350 ಅಕ್ಷರ ಮಾಂತ್ರಿಕ

#ಕನ್ನಡ_ರಾಜ್ಯೋತ್ಸವದ_ಅಂಗವಾಗಿ

#ನುಡಿನಮನ

#ಅಕ್ಷರ_ಮಾಂತ್ರಿಕ

ದೂರದ ಬಳ್ಳಾರಿಯಿಂದ ಬೆಂಗಳೂರಿಗೆ
ಬಂದಿತೊಂದು ಅಪ್ರತಿಮ ಪ್ರತಿಭೆ.!
ಅನೇಕ ಏಳುಬೀಳುಗಳ ಕಂಡು
ತಾನಾಗೇ ಹೊಳೆಯಿತು ಸ್ವಯಂಪ್ರಭೆ..!

ಬರೀ ಮಾತನ್ನೇ ಬಂಡವಾಳ ವಾಗಿಟ್ಟು
ಮೆಲ್ಲ ಮೆಲ್ಲನೇ ಬೆಳೆಯಿತೊಂದು ಹೆಮ್ಮರ.!
ಹರಿತ ಲೇಖನಿಯಲಿ ಅಕ್ಷರವ ಬೆಸೆದು
ಚುರುಕು ಮುಟ್ಟಿಸಿದ ಜಾದೂಗಾರ..!

ಹಾಯ್, ಹಾಯ್ಬೆಂಗಳೂರು ಎನ್ನುತ್ತಲೇ
ಭೂಗತ ಲೋಕವ ತೆರೆದಿಟ್ಟ ಜಾಣತನ..!
ಕಾರ್ಗಿಲ್ ಕದನವ ನೇರ ಚಿತ್ರಿಸಿದ
ಗಟ್ಟಿಗುಂಡಿಗೆಯ ಎಂಟೆದೆ ಭಂಟನ ದಿಟ್ಟತನ..!

ಓ ಮನಸೇ ಇಂದ ಖಾಸ್ ಬಾತ್ ವರೆಗೆ
ಬೃಹತ್ ಓದುಗರ ಸೆಳೆದ ತಾಂತ್ರಿಕ..!
ವಿಭಿನ್ನ ಸಾಹಿತ್ಯದಲಿ ಜನಮನಗೆದ್ದ
ಪತ್ರಿಕಾಲೋಕದ ಅಕ್ಷರ ಮಾಂತ್ರಿಕ..!

        ಡಾ: B.N. ಶೈಲಜಾ ರಮೇಶ್

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು