಡ ಈಕೆಯ ಮೂಲಕ ಬಿಡುಗಡೆ ಹೊಂದಿದವು. 

ಕಾತ್ಯಾಯಿನಿ ದೇವಿಯು ಗುರು ಗ್ರಹವನ್ನು ಆಳುತ್ತಾಳೆ. ದೇವಿಯ ಆರಾಧನೆ ಮಾಡುವುದರಿಂದ ಭಕ್ತರು ಗುರು ಗ್ರಹದಿಂದ ಪಡೆಯಬಹುದಾದ ಎಲ್ಲಾ ಶುಭತ್ವವನ್ನು ಪಡೆದುಕೊಳ್ಳಬಹುದು. ಜನ್ಮಕುಂಡಲಿಯಲ್ಲಿ ಗುರು ಗ್ರಹ ದೋಷವಿದ್ದರೂ ಪರಿಹಾರವಾಗುವುದು.

#ಕಾತ್ಯಾಯಿನಿ

ದುರ್ಗಾದೇವಿಯ ಆರನೇ ರೂಪ
ಕಾತ್ಯಾಯಿನಿ ತಾಯೆ ಹರಿಸು ತ್ರಿತಾಪ
ಮಹಿಷಾಸುರನ ಶಿರವ ಮರ್ಧಿಸಿದಂತೆಯೇ
ಮನದೊಳಗಡಗಿಹ ರಕ್ಕಸನ ದಹಿಸು ತಾಯೇ 

ಕಾತ್ಯಾಯಯನಪುತ್ರಿ ಬ್ರಜ ಮಂಡಲಾಧಿದೇವಿ
ಅವಿವಾಹಿತರಿಗೆ ಕಂಕಣ ಭಾಗ್ಯವೀವ ದೇವಿ
ನಿನ್ನ ಪೂಜಿಸೆ ಸಕಲ ದಾಂಪತ್ಯದೋಷ ದೂರ
ನಂಬಿಭಜಿಪ ಭಕ್ತರ ಮೇಲೆ ನಿನ್ನ ಕೃಪೆ ಅಪಾರ

ಶಾರ್ದೂಲವಾಹನೆ ದೇವಿ ದಾನವ ನಾಶಿನಿ
ಸರ್ವಭೂತಸ್ಥಿತೆ ಶ್ರೀಮಾತಾ ಕಾತ್ಯಾಯಿನಿ
ಸುಜನರಕ್ಷಕಿ ದೇವಿ ಆಯುರಾರೋಗ್ಯ ಪ್ರದಾಯಿನಿ
ಜಪಾಪುಷ್ಪ ಸಂಪ್ರೀತೆ  ಸೌಂದರ್ಯವರ್ಧಿನಿ

ಹೇಮವರ್ಣ ಶರೀರೇ ಚತುರ್ಭುಜ ಧಾರಿಣಿ
ಅಭಯಮುದ್ರಾ ದೇವಿ ಗುರುಗ್ರಹದೋಷ ಹಾರಿಣಿ
ಭಕ್ತಿಯಲಿ ಪೂಜಿಸುವೆ ಕರುಣಿಸು ಸುಜ್ಞಾನ ವಿವೇಕ
ಜ್ಞಾನಮಾರ್ಗದಲಿ ನಡೆಸಿ ಕಾಪಾಡು ಈ ಲೋಕ

✍️ ಡಾ: ಶೈಲಜಾ ರಮೇಶ್
[21/10/2023, 10:59 am] Dr. B. N. Shylaja Ramesh: #ನವರಾತ್ರಿ_ವಿಶೇಷ_ಸಂಚಿಕೆ

ಸರ್ವರಿಗೂ ನವರಾತ್ರಿ ಹಬ್ಬದ ಶುಭಾಶಯಗಳು💐💐💐
#ದುರ್ಗಾ_ನವಾವತಾರ

#ಕಾಳರಾತ್ರಿ

ನವರಾತ್ರಿಯ ಸಪ್ತಮಿಯ ದಿನ ಪೂಜಿಸುವ ದುರ್ಗಾ ಮಾತೆಯ ಅವತಾರವೇ ಕಾಲರಾತ್ರಿ. ನೋಡಲು ಭಯಂಕರಿಯಾದರೂ ಭಕ್ತರ ಪಾಲಿಗೆ ಈಕೆ ಶುಭಂಕರಿ. ಜಗದಲ್ಲಿನ ಅಂಧಕಾರವನ್ನು ಕಳೆದು ಬೆಳಕನ್ನು ನೀಡುವವಳು.
ಗಾಡಾಂಧಕಾರದಂತೆ ಶರೀರವೆಲ್ಲಾ ಕಪ್ಪಾಗಿ ಕತ್ತೆಯ ಮೇಲೆ ವಿರಾಜಮಾನಳಾಗಿ ಭಕ್ತರ ಅಭೀಷ್ಟವನ್ನು ನೆರವೇರಿಸುವವಳೇ ಕಾಲರಾತ್ರಿ. ಈಕೆಯನ್ನು ಶುಭಂಕರಿಯೆಂದೂ ಕರೆಯುತ್ತಾರೆ. ದೇವಿಯ ಹಲವು ರೂಪಗಳಲ್ಲಿ ಬಹಳ ಭೀಭತ್ಸ್ಯವಾದ ರೂಪವೆಂದರೆ ಕಾಲರಾತ್ರಿ. ಅಸುರರ ಪಾಲಿಗೆ ದುಃಸ್ವಪ್ನ ಈ ಕಾಲರಾತ್ರಿ. ಧರ್ಮದ ರಕ್ಷಣೆಗಾಗಿ, ಅಧರ್ಮರ ಪಾಲಿಗೆ ಭಯ ಹುಟ್ಟಿಸುವವಳು ಈಕೆ. ಆದರೆ ತನ್ನನ್ನು ಪೂಜಿಸುವ ಭಕ್ತರ ಪಾಲಿಗೆ ಮಾತ್ರ ಮಾತೃಸ್ವರೂಪಿಣಿಯಾದ ಪಾರ್ವತಿಯಾಗಿರುವವಳು.

ರಕ್ತಬೀಜಾಸುರನನ್ನು ವಧಿಸುವ ಸಲುವಾಗಿ ದುರ್ಗೆಯು ಕಾಲರಾತ್ರಿಯ ರೂಪದಲ್ಲಿ ಅವತರಿಸುತ್ತಾಳೆ. ರಕ್ತಬೀಜಾಸುರನನ್ನು ಕೊಂದು  ಆತನ ರಕ್ತದ ಒಂದು ಹನಿಯೂ ಕೆಳಗೆ ಬೀಳದಂತೆ ಕುಡಿದು ಮದದಿಂದ ನರ್ತಿಸುತ್ತಾಳೆ. ಶಿವನ ಎದೆಯ ಮೇಲೆ ಕಾಲಿಟ್ಟ ನಂತರ ಆಕೆಯು ಸಹಜ ಸ್ಥಿತಿಗೆ ಬರುತ್ತಾಳೆ. ಈಕೆಯನ್ನು ಆರಾಧಿಸುವವರ ಮನಸ್ಸು ಸಹಸಾರ ಚಕ್ರದಲ್ಲಿ ಸ್ಥಿತಗೊಂಡು ಪಾಪ ಹಾಗೂ ವಿಘ್ನಗಳು ನಾಶವಾಗಿ ಪುಣ್ಯಲೋಕ ಪ್ರಾಪ್ತಿಯಾಗುವುದು.
ಕಾಲರಾತ್ರಿಯು ಶನಿಗ್ರಹದ ಅಧಿಪತಿ. ಜನರು ಮಾಡಿರುವಂತಹ ಕೆಡುಕು ಹಾಗೂ ಒಳಿತನ್ನು ನೋಡಿ  ವರ ನೀಡುವವಳು. ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವವಳು, ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕತೆಯನ್ನು ಗುರುತಿಸುವವಳು ಈಕೆ. ತಾಯಿ ಕಾಲರಾತ್ರಿಯನ್ನು ಪೂಜಿಸುವುದರಿಂದ ಶನಿಯಿಂದ ಆಗುವ ತೊಂದರೆ ಹಾಗೂ ಸಾಡೇಸಾತಿ ಪ್ರಭಾವವನ್ನು ತಗ್ಗಿಸಬಹುದು.
ದಾನವರು, ರಾಕ್ಷಸರು, ಭೂತ-ಪ್ರೇತ ಮುಂತಾದುವುಗಳು ಇವಳ ಸ್ಮರಣೆಯಿಂದಲೇ ಭಯಭೀತವಾಗಿ ಓಡಿ ಹೋಗುತ್ತವೆ. 

#ಕಾಳರಾತ್ರಿ

ನವದುರ್ಗೆಯ ಸಪ್ತಮಾವತಾರಿಣಿ
ಕಾಳರಾತ್ರಿ ಶುಂಭನಿಶುಂಭ ಮರ್ಧಿನಿ
ಕಡುಶ್ಯಾಮವರ್ಣೆ ಗಾರ್ದಭ  ವಾಹಿನಿ
ಹೇ.. ಮಾತೇ... ಭಯಂಕರ ರೂಪಿಣಿ..!

ರಕ್ತಸಿಕ್ತ ರಸಾಲ ಕೆಂಡದುಂಡೆಯಂಥ ನಯನ
ರಕ್ತವಸ್ತ್ರಧಾರಿಣಿ ಅತಿ ಉಗ್ರಯುಕ್ತ ವದನ
ದುಷ್ಟವಿನಾಶಕಾರಿ ಅತ್ಯುಗ್ರ ದೃಷ್ಟಿಯ ನೋಟ
ಕರಾಳ ರಾತ್ರಿಯಧಿಪತ್ಯಿನಿ ವಿದ್ವಂಸಿಸು ಹೂಟ..!

ರಕ್ತಬೀಜಾಸುರನ ನೀ ಕೊಂದೇಯಂತೆ
ನಮ್ಮೊಳಡಗಿಹ ದುಷ್ಟತನವ ತರಿಯೇ ಮಾತೇ
ಕೈಯಲಿಡಿದ ಖಡ್ಗದಿಂದ ಅತಿಯಾಸೆಯ ಮಣಿಸು
ಅಭಯ ಹಸ್ತವನೆತ್ತಿ ಶುಭವನಿತ್ತು ಹರಸು..!

ನಿನ್ನ ಪೂಜಿಸಲು ಸಕಲ ಸಿದ್ಧಿಗಳು ಲಭ್ಯ
ತಂತ್ರ - ಮಂತ್ರ ಕಾರ್ಯಗಳಲ್ಲಿ ಜಯ
ನಿನ್ನ ನೆನೆಯಲು  ಓಡಿ ಹೋಗುವುವು ಭಯ
ದುಷ್ಟಶಕ್ತಿಗಳಿಂದ ತಾಯೆ ನೀಡಮ್ಮ ಅಭಯ..!

ಡಾ: B.N ಶೈಲಜಾ ರಮೇಶ್
[22/10/2023, 10:04 am] Dr. B. N. Shylaja Ramesh: #ನವರಾತ್ರಿಯ_ವಿಶೇಷ_ಸಂಚಿಕೆ

#ದುರ್ಗಾ_ನವಾವತಾರ

ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು💐💐💐
#ಮಹಾಗೌರಿ

        ನವರಾತ್ರಿ ಹಬ್ಬದ ಎಂಟನೇ ದಿನದ ಅಷ್ಟಮಿ ಪೂಜೆಗೆ ವಿಶೇಷ ಮಹತ್ವವಿದೆ. ನವರಾತ್ರಿ 8ನೇ ದಿನವೇ ದುರ್ಗಾಷ್ಟಮಿ. ಈ ದಿನದಂದು, ದುರ್ಗಾ ದೇವಿಯ  ಶಾಂತ ರೂಪವಾದ ಮಹಾಗೌರಿಯನ್ನು ಪೂಜಿಸಲಾಗುತ್ತದೆ. ಮಹಾಗೌರಿ ರೂಪ ಅತ್ಯಂತ ಸುಂದರ ಮತ್ತು ಸೌಮ್ಯಯುತವಾಗಿರುತ್ತದೆ. ಆಕೆ ಸದಾ ಷೋಡಶಿ, ಮಹಾಗೌರಿಯು ಸುಂದರವಾದ ಮೈಬಣ್ಣವನ್ನು ಹೊಂದಿದ್ದು, ಮುದ್ದಾದ ಮುಖವನ್ನು ಹೊಂದಿರುತ್ತಾಳೆ. ನಾಲ್ಕು ಕೈಗಳನ್ನು ಹೊಂದಿರುವ ಮಹಾಗೌರಿ ಯಾವಾಗಲೂ ವೃಷಭಾರೂಢೆ. ಮಹಾಗೌರಿಯನ್ನು ಪೂಜಿಸುವುದರಿಂದ ದಾಂಪತ್ಯದಲ್ಲಿನ ಸಮಸ್ಯೆಗಳು ಪರಿಹಾರವಾಗುತ್ತವೆ.
- ತಾಯಿಯ ಕೃಪೆಯಿಂದ ಬಯಸಿದ ಜೀವನ ಸಂಗಾತಿ ಪ್ರಾಪ್ತವಾಗುತ್ತದೆ.
- ಮಾತೆ ಮಹಾಗೌರಿಯನ್ನು ಪೂಜಿಸುವುದರಿಂದ ತೊಂದರೆಗಳು ದೂರವಾಗುತ್ತವೆ ಮತ್ತು ಪಾಪಗಳಿಂದ ಮುಕ್ತಿ ಸಿಗುತ್ತದೆ.

#ಮಹಾಗೌರಿ

ಗಿರಿರಾಜನ ಮಗಳು ಗಿರಿಜೆ ಮಹಾಗೌರಿಯಿವಳು
ಶಿವನ ವರಿಸಲು ಮಾನವರೂಪ ತಾಳಿ ಬಂದವಳು
ಸಹಸ್ರ ವರ್ಷಗಳ ಕಠಿಣ ತಪೋ ಬಲದ ಕಾರಣ
ಶಿವ ಶಿವೆಯರ ಶುಭ ಮಹಾಕಲ್ಯಾಣದ ಕಥನ

ತಾಯಿ ಮಹಾಗೌರಿ ಸದಾ ಹದಿನಾರರ ನವ ತರುಣಿ
ಶರನ್ನವರಾತ್ರಿಯ ಅಷ್ಟಮಿ ದಿನ ಪೂಜೆಗೊಳ್ಳುವ ರಮಣಿ
ಚತುರ್ಭುಜೆ ಇವಳು ವೃಷಭವೇರಿ ಕುಳಿತವಳು
ತ್ರಿಶೂಲಡಮರು ಕೈಯಲ್ಹಿಡಿದು ಅಭಯನೀಡುವಳು

ಶಾಂತಸ್ವರೂಪಿಣಿ ಶ್ವೇತವಸ್ತ್ರಧರೆ ಗೌರವರ್ಣೆ
ಮಂದಸ್ಮಿತಳೆ ಚಂದ್ರವದನೆ ತೇಜೋಪೂರ್ಣೆ
ರಾಹುದೋಷವನು ಕಳೆದು ಶುಭವೀವ ಜಗಜ್ಜನನಿ
ಇಷ್ಟಾರ್ಥವ ನೀಡಿ ಹರಸುವ ಗೌರಿಮಾ ಕಾತ್ಯಾಯನಿ

ವರವನೀಡೆ ಶುದ್ಧ ಮನಸ್ಸಿನಿಂದಲಿ ಪೂಜಿಸುವೆ
ಗೌರಿದೇವಿ ನಿನಗಿಷ್ಟದ ಮಲ್ಲಿಗೆಯನರ್ಪಿಸುವೆ 
ಆಯುರಾರೋಗ್ಯದ ಜೊತೆಗೆ ಸುಖಸಂಪತ್ತು
ಸರಿ ಮಾರ್ಗದಲ್ಲಿ ನಡೆಸಿ ನೀಗಿಸು ತಾಯೇ ಆಪತ್ತು

ಡಾ: ಶೈಲಜಾ ರಮೇಶ್
(ಶೈಲೂ)
[23/10/2023, 11:44 am] Dr. B. N. Shylaja Ramesh: #ನವರಾತ್ರಿಯ_ವಿಶೇಷ_ಸಂಚಿಕೆ

ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು💐💐💐

#ದುರ್ಗಾ_ನವಾವತಾರ

#ಸಿದ್ಧಿದಾತ್ರಿ

         ನವರಾತ್ರಿಯ 9ನೇ ಹಾಗೂ ಕೊನೆಯ ದಿನವೇ ಮಹಾನವಮಿ, ಈ  ದಿನದಂದು ತಾಯಿ ದುರ್ಗೆಯ ಅಂತಿಮ ರೂಪವಾದ ಸಿದ್ಧಿದಾತ್ರಿಯ ಪೂಜೆ ಮಾಡಲಾಗುವುದು. 
ಸಿದ್ಧಿದಾತ್ರಿಯ ಅವತಾರವು ತುಂಬಾ ಶಕ್ತಿಯುತವಾಗಿದೆ ಆಕೆಗೆ ನಾಲ್ಕು ತೋಳುಗಳಿವೆ.  ತಾಯಿಯ ಬಲಭಾಗದಲ್ಲಿ, ಆಕೆಯ ಕೆಳಗಿನ ಕೈಯಲ್ಲಿ ಚಕ್ರ ಮತ್ತು ಮೇಲಿನ ಕೈಯಲ್ಲಿ ಗದೆಯನ್ನು ನೋಡಬಹುದು. ಎಡಭಾಗದ  ಕೆಳಗಿನ ಕೈಯಲ್ಲಿ ಶಂಖವನ್ನು ಮತ್ತು ಮೇಲಿನ ಕೈಯಲ್ಲಿ ಕಮಲದ ಹೂವನ್ನು ಹಿಡಿದಿದ್ದಾಳೆ. ಈಕೆ ಅತ್ಯಂತ ಸುಂದರ ರೂಪವನ್ನು ಹೊಂದಿರುತ್ತಾಳೆ. ಈ ಆಯುಧಗಳಿಂದ ತಾಯಿ ರಾಕ್ಷಸರನ್ನು ಕೊಲ್ಲುತ್ತಾಳೆ. ತಾಯಿಯ ವಾಹನ ಸಿಂಹವಾಗಿದ್ದು, ತಾಯಿ ಕಮಲದ ಹೂವಿನ ಮೇಲೆ ಕುಳಿತುಕೊಳ್ಳುತ್ತಾಳೆ. ಈ ದಿನ ಸಿದ್ಧಿದಾತ್ರಿ ದೇವಿಯನ್ನು ಧ್ಯಾನಿಸಿ ಪೂಜಿಸುವುದರಿಂದ ತಾಯಿಯು ಪ್ರಸನ್ನಳಾಗುತ್ತಾಳೆ ಮತ್ತು ಭಕ್ತರಿಗೆ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ಅನುಗ್ರಹಿಸುತ್ತಾಳೆ ಎಂದು ಹೇಳಲಾಗುತ್ತದೆ. ಈ ದಿನ ಕನ್ಯಾ ಪೂಜೆಯನ್ನೂ ಸಹ ಮಾಡುತ್ತಾರೆ.

#ಸಿದ್ಧಿಧಾತ್ರಿ

ನವರಾತ್ರಿಯ ಮಹಾನವಮಿಯಲಿ ಪೂಜಿತೆ
ಸರ್ವಶಕ್ತಿ, ವೈಭವ, ನವವಿಧ ಭಕ್ತಿ ಪ್ರದಾತೆ
ಸಿದ್ಧಿದಾತ್ರಿ ಅಣಿಮಾದಿ ಅಷ್ಟ ಸಿದ್ಧಿಗಳ ಒಡತಿ
ಇಷ್ಟಕಾಮ್ಯಗಳಲಿ ಪರಿಪೂರ್ಣತೆಯೀವ ಆದಿಶಕ್ತಿ

ಮಹಾಲಕ್ಷ್ಮಿ, ಮಹಾಗೌರಿ, ಸರಸ್ವತಿಯ ಪ್ರತಿರೂಪ
ಸುಖಸಂಪತ್ತುಗಳನಿತ್ತು ಹರಿಸುವಳು ತ್ರಿತಾಪ
ನವದುರ್ಗೆಯರ ನವಶಕ್ತಿಯ ವೈಭವದ ಅನಾವರಣ 
ಭೌತಿಕ, ಲೌಕಿಕ, ಆಧ್ಯಾತ್ಮಿಕತೆಯ ಯಶಸ್ಸಿಗೆ ಕಾರಣ

ತ್ರಿಮೂರ್ತಿಗಳ ದಿವ್ಯಶಕ್ತಿ, ಶಿವಾಂಶೇ ಅರ್ಧನಾರೀಶ್ವರಿ
ದುಷ್ಟ ದಮನೆ ಶಿಷ್ಟಪಾಲಕಿ ತಾಯೇ ಅಭಯಂಕರಿ
ಸಂಸಾರದುಃಖಹಾರಿಣಿ
ಜೀವನ್ಮುಕ್ತಿ, ಜ್ಞಾನ ಮೋಕ್ಷ ಪ್ರದಾತೆ
ಸಿದ್ಧಿದಾತ್ರಿ ನಿನ್ನ ಭಜಿಸಿ ಪೂಜಿಸಲು ಜೀವನಸಾರ್ಥಕತೆ

ಕಮಲಿನಿ ಕಮಲವದನೆ ಕಮಲಪುಷ್ಪಧಾರಿಣಿ
ಶಂಖ ಚಕ್ರ ಗಧಾ ಪದ್ಮಧರೆ ದೇವಿ ಸಿಂಹವಾಹಿನಿ
ಭಕ್ತರಿಗಭಯ ಕೊಡುವ ಅತ್ಯಂತ ಪ್ರಸನ್ನ ರೂಪಳೆ
ನಮಿಪೇ ತಾಯೇ ಸಹಸ್ರಾರ ಚಕ್ರದಲ್ಲಿ ನಿಂತವಳೇ

ಡಾ: ಶೈಲಜಾ ರಮೇಶ್
[23/10/2023, 11:54 am] Dr. B. N. Shylaja Ramesh: #ನವರಾತ್ರಿಯ_ವಿಶೇಷ_ಸಂಚಿಕೆ

ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು💐💐💐

#ದುರ್ಗಾ_ನವಾವತಾರ

#ಸಿದ್ಧಿದಾತ್ರಿ

         ನವರಾತ್ರಿಯ 9ನೇ ಹಾಗೂ ಕೊನೆಯ ದಿನವೇ ಮಹಾನವಮಿ, ಈ  ದಿನದಂದು ತಾಯಿ ದುರ್ಗೆಯ ಅಂತಿಮ ರೂಪವಾದ ಸಿದ್ಧಿದಾತ್ರಿಯ ಪೂಜೆ ಮಾಡಲಾಗುವುದು. 
ಸಿದ್ಧಿದಾತ್ರಿಯ ಅವತಾರವು ತುಂಬಾ ಶಕ್ತಿಯುತವಾಗಿದೆ, 
ಈಕೆ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಂಭ್ಯ, ಇಶಿತ್ವ ಮತ್ತು ವಶಿತ್ವ ಎಂಬ ಎಂಟು ಅಲೌಕಿಕ ಶಕ್ತಿಗಳನ್ನು ಅಥವಾ ಸಿದ್ಧಿಗಳನ್ನು ಹೊಂದಿದ್ದಾಳೆ.    ಪುರಾಣದ ಕಥೆಗಳ ಪ್ರಕಾರ ತಾಯಿ ಸಿದ್ಧಿದಾತ್ರಿಯಿಂದ ಆಶೀರ್ವಾದ ಪಡೆದ ಶಿವನು ಆಕೆಯಿಂದ ಅಷ್ಟ ಸಿದ್ಧಿಗಳನ್ನು ಪಡೆದ ಎಂದು ಹೇಳಲಾಗುತ್ತದೆ. ಬ್ರಹ್ಮಾಂಡದ ಸೃಷ್ಟಿಯ ವೇಳೆ ಶಿವನು  ಶಕ್ತಿದೇವಿಯನ್ನು ಆರಾಧಿಸಿದನು. ಎಷ್ಟೇ ಆರಾಧಿಸದರೂ ಶಕ್ತಿ ದೇವತೆ ಪ್ರತ್ಯಕ್ಷಳಾಗಲಿಲ್ಲ. ನಂತರ ಆಕೆಯು ಶಿವನ ಎಡ ಭಾಗದ ಅರ್ಧದಲ್ಲಿ ಕಾಣಿಸಿಕೊಂಡಳು. ಅಂದಿನಿಂದ ಪರಶಿವನು ಅರ್ಧನಾರೀಶ್ವರ ಎಂಬ ಇನ್ನೊಂದು ಹೆಸರಿನಿಂದ ಗುರುತಿಸಿಕೊಂಡನು ಎಂದು ಹೇಳಲಾಗುತ್ತದೆ. ಆಕೆಗೆ ನಾಲ್ಕು ತೋಳುಗಳಿವೆ.  ತಾಯಿಯ ಬಲಭಾಗದಲ್ಲಿ, ಆಕೆಯ ಕೆಳಗಿನ ಕೈಯಲ್ಲಿ ಚಕ್ರ ಮತ್ತು ಮೇಲಿನ ಕೈಯಲ್ಲಿ ಗದೆಯನ್ನು ನೋಡಬಹುದು. ಎಡಭಾಗದ  ಕೆಳಗಿನ ಕೈಯಲ್ಲಿ ಶಂಖವನ್ನು ಮತ್ತು ಮೇಲಿನ ಕೈಯಲ್ಲಿ ಕಮಲದ ಹೂವನ್ನು ಹಿಡಿದಿದ್ದಾಳೆ. ಈಕೆ ಅತ್ಯಂತ ಸುಂದರ ರೂಪವನ್ನು ಹೊಂದಿರುತ್ತಾಳೆ. ಈ ಆಯುಧಗಳಿಂದ ತಾಯಿ ರಾಕ್ಷಸರನ್ನು ಕೊಲ್ಲುತ್ತಾಳೆ. ತಾಯಿಯ ವಾಹನ ಸಿಂಹವಾಗಿದ್ದು, ತಾಯಿ ಕಮಲದ ಹೂವಿನ ಮೇಲೆ ಕುಳಿತುಕೊಳ್ಳುತ್ತಾಳೆ. ಈ ದಿನ ಸಿದ್ಧಿದಾತ್ರಿ ದೇವಿಯನ್ನು ಧ್ಯಾನಿಸಿ ಪೂಜಿಸುವುದರಿಂದ ತಾಯಿಯು ಪ್ರಸನ್ನಳಾಗುತ್ತಾಳೆ ಮತ್ತು ಭಕ್ತರಿಗೆ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ಅನುಗ್ರಹಿಸುತ್ತಾಳೆ ಎಂದು ಹೇಳಲಾಗುತ್ತದೆ. ಈ ದಿನ ಕನ್ಯಾ ಪೂಜೆಯನ್ನೂ ಸಹ ಮಾಡುತ್ತಾರೆ.

#ಸಿದ್ಧಿಧಾತ್ರಿ

ನವರಾತ್ರಿಯ ಮಹಾನವಮಿಯಲಿ ಪೂಜಿತೆ
ಸರ್ವಶಕ್ತಿ, ವೈಭವ, ನವವಿಧ ಭಕ್ತಿ ಪ್ರದಾತೆ
ಸಿದ್ಧಿದಾತ್ರಿ ಅಣಿಮಾದಿ ಅಷ್ಟ ಸಿದ್ಧಿಗಳ ಒಡತಿ
ಇಷ್ಟಕಾಮ್ಯಗಳಲಿ ಪರಿಪೂರ್ಣತೆಯೀವ ಆದಿಶಕ್ತಿ

ಮಹಾಲಕ್ಷ್ಮಿ, ಮಹಾಗೌರಿ, ಸರಸ್ವತಿಯ ಪ್ರತಿರೂಪ
ಸುಖಸಂಪತ್ತುಗಳನಿತ್ತು ಹರಿಸುವಳು ತ್ರಿತಾಪ
ನವದುರ್ಗೆಯರ ನವಶಕ್ತಿಯ ವೈಭವದ ಅನಾವರಣ 
ಭೌತಿಕ, ಲೌಕಿಕ, ಆಧ್ಯಾತ್ಮಿಕತೆಯ ಯಶಸ್ಸಿಗೆ ಕಾರಣ

ತ್ರಿಮೂರ್ತಿಗಳ ದಿವ್ಯಶಕ್ತಿ, ಶಿವಾಂಶೇ ಅರ್ಧನಾರೀಶ್ವರಿ
ದುಷ್ಟ ದಮನೆ ಶಿಷ್ಟಪಾಲಕಿ ತಾಯೇ ಅಭಯಂಕರಿ
ಸಂಸಾರದುಃಖಹಾರಿಣಿ
ಜೀವನ್ಮುಕ್ತಿ, ಜ್ಞಾನ ಮೋಕ್ಷ ಪ್ರದಾತೆ
ಸಿದ್ಧಿದಾತ್ರಿ ನಿನ್ನ ಭಜಿಸಿ ಪೂಜಿಸಲು ಜೀವನಸಾರ್ಥಕತೆ

ಕಮಲಿನಿ ಕಮಲವದನೆ ಕಮಲಪುಷ್ಪಧಾರಿಣಿ
ಶಂಖ ಚಕ್ರ ಗಧಾ ಪದ್ಮಧರೆ ದೇವಿ ಸಿಂಹವಾಹಿನಿ
ಭಕ್ತರಿಗಭಯ ಕೊಡುವ ಅತ್ಯಂತ ಪ್ರಸನ್ನ ರೂಪಳೆ
ನಮಿಪೇ ತಾಯೇ ಸಹಸ್ರಾರ ಚಕ್ರದಲ್ಲಿ ನಿಂತವಳೇ

ಡಾ: ಶೈಲಜಾ ರಮೇಶ್
[24/10/2023, 11:30 am] Dr. B. N. Shylaja Ramesh: ವಿಜಯ ದಶಮಿ - ನವರಾತ್ರಿ ಉತ್ಸವದ ಕಡೆಯ ದಿನ. ಈ ದಿನದಂದು ಪಾಂಡವರು ಶತ್ರುಗಳ ಮೇಲೆ ಜಯ ಸಾಧಿಸಿದ ದಿನವೆಂದು ಹೇಳಲಾಗುತ್ತದೆ. ಹೆಸರೇ ಹೇಳುವಂತೆ ಇದು ದಶಮಿ - ಹತ್ತನೆಯ ದಿನ ಅಂದರೆ ದಸರಾ ಉತ್ಸವದ ಹತ್ತನೆಯ ದಿನ. 'ದಶ ಅಹರ್' -> ದಶಹರ -> ದಶರಾ -> ದಸರಾ ಎಂದೇ ಪ್ರಸಿದ್ಧವಾಗಿರುವ ಶಕ್ತಿಪೂಜೆಯ ಶರನ್ನವರಾತ್ರಿಗಳ ನಂತರದ ವಿಜಯೋತ್ಸವದ ದಿನ. ಚಾಂದ್ರಮಾನ ರೀತಿಯಲ್ಲಿ ಹೇಳುವುದಾದರೆ ಶರದೃತುವಿನ ಆಶ್ವಯುಜ ಮಾಸ ಶುಕ್ಲಪಕ್ಷದ ಹತ್ತನೆಯ ದಿನ. 'ದಶಹರ'ದಂದು ದಶಕಂಠ ರಾವಣನನ್ನು ಶ್ರೀರಾಮನು ಸಂಹರಿಸಿದ ವಿಜಯೋತ್ಸವವೆಂದೂ ಪ್ರತೀತಿಯಿದೆ.

ಪಾಂಡವರು, ಮತ್ಸ್ಯದೇಶದ ರಾಜನಾದ ವಿರಾಟನ ರಾಜಧಾನಿಯಲ್ಲಿ ಒಂದು ವರ್ಷದ ಅಜ್ಞಾತವಾಸ ಮುಗಿದ ಬಳಿಕ ಕಾಡಿನಲ್ಲಿದ್ದ ಮಸಣದ ಶಮೀ ವೃಕ್ಷಕ್ಕೆ ಅಲ್ಲಿ ಅಡಗಿಸಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ಬಂದರಂತೆ. ಅಲ್ಲಿ ಶಮೀ ವೃಕ್ಷವನ್ನು ಪೂಜಿಸಿ, ಮಾತೆ ದುರ್ಗಾದೇವಿಯನ್ನು ನಮಿಸಿ, ಯುದ್ಧಕ್ಕೆ ಹೊರಟರಂತೆ. ಯುದ್ಧದಲ್ಲಿ ಜಯಶಾಲಿಯಾದದ್ದರಿಂದ ವಿಜಯದಶಮಿ ಎಂದು ಹೆಸರು ಬಂದಿತಂತೆ. ಇಂದಿಗೂ ಗುರುಹಿರಿಯರಿಗೆ ಶಮೀ ಎಲೆಗಳನ್ನು ನೀಡುತ್ತಾ ಈ ಕೆಳಗಿನ ಶ್ಲೋಕವನ್ನು ಹೇಳುವುದು ರೂಢಿಯಲ್ಲಿದೆ:

ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ |
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನೀ ||
ಕರಿಷ್ಯಮಾಣಯಾತ್ರಾಯಾ ಯಥಾಕಾಲಂ ಸುಖಂ ಮಯಾ |
ತತ್ರ ನಿರ್ವಿಘ್ನಕರ್ತ್ರೀ ತ್ವಂ ಭವ ಶ್ರೀರಾಮಪೂಜಿತಾ ||

ಈ ವಿಜಯ ದಶಮಿ ದಿನದ೦ದೇ, 'ದ್ವೈತ ವೇದಾ೦ತ' ಅಥವ 'ತತ್ವ ಸಿದ್ಧಾ೦ತ'ದ ಪ್ರತಿಷ್ಠಾಪನಾಚಾರ್ಯರಾದ ಶ್ರೀ ಶ್ರೀ ವಿಶ್ವ ಗುರು ಶ್ರೀ ಮಧ್ವಾಚಾರ್ಯರು, ಉಡುಪಿಯ ಬಳಿ ಇರುವ "ಪಾಜಕ" ಎ೦ಬ ಸ್ಥಳದಲ್ಲಿ ಕ್ರಿ.ಶ. ೧೨೩೮ರಲ್ಲಿ ಅವತರಿಸಿದರು. ಹಾಗಾಗಿ, ವಿಜಯ ದಶಮಿಯ೦ದೇ ಮಧ್ವ ಜಯ೦ತಿಯನ್ನು ಅವರ ಅನುಯಾಯಿಗರು ಆಚರಿಸುತ್ತಾರೆ.

            ಪಾಂಡವರು, ಮತ್ಸ್ಯದೇಶದ ರಾಜನಾದ ವಿರಾಟನ ರಾಜಧಾನಿಯಲ್ಲಿ ಒಂದು ವರ್ಷದ ಅಜ್ಞಾತವಾಸ ಮುಗಿದ ಬಳಿಕ ಕಾಡಿನಲ್ಲಿದ್ದ ಮಸಣದ ಶಮೀ ವೃಕ್ಷಕ್ಕೆ ಅಲ್ಲಿ ಅಡಗಿಸಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ಬಂದರಂತೆ. ಅಲ್ಲಿ ಶಮೀ ವೃಕ್ಷವನ್ನು ಪೂಜಿಸಿ, ಮಾತೆ ದುರ್ಗಾದೇವಿಯನ್ನು ನಮಿಸಿ, ಯುದ್ಧಕ್ಕೆ ಹೊರಟರಂತೆ. ಯುದ್ಧದಲ್ಲಿ ಜಯಶಾಲಿಯಾದದ್ದರಿಂದ ವಿಜಯದಶಮಿ ಎಂದು ಹೆಸರು ಬಂದಿತಂತೆ. ಇಂದಿಗೂ ಗುರುಹಿರಿಯರಿಗೆ ಶಮೀ ಎಲೆಗಳನ್ನು ನೀಡುತ್ತಾ ಈ ಕೆಳಗಿನ ಶ್ಲೋಕವನ್ನು ಹೇಳುವುದು ರೂಢಿಯಲ್ಲಿದೆ:

ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ |
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನೀ ||
ಕರಿಷ್ಯಮಾಣಯಾತ್ರಾಯಾ ಯಥಾಕಾಲಂ ಸುಖಂ ಮಯಾ |
ತತ್ರ ನಿರ್ವಿಘ್ನಕರ್ತ್ರೀ ತ್ವಂ ಭವ ಶ್ರೀರಾಮಪೂಜಿತಾ ||

ಈ ವಿಜಯ ದಶಮಿ ದಿನದ೦ದೇ, 'ದ್ವೈತ ವೇದಾ೦ತ' ಅಥವ 'ತತ್ವ ಸಿದ್ಧಾ೦ತ'ದ ಪ್ರತಿಷ್ಠಾಪನಾಚಾರ್ಯರಾದ ಶ್ರೀ ಶ್ರೀ ವಿಶ್ವ ಗುರು ಶ್ರೀ ಮಧ್ವಾಚಾರ್ಯರು, ಉಡುಪಿಯ ಬಳಿ ಇರುವ "ಪಾಜಕ" ಎ೦ಬ ಸ್ಥಳದಲ್ಲಿ ಕ್ರಿ.ಶ. ೧೨೩೮ರಲ್ಲಿ ಅವತರಿಸಿದರು. ಹಾಗಾಗಿ, ವಿಜಯ ದಶಮಿಯ೦ದೇ ಮಧ್ವ ಜಯ೦ತಿಯನ್ನು ಅವರ ಅನುಯಾಯಿಗರು ಆಚರಿಸುತ್ತಾರೆ.

        ಜಯವು  ಶತಃಸಿದ್ಧವೆಂದು ನಂಬಿ ವಿಜಯದಶಮಿಯಂದು ಹಿಂದಿನಕಾಲದ ನಮ್ಮ ಅರಸರು ದಂಡಯಾತ್ರೆಗೆ ಹೊರಡುತ್ತಿದ್ದರು; ಇನ್ನೂ ರಾಜವಂಶದವರಲ್ಲಿ ಆ ಪದ್ಧತಿ ಉಳಿದುಕೊಂಡಿದ್ದು, ಸಾಂಕೇತಿಕವಾಗಿ ತಮ್ಮ ಚತುರಂಗ ಸಮೇತವಾಗಿ ರಾಜ್ಯದ ಗಡಿಯನ್ನು ದಾಟಿದಂತೆ ಮಾಡಿ, ಹಿಂದಿರುಗುತ್ತಾರೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆರಂಭವಾದ ಈ ಸೀಮೋಲ್ಲಂಘನ ಮೈಸೂರಿನ ಒಡೆಯರ ಕಾಲದಲ್ಲಿ ಮುಂದುವರೆಯಿತು.
ಶಮೀವೃಕ್ಷವನ್ನು ಕನ್ನಡದಲ್ಲಿ ಬನ್ನಿಮರ ಎನ್ನುತ್ತಾರೆ. ಈಗಲೂ ವಿಜಯದಶಮಿಯಂದು ಒಡೆಯರ ವಂಶಜರು ಸಾಂಕೇತಿಕವಾಗಿ ಮೈಸೂರಿನಲ್ಲಿ ಬನ್ನಿಮಂಟಪಕ್ಕೆ ಮೆರವಣಿಗೆ ಸಮೇತ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ. ಹೀಗೆ ಬನ್ನಿ ಅಥವಾ ಶಮೀ ಮರವು ವಿಜಯದ ಸಂಕೇತವಾದ್ದರಿಂದ ಕನ್ನಡದಲ್ಲಿ ವಿಜಯದಶಮಿಯನ್ನು ವಿಜಯ-ದಶಮೀ ಹಾಗೂ ವಿಜಯದ-ಶಮೀ ಎಂದು ಕನ್ನಡಿಗರು ಕೊಂಡಾಡುತ್ತಾರೆ.
ದಸರಾ ಅಥವಾ ವಿಜಯದಶಮಿಯು ದುಷ್ಟರ ಮೇಲೆ ಒಳಿತಿನ ವಿಜಯವನ್ನು ಸ್ಮರಿಸಲು ಭಾರತದಾದ್ಯಂತ ಆಚರಿಸಲಾಗುವ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವನ್ನು ನೇಪಾಳ ಮತ್ತು ಬಾಂಗ್ಲಾದೇಶ ಸೇರಿದಂತೆ ಇತರ ದೇಶಗಳಲ್ಲಿ ವಿಶಿಷ್ಟ ಆಚರಣೆಗಳು, ಸಂಪ್ರದಾಯಗಳು ಮತ್ತು ಹೆಚ್ಚಿನ ಉತ್ಸಾಹದಿಂದ ಆಚರಿಸಲಾಗುತ್ತದೆ. ಹಲವಾರು ಕಥೆಗಳು ದಸರಾ ಹಬ್ಬದೊಂದಿಗೆ ಸಂಬಂಧ ಹೊಂದಿರುವುದರಿಂದ, ಇದನ್ನು ದೇಶಾದ್ಯಂತ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ದಸರಾವನ್ನು ವಿವಿಧ ದೇಶಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ; ಆದಾಗ್ಯೂ, ಅದರ ಮಹತ್ವವು ಒಂದೇ ಆಗಿರುತ್ತದೆ. ಹಬ್ಬವು ನಮ್ಮೊಳಗಿನ ನಕಾರಾತ್ಮಕ ಶಕ್ತಿ ಮತ್ತು ಕೆಟ್ಟದ್ದನ್ನು ಹೋಗಲಾಡಿಸುತ್ತದೆ ಮತ್ತು ಒಳ್ಳೆಯ ವಿಷಯಗಳ ಆರಂಭವನ್ನು ಸೂಚಿಸುತ್ತದೆ

    ನಮ್ಮ ಮೈಸೂರಲ್ಲಿ ವಿಜಯದಶಮಿಯ ದಿನದಂದು ನಾಡ ದೇವಿ ಚಾಮುಂಡೇಶ್ವರಿಯ ಜಂಬೂಸವಾರಿ ಆಯೋಜನೆ ಮಾಡುತ್ತಾರೆ ಈ ಉತ್ಸವ ವಿಶ್ವವಿಖ್ಯಾತವಾಗಿದೆ.  ವಿಜಯದಶಮಿಯಂದೇ ರಾಮಲೀಲ ಉತ್ಸವಗಳು ದೆಹಲಿ ಮತ್ತು ಇತರೆಡೆಗಳಲ್ಲಿ ವಿಜ್ರಂಭಣೆಯಿಂದ ನೆರವೇರುತ್ತದೆ. ಕಾಳಿ ವಿಗ್ರಹಗಳನ್ನು ಉತ್ಸವ ಸಮೇತವಾಗಿ ಕೊಂಡೊಯ್ದು ನೀರಿನಲ್ಲಿ ವಿಸರ್ಜಿಸುವ ಪದ್ಧತಿಯೂ ಪಶ್ಚಿಮ ಬಂಗಾಳ ಮತ್ತು ಇತರ ಹಲವೆಡೆಗಳಲ್ಲಿ ನಡೆಯುತ್ತಿದೆ. ಸತ್ಯಕ್ಕೇ ಜಯ. ಒಳಿತಿಗೇ ಗೆಲುವು. ಒಳಿತು ಕೆಡುಕಿನ ಮೇಲೆ ಜಯಸಾಧಿಸುತ್ತದೆ ಎಂಬ ನಂಬಿಕೆ ನಮ್ಮ ಸಂಸ್ಕೃತಿಯಲ್ಲಿ ನಿರಂತರವಾಗಿ ಹರಿದುಬಂದಿದೆ. ಒಳಿತು ಕೆಡುಕಿನ ಮೇಲೆ ಜಯಸಾಧಿಸಿದ ದಿನವೇ ವಿಜಯದಶಮಿ ಎನ್ನಲಾಗಿದೆ.
[24/10/2023, 11:36 am] Dr. B. N. Shylaja Ramesh: ವಿಜಯ ದಶಮಿ - ನವರಾತ್ರಿ ಉತ್ಸವದ ಕಡೆಯ ದಿನ. ಈ ದಿನದಂದು ಪಾಂಡವರು ಶತ್ರುಗಳ ಮೇಲೆ ಜಯ ಸಾಧಿಸಿದ ದಿನವೆಂದು ಹೇಳಲಾಗುತ್ತದೆ. ಹೆಸರೇ ಹೇಳುವಂತೆ ಇದು ದಶಮಿ - ಹತ್ತನೆಯ ದಿನ ಅಂದರೆ ದಸರಾ ಉತ್ಸವದ ಹತ್ತನೆಯ ದಿನ. 'ದಶ ಅಹರ್' -> ದಶಹರ -> ದಶರಾ -> ದಸರಾ ಎಂದೇ ಪ್ರಸಿದ್ಧವಾಗಿರುವ ಶಕ್ತಿಪೂಜೆಯ ಶರನ್ನವರಾತ್ರಿಗಳ ನಂತರದ ವಿಜಯೋತ್ಸವದ ದಿನ. ಚಾಂದ್ರಮಾನ ರೀತಿಯಲ್ಲಿ ಹೇಳುವುದಾದರೆ ಶರದೃತುವಿನ ಆಶ್ವಯುಜ ಮಾಸ ಶುಕ್ಲಪಕ್ಷದ ಹತ್ತನೆಯ ದಿನ. 'ದಶಹರ'ದಂದು ದಶಕಂಠ ರಾವಣನನ್ನು ಶ್ರೀರಾಮನು ಸಂಹರಿಸಿದ ವಿಜಯೋತ್ಸವವೆಂದೂ ಪ್ರತೀತಿಯಿದೆ.

ಪಾಂಡವರು, ಮತ್ಸ್ಯದೇಶದ ರಾಜನಾದ ವಿರಾಟನ ರಾಜಧಾನಿಯಲ್ಲಿ ಒಂದು ವರ್ಷದ ಅಜ್ಞಾತವಾಸ ಮುಗಿದ ಬಳಿಕ ಕಾಡಿನಲ್ಲಿದ್ದ ಮಸಣದ ಶಮೀ ವೃಕ್ಷಕ್ಕೆ ಅಲ್ಲಿ ಅಡಗಿಸಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ಬಂದರಂತೆ. ಅಲ್ಲಿ ಶಮೀ ವೃಕ್ಷವನ್ನು ಪೂಜಿಸಿ, ಮಾತೆ ದುರ್ಗಾದೇವಿಯನ್ನು ನಮಿಸಿ, ಯುದ್ಧಕ್ಕೆ ಹೊರಟರಂತೆ. ಯುದ್ಧದಲ್ಲಿ ಜಯಶಾಲಿಯಾದದ್ದರಿಂದ ವಿಜಯದಶಮಿ ಎಂದು ಹೆಸರು ಬಂದಿತಂತೆ. ಇಂದಿಗೂ ಗುರುಹಿರಿಯರಿಗೆ ಶಮೀ ಎಲೆಗಳನ್ನು ನೀಡುತ್ತಾ ಈ ಕೆಳಗಿನ ಶ್ಲೋಕವನ್ನು ಹೇಳುವುದು ರೂಢಿಯಲ್ಲಿದೆ:

ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ |
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನೀ ||
ಕರಿಷ್ಯಮಾಣಯಾತ್ರಾಯಾ ಯಥಾಕಾಲಂ ಸುಖಂ ಮಯಾ |
ತತ್ರ ನಿರ್ವಿಘ್ನಕರ್ತ್ರೀ ತ್ವಂ ಭವ ಶ್ರೀರಾಮಪೂಜಿತಾ ||

ಈ ವಿಜಯ ದಶಮಿ ದಿನದ೦ದೇ, 'ದ್ವೈತ ವೇದಾ೦ತ' ಅಥವ 'ತತ್ವ ಸಿದ್ಧಾ೦ತ'ದ ಪ್ರತಿಷ್ಠಾಪನಾಚಾರ್ಯರಾದ ಶ್ರೀ ಶ್ರೀ ವಿಶ್ವ ಗುರು ಶ್ರೀ ಮಧ್ವಾಚಾರ್ಯರು, ಉಡುಪಿಯ ಬಳಿ ಇರುವ "ಪಾಜಕ" ಎ೦ಬ ಸ್ಥಳದಲ್ಲಿ ಕ್ರಿ.ಶ. ೧೨೩೮ರಲ್ಲಿ ಅವತರಿಸಿದರು. ಹಾಗಾಗಿ, ವಿಜಯ ದಶಮಿಯ೦ದೇ ಮಧ್ವ ಜಯ೦ತಿಯನ್ನು ಅವರ ಅನುಯಾಯಿಗರು ಆಚರಿಸುತ್ತಾರೆ.

            ಪಾಂಡವರು, ಮತ್ಸ್ಯದೇಶದ ರಾಜನಾದ ವಿರಾಟನ ರಾಜಧಾನಿಯಲ್ಲಿ ಒಂದು ವರ್ಷದ ಅಜ್ಞಾತವಾಸ ಮುಗಿದ ಬಳಿಕ ಕಾಡಿನಲ್ಲಿದ್ದ ಮಸಣದ ಶಮೀ ವೃಕ್ಷಕ್ಕೆ ಅಲ್ಲಿ ಅಡಗಿಸಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ಬಂದರಂತೆ. ಅಲ್ಲಿ ಶಮೀ ವೃಕ್ಷವನ್ನು ಪೂಜಿಸಿ, ಮಾತೆ ದುರ್ಗಾದೇವಿಯನ್ನು ನಮಿಸಿ, ಯುದ್ಧಕ್ಕೆ ಹೊರಟರಂತೆ. ಯುದ್ಧದಲ್ಲಿ ಜಯಶಾಲಿಯಾದದ್ದರಿಂದ ವಿಜಯದಶಮಿ ಎಂದು ಹೆಸರು ಬಂದಿತಂತೆ. ಇಂದಿಗೂ ಗುರುಹಿರಿಯರಿಗೆ ಶಮೀ ಎಲೆಗಳನ್ನು ನೀಡುತ್ತಾ ಈ ಕೆಳಗಿನ ಶ್ಲೋಕವನ್ನು ಹೇಳುವುದು ರೂಢಿಯಲ್ಲಿದೆ:

ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ |
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನೀ ||
ಕರಿಷ್ಯಮಾಣಯಾತ್ರಾಯಾ ಯಥಾಕಾಲಂ ಸುಖಂ ಮಯಾ |
ತತ್ರ ನಿರ್ವಿಘ್ನಕರ್ತ್ರೀ ತ್ವಂ ಭವ ಶ್ರೀರಾಮಪೂಜಿತಾ ||

ಈ ವಿಜಯ ದಶಮಿ ದಿನದ೦ದೇ, 'ದ್ವೈತ ವೇದಾ೦ತ' ಅಥವ 'ತತ್ವ ಸಿದ್ಧಾ೦ತ'ದ ಪ್ರತಿಷ್ಠಾಪನಾಚಾರ್ಯರಾದ ಶ್ರೀ ಶ್ರೀ ವಿಶ್ವ ಗುರು ಶ್ರೀ ಮಧ್ವಾಚಾರ್ಯರು, ಉಡುಪಿಯ ಬಳಿ ಇರುವ "ಪಾಜಕ" ಎ೦ಬ ಸ್ಥಳದಲ್ಲಿ ಕ್ರಿ.ಶ. ೧೨೩೮ರಲ್ಲಿ ಅವತರಿಸಿದರು. ಹಾಗಾಗಿ, ವಿಜಯ ದಶಮಿಯ೦ದೇ ಮಧ್ವ ಜಯ೦ತಿಯನ್ನು ಅವರ ಅನುಯಾಯಿಗರು ಆಚರಿಸುತ್ತಾರೆ.

        ಜಯವು  ಶತಃಸಿದ್ಧವೆಂದು ನಂಬಿ ವಿಜಯದಶಮಿಯಂದು ಹಿಂದಿನಕಾಲದ ನಮ್ಮ ಅರಸರು ದಂಡಯಾತ್ರೆಗೆ ಹೊರಡುತ್ತಿದ್ದರು; ಇನ್ನೂ ರಾಜವಂಶದವರಲ್ಲಿ ಆ ಪದ್ಧತಿ ಉಳಿದುಕೊಂಡಿದ್ದು, ಸಾಂಕೇತಿಕವಾಗಿ ತಮ್ಮ ಚತುರಂಗ ಸಮೇತವಾಗಿ ರಾಜ್ಯದ ಗಡಿಯನ್ನು ದಾಟಿದಂತೆ ಮಾಡಿ, ಹಿಂದಿರುಗುತ್ತಾರೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆರಂಭವಾದ ಈ ಸೀಮೋಲ್ಲಂಘನ ಮೈಸೂರಿನ ಒಡೆಯರ ಕಾಲದಲ್ಲಿ ಮುಂದುವರೆಯಿತು.
ಶಮೀವೃಕ್ಷವನ್ನು ಕನ್ನಡದಲ್ಲಿ ಬನ್ನಿಮರ ಎನ್ನುತ್ತಾರೆ. ಈಗಲೂ ವಿಜಯದಶಮಿಯಂದು ಒಡೆಯರ ವಂಶಜರು ಸಾಂಕೇತಿಕವಾಗಿ ಮೈಸೂರಿನಲ್ಲಿ ಬನ್ನಿಮಂಟಪಕ್ಕೆ ಮೆರವಣಿಗೆ ಸಮೇತ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ. ಹೀಗೆ ಬನ್ನಿ ಅಥವಾ ಶಮೀ ಮರವು ವಿಜಯದ ಸಂಕೇತವಾದ್ದರಿಂದ ಕನ್ನಡದಲ್ಲಿ ವಿಜಯದಶಮಿಯನ್ನು ವಿಜಯ-ದಶಮೀ ಹಾಗೂ ವಿಜಯದ-ಶಮೀ ಎಂದು ಕನ್ನಡಿಗರು ಕೊಂಡಾಡುತ್ತಾರೆ.
ದಸರಾ ಅಥವಾ ವಿಜಯದಶಮಿಯು ದುಷ್ಟರ ಮೇಲೆ ಒಳಿತಿನ ವಿಜಯವನ್ನು ಸ್ಮರಿಸಲು ಭಾರತದಾದ್ಯಂತ ಆಚರಿಸಲಾಗುವ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವನ್ನು ನೇಪಾಳ ಮತ್ತು ಬಾಂಗ್ಲಾದೇಶ ಸೇರಿದಂತೆ ಇತರ ದೇಶಗಳಲ್ಲಿ ವಿಶಿಷ್ಟ ಆಚರಣೆಗಳು, ಸಂಪ್ರದಾಯಗಳು ಮತ್ತು ಹೆಚ್ಚಿನ ಉತ್ಸಾಹದಿಂದ ಆಚರಿಸಲಾಗುತ್ತದೆ. ಹಲವಾರು ಕಥೆಗಳು ದಸರಾ ಹಬ್ಬದೊಂದಿಗೆ ಸಂಬಂಧ ಹೊಂದಿರುವುದರಿಂದ, ಇದನ್ನು ದೇಶಾದ್ಯಂತ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ದಸರಾವನ್ನು ವಿವಿಧ ದೇಶಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ; ಆದಾಗ್ಯೂ, ಅದರ ಮಹತ್ವವು ಒಂದೇ ಆಗಿರುತ್ತದೆ. ಹಬ್ಬವು ನಮ್ಮೊಳಗಿನ ನಕಾರಾತ್ಮಕ ಶಕ್ತಿ ಮತ್ತು ಕೆಟ್ಟದ್ದನ್ನು ಹೋಗಲಾಡಿಸುತ್ತದೆ ಮತ್ತು ಒಳ್ಳೆಯ ವಿಷಯಗಳ ಆರಂಭವನ್ನು ಸೂಚಿಸುತ್ತದೆ

    ನಮ್ಮ ಮೈಸೂರಲ್ಲಿ ವಿಜಯದಶಮಿಯ ದಿನದಂದು ನಾಡ ದೇವಿ ಚಾಮುಂಡೇಶ್ವರಿಯ ಜಂಬೂಸವಾರಿ ಆಯೋಜನೆ ಮಾಡುತ್ತಾರೆ ಈ ಉತ್ಸವ ವಿಶ್ವವಿಖ್ಯಾತವಾಗಿದೆ.  ವಿಜಯದಶಮಿಯಂದೇ ರಾಮಲೀಲ ಉತ್ಸವಗಳು ದೆಹಲಿ ಮತ್ತು ಇತರೆಡೆಗಳಲ್ಲಿ ವಿಜ್ರಂಭಣೆಯಿಂದ ನೆರವೇರುತ್ತದೆ. ಕಾಳಿ ವಿಗ್ರಹಗಳನ್ನು ಉತ್ಸವ ಸಮೇತವಾಗಿ ಕೊಂಡೊಯ್ದು ನೀರಿನಲ್ಲಿ ವಿಸರ್ಜಿಸುವ ಪದ್ಧತಿಯೂ ಪಶ್ಚಿಮ ಬಂಗಾಳ ಮತ್ತು ಇತರ ಹಲವೆಡೆಗಳಲ್ಲಿ ನಡೆಯುತ್ತಿದೆ. ಸತ್ಯಕ್ಕೇ ಜಯ. ಒಳಿತಿಗೇ ಗೆಲುವು. ಒಳಿತು ಕೆಡುಕಿನ ಮೇಲೆ ಜಯಸಾಧಿಸುತ್ತದೆ ಎಂಬ ನಂಬಿಕೆ ನಮ್ಮ ಸಂಸ್ಕೃತಿಯಲ್ಲಿ ನಿರಂತರವಾಗಿ ಹರಿದುಬಂದಿದೆ. ಒಳಿತು ಕೆಡುಕಿನ ಮೇಲೆ ಜಯಸಾಧಿಸಿದ ದಿನವೇ ವಿಜಯದಶಮಿ ಎನ್ನಲಾಗಿದೆ.

#ಮೈಸೂರು_ದಸರಾ

ಸುಪ್ರಸಿದ್ಧ ಮೈಸೂರು ದಸರಾದ ಕೀರುತಿ
ನಾಡದೇವಿ ಚಾಮುಂಡಿಗೆ ಮುತ್ತಿನಾರಾತಿ
ದುಷ್ಟಮಹಿಷನ ತರಿದು, ಭಕ್ತರಿಗಿತ್ತು ಪ್ರೀತಿ
ಪೊರೆವಳೆಲ್ಲರನು ದೇವಿ ಇತ್ತು ಸನ್ಮತಿ

ಅಂಬಾರಿ ಮೇಲೆ ಅಂಬೆಯ ಮೆರವಣಿಗೆ
ಗಜ ಪಡೆಗಳ ಪಥ ಸಂಚಲನ, ಜೊತೆಗೆ
ದೀಪಾಲಂಕಾರದ ಭವ್ಯ ಸುಂದರ ದೃಶ್ಯ ಕಣ್ಣಿಗೆ.!
ನಾಡಿಗಿದು ಮೈಸೂರು ದಸರೆಯ ಕೊಡುಗೆ..!
[26/10/2023, 6:56 pm] Dr. B. N. Shylaja Ramesh: Shylaja Ramesh ಮುಕ್ತಕ

ವಾಲ್ಮೀಕಿ

ಬೇಡದಲೆ ಕಾಡುತಲಿ ಕಡಿದುಂಡು ಮೈಮರೆತು
ಕೇಡೆಣಿಸುವವ ನಾರದರ ನುಡಿಯ ಕೇಳಿ
ಬೇಡನವ ತಪಗೈದು ಮುನಿಯಾದ ಈ ಕಥೆಯು
ನಾಡಕಥೆ ರಾಮಾಯಣ ಶೈಲನಾಥ.

ಡಾ: ಶೈಲಜಾ ರಮೇಶ್
[26/10/2023, 6:57 pm] Dr. B. N. Shylaja Ramesh: #ಮುಕ್ತಕ

#ವಾಲ್ಮೀಕಿ

ಬೇಡದಲೆ ಕಾಡುತಲಿ ಕಡಿದುಂಡು ಮೈಮರೆತು
ಕೇಡೆಣಿಸಿ ಬದುಕುವವ ನಾರದರ ನುಡಿಕೇಳಿ
ಬೇಡನವ ತಪಗೈದು ಮುನಿಯಾದ ಕಥೆಯಲಿ
ನಾಡಕಥೆ ರಾಮಾಯಣ ಮೆರೆಯಿತೋ ಶೈಲನಾಥ

ಡಾ: ಶೈಲಜಾ ರಮೇಶ್

(5 5 5 5
 5 5 5 5
 5 5 5 5
 5 5 5 6
ಮಾತ್ರಾಗಣದಲ್ಲಿ ಬರೆದಿದ್ದೀನಿ. ಎಷ್ಟು ಸರಿಯೋ ಗೊತ್ತಿಲ್ಲ. ಇದು ನನ್ನ ಎರಡನೇ ಪ್ರಯತ್ನ😊)
[1/11/2023, 11:10 am] Dr. B. N. Shylaja Ramesh: #ಹಚ್ಚ_ಬನ್ನಿ_ಕರುನಾಡ_ದೀಪವ

ಹಚ್ಚೋಣ ಬನ್ನಿ ಕರುನಾಡ ದೀಪ
ತೊಡೆಯಲೆಲ್ಲ ದ್ವೇಷಾಸೂಯೆಯ ಪಾಪ
ಬೆಳಗಲಿ ಎಲ್ಲೆಲ್ಲೂ ಕನ್ನಡಮ್ಮನ ಕೀರ್ತಿ.!
ಹರಡಲವಳ ಹೆಸರು ಈ ದೇಶದ ಭರ್ತಿ..!!

ಹಚ್ಚಿ ಪ್ರಣತಿ ಕಸ್ತೂರಿ ತೈಲವನೆರೆದು
ದೈದೀಪ್ಯಮಾನದಲುರಿಯಲಿ ಮೆರೆದು
ಬೆಳಗಲಿ ಜ್ಞಾನ; ಅಜ್ಞಾನ ತಮ ಕಳೆದು..!
ತೊಲಗಲೆಲ್ಲರ ಪಾಪಗಳು ಉರಿದುರಿದು ಉರಿದು..!!

ಕನ್ನಡ ನಾಡಿದು ದೇವಮಂದಿರದಂತೆ
ಪೊರೆವ ತಾಯಿ ಭುವನೇಶ್ವರಿಯಂತೆ
ಕಾವಳೆಮ್ಮನು ತನ್ನ ಮಡಿಲ ತೆಕ್ಕೆಯಲಿರಿಸಿ..!
ಧೀಮಂತ ಸಂಸ್ಕೃತಿಯ ಜ್ಞಾನದಮೃತವ ಕುಡಿಸಿ..!!

ಎನಿತು ಸುಂದರ ಈ ಕರುನಾಡ ಮಂದಿರವು
ಜೀವಂತ ನೆಲೆ ಆ ನಿತ್ಯ ಹರಿದ್ವರ್ಣವೂ
ಜೀವಸೆಲೆಗಿಹುದು ಜೀವನದಿ ಕಾವೇರಿ..!
ಹೊಳೆಯುತಿದೆ ಶಿಲ್ಪಕಲೆ ವೈಭವದ ಸಿರಿ..!!

ಬೆರೆತಿದೆ ಕನ್ನಡಕೆ ಮಂಗಳದ್ರವ್ಯದ ಸಂಭ್ರಮ
ಅಂತೆಯೇ ಕೀರ್ತಿದ್ವಜ ಹರಿಷಿನ ಕುಂಕುಮಾ
ಹಾರಾಡಬೇಕು ಬಾವುಟ ಗಗನದೆತ್ತೆತ್ತರಕೆ..!
ಕೀರ್ತಿ ಪಸರಿಸಬೇಕು  ಸಮಸ್ತ ಭುವನಕೆ..!!

ಶಾಂತಿ ಪ್ರಿಯರಿಲ್ಲಿ ಕರುನಾಡ ಬಂಧುಗಳು
ಸ್ನೇಹಹಸ್ತವ ಚಾಚೆ ಪ್ರೀತಿ ಮಳೆ ಸುರಿಸುವರು
ಅಸನವಸನವನಿತ್ತು ತಾಯಂತೆ ಪೊರೆವರು..!
ದ್ವೇಷ ಅಸೂಯೆಯನು ಲವಲೇಶ ಸಹಿಸರು..!!

     ಡಾ: B.N. ಶೈಲಜಾ ರಮೇಶ್
[1/11/2023, 11:12 am] Dr. B. N. Shylaja Ramesh: #ಕನ್ನಡಮ್ಮನ_ಹಿರಿಮೆ

#ದ್ವಿರುಕ್ತಿ_ಕವನ

ಕಣಕಣದಲ್ಲೂ ಸಾರುತಿದೆ ಕನ್ನಡಮ್ಮನ ವೈಭವ
ಉಸಿರುಸಿರಲೂ ಬೆರೆತಿದೆ ಭಾಷಾಭಿಮಾನದ ಪ್ರಭಾವ
ಜನಮನದಲ್ಲಿ ನೆಲೆಸಿಹಳು ತಾಯಿ ಭುವನೇಶ್ವರಿ
ಬಗೆಬಗೆಯಲಿ ಸ್ತುತಿಸುವರು ತಾಯ ಐಸಿರಿಯ ಪರಿ

ಹೆಜ್ಜೆಜ್ಜೆಗೂ ಹರಡಲಿ ಕನ್ನಡ ಭಾಷೆಯ ಕಂಪು
ಅಣುವಣುವಲೂ ಬೆರೆಯಲಿ ತಾಯ ಹಿರಿಮೆ ಪೆಂಪು
ಮನೆಮನೆಯಲೂ ಮೊಳಗಲಿ ಜೈಕಾರದ ಘೋಷ
ಎಳೆದೆಳೆದು ಬಂಧಿಸಲಿ ತಾಯ್ನುಡಿಯ ಪ್ರೀತಿ ಪಾಶ

ನಡೆನುಡಿಯಲಿ ಮೇಳೈಸಲಿ ಮಾತೃಭಾಷೆ ಭಕ್ತಿ
ನರನಾಡಿಯಲಿ ತುಂಬುವುದು ನಾಡುನುಡಿಯ ಶಕ್ತಿ
ಸಾಲುಸಾಲು ಗುಡುಗೋಪುರಗಳು ಕಾಣಸಿಗುವುದಿಲ್ಲಿ
ಹಡಿಬದೆಯ ಧರ್ಮಸಾರ ನೆಲೆಯೂರಿಹುದಿಲ್ಲಿ

ತಲತಲನೆ ಹರಿವ ಜೀವನದಿಗಳ ನಾಡು
ಕ್ಷಣಕ್ಷಣಕ್ಕೂ ಅಚ್ಚರಿಯ ಅನಾವರಣವಿಲ್ಲಿ ನೋಡು
ಕಣ್ಮನಗಳ ಸೆಳೆದೆಳೆವ ಶಿಲ್ಪಕಲೆಯ ವೈಭವ
ಮನಮನದಲೂ ಕಿಚ್ಚೆಬ್ಬಿಸುವ ಕನ್ನಡರಾಜ್ಯೋತ್ಸವ

ಪದಪದದಲಿ ತುಂಬಲಹುದೇ ಕನ್ನಡದ ಹಿರಿಮೆ
ವಿವಿಧತೆಯಲಿ ಏಕತೆಯೇ ತಾಯಿನಾಡ ಗರಿಮೆ
ಎಲ್ಲೆಲ್ಲಿ ನೋಡಲಿ ಹಾರುತಿದೆ ಹಳದಿ ಕೆಂಪು ಭಾವುಟ
ಅಚ್ಚಳಿಯದೆ ನೆಲೆನಿಂತಿದೆ ಇತಿಹಾಸದ ಪುಟಪುಟ..!!

ಡಾ: B.N. ಶೈಲಜಾ ರಮೇಶ್
[1/11/2023, 11:16 am] Dr. B. N. Shylaja Ramesh: ಕನ್ನಡ ತಾಯ.ಹಿರಿಮೆ
*******************

ಸೌಂದರ್ಯವಿಹುದು
ಕನ್ನಡನಾಡಿನ ಇಂಚಿಂಚಿನಲ್ಲಿ
ಸೌಗಂಧವಿಹುದು
ಕನ್ನಡ ನಾಡಿನ.ಶ್ರೀಗಂಧಧಲ್ಲಿ
ಮಾಧುರ್ಯವಿಹುದು
ಕನ್ನಡದ ಸವಿ ನುಡಿಯಲ್ಲಿ
ಔದಾರ್ಯವಿಹುದು
ಸಿರಿಗನ್ನಡದ ಜನಮನದಲ್ಲಿ
ಕೆಚ್ಚೆದೆಯ ವೀರತ್ವವಿಹುದು
ಇತಿಹಾಸದ ಪುಟಪುಟಗಳಲ್ಲಿ
ತಲೆದೂಗುವ ಸಾಹಿತ್ಯವಿಹುದು
ಕನ್ನಡದ ಕವಿಪುಂಗವರಲ್ಲಿ
ಜನಮನವ ತಣಿಸಲಿಹುದು
ಜೀವನದಿ ಕಾವೇರಿ
ಸರ್ವರ ಆದರಿಸುವ ಗುಣವುಂಟು
ಜಾತ್ಯಾತೀತತೆ ಬೇರೂರಿ
ಕಲೆಗಳ ತವರೂರು
ಅದರಂದ ಚಂದವ ಶಿಲ್ಪಕಲೆಯಲ್ಲಿ ನೋಡು
ಸರ್ವಧರ್ಮಗಳ ಬೀಡು
ಹೃದಯ ವೈಶಾಲ್ಯತೆಯನು ನೋಡು
ಕನ್ನಡ ಕಸ್ತೂರಿ ಕಂಪಿನಲಿ
ಮೆರೆವ.ನಾವು ಧನ್ಯ
ಕನ್ನಡ ಭುವನೇಶ್ವರಿಯ ಕರುಣೆಯ ಕಂದ
ಸರ್ವ ಜನರಲ್ಲಿ ಮಾನ್ಯ

              ಶೈಲೂ......
[1/11/2023, 11:20 am] Dr. B. N. Shylaja Ramesh: ಕಿರುಗತೆ
*******
ಸ್ವಪ್ನ
****

       ಮೊನ್ನೆ ಊರ ಜಾತ್ರೆಗೆ ಹೋಗಿದ್ದಾಗ ಅವಳನ್ನು ಕಂಡೆ... ಅವಳ ನಿಸ್ತೇಜ ಮುಖ ಗುಳಿಬಿದ್ದ ಕಣ್ಣುಗಳು, ಬಳುಕುವ ಬಳ್ಳಿಯಂತಿದ್ದ ಅವಳು ಗಾಳಿ ಬೀಸಿದರೆ ಹಾರಿ ಹೋಗುತ್ತಾಳೆನೋ ಅನ್ನುವಷ್ಟು ಸವೆದಿದ್ದ ಅವಳನ್ನು ನೋಡಿದ ತಕ್ಷಣವೇ ಕರುಳು ಕಿವುಚಿ ಬಂತು... ಅರಿವಿಲ್ಲದೆಯೇ ಕಣ್ಣೀರ ಕೊಡಿ ಹರಿಯಿತು.  ಎಷ್ಟು ಲವಲವಿಕೆಯಿಂದಿದ್ದ ಅಕ್ಕನ ಮಗಳು ಸ್ವಪ್ನ ಇಂದು ಜೀವಚ್ಛವದಂತೆ ಕಂಡಾಗ ದುಃಖ ಉಮ್ಮಳಿಸಿ ಬರದೇ ಇರಲಿಲ್ಲ. ಹಾಗೆಯೇ ಮನಸು ನೆನಪಿನಾಳಕ್ಕೆ ಜಾರಿತು.

        ಸ್ವಪ್ನ ಹುಟ್ಟಿದಂದಿನಿಂದಲೂ ಮನೆಯಲ್ಲಿ ಎಲ್ಲರೂ ಇವಳೇ ನಿನ್ನ.ಹೆಂಡತಿ ಎನ್ನುತ್ತಿದ್ದಾಗ, ಆ ಮುದ್ದುಗೊಂಬೆಯನ್ನು ನೋಡಿ ಸಂತಸ ಉಕ್ಕುತ್ತಿತ್ತು, ಅಕ್ಕನಿಗೂ ನನಗೂ 13 ವರ್ಷಗಳ ಅಂತರ, 20 ಕ್ಕೆ ಅಕ್ಕನ ಮದುವೇಯಾಗಿ 21ಕ್ಕೆ ಸ್ವಪ್ನ ಹುಟ್ಟಿದಾಗ ತೊಟ್ಟಿಲಿಗೇ ತಾಳಿ ಕಟ್ಟುವಂತೆ.. ನನ್ನ ಸ್ವಪ್ನಳ ಮದುವೆಯ ಮಾತುಕಥೆಯಾಗಿದ್ದಿತು.  ಮದುವೆಯ ಅರ್ಥ ಗೊತ್ತಿಲ್ಲದ ವಯಸ್ಸಾದರೂ ಮುದ ನೀಡುತ್ತಿದ್ದ ಆ ಹೆಸರು ಸ್ವಪ್ನ ಬೆಳೆದಂತೆಲ್ಲಾ  ಕಚಗುಳಿಯಿಟ್ಟಂತೆ.ಬಾಸವಾಗುತ್ತಿತ್ತು... ದಿನೇ ದಿನೇ ಚಂದ್ರಮನಂತೆ ಹೊಳೆಯುತ್ತಿದ್ದ ನನ್ನ ಸ್ವಪ್ನ ಅಪ್ಸರೆಯನ್ನೂ ಮೀರಿಸುತ್ತಿದ್ದಳು

         ಇಬ್ಬರೂ ಹದಿಹರೆಯಕ್ಕೆ ಕಾಲಿಟ್ಟಾಗ, ಒಬ್ಬರನೊಬ್ಬರು ನೋಡಿದಾಗ ಏನೋ ಪುಳಕ, ಸದಾ ಜೊತೆಯಲ್ಲಿಯೇ ಇರಬೇಕೆಂಬ ತವಕ,  ಕಣ್ಣು ಕಣ್ಣು ಸೇರಿದಾಗ ಮೈಯಲೆನೋ ಮಿಂಚು, ಕದ್ದು ಕದ್ದು ನೋಡುವ ಸಂಚು... ಅಂತೂ ಒಬ್ಬರನ್ನೊಬ್ಬರು ಬಿಟ್ಟಿರಲಾಗದಂತ  ಮನಸ್ಥಿತಿಯಿದ್ದಾಗಲೇ... ಅಪ್ಪನಿಗೂ .. ಭಾವವನಿಗೂ ಕ್ಷುಲ್ಲಕ ಕಾರಣಕ್ಕೆ ವೈಮನಸ್ಯ ಶುರುವಾದದ್ದು,  ಭಾವ ಸಂಸಾರ ಸಮೇತ ಮನೆ ಬಿಟ್ಟು ಹೊರಟಾಗಿತ್ತು. ಅಮ್ಮ, ಅಕ್ಕ ಎಷ್ಟು ಅತ್ತುಕರೆದರೂ  ಅಪ್ಪ - ಭಾವ ಕೇಳುವ ಸ್ಥಿತಿಯಿರಲಿಲ್ಲ..
. ಇವರಿಬ್ಬರ ಜಗಳದಿಂದ ಹೊಡೆತ ಬಿದ್ದದ್ದು ನನ್ನ ಹಾಗೂ ಸ್ವಪ್ನಾಳ ಬಾಳಿಗೆ.  ಮುದ್ದು ಮೊಮ್ಮಗಳೇ ಮುದ್ದಿನ ಸೊಸೆಯೆಂದು ಮುದ್ದಿಸುತ್ತಿದ್ದ ಅಪ್ಪ,  ನಮ್ಮ ಪ್ರತಿಷ್ಠೆ ಗೆ ತಕ್ಕಂತೆ ಇನ್ನೂ ಉತ್ತಮ ವಧುವನ್ನು ತರಲು ಶಕ್ಯರಾದರು... ಅದೆಷ್ಟೋ ನಿರಾಕರಣೆ - ವಿರೋಧದ ಮಧ್ಯೆಯೂ ನನ್ನ ಮದುವೆ ನಿಷ್ಕರ್ಷೆಯಾಗಿಯೇ ಹೋಯ್ತು.  ಇದನ್ನು ತಿಳಿಡ್ಸ್ ನಂತರ ಭಾವ ತಮ್ಮ ಪ್ರತಿಷ್ಠೆ ಗೂ ಹೆಚ್ಚಿನ ವರನನ್ನು ಸ್ವಪ್ನಳಿಗಾಗಿ ಹುಡುಕಿಯೇ ಬಿಟ್ಟರು.  ಎಲ್ಲರ ಕಣ್ತಪ್ಪಿಸಿ ಸ್ವಪ್ನ ನನ್ನನ್ನು ಮೀಟಾಗಿ,  ಮಾವ ಬದುಕಿದರೂ ನಿನ್ನ ಮಡಿಲಲ್ಲೇ,  ಸತ್ತರೂ ನಿನ್ನ ಮಡಿಲಲ್ಲೇ... ಈ ಬಲವಂತದ  ಮದುವೆಯನ್ನು ತಪ್ಪಿಸಿ ನನ್ನನ್ನು ಪಾರುಮಾಡಿ, ನೀವು ನನ್ನನ್ನೇ ಮದುವೆಯಾಗಿ ಎಂದು ಅಂಗಲಾಚಿದಾಗ  ಏನೊಂದೂ ಮಾಡಲಾಗದ ನನ್ನ ಅಸಹಾಯಕ ಪರಿಸ್ಥಿತಿ ನನ್ನನ್ನು ಕೈಲಾಗದವನಂತೆ ತಲೆತಗ್ಗಿಸುವಂತೆ ಮಾಡಿತ್ತು.  ಹಿರಿಯರಿಬ್ಬರ ದ್ವೇಷಕ್ಕೆ ಅಮಾಯಕ ಬಲಿಪಶುಗಳು ನಾವಾಗಿದ್ದೆವು.

       ಅಂತೂ ಮದುವೆಯಾಯ್ತು... ಇನ್ನು ಇಲ್ಲೇ ಇದ್ದರೆ ನನ್ನ ಸಂಸಾರ ಸುಖವಾಗಿರುವುದಿಲ್ಲವೆಂದು ಅಪ್ಪ ಬೆಂಗಳೂರಿನಲ್ಲಿ ಮನೆಮಾಡಿ ನಮ್ಮಿಬ್ಬರನ್ನು ಕಳುಹಿಸಿದ್ದೂ ಆಯ್ತು,  ಅಂತೂ ನನ್ನ ಸ್ವಪ್ನ.... ನಂಗೆ ಸ್ವಪ್ನವಾಗಿಯೇ ಉಳಿದುಹೋದಳು. ಹೇಗೋ ಇಷ್ಟವಿಲ್ಲದ ಜೀವನವನ್ನು ಕಷ್ಟಪಟ್ಟು ನಡೆಸುತ್ತಾ... ಅಪ್ಪ ಅಮ್ಮನನ್ನು ಹಾಗೆಯೇ ಜಾತ್ರೆಯನ್ನು ಕಣ್ತುಂಬಿಸಿಕೊಳ್ಳೋಣವೆಂದು ಬಂದರೆ... ಸ್ವಪ್ನಳ ಈ ರೂಪ ಕರಳುಕಿವುಚಿದಂತಾಯ್ತು..  ಏನಾಯ್ತು ನನ್ನ ಸ್ವಪ್ನಳಿಗೆ? ಕಲ್ಲಿನಲ್ಲಿ ಕಡೆದ ಶಿಲ್ಪದಂತಿದ್ದ ಸ್ವಪ್ನ ಸೊರಗಿಹೋದದ್ದೇಕೆ?  ಈ ಯೋಚನೆಯಲ್ಲಿಯೇ ಮುಳುಗಿದ್ದ ನನಗೆ ಎಚ್ಚರಾಗಿದ್ದು... ಯಾರೋ ನನ್ನ ಕೈಯ್ಯಲ್ಲೊಂದು ಪೇಪರ್ ತುರುಕಿದಾಗ...  ಯಾರೆಂದು ನೋಡುವಷ್ಟರಲ್ಲಿಯೇ  ಮರೆಯಾಗಿದ್ದಳು ಸ್ವಪ್ನ... ಸ್ವಪ್ನಾ... ಸ್ವಪ್ನಾ...  ನನ್ನ ಕೂಗಿಗೆ ಅವಳು ತಿರುಗಿನೊಡಲೇ ಇಲ್ಲ... ಕೈಯಲ್ಲಿದ್ದ ಚೀಟಿ ಬಿಡಿಸಿನೋಡಿದಾಗ  ರಾಧಾಕೃಷ್ಣನ ದೇವಾಲಯಕ್ಕೆ ಬಾ ಮಾವ.ಎಂದಷ್ಟೇ ಇತ್ತು...  ಸರಸರನೆ ದೇವಾಲಯದತ್ತ ಧಾವಿಸಿದೆ....ಕೃಷ್ಣನ ಮುಂದೆ ಕಣ್ಮುಚ್ಚಿ ನನ್ನ ಸ್ಪಪ್ನ ನಿಂತಿದ್ದಳು.... ನನ್ನ ನೋಡಿದಾಕ್ಷಣವೇ ಬರುತ್ತಿದ್ದ ದುಃಖವನ್ನು ಬಲವಂತಕ್ಕೆ ಹಿಮ್ಮೆಟ್ಟಿಸಿ... ಹೇಗಿದ್ದೀಯಾ ಮಾವ ಎಂದು ಅಪ್ಯಾಯತೆಯಿಂದ ಕೇಳಿದಾಗ ಇದುವರೆಗೂ ಅವಿಟಿತ್ತಿದ್ದ ದುಃಖವೆಲ್ಲಾ ಕಣ್ಣೀರ ಕೊಡಿಯಾಗಿ ಹರಿಯಿತು... ನೀನೇ ಹೀಗೆ ಅತ್ತರೆ ಹೇಗೆ ಮಾವ... ನನ್ನ ಪರಿಸ್ಥಿತಿಯಲ್ಲಿ... ನಾನು ಬದುಕಿರುವುದೇ ಹೆಚ್ಚು.... ನಿನಗೂ ಬೇಡದವಳಾಗಿ, ಅಪ್ಪನ ಪ್ರತಿಷ್ಠೆ ಗೆ ಯಾರನ್ನೋ ಕಟ್ಟಿಕೊಂಡು, ಮನಸ್ಸಿಲ್ಲದ ಮನಸ್ಸಿನಿಂದ ಅವನೊಂದಿಗೆ ಬಾಳುತ್ತಾ, ನಮ್ಮಿಬ್ಬರ ವಿಷಯ ತಿಳಿದ ಆ ಗಂಡ ನೆಂಬ ಷಂಡ... ನನ್ನ ಮೇಲೆಯೇ ಅನುಮಾನ ತಾಳಿ ಚಿತ್ರ ವಿಚಿತ್ರ ಹಿಂಸೆಗಳನ್ನು ಕೊಡ್ತಾ...ಯಾರ್ಯಾರನ್ನೋ ಕರೆತಂದು ಅವರನ್ನೂ ತೃಪ್ತಿ ಪಡಿಸು ಎಂದು ಕೇಳುವಾಗ,  ಬಲವಂತದಿಂದ ಅವರ ಹಾಸಿಗೆಗೆ ನೂಕುವಾಗ  ನಾ ಸಾಯಬೇಕಿತ್ತು... ಎಂದಾದರೂ ಒಮ್ಮೆ ನಿನ್ನ ಮುಖ ನೋಡುವೆನೆಂಬ ಅದಮ್ಯ ಆಸೆಯಿಂದ ಬದುಕಿದ್ದೇನೆ ಗೊತ್ತಾ ಎಂದು ನನ್ನ ಸ್ವಪ್ನ ಉಮ್ಮಳಿಸಿ ಬರುತ್ತಿದ್ದ ಅಳುವಿನ ಮಧ್ಯೆಯೂ ಹೇಳುತ್ತಿದ್ದಾಗ..ಅಯ್ಯೋ ವಿಧಿಯೇ... ಇಂಥ ಅಮಾನುಷರ ಕೈಯ್ಯಲ್ಲಿ ನನ್ನ ಸ್ವಪ್ನಳನ್ನೇಕಿಟ್ಟೆ.... ಅಂದು ಅವಳು ಪರಿಪರಿಯಾಗಿ ಅಂಗಲಾಚಿದಾಗಲಾದರೂ ಅವಳನ್ನೇ ಮದುವೆಯಾಗುವ ಮನಸ್ಸು ಕೊಡಬಾರದಿತ್ತೆ ಎಂದು ನನ್ನನ್ನು ನಾನೇ ಹಳಿದುಕೊಂಡೇ....  ಮಾವ  ನನ್ನೊಂದು ಆಸೆ ನೆರವೇರಿಸಿ ಕೊಡುವೆಯಾ ಎಂದವಳ ಮಾತಿಗೆ ತಲೆಯಾಡಿಸಿದೆ...  ಮಾವಾ ನಿನ್ನ ಮಡಿಲಲ್ಲೊಮ್ಮೆ ಮಲಗುವಾಸೆ ಎಂದಾಗ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತು ಕೈಚಾಚಿದೆ. ಎಳೆಯ ಮಗುವಿನಂತೆ ಓಡಿಬಂದ ಬಂದ ಸ್ವಪ್ನ ನನ್ನ ತೊಡೆಯ ಮೇಲೆ ಮಲಗುತ್ತಾ  ಅಂದೂ  ಹೇಳಿದ್ದೆ ಮಾವ " ಬದುಕಿದರೂ ನಿನ್ನ ಮಡಿಲಲ್ಲೇ... ಸತ್ತರೂ ನಿನ್ನ ಮಡಿಲಲ್ಲೇ" ಅಂತ... ದೇವರು ಆ ಭಾಗ್ಯವನ್ನು ನನ್ನ ಪಾಲಿಗೆ ಕರುಣಿಸಿದ್ದಾನೆ...  ಮಾವಾ............................. ನೀರವ ಮೌನ ವ್ಯಾಪಿಸಿತು.........  ನಾನೇ.ಮೌನ ಮುರಿದು  ಸ್ವಪ್ನ.. ಸ್ವಪ್ನ.....ಎಂದೆ ಅವಳನ್ನು ಮುದ್ದಿಸಿದೆ, ಅಪ್ಪಿದೆ.... ಯಾವುದಕ್ಕೂ ಅವಳ ಸ್ಪಂದನೆಯಿಲ್ಲ..... ಯಾವಾಗಲೋ ಅವಳ ಪ್ರಾಣಪಕ್ಷಿ ಹಾರಿಹೋಗಿತ್ತು... ...  ನನ್ನ ಸ್ವಪ್ನ ಪಂಚಭೂತಗಳಲ್ಲಿ ಲೀನವಾದಳು.... ಯಾರದೋ ವೈಷಮ್ಯಕ್ಕೆ ನನ್ನ ಸ್ವಪ್ನ ಬಲಿಯಾಗಿದ್ದಳು... ಸ್ವಪ್ನ ಸ್ವಪ್ನವಾಗೇ ಉಳಿದಳು😞

            ಶೈಲೂ......
[1/11/2023, 11:26 am] Dr. B. N. Shylaja Ramesh: *ಕನ್ನಡಾಂಬೆ* 
🌹🌹🌹🌹

ಸ್ನೇಹ  ಚಾಚುವ ಹರಿಷಿನ
ಪ್ರೀತಿ ಸೂಸುವ  ಕುಂಕುಮ
ಹಚ್ಚಿ ಮೆರೆಯುತಿಹ 
ನನ್ನಮ್ಮ ಸೌಭಾಗ್ಯವತಿ,
 ಅವಳೇ ಕನ್ನಡತಿ
ಅವಳ ಮಮತೆ
ಹಾಲ್ಜೇನು  ಸವಿದಂತೆ
 ಸವಿ ನುಡಿಯದುವೆ
ಅಮೃತ ಫಲದಂತೆ
ಕಂಪು ಸೂಸುವ 
ಪ್ರಾಚೀನ  ಲಿಪಿಯದುವೆ
ಸುಂದರ  ಹೂಗುಚ್ಛ ದಂತೆ
ಕನ್ನಡಾಂಬೆಯ ಕಿರೀಟ
ಸಹ್ಯಾದ್ರಿ ಪರ್ವತವು
ಅವಳ ಹರ್ಷೋದ್ಗಾರ
ಜೋಗ ಜಲಪಾತ
ಅವಳ ಕರುಣಾರಸವೆ
ಜೀವನದಿ ಕಾವೇರಿ
ಅವಳಂತರಂಗದಾ  ಸೆಲೆ
ತಾಯಿ ತುಂಗಭದ್ರೆ
ಅವಳ  ಮುಗುಳುನಗೆಗೆ
ಅರಳಿದೆ ಮಲೆನಾಡು
ಅವಳ  ಸೌಂದರ್ಯ ವು
ರಮ್ಯ ಕೊಡಚಾದ್ರಿಯಲ್ಲಿ
ನನ್ನಮ್ಮ  ಶ್ರೀಮಂತೆ  ಗಂಭೀರೆ
ಅವಳ ಗರ್ಭದಲ್ಲಡಗಿಹುದು
ಲೋಹಗಳ  ಕಾಂತಿ
ಸೌಗಂಧ ಸೂಸಿ ಹರಡಿದೆಲ್ಲೆಡೆ
ತಾಯ ಶ್ರೀಗಂಧದ ಮೈಕಾಂತಿ
ರಾಜ, ಋಷಿ, ದಾರ್ಶನಿಕ
ಕವಿ ಕಲಾವಿದರ  ಹಡೆದವ್ವ
ಧೀಮಂತೇ ನನ್ನ  ಕನ್ನಡಾಂಬೆ
ಕನ್ನಡ  ರಾಜರಾಜೇಶ್ವರಿ
ರಾರಾಜಿಸುತಿಹಳಿಲ್ಲಿ
ಕನ್ನಡದ ಕಂಪು  ಸೌರಭವ ಚೆಲ್ಲಿ
ಉಸಿರಿತ್ತು, ತುತ್ತಿತ್ತು, ಪೊರೆಯುತಿಹ
ಕರುನಾಡ  ಭುವನೇಶ್ವರಿ
ನಿನಗೆ  ಶರಣು ಶರಣೆಂಬೆ
🙏🙏🙏🙏🙏🙏🙏
🌹🌹🌹🌹🌹🌹🌹

               ಶೈಲೂ....
[1/11/2023, 11:34 am] Dr. B. N. Shylaja Ramesh: ಕನ್ನಡ ತಾಯ ಹಿರಿಮೆ
*******************

ಸೌಂದರ್ಯವಿಹುದು ಕನ್ನಡನಾಡಿನ ಇಂಚಿಂಚಿನಲ್ಲಿ
ಸೌಗಂಧವಿಹುದು ಕನ್ನಡ ನಾಡಿನ ಶ್ರೀಗಂಧಧಲ್ಲಿ
ಮಾಧುರ್ಯವಿಹುದು ಕನ್ನಡದ ಸವಿ ನುಡಿಯಲ್ಲಿ
ಔದಾರ್ಯವಿಹುದು ಸಿರಿಗನ್ನಡದ ಜನಮನದಲ್ಲಿ

ಕೆಚ್ಚೆದೆಯ ವೀರತ್ವವಿಹುದು ಇತಿಹಾಸದ ಪುಟಪುಟಗಳಲ್ಲಿ
ತಲೆದೂಗುವ ಸಾಹಿತ್ಯವಿಹುದು
ಕನ್ನಡದ ಕವಿಪುಂಗವರಲ್ಲಿ
ಜನಮನವ ತಣಿಸಲಿಹುದು ಜೀವನದಿ ಕಾವೇರಿ
ಸರ್ವರ ಆದರಿಸುವ ಗುಣವುಂಟು ಜಾತ್ಯಾತೀತತೆ ಬೇರೂರಿ

ಕಲೆಗಳ ತವರೂರು ಅದರಂದ ಚಂದವ ಶಿಲ್ಪಕಲೆಯಲ್ಲಿ ನೋಡು
ಸರ್ವಧರ್ಮಗಳ ಬೀಡು, ಹೃದಯ ವೈಶಾಲ್ಯತೆಯನು ನೋಡು
ಕನ್ನಡ ಕಸ್ತೂರಿ ಕಂಪಿನಲಿ ಮೆರೆವ ನಾವು ಧನ್ಯ
ಕನ್ನಡ ಭುವನೇಶ್ವರಿಯ ಕರುಣೆಯ ಕಂದ ಸರ್ವ ಜನರಲ್ಲಿ ಮಾನ್ಯ

              ಶೈಲೂ......
[7/11/2023, 11:59 am] Dr. B. N. Shylaja Ramesh: #ಕನ್ನಡಿ

ನಿಜ ಸ್ನೇಹಿತ
ಇದ್ಹಾಗೇ ತೋರಿಸುವ
ಮರೆಮಾಚದೇ

#ಮೊಗ್ಗು

ಮೆಲ್ಲನರಳಿ
ಕಂಪು ಬೀರಲು, ಮೊಗ್ಗು
ಕಾಯುತಲಿದೆ

#ಉಷೆ

ನಿಶೆ ಕರಗಿ
ಉಷೆ ಮೂಡಿ, ಬಾನೆಲ್ಲ
ಬೆಳಕಾಯಿತು

#ದಾಹ

ಕಲಿಕೆ ದಾಹ
ಕಳೆದಜ್ಞಾನ, ಜ್ಞಾನ
ಪಸರಿಪುದು

ಡಾ: ಶೈಲಜಾ ರಮೇಶ್
[7/11/2023, 11:59 am] Dr. B. N. Shylaja Ramesh: ಕತ್ತಲನಟ್ಟಿ, ಬಾಳು
ಬೆಳಗುವುದು
ಜ್ಞಾನ ಬಿತ್ತಿ,,
ಎತ್ತರಕೆ ಏರಲು
[13/11/2023, 10:20 pm] Dr. B. N. Shylaja Ramesh: ನಾಗೇಶ್ ಸರ್ ಅವರ #ಹಿಡಿದು_ನಡೆ ಕವನದಿಂದ ಪ್ರೇರಿತ ಕವನ😊
ಚಿತ್ರವೂ ಸಹ ಅವರ ವಾಲ್ನಲ್ಲಿದ್ದದ್ದೇ😊
ಥ್ಯಾಂಕ್ಯೂ ನಾಗೇಶ್ ಸರ್🙏🙏😊💐

#ಹಿಡಿದು_ನಡೆ

ಹೊಳೆವ ನಯನವದು
ಬೆಳಗೊ ದೀಪದಂತೆ
ಬಾಳ ತಮವ ತೊಳೆದು..!
ನಲಿವ ಹೆಣ್ಣವಳು
ನಗೆಯ ಚೆಲ್ಲುತಲಿ
ಬದುಕ ಕಷ್ಟ ಕಳೆದು...!

ಮೊಗದಿ ಅರಳಿದೆ
ನಗೆಯ ಹೂಗಳು
ಶಶಿಯ ಕಾಂತಿಯಂತೆ..!
ಕಣ್ಣ ಹೊಳಪಲಿ
ಬಾಳು ಬೆಳಗಿದೆ
ಉದಯ ತೇಜದಂತೆ..!

ಬೆಳಗೊ ದೀಪದಲಿ
ಮೊಗವು ಜ್ವಲಿಸುತಿರೆ
ಪಡೆದು ಕೊಡುವ ತೆರದಿ..!
ಕೆಡುಕ ದಹಿಸುತ
ಒಳಿತು ಬಯಸುತ
ಸುಖದಾಸ್ವಾದ ಮನದಿ..!

ಬಾಳ ದಾರಿಯಲಿ
ಬೆಳಗಬೇಕಿದೆ
ತಮವ ಹರಿಸೋ ದೀಪ.!
ಬದುಕ ಯಾನದಲಿ
ಸರಿಸ ಬೇಕಿದೆ
ಅಜ್ಞಾನತಿಮಿರ ಕೂಪ..!

             ಶೈಲೂ......
[24/12/2023, 8:52 am] Dr. B. N. Shylaja Ramesh: ಅಂಜನಾಗರ್ಭಸಂಜಾತ ಹನುಮಂತ
ಆಶ್ರಿತ ರಕ್ಷಕ ಹನುಮಂತ
ಇಚ್ಛಿತದಾಯಕ ಹನುಮಂತ
ಈಶ್ವರಾಂಶ ನಿವ ಹನುಮಂತ
[24/12/2023, 9:09 am] Dr. B. N. Shylaja Ramesh: ಉನ್ನತ ಜ್ಞಾನಿ ಹನುಮಂತ
ಊರ್ಜಿತಗೊಳಿಸೆನ್ನ ಹನುಮಂತ
ಋಷಿಗಣ ಪೂಜಿತ ಹನುಮಂತ
ರೂಢಿಯೊಳುತ್ತಮ ಹನುಮಂತ

ಹನುಮಂತ ಜಯ ಹನುಮಂತ
ಮಾರುತಿರಾಯ ಬಲವಂತ
[24/12/2023, 9:12 am] Dr. B. N. Shylaja Ramesh: ಎಡರು ನಿವಾರಕ ಹನುಮಂತ
ಏಳಿಗೆನೀಡು ಹನುಮಂತ
[28/12/2023, 11:43 am] Dr. B. N. Shylaja Ramesh: ಜನ್ಮದಿನದ ಶುಭಾಶಯ
*******************

ಮುದ್ದುಹುಡುಗಿ ಮಮತ
ಸದಾ ನಗುತ ನಗುತ
ನೂರ್ಕಾಲ ಬಾಳು ಎನುತ
ಹಾರೈಸುವೆನು ಸತತ

ಕಿಲಕಿಲ ನಗುವ ಜಾಣೆ
ಸ್ವರವು ಮಧುರ ವೀಣೆ
ಚಟಪಟ ಮಾತಿನರಗಿಣಿ
ಸಭ್ಯಸ್ಥ ಸದ್ಗೃಹಿಣಿ

ಜನ್ಮದಿನವಂತೆ ಇಂದು
ಬಾಳು ಹಸಿರಾಗಲೆಂದು
ದೈವ ಬಲವಿರಲಿ ಎಂದೂ
ಆಶಿಸುವೆ ಎಂದೆಂದೂ

         ಶೈಲೂ......
ಡಾ: B.N. ಶೈಲಜಾ ರಮೇಶ್
[3/1/2024, 4:25 pm] Dr. B. N. Shylaja Ramesh: ಶ್ರೀಮಾತಾ ಶ್ರೀ ಶಾರದಾ ದೇವಿಯರ ಜನ್ಮೋತ್ಸವದ  ಹಿನ್ನೆಲೆಯಲ್ಲಿ  ಬರೆದ  ಕವಿತೆ

ಅಮ್ಮಾ ಅಪ್ಪಿಕೋ ಎನ್ನ
*******************

ಅಮ್ಮಾ ಅಮ್ಮಾ ಎಂದು ಹಾತೊರೆದು ನಾ ಬಂದೆ
ಬಳಿಸಾರಿ  ಪ್ರೀತಿಯಲ್ಲಿ ಪೊರೆಯೆನ್ನ ತಾಯೇ. ||

ಹೊಕ್ಕಿಹುದು ಹೃದಯದೊಳು ಹೆರತನದ  ಹೆದರಿಕೆಯು
ಬದುಕ  ಜಂಜಾಟದಲ್ಲಿ ಜೀವ ಸಿಕ್ಕಿಹುದು
ಬವಣೆಯ  ಹುದುರೊಳಗೆ ಬುದ್ಧಿ ಮಂಕಾಗಿಹುದು
ನನ್ನತನವೇನಾಯ್ತೋ  ಕಾಣದಾಗಿಹುದೂ.  ||

ಎಲ್ಲೆಲ್ಲಿ  ನೋಡಿದರೂ ಸಿಕ್ಕುಗಳು  ಬದುಕಲ್ಲಿ
ನರಳಿ ಬದುಕಲು ಕಷ್ಟ  ಕಾಯಬೇಕಿಲ್ಲಿ
ಬೆದರಿಕೆಯ  ಮುಸುಕೊಳಗೆ ಉಸಿರು ಬಿಗಿದಂತಾಗಿ
ತಾಳಲಾರೆನು ತಾಯೇ  ಪಾರುಗಾಣಿಸೆಲೇ. ||

ಸಿಲುಕಿ ನಿಂತಿಹೆ ನಾನು ಆಸೆ ಮಾಯೆಯ ಒಳಗೆ
ನೀಡು ನಾಮದ ಬಲವ ದಾಟುವೆ ಭವಸಾಗರವ
ಮುಚ್ಚುಮರೆ ಮಾಡದೇ ಎತ್ತಿ ನಿಲಿಸು ತಾಯೇ
ಹೊದಿಸಿ ಪ್ರೀತಿಯ  ಸೆರಗ ಅಪ್ಪಿಕೊ ಎನ್ನ . ||

            ಶೈಲೂ......
[15/1/2024, 8:53 am] Dr. B. N. Shylaja Ramesh: ಮಕರ ಸಂಕ್ರಮಣ

ದಕ್ಷಿಣಾಯಣದಿಂದ ಉತ್ತರಾಯಣದ ಕಡೆ
ರವಿ ತನ್ನ ಪಥ ಬದಲಿಸುವ ಹೊತ್ತು
ಧನುರ್ಮಾಸದಿಂದ ಮಕರಮಾಸದೆಡೆ
ಪಯಣವೇ ಮಕರ ಸಂಕ್ರಮಣದ ಗಮ್ಮತ್ತು..!!
[19/1/2024, 2:31 pm] Dr. B. N. Shylaja Ramesh: #ಮತ್ತೆ_ಅವತರಿಸಿದ_ಶ್ರೀರಾಮಲಲ್ಲ

ಮತ್ತೆ ಅವತರಿಸಿದ ಭರತ ಭೂಮಿಯಲಿ ದೇವ ಶ್ರೀರಾಮಲಲ್ಲ
ಚೆದುರಿ ಹೋಗಿರುವ ಹಿಂದೂಧರ್ಮವನುದ್ಧರಿಸಲವನೆ ಬಲ್ಲ
ಅವತರಿಪ ಭೂಮಿಕೆಯಲಿ ಪಾತ್ರವಹಿಸೆ ಕಳುಹಿದ ಕರಸೇವಕರನೆಲ್ಲ
ನೋವುನಲಿವುಗಳ ದಾಟಿ ಇಂದು ಬರುತಿಹನು ಮೆಲ್ಲಮೆಲ್ಲ

ಎನಿತು ವಿಷಬೀಜ ಬಿತ್ತುವ ಮಂಥರೆಯರು ಸುತ್ತಮುತ್ತ
ಹರಿದು ಹಂಚಿ ತಿಂದು ಮುಕ್ಕುವ ತಾಟಕಿಯರ ದಮನಿಸುತ್ತ
ಧರ್ಮಮಾರ್ಗದಿ ಅಡಿಯಿಡುತ್ತಿರುವ ಸಜ್ಜನರ ರಕ್ಷಿಸುತ್ತ
ಇಳಿದು ಬಂದನದೋ ರಾಮಚಂದಿರ ಇಳೆಯ ಬೆಳಗಿಸುತ್ತ

ಶಾಪಗ್ರಸ್ತ ಶಿಲೆಯಂತಿಹ ಅದೆಷ್ಟೋ ಅಹಲ್ಯೆಯರ ಉದ್ಧರಿಸಲವಗೆ ತವಕ
ಪರರ ತಂತ್ರಕೆ ಧರ್ಮಮರೆತವರ ಮನಕೆ ಚೆಲ್ಲಿ ಬೆಳಕ
ದುರುಳರಕ್ಕಸರ ಕಬಂದಬಾಹುವಿನಲಿ ತತ್ತರಿಸುತಿರೇ ಲೋಕ
ಸನಾತನಧರ್ಮ ಪುನರುದ್ಧಾರಕೆ ಇಳಿದು ಬಂದ ಭುವಿಯ ತನಕ

ಪರರ ವಸ್ತುವಿಗಾಶಿಸುವ ಶೂರ್ಪನಿಖಿಯರ ಹಿಂಡುಹಿಂಡು
ಅರ್ಥವಿಲ್ಲದೆ ಕಾದುವ ದಾನವ ಖರಧೂಷನರ ದಂಡು
ಹೆಜ್ಜೆಜ್ಜೆಗೂ ಆಮಿಷವೊಡ್ಡುವ ಮಾಯಾಮೃಗವ ಕಂಡು
ಬಳಲಿ ಬೆಂಡಾದ ಭಕ್ತಜನರನುದ್ಧರಿಸುವನವನು ಬಂದು

ಸುಗ್ರೀವನಂತೆಯೇ ಸ್ನೇಹಹಸ್ತವ ಚಾಚಿರುವ ಭಕ್ತರ ಕರೆಗೆ
ಹನುಮನಂದದಿ ಕಣಕಣದಿ ರಾಮನಾಮವ ಬೆರೆಸಿಕೊಂಡ ಪರಿಗೆ
ಗೃಧ್ರನಂತೆಯೇ ಕಾದು ಗತಿಸಿದ ಕರಸೇವಕರ ವಿಶ್ವಾಸದ ನಡೆಗೆ
ಮೆಚ್ಚಿ ಧರೆಗಿಳಿದು ಬಂದನದೋ ಶ್ರೀರಾಮಚಂದ್ರ ಕೊನೆಗೆ

ಅಲ್ಲನೇಕ ರಾವಣರ ಅಧರ್ಮದ ನಡೆ ಹತ್ತಿಕ್ಕಲೆಂದು
ಇಲ್ಲನೇಕ ಧರ್ಮಾತ್ಮ ವಿಭೀಷಣರ ರಕ್ಷಿಸಿ ಪೊರೆಯಲೆಂದು
ಅಲ್ಲನೇಕ ದುರುಳ ರಕ್ಕಸರ ಹೆಡೆಮುರಿ ಕಟ್ಟಲೆಂದು
ಪ್ರಕಟನಾದನದೋ ಸೀತಾಪತಿ ಭಕ್ತ ವೃಂದವ ಸಲಹಲೆಂದು

ಸುತ್ತ  ಊಳಿಡುವ ಶ್ವಾನ ದಳಗಳನ್ನೆಲ್ಲ ಹಿಂದೆ ಸರಿಸಿ
ಎಲ್ಲ ಮೆಚ್ಚುವ ತೆರದಿ ಗಜಗಾಂಭೀರ್ಯದಲ್ಹೆಜ್ಜೆಯಿರಿಸಿ
ಬಂದನಿಂದು ಅದೋ ಶ್ರೀರಾಮಲಲ್ಲ ಸ್ವಜನರ ಭಕ್ತಿ ಗೆಲಿಸಿ
ಬಂದನಿಂದು ಅದೋ ಶ್ರೀರಾಮಲಲ್ಲ ಸ್ವಜನರ ಭಕ್ತಿ ಗೆಲಿಸಿ

ಮತ್ತೆ ಚಿಗುರುತಿದೆ ವಿಶ್ವವೆಲ್ಲ ರಾಮರಾಜ್ಯವಾಗೊ ಕನಸು
ತೊಡೆದುಹಾಕದಿನೇ ಅವನು ಜನಮಾನಸದಿ ನಿಂತ ಮುನಿಸು
ನೀಡಲೆಲ್ಲರಿಗೂ ದೇವ ಭ್ರಾತೃತ್ವದಲಿ ಬೆರೆವ ಮನಸು
ಅಖಂಡ ವಿಶ್ವದಲಿ ಮೊಳಗಲಿ ರಾಮನಾಮದ ಸೊಗಸು

      ✍️ಡಾ: B.N.ಶೈಲಜಾ ರಮೇಶ್
[20/1/2024, 10:35 am] Dr. B. N. Shylaja Ramesh: #ಗುಣ_ರಾಮ_ಶ್ರೀರಾಮ 
ಪಾವನ ನಾಮ ಗುಣಧಾಮಾ
ಬಾರೋ ಶ್ರೀ ರಾಮಾ ಪೊರೆಯೋ ಪರಂಧಾಮ.!

ಅತಿಗುಣ ಸುಗುಣ ದಶರಥ ನಂದನ
ಕೌಸಲ್ಯಾ ರಾಮ ಬಾಲ ಶ್ರೀ ರಾಮಾ 

ತಾಟಕಿ ಸಂಹರಣ, ಅಹಲ್ಯಾ ಉದ್ಧರಣ
ಹೆದೆಯೇರಿಸಿ ಬಾಣಾ ಸೀತೆಯ ಗೆದ್ದವನ

ಪಟ್ಟಾಭಿಷೇಕಕೆಂದು ಊರೆಲ್ಲಾ ಹರುಷದಿ ಬಂದು
ಮಂಥರೆ ಕುತಂತ್ರದಿಂದ ಕಾಡಿಗೆ ಹೊರಟವನ

ಅನುಜ ಲಕ್ಷ್ಮಣನ ಸಹಿತ ಜೊತೆಗೆ ಸಹಧರ್ಮಿಣಿ ಸೀತಾ
ದುರುಳ ರಕ್ಕಸರ ದಮನಿಸುತ್ತ ತೆರಳಿದ ಋಷ್ಯಾಶ್ರಮಗಳತ್ತ 

ಮಾಯಾಮೃಗದ ಮೋಹ ಸೀತೆಗೆ ತಂದಿತು ವಿರಹ
ಬಹುವೇಶಿ ರಾವಣನ ದ್ರೋಹ ಕರೆತಂದಿತು ಲಂಕೆಯ ತನಕ

ಕಪಿಸೇನೆಯ ಸಹಾಯದಿಂದ ಶ್ರೀರಾಮನ ಅತೀವ ಬಲದಿಂದ
ಕಡಿದು ರಾವಣನ ರುಂಡ  ರಕ್ಷಿಸಿದ ಧರೆಯ ಅತಿ ಕರುಣದಿಂದ 

✍️ಶೈಲೂ
[25/1/2024, 7:04 am] Dr. B. N. Shylaja Ramesh: #ಮರೆಯಲಾಗದ_ಗೆಳೆತನ 
ಅಂದೊಂದಿತ್ತು ಕಾಲ
ಸಂಮೃದ್ಧ ಗೆಳೆತನದ ಜಾಲ
ಕೂಡಿ ಆಡಿ ಮೆರೆದಾಡಿ
ಮೋಜು ಮಸ್ತಿಯ ದಾಂಗುಡಿ

ಹಂಚಿ ತಿನ್ನುತ್ತಿದ್ದ ತುತ್ತು
ಆಹಾ ಮರೆಯಾಗದ ಹೊತ್ತು
[31/1/2024, 7:57 pm] Dr. B. N. Shylaja Ramesh: ದಿನವೊಂದೊಂದೇ ಉರುಳಿ
 ಸುಮ್ಮನೆ ಸರಿಯುತಿದೆ ಕಾಲ
ಎಲ್ಲ ಮೆಚ್ಚಿಕೊಳ್ಳುವ ತೆರದಿ
ನಾನೆನನ್ನೂ ಮಾಡಲಿಲ್ಲ
[18/2/2024, 6:06 pm] Dr. B. N. Shylaja Ramesh: #ಬಡವನ_ಪ್ರೀತಿ 
@ಸಾಹಿತ್ಯ_ಸಿರಿ 

ಬಡವನಾದರೇನಂತೆ
ಪ್ರೀತಿಗಿಲ್ಲ ಕೊರತೆ
ಬವಣೆ ಬದುಕ ನಡುವೆಯೂ
ಬೆಳಗಿದೆ ಒಲವ ಹಣತೆ.!

ರಾಶಿ ರಾಶಿಯ ಹಣವಿಲ್ಲ
ಆಡಂಬರ ಕಂಡಿಲ್ಲ 
ಬದುಕಲಿ ನೆಮ್ಮದಿ ಕಾಣಲು
ಪ್ರೀತಿಯೊಂದೇ ಸಾಕಲ್ಲ.!

ಮೃಷ್ಟಾನ್ನವಿಲ್ಲದಿದ್ದರೇನಂತೆ
ಅಕ್ಕರೆ ಸವಿಮಾತೇ
ಸಿಹಿ ಹೋಳಿಗೆ ತುಪ್ಪದ ಔತಣ
ಸವಿದ ನಾನೇ ಅತಿತೃಪ್ತೆ.! 

ನೀನಿತ್ತ ಪ್ರೀತಿಯ ತುತ್ತು
ಅದೇ ಎನ್ನ ಸಂಪತ್ತು 
ತುಂಬಿದ ಪ್ರೀತಿಯ ಬಟ್ಟಲು
ತಣಿಸುವುದ್ಹಸಿದ ಹೊತ್ತು.!

ಡಾ: ಶೈಲಜಾ ರಮೇಶ್
[18/2/2024, 6:26 pm] Dr. B. N. Shylaja Ramesh: #ಮುಸ್ಸಂಜೆ_ಪಯಣ

ಎಲ್ಲ ಮೋಹವ ಬಿಟ್ಟು
ಕೈಯ ಕೈಯೊಳಗಿಟ್ಟು
ಜಗದ ಜಂಜಡ ತೊರೆದು
ದೂರ ಹೋಗುವ ಬಾ....

ದಣಿದಿರುವೆ ಬಹಳವೇ
ವಿಶ್ರಾಂತಿ ಬಯಸುವೆ
ನೋವಿತ್ತ ಸಂಸಾರಸಾಗರವ
ತೊರೆದು ಹೋಗುವ ಬಾ...

ಹರೆಯದ ಕಾಲದಲಿ
ಜಗದ ವ್ಯಾಪಾರದಲ್ಲಿ
ಮುಳುಗಿ ಹೋಗಿದ್ದು ಸಾಕು
ನಮ್ಮ ನಾವರಿಯೋಣವೀಗ ಬಾ...

ದುಡಿದುಡಿದು ದಣಿದು
ದೇಹ ಬಾಗಿದೆ ಸವೆದು
ಕಸುವಿಲ್ಲದ ಮೇಲಿನ್ನು
ಮಕ್ಕಳಿಗೆ ಹೊರೆಯಾಗದೇನು.?

ರೆಕ್ಕೆ ಬಲಿತ ಹಕ್ಕಿಗಳವರು
ಪುರ್ರೆಂದು ಹಾರಿ ಹೋದಾರು
ಗೂಡು ಬರಿದಾಗುವ ಮುನ್ನ
ನಾವೇ ಹೊರಡೋಣ ಬಾ....

ನಿನಗಾಸರೆಯಾಗುವೆನೆಂದು
ಸಪ್ತಪದಿ ತುಳಿದು ಕರೆತಂದು
ಬಟ್ಟ ಬಯಲಲ್ಲಿ ನಿಂತಿಹೆವಿಂದು😔
ಸಾಧ್ಯವಾದರೆನ್ನ ಮನ್ನಿಸಿಬಿಡು🙏🙏

ಡಾ: B.N. ಶೈಲಜಾ ರಮೇಶ್
[8/4/2024, 8:19 pm] Dr. B. N. Shylaja Ramesh: #ಬಂದ_ವಸಂತ

ವಸಂತನಾಗಮನದಿ ಮಾಮರವು ಚಿಗುರಿರಲು
ಬೇವಿನ ಚಿಗುರೊಡನೆ ಸಿಹಿ ಬೆರೆಯಿತು..!!
ತಳಿರು ತೋರಣದ ಒಸಗೆ ಕೈಬೀಸಿ ಕರೆದಿರಲು
ಹೊಸ ವರುಷ ಹರುಷದಲಿ ತಾ ನಲಿಯಿತು..!!

ಮಾಮರದ ಚಿಗುರೆಲೆಯ ಸವಿಯು ತಾನುಂಡು
ಕೋಕಿಲದ  ಕುಹೂ ದನಿಯು ತಾ ಮೆರೆಯಿತು..!!
ಹೊಂಗೆಯ ತೊಂಗಲಲ್ಲಿ ಘಮ್ಮೆನ್ನೋ ಸುಮರಾಶಿ
ಮಧುಹೀರಿ ಭೃಂಗವು ತಾ ಝೇಂಕರಿಸಿತು..!!

ಹಣ್ಣೆಲೆಯ ತಾವಿನಲಿ ನವ ಚಿಗುರು ಪಲ್ಲವಿಸಿ
ವಸಂತೋತ್ಸವದ ಋತುಗಾನ ಮೇಳೈಸಿತು..!!
ಭೂರಮೆಯ ಚೆಲುವಿಗೆ ಸ್ವರ್ಗವೇ ಮನಸೋತು
ನವ ಯುಗಾದಿಯ ಗಾದಿಯಲಿ ಮೈಮರೆಯಿತು..!!

ಹೊಸತು ಜನ್ಮದ ಹರುಷದಲಿ ಪ್ರಕೃತಿಯು ನಲಿದಿರಲು
ಎಲ್ಲೆಲ್ಲೂ ಸಂಭ್ರಮದ ಉತ್ಸಾಹದುಲ್ಲಾಸ ಮೈದಳೆಯಿತು..!!
ಬೇವುಬೆಲ್ಲದ ಸಹಿತ ಸಿಹಿ ಹೋಳಿಗೆಯ ರುಚಿಯಲ್ಲಿ
ಜನಮನದ ಸಂತಸವು ನೂರ್ಮಡಿಸಿತು..!!!

              ಶೈಲೂ.....
   ಡಾ: B.N. ಶೈಲಜಾ ರಮೇಶ್
[9/4/2024, 1:19 pm] Dr. B. N. Shylaja Ramesh: ಬೇವಿನ ಕಹಿಯ ಮರೆತು
ಬೆಲ್ಲದ ಸಿಹಿಯ ಜೊತೆಗೆ
 ಬೇಳೆಯ  ಸವಿ  ಹೂರಣ

ಹಳೆಯದೆಲ್ಲ ಕಹಿ ಮರೆತು
ಹೊಸವರ್ಷದ ಸಂಭ್ರಮದೇ
ಬದುಕಾಗಲಿ ಪೂರ್ಣ.
[10/4/2024, 10:56 am] Dr. B. N. Shylaja Ramesh: ವಸಂತ ಮಾಸ
*************

ವಸಂತ ಮಾಸದ ಸುಂದರ ಬೆಳಗು
ಮರಿ ಕೋಗಿಲೆಗಳ ಕುಹೂ ಕುಹೂ ಕೂಗು
ಬಾಲ ಸೂರ್ಯನ  ಚಿನ್ನದ ಮೆರುಗು
ಪ್ರಕೃತಿ ಮಾತೆಯ ಸುಂದರ ಸೊಬಗು..!!

ತೇಲುತ ಬರುತಿದೆ ಬೆಳ್ಳನೆ ಮೋಡಾ
ಬೀಸುವ  ತಂಗಾಳಿ ಹಾಡಿದೆ ಹಾಡಾ
ಘಮ್ಮೆನ್ನೋ ಹೂರಾಶಿ ಚೆಲ್ಲಿದೆ ನೋಡಾ
ದುಂಬಿಯ ಝೇಂಕಾರ  ಕೇಳುತ್ತಾ  ಹಾಡಾ..!!

ಚಿಲಿಪಿಲಿ ರಾಗದಿ  ಹಕ್ಕಿಯ ಹಾಡೂ
ಚಗುರಿದ ಮರದಲಿ ಅದರ ಗೂಡೂ
ನಿಸರ್ಗ ಸಿರಿಯ  ಸೊಬಗನು ನೋಡೂ
ಈ  ಚಂದದ ಸೃಷ್ಟಿಯ ಹೋಗಳುತ ಹಾಡೂ..!!

           ಶೈಲೂ......
[18/4/2024, 10:18 pm] Dr. B. N. Shylaja Ramesh: ಬಾಯಾರಿ ಬಳಲಿದೆ ಇಳೆ
ಕನಿಕರಿಸಿ ಬರಬಾರದೆ ಮಳೆ.?
ಹಾಹಾಕಾರವೆದ್ದಿದೆ ಹನಿ ನೀರಿಗಾಗಿ
ಸುರಿದು ತಂಪೆರಚು ನೀ ನಮಗಾಗಿ
[18/4/2024, 10:25 pm] Dr. B. N. Shylaja Ramesh: ಸಕಲ ಜೀವಸಂಕುಲದ ಉಳಿವು
ಚಿಗುರೊಡೆದ ಚೈತ್ರದ ಗೆಲುವು
[12/5/2024, 6:47 pm] Dr. B. N. Shylaja Ramesh: ನಲಿವಿಲ್ಲ ನಗುವಿಲ್ಲ
ಬೇಕಿಲ್ಲ ಏನೂ....
ಮನವು ನೋಯುತಿದೆ
ಮರುಗುತ್ತ ತಾನೂ...

ತೋರಿಕೆಯ ಸಂಬಂಧ
ಒಳಗಿಲ್ಲ ಹುರುಳು...
ಎಂದೋ ಮರಣಿಸಿದೆ
ಎಳೆಯುವ ಕರುಳು...

ಯಾರಿಲ್ಲ ನಮ್ಮವರು
ಅಪ್ಪಿ ಹರಸುವರು...
ಮಾನವೀಯತೆ ಮರೆತ
ಎಲ್ಲರೂ ಹೆರವರು...
[12/5/2024, 6:58 pm] Dr. B. N. Shylaja Ramesh: ಯಾರಲ್ಲೂ ಹೇಳಲಾಗದ
ಭಾವನೆಗಳ ತುಮುಲ...
ಹೇಳಿಕೊಂಡರೇನಾದೀತು.?
ಸಂತೈಸುವರು ವಿರಳ...

ಸುಮ್ಮನೇ ಕಣ್ಣೀರಿಡುತ್ತಿದೆ
ನೋವುಂಡ ಹೃದಯ...
ಒರೆಸುವ ಕೈ ನಿನ್ನದೇ
ಬಾ ದೇವ ಸದಯಾ...
[4/6/2024, 10:27 pm] Dr. B. N. Shylaja Ramesh: ವಾತ್ಸಲ್ಯದ ಮೂರ್ತಿ ಅಮ್ಮ
***********************

ಕರುಣಾ ವಾರಿಧಿ ನೀನು
ಮಮತೆಯ ಕಡಲು ನೀನು
ವಾತ್ಸಲ್ಯ ಮೂರುತಿ ನೀನು
ಅಮ್ಮಾ ನೀನೇ ತಾನೇ ದೈವ

ನೀನಿತ್ತ ವಾತ್ಸಲ್ಯದ ತುತ್ತು
ಎಲ್ಲ ಮೆಚ್ಚುವಂತೆ ಬೆಳೆಸಿತ್ತು
ಬೆನ್ತಟ್ಟಿ  ನೀಡಿದ್ದ ಧೈರ್ಯ
ತಲೆ ತಗ್ಗದಂತೆ ನಡೆಸಿತ್ತು

ತಿದ್ದಿ ತೀಡಿದ ಅಕ್ಷರಜ್ಞಾನ
ಅಕ್ಕರೆಯಿಂದ ಕೈ ಹಿಡಿದಿತ್ತು
ಅಮ್ಮಾ ನೀನಿತ್ತ ಸಹನೆ, ಎಲ್ಲೆಡೆ
ವಾತ್ಸಲ್ಯ ಧಾರೆ ಹರಿಸಿತ್ತು

ನನ್ನೀ.ಸುಂದರ ಜೀವನ
ಅಮ್ಮಾ ನೀನಿತ್ತ ಪ್ರೀತಿಯ ಭಿಕ್ಷೆ
ನಿನ್ನೊಲುಮೆಯ ಹಾರೈಕೆ
ಬೆನ್ನಕಾಯ್ವ ಅಭಯದ ಸುರಕ್ಷೆ

              ಶೈಲೂ....
[4/6/2024, 10:28 pm] Dr. B. N. Shylaja Ramesh: ಅಮ್ಮ##

ಅಮ್ಮ ಎಂದರೆ ಒಂದು ಶಕ್ತಿ ಸಂಚಯ
ನೆನೆಯುತ್ತಲೇ ಮನಸಲ್ಲಿ ವಿದ್ಯುತ್ಪ್ರವಾಹ
ಮಿಡಿದಂತೆ ಸಾವಿರ ತಂತಿ ವೀಣೆ
ಜೀವನೋತ್ಸಾಹ ಅಮ್ಮ ನಿನ್ನಿಂದ ತಾನೇ

ಕೋಟಿ ದೇವರಿಗೂ ಮಿಗಿಲು ಅಮ್ಮಾ
ನೀ ಕಣ್ಮುಂದಿರುವ ದೈವ  ನಿಜದಿ
ಉಸಿರ ಏರಿಳಿತದಲೇ ಅರಿವೆ
ಕರುಳಕುಡಿಗಳ ನೋವು ಸಂಕಟದ ಛಾಯೆ

ತಪ್ಪಿ ನಡೆಯದಂತೆ ತಿದ್ದಿ ತೀಡಿದವಳು
ಅಪ್ಪಿ ಸಕಲರ ಜಗಮೆಚ್ಚುವಂತೆ ನಡೆದವಳು
ಗುರು ದೈವ ಸಖ ಒಡನಾಡಿ ನೀನಾಗಿ
ಹಗಲಿರುಳು ಶ್ರಮಿಸುತ್ತ ಮಗುವ ಕಾಯ್ದವಳು

ಹೋಲಿಸಲಾದೀತೆ ಅಮ್ಮನಿಗೆ ಬದಲು
ಯಾರಿರುವರಂಥವರು ಅವಳ ಮೀರುವವರು
ದೇವನೂ ಎಲ್ಲೆಡೆ ಇರಲಾರದಾಗದೆಂದು
ಮಮತೆ ಮೂರ್ತಿಮಾತೆಯ ಸೃಜಿಸಿದನಂತೆ

ಹೇಳಲಾದೀತೆ ಅಮ್ಮ ನಿನ್ನ ಗುಣಗಾನ
ನೆನೆದೊಡನೆಯೇ ಮಾಡಿದಂತೆ ಅಮೃತಪಾನ
ಎಂತು ತೀರಿಸಲಿ ಮಾತೇ ನಿನ್ನ ಋಣವ
ಮರೆಯಲಾದೀತೆ ಆಮ್ಮಾ ಮಡಿಲೋಳಾಡಿದ ಸುಖವ
               ಶೈಲೂ
[10/6/2024, 7:21 pm] Dr. B. N. Shylaja Ramesh: #ಅಮ್ಮಾ.....
     #ಹೊರಟುಬಿಟ್ಟೆಯೇಕೆ....?

ಸುಳಿವೇ ನೀಡದೆ ಹೊರಟು ಬಿಟ್ಟೆ
ಹೀಗೇಕೆ ತೀರದ ದುಃಖಕನಿಟ್ಟೆ.?
ಕರೆದೊಯ್ದುಬಿಟ್ಟನೇ ಜವರಾಯ
ಹೇಳಮ್ಮಾ ಬಿಟ್ಟುಹೋದದ್ದಾವ ನ್ಯಾಯ.?

ಚಟಪಟನೆ ಆಡುತ್ತಿದ್ದ ಮಾತು
ಹೇಳಿಂದೇಕೆ  ಮೌನವಾಯ್ತು
ಮಕ್ಕಳ ಮೇಲೆ ಸಿಟ್ಟಾದೆಯೇನು.?
ಮೌನವೇ ಹಿತವೆನಿಸಿತೇನು.?

ಸಂಭ್ರಮ ಮುಗಿಸಿಕೊ ಮಗುವೇ
ತಕ್ಷಣವೇ ಹೊರಟು ಬರುವೆ
ಹೇಳಿ ಹೊರಟೆ ಅಮ್ಮ ನೀನಂದು
ಸುಮ್ಮನೇ ಮಲಗಿದೆಯೇಕಿಂದು.?

ಕಂಡಾಕ್ಷಣವೇ ಚಿಗರೆಯಂತೆದ್ದು
ಮುದ್ದುಗರೆಯುತ್ತಿದ್ದೆ ಎದ್ದು ಬಂದು
ಇಂದೇಕಮ್ಮ ಮೌನವಾಗಿ ಮಲಗಿಹೆ
ಬಾ ಅಪ್ಪಿಕೋ ನಾನಿನ್ನ ಮುಂದಿಹೆ😔

ನೀನಿಲ್ಲವೆಂಬ ಕಹಿ ಕಹಿ ಸತ್ಯ
ಕಾಡುತ್ತಲಿದೆ ಮನವನ್ನು ನಿತ್ಯ
ಹೃದಯ ನೊಂದು ರೋಧಿಸುತ್ತಿದೆ
ಸಂತೈಸದೆ ನೀ ಎಲ್ಲಿ ಹೋದೆ..?
[12/6/2024, 9:28 am] Dr. B. N. Shylaja Ramesh: #ಅಮ್ಮಾ.....
     #ಹೊರಟುಬಿಟ್ಟೆಯೇಕೆ....?

ಸುಳಿವೇ ನೀಡದೆ ಹೊರಟು ಬಿಟ್ಟೆ
ಹೀಗೇಕೆ ತೀರದ ದುಃಖವನಿಟ್ಟೆ.?
ಕರೆದೊಯ್ದುಬಿಟ್ಟನೇ ಜವರಾಯ
ಹೇಳಮ್ಮಾ ಬಿಟ್ಟುಹೋದದ್ದಾವ ನ್ಯಾಯ.?

ಚಟಪಟನೆ ಆಡುತ್ತಿದ್ದ ಮಾತು
ಹೇಳಿಂದೇಕೆ  ಮೌನವಾಯ್ತು
ಮಕ್ಕಳ ಮೇಲೆ ಸಿಟ್ಟಾದೆಯೇನು.?
ಮೌನವೇ ಹಿತವೆನಿಸಿತೇನು.?

ಸಂಭ್ರಮ ಮುಗಿಸಿಕೊ ಮಗುವೇ
ತಕ್ಷಣವೇ ಹೊರಟು ಬರುವೆ
ಹೇಳಿ ಹೊರಟೆ ಅಮ್ಮ ನೀನಂದು
ಸುಮ್ಮನೇ ಮಲಗಿದೆಯೇಕಿಂದು.?

ಕಂಡಾಕ್ಷಣವೇ ಚಿಗರೆಯಂತೆದ್ದು
ಮುದ್ದುಗರೆಯುತ್ತಿದ್ದೆ ಎದ್ದು ಬಂದು
ಇಂದೇಕಮ್ಮ ಮೌನವಾಗಿ ಕುಳಿತಿಹೆ
ಬಾ ಅಪ್ಪಿಕೋ ನಾನಿನ್ನ ಮುಂದಿಹೆ😔

ನೀನಿಲ್ಲವೆಂಬ ಕಹಿ ಕಹಿ ಸತ್ಯ
ಕಾಡುತ್ತಲಿದೆ ಮನವನ್ನು ನಿತ್ಯ
ಹೃದಯ ನೊಂದು ರೋಧಿಸುತ್ತಿದೆ
ಸಂತೈಸದೆ ನೀ ಎಲ್ಲಿ ಹೋದೆ..?

ನಮಗಾಗಿ ಮಿಡಿಯುತ್ತಿದ್ದ ಮನ
ಕಳೆದುಕೊಂಡ ಬದುಕಿದು ಶೂನ್ಯ
ಮತ್ತೆ ಮಗುವಾಗಿ ಬಂದರೆ ಪುಣ್ಯ
ನೀನೊಲಿದು ಹರಸಿದರೆ ಧನ್ಯ🙏

           ನಿನ್ನ...........
                    ಶೈಲೂ......
[18/6/2024, 4:06 pm] Dr. B. N. Shylaja Ramesh: [18/06, 12:07 pm] +91 94828 56069: ಧನ್ಯವಾದ..ಆದರೆ ಕೇವಲ ಕುಜ ರಾಹು ರಾಹು ಬೃಹಸ್ಪತಿ ಶುಕ್ರ ಆದಿತ್ಯ ಇವುಗಳಿಗೆ ಮಾತ್ರ ಪ್ರಾಶಸ್ತ್ಯ ಬಂದಿದೆ ಯಾಕೆ? ನೀವು ಹೇಳಿರುವ ಪ್ರಕಾರದಂತೆಯೇ ಕೇತು ಶುಕ್ರರಿಗೂ ಮಾಡಬೇಕಿತ್ತಲ್ಲವೆ? 
ಇದಕ್ಕೇನು ಹೇಳುವುದು?
[18/06, 12:34 pm] +91 99001 38720: ಶುಕ್ರ ಮತ್ತು ಕೇತು ಸಂಯೋಗ ಬಹಳ ಕೆಟ್ಟದಾಗಿ ಇರುತ್ತದೆ.
ಶುಕ್ರ ಪ್ರೀತಿ, ಪ್ರೇಮದ ಸಂಕೇತ ಕೇತು ಅವನೊಂದಿಗೆ ಯುತಿ ಪಡೆದರೆ ಸಮಸ್ಯೆ ಇರುತ್ತದೆ.

ದಶಾದಲ್ಲಿ ಕೇತು ದಶಾ ನಂತರ ಬರುವ ಶುಕ್ರ ದಶಾಗೆ ಅಷ್ಟು ಪ್ರಾಮುಖ್ಯತೆ ಸಂದಿ ಶಾಂತಿಗೆ ಕೊಟ್ಟಿಲ್ಲ ನಮ್ಮ ಋಷಿಮುನಿಗಳು.

ನಮಗೆ ಇಷ್ಟವಾದರೆ ಶಾಂತಿ ಮಾಡಿಸಿಕೊಳ್ಳಬಹುದು.
[18/06, 12:40 pm] +91 95389 89884: ಗ್ರಹಗಳ ಸ್ಥಿತಿ ಯುತಿ ಮತ್ತು ಕಾರಕದ ಆಧಾರದಮೇಲೆ. ಕೇವಲ ಸಂಧಿಕಾಲ ಮಾತ್ರವಲ್ಲ. ದಶಾ ಭುಕ್ತಿ ಕಾಲದಲ್ಲೂ ಶಾಂತಿ ಆಚರಿಸಬೇಕಾಗುತ್ತದೆ.

ಇದರ ಉದ್ದೇಶ ಆ ಗ್ರಹದ ಅಶುಭ ಫಲ ನಿವಾರಣೆ ಮಾಡುವುದಾಗಿದೆ.
[18/06, 12:46 pm] +91 94828 56069: ನಿಜ ಪ್ರತೀ ಸಂಧಿಕಾಲಗಳೂ ದೋಷಕರ..ಜಾತಕಾಧಾರವಾಗಿ ವ್ಯಕ್ತಿಗೆ ಪರಿಣಾಮ ಪರಿಹಾರ..ಆದರೆ ಮುಖ್ಯವಾಗಿ ಇವು ೩ರ ಬಳಕೆಯಷ್ಟನ್ನೆ ನಾವು ಕಾಣುತ್ತೇವೆ ಮತ್ತು ಕೆಲವು ಗ್ರಂಥಗಳಲ್ಲಿ ಕೂಡ ಈ ಮೂರಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿರುವುದು ಕಾಣುತ್ತದೆ ಅದು ಯಾಕಾಗಿರಬಹುದು ಎಂಬ ಪ್ರಶ್ನೆ ನನ್ನದು..🙂
[18/06, 12:50 pm] +91 94828 56069: ಪಾರಾಶರಾದಿಗಳು ಈ ಸಂಧಿಗಳ ಬಗ್ಗೆ ಹೇಳಿಲ್ಲ.ಆದರೆ ಬಳಕೆ ಏಕೆ ಮತ್ತು ಹೇಗೆ ಬಂದಿರಬಹುದು?
[18/06, 12:54 pm] ಸುರೇಶ್ ಸರ್: ಮಾರಕ  ದಶಾ ಪ್ರಕರಣದಲ್ಲಿಯೂ 
ಉಲ್ಲೇಖ ಇರುತ್ತದೆ 

ಕೇಂದ್ರಾದಿಪತ್ಯ ದೋಷ 
ಎಂಬ  ಪ್ರಶ್ನೆ  ಬಂದಾಗ 
ಮಾರಕ  ಎಂಬ  ಪ್ರಶ್ನೆ 
ಬಂದಾಗ 
3 ದಶ  ಕಾಲವು 
ಕಂಟಕ ಮತ್ತು ಮಾರಕ 
ಪ್ರದವುಎಂದು  ಮನದಟ್ಟು ಅದಾಗಾ ಶಾಂತಿ  ಅವಶ್ಯಕ 

ಚರಕ  ಶುಶ್ರುತರ ಪ್ರಕಾರ 
ಮನಶ್ಯಾನಿಗೆ 
101 ಮೃತ್ಯು 
ಅದರಲ್ಲಿ  ಒಂದು  ಮಾತ್ರ 
ಕಾಲನಿಗೆ  ಅಂದರೆ ಯಮನಿಗೆ ಸಂಬಂಧ ಪಟ್ಟಿದ್ದು ,,,
ಪ್ರತಿ  ವರ್ಷವೂ 
ಕಂಟಕವೇ 
ಆದ್ದರಿಂದ 
ಮಣಿ  ಮಂತ್ರ  ಔಷಧಿ ಯಿಂದ 

ಶಾಂತಿ ಕರ್ಮಗಳಿಂದ 
ರಕ್ಷಿಸಿ ಕೊಳ್ಳಬೇಕು
[18/06, 12:56 pm] ಸುರೇಶ್ ಸರ್: ಪೂರ್ಣಾಯು 
ನೋಡಲು  ಬರದೇ 
ಇದ್ದರೆ 
ಕಂಟಕ  ದಶಾ 
ನೋಡಲು ಸಾಧ್ಯವಿಲ್ಲ !!!
[24/6/2024, 7:14 pm] Dr. B. N. Shylaja Ramesh: ಪ್ರೀತಿಮಮಕಾರಗಳ ಅಕ್ಷಯಪಾತ್ರೆ
ಅಮ್ಮಾ ನೀ ತಾನೇ
ಮಮತೆಯೇ ಮೂರ್ತವೆತ್ತ ರೂಪ
ಅಮ್ಮಾ ನಿನಗೆ ವಂದನೆ
[24/6/2024, 7:19 pm] Dr. B. N. Shylaja Ramesh: ಪ್ರೀತಿ ಮಮಕಾರಗಳ ಅಕ್ಷಯಪಾತ್ರೆ ಇಂದು ಬರಿದು😔



 

Comments

Popular posts from this blog

343 ಒಗಟಿನ ರೂಪದ.ಚುಟುಕು

ಕವನ ಸಂಗ್ರಹ

356 ತಿಳಿಯುವ ಬಾ