ಕವನ
[1/6/2020, 10:16 am] Dr. B. N. Shylaja Ramesh: #ಕಥಾ_ಸರಪಳಿ ನಾನು ಬರೆದ ಅಪೂರ್ಣ ಕಥೆಯನ್ನು ನನ್ನ ಮೂರುಜನ ಸ್ನೇಹಿತೆಯರು ಸೇರಿ ಪೂರ್ತಿಗೊಳಿಸಿರುವ ಕಥೆ..... ಎರಡನೇ ಕಂತನ್ನು ಶ್ರೀಮತಿ ಸುಧಾ ತೇಲ್ಕರ್ ಮೂರನೇ ಕಂತನ್ನು ಶ್ರೀಮತಿ ಶೈಲಜಾ ಶೈಲಿ ನಾಲ್ಕನೇ ಕಂತನ್ನು ಶ್ರೀಮತಿ ಪ್ರವೀಣಾ ದೇಶಪಾಂಡೆ ಯವರು ಬರೆದಿದ್ದಾರೆ. ನನ್ನ ಮನದಲುದಿಸಿದ ಭಾವಕ್ಕೆ ತಮ್ಮೆಲ್ಲರ ಸುಂದರ ಭಾವವನ್ನೆರೆದು ಪೂರ್ಣಗೊಳಿಸಿದ ಕಥೆ.. ಇನ್ನು ನಿಮ್ಮೆಲ್ಲರ ಮುಂದೆ.... ಓದಿ...ಹಾರೈಸಿ.... ಪ್ರೋತ್ಸಾಹಿಸಿ.... ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ... #ಕಥೆ.... #ನೆನಪಿನಾಳದಲ್ಲಿ..... ಮೇಡಂ..... ದ್ವನಿ ಬಂದ ದಿಕ್ಕಿನತ್ತ ನೋಡ್ದೆ... ಯಾರೂ ಕಾಣಿಸಲಿಲ್ಲ.. ಸುತ್ತಲೂ ನೋಡ್ದೆ... ಗಾಂಧಿಬಜಾರ್ನ ಆ ಜನ ಜಂಗುಳಿಯಲ್ಲಿ.. ಯಾರು ಯಾರನ್ನ ಕರೀತಾರೋ.. ಬೇರೆ ಯಾರನ್ನೋ ಇರಬೇಕು ಅಂದ್ಕೊಂಡು ನನ್ನ ವ್ಯಾಪಾರದಲ್ಲಿ ಮಗ್ನಳಾದೆ. ಬೆಳ್ಳಿಗ್ಗೆ ಆದ್ರೆ ಯುಗಾದಿ ಹಬ್ಬ... ಹೂವು ಹಣ್ಣು ಮಾವಿನಸೊಪ್ಪು ಬೇವಿನಸೊಪ್ಪು ತೊಗೋಬೇಕು, ಯಜಮಾನ್ರು ಆಫೀಸ್ ನಿಂದ ಬರೋದು ಲೇಟಾಗುತ್ತೆ ಅಂದದ್ದಕ್ಕೆ ಸರಿ ನಾನೇ ಹೋಗಿ ತರೋಣ ಅಂತ ಬಂದಿದ್ದೆ. ಯಪ್ಪಾ ಏನು ಸುಟ್ಟು ಮಾರ್ತಾರೆ ಜನ... ಮಾವಿನಸೊಪ್ಪು ಬ...