ಜೀವ ಜಲ

ವಿಶ್ವ ಜಲ ದಿನಕ್ಕೊಂದು ಸಂದೇಶ
**************************
      ಜೀವ ಜಲ
     **********

ಹಸಿರಿಗೂ ಬೇಕು ನೀರು
ಉಸಿರಿಗೂ ಬೇಕು ನೀರು
 ನೀರಿಲ್ಲದೆ ಉಳಿದೀತೇ
ಸಸ್ಯ ಸಂಕುಲ
ನೀರಿಲ್ಲದೆ  ಬಾಳಲಾದೀತೆ
ಮನುಜ ಕುಲ

ಬತ್ತಿ ಹೋಗಿದೆ, ನದಿ
ಕೆರೆ ತೊರೆಯ ಜಲ
ಬಳಲಿ ಬೆಂಡಾಗಿದೆ
ಪಕ್ಷಿ, ಪ್ರಾಣಿ ಸಂಕುಲ
ಬಿಸಿಲ ಬೇಗೆಯಲ್ಲಿ ದಣಿದಾಗ
ಬೇಕೇ ಬೇಕಲ್ಲ  ಜೀವಜಲ

ಅಂತರ್ಜಲ ಮಟ್ಟ ಕುಸಿದು
ಪಾತಾಳ ಸೇರಿಬಿಟ್ಟಿದೆ
ಕಾಡುಗಳ ಕಡಿದು
ನಾಡಾಗಿಸುವ  ಮತ್ತಿಗೆ
ಜೀವಾಮೃತ, ಜೀವ..
ಜಲವೇ ಬತ್ತಿ ಹೋಗಿದೆ

ಬಯಲೆಲ್ಲವೂ ಮಾಯವಾಗಿ
ಎಲ್ಲೆಡೆಯೂ ಕಾಂಕ್ರೀಟ್ ಮಯ
ಸುರಿದ ಮಳೆ ನೀರು ಹಿಂಗಿ
ಭೂಮಿ ತಣಿಯಲ್ಲ್ಲಿದೆ ನೆಲ
ಬೆಂಗಾಡಿನ ಬಿಸಿ ತಾಪಕೆ
ಜನ ಜೀವನ ಅಯೋಮಯ

ಅರಿವಿರದೆ ಕಳೆದಾಯ್ತು
ನದಿ ಭಾವಿ ಕೆರೆಯ ಜಲದ ಸೆಲೆ
ಈಗ  ಅರಿವಾಗುತ್ತಿದೆ
ಜೀವ ಜಲದ ಬೆಲೆ
ಭೂಸಿರಿಯ ಹಸಿರು ಮರುಟಿ
ಜೀವಿಗಳಿಗೆ ಇಲ್ಲವಾಯ್ತು ನೆಲೆ

ಇನ್ನಾದರೂ ಎಚ್ಚರಗೊಳ್ಳಬೇಕು
ಅಕಾರಣ ಪೋಲಾಗುವುದ
ತಡೆಯಬೇಕು,  ಸುರಿವ ಮಳೆ
ನೀರು ಹರಿದು ಹೋಗದಂತೆ
ಮುಂದಾಲೋಚನೆಯಿಂದ
ಮಳೆನೀರ ಕೊಯ್ಲು ಮಾಡಬೇಕು

ಅಗತ್ಯಕ್ಕಷ್ಟೇ ಬಳಸಿ ಜಲವ
ಮುಂದಿನ ದಿನಕೆ ಕಾಪಿಡಬೇಕು
ಪೂರ್ಣ ಅರಿವಿರಲಿ ಮನುಜ
ನೀರಿಲ್ಲದೇ ಹಸಿರಿಲ್ಲ..!!
ಹಸಿರಿಲ್ಲದೆ ನಾವಿಲ್ಲ..!!
ನೀರೇ ಎಲ್ಲಕ್ಕೂ ಮೂಲ..!!

          ಶೈಲೂ......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ