Posts

Showing posts from August, 2025

ನನ್ನ ಕವಿತೆ

#ದತ್ತ_ಸಾಲು #ಅತ್ತ_ಕೋಣೆಯಲ್ಲಿ_ಬೆಳಕು ಅತ್ತ ಕೋಣೆಯಲಿ ಬೆಳಕು ಆದರಿತ್ತ ಮನದಲಿ ಕತ್ತಲು ಕತ್ತಲೆಕೂಪದಿಂದೊರಬರದಿರೆ ಹರಡೀತೇ ಬೆಳಕು ಸುತ್ತಲೂ.? ಮನವಿದು ಯೋಚನೆಗಳ ತವರು ಯೋಜಿಸಬೇಕು ಹೊರಬರಲು ನಿರಂತರ ಚಿಂತೆಯಲಿ ಸಿಲುಕೆ ಚಿಂತನೆಯು ಭಾರವಹುದು ಹೊರಲು.! ಸದ್ವಿಚಾರಗಳಡಿಯಲಿ ಚಿಂತನೆ ಸದ್ಭಾವದಲಿ ವಿಷಯ ಮಂಡನೆ ಸತ್ಕರ್ಮಗಳಲಿ ಕರ್ಮನಿಯೋಜನೆ ನೀಡಬಹುದು ಬೆಳಕ ರಂಜನೆ..! ಕೋಣೆಯಲುರಿವ ಬೆಳಕಿನಂದದಲಿ ಮನದೊಳಗೂ ಪ್ರಭೆಯ ಕಾಣಲು ಅರಿಷಡ್ವರ್ಗಗಳ ಬಲು ದೂರವಿರಿಸಿ ಅವನ ಭಜಿಸಲು ಹರ್ಷದ ಹೊನಲು.!      ಡಾ : ಶೈಲಜಾ ರಮೇಶ್ #ವಾರದ_ಕವನ #ಕವನವಾಗು_ಬಾ_ಭಾವವೇ ಕಳೆದುಹೋಯಿತೆಲ್ಲಿ ಪುಟಿಯುತ್ತಿದ್ದ ಭಾವ ಪಟಪಟನೆ ಸಿಡಿಯುತ್ತಿದ್ದ ಮಾತಿಗೂ ಅಭಾವ ಮಿಡಿಯುತ್ತಿದ್ದ ಮನಸಲೂ ಏಕೋ ಕತ್ತಲು ಆವರಿಸಿದಂತೆನಿಸುತ್ತಿದೆ ಮೋಡ ಸುತ್ತಮುತ್ತಲೂ ಗುಪ್ತವಾಗಡಗಿಹ ಸುಪ್ತ ಭಾವಗಳು ಸತ್ತಂತೆ ಮಲಗಿತೇಕೆ ಮರೆತು ತನ್ನಿರುವು ಹೊರಹಾಕದಿದ್ದರೆ ಮನದ ತುಮುಲ ಜೀವನ ಹೇಗಾದೀತು ಹೇಳು ಸರಳ.? ಅಕ್ಷರಕ್ಷರವ ಪೋಣಿಸಿ ಪದವಾಗಿಸಲು ಪದಕ್ಕೆ ಪದವ ಬೆಸೆದು ಕಾವ್ಯವಾಗಿಸಲು ಸುತ್ತಮುತ್ತ ಜರುಗುತ್ತಿರುವ ವಿಷಯವೇ ಹೆಣೆದು ಚಂದದ ಕವನವಾಗಿಸು ಬಾ ಭಾವವೇ.. ಡಾ: B.N ಶೈಲಜಾ ರಮೇಶ್        ( ಶೈಲೂ...)  #ಆತ್ಮವಿಶ್ವಾಸ ಆತ್ಮವಿಶ್ವಾಸವಿರಲು ಬಾಳಿನಲ್ಲಿ ಚಿಗುರದೇನು ಬದುಕು ಹೇಳು.? ಬದುಕಲೇ ಬೇಕೆನ್ನುವ ಛಲವಿರಲು ಉಸಿರು ತುಂಬದೇನು ಹೇಳು.? ಮೇಲ...

ಒತ್ತಕ್ಷರ ಕವನ

#ಒತ್ತಕ್ಷರ_ಕವನ #ಚ್ಚ ಸ್ವಚ್ಛಮನದ, ಕರುಣೆ ಕಾಳಜಿಯೇ ಮೂರ್ತಿವೆತ್ತ ಅಚ್ಚುಮೆಚ್ಚಿನ, ಸಿಹಿಮನದ ಸ್ನೇಹಿತ ನನ್ನವನು ಬಿಚ್ಚು ಮನದವ, ಲವಲೇಶವೂ ಅಹಂಇಲ್ಲದ ಸಚ್ಚಾರಿತ್ರ್ಯದ ಮನುಜ ಶ್ರೀರಾಮನಂಥವನು.! ಇಚ್ಛೆಯಲ್ಲದ ಕಾರ್ಯವನು ಮಾಡದಿದ್ದರೂ ತುಚ್ಛವಾಗಿ ಯಾವುದನ್ನೂ ಸಹ ಕಾಣದವನು ಸ್ವೇಚ್ಛಾ ಜೀವನವನ್ನು  ದ್ವೇಷಿಸಿದರೂನೂ ಸ್ವಇಚ್ಛೆಗೆ ಅತೀ ಗೌರವ ಕೊಡುವವನು..! ಅನ್ಯರಲ್ಲಿ ಕಿಚ್ಚೆಬ್ಬಿಸುವ ಸುರಸುಂದರಾಂಗ ಜೊತೆಗಿರಲು ಬೆಚ್ಚನೆಯ ಭಾವ ಉದ್ದೀಪಿಸುವನು ಸತ್ಯವಂತನಿವ ಮುಚ್ಚುಮರೆಯಿಲ್ಲದ ವ್ಯಕ್ತಿ ಹೆಚ್ಚೇನು ಹೇಳಲಿ, ಇವನೆನ್ನ ಬಾಳು ಬೆಳಗಿದವನು.!     ಡಾ: B.N. ಶೈಲಜಾ ರಮೇಶ್

ಕವನಗಳು

ಕರಿಮೋಡ ಚದುರಿತ್ತು ಉದಯರವಿಯ ಕಂಡು ನಭಕೆ ಹೊನ್ನೆಳೆಯ ಚಿತ್ತಾರ ಬಿಡಿಸಿದ್ದ ಭಾಸ್ಕರನು ಬಂದು ಹಸಿರೊದ್ದು ಮಲಗಿದ್ದ ಭೂತಾಯಿ ಮೈಮೇಲೆ ಹೊನ್ನನೀರ ತುಳುಕಿಸಿ ನಲಿಸಿತ್ತು ಭಾಸ್ಕರನ ಲೀಲೆ ಬಿರಿಯಲವಣಿಸಿದ್ದ ಮೊಗ್ಗೆಲ್ಲ ಹೂವಾಗಿ ಅರಳಿ ನಗುತಾ ಪಸರಿಸೆಲ್ಲೆಡೆ  ಸೌಗಂಧ ಕೋರುತಿದೆ ದಿನಕರಗೆ ಸ್ವಾಗತಾ           ಶೈಲೂ.... ಯಾರೂ ಇಲ್ಲ ಕೊನೆಗೆ ಜಗನ್ನಾಟಕ ಸೂತ್ರದಾರನ ಜೊತೆಗೆ ಯಾರಿತ್ತ ಶಾಪವೋ ಕಾಣೆ ಜೊಂಡಿನಿಂದಾಯ್ತೇ ಕೊನೆ ಉಂಗುಷ್ಟ ದಲ್ಲಿತ್ತೇ ಪ್ರಾಣ ಅರಿತು ಹೂಡಿದನೆ ಬೇಡ ಬಾಣ ಅವತಾರಾಂತ್ಯದ ಕುರುಹೇನು.? ಕೊನೆಗಾಣಿಪ ಪರಿ ಇದೇನು.? ಅಗಣಿತ ಅಕ್ಷೋಹಿಣಿ ಬಳಗ ಮೆಚ್ಚಿ ವರಿಸಿದ್ದ ನಾರೀಒಡ್ಡೋಲಗ ಯಾರೊಬ್ಬರೊಬ್ಬರೂ ಕಾಯದೇ ಅಳಿವಿನಂಚಲಿ ನಿಂತಿತೇ ವಂಶವೇ ಜಗನ್ನಾಟಕ ಸೂತ್ರದಾರ ಆಡಿಸಿದ್ದೆ ಆಟ ನಿನ್ನನುಸಾರ ತಂತ್ರ ಒಳತಂತ್ರಗಳ ರಣಸೂತ್ರ ಧರ್ಮೋದ್ಧಾರಕೆ ನಿನ್ನೀಪಾತ್ರ ಕೊನೆಯಂಕದ ಪರದೆಯಿದೇನು.? ಇಂತೀ ನಿರ್ಗಮನ ಸರಿಯೇನು.? ಅವತಾರದ ಕಾರ್ಯ ಮುಗಿದಿತ್ತೇ.? ಕಡೆಗಾಣಿಸಿದವರ ಬಗ್ಗೆ ನೋವಿತ್ತೇ ?         ಶೈಲೂ..... ಯಶೋಗಾಥೆ ************ ಕಂಡ ಕನಸಿನ ಸಾಕಾರ ದುಡಿಮೆಯೇ ಅದರಾಧಾರ ಕನಸು ನನಸಾಗಿಸಲು ಬೇಕು ಪರಿಶ್ರಮವೆಂಬ ಬೆಳಕು ಆಂತರ್ಯದಲಿ ಹಚ್ಚಿಡಬೇಕು ಇಚ್ಛಾಶಕ್ತಿಯ ನಂದಾದೀಪ ಬೆಳಕಾದೀತು ಬದುಕ ಹಾದಿ ಕೈಹಿಡಿದು ನಡೆಸುವ ದಾರಿದೀಪ ನಮ್ಮೊಳಿತಿಗೆ  ನಮಗೆ ನಾವೇ ಆಗಬೇಕು ಚೈತನ್...