61.ವರಕವಿಗೆ ನಮನ

ಜ್ಞಾನಪೀಠ ಪ್ರಶಸ್ತಿ ವಿಜೇತ, ಕನ್ನಡ ಸಾರಸ್ವತ ಲೋಕದ ಅವಧೂತ, ರಾಷ್ಟ್ರಕವಿ, ವರಕವಿ ದಿ|| ಕುವೆಂಪು ರವರ ಜನ್ಮೋತ್ಸವದ ನನಪಿಗಾಗಿ ಈ ಪುಟ್ಟ ಕವನದ ಅರ್ಪಣೆ.😊

ಜನುಮದಿನದೆ ಕವಿಗೆ ನಮನ

ವರಕವಿಯ ಜನುಮದಿನ
ಸಾಹಿತ್ಯ ಕ್ಷೇತ್ರದೇ ಸಂಚಲನ
ರಸಋಷಿಯೆಂದುಸುರಿ
ವಿಶ್ವಮಾನವಗೆ ಕೀರ್ತಿ ಗರಿ

ಕನ್ನಡವೆಂದರೆ ಮಿಡಿದು
ಕುಣಿಯಿತೀ ಕವಿ ಹೃದಯ
ಎಲ್ಲಿದ್ದರೂ ಎಂತಿದ್ದರೂ ಸೈ
ಕನ್ನಡ.ಭಾಷೆಯ ಕಾವ್ಯ

ಬೇರೂರಿ ಚಿಗುರಿ ನಳನಳಿಸಿ
ಕನ್ನಡ ಕಾವ್ಯಾಮೃತ ಬಡಿಸಿ
ಮಲೆನಾಡ ಸೊಗದ ಪದಮಾಲೆ
ಇರಿಸಿ ಕನ್ನಡಮ್ಮನ ಪದತಲದಲೇ

ಮಲೆಗಳಲ್ಲಿ ಮದುಮಗಳ ನರ್ತನ
ಕನೂರಿನ ಹೆಗ್ಗಡತಿ ಮೇರುಕೃತಿ
ಬೃಹತ್ ರಾಮಾಯಣ ದರ್ಶನ
ತಂತು ಜ್ಞಾನಪೀಠ ಪ್ರಶಸ್ತಿ

ಇದಾವ ಜನ್ಮಜನ್ಮದ.ಮೈತ್ರಿ
ಕನ್ನಡಭಾಷಾಭ್ಯುದಯ ಖಾತ್ರಿ
ತೆರೆದಿತ್ತು ಕನ್ನಡಮ್ಮನ ಬಸಿರು
ಓ ಅತಿಥಿ ನೀನಾದೆ ಕನ್ನಡದ ಉಸಿರು

ಬಿರುದು ಬಾವಲಿಗಳ ಮಹಾಪೂರ
ಅಸಂಖ್ಯಾತ ಸಾಹಿತ್ಯ ಸಾಗರ
ಜ್ಞಾನಲೋಕದ ದೈದೀಪ್ಯ ಪ್ರಣತಿ
ಕಸ್ತೂರಿ ಕನ್ನಡದ ಹೆಮ್ಮೆಯ ಕೀರ್ತಿ

ಮಲೆನಾಡ ಬನದ ಹೆಮ್ಮೆಯ ಕೋಗಿಲೆ
ನೆಲೆಸಿದಿರನವರತ ಕವಿ ಶೈಲದಲೇ
ಚಿರಸ್ಥಾಯಿ ಅನವರತ ನಿಮ್ಮ್ಹೆಸರು
ಕನ್ನಡ ಸಾರಸ್ವತ ಲೋಕದುಸಿರು

ಕನ್ನಡ ನಾಡಿನ ಹೆಮ್ಮೆಯರತ್ನ
ರಾಷ್ಟ್ರಕವಿ ಬಿರುದಿಗೆ ಭಾಜನ
ಕನ್ನಡಾಂಬೆಯ ಮುಕುಟದ ಗರಿ
ಕುವೆಂಪು ನೀವ್ಕನ್ನಡದ ಐಸಿರಿ

            ಶೈಲೂ......

Comments

Popular posts from this blog

343 ಒಗಟಿನ ರೂಪದ.ಚುಟುಕು

ಕವನ ಸಂಗ್ರಹ

ಕವನ