ಕವಿತೆಗಳು

[4/6/2019, 3:55 pm] Dr. B. N. Shylaja Ramesh: ,ಕಣ್ಣೀರು
*******

ನನ್ನಿಂದ ಆಗಲಿ ನೀ
ದೂರವಿದ್ದರೂ  ಮಾಧವ
ನಿನ್ನ ನೆನಪಲ್ಲೇ ನಾ
ಹಿಡಿದಿಟ್ಟಿರುವೆ  ಜೀವ..

ಎಂದಾದರೊಂದು ದಿನ ನೀ
ಬರುವೇ ಎಂಬ ಬಯಕೆ
ಮೂಡಿ ಎದೆಯಲಿ
ಸಾಂತ್ವನಗೈಯುತಿಹೆ ಮನಕೆ..

ನಿನ್ನ ನೆನಪಿನಾಳದಲ್ಲಿ 
ಇರಬಹುದೇ ನನ್ಹೆಸರು
ಅದೇ ಆಸೆಯಲಿ ನಾ
ಬಿಗಿದಿಟ್ಟಿರುವೆ ಉಸಿರು..

ಎಂದಾದರೂ  ನನ್ನ ಮುಖ
ನೆನಪಾದರೆ ನಿನಗೆ
ಬಂದುಬಿಡು ಕಣ್ಣೆದುರು
ಮಿಂಚಿನ ಹಾಗೆ..

ನೆಪವೊಡ್ಡಿ ನಟಿಸಿದರೆ
ಮರೆತುಬಿಡು ನನ್ನನ್ನು
ಬೇಕಿಲ್ಲ ಬಡಿವಾರ
ಅಳಿಸಿಬಿಡು ನನ್ಹೆಸರನ್ನು..

ಆದರೂ.......

ನನ್ನುಸಿರಿರುವ ತನಕ ನೀನಿರುವೆ
ನನ್ನೆದೆಯಲಿ  ಹಸಿರಾಗಿ
ನನ್ನ ಕಣ್ಣ ಗೂಡಿನಲ್ಲಿ
ಒಂದು ಹನಿ ಕಣ್ಣೀರ ಮುತ್ತಾಗಿ..

        ಶೈಲೂ.......
[4/6/2019, 3:55 pm] Dr. B. N. Shylaja Ramesh: ,ನಿದರ್ಶನ..!!
***********

ಕಡುಕ್ರೂರಿ ಅಜ್ಞಾನಿ
 ಕಾಡಿನ ಬೇಡ
ಸಿಕ್ಕವರ ಕೊಲ್ಲುತ್ತ 
ಪಾಪಿಯಾಗಿದ್ದ ಮೂಢ

ಸುಜ್ಞಾನದ ಸುಳಿವೊಂದು 
ಸೆಳೆದು ಎಳೆದಿತ್ತು
ಅಜ್ಞಾನದ ಕಾರ್ಮೋಡ 
ತೆರೆಯ ಸರಿಸಿತ್ತು

ಮರ ಮರ ಎನ್ನುತ್ತಲೇ 
ಶ್ರೀ ರಾಮನಾಮವ ಜಪಿಸಿ
ಅಜರಾಮರ ತಾರಕ ಮಂತ್ರವ 
ಭಕ್ತಿಯಲಿ ಪಠಿಸಿ

ತನ್ನೆಲ್ಲ ಕ್ರೂರತನ
 ಬಿಟ್ಟು ಬದಲಾದ
ಕಾಣದ ಕೈಯ ಅಗೋಚರ 
ನಡೆಗೆ ನಮಿಸಿ ಶರಣಾದ

ದೃಢ ಸಂಕಲ್ಪವಿತ್ತು
 ಹೊಕ್ಕ ಜ್ಞಾನದ ಹುತ್ತ
ಸಾಕ್ಷಾತ್ಕರಿಸಿತ್ತು ತ್ರಿಕಾಲಜ್ಞಾನ 
ಅಜ್ಞಾನದ ತೆರೆಯ ಸರಿಸುತ್ತ

ವಲ್ಮೀಕದೇ ಪಡೆದ 
ಜ್ಞಾನಕೆ ವಾಲ್ಮೀಕಿಯಾದ
ರಾಮನುದಿಸುವ ಮೊದಲೇ  
ವೃತ್ತಾಂತ ಗ್ರಹಿಸಿದ

ಸೃಜಿಸಿದ ಶ್ರೀ ರಾಮಾಯಣ
ಮಹಾಕಾವ್ಯ ಆಕರ  ಗ್ರಂಥ
ಸಾಧಿಸಿದ್ದ ದಿವ್ಯಜ್ಞಾನ 
ಜಾತಿಮತದ ಎಲ್ಲೆ ಮೀರುತ
 
ಪ್ರತಿಜೀವಿಯೆದೆಯಲ್ಲೂ ಇದೆ
ಅಗಾಧ ಚೈತನ್ಯ ಚಿಲುಮೆ
ಜಗವನೆಲ್ಲ  ಬೆಳಗಿಸಬಲ್ಲ 
ಅಪಾರ ತೇಜಸ್ಸಿನ ಮಹಿಮೆ

ಗುಪ್ತವಾಗಡಗಿದೆ ಎಲ್ಲರಲೂ 
ದಿವ್ಯ ಸುಪ್ತ ಚೇತನ
ಸಾಧನೆಯಲಿ ಸಾಕಾರಗೊಳಿಸಬೇಕು
 ದೂಡಿ ಮೂಢತನ

ಕ್ರೂರನಾಗಿದ್ದರೂ ಸರಿಯೇ 
ಇದ್ದರೆ ಆ ದೇವನ ಹರಕೆ
ಸಾತ್ವಿಕ ಋಷಿಯಾಗಬಲ್ಲ , 
ವಾಲ್ಮೀಕಿ ಯೊಬ್ಬ ಸಾಕು ಯೋಗ್ಯನಿದರ್ಶನಕೆ....
                           
                                ಶೈಲೂ......

ಶ್ರೀಯುತ ರಮೇಶ್ ಕೈಗಾ ಅವರ ಕವನದಿಂದ ಪ್ರೇರಿತ
Tq... ರಮೇಶ್ ಸರ್🙏🙏
[4/6/2019, 3:55 pm] Dr. B. N. Shylaja Ramesh: ,ಭರವಸೆಯೊಂದೇ ಸಾಕು.
**********************

ಭಾವಾಂತರಂಗದ
ಭಾವನೆಗಳ ಬೆಸೆದು
ಬರಡು ಬಾಳಲಿ
ಬೆಳದಿಂಗಳಂತೆ
ಬಂದವಳೇ ಭಾಮಿನಿ
ಭರವಸೆಯ ಭಾವಗಳಲಿ
ಬೆರಗಾಗಿಸಿ ಬದುಕ
ಬೆಳಕಾಗಿಸಿದವಳು ನೀ

ಭ್ರಮೆಯಲೋಕದೊಳಗಿದ್ದ
ಬ್ರಾಮಕ ಭಾವಗಳನು
ಬಂದಂತೆಯೇ ಬಿಸುಟು
ಭಾವದ ಬಣ್ಣಗಳನ್ನು
ಬದುಕಿಗೆ ಬಳಿದು
ಭೋರ್ಗರೆವ ಭಾವದಲೆಗೆ
ಬಾಂಧವ್ಯ ಬೆಸುಗೆಗಲಿ
ಬಂಧಿಸಿದವಳು ನೀ

ಬರಿದಾಗಿದ್ದ ಬಾಳ
ಬಾನಿನಲ್ಲಿ ಬಳಿದೇಳು
ಬಣ್ಣಗಳ, ಭಾವುಕ
ಬಂಧವನು ಬೆಸೆದು
ಬಿಗಿದಪ್ಪಿ ಬರಸೆಳೆದು
ಬಂದಾನಂದದ 
ಭಾವಕ್ಕೆ ಭಾಷ್ಯ 
ಬರೆದವಳು ನೀ

ಬೇಸತ್ತು ಬೆಂದು
ಬಳಲಿದ್ದ ಬದುಕಲ್ಲಿ
ಬಯಕೆಗಳ ಬಡಿದೆಬ್ಬಿಸಿ
ಬಳಲಿಕೆಯ ಬಡಿದೋಡಿಸಿ
ಬಳಿಸಾರಿ ಬಂದು
ಭಾವೋತ್ಕರ್ಷವ ಬಡಿಸುತ
ಬಾಹು ಬಂಧನದಿ
ಬಂಧಿಸಿದವಳು ನೀ

ಬರದ ಬಿಸಿಲಬ್ಬರದ
ಭಾವನೆಗಲಿಲ್ಲದ 
ಬಳಲಿ ಬೆಂಡಾದ
ಭಾವಾಂತರಂಗಕ್ಕೆ
ಭರವಸೆಯ ಭಾಗ್ಯವನು
ಬೇಡದಿದ್ದರೂನೀಡಿ
ಬಾಳ ಬೆಳಕಾಗಿಸಿದ
ಭಾಗ್ಯವಂತೆ ನೀ.....
  
          ಶೈಲೂ....
[4/6/2019, 3:55 pm] Dr. B. N. Shylaja Ramesh: ," ಕವಿತೆ " 
ಅವನು ಮತ್ತು  ನಾನು
******************

ಕವಿತೆ..!!  ಕವಿತೆ..!!
ಸುಂದರ ಪದಗಳಲ್ಲಿ ಕುಳಿತು
ಬೆಸೆಯಿತು  ನನ್ನ.... ನಿನ್ನ.
ಮನದ  ಭಾವಗಳು
ತಾಕಿ  ಹೊಸೆಯಿತು
ಹೊಂಗನಸನ್ನ...
ಮೃಧು ಮಧುರ ನುಡಿ
ಮುದಗೊಳಿಸಿ
ಮನವನ್ನ...
ಬದುಕ  ಕಹಿ ನೆನೆಹುಗಳ
ಝಾಡಿಸಿ  ಒಗೆದು
ಹಾಗುರಾಯ್ತೆ ನ್ನ  ಮನ...
ಕವಿತೆ  ಬರೆಯಲೇನಗೆ
ನೀನಾದೆ
ಸ್ಫೂರ್ತಿ...
ಇರಲಿ  ಸವಿ ಸ್ನೇಹ
ಹೀಗೆಯೇ
ಜೀವನ ಪೂರ್ತಿ...
ನಿನ್ನ ಸ್ಫೂರ್ತಿ ತುಂಬಿದ
ಸ್ನೇಹದಾ  ನುಡಿಯ
ನಾನೆಂದು  ಮರೆಯಲಾರೆ...
ನೀ ಅಳೆದು ತೂಗಿ
ಬರೆದ ಕವಿತೆಗೆ
ಕಾವ್ಯ ಕನ್ನಿಕೆ ನಾನೇನು  ??
ನಾನೆಂದೆಂದಿಗೂ 
ನನ್ನ  ಮನ ಮೋಹಕ
ಮಾಧವನಾ  ರಾಧೆ...
ಕಲ್ಪನೆಗೂ
ಮೀರಿ  ಸಂಭ್ರಮಿಸಿದೆ
ತುಂಬುತ್ತೇನೆಂದು ನಿನ್ನೆದೆ...
ಹೇ !! ಸುಮಧುರ  ಕವಿತೆ !!
ಬಳಸಿ 
ಸುಂದರ ಪದಗಳ 
ಖುಷಿಯಾಗಿದ್ದರೆ 
ಆನಂದಿಸು.....
ನೀಗಿದ್ದರೆ  ವ್ಯಥೆ
ಸಂಭ್ರಮಿಸು......

        ಶೈಲೂ......
[4/6/2019, 3:55 pm] Dr. B. N. Shylaja Ramesh: ,ನೀನಿದ್ದರೆ ಸನಿಹ
*************

ನೀನಿದ್ದರೆ ಸನಿಹ
ಕಳೆದುಹೋಗುವೆ ನಾನು
ನನ್ನತನವೇ ಮರೆತು
ಕೈಗೆ ಸಿಗಲಾರದಂತೆ

ಹುಚ್ಚು ಮನಕೆ ನೀನು
ಲಗ್ಗೇಹಾಕುವೆಯೇನು
ಎದೆಯ ತುಂಬೆಲ್ಲ ನವಿರುಭಾವ
ಜಗವ ಮರೆಯುವಂತೆ

ಬಿಸಿಯುಸಿರ ಆ ಸ್ಪರ್ಶ
ಭುವಿಯ ಮರೆಸುವುದಲ್ಲ
ಕನಸ ರೆಕ್ಕೆಯನೇರಿ
ಹಾರಿಹೋಗುವಂತೆ

ಕನಸು ಕಂಗಳ ತುಂಬ
ತುಂಬಿ ನಿನ್ನದೇ ಬಿಂಬ
ಕಾತರದಿ ಕಾಯುವೆನು
ಚಾತಕ ಪಕ್ಷಿಯಂತೆ

ಎಷ್ಟು ಮಳೆ ಸುರಿದರೇನು
ಸ್ವಾತಿ ಮುತ್ತಿಗೆ ಸಮವೇ
ನಿನ್ನ ಒಲವಿನ ಮುಂದೆ
ಎಲ್ಲ ತೃಣ ಸಮದಂತೆ

ಎನ್ನೆದೆಯ  ಮಂದಿರಕೆ
ಕನಸ ತೋರಣ ಕಟ್ಟಿ
ಕಾಯುತಿಹೆ ನಿನಗಾಗಿ ಬಾ ಒಲವೇ
ಮೂಡಣದಿ ರವಿ ಮೂಡುವಂತೆ

              ಶೈಲೂ.....
[4/6/2019, 3:55 pm] Dr. B. N. Shylaja Ramesh: ,ಕಳೆದುಹೋಗಿದೆ ಹೃದಯ
*********************

ಎಲ್ಲೋ ಕಳೆದಿದೆ ಗೆಳೆಯ
ಕನಸು ತುಂಬಿದ ಹೃದಯ
ನೆನಪಿನಂಗಳದಿ ಚಿಮ್ಮುತ್ತಿರುವ
ಕಾರಂಜಿಯಲಿ ನಾನಲಿಯುವಾಗ

ಎಲ್ಲೋ ಕಳೆದಿದೆ ಗೆಳೆಯ
ಕಂಡೊಡನೇ ಉಲಿವ  ಹೃದಯ
ಜಾರಿಹೋಗಿದೆಯೇನೋ
ಕಣ್ಣಂಚಲಿ ಮಿಂಚು ಸರಿದಾಗ

ಎಲ್ಲೋ ಕಳೆದಿದೆ ಗೆಳೆಯ
ಹುಚ್ಚು ಮನಸಿನ ಹೃದಯ
ನೀನುಲಿದ ಸ್ವರಮಾಧುರ್ಯದ
ಸವಿಜೇನ ಸವಿಯುವಾಗ

ಎಲ್ಲೋ ಕಳೆದಿದೆ ಗೆಳೆಯ
ನಿನ್ನ ಬಿಂಬ ತುಂಬಿದ.ಹೃದಯ
ನೀನೆದುರು ನಿಂತು ಹುಸಿನಗೆಯ
ಹೂಬಾಣ ಹೂಡಿದಾಗ

ಎಲ್ಲೆಲ್ಲಿ ಹುಡುಕಲಿ ಗೆಳೆಯ
ಕಾಣದಾಗಿದೆ ಬಡ ಹೃದಯ
ಸಿಕ್ಕರೆ ಬಚ್ಚಿಡು ಜೋಪಾನವಾಗಿ
ಹೆಚ್ಚೇನು ಹೇಳಲಿ ಹೆಜ್ಜೆಹಾಕು ಜೊತೆಜೊತೆಯಾಗಿ

          ಶೈಲೂ......
[4/6/2019, 3:55 pm] Dr. B. N. Shylaja Ramesh: ,ಹೃದಯದಲ್ಲರಳಿದ
ಸುಮದ ಪರಿಮಳವು
ತುಂಬಿ ಒಡಲೆಲ್ಲ
ಕರೆಯುತಿದೆ ಮಾಧವನ

ಭಕ್ತಿ ರಸ ಮಕರಂದ
ಉಕ್ಕುಕ್ಕಿ ಹರಿಯುತಿದೆ
ಭಕ್ತವತ್ಸಲ ಮಾಧವನ
ಬಳಿಸಾರಿ ಕರೆಯುತಿದೆ

ಮನಮೋಹಕ ಮಾಧವನು
ಮಧುಕರನು ತಾನಾಗಿ
ಮಕರಂದದಾಸೆಗೆ 
ಮೋಹಿಸಿ ಬರುತಿರಲು

ಭಕ್ತಿಪರಾಕಾಷ್ಠೆಯಲಿ
ಭಕ್ತಿ ಮಕರಂದವನು
ಬಾಂಧವ ಮಾಧವಗೆ
ಬಡಿಸಿ ತೃಪ್ತಳಾಗುವೆನು

ಅವನಲ್ಲದಿನ್ನಾರು ಬಾಂಧವರು
ಅವನಿಯೊಳು,ಪೊರೆವರಾರಿಲ್ಲ
ಅವನ ಸಿರಿಪದಕಮಲ
ಆಶ್ರಯಿಸಿ ಸುಖಿಸುವೆನು

         ಶೈಲೂ...
[4/6/2019, 3:55 pm] Dr. B. N. Shylaja Ramesh: ,ನೀನಿಲ್ಲದೇ
********

 ಮಂಕಾಯ್ತು ಮನ ಮಾಧವ
ನೀ  ಬಳಿಬಾರದೇ
ಮರೆತೇ ಹೋಯ್ತು ನಗುವು
ಮುರಳೀಧರ ನಿನಕಾಣದೆ
ಜಡವಾಯ್ತು  ಬದುಕು ಜಗದ
 ಚೇತನ ನಿನ್ನ  ನೋಡದೇ
ಕಣ್ಣಂಚಲಿ ತುಂಬಿ ಕಣ್ಣೀರು
ಮನ ನಿನ್ನದೇ ನೆನೆದಿದೇ
ಚೆಲುವ ನಗೇಬೀರಿ ಸೆಳೆದುಬಿಟ್ಟೆ
ನನ್ನ  ನೀನಂದು
ಮನದ ಒಳಹೊಕ್ಕು ಕುಳಿತುಬಿಟ್ಟೆ
ನೀ  ನನ್ನಾತ್ಮ ಬಂಧು
ಮೃದುನುಡಿಯಲಿ ಮನವರಳಿಸಿಬಿಟ್ಟೆ
ಬಳಿಸಾರಿ ಬಂದು
ಇಂದೇಕೆ  ದೂರಾದೆ  
ಬರೀ ನೋವೇ ತಂದು
ಏನೊಂದೂ  ಕಾಣಲೊಲ್ಲದು ಕಣ್ಣು
ನಿನ್ನ ದಿವ್ಯರೂಪದ ಹೊರತು
ಏನೊಂದೂ ಕೇಳಿಸಲೊಲ್ಲದೂ
ಕಿವಿಗೇ ನಿನ್ನ  ನಾಮದಾ ಹೊರತು
ಬೇರೇನೂ  ಅರಿಯಲಾರದು ಹೃದಯ
ನಿನ್ನಿರುವಿಕೆಯಾ ಮರೆತು

          ಶೈಲೂ.......
[4/6/2019, 3:55 pm] Dr. B. N. Shylaja Ramesh: ,ಕವಿ ಪುರಾಣ
***********

ಬಿಟ್ಟೆನೆಂದರೂ ಬಿಡದ ಮಾಯೆ
ಕಲ್ಪನೆಯ ಮೂಸೆಯಲ್ಲಿದ್ದದ್ದು ಕೊರೆಯೆ
 ಬರೆಯಲೆಂದೇ ಪಡೆದಿರುವ ಕರ್ಮ
ಬಿಡಲಾಗದು ಬರೆಯುವುದೇ ಧರ್ಮ...

ತುಂಬಿ ಭಾವನೆಗಳಿಗೆ ಜೀವ
ಪದಗಳಲಡಗಿಸಿ ಸವಿ ಭಾವ
ಕಲ್ಪನಾ ಲೋಕದಲಿ ತೇಲಿ ತೇಲಿ
ಪದಪುಂಜಗಳ ಸಂವೃದ್ಧ ಥಾಲಿ

ಬರೆದಷ್ಟೂ ತೀರದ ದಾಹ
ಬರುತ್ತದೆ ಭಾವನೆಗಳ ಪ್ರವಾಹ
ಮೊಗೆದಷ್ಟೂ ಸಂವೃದ್ದ ಫಸಲು
ಅರಳಿ ನಗುವ ಭಾವನೆಯ ತಿರುಳು

ಲಕುಮಿ ಕೈಬಿಟ್ಟರೂ ಸರಿ
ಹಿಡಿದಳೇ ಕರವ ವಾಣಿ ಈ ಪರಿ
ಅವಳೋ,  ಇವಳೋ.. ಯಾರಾದರೂ ಸರಿ
ಹರಸಿ ಬರೆಸಲಿ ಪರಿ ಪರಿ...

             ಶೈಲೂ.....
[4/6/2019, 3:55 pm] Dr. B. N. Shylaja Ramesh: ,ನವಿರಾದ ನೆನಪು
**************

ಪ್ರಶಾಂತ  ಸಂಧ್ಯಾಸಮಯ
ತಂಗಾಳಿ ತಾಕಿ ಎನ್ನೆದೆಯ
ಅಲೆಅಲೆಯಾಗಿ ನೆನಪ ಸುರಳಿ
ಬಿಚ್ಚಿ ನೀಡುತಿದೆ ಕಚಗುಳಿ

ತಂಗಾಳಿ ತಂದ ಪರಿಮಳದ ಗಂಧ
ನೆನಪಿಸುತಿದೆ ನಿನ್ನ ವದನದ ಅಂದ
ಬಿರಿದ ತುಟಿಯಂಚಿನಿಂದ..ಆ
ಸೊಗಸ ಕರೆಯ ಕೇಳುವುದೇ ಚಂದ

ಮುಳುಗುತಿಹ ಆ ರವಿಯ ಕಿರಣ
ಮುಗುಳುನಗೆ ತಂದ ಪ್ರೀತಿಯ ಸ್ಪುರಣ
ಕಾಡುವೆಯೇಕೆ ಈ ಪರಿ ಅಕಾರಣ
ಮೋಡಿ ಮಾಡಿ ಕೆರಳಿಸಿದೆ ಮನವನ್ನ

ಚಿಲಿಪಿಲಿಯ ದ್ವನಿ ಹೊರಳಿ
ಹೊರಟಿದೆ ಮರಳಿ  ಗೂಡಿಗೆ
ನಿನ್ನೀ ಪ್ರೀತಿಯ ಕಲರವ
ತುಂಬಿಬಿಟ್ಟಿದೆ  ಎದೆಯೊಳಗೆ

ನೇಸರನಿಗೂ ಅವಸರ ಅಡಗಲು
ಭೂದೇವಿಯ ಒಲವ ಮಡಿಲೊಳು
ಕೆಂಪರಡಿ ಕೆನ್ನೆ ನಾಚಿ ನೀರಾದೆ
ಕನವರಿಸಿ ನಿನ್ನ ಮನದೊಳು

ಈ ಪ್ರಶಾಂತ ಸಂಜೆಗೂ
ನಿನಗೂ ಏನಿಹುದು  ಬಂಧ..?
ಕಾತರದ ಅಳಲಿನೊಲು
ಕಾಯ್ವೆ ನಾ ಮುದದಿಂದ...

           ಶೈಲೂ.....
[4/6/2019, 3:55 pm] Dr. B. N. Shylaja Ramesh: ,ತಂಗಾಳಿಯಂತೆ.  ನೀ...
********************

ಕಂದ  ನಿನ್ನ ಮೊಗದಂದ
ಸೆಳೆವ ಆ  ನಗುವಿಂದ
ಮರೆಯಾಗುವುದೆಲ್ಲ
ಮೈ  ಮನದ  ನೋವ ತರಂಗ

ತೊದಲ್ನುಡಿಯ  ಮೋದ
ಅಳು ನಗು  ಅಮೋದ
ನಿನ್ನಾಟದ ಮಂತ್ರ ಮುಗ್ಧ ನೋಟ
ಕೆಲವೊಮ್ಮೆ ಕಾಡಿಸುವ ಕಾಟ

ಕುತೂಹಲಭರಿತ ಮನ
ಕಂಡದ್ದೆಲ್ಲ ಕಲಿವ ಚಿಂತನ
ಮುಗ್ಧ  ಮಂದಹಾಸ ಸುಧಾಪಾನ
ಹೀರಿ ಹಗುರಾಯ್ತೆ ನ್ನ  ಮನ

ಕಂಡದ್ದೆಲ್ಲಾ ಬೇಕೆಂಬ  ಹಠ
ಮಾತುಮರೆಸಲೇಲ್ಲೋ ಮರೆತ ಆಟ
ನೀ  ಆಡುತಲಿರೆ ಒಳಹೊರಗೆ
ತಂಗಾಳಿಗೆದುರಾಗಿ ನಿಂತಂತೆಮಗೆ...

             ಶೈಲೂ.....
[4/6/2019, 3:55 pm] Dr. B. N. Shylaja Ramesh: ,ಮರೀಚಿಕೆ
********

ನಿನ್ನ ಕಂಡಂದೇ
ಕಣ್ಣಂಚಲಿ ಮಿಂಚು
ಉದಿಸಿ ಮನದೊಳಗೆ
ಪ್ರೀತಿಯ ಸಂಚು
ಆಸೆ ಮದುರಭಾವದಿ
ಅರಳಿತ್ತು
ಮನ ಸಂಕೋಚ
ಭಾವದಿ ಮುದುರಿತ್ತು
ಮನದಲೇನೋ ಕಲ್ಪನೆಗೆ
ಸಿಗದ ಲೆಕ್ಕಾಚಾರ
ಕಂಡ ಕನಸುಗಳ
ಮಿಡಿತ ಅಪಾರ
ಉಕ್ಕಿ ಮನದಲಿ
ಭಾವನೆಗಳ ಪ್ರವಾಹ
ಬೆಚ್ಚಿ ಬೀಳಿಸಿದೆ 
ತೀರದಾ ದಾಹ
ಬಾನು ಭುವಿಯ
ಅಂತರವಿದೆ ನನಗೆ - ನಿನಗೆ
ನಿರ್ಲಿಪ್ತ ಭಾವ ತಡೆದಿದೆ
ಸೇರಲಾರದ ಹಾಗೆ
ನೀ ಬಾನಲ್ಲಿ ಮಿನುಗುವ
ಅಂದದ ತಾರೆ
ನಿನಗಾಗಿ ಕಾಯ್ವ
ನಾ ಮುಗ್ಧ ನೀರೆ
ನಾ ಕಂಡೆನೇನು
ಮಾಯಾಜಿಂಕೆ
ನೀನೆಲ್ಲೂ ಇರುವ
ಮರೀಚಿಕೆ...!!!!

          ಶೈಲೂ.......
[4/6/2019, 3:55 pm] Dr. B. N. Shylaja Ramesh: ,*🕉ಕೃಷ್ಣ ರಾಧೆಯರ ಪವಿತ್ರ ಪ್ರೇಮ🕉*

ಮಹಾಭಾರತದ ಕಾಲದಲ್ಲೂ ಜಾತಿ ಎನ್ನುವುದು ತಿಳಿದುಬರುತ್ತದೆ. ಯಾಕೆಂದರೆ ಕೃಷ್ಣನು ರಾಜವಂಶಸ್ಥನಾದರೆ,ಅದೇ ರಾಧೆಯು ದನಕಾಯುವ ಸಮುದಾಯಕ್ಕೆ ಸೇರಿದವಳು ಮತ್ತು ರಾಧೆಯನ್ನು ಲಕ್ಷ್ಮಿ ದೇವಿಯ ಅವತಾರವೆಂದು ಹೇಳಲಾಗುತ್ತದೆ. 

ರಾಧೆ ಮತ್ತು ಕೃಷ್ಣನ ಪ್ರೀತಿಯು ದೈಹಿಕ ಸಂಬಂಧವನ್ನು ಮೀರಿದ್ದಾಗಿತ್ತು ಎನ್ನುವ ಸಂದೇಶವನ್ನು ಸಾರುತ್ತದೆ. ರಾಧೆ ಮತ್ತು ಕೃಷ್ಣ ಯಾವತ್ತೂ ಪತಿ-ಪತ್ನಿಯಾಗಿರಲಿಲ್ಲ. ಮದುವೆಯ ಬಂಧನದಲ್ಲೂ ಅವರು ಬಂಧಿಯಾಗಿರಲಿಲ್ಲ. ಆದರೂ ಅವರಿಬ್ಬರೂ ಪ್ರೇಮಿಗಳಾಗಿದ್ದರು. ಅವರಿಬ್ಬರ ಪ್ರೀತಿಯಲ್ಲಿ ಯಾವುದೇ ದೈಹಿಕ ಆಕರ್ಷಣೆ ಇಲ್ಲದೆ ಇದ್ದ ಕಾರಣದಿಂದಾಗಿ ಪ್ರೀತಿಯು ತುಂಬಾ ಪವಿತ್ರವಾಗಿತ್ತು. 

ಕೃಷ್ಣ ಮತ್ತು ರಾಧೆ ಬಾಲ್ಯದಲ್ಲಿ ಸ್ನೇಹಿತರಾಗಿದ್ದರು. ಬೃಂದಾವನದಲ್ಲಿ, ರಾಸಲೀಲೆ ಮಾಡಿದ ಗೋಪಿಕೆಯರಲ್ಲಿ ರಾಧೆಯು ಒಬ್ಬಳಾಗಿದ್ದಳು. ಗೋಪಿಕೆಯರೆಲ್ಲರೂ ಕೃಷ್ಣನಿಗೆ ಹತ್ತಿರವಾಗಿದ್ದರೂ! ರಾಧೆಯನ್ನು ಮಾತ್ರ ತುಂಬಾ ಪ್ರೀತಿಸುತ್ತಿದ್ದ. ಕೃಷ್ಣ ಕೊಳಲನ್ನು ನುಡಿಸುವಾಗ ರಾಧೆ ಹಾಡುತ್ತಾ ನೃತ್ಯ ಮಾಡುತ್ತಿದ್ದಳು.

ಇವರಿಬ್ಬರದು ನಿಷ್ಕಲ್ಮಶ ಮಟ್ಟದ ಪ್ರೀತಿಯಾಗಿತ್ತು. ಕೃಷ್ಣನಿಗೆ ರಾಧೆಯ ಭಕ್ತಭಾವವೂ ಅಭೂತಪೂರ್ವಾಗಿತ್ತು. ಇದರಿಂದಾಗಿಯೇ ಹದಿನಾರು ಸಾವಿರ ಎಂಟು ಮಂದಿ ಪತ್ನಿಯರಿದ್ದರೂ ಕೃಷ್ಣನಿಗೆ, ಅತೀ ಮೆಚ್ಚಿನ ಸಖಿಯಾಗಿದ್ದವಳು ರಾಧೆ. ಮನೆಗೆ ಪತ್ನಿಯಾಗಿ ಬರದಿದ್ದರೂ ರಾಧೆ ಮಾತ್ರ ಕೃಷ್ಣನ ಆತ್ಮ ಸಂಗಾತಿಯಾಗಿದ್ದಳು.

ರಾಧೆಯ ಪ್ರೇಮ ಎಂಬುದು ಕೃಷ್ಣನ ಜೀವನದುದ್ದಕ್ಕು  ಉತ್ಸಾಹ ತುಂಬುತ್ತಿತ್ತು. ಅವಳು ಎಲ್ಲೊ ದೂರದ ಗೋಕುಲದಲ್ಲಿ ಇರುವಳು ಎನ್ನುವ ಭಾವವೆ, ಕೃಷ್ಣನಿಗೆ ಶಕ್ತಿಯಾಗಿತ್ತು. ಆದರೆ ಒಮ್ಮೆ ಗೋಕುಲವನ್ನು ತೊರೆದು ಬಂದವನು ಕೃಷ್ಣ ಪುನಃ ಅಲ್ಲಿಗೆ ಹೋಗಲೆ ಇಲ್ಲ. ಏಕೆಂದರೆ ಗೋಕುಲದಿಂದ ಮಥುರೆಗೆ ಬಂದ ತಕ್ಷಣ ಕೃಷ್ಣನ ಹೊರರೂಪ ನಡೆ ನುಡಿ ಎಲ್ಲವೂ ಬದಲಾಗಿಹೋಗಿತ್ತು.

ರಾಧೆಯ ಪ್ರೀತಿಯಲ್ಲಿ ಮುಳುಗಿದ್ದ ಮುಗ್ದ ಕೃಷ್ಣನ ಸ್ವರೂಪ ಆಗ ಮಾಯವಾಗಿತ್ತು. ಅಂತಹ ರೂಪದಲ್ಲಿ ರಾಧೆಯ ಎದುರಿಗೆ ಹೋಗುವುದು ನನಗೆ ಬೇಕಿರಲಿಲ್ಲ. ಆದರೆ ಕೃಷ್ಣ ಮಾತ್ರ ರಾಧೆಯ ಬಗ್ಗೆ ಗೋಕುಲದಿಂದ ಸುದ್ದಿ ಸಂಗ್ರಹಿಸುತ್ತಲೆ ಇದ್ದ . ರಾಧೆ ಜೀವನ ಪೂರ್ತಿ ನನ್ನನ್ನು ಕಾಯುತ್ತಲೆ ಇರುವಳು ಒಂದು ದಿನವು ಗೊಣಗಲಿಲ್ಲ ಅಸಮಾದಾನ ಪಡಲಿಲ್ಲ. ಕೃಷ್ಣ ಎಂದಾದರು ಬರುವನು ಎನ್ನುವ ನಿರೀಕ್ಷೆಯಲ್ಲಿ ಸದಾ ನನ್ನನ್ನು ಕಾಯುತ್ತಿರುವಳು ಕೃಷ್ಣ  ತನ್ನ ಜೀವನದಲ್ಲಿ ಯಾರಿಗಾದರು ಕಾಯಿಸುವಂತೆ  ಮಾಡಿದನೆಂದರೆ   ಅದು ರಾಧೆಗೆ ಮಾತ್ರ.! ಅವಳ ಪ್ರೀತಿಯೆನೆಂದೂ ಅದರ ಆಳವನ್ನೆಂದು ಕೃಷ್ಣ ಚೆನ್ನಾಗಿ ಅರಿತಿದ್ದನು.

ರಾಧೆ,  ಕೃಷ್ಣನನ್ನು ನೋಡಲು ಬಂದಾಗ ಕೃಷ್ಣನಿಗೆ ತಿಳಿಯದಂತೆ ಅರಮನೆಯಲ್ಲಿ ಕೆಲಸದವಳಾಗಿ  ಸೇರಿಕೊಂಡಿರುತ್ತಾಳೆ. ಆದರೆ ಈ ವಿಷಯ ಕೃಷ್ಣನಿಗೆ, ತಿಳಿದಿರುವುದು ಎಂದು ರಾಧೆಗೆ ಗೊತ್ತಿರುವುದಿಲ್ಲ. ಇದರ ಮೂಲವನ್ನು ಅರಿತು ಬರುವ ನಾರದರು ಕೃಷ್ಣನ ಸಹಾಯದಿಂದ ರಾಧೆಯ ಪ್ರೀತಿ ಎಂತಹದ್ದು ಸಂಬಂಧಗಳಲ್ಲಿ  ಬಹಳ ಪ್ರೀತಿ ಪಾತ್ರವಾದ ಸಂಬಂಧವೆಂಧರೆ ರಾಧಾ  ಕೃಷ್ಣರದು ಇದಕ್ಕೊಪ್ಪುವಂತೆ, ನಡೆದ ಪ್ರಸಂಗವೊಂದು ಎಲ್ಲರನ್ನು ನಿಬ್ಬೆರಗಾಗುವಂತೆ, ಮಾಡುತ್ತದೆ. 

ಒಂದು ಸಾರಿ ನಾರದರು  ಇದೆ ವಿಷಯ ವನ್ನು ಕೃಷ್ಣ ನಲ್ಲಿ  ಪ್ರಸ್ತಾಪಿಸಿ,  ರುಕ್ಮಿಣಿ - ರಾಧೆಯರ  ಶ್ರೀ ಕೃಷ್ಣ ಪ್ರೇಮವನ್ನು ಪತ್ತೆ ಹಚ್ಚಲು  ನೋಡಿದರು ಶ್ರೀಕೃಷ್ಣ ನ ಮೇಲಿನ  ಪ್ರೀತಿ ಭಾರ ತೋರಿದ ಮಹಾಸತಿ ರುಕ್ಮಿಣಿ ಒಂದು ಕಡೆ ಜೀವ- ಜೀವನ ಧಾರೆ ಎರೆದ ಮಹಾ ಪ್ರೇಮಿ ರಾಧೆ ಇನ್ನೊಂದು ಕಡೆ ಇದು ಶ್ರೀ ಕೃಷ್ಣ  ನಕ್ಕು  ನಾರದರಿಗೆ   ಹೇಳಿದ. 

"ನಿಮ್ಮ ಈ ಪ್ರೀತಿಯ ಸ್ಪರ್ಧೆ ಎರಡು ಕಣ್ಣಿನ ದೃಷ್ಟಿಯ ನಡುವಿನ ಪರದೆ ಯಂತಿದೆ.  ಇರಲಿ  ಇದಕ್ಕೊಂದು ಉದಾಹರಣೆ ಸಮೇತ ಉತ್ತರಿಸುತ್ತೇನೆ" ಎಂದು ಅವರನ್ನು ಹತ್ತಿರ ಕರೆದು ಅವರ ಕಿವಿಯಲ್ಲಿ ಏನೊ  ಉಸುರಿದ!
ನಾರದರು ನಕ್ಕು ತಲೆಯಲ್ಲಾಡಿಸಿ  ಹೊರಟರು.ರುಕ್ಮಿಣಿಯ ಬಳಿ  ಬಂದ ನಾರದರುರುಕ್ಮಿಣಿ ಶ್ರೀ ಕೃಷ್ಣನಿಗೆ ವಿಪರೀತ ತಲೆನೋವು , ವೈದ್ಯರನ್ನು ಕೇಳಿದಾಗ  ರುಕ್ಮಿಣಿಯ ಕಾಲು ತೊಳೆದ ನೀರು ಕುಡಿದರೆ, ಆ ತಲೆಯ ನೋವು ಶಮನ ವಾಗುವುದು ಎಂದು ತಿಳಿಸಿದ್ದಾರೆ . ತಾವು ದಯವಿಟ್ಟು ಆ ಕೆಲಸ ಮಾಡಬೇಕು ಎನ್ನುತ್ತಾರೆ. 

 ಈ ಮಾತು ಕೇಳಿ ರುಕ್ಮಿಣಿ ಗಾಬರಿಯಾಗಿ, ಕಿವಿ ಮುಚ್ಚಿ ಕೊಳ್ಳುತ್ತಾಳೆ . ತನ್ನ ಪ್ರೀತಿ ಪಾತ್ರನಿಗೆ ತನ್ನ ಕಾಲು ತೊಳೆದ ನೀರು ಕುಡಿಸುವುದೆ ? ಇಂತಹ ಘೋರ ನರಕಕ್ಕೆ ನಾನು ಪಾತ್ರಳಾಗಬೇಕೆ?  ಸಾಧ್ಯವಿಲ್ಲ , ನನ್ನ ಜೀವ ಹೋದರು ನನ್ನ ಕೃಷ್ಣನಿಗೆ ಅಪಚಾರವಾಗುವಂತಹ ಕೆಲಸ ಕನಸಿನಲ್ಲಿಯೂ  ಮಾಡಲಾರೆ ಎನ್ನುತ್ತಾಳೆ.

ನಾರದರು ರುಕ್ಮಿಣಿ ಶ್ರೀ ಕೃಷ್ಣ ಪ್ರೇಮದ  ಭಾವವನ್ನು ಅರಿತು ಸಂತೋಷ ಪಡುತ್ತಾರೆ. ಇನ್ನೆನಿದ್ದರೂ ಈ ಪ್ರೇಮದ ಪರೀಕ್ಷೆ ಯಲ್ಲಿ, ರಾಧೆ ಸೋತಂತೆ ಎಂದುಕೊಂಡು ರಾಧೆಯ ಬಳಿಗೆ ಬಂದು  ನಾರದರು ರುಕ್ಮಿಣಿ ಯಲ್ಲಿ ಹೇಳಿದಂತೆ ಹೇಳಿದಾಗ ರಾಧೆಯೂ ಹಿಂದೆ ಮುಂದೆ ಆಲೋಚಿಸದೆ, ನನ್ನ ಕಾಲು ತೊಳೆದ ನೀರು ಶ್ರೀ ಕೃಷ್ಣನ ತಲೆಯ ನೋವನ್ನು ಹೋಗಲಾಡಿಸುವುದಾದರೆ ,ನನ್ನ ಜೀವನ  ಧನ್ಯ . ನನ್ನ ಕೃಷ್ಣ ನ ತಲೆ ನೋವು ನಿವಾರಣೆಯಾಗುವುದಾದರೆ  ಎಂತಹ ಕಾರ್ಯಕ್ಕೂ ನಾನು ಸಿದ್ದ . ಅಂತಹ  ಪಾಪ ಕಾರ್ಯದಿಂದ ಯಾವ ರೌದ್ರ ನರಕ ಬಂದರೂ ಸ್ವೀಕರಿಸಲು ಸಿದ್ದ " ಎನ್ನುತ್ತಾ  ತನ್ನ ಕಾಲು ತೊಳೆದ ನೀರು ಕೊಡಲು ಸಿದ್ದಳಾಗುತ್ತಾಳೆ  . 

ನಾರದರು ರಾಧೆಯ  ಶ್ರೀಕೃಷ್ಣನ ಬಗೆಗಿನ ಪ್ರೇಮದ ಪರಿಯ ನೋಡಿ 
ಮೌನವಾಗುತ್ತಾರೆ ಪ್ರೀತಿ ಸಂಬಂಧ  ಯಾವುದೇ   ಬಂಧನಗಳಿಗೆ ಮೀರಿದ ಹೃದಯಗಳ ಬೆಸುಗೆ ಇದು!
[4/6/2019, 3:55 pm] Dr. B. N. Shylaja Ramesh: ,ಈ ಜೀವನವೆ ಒಂಥರಾ ವಿಚಿತ್ರ ನೋಡು, ನಾವು ಯಾವುದನ್ನ ಇಷ್ಟ ಪಡ್ತಿವೊ ಅದು ನಮ್ಗೆ ಸಿಗಲ್ಲ , ಅದು ಸಿಗುತ್ತೆ ಅನ್ನೊ ಆಸೆ ಸಾಯೊತನಕ ಬತ್ತಲ್ಲ……….. ಅಲ್ವ.

ಎಲ್ಲೊ ಇದ್ದು , ಎಲ್ಲೊ ಬಾಳಿ-ಬದುಕಿ ಸತ್ತೊಗೊ ಜೇವಗಳು ನಾವು.ಆದರು ನನಗೆ ತುಂಬಾ ಅಶ್ಚರ್ಯ ಆಗ್ತಾ ಇದೆ, ನಾವ್ಯಾಕೆ ಈ ಬದುಕಿನ ಪಯಣದಲ್ಲಿ ಭೇಟಿಯಾದ್ವಿ ಅಂತ. ನಾವೇನು ಕೂಡ ಬೆಳದವರಲ್ಲ, ಸಂಭಂದಿಕರಲ್ಲ , ಒಂದೆ ಕಡೆ ಕಲಿತವರಲ್ಲ, ಯಾವುದೆ ಕಮ್ಯೂನಿಕೆಷನ್ ಇಲ್ಲದ ಬದುಕಿನ ಅರ್ಧ ದಾರಿ ಸಾಗಿದವರು. ಇವತ್ತು ನಮ್ಮ ಬದುಕು ಎಷ್ಟೊಂದು ಚೇಂಜ್ ಅನ್ನಿಸುತ್ತೆ ಅಲ್ವ. ನಾವು ನಡೆದು ಬಂದ ಹೇಜ್ಜೆ ಗುರುತುಗಳೆಲ್ಲ ಮಾಸಿ ಹೊಗಿವೆ , 

ಇದನ್ನ ಯಾವ ಸಂಭಂದ ಅನ್ನಲ್ಲಿ…….. ಯಾವ ಜನ್ಮದ ಮೈತ್ರಿ ಅನ್ನಲಿ. ನಮ್ಮದು ಯಾವ ಸಂಭಂದದಿಂದಲು ಬಂದಿಸಲಾಗದ ಬೆಸುಗೆ , ಅದು ಇತಿ-ಮಿತಿಗಳೆ ಇಲ್ಲದ ರೂಪ. ಎಲ್ಲಾ ಸಂಭಂದಕ್ಕೂ ಅದರದ್ದೆ ಚೌಕಟ್ಟು ,ಮಿತಿಗಳು ಬೆಳೆಯುತ್ತಾ ಹೋಗುತ್ತವೆ. ನಮ್ಮದು ಸಂಭಂದವನ್ನು ಮೀರಿದ ಉನ್ನತ ಭಾಂದವ್ಯ. ಅದರ ಆಳ-ಅಗಲ ಅರಿಯಲು ಯಾರಿಂದ ಸಾದ್ಯ ಅಲ್ವ….. ಅದನ್ನ ಅನುಭವಿಸಿದವನೆ ಬಲ್ಲ.

ಈ ಸಾಲುಗಳು ನನ್ನ ಮನಸ್ಸನ್ನ ಆವರಿಸಿಕೊಂದಿವೆ “ಯಾವ ಜನ್ಮದ ಮೈತ್ರಿ ನಮ್ಮಿಬ್ಬರನ್ನು ಬಂದಿಸಿಹುದೊ ನಾನರಿಯೆ”.. ಈ ಸಾಲುಗಳು ನಮ್ಮನ್ನ ನೋಡಿಯೆ ಬರೆದಿರೊ ಹಾಗೆ ಹಸಿ ಹಸಿ ಯಾಗಿವೆ. ಬದುಕು ಅಂದರೆ ಇದೆನಾ , ಇಷ್ಟೆನಾ ……..

ನನಗಂತು ಯಾರು ತಿಳಿಯದ ಎಲ್ಲವೂ ಮಸುಕು ಮಸುಕಾದ ಪ್ರಪಂಚದಲ್ಲಿ ಬಿಟ್ಟಂತ್ತಾಗಿದೆ. ನನ್ನ ಮುಂದೆ ಇರುವುದೆಲ್ಲ ಶೂನ್ಯ, , ಬಂದು ಸೇರುವೆನೆಂಬ ಉತ್ಕಟ ಬಯಕೆ, ಹಂಬಲ ನನ್ನ ಬದುಕಿನ ಹಾದಿಯ ಬೇಳಕಾಗಿದೆ. ಶರೀರದ ತ್ರಾಣವನ್ನೆಲ್ಲ ಹಿರಿ-ಹಿಪ್ಪೆ ಮಾಡುವಷ್ಟು ಚಳಿ, ಮುಂದೆ ಹೆಜ್ಜೆ ಇಡಲು ಆಗದಂತೆ ಮರುಗಟ್ಟಿದೆ ದೇಹ, ಹೃದಯ ಬಡಿತವು ಹೆಚ್ಚುತ್ತಲಿವೆ. ಮನಸ್ಸು ಮಾತ್ರ ನೀನು ಮುಂದೆ ಬಂದು ನಿಲ್ಲುವೆ ಎಂಬ ಆಸೆ ಮಾತ್ರ ಬಿಟ್ಟಿಲ್ಲ . ಬರುವೆ ತಾನೆ? ಬಂದು ನಿಲ್ಲುವೆ ತಾನೆ ನನ್ನ ಮುಂದೆ ……….ಹಸಿ ಗೂಸು ಮುಗ್ಧ ಕಣ್ಣಗಳಿಂದ ತದೇಖಚಿತ್ತನಾಗಿ ತಾಯಿಯನ್ನು ನೋಡುವಹಾಗೆ ನೋಡಿ ಸಂಭ್ರಮಿಸುವೆ……….

    ಇಂದ್ಯಾಕೋ ನನ್ನ ಮನಸ್ಸಲ್ಲಿ ನೀ ಬಂದು ಕುಳಿತು ತುಂಬಾ ಕಾಡ್ತಿದ್ದೀಯಾ ಮಧು..
ಈ  ನನ್ನ  ಬರಹದಿಂದ ನಿನಗೆ  ಹಿಂಸೆ ಆಗಿದ್ರೆ ದಯವಿಟ್ಟು ಕ್ಷಮಿಸಿ  ಬಿಡು..
ಇದು ನನ್ನ  ಅನಿಸಿಕೆ ಅಷ್ಟೇ...
ಇದು ನಿನ್ನದೂ  ಆಗ್ಬೇಕು ಅನ್ನೋ ಬಲವಂತ ಇಲ್ಲ,  ಆ  ಆಸೆ ಪಡೋದೂ ತಪ್ಪು..
ಆದ್ರೂ  ನನ್ನ  ಮನದಲ್ಲಿ  ಯಾವದೇ ಕೆಟ್ಟ  ಭಾವನೆ ಇಲ್ಲ  ಇದು  ಬರೀ  ಪವಿತ್ರ  ಸ್ನೇಹ  ಅಷ್ಟೇ....

ನಾನೇನಾದ್ರೂ  ತಪ್ಪಾಗಿ  ನಡ್ಕೊಂಡಿದ್ರೆ  ದಯವಿಟ್ಟು  ಕ್ಷಮಿಸಿ ಬಿಡು  ಮಧು...

ಸದಾ  ನಿನ್ನ  ಹಿತವನ್ನೇ  ಬಯಸುವ  .....
ನಿನ್ನ  ಸಂತೋಷ ವನ್ನೇ  ಎದುರು ನೋಡುವ...

ಶೈಲೂ......
[4/6/2019, 3:55 pm] Dr. B. N. Shylaja Ramesh: ,Facebook ಪ್ರೀತಿ
****************

ಹರಿದು ಹೋಗಿಬಿಟ್ಟಿತೇ ಪ್ರೀತಿ ಗೆಳೆಯ
ಸುರಿಸುತಲಿದ್ದೇ ನೀ  ಒಲವಿನ  ಮಳೆಯ
ಸರಿದು ಹೋಗಿಬಿಟ್ಟಿತೇ ಆ  ಕಾಲ
ಪ್ರೀತಿಧಾರೆ ಸುರಿಸುತ್ತಿದ್ದ ಆ  ಮಳೆಗಾಲ

ಬಂದು ಬಿಟ್ಟಿತೇ ಬಿರು ಬೇಸಿಗೆ
ಬರಡಾಗಿ ಒಣಗಿಬಿಟ್ಟಿತೇಕೆ ಈ  ಬೆಸುಗೆ
ರಾಧೆ ನೀ ನಾನಿನ್ನ ಮಾಧವ ಎಂದ ಪಿಸುಮಾತು
ಕಲಕಿ ಮನವ  ಒಮ್ಮೆಗೇ ಪ್ರೀತಿ ಮೂಡಿಸಿತ್ತು

ಹೃದಯದಿಂದ ಬಂದ  ಮಾತಿದು ಎಂದದ್ದು ಸುಳ್ಳೇ
ಗಟ್ಟಿತನವೇಕಿಲ್ಲ ಪ್ರೀತಿಗೆ ಅನಿಸುತಿದೆ ಇದು ಬರೀ ಜೊಳ್ಳೆ..
ಪ್ರೀತಿ ಮಾತನಾಡಿ ಸೆಳೆದೆಯೇಕೆನ್ನ ಮನವಾ
ಇಂದೇಕಿಲ್ಲ ಆ ಪ್ರೀತಿ ಅದು ಬರೀ ಪೊಳ್ಳುತನವಾ..?

Facebook ನಲ್ಲಿ ಶುರುವಾದ ಪ್ರೀತಿಗೆ ನಾ ಮರುಳಾಗಿಬಿಟ್ಟೆನೆ
ನೀ ಬೀಸಿದ ಮಾಯಾಜಾಲದಿ ಬಂಧಿಯಾಗಿಬಿಟ್ಟೆನೆ
ನಿಮಿಷಕ್ಕೊಂದು ಮೆಸೇಜು ಗಂಟೆಗೊಮ್ಮೆ ಫೋನು
ಹರಿಸುತ್ತಿದ್ದ ಆ ಪ್ರೀತಿಮಾತುಗಳಿಗೆ ಬರ ಬಂದಿತೇನು..??

ನೀ ಹೇಗಿದ್ದರೂ ಸರಿ ನೀ ನನಗಿಷ್ಟ ಎಂದಂಥ ಮಾತು
ಮರೆತುಬಿಟ್ಟೆಯಾ ಗೆಳೆಯ ಮೌನವಾಗಿಬಿಟ್ಟೆ ಏನಾಯ್ತು..?
ಆನ್ಲೈನ್ನಲ್ಲಿ ಇಲ್ಲವೆಂದ್ರೆ ಚಡಪಡಿಸುತ್ತಿದ್ದೆ ನೀನು
ಕಾಣದಿದ್ದರೆ ಅರೆಕ್ಷಣ ಓಡಿ ಬಂದುಬಿಡುವೆ ಎಂದಿದ್ದೆ ಗೊತ್ತೇನು.?

ಸ್ವಲ್ಪ ನೋವಾದರೂ ನಿನಗೆ ಘಾಸಿ ಎನ್ನ ಮನಸಿಗೆ
ಕರಗಿಹೋಗಿಬಿಟ್ಟಿದ್ದೆ ನಿನ್ನ ಈ  ಮರುಳು ಮಾತಿಗೆ
ಕಾಡಿಬೇಡಿಯಾದರೂ ಮಾತಾಡಲು ತೋರುತ್ತಿದ್ದ ಆತುರತೆ
ಇಂದೇನಾಯ್ತೋ ಕಾಣೆ ಮುರುಟಿ ಹೊಯ್ತೆ ಆ ಕಾತರತೆ

ಕವನಕ್ಕೊಂದು ಕವನ ಬರೆಯುತ್ತಿದ್ದ ಆ ಪರಿ ಏನು.?
ಬರವಾಗಿಬಿಟ್ಟಿತೇ ಆ ಕವಿತ್ವಕೆ ಮರತೇಬಿಟ್ಟೆ ಯಾ ನೀನು
ಕವನಕೆ ನೀನೇ ಸ್ಫೂರ್ತಿ ನೀ ನನ್ನ ಕಾವ್ಯಕನ್ನಿಕೆ ಎಂದಿದ್ದೆ
ಕನಸಲ್ಲೂ ಬಂದು ಕಾಡುವೆ ಎಂದುಸುರಿ ಮೋಡಿ ಮಾಡಿದ್ದೆ

ಬತ್ತಿಹೋಗಿದ್ದ ಹೃದಯದಲಿ ಆಸೆ ಚಿಗುರಿಸಿದವಳು ನೀ ಎಂದ ಮಾತು
ದೃಢವಾಗಿದ್ದ ಎನ್ನ ಮನದಲಿ ಬಂದು ಕುಳಿತು ಕಾಡಿತ್ತು
ಒಮ್ಮೆಯಾದರೂ ನಿನ್ನ ನೋಡದಿದ್ದರೂ ಕೂಡ
ಅರ್ಪಿಸಿ ಬಿಟ್ಟಿದ್ದೆ ನಾ ಬರೆಯುವ ಎಲ್ಲ ಪ್ರೀತಿಯ ಹಾಡ

ನಿದ್ರೆ ಬರದ ಎಷ್ಟೋ ರಾತ್ರಿಗಳಲಿ ನೀನು
ಲಾಲಿ ಹಾಡಿ ಮಲಗಿಸಿದ್ದು ಮರೆತುಬಿಟ್ಟೆಯೇನು..??
ತಾಯಿ ಹಾಡುವಾ ಜೋಗುಳದಂತೆ ತುಂಬು ಪ್ರೀತಿಯಲಿ
ಮಗುವಂತೆ ಮಲಗಿಸಿದ್ದೆ ಹಾಡಿ, ಅದ ನಾ  ಹೇಗೆ ಮರೆಯಲಿ

ಕಳೆದುಕೊಂಡುಬಿಟ್ಟೆ ನಾ ನಿನಗಾಗಿ ಮಿಡಿಯುವ ಹೃದಯ
ಕದ್ದು ಎಲ್ಲೋ ಮರೆಯಾಗಿಬಿಟ್ಟಿರುವೆ ನೀ ಹೀಗೇಕೆ ಮಾಧವ.!
ನೀ ಮರೆತರೂ ನನ್ನ ನಾ ಮರೆಯಲಾರೆ ನಿನ್ನ
ಮೊದಲ ಪ್ರೇಮವಿದು ನನಗೆ ನಾ ಹೇಗೆ ಮರೆಯಲಿ ಚೆನ್ನ

ಆಳವಾಗಿ ಹೊಕ್ಕಿಬಿಟ್ಟಿರುವೆ ಮನದಲ್ಲಿ ನೀನು
ನೀನಿಲ್ಲದಿದ್ದರೂ ನಿನ್ನ ನೆನಪಲ್ಲೇ ಜೀವಿಸುವೆ ನಾನು
ಆದರೂ ನಿನ್ನ ನಾನು ಬಹುವಾಗಿ ಮೆಚ್ಚಿರುವೇ man
ಒಮ್ಮೆಯಾದರೂ ಅಶ್ಲೀಲ ಪದಗಳನ್ನಾಡ ದ ನೀನು really Gentle man..!!

ನೀ ಹೇಗಿದ್ದರೂ ಸರಿ  ಗೆಳೆಯ ಎಲ್ಲಿದ್ದರೂ  ಸರಿ
ಸುಖದಿಂದಿರು ,ನೀ ನನ್ನ ಬಾಳಿನೈಸಿರಿ
ನೋವೆಲ್ಲ ನನಗಿರಲಿ,ತುಂಬಿ ಹರಿವ ನಗು ನಿನಗಿರಲಿ
ಹರಸಿ ಹಾರೈಸುವೆ ಹಸನ್ಮುಖದಿ, ಚಂದವಾಗಲಿ ನಿನ್ನ ಬದುಕು

        ಶೈಲೂ......

( ಫ್ರೆಂಡ್ ಒಬ್ಬರ ಕೋರಿಕೆಯ ಮೇಲೆ ಬರೆದದ್ದು)
[4/6/2019, 3:55 pm] Dr. B. N. Shylaja Ramesh: ,ತಂಗಾಳಿಯಂತೆ.  ನೀ...
********************

ಕಂದ  ನಿನ್ನ ಮೊಗದಂದ
ಸೆಳೆವ ಆ  ನಗುವಿಂದ
ಮರೆಯಾಗುವುದೆಲ್ಲ
ಮೈ  ಮನದ  ನೋವ ತರಂಗ

ತೊದಲ್ನುಡಿಯ  ಮೋದ
ಅಳು ನಗು  ಅಮೋದ
ನಿನ್ನಾಟದ ಮಂತ್ರ ಮುಗ್ಧ ನೋಟ
ಕೆಲವೊಮ್ಮೆ ಕಾಡಿಸುವ ಕಾಟ

ಕುತೂಹಲಭರಿತ ಮನ
ಕಂಡದ್ದೆಲ್ಲ ಕಲಿವ ಚಿಂತನ
ಮುಗ್ಧ  ಮಂದಹಾಸ ಸುಧಾಪಾನ
ಹೀರಿ ಹಗುರಾಯ್ತೆ ನ್ನ  ಮನ

ಕಂಡದ್ದೆಲ್ಲಾ ಬೇಕೆಂಬ  ಹಠ
ಮಾತುಮರೆಸಲೇಲ್ಲೋ ಮರೆತ ಆಟ
ನೀ  ಆಡುತಲಿರೆ ಒಳಹೊರಗೆ
ತಂಗಾಳಿಗೆದುರಾಗಿ ನಿಂತಂತೆಮಗೆ...

             ಶೈಲೂ.....
[4/6/2019, 3:55 pm] Dr. B. N. Shylaja Ramesh: ,ನಿನ್ನ  ನಗುವಿನಲ್ಲಿ ನನ್ನ ನಗುವಿಹುದು
**************************

ಬೇಕಿಲ್ಲ ನನಗೆ
ನಿನ್ನ ಅಷ್ಟೈಶ್ವರ್ಯ
ನಿನ್ನ ಮುಗುಳ್ನಗೆಯೊಂದೇ
ನನಗೆ  ಮಾಧುರ್ಯ

ನಿನ್ನ ಪಟ್ಟದರಸಿಯಾಗುವ
ಆಸೆಯೂ  ನನಗಿಲ್ಲ
ನಿನ್ನ ದರುಷನವೊಂದೇ
ನನಗೆ  ಸಿಹಿಬೆಲ್ಲ

ಅರಿತಿರುವೆ  ಕೃಷ್ಣ
ನಿನ್ನಂತರಂಗದ ತುಡಿತ
ಇರಲಿ ನನ್ನೆಡೆಗೂ
ಪ್ರೀತಿಯ  ಮಿಡಿತ

ಬೇಕಿಲ್ಲ ನನಗೆ
ಅರಮನೆಯ  ಸೌಭಾಗ್ಯ
ನಿನ್ನ ಮನದಲಿ ನಾನು
ಇರುವುದದು  ಭಾಗ್ಯ

ನೀನೆಲ್ಲಿದ್ದರೂ ನಗುತಲಿರು
ನನ್ಹೆಸರ ಮರೆಯದಿರು
ನಿನ್ನ ನಗುವಲೇ ನನ್ನ
ಉಸಿರಿಹುದು ಮರೆಯದಿರು

ನೀನೆನ್ನ ಪ್ರಿಯಬಂಧು
ಸಿಹಿ ಅಮೃತದ ಬಿಂದು
ಮಿಡಿಯುತಿದೆ ಪ್ರತಿಕ್ಷಣವು
ಮಾಸದಿರಲಿ ನಗೆಯೆಂದು

ಎದೆಯ ಗುಡಿಯಲ್ಲಿ ಇರುವ
ಮನದ ಮೂರುತಿ ನೀನು
ದರುಷನವ ನೀಡೋಮ್ಮೆ
ಬೇಕಿಲ್ಲ  ಬೇರೇನೂ

ನಿನ್ನ ಪ್ರತಿ ನಡೆಯಲ್ಲೂ
ನನ್ನ ಹಾರೈಕೆಯಿಹುದು
ಮನದ ಬಾಂದಳದಲ್ಲಿ
ನಿನ್ನ ಚಿತ್ರ ಮೂಡಿಹುದು

ಬಯಸುವೆ ಉಸಿರುಸಿರಲ್ಲೂ
ಕೀರ್ತಿ ಹರಡಲಿ ಎಂದು
ಹೊತ್ತಿ ಜೀವನ ಜ್ಯೋತಿ
ಬಾಳು ಬೆಳಗಲಿ ಎಂದು

           ಶೈಲೂ......
[4/6/2019, 3:55 pm] Dr. B. N. Shylaja Ramesh: ,ಬಂಧನದೆ ಬಿಗಿದಿಟ್ಟು
******************

ಭೋರ್ಗರೆವ  ಭಾವನೆಗೆ
ಕಟ್ಟಿ ತಡೆ ಗೋಡೆ
ಹರಿಯಲಾರದಂತೆ
ಬಂಧನದೆ  ಬಿಗಿದಿಟ್ಟು

ಆಸೆಗಳ  ಸುಳಿಯೊಳಗೆ
ನಲುಗಿ ಹೋಗಿಹ ಮನದ
ಭಾವಾಂತರಂಗದ
ಭಾವನೆಯ  ಬದಿಗಿಟ್ಟು

ತುಟಿಯಂಚಲಿ
ಸಿಡಿಯಲು ಕಾದಿರುವ
ಮನದ ಮಾತುಗಳಿಗೆ
ಬೇಲಿಯನು  ಕಟ್ಟಿಟ್ಟು

ನೂರಾಸೆಗಳ ಬಿತ್ತಿ
ಟಿಸಿಲೊಡೆಯುತಿಹ
ಕಾಮನೆಗಳ ಕಾತರಕೆ
ಕೊಳ್ಳಿಯನು  ಹಚ್ಚಿಟ್ಟು

ಮನದಿ ಮೂಡಿದ ಚಿತ್ರ
ಭ್ರಮೆಯಲ್ಲಿ ತೇಲುತ ಬಂದು
ತೂರಿ ಕಣ್ಣೊಳಗೆ ಕನಸ ಕಾಣದಂತೆ
ನಡುವಲ್ಲಿ ಬಂಧಿಸಿಟ್ಟು

ನಾನು  ನಾನಾಗಿರಲು
ನನ್ನತನ  ಮರೆಯದಿರಲು
ಮಾಡುತಿಹೆ  ಸಾಹಸವ
ಕೈಗೂಡಲದು ಎಲ್ಲ ಬದಿಗಿಟ್ಟು

          ಶೈಲೂ.......
[4/6/2019, 3:55 pm] Dr. B. N. Shylaja Ramesh: ,ನಿನ್ನೊಲುಮೆಯಲಿ ಕರಗಿ
*********************

ನನ್ನ  ಕಂಗಳ ಕೊಳದಿ
ಲಾಸ್ಯವಾಡಿದೆ ನೀನು
ನಾನಾದೆ ಸೆರೆಹಿಡಿದ
ಬಲೆಯ ಮೀನು

ಸೂಜಿಗಲ್ಲಿನಂತೆ ಸೆಳೆದೆ
ನಿನ್ನೆಡೆಗೆ ನನ್ನ
ಪ್ರೇಮಪಾಷದಿ ನಾ
ಬಂಧಿಯಾದೆ

ಬಿಟ್ಟಿರದು ಮನವು
ಚಟಪಡಿಸಿದೆ ತನುವು
ಬೆಳದಿಂಗಳ ನಗೆಯ
ಕಾಣಲೆಂದು

ತಟ್ಟಿ ಹೃದಯದ ಕದವ
ಬಂದು ಕುಳಿತಿಹೆ ಅಲ್ಲಿ
ಸಂತಸದಿ.ಹಾಡುತಿದೆ
ಮನದ ಹಕ್ಕಿ

ಮೂಡಿ ಸವಿ ಭಾವನೆಯು
ಹಗುರಾಗಿದೆ ತನುವು
ಗರಿಗೆದರಿ  ಹಾರುತಿದೆ
ಹಕ್ಕಿಯಂತೆ

ಆಸರೆಯ ಆರಸುತಲಿ
ಕಾಯ್ದು ನಿಂತಿದೆ ಜೀವ
ನವಿರಾದ ಪ್ರೀತಿಯಲಿ
ಮುಳುಗಲೆಂದು

ನಾನಿಲ್ಲಿ ಈ ದಡದೆ
ಬಿಟ್ಟು ಎಲ್ಲಿಗೆ ಹೋದೆ
ಜೀವ ನಿನ್ನಾಸರೆಗೆ
ಕಾಯುತಿಹುದು

ನಮ್ಮಿಬ್ಬರ ನಡುವೆ
ಮೈಚಾಚಿರುವ ವಿರಹವನು
ಒಗೆಯೊಮ್ಮೆ ಝಾಡಿಸಿ
ರವಿ ಕತ್ತಲನು  ಕಳೆಯುವಂತೆ

ಬಳಿಗೆ ಬಾರದೆ ನೀನು
ಹೃದಯ ಹಾಡುವುದೇನು
ತೋರುತಿಹುದು ಚಂದ್ರಮಗೆ
ಗ್ರಹಣ ಹಿಡಿಯುವಂತೆ

        ಶೈಲೂ.......
[4/6/2019, 3:55 pm] Dr. B. N. Shylaja Ramesh: ,[12/5, 1:24 PM] Dr || B.N. Shylaja Ramesh: ನೆನಪಾಗುತ್ತಿಲ್ಲ
*************

ಈ  ಪ್ರೀತಿಯ
ಸೋನೆಮಳೆಯ
ಆರಂಭ
ಏನ್ಡಾಯ್ತೋ ನೆನಪಿಲ್ಲ
ಸವಿಮಾತಿನ
ಸಂಭಾಷಣೆ
ಶುರುವಾದದ್ದೂ ನೆನಪಿಲ್ಲ
ಕಣ್ಣೋಟದ 
ಸುಳಿಮಿಂಚು
ಹೊಳೆದದ್ದೂ  ನೆನಪಿಲ್ಲ
ಹುಸಿಮುನಿಸ
ಕಾರ್ಮೋಡ
ಕವಿದದ್ದೂ  ನೆನಪಿಲ್ಲ
ಕಣ್ಣೀರಿನ 
ಬಿರುಮಳೆಯು
ಸುರಿದದ್ದೂ  ನೆನಪಿಲ್ಲ
ಎನ್ನ  ಎದೆಯಾಳದಲ್ಲಿ
ಅಚ್ಚೋತ್ತಿರುವ  ನಿನ್ನ 
 ನಗೆ ಮೊಗವೊಂದೇ
ಕಣ್ಣಲಿ ತುಂಬಿರುವಾಗ
ನನ್ನೀರುವೇ ನನಗೆ  ನೆನಪಿಲ್ಲ
ಗೆಳೆಯ ನಿನ್ನ
ಅಲೆ ಅಲೆ ನಗುವಿನ
ಸುಳಿಯಲಿ ಸಿಕ್ಕ ನನಗೆ
ನನ್ನ  ಅಸ್ತಿತ್ವವೇ  ನೆನಪಿಲ್ಲ
ಅಚ್ಚೋತ್ತಿರುವ  ನಿನ್ಹೆಸರಲೇ
ನನ್ನುಸಿರಿರುವಾಗ  ಈ
ತನುವ ಇರುವಿಕೆಯೇ ಅರಿವಿಲ್ಲ

            ಶೈಲೂ.......
[12/5, 1:32 PM] Dr || B.N. Shylaja Ramesh: ಕಾಯುವೆನು  ಕೊನೆವರೆಗೂ
**********************

ಹುಸಿಮುನಿಸ  ಭಾವವೇ
ನಾ ನಿನ್ನ  ಬಂಧುವೇ
ಕನಸು ಕಾಣುವ  ಮುನ್ನವೇ
ನೀ  ಹೋದೆ ಎಲ್ಲಿಗೇ

ಕಾಡುತಿರುವ ಪ್ರೀತಿಯೇ
ಮರೆಯಾದೆ  ಎಲ್ಲಿಗೇ
ನಗು ಅರಳೋ ಮುನ್ನವೇ
ಏಕೆ ಈ  ಏಕಾಂತವೇ

ಅರಳುತಿಹ  ಹೂವಲೇ
ಇಹುದೆನ್ನ ಮೊಗವೇ
ದುಂಬಿ ನೀ  ಬಾರದೇ
ಮುದುಡುತಿದೆ  ನಗುವೇ

ಓ  ಬಣ್ಣದ  ಚಿಟ್ಟೆಯೇ
ಹಾರುವೆ ನೀ  ಎಲ್ಲಿಗೇ
ಬೇಡ ಬೇರೆ ಹೂವಿನಾಸೆ
ಬಂದು ಬಿಡೇ ಇಲ್ಲಿಗೇ

ನನ್ನ  ಹೃದಯ ನೀನು
ಬಡಿತ  ಕೇಳದೇನೂ
ಜೀವ  ಮಿಡಿತ  ನೀನೂ
ಕೊನೆವರೆಗೂ ಕಾಯುವೆನು ನಾನು

         ಶೈಲೂ........
[4/6/2019, 3:55 pm] Dr. B. N. Shylaja Ramesh: ,ನೀನಿಲ್ಲದ  ಹೊತ್ತು
****************

ಹುಸಿಮುನಿಸ  ಭಾವದಲಿ
ದೂರಾಗಿ  ಹೋದಾಗ
ಹಾಕಲೆಂದೇ ಮೆಲುಕು
ಬಿಟ್ಟು ಹೋಗಿರುವೆಯಾ
ಗೆಳೆಯ ನಿನ್ನ ಪ್ರೀತಿಯ
ಸವಿ ಸವಿ ನೆನಪು

ದೂರಾದ ಚಿಂತೆಯಲಿ
ತಹತಹಿಸಿದೆ ಹೃದಯ
ಮನವೋ ಹರಕು ಮುರುಕು
ಬಂದು ಬಿಡು ಗೆಳೆಯಾ
ದೂರಾಗದೇ... ನೀನಿದ್ದರೆನೆ
ಎನಗೆ  ಬದುಕು

ಹೊತ್ತುಗೊತ್ತಿಲ್ಲವೇ ನಿನಗೆ
ಕಾಡುವೆಯೇಕೆ
ಬಂದು ಕನಸಿನಲಿ
ಪಿಸುಗುಟ್ಟಿ ಮರೆಯಾದೆ
ಪುಳಕಗೊಂಡಿತು ಮನ
ಕನ್ಬಿಟ್ಟರೇನೂ ಕಾಣಿಸದು ಮಬ್ಬಿನಲಿ

ಭೂತಾಯಿಯೂ
ಮರೆತಳೇನೋ ತಿರುಗುವ
ತನ್ನ ಕಾಯಕ
ಹೊತ್ತೆ ಸಾಗದು ಮುಂದಕೆ
ಯಾಕೋ  ಕಾಡುತಿದೆ
ನಿನ್ನ ನೋಡುವಾ  ತವಕ

ಎಂದು ಕಾಣುವೆನೋ
ಮೋಡಿ ಮಾಡಿದಾ
ನಿನ್ನಂದದ ಮೊಗವ
ಬಂದು ಬಿಡಲೇನು
ಮತ್ತೆ ನಾನೇ
ಹತ್ತಿ  ಸಿಕ್ಕ ಬಂಡಿಯಾ ನೊಗವ

ಯಾರು ಮಾತನಾಡಿದರೂ
ನಿನ್ನ  ಸವಿ ನುಡಿ
ಕೇಳಿದಂತೆಯೇ  ಭಾಸ
ಓಡೋಡಿ ಬಂದು
ನಿಂತು ಬಾಗಿಲಲಿ
ನೋಡುವುದೇಕೋ  ಆಭಾಸ

ತಂಪಾದ ಗಾಳಿಯೂ
ಬಿಸಿಯಾಗಿ ತಾಕುತಿದೇ ಬೆಂದಿರುವೆ ಬೇಸಿಗೆಯ  ಬಿಸಿ ಹವೆಯಲ್ಲಿರುವಂತೆ
ತಂಪಾದ ಚಂದ್ರನೂ
ಉರಿಕೆಂಡದಂತೆ  ಕಾಣುತಿಹ
ತುಂಬಿ ಮನದಲಿ ನಿನ್ನದೇ ಚಿಂತೆ

ಬಾಗಿಲ  ಬಳಿ ನಿಂತು
ನಿನ್ನೆದುರು ನೋಡುತಿಹೆ
ನೀ  ಬರುವೆ  ಎಂದೂ???
ನಿನಗಾಗಿ ಕವಿತೆ ಬರೆಯುತಲಿ ಕಾಯುತಿಹೆ
ಸಾಯುವೆನು  ನಿನಗಾಗಿ
ಬದುಕುವೆನು ನಿನಗೆಂದೂ....

           ಶೈಲೂ......
[4/6/2019, 3:55 pm] Dr. B. N. Shylaja Ramesh: ,[11/13, 4:57 PM] Dr || B.N. Shylaja Ramesh: ಹೇ ಗೆಳೆಯಾ
ನಿನ್ನ ಮುಖ
ನೋಡದಿದ್ದರೂ
ನಿನ್ನೆದೆಯ ತಾಳ
ನಾ ಕೇಳಬಲ್ಲೆ
ನೀ ಮಾತನಾಡದೆ
ಮೌನವಾಗಿದ್ದರೂ
ನಿನ್ನಂತರಾಳ
ನಾ ಅರಿಯಬಲ್ಲೆ
ದೂರವಿರುವಂತೆ
ನಟಿಸುತ್ತಿದ್ದರೂ
ನಿನ್ನ ಮಾನದಾಳದಾ
ಮಾತು ನಾ ತಿಳಿಯಬಲ್ಲೆ
ಕಣ್ತೆರೆದು  ಬೆದರಿದಂತೆ
ಕುಳಿತಿದ್ದರೂ ನೀ
ನಿನ್ನೊಳಗಣ್ಣ
ಕನಸೇನೆಂದು
ನಾ ಹೇಳಬಲ್ಲೆ
ಮುಗ್ಧನಂತೆ ನಟಿಸಿ
ಗಾಂಭೀರ್ಯ
ತೋರಿದರೂ
ನಿನ್ನ ಮನೋವಾಚಲ್ಯ
ನಾನರಿಯಬಲ್ಲೆ
ಮರುಳನಂತೆ
ಏನೂ ಅರಿಯದವನಂತೆ
ನೀನಿದ್ದರೂ
ನಿನ್ನ ಮನಸಿನ ವೇಗ
ನಾ.ಅಳೆಯಬಲ್ಲೆ
ಎಲ್ಲ ಮರೆತಂತೆ
ನಟಿಸುತ್ತಿದ್ದರೂ
ನಿನ್ನೊಳಗೆ
ನನ್ನಿರುವ
ನಾ ನೋಡಬಲ್ಲೆ

ಹೇ ಗೆಳೆಯ ಬಿಡು
ಇನ್ನು ಬಿಗುಮಾನವನ್ನು
ನಗೆಯು ಬರಲಿನ್ನು
ಮುಕ್ತವಾಗಿ....
ನೀ ಹೇಗಿದ್ದರೂ....
ನೀ ನನ್ನ ಮನದೊಳಗಿರುವೆ
ಒಪ್ಪಿದರೂ
ಒಪ್ಪದಿದ್ದರೂ
ನೀ ನನ್ನ ಪ್ರಿಯಬಂಧು...
ನಿನ್ನ ಉಸಿರಾಟದಲೇ
ನಿನ್ನಂತರಂಗ 
ನಾನರಿವೆ..

        ಶೈಲೂ.....
[
[4/6/2019, 3:55 pm] Dr. B. N. Shylaja Ramesh: ,ತವರ ಸೆಳೆತ
***********

ಕಣ್ಮುಚ್ಚಿದರೆ ನನ್ನ ಅಮ್ಮ ಬರುವಳು ಮುಂದೆ
ಅಪ್ಪನದೆ ನೆನಪು ಮನಸ್ಸಿನೊಳಗೆ
ಇಷ್ಟು ವರ್ಷವಾದರೂ ಮರೆತಿಲ್ಲ ತವರ
ಕಟ್ಟಿಹುದು ಕಣ್ಮುಂದೆ ಚಿತ್ರದಂತೆ
ಅಣ್ಣನಾ ವಾತ್ಸಲ್ಯ ನೆನೆದು ಹನಿಗೂಡಿಹುದು ಕಣ್ಣು
ಕೈಬೀಸಿ ಕರೆಯುತಿದೆ ತವರ ಮಮತೆ
ಹೋಗಿ ಬರಲೇನು ನಲ್ಲ ತವರು ಮನೆಗೆ

ನಿಮ್ಮ ಪ್ರೀತಿಯಲೇನು ಹುಳುಕು ಕಾಣುತ್ತಿಲ್ಲ
ಸ್ವರ್ಗವಿಹುದು ನಿಮ್ಮ ತೋಳಿನೊಳಗೆ
ತವರ ಮರೆಸುವ ಪ್ರೀತಿ ನೀಡಿದರೂ 
ನಲ್ಲ ಮರೆಯಲಾರೆನಾ ತವರ ಸೆಳೆತ
ಪ್ರತಿಯುಸಿರಿನಲ್ಲೂ  ನೆನೆಯುವಳು ನನ್ನಮ್ಮ
ತುತ್ತಿ ಗೊಂದಿಷ್ಟು ನಲ್ಲ ನನ್ನ ಮಾತೇ
ಮರೆಯಲಾಗುತ್ತಿಲ್ಲ ಹೋಗಿ ಬರಲೇನು ತವರುಮನೆಗೆ

ಇಲ್ಲಿ ಕೊರತೆ ಇಹುದೇನೆಂದು ಕೇಳೆದಿರಿ
ನಿಮ್ಮ ಮಡಿಲಲ್ಲಿ ನಾನು ಚಿಕ್ಕ ಮಗುವೇ
ತವರಿನಲ್ಲಿದ್ದಂತೆ ಸ್ವತಂತ್ರ ವಿಹುದಿಲ್ಲಿ
ನಿಮ್ಮಆಶ್ರಯದಲ್ಲಿ ನಾನು ಪರಮ ಸುಖಿಯು
ತಾಯಿ ಪ್ರೀತಿಯೇ ಬೇರೆ ತಂದೆ ಮಮತೆಯೇ ಬೇರೆ
ಅಳೇಯಲಾಗದು ಅದನು ತೂಕ ಮಾಡಿ
ಹೋಗೊಮ್ಮೆ ಬರಲೇನು ತಾಳಲಾರದು ಮನವು
ಕಟ್ಟಿ ಎಳೆಯುತ್ತಿದೆ ತಾಯ ಕರುಳಬಳ್ಳಿ.

         ಶೈಲೂ......
[4/6/2019, 10:40 pm] Dr. B. N. Shylaja Ramesh: ತಲೆ ತಗ್ಗಿಸಲೇಕೆ? ತಲೆ ಎತ್ತಿ ನಡೆ ಯೋಧ
ಸೋಲು ಅಪಮಾನ ಸ್ಥಿರವಲ್ಲ ಯಾಕೀ ವಿಷಾದ
ಕುಗ್ಗಲೇಕೆ ? ಇರಲಿ ಆತ್ಮವಿಶ್ವಾಸ
ಮುಂದಡಿಯಿಡು ನಾಳೆಗೆ ಚಿಂತಿಸುತ

ಗಾಢಾಂಧಕಾರ ಕಳೆದು ಬೆಳಕು ಮೂಡುವುದು
ಗುಡುಗುಸಿಡಿಲಬ್ಬರ ಕಳೆದು ಸೋನೆಮಳೆ ಸುರಿವುದು
ದೂರದಲಿಹುದು ನೋಡು ಬೆಳಕಿನ ಹೊನಲು
ಸಾಗಬೇಕು ದಿಟ್ಟ ಹೆಜ್ಜೆಯಿರಿಸಿ ಮುನ್ನುಗ್ಗಲು

ವಿಧಿನಿಯಮವ ಮೀರಲಾದೀತೇನು?
ಬಂದದ್ದೆಲ್ಲಾ ಬರಲಿ ಬಿಡು ಭಯವನ್ನು
ಕಷ್ಟಗಳಿಗೆ ಎದೆಯೊಡ್ಡಿ ಗಟ್ಟಿಯಾಗಿ ನಿಲ್ಲು
ಜಗ್ಗದಿರೆ , ಕುಗ್ಗಿ..ವಿಧಿಗೇ ಸೋಲು

ಕುಸಿಯಲೇಕೆ? ಹುಸಿಯಲ್ಲ ಬದುಕು
ಕಳೆದಿದ್ದನ್ನ ಆ ಜಾಗದಲ್ಲೇ ಹುಡುಕು
ಮಸಿಯಾದರೇನಂತೆ ಅದೂ ಒಂದು ಬಣ್ಣ
ಬೇರೆ ಕೊಳೆ ಕಾಣದಂತೆ ಮರೆಮಾಚುವುದಣ್ಣ

ಯಾಕೀ ನಿರಾಶೆ ಗೆದ್ದೇ ಗೆಲ್ಲುವೆ ಮುಂದೆ
ಬಾಳೊಂದು ಒಗಟು ಬಿಡಿಸೆ ಯಶ ಹಿಂದೆ
ಧಣಿವಾದರೆ  ಇರಲಿ ರಾಧಾಮಾಧವರ ನೆನಪು
ಮರೆಸುತೆಲ್ಲ ತುಂಬುವ ಆತ್ಮವಿಶ್ವಾಸ ಹುರುಪು

       ಶೈಲೂ.....
[7/6/2019, 2:26 pm] Dr. B. N. Shylaja Ramesh: ಪದಪದ್ಯೋತ್ಸವ##

ಸಾಗರ 
******

ಗೂಢನಿಗೂಢಗಳ ಒಡಲು ಈ ಕಡಲು
ಚಿತ್ರ ವಿಚಿತ್ರ ವಿಸ್ಮಯದ ಒಡಲು
ಅನರ್ಘ್ಯ ಮುತ್ತುರತ್ನಕೆ ತಾಯ್ಮಡಿಲು
ಸಕಲ ಜಲಜಂತುಗಳ ಆಶ್ರಯದ ನೆಳಲು

ನೀ ಆದಿ ಅನಂತ ಪುರಾತನ ಶರಧಿ
ಅನಂತಶಯನನ ಸ್ವಸ್ಥಾನ ಕ್ಷೀರಾಬ್ದಿ
ಮಥಿಸಿ ಮಂದರನೊಡನೆ ಸೃಜಿಸಿದೆ
ಹಾಲಾಹಲ ಅಮೃತ ಗಜ ತುರಗ ಕಲಾನಿಧಿ

ಒಡಲೊಳಗಡಗಿದೆ ಸಿಡಿವ ಜ್ವಾಲಾಮುಖಿ
ಅನತಿ ದೂರಕೆ ಕಾಣ್ವೆ ಸದಾ ಹಸನ್ಮುಖಿ
ಸಾಗರದಲೆಗಳ ರೌದ್ರ ರಮಣೀಯ ದೃಶ್ಯ
ತೀರಕ್ಕಪ್ಪಳಿಸಿ ಕಬಳಿಸಿ ಮತ್ತೆ ಶಾಂತ ಅದೃಶ್ಯ

ಅದೆನಿತು ನಂಟು ನಿನಗೂ ಚಂದ್ರಮಗೂ
ಉಕ್ಕೇರುವೆಯೇಕೀಪರಿ ಪ್ರತೀ ಹುಣ್ಣಿಮೆಗೂ
ಅದೆಲ್ಲಿಗೆಲ್ಲಿಗೆ ನಂಟು ಏನಾಶ್ಚರ್ಯ ಒಗಟು
ಸಮುದ್ರದ ಉಪ್ಪಿಗೇಕೆ ಬೆಟ್ಟದ ನೆಲ್ಲಿಯ ಗಂಟು

ಅದೆಷ್ಟು ಜೀವಸಂಕುಲಕೆ ನೀ ಆಶ್ರಯದಾತ
ಸಣ್ಣ ದೊಡ್ಡ ಮತ್ಸ್ಯೋದ್ಯಮಕೇ ಅನ್ನದಾತ
ಮೊದಲಿಗೆ ನೀ ಜಗವ ಬೆಸೆಯುವ ಕೊಂಡಿ
ವಿಶೇಷಣದೊಳಗೊಂದು ವಿಶೇಷವೀ ಶರಧಿ

ನಿನ್ನಪಾರ ಜಲರಾಶಿಯ ಹನಿಹನಿಯು
ಜೊತೆಜೊತೆಗೆ ಮಿಳಿತು ಕಲೆತು
ಆವಿಯಾಗಿ ಮೇಲೆ ಮೋಡ ಘನೀಭವಿಸಿ
ಜಗಕೆ ತಂಪೆರೆವುದು ಮಳೆಯಾಗಿ ಹನಿಸಿ

ಅದೆನಿತು ನದಿಗಳಿಗೆ ಆಶ್ರಯ ನಿನ್ನೊಡಲು
ಅದೇನಾಕರ್ಷಣೆ ಅವಕೆ ನಿನ್ನೊಡಲ ಸೇರಲು
ಎಲ್ಲವ ಅಪ್ಪಿ ಅಲಂಗಿಸುವೆ ಮಾತೆಯಂತೆ
ಮನುಕುಲಕೆ ವರದಾನ ಸಂಪನ್ನದಾತೆಯಂತೆ

ಸಂಸಾರಕೂ ಉಪಮೆ ನೀ ಸಾಗರ
ಆಸೆಯಲೆ ಹೊಡೆತಕೆ ನುಚ್ಚಾಯ್ತು ಬದುಕತೀರ
ಕಷ್ಟಗಳ ಸುನಾಮಿ ಬಂದೆರಗಿದರೆ ಹಾನಿ
ಶಾಂತ ಶರಧಿ ನೀ ಉತ್ತಮೊತ್ತತೆಯ ಕಹಾನಿ

            ಶೈಲೂ.......
[8/6/2019, 3:35 am] Dr. B. N. Shylaja Ramesh: ಅದಾವ ಜನ್ಮದ ಬಂಧ
ಬೆಸೆಯಿತೋ ಅನುಬಂಧ
ಅದೆಷ್ಟು ಪುಣ್ಯದ ಫಲಕೆ
ಒಲಿವೆ ನೀನು
ಅದೇವ ಕರುಣಿಸಿದ ಫಲವು ನೀನು
[8/6/2019, 5:27 am] Dr. B. N. Shylaja Ramesh: ಅದಾವ ಜನ್ಮದ ಬಂಧ ಬೆಸೆಯಿತೋ ಅನುಬಂಧ
ಅದೆಷ್ಟು ಪುಣ್ಯದ ಫಲಕೆ ಒಲಿವೆ ನೀನು
ಅದೇವ ಕರುಣಿಸಿದ ವರವು ನೀನು

ಬಾಳ ಪಯಣದಲ್ಲಿ ಜೊತೆಯಾಗಿ ನೀ ಬಂದೆ
ನೋವು ನಲಿವುಗಳಿಗೆ ಸ್ಪಂದಿಸುತಾ
ದೈವಾನುಗ್ರಹದಿ ನೀ ಸಿಕ್ಕೆ ಜನ್ಮಾಂತರಕು ಜೊತೆಯಾಗುತ
[11/6/2019, 12:25 pm] Dr. B. N. Shylaja Ramesh: ಮತ್ತೆ ಮಗುವಾಗುವಾಸೆ
********************

ಮತ್ತೆ ಮಗುವಾಗುವಾಸೆ
ಅಮ್ಮನ ಮಡಿಲ ಸೇರುವಾಸೆ
ಕಾಡಿ, ಬೇಡಿ, ಕಾಡಿಸಿ
ಪ್ರೀತಿಯ ಬೈಗುಳ ಕೇಳುವಾಸೆ

ಅಪ್ಪನ ಬೆನ್ನೇರುವಾಸೆ
ಕೂಸುಮರಿ ಆಡಿ ನಲಿವಾಸೆ
ಕಿರುಬೆರಳ ಹಿಡಿದು ನಡೆದು
ಕಂಡದ್ದೆಲ್ಲಾ ಬೇಕೆಂಬ ರಚ್ಚೆ ಹಿಡಿವಾಸೆ

ಅಕ್ಕನೊಂದಿಗೆ ಕಣ್ಣಾಮುಚ್ಚಾಲೆ
ಆಟ ಕೂಡಿ ಆಡುವಾಸೆ
ಉದ್ದ ಜಡೆಯ ಹಿಡಿದೆಳೆದು ಕಾಡಿ
ಓಡಿ ಕೋಣೆಯಲವಿತುಕೊಳ್ಳುವಾಸೆ

ಅಣ್ಣನ ಹೆಗಲೇರಿ ತಲೆಬಾಚಿ ಮುಡಿಕಟ್ಟಿ
ಮುಖಕೆಲ್ಲಾ ಬಣ್ಣಬಳಿದು
ಹಿಂದೆ ಮುಂದೆ ಸುತ್ತಿ ಸುಳಿದು
ಕಾಡುವ ತುಂಟಿ ನಾನಾಗುವಾಸೆ

ಅಪ್ಪನ ದೊಡ್ಡ ಪಾದರಕ್ಷೆ ಯಲಿ
ನನ್ನ ಪುಟ್ಟಪಾದವ ಊರಿ
ಪರಪರನೆ ಎಳೆದೆಳೆದು 
ನಡೆದು ಎಡವಿ ಬೀಳುವಾಸೆ

ಬಿದ್ದೊಡನೆ ಎತ್ತಿ ಮುದ್ದಿಸಿ
ನೋವ ಮರೆಸಿ ಸವಿಮಾತನಾಡಿ
ಅಪ್ಪಿ ಹರಸುವ ನನ್ನಮ್ಮನ
ಮಡಿಲಲ್ಲಿ ಮತ್ತೆ ಪುಟ್ಟ ಮಗುವಾಗುವಾಸೆ

ತುತ್ತಿಗೊಂದು ಕಥೆ ಹೇಳಿ
ಗುಟುಕಿಗೊಂದು ಮುತ್ತನಿತ್ತು
ತಟ್ಟಿ ತಬ್ಬಿ ಲಾಲಿ ಹಾಡಿ ಕನಸಿನೂರಲಿ
ನಲಿಸುವ ನನ್ನಮ್ಮನ ಕೈಗೂಸು ನಾನಾಗುವಾಸೆ

         ಶೈಲೂ......
[13/6/2019, 10:00 am] Dr. B. N. Shylaja Ramesh: ಇದಕಿದೆಯೇ  ಮದ್ದು..??
**********************

ಅನುಮಾನ.... ಇದೊಂದು
ಭಯಾನಕ ರೋಗ.. 
ಇದಕಿದೆಯೇ ಮದ್ದು..
ಪ್ರತ್ಯಕ್ಷ ಕಂಡರೂ 
ಪ್ರಮಾಣಿಸಿ ನೋಡದ
ಕಪೋಲಕಲ್ಪಿತ ನಡೆಗಿದೆಯೇ ಮದ್ದು..
ಹಿತ್ತಾಳೆ ಕಿವಿಯ  
ಬಲೆಗೆ ಬಿದ್ದು
ಹೀಯಾಳಿಕೆಗೆ ನಲುಗಿ 
ಮುರಿದ ಮನಕಿದೆಯೇ ಮದ್ದು..
ಊಹೆಯ ಜಾಡಿನಲಿ 
ಮಾಯೆಯ ತೆರೆಯೆಳೆದು
ಬೇಸರದ ವಿಷಯಾರೋಪಕಿದೆಯೇ ಮದ್ದು..
ಬತ್ತಿದ ಚಿತ್ತ ವಿಕಾರಕೆ  
ನೋವುಂಡ ಮನದಾಳಕೆ
ಅರ್ಥವಿಲ್ಲದ ಒಣಪ್ರತಿಷ್ಠೆ ಗಿದೆಯೇ  ಮದ್ದು..

           ಶೈಲೂ.....
[13/6/2019, 10:09 pm] Dr. B. N. Shylaja Ramesh: ಹೇಮಗಂಗಾ ಅವರು
ಬರೆದ ಈ ಕವನ
ಬಹಳ  ಇಷ್ಟವಾಯಿತು
........        ...........     .........

** ಬದುಕುವೆ  ನನಗಾಗಿ **

ಬಾರದಿರು ಮತ್ತೆಂದೂ ನೀ

ನನ್ನ ಬಳಿಗೆ  ಗೆಳೆಯಾ.....

ನಿನಗಾಗಿ ಮಿಡಿಯುವುದ

ಮರೆತಿದೆ ಈ ಹೃದಯ

ಮೋಸದಾ ತುಳಿತದಲಿ

ಕಮರಿವೆ ನನ್ನ  ಕನಸುಗಳು 

ಚೆಲ್ಲಾಡಿವೆ  ಛಿದ್ರವಾಗಿ

ನಲ್ಮೆ ಮನದ ಭಾವಗಳು

ಎದೆಹಾಸಿನ  ಹಸಿಮಣ್ಣು 

ಬರಡಾಗಿದೆ  ಒಣಒಣಗಿ

ಬುಡ ಕಳಚಿ ಬೇರ್ಪಟ್ಟಿದೆ

ಒಲವ ಬಳ್ಳಿ  ನಲುನಲುಗಿ

ಹೊಸಹೂವನರಸಿ ಹೊರಟ

ಕೃತಘ್ನ ದುಂಬಿ ನೀನು

ಹೊಸಕಿಸಿ  ಘಾಸಿಗೊಂಡ

ಆಘ್ರಾಣಿತ ಹೂ ನಾನು 

ಹೊತ್ತಿ ಉರಿದು ಬೂದಿ

ಈಗ ನೆನಪುಗಳ  ಸಂತೆ

ಮೇಲೆದ್ದಿಹೆ ಮತ್ತೆ ನಾ

ಫೀನಿಕ್ಸ್ ಪಕ್ಷಿಯಂತೆ

ಉಸಿರು ನಿಂತಿಲ್ಲ ನನ್ನಲ್ಲಿ 

ನೀ  ತೊರೆದುಹೋದರೂ

ಹೇಳಬೇಕಿತ್ತು ಕಾರಣ

ಬಂದಿಲ್ಲಿ ಒಮ್ಮೆಯಾದರೂ

ಬಾಳಹಾದಿ ಕವಲೊಡೆದಿದೆ

ಒಂಟಿ ಪಥಿಕಳು ನಾನಿಂದು

ಅನಿವಾರ್ಯವಲ್ಲ  ನೀನೆನಗೆ

ನಡೆಯಲು ಮುಂದೆಂದೂ

ಅಳಿಸಿರುವೆ ಬಾಳಪುಟದಿ

 ನಾ  ಬರೆದ ನಿನ್ನ ಹೆಸರ

ಇಡಹೊರಟಿಹೆ ಗುರಿಯತ್ತ

ಹೆಜ್ಜೆಗಳನು ಸಾವಿರ

ಸಾಂಗತ್ಯವೇಕೆ ನನಗಿನ್ನು

ನನ್ನೊಡನೀಗ  ನಾನಿರಲು ?

ಪಣ ತೊಟ್ಟಿಹೆ ಈ ಕ್ಷಣದಿ

ನನಗಾಗಿ  ನಾ ಬದುಕಲು

 

      . .  . . . ಎ.ಹೇಮಗಂಗಾ ಮೈಸೂರು 

Comments

Popular posts from this blog

343 ಒಗಟಿನ ರೂಪದ.ಚುಟುಕು

ಕವನ ಸಂಗ್ರಹ

ಕವನ