81.ಮಾತಿನ ಮಲ್ಲನ.ಮೌನಾವತಾರ

ಅಗಲಿದ ದಿವ್ಯ ಚೇತನಕ್ಕೊಂದು ನುಡಿನಮನ

ಮಾತಿನ ಮಲ್ಲನ.ಮೌನಾವತಾರ
***************************

ಮಾತಿನ ಮಲ್ಲನ ಮೌನ ಮೆರವಣಿಗೆ
ಬಾಳ ಪುಟದ ಕೊನೆ ಹಾಳೆಯ ವರೆಗೆ
ನಾಟಕ ಪರದೆಯ ಅಂಕವು ಜಾರಿ
ಜೀವನ್ನಾಟಕ ಮುಗಿಸಿದ ಸೂತ್ರಧಾರಿ

ಕರುನಾಡ ಕಣ್ಮಣಿ ನರಸಿಂಹಮೂರ್ತಿ
ರಂಗಭೂಮಿಯಲ್ಲಿ ಗಳಿಸಿದ ಕೀರ್ತಿ
ಬೆಳ್ಳಿತೆರೆಗೂ ಹಬ್ಬಿತು ಅದಮ್ಯ." ವಾಣಿ "
ಕಂಚಿನ ಕಂಠದ  ನಿರರ್ಗಳ ವಾಣಿ

ನಟರತ್ನಾಕರನ  ನಟನೆ ಅಪಾರ
ಹೆಸರು ಗಳಿಸಿದ್ದು ಲಂಚಾವತಾರ
ರಾಜಕೀಯದ ಹೊಲಸ ಬಿಚ್ಚಿದ ಧೀರ
ಯಾರಿಗೂ ಹೆದರದ ಕೆಚ್ಚೆದೆಗಾರ

ಸಾಮಾಜಿಕ ಕಾಳಜಿಯ  ಕಳಕಳಿ
ಭ್ರಷ್ಟತೆಯ ಅನಾವರಣ ಮಾಡಿದ ಪುತ್ಥಳಿ
ಮೊನಚು ಮಾತಲ್ಲೇ ಜನಜಾಗೃತಿಯ ಅನಾವರಣ
ಸಹಿಸದನೇಕ ಮಂದಿಯ ಹಗೆ ವಿನಾಕಾರಣ

ಹಿರಣ್ಣಯ್ಯ ಮಿತ್ರಮಂಡಲಿಯ  ರೂವಾರಿ
ನಟ ರತ್ನಾಕರ ಬಿರುದಾಂಕಿತ ಪಾತ್ರಧಾರಿ
ಹಾಸ್ಯ ವಿಡಂಬನೆಯಲೇ ಚಾಟಿ ಏಟಿತ್ತ ನಾಜೂಕಯ್ಯ
ನಟನೆಯ ದೈತ್ಯ ಪ್ರತಿಭೆ ನೀ ಮಹಾರಾಯ

ಹೊರಟು ಬಿಟ್ಟಿರೇಕೆ ಭೂಮಿಯನು ತೊರೆದು
ರಂಗಭೂಮಿಯಲಿ ಸಾರ್ವಭೌಮಿಕೆ ಮೆರೆದು
ಇನ್ನಾರಿಹರು ನಿಮ್ಮಂಥ ಧೀಮಂತ ವ್ಯಕ್ತಿ
ಭ್ರಷ್ಟತೆಯ ಎಳೆಎಳೆಯಾಗಿ ಬಿಚ್ಚಿಡುವ ಅಭಿವ್ಯಕ್ತಿ

           ಶೈಲೂ.....

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು