131. ಅಂತರಾಳದ ಮಾತು
ಅಂತರಾಳದ ಮಾತು
*******************
ಮೂಡಿಬಿಟ್ಟಿದೆ ಎನ್ನೆದೆಯ
ಬಾನಂಗಳದಿ, ನಿನ್ನ
ನಗೆಯೇಂಬ ಅರುಣೋದಯ
ಮನವ ತುಂಬಿಸುವ
ಸವಿರಾಗದ ನವಪಲ್ಲವ
ಕೇಳಿಸುತೆ ಕಿವಿಯಲ್ಲಿ ಮಾರ್ದವ
ಒಳಹಾಯ್ದುಬಿಟ್ಟಿದೆ ಎನ್ನಂತರಂಗದಲಿ
ನಿನ್ನ ಪ್ರೀತಿಯ
ಹೊನ್ನ ಲೇಪನದ ನಲ್ಬೆಳಕು
ಕೋಪ ತಣಿಸುವ ತಿಳಿಬೆಳಕು
ದೂರೀಕರಿಸಿ ದುಗುಡ
ಮೂಡಿದೆ ಹೊಸಬೆಳಕು
ತೇಲಿ ತೇಲಿ ಬರುತಿದೆ ನೋಡು
ನನ್ನ ಕಣ್ಣಂಚಿನ ಕೊಳದಲಿ
ನೀನಿತ್ತ ಹೊಸಬದುಕ
ಬೆಳಕಿನ ಹಣತೆಗಳ ಸಾಲು
ನನ್ನೆಲ್ಲ ಕನಸ ನನಸಾಗಿಸಿದ
ನಿನ್ನೊಲವಿನ ಹೊಳಹಿನ ಪಾಲು
ಶೈಲೂ......
Comments
Post a Comment