223 ಕರಿಮೋಡ ಚದುರಿತ್ತುಉದಯರವಿಯ ಕಂಡು

ಕರಿಮೋಡ ಚದುರಿತ್ತು
ಉದಯರವಿಯ ಕಂಡು
ನಭಕೆ ಹೊನ್ನೆಳೆಯ ಚಿತ್ತಾರ
ಬಿಡಿಸಿದ್ದ ಭಾಸ್ಕರನು ಬಂದು

ಹಸಿರೊದ್ದು ಮಲಗಿದ್ದ
ಭೂತಾಯಿ ಮೈಮೇಲೆ
ಹೊನ್ನನೀರ ತುಳುಕಿಸಿ
ನಲಿಸಿತ್ತು ಭಾಸ್ಕರನ ಲೀಲೆ

ಬಿರಿಯಲವಣಿಸಿದ್ದ ಮೊಗ್ಗೆಲ್ಲ
ಹೂವಾಗಿ ಅರಳಿ ನಗುತಾ
ಪಸರಿಸೆಲ್ಲೆಡೆ  ಸೌಗಂಧ
ಕೋರುತಿದೆ ದಿನಕರಗೆ ಸ್ವಾಗತಾ

          ಶೈಲೂ....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ