ಶಿವ ಶಿವ ಎನ್ನಿ


ಶಿವ ಶಿವ ಎನ್ನಿ
*************

ಶಿವ ಶಿವ ಎನ್ನಿ ಭಯವೇ ಇಲ್ಲ
ಜಗವನುಳಿಸಲು ಹಾಲಾಹಲವ ಕುಡಿದಿಹನಲ್ಲ

ಶಿವ ನಾಮಕೇ ಸಾಟಿ ಬೇರೆನಿಲ್ಲ
ನಂಬಿಹ ಭಕ್ತರ  ಸಲಹುವನಲ್ಲ

ನಂಬಿ ಭಜಿಸಲು ಪೊರೆಯುವನಲ್ಲ
ಭಕ್ತ ಬೇಡನಿಗೆ ಒಲಿದಿಹನಲ್ಲ

ಪ್ರೇಮಭಕ್ತಿಗೆ  ಬಾಗುವನಲ್ಲ
ಆತ್ಮಲಿಂಗವನೆ ಕೊಟ್ಟಿಹನಲ್ಲ

ಮನುಜ ರಕ್ಕಸರ ಭೇದವದಿಲ್ಲ
ಶುದ್ಧ ಭಕ್ತಿಗೆ ವಶವಾಗುವನಲ್ಲ

ವರವ ಬೇಡಲು ಇಲ್ಲಎನ್ನುವುದಿಲ್ಲ
ಭಕ್ತಿ ಪರವಶತೆಗೆ ಮಣಿಯುವನಲ್ಲ

ಶಿಷ್ಟ ರಕ್ಷಣೆಗೆ ಕಟಿಬದ್ಧನಾಗಿಹನಲ್ಲ
ಮಾರವೈರಿ ಅಸುರಾಂತಕ ಎನ್ನುವರಲ್ಲ

ಪರಮಯೋಗಿ ಶಿವ ಇವನೇ ಎಲ್ಲಾ
ಶಿವನ ಆದಿ ಅಂತ್ಯಗಳ ಕಂಡವರಿಲ್ಲ

ಗಜ ಚರ್ಮಾಂಬರ ಧರಿಸಿಹನಲ್ಲ
ವಿಭೂತಿ ಭಸ್ಮ ಮೈಯೊಳಗೆಲ್ಲ

ಪ್ರಕೃತಿ ಪುರುಷ ಇವನೇ ಎಲ್ಲ
ಅರ್ಧನಾರೀಶ್ವರನಾಗಿಹನಲ್ಲ

ಬಿಲ್ವಪತ್ರೆಯನರ್ಪಿಸಿದರೆ ಸಾಕಲ್ಲ
ತ್ರಿಜನ್ಮ ಪಾಪಗಳು ನಶಿಸುವುದೆಲ್ಲ

ಶಿವರಾತ್ರಿಯ ದಿನ ಭಜಿಸಿದವರಿಗೆಲ್ಲ
ಶಿವನ ಅನುಭೂತಿ ಪಡೆಯುವರೆಲ್ಲ

           ಶೈಲೂ.....

Comments

Popular posts from this blog

343 ಒಗಟಿನ ರೂಪದ.ಚುಟುಕು

ಕವನ ಸಂಗ್ರಹ

ಕವನ