114 ಪರೀಕ್ಷೆ

ಪರೀಕ್ಷೆ
******

ಕಷ್ಟಗಳಿಗೆ ಎದೆಯೊಡ್ಡಿ
ಸಂಕಷ್ಟಗಳ ಸರಮಾಲೆಗಳನ್ನೆದುರಿಸಿ
ಸರಿದಾರಿಯಲಿ ನಡೆದರೂ
ಚುಚ್ಚು ನುಡಿಗಳಿಗೆ ಬೆಚ್ಚಿ
ತಲೆಬಾಗುವವರು ಹೆಜ್ಜೆಜ್ಜೆಗೂ
ಅಗ್ನಿಪರೀಕ್ಷೆ ಗೆ ಗುರಿಯಾಗಿ
ನೊಂದು ಬೆಂದು ಕೊನೆಗೆ ಹೆಸರಾಗುಳಿವರು...!!
ರಾಮಾಯಣದ ಕಥನದಲಿ
ವನವಾಸವನನುಭವಿಸಿದ್ದು,
ಪತಿ ಪರಾಯಣೆಯಾದರೂ
ಅಗ್ನಿಪರೀಕ್ಷೆಯನ್ನೆದುರಿಸಿದ್ದು
ಸಾಧ್ವೀ ಮಣಿ  ಮಾತೇ ಸೀತೆ...!!
ದುಷ್ಟ ಕೈಕೆಯಿಯೂ ಅಲ್ಲ
ಕನಿಷ್ಠ ಮಂಥರೆಯೂ ಅಲ್ಲ..
ಮಹಾಭಾರತದ ಕರ್ಮಭೂಮಿಯಲಿ
ಧರ್ಮಪರಾಯಣ ಪಾಂಡವರಿಗಷ್ಟೇ ಕಷ್ಟ
ವನವಾಸ ಅಜ್ಞಾತಗಳನನುಭವಿಸಿದರೂ
ತೋಲಗಲಿಲ್ಲ ಅನಿಷ್ಟ..!!
ನ್ಯಾಯನೀತಿಯ ರಾಜ ನೀತಿಯನುನಸರಿಸಿದ 
ವಿದುರಗೆ ಬಡತನದ ಕಷ್ಟ..
ದೇವದೇವನಿಗೂ ತಪ್ಪಲಿಲ್ಲ ವಿಧಿ
ಶ್ರೀರಾಮರಿಗೆ ವನವಾಸವಾದರೆ
ಶ್ರೀಕೃಷ್ಣ ನಿಗೆ ಮಾಯಾವಿ ಮೊಸಗಾರನೆಂಬ ಹಣೆಪಟ್ಟಿ
ಮುಕ್ಕಣ್ಣನಂತೂ ಹಾಲಾಹಲವನೇ ಕುಡಿದ..!!
ಮೂಲೋಕದೊಡೆಯರೇ 
ಕಷ್ಟದಿ ನಲುಗಿದ್ದಾಗ,,, ಮನುಜ..
ನಿನ್ನ ಕಷ್ಟವದು ಹೆಚ್ಚೇನು..?
ಸರ್ವರಿಗೂ  ಉಂಟು ಪರೀಕ್ಷೆ
ಸರಿದಾರಿಯಲಿ ನಡೆದು, ಇರಲಿ
ಉತ್ತೀರ್ಣನಾಗುವ  ನಿರೀಕ್ಷೆ
ಬೇಡ ಪ್ರತಿಪಲಾಪೇಕ್ಷೆ
ಆಗಲೇ ನೀಡುವ  ಆ ದೇವ ಸುರಕ್ಷೆ...

             ಶೈಲೂ.......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು