Posts

Showing posts from March, 2026

ಕವನಗಳು

 ಹಾರೈಕೆ... ಅರಿಕೆ *************** ಕೋರುವೇ ಶುಭಹಾರೈಕೆ ಹೊಸಬಾಳಿಗಡಿಯಿಟ್ಟ ದಿನಕೆ ನಲಿವು ಗೆಲುವಲಿ ಜೊತೆಯಾದ ನವ ಬಾಂಧವ್ಯ ಬೆಸೆದ ಕ್ಷಣಕೆ ಒಲಿದ ಮನವೆರಡು ಕಲೆತು ಸಂಸಾರ ನೊಗವ ಹೊತ್ತು ಬಾಳ ಹಾದಿಯ ಪಯಣ ಜೊತೆಗೂಡಿ ನಡೆದ ದಿನಕೆ ಸರಸವಿರಸಗಳನು ಗೆದ್ದು ನವಿರಾದ ಪ್ರೀತಿಯ ಹೊದ್ದು ಬಾಳ ನೌಕೆಯ ಪಯಣ ನಲಿದು ಸಾಗುವ.ದಿನಕೆ ಶೈಲೂವಿನ ಬಯಕೆಯಿದು ನಲ್ಮೆಯ ಹಾರೈಕೆಯಿದು ದುಃಖ ದುಮ್ಮಾನಗಳ ಮರೆತು ತುಂಬಿ ಬರಲಿ ಹೊಸತು ಸಂಭ್ರಮದ ದಿನವಿಂದು ದುಪ್ಪಟ್ಟಾಗಲಿ ಹರುಷ ಸವಿಯಬೇಕು ಪ್ರೀತಿ ಜೇನು ಅನಂತವಾಗಲಿ ರಸನಿಮಿಷ           ಶೈಲೂ.....  ಪ್ರೇಮ ಸಂಭಾಷಣೆ **************** ಎನಿತು ಚಂದವೇ ಸಖಿ ಮುಗ್ಧಸ್ನಿಗ್ದ ಸೌಂದರ್ಯ ನಕ್ಕರೂ ಕಾಣದಂತ ಮುಗುಳುನಗೆಯ ಮಾಧುರ್ಯ ಹೊಗಳಿದ್ದು ಸಾಕು ಕೃಷ್ಣ ನೀನೇ ಸೌಂದರ್ಯದ ಗಣಿ ನಿನ್ನ ಕಣ್ಣ ಕಾಂತಿಯಲ್ಲೇ ಅಡಗಿಹನು ದಿನಮಣಿ ಇಲ್ಲ ರಾದೇ ನೀನೇ ಚಂದ ಕದಪುಗಳಲಿ ಇಹ ಚಂದಿರ ಅರ್ಧ ತೆರೆದ ನಯನದಲೇ ಇಹುದು ತಾರಾ ಮಂದಿರ ಬಾಯಲ್ಲೇ ಅಡಗಿಸಿರುವೆ  ಚತುರ್ದಶ ಭುವನಲೋಕ ಅರಿಯಲಿ ಹೇಗೇಳು ನಿನ್ನ ಕೃಷ್ಣ ನಾನಾದೆ ಮೂಕ ಬಿಡು ಬಿಡು ಅದೆಲ್ಲ ಸಖಿ ಅರಿಯಲಾಗದ ನಿಗೂಢ ನಿನ್ನ ಸೌಂದರ್ಯ ಸೆಳೆತಕೆ ವಶವಾಗಿ ನಾ ಧಿಗ್ಮೂಢ ತುಂಟತನದ ನೋಟದಲ್ಲೇ ಸೆಳೆದು ಬಿಟ್ಟೆ ಮನಸ್ಸಸನ್ನ ಹೇಳಲೇನಿದೆ ಮಾಧವಾ ನೀನೇ ನನ್ನ ಮನದನ್ನ              ಶೈಲೂ...... ...