ಒತ್ತಕ್ಷರ ಕವನ

#ಒತ್ತಕ್ಷರ_ಕವನ
#ಚ್ಚ

ಸ್ವಚ್ಛಮನದ, ಕರುಣೆ ಕಾಳಜಿಯೇ ಮೂರ್ತಿವೆತ್ತ
ಅಚ್ಚುಮೆಚ್ಚಿನ, ಸಿಹಿಮನದ ಸ್ನೇಹಿತ ನನ್ನವನು
ಬಿಚ್ಚು ಮನದವ, ಲವಲೇಶವೂ ಅಹಂಇಲ್ಲದ
ಸಚ್ಚಾರಿತ್ರ್ಯದ ಮನುಜ ಶ್ರೀರಾಮನಂಥವನು.!

ಇಚ್ಛೆಯಲ್ಲದ ಕಾರ್ಯವನು ಮಾಡದಿದ್ದರೂ
ತುಚ್ಛವಾಗಿ ಯಾವುದನ್ನೂ ಸಹ ಕಾಣದವನು
ಸ್ವೇಚ್ಛಾ ಜೀವನವನ್ನು  ದ್ವೇಷಿಸಿದರೂನೂ
ಸ್ವಇಚ್ಛೆಗೆ ಅತೀ ಗೌರವ ಕೊಡುವವನು..!

ಅನ್ಯರಲ್ಲಿ ಕಿಚ್ಚೆಬ್ಬಿಸುವ ಸುರಸುಂದರಾಂಗ
ಜೊತೆಗಿರಲು ಬೆಚ್ಚನೆಯ ಭಾವ ಉದ್ದೀಪಿಸುವನು
ಸತ್ಯವಂತನಿವ ಮುಚ್ಚುಮರೆಯಿಲ್ಲದ ವ್ಯಕ್ತಿ
ಹೆಚ್ಚೇನು ಹೇಳಲಿ, ಇವನೆನ್ನ ಬಾಳು ಬೆಳಗಿದವನು.!

    ಡಾ: B.N. ಶೈಲಜಾ ರಮೇಶ್

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ನನ್ನ ಕವನಗಳು